Tag: M K Stalin

  • ಹಿಮಾಲಯದಿಂದ ಬಂದು ರಾಜಕೀಯ ಮುಖಂಡರಿಗೆ ವಿಶ್ ಮಾಡಿದ ನಟ ರಜನಿ

    ಹಿಮಾಲಯದಿಂದ ಬಂದು ರಾಜಕೀಯ ಮುಖಂಡರಿಗೆ ವಿಶ್ ಮಾಡಿದ ನಟ ರಜನಿ

    ಹೆಸರಾಂತ ನಟ ರಜನಿಕಾಂತ್ (Rajinikanth) ಹಿಮಾಲಯಕ್ಕೆ ಹೋಗುವ ಮುನ್ನ ‘ನಾನು ರಾಜಕೀಯ ಪ್ರಶ್ನೆಗಳಿಗೆ ಉತ್ತರಿಸಲ್ಲ’ ಎಂದು ಹೇಳಿಕೆ ನೀಡಿದ್ದರು. ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರೇ ಮತ್ತೆ ಪ್ರಧಾನಿ ಆಗಬಹುದಾ ಎನ್ನುವ ಪ್ರಶ್ನೆಗೆ ಅವರು ಮಾತನಾಡಲು ನಿರಾಕರಿಸಿದ್ದರು. ಈಗ ಹಿಮಾಲಯದಿಂದ ಬಂದಿರೋ ರಜನಿ, ಮೂವರು ಪ್ರಮುಖ ಮುಖಂಡರಿಗೆ ಶುಭಾಶಯ ಕೋರಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ (Narendra Modi), ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ (M.K. Stalin) ಹಾಗೂ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು (Chandrababu Naidu) ಅವರಿಗೆ ರಜನಿಕಾಂತ್ ಶುಭಾಶಯಗಳನ್ನು ತಿಳಿಸಿದ್ದಾರೆ. ಜೊತೆಗೆ ಎನ್.ಡಿ.ಎ ಮಿತ್ರಕೂಟಕ್ಕೂ ಅವರು ಗೆಲುವಿನ ಶುಭಾಶಯಗಳನ್ನು ತಿಳಿಸಿದ್ದಾರೆ.

     

    ಒಂದು ವಾರಗಳ ಕಾಲ ಹಿಮಾಲಯದ ಪ್ರವಾಸದಲ್ಲಿದ್ದ ರಜನಿಕಾಂತ್, ಅಲ್ಲಿನ ನಾನಾ ದೇವಸ್ಥಾನಗಳಿಗೆ ಭೇಟಿ ನೀಡಿ ದರ್ಶನ ಪಡೆದಿದ್ದರು. ತಮ್ಮ ಇಷ್ಟದ ಗುಹೆಯಲ್ಲಿ ಧ್ಯಾನದಲ್ಲಿ ಮಗ್ನರಾಗಿದ್ದರು. ಈಗ ಅಲ್ಲಿಂದ ರಜನಿ ವಾಪಸ್ಸಾಗಿದ್ದಾರೆ.

  • `ಸನಾತನ ಧರ್ಮ ಡೆಂಗ್ಯೂ, ಮಲೇರಿಯಾ ಇದ್ದಂತೆ’ ಎಂದಿದ್ದ ಉದಯನಿಧಿಗೆ ಬೆಂಗ್ಳೂರು ಕೋರ್ಟ್‌ನಿಂದ ಸಮನ್ಸ್

    `ಸನಾತನ ಧರ್ಮ ಡೆಂಗ್ಯೂ, ಮಲೇರಿಯಾ ಇದ್ದಂತೆ’ ಎಂದಿದ್ದ ಉದಯನಿಧಿಗೆ ಬೆಂಗ್ಳೂರು ಕೋರ್ಟ್‌ನಿಂದ ಸಮನ್ಸ್

    – ಖುದ್ದು ವಿಚಾರಣೆಗೆ ಹಾಜರಾಗಲು ಸೂಚನೆ

    ಬೆಂಗಳೂರು: ಸನಾತನ ಧರ್ಮ (Sanatan Dharma) ಡೆಂಗ್ಯೂ, ಮಲೇರಿಯಾ ಇದ್ದಂತೆ ಅಂತ ವಿವಾದಾತ್ಮಕ ಹೇಳಿಕೆ ನೀಡಿದ್ದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್‌ಗೆ ಬೆಂಗಳೂರು ಕೋರ್ಟ್ (Bengaluru Court) ಸಮನ್ಸ್ ನೀಡಿದೆ.

    ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್‌ಗೆ (Udhayanidhi Stalin) ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಮನ್ಸ್‌ ನೀಡಿದ್ದು, ಖುದ್ದಾಗಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಮಾರ್ಚ್ 4 ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ನೀಡಲಾಗಿದೆ. ಇದನ್ನೂ ಓದಿ: ಸನಾತನ ಧರ್ಮವನ್ನು ಕೊನೆವರೆಗೂ ವಿರೋಧಿಸುತ್ತೇನೆ: ಉದಯನಿಧಿ ಸ್ಟಾಲಿನ್‌

    ಬೆಂಗಳೂರಿನ ಪರಮೇಶ್ ಎಂಬುವವರು ಉದಯನಿಧಿ ಹೇಳಿಕೆ ವಿರುದ್ಧ ಖಾಸಗಿ ದೂರು ಸಲ್ಲಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ 42ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶರಾದ ಜೆ. ಪ್ರೀತ್ ಅವರಿದ್ದ ಪೀಠ ಸಮನ್ಸ್‌ ಜಾರಿಗೊಳಿಸಿದೆ. ಇದನ್ನೂ ಓದಿ: ಸನಾತನ ಧರ್ಮದ ಬಗ್ಗೆ ಮಾತನಾಡಿದ್ದಕ್ಕೆ ಚಿಕ್ಕ ಮಗುವನ್ನ ಬೇಟೆಯಾಡ್ತಿದ್ದಾರೆ; ಉದಯನಿಧಿ ಸ್ಟಾಲಿನ್‌ ಬೆಂಬಲಿಸಿದ ಕಮಲ್‌

    ಏನಿದು ಪ್ರಕರಣ?
    2023ರ ಸೆಪ್ಟೆಂಬರ್‌ 3 ರಂದು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಸನಾತನನ ಧರ್ಮವು ಡೆಂಗ್ಯೂ, ಮಲೇರಿಯಾ ಇದ್ದಂತೆ. ಅದನ್ನು ನಿರ್ಮೂಲನೆ ಮಾಡಬೇಕೇ ಹೊರತು, ವಿರೋಧಿಸಬಾರದು ಎಂದು ಉದಯನಿಧಿ ಸ್ಟಾಲಿನ್‌ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದನ್ನೂ ಓದಿ: ಬಿಜೆಪಿ 400ಕ್ಕೂ ಹೆಚ್ಚು ಕ್ಷೇತ್ರ ಗೆಲ್ಲಲಿದೆ- ಖರ್ಗೆ ಹೇಳಿಕೆಗೆ ಜೋರಾಗಿ ನಕ್ಕ ಪ್ರಧಾನಿ

    ಸನಾತನ ಧರ್ಮದ ನಿರ್ಮೂಲನೆ ಆಗಬೇಕು. ಅದು ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದೆ ಎಂದು ಕರೆ ನೀಡಿದ್ದರು. “ಕೆಲವು ವಿಷಯಗಳನ್ನು ವಿರೋಧಿಸಲು ಸಾಧ್ಯವಿಲ್ಲ. ಅದನ್ನು ನಿರ್ಮೂಲನೆ ಮಾಡಬೇಕು. ನಾವು ಡೆಂಗ್ಯೂ, ಸೊಳ್ಳೆಗಳು, ಮಲೇರಿಯಾ ಅಥವಾ ಕೊರೊನಾ ವೈರಸ್ ಅನ್ನು ವಿರೋಧಿಸಲು ಸಾಧ್ಯವಿಲ್ಲ. ಇದನ್ನು ನಿರ್ಮೂಲನೆ ಮಾಡಬೇಕು. ಅದೇ ರೀತಿ ಸನಾತನವನ್ನು ನಿರ್ಮೂಲನೆ ಮಾಡಬೇಕು ಎಂದು ಕರೆ ಕೊಟ್ಟಿದ್ದರು. ಈ ಸಂಬಂಧ ದೇಶಾದ್ಯಂತ ಪ್ರತಿಪಕ್ಷ ನಾಯಕರಿಂದ ವಿರೋಧ ವ್ಯಕ್ತವಾಗಿತ್ತು.

  • ‘ಮಿಚಾಂಗ್’‌ ಎಫೆಕ್ಟ್‌; 5,060 ಕೋಟಿ ಪರಿಹಾರ ನೀಡಿ – ಪ್ರಧಾನಿಗೆ ತ.ನಾಡು ಸಿಎಂ ಪತ್ರ

    ‘ಮಿಚಾಂಗ್’‌ ಎಫೆಕ್ಟ್‌; 5,060 ಕೋಟಿ ಪರಿಹಾರ ನೀಡಿ – ಪ್ರಧಾನಿಗೆ ತ.ನಾಡು ಸಿಎಂ ಪತ್ರ

    ಚೆನ್ನೈ: ತಮಿಳುನಾಡಿನಲ್ಲಿ (Tamil Nadu) ಮಿಚಾಂಗ್‌ ಚಂಡಮಾರುತದಿಂದ (Cyclone Michaung) ಅಪಾರ ಪ್ರಮಾಣದ ಹಾನಿಯಾಗಿದೆ. ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ (M.K.Stalin) ಬುಧವಾರ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಪರಿಹಾರಕ್ಕೆ ಮನವಿ ಮಾಡಿದ್ದಾರೆ.

    ತಕ್ಷಣದ ಮಧ್ಯಂತರ ಪರಿಹಾರವಾಗಿ 5,060 ಕೋಟಿ ರೂ. ನೀಡುವಂತೆ ಪ್ರಧಾನಿಗೆ ಕೇಳಿಕೊಂಡಿದ್ದಾರೆ. ರಾಜ್ಯದಲ್ಲಿ ಚಂಡಮಾರುತದಿಂದ ಆಗಿರುವ ಹಾನಿಯನ್ನು ಪರಿಶೀಲಿಸಲು ಕೇಂದ್ರ ತಂಡವನ್ನು ಕಳುಹಿಸುವಂತೆ ಸಿಎಂ ಸ್ಟಾಲಿನ್ ಪ್ರಧಾನಿಗೆ ಮನವಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಮಿಚಾಂಗ್‌ ಚಂಡಮಾರುತ ಅಬ್ಬರ, ಕಾಳಹಸ್ತಿಗೆ ಜಲದಿಗ್ಬಂಧನ – ಕರ್ನಾಟಕದಲ್ಲೂ ಮುಂದಿನ 5 ದಿನ ಮಳೆ ಸಾಧ್ಯತೆ

    ದೆಹಲಿಯಲ್ಲಿರುವ ಡಿಎಂಕೆ ಸಂಸದ ಟಿಆರ್ ಬಾಲು ಅವರು ಪ್ರಧಾನಿ ಮೋದಿಯವರಿಗೆ ಖುದ್ದಾಗಿ ಪತ್ರವನ್ನು ನೀಡಲಿದ್ದಾರೆ. ಬುಧವಾರ ಬೆಳಗ್ಗೆ ತಮಿಳುನಾಡು ಸಿಎಂ ಕೂಡ ಚಂಡಮಾರುತ ಪೀಡಿತ ಪ್ರದೇಶಗಳನ್ನು ಪರಿಶೀಲಿಸಿದ್ದಾರೆ.

    ನಮ್ಮನ್ನು ಸುತ್ತುವರಿದಿರುವ ಮಿಚಾಂಗ್ ಚಂಡಮಾರುತದ ದುಷ್ಪರಿಣಾಮಗಳನ್ನು ತ್ವರಿತವಾಗಿ ನಿರ್ವಹಿಸಲು ಸಚಿವರು, ಅಧಿಕಾರಿಗಳು, ಪೊಲೀಸರು, ನೈರ್ಮಲ್ಯ ಕಾರ್ಯಕರ್ತರು ಮತ್ತು ಕಾರ್ಪೊರೇಷನ್ ಕಾರ್ಮಿಕರನ್ನೊಳಗೊಂಡ ಇಡೀ ಸರ್ಕಾರ ಶ್ರಮಿಸುತ್ತಿದೆ. ಇನ್ನೂ ಅನೇಕ ಸಹೋದ್ಯೋಗಿಗಳು ತಕ್ಷಣ ಪರಿಹಾರಕ್ಕೆ ಕೈಜೋಡಿಸಬೇಕು ಎಂದು ನಾನು ವಿನಂತಿಸುತ್ತೇನೆ. ಕ್ಷೇತ್ರದಲ್ಲಿ ಸಹಾಯ ಮಾಡುವ ಕ್ಲಬ್‌ನ ಸದಸ್ಯರೊಂದಿಗೆ ಕೆಲಸ ಮಾಡಿ. ಪೀಡಿತ ಪ್ರದೇಶಗಳ ಸದಸ್ಯರು ಬೇಗನೆ ಬನ್ನಿ ಎಂದು ಎಕ್ಸ್‌ನಲ್ಲಿ ಸ್ಟಾಲಿನ್‌ ಪೋಸ್ಟ್‌ ಹಾಕಿದ್ದಾರೆ. ಇದನ್ನೂ ಓದಿ: ವಿಭಜನೆಯ ಸಿದ್ಧಾಂತ 70 ವರ್ಷದಿಂದ ಬಂದ ಅಭ್ಯಾಸ, ಜನ ಈಗ ಎಚ್ಚೆತ್ತಿದ್ದಾರೆ: ಕಾಂಗ್ರೆಸ್ಸನ್ನು ಕುಟುಕಿದ ಮೋದಿ

    ಮಿಚಾಂಗ್ ಚಂಡಮಾರುತದಿಂದ ಉಂಟಾದ ಭಾರೀ ಮಳೆಯ ನಂತರ ಚೆನ್ನೈನಲ್ಲಿ ಪ್ರವಾಹವು ಇಲ್ಲಿಯವರೆಗೆ 17 ಜನರನ್ನು ಬಲಿ ತೆಗೆದುಕೊಂಡಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

    ಅಡ್ಯಾರ್ ನದಿ ತೀರದ ತಗ್ಗು ಪ್ರದೇಶಗಳಲ್ಲಿ ವಾಸಿಸುವವರಿಗೆ ಗ್ರೇಟರ್ ಚೆನ್ನೈ ಕಾರ್ಪೊರೇಷನ್‌ನ ಸಮನ್ವಯದೊಂದಿಗೆ ಜಿಸಿಪಿ ಸಾರ್ವಜನಿಕ ವಿಳಾಸ ವ್ಯವಸ್ಥೆಯ ಮೂಲಕ ಪ್ರವಾಹ ಎಚ್ಚರಿಕೆ ಪ್ರಕಟಣೆಗಳನ್ನು ಮಾಡುತ್ತಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

    ನಗರದಲ್ಲಿ ಪ್ರವಾಹದಂತೆ ಕೂಡಿರುವ ಮಳೆನೀರನ್ನು ಹೊರಹಾಕುವ ಪ್ರಯತ್ನ ನಡೆಯುತ್ತಿದೆ. ತಮಿಳುನಾಡಿನ ಕೊಯಮತ್ತೂರು ಪಾಲಿಕೆಯು, ಪ್ರವಾಹ ಪರಿಹಾರ ಕಾರ್ಯಾಚರಣೆಗಳಿಗಾಗಿ ಚೆನ್ನೈಗೆ ಹನ್ನೆರಡು 41-HP ಮೋಟಾರ್‌ಗಳನ್ನು ಕಳುಹಿಸಿದೆ.

  • ತ.ನಾಡಿಗೆ ಕಾವೇರಿ ನೀರು ಬಿಡುವಂತೆ ಕರ್ನಾಟಕಕ್ಕೆ ಕೇಂದ್ರ ನಿರ್ದೇಶನ ನೀಡಬೇಕು: ವಿಧಾನಸಭೆಯಲ್ಲಿ ಸ್ಟಾಲಿನ್‌ ನಿರ್ಣಯ ಮಂಡನೆ

    ತ.ನಾಡಿಗೆ ಕಾವೇರಿ ನೀರು ಬಿಡುವಂತೆ ಕರ್ನಾಟಕಕ್ಕೆ ಕೇಂದ್ರ ನಿರ್ದೇಶನ ನೀಡಬೇಕು: ವಿಧಾನಸಭೆಯಲ್ಲಿ ಸ್ಟಾಲಿನ್‌ ನಿರ್ಣಯ ಮಂಡನೆ

    ಚೆನ್ನೈ: ತಮಿಳುನಾಡು (Tamil Nadu) ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ (M.K.Stalin) ಇಂದು (ಸೋಮವಾರ) ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದಂತೆ ಕಾವೇರಿ ನೀರು ಬಿಡಲು ಕರ್ನಾಟಕಕ್ಕೆ ನಿರ್ದೇಶನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಿದ್ದಾರೆ.

    ಈ ಹಿಂದೆ ಕರ್ನಾಟಕ ಸರ್ಕಾರ ತನ್ನ ರಾಜ್ಯದ ಕೆಲವು ಭಾಗಗಳಲ್ಲಿ ತೀವ್ರ ಬರಗಾಲವನ್ನು ಉಲ್ಲೇಖಿಸಿ ತಮಿಳುನಾಡಿಗೆ ನೀರು ಹರಿಸುವುದನ್ನು ನಿರಾಕರಿಸಿತ್ತು. ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಿಗೆ ಸಂಚಿತ ಒಳಹರಿವು ಕಡಿಮೆಯಾಗುತ್ತಿದೆ ಎಂದು ಕರ್ನಾಟಕ ಡಿಸಿಎಂ ಡಿ.ಕೆ. ಶಿವಕುಮಾರ್ (D.K.Shivakumar) ಅ.5 ರಂದು ಹೇಳಿದ್ದಾರೆ. ಜಲಾಶಯಗಳಲ್ಲಿ ನೀರು ಅಗತ್ಯಕ್ಕಿಂತ ಅರ್ಧದಷ್ಟು ಇದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೆಆರ್‌ಎಸ್‌ ಡ್ಯಾಂನಿಂದ ತಮಿಳುನಾಡಿಗೆ ಮುಂದುವರಿದ ನೀರು ಬಿಡುಗಡೆ; ಈಗ ನೀರು ಎಷ್ಟಿದೆ?

    ನಮಗೆ 106 ಸಾವಿರ ಮಿಲಿಯನ್ ಕ್ಯೂಬಿಕ್ ಅಡಿ (ಟಿಎಂಸಿ) ನೀರು (ಜಲಾಶಯಗಳಲ್ಲಿ) ಬೇಕು. ಆದರೆ ನಮ್ಮ ಜಲಾಶಯಗಳಲ್ಲಿ ಪ್ರಸ್ತುತ 56 ಟಿಎಂಸಿ ನೀರಿದೆ. ಸಣ್ಣ ಮಳೆಯ ನಂತರ ನಮಗೆ ಸುಮಾರು 25 ಕ್ಯೂಸೆಕ್ಸ್ (ಸೆಕೆಂಡಿಗೆ ಘನ ಅಡಿ) ನೀರು ಬಂದಿದೆ. ಒಳಹರಿವು ಕಡಿಮೆಯಾಗುತ್ತಿದೆ ಎಂದು ಡಿಕೆಶಿ ತಿಳಿಸಿದ್ದಾರೆ.

    ಜಲಾಶಯಗಳಲ್ಲಿ ನೀರಿನ ಕೊರತೆಯಿಂದಾಗಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಮುಂದಿನ ಬೆಳೆಗಳನ್ನು ಬೆಳೆಯಲು ಅವಕಾಶ ನೀಡದಿರಲು ಕೃಷಿ ಇಲಾಖೆಗೆ ಸೂಚಿಸಲಾಗಿದೆ. ನಾವು ಬೆಳೆದ ಬೆಳೆಗಳನ್ನು ಉಳಿಸಬೇಕು, ಬರ ಘೋಷಿಸಲಾಗಿದೆ. ಮುಂದಿನ ಕೃಷಿಗೆ ಅವಕಾಶ ನೀಡದಂತೆ ಪರಿಗಣಿಸುವಂತೆ ಕೃಷಿ ಇಲಾಖೆಗೆ ಮನವಿ ಮಾಡಿದ್ದೇವೆ. ಹೆಚ್ಚು ಮಳೆಯ ನಿರೀಕ್ಷೆಯಲ್ಲಿದ್ದೇವೆ. ಈ ವರ್ಷ ಸಂಕಷ್ಟದ ವರ್ಷವಾಗಿದೆ ಎಂದು ಶಿವಕುಮಾರ್ ಹೇಳಿದ್ದಾರೆ. ಇದನ್ನೂ ಓದಿ: 5 ರಾಜ್ಯಗಳ ವಿಧಾನಸಭಾ ಚುನಾವಣೆ ದಿನಾಂಕ ಇಂದು ಪ್ರಕಟ

    ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಎರಡೂ ರಾಜ್ಯಗಳ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳು ಸುದೀರ್ಘ ಹಗ್ಗಜಗ್ಗಾಟ ನಡೆಸಿವೆ. ಈ ನದಿಯು ಎರಡು ರಾಜ್ಯಗಳ ಜನರಿಗೆ ಜೀವನಾಧಾರದ ಪ್ರಮುಖ ಮೂಲವಾಗಿದೆ.

    ಸೆ.28 ರಿಂದ ಅ.15 ರ ವರೆಗೆ ಬಿಳಿಗುಂಡ್ಲುವಿಗೆ 3,000 ಕ್ಯೂಸೆಕ್ ಕಾವೇರಿ ನೀರು ಬಿಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಕರ್ನಾಟಕಕ್ಕೆ ಆದೇಶಿಸಿತ್ತು. ಕರ್ನಾಟಕವು ಈ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಎರಡರಲ್ಲೂ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಿತ್ತು. ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹಿಂದೆ ಕಾವೇರಿ ನೀರು ನಿಯಂತ್ರಣ ಸಮಿತಿಯ (CWRC) ಶಿಫಾರಸಿನ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಒಡಿಶಾ ರೈಲು ದುರಂತದಲ್ಲಿ ಮೃತಪಟ್ಟವರ ಕುಟುಂಬ, ಗಾಯಾಳುಗಳಿಗೆ ಪರಿಹಾರ ಘೋಷಣೆ

    ಒಡಿಶಾ ರೈಲು ದುರಂತದಲ್ಲಿ ಮೃತಪಟ್ಟವರ ಕುಟುಂಬ, ಗಾಯಾಳುಗಳಿಗೆ ಪರಿಹಾರ ಘೋಷಣೆ

    – ಪರಿಹಾರ ಘೋಷಿಸಿದ ಪಿಎಂಎನ್‌ಆರ್‌ಎಫ್, ರೈಲ್ವೇ ಇಲಾಖೆ ಹಾಗೂ ತಮಿಳುನಾಡು ಸರ್ಕಾರ

    ನವದೆಹಲಿ: ಒಡಿಶಾದಲ್ಲಿ (Odisha) ನಡೆದ ಭೀಕರ ರೈಲು ಅಪಘಾತದಿಂದಾಗಿ (Train Accident) 261 ಮಂದಿ ಸಾವನ್ನಪ್ಪಿದ್ದು, 900 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಹಿನ್ನೆಲೆ ಪಿಎಂಎನ್‌ಆರ್‌ಎಫ್, ತಮಿಳುನಾಡು ಸರ್ಕಾರ ಹಾಗೂ ರೈಲ್ವೇ ಇಲಾಖೆ ಘಟನೆಗೆ ಸಂತಾಪ ಸೂಚಿಸಿ ಮೃತರಿಗೆ ಹಾಗೂ ಗಾಯಾಳುಗಳಿಗೆ ಪರಿಹಾರ (Compensation) ಘೋಷಿಸಿದೆ.

    ಶುಕ್ರವಾರ ಒಡಿಶಾದಲ್ಲಿ ನಡೆದ ರೈಲು ದುರಂತಕ್ಕೆ ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ (PMNRF) ಪರಿಹಾರ ಘೋಷಿಸಲಾಗಿದೆ. ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ 50,000 ರೂ. ಪರಿಹಾರ ಘೋಷಿಸಿದೆ. ಇದನ್ನೂ ಓದಿ: ರೈಲು ದುರಂತ – ಕನ್ನಡಿಗರ ಸುರಕ್ಷತೆ ಮೇಲ್ವಿಚಾರಣೆಗೆ ಸಚಿವ ಸಂತೋಷ್ ಲಾಡ್ ನಿಯೋಜನೆ

    ಅದೇ ರೀತಿ ರೈಲ್ವೇ ಸಚಿವಾಲಯವು (Ministry of Railways) ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ., ಗಂಭೀರ ಗಾಯಗೊಂಡವರಿಗೆ 2 ಲಕ್ಷ ರೂ. ಹಾಗೂ ಅಲ್ಪ ಪ್ರಮಾಣದಲ್ಲಿ ಗಾಯಗೊಂಡವರಿಗೆ 50,000 ರೂ. ಪರಿಹಾರವನ್ನು ಘೋಷಿಸಿದೆ. ಈ ಕುರಿತು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ (Ashwini Vaishnav), ಗಾಯಾಳುಗಳು ಶೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ಮೃತರ ಕುಟುಂಬಕ್ಕೆ ಸಂತಾಪವನ್ನು ಸೂಚಿಸಿದ್ದಾರೆ. ಶನಿವಾರ ಮುಂಜಾನೆ ಅಪಘಾತ ಸ್ಥಳಕ್ಕೆ ಭೇಟಿ ನೀಡಿದ ಅವರು, ಅಪಘಾತದ ಬಗ್ಗೆ ವಿವರವಾದ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ಇದನ್ನೂ ಓದಿ: Odisha Train Accident; 48 ರೈಲು ಸಂಚಾರ ರದ್ದು, 39 ರೈಲುಗಳ ಮಾರ್ಗ ಬದಲಾವಣೆ

    ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ (Naveen Patnaik) ಬಾಲಸೋರ್ ಜಿಲ್ಲಾ ಆಸ್ಪತ್ರೆಗೆ ಆಗಮಿಸಿ ರೈಲು ಅಪಘಾತದಲ್ಲಿ ಗಾಯಗೊಂಡ ಜನರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದು, ಒಡಿಶಾದಲ್ಲಿ ಇಂದು (ಶನಿವಾರ) ಶೋಕಾಚರಣೆಯನ್ನು ಘೋಷಿಸಿದ್ದಾರೆ. ಅಂತೆಯೇ ತಮಿಳುನಾಡು (Tamil Nadu) ಸರ್ಕಾರ ಅಪಘಾತಕ್ಕೀಡಾದ ತಮಿಳುನಾಡಿನ ಜನರಿಗೆ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ (M.K.Stalin) ಅವರು ದುರ್ಘಟನೆ ಬಗ್ಗೆ ಸಂತಾಪ ವ್ಯಕ್ತಪಡಿಸಿ, ತಮಿಳುನಾಡು ಮೂಲದ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಹಾಗೂ ಗಾಯಾಳುಗಳಿಗೆ 1 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ಅಪಘಾತ; ಸಂಚಾರ ರದ್ದಾಗಿ ಬೆಂಗ್ಳೂರಲ್ಲೇ ನಿಂತ ಬೆಂಗಳೂರು-ಗುವಾಹಟಿ ರೈಲು

    ದುರಂತಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi), ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸೇರಿದಂತೆ ಅನೇಕ ಗಣ್ಯರು ವಿಷಾದ ವ್ಯಕ್ತಪಡಿಸಿದ್ದಾರೆ. ಅನೇಕ ಗಣ್ಯರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಅಗತ್ಯ ನೆರವು ಒದಗಿಸುವ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ದೊಡ್ಡಮಟ್ಟದ ಸದ್ದು ಕೇಳಿಬಂತು; ದುರಂತದ ಘನಘೋರ ದೃಶ್ಯ ಬಿಚ್ಚಿಟ್ಟ ಕನ್ನಡಿಗ

  • ಕಾರ್ಖಾನೆಗಳಲ್ಲಿ ದಿನಕ್ಕೆ 12 ಗಂಟೆ ಕೆಲಸ – ಕಾಯ್ದೆಯನ್ನು ಹಿಂತೆಗೆದುಕೊಂಡ ತಮಿಳುನಾಡು ಸರ್ಕಾರ

    ಕಾರ್ಖಾನೆಗಳಲ್ಲಿ ದಿನಕ್ಕೆ 12 ಗಂಟೆ ಕೆಲಸ – ಕಾಯ್ದೆಯನ್ನು ಹಿಂತೆಗೆದುಕೊಂಡ ತಮಿಳುನಾಡು ಸರ್ಕಾರ

    ಚೆನ್ನೈ: ಕೆಲಸದ ಸಮಯವನ್ನು ದಿನಕ್ಕೆ 12 ಗಂಟೆಗೆ ವಿಸ್ತರಿಸಿದ್ದ ಕಾರ್ಖಾನೆಗಳ ತಿದ್ದುಪಡಿ ಕಾಯ್ದೆ 2023 ಅನ್ನು (Factories Amendment Act 2023) ಕಾರ್ಮಿಕರ (Labor)  ಹಿತದೃಷ್ಟಿಯಿಂದ ಹಿಂತೆಗೆದುಕೊಳ್ಳಲಾಗಿದೆ ಎಂದು ತಮಿಳುನಾಡಿನ (Tamil Nadu) ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ (M K Stalin) ಸೋಮವಾರ ಹೇಳಿದ್ದಾರೆ.

    ಮೇ ಡೇ ಪಾರ್ಕ್‌ನಲ್ಲಿ ಮೇ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಸ್ಟಾಲಿನ್, ಕಾರ್ಖಾನೆಗಳ ತಿದ್ದುಪಡಿ ಕಾಯಿದೆ 2023, ಕೈಗಾರಿಕೆಗಳಿಗೆ ದಿನಕ್ಕೆ 12 ಗಂಟೆ ಎಂದರೆ ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಗಳವರೆಗೆ ಇದ್ದ ಕೆಲಸದ ಸಮಯವನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

    ಕಾರ್ಮಿಕರ ಕಲ್ಯಾಣ ದೃಷ್ಟಿಯಿಂದ ನಾವು ಯಾವುದೇ ಪರಿಸ್ಥಿತಿಯಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಕೈಗಾರಿಕೆಗಳು ಬೆಳೆಯಬೇಕು ಮತ್ತು ಕಾರ್ಮಿಕರ ಏಳಿಗೆಯಾಗಬೇಕು. ನಾನು ಎಂದಿಗೂ ಮಣಿಯುವುದನ್ನು ಅವಮಾನ ಎಂದು ಪರಿಗಣಿಸಲ್ಲ. ನಾನು ಅದನ್ನು ಹೆಮ್ಮೆಯ ವಿಷಯ ಎಂದು ಪರಿಗಣಿಸಿದ್ದೇನೆ. ಏಕೆಂದರೆ ಶಾಸನವನ್ನು ಖಚಿತಪಡಿಸಿಕೊಳ್ಳಲು ಹಾಗೂ ಮಸೂದೆಯನ್ನು ಹಿಂಪಡೆಯಲು ಧೈರ್ಯ ಬೇಕಾಗುತ್ತದೆ ಎಂದರು. ಇದನ್ನೂ ಓದಿ: ರಾಹುಲ್ ಗಾಂಧಿ ಹುಚ್ಚ ಅಲ್ಲ ಅರೆಹುಚ್ಚ – ಮತ್ತೆ ನಾಲಗೆ ಹರಿಬಿಟ್ಟ ಯತ್ನಾಳ್

    ಏಪ್ರಿಲ್ 21 ರಂದು ತಮಿಳುನಾಡು ವಿಧಾನಸಭೆಯು ಕಾರ್ಖಾನೆಗಳ ತಿದ್ದುಪಡಿ ಕಾಯ್ದೆ 2023 ಅನ್ನು ಅಂಗೀಕರಿಸಿತು. ಇದು ರಾಜ್ಯದಾದ್ಯಂತ ಕಾರ್ಖಾನೆಗಳಲ್ಲಿನ ಉದ್ಯೋಗಿಗಳಿಗೆ 12 ಗಂಟೆಗಳವರೆಗೆ ಕಡ್ಡಾಯ ಕೆಲಸದ ಸಮಯವನ್ನು ವಿಸ್ತರಿಸಿತ್ತು. ಆದರೆ ಈ ಕಾಯ್ದೆ ವಿರುದ್ಧ ಹಲವು ವಿಪಕ್ಷಗಳು ಹಾಗೂ ಕಾರ್ಮಿಕರು ಪ್ರತಿಭಟನೆ ನಡೆಸಿರುವ ಹಿನ್ನೆಲೆ ಕಾರ್ಮಿಕರ ಹಿತದೃಷ್ಟಿಯಿಂದ ಇದನ್ನು ಹಿತೆಗೆದುಕೊಳ್ಳಲಾಗಿದೆ. ಇದನ್ನೂ ಓದಿ: ಭಾರತದ ಪ್ರಗತಿಗೆ ಗುಜರಾತ್‌ ವಿಶೇಷ ಕೊಡುಗೆ ನೀಡಿದೆ – ರಾಹುಲ್‌ ಗಾಂಧಿ

  • ಕಲ್ಯಾಣಿಯಲ್ಲಿ ಮುಳುಗಿ ಐವರು ಸಾವು

    ಕಲ್ಯಾಣಿಯಲ್ಲಿ ಮುಳುಗಿ ಐವರು ಸಾವು

    ಚೆನ್ನೈ: ಪಂಗುಣಿ (Panguni) ಆಚರಣೆಯ ಅಂಗವಾಗಿ ಕಲ್ಯಾಣಿಯಲ್ಲಿ ಸ್ನಾನಕ್ಕೆಂದು ತೆರಳಿದ ಐವರು ಪುರೋಹಿತರು ನೀರಿನಲ್ಲಿ ಮುಳುಗಿ ಸಾವನ್ನಪಿರುವ ಘಟನೆ ತಮಿಳುನಾಡಿನ (Tamil Nadu) ನಂಗನಲ್ಲೂರಿನ ಧರ್ಮಲಿಂಗೇಶ್ವರ ದೇವಸ್ಥಾನದ ಬಳಿ ನಡೆದಿದೆ.

    ಮೃತಪಟ್ಟವರನ್ನು ಸೂರ್ಯ (24), ರಾಘವನ್‌ (22), ಯೋಗೇಶ್ವರನ್‌ (23), ರಾಘವನ್‌ (18) ಹಾಗೂ ವನೇಶ್ (20) ಎಂದು ಗುರುತಿಸಲಾಗಿದೆ. ಪಂಗುಣಿ ಆಚರಣೆಯ ಅಂಗವಾಗಿ ನಂಗನಲ್ಲೂರಿನ ಧರ್ಮಲಿಂಗೇಶ್ವರ ದೇವಾಸ್ಥಾನದ ಪುರೋಹಿತರು 10:30ರ ವೇಳೆಗೆ ಸ್ನಾನಕ್ಕೆಂದು ಮೂವರಸಂಪೇಟ್‌ ದೇವಸ್ಥಾನದ ಬಳಿಯಿದ್ದ ಕಲ್ಯಾಣಿಗೆ ತೆರಳಿದ್ದರು. ಈ ವೇಳೆ ಒಬ್ಬರು ಕಾಲು ಜಾರಿ ಬಿದ್ದಿದ್ದಾರೆ. ಅವರನ್ನು ರಕ್ಷಿಸಲು ಹೋಗಿ ಇನ್ನುಳಿದವರು ಸಾವನ್ನಪ್ಪಿದ್ದಾರೆ. ಎಲ್ಲಾ ಶವಗಳನ್ನು ನೀರಿನಿಂದ ಹೊರತೆಗೆದಿದ್ದು, ಈ ಕುರಿತು ತನಿಖೆ ಕೈಗೊಂಡಿದ್ದೇವೆ ಎಂದು ಚೆನ್ನೈ (Chennai) ಪೊಲೀಸ್ ಕಮಿಷನರ್ ಶಂಕರ್ ಜಿವಾಲ್ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ವರನ ಕೊಲೆಗೆ ಸ್ಕೆಚ್‌ ಹಾಕಿ ಸ್ಫೋಟಕ ತುಂಬಿ ಗಿಫ್ಟ್‌ ಕೊಟ್ಟ ವಧುವಿನ ಮಾಜಿ ಲವ್ವರ್! 

    ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಐವರೂ ಚೆನ್ನೈನ ಮೂರು ಬೇರೆ ಬೇರೆ ಸ್ಥಳಗಳಿಗೆ ಸೇರಿದವರಾಗಿದ್ದು, ಅಗ್ನಿಶಾಮಕ ಮತ್ತು ರಕ್ಷಣಾ ತಂಡಗಳು ಶೋಧ ಕಾರ್ಯವನ್ನು ಮುಂದುವರೆಸುತ್ತಿದೆ ಎಂದು ಅಗ್ನಿಶಾಮಕ ಹಾಗೂ ರಕ್ಷಣಾ ಸೇವೆಗಳ ಡಿಜಿಪಿ ಅಭಾಷ್ ಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಕೇರಳದಲ್ಲಿ ರೈಲಿಗೆ ಬೆಂಕಿ ಹಚ್ಚಿ ಮೂವರ ಹತ್ಯೆ ಪ್ರಕರಣ – ಪರಾರಿಯಾಗಿದ್ದ ಆರೋಪಿ ಅರೆಸ್ಟ್

    ಘಟನಾ ಸ್ಥಳಕ್ಕೆ ಭೇಟಿ ನೀಡಿದ ತಮಿಳುನಾಡು ಗ್ರಾಮೀಣ ಕೈಗಾರಿಕಾ ಸಚಿವ ಟಿ.ಎಂ.ಅನ್ಬರಸನ್, ಇದು ತುಂಬಲಾರದ ನಷ್ಟವಾಗಿದ್ದು ವಿಧಿ ವಿಧಾನಗಳ ಬಗ್ಗೆ ಮೊದಲೇ ಪೊಲೀಸರಿಗೆ ತಿಳಿಸಿದ್ದರೆ ಈ ಅನಾಹುತವನ್ನು ತಪ್ಪಿಸಬಹುದಾಗಿತ್ತು ಎಂದು ಸಂತಾಪ ಸೂಚಿಸಿದರು. ಇದನ್ನೂ ಓದಿ: ಭಾರತದಲ್ಲಿ ಮುಸ್ಲಿಮರನ್ನ ಟಾರ್ಗೆಟ್‌ ಮಾಡಿ ಹಿಂಸಾಚಾರ – ಇಸ್ಲಾಮಿಕ್‌ ರಾಷ್ಟ್ರಗಳ ಆರೋಪಕ್ಕೆ ಭಾರತ ಕಿಡಿ 

    ಮೃತಪಟ್ಟ ಐವರೂ 18ರಿಂದ 23 ವರ್ಷದ ಯುವಕರಾಗಿದ್ದು, ಮೃತರ ಕುಟುಂಬಗಳಿಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ (M.K.Stalin) ತಲಾ 2 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ. ಇದನ್ನೂ ಓದಿ: 10ನೇ ತರಗತಿಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ – ಬಿಜೆಪಿಯ ಬಂಡಿ ಸಂಜಯ್ ಕುಮಾರ್ ಬಂಧನ

  • ಕಾರಿನಿಂದ ಇಳಿದು ಬೈಕ್ ಸವಾರನಿಗೆ ಸಹಾಯ ಮಾಡಿದ ಸ್ಟಾಲಿನ್

    ಕಾರಿನಿಂದ ಇಳಿದು ಬೈಕ್ ಸವಾರನಿಗೆ ಸಹಾಯ ಮಾಡಿದ ಸ್ಟಾಲಿನ್

    ಚೆನ್ನೈ: ಡಿಎಂಎಸ್ ಮೆಟ್ರೋ ನಿಲ್ದಾಣದ (DMS Metro Station) ಬಳಿ ಬೈಕ್‍ನಿಂದ ಬಿದ್ದು ಗಾಯಗೊಂಡ ವ್ಯಕ್ತಿಗೆ ತಮಿಳುನಾಡು (Tamil Nadu) ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ (MK Stalin) ಅವರು ಕಾರಿನಿಂದ ಇಳಿದು ಸಹಾಯ ಮಾಡಿದ್ದಾರೆ.

    ಎಂ.ಕೆ.ಸ್ಟಾಲಿನ್ ಅವರು, ರಾಜ್ಯ ಸಚಿವಾಲಯದಿಂದ ಅಣ್ಣಾ ಅರಿವಾಲಯಕ್ಕೆ (Anna Arivalayam) ತೆರಳುತ್ತಿದ್ದರು. ಆದರೆ ಈ ನಡುವೆ ಗಾಯಗೊಂಡ ಬೈಕ್ ಸವಾರನಿಗೆ ಸಹಾಯ ಮಾಡಲು ದಾರಿ ಮಧ್ಯೆ ಕಾರನ್ನು ನಿಲ್ಲಿಸಿದರು. ಇದನ್ನೂ ಓದಿ: ಬೆಲೆ ನಿಗದಿ ಪಡಿಸಿ ಎಂದು ಸರ್ಕಾರವನ್ನು ಒತ್ತಾಯಿಸಿದ 100ಕ್ಕೂ ಅಧಿಕ ರೈತರು ವಶಕ್ಕೆ

    ಸಿಎಂ ಜೊತೆಯಲ್ಲಿದ್ದ ತಂಡ ಹಾಗೂ ಪೊಲೀಸ್ ಅಧಿಕಾರಿಗಳು ವ್ಯಕ್ತಿಯನ್ನು ಆಟೋದಲ್ಲಿ ಕೂರಿಸಿ ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ಕರೆದೊಯ್ದರು. ಇದೀಗ ಈ ಘಟನೆಯ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಕಾರಿನಿಂದ ಇಳಿದು ಟ್ರಾಫಿಕ್ ಕ್ಲಿಯರ್ ಮಾಡಿದ ಸುಪ್ರಿಯಾ ಸುಲೆ

    Live Tv
    [brid partner=56869869 player=32851 video=960834 autoplay=true]

  • ಡಿಎಂಕೆ ಅಧ್ಯಕ್ಷರಾಗಿ 2ನೇ ಬಾರಿಗೆ ಎಂ.ಕೆ.ಸ್ಟಾಲಿನ್ ಅವಿರೋಧವಾಗಿ ಆಯ್ಕೆ

    ಡಿಎಂಕೆ ಅಧ್ಯಕ್ಷರಾಗಿ 2ನೇ ಬಾರಿಗೆ ಎಂ.ಕೆ.ಸ್ಟಾಲಿನ್ ಅವಿರೋಧವಾಗಿ ಆಯ್ಕೆ

    ಚೆನ್ನೈ: ಚೆನ್ನೈನಲ್ಲಿ ನಡೆದ ಡಿಎಂಕೆ (DMK) ಪಕ್ಷದ ಸಾಮಾನ್ಯ ಮಂಡಳಿ ಸಭೆಯಲ್ಲಿ ಇಂದು ಡಿಎಂಕೆ ಮುಖಂಡ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ (Tamil Nadu Chief Minister M K Stalin) ಅವರನ್ನು ಪಕ್ಷದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

    ಹೊಸದಾಗಿ ರಚನೆಯಾದ ಜನರಲ್ ಕೌನ್ಸಿಲ್‍ನಲ್ಲಿ, ಪಕ್ಷದ ಉನ್ನತ ಹುದ್ದೆಗೆ ಸ್ಟಾಲಿನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಡಿಎಂಕೆ ಘೋಷಣೆ ಮಾಡಿದೆ. ಪ್ರಧಾನ ಕಾರ್ಯದರ್ಶಿ ಪಕ್ಷದ ಹಿರಿಯ ನಾಯಕರಾದ ದುರೈಮುರುಗನ್ (Duraimurugan) ಮತ್ತು ಖಜಾಂಚಿಯಾಗಿ ಟಿ.ಆರ್. ಬಾಲು (T R Baalu) ಅವಿರೋಧವಾಗಿ ಆಯ್ಕೆಯಾದರು. ಈ ಮೂವರು ನಾಯಕರು ಕೂಡ ಎರಡನೇ ಬಾರಿಗೆ ತಮ್ಮ ತಮ್ಮ ಸ್ಥಾನಗಳಿಗೆ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ: ಕಾಂಡೋಮ್‍ಗಳನ್ನು ಹೆಚ್ಚಾಗಿ ಬಳಸ್ತಿರೋದು ನಾವು – ಭಾಗವತ್‍ಗೆ ಓವೈಸಿ ತಿರುಗೇಟು

    ಪಕ್ಷದ ಸಾಮಾನ್ಯ ಮಂಡಳಿ ಸಭೆಗೆ ಆಗಮಿಸಿದ ಸ್ಟಾಲಿನ್ ಅವರಿಗೆ ಪಕ್ಷದ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತ ಕೋರಿದರು. ಡಿಎಂಕೆಯ 15ನೇ ಸಾಂಸ್ಥಿಕ ಚುನಾವಣೆಯ ಭಾಗವಾಗಿ, ಪಕ್ಷದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಮತ್ತು ಖಜಾಂಚಿಗಳನ್ನು ರಾಜ್ಯಾದ್ಯಂತ ವಿವಿಧ ಹಂತಗಳಲ್ಲಿ ಪಕ್ಷದ ಹುದ್ದೆಗಳಿಗೆ ನಡೆದ ಚುನಾವಣೆಯ ನಂತರ ಆಯ್ಕೆ ಮಾಡಲಾಯಿತು. ಇದನ್ನೂ ಓದಿ: ಮೇಲುಕೋಟೆಯ ರಾಜಗೋಪುರದಲ್ಲಿ ಬಾರ್ ಸೆಟ್ – ನಾಗಚೈತನ್ಯ ಚಿತ್ರ ತಂಡದಿಂದ ಎಡವಟ್ಟು

    Live Tv
    [brid partner=56869869 player=32851 video=960834 autoplay=true]

  • ಆಸ್ಪತ್ರೆಯಿಂದ ಡಿಸ್ಚಾರ್ಜ್ – ರಾಷ್ಟ್ರಪತಿ ಚುನಾವಣೆಗೆ ಮತ ಚಲಾಯಿಸಿದ ಸ್ಟಾಲಿನ್

    ಆಸ್ಪತ್ರೆಯಿಂದ ಡಿಸ್ಚಾರ್ಜ್ – ರಾಷ್ಟ್ರಪತಿ ಚುನಾವಣೆಗೆ ಮತ ಚಲಾಯಿಸಿದ ಸ್ಟಾಲಿನ್

    ಚೆನ್ನೈ: ಕೋವಿಡ್-19 ಸೋಂಕಿಗೆ ಒಳಗಾಗಿದ್ದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ನಂತರ ರಾಷ್ಟ್ರಪತಿ ಚುನಾವಣೆಗೆ ಮತ ಚಲಾಯಿಸಿದರು.

    ಚೆನ್ನೈನ ಆಳ್ವಾರ್‌ಪೇಟ್‌ನಲ್ಲಿರುವ ಕಾವೇರಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ ಮುಖ್ಯಮಂತ್ರಿಗಳು ನೇರವಾಗಿ ಫೋರ್ಟ್ ಸೇಂಟ್ ಜಾರ್ಜ್ ಕ್ಯಾಂಪಸ್‍ಗೆ ಬಂದರು. ಬೆಳಗ್ಗೆ 10 ಗಂಟೆಗೆ ಬಂದ ಸ್ಟಾಲಿನ್ ಅವರು ಸೆಕ್ರೆಟರಿಯೇಟ್ ಕಾಂಪ್ಲೆಕ್ಸ್‍ನಲ್ಲಿ ಮತ ಚಲಾಯಿಸಿದರು. ಆಡಳಿತಾರೂಢ ಡಿಎಂಕೆ ಮತ್ತು ಅದರ ಮಿತ್ರಪಕ್ಷಗಳು ಪ್ರತಿಪಕ್ಷಗಳು ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಅವರಿಗೆ ಬೆಂಬಲ ನೀಡುತ್ತಿದೆ. ಬಿಜೆಪಿಯಿಂದ ಕಣಕ್ಕಿಳಿದಿರುವ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಪ್ರಮುಖ ಪ್ರತಿಪಕ್ಷ ಎಐಎಡಿಎಂಕೆ ಬೆಂಬಲಿಸುತ್ತಿದೆ.  ಇದನ್ನೂ ಓದಿ: ಉಪರಾಷ್ಟ್ರಪತಿ ಹುದ್ದೆಗೆ NDA ಅಭ್ಯರ್ಥಿ ಧನಕರ್ ನಾಮಪತ್ರ ಸಲ್ಲಿಕೆ- ಮೋದಿ, ಶಾ ಭಾಗಿ

    69 ವರ್ಷದ ಸ್ಟಾಲಿನ್ ಅವರಿಗೆ ಜುಲೈ 12 ರಂದು ಕೋವಿಡ್-19 ಸೋಂಕು ದೃಢಪಟ್ಟಿತ್ತು. 2 ದಿನ ಸೆಲ್ಫ್ ಐಸೋಲೇಷನ್‍ನಲ್ಲಿದ್ದ ಸ್ಟಾಲಿನ್ ಜುಲೈ 14ರಂದು ಹೆಚ್ಚಿನ ಚಿಕಿತ್ಸೆಗೆ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಚೇತರಿಸಿಕೊಂಡಿರುವ ಸ್ಟಾಲಿನ್ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.  ಇದನ್ನೂ ಓದಿ: ಸಂಸತ್ತಿನಲ್ಲಿ ಮುಕ್ತ ಮನಸ್ಸಿನಿಂದ ಸಂವಾದ ನಡೆಸಿ, ಅನಗತ್ಯ ಚರ್ಚೆ ಬೇಡ: ಮೋದಿ

    Live Tv
    [brid partner=56869869 player=32851 video=960834 autoplay=true]