Tag: M.Y .Patil

  • ನನಗೆ ವಯಸ್ಸಾಗಿದೆ, ಟಿಕೆಟ್ ಬೇಡ: ಶಾಸಕ ಎಂ.ವೈ ಪಾಟೀಲ್

    ನನಗೆ ವಯಸ್ಸಾಗಿದೆ, ಟಿಕೆಟ್ ಬೇಡ: ಶಾಸಕ ಎಂ.ವೈ ಪಾಟೀಲ್

    ಕಲಬುರಗಿ: ಈಗಾಗಲೇ ಚುನಾವಣಾ ದಿನಾಂಕ ಘೋಷಣೆಯಾಗಿದ್ದು, ಕಾಂಗ್ರೆಸ್‍ (Congress) ನಿಂದ ಅಭ್ಯರ್ಥಿಗಳ ಫಸ್ಟ್ ಲಿಸ್ಟ್ ಕೂಡ ಹೊರಬಿದ್ದಿದೆ. ಈ ಮಧ್ಯೆ ಶಾಸಕರೊಬ್ಬರು ಪದೇ ಪದೇ ನನಗೆ ಟಿಕೆಟ್ ಬೇಡ ಎನ್ನುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.

    ಹೌದು. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಉಡಚಣ ಗ್ರಾಮದ ಕಾರ್ಯಕ್ರಮವೊಂದರಲ್ಲಿ ವಿದಾಯ ಭಾಷಣ ಮಾಡಿದ ಎಂ.ವೈ ಪಾಟೀಲ್ (M Y Patil), ನನಗೆ ಮತ್ತೆ ಟಿಕೆಟ್ ನೀಡಿದ್ರೆ ಉಪಚುನಾವಣೆ ಎದುರಿಸಬೇಕಾಗುತ್ತೆ. ಆದ್ದರಿಂದ ನನ್ನ ಬದಲಿಗೆ ಯುವಕರಿಗೆ ಟಿಕೆಟ್ ಕೊಡಿ ಎಂದು ಹೈಕಮಾಂಡ್‍ನಲ್ಲಿ ಮನವಿ ಮಾಡಿರುವುದಾಗಿ ತಿಳಿಸಿದರು.

    ಈ ಮೂಲಕ 83 ವರ್ಷ ವಯಸ್ಸಿನ ಶಾಸಕ ಎಂವೈ ಪಾಟೀಲ್ ಚುನಾವಣೆಗೆ ಸ್ಪರ್ಧಿಸಲು ನಿರಾಸಕ್ತಿ ತೋರಿದ್ದಾರೆ. ತಮ್ಮ ಬದಲಿಗೆ ಪುತ್ರ ಅರುಣ್ ಕುಮಾರ್ ಪಾಟೀಲ್‍ಗೆ ಟಿಕೆಟ್ ನೀಡುವಂತೆ ಶಾಸಕರು ಮನವಿ ಮಾಡಿದ್ದಾರೆ. ಇದನ್ನೂ ಓದಿ: Karnataka Election 2023- ಮೇ 10 ರಂದು ಮತದಾನ, ಮೇ 13ಕ್ಕೆ ಫಲಿತಾಂಶ

    ತನಗೆ ವಯಸ್ಸಾಗಿದೆ ಎಂದು ಪದೇ ಪದೇ ಟಿಕೆಟ್ ಬೇಡ ಎಂದು ಶಾಸಕರು ಹೇಳುತ್ತಿದ್ದಾರೆ. ಸದ್ಯ ಇದೀಗ ಅಫಜಲಪುರ ಕ್ಷೇತ್ರದ 8 ಜನ ಟಿಕೆಟ್ ಆಕಾಂಕ್ಷಿಗಳ ಪೈಕಿ ಟಿಕೆಟ್ ಯಾರಿಗೆ ಸಿಗುತ್ತೆ ಅನ್ನೊ ಕೂತುಹಲ ಎದ್ದಿದೆ.

  • ಸಚಿವ ಸ್ಥಾನಕ್ಕಾಗಿ ಒತ್ತಾಯಿಸಲ್ಲ, ನೀಡಿದ್ರೆ ನಿಬಾಯಿಸ್ತೇನೆ: ಎಂ.ವೈ.ಪಾಟೀಲ್

    ಸಚಿವ ಸ್ಥಾನಕ್ಕಾಗಿ ಒತ್ತಾಯಿಸಲ್ಲ, ನೀಡಿದ್ರೆ ನಿಬಾಯಿಸ್ತೇನೆ: ಎಂ.ವೈ.ಪಾಟೀಲ್

    ಕಲಬುರಗಿ: ಸಚಿವ ಸ್ಥಾನಕ್ಕಾಗಿ ಒತ್ತಾಯಿಸಲ್ಲ, ಹಿರಿಯ ಶಾಸಕನೆಂದು ನೀಡಿದರೆ ನಿಬಾಯಿಸುತ್ತೇನೆ ಎಂದು ಅಫ್ಜಲಪುರ ಶಾಸಕ ಎಂ.ವೈ.ಪಾಟೀಲ್ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ಕೊಟ್ಟರೆ ಸಮರ್ಪಕವಾಗಿ ನಿಬಾಯಿಸುತ್ತೇನೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿರುವ ಕಾರಣದಿಂದ ನಾನು ಸಚಿವ ಸ್ಥಾನಕ್ಕೆ ಒತ್ತಡ ಹೇರುವುದಿಲ್ಲ ಎಂದು ತಿಳಿಸಿದ್ದಾರೆ.

    ನಾನು ದಶಕಗಳ ಕಾಲ ಬಿಜೆಪಿಗಾಗಿ ಶ್ರಮಿಸಿದ್ದೆ, ನನಗೆ ಗೊತ್ತಾಗದಂತೆ ರಾತ್ರೋ ರಾತ್ರಿ ಮಾಲೀಕಯ್ಯ ಗುತ್ತೇದಾರ್‍ಗೆ ಟಿಕೆಟ್ ನೀಡಿದ್ರು. ಬಿಜೆಪಿಗೆ ಹಾಗೂ ಮಾಲೀಕಯ್ಯ ಅವರಿಗೆ ಜನರು ತಕ್ಕ ಪಾಠ ಕಲಿಸಿದ್ದಾರೆ. ನಾನು ಬಿಜೆಪಿಗೆ ಸೇರುವುದು ಸತ್ಯಕ್ಕೆ ದೂರವಾದ ಸಂಗತಿ, ಮತ್ತೇ ಅವರು ನನ್ನನ್ನು ಸಂಪರ್ಕಿಸಲು ಬಂದರೆ ಸರಿಯಾದ ಉತ್ತರ ಕೊಡುತ್ತೇನೆ ಎಂದು ಹೇಳಿದ್ದಾರೆ.

    ಮಾಲೀಕಯ್ಯ ಪ್ರಚಾರಕ್ಕೆ ಹೋಗಿರುವಲ್ಲಿ ಬಿಜೆಪಿ ಸೋತಿದೆ, ಅವರು ದುರಂಹಕಾರ ಬಿಟ್ಟು ಅಭಿವೃದ್ಧಿಗೆ ಶ್ರಮಿಸಿದರೆ ಮುಂದಿನ ಚುನಾವಣೆಯಲ್ಲಿ ಗೆಲ್ಲಬಹುದು ಎಂದು ಹೇಳಿದ್ದಾರೆ.