Tag: madanayakanahalli

  • ನೆಲಮಂಗಲ: 13ರ ಅಪ್ರಾಪ್ತೆ ಮೇಲೆ ಅತ್ಯಾಚಾರ ಆರೋಪ – ಪೋಕ್ಸೊ ಕೇಸ್ ದಾಖಲು

    ನೆಲಮಂಗಲ: 13 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿರುವ ಘಟನೆ ಜಿಲ್ಲೆಯ ನೆಲಮಂಗಲದ (Nelamangala) ಮಾದನಾಯಕನಹಳ್ಳಿಯಲ್ಲಿ (Madanayakanahalli) ನಡೆದಿದೆ.

    ನೆಲಮಂಗಲ ಉಪವಿಭಾಗದ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪರಿಚಿತ ವ್ಯಕ್ತಿ ವಿರುದ್ಧ ಪೋಕ್ಸೋ ಪ್ರಕರಣ (POCSO Case) ದಾಖಲಿಸಲಾಗಿದೆ.ಇದನ್ನೂ ಓದಿ: ವಾಲ್ಮೀಕಿ ಹಗರಣದ ವಿರುದ್ಧ ಬಿಜೆಪಿಯಿಂದ ಬಳ್ಳಾರಿ ಪಾದಯಾತ್ರೆ – ಛಲವಾದಿ ನಾರಾಯಣಸ್ವಾಮಿ

    ಪ್ರಕರಣ ದಾಖಲಿಸಿಕೊಂಡು ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.

  • ಹೂಡಿಕೆ ಮಾಡಿದ್ರೆ ಡಬಲ್ ಕೊಡೋದಾಗಿ ನಂಬಿಸಿ ಹಣದೊಂದಿಗೆ ದಂಪತಿ ಎಸ್ಕೇಪ್

    ಹೂಡಿಕೆ ಮಾಡಿದ್ರೆ ಡಬಲ್ ಕೊಡೋದಾಗಿ ನಂಬಿಸಿ ಹಣದೊಂದಿಗೆ ದಂಪತಿ ಎಸ್ಕೇಪ್

    ನೆಲಮಂಗಲ: ಹಣ (Money) ಹೂಡಿಕೆ ಮಾಡಿದ್ರೆ ಡಬಲ್ ಕೊಡುವುದಾಗಿ ನಂಬಿಸಿ ಕೋಟಿ ಕೋಟಿ ಹಣದೊಂದಿಗೆ ದಂಪತಿ (Couple) ಎಸ್ಕೇಪ್ ಆಗಿರುವ ಘಟನೆ ನೆಲಮಂಗಲ (Nelamangala) ಬಳಿಯ ಮಾದನಾಯಕನಹಳ್ಳಿಯಲ್ಲಿ (Madanayakanahalli) ನಡೆದಿದೆ.

    ಪತಿ ಮುರಳಿ ಹಾಗೂ ಪತ್ನಿ ಕಲ್ಪನಾ ಕೋಟಿ ಕೋಟಿ ವಂಚಿಸಿ (Cheat) ಪರಾರಿಯಾಗಿರುವ ದಂಪತಿ. ಬರೋಬ್ಬರಿ ಎರಡು ಕೋಟಿಗೂ ಅಧಿಕ ಹಣದೊಂದಿಗೆ ದಂಪತಿ ಎಸ್ಕೇಪ್ ಆಗಿದ್ದಾರೆ. ರಾತ್ರೋರಾತ್ರಿ ಬಾಡಿಗೆ ಮನೆಗೆ ಬೀಗ ಹಾಕಿ ಹಣದೊಂದಿಗೆ ಐನಾತಿ ದಂಪತಿ ನಾಪತ್ತೆಯಾಗಿದ್ದಾರೆ. ಹಣ ಹೂಡಿಕೆ ಮಾಡಿದರೆ ಡಬಲ್ ಕೊಡುವುದಾಗಿ ದಂಪತಿ ಜನರಿಗೆ ನಂಬಿಸಿದ್ದಾರೆ. ಇದೀಗ ಹಣದೊಂದಿಗೆ ದಂಪತಿ ಪರಾರಿಯಾಗಿದ್ದು, ಮಕ್ಕಳ ವಿದ್ಯಾಭ್ಯಾಸ, ಮದುವೆ, ಸೈಟ್ ಮನೆಕಟ್ಟಲು ಕೂಡಿಟ್ಟ ಹಣ ಕಳೆದುಕೊಂಡು ಜನರು ಕಂಗಾಲಾಗಿದ್ದಾರೆ. ಇದನ್ನೂ ಓದಿ: ಕನಕಪುರ ಪೊಲೀಸರ ಕಾರ್ಯಾಚರಣೆ – ಇಬ್ಬರು ಕುಖ್ಯಾತ ಮನೆಗಳ್ಳರ ಬಂಧನ

    ದಂಪತಿ ತಂಗಿದ್ದ ಬಾಡಿಗೆ ಮನೆಯ ಬಳಿ ಮೋಸಹೋದ ಜನರು ಜಮಾಯಿಸಿದ್ದು, ಕಣ್ಣೀರಿಡುತ್ತ ಮಹಿಳೆಯರು ಹಿಡಿಶಾಪ ಹಾಕುತ್ತಿದ್ದಾರೆ. ಇತ್ತ ಹಣವೂ ಇಲ್ಲದೇ, ದಂಪತಿಯೂ ನಾಪತ್ತೆಯಾಗಿದ್ದರಿಂದ ನೊಂದ ಜನರು ಪೊಲೀಸರ ಮೊರೆಹೋಗಿದ್ದಾರೆ. ಮಹಿಳೆಯರು, ವೃದ್ಧರು, ಅಂಗವಿಕಲರಿಗೂ ಈ ದಂಪತಿ ಮೋಸ ಮಾಡಿದ್ದು, ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ವಂಚಕರ ವಿರುದ್ಧ ದೂರು ದಾಖಲಾಗಿದೆ. ಇದನ್ನೂ ಓದಿ: ಮುಕೇಶ್ ಅಂಬಾನಿಗೆ ಜೀವ ಬೆದರಿಕೆ – ಆರೋಪಿ ಅರೆಸ್ಟ್

  • ಮಿಡ್‌ನೈಟ್ ಆಸೆ – ಪಾರ್ಲರ್ ಬೀಗ ಮುರಿದು ನಾಲ್ಕೇ ಐಸ್‌ಕ್ರೀಮ್ ಕದ್ದು ಪರಾರಿಯಾದ ಕಳ್ರು

    ಮಿಡ್‌ನೈಟ್ ಆಸೆ – ಪಾರ್ಲರ್ ಬೀಗ ಮುರಿದು ನಾಲ್ಕೇ ಐಸ್‌ಕ್ರೀಮ್ ಕದ್ದು ಪರಾರಿಯಾದ ಕಳ್ರು

    ಬೆಂಗಳೂರು: ಮಧ್ಯ ರಾತ್ರಿಯಲ್ಲಿ ಐಸ್‌ಕ್ರೀಮ್ (Ice Cream) ತಿನ್ನೋ ಆಸೆಗೆ ಪಾರ್ಲರ್‌ಗೆ ಕನ್ನ ಹಾಕಿದ ಕಳ್ಳರು ನಾಲ್ಕೇ ನಾಲ್ಕು ಐಸ್‌ಕ್ರೀಮ್ ಕದ್ದು ಪರಾರಿಯಾಗಿರುವ ಘಟನೆ ಮಾದನಾಯಕನಹಳ್ಳಿ (Madanayakanahalli) ಬಳಿಯ ದೊಂಬರಹಳ್ಳಿಯಲ್ಲಿ ನಡೆದಿದೆ.

    ಕಳ್ಳರು ಮಧ್ಯರಾತ್ರಿ 2 ಗಂಟೆ ವೇಳೆ ಐಸ್‌ಕ್ರೀಮ್ ಅಂಗಡಿಗೆ ಕನ್ನ ಹಾಕಿದ್ದಾರೆ. ಆಟೋದಲ್ಲಿ ಬಂದ ನಾಲ್ವರು ಪಾರ್ಲರ್‌ನ ರೋಲಿಂಗ್ ಶೆಟರ್ ಬೀಗ ಮುರಿದು ಒಳ ನುಗ್ಗಿದ್ದಾರೆ. ನಾಲ್ಕು ಜನರು 4 ಐಸ್‌ಕ್ರೀಂ ಎತ್ತಿಕೊಂಡು ಸುಮಾರು 100 ರೂ.ಯ ಐಸ್‌ಕ್ರೀಮ್ ಅನ್ನು ತಿಂದಿದ್ದಾರೆ. ಇದನ್ನೂ ಓದಿ: ಪೊಲೀಸ್ ಕಾನ್‌ಸ್ಟೇಬಲ್‌ಗೆ ಬಂಪರ್ – ಟೊಮೆಟೊ ಬೆಳೆದು ಲಕ್ಷಾಂತರ ರೂ. ಆದಾಯ ಗಳಿಕೆ

    ನಂತರ ಮನಸ್ಸು ಬದಲಾಯಿಸಿದ ಖದೀಮರು ಅಂಗಡಿಯ ಕ್ಯಾಷಿಯರ್ ಕೌಂಟರ್‌ಗೂ ಕೈ ಹಾಕಿ 200 ರೂ. ಚಿಲ್ಲರೆ ಹಣದೊಂದಿಗೆ ಪರಾರಿಯಾಗಿದ್ದಾರೆ. ಘಟನೆ ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನೂ ಓದಿ: ದೆಹಲಿ ಪ್ರವಾಹ – ಸುಪ್ರೀಂ ಕೋರ್ಟ್‍ವರೆಗೂ ಉಕ್ಕಿ ಹರಿದ ಯಮುನೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಾದನಾಯಕನಹಳ್ಳಿ ಇನ್ಸ್‌ಪೆಕ್ಟರ್‌ ಮಂಜುನಾಥ್‌ಗೆ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕ

    ಮಾದನಾಯಕನಹಳ್ಳಿ ಇನ್ಸ್‌ಪೆಕ್ಟರ್‌ ಮಂಜುನಾಥ್‌ಗೆ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕ

    ನೆಲಮಂಗಲ: ಗಣರಾಜ್ಯೋತ್ಸವ (Republic Day) ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕ್ಕೆ ಬೆಂಗಳೂರು ಹೊರವಲಯ ನೆಲಮಂಗಲ (Nelamangala) ಉಪವಿಭಾಗದ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ ಸುಪರ್ ಸಿಂಗಂ ಎಂದೇ ಜನರಿಂದ ಪ್ರಶಂಸೆ ಪಡೆದಿರುವ ಇನ್ಸ್‌ಪೆಕ್ಟರ್‌ ಮಂಜುನಾಥ್ (CPI Manjunath) ಆಯ್ಕೆಯಾಗಿದ್ದಾರೆ.

    ಸೇವಾ ಅವಧಿಯಲ್ಲಿ ಸಾಕಷ್ಟು ಪ್ರಕರಣಗಳನ್ನು ಬೆನ್ನತ್ತಿ ಸಮಾಜ ಘಾತುಕರಿಗೆ ಬಿಸಿ ಮುಟ್ಟಿಸಿ ಜನಸಾಮಾನ್ಯರ ಅಚ್ಚುಮೆಚ್ಚಿನ ಪೊಲೀಸ್‌ ಅಧಿಕಾರಿಯಾಗಿ ಮಂಜುನಾಥ್ ಗುರುತಿಸಿಕೊಂಡಿದ್ದಾರೆ. ನೆಲಮಂಗಲ ಹಾಗೂ ಮಾದನಾಯಕನಹಳ್ಳಿ ಭಾಗದ ಜನರು ಇವರ ಕಾರ್ಯವೈಖರಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಎಸ್.ಎಂ. ಕೃಷ್ಣ, ಎಸ್‍ಎಲ್ ಭೈರಪ್ಪ, ಸುಧಾಮೂರ್ತಿ ಸೇರಿ ರಾಜ್ಯದ 8 ಮಂದಿಗೆ ಪದ್ಮ ಪ್ರಶಸ್ತಿ

    ಜನರ ನಾಡಿ ಮಿಡಿತ, ಕುಂದುಕೊರತೆಗಳು, ಜನಸಾಮಾನ್ಯರ ಪ್ರೀತಿ ವಿಶ್ವಾಸ, ಸ್ನೇಹ ಜೀವಿಯಂತೆ ಕೆಲಸ ಮಾಡಿ  ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಿ ಅತ್ಯುತ್ತಮ ಸೇವೆ ಸಲ್ಲಿಸಿದವರಿಗೆ ಪ್ರತಿ ವರ್ಷ ಗಣರಾಜ್ಯೋತ್ಸವದಂದು ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕ ನೀಡಿ ಪುರಸ್ಕರಿಸಲಾಗುತ್ತದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ‘ಮನೆಯೇ’ ಮಂತ್ರಾಲಯ ಇಂಪ್ಯಾಕ್ಟ್- ಸಂತ್ರಸ್ತ ಮಹಿಳೆಯ ಸಹಾಯಕ್ಕೆ ಧಾವಿಸಿದ ಸ್ಥಳೀಯರು

    ‘ಮನೆಯೇ’ ಮಂತ್ರಾಲಯ ಇಂಪ್ಯಾಕ್ಟ್- ಸಂತ್ರಸ್ತ ಮಹಿಳೆಯ ಸಹಾಯಕ್ಕೆ ಧಾವಿಸಿದ ಸ್ಥಳೀಯರು

    ನೆಲಮಂಗಲ: ಪಬ್ಲಿಕ್ ಟಿವಿಯಲ್ಲಿ ತನ್ನ ಕಷ್ಟ ತೋಡಿಕೊಂಡಿದ್ದ ಮಹಿಳೆಗೆ ಮಾದನಾಯಕನಹಳ್ಳಿ ಸ್ಥಳೀಯ ನಿವಾಸಿಗಳು ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಹೌದು. ಪಬ್ಲಿಕ್ ಟಿವಿಯ ‘ಮನೆಯೇ’ ಮಂತ್ರಾಲಯ ಕಾರ್ಯಕ್ರಮಕ್ಕೆ ಬೆಂಗಳೂರು ಹೊರವಲಯದ ನೆಲಮಂಗಲದ ಮಾದನಾಯಕನಹಳ್ಳಿ ನಿವಾಸಿ ಮಹೇಶ್ವರಿ ಕರೆ ಮಾಡಿ ತನ್ನ ಕಷ್ಟ ಹೇಳಿಕೊಂಡಿದ್ದರು. ಇದೀಗ ಮಹಿಳೆಗೆ ಮಾದನಾಯಕನಹಳ್ಳಿ ನಿವಾಸಿಗಳು ನೆರವು ನೀಡಿದ್ದಾರೆ.

    ಮಾದನಾಯಕನಹಳ್ಳಿಯಲ್ಲಿ ನೆಲೆಸಿರುವ ಮಹೇಶ್ವರಿಗೆ ಗಂಡ ಹಾಗೂ ಮಗನಿದ್ದು ಇವರಿಂದ ದೂರವಾಗಿದ್ದಾರೆ. ಹೀಗಿರುವಾಗ ಲಾಕ್ ಡೌನ್ ಹಿನ್ನೆಲೆ ಮನೆಯಲ್ಲಿ ಗ್ಯಾಸ್ ಕನೆಕ್ಷನ್ ಹಾಗೂ ದಿನಸಿ ಪದಾರ್ಥಗಳು ಇಲ್ಲದೆ ಪರದಾಡುವಂತಾಗಿತ್ತು. ಈ ಸಂಬಂಧ ಮಹೇಶ್ವರಿ ಅವರು ಪಬ್ಲಿಕ್ ಟಿವಿಯ ‘ಮನೆಯೇ’ ಮಂತ್ರಾಲಯ ಕಾರ್ಯಕ್ರಮಕ್ಕೆ ಕರೆ ಮಾಡಿದ್ದರು. ಇಂದು ಮಾದನಾಯಕನಹಳ್ಳಿಯ, ಡಿವಿಜಿ ಮಂಜುನಾಥ್ ಹಾಗೂ ಸ್ನೇಹಿತರು ಆ ಮಹಿಳೆಯ ಮನೆಗೆ ತೆರಳಿ ಸಿಲಿಂಡರ್ ಚೆಕ್ ಮಾಡಿ, ಗ್ಯಾಸ್ ಕನೆಕ್ಷನ್ ಹಾಗೂ 15 ದಿನಕ್ಕೆ ಬೇಕಾಗುವಂತಹ ದಿನಸಿ ಪದಾರ್ಥಗಳು ಹಾಗೂ ತರಕಾರಿಗಳನ್ನ ವಿತರಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

    ಪಬ್ಲಿಕ್ ಟಿವಿಯ ಸಹಕಾರದಕ್ಕೆ ಕಂಬನಿ ಮಿಡಿದ ಮಹೇಶ್ವರಿ ಸಹಾಯಕ್ಕೆ ಸ್ಪಂದಿಸಿದ ಸ್ಥಳೀಯರಿಗೂ ಅಭಿನಂದನೆ ಸಲ್ಲಿಸಿ ಕಷ್ಟದ ಸಮಯದಲ್ಲಿ ನೆರವಾದವರಿಗೆ ನಮನ ಸಲ್ಲಿಸಿದ್ದಾರೆ.