Tag: M.M. Kalburgi

  • ದೇಶದಲ್ಲಿ ಕೇಸರಿ ಭಯೋತ್ಪಾದನೆ ನಡೆಯುತ್ತಿದೆ- ಬಸವರಾಜ ಸುಳಿಬಾಯಿ

    ದೇಶದಲ್ಲಿ ಕೇಸರಿ ಭಯೋತ್ಪಾದನೆ ನಡೆಯುತ್ತಿದೆ- ಬಸವರಾಜ ಸುಳಿಬಾಯಿ

    ಗದಗ: ದೇಶದಲ್ಲಿ ಕೇಸರಿ ಭಯೋತ್ಪಾದನೆ ನಡೆಯುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೇಸರಿ ಭಯೋತ್ಪಾದನೆ ಒಪ್ಪಿಕೊಂಡು ಅಧಿಕೃತವಾಗಿ ಘೋಷಿಸಬೇಕು ಎಂದು ವಿಚಾರವಾದಿಗಳ ಹತ್ಯಾ ವಿರೋಧಿ ಸಮಿತಿಯ ಮುಖಂಡ ಬಸವರಾಜ ಸುಳಿಬಾಯಿ ಗಂಭೀರ ಆರೋಪ ಮಾಡಿದ್ದಾರೆ.

    ಗೌರಿ ಲಂಕೇಶ್, ಕಲ್ಬುರ್ಗಿ, ಧಾಬೋಲ್ಕರ್, ಪನ್ಸಾರೆ ಹತ್ಯಾ ವಿರೋಧಿ ಹೋರಾಟ ಸಮಿತಿಯಿಂದ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೇಸರಿ ಭಯೋತ್ಪಾದನೆ ಒಪ್ಪಿಕೊಂಡು ಅಧಿಕೃತವಾಗಿ ಘೋಷಿಸಬೇಕು. ನಕ್ಸಲ್ ನಿಗ್ರಹಪಡೆ ಮಾದರಿಯಲ್ಲಿ, ಕೇಸರಿ ಭಯೋತ್ಪಾದನೆ ನಿಗ್ರಹ ಪಡೆ ರಚನೆ ಮಾಡಬೇಕು ಎಂದು ಆಗ್ರಹಿಸಿದರು.

    ಹಿಂದೂಪರ ಸಂಘಟನೆಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಅವರು ಪ್ರಮೋದ್ ಮುತಾಲಿಕ್ ಧಾರ್ಮಿಕ ಅಂಧತ್ವ ತುಂಬಿಕೊಂಡಿರುವ ವ್ಯಕ್ತಿ. ಕ್ರೌರ್ಯವನ್ನು ವಿಸ್ತರಿಸುತ್ತಿರುವ ಮುತಾಲಿಕ್ ರನ್ನು ಬಂಧಿಸಿ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

    ಗೌರಿಲಂಕೇಶ್ ಹತ್ಯೆ ಕುರಿತು ಶಂಕಿತ ಆರೋಪಿಯ ಬಂಧನ ಹಿನ್ನಲೆಯಲ್ಲಿ ಎಸ್‍ಐಟಿ ತಂಡ ಹಾಗೂ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು. ಕಲಬುರ್ಗಿ ಹತ್ಯೆ ಪ್ರಕರಣವನ್ನು ಸಿಐಡಿ ಬದಲು ಎಸ್‍ಐಟಿಗೆ ನೀಡಬೇಕು. ಬಂಧಿತ ಶಂಕಿತ ಹಂತಕರ ಹಿಂದಿರು ಸಂಘಟನೆ ಯಾವುದು ಎಂಬುದನ್ನು ದೃಢಪಡಿಸಬೇಕು. ಹತ್ಯೆಗೆ ಪ್ರಚೋದನೆ ನೀಡಿದ ವ್ಯಕ್ತಿಗಳು ಹಾಗೂ ಸಂಘಟನೆಗಳ ಹೆಸರನ್ನು ಬಹಿರಂಗ ಪಡಿಸಬೇಕು. ಆರ್ ಎಸ್‍ಎಸ್, ಶ್ರೀರಾಮಸೇನೆ ಸೇರಿದಂತೆ ಹಿಂದೂಪರ ಸಂಘಟನೆಗಳನ್ನ ವಿಚಾರಣೆಗೆ ಒಳಪಡಿಸಬೇಕು ಎಂದು ಅವರು ಹೇಳಿದರು.