Tag: M.T.B Nagaraj

  • ಇನ್ಸ್‌ಪೆಕ್ಟರ್‌ ನಂದೀಶ್ ತೆಗೆದುಕೊಂಡ ತೀರ್ಮಾನ ರಾಂಗ್ – ತಮ್ಮ ಹೇಳಿಕೆ ಸಮರ್ಥಿಸಿಕೊಂಡ ಎಂಟಿಬಿ

    ಇನ್ಸ್‌ಪೆಕ್ಟರ್‌ ನಂದೀಶ್ ತೆಗೆದುಕೊಂಡ ತೀರ್ಮಾನ ರಾಂಗ್ – ತಮ್ಮ ಹೇಳಿಕೆ ಸಮರ್ಥಿಸಿಕೊಂಡ ಎಂಟಿಬಿ

    ರಾಯಚೂರು: ಇನ್ಸ್‌ಪೆಕ್ಟರ್‌ ನಂದೀಶ್ (Inspector Nandish) ಸಾವು ಪ್ರಕರಣ ಹಿನ್ನೆಲೆ ಪೋಸ್ಟಿಂಗ್‍ಗೆ 70-80 ಲಕ್ಷ ಹಣ ಕೊಟ್ಟು ಬಂದರೆ ಹೃದಯಾಘಾತ ಆಗದೆ ಇನ್ನೇನಾಗುತ್ತೆ ಎಂದು ಹೇಳಿಕೆ ನೀಡುವ ಮೂಲಕ ವಿವಾದ ಸೃಷ್ಟಿಸಿದ್ಧ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ (M.T.B Nagaraj) ತಮ್ಮ ಹೇಳಿಕೆಯನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ. ಆತ ತೆಗೆದುಕೊಂಡ ತೀರ್ಮಾನ ರಾಂಗ್, ಸಣ್ಣ ವಿಷಯಕ್ಕೆ ಕಮಿಷನರ್ ಸಸ್ಪೆಂಡ್ ಮಾಡಿದ್ದು ತಪ್ಪು. ಹೆಂಡತಿ ಮಕ್ಕಳು ಇದ್ದಾರೆ. ಆ ಕಮಿಷನರ್ ಕೆಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದಿದ್ದಾರೆ.

    ರಾಯಚೂರಿನಲ್ಲಿ ಕನಕದಾಸ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾವಿನ ಬಳಿಕ ನಾನು ನೋಡಲು ಹೋಗುವಾಗ ಹಿಂದೆ ಕಾರ್ಯಕರ್ತರು ಬರುತ್ತಿದ್ದರು. ಯಾಕೆ ಇಂತಹ ತೀರ್ಮಾನ ತಗೊಂಡ ಅಂತ ಹೇಳುತ್ತಾ ಬರುತ್ತಿದ್ದರು. 70-80 ಲಕ್ಷ ಖರ್ಚು ಮಾಡಿಬಿಟ್ಟೆ ಅಂತ ಟೆನ್ಷನ್‍ನಲ್ಲಿ ಇದ್ದೆ ಅಂತ ಹೇಳ್ತಿದ್ನಂತೆ. ಇಲ್ಲಿ ಏನ್ ಮಾಡಬೇಕು ಅಂತ ಖರ್ಚು ಮಾಡ್ದ, ಅಂತ ಹೇಳ್ದೆ ಅಷ್ಟೇ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇನ್ಸ್‌ಪೆಕ್ಟರ್‌ ನಂದೀಶ್ ಸಾವಿಗೆ ಪೋಸ್ಟಿಂಗ್ ಲಂಚ ಕಾರಣನಾ? – ಸಂಚಲನ ಮೂಡಿಸಿದ ಎಂಟಿಬಿ ಮಾತು

    ಆತ ತೆಗೆದುಕೊಂಡ ತೀರ್ಮಾನ ರಾಂಗ್, ಸಣ್ಣ ವಿಷಯಕ್ಕೆ ಕಮಿಷನರ್ ಸಸ್ಪೆಂಡ್ ಮಾಡಿದ್ದು ತಪ್ಪು. ಹೆಂಡತಿ ಮಕ್ಕಳು ಇದ್ದಾರೆ. ಆ ಕಮಿಷನರ್ ಕೆಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ. ನಾವು ಮುಖ್ಯಮಂತ್ರಿಗಳ ಬಳಿ ಮಾತನಾಡಿ ಪರಿಹಾರ ಕೊಡಿಸುತ್ತೇವೆ. ಆ ಮಹಿಳೆಗೆ ಉದ್ಯೋಗವನ್ನು ಕೊಡಿಸುತ್ತೇವೆ. ನಿನ್ನೆ ಮುಖ್ಯಮಂತ್ರಿಗಳ ಬಳಿ ನಾನು ಮಾತನಾಡಿದ್ದೇನೆ. ಅವರು ಒಪ್ಪಿದ್ದಾರೆ. ಅನ್ಯಾಯ ಆಗಿದೆ ಅದನ್ನು ಸರಿಪಡಿಸೋಣ ಅಂತ ಸಿಎಂ (CM) ಹೇಳಿದ್ದಾರೆ. ನಾವು ಸರಿಪಡಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಆಹ್ವಾನ ಪತ್ರಿಕೆಯಲ್ಲಿ ಸಿದ್ದರಾಮಯ್ಯ ಹೆಸರು ಮಾಯ – ಸಚಿವರಿದ್ದ ವೇದಿಕೆ ಏರಿ ಅಭಿಮಾನಿಗಳಿಂದ ಗಲಾಟೆ

    Live Tv
    [brid partner=56869869 player=32851 video=960834 autoplay=true]

  • ದೋಸ್ತಿಯ ಮತ್ತೆರಡು ವಿಕೆಟ್ ಪತನ

    ದೋಸ್ತಿಯ ಮತ್ತೆರಡು ವಿಕೆಟ್ ಪತನ

    ಬೆಂಗಳೂರು: ದೋಸ್ತಿ ಸರ್ಕಾರದ ಮತ್ತೆರೆಡು ವಿಕೆಟ್ ಪತನವಾಗಿದೆ. ಶಾಸಕ ಸುಧಾಕರ್ ಮತ್ತು ಸಚಿವ ಎಂಟಿಬಿ ನಾಗರಾಜ್ ದಿಢೀರ್ ಅಂತ ವಿಧಾನಸೌಧದ ಸ್ಪೀಕರ್ ಕಚೇರಿಗೆ ಆಗಮಿಸಿ ರಮೇಶ್ ಕುಮಾರ್ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.

    ಎಂಟಿಬಿ ನಾಗರಾಜ್ ಮತ್ತು ಶಾಸಕ ಸುಧಾಕರ್ ರಾಜೀನಾಮೆ ನೀಡಿದ್ದು, ಸಮ್ಮಿಶ್ರ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ರಾಜ್ಯಪಾಲರ ಭೇಟಿ ಬಳಿಕ ಮಾತನಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದು ಸಂಜೆಯೊಳಗೆ ಇನ್ನಿಬ್ಬರು ರಾಜೀನಾಮೆ ನೀಡ್ತಾರೆ ಎಂದು ಮುನ್ಸೂಚನೆ ನೀಡಿದ್ದರು.

    ಇಂದು ಬೆಳಗ್ಗೆ ಮಾತನಾಡಿದ್ದ ಎಂಟಿಬಿ ನಾಗರಾಜ್, ಮೈತ್ರಿ ಸರ್ಕಾರದಲ್ಲಿನ ಜೆಡಿಎಸ್‍ನವರ ಸರ್ವಾಧಿಕಾರಿ ಧೋರಣೆಯೇ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಹಾಗೂ ಸಚಿವ ಹೆಚ್.ಡಿ ರೇವಣ್ಣರಿಂದಲೇ ಮೈತ್ರಿ ಸರ್ಕಾರಕ್ಕೆ ಈ ದುಸ್ಥಿತಿ ಬಂದಿದೆ ಎಂದು ಬಹಿರಂಗವಾಗಿಯೇ ಟೀಕಿಸಿದ್ದರು.

    ಜೆಡಿಎಸ್ ನವರು ಮೈತ್ರಿ ಧರ್ಮ ಪಾಲಿಸುತ್ತಿಲ್ಲ. ಕಾಂಗ್ರೆಸ್ ಶಾಸಕರಿಗೆ ಅನುದಾನ ನೀಡುತ್ತಿಲ್ಲ. ಅವರಿಗೆ ಇಷ್ಟ ಬಂದಂತೆ ವರ್ಗಾವಣೆ ಮಾಡುತ್ತಿದ್ದಾರೆ. ಹೀಗಾಗಿ ಸಿಎಂ ಅವರ ಆಡಳಿತದಿಂದ ಬೇಸತ್ತು ಅತೃಪ್ತರು ಪಕ್ಷದಿಂದ ಹೊರ ಹೋಗಿದ್ದಾರೆ. ಸಿಎಂ ಹೇಳೋದು ಒಂದು, ಮಾಡೋದು ಇನ್ನೊಂದು. ರೇವಣ್ಣ ಅವರ ಮಾತು ಕೇಳಿಯೇ ಸಿಎಂ ಕೆಟ್ಟರು. ಮೈತ್ರಿ ಸರ್ಕಾರದಲ್ಲಿನ ಜೆಡಿಎಸ್‍ನವರ ಸರ್ವಾಧಿಕಾರಿ ಧೋರಣೆಯೇ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ ಎಂದು ವಾಗ್ದಾಳಿ ನಡೆಸಿದ್ದರು.

    ರಾಜೀನಾಮೆ ಕೊಟ್ಟ ಜೆಡಿಎಸ್ ಶಾಸಕರು:
    * ಎಚ್ ವಿಶ್ವನಾಥ್- ಹುಣಸೂರು
    * ಗೋಪಾಲಯ್ಯ- ಮಾಹಾಲಕ್ಷ್ಮಿ ಲೇ ಔಟ್
    * ನಾರಾಯಣ ಗೌಡ- ಕೆ. ಆರ್ ಪೇಟೆ

    ರಾಜೀನಾಮೆ ಕೊಟ್ಟ ಕೈ ಶಾಸಕರು:
    * ರಾಮಲಿಂಗಾ ರೆಡ್ಡಿ- ಬಿಟಿಎಂ ಲೇ ಔಟ್
    * ರಮೇಶ್ ಜಾರಕಿಹೊಳಿ- ಗೋಕಾಕ್
    * ಎಸ್.ಟಿ ಸೋಮಶೇಖರ್- ಯಶವಂತಪುರ
    * ಪ್ರತಾಪ್ ಗೌಡ ಪಾಟೀಲ್- ಮಸ್ಕಿ
    * ಬಿ.ಸಿ ಪಾಟೀಲ್- ಹಿರೇಕೆರೂರು
    * ಮಹೇಶ್ ಕುಮಟಳ್ಳಿ- ಅಥಣಿ
    * ಭೈರತಿ ಬಸವರಾಜ್- ಕೆ.ಆರ್ ಪುರಂ
    * ಶಿವರಾಂ ಹೆಬ್ಬಾರ್- ಯಲ್ಲಾಪುರ
    * ಮುನಿರತ್ನ- ರಾಜರಾಜೇಶ್ವರಿ ನಗರ
    * ರೋಷನ್ ಬೇಗ್- ಶಿವಾಜಿನಗರ
    * ಎಂಟಿಬಿ ನಾಗರಾಜ್- ಹೊಸಕೋಟೆ
    * ಸುಧಾಕರ್- ಚಿಕ್ಕಬಳ್ಳಾಪುರ

     

     

