Tag: M.B Patil

  • ಮಿನಿ ತಾರಾಲಯಕ್ಕೆ 12.88 ಕೋಟಿ, ವಸತಿ ಶಾಲೆಗಳಿಗೆ 44 ಕೋಟಿ ವೆಚ್ಚಕ್ಕೆ ಅಸ್ತು: ಎಂ.ಬಿ ಪಾಟೀಲ್‌

    ಮಿನಿ ತಾರಾಲಯಕ್ಕೆ 12.88 ಕೋಟಿ, ವಸತಿ ಶಾಲೆಗಳಿಗೆ 44 ಕೋಟಿ ವೆಚ್ಚಕ್ಕೆ ಅಸ್ತು: ಎಂ.ಬಿ ಪಾಟೀಲ್‌

    ವಿಜಯಪುರ: ಉಪಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ಕಿರು ತಾರಾಲಯ (Mini Planetarium) ಹಾಗೂ ಬಬಲೇಶ್ವರ ಮತ್ತು ವಿಜಯಪುರದಲ್ಲಿ (Vijayapura) ಎರಡು ಹಾಸ್ಟೆಲ್ ಗಳ ನಿರ್ಮಾಣಕ್ಕೆ ಒಟ್ಟು 56.88 ಕೋಟಿ ರೂ. ವ್ಯಯಿಸಲು ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ ಎಂದು ಸಚಿವ ಎಂ.ಬಿ ಪಾಟೀಲ್‌ (M.B. Patil) ಹೇಳಿದ್ದಾರೆ.

    ಈ ಬಗ್ಗೆ ಮಾಹಿತಿ ನೀಡಿರುವ ಅವರು, `2015-16ನೇ ಸಾಲಿನ ಬಜೆಟ್‌ನಲ್ಲೇ ವಿಜಯಪುರ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಉಪಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ಕಿರು ತಾರಾಲಯ ಸ್ಥಾಪಿಸುವ ಘೋಷಣೆ ಮಾಡಲಾಗಿತ್ತು. ಆದರೆ ಕಾರಣಾಂತರ ಗಳಿಂದ ಇದು ಅನುಷ್ಠಾನಕ್ಕೆ ಬರಲಿಲ್ಲ. ಈಗ 12.88 ಕೋಟಿ ರೂ.ಗೆ ಪರಿಷ್ಕೃತ ಅಂದಾಜು ಪಟ್ಟಿ ಸಿದ್ಧಪಡಿಸಿದ್ದು, ಇದಕ್ಕೆ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಒಪ್ಪಿಗೆ ಕೊಡಲಾಗಿದೆ. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಮೂಲಕ ಈ ಯೋಜನೆ ಕಾರ್ಯಗತಗೊಳ್ಳಲಿದೆ’ ಎಂದಿದ್ದಾರೆ.

    ವಿಜಯಪುರದಲ್ಲಿ ಈ ಯೋಜನೆಯ ಕಾಮಗಾರಿಗೆ ಇದುವರೆಗೆ 1.44 ಕೋಟಿ ರೂ. ವೆಚ್ಚವಾಗಿದೆ. ತಾರಾಲಯದಲ್ಲಿ ಡೋಮ್, ಪ್ರೊಜಕ್ಷನ್ ಸಿಸ್ಟಂ, ಒಳಾಂಗಣ, ಹೊರಾಂಗಣ ವಿಜ್ಞಾನ ಪ್ರದರ್ಶಿಕೆಗಳು, ಆಡಿಯೋ ವ್ಯವಸ್ಥೆ, ಹವಾ ನಿಯಂತ್ರಣ ವ್ಯವಸ್ಥೆ ಎಲ್ಲವೂ ಇರಲಿದೆ. ಇದರ ಮೂಲಕ ಜಿಲ್ಲೆಯ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ತಿಳಿವಳಿಕೆಯನ್ನು ಹೆಚ್ಚಿಸಲಾಗುವುದು. ನನೆಗುದಿಗೆ ಬಿದ್ದಿದ್ದ ಈ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನ ಸೆಳೆದಿದ್ದಾಗಿ ಅವರು ತಿಳಿಸಿದ್ದಾರೆ.

    ಬಬಲೇಶ್ವರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮಮದಾಪುರದಲ್ಲಿರುವ, ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರುವ ಡಾ.ಬಿ ಆರ್ ಅಂಬೇಡ್ಕರ್ ವಸತಿ ಶಾಲೆ ಮತ್ತು ವಿಜಯಪುರದಲ್ಲಿರುವ ವಸತಿಸಹಿತ ಪದವಿಪೂರ್ವ ಕಾಲೇಜಿಗೆ ಸ್ವಂತ ಕಟ್ಟಡಕ್ಕಾಗಿ ತಲಾ 22 ಕೋಟಿ ರೂ.ಗಳಂತೆ ಒಟ್ಟು 44 ಕೋಟಿ ರೂ. ಒದಗಿಸಲು ಕೂಡ ಸಂಪುಟ ಸಭೆಯಲ್ಲಿ ಹಸಿರು ನಿಶಾನೆ ಸಿಕ್ಕಿದೆ.

    ಈ ಎರಡೂ ವಸತಿ ಶಾಲೆಗಳು ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಮೀಸಲಾಗಿದ್ದು, ಇಲ್ಲಿ ತಲಾ 250 ರಂತೆ ಒಟ್ಟು 500 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈಗ ಇವು ಬಾಡಿಗೆ ಕಟ್ಟಡದಲ್ಲಿ ಇರುವುದರಿಂದ ಮೂಲಸೌಕರ್ಯ ಒದಗಿಸಲು ಸಾಧ್ಯವಾಗಿಲ್ಲ. ಹೊಸ ಕಟ್ಟಡಗಳಲ್ಲಿ ಶಾಲಾ ಕಟ್ಟಡ, ಬಾಲಕರ ಮತ್ತು ಬಾಲಕಿಯರ ಹಾಸ್ಟೆಲ್, ಭೋಜನಾಲಯ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ವಸತಿ ಗೃಹಗಳು, ರಂಗಮಂದಿರ, ಕಾಂಪೌಂಡ್, ಸೋಲಾರ್ ವಾಟರ್ ಹೀಟರ್, ಒಳಚರಂಡಿ ವ್ಯವಸ್ಥೆ ಮುಂತಾದವು ಇರಲಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

    ರಾಜ್ಯದಲ್ಲಿರುವ 61 ವಸತಿ ಶಾಲೆಗಳಿಗೆ ಸ್ವಂತ ಕಟ್ಟಡಕ್ಕಾಗಿ ಒಟ್ಟು 1292.50 ಕೋಟಿ ರೂ. ಒದಗಿಸಲು ಸರ್ಕಾರ ತೀರ್ಮಾನಿಸಿದೆ.‌ ಇದರಲ್ಲಿ ಜಿಲ್ಲೆಯ ಈ ಎರಡು ಶಾಲೆಗಳೂ ಸೇರಿವೆ ಎಂದು ಅವರು ಹೇಳಿದ್ದಾರೆ.

  • ಜಾಗತಿಕ ಹೂಡಿಕೆದಾರರ ಸಮಾವೇಶ – 12 ವಿಶೇಷ ಹೂಡಿಕೆ ವಲಯ ಸ್ಥಾಪನೆ: ಎಂ.ಬಿ ಪಾಟೀಲ್

    ಜಾಗತಿಕ ಹೂಡಿಕೆದಾರರ ಸಮಾವೇಶ – 12 ವಿಶೇಷ ಹೂಡಿಕೆ ವಲಯ ಸ್ಥಾಪನೆ: ಎಂ.ಬಿ ಪಾಟೀಲ್

    ಬೆಂಗಳೂರು: ರಾಜ್ಯದಲ್ಲಿ ಸಮಗ್ರ ಕೈಗಾರಿಕಾ ಬೆಳವಣಿಗೆ ಸಾಧಿಸಲು ಈಗ ಇರುವ 200ಕ್ಕೂ ಹೆಚ್ಚು ಕೈಗಾರಿಕಾ ಪ್ರದೇಶಗಳ ಜೊತೆಗೆ 30 ಸಾವಿರ ಎಕರೆ ವಿಸ್ತೀರ್ಣದಲ್ಲಿ 12 ವಿಶೇಷ ಹೂಡಿಕೆ ವಲಯಗಳನ್ನು ಸ್ಥಾಪಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್‌ (M.B Patil) ತಿಳಿಸಿದ್ದಾರೆ.

    ಜಾಗತಿಕ ಹೂಡಿಕೆದಾರರ ಸಮಾವೇಶ (Global Investors Meet) ಉದ್ದೇಶಿಸಿ ಮಾತನಾಡಿದ ಅವರು, ಇದಕ್ಕಾಗಿ ಇತ್ತೀಚೆಗೆ ಅಧಿಸೂಚನೆ ಹೊರಡಿಸಿದ್ದು, ಇಲ್ಲೆಲ್ಲ ವಿಶ್ವ ದರ್ಜೆಯ ಮೂಲಸೌಕರ್ಯ ಒದಗಿಸಲಾಗುವುದು. ಕೆಐಎಡಿಬಿ (KIADB) ರಾಜ್ಯದಲ್ಲಿ ಈಗಾಗಲೇ 85 ಸಾವಿರ ಎಕರೆಗೂ ಹೆಚ್ಚು ವಿಸ್ತೀರ್ಣದ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿ ಪಡಿಸಿದ್ದು, ಇಲ್ಲಿ 25 ಸಾವಿರ ಕೈಗಾರಿಕೆಗಳು ನೆಲೆಯೂರಿವೆ ಎಂದಿದ್ದಾರೆ.

    ಉತ್ಪಾದನಾ ವೆಚ್ಚ ಕಡಿಮೆಯಾಗಿ, ದಕ್ಷತೆ ಹೆಚ್ಚಾಗಬೇಕು ಎನ್ನುವುದು ಸರ್ಕಾರದ ನೀತಿಯಾಗಿದೆ. ಇದನ್ನು ಸಾಧಿಸಲು `ಕ್ಲಸ್ಟರ್ ಆಧಾರಿತ ನೀತಿ’ ಅಳವಡಿಸಿಕೊಳ್ಳಲಾಗಿದೆ. ಹೀಗಾಗಿ ಬೇರೆಬೇರೆ ಭಾಗಗಳಲ್ಲಿ ಏರೋಸ್ಪೇಸ್ ಮತ್ತು ಡಿಫೆನ್ಸ್, ಇ.ವಿ.ತಯಾರಿಕೆ ಕ್ಲಸ್ಟರ್, ಫಾರ್ಮಾ, ಡೀಪ್-ಟೆಕ್ ಮತ್ತು ಡ್ರೋನ್ ಪಾರ್ಕ್‌ಗಳನ್ನು ಸ್ಥಾಪಿಸಲಾಗುತ್ತಿದೆ. ಕೈಗಾರಿಕಾ ಪ್ರದೇಶಗಳಿಗೆ ಹತ್ತಿರದ ನದಿ ಮೂಲಗಳಿಂದ ಶುದ್ಧ ಕುಡಿಯುವ ನೀರು ಪೂರೈಸಲು 3,800 ಕೋಟಿ ರೂ. ಮೊತ್ತದ ಬೃಹತ್ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ.

    ಜಾಗತಿಕ ಮಟ್ಟದಲ್ಲಿ ಚೀನಾದಿಂದ ತೀವ್ರ ಸವಾಲು ಎದುರಾಗಿದ್ದು, ತಯಾರಿಕೆ ವಲಯದ ಚಿತ್ರಣವೇ ಬದಲಾಗಬೇಕಾದ ಅನಿವಾರ್ಯತೆ ಇದೆ. ಜೊತೆಗೆ ಜಾಗತಿಕ ಅಸ್ಥಿರತೆಯ ಸಮಸ್ಯೆಯೂ ಇದೆ. ಸರ್ಕಾರ ಪ್ರಗತಿಗೆ ಹೊಸ ಭಾಷ್ಯ ಬರೆಯಲು ಮುಂದಾಗಿದ್ದು, ಕರ್ನಾಟಕವನ್ನು ಜಾಗತಿಕ ಮಟ್ಟದಲ್ಲಿ ತಯಾರಿಕೆ ಮತ್ತು ನಾವೀನ್ಯತೆಯ ತೊಟ್ಟಿಲನ್ನಾಗಿ ಪ್ರತಿಷ್ಠಾಪಿಸಲಿದೆ ಎಂದಿದ್ದಾರೆ.

    ತಂತ್ರಜ್ಞಾನದ ಬಳಕೆ, ಹೂಡಿಕೆ ಆಕರ್ಷಣೆ ಮತ್ತು ಸ್ಪರ್ಧಾತ್ಮಕ ಉದ್ಯಮಗಳ ಸ್ಥಾಪನೆಯೇ ಭವಿಷ್ಯದ ಆರ್ಥಿಕ ಬೆಳವಣಿಗೆಯ ನಿರ್ಣಾಯಕ ಶಕ್ತಿಗಳಾಗಿವೆ. ಇದಕ್ಕಾಗಿ ಕೈಗಾರಿಕಾ ರಂಗದಲ್ಲಿ ಡಿಜಿಟಲ್ ಪರಿವರ್ತನೆಯನ್ನು ಅಳವಡಿಸಿ ಕೊಳ್ಳಲಾಗುತ್ತಿದೆ. ಜತೆಗೆ ಇಂಗಾಲವನ್ನು ಕಡಿಮೆ ಹೊರಸೂಸುವ ಹಾಗೂ ಪರಿಸರಸ್ನೇಹಿ ಉಪಕ್ರಮಗಳಿಗೂ ಗಮನಹರಿಸಲಾಗಿದೆ. 55 ಲಕ್ಷ ಜನರಿಗೆ ಉದ್ಯೋಗ ನೀಡಿರುವ 8 ಲಕ್ಷ ಮಧ್ಯಮ, ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳಿಗೆ ವಿಶೇಷ ಒತ್ತು ಕೊಡಲಾಗಿದೆ ಎಂದು ಅವರು ವಿವರಿಸಿದ್ದಾರೆ.

  • ಫೆ.11ರಂದು ‘ಇನ್ವೆಸ್ಟ್‌ ಕರ್ನಾಟಕ 2025’ಕ್ಕೆ ಚಾಲನೆ – ಹೂಡಿಕೆ ಉತ್ಸವಕ್ಕೆ ಮುನ್ನುಡಿ: ಎಂ.ಬಿ.ಪಾಟೀಲ್‌

    ಫೆ.11ರಂದು ‘ಇನ್ವೆಸ್ಟ್‌ ಕರ್ನಾಟಕ 2025’ಕ್ಕೆ ಚಾಲನೆ – ಹೂಡಿಕೆ ಉತ್ಸವಕ್ಕೆ ಮುನ್ನುಡಿ: ಎಂ.ಬಿ.ಪಾಟೀಲ್‌

    ಬೆಂಗಳೂರು: ಇದೇ ಫೆ.11 ರಂದು ‘ಇನ್ವೆಸ್ಟ್‌ ಕರ್ನಾಟಕ 2025’ಕ್ಕೆ (Invest Karnataka 2025) ಚಾಲನೆ ಸಿಗಲಿದೆ. ಇದು ಹೂಡಿಕೆ ಉತ್ಸವಕ್ಕೆ ಮುನ್ನುಡಿ. ಜಾಗತಿಕ ಬಂಡವಾಳ ಹೂಡಿಕೆಯ ಶಕ್ತಿಕೇಂದ್ರ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ತಿಳಿಸಿದ್ದಾರೆ.

    ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಇನ್ವೆಸ್ಟ್‌ ಕರ್ನಾಟಕ 2025ಕ್ಕೆ ಆತಿಥ್ಯ ವಹಿಸಲು ಕರ್ನಾಟಕ ರಾಜ್ಯ ಸರ್ಕಾರವು ಸಜ್ಜಾಗಿದೆ. ಮಂಗಳವಾರ ಮಧ್ಯಾಹ್ನ ಸಮಾರಂಭಕ್ಕೆ ಚಾಲನೆ ಸಿಗಲಿದೆ. ನಾಲ್ಕು ದಿನಗಳ ಕಾಲ ಕಾರ್ಯಕ್ರಮ ನಡೆಯಲಿದೆ.

    ʼಈ ಹೂಡಿಕೆದಾರರ ಸಮಾವೇಶವು ಕರ್ನಾಟಕವನ್ನು ಜಾಗತಿಕ ಬಂಡವಾಳ ಹೂಡಿಕೆಯ ಶಕ್ತಿಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ನೆರವಾಗಲಿದೆ. ನಾವೀನ್ಯತೆ, ಕೈಗಾರಿಕಾ ಪ್ರಗತಿ ಮತ್ತು ಜಾಗತಿಕ ಪಾಲುದಾರಿಕೆಗೆ ರಾಜ್ಯದಲ್ಲಿನ ಸೌಲಭ್ಯಗಳನ್ನು ಇಡೀ ವಿಶ್ವಕ್ಕೆ ಪರಿಚಯಿಸಲಿದೆ ಎಂದು ಸಚಿವರು ಹೇಳಿದ್ದಾರೆ.

    ಉದ್ದಿಮೆ, ನೀತಿ ನಿರೂಪಣೆ ಹಾಗೂ ನಾವೀನ್ಯತೆ ಕ್ಷೇತ್ರದ ದಿಗ್ಗಜರ ಸಮಾಗಮಕ್ಕೆ, ಚಿಂತನ ಮಂಥನಕ್ಕೆ ಇದು ವೇದಿಕೆ ಒದಗಿಸಲಿದೆ. ವಿವಿಧ ಕ್ಷೇತ್ರಗಳ ದಿಗ್ಗಜರು ಕರ್ನಾಟಕದಲ್ಲಿನ ಬಂಡವಾಳ ಹೂಡಿಕೆ ಮತ್ತು ಕೈಗಾರಿಕಾ ಪ್ರಗತಿಯ ಭವಿಷ್ಯ ರೂಪಿಸಲು ತಮ್ಮ ಒಳನೋಟಗಳನ್ನು ನೀಡಲಿದ್ದಾರೆ. ಸಮಾವೇಶದ ವಿವಿಧ ಕಾರ್ಯಕ್ರಮಗಳ ವಿವರ ಹೀಗಿದೆ:

    ಮೊದಲ ದಿನ, ಫೆ.12
    ಬೆಳಗ್ಗೆ 10:35 – 11:05 | ಸಭಾಂಗಣ ಎ | ಸಂವಾದ ಕಾರ್ಯಕ್ರಮ – ಕೃತಕ ಬುದ್ಧಿಮತ್ತೆ, ಸೈಬರ್ ಸುರಕ್ಷತೆ ಮತ್ತು ಸರ್ಕಾರ: ಅನಿಶ್ಚಿತ ಜಗತ್ತಿನಲ್ಲಿ ಡಿಜಿಟಲ್ ಕ್ಷಮತೆ ನಿರ್ಮಾಣ (AI, Cybersecurity, and Government: Building Digital Resilience in an Uncertain World). ಭಾಷಣಕಾರರು: ಸೈಮನ್ ಲಾಂಗ್ (ದಿ ಎಕನಾಮಿಸ್ಟ್-ನ ಸಂಪಾದಕ). ಕಾರ್ಯಕ್ರಮ ನಿರೂಪಣೆ: ಆನ್ ಡಂಕಿನ್ (ಅಮೆರಿಕದ ಇಂಧನ ಇಲಾಖೆಯ ಮಾಜಿ ಸಿಐಒ)

    ಮಧ್ಯಾಹ್ನ 12:00 ರಿಂದ 1:00 | ಸಭಾಂಗಣ ಎ | ಸಂವಾದ ಕಾರ್ಯಕ್ರಮ – ಕ್ಷಮತೆಯ ಮಾರ್ಗೋಪಾಯಗಳು: ಜಾಗತಿಕ ಸವಾಲುಗಳ ಮಧ್ಯೆ ಭಾರತದ ಆರ್ಥಿಕ ಬೆಳವಣಿಗೆ ಸಾಧಿಸುವುದು (Resilient Pathways: Charting India’s Economic Growth Amid Global Challenges). ಮುಖ್ಯ ಭಾಷಣ: ಮೊಂಟೆಕ್ ಸಿಂಗ್ ಅಹ್ಲುವಾಲಿಯಾ (ಭಾರತದ ಅರ್ಥಶಾಸ್ತ್ರಜ್ಞ, ಭಾರತದ ಯೋಜನಾ ಆಯೋಗದ ಮಾಜಿ ಉಪಾಧ್ಯಕ್ಷ). ಕಾರ್ಯಕ್ರಮ ನಿರ್ವಹಣೆ: ಸಲ್ಮಾನ್ ಸೋಜ್ (ಅರ್ಥಶಾಸ್ತ್ರಜ್ಞ ಮತ್ತು ಲೇಖಕ)

    ಮಧ್ಯಾಹ್ನ 2:00 ರಿಂದ 3:00 | ಸಭಾಂಗಣ ಎ | ಸಂವಾದ ಕಾರ್ಯಕ್ರಮ: ಭವಿಷ್ಯಕ್ಕೆ ನಾವೀನ್ಯತೆ (Innovating the Future). ಮುಖ್ಯ ಭಾಷಣ: ಅಕಿಸ್ ಇವಾಂಜೆಲಿಡಿಸ್ (ನಥಿಂಗ್‌-ನ ಸಹ-ಸಂಸ್ಥಾಪಕ ಮತ್ತು ಮಾರಾಟ ಮುಖ್ಯಸ್ಥ). ಕಾರ್ಯಕ್ರಮ ನಿರೂಪಣೆ: ಶಿವ್ ಅರೂರ್ (ಭಾರತದ ಪತ್ರಕರ್ತ ಮತ್ತು ಬರಹಗಾರ)

    ಮಧ್ಯಾಹ್ನ 4:30 ರಿಂದ 5:30 | ಸಭಾಂಗಣ ಎ | ತಜ್ಞರ ಸಮೂಹ ಚರ್ಚೆ – ಮುಂದಾಳತ್ವ: ಭಾರತದ ಭವಿಷ್ಯ ರೂಪಿಸುತ್ತಿರುವ ಯುವ ನಾವೀನ್ಯಕಾರರು (Leading the Charge: Young Innovators Shaping India’s Future). ಭಾಷಣಕಾರರು: ಪಾರ್ಥ್ ಜಿಂದಾಲ್ ( ಜೆಎಸ್‌ಡಬ್ಲ್ಯು ಸಿಮೆಂಟ್‌ನ ವ್ಯವಸ್ಥಾಪಕ ನಿರ್ದೇಶಕ), ಜಯ್‌ ಕೋಟಕ್ (ಕೋಟಕ್‌ 811-ನ ಸಹ-ಮುಖ್ಯಸ್ಥ), ಸುಜನ್ನಾಹ ಮುತ್ತೂಟ್ (ಮುತ್ತೂಟ್ ಹೌಸಿಂಗ್ ಫೈನಾನ್ಸ್ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕಿ). ಕಾರ್ಯಕ್ರಮ ನಿರೂಪಣೆ: ನಿಖಿಲ್ ಕಾಮತ್ (ಜಿರೋಧಾ, ಟ್ರೂ ಬಿಯಕಾನ್, ಗೃಹಸ್-ನ ಸಹ-ಸಂಸ್ಥಾಪಕ)

