Tag: madegowda

  • ಶಿವರಾಮೇಗೌಡ ಮಂಡ್ಯ ಜನರ ಕ್ಷಮೆ ಕೇಳಬೇಕು: ಎಚ್‍ಡಿಕೆ

    ಶಿವರಾಮೇಗೌಡ ಮಂಡ್ಯ ಜನರ ಕ್ಷಮೆ ಕೇಳಬೇಕು: ಎಚ್‍ಡಿಕೆ

    ಮಂಡ್ಯ: ಶಿವರಾಮೇಗೌಡ ಅವರು ನನಗೆ ಕ್ಷಮೆ ಕೇಳುವುದಲ್ಲ. ಮಂಡ್ಯ ಜಿಲ್ಲೆಯ ಜನರ ಹತ್ತಿರ ಕ್ಷಮೆ ಕೇಳಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ  ಹೇಳಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾದೇಗೌಡರು ನಮ್ಮ ಒಕ್ಕಲಿಗ ಸಮಾಜದ ರಾಜ್ಯದ ನಾಯಕರು ಹಾಗೂ ಕಾವೇರಿ ವಿಚಾರದಲ್ಲಿ ಹೋರಾಟ ಮಾಡಿದವರು. ನಮಗೆ ಅವರಿಗೂ ರಾಜಕೀಯ ವಿಚಾರದಲ್ಲಿ ಬೇರೆ ಇರುವ ನಿಲುವು ಬೇರೆ. ನಮ್ಮ ಸಮಾಜದ ಮುಖಂಡರು ಹೋರಾಟಗಾರರ ಮೇಲೆ ಅಸಹ್ಯಕರವಾಗಿ ಮಾತನಾಡಿದ್ದಾರೆ. ಇದು ಯಾರಿಗೂ ಶೋಭೆ ತರುವುದಿಲ್ಲ. ಅವರು ಇದಕ್ಕೆ ನನ್ನ ಕ್ಷಮೆ ಕೇಳುವುದಲ್ಲ. ಮಂಡ್ಯ ಜಿಲ್ಲೆಯ ಜನರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.

    ಜವಾಬ್ದಾರಿಯೂ ಸ್ಥಾನದಲ್ಲಿ ಇರುವ ವ್ಯಕ್ತಿ ಸರಿಯಾಗಿ ಮಾತನಾಡಬೇಕು. 9 ಚುನಾವಣೆ ಎದುರಿಸಿ ಸಂಸದರಾಗಿ, ಶಾಸಕರಾಗಿರುವವರು ಹೀಗೆ ಮಾತನಾಡಬಾರದು. ನಾಲಿಗೆ ಮೇಲೆ ಹಿಡಿತ ಇಟ್ಟುಕೊಳ್ಳಲಿಲ್ಲ ಅಂದರೆ ಆ ಸ್ಥಾನಕ್ಕೆ ಗೌರವವಿಲ್ಲ. ಜನತೆಯ ಕ್ಷಮೆ ಕೊರುವುದು ಮಾತ್ರ ಅಲ್ಲಾ ಸಂಘಟನೆಯ ದೃಷ್ಟಿಯಿಂದ ಸರಿಯಾಗಿ ನಡೆದುಕೊಳ್ಳಬೇಕು. ಯಾವುದಾದರೂ ತೀರ್ಮಾನ ಆಗಬೇಕು ಅಂದರೆ ನಾಲ್ಕು ಗೋಡೆ ಮಧ್ಯ ತೀರ್ಮಾನ ಆಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಪಾರ್ಲಿಮೆಂಟ್ ಚುನಾವಣೆಗೆ 30 ಕೋಟಿ ರೂ. ಖರ್ಚು ಮಾಡಿದ್ದಾರೆ ಅಂದಿದ್ದಾರೆ. ಮಂಡ್ಯ ಜಿಲ್ಲೆಯ ಜನ ದುಡ್ಡಿನ ಮೇಲೆ ವೋಟ್ ಹಾಕುತ್ತಾರೆ. ಮಂಡ್ಯ ಜಿಲ್ಲೆಯಲ್ಲಿ ಯಾರಿಗೆ ಹಣ ಕೊಟ್ಟಿದ್ದಾರೆ, ಯಾಕೆ ಖರ್ಚು ಮಾಡಿದ್ದಾರೆ ಎಂದ ಅವರು, ನಾಗಮಂಗಲ ಚುನಾವಣೆಗೆ ಮತ್ತೆ 30 ಕೋಟಿ ತರುತ್ತೇನೆ ಎಂದು ಸಾರ್ವಜನಿಕವಾಗಿ ಹೇಳುತ್ತಾರೆ. ಇದರಿಂದ ಪಕ್ಷದ ವರ್ಚಸ್ಸು ಹಾಳಾಗುತ್ತದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಕೇಂದ್ರ ಬಜೆಟ್ ಮೇಲೆ ನಂಬಿಕೆಯಿಲ್ಲ: ಎಚ್‍ಡಿಕೆ

    ಪಕ್ಷ ಸಂಘಟನೆಗೆ ಬಿಜೆಪಿಯಿಂದ ದೇಣಿಗೆ ಸಂಗ್ರಹ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿಯಿಂದ ಇಷ್ಟು ವರ್ಷ ಹಣ ಹೊಡೆದಿರುವುದು ಸಾಲುವುದಿಲ್ಲ. ಮೂರು ವರ್ಷಗಳಿಂದ ಲೂಟಿ ಹೊಡೆದಿದ್ದಾರೆ. ಇಷ್ಟು ದಿನ ಲೂಟಿ ಮಾಡಿರುವುದು ಸಾಲುವುದಿಲ್ಲವಾ ಎಂದು ವ್ಯಂಗ್ಯವಾಡಿದ ಅವರು, 40% ಅಂತ ಗುತ್ತಿಗೆದಾರರೆ ಪ್ರಧಾನಿಗೆ ದೂರು ಕೊಟ್ಟಿದ್ದಾರೆ. ಬಿಜೆಪಿಯವರು ಉಪಚುನಾವಣೆಯನ್ನು ಹೇಗೆ ಮಾಡಿದರು ಎಂದು ಜನರಿಗೆ ಗೊತ್ತಿದೆ. ಅವರು ಜನರಿಂದ ದೇಣಿಗೆ ಸಂಗ್ರಹಿಸಿ ಚುನಾವಣೆ ನಡೆಸಿದ್ರಾ? ದೇಣಿಗೆ ಸಂಗ್ರಹ ಎಂಬುದು ಬಿಜೆಪಿಯವರ ಹೊಸ ನಾಟಕ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಇಂದು ಕೇಂದ್ರ ಬಜೆಟ್ – ಆರ್ಥಿಕತೆಗೆ ಸಿಗುತ್ತಾ ‘ಬೂಸ್ಟರ್ ಡೋಸ್’..?

    ಶಾಸಕರ ಪಕ್ಷಾಂತರ ವಿಚಾರವಾಗಿ ಮಾತನಾಡಿದ ಅವರು, ಇನ್ನು ಒಂದು ವರ್ಷಗಳ ಇದು ನಿರಂತರವಾಗಿ ನಡೆಯುವಂತ ಪ್ರಕ್ರಿಯೆಯಾಗಿದೆ. ಪುಟ್ಟರಾಜು ಅವರು ಜೆಡಿಎಸ್ ಬಿಡುವುದಿಲ್ಲ. ಈ ಬಗ್ಗೆ ಅವರೆ ಸ್ಪಷ್ಟನೆ ನೀಡಿದ್ದಾರೆ. ಇದರ ಬಗ್ಗೆ ಚರ್ಚೆ ಅನವಶ್ಯಕ. ಕಾಂಗ್ರೆಸ್ ಅವರು ಬೇರೆ ಪಕ್ಷದವರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಕಾಂಗ್ರೆಸ್ ಅವರಿಗೆ ಸ್ವಂತ ಶಕ್ತಿ ಇಲ್ಲ. ಅದಕ್ಕೆ ಬೇರೆಯವರ ಮನೆ ಬಾಗಿಲು ತಟ್ಟುತ್ತಿದ್ದಾರೆ ಎಂದು ಟೀಕಿಸಿದರು.

  • ಮಾಜಿ ಸಂಸದ, ಕಾವೇರಿ ಹೋರಾಟಗಾರ ಮಾದೇಗೌಡ ವಿಧಿವಶ

    ಮಾಜಿ ಸಂಸದ, ಕಾವೇರಿ ಹೋರಾಟಗಾರ ಮಾದೇಗೌಡ ವಿಧಿವಶ

    ಮಂಡ್ಯ: ಹಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಸಂಸದ ಜಿ.ಮಾದೇಗೌಡ (92) ವಿಧಿವಶರಾಗಿದ್ದಾರೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿಯ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಮಾದೇಗೌಡರು ಇಂದು ನಿಧನರಾಗಿದ್ದಾರೆ.

    ಮಂಡ್ಯ ಜಿಲ್ಲೆಯ ಹಿರಿಯ ರಾಜಕೀಯ ನಾಯಕರು, ಕಾವೇರಿ ಹೋರಾಟಗಾರರು, ಮಾಜಿ ಲೋಕಸಭಾ ಸದಸ್ಯರು ಹಾಗು ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡರವರು ತೀವ್ರ ಅನಾರೋಗ್ಯದಿಂದ ಕಳೆದ ಹಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

    ಮಂಡ್ಯ ಜಿಲ್ಲೆಯ ರಾಜಕಾರಣದಲ್ಲಿ ಶಾಸನಸಭೆ, ಲೋಕಸಭಾ ಸದಸ್ಯರಾಗಿ, ರೈತ ಪರ ಹೋರಾಟಗಾರರಾಗಿ ಜಿಲ್ಲೆಯ ಅಭಿವೃದ್ಧಿಗೆ ಎಸ್.ಎಂ.ಕೃಷ್ಣ ರವರ ಜೊತೆ ಶ್ರಮಿಸಿದವರು. ಮಂಡ್ಯದಲ್ಲಿ ಗಾಂಧಿ ಭವನ ನಿರ್ಮಿಸಿದ್ದರು. ಈ ಹಿಂದೆ ಮಾದೇಗೌಡರೊಂದಿಗೆ ಪ್ರಥಮ ಬಾರಿಗೆ ಶಾಸನಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದ ಎಸ್.ಎಂ.ಕೃಷ್ಣ ರವರು ತಮ್ಮ ಬಹುಕಾಲದ ಒಡನಾಡಿಯ ಆರೋಗ್ಯ ವಿಚಾರಿಸಿ ಶೀಘ್ರವಾಗಿ ಗುಣಮುಖರಾಗಲಿ ಎಂದು ಹಾರೈಸಿದ್ದರು.

  • ಮಾದೇಗೌಡರು ನನ್ನ ಬಳಿ ಹಣ ಕೇಳಿದ್ದು ಸತ್ಯ – ಪುಟ್ಟರಾಜು ಸ್ಪಷ್ಟನೆ

    ಮಾದೇಗೌಡರು ನನ್ನ ಬಳಿ ಹಣ ಕೇಳಿದ್ದು ಸತ್ಯ – ಪುಟ್ಟರಾಜು ಸ್ಪಷ್ಟನೆ

    ಬೆಂಗಳೂರು/ಮಂಡ್ಯ: ಕಾಂಗ್ರೆಸ್ ಹಿರಿಯ ಮುಖಂಡ ಜಿ ಮಾದೇಗೌಡರು ಸಿ ಎಸ್ ಪುಟ್ಟರಾಜು ಅವರಿಗೆ ಕರೆ ಮಾಡಿ ಹಣ ಕೇಳಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿರುವ ಕುರಿತಂತೆ ಸಚಿವರು ಸ್ಪಷ್ಟನೆ ನೀಡಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಮಾತನಾಡಿರುವುದು ಸತ್ಯ. ಚುನಾವಣಾ ಪ್ರಚಾರಕ್ಕೆ ಆಯೋಗನೇ ಅಭ್ಯರ್ಥಿಗಳಿಗೆ 70 ಲಕ್ಷ ಖರ್ಚು ಮಾಡಲು ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ಮೈತ್ರಿ ಅಭ್ಯರ್ಥಿಗಳಾಗಿರುವುದರಿಂದ ಲೋಕಲ್ ಅವರು ನಮಗೆ ಸಪರೇಟ್ ಆಗಿ ಚುನಾವಣಾ ವ್ಯವಸ್ಥೆ ಕಲ್ಪಿಸಿಕೊಡಿ ಎಂದು ಹೇಳಿರುವಂತದ್ದು ನಿಜ. ಹಾಗೆಯೇ ನಾನು ಕೂಡ ಅರೆಂಜ್ ಮಾಡಿಕೊಡುತ್ತೇನೆ ಎಂದು ಹೇಳಿದ್ದು ಕೂಡ ಅಷ್ಟೇ ಸತ್ಯ.