  • ಬಿಜೆಪಿಗೆ ಹೋದ್ರೆ, ಹೋಗಲಿ ನಾನೇನು ಮಾಡೋಕಾಗಲ್ಲ – ಬೇಗ್ ವಿರುದ್ಧ ಎಂಟಿಬಿ ಕಿಡಿ

    ಬಿಜೆಪಿಗೆ ಹೋದ್ರೆ, ಹೋಗಲಿ ನಾನೇನು ಮಾಡೋಕಾಗಲ್ಲ – ಬೇಗ್ ವಿರುದ್ಧ ಎಂಟಿಬಿ ಕಿಡಿ

    ಬೆಂಗಳೂರು: ಕಾಂಗ್ರೆಸ್ ರೋಷನ್ ಬೇಗ್ ಬಿಜೆಪಿಗೆ ಹೋಗುವುದು ಅವರ ತೀರ್ಮಾನ, ಹೋದರೆ ಹೋಗಲಿ ಎಂದು ಸಚಿವ ಎಂ.ಟಿ.ಬಿ ನಾಗರಾಜ್ ಸವಾಲು ಎಸೆದಿದ್ದಾರೆ.

    ಚುನಾವಣೋತ್ತರ ಸಮೀಕ್ಷೆಯಂತೆ ಫಲಿತಾಂಶ ಬಂದರೆ ಅದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರೇ ಕಾರಣ ಎಂದು ಶಾಸಕ ರೋಷನ್ ಬೇಗ್ ಬಹಿರಂಗವಾಗಿಯೇ ವಾಗ್ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ನಾಗರಾಜ್ ಅವರು, ರೋಷನ್ ಬೇಗ ಸಿದ್ದರಾಮಯ್ಯ ಸರ್ಕಾರದಲ್ಲಿ ಐದು ವರ್ಷ ಅಧಿಕಾರ ಅನುಭವಿಸಿದ್ದಾರೆ. ಅಧಿಕಾರ ಅನುಭವಿಸಿಯೂ ಈ ರೀತಿ ಮಾತನಾಡುವುದು ಸರಿಯಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯಗೆ ಅಹಂಕಾರ, ಒಡೆದು ಆಳಿದ್ದಕ್ಕೆ ಕಾಂಗ್ರೆಸ್ಸಿಗೆ ಈ ಸ್ಥಿತಿ ಬಂದಿದೆ – ರೋಷನ್ ಬೇಗ್ ಕಿಡಿ

    ಈಗಾಗಲೇ ರೋಷನ್ ಬೇಗ್ ಅವರು ಮೂರು-ನಾಲ್ಕು ಬಾರಿ ಸಚಿವರಾಗಿದ್ದಾರೆ. ಹೀಗಾಗಿ ಬೇರೆಯವರಿಗೂ ಅವಕಾಶ ಸಿಗಬೇಕು. ಇನ್ನೊಬ್ಬರಿಗೆ ಅವಕಾಶ ಸಿಕ್ಕಿತ್ತು ಎಂದು ಕೋಪ ಮಾಡಿಕೊಳ್ಳಬಾರದು. ಬಿಜೆಪಿಗೆ ಹೋಗುವುದು ಅವರ ತೀರ್ಮಾನ ನಾವೇನು ಮಾಡಲು ಸಾಧ್ಯವಿಲ್ಲ. ಈಗಾಗಲೇ ಬಿಜೆಪಿ ಹೋಗಿರುವವರು ಏನಾಗಿದ್ದಾರೆ ಎಂದು ಫಲಿತಾಂಶ ಬಂದ ಮೇಲೆ ಗೊತ್ತಾಗುತ್ತದೆ ಎಂದು ನಾಗರಾಜ್ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ರೋಷನ್ ಬೇಗ್ ರಾಜ್ಯದ ಕಾಂಗ್ರೆಸ್ ಶಾಸಕಾಂಗ ಸಭೆಯ ನಾಯಕ ಸಿದ್ದರಾಮಯ್ಯ ಹಾಗೂ ನಮ್ಮ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ಲಾಪ್ ಶೋ, ದಿನೇಶ್ ಗುಂಡೂರಾವ್ ಅವರು ಸೇರಿ ಈ ಗತಿಗೆ ತಂದಿದ್ದಾರಲ್ಲ. ಎಕ್ಸಿಟ್ ಪೋಲ್ ನೋಡಿದರೆ ನನಗೆ ಬೇಸರವಾಗುತ್ತದೆ ಎಂದು ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದರು.