    ಎರಡನೇ ದಿನ, ಫೆ.13
    ಬೆಳಗ್ಗೆ 11:05 ರಿಂದ 11:45 | ಸಭಾಂಗಣ ಎ | ಸಂವಾದ ಕಾರ್ಯಕ್ರಮ– ಕೃತಕ ಬುದ್ಧಿಮತ್ತೆ ಸೀಮಾರೇಖೆ: ದೈತ್ಯ ಜಿಗಿತದಿಂದ ನೈಜ-ಪ್ರಪಂಚದ ಪ್ರಭಾವಗಳವರೆಗೆ (Pioneering the AI Frontier: From Moonshots to Real-World Impact). ಭಾಷಣಕಾರರು: ಸೆಬಾಸ್ಟಿಯನ್ ಥ್ರನ್ (ಗೂಗಲ್‌ ಎಕ್ಸ್‌ನ ಸ್ಥಾಪಕ), ಪ್ರಶಾಂತ್ ಪ್ರಕಾಶ್ (ಆ್ಯಕ್ಸೆಲ್ ಪಾರ್ಟನರ್ಸ್‌ನ ಸ್ಥಾಪಕ ಪಾಲುದಾರ). ಕಾರ್ಯಕ್ರಮ ನಿರೂಪಣೆ: ಮಿಷೆಲ್ ಹೆನ್ನೆಸ್ಸಿ (ದಿ ಎಕನಾಮಿಸ್ಟ್‌ನ ಗ್ರಾಫಿಕ್ ಡಿಟೆಲ್‌ ಸಂಪಾದಕ)

    ಮಧ್ಯಾಹ್ನ 4:30 – 5:30 | ಸಭಾಂಗಣ ಎ | ಗುಂಪು ಚರ್ಚೆ – ವೈವಿಧ್ಯಮಯ ಪಥಗಳಿಂದ ಸಾಮಾನ್ಯ ಗುರಿಯವರೆಗೆ (From Diverse Paths to a Common Goal). ಭಾಷಣಕಾರರು: ಕಿರಣ್ ರಾವ್ (ಚಲನಚಿತ್ರ ನಿರ್ದೇಶಕಿ, ನಿರ್ಮಾಪಕಿ ಮತ್ತು ಬರಹಗಾರ್ತಿ), ಐರಿನಾ ಘೋಸ್ (ಮೈಕ್ರೋಸಾಫ್ಟ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕಿ), ಸುಖಿ ಸಿಂಗ್ (ಸುಖೀಸ್ ಗೌರ್ಮೆಟ್ ಫುಡ್ಸ್ನ ಸಂಸ್ಥಾಪಕಿ). ಕಾರ್ಯಕ್ರಮ ನಿರೂಪಣೆ: ಲಕ್ಷ್ಮಿ ಪ್ರತುರಿ (ಇಂಕ್ಟಾಲ್ಕ್ಸ್ ಸಂಸ್ಥಾಪಕಿ ಮತ್ತು ಸಿಇಒ)

    ಮೂರನೇ ದಿನ, ಫೆ.14
    ಬೆಳಗ್ಗೆ 10:30 ರಿಂದ 11:30 | ಸಭಾಂಗಣ ಎ | ಸಂವಾದ ಕಾರ್ಯಕ್ರಮ- ಪ್ರಕ್ಷುಬ್ಧತೆಯಲ್ಲಿ ಅಭಿವೃದ್ಧಿ ಸಾಧಿಸುವುದು: ದೇಶಗಳು ಶಾಶ್ವತ ಕ್ಷಮತೆ ಹೇಗೆ ನಿರ್ಮಿಸಬಹುದು (Thriving in Turbulence: How Nations Can Build Lasting Resilience). ಭಾಷಣಕಾರರು: ಜಾರ್ಜ್ ಪಪಂಡ್ರಿಯೊ (ಗ್ರೀಸ್‌ನ ಮಾಜಿ ಪ್ರಧಾನಿ), ಶಶಿ ತರೂರ್ (ಲೋಕಸಭಾ ಸದಸ್ಯ). ಕಾರ್ಯಕ್ರಮ ನಿರೂಪಣೆ: ಲಕ್ಷ್ಮಿ ಪ್ರತುರಿ (ಇಂಕ್ಟಾಲ್ಕ್ಸ್ ಸಂಸ್ಥಾಪಕಿ ಮತ್ತು ಸಿಇಒ)‌

    ‘ಇನ್ವೆಸ್ಟ್ ಕರ್ನಾಟಕ 2025’ ಕೈಗಾರಿಕಾ ಬೆಳವಣಿಗೆ, ನಾವೀನ್ಯತೆ ಮತ್ತು ಜಾಗತಿಕ ಸಹಯೋಗ ಬೆಳೆಸುವ ರಾಜ್ಯದ ಬದ್ಧತೆಗೆ ನಿದರ್ಶನವಾಗಿದೆ. ವಿಶ್ವದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಜೊತೆಗಿನ ಒಪ್ಪಂದಗಳ ಮೂಲಕ ಶೈಕ್ಷಣಿಕ ಹಾಗೂ ಉದ್ಯಮದ ಪಾಲುದಾರಿಕೆಗಳನ್ನು ಬಲಪಡಿಸುವಂತಹ ಪ್ರಮುಖ ಉಪಕ್ರಮಗಳನ್ನು ಮುನ್ನಡೆಸುವಲ್ಲಿ ಸಚಿವ ಪಾಟೀಲ್ ಪ್ರಮುಖ ಪಾತ್ರ ವಹಿಸಿದ್ದಾರೆ.

    ಕರ್ನಾಟಕವು ಅತ್ಯಾಧುನಿಕ ಕೈಗಾರಿಕೆಗಳಲ್ಲಿ ಜಾಗತಿಕವಾಗಿ ಮುಂಚೂಣಿ ಸ್ಥಾನದಲ್ಲಿ ಮುಂದುವರೆಯುವುದನ್ನು ಖಚಿತಪಡಿಸಿಕೊಳ್ಳಲು ಇವರು ಕ್ವಿನ್‌ ಸಿಟಿ ಉಪಕ್ರಮವನ್ನು ಮುನ್ನಡೆಸುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಶೃಂಗಸಭೆಯು, ವಿವಿಧ ಕೈಗಾರಿಕಾ ವಲಯಗಳಲ್ಲಿ ಜಾಗತಿಕ ಪಾಲುದಾರಿಕೆ ಬೆಳೆಸುವುದರ ಜೊತೆಗೆ, ನಾವೀನ್ಯತೆ ಮತ್ತು ಹೂಡಿಕೆ ಕೇಂದ್ರವಾಗಿರುವ ಕರ್ನಾಟಕದ ಮಹತ್ವವನ್ನು ಇಡೀ ವಿಶ್ವಕ್ಕೆ ಪರಿಚಯಿಸಲಿದೆ.

  • ಇನ್ವೆಸ್ಟ್‌ ಕರ್ನಾಟಕದಲ್ಲಿ 19 ದೇಶಗಳು ಭಾಗಿ: ಎಂ.ಬಿ ಪಾಟೀಲ್

    ಇನ್ವೆಸ್ಟ್‌ ಕರ್ನಾಟಕದಲ್ಲಿ 19 ದೇಶಗಳು ಭಾಗಿ: ಎಂ.ಬಿ ಪಾಟೀಲ್

    ಬೆಂಗಳೂರು: ಫೆ.11ರಿಂದ 14ರವರೆಗೆ ನಗರದಲ್ಲಿ ನಡೆಯಲಿರುವ ಇನ್ವೆಸ್ಟ್‌ ಕರ್ನಾಟಕ 2025 – ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ (Invest Karnataka 2025) 19 ದೇಶಗಳು ಭಾಗವಹಿಸಲಿವೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ (M.B Patil) ತಿಳಿಸಿದ್ದಾರೆ.

    ಸಮಾವೇಶದಲ್ಲಿರುವ 9 ಪ್ರತ್ಯೇಕ ಕಂಟ್ರಿ ಪೆವಿಲಿಯನ್‌ಗಳು ಹೂಡಿಕೆ ಅವಕಾಶಗಳು ಮತ್ತು ವಾಣಿಜ್ಯ ಬಾಂಧವ್ಯ ಸಹಯೋಗದ ಅವಕಾಶಗಳನ್ನು ಪ್ರದರ್ಶಿಸಲಿವೆ. ಫ್ರಾನ್ಸ್, ನೆದರ್‌ಲ್ಯಾಂಡ್ಸ್, ಜಪಾನ್, ಥಾಯ್ಲೆಂಡ್‌, ಮಲೇಷ್ಯಾ, ದಕ್ಷಿಣ ಕೊರಿಯಾ, ಇಸ್ರೇಲ್, ನಾರ್ವೆ, ಸ್ವಿಟ್ಜರ್‌ಲ್ಯಾಂಡ್, ತೈವಾನ್, ಜರ್ಮನಿ, ಆಸ್ಟ್ರೇಲಿಯಾ, ಡೆನ್ಮಾರ್ಕ್, ಪೋಲಂಡ್, ಇಟಲಿ, ಬ್ರಿಟನ್‌, ಸ್ಲೊವೆನಿಯಾ, ಬಹ್ರೇನ್ ಮತ್ತು ಸಿಂಗಪುರ ಭಾಗವಿಸಲಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

    ಏರೊಸ್ಪೇಸ್‌, ನವೀಕರಿಸಬಹುದಾದ ಇಂಧನ, ಎಲೆಕ್ಟ್ರಾನಿಕ್ಸ್‌, ಸೆಮಿಕಂಡಕ್ಟರ್‌ ಮತ್ತು ಅತ್ಯಾಧುನಿಕ ತಯಾರಿಕೆ ವಲಯಗಳಲ್ಲಿ ಕರ್ನಾಟಕವು ಬಂಡವಾಳ ಹೂಡಿಕೆಗೆ ಮುಂಚೂಣಿಯಲ್ಲಿ ಇರುವುದನ್ನು ಜಾಗತಿಕ ಉದ್ಯಮ ಜಗತ್ತಿಗೆ ಸಮಾವೇಶದ ಮೂಲಕ ಪರಿಚಯಿಸಲು ಸರ್ವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಪರಿಸರ ಸ್ನೇಹಿ ವಿದ್ಯುತ್‌ ಚಾಲಿತ ವಾಹನಗಳು, ಡಿಫೆನ್ಸ್‌, ಜೈವಿಕ ತಂತ್ರಜ್ಞಾನ, ಸಂಶೋಧನೆ ಹಾಗೂ ಅಭಿವೃದ್ಧಿ ಮತ್ತು ಗರಿಷ್ಠ ನಿಖರತೆಯ ಬಿಡಿಭಾಗ ತಯಾರಿಕಾ ವಲಯಗಳಲ್ಲಿನ ಇತ್ತೀಚಿನ ಬೆಳವಣಿಗೆಯ ಮೇಲೆ ಫ್ಯೂಚರ್‌ ಆಫ್‌ ಇನ್ನೊವೇಷನ್‌ ಎಕ್ಸ್‌ಪೊ ಬೆಳಕು ಚೆಲ್ಲಲಿದೆ ಎಂದಿದ್ದಾರೆ.

    ರಾಜ್ಯದಲ್ಲಿನ ಎಸ್‌ಎಂಇ ಹಾಗೂ ನವೋದ್ಯಮಗಳ ಬೆಳವಣಿಗೆಗೆ ಸಮಾವೇಶವು ವೇಗ ನೀಡಲಿದೆ. ಡಿಜಿಟಲೀಕರಣ ಅಳವಡಿಸಿಕೊಳ್ಳಲು 2,000ಕ್ಕೂ ಹೆಚ್ಚು ಎಸ್‌ಎಂಇಗಳಿಗೆ ಸೂಕ್ತ ತರಬೇತಿ ನೀಡಲಾಗಿದೆ. ಡಿಜಿಟಲ್‌ ಪರಿವರ್ತನೆಗೆ 100 ಎಸ್‌ಎಂಇಗಳಿಗೆ ಅಗತ್ಯ ನೆರವು ನೀಡಲಾಗಿದೆ ಎಂದು ತಿಳಿಸಿದ್ದಾರೆ.

    ತಯಾರಿಕೆ ಹಾಗೂ ಪರಿಸರ ಸ್ನೇಹಿ ನವೋದ್ಯಮಗಳಿಗೆ ಉತ್ತೇಜನ ನೀಡಲು, ಜಾಗತಿಕ ನವೋದ್ಯಮ ಸವಾಲಿನ ವೆಂಚುರೈಸ್‌ನ 2ನೇ ಆವೃತ್ತಿಯು ಸಮಾವೇಶದ ಇನ್ನೊಂದು ಆಕರ್ಷಣೆ ಆಗಿರಲಿದೆ. ಮೂಲ ಸಲಕರಣೆ ತಯಾರಿಸುವ (ಒಇಎಂ) ದೊಡ್ಡ ಕಂಪನಿಗಳ ಜೊತೆಗೆ ವಹಿವಾಟು ಕುದುರಿಸಿಕೊಳ್ಳುವುದಕ್ಕೆ ಎಸ್‌ಎಂಇ-ಗಳಿಗೆ ನೆರವಾಗಲು ಕೃತಕ ಬುದ್ಧಿಮತ್ತೆ ಆಧಾರಿತ ಎಸ್‌ಎಂಇ ಕನೆಕ್ಟ್‌ ಅಂತರ್ಜಾಲ ತಾಣ ಅಭಿವೃದ್ಧಿಪಡಿಸಲಾಗಿದೆ. ರಾಜ್ಯದ ಕೈಗಾರಿಕಾ ಮುನ್ನೋಟ ಕಾರ್ಯಗತಗೊಳಿಸಲು ಹೊಸ ಕೈಗಾರಿಕಾ ನೀತಿ (2024-29) ಜಾರಿಗೊಳಿಸಲಾಗುತ್ತಿದೆ. ಅಲ್ಲದೇ ಹಣಕಾಸು ಹಾಗೂ ಹಣಕಾಸೇತರ ಉತ್ತೇಜನಾ ಕ್ರಮಗಳ ಮೂಲಕ ರಾಜ್ಯಕ್ಕೆ ಕಂಪನಿಗಳನ್ನು ಆಹ್ವಾನಿಸಲು ಇದು ನೆರವಾಗಲಿದೆ ಎಂದು ತಿಳಿಸಿದ್ದಾರೆ.

    ಬಂಡವಾಳ ಹೂಡಿಕೆ ಸುಲಲಿತಗೊಳಿಸಲು ಕೃತಕ ಬುದ್ಧಿಮತ್ತೆ ನೆರವಿನ ಏಕಗವಾಕ್ಷಿ ವ್ಯವಸ್ಥೆ ಅಭಿವೃದ್ಧಿಪಡಿಸಲಾಗಿದೆ. ಇದು ಭೂಮಿ ಹಂಚಿಕೆ, ಹೂಡಿಕೆದಾರರ ಕುಂದುಕೊರತೆ ನಿವಾರಣೆಗೆ ನೆರವಾಗಲಿದ್ದು, ಬಹುಭಾಷಾ ಚಾಟ್‌ಬೋಟ್‌ ಸೌಲಭ್ಯ ಒಳಗೊಂಡಿರಲಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

    ಆನಂದ ಮಹೀಂದ್ರಾ, ಕುಮಾರ್‌ ಮಂಗಳಂ ಬಿರ್ಲಾ, ಕಿರಣ್‌ ಮಜುಂದಾರ್‌ ಶಾ, ಮಾರ್ಟಿನ್‌ ಲುಂಡ್‌ಸ್ಟೆಡ್ಟ್‌, ಜಾರ್ಜ್‌ ಪಪಂಡ್ರೆವು, ಆನ್‌ ಡಂಕಿನ್‌ ಮತ್ತು ಒಡೆ ಅಬೊಷ್‌ ಅವರು ಉದ್ದಿಮೆ, ತಂತ್ರಜ್ಞಾನ ಮತ್ತು ಕೈಗಾರಿಕಾ ಪರಿವರ್ತನೆ ಬಗ್ಗೆ ಒಳನೋಟಗಳನ್ನು ಹಂಚಿಕೊಳ್ಳಲಿದ್ದಾರೆ.

    ಜಾಗತಿಕ ಪ್ರಮುಖ ಉದ್ದಿಮೆಗಳು ಮತ್ತು ವಿದೇಶಿ ಸರ್ಕಾರಗಳ ಪಾಲ್ಗೊಳ್ಳುವಿಕೆಯ ಫಲವಾಗಿ ರಾಜ್ಯದಲ್ಲಿ ವಿಪುಲ ಉದ್ಯೋಗ ಅವಕಾಶಗಳಿಗೆ ಉತ್ತೇಜನ ದೊರೆಯಲಿದೆ. ದುಡಿಯುವ ವರ್ಗದ ಕೌಶಲ ಅಭಿವೃದ್ಧಿಯಾಗಲಿದೆ. ತಂತ್ರಜ್ಞಾನವು ಸುಲಭವಾಗಿ ವರ್ಗಾವಣೆಯಾಗಲಿದೆ. ಇವೆಲ್ಲವುಗಳ ಫಲವಾಗಿ ಜಾಗತಿಕ ನಾವೀನ್ಯತಾ ಕ್ಷೇತ್ರದ ಜೊತೆಗಿನ ಕರ್ನಾಟಕದ ಬಾಂಧವ್ಯ ಗಮನಾರ್ಹವಾಗಿ ವೃದ್ಧಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

    ಸಮಾವೇಶದ ಬಗ್ಗೆ ಮಾಹಿತಿ ಹಾಗೂ ಹೆಸರು ನೋಂದಾಯಿಸಲು https://investkarnataka.co.in/gim2025/ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ.

  • ಎಂ.ಬಿ ಪಾಟೀಲ್ ದಾವೋಸ್ ಸಮ್ಮೇಳನಕ್ಕೆ ಹೋಗಬೇಕು: ಮುರುಗೇಶ್ ನಿರಾಣಿ

    ಎಂ.ಬಿ ಪಾಟೀಲ್ ದಾವೋಸ್ ಸಮ್ಮೇಳನಕ್ಕೆ ಹೋಗಬೇಕು: ಮುರುಗೇಶ್ ನಿರಾಣಿ

    ಬೆಂಗಳೂರು: ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ (M.B Patil) ದಾವೋಸ್ ಸಮ್ಮೇಳನಕ್ಕೆ (Davos World Economic Forum 2025) ಹೋಗಬೇಕು ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ (Murugesh Nirani) ಸಲಹೆ ನೀಡಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಎಂ.ಬಿ ಪಾಟೀಲ್ ಅವರು ದಾವೋಸ್ ಸಮ್ಮೇಳನಕ್ಕೆ ಹೋಗಬೇಕು. ಅವರು ಹೋಗದೇ ಇರೋದು ಸರಿಯಲ್ಲ. ಇದರಿಂದ ನಮ್ಮ ರಾಜ್ಯಕ್ಕೆ ನಷ್ಟ ಆಗುತ್ತದೆ. ಕೈಗಾರಿಕೆ ಬಾರದೇ ಹೋದರೆ ಉದ್ಯೋಗ ಸೃಷ್ಟಿ ಆಗೋದಿಲ್ಲ. ಇದರಿಂದ ರಾಜ್ಯಕ್ಕೆ ಬಹಳ ನಷ್ಟ ಆಗಲಿದೆ ಎಂದು ಬೇಸರ ವ್ಯಕ್ತಪಪಡಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಹೈಕಮಾಂಡ್ ಸ್ಟ್ರಾಂಗ್ ಇದೆ, ಆದಷ್ಟು ಬೇಗ ಬಿಜೆಪಿ ಕಿತ್ತಾಟಕ್ಕೆ ಅಂತ್ಯ: ಮುರುಗೇಶ್ ನಿರಾಣಿ

    ಜಗತ್ತಿನ ದೊಡ್ಡ ದೊಡ್ಡ ಕೈಗಾರಿಕೆಗಳು ಅಲ್ಲಿಗೆ ಬಂದಿರುತ್ತವೆ. ಜಗತ್ತಿನಲ್ಲಿ ಯಾವುದೇ ಸಮ್ಮೇಳನ ನಡೆದರೂ ಹೋಗಿ ಕರ್ನಾಟಕದ ಬಗ್ಗೆ ಅಲ್ಲಿ ಮಾಹಿತಿ ಕೊಡಬೇಕು. ನಮ್ಮ ಸರ್ಕಾರ ಇದ್ದಾಗ ಕೈಗಾರಿಕೆ ಕ್ಷೇತ್ರದಲ್ಲಿ ಕರ್ನಾಟಕ ಟಾಪ್ 3ನೇ ಸ್ಥಾನದಲ್ಲಿ ಇತ್ತು. ಇವತ್ತು ರಾಜ್ಯ ಡಬಲ್ ಡಿಜಿಟ್‌ಗೆ ತಲುಪಿದೆ. ಇದಕ್ಕೆ ಕಾಂಗ್ರೆಸ್ ಕಾರಣ. ಸಚಿವರು ಕಾರಣ ಎಂದು ಕಾಂಗ್ರೆಸ್ (Conress) ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಎರಡು ಲಕ್ಷಕ್ಕೆ 25 ಲಕ್ಷ.. ಮೀಟರ್ ಬಡ್ಡಿ ದಂಧೆಯಲ್ಲಿ ಯಕ್ಷಗಾನ ಕಲಾವಿದನ ಮೇಲೆ ಮಾರಣಾಂತಿಕ ಹಲ್ಲೆ

  • ಉದ್ಯಮ ದಿಗ್ಗಜರ ಜೊತೆ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಸಮಾಲೋಚನೆ

    ಉದ್ಯಮ ದಿಗ್ಗಜರ ಜೊತೆ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಸಮಾಲೋಚನೆ

    – ಇನ್ವೆಸ್ಟ್ ಕರ್ನಾಟಕ; ದೆಹಲಿಯಲ್ಲಿ ಯಶಸ್ವಿ ರೋಡ್‌ಷೋ

    ನವದೆಹಲಿ: ಫೆ.11 ರಿಂದ 14 ರ ವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ‘ಇನ್ವೆಸ್ಟ್‌ ಕರ್ನಾಟಕ 2025’ರ ಪೂರ್ವಸಿದ್ಧತೆಗಳ ಅಂಗವಾಗಿ ಕರ್ನಾಟಕ ರಾಜ್ಯ ಸರ್ಕಾರವು ಬುಧವಾರ ಇಲ್ಲಿ ಯಶಸ್ವಿಯಾಗಿ ರೋಡ್‌ಷೋ ನಡೆಸಿತು.

    ಐಟಿಸಿ ಲಿಮಿಟೆಡ್‌, ರಿನ್ಯೂ ಪವರ್‌, ಸಂವರ್ಧನ ಮದರ್‌ಸನ್‌ ಇಂಟರ್‌ನ್ಯಾಷನಲ್‌ ಲಿಮಿಟೆಡ್‌, ಹ್ಯಾವೆಲ್ಸ್‌, ಕೆಇಐ ಇಂಡಸ್ಟ್ರೀಸ್‌, ದಾಲ್ಮಿಯಾ, ಫ್ಲೆಕ್ಸಿಬಸ್‌ ಮತ್ತಿತರ ಕಂಪನಿಗಳ ಉನ್ನತಾಧಿಕಾರಿಗಳ ಜೊತೆಗೆ ರಾಜ್ಯದ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಅವರು ಸಮಾಲೋಚನೆ ನಡೆಸಿದರು. ರಾಜ್ಯದಲ್ಲಿ ಲಭ್ಯ ಇರುವ ಹೂಡಿಕೆಯ ವಿಫುಲ ಅವಕಾಶಗಳ ಬಗ್ಗೆ ಸಚಿವರು ಉದ್ಯಮಿಗಳಿಗೆ ಮನವರಿಕೆ ಮಾಡಿಕೊಟ್ಟು ಸಮಾವೇಶದಲ್ಲಿ ಭಾಗಿಯಾಗಲು ಔಪಚಾರಿಕ ಆಹ್ವಾನ ನೀಡಿದರು.

    ರಾಜ್ಯದಲ್ಲಿನ ಬಂಡವಾಳ ಹೂಡಿಕೆ ಅವಕಾಶಗಳ ಜೊತೆಗೆ, ಪಾಲುದಾರಿಕೆ ಹಾಗೂ ನಾವೀನ್ಯತೆ ಆಧಾರಿತ ಉದ್ದಿಮೆಗಳಲ್ಲಿನ ರಾಜ್ಯದ ಹಿರಿಮೆಯನ್ನು ದೇಶದ ರಾಜಧಾನಿಯಲ್ಲಿನ ಉದ್ಯಮಿಗಳಿಗೆ ಪರಿಚಯಿಸಲಾಯಿತು.

    ರಾಜ್ಯದ ಆಹಾರ ಸಂಸ್ಕರಣಾ ವಲಯಕ್ಕೆ ಗಮನಾರ್ಹ ಕೊಡುಗೆ ನೀಡುತ್ತಿರುವ ಹಾಗೂ ವಿಲಾಸಿ ಆತಿಥ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಐಟಿಸಿ ಲಿಮಿಟೆಡ್‌, ಈ ಕ್ಷೇತ್ರಗಳಲ್ಲಿ ತನ್ನ ವಹಿವಾಟು ವಿಸ್ತರಿಸುವುದಾಗಿ ವಾಗ್ದಾನ ಮಾಡಿದೆ.

    ‘ಐಟಿಸಿ ಲಿಮಿಟೆಡ್‌ನ ಈ ಹೂಡಿಕೆ ಪ್ರಸ್ತಾವಗಳು ರಾಜ್ಯದಲ್ಲಿ ಮೂಲಸೌಲಭ್ಯಗಳಿಗೆ ಉತ್ತೇಜನ ನೀಡಲಿವೆ. ಉದ್ಯೋಗ ಅವಕಾಶಗಳು ಹೆಚ್ಚಿಸಲಿವೆ. ಇದರಿಂದ ರಾಜ್ಯದ ಆರ್ಥಿಕತೆಗೆ ಮಹತ್ವದ ಕೊಡುಗೆ ದೊರೆಯಲಿದೆ’ ಎಂದು ಸಚಿವ ಎಂ.ಬಿ.ಪಾಟೀಲ್ ಅವರು ತಿಳಿಸಿದ್ದಾರೆ.

    ನವೀಕರಿಸಬಹುದಾದ ಇಂಧನ ಕ್ಷೇತ್ರದ ಪ್ರಮುಖ ಕಂಪನಿಯಾಗಿರುವ ರಿನ್ಯೂ ಪವರ್‌, ಕರ್ನಾಟಕದಲ್ಲಿನ ತನ್ನ ಹೂಡಿಕೆಯ ನೀಲನಕ್ಷೆಯನ್ನು ಸಚಿವರ ಜೊತೆಗೆ ಹಂಚಿಕೊಂಡಿತು. 3 ರಿಂದ 4 ಗಿಗಾವಾಟ್‌ ಸಾಮರ್ಥ್ಯದ ನವೀಕರಿಸಬಹುದಾದ ಇಂಧನ ಯೋಜನೆ, ಬ್ಯಾಟರಿ ತಯಾರಿಕೆ ಮತ್ತು ಮರುಬಳಕೆ ಸೌಲಭ್ಯ ಹಾಗೂ ಸ್ಥಳೀಯ ಉದ್ಯೋಗಿಗಳ ಕೌಶಲ ವರ್ಧನೆಗೆ ಕೌಶಲ ಕೇಂದ್ರ ಸ್ಥಾಪಿಸುವುದಾಗಿ ತಿಳಿಸಿದೆ.

    ಸಂವರ್ಧನ ಮದರ್‌ಸನ್‌ – ರಾಜ್ಯದಲ್ಲಿನ ತನ್ನ ಉದ್ದೇಶಿತ ಯೋಜನೆಯನ್ನು ಆದಷ್ಟು ಬೇಗ ಕಾರ್ಯಗತಗೊಳಿಸುವುದಾಗಿ ತಿಳಿಸಿದೆ. ಯೋಜನೆಯು ಸಕಾಲದಲ್ಲಿ ಕಾರ್ಯಾರಂಭ ಮಾಡಲು ರಾಜ್ಯ ಸರ್ಕಾರದ ಅಗತ್ಯ ನೆರವು ನೀಡುವುದಾಗಿ ಸಚಿವರು ಭರವಸೆ ನೀಡಿದ್ದಾರೆ.

    ವಿದ್ಯುತ್‌ ಸಲಕರಣೆ ಮತ್ತು ಗೃಹೋಪಯೋಗಿ ಉಪಕರಣಗಳ ಪ್ರಮುಖ ತಯಾರಿಕಾ ಕಂಪನಿ ಹ್ಯಾವೆಲ್ಸ್‌, ರಾಜ್ಯದಲ್ಲಿನ ತನ್ನ ಸಂಶೋಧನೆ ಹಾಗೂ ಅಭಿವೃದ್ಧಿ (ಆರ್‌ಆ್ಯಂಡ್‌ಡಿ) ಕೇಂದ್ರವನ್ನು ವಿಸ್ತರಿಸಲು ಒಲವು ವ್ಯಕ್ತಪಡಿಸಿದೆ.

    ಕೇಬಲ್‌ ತಯಾರಿಕೆಯ ಹೊಸ ಘಟಕವನ್ನು ಆರಂಭಿಸುವುದಾಗಿ ಕೆಇಐ ಇಂಡಸ್ಟ್ರೀಸ್‌ ಆಸಕ್ತಿ ತೋರಿಸಿದೆ. ರಾಜ್ಯದಲ್ಲಿ ತನ್ನ ಹೂಡಿಕೆ ಹೆಚ್ಚಿಸುವುದಾಗಿ ದಾಲ್ಮಿಯಾ ಸಿಮೆಂಟ್‌ ಬದ್ಧತೆ ತೋರಿದೆ. ‘ಪ್ರಗತಿಯ ಮರುಪರಿಕಲ್ಪನೆ’ ಧ್ಯೇಯದ ಇನ್ವೆಸ್ಟ್‌ ಕರ್ನಾಟಕವು ನಾವೀನ್ಯತೆ, ಸುಸ್ಥಿರತೆ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಎಲ್ಲರಿಗೂ ಸಮಾನ ಪಾಲು ಒದಗಿಸಲಿರುವ ಜಾಗತಿಕ ಹೂಡಿಕೆಯ ಶೃಂಗಸಭೆಯಾಗಿರಲಿದೆ. ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್.ಸೆಲ್ವಕುಮಾರ್, ಕೈಗಾರಿಕಾ ಇಲಾಖೆ ಆಯುಕ್ತರಾದ ಗುಂಜನ್ ಕೃಷ್ಣ ಅವರು ಉದ್ಯಮಿಗಳ ಜೊತೆಗಿನ ಸಮಾಲೋಚನೆಯಲ್ಲಿ ಭಾಗವಹಿಸಿದ್ದರು.

  • 14,201 ಎಕರೆಯಲ್ಲಿ 773 ಎಕರೆ ಮಾತ್ರ ವಕ್ಫ್‌ಗೆ ನೋಟಿಫಿಕೇಶನ್ ಆಗಿದೆ: ಕೃಷ್ಣಭೈರೇಗೌಡ

    14,201 ಎಕರೆಯಲ್ಲಿ 773 ಎಕರೆ ಮಾತ್ರ ವಕ್ಫ್‌ಗೆ ನೋಟಿಫಿಕೇಶನ್ ಆಗಿದೆ: ಕೃಷ್ಣಭೈರೇಗೌಡ

    – 1,319 ಎಕರೆ ಮುಸ್ಲಿಂ ಸಮುದಾಯ ಸಂಘಟನೆಗಳ ಹೆಸರಲ್ಲಿದೆ ಎಂದ ಸಚಿವ

    ಬೆಂಗಳೂರು: 14,201 ಎಕರೆಯಲ್ಲಿ 773 ಎಕರೆ ಮಾತ್ರ ವಕ್ಫ್‌ಗೆ ನೋಟಿಫಿಕೇಶನ್ ಆಗಿದೆ. 1,319 ಎಕರೆ ಮುಸ್ಲಿಂ ಸಮುದಾಯ ಸಂಘಟನೆಗಳ ಹೆಸರಲ್ಲಿದೆ ಎಂದು ಸಚಿವ ಕೃಷ್ಣಭೈರೇಗೌಡ ( Krishna Byre Gowda)  ಹೇಳಿದ್ದಾರೆ.

    ರೈತರ ಜಮೀನಿಗೆ ವಕ್ಫ್ ಬೋರ್ಡ್‌ನಿಂದ (Waqf Board) ನೊಟೀಸ್ ವಿಚಾರದ ಕುರಿತು ವಿಧಾನಸೌಧದಲ್ಲಿ ಎಂ ಬಿ ಪಾಟೀಲ್, ಕೃಷ್ಣಭೈರೇಗೌಡ, ಜಮೀರ್ ಅಹಮದ್‌ರಿಂದ ಸುದ್ದಿಗೋಷ್ಠಿ ನಡೆಯಿತು. ಇದನ್ನೂ ಓದಿ: ನಟ ವಿಜಯ್ ಬಿಜೆಪಿಯ ʻಸಿʼ ಟೀಂ – ತಮಿಳುನಾಡು ಡಿಎಂಕೆ ಸಚಿವ ಟೀಕೆ

    ಈ ಕುರಿತು ಕೃಷ್ಣಭೈರೇಗೌಡ ಮಾತನಾಡಿ, ಡಿಸಿ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್ ರಚನೆ ಆಗಿದೆ. ದಾಖಲಾತಿ ಇರುವ ರೈತರು ತಂದು ಡಿಸಿಗೆ ಕೊಡಬಹುದು. ದಾಖಲಾತಿ ಇದ್ದರೆ ಅವರಿಗೆ ಜಮೀನು ಸಿಕ್ಕೇ ಸಿಗುತ್ತದೆ. ಮಂಜೂರು ಆಗಿರೋ ಜಮೀನು ಯಾರಿಂದಲೂ ವಾಪಸ್ ಪಡೆಯುವುದಿಲ್ಲ ಎಂದರು. ಇದನ್ನೂ ಓದಿ: 1974 ಮುಂಚಿನ ದಾಖಲೆ ಇದ್ದರೆ ರೈತರು ಟಾಸ್ಕ್‌ ಫೋರ್ಸ್‌ಗೆ ತಂದುಕೊಡಿ – ಎಂ.ಬಿ ಪಾಟೀಲ್‌

    ವಿಜಯಪುರದಲ್ಲಿ (Vijayapura) ವಕ್ಫ್ ಸಂಸ್ಥೆಗೆ ಸೇರಿದ ಜಮೀನು ಮತ್ತೊಂದು ಕಡೆ ರೈತರ ಜಮೀನು ಇದರ ಬಗ್ಗೆ ಸ್ಪಷ್ಟನೆ ಕೊಡುತ್ತಿದ್ದೇವೆ. ಈಗಾಗಲೇ ಎಂ ಬಿ ಪಾಟೀಲ್ ಹೇಳಿದ್ದಾರೆ. ಆದರೆ ವ್ಯವಸ್ಥಿತವಾಗಿ ವಿವಾದ ಮಾಡೋ ಕೆಲಸ ಆಗುತ್ತಿದೆ. 1973-74ರಲ್ಲಿ ವಿಜಯಪುರ ಜಿಲ್ಲೆಯಲ್ಲಿ ವಕ್ಫ್ ಆಸ್ತಿ ಎಂದು ನೋಂದಣಿ ಆಗಿದೆ. 14,201 ಎಕರೆ ನೋಟಿಫಿಕೇಶನ್ ಆಗಿದೆ. ಇದರಲ್ಲಿ 773 ಎಕರೆ ಮಾತ್ರ ವಕ್ಫ್‌ಗೆ ನೋಟಿಫಿಕೇಶನ್ ಆಗಿದೆ. ಕೆಲವು ದರ್ಗಾ, ಮಸೀದಿ ಸೇರಿದ ಜಾಗ ಇದೆ. 1,319 ಎಕರೆ ವಯಕ್ತಿಕ ಅನುಭೋಗದಲ್ಲಿ ಇಲ್ಲ. ಯಾರಿಗೂ ಮಂಜೂರು ಆಗಿಲ್ಲ. ಅವು ಮುಸ್ಲಿಂ ಸಮುದಾಯದ ಸಂಘಟನೆಗಳ ಹೆಸರಿನಲ್ಲಿ ಇವೆ. 11,835 ಎಕರೆ ರೈತರಿಗೆ ಉಳುವವನೇ ಭೂಮಿಯ ಒಡೆಯ ಅಡಿ ಮಂಜೂರು ಆಗಿದೆ ಎಂದು ತಿಳಿಸಿದರು. ಇದನ್ನೂ ಓದಿ:  13 ವರ್ಷ ಪ್ರೀತಿಸಿದ ಹುಡುಗಿ ಮತ್ತೊಬ್ಬನ ಜೊತೆ ಮದುವೆ – ಡೆತ್ ನೋಟ್