ಕನ್ನಡದ ಮಾಣಿಕ್ಯ, ಅಂಜನಿಪುತ್ರ, ಕಿರಿಕ್ ಶಂಕರ, ಮುಕುಂದ ಮುರಾರಿ, ಶಂಕರಗುರು, ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ಮಿಸಿರುವ ಎಂ.ಎನ್ ಕುಮಾರ್ ಅವರನ್ನು ಕೋರ್ಟ್ ಸೂಚನೆ ಮೇರೆಗೆ ಬುಧವಾರ ತಡರಾತ್ರಿ 2ಗಂಟೆ ಸುಮಾರಿಗೆ ಹಾಸನದಲ್ಲಿ (Hassan) ಬಂಧಿಸಿದ್ದಾರೆ.
ಕಿಚ್ಚ ಸುದೀಪ್ ದಾಖಲಿಸಿರುವ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನ್ಯ ನ್ಯಾಯಾಲಯವು ನಿರ್ಮಾಪಕರಾದ ಎನ್.ಎಂ. ಸುರೇಶ್ (N.M. Suresh) ಮತ್ತು ಎಂ.ಎನ್. ಕುಮಾರ್ ಅವರಿಗೆ ನೋಟಿಸ್ ಜಾರಿ ಮಾಡಿದೆ. ಮೊನ್ನೆಯಷ್ಟೇ ನಟ ಸುದೀಪ್ ಖುದ್ದು ಕೋರ್ಟಿಗೆ ಹಾಜರಾಗಿ ತಮ್ಮ ಹೇಳಿಕೆಯನ್ನು ದಾಖಲಿಸಿದ್ದರು.
ಸುದೀಪ್ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ 13ನೇ ಎಸಿಎಂಎಂ ಕೋರ್ಟ್ ಆರೋಪಿಗಳ ವಿರುದ್ಧ ಕ್ರಿಮಿನಲ್ ಮಾನನಷ್ಟ ಕೇಸ್ ದಾಖಲಿಸುವುದರ ಜೊತೆಗೆ ಆಗಸ್ಟ್ 26ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ (Summons) ಜಾರಿ ಮಾಡಿದೆ.
ಈವರೆಗೂ ಆಗಿದ್ದೇನು?
ನಿರ್ಮಾಪಕ ಕುಮಾರ್ ಮತ್ತು ನಟ ಸುದೀಪ್ ನಡುವೆ ಜಟಾಪಟಿ ಮತ್ತೊಂದು ಹಂತ ತಲುಪಿದೆ. ಮೊನ್ನೆಯಷ್ಟೇ ಸುದೀಪ್ ಈ ವಿಚಾರವಾಗಿ ಕೋರ್ಟಿಗೆ ಹಾಜರಾಗಿದ್ದರು. ಸುದೀಪ್ ಅವರ ಹೇಳಿಕೆಯನ್ನು ಆಲಿಸಿದ್ದ 13ನೇ ಎಸಿಎಂಎಂ ಕೋರ್ಟನ ನ್ಯಾ.ವೆಂಕಣ್ಣ ಬಸಪ್ಪ ಹೊಸಮನಿ ಅವರು ತೀರ್ಪು ಕಾಯ್ದಿರಿಸಿದ್ದರು. ನಿನ್ನೆಯಷ್ಟೇ ತೀರ್ಪು ಪ್ರಕಟವಾಗಿದ್ದು, ಸುದೀಪ್ ಸಲ್ಲಿಸಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಅಂಗೀಕಾರವಾಗಿದೆ. ಜೊತೆಗೆ ನಿರ್ಮಾಪಕರಾದ ಎಂ.ಎನ್.ಕುಮಾರ್ ಹಾಗೂ ಸುರೇಶ್‌ಗೆ ಸಮನ್ಸ್ ಜಾರಿಯಾಗಿದೆ.
ನಿರ್ಮಾಪಕ ಎಂ.ಎನ್. ಕುಮಾರ್ (M.n Kumar) ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ಗೆ ಹಾಜರಾಗಿ ನಟ ಸುದೀಪ್ (Sudeep) ತಮ್ಮ ಹೇಳಿಕೆಯನ್ನು ನಿನ್ನೆ ದಾಖಲಿಸಿದ್ದರು. ಹಲವು ಫೋಟೋಗಳೊಂದಿಗೆ ಕೋರ್ಟ್ ಮುಂದೆ ದಾಖಲೆಗಳನ್ನೂ ಅವರು ಸಲ್ಲಿಸಿದ್ದರು.
13ನೇ ಎಸಿಎಂಎಂ ಕೋರ್ಟ್ ಮುಂದೆ ಗುರುವಾರ ಹಾಜರಾದ ನಟ ಸುದೀಪ್, ತಾವು ಹೂಡಿದ್ದ ಮಾನನಷ್ಟ ಮೊಕದ್ದಮೆ ಬಗ್ಗೆ ಹೇಳಿಕೆ ದಾಖಲಿಸಿದ್ದರು. ನ್ಯಾ. ವೆಂಕಣ್ಣ ಬಸಪ್ಪ ಹೊಸಮನಿ ಎದುರು ಹೇಳಿಕೆ ದಾಖಲಿಸಿದ ನಟ, ಪ್ರಕರಣ ಸಂಬಂಧ ರಾಜೀ ಆಗುವ ಪ್ರಮೇಯ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಸುದೀಪ್ (Sudeep) ಹೇಳಿಕೆ ದಾಖಲಿಸಿಕೊಳ್ಳುವ ವೇಳೆ ನ್ಯಾಯಾಧೀಶರು, ನಿರ್ಮಾಪಕರು ಕ್ಷಮಾಪಣೆ ಕೇಳಿದರೆ ಕ್ಷಮಿಸುತ್ತೀರಾ? ರಾಜೀ ಸಂಧಾನ ಮಾಡಿಕೊಂಡು ಕಕ್ಷಿದಾರರಿಗೆ ಮಾದರಿಯಾಗುತ್ತೀರಾ ಎಂದು ಪ್ರಶ್ನಿಸಿದರು. ಈ ಪ್ರಶ್ನೆಗೆ ಉತ್ತರಿಸಿದ ಸುದೀಪ್, ಅವರ ಹೇಳಿಕೆಯಿಂದ ನಾನು ಇಷ್ಟು ವರ್ಷ ಕಷ್ಟಪಟ್ಟು ಗಳಿಸಿದ ವರ್ಚಸ್ಸಿಗೆ ಹಾನಿಯಾಗಿದೆ. ಒಬ್ಬ ಸುದೀಪ್‌ನನ್ನು ಬಗ್ಗಿಸಿದರೆ ಹಲವರನ್ನು ಬಗ್ಗಿಸಬಹುದೆಂದು ತಿಳಿದಿದ್ದಾರೆ ಎನ್ನುವ ಮೂಲಕ ತಾವು ರಾಜೀ ಸಂಧಾನಕ್ಕೆ ಸಿದ್ಧರಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದರು.
ಎಂ.ಎನ್.ಕುಮಾರ್ (M.n Kumar) ಹೇಳಿಕೆಯನ್ನು ಎಂ.ಎನ್.ಸುರೇಶ್ ಬೆಂಬಲಿಸಿದ್ದಾರೆ. ಇವರ ಸುದ್ದಿಗೋಷ್ಠಿಯಿಂದ ಮಾನಹಾನಿಯಾಗಿದೆ. ಹಲವರು ನನ್ನನ್ನು ಈ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಎಂ.ಎನ್.ಕುಮಾರ್ ಮಾಡಿದ ಆರೋಪಗಳೆಲ್ಲ ಸುಳ್ಳು. ರಾಜರಾಜೇಶ್ವರಿ ನಗರದಲ್ಲಿ ಮನೆ ಕಟ್ಟಲು ಹಣದ ನೆರವಿನ ಆರೋಪವೂ ಸುಳ್ಳು. ಮನೆ ದುರಸ್ತಿಗೆ ಹಣ ನೀಡಿದ್ದಾಗಿ ಮಾಡಿದ ಆರೋಪ ಸುಳ್ಳು ಎಂದು ಪ್ರಾಮಾಣಿಕ ಹೇಳಿಕೆಯನ್ನು ನ್ಯಾಯಾಧೀಶರ ಮುಂದೆ ಸುದೀಪ್ ದಾಖಲಿಸಿದ್ದರು.
ವಕೀಲ ಅಜಯ್ ಕಡಕೋಳ್ ಅವರೊಡನೆ ನಟ ಸುದೀಪ್ ಕೋರ್ಟ್‌ಗೆ ಹಾಜರಾಗಿದ್ದರು. ಸುದೀಪ್‌ಗೆ ಆಪ್ತ ಚಂದ್ರಚೂಡ್, ನಿರ್ಮಾಪಕ ಜಾಕ್ ಮಂಜು (Jack Manju) ಸಾಥ್ ನೀಡಿದರು. ಸುದೀಪ್ ಪರ ವಕೀಲ ಅಜಯ್ ಮಾತನಾಡಿ, ಸೆಕ್ಷನ್ 300 ಅಡಿಯಲ್ಲಿ ಕೇಸ್ ಫೈಲ್ ಮಾಡಿದ್ದರು. ಕುಮಾರ್ ಮತ್ತು ಸುರೇಶ್ ವಿರುದ್ಧ ಕೇಸ್ ಫೈಲ್ ಮಾಡಿದ್ದರು. ಕುಮಾರ್ ಮತ್ತು ಸುರೇಶ್ ಮಾತನಾಡಿರೋ ದಾಖಲೆಗಳು ಹಾಗೂ ಪೋಟೋಗಳನ್ನ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.
ನಿರ್ಮಾಪಕ ಎಂ.ಎನ್. ಕುಮಾರ್ (M.n Kumar) ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ಗೆ ಹಾಜರಾಗಿ ನಟ ಸುದೀಪ್ (Sudeep) ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಹಲವು ಫೋಟೋಗಳೊಂದಿಗೆ ಕೋರ್ಟ್ ಮುಂದೆ ದಾಖಲೆಗಳನ್ನು ನಟ ಸಲ್ಲಿಸಿದ್ದಾರೆ.
13ನೇ ಎಸಿಎಂಎಂ ಕೋರ್ಟ್ ಮುಂದೆ ಗುರುವಾರ ಹಾಜರಾದ ನಟ ಸುದೀಪ್, ತಾವು ಹೂಡಿದ್ದ ಮಾನನಷ್ಟ ಮೊಕದ್ದಮೆ ಬಗ್ಗೆ ಹೇಳಿಕೆ ದಾಖಲಿಸಿದರು. ನ್ಯಾ. ವೆಂಕಣ್ಣ ಬಸಪ್ಪ ಹೊಸಮನಿ ಎದುರು ಹೇಳಿಕೆ ದಾಖಲಿಸಿದ ನಟ, ಪ್ರಕರಣ ಸಂಬಂಧ ರಾಜೀ ಆಗುವ ಪ್ರಮೇಯ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸುದೀಪ್ (Sudeep) ಹೇಳಿಕೆ ದಾಖಲಿಸಿಕೊಳ್ಳುವ ವೇಳೆ ನ್ಯಾಯಾಧೀಶರು, ನಿರ್ಮಾಪಕರು ಕ್ಷಮಾಪಣೆ ಕೇಳಿದರೆ ಕ್ಷಮಿಸುತ್ತೀರಾ? ರಾಜೀ ಸಂಧಾನ ಮಾಡಿಕೊಂಡು ಕಕ್ಷಿದಾರರಿಗೆ ಮಾದರಿಯಾಗುತ್ತೀರಾ ಎಂದು ಪ್ರಶ್ನಿಸಿದರು. ಈ ಪ್ರಶ್ನೆಗೆ ಉತ್ತರಿಸಿದ ಸುದೀಪ್, ಅವರ ಹೇಳಿಕೆಯಿಂದ ನಾನು ಇಷ್ಟು ವರ್ಷ ಕಷ್ಟಪಟ್ಟು ಗಳಿಸಿದ ವರ್ಚಸ್ಸಿಗೆ ಹಾನಿಯಾಗಿದೆ. ಒಬ್ಬ ಸುದೀಪ್‌ನನ್ನು ಬಗ್ಗಿಸಿದರೆ ಹಲವರನ್ನು ಬಗ್ಗಿಸಬಹುದೆಂದು ತಿಳಿದಿದ್ದಾರೆ ಎನ್ನುವ ಮೂಲಕ ತಾವು ರಾಜೀ ಸಂಧಾನಕ್ಕೆ ಸಿದ್ಧರಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ:ಸಿಕ್ಸ್ ಪ್ಯಾಕ್ ಅವತಾರದಲ್ಲಿ ಚಾರ್ಲಿ ಬೆಡಗಿ ಸಂಗೀತಾ
ಎಂ.ಎನ್.ಕುಮಾರ್ (M.n Kumar) ಹೇಳಿಕೆಯನ್ನು ಎಂ.ಎನ್.ಸುರೇಶ್ ಬೆಂಬಲಿಸಿದ್ದಾರೆ. ಇವರ ಸುದ್ದಿಗೋಷ್ಠಿಯಿಂದ ಮಾನಹಾನಿಯಾಗಿದೆ. ಹಲವರು ನನ್ನನ್ನು ಈ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಎಂ.ಎನ್.ಕುಮಾರ್ ಮಾಡಿದ ಆರೋಪಗಳೆಲ್ಲ ಸುಳ್ಳು. ರಾಜರಾಜೇಶ್ವರಿ ನಗರದಲ್ಲಿ ಮನೆ ಕಟ್ಟಲು ಹಣದ ನೆರವಿನ ಆರೋಪವೂ ಸುಳ್ಳು. ಮನೆ ದುರಸ್ತಿಗೆ ಹಣ ನೀಡಿದ್ದಾಗಿ ಮಾಡಿದ ಆರೋಪ ಸುಳ್ಳು ಎಂದು ಪ್ರಾಮಾಣಿಕ ಹೇಳಿಕೆಯನ್ನು ನ್ಯಾಯಾಧೀಶರ ಮುಂದೆ ಸುದೀಪ್ ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ನಾಳೆಗೆ ಆದೇಶ ನೀಡಲಿದೆ.
ವಕೀಲ ಅಜಯ್ ಕಡಕೋಳ್ ಅವರೊಡನೆ ನಟ ಸುದೀಪ್ ಕೋರ್ಟ್‌ಗೆ ಹಾಜರಾಗಿದ್ದರು. ಸುದೀಪ್‌ಗೆ ಆಪ್ತ ಚಂದ್ರಚೂಡ್, ನಿರ್ಮಾಪಕ ಜಾಕ್ ಮಂಜು (Jack Manju) ಸಾಥ್ ನೀಡಿದರು.
ಸುದೀಪ್ ಪರ ವಕೀಲ ಅಜಯ್ ಮಾತನಾಡಿ, ಸೆಕ್ಷನ್ 300 ಅಡಿಯಲ್ಲಿ ಕೇಸ್ ಫೈಲ್ ಮಾಡಿದ್ದರು. ಕುಮಾರ್ ಮತ್ತು ಸುರೇಶ್ ವಿರುದ್ಧ ಕೇಸ್ ಫೈಲ್ ಮಾಡಿದ್ದರು. ಕುಮಾರ್ ಮತ್ತು ಸುರೇಶ್ ಮಾತನಾಡಿರೋ ದಾಖಲೆಗಳು ಹಾಗೂ ಪೋಟೋಗಳನ್ನ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ಸುದೀಪ್ (Sudeep) ತಮ್ಮಿಂದ ಹಣ ಪಡೆದು ಕಾಲ್ ಶೀಟ್ ನೀಡದೇ ವಂಚಿಸಿದ್ದಾರೆ ಎಂದು ಮೊನ್ನೆಯಷ್ಟೇ ಆರೋಪ ಮಾಡಿದ್ದ ನಿರ್ಮಾಪಕ ಎಮ್.ಎನ್ ಕುಮಾರ್ (M. N. Kumar) ಇದೀಗ ಮತ್ತೆ ಪತ್ರಿಕಾಗೋಷ್ಠಿ ನಡೆಸಿ ಮತ್ತಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಕುಮಾರ್ ಅವರಿಗೆ ಸುದೀಪ್ ಮಾನನಷ್ಟ (Defamation) ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ ಮತ್ತೆ ಸುದೀಪ್ ಮೇಲೆ ಆರೋಪಗಳ ಸುರಿಮಳೆಗೈದಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕುಮಾರ್, ‘ನಾನು ಈ ಬಗ್ಗೆ ಮನೆ ಹತ್ತಿರ ಹೋದರೂ, ಮನೆಯಲ್ಲಿದ್ದರೂ ಸ್ಪಂದಿಸಲಿಲ್ಲ. ಈ ಬಗ್ಗೆ ರವಿಚಂದ್ರನ್ (Ravichandran) ಅವರ ಹತ್ತಿರವು ಮಾತನಾಡಿದ್ದೆ. ಅವರು ಕೂಡ ಸುದೀಪ್ ಗೆ ಹೇಳಿದ್ದಾರೆ. ನಾನು ಹಣ ಕೇಳಿದ್ದೆ ತಪ್ಪಾ? ರವಿಚಂದ್ರನ್ ಅವರ ಜೊತೆ ವಿಶ್ವಾಸದಿಂದ ಇದ್ದಾರೆ. ನನ್ನ ಜೊತೆಯೂ ಚೆನ್ನಾಗಿದ್ದಾರೆ. ಹಾಗಾಗಿ ರವಿಚಂದ್ರನ್ ಬಳಿ ಹೋಗಿಯೂ ಹೇಳಿದ್ದೆ’ ಎಂದರು. ಇದನ್ನೂ ಓದಿ:ನೀಲಿ ತಾರೆ ಮಿಯಾ ತೆಲುಗಿನ ಡೈರೆಕ್ಟರ್ ಆರ್‌ಜಿವಿ
ನಾನು ಯಾರ ಬಳಿಯಾದರೂ ಬಾಕಿ ಉಳಿಸಿಕೊಂಡಿದ್ರೆ ಕರೆದುಕೊಂಡು ಬನ್ನಿ. ಇವತ್ತು ಸುದೀಪ್ ನಮ್ಮನ್ನ ಬಿಟ್ಟು ಹೊರ ರಾಜ್ಯದವರಿಗೆ ಚಿತ್ರ ಮಾಡುತ್ತಿದ್ದೀರಿ. ನಾನು ಕೊಟ್ಟಿರೋದನ್ನ ಕೊಟ್ಟು ಬೇರೆ ಯಾರಿಗಾದ್ರು ಹೋಗಿ ಚಿತ್ರ ಮಾಡಿಕೊಡಿ. ಈ ಹಿಂದೆ ಅವರ ಮೇಲೆ ಇದ್ದ ಅಭಿಮಾನಕ್ಕೆ ಕಮಿಷನ್ ಇಲ್ಲದೆ ಚಿತ್ರ ಹಂಚಿಕೆ ಮಾಡಿದ್ದೇವೆ. ಇದೇ ಚಿತ್ರದ ಎದುರು ತಮ್ಮ ಆಟೋಗ್ರಾಫ್ ಸಿನಿಮಾ ರಿಲೀಸ್ ಆಗಬೇಕು ಅಂತ ಹಠ ಮಾಡಿದರು. ಅದನ್ನೂ ಮಾಡಿದ್ದೇನೆ. ಅವರಿಗಾಗಿ ಎಷ್ಟೆಲ್ಲ ಸಹಾಯ ಮಾಡಿದರೂ, ಕೊನೆಗೆ ನನಗೆ ಹೀಗಾಯಿತು ಎಂದರು ಕುಮಾರ್.
ಈ ಪ್ರಕರಣವನ್ನು ನಾನು ಇಂಡಸ್ಟ್ರಿ ಮೂಲಕವೇ ಬಗೆಹರಿಸಿಕೊಳ್ಳಲ್ಲು ರೆಡಿಇದ್ದೇನೆ. ನಮ್ಮ ಸಂಸ್ಥೆಗಳ ತೀರ್ಮಾನಕ್ಕೆ ನಾನು ರೆಡಿ ಇದ್ದೇನೆ. ಇಷ್ಟೆಲ್ಲ ಆದ ಮೇಲೆಯೂ ಕಾಲ್ ಶೀಟ್ ಕೊಟ್ಟರೆ ನಾನು ಅವರಿಗೆ ಚಿತ್ರ ಮಾಡ್ತೇನೆ. ಸುದೀಪ್ ಅವರು ಬಹಿರಂಗ ಸಭೆ ಮುಂದೆ ಯಾಕೆ ಬರುತ್ತಿಲ್ಲ. ನಾನು ತಪ್ಪು ಮಾಡಿದ್ರೆ ಕಾಲು ಹಿಡಿದು ಕ್ಷಮೆ ಕೇಳ್ತೇನೆ ಎನ್ನುವುದು ಕುಮಾರ್ ಮಾತು.
ನಟ ಸುದೀಪ್ (Sudeep) ಮತ್ತು ನಿರ್ಮಾಪಕ ಎಮ್.ಎನ್ ಕುಮಾರ್ (M. N. Kumar) ನಡುವಿನ ಆರೋಪ ಪ್ರತ್ಯಾರೋಪ ಕಾನೂನು ಹಂತ ತಲುಪಿದೆ. ಇಂದು ಬೆಳಗ್ಗೆ ಕುಮಾರ್ ಅವರಿಗೆ ಮಾನನಷ್ಟ (Defamation) ಪ್ರಕರಣದ ನೋಟಿಸ್ ನೀಡಿದ್ದರು ಸುದೀಪ್ ಕಡೆಯ ವಕೀಲರು. ಅದಕ್ಕೆ ಸಂಬಂಧಿಸಿದಂತೆ ಕುಮಾರ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ನಿರ್ಮಾಪಕರ ಸಂಘದಲ್ಲಿ ನಡೆದ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಕುಮಾರ್, ಹಲವಾರು ವಿಚಾರಗಳನ್ನು ಮತ್ತೆ ಪ್ರಸ್ತಾಪಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ನಿರ್ಮಾಪಕ ಎಂ.ಎನ್.ಕುಮಾರ್, ‘ನಾನು ಮಾಧ್ಯಮದ ಮುಂದೆ ನ್ಯಾಯ ಕೇಳಿದೆ. ನಾನು ಹಣ ಕೊಟ್ಟು ಇಷ್ಟು ವರ್ಷ ಆಗಿದೆ ಸ್ಪಂದಿಸುತ್ತಿಲ್ಲ. ವಾಣಿಜ್ಯ ಮಂಡಳಿಯಲ್ಲಿ ಕುಳಿತು ಸಮಸ್ಯೆ ಬಗೆಹರಿಸಿಕೊಡಿ ಅಂತ ಕೇಳಿದ್ದೆ. ಈಗ ನನಗೆ ವಾಟ್ಸಪ್ ಮೂಲಕ ನೋಟಿಸ್ ಬಂದಿದೆ. ಪೋಸ್ಟ್ ಮುಖಾಂತರ ಬಂದಿಲ್ಲ. ಅನೌನ್ ನಂಬರ್ ನಿಂದ ಬಂದಿದೆ. ಅಫೀಶಿಯಲ್ ಆಗಿ ಬರುವ ತನಕ ರಿಯಾಕ್ಟ್ ಮಾಡಲ್ಲ. ಬಂದ ಬಳಿಕ ವಾಣಿಜ್ಯ ಮಂಡಳಿ, ನಿರ್ಮಾಪಕ ಅಸೋಸಿಯೇಷನ್ ನಲ್ಲಿ ಚರ್ಚೆ ಮಾಡಿ ನಿರ್ಧಾರ ಮಾಡ್ತವೆ’ ಎಂದರು ಕುಮಾರ್. ಇದನ್ನೂ ಓದಿ:‘ಟೋಬಿ’ ಶೆಟ್ಟರ ಕೆನ್ನೆಗೆ ಮುತ್ತಿಟ್ಟ ಚೈತ್ರಾ- ರಾಜ್ ಬಿ ಶೆಟ್ಟಿ ಸ್ಪಷನೆ
ಮುಂದುವರೆದ ಮಾತನಾಡಿದ ಅವರು, ‘ಸುದೀಪ್ 45 ಸಿನೆಮಾ ಮಾಡಿದ್ದಾರೆ. ಅಷ್ಟು ಸಿನಿಮಾದ ಅಗ್ರಿಮೆಂಟ್ ಕೊಡೋಕೆ ಹೇಳಿ. ಸಿನಿಮಾ ನಡೆಯೋದು ನಂಬಿಕೆ ಮೇಲೆ. ಅದರಂತೆ ಹಣ ಕೊಟ್ಟಿದ್ದೇನೆ. 6 ವರ್ಷ ಆಗಿದೆ ಕಮಿಟ್ಮೆಂಟ್ ಆಗಿ. ವಿಕ್ರಾಂತ್ ರೋಣ ಬಳಿಕ ಸಿನಿಮಾ ಮಾಡಿಕೊಡ್ತೀನಿ ಅಂತ ಹೇಳಿದ್ರು ಮಾಡಲಿಲ್ಲ. ಆ ಕಡೆ ನಂದಕಿಶೋರ್ ‘ಮುತ್ತತ್ತಿ ಸತ್ಯರಾಮ’ ಟೈಟಲ್ ಗೊತ್ತಿಲ್ಲ ಅಂತಾರೆ. ಬಹಿರಂಗ ಚರ್ಚೆಗೆ ಬರಲಿ ಬೇಕಿದ್ದರೆ. ಕಾನೂನು ಎಲ್ಲರಿಗೂ ಒಂದ’ ಎಂದರು ಕುಮಾರ್.
ನಮಗೆ ತಂದೆ, ತಾಯಿ, ಸ್ನೇಹಿತರು ಮೋಸ ಮಾಡಬೇಡ, ಸುಳ್ಳು ಹೇಳಬೇಡ, ತಲೆಹೊಡಿಯಬೇಡ ಅಂತ ಹೇಳಿದ್ದಾರೆ. ಉದ್ಯಮ ಚೆನ್ನಾಗಿದೆ. ನಿರ್ಮಾಪಕರಿಗೆ ಸುಳ್ಳು ಹೇಳಬಾರದು. ವಿಕ್ರಾಂತ್ ರೋಣ ವೇಳೆ ನನ್ನನ್ನು ಕರೆಸಿದ್ರು. ನಾನು ಅವರ ರೇಟ್ ಗೆ ಹೊಂದಾಣಿಕೆ ಮಾಡೋಕೆ ಆಗಲಿಲ್ಲ. ಹಾಗಾಗಿ ಚಿತ್ರ ನಮ್ಮ ಜೊತೆ ಆಗಲಿಲ್ಲ. ಮುತ್ತತ್ತಿ ಸತ್ಯರಾಜು ಟೈಟಲ್ ಕೊಟ್ಟಿದ್ದು ಅವರೆ. ಡೈರೆಕ್ಟರ್ ನಂದಕಿಶೋರ್ ಅವರನ್ನ ಅವರೇ ಸಜೆಸ್ಟ್ ಮಾಡಿದ್ದು. ಸಾಯಿಬಾಬಾ ಗಣಪತಿ ಮೇಲೆ ಬೇಕಿದ್ರೆ ಇಲ್ಲ ಅಂತ ಸುದೀಪ್ ಅವರು ಪ್ರಮಾಣ ಮಾಡಲಿ ಎನ್ನುವುದು ಕುಮಾರ್ ಮಾತು.
ನಟ ಕಿಚ್ಚ ಸುದೀಪ್ (Sudeep) ತಮಗೆ ಕಾಲ್ ಶೀಟ್ ನೀಡದೇ ವಂಚನೆ ಮಾಡಿದ್ದಾರೆ ಎಂದು ಕೆಲವು ದಿನಗಳ ಹಿಂದೆಯಷ್ಟೇ ನಿರ್ಮಾಪಕ ಎಮ್.ಎನ್. ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಆರೋಪ ಮಾಡಿದ್ದರು. ಅಡ್ವಾನ್ಸ್ ಪಡೆದುಕೊಂಡಿರುವ ಸುದೀಪ್, ಈವರೆಗೂ ನಮಗೆ ಕಾಲ್ ಶೀಟ್ ಕೊಡದೇ ಆಟವಾಡಿಸುತ್ತಿದ್ದಾರೆ. ಪರಭಾಷೆಯ ನಿರ್ಮಾಪಕರಿಗೆ ಮಣೆ ಹಾಕುತ್ತಿದ್ದಾರೆ ಎಂದು ಕುಮಾರ್ ಆರೋಪ ಮಾಡಿದ್ದರು.
ಈ ಆರೋಪಕ್ಕೆ ತಿರುಗೇಟು ನೀಡಿದ್ದ ಕಿಚ್ಚ ಸುದೀಪ್, ತಮ್ಮ ಮೇಲೆ ಆರೋ ಮಾಡಿದ ಕುಮಾರ್ ವಿರುದ್ಧ ಇಂದು ಮಾನನಷ್ಟ ಪ್ರಕರಣವನ್ನು ದಾಖಲಿಸುವುದಾಗಿ ತಿಳಿಸಿದ್ದರು. ಲಾಯರ್ ನೋಟಿಸ್ (Notice)ಕೂಡ ನೀಡಿದ್ದರು. ಕುಮಾರ್ ಮೇಲೆ ಮಾತ್ರವಲ್ಲ, ಮತ್ತೋರ್ವ ನಿರ್ಮಾಪಕ ಎಮ್.ಎನ್ ಸುರೇಶ್ (M.N. Suresh)ಅವರಿಗೂ ಕಿಚ್ಚ ನೋಟಿಸ್ ಕಳುಹಿಸಿದ್ದರು. ಇದನ್ನೂ ಓದಿ:‘ಟೋಬಿ’ ಶೆಟ್ಟರ ಕೆನ್ನೆಗೆ ಮುತ್ತಿಟ್ಟ ಚೈತ್ರಾ- ರಾಜ್ ಬಿ ಶೆಟ್ಟಿ ಸ್ಪಷನೆ
ವಂಚನೆ ಆರೋಪ ಮಾಡಿದ್ದ ಇಬ್ಬರು ನಿರ್ಮಾಪಕರಿಗೆ ನೋಟಿಸ್ ನೀಡಿರೋ ಹಿನ್ನೆಲೆಯಲ್ಲಿ ನಿರ್ಮಾಪಕರ ಸಂಘವು (Producers Association) ಮಧ್ಯಾಹ್ನ ಮಹತ್ವದ ಸುದ್ದಿಗೋಷ್ಠಿ ಕರೆದಿದೆ. ಈ ಬಗ್ಗೆ ಈಗಾಗಲೇ ನಿರ್ಮಾಪಕ ಸಂಘಧ ಕಛೇರಿಯಲ್ಲಿ ಸಭೆ ನಡೆಯುತ್ತಿದ್ದು, ನಿರ್ಮಾಪಕ ಸಂಘದ ಅಧ್ಯಕ್ಷ ಉಮೇಶ್ ಬಣಕರ್ (Umesh Bankar) ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.
ನಿರ್ಮಾಪಕರ ಸಂಘದಲ್ಲಿ ನಡೆಯುತ್ತಿರುವ ಮಹತ್ವದ ಸಭೆಯಲ್ಲಿ ಸುದೀಪ್ ವಿರುದ್ಧ ಆರೋಪ ಮಾಡಿದ್ದ ಎಂ.ಎನ್ ಕುಮಾರ್ (M.N. Kumar), ಎಂ.ಎನ್ ಸುರೇಶ್ ಕೂಡ ಭಾಗಿಯಾಗಿದ್ದಾರೆ. ತಮಗೆ ಸುದೀಪ್ ನೀಡಿರುವ ನೋಟಿಸ್ ಬಗ್ಗೆ ಸಭೆಯಲ್ಲಿ ಕುಮಾರ್ ಪ್ರಸ್ತಾಪ ಮಾಡಿದ್ದಾರೆ. ಮುಂದಿನ ನಡೆ ಬಗ್ಗೆ ಸಭೆಯ ತೀರ್ಮಾನದ ಬಳಿಕ ನಿರ್ಧಾರ ಪ್ರಕಟಿಸಲಿದ್ದಾರೆ ಎನ್ನುವ ಮಾಹಿತಿ ಇದೆ.