  • ಸ್ವಶಕ್ತಿಯಿಂದ ಮೂರು ಬಾರಿ ಶಾಸಕನಾಗಿದ್ದು, ಹೊರತು ಕಾಂಗ್ರೆಸ್ ಹೆಸರಿನಿಂದಲ್ಲ: ಹೊಸಕೋಟೆ ಶಾಸಕ ಎಂ.ಟಿ.ಬಿ ನಾಗರಾಜ್

    ಸ್ವಶಕ್ತಿಯಿಂದ ಮೂರು ಬಾರಿ ಶಾಸಕನಾಗಿದ್ದು, ಹೊರತು ಕಾಂಗ್ರೆಸ್ ಹೆಸರಿನಿಂದಲ್ಲ: ಹೊಸಕೋಟೆ ಶಾಸಕ ಎಂ.ಟಿ.ಬಿ ನಾಗರಾಜ್

    ಬೆಂಗಳೂರು: ನಾನು ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದು ನನ್ನ ಸ್ವಂತ ಶಕ್ತಿಯಿಂದನೇ, ಹೊರತು ಕಾಂಗ್ರೆಸ್ ಹೆಸರಿನಿಂದಲ್ಲ ಅಂತಾ ಹೊಸಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಟಿ.ಬಿ ನಾಗರಾಜ್ ಸಚಿವ ಸ್ಥಾನಕ್ಕೆ ಸಿಗದಕ್ಕೆ ಅಸಮಾಧಾನ ಹೊರ ಹಾಕಿದ್ದಾರೆ.

    ಸಂಪುಟ ರಚನೆಯ ಕಿಡಿ ಕಾಂಗ್ರೆಸ್ ಪಾಳಯದಲ್ಲಿ ಧಗಿ ಧಗಿಸುತ್ತಿದೆ. ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಒಬ್ಬೊಬ್ಬರೇ ಶಾಸಕರು ಅಸಮಾಧಾನ ಹೊರ ಹಾಕುತ್ತಿದ್ದು, ರಾಜೀನಾಮೆ ನೀಡಲು ಮುಂದಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇತ್ತ ಶಾಸಕ ಎಂ.ಟಿ.ಬಿ ನಾಗರಾಜ್ ಸಹ ರಾಜೀನಾಮೆ ನೀಡುವ ಸಾಧ್ಯತೆಗಳಿವೆ. ಇದನ್ನೂ ಓದಿ: ಅಧಿಕಾರ ಇಲ್ಲದಿದ್ದಾಗ ಒಂಥರ, ಅಧಿಕಾರ ಬಂದಾಗ ಒಂಥರ – ಹಣವಂತರಿಗೆ ಸಚಿವ ಸ್ಥಾನ : ಜೆಡಿಎಸ್ ಶಾಸಕ ಅಸಮಾಧಾನ

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಾಸಕರು, ಬೇರೆ ಪಕ್ಷದಿಂದ ಬಂದವರನ್ನು ಸಚಿವರನ್ನಾಗಿ ಮಾಡಲಾಗುತ್ತಿದೆ. ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದವರಿಗೆ ಎರಡೆರೆಡು ಸಲ ಸಚಿವರನ್ನಾಗಿ ಮಾಡಲಾಗುತ್ತಿದೆ. ನಾನು ಕಾರ್ಯಕರ್ತನಾಗಿ, ನಗರ ಸಭೆ ಸದಸ್ಯನಾಗಿ ಕಳೆದ 35 ವರ್ಷಗಳಿಂದ ಕಾಂಗ್ರೆಸ್‍ಗಾಗಿ ಕೆಲಸ ಮಾಡಿಕೊಂಡು ಬಂದರೂ, ಇಂದು ನನಗೆ ಅನ್ಯಾಯವಾಗಿದೆ ಎಂದು ಅಂತಾ ಆಕ್ರೋಶ ಹೊರಹಾಕಿದ್ರು. ಇದನ್ನೂ ಓದಿ: ಒಂದು ವೇಳೆ ಗೆದ್ದಿದ್ದರೆ, ನಾನೂ ಸಚಿವ ಸ್ಥಾನದ ಆಕಾಂಕ್ಷಿ: ಹೆಚ್.ವೈ.ಮೇಟಿ

    ರಾಜೀನಾಮೆ ನೀಡಬಹುದು: ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಕ್ಷೇತ್ರದ ಜನರು, ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಸ್ಥಳೀಯ ಪಂಚಾಯ್ತಿ ಸದಸ್ಯರು, ಕಾರ್ಯಕರ್ತರು ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಅವರೆಲ್ಲ ಸಹ ನನಗೂ ರಾಜೀನಾಮೆ ನೀಡಬೇಕು ಎಂಬ ಒತ್ತಡ ಹಾಕುತ್ತಿದ್ದಾರೆ. ನನಗೆ ಪಕ್ಷ, ಸಚಿವ ಸ್ಥಾನಕ್ಕಿಂತ ಕಾರ್ಯಕರ್ತರು ಮುಖ್ಯ. ಕೊನೆಯ ಕ್ಷಣದಲ್ಲಿ ಒತ್ತಡಗಳು ಹೆಚ್ಚಾದ್ರೆ ನಾನು ರಾಜೀನಾಮೆ ನೀಡುತ್ತೇನೆ ಅಂತಾ ಸ್ಪಷ್ಟಪಡಿಸಿದರು. ಇದನ್ನೂ ಓದಿ: ಕೈ ಶಾಸಕ ಎಂ.ಬಿ ಪಾಟೀಲ್ ರಾಜೀನಾಮೆ?

    ಒಟ್ಟು ನಾಲ್ಕು ಬಾರಿ ಕಾಂಗ್ರೆಸ್‍ನಿಂದ ಸ್ಪರ್ಧೆ ಮಾಡಿದ್ದು, ಮೂರು ಬಾರಿ ಗೆಲುವನ್ನು ಕಂಡಿದ್ದೇನೆ. ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ಎಂದು ಸ್ಪರ್ಧೆ ನಡೆದಿಲ್ಲ. ನಾಗರಾಜ್ ವರ್ಸಸ್ ಬಚ್ಚೇಗೌಡ ಅಂತಾನೇ ಸ್ಪರ್ಧೆ ನಡೆದಿರೋದು. ಒಟ್ಟಾರೆಯಾಗಿ ಬಿಜೆಪಿಯ ಪ್ರಬಲ ನಾಯಕ ಬಚ್ಚೇಗೌಡರನ್ನು ಮೂರು ಬಾರಿ ಸೋಲಿಸಿದ್ದೇನೆ. ಆದ್ರೂ ಇಂದು ನನಗೆ ಮೋಸವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಹೋಗುತ್ತಿಲ್ಲ. ಕಾಂಗ್ರೆಸ್ ಶಾಸಕಾಂಗದ ನಾಯಕರಾಗಿರುವ ಸಿದ್ದರಾಮಯ್ಯರನ್ನು ಭೇಟಿ ಮಾಡಲು ಅವರ ಮನೆಯತ್ತ ತೆರಳುತ್ತಿದ್ದೇನೆ ಅಂತಾ ತಿಳಿಸಿದರು.ಇದನ್ನೂ ಓದಿ: ಯಾವ ಬಾಲ್ ಬಂದ್ರೂ ಬ್ಯಾಟ್ ಬೀಸುತ್ತೇನೆ- ಯು.ಟಿ ಖಾದರ್