Tag: made gowda

  • ಶಿವರಾಮೇಗೌಡ ಸರ್ಕಸ್‍ನಲ್ಲಿನ ಜೋಕರ್: ಮಧು ಮಾದೇಗೌಡ

    ಶಿವರಾಮೇಗೌಡ ಸರ್ಕಸ್‍ನಲ್ಲಿನ ಜೋಕರ್: ಮಧು ಮಾದೇಗೌಡ

    ಮೈಸೂರು: ಶಿವರಾಮೇಗೌಡ ಸರ್ಕಸ್‍ನಲ್ಲಿನ ಜೋಕರ್. ಅವನಿಗೆ ಬುದ್ಧಿ ಕಲಿಸಲು ನಮಗೆ ಗೊತ್ತಿದೆ ಎಂದು ದಿವಂಗತ ಮಾದೇಗೌಡ ಅವರ ಪುತ್ರ ಮಧು ಮಾದೇಗೌಡ ವಾಗ್ದಾಳಿ ನಡೆಸಿದ್ದಾರೆ.

    ಮಾದೇಗೌಡರಿಗೆ ಎಕ್ಕಡದಲ್ಲಿ ಹೊಡೆದಿದ್ದೆ ಎಂಬ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಆಡಿಯೋ ವಿಚಾರ ಸಂಬಂಧ ಮಧು ಪ್ರತಿಕ್ರಿಯಿಸಿದರು. ಮಂಡ್ಯ ಭಾಗದಲ್ಲಿ ಶಿವರಾಮೇಗೌಡನನ್ನು 420 ಶಿವರಾಮೇಗೌಡ ಅಂತಾ ಕರೆಯೋದು. ಶಿವರಾಮೇಗೌಡರಿಗೆ ಯಾವ ರೀತಿ ಬುದ್ಧಿ ಹೇಳಬೇಕೋ ಆ ರೀತಿಯೇ ನಾವು ಬುದ್ಧಿ ಹೇಳುತ್ತೇವೆ. ಅವರು ನಮ್ಮ ತಂದೆಯ ಕಾಲು ಹಿಡಿಯೋದನ್ನು ನಾನು ನೋಡಿದ್ದೇನೆ ಎಂದರು.

    ಶಿವರಾಮೇ ಗೌಡರಿಗೆ ಎದರುಗಡೆ ನಿಂತು ಮಾತಾಡುವ ಶಕ್ತಿಯೂ ಇರಲಿಲ್ಲ. 60 ಕೋಟಿ ಖರ್ಚು ಮಾಡಿದರೂ ಶಿವರಾಮೇಗೌಡ ಚುನಾವಣೆಯಲ್ಲಿ ಗೆಲ್ಲಲ್ಲ. 420 ಕೆಲಸ ಮಾಡುವ ಕಾರಣ ಜನ ಹೊಡೆಯುತ್ತಾರೆ ಎಂದು ಎಸ್ಕರ್ಟ್ ಹಾಕಿಕೊಂಡು ತಿರುಗಾಡುತ್ತಾನೆ. ಅವರಿಗೆ ಬುದ್ಧಿ ಕಲಿಸುವುದು ನಮಗೆ ಗೊತ್ತಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಗಂಡಂದಿರನ್ನು ಕಟ್ಟಿ ಹಾಕಿ ಹೆಂಡತಿಯರನ್ನು ರೇಪ್ ಮಾಡಿದ್ರು: ಸಿದ್ದರಾಮಯ್ಯ

    ಶಿವರಾಮೇ ಗೌಡ ಆಡಿಯೋದಲ್ಲೇನಿದೆ..?
    ನಾಗಮಂಗಲದಿಂದ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಆಗಿರುವ ಶಿವರಾಮೇಗೌಡರು ಜೆಡಿಎಸ್ ಮಹಿಳಾ ಕಾರ್ಯಕರ್ತೆ ಜೊತೆ ಮಾತಾಡಿರುವ ಆಡಿಯೋ ಎಲ್ಲೇಡೆ ಹರಿದಾಡುತ್ತಿದೆ. ಮಂಡ್ಯ ಲೋಕಸಭಾ ಎಲೆಕ್ಷನ್‍ಗೆ 30 ಕೋಟಿ ಖರ್ಚು ಮಾಡಿದ್ದೇನೆ. ಎಂಎಲ್‍ಸಿ ಎಲೆಕ್ಷನ್‍ಗೆ 27 ಕೋಟಿ ರೂಪಾಯಿ ಖರ್ಚು ಮಾಡಿದ್ದೇನೆ. ಎಂಎಲ್‍ಎ ಎಲೆಕ್ಷನ್‍ಗೆ 30 ಕೋಟಿ ರೂಪಾಯಿ ಖರ್ಚು ಮಾಡ್ತೇನೆ. ನನ್ನದು 8 ಸ್ಕೂಲ್ ಇದೆ, ತಿಂಗಳಿಗೆ 3 ಕೋಟಿ ಸಂಬಳ ಕೊಡ್ತೇನೆ. ನಾಗಮಂಗಲ ಎಲೆಕ್ಷನ್‍ಗೂ 10 ತಿಂಗಳ ಸಂಬಳದಷ್ಟೇ ಹಣ ಬೇಕು. ಎಂಎಲ್‍ಎ ಎಲೆಕ್ಷನ್‍ಗೆ ಅಷ್ಟೂ ದುಡ್ಡು ಖರ್ಚು ಮಾಡುತ್ತೇನೆ ಎಂದು ಮಾತನಾಡಿಕೊಂಡು ಬಳಿಕ ದಿವಂಗತ ಮಾದೇಗೌಡರ ಬಗ್ಗೆ ನಿಂದಿಸಿರುವುದು ಆಡಿಯೋದಲ್ಲಿದೆ. ಇದನ್ನೂ ಓದಿ: MLA ಎಲೆಕ್ಷನ್‍ಗೆ 30 ಕೋಟಿ ಖರ್ಚು ಮಾಡ್ತೀನಿ – ಶಿವರಾಮೇಗೌಡ ಆಡಿಯೋ ವೈರಲ್

  • ನ್ಯಾಯಾಲಯದ ಮೇಲೆ ವಿಶ್ವಾಸವಿದ್ದು, ತೀರ್ಪು ಕರ್ನಾಟಕದ ಪರವಾಗಿರುತ್ತೆ- ಜಿ. ಮಾದೇಗೌಡ

    ನ್ಯಾಯಾಲಯದ ಮೇಲೆ ವಿಶ್ವಾಸವಿದ್ದು, ತೀರ್ಪು ಕರ್ನಾಟಕದ ಪರವಾಗಿರುತ್ತೆ- ಜಿ. ಮಾದೇಗೌಡ

    ಮಂಡ್ಯ: ಕರ್ನಾಟಕದ ಮತ್ತು ತಮಿಳುನಾಡು ನಡುವಿನ ದಶಕಗಳ ಕಾವೇರಿ ನದಿ ನೀರು ಹಂಚಿಕೆ ವಿವಾದ ಸಂಬಂಧ ಸುಪ್ರೀಂಕೋರ್ಟ್ ಇಂದು ಅಂತಿಮ ತೀರ್ಪು ನೀಡಲಿದ್ದು, ನ್ಯಾಯಾಲಯದ ಮೇಲೆ ವಿಶ್ವಾಸವಿದೆ. ಹೀಗಾಗಿ ತೀರ್ಪು ಕರ್ನಾಟಕದ ಪರವಾಗಿ ಬರಬಹುದು ಎಂದು ಕಾವೇರಿ ಹೋರಾಟಗಾರ ಜಿ.ಮಾದೇಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೀರ್ಪು ನಮ್ಮ ಪರವಾಗಿ ಬರುವ ವಿಶ್ವಾಸವಿದೆ. ಒಂದು ವೇಳೆ ವ್ಯತಿರಿಕ್ತವಾಗಿ ಬಂದರೆ ರೈತರು ಶಾಂತಿಯುತ ಹೋರಾಟ ಮಾಡಬೇಕು. ಯಾವುದೇ ರೀತಿಯ ಹಿಂಸೆಯಲ್ಲಿ ತೊಡಗಬಾರದು ಎಂದು ಮಾದೇಗೌಡ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಇಂದು ಸುಪ್ರೀಂನಲ್ಲಿ `ಕಾವೇರಿ’ ಅಂತಿಮ ತೀರ್ಪು- ಬೆಂಗ್ಳೂರು, ಮಂಡ್ಯ, ಮೈಸೂರಲ್ಲಿ ಕಟ್ಟೆಚ್ಚರ

    ಈ ಹಿಂದೆ ಬರುತ್ತಿದ್ದ ತೀರ್ಪು ಜಯಲಲಿತ ತೀರ್ಪು ಎಂಬಂತಾಗಿತ್ತು. ತಮ್ಮ ರಾಜ್ಯಕ್ಕೆ ಬರುವ ಅಧಿಕಾರಿಗಳಿಂದ ಬೇಕಾದ ರೀತಿ ವರದಿ ಬರೆಸುತ್ತಿದ್ರು. ಆದ್ರೆ ನ್ಯಾಯಾಲಯ ಎಲ್ಲವನ್ನು ಪರಿಶೀಲಿಸಿ ನ್ಯಾಯಯುತ ತೀರ್ಪು ನೀಡಲಿದೆ ಎಂದು ಮಾದೇಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕಾವೇರಿ ನೀರಿಗೆ ತಮಿಳುನಾಡು ಕ್ಯಾತೆ ಯಾಕೆ? ಆರಂಭದಿಂದ ಇಲ್ಲಿಯವರೆಗೆ ಏನಾಯ್ತು? ಇಲ್ಲಿದೆ ಪೂರ್ಣ ವಿವರ