    ಚುನಾವಣಾ ಪ್ರಚಾರ ಮಾಡಲು ವ್ಯವಸ್ಥೆಗಳನ್ನು ಮಾಡಲು ತಮ್ಮಣ್ಣನ ಬಳಿ ನಮ್ಮ ಹುಡುಗರು ಹೋಗೋದಿಲ್ಲ. ಹೀಗಾಗಿ ಜಿಲ್ಲಾ ಮಂತ್ರಿ, ಮೈತ್ರಿ ಧರ್ಮ ಪಾಲನೆ ಮಾಡಿ ಚುನಾವಣೆ ಚೆನ್ನಾಗಿ ನಡೆಸಬೇಕು. ಅದಕ್ಕೆ ಅರೆಂಜ್‍ಮೆಂಟ್ ಮಾಡಿಕೊಡಿ ಎಂದು ಮಾದೇಗೌಡರು ಕೇಳಿದ್ದಾರೆ ಅದರಲ್ಲಿ ತಪ್ಪೇನಿದೆ ಎಂದು ಸಚಿವರು ಸಮರ್ಥಿಸಿಕೊಂಡಿದ್ದಾರೆ.

    ಶುಕ್ರವಾರ ರಾತ್ರಿ ಫೋನ್ ಸಂಭಾಷಣೆ ಆಗಿದ್ದು, ನಿನ್ನೆ ಬ್ಯಾಂಕ್ ರಜೆ ಇತ್ತು. ಹೀಗಾಗಿ ಹಣ ಹೊಂದಿಸುತ್ತಿದ್ದೇವೆ. ಇದು ಬಿಟ್ಟು ಎಲೆಕ್ಷನ್ ದಿಕ್ಕು ತಪ್ಪಿಸುವಂತದ್ದು ಏನೂ ಇಲ್ಲ. ಇದರಿಂದ ಫೋನ್ ಟ್ರ್ಯಾಪ್ ಮಾಡುತ್ತಾರೆ ಎಂದು ಗೊತ್ತಾಗುತ್ತೆ ಅಲ್ವ ಎಂದರು.

    ಆದಾಯ ತೆರಿಗೆ ಇಲಾಖೆಯ ಮುಖಾಂತರ ಫೋನ್ ಕದ್ದಾಲಿಕೆ ಮಾಡುತ್ತಾರೆ ಎಂಬ ಮಾಹಿತಿ ನಮಗೆ ಲಭಿಸಿದೆ. ಹೀಗಾಗಿ ಐಟಿ ಇಲಾಖೆಯೇ ಅವರ ಪರ ಕೆಲಸ ಮಾಡುತ್ತದೆ ಎಂದು ಇದರಿಂದ ಸಾಬೀತಾಗುತ್ತದೆ ಎಂದು ಬಿಜೆಪಿ ವಿರುದ್ಧ ಆರೋಪ ಮಾಡಿದ್ದಾರೆ. ನಾವು ಹೋಟೆಲಿನಲ್ಲಿ ಉಳಿದುಕೊಂಡರೂ ಬಂದು ರೇಡ್ ಮಾಡುತ್ತಾರೆ. ಇಷ್ಟೆಲ್ಲ ಹಿಂದೆ ಬಿದ್ದು ನನ್ನ ಕುಟುಂಬದ ಫೋನ್ ಗಳನ್ನು ಟ್ರ್ಯಾಪ್ ಮಾಡುತ್ತಿದ್ದಾರೆ ಅನ್ನೋ ಮಾಹಿತಿಯೂ ನನಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

    ಇದರಿಂದ ಚುನಾವಣೆ ಗೆಲ್ಲೋದಕ್ಕೆ ಸಾಧ್ಯವಿಲ್ಲ. ಜಿಲ್ಲೆಯ ಜನ ಬಹಳ ಪ್ರಜ್ಞಾವಂತರಿದ್ದಾರೆ. ಸುಮಲತಾ ಮೇಡಂ ಹೇಳುತ್ತಿದ್ದರು ಜನ ಮುಟ್ಟಾಳರಲ್ಲ ಎಂದು ಹಾಗೆಯೇ ಇದರಿಂದ ಬಿಜೆಪಿಯವರಿಗೆ ನಮ್ಮನ್ನು ಮುಟ್ಟಾಳರನ್ನಾಗಿ ಮಾಡಲು ಸಾಧ್ಯವಿಲ್ಲ. ಯಾವುದೇ ಕಾರಣಕ್ಕೂ ನಮ್ಮನ್ನು ಬಗ್ಗಿಸಲು ಸಾಧ್ಯವಿಲ್ಲ ಏ.18ರಂದು ಜಿಲ್ಲೆಯ ಜನ ಉತ್ತರ ಹೇಳುತ್ತಾರೆ ಬಿಜೆಪಿಗೆ ಟಾಂಗ್ ಕೊಟ್ಟರು.

    ಆಡಿಯೋದಲ್ಲೇನಿದೆ?
    ಮಾದೇಗೌಡರು ಸಚಿವರಿಗೆ ಕರೆ ಮಾಡುತ್ತಾರೆ. ಮಾದೇಗೌಡರ ಪರವಾಗಿ ಬೇರೊಬ್ಬ ವ್ಯಕ್ತಿ ಪುಟ್ಟರಾಜುಗೆ ಫೋನ್ ಮಾಡಿ ನಿಮ್ಮ ಜೊತೆ ಮಾದೇಗೌಡರು ಮಾತನಾಡಬೇಕಂತೆ ಎಂದು ಹೇಳುತ್ತಾರೆ. ಹೀಗಾಗಿ ಪುಟ್ಟರಾಜು ಅವರು ಆಯ್ತು, ಅವರಿಗೆ ಫೋನ್ ಕೊಡಿ ಅಂತಾರೆ. ಆಗ ಮಾದೇಗೌಡರು, ನನ್ನ ಮೊಬೈಲ್ ನಿಂದ ಹಲವು ಬಾರಿ ನಿಮಗೆ ಫೋನ್ ಮಾಡಿದೆ. ಆದ್ರೆ ನೀವು ಕರೆ ಸ್ವೀಕರಿಸಿಲ್ಲ ಎಂದಿದ್ದಾರೆ. ಆಗ ಸಚಿವರು, ಹೌದು ಮತ್ತೆ ವಾಪಸ್ ನಿಮಗೆ ಫೋನ್ ಮಾಡಿದೆ ಆಗ ನೀವು ಸಿಗಲಿಲ್ಲ ಎಂದು ಹೇಳುತ್ತಾರೆ. ನಂತರ ಹಣದ ವಿಚಾರ ಬರುತ್ತದೆ. ಮಾದೇ ಗೌಡರು ನೇರವಾಗಿ ಸಚಿವರ ಬಳಿ ಹಣ ಕೇಳುತ್ತಾರೆ.

    ಎಲೆಕ್ಷನ್ ಖರ್ಚಿಗೆ ಹಣ ಬೇಕು. ನನ್ನ ಮಗ ಓಡಾಡುತ್ತಿದ್ದಾನೆ. ಹೀಗಾಗಿ ಆದಷ್ಟು ಬೇಗ ಹಣ ಕಳುಹಿಸಿ ಕೊಡಿ ಎಂದು ಕೇಳುತ್ತಾರೆ. ಇದಕ್ಕೆ ಪುಟ್ಟರಾಜು ಅವರು ಓಕೆ ಎಂದು ಹೇಳಿದ್ದಾರೆ. ಈ ಆಡಿಯೋ ಇದೀಗ ವೈರಲ್ ಆಗಿದೆ. ಆದರೆ ಈ ಆಡಿಯೋ ಎಷ್ಟರಮಟ್ಟಿಗೆ ಸತ್ಯ ಅನ್ನೋದು ತಿಳಿದುಬರಬೇಕಿದೆ. ಯಾಕಂದ್ರೆ ಒಬ್ಬರು ಹಿರಿಯ ರಾಜಕರಾಣಿಯಾಗಿದ್ದವರು ಬೇರೊಬ್ಬರ ಮೊಬೈಲ್ ನಿಂದ ಹಣದ ವಿಷಯ ಮಾತಾಡುತ್ತಾರಾ ಅಥವಾ ಇದೊಂದು ಕ್ರಿಯೇಟ್ ಮಾಡಿರುವ ಆಡಿಯೋನಾ ಎಂಬ ಪ್ರಶ್ನೆ ಎದ್ದಿದೆ.

  • ಸಚಿವ ಪುಟ್ಟರಾಜು ಬಳಿ ಹಣ ಕೇಳಿದ್ರಾ ಮಾದೇಗೌಡ?

    ಸಚಿವ ಪುಟ್ಟರಾಜು ಬಳಿ ಹಣ ಕೇಳಿದ್ರಾ ಮಾದೇಗೌಡ?

    ಮಂಡ್ಯ: ಸಚಿವ ಸಿ.ಎಸ್ ಪುಟ್ಟರಾಜು ಬಳಿ ಕಾಂಗ್ರೆಸ್ ಹಿರಿಯ ಮುಖಂಡ ಜಿ. ಮಾದೇ ಗೌಡರು ಹಣ ಕೇಳಿದ್ದಾರೆ ಎನ್ನಲಾದ ಆಡಿಯೋವೊಂದು ವೈರಲ್ ಆಗಿದೆ. ಈ ಮೂಲಕ ಮಂಡ್ಯ ಕ್ಷೇತ್ರದಲ್ಲಿ ಹಣದ ಹೊಳೆಯೇ ಹರಿಯುತ್ತಿದೆಯಾ ಅನ್ನೋ ಪ್ರಶ್ನೆಯೊಂದು ಚರ್ಚೆಗೆ ಗ್ರಾಸವಾಗಿದೆ.

    ಮಾದೇಗೌಡರಿಗೆ ಬೇರೆ ಯಾರೋ ಫೋನ್ ಮಾಡಿಕೊಡುತ್ತಾರೆ. ಅಲ್ಲದೆ ಒಬ್ಬ ಸಚಿವರಾಗಿದ್ದವರು ಬೇರೆಯವರ ಫೋನಿನಲ್ಲಿ ಹಣದ ವಿಚಾರ ಮಾತನಾಡುತ್ತಾರಾ ಎಂಬ ಪ್ರಶ್ನೆಗಳು ಉದ್ಭವವಾಗಿದೆ. ಆದ್ರೆ ಈ ಆಡಿಯೋ ಅಸಲಿಯೋ ಅಥವಾ ನಕಲಿಯೋ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

    ಆಡಿಯೋದಲ್ಲೇನಿದೆ?
    ಮಾದೇಗೌಡರು ಸಚಿವರಿಗೆ ಕರೆ ಮಾಡುತ್ತಾರೆ. ಮಾದೇಗೌಡರ ಪರವಾಗಿ ಬೇರೊಬ್ಬ ವ್ಯಕ್ತಿ ಪುಟ್ಟರಾಜುಗೆ ಫೋನ್ ಮಾಡಿ ನಿಮ್ಮ ಜೊತೆ ಮಾದೇಗೌಡರು ಮಾತನಾಡಬೇಕಂತೆ ಎಂದು ಹೇಳುತ್ತಾರೆ. ಹೀಗಾಗಿ ಪುಟ್ಟರಾಜು ಅವರು ಆಯ್ತು, ಅವರಿಗೆ ಫೋನ್ ಕೊಡಿ ಅಂತಾರೆ. ಆಗ ಮಾದೇಗೌಡರು, ನನ್ನ ಮೊಬೈಲ್ ನಿಂದ ಹಲವು ಬಾರಿ ನಿಮಗೆ ಫೋನ್ ಮಾಡಿದೆ. ಆದ್ರೆ ನೀವು ಕರೆ ಸ್ವೀರಿಸಿಲ್ಲ ಎಂದಿದ್ದಾರೆ. ಆಗ ಸಚಿವರು, ಹೌದು ಮತ್ತೆ ವಾಪಸ್ ನಿಮಗೆ ಫೋನ್ ಮಾಡಿದೆ ಆಗ ನೀವು ಸಿಗಲಿಲ್ಲ ಎಂದು ಹೇಳುತ್ತಾರೆ. ನಂತರ ಹಣದ ವಿಚಾರ ಬರುತ್ತದೆ. ಮಾದೇ ಗೌಡರು ನೇರವಾಗಿ ಸಚಿವರ ಬಳಿ ಹಣ ಕೇಳುತ್ತಾರೆ.

    ಎಲೆಕ್ಷನ್ ಖರ್ಚಿಗೆ ಹಣ ಬೇಕು. ನನ್ನ ಮಗ ಓಡಾಡುತ್ತಿದ್ದಾನೆ. ಹೀಗಾಗಿ ಹಣ ಕಳುಹಿಸಿ ಕೊಡಿ ಎಂದು ಕೇಳುತ್ತಾರೆ. ಇದಕ್ಕೆ ಪುಟ್ಟರಾಜು ಅವರು ಓಕೆ ಎಂದು ಹೇಳಿದ್ದಾರೆ ಅನ್ನೋ ಆಡಿಯೋ ಇದೀಗ ವೈರಲ್ ಆಗಿದೆ. ಆದರೆ ಈ ಆಡಿಯೋ ಎಷ್ಟರಮಟ್ಟಿಗೆ ಸತ್ಯ ಅನ್ನೋದು ತಿಳಿದುಬರಬೇಕಿದೆ. ಯಾಕಂದ್ರೆ ಒಬ್ಬರು ಹಿರಿಯ ರಾಜಕರಾಣಿಯಾಗಿದ್ದವರು ಬೇರೊಬ್ಬರ ಮೊಬೈಲ್ ನಿಂದ ಹಣದ ವಿಷಯ ಮಾತಾಡುತ್ತಾರಾ ಅಥವಾ ಇದೊಂದು ಕ್ರಿಯೇಟ್ ಮಾಡಿರುವ ಆಡಿಯೋನಾ ಎಂಬ ಪ್ರಶ್ನೆ ಎದ್ದಿದೆ.

  • ಮಂಡ್ಯದಲ್ಲಿ ಮತ್ತೆ ಪದ್ಮಾವತಿ ಪರ್ವ? ಸುದ್ದಿ ಬೆನ್ನಲ್ಲೇ ಅಂಬಿ-ಮಾದೇಗೌಡ ಗೌಪ್ಯ ಚರ್ಚೆ

    ಮಂಡ್ಯದಲ್ಲಿ ಮತ್ತೆ ಪದ್ಮಾವತಿ ಪರ್ವ? ಸುದ್ದಿ ಬೆನ್ನಲ್ಲೇ ಅಂಬಿ-ಮಾದೇಗೌಡ ಗೌಪ್ಯ ಚರ್ಚೆ

    ಮಂಡ್ಯ: ಮಾಜಿ ಸಂಸದೆ ರಮ್ಯಾ ಮತ್ತೆ ಮಂಡ್ಯ ಜಿಲ್ಲೆಗೆ ಎಂಟ್ರಿ ಕೊಡಲು ಸಿದ್ಧತೆ ನಡೆಸಿದ್ದಾರೆ ಎಂಬ ವಿಚಾರವೊಂದು ಮೂಲಗಳಿಂದ ತಿಳಿದುಬಂದಿದೆ.

    ಈ ಮೂಲಕ ಮಂಡ್ಯ ಬಿಟ್ಟು ಹೋಗಲ್ಲ ಎಂದ ರಮ್ಯಾ ಮತ್ತೆ ಶೀಘ್ರದಲ್ಲೇ ವಾಪಸ್ಸಾಗಲಿದ್ದಾರೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ರಮ್ಯಾ ವಾಸವಿದ್ದ ಮನೆ ಕ್ಲೀನಿಂಗ್ ಕೆಲಸ ಶುರುವಾಗಿದೆ. ನವೆಂಬರ್ 29 ಹುಟ್ಟುಹಬ್ಬದಂದೇ ಮಂಡ್ಯದಲ್ಲಿ ಮತ್ತೆ ಪದ್ಮಾವತಿ ಪರ್ವ ಆರಂಭವಾಗಲಿದೆಸ. ರಮ್ಯಾಗೆ ಮಂಡ್ಯದಲ್ಲೇ ಟಿಕೆಟ್ ನೀಡಿ ಜಿಲ್ಲೆಯ ನಾಯಕತ್ವ ನೀಡಲು ನಡೆದಿದೆ ಸಿದ್ಧತೆ ನಡೆಸಲಾಗುತ್ತಿದೆ ಎಂಬುದಾಗಿ ತಿಳಿದುಬಂದಿದೆ.

    ಇನ್ನು ಚುನಾವಣೆ ಹತ್ತಿರ ಬರುತ್ತಿದ್ದಂತೆ ಮಂಡ್ಯದಲ್ಲಿ ರಾಜಕಾರಣ ಗರಿಗೆದರಿದ್ದು, ಇಂದು ಶಾಸಕ ಅಂಬರಿಶ್ ಕಾಂಗ್ರೆಸ್ ಹಿರಿಯ ನಾಯಕ ಜಿ.ಮಾದೇಗೌಡ ಜೊತೆ ಒಂದು ಗಂಟೆಗಳ ಕಾಲ ಗೌಪ್ಯ ಮಾತುಕತೆ ನಡೆಸಿದ್ದಾರೆ.

    ಮಂಡ್ಯದಲ್ಲಿ ನಡೆದ ಟಿಪ್ಪು ಜಯಂತಿಗೆ ಗೈರಾಗಿದ್ದ ಅಂಬಿ ರಾತ್ರಿ ಮಂಡ್ಯದ ಹೊರವಲಯದಲ್ಲಿರುವ ತಮ್ಮ ಆಪ್ತ ಅಮರಾವತಿ ಚಂದ್ರಶೇಖರ್ ನಿವಾಸಕ್ಕೆ ಜಿ.ಮಾದೇಗೌಡರನ್ನು ಕರೆಸಿಕೊಂಡು ಗೌಪ್ಯ ಮಾತುಕತೆ ನಡೆಸಿದ್ದರು. ಮಾಜಿ ಸಂಸದೆ ರಮ್ಯಾ ಮಂಡ್ಯದಲ್ಲಿ ಸ್ವಂತ ಮನೆ ಮಾಡಿ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ರಮ್ಯಾ ಸ್ಪರ್ಧಿಸುತ್ತಾರೆ ಅನ್ನೋ ಮಾತು ಕಿವಿಗೆ ಬೀಳುತ್ತಲೇ ಕ್ಷೇತ್ರಕ್ಕೆ ಆಗಮಿಸಿದ ಅಂಬಿ ಮಾದೇಗೌಡರೊಂದಿಗೆ ಗೌಪ್ಯ ಸಭೆ ನಡೆಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಂಬರೀಶ್, ಮಾದೇಗೌಡರು ನನ್ನ ತುಂಬಾ ಇಷ್ಟಪಡ್ತಾರೆ. ಅವರೊಂದಿಗೆ ಮಾತನಾಡಬೇಕೆನಿಸಿತು ಮಾತನಾಡಿದ್ದೇನೆ. ರಾಜಕೀಯ ಚರ್ಚೆ ನಡೆದಿಲ್ಲ ಎಂದ ಅವರು ನನಗೆ ಟಿಕೆಟ್ ಕೊಡೋದು ಬಿಡೋದು ಹೈಕಮಾಂಡ್ ಗೆ ಬಿಟ್ಟ ವಿಚಾರ ಅಂತ ಹೇಳಿದ್ರು.

    ಇದನ್ನೂ ಓದಿ:  ರಾಹುಲ್ ಗಾಂಧಿಯನ್ನ ಧೋನಿಗೆ ಹೋಲಿಸಿದ ರಮ್ಯಾ

    ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರೇ ಇತ್ತೀಚೆಗೆ ನನಗೆ ಟಿಕೆಟ್ ಕೊಡುವುದು ಹೈಕಮಾಂಡ್ ತೀರ್ಮಾನಿಸುತ್ತದೆ ಎಂದಿದ್ದಾರೆ. ಅಧ್ಯಕ್ಷರೇ ಹಾಗೆ ಹೇಳಿದ ಮೇಲೆ ನಮಗೆ ಟಿಕೆಟ್ ಕೊಡುವುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ರಮ್ಯಾ ರಾಜ್ಯ ರಾಜಕಾರಣಕ್ಕೆ ಬರುವ ವಿಚಾರ ಗೊತ್ತಿಲ್ಲ. ಬಂದರೆ ಸಂತೋಷ. ನಾನು ಎಲ್ಲಿಯೂ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಅವರು ಹೇಳಿಲ್ಲ ಅಂತ ಅಂಬರಿಶ್ ತಿಳಿಸಿದ್ರು.

    ಇದನ್ನೂ ಓದಿ: ಪ್ರಧಾನಿ ಮೋದಿಯನ್ನು ಕೆಣಕಲು ಹೋಗಿ ಪೇಚಿಗೆ ಸಿಲುಕಿದ ರಮ್ಯಾ