ವಿಜಯಪುರ: ಜಿಲ್ಲೆಯ ಸಿಂದಗಿ ಮತಕ್ಷೇತ್ರದ ಶಾಸಕ ಎಂ.ಸಿ.ಮನಗೂಳಿ ಆರೋಗ್ಯ ಸಮಸ್ಯೆ ಹಿನ್ನೆಲೆ ಬೆಂಗಳೂರಿನ ಬನ್ನೇರುಘಟ್ಟದ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಕಲಬುರಗಿಯಿಂದ ಏರ್ ಲಿಫ್ಟ್ ಮೂಲಕ ಬೆಂಗಳೂರಿಗೆ ಕರೆದೊಯ್ದು ಕುಟುಂಬದವರು ಚಿಕಿತ್ಸೆ ಕೊಡಿಸುತ್ತಿದ್ದಾರೆ
ತೀವ್ರತರವಾದ ಕಫ ಕಟ್ಟಿದ ಹಿನ್ನೆಲೆ ಉಸಿರಾಟದ ಸಮಸ್ಯೆಯಾಗಿ ಅಸ್ವಸ್ಥರಾಗಿದ್ದರು ಎಂದು ತಿಳಿದು ಬಂದಿದೆ. ಸದ್ಯ ಚಿಕಿತ್ಸೆ ಮುಂದುವರಿದಿದ್ದು, ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ.
ಕ್ಷೇತ್ರದ ಜನರು, ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ ಎಂದು ಎಂ.ಸಿಮನಗೂಳಿ ಅವರ ಪುತ್ರ ಶಾಂತವೀರ ಮನಗೂಳಿ ಹೇಳಿದ್ದಾರೆ.
ಬಾಗಲಕೋಟೆ: ತೋಟಗಾರಿಕಾ ವಿಶ್ವವಿದ್ಯಾಲಯ ಅಧೀನ ಸಿಬ್ಬಂದಿಯ ವರ್ಗಾವಣೆ ವಿಚಾರದಲ್ಲಿ ತೋಟಗಾರಿಕಾ ಇಲಾಖೆಯ ಸಚಿವ ಎಂ.ಸಿ ಮನಗೂಳಿ ಮೂಗು ತೂರಿಸಿದ್ದಾರೆ. ವರ್ಗಾವಣೆಯ ಬಗ್ಗೆ ತೋಟಗಾರಿಕಾ ಇಲಾಖೆ ಕಾರ್ಯದರ್ಶಿಗಳಿಗೆ ಪತ್ರ ಬರೆದು ಸಚಿವರು ಹಸ್ತಕ್ಷೇಪ ಮಾಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ನನ್ನ ಗಮನಕ್ಕೆ ಬಾರದೆ ವರ್ಗಾವಣೆ ಮಾಡಬಾರದೆಂದು ಎಂದು ಮನಗೂಳಿ ಅವರು ತೋಟಗಾರಿಕಾ ಇಲಾಖೆ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ಸಚಿವರ ಪತ್ರದ ಪ್ರತಿಯನ್ನು ತೋಟಗಾರಿಕೆ ವಿವಿ ಪ್ರಭಾರಿ ಉಪಕುಲಪತಿಗಳಿಗೆ ಕಾರ್ಯದರ್ಶಿಗಳು ಕಳುಹಿಸಿದ್ದಾರೆ. ಈ ಮೂಲಕ ವರ್ಗಾವಣೆ ಆದೇಶಕ್ಕೆ ತಡೆ ನೀಡುವಂತೆ ಸೂಚನೆ ನೀಡಲಾಗಿದೆ. ಹೀಗಾಗಿ ಕಾರ್ಯದರ್ಶಿಗಳ ಆದೇಶದ ಪ್ರಕಾರ ವರ್ಗಾವಣೆ ವಿಚಾರವನ್ನು ವಿವಿ ಆಡಳಿತ ಮಂಡಳಿ ತಡೆಹಿಡಿದಿದ್ದಾರೆ.
ತೋಟಗಾರಿಕಾ ವಿವಿ ನಿಯಮಾವಳಿ ಪ್ರಕಾರ ಸಚಿವರು ವರ್ಗಾವಣೆಯಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ. ಆದರೆ ಮನಗೂಳಿಯವರು ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ತೋಟಗಾರಿಕಾ ವಿಶ್ವವಿದ್ಯಾಲಯಗಳ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘ ಆರೋಪಿಸಿದೆ.
ಸಚಿವರು ಈ ಕಾರ್ಯದಿಂದ ಹಿಂದೆ ಸರಿಯಬೇಕು. ಇಲ್ಲದಿದ್ದರೆ ಸಚಿವರ ವಿರುದ್ಧ ಪ್ರತಿಭಟನೆಗೆ ಇಳಿಯೋದಾಗಿ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘ ಎಚ್ಚರಿಕೆ ನೀಡಿದೆ. ಕೆ.ಎಂ ಇಂದಿರೇಶ್ ಬಾಗಲಕೋಟೆ ತೋಟಗಾರಿಕೆ ವಿವಿ ಪ್ರಭಾರ ಉಪಕುಲಪತಿ ಜೂನ್ 6ರಂದು ಸಿಬ್ಬಂದಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದರು. ಆದರೆ ಜೂನ್ 7ರಂದು ತಡೆ ನೀಡುವಂತೆ ತೋಟಗಾರಿಕಾ ಇಲಾಖೆ ಕಾರ್ಯದರ್ಶಿಗಳಿಂದ ಆದೇಶ ಬಂದಿದೆ.
ಜನರಲ್ ವರ್ಗಾವಣೆ, ಮುಚ್ಯುವಲ್ ವರ್ಗಾವಣೆ, ರಿಕ್ವೆಸ್ಟ್ ವರ್ಗಾವಣೆ ಅಡಿಯಲ್ಲಿ 45 ಸಿಬ್ಬಂದಿ ವರ್ಗಾವಣೆ ಆದೇಶ ಹೊರಡಿಸಲಾಗುತ್ತು. ಹಾಗೆಯೇ ವಿವಿಯ ಇಬ್ಬರು ಡೀನ್, ಒಬ್ಬರು ರೆಜಿಸ್ಟ್ರಾರ್, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗಾವಣೆಗೆ ಆದೇಶಿಸಲಾಗಿತ್ತು. ಆದರೆ ಈ ವಿಚಾರದಲ್ಲಿ ಸಚಿವರು ಹಸ್ತಕ್ಷೇಪ ಮಾಡಿರುವುದು ಸರಿಯಲ್ಲ ಎಂದು ಸಿಬ್ಬಂದಿ ಕಿಡಿಕಾರುತ್ತಿದ್ದಾರೆ.
ವಿಜಯಪುರ: ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಮನಗೂಳಿ ಅವರನ್ನು ರಸ್ತೆ ಬದಿಯಲ್ಲಿಯೇ ನಿಲ್ಲಿಸಿ ಸಿಂಧಗಿ ಪಟ್ಟಣದ ಮಹಿಳೆಯರು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಸಿಂಧಗಿ ಪಟ್ಟಣಕ್ಕೆ ಇಂದು ಸಚಿವರು ಭೇಟಿ ನೀಡಿದ್ದರು. ಈ ವೇಳೆ ಸ್ಥಳೀಯರು ಸಚಿವರ ಬಳಿ ಬಂದು ರಸ್ತೆ, ಕುಡಿಯುವ ನೀರು ಪೂರೈಕೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಹೇಳಿಕೊಂಡರು. ಅಲ್ಲಿಯೇ ಇದ್ದ ಲತಿಬಾ ತಾಂಬೆ ಹಾಗೂ ಕೆಲವು ಮಹಿಳೆಯರು ಸಚಿವರನ್ನು ತರಾಟೆಗೆ ತೆಗೆದುಕೊಂಡರು.
ಚುನಾವಣೆ ಇದ್ದಾಗ ನೀವು ಕೈಮುಗಿದುಕೊಂಡು ಬರತ್ತಿರಿ, ಈಗ ನಾವು ಕೈ ಮುಗಿದು ಕೆಲಸ ಕೇಳುವ ಪರಿಸ್ಥಿತಿ ಬಂದಿದೆ. ನಾವು ಮತ ಹಾಕುವವರಿಗೆ ಮಾತ್ರ ನಮ್ಮನ್ನು ಮಾತನಾಡಿಸುತ್ತೀರಾ ಆಮೇಲೆ ನಮ್ಮ ಸಮಸ್ಯೆ ಕೇಳುವುದಿಲ್ಲ. ಪಟ್ಟಣದಲ್ಲಿ ರಸ್ತೆಯ ಧೂಳು ಕುಡಿದು ತಿರುಗಾಡುತ್ತಿದ್ದೇವೆ. ಕುಡಿಯಲು ನೀರಿಲ್ಲ ಎಂದು ಲತಿಬಾ ತಾಂಬೆ ಕಿಡಿಕಾರಿದರು.
ಸಚಿವರ ಪಕ್ಕದಲ್ಲಿಯೇ ನಿಂತಿದ್ದ ವ್ಯಕ್ತಿ ಉತ್ತರ ನೀಡುತ್ತಿದ್ದಂತೇ, ನೀವು ಸುಮ್ಮನೆ ನಿಲ್ಲಿ. ಸಚಿವರು ಉತ್ತರ ನೀಡಲಿ ಎಂದು ಮಹಿಳೆ ಗರಂ ಆಗಿದರು. ತಕ್ಷಣವೇ ಪ್ರತಿಕ್ರಿಯೆ ನೀಡಿದ ಸಚಿವರು ಸರಿ ಮಾಡಿಸುತ್ತೇನೆ ಎನ್ನುತ್ತಲೇ ಕಾರು ಏರಿ ಅಲ್ಲಿಂದ ಕಾಲ್ಕಿತ್ತರು.
ಇದಕ್ಕೂ ಮುನ್ನ ದೇವರನೆದಲಗಿ ಗ್ರಾಮ ಪಂಚಾಯತ್‍ನಲ್ಲಿ ಹಗರಣ ನಡೆದಿದೆ ಎಂದು ಕೆಲವು ಸಿಂಧಗಿ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಮಾತನಾಡಿದ ಪ್ರತಿಭಟನಾನಿರತರು, ಸುಮಾರು 70ರಿಂದ 80 ಲಕ್ಷ ರೂ. ಕಳಪೆ ಕಾಮಗಾರಿಗಳು ನಡೆದಿವೆ. ಈ ಕುರಿತು ಸಂಪೂರ್ಣ ತನಿಖೆ ಆಗುವವರಗೂ ನಾನು ಪ್ರತಿಭಟನೆ ಮಾಡುತ್ತೇವೆ. ನೀರು ಪೂರೈಕೆ ಸರಿಯಾಗಿ ಆಗುತ್ತಿಲ್ಲ. ನಮ್ಮ ಮೇಲೆ ಅಧಿಕಾರಿಗಳು ಹಾಗೂ ನಾಯಕರು ಮಲತಾಯಿ ಧೋರಣೆ ತೋರುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾಗಿ ನೀವು ಮಧ್ಯ ಪ್ರವೇಶಿಸಿ ನಮಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ನಾನು ಒಂದೇ ಜಿಲ್ಲೆಗೆ ಮೀಸಲಾಗಿಲ್ಲ. ನನಗೆ 30 ಜಿಲ್ಲೆಗಳ ಜವಾಬ್ದಾರಿಯಿದೆ. ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿ ಕ್ರಮ ಕೈಕೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ಚಿಕ್ಕಬಳ್ಳಾಪುರ: ಯಡಿಯೂರಪ್ಪಗೆ ಈ ಮೊದಲು ಇದ್ದ ಹುರುಪು, ಉತ್ಸಾಹ ತಿರುಗಾಟ ಇಲ್ಲ. ಬಿಎಸ್‍ವೈ ಫೇಸ್ ವ್ಯಾಲ್ಯೂ ಕಡಿಮೆಯಾಗಿದೆ ಎಂದು ತೋಟಗಾರಿಕಾ ಸಚಿವ ಎಂ.ಸಿ ಮನಗೂಳಿ ಹೇಳಿದ್ದಾರೆ.
ನಂದಿಗಿರಿಧಾಮಕ್ಕೆ ಭೇಟಿ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು 10-12 ಜನ ಶಾಸಕರನ್ನು ಸೆಳೆದು ಆಪರೇಷನ್ ಕಮಲ ಮಾಡಿ ಸಮ್ಮಿಶ್ರ ಸರ್ಕಾರ ಉರುಳಿಸಲು ಯಡಿಯೂರಪ್ಪ ಪ್ರಯತ್ನಿಸಿದ್ದರು. ಆದರೆ ಬಿಜೆಪಿಯವರು ಕರೆದರೆ ಕಾಂಗ್ರೆಸ್‍ನವರು, ಜೆಡಿಎಸ್‍ನವರು ಯಾರೂ ಹೋಗಲಿಲ್ಲ ಎಂದರು.
ಬಿಜೆಪಿ ನಾಯಕರು ನನ್ನನ್ನು ಸಂಪರ್ಕಿಸಿಲ್ಲ. ನಾವು ಯಾರೂ ಹೋಗುವುದಿಲ್ಲ. ಯಡಿಯೂರಪ್ಪ ಅವರ ಫೇಸ್ ವ್ಯಾಲ್ಯೂ ಕಡಿಮೆ ಆಗಿದೆ. ಅವರು ಮೀಟಿಂಗ್ ಮಾಡುವುದನ್ನು ಕಡಿಮೆ ಮಾಡಿದ್ದಾರೆ. ಅವರಿಗೆ ಹೈಕಮಾಂಡ್‍ಗಳಾದ ಮೋದಿ ಅಮಿತ್ ಶಾ ಅವರು ಏನು ಹೇಳಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಆದರೆ ಈಗ ಯಡಿಯೂರಪ್ಪ ಅವರ ಹೋರಾಟ ಕಡಿಮೆ ಆಗಿದೆ. ಸದ್ಯ ಈಗ ಯಾವೊಬ್ಬ ಶಾಸಕ ಬಿಜೆಪಿಗೆ ಹೋಗುತ್ತಿಲ್ಲ ಎಂದು ಸಚಿವ ಎಂ.ಸಿ ಮನಗೂಳಿ ಹೇಳಿದರು.