Tag: M. Laxman

  • ʻಕೇಂದ್ರದಿಂದ ರಾಜ್ಯಕ್ಕೆ ಮತ್ತೆ ಚೊಂಬು, ಚಿಪ್ಪು.. ಗೋವಿಂದ ಗೋವಿಂದ..ʼ – ಎಂ. ಲಕ್ಷ್ಮಣ್‌ ಲೇವಡಿ

    ʻಕೇಂದ್ರದಿಂದ ರಾಜ್ಯಕ್ಕೆ ಮತ್ತೆ ಚೊಂಬು, ಚಿಪ್ಪು.. ಗೋವಿಂದ ಗೋವಿಂದ..ʼ – ಎಂ. ಲಕ್ಷ್ಮಣ್‌ ಲೇವಡಿ

    ಮಡಿಕೇರಿ: ಕೇಂದ್ರ ಬಿಜೆಪಿ ಸರ್ಕಾರವು (BJP Union Government) ಈ ಸಾಲಿನ ಬಜೆಟ್‌ನಲ್ಲೂ (Budget 2025) ಕರ್ನಾಟಕಕ್ಕೆ ಖಾಲಿ ಚೊಂಬು ಹಾಗೂ ತೆಂಗಿನಕಾಯಿ ಚಿಪ್ಪು ಕೊಟ್ಟಿದೆ. ಈ ಮೂಲಕ ಯಾವುದೇ ಹೊಸ ಯೋಜನೆ ನೀಡದೇ ರಾಜ್ಯಕ್ಕೆ ಅನ್ಯಾಯ ಮಾಡುವುದನ್ನು ಮುಂದುವರಿಸಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್‌ (M Laxman) ಲೇವಡಿ ಮಾಡಿದ್ದಾರೆ.

    ಖಾಲಿ ಚೊಂಬು ಹಾಗೂ ಮೂರುನಾಮ ಬಳಿದ ತೆಂಗಿನಕಾಯಿ ಚಿಪ್ಪುಗಳನ್ನು ಮುಂದಿಟ್ಟುಕೊಂಡು ಮಡಿಕೇರಿಯಲ್ಲಿ ‌ಪತ್ರಿಕಾಗೋಷ್ಠಿ ನಡೆಸಿದ ಅವರು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ಬಾಣ ಪ್ರಯೋಗಿಸಿದರು. ಗೋವಿಂದ.. ಗೋವಿಂದ.. ಎಂದು ಕೂಗುತ್ತಲೇ ಖಾಲಿ ಚೊಂಬು, ತೆಂಗಿನಕಾಯಿ ಚಿಪ್ಪು ಪ್ರದರ್ಶಿಸಿದರು.

    ಅಲ್ಲದೇ ಕೇಂದ್ರದಲ್ಲಿ ಸಚಿವರಾಗಿರುವ ಪ್ರಹ್ಲಾದ್‌ ಜೋಶಿ, ಶೋಭಾ ಕರಂದ್ಲಾಜೆ, ವಿ.ಸೋಮಣ್ಣ, ಹೆಚ್‌.ಡಿ ಕುಮಾರಸ್ವಾಮಿ ಅವರು ಕರ್ನಾಟಕಕ್ಕೆ ಒಂದೇ ಒಂದು ಯೋಜನೆಯನ್ನೂ ತರಲು ಸಾಧ್ಯವಾಗಿಲ್ಲ. ಇವರು ದಿನ ಬೆಳಗಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನಿಂದಿಸುತ್ತಾ ಕಾಲಹರಣ ಮಾಡುತ್ತಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿಲ್ಲ ಎಂದು ಟೀಕಿಸಿದರು.

    ಕೇಂದ್ರ ಸರ್ಕಾರವು ರೈತರು, ಯುವಕರು, ಪರಿಶಿಷ್ಟರು ಹಾಗೂ ಅಲ್ಪಸಂಖ್ಯಾತರ ವಿರೋಧಿಯಾಗಿದೆ. ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳನ್ನು ಸಂಪೂರ್ಣ ಕಡೆಗಣಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಬೇಡಿಕೆಗಳನ್ನು ಮಂಡಿಸಿದ್ದರು. ಆದರೆ, ಅದಕ್ಕೆ ಸ್ಪಂದನೆ ದೊರೆತಿಲ್ಲ. ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಇದ್ದಾಗ ಬಜೆಟ್ ಗಾತ್ರ 14 ಲಕ್ಷ ಕೋಟಿ ಇತ್ತು. ಈ ಬಾರಿಯ ಬಜೆಟ್ ಗಾತ್ರ 50 ಲಕ್ಷ ಕೋಟಿ ದಾಟಿದೆ. 16 ಲಕ್ಷ ಕೋಟಿ ಸಾಲ ತೆಗೆದುಕೊಂಡಿದ್ದಾರೆ. 1947 ರಿಂದ 2014ರ ವರೆಗೆ ನಮ್ಮ ದೇಶ ಮಾಡಿದ್ದ ಸಾಲ 53 ಲಕ್ಷ ಕೋಟಿ ಇತ್ತು. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ 10 ವರ್ಷಗಳಲ್ಲಿ ಸಾಲದ ಪ್ರಮಾಣ 205 ಲಕ್ಷ ಕೋಟಿಯಾಗಿದೆ ಎಂದು ದೂರಿದರು.

    ದೇಶವನ್ನು ಅಭಿವೃದ್ಧಿ ಪಥದತ್ತ ನಡೆಸುವ ಬದಲಿಗೆ ಸಾಲದ ಕೂಪಕ್ಕೆ ತಳ್ಳಿರುವಂತಹ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ. ನರೇಗಾ ಅನುದಾನವನ್ನೂ ಕಡಿಮೆ ಮಾಡಿದ್ದಾರೆ. ಕೃಷಿ ಕ್ಷೇತ್ರಕ್ಕೆ ಅನುದಾನ ಹಂಚಿಕೆಯಲ್ಲೂ ದೊಡ್ಡ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇಡೀ ದೇಶದಲ್ಲಿ ಟ್ಯಾಕ್ಸ್ ಕಟ್ಟುವುದಲ್ಲಿ ಕರ್ನಾಟಕದ 2ನೇ ಸ್ಥಾನದಲ್ಲಿ ಇದೆ. ಆದರೆ ನಮ್ಮ ಹಣವನ್ನು ನಮಗೆ ಕೊಡದೇ ನಮ್ಮಿಂದ ಸಂಗ್ರಹ ಮಾಡಿರುವ ಹಣವನ್ನು ಬೇರೆ ಬೇರೆ ರಾಜ್ಯಗಳಿಗೆ ಕೊಡುವ ಕೆಲಸ ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ರು.

    ಇದೇ ವೇಳೆ ಕರ್ನಾಟಕದಲ್ಲಿ ಜಾತಿ ಜನಗಣತಿಯ ವರದಿ ಸದ್ಯದಲ್ಲೇ ಬಿಡುಗಡೆಯಾಗಲ್ಲಿದೆ ಕಾಂಗ್ರೆಸ್ ಪಕ್ಷದ ನಾಯಕರು ಯಾವುದೇ ರೀತಿಯಲ್ಲಿ ಇದಕ್ಕೆ ವಿರೋಧ ವ್ಯಕ್ತ ಪಡಿಸುತ್ತಿಲ್ಲ ಎಂದು ತಿಳಿಸಿದ್ರು.

  • ಸಿದ್ದರಾಮಯ್ಯರಿಗೆ ಈಗಲೂ ಬಿಜೆಪಿಯಿಂದ ಜೀವ ಬೆದರಿಕೆ ಇದೆ: ಎಂ.ಲಕ್ಷ್ಮಣ್ ಆರೋಪ

    ಸಿದ್ದರಾಮಯ್ಯರಿಗೆ ಈಗಲೂ ಬಿಜೆಪಿಯಿಂದ ಜೀವ ಬೆದರಿಕೆ ಇದೆ: ಎಂ.ಲಕ್ಷ್ಮಣ್ ಆರೋಪ

    ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈಗಲೂ ಬಿಜೆಪಿ (BJP)ಯಿಂದ ಜೀವ ಬೆದರಿಕೆ ಇದೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ (M Laxman) ನೇರ ಆರೋಪ ಮಾಡಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅದೇ ಕಾರಣಕ್ಕೆ ಅಶ್ವಥ್ ನಾರಾಯಣ್ (Ashwath Narayan) ವಿರುದ್ಧ ನೀಡಿದ್ದ ದೂರಿನ ಕ್ರಮಕ್ಕೆ ಒತ್ತಾಯಿಸುತ್ತಿದ್ದೇವೆ. ಉರಿಗೌಡ, ನಂಜೇಗೌಡ ಟಿಪ್ಪುವನ್ನು ಹೊಡೆದು ಹಾಕಿದಂತೆ ಸಿದ್ದರಾಮಯ್ಯರನ್ನ ಹೊಡೆದು ಹಾಕಿ ಎಂದಿದ್ದ ಅಶ್ವಥ್ ನಾರಾಯಣ್ ಹೇಳಿಕೆಯ ವೀಡಿಯೋ ಈಗಲೂ ವೈರಲ್ ಆಗುತ್ತಿದೆ. ಇದರಿಂದ ಸಿದ್ದರಾಮಯ್ಯರ ಮೇಲೆ ಮತ್ತೆ ದಾಳಿಯಾಗುವ ಸಾಧ್ಯತೆ ಇದೆ ಎಂದರು.

    ಸಿಎಂ ಸಿದ್ದರಾಮಯ್ಯ (Siddaramaiah) ರಿಗೆ ಏನೇ ಆದರೂ ಅದಕ್ಕೆ ಬಿಜೆಪಿ, ಅಶ್ವಥ್ ನಾರಾಯಣ್ ಹೊಣೆ. ಈ ಕೂಡಲೇ ಅಶ್ವಥ್ ನಾರಾಯಣ್‍ರನ್ನ ಪೊಲೀಸರು ಬಂಧಿಸಬೇಕು. ನಾವು ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಈ ಬಗ್ಗೆ ಸ್ಪೀಕರ್ ಗೆ ಮಾಹಿತಿ ನೀಡಿದ್ದಾರೆ. ರಾಜ್ಯಾದ್ಯಂತ ಹಿಂದೆ ಬಿಜೆಪಿ ವಿರುದ್ಧ ನೀಡಿದ್ದ ದೂರಿನ ಕ್ರಮಕ್ಕೆ ಒತ್ತಾಯಿಸುತ್ತೇವೆ. ಹಿಂದೆ ಪೆÇಲೀಸರು ಬಿಜೆಪಿ ಏಜೆಂಟರಂತೆ ವರ್ತಿಸಿದ್ರು. ಹೀಗಾಗಿ ದೂರಿನ ಕ್ರಮ ಕೈಗೊಂಡಿರಲಿಲ್ಲ ಎಂದು ತಿಳಿಸಿದರು.

    ಈಗ ಸಮಗ್ರವಾದ ತನಿಖೆಯಾಗಬೇಕು. ಅಶ್ವಥ್ ನಾರಾಯಣ್ ಯಾವ ಉದ್ದೇಶದಿಂದ ಈ ಹೇಳಿಕೆ ಕೊಟ್ಟಿದ್ರು ಎಂಬುದು ತಿಳಿಯಬೇಕಿದೆ. ಅವರ ಮೇಲೆ ಕಠಿಣ ಕ್ರಮವೂ ಆಗಬೇಕು ಎಂದು ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್‌ ಅಧಿಕಾರಕ್ಕೆ ಬಂದ್ಮೇಲೆ ಬಿಜೆಪಿ ಕಾರ್ಯಕರ್ತರು ಅಪಾಯದಲ್ಲಿದ್ದಾರೆ – ಪ್ರತಾಪ್‌ ಸಿಂಹ

  • ಚುನಾವಣೆ ಹೊತ್ತಿಗೆ ಬಿಜೆಪಿ, ಜೆಡಿಎಸ್‍ನ 30 ಶಾಸಕರು ಕಾಂಗ್ರೆಸ್ ಸೇರುವುದು ಖಚಿತ: ಎಂ.ಲಕ್ಷ್ಮಣ್

    ಚುನಾವಣೆ ಹೊತ್ತಿಗೆ ಬಿಜೆಪಿ, ಜೆಡಿಎಸ್‍ನ 30 ಶಾಸಕರು ಕಾಂಗ್ರೆಸ್ ಸೇರುವುದು ಖಚಿತ: ಎಂ.ಲಕ್ಷ್ಮಣ್

    ಮಡಿಕೇರಿ: ಮುಂದಿನ ಚುನಾವಣೆ ಹೊತ್ತಿಗೆ ಬಿಜೆಪಿ (BJP), ಜೆಡಿಎಸ್‍ನ (JDS) 30 ಶಾಸಕರು ಕಾಂಗ್ರೆಸ್ (Congress) ಸೇರುವುದು ಖಚಿತ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಲಕ್ಷ್ಮಣ್ (M.Laxman) ಸ್ಫೋಟಕ ಹೇಳಿಕೆ ನೀಡಿದ್ದಾರೆ.

    ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ಒಳರಾಜಕೀಯದ ಮಾತುಗಳು ತಳುಕು ಹಾಕುತ್ತಿದ್ದೆ. ಮೂರು ಪಕ್ಷಗಳು ತಮ್ಮ ತಮ್ಮ ಆಭ್ಯರ್ಥಿಗಳನ್ನು ಗೆಲ್ಲಿಸಲು ಒಳಗೊಳಗೆ ರಣತಂತ್ರವನ್ನು ಹೆಣೆಯುತ್ತಿದೆ. ಈ ನಡುವೆ ಮಡಿಕೇರಿಯಲ್ಲಿ ಲಕ್ಷ್ಮಣ್ ಅವರ ಸ್ಫೋಟಕ ಹೇಳಿಕೆ ಮತ್ತಷ್ಟು ರಾಜಕೀಯ ರಂಗದಲ್ಲಿ ಸಂಚಲನ ಮೂಡಿಸಿದೆ. ಬಿಜೆಪಿ, ಜೆಡಿಎಸ್‍ನ 30 ಶಾಸಕರು ಕಾಂಗ್ರೆಸ್ ಸೇರುವುದು ಖಚಿತ ಎಂಬ ಮಾಹಿತಿಯನ್ನು ಮಾಧ್ಯಮಗಳೊಂದಿಗೆ ಮಡಿಕೇರಿಯಲ್ಲಿ ಬಹಿರಂಗ ಪಡಿಸಿದ್ದಾರೆ. ಈಗಾಗಲೇ 30 ಶಾಸಕರುಗಳು ಅನಧಿಕೃತವಾಗಿ ಅರ್ಜಿಯನ್ನು ಹಾಕಿದ್ದು ಕಾಂಗ್ರೆಸ್ ಜೊತೆಗಿರುವುದಾಗಿ ಭರವಸೆ ನೀಡಿದ್ದಾರೆ. ಅವರು ಯಾರೆಂದು ಈಗಲೇ ಬಹಿರಂಗ ಪಡಿಸೋದಿಲ್ಲ. ಆದರೆ ಫೆಬ್ರವರಿ ತಿಂಗಳಲ್ಲಿ ಅಧಿಕೃತವಾಗಿ ಕಾಂಗ್ರೆಸ್‍ಗೆ ಅವರು ಬರಲಿದ್ದಾರೆ ಆಗ ಎಲ್ಲರಿಗೂ ವಿಚಾರ ತಿಳಿಯುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಗೆ ಬಂದವರೆಲ್ಲರೂ ನಾಯಕರಾಗಿದ್ದಾರೆ- ಡಿಕೆಶಿಗೆ ನಳಿನ್ ಕುಮಾರ್ ತಿರುಗೇಟು

    ಯಾವುದೇ ಪಕ್ಷದವರು ಬೇಕಾದರು ಬಂದು ಸೇರಿಕೊಳ್ಳಬಹುದು ಯಾರು ಯಾವುದೇ ಷರತ್ತು ಇಲ್ಲದೆ ಬಂದರೆ ಸ್ವಾಗತವಿದೆ. ಜಿ.ಟಿ ದೇವೇಗೌಡರು (G.T Devegowda) ತಮಗೆ ಹಾಗೂ ತಮ್ಮ ಮಗನಿಗೂ ಟಿಕೆಟ್ ಬೇಕು ಅಂತ ಷರತ್ತು ಹಾಕಿದ್ದರು ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಜಾರಕಿಹೊಳಿ ಯಾವಾಗ ಸರ್ಕಾರ ಕೆಡವುತ್ತಾರೋ? ಯಾವಾಗ ಸರ್ಕಾರ ತರುತ್ತಾರೋ?: ಜಯಮೃತ್ಯುಂಜಯ ಸ್ವಾಮೀಜಿ

    Live Tv
    [brid partner=56869869 player=32851 video=960834 autoplay=true]

  • ನಳಿನ್ ಒಬ್ಬ ಅಯೋಗ್ಯ, ಅನ್ ಕಲ್ಚರಲ್ ಬ್ರೂಟ್: ಎಂ.ಲಕ್ಷ್ಮಣ್

    ನಳಿನ್ ಒಬ್ಬ ಅಯೋಗ್ಯ, ಅನ್ ಕಲ್ಚರಲ್ ಬ್ರೂಟ್: ಎಂ.ಲಕ್ಷ್ಮಣ್

    – ರಾಜ್ಯ ಬಿಜೆಪಿಯಲ್ಲಿ 17 ಮಂದಿ ಬೇಲ್ ಮೇಲೆ ಇದ್ದಾರೆ
    – ಮಹಿಳಾ ಪೀಡಕರು ಕೂಡ ಇದ್ದಾರೆ

    ಮೈಸೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಒಬ್ಬ ಅಯೋಗ್ಯ, ಅನ್ ಕಲ್ಚರಲ್ ಬ್ರೂಟ್ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ರಾಹುಲ್ ಗಾಂಧಿ ಡ್ರಗ್ ಪೆಡ್ಲರ್ ಎಂಬ ಕಟೀಲ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು. ನಳಿನ್ ಒಬ್ಬ ಅಯೋಗ್ಯ, ಅನ್ ಕಲ್ಚರಲ್ ಬ್ರೂಟ್. ಒಬ್ಬ ವಿವಾಹಿತ ಮಹಿಳೆಯ ಜೊತೆ ಅಕ್ರಮ ಸಂಬಂಧ ಹೊಂದಿದ್ದವ. ನಿಮ್ಮ ಸಾಧನೆಗಳು ಇದ್ರೆ ಅದರ ಬಗ್ಗೆ ಚರ್ಚೆ ಮಾಡಬೇಡಿ. ಅದನ್ನ ಬಿಟ್ಟು ಈ ರೀತಿ ನೀವು ಮಾತಾಡಬೇಡಿ ಎಂದು ಹೇಳಿದರು. ಇದನ್ನೂ ಓದಿ: ಅವರ ಬಗ್ಗೆ ಟೀಕೆ ಮಾಡುವ ಶಕ್ತಿ ನನಗಿಲ್ಲ: ಹೆಚ್.ಡಿ ದೇವೇಗೌಡ

    ರಾಹುಲ್ ಗಾಂಧಿ ಡ್ರಗ್ ಪೆಡ್ಲರ್ ಆಗಿದ್ರೆ ನಿಮ್ಮಲ್ಲೆ ಎನ್‍ಸಿಬಿ, ಇಡಿ, ಐಡಿ, ಸಿಬಿಐ, ಇತ್ಯಾದಿಗಳು ಇದೆ ತನಿಖೆ ಮಾಡಿ. ಸೋನಿಯಾ ಗಾಂಧಿ ಬೇಲ್ ನಲ್ಲಿ ಇದ್ದಾರೆ ಅಂತೀರಲ್ಲ. ನಿಮ್ಮ ಅಮಿತ್ ಶಾ ಬೇಲ್ ನಲ್ಲಿ ಇಲ್ಲದೇ ಬೇರೆ ಯಾವುದರಲ್ಲಿ ಇದ್ದಾರೆ. ನಿಮ್ಮ ಲೀಡರ್ ತರ ಕೊಲೆ ಕೇಸ್ ನಲ್ಲಿ ಜೈಲಿಗೆ ಹೊಗಿಲ್ಲ. ನೀನೊಬ್ಬ ಅವಿವೇಕಿಗಳ, ಹುಚ್ಚರ ಬ್ರ್ಯಾಂಡ್ ಅಂಬಾಸಿಡರ್ ಎಂದು ಕಿಡಿಕಾರಿದ್ದಾರೆ.  ಇದನ್ನೂ ಓದಿ: ರಾಹುಲ್ ಗಾಂಧಿ ಡ್ರಗ್ ಪೆಡ್ಲರ್: ಕಟೀಲ್

    ನಿಮ್ಮ ಮೋದಿ 7 ವರ್ಷದಲ್ಲಿ 84 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಅದನ್ನ ಬಿಟ್ಟು ಬೇರೆ ಏನೇನೋ ಚರ್ಚೆ ಮಾಡ್ತಿರಲ್ಲ. ರಾಜ್ಯ ಬಿಜೆಪಿಯಲ್ಲಿ 17 ಮಂದಿ ಬೇಲ್ ಮೇಲೆ ಇದ್ದಾರೆ. ರೇಣುಕಾಚಾರ್ಯ, ಸದಾನಂದಗೌಡ, ಪ್ರತಾಪ್ ಸಿಂಹ ರಂತಹ ಅನೇಕ ಮಹಿಳಾ ಪೀಡಕರು ಇದ್ದಾರೆ. ಅರವಿಂದ ಲಿಂಬಾವಳಿ, ಯತ್ನಾಳ್ ರಂತಹ ಸಲಿಂಗಕಾಮಿಗಳು ಇದ್ದಾರೆ. ತಮ್ಮಲ್ಲೇ ಹುಳುಕು ಇಟ್ಕೊಂಡು ಬೇರೆಯವರ ಮೇಲೆ ಆರೋಪ ಮಾಡುತ್ತಿದ್ದೀರಿ. ಒಬ್ಬ ಅಧ್ಯಕ್ಷರ ಮೇಲೆ ಆರೋಪ ಮಾಡುವ ಮೊದಲು ಯೋಚನೆ ಮಾಡಿ ಮಾತನಾಡಿ ಎಂದು ಲಕ್ಷ್ಮಣ್ ಆಕ್ರೋಶ ಹೊರಹಾಕಿದ್ದಾರೆ.  ಇದನ್ನೂ ಓದಿ: ನಳಿನ್ ಕುಮಾರ್ ಕಟೀಲ್ ಒಬ್ಬ ಅವಿವೇಕಿ, ಮಾನಸಿಕ ಅಸ್ವಸ್ಥ: ದಿನೇಶ್ ಗುಂಡೂರಾವ್

  • ರಾಜ್ಯದ ಭಿಕ್ಷೆಯಿಂದ ಸೀತಾರಾಮನ್ ರಾಜ್ಯಸಭೆ ಸದಸ್ಯೆಯಾಗಿದ್ದಾರೆ: ಕೆಪಿಸಿಸಿ ವಕ್ತಾರ

    ರಾಜ್ಯದ ಭಿಕ್ಷೆಯಿಂದ ಸೀತಾರಾಮನ್ ರಾಜ್ಯಸಭೆ ಸದಸ್ಯೆಯಾಗಿದ್ದಾರೆ: ಕೆಪಿಸಿಸಿ ವಕ್ತಾರ

    – ಆತ್ಮನಿರ್ಭರ ಅಲ್ಲ, ಆತ್ಮ ಬರ್ಬಾದ್ ಬಜೆಟ್

    ಮೈಸೂರು : ನಿರ್ಮಲಾ ಸೀತರಾಮನ್ ಅವರೇ ನಮ್ಮ ರಾಜ್ಯದ ಭಿಕ್ಷೆಯಿಂದ ನೀವು ರಾಜ್ಯಸಭಾ ಸದಸ್ಯೆಯಾಗಿದ್ದೀರಿ. ಆದರೆ ಕರ್ನಾಟಕದ ಬಗ್ಗೆ ಕಿಂಚಿತ್ತು ಕೃತಜ್ಞತೆ ನಿಮಗೆ ಇಲ್ಲ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಟೀಕಿಸಿದ್ದಾರೆ.

    ಕೇಂದ್ರದ ಬಜೆಟ್ ಕುರಿತಂತೆ ಮೈಸೂರಿನಲ್ಲಿ ಮಾತನಾಡಿದ ಎಂ. ಲಕ್ಷ್ಮಣ್, ನಿರ್ಮಲಾ ಸೀತರಾಮನ್ ಅವರೇ ನೀವೂ ಮೂಲತಃ ತಮಿಳುನಾಡಿನವರು. ಅಲ್ಲಿಯ ಚುನಾವಣೆಯ ಕಾರಣ ತಮಿಳುನಾಡಿಗೆ 6.2 ಲಕ್ಷ ಕೋಟಿ ಅನುದಾನ ಕೊಟ್ಟಿದ್ದೀರಿ. ಆದರೆ ಕರ್ನಾಟಕಕ್ಕೆ 14 ಸಾವಿರ ಕೋಟಿ ಬಜೆಟ್‍ನಲ್ಲಿ ಘೋಷಣೆ ಮಾಡಿದ್ದೀರಿ. ಇದು ನ್ಯಾಯನಾ ಎಂದು ಪ್ರಶ್ನಿಸಿದರು. ರಾಜ್ಯದ ಬಿಜೆಪಿ ಮುಖಂಡರೇ ನಿಮಗೆ ಮಾನ ಮರ್ಯಾದೆ ಇದ್ದರೆ ಈ ಬಗ್ಗೆ ಉತ್ತರ ಕೊಡಿ. ಇದು ಆತ್ಮನಿರ್ಭರ್ ಬಜೆಟ್ ಅಲ್ಲ, ಆತ್ಮ ಬರ್ಬಾದ್ ಬಜೆಟ್ ಎಂದು ಹೇಳಿದರು.

    ಜನಸಾಮಾನ್ಯರು ಎಚ್ಚರದಿಂದ ಇರಿ, ಬ್ಯಾಂಕಿನಲ್ಲಿ ನೀವೂ ಇಟ್ಟ ಫಿಕ್ಸೈಡ್ ಡೆಪೊಸಿಟ್‍ಗೂ ಸರ್ಕಾರ ಕೈ ಹಾಕುತ್ತದೆ. ಅಲ್ಪ ಸ್ವಲ್ಪ ಹಣ ಕೂಡಿಟ್ಟ ನಿಮ್ಮ ಹಣಕ್ಕೂ ಕತ್ತರಿ ಬೀಳುತ್ತದೆ. ಇದು ಇನ್ನೂ 6 ತಿಂಗಳಲ್ಲಿ ನಿಮ್ಮ ಹಣಕ್ಕೆ ಕೇಂದ್ರ ಕೈ ಹಾಕಿದರೂ ಅಚ್ಚರಿ ಇಲ್ಲ. ಜನಸಾಮಾನ್ಯರು ಈಗಲೇ ಈ ಬಗ್ಗೆ ಎಚ್ಚರ ವಹಿಸಿ ಎಂದರು.

    ಬಿಜೆಪಿ ಸರ್ಕಾರ ದೇಶದ ಜನರನ್ನು ಭಿಕ್ಷೆ ಬೇಡುವಂತಹ ಸ್ಥಿತಿಗೆ ತಂದು ಬಿಡುತ್ತದೆ. ಆ ದಿನ ಕೂಲಿ ಮಾಡಿ ತಿನ್ನಬೇಕು. ಏನು ಸಂಪಾದನೆ ಮಾಡಬಾರದು. ಇಂತಹ ಅಜೆಂಡ ಬಿಜೆಪಿ ಇಟ್ಟುಕೊಂಡು ಆಡಳಿತ ನಡೆಸುತ್ತಿದೆ. ಎಲ್‍ಐಸಿಯನ್ನು ಖಾಸಗಿಕರಣ ಮಾಡುತ್ತಿದೆ. ಮೂರು ಬ್ಯಾಂಕ್ ಗಳ ಖಾಸಗಿ ಅನುಮೋದನೆ ಪಡೆದುಕೊಂಡಿದ್ದಾರೆ. ಜನರನ್ನು ಭಿಕ್ಷೆ ಬೇಡುವ ಸ್ಥಿತಿಗೆ ಬಿಜೆಪಿ ಇನ್ನೆರಡು ವರ್ಷದಲ್ಲಿ ತರುವ ಅಜೆಂಡ ಇಟ್ಟುಕೊಂಡಿದೆ ಎಂದರು.

  • ವಲಸಿಗ ಸಚಿವರಿಂದ ಸಚಿವ ಸ್ಥಾನ ಕಿತ್ತುಕೊಳ್ತಾರೆ: ಎಂ. ಲಕ್ಷ್ಮಣ್

    ವಲಸಿಗ ಸಚಿವರಿಂದ ಸಚಿವ ಸ್ಥಾನ ಕಿತ್ತುಕೊಳ್ತಾರೆ: ಎಂ. ಲಕ್ಷ್ಮಣ್

    ಮೈಸೂರು: ಬಿಜೆಪಿಯವರು ವಲಸಿಗ ಸಚಿವರಿಂದ ಸಚಿವ ಸ್ಥಾನ ಕಿತ್ತುಕೊಳ್ಳುತ್ತಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮೈಸೂರಿನಲ್ಲಿ ಹೇಳಿದ್ದಾರೆ.

    ಇನ್ನು 6 ತಿಂಗಳಲ್ಲಿ ಸಚಿವ ಸುಧಾಕರ್, ನಾರಾಯಣ್ ಗೌಡ, ಬಿ ಗೋಪಾಲಯ್ಯ, ಆರ್ ಶಂಕರ್ ಬಿ.ಸಿ ಪಾಟೀಲ್ ಸೇರಿ ಹಲವರಿಂದ ಸಚಿವ ಸ್ಥಾನ ಕಿತ್ತುಕೊಳ್ಳುತ್ತಾರೆ. ಅವರಿಗೆ ಈಗ ವಲಸಿಗರ ಅವಶ್ಯಕತೆ ಇಲ್ಲ ಸರ್ಕಾರ ಗಟ್ಟಿಯಾಗಿದೆ. ಇದು ವಲಸೆ ಹೋದವರ ಗತಿ ಎಂದರು.

    ಸಿದ್ದರಾಮಯ್ಯ ಅವರನ್ನು ಸಮಾಜದಿಂದ ಬಹಿಷ್ಕರಿಸುತ್ತೇವೆ ಎಂಬ ಎಂಎಲ್‍ಸಿ ಎಚ್ ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಹಿಷ್ಕಾರ ಎಂಬುದು ಅಸಂವಿಧಾನಿಕ ಪದ. ಸಿದ್ದರಾಮಯ್ಯ ಅವರ ವರ್ಚಸ್ಸಿಗೆ ಕುಂದು ತರಲು ಆರ್ ಎಸ್ ಎಸ್ ಹಾಗೂ ಎಚ್ ವಿಶ್ವನಾಥ್ ಅವರಿಂದ ಪ್ರಯತ್ನ ನಡೆಯುತ್ತಿದೆ. ಸಿದ್ದರಾಮಯ್ಯ ಅವರು ಒಂದು ಜಾತಿ ವರ್ಗಕ್ಕೆ ಸೇರಿದವರಲ್ಲ. ವಿಶ್ವನಾಥ್ ಬಹಿಷ್ಕಾರ ಪದ ಹೇಗೆ ಬಳಸಿದರು. ಅವರಿಗೆ ಈ ಬಗ್ಗೆ ನಾಚಿಕೆಯಾಗಬೇಕು ಎಂದು ಹೇಳಿದರು.

    ಇದು ಅಕ್ಷಮ್ಯ ಅಪರಾಧ ಇದಕ್ಕೆ ನಮ್ಮ ವಿರೋಧವಿದೆ. ನೀವು ಒಬ್ಬ ಲಾಯರ್ ಆಗಿದ್ದೀರಾ ನಿಮಗೂ ಅದು ಗೊತ್ತಿದೆ ಆ ಹೇಳಿಕೆಯನ್ನು ವಿಶ್ವನಾಥ್ ವಾಪಸ್ಸು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

  • ಗಳಗಳನೆ ಕಣ್ಣೀರಿಟ್ಟು ಮಂಡಿಯೂರಿ ನಮಸ್ಕರಿಸಿದ ಅಭ್ಯರ್ಥಿ!

    ಗಳಗಳನೆ ಕಣ್ಣೀರಿಟ್ಟು ಮಂಡಿಯೂರಿ ನಮಸ್ಕರಿಸಿದ ಅಭ್ಯರ್ಥಿ!

    ಮೈಸೂರು: ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಸೋತ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಅವರು ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಗೋಳೋ ಅಂತಾ ಕಣ್ಣೀರಿಟ್ಟಿದ್ದಾರೆ.

    ನನಗೆ ಈಗ ರಾಜಕೀಯಕ್ಕೆ ಬಂದು ತಪ್ಪು ಮಾಡಿದೆ ಅಂತ ಅನ್ನಿಸುತ್ತಿದೆ. ನಾನು ಮೂರನೇ ಬಾರಿಗೆ ಈ ಚುನಾವಣೆಯಲ್ಲಿ ಸೋತಿದ್ದೇನೆ. ಕಳೆದ 10 ವರ್ಷಗಳಿಂದ ಶಿಕ್ಷಕರ ಸಮಸ್ಯೆಗೆ ಸ್ಪಂದಿಸಿದ್ದಕ್ಕೆ ಇದು ನೀವು ಕೊಟ್ಟ ಬಹುಮಾನವಾ ಎಂದು ಪ್ರಶ್ನಿಸಿ ಕಣ್ಣೀರಿಟ್ಟಿದ್ದಾರೆ.

    ಚುನಾವಣೆಯಿಂದ ನನ್ನ ಮನೆ ಬೀದಿಗೆ ಬಂದಿದೆ. ನನ್ನ ನೆರವಿಗೆ ಪಕ್ಷ ಬರಲೇ ಇಲ್ಲ. ಚುನಾವಣೆಯಲ್ಲಿ ನಾನು ನನ್ನ ಆಸ್ತಿ, ಮನೆಯಲ್ಲಿನ ಬಂಗಾರ ಕಳೆದು ಕೊಂಡಿದ್ದೇನೆ. ಕಾಂಗ್ರೆಸ್ ನ ಮಾಜಿ ಶಾಸಕ ಎಚ್.ಪಿ ಮಂಜುನಾಥ್ ಮೂರೂವರೆ ಲಕ್ಷ ರೂಪಾಯಿ ಕೊಟ್ಟರು. ಮಾಜಿ ಶಾಸಕ ವೆಂಕಟೇಶ್ 2 ಲಕ್ಷ ಕೊಟ್ಟರು. ಇಷ್ಟು ಬಿಟ್ಟರೆ ಇನ್ಯಾರು ನನ್ನ ಸಹಾಯಕ್ಕೆ ಬರಲಿಲ್ಲ ಎಂದು ದುಃಖದಿಂದ ಹೇಳಿದ್ದಾರೆ.

    ನನ್ನ ಕುಟುಂಬ ಹೇಗೆ ನಿರ್ವಹಣೆ ಮಾಡಬೇಕು ಎಂಬ ಚಿಂತೆ ನನ್ನ ಮುಂದಿದೆ. ಚುನಾವಣೆಯಿಂದ ನಾನು ಬೀದಿಗೆ ಬಂದಿದ್ದೇನೆ. ನಾನು ಸಹಾಯ ಮಾಡಿದವರೇ ನನ್ನ ವಿರುದ್ಧ ಪ್ರಚಾರ ಮಾಡಿ ನನ್ನನ್ನು ಸೋಲಿಸಿದರು ಎಂದು ಗೋಳಿಟ್ಟರು. ಇನ್ನೂ ಯಾವತ್ತೂ ಶಿಕ್ಷಕರ ಕ್ಷೇತ್ರದಿಂದ ಚುನಾವಣೆಗೆ ನಿಲ್ಲಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕೊನೆಗೆ ಕಣ್ಣೀರಿಡುತ್ತಲೆ ಮಂಡಿಯೂರಿ ತಮಗೆ ಮತ ಹಾಕಿದವರಿಗೆ ಹಾಗೂ ಹಾಕದವರಿಗೆ ನಮಸ್ಕಾರ ಹಾಕಿದ್ದಾರೆ.