Tag: Machine Gun

  • ಡಿಆರ್‌ಡಿಓ ಹೊಸ ಮಶೀನ್ ಗನ್‍ಗಳಿಗೆ ಗ್ರೀನ್ ಸಿಗ್ನಲ್

    ಡಿಆರ್‌ಡಿಓ ಹೊಸ ಮಶೀನ್ ಗನ್‍ಗಳಿಗೆ ಗ್ರೀನ್ ಸಿಗ್ನಲ್

    – ಮಶೀನ್ ಗನ್‍ಗಳ ವಿಶೇಷತೆ ಏನು?

    ನವದೆಹಲಿ: ಡಿಆರ್‌ಡಿಓ ಹೊಸ ಮಶೀನ್ ಗನ್ ಗಳಿಗೆ ರಕ್ಷಣಾ ಸಚಿವಾಲಯ ಹಸಿರು ನಿಶಾನೆ ತೋರಿದೆ. ಗುರುವಾರ ನಡೆದ ಪ್ರಾಯೋಗಿಕ ಪರೀಕ್ಷೆಯಲ್ಲಿ ಮಶೀನ್ ಗನ್ ಗಳು ಪಾಸ್ ಆಗಿವೆ. ಸೇನೆ, ಪೊಲೀಸ್ ಮತ್ತು ಆರ್ಮ್‍ಡ್ ಫೋರ್ಸ್ ಗಳಲ್ಲಿ ಮಶೀನ್ ಗನ್ ಬಳಕೆಯಾಗಲಿವೆ.

    5.56*30 ಎಂಎಂ ಗನ್ ಗಳು ಸೆಮೆ ಆಟೋಮೆಟಿಕ್ ಗಳಾಗಿದ್ದು, ಗ್ಯಾಸ್ ನಿಂದ ಕೆಲಸ ಮಾಡಲಿವೆ. ಒಂದು ನಿಮಿಷದಲ್ಲಿ 700 ರೌಂಡ್ ಫಾಯರ್ ಸಾಮರ್ಥ್ಯ ಹೊಂದಿವೆ.

    ಯೂಸರ್ ಟ್ರಯಲ್ ಮತ್ತು ಅಂತಿಮ ಪರೀಕ್ಷೆಗಳು ಸೋಮವಾರ ಅಂತ್ಯವಾಗಿವೆ. ಮಶೀನ್ ಗನ್ ಪರೀಕ್ಷೆಗಾಗಿ ಸೇನೆ ಜನರಲ್ ಸ್ಟಾಫ್ ಕ್ವಾಲಿಟೇಟಿವ್ ರಿಕ್ವೈರ್ಮೆಂಟ್ (ಜಿಎಸ್‍ಕ್ಯೂಆರ್) ರಚಿಸಿತ್ತು. ಗನ್ ಗಳ ಸಾಮರ್ಥ್ಯದ ಪರೀಕ್ಷೆಯನ್ನ ಶೀತ ಮತ್ತು ಉಷ್ಣ ಪ್ರದೇಶಗಳಲ್ಲಿ ನಡೆಸಲಾಗಿದೆ ಎಂದು ರಕ್ಷಾ ಸಚಿವಾಲಯ ತಿಳಿಸಿದೆ.

    ಈ ಎಲ್ಲ ಮಶೀನ್ ಗನ್ ಗಳು 100 ಮೀಟರ್ ಗೂ ಅಧಿಕ ಗುರಿಯನ್ನ ತಲುಪಲಿವೆ. ಪ್ರತಿ ಗನ್ ತೂಕ 3 ಕೆಜಿಯಾಗಿದ್ದು, ಹಿಂಬದಿಯ ಹೊಡೆತವನ್ನ ಕಡಿಮೆಗೊಳಿಸಲಾಗಿದೆ. ಹಾಗಾಗಿ ಒಂದೇ ಕೈಯಲ್ಲಿ ಹಿಡಿದು ಗನ್ ಚಲಾಯಿಸಬಹುದಾಗಿದೆ.