Tag: Madangopal

  • ಅಧ್ಯಕ್ಷ ಹುದ್ದೆ ಅಲಂಕರಿಸಿದರೂ ಯಾವುದೇ ವೇತನ, ಭತ್ಯೆ ಬೇಡ – ಸರ್ಕಾರಕ್ಕೆ ಮದನಗೋಪಾಲ್‌ ಪತ್ರ

    ಅಧ್ಯಕ್ಷ ಹುದ್ದೆ ಅಲಂಕರಿಸಿದರೂ ಯಾವುದೇ ವೇತನ, ಭತ್ಯೆ ಬೇಡ – ಸರ್ಕಾರಕ್ಕೆ ಮದನಗೋಪಾಲ್‌ ಪತ್ರ

    ಬೆಂಗಳೂರು: ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ನಿವೃತ್ತ ಐಎಎಸ್ ಅಧಿಕಾರಿ ಮದನಗೋಪಾಲ್ ಇಂದು ಅಧಿಕಾರ ಸ್ವೀಕರಿಸಿದ್ದಾರೆ.

    ಈ ಹುದ್ದೆಯನ್ನು ಅಲಂಕರಿಸಿದರೂ ಯಾವುದೇ ವೇತನ , ಭತ್ಯೆ ಪಡೆಯುವುದಿಲ್ಲ ಮದನಗೋಪಾಲ್ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

    ಪತ್ರದಲ್ಲಿ ಈ ಹುದ್ದೆಗೆ ಸಂಬಂಧಿಸಿದಂತೆ ನಾನು ಯಾವುದೇ ವೇತನ, ಇತರೇ ಭತ್ಯೆಗಳನ್ನು ಪಡೆಯಲು ಇಚ್ಛಿಸುವುದಿಲ್ಲ. ಸರ್ಕಾರದಿಂದ ಗೌರವ ಧನವಾಗಿ ಒಂದು ರೂಪಾಯಿಯನ್ನು ಮಾತ್ರ ಪಡೆಯಲು ಇಚ್ಛಿಸಿದ್ದೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