ಇತ್ತೀಚೆಗೆ ನಟ ಸುದೀಪ್ (Sudeep) ವಿರುದ್ದ ನಿರ್ಮಾಪಕ ಎಂ.ಎನ್ ಕುಮಾರ್ ಸುದ್ದಿಗೋಷ್ಠಿ ಮೂಲಕ ಸಾಕಷ್ಟು ಆರೋಪ ಮಾಡಿದ್ದರು. ಸುದೀಪ್ ಹಣ ಪಡದು, ಡೇಟ್ಸ್ ನೀಡಿಲ್ಲ ಅಂತೆಲ್ಲಾ ಆರೋಪಿಸಿದ್ದರು. ಕುಮಾರ್ ಆರೋಪದ ನಂತರ ಒಗಟಿನ ರೀತಿಯಲ್ಲಿ ಟ್ವೀಟ್ ಒಂದನ್ನು ಮಾಡಿ ಸುಮ್ಮನಾಗಿದ್ದ ಸುದೀಪ್, ಇದೀಗ ಮೌನ ಮುರಿದು ಕಾನೂನು ಸಮರಕ್ಕೆ ಮುಂದಾಗಿದ್ದಾರೆ.
ವಕೀಲರ ಮೂಲಕ ನಿರ್ಮಾಪಕ ಕುಮಾರ್ (M.N. Kumar) ಅವರಿಗೆ ನೋಟಿಸ್ ಕಳುಹಿಸಿರುವ ಸುದೀಪ್, ‘ನೀವು ನನ್ನ ತಾಳ್ಮೆಯನ್ನ ಪರೀಕ್ಷಿಸಿದ್ದೀರಿ. ಸುಳ್ಳಿನ ಕಂತೆ ಕಟ್ಟಿ ತೇಜೋವಧೆ ಮಾಡಿದ್ದೀರಿ. ನಾನು ನ್ಯಾಯಾಲಯ ಮತ್ತು ಸಂವಿಧಾನ ನಂಬಿರುವವನು. ನಾನು ನನ್ನದೇ ರೀತಿಯಲ್ಲಿ ಉತ್ತರ ಕೊಡಲು ಕಾಯುತ್ತಿದ್ದೆ. ನೀವು ಮಾಡಿರುವ ಎಲ್ಲಾ ಆರೋಪಗಳನ್ನು ಸಾಬೀತು ಪಡಿಸಿ, ಇಲ್ಲವಾದಲ್ಲಿ 10 ಕೋಟಿ ಮಾನನಷ್ಟದ (Defamation Case) ದಂಡ ಕಟ್ಟಿಕೊಡಿ’ ಎಂದಿದ್ದಾರೆ. ಇದನ್ನೂ ಓದಿ:‘ಟೋಬಿ’ ಶೆಟ್ಟರ ಕೆನ್ನೆಗೆ ಮುತ್ತಿಟ್ಟ ಚೈತ್ರಾ- ರಾಜ್ ಬಿ ಶೆಟ್ಟಿ ಸ್ಪಷನೆ
ಸುಳ್ಳು ಆರೋಪ -ಸಾಕ್ಷಿ ರಹಿತ ವಿವಾದ ಮತ್ತು ಕುಮಾರ್ ಅವರಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿದ ನಿರ್ಮಾಪಕ ಎಂ.ಎನ್ ಸುರೇಶ್ (MN Suresh) ಮೇಲೆಯೂ ಕಿಚ್ಚನಿಂದ ತೀವ್ರ ಕ್ರಿಮಿನಲ್ ಮೊಕದ್ದಮೆ ಹೂಡಿದ್ದು ಈ ಮೂಲಕ ಇಬ್ಬರು ನಿರ್ಮಾಪಕರ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.
ಸುದೀಪ್ ಮತ್ತು ಕುಮಾರ್ ಒಟ್ಟಾಗಿ ನಾಲ್ಕು ಸಿನಿಮಾಗಳನ್ನು ಮಾಡಿದ್ದಾರೆ. ಮತ್ತೊಂದು ಸಿನಿಮಾ ಮಾಡಲು ಇಬ್ಬರೂ ಮುಂದಾಗಿದ್ದರು ಎಂದು ಹೇಳಲಾಗುತ್ತಿದೆ. ಈ ಸಿನಿಮಾ ಸಂಬಂಧವಾಗಿ ಸುದೀಪ್ ಅವರಿಗೆ ಕುಮಾರ್ ಹಣ ನೀಡಿದ್ದರು ಎಂದು ಸ್ವತಃ ಕುಮಾರ್ ಅವರೇ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದರು.