Tag: M K Stalin

  • ಪ್ರಶ್ನೆ ಎದುರಿಸಲಾಗದವರು ಮಾನನಷ್ಟ ಮೊಕದ್ದಮೆ ಮೊರೆ ಹೋಗ್ತಾರೆ: ಡಿಎಂಕೆ ವಿರುದ್ಧ ಅಣ್ಣಾಮಲೈ ಕಿಡಿ

    ಪ್ರಶ್ನೆ ಎದುರಿಸಲಾಗದವರು ಮಾನನಷ್ಟ ಮೊಕದ್ದಮೆ ಮೊರೆ ಹೋಗ್ತಾರೆ: ಡಿಎಂಕೆ ವಿರುದ್ಧ ಅಣ್ಣಾಮಲೈ ಕಿಡಿ

    ಚೆನ್ನೈ: ತಮ್ಮ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿರುವ ಡಿಎಂಕೆ ವಿರುದ್ಧ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಕಿಡಿಕಾರಿದ್ದಾರೆ.

    ಪ್ರಶ್ನೆಗಳನ್ನು ಎದುರಿಸಲಾಗದವರು ಮಾನನಷ್ಟ ಮೊಕದ್ದಮೆಗಳ ಮೊರೆ ಹೋಗುತ್ತಾರೆ. ನನ್ನ ವಿರುದ್ಧ ಡಿಎಂಕೆಯಿಂದ 100 ಕೋಟಿ ರೂ. ಸೇರಿದಂತೆ ಒಟ್ಟು 610 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಾಗಿದೆ. ಅವರು ತಮಿಳುನಾಡಿನಲ್ಲಿ ಬಿಜೆಪಿಗೆ ಹೆದರುತ್ತಾರೆ ಎಂದು ಅಣ್ಣಾಮಲೈ ಹೇಳಿದ್ದಾರೆ. ಇದನ್ನೂ ಓದಿ: 2ನೇ ಮದುವೆಗೆ ತಯಾರಾದ ಐಎಎಸ್ ಟಾಪರ್ ಟೀನಾ

    ಮಾನನಷ್ಟ ಮೊಕದ್ದಮೆಗೆ ಹೆದರುವುದಿಲ್ಲ. ಅವರ ವಿರುದ್ಧ ನ್ಯಾಯಾಲಯದಲ್ಲಿ ಹೋರಾಡುತ್ತೇನೆ ಎಂದು ತಿಳಿಸಿದ್ದಾರೆ.

    ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಅಣ್ಣಾಮಲೈ ವಿರುದ್ಧ ಡಿಎಂಕೆ ಸಂಸದರಾದ ಆರ್‌.ಎಸ್.ಭಾರತಿ ಅವರು ನೋಟಿಸ್‌ ನೀಡಿದ್ದರು. ಇದನ್ನೂ ಓದಿ: ಬಿಜೆಪಿ ಸಂಸ್ಥಾಪನಾ ದಿನದ ಪ್ರಯುಕ್ತ ಸಿಹಿ ಸುದ್ದಿಕೊಟ್ಟ ಪ್ರಧಾನಿ: ಒಂದು ಕ್ಲಿಕ್‌ನಲ್ಲಿದೆ ಮಾಹಿತಿ

    ಡಿಎಂಕೆಯ ಸಂಘಟನಾ ಕಾರ್ಯದರ್ಶಿ ಆರ್.ಎಸ್. ಭಾರತಿ ಅವರು ನೋಟಿಸ್ ಜಾರಿ ಮಾಡಿದ್ದು, ಅಣ್ಣಾಮಲೈ ಅವರು ತಾವು ನೀಡಿರುವ ಹೇಳಿಕೆಗಳನ್ನು ವಾಪಸ್ ಪಡೆದು 24 ಗಂಟೆಗಳ ಒಳಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸದಿದ್ದರೆ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಮತ್ತು ಎರಡು ದಿನಗಳೊಳಗಾಗಿ ಮುಖ್ಯಮಂತ್ರಿ ಅವರ ಸಾರ್ವಜನಿಕ ಪರಿಹಾರ ನಿಧಿಗೆ 100 ಕೋಟಿ ರೂ. ಪಾವತಿಸುವಂತೆ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿತ್ತು.

    ಮಾರ್ಚ್ 24 ಮತ್ತು 25ರಂದು ಬಿಜೆಪಿ ಆಯೋಜಿಸಿದ್ದ ಪ್ರತಿಭಟನಾ ಕಾರ್ಯಕ್ರಮಗಳಲ್ಲಿ ಅಣ್ಣಾಮಲೈ ಅವರು, ಸ್ಟಾಲಿನ್ ಅವರ ಯುಎಇ ಭೇಟಿಗೆ ವೈಯಕ್ತಿಕ ಉದ್ದೇಶಗಳು ಕಾರಣವೆಂದು ಆರೋಪ ಮಾಡಿದ್ದರು. ಇದನ್ನೂ ಓದಿ: ಪರವಾನಗಿ ಇಲ್ಲದೆ ಬಂದೂಕುಗಳನ್ನು ಹೊಂದಲು ಕೊಡವರಿಗೆ ಅವಕಾಶ- ರಾಜ್ಯಕ್ಕೆ ಸುಪ್ರೀಂ ನೋಟಿಸ್‌

  • ಸ್ಟಾಲಿನ್ ಸಿಎಂ ಆದ ಬಳಿಕ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿದೆ: ಎಡಪಾಡಿ ಕೆ.ಪಳನಿಸ್ವಾಮಿ

    ಸ್ಟಾಲಿನ್ ಸಿಎಂ ಆದ ಬಳಿಕ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿದೆ: ಎಡಪಾಡಿ ಕೆ.ಪಳನಿಸ್ವಾಮಿ

    ಚೆನ್ನೈ: ವಿರುದುನಗರದಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದ ದುಷ್ಕರ್ಮಿಗಳಿಗೆ ಸರ್ಕಾರ ಕಠಿಣ ಶಿಕ್ಷೆ ವಿಧಿಸಬೇಕೆಂದು ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಡಪಾಡಿ ಕೆ.ಪಳನಿಸ್ವಾಮಿ ಅವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂದು ನಾನು ಭಾವಿಸಿದ್ದೇನೆ. ಇಲ್ಲದಿದ್ದಲ್ಲಿ ಪ್ರತಿಭಟನೆ ನಡೆಸಿ ಸಿಬಿಐ ತನಿಖೆಗೆ ನೀಡುವಂತೆ ಒತ್ತಾಯಿಸುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಇಂದಿನಿಂದ SSLC ಪರೀಕ್ಷೆ – ಸಮವಸ್ತ್ರ ಧರಿಸಿದ್ರೆ ಮಾತ್ರ ಪ್ರವೇಶಕ್ಕೆ ಅನುಮತಿ

    ಸ್ಟಾಲಿನ್ ಅವರು ಅಧಿಕಾರಕ್ಕೆ ಬಂದ ನಂತರ ಲೈಂಗಿಕ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಕೊಲೆ ಮತ್ತು ದರೋಡೆ ಜೊತೆಗೆ ಲೈಂಗಿಕ ದೌರ್ಜನ್ಯ ಅಪರಾಧಗಳು ಬೇರೆ ಸರ್ಕಾರಗಳು ಇದ್ದಾಗ ಹೆಚ್ಚಾಗಿ ಇರಲಿಲ್ಲ. ಆದರೆ ಸ್ಟಾಲಿನ್ ಅವರು ತಮ್ಮನ್ನು ತಾವೇ ತಮಿಳುನಾಡಿನ ಪ್ರಧಾನಿ ಎಂದು ಹೇಳಿಕೊಂಡಿದ್ದಾರೆ. ಅವರು ತಮಿಳುನಾಡು ಸಿಎಂ ಆದ ನಂತರ ತಮಿಳುನಾಡಿಗೆ ಏನು ನೀಡಿದ್ದಾರೆ. ಬದಲಿಗೆ ಅವರು ಸಿಎಂ ಆದ ನಂತರ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿದ್ದು, ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಮತ್ತು ಜನರು ಭಯದಿಂದ ಬದುಕುತ್ತಿದ್ದಾರೆ ಎಂದಿದ್ದಾರೆ.

    ಈ ಮುನ್ನ ವಿಧಾನಸಭೆಯಲ್ಲಿ ಮಾತನಾಡಿದ ಎಂ.ಕೆ. ಸ್ಟಾಲಿನ್ ಅವರು ವಿರುದುನಗರದಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಸರಿಯಾಗಿ ನಿಭಾಯಿಸಿ ಶೀಘ್ರದಲ್ಲಿಯೇ ನ್ಯಾಯ ಒದಗಿಸಲಾಗುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ:  ಹಿಂದುತ್ವದ ವಿರೋಧಿ ಆಗ್ಬೇಡಿ: ಕೇಜ್ರಿವಾಲ್‍ಗೆ ಅಸ್ಸಾಂ ಸಿಎಂ ತಿರುಗೇಟು

     

  • ಪ್ರಾದೇಶಿಕ ರಾಜಕೀಯ ಪಕ್ಷಗಳೊಂದಿಗೆ ಸೇರಿ ಬಿಜೆಪಿಯೇತರ ರಂಗ ರೂಪಿಸುತ್ತೇವೆ: ಕೆಸಿಆರ್‌

    ಪ್ರಾದೇಶಿಕ ರಾಜಕೀಯ ಪಕ್ಷಗಳೊಂದಿಗೆ ಸೇರಿ ಬಿಜೆಪಿಯೇತರ ರಂಗ ರೂಪಿಸುತ್ತೇವೆ: ಕೆಸಿಆರ್‌

    ರಾಂಚಿ: ದೇಶಕ್ಕೆ ನೂತನ ದಿಕ್ಕನ್ನು ನೀಡಲು ಸಮಾನ ಮನಸ್ಕ ಪಕ್ಷಳೊಂದಿಗೆ ಮಾತುಕತೆ ನಡೆಸುತ್ತಿದ್ದೇನೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಾದೇಶಿಕ ರಾಜಕೀಯ ಸಂಘಟನೆಗಳ ಜೊತೆ ಮಾತುಕತೆ ನಡೆಸಿ ಬಿಜೆಪಿಯೇತರ ರಂಗವನ್ನು ರೂಪಿಸುತ್ತೇನೆ ಎಂದು ತಿಳಿಸಿದರು.

    ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ದೇಶ ಯಾವುದೇ ರೀತಿಯಲ್ಲೂ ಅಭಿವೃದ್ಧಿಯನ್ನು ಹೊಂದಿಲ್ಲ. ಇದರಿಂದಾಗಿ ರಾಷ್ಟ್ರದ ಅಭಿವೃದ್ಧಿಗೆ ಅಗತ್ಯವಾದ ಕ್ರಮ ಜರುಗಿಸುವಲ್ಲಿ ರಾಜಕೀಯ ಚರ್ಚೆಗಳು ನಡೆಯುತ್ತಿವೆ ಎಂದು ಹೇಳಿದರು.

    ದೇಶವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಲು ಪ್ರಾಮಾಣಿಕ ಪ್ರಯತ್ನವನ್ನು ನಡೆಸುತ್ತೇವೆ. ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇದನ್ನು ಕೆಲವರು ಮೂರನೇ ರಂಗವೆಂದು ಇನ್ನೂ ಕೆಲವರು ನಾಲ್ಕನೇ ರಂಗವೆಂದು ಕರೆಯುತ್ತಿದ್ದಾರೆ. ಆದರೆ ಇದು ಯಾವ ಆಕಾರವನ್ನು ತೆಗೆದುಕೊಳ್ಳುತ್ತವೆ ಎಂದು ನಂತರ ನಿಮಗೆ ತಿಳಿಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಬುದ್ಧಿಮಾಂದ್ಯನ ಮೇಲೆ ಮನಬಂದಂತೆ ಥಳಿಸಿದ PSI

    ಈ ಬಗ್ಗೆ ಶೀಘ್ರವೇ ನಿಮಗೆ ಅರ್ಥವಾಗುತ್ತದೆ. ಈಗಲೇ ತೀರ್ಮಾನಕ್ಕೆ ಬರಬೇಡಿ ಎಂದ ಅವರು, ಜಾರ್ಖಂಡ್‌ ಮುಖ್ಯಮಂತ್ರಿ ಮತ್ತು ಜೆಎಂಎಂ ನಾಯಕ ಹೇಮಂತ್ ಸೊರೆನ್ ಅವರೊಂದಿಗೆ ರಾಜಕೀಯ ಚರ್ಚೆ ನಡೆಸಿದ್ದೇನೆ ಎಂದು ಈ ವೇಳೆ ತಿಳಿಸಿದರು. ಇದನ್ನೂ ಓದಿ: ಉಕ್ರೇನ್‍ನಿಂದ ಹಿಂತಿರುಗಿದ ವಿದ್ಯಾರ್ಥಿಗಳಿಗೆ ಕಾಲೇಜುಗಳಲ್ಲಿ ಅನುಮತಿ ನೀಡಿ – ಪ್ರಧಾನಿಗೆ ಐಎಂಎ ಪತ್ರ

    ಕಳೆದ ಡಿಸೆಂಬರ್‌ನಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹಾಗೂ ಕಳೆದ ತಿಂಗಳು ಮಹಾರಾಷ್ಟ್ರದಲ್ಲಿ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಹಾಗೂ ಶರದ್ ಪವರ್ ಜೊತೆ ಮಾತುಕತೆ ನಡೆಸಿದ್ದರು.

  • ತಮಿಳುನಾಡು ಸಿಎಂ ಮನೆಗೆ ಶಿವರಾಜ್‍ಕುಮಾರ್ ದಂಪತಿ ಭೇಟಿ

    ತಮಿಳುನಾಡು ಸಿಎಂ ಮನೆಗೆ ಶಿವರಾಜ್‍ಕುಮಾರ್ ದಂಪತಿ ಭೇಟಿ

    ಚೆನ್ನೈ: ನಟ ಶಿವರಾಜ್‍ಕುಮಾರ್, ಗೀತಾ ದಂಪತಿ ಚೆನ್ನೈಗೆ ತೆರಳಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನು ಭೇಟಿ ಆಗಿದ್ದಾರೆ. ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

    ಚೆನ್ನೈನಲ್ಲಿ ಇರುವ ಸ್ಟಾಲಿನ್ ಅವರ ನಿವಾಸದಲ್ಲಿ ಈ ಭೇಟಿ ನಡೆದಿದೆ. ಇದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಈ ಭೇಟಿಯ ಉದ್ದೇಶ ಏನು ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಎಂ.ಕೆ. ಸ್ಟಾಲಿನ್ ಅವರ ಜೊತೆ ಶಿವರಾಜ್‍ಕುಮಾರ್ ಮತ್ತು ಗೀತಾ ಅವರು ನಿಂತಿರುವ ಫೋಟೋ ಸಹ ಲಭ್ಯವಾಗಿದೆ.

    ಪುನೀತ್ ರಾಜ್‍ಕುಮಾರ್ ನಿಧನರಾದಾದ ಎಂ.ಕೆ. ಸ್ಟಾಲಿನ್ ಅವರು ಪತ್ರದ ಮುಖಾಂತರ ಅಣ್ಣಾವ್ರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ್ದರು. ಈಗ ಅವರನ್ನು ಶಿವಣ್ಣ ಮತ್ತು ಗೀತಾ ಭೇಟಿ ಆಗಿರುವುದು ಯಾಕೆ ಎಂಬ ಕೌತುಕ ಪ್ರಶ್ನೆ ಮೂಡಿದೆ. ಡಾ. ರಾಜ್‍ಕುಮಾರ್ ಕುಟುಂಬಕ್ಕೂ ಚೆನ್ನೈಗೂ ಮೊದಲಿನಿಂದಲೂ ನಂಟು ಇದೆ. ಅಲ್ಲದೇ ಬೇರೆ, ಬೇರೆ ರಾಜ್ಯಗಳ ರಾಜಕಾರಣಿಗಳು ಹಾಗೂ ಸೆಲೆಬ್ರಿಟಿಗಳು ಕೂಡ ಈ ಕುಟುಂಬದ ಜೊತೆ ಒಡನಾಟ ಹೊಂದಿದ್ದಾರೆ.

    ನಟ ಪುನೀತ್ ರಾಜ್‍ಕುಮಾರ್ ಅವರನ್ನು ಕಳೆದುಕೊಂಡ ಬಳಿಕ ಡಾ. ರಾಜ್‍ಕುಮಾರ್ ಕುಟುಂಬ ನೋವಿನಲ್ಲಿದೆ. ಅದರ ನಡುವೆಯೂ ಜೀವನ ಮುಂದುವರಿಯಲೇ ಬೇಕಾದ ಅನಿವಾರ್ಯತೆ ಇದೆ. ಸಿನಿಮಾ ಕೆಲಸಗಳಲ್ಲಿ ಶಿವರಾಜ್‍ಕುಮಾರ್, ರಾಘವೇಂದ್ರ ರಾಜ್‍ಕುಮಾರ್ ಬ್ಯುಸಿ ಆಗಿದ್ದಾರೆ. ಗೀತಾ ಶಿವರಾಜ್‍ಕುಮಾರ್ ಶಕ್ತಿಧಾಮದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರು ಪ್ರೊಡಕ್ಷನ್ಸ್​, ಪಿಆರ್​ಕೆ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ.

  • ಕರ್ನಾಟಕ ಸೇರಿ ದಕ್ಷಿಣ ರಾಜ್ಯಗಳ ರೈತ ಮುಖಂಡರಿಂದ ತಮಿಳುನಾಡಿನ ಸಿಎಂ ಭೇಟಿ

    ಕರ್ನಾಟಕ ಸೇರಿ ದಕ್ಷಿಣ ರಾಜ್ಯಗಳ ರೈತ ಮುಖಂಡರಿಂದ ತಮಿಳುನಾಡಿನ ಸಿಎಂ ಭೇಟಿ

    ಚೆನ್ನೈ: ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಪುದುಚೇರಿ, ಕೇರಳ ರಾಜ್ಯಗಳ ರೈತ ಮುಖಂಡರು ಇಂದು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರನ್ನು ಭೇಟಿ ಮಾಡಿ ರೈತರ ಸಮಸ್ಯೆಗಳ ಬಗ್ಗೆ ಗಮನಸೆಳೆದರು.

    ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಶಾಸನಬದ್ಧ ಖಾತ್ರಿಗೊಳಿಸಲು ಕಾನೂನು ತಿದ್ದುಪಡಿ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಬೇಕು. ಕೇಂದ್ರ ಸರ್ಕಾರ ಅರಿಶಿನ ಬೆಳೆಗೆ ಶೇಕಡಾ 5ರಷ್ಟು ಜಿಎಸ್‌ಟಿ ವಿಧಿಸಿರುವುದನ್ನು ರದ್ದು ಮಾಡಬೇಕು. ಅರಿಶಿನ ಬೆಳೆಗೆ 15,000 ರೂ. ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿ ಸರ್ಕಾರ ಖರೀದಿ ಕೇಂದ್ರಗಳ ಮೂಲಕ ಖರೀದಿಸುವಂತೆ ಆಗಬೇಕು. ಕಬ್ಬಿನ ಎಫ್‌ಆರ್‌ಪಿ ದರವನ್ನು ರೈತರ ಹೊಲದಲ್ಲಿನ ದರ ಎಂದು ನಿಗದಿ ಮಾಡಲು ಕೇಂದ್ರಕ್ಕೆ ಒತ್ತಾಯಿಸಬೇಕು ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಟಾಟಾ ಸಂಸ್ಥೆಗೆ ಏರ್‌ ಇಂಡಿಯಾ ಅಧಿಕೃತ ಹಸ್ತಾಂತರ

    ಕಬ್ಬಿನಿಂದ ಬರುವ ಸಕ್ಕರೆ ಇಳುವರಿ ಆಯಾ ವರ್ಷದ ಇಳುವರಿ ಆಧರಿಸಿ ಎಫ್‌ಆರ್‌ಪಿ ದರ ರೈತರಿಗೆ ನೀಡುವಂತಾಗಬೇಕು. ಕೇಂದ್ರ ಸರ್ಕಾರ ಖರೀದಿಸುವ ಕನಿಷ್ಠ ಬೆಂಬಲ ಬೆಲೆ ಖರೀದಿ ಅನುದಾನ ಎಲ್ಲಾ ರಾಜ್ಯಗಳಿಗೂ ಸಮನಾಗಿ ಹಂಚಿಕೆ ಮಾಡಿ ಖರೀದಿಸುವಂತೆ ಆಗಬೇಕು ಎಂದು ತಿಳಿಸಿದ್ದಾರೆ.

    ಕಾಡಂಚಿನ ಪ್ರಾಣಿಗಳ ಹಾವಳಿಯಿಂದ ರೈತರ ಬೆಳೆಗಳು ರೈತರ ಜೀವನ ನಾಶವಾಗುತ್ತಿರುವುದನ್ನು ತಪ್ಪಿಸಲು ಐವತ್ತು ವರ್ಷಗಳ ಹಿಂದೆ ರಚಿತವಾಗಿರುವ ವನ್ಯಜೀವಿ ಸಂರಕ್ಷಣೆ ಕಾಯ್ದೆ ತಿದ್ದುಪಡಿ ಮಾಡಲು ಕೇಂದ್ರಕ್ಕೆ ಒತ್ತಾಯಿಸಬೇಕು ಎಂದು ಮನವಿ ಮಾಡಿದ್ದಾರೆ. ಈ ವೇಳೆ ಪ್ರತಿಕ್ರಿಯಿಸಿರುವ ತಮಿಳುನಾಡು ಸಿಎಂ, ರೈತರ ವಿಚಾರದಲ್ಲಿ ತಮಿಳುನಾಡು ಸರ್ಕಾರ ಸದಾ ನಿಮ್ಮ ಜೊತೆ ಇರುತ್ತದೆ ಎಂದು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಭಾರತ ಹಿಂದೂ ರಾಷ್ಟ್ರವಾಗುತ್ತಿದೆ, ಜನರಿಗೆ ಅಭದ್ರತೆ ಕಾಡುತ್ತಿದೆ: ಅನ್ಸಾರಿ

    ರೈತ ಮುಖಂಡರ ನಿಯೋಗದಲ್ಲಿ ಅರಿಶಿನ ಬೆಳೆಗಾರರ ಸಂಘದ ರಾಷ್ಟ್ರೀಯ ಅಧ್ಯಕ್ಷ ತಮಿಳುನಾಡಿನ ದೈವಸಿಗಾಮಣಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕರ್ನಾಟಕದ ಕುರುಬೂರು ಶಾಂತಕುಮಾರ್, ರಾಷ್ಟ್ರೀಯ ಉಪಾಧ್ಯಕ್ಷ ತೆಲಂಗಾಣದ ನರಸಿಂಹ ನಾಯ್ಡು, ಕೇರಳ ರಾಜ್ಯದ ಪಿ.ಟಿ.ಜಾನ್, ತಮಿಳುನಾಡಿನ ರಾಮಗೌಂಡರ್, ಇಲ್ಲಂಗೂವನ್ ವೆಲಂಗಣಿ, ಎಳಿಲ್ಲನ್ ಕಾಂಚಿಪುರಂ, ಬಾಬು ಕೊಯಮತ್ತೂರು, ಮಾಣಿಕ್ಯಂ ಹುಣಸೂರು, ವಿಮಾಲ್ ಕುಮಾರ ಇತರರು ಇದ್ದರು.

  • ಭಾರೀ ಮಳೆ ಬಗ್ಗೆ ಎಚ್ಚರಿಸುವಲ್ಲಿ ಹವಾಮಾನ ಇಲಾಖೆ ವಿಫಲ- ಅಮಿತ್ ಶಾಗೆ ತಮಿಳುನಾಡು ಸಿಎಂ ಪತ್ರ

    ಭಾರೀ ಮಳೆ ಬಗ್ಗೆ ಎಚ್ಚರಿಸುವಲ್ಲಿ ಹವಾಮಾನ ಇಲಾಖೆ ವಿಫಲ- ಅಮಿತ್ ಶಾಗೆ ತಮಿಳುನಾಡು ಸಿಎಂ ಪತ್ರ

    ಚೆನ್ನೈ: ತಮಿಳುನಾಡಿನಲ್ಲಿ ಭಾರೀ ಮಳೆಯಾಗುವ ಬಗ್ಗೆ ಮಾಹಿತಿ ನೀಡುವಲ್ಲಿ ಹವಾಮಾನ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಪತ್ರ ಬರೆದಿದ್ದಾರೆ.

    ತಮಿಳುನಾಡಿನಲ್ಲಿ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಭಾರೀ ಅನಾಹುತ ಸಂಭವಿಸಿದೆ. ಈ ಬಗ್ಗೆ ರಾಜ್ಯ ಸರ್ಕಾರವನ್ನು ಎಚ್ಚರಿಸುವಲ್ಲಿ ಭಾರತೀಯ ಹವಮಾನ ಇಲಾಖೆ ವಿಫಲವಾಗಿದೆ ಪತ್ರದಲ್ಲಿ ದೂರಿದ್ದಾರೆ.

    ವಿಪತ್ತು ಪರಿಸ್ಥಿತಿಗಳನ್ನು ನಿಭಾಯಿಸುವಲ್ಲಿ ಎಚ್ಚರಿಸಲು ಭಾರತೀಯ ಹವಮಾನ ಇಲಾಖೆ ಮುಖ್ಯ ಪಾತ್ರವನ್ನು ವಹಿಸುತ್ತದೆ. ಇದರಿಂದ ರಾಜ್ಯ ಹಾಗೂ ಜಿಲ್ಲಾಡಳಿತಕ್ಕೆ ಜನರ ಸುರಕ್ಷತೆಯ ಬಗ್ಗೆ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳಲು ಸಹಾಯವಾಗುತ್ತದೆ. ಆದರೆ ರೆಡ್ ಅಲರ್ಟ್ ನ್ನು ಘೋಷಿಸುವ ಸಂಬಂಧ ತಿಳಿಸುವಲ್ಲಿ ಐಎಂಸಿ ವಿಫಲವಾಗಿದೆ ಎಂದು ಉಲ್ಲೇಖಿಸಿದ್ದಾರೆ. ಇದನ್ನೂ ಓದಿ:  ಬಿಹಾರ್‌ ಸಿಎಂ ಪುತ್ರ ತನ್ನ ತಂದೆಗಿಂತಲೂ 5 ಪಟ್ಟು ಹೆಚ್ಚು ಶ್ರೀಮಂತ

    ಹವಮಾನ ಇಲಾಖೆ ಡಿ.30ರಂದು ಮಧ್ಯಾಹ್ನ ತಮಿಳುನಾಡಿನಲ್ಲಿ ಮಳೆಯಾಗುವುದರ ಬಗ್ಗೆ ತಿಳಿಸಿತ್ತು. ಆದರೆ ಕರಾವಳಿಯ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗುತ್ತದೆ. ಆದರೆ ವಿಲುಪುರಂ, ಕಡಲೂರು ಮತ್ತು ಡೆಲ್ಟಾ ಜಿಲ್ಲೆಗಳಲ್ಲಿ ಸಾಧಾರಣ ಮಳೆಯೊಂದಿಗೆ, ಬಿರುಗಾಳಿ ಹಾಗೂ ಚೆನ್ನೈನ ಕೆಲವು ಪ್ರದೇಶಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ ಎಂದಷ್ಟೇ ಮುನ್ಸೂಚನೆ ನೀಡಿತ್ತು ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ವಿದ್ಯುತ್‌ ನೀಡದಿದ್ದಕ್ಕೆ ಅಖಿಲೇಶ್‌ ಯಾದವ್‌ ಮೊದಲು ಕ್ಷಮೆಯಾಚಿಸಲಿ: ಯೋಗಿ ಆದಿತ್ಯನಾಥ್

    ಸಂಜೆ 4:15ಕ್ಕೆ ಆರೆಂಜ್ ಅಲರ್ಟ್ ಘೋಷಿಸಲಾಗಿತ್ತು. ಆದರೆ ಈ ವೇಳೆಗೆ ಚೆನ್ನೈ, ತಿರುವಳ್ಳೂರು, ಕಾಂಚೀಪುರಂ ಮತ್ತು ಚೆಂಗಲ್‌ಪೇಟ್ ಜಿಲ್ಲೆಗಳಾದ್ಯಂತ ಧಾರಾಕಾರ ಮಳೆಯಾಗಿದೆ. ಇದರಿಂದಾಗಿ ಅನೇಕ ಸ್ಥಳಗಳು ಜಲಾವೃತಗೊಂಡಿದ್ದು, ನಗರದಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿತ್ತು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

  • ಕೊರೊನಾ ಭೀತಿ – ಹೊಸವರ್ಷಕ್ಕೆ ತಮಿಳುನಾಡಿನ ಬೀಚ್‍ಗಳಿಗೆ ಪ್ರವೇಶ ನಿರ್ಬಂಧ

    ಕೊರೊನಾ ಭೀತಿ – ಹೊಸವರ್ಷಕ್ಕೆ ತಮಿಳುನಾಡಿನ ಬೀಚ್‍ಗಳಿಗೆ ಪ್ರವೇಶ ನಿರ್ಬಂಧ

    ಚೆನ್ನೈ: ಕೊರೊನಾ ವೈರಸ್ ತಡೆಗಟ್ಟಲು ಈ ಬಾರಿ ಹೊಸ ವರ್ಷ ಸಂಭ್ರಮಾಚರಣೆಗೆ ಬ್ರೇಕ್ ಹಾಕಲು ತಮಿಳುನಾಡು ಸರ್ಕಾರ ಬೀಚ್‍ಗಳಲ್ಲಿ ಸಾರ್ವಜನಿಕರಿಗೆ ಡಿಸೆಂಬರ್ 31ರಂದು ಮತ್ತು ಜನವರಿ 1ರಂದು ನಿರ್ಬಂಧ ಹೇರಿದೆ.

    ಈ ಬಗ್ಗೆ ಮುಖ್ಯಮಂತ್ರಿ ಸ್ಟಾಲಿನ್ ಅವರು, ಪ್ರಸ್ತುತ ಪರಿಸ್ಥಿತಿ ಅನುಗುಣವಾಗಿ 6ರಿಂದ 12ನೇ ತರಗತಿಯವರೆಗೂ ಶಾಲೆಗಳನ್ನು ತೆರೆಯಲಾಗುತ್ತಿಲ್ಲ. ಆದರೆ ಮುಂದಿನ ತಿಂಗಳಿನಿಂದ ಪ್ರಾರಂಭಿಸಲಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: `ದಿವ್ಯ ಕಾಶಿ, ಭವ್ಯ ಕಾಶಿ’ ಪ್ರಧಾನಿ ಮೋದಿ ಕನಸಿನ ಯೋಜನೆ ಲೋಕಾರ್ಪಣೆ – ವಿಶೇಷತೆ ಏನು?

    ನೆರೆಯ ರಾಜ್ಯಗಳಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಸೋಮವಾರ ಸಭೆ ನಡೆಸಿದ ಸ್ಟಾಲಿನ್ ಅವರು, ಈ ವೇಳೆ ಡಿಸೆಂಬರ್ 31 ರವರೆಗಿನ ಕೋವಿಡ್-ಸಂಬಂಧಿತ ನಿರ್ಬಂಧಗಳನ್ನು ವಿಸ್ತರಿಸುವುದಾಗಿ ಘೋಷಿಸಿದರು. ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಭೆಗಳಲ್ಲಿ ಈ ಹಿಂದೆ ಇದ್ದ ಮಾರ್ಗಸೂಚಿಗಳನ್ನು ಮುಂದುವರಿಸುವಂತೆ ಸೂಚಿಸಿದ್ದಾರೆ. ಇದನ್ನೂ ಓದಿ: ಕಾಶಿಯಿಂದ ಕಾಶ್ಮೀರದವರೆಗೆ ಅಭಿವೃದ್ಧಿ – ಮೋದಿ ಅವಧಿಯಲ್ಲಿ ಯಾವೆಲ್ಲ ದೇವಾಲಯಗಳು ಜೀರ್ಣೋದ್ಧಾರಗೊಂಡಿದೆ?

    ಕೊರೊನಾ ವೈರಸ್ ತಡೆಗಟ್ಟುವ ಸಲುವಾಗಿ ಡಿಸೆಂಬರ್ 31ರಿಂದ ಜನವರಿ 1ರವರೆಗೂ ಮರೀನಾ ಬೀಚ್ ಸೇರಿದಂತೆ ರಾಜ್ಯದ ಹಲವು ಬೀಚ್‍ಗಳಿಗೆ ಸಾರ್ವನಿಕರ ಪ್ರವೇಶವನ್ನು ನಿರ್ಬಂಧ ಹೇರಿರುವುದಾಗಿ ಅಧಿಕೃತವಾಗಿ ಪ್ರಕಟಿಸಿದ್ದಾರೆ.

  • ಸ್ವರ್ಗ ಸೃಷ್ಟಿಸುವ ಬಿಜೆಪಿ ಮಾತು ಸುಳ್ಳಾಗಿದೆ-  ಎಚ್ಡಿಕೆ ಕಿಡಿ

    ಸ್ವರ್ಗ ಸೃಷ್ಟಿಸುವ ಬಿಜೆಪಿ ಮಾತು ಸುಳ್ಳಾಗಿದೆ- ಎಚ್ಡಿಕೆ ಕಿಡಿ

    ಬೆಂಗಳೂರು: ಮೇಕೆದಾಟು ಮತ್ತು ಕಾವೇರಿ ನದಿ ವಿವಾದವನ್ನ ಸರಿಯಾಗಿ ಬಗೆಹರಿಸದ ಬಿಜೆಪಿ ಸರ್ಕಾರದ ವಿರುದ್ದ ಮಾಜಿ ಸಿಎಂ ಕುಮಾರಸ್ವಾಮಿ ಸರಣಿ ಟ್ವೀಟ್ ಮಾಡುವ ಮೂಲಕವಾಗಿ ಕಿಡಿಕಾರಿದ್ದಾರೆ. ರಾಜ್ಯ, ಕೇಂದ್ರ ಬಿಜೆಪಿ ಸರ್ಕಾರದ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ. ಅಷ್ಟೇ ಅಲ್ಲ ಸಮಸ್ಯೆಯನ್ನ ಅಣ್ಣ ತಮ್ಮಂದಿರಂತೆ ಬಗೆಹರಿಸಿಕೊಳ್ಳೋಣ ಅಂತ ತಮಿಳುನಾಡು ಸಿಎಂ ಸ್ಟಾಲಿನ್‍ಗೆ ಮನವಿ ಮಾಡಿದ್ದಾರೆ.

    ತಮಿಳುನಾಡು ಸರ್ಕಾರ ಮೇಕೆದಾಟು ಜಲಾಶಯ ಕಾವೇರಿ ನದಿ ನೀರಿನ ವಿಚಾರದಲ್ಲಿ ಕರ್ನಾಟಕಕ್ಕೆ ಪ್ರತಿಕೂಲವಾಗುವಂಥ ಹೆಜ್ಜೆ ಇಟ್ಟಿದೆ.ಇದರ ಬಗ್ಗೆ ಗಮನಹರಿಸಬೇಕಿದ್ದ ರಾಜ್ಯದ ಬಿಜೆಪಿ ಸರ್ಕಾರ ಆಂತರಿಕ ಕಲಹದಿಂದ ಶರಶಯ್ಯೆಯಲ್ಲಿದೆ. ಸರ್ಕಾರವನ್ನೇ ನಡೆಸಲಾಗದೇ ನಲುಗಿ ಹೋಗಿರುವ ಬಿಜೆಪಿಗೆ ಇನ್ನು ನೆಲಜಲ, ಭಾಷೆನುಡಿಯ ಬಗ್ಗೆ ಅಕ್ಕರೆ ಇದ್ದೀತೆ? ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ:  ಟಾಪ್‍ಲೆಸ್ ಫೋಟೋ ಶೂಟ್‍ನಲ್ಲಿ ನಟಿ ಕಿಯಾರಾ ಅಡ್ವಾಣಿ ಸಖತ್ ಹಾಟ್

    ಇತ್ತೀಚೆಗೆ ನರೇಂದ್ರ ಮೋದಿ ಅವರನ್ನು ಭೇಟಿಯಾಗಿರುವ ತಮಿಳುನಾಡು ಸಿಎಂ ಸ್ಟಾಲಿನ್ ಅವರು ಮೇಕೆದಾಟು ಜಲಾಶಯ ನಿರ್ಮಾಣಕ್ಕೆ ಅನುಮತಿ ನೀಡದಂತೆಯೂ, ಈ ವರ್ಷ ತಮಿಳುನಾಡಿಗೆ ಸಿಗಬೇಕಾದ ನೀರಿನ ವಿಚಾರದಲ್ಲಿ ಕ್ರಮ ಕೈಗೊಳ್ಳುವಂತೆಯೂ ಮನವಿ ಮಾಡಿದ್ದಾರೆ.ಈ ಬಗ್ಗೆ ಕ್ಷಿಪ್ರವಾಗಿ ಪ್ರತಿಕ್ರಿಯಿಸಬೇಕಿದ್ದ ಆಡಳಿತಾರೂಢ ಬಿಜೆಪಿ ಮೈಮರೆತು ಕುಳಿತಿದೆ. ಮೇಕೆದಾಟು ಅಣೆಕಟ್ಟು ಯೋಜನೆ ರೂಪಿಸಲೂ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಆಗಿರಲಿಲ್ಲ. ನನ್ನ ಸರ್ಕಾರ ಅದನ್ನು ಜಾರಿಗೆ ತಂದು ಧೈರ್ಯ ತೋರಿತು.ಆದರೆ, ಅದನ್ನು ಉಳಿಸಿಕೊಳ್ಳಲೂ ಬಿಜೆಪಿಗೆ ಆಗುತ್ತಿಲ್ಲ. ರಾಜ್ಯ ಕೇಂದ್ರದಲ್ಲಿ ಬಿಜೆಪಿಯೇ ಅಧಿಕಾರದಲ್ಲಿದ್ದರೂ ಯೋಜನೆ ಅನಿಶ್ಚಿತತೆ ಎದುರಿಸುತ್ತಿದೆ. ಸ್ವರ್ಗ ಸೃಷ್ಟಿಸುವ ಬಿಜೆಪಿ ಮಾತು ಸುಳ್ಳಾಗಿದೆ ಎಂದು ಆಕ್ರೋಶವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ:  ಅತಿ ಹೆಚ್ಚು, ಅತಿ ಕಡಿಮೆ ಅನುದಾನ ಯಾರಿಗೆ ಸಿಕ್ಕಿದೆ? – ರಹಸ್ಯ ರಿಪೋರ್ಟ್ ಔಟ್

    ರಾಜ್ಯದ ಜನ ಗಮನಿಸಬೇಕು. ತಮಿಳುನಾಡಿನಲ್ಲಿ ಅಧಿಕಾರದಲ್ಲಿರುವುದು ಪ್ರಾದೇಶಿಕ ಪಕ್ಷ. ಪ್ರಾದೇಶಿಕತೆ, ಅಸ್ಮಿತೆ ವಿಚಾರದಲ್ಲಿ ತಮಿಳುನಾಡು ಪ್ರಬಲವಾಗಿದೆ.ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳೇ ಹೆಚ್ಚು ಅಧಿಕಾರದಲ್ಲಿದ್ದರೂ ರಾಜ್ಯದ ಅಸ್ಮಿತೆ, ಪ್ರಾದೇಶಿಕತೆ ರಕ್ಷಣೆ ಸಾಧ್ಯವಾಗುತ್ತಿಲ್ಲ.ರಾಜ್ಯದ ಹಿತರಕ್ಷಣೆಗೆ ಪ್ರಾದೇಶಿಕ ಪಕ್ಷವೇ ಅಗತ್ಯ. ಸ್ಟಾಲಿನ್ ಒಂದು ಮಾತು ಹೇಳಿದ್ದರು. ಸಂವಿಧಾನದ 8ನೇ ಪರಿಚ್ಛೇದದಡಿ ಮಾನ್ಯತೆ ನೀಡಲಾಗಿರುವ ಎಲ್ಲ ಭಾಷೆಗಳಿಗೆ ಅಧಿಕೃತ ಭಾಷೆ ಸ್ಥಾನ ಪಡೆಯುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ತಿಳಿಸಿದ್ದರು.ಈ ಪ್ರಯತ್ನದಲ್ಲಿ ನಾನೂ ಕೈಜೋಡಿಸುತ್ತೇನೆ. ಆದರೆ, ಅಣ್ಣತಮ್ಮಂದಿರಂತೆ ಇರಬೇಕಾದ ನಾವು ಕಾವೇರಿ ವಿಚಾರದಲ್ಲಿ ಕಲಹಕ್ಕಿಳಿಯುವುದರಲ್ಲಿ ಲಾಭವಿಲ್ಲ.ದಕ್ಷಿಣ ಭಾರತದ ರಾಜ್ಯಗಳು, ಭಾಷೆ, ಸಂಸ್ಕøತಿ ವಿಚಾರದಲ್ಲಿ ಈಗಿನ ಕೇಂದ್ರ ಸರ್ಕಾರ ಅತ್ಯಂತ ಆಕ್ರಮಣಕಾರಿಯಾಗಿ ನಡೆದುಕೊಳ್ಳುತ್ತಿದೆ ಎಂದಿದ್ದಾರೆ.

    ಕರ್ನಾಟಕ ಮತ್ತು ತಮಿಳುನಾಡು ಕಾವೇರಿ ವಿಚಾರದ ಮೂಲಕ ಒಡೆದುಹೋಗಬಾರದು.ನಮ್ಮ ಅಸ್ಮಿತೆಗಳ ರಕ್ಷಣೆಗಾಗಿ ನಾವು ಈಗ ಒಗ್ಗಟ್ಟಿನಿಂದ ಇರಬೇಕಾದ ಕಾಲ ಎಂಬುದನ್ನು ಸ್ಟಾಲಿನ್ ಗಮನಿಸಬೇಕು. ತಮಿಳುನಾಡು ಸರ್ಕಾರ ಮೇಕೆದಾಟು ಜಲಾಶಯವನ್ನು ಆಗಲು ಬಿಡಲಿ.ಇದರಿಂದ ತಮಿಳುನಾಡಿಗೆ ಯಾವ ತೊಂದರೆಯೂ ಇಲ್ಲ ಎಂಬುದನ್ನು ಈಗಾಗಲೇ ವಿವರಿಸಲಾಗಿದೆ.ಇದು ನೀರಾವರಿ ಉದ್ದೇಶದ ಯೋಜನೆಯಲ್ಲ.ಬದಲಿಗೆ ಕುಡಿಯುವ ನೀರಿನ ಉದ್ದೇಶದ ಯೋಜನೆಯಾಗಿದೆ.ಈ ವಿಚಾರವನ್ನು ಸ್ಟಾಲಿನ್ ಅವರು ಗಮನಿಸಬೇಕು ಎಂದು ಹೇಳಿದ್ದಾರೆ.

    ಜಲಾಶಯದ ವಿಚಾರದಲ್ಲಿ ಕರ್ನಾಟಕದೊಂದಿಗೆ ಸಹಕರಿಸಬೇಕು. ಕಳೆದ ಮೂರ್ನಾಲ್ಕು ವರ್ಷಗಳಿಂದ ಕರ್ನಾಟಕ ತಮಿಳುನಾಡಿಗೆ ನಿಗದಿಗಿಂತಲೂ ಹೆಚ್ಚಿನ ಪ್ರಮಾಣದ ನೀರು ಕೊಟ್ಟಿದೆ. ಪಕೃತಿ ಸಹಕರಿಸಿದಾಗ ಹೆಚ್ಚಿನ ನೀರನ್ನು ಹರಿಸಿದೆ. ಬರಗಾಲದಂಥ ಸಂದರ್ಭದಲ್ಲೂ ಕರ್ನಾಟಕವು ತಮಿಳುನಾಡಿಗೆ ಎಂದೂ ದ್ರೋಹ ಬಗೆದಿಲ್ಲ. ಹೀಗಾಗಿ ನೀರಿನ ಹಂಚಿಕೆ ವಿಚಾರದಲ್ಲಿ ಸೋದರ ಸ್ಟಾಲಿನ್ ಅವರಿಗೆ ಯಾವ ಅನುಮಾನಗಳೂ, ಆತಂಕಗಳೂ ಬೇಡ ಎಂದಿದ್ದಾರೆ.

    ತಮಿಳುನಾಡು ರೈತರನ್ನು ವಂಚಿಸಿ ಕರ್ನಾಟಕ ತನ್ನ ರೈತರನ್ನು ರಕ್ಷಿಸಿದ ಉದಾಹರಣೆ ಇಲ್ಲ. ರೈತರೆಂದರೆ ರೈತರೇ, ಭೂಮಿತಾಯಿಯ ಮಕ್ಕಳು. ನಮ್ಮ ಅಣ್ಣ ತಮ್ಮಂದಿರು.ಕಾವೇರಿ ವಿಚಾರದಲ್ಲಿ ಈಗ ನಾವಿಬ್ಬರು. ಅಂದರೆ ರಾಜಕಾರಣಿಗಳೂ ಅಣ್ಣತಮ್ಮಂದಿರಾಗೋಣ.ಸೋದರ ಭಾವನೆಯೊಂದಿಗೆ ಸ್ಟಾಲಿನ್ ಒಂದು ಹೆಜ್ಜೆ ಮುಂದೆ ಬಂದರೆ ನಾನಂತೂ ಎರಡು ಹೆಜ್ಜೆ ಮುಂದಿಡುವೆ.ಕಾವೇರಿಗಾಗಿ ಎರಡೂ ರಾಜ್ಯಗಳು ಕಲಹಕ್ಕಿಳಿದಿದ್ದು ಸಾಕು. ದಕ್ಷಿಣ ಭಾರತೀಯರಾಗಿ ಈಗ ನಾವು ಕಲಹ ಮಾಡುವ ಸಂದರ್ಭವಿಲ್ಲ. ಸೋದರತೆ ಮೂಲಕ ಇದನ್ನು ಬಗೆಹರಿಸಿಕೊಳ್ಳಬೇಕು.ಈ ಮೂಲಕ ನಾವು ಒಗ್ಗಟ್ಟಾಗೇ ಉಳಿಯಬೇಕು.ಸ್ಟಾಲಿನ್ ಅವರ ಅಧಿಕಾರವಧಿಯಲ್ಲಿ ಈ ಪ್ರಯತ್ನ ಆಗಲಿ.ಅದಕ್ಕೆ ನನ್ನ ಬೆಂಬಲ ಇರಲಿದೆ. ಈ ರಾಜ್ಯಗಳ ಸೋದರತೆ ರಕ್ಷಣೆ ಈಗಿನ ಅಗತ್ಯ ಎಂದು ಕುಮಾರಸ್ವಾಮಿ ಟ್ವೀಟ್ ಮಾಡುವ ಮೂಲಕವಾಗಿ ತಿಳಿಸಿದ್ದಾರೆ.