Tag: Madakari

  • ಮದಕರಿ ನಾಯಕನ ಪಾರ್ಟ್ ಮಾಡೋ ಆಸೆ ಬಿಚ್ಚಿಟ್ಟ ದರ್ಶನ್

    ಮದಕರಿ ನಾಯಕನ ಪಾರ್ಟ್ ಮಾಡೋ ಆಸೆ ಬಿಚ್ಚಿಟ್ಟ ದರ್ಶನ್

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮದಕರಿ ನಾಯಕನ ಪಾತ್ರದಲ್ಲಿ ನಟಿಸುವ ಆಸೆಯನ್ನು ಬಿಚ್ಚಿಟ್ಟಿದ್ದಾರೆ.

    ದರ್ಶನ್ ಅವರು `ನನ್ನ ಪ್ರಕಾರ’ ಚಿತ್ರದ ಟ್ರೈಲರ್ ಲಾಂಚ್‍ಗೆ ಹೋಗಿದ್ದರು. ಈ ವೇಳೆ ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳಲಾಯಿತು. ಆಗ ದರ್ಶನ್ ಅವರು ಸಂಗೊಳ್ಳಿ ರಾಯಣ್ಣ, ದುರ್ಯೋಧನ ಪಾತ್ರ ಬಿಟ್ಟರೆ ನನಗೆ ಮದಕರಿ ನಾಯಕನ ಪಾತ್ರ ಮಾಡಬೇಕು ಎಂದು ಹೇಳುವ ಮೂಲಕ ತಮ್ಮ ಮನದ ಆಸೆಯನ್ನು ಬಿಚ್ಚಿಟ್ಟಿದ್ದಾರೆ.

    ಬಳಿಕ 1970, 1980ರಲ್ಲಿ ದುರ್ಯೋಧನ ಪಾತ್ರ ನಿಭಾಯಿಸಲು ಯಾರು ಸೂಕ್ತ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ದರ್ಶನ್ ದುರ್ಯೋಧನ ಪಾತ್ರ ಮಾಡಲು ಸಾಕಷ್ಟು ದಿಗ್ಗಜರು ಇದ್ದಾರೆ. ಇನ್ನು ಮುಂದೆ ಕನ್ನಡ ಚಿತ್ರರಂಗದಲ್ಲಿ ಈ ರೀತಿಯ ಸಿನಿಮಾ ಬೇಕು ಎಂದು ಹೇಳಲು ಆಗುವುದಿಲ್ಲ ಎಂದು ಹೇಳಿದ್ದಾರೆ.

    ನನ್ನ ಪ್ರಕಾರ ಚಿತ್ರದಲ್ಲಿ ಪ್ರಿಯಾಮಣಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, ಕಿಶೋರ್, ಮಯೂರಿ ಮುಂತಾದವರೂ ಅಭಿನಯಿಸಿದ್ದಾರೆ. ಈಗಾಗಲೇ ಪೋಸ್ಟರ್, ಹಾಡು ಮುಂತಾದವುಗಳಿಂದ ಬಹುನಿರೀಕ್ಷಿತ ಚಿತ್ರವಾಗಿಯೂ ನನ್ನ ಪ್ರಕಾರ ಹೊರ ಹೊಮ್ಮಿದೆ. ಇದೇ 23ರಂದು ಚಿತ್ರ ಬಿಡುಗಡೆಯಾಗಲಿದೆ.

  • ಕಿಚ್ಚನಿಗಿಂತ ಮೊದಲೇ ಮದಕರಿಯಾಗ್ತಾರಾ ದರ್ಶನ್?

    ಕಿಚ್ಚನಿಗಿಂತ ಮೊದಲೇ ಮದಕರಿಯಾಗ್ತಾರಾ ದರ್ಶನ್?

    ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ನಡುವೆ ವೀರ ಮದಕರಿ ಚಿತ್ರದ ವಿಚಾರವಾಗಿ ಪೈಪೋಟಿ ಶುರುವಾಗಿದೆ. ಇವರಿಬ್ಬರೂ ಮದಕರಿ ನಾಯಕನ ಜೀವನಾಧಾರಿತ ಚಿತ್ರದಲ್ಲಿ ನಟಿಸಿಯೇ ತೀರುವ ಪಣ ತೊಟ್ಟಿದ್ದಾರೆ. ಅತ್ತ ಸುದೀಪ್ ಚಿತ್ರದ ತಯಾರಿ ನಡೆಯುತ್ತಿರೋವಾಗಲೇ ಇತ್ತ ದರ್ಶನ್ ಸುದೀಪ್ ಅವರಿಗಿಂತ ಮೊದಲೇ ಮದಕರಿಯಾಗಿ ಆರ್ಭಟಿಸೋ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ.

    ವಿಚಾರವೇನಂದ್ರೆ ಸುದೀಪ್ ಚಿತ್ರಕ್ಕಿಂತಲೂ ಮೊದಲೇ ದರ್ಶನ್ ಚಿತ್ರ ಶುರುವಾಗಲಿದೆ. ಇಂಥಾದ್ದೊಂದು ವಿಚಾರ ಅಧಿಕೃತವೆಂಬಂತೆಯೇ ಹೊರ ಬಿದ್ದಿದೆ. ಈ ಬಗ್ಗೆ ದರ್ಶನ್ ಚಿತ್ರದ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಸ್ಪಷ್ಟಪಡಿಸಿದ್ದಾರೆ. ಅವರ ಮಾತಿನ ಆಧಾರದಲ್ಲಿ ಹೇಳೋದಾದರೆ ಈಗಾಗಲೇ ಸ್ಕ್ರಿಪ್ಟ್ ವರ್ಕ್ ಕೂಡಾ ಸಂಪೂರ್ಣವಾಗಿದೆ. ಇನ್ನೇನು ಒಂದೂವರೆ ತಿಂಗಳಲ್ಲಿಯೇ ಈ ಚಿತ್ರದ ಚಿತ್ರೀಕರಣ ಚಾಲೂ ಆಗಲಿದೆ.

    ಈ ಚಿತ್ರಕ್ಕೆ ಹಂಸಲೇಖಾ ಅವರು ಸಂಗೀತ ನಿರ್ದೇಶನ ಮಾಡಲಿದ್ದಾರಂತೆ. ಅವರು ಶೀಘ್ರದಲ್ಲಿಯೇ ಕಾರ್ಯಾರಂಭ ಮಾಡಲಿದ್ದಾರೆ. ಆ ಬಳಿಕ ಚಿತ್ರಕ್ಕಾಗಿ ಅದ್ಧೂರಿ ಸೆಟ್‍ಗಳನ್ನು ಹಾಕಲು ರಾಕ್ ಲೈನ್ ವೆಂಕಟೇಶ್ ಅವರು ಯೋಜನೆ ಹಾಕಿಕೊಂಡಿದ್ದಾರೆ. ಒಟ್ಟಾರೆಯಾಗಿ ಸುದೀಪ್ ಚಿತ್ರಕ್ಕಿಂತಲೂ ವೇಗವಾದ ಕೆಲಸ ಕಾರ್ಯಗಳು ದರ್ಶನ್ ಚಿತ್ರಕ್ಕಾಗಿ ಚಾಲ್ತಿಯಲ್ಲಿವೆ.

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv