Tag: Maddur Ganesha Clash

  • ಶತ್ರು ದೇಶಕ್ಕೆ ಜಿಂದಾಬಾದ್ ಅಂದ್ರೆ, ದೇವರ ಮೇಲೆ ಕಲ್ಲು ತೂರಿದ್ರೆ ಬೆರಕೆಯವ್ರು ಸುಮ್ನಿರಬಹುದು, ಶುದ್ಧ ರಕ್ತದವರಲ್ಲ: ಸಿ.ಟಿ ರವಿ

    ಶತ್ರು ದೇಶಕ್ಕೆ ಜಿಂದಾಬಾದ್ ಅಂದ್ರೆ, ದೇವರ ಮೇಲೆ ಕಲ್ಲು ತೂರಿದ್ರೆ ಬೆರಕೆಯವ್ರು ಸುಮ್ನಿರಬಹುದು, ಶುದ್ಧ ರಕ್ತದವರಲ್ಲ: ಸಿ.ಟಿ ರವಿ

    – ಎಸ್‍ಐಟಿ ತನಿಖೆಗೆ ಕಾಣದ ಕೈ ನಿಯಂತ್ರಣ?

    ಚಿಕ್ಕಮಗಳೂರು: ದೇವರ ಮೇಲೆ ಕಲ್ಲು ತೂರಿದ್ರೆ, ಉಗಿದ್ರೆ, ಪೆಟ್ರೋಲ್ ಬಾಂಬ್ ಹಾಕಿ ಪಾಕಿಸ್ತಾನಕ್ಕೆ ಜಿಂದಾಬಾದ್ ಕೂಗಿದ್ರೆ ನೋಡಿಕೊಂಡು ಹೇಡಿಗಳು, ಬೆರಕೆಯವರು ಸುಮ್ಮನಿರಬಹುದು, ಶುದ್ಧ ರಕ್ತದವರು ಸುಮ್ಮನಿರಲ್ಲ ಎಂದು ಎಂಎಲ್‍ಸಿ ಸಿ.ಟಿ ರವಿ (C.T Ravi) ಹೇಳಿದ್ದಾರೆ.

    ಚಿಕ್ಕಮಗಳೂರಿನಲ್ಲಿ (Chikkamagaluru) ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ತಲೆ ಕಡೀರಿ, ತೊಡೆ ಮುರೀರಿ ಎಂದು ಸಿ.ಟಿ ರವಿ ತಮ್ಮ ಮಕ್ಕಳಿಗೆ ಹೇಳ್ತಾರಾ? ಎಂಬ ಸಚಿವ ಪ್ರಿಯಾಂಕ್ ಖರ್ಗೆಯವರ (Priyank Kharge) ಹೇಳಿಕೆ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಶುದ್ಧ ರಕ್ತದವರು ನನ್ನ ಜೊತೆ ನಿಂತಿದ್ದಾರೆ. ಬೆರಕೆಯವರು ಬೆರಕೆ ರೀತಿ ಮಾತನಾಡ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಸಿಎಂ ಹೊಗಳಿದ ಶಾಂತಿದೂತರಿಂದ ಮದ್ದೂರಿನಲ್ಲಿ ಗಣೇಶನ ಮೇಲೆ ಕಲ್ಲು: ಸಿಟಿ ರವಿ ಆಕ್ರೋಶ

    ಧರ್ಮಸ್ಥಳದ ಬುರುಡೆ ಪ್ರಕರಣದ ವಿಚಾರವಾಗಿ, ಎಸ್‍ಐಟಿ ತನಿಖೆ ಬಗ್ಗೆ ಅವರು ಅಸಮಾಧಾನ ಹೊರಹಾಕಿದರು. ಒಬ್ಬ ಬುರುಡೆ ಮಾಸ್ಕ್ ಮ್ಯಾನ್ ಮಾತು ಕೇಳಿ ಸರ್ಕಾರ ಮರ್ಯಾದೆ ಕಳೆದುಕೊಂಡಿದೆ. ಧರ್ಮಾಧಿಕಾರಿ, ಧರ್ಮಸ್ಥಳದ ಬಗ್ಗೆ ಅಪನಂಬಿಕೆ ಬರುವಂತೆ ವರ್ತಿಸಿ ಇದ್ದ 3 ಕಾಸಿನ ಮರ್ಯಾದೆಯನ್ನೂ ಹರಾಜು ಹಾಕಿಕೊಂಡಿದೆ. ಈಗ ಮತ್ತೊಬ್ಬನ ಮಾತು ಕೇಳಿ ಲಂಗೋಟಿಯನ್ನೂ ಬಿಚ್ಕೊಂಡು ಬೆತ್ತಲಾಗಬೇಕೆಂದಿದ್ರೆ ಅವರ ಹಣೆಬರಹ ಎಂದಿದ್ದಾರೆ.

    ಎಸ್‍ಐಟಿ ತನಿಖೆಗೆ ಕಾಣದ ಕೈ ನಿಯಂತ್ರಣ ಹೇರುತ್ತಿರುವ ಅನುಮಾನ ಬರುತ್ತಿದೆ. ಅಪಪ್ರಚಾರ ಮಾಡಿದ ಯೂಟ್ಯೂಬರ್ಸ್, ಬುಲ್ಡೋಜರ್ ಇಟ್ಟು ಧರ್ಮಸ್ಥಳ ಉಡಾಯಿಸಬೇಕೆಂದೋರು ಬೀದಿಯಲ್ಲೇ ಓಡಾಡ್ತಿದ್ದಾರೆ. ಷಡ್ಯಂತ್ರ ಮಾಡ್ದೋರು ಯಾರೆಂದು ಇಂದಿಗೂ ಸ್ಪಷ್ಟಪಡಿಸಿಲ್ಲ. ತನಿಖೆಯನ್ನು ಹಳ್ಳ ಹಿಡಿಸುವ ಎಲ್ಲಾ ಪ್ರಯತ್ನಗಳು ನಡೆಯುತ್ತಿರೋ ಅನುಮಾನ ಬರುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಪ್ರಧಾನಿ ಕೊಲ್ಬೇಕು ಅಂದವ್ರ ಮೇಲೆ ಕೇಸ್ ಆಗಲಿಲ್ಲ, ನಮ್ಮ ಮೇಲೆ ಎಫ್‍ಐಆರ್ ಆಗುತ್ತೆ: ಸಿ.ಟಿ ರವಿ ಕಿಡಿ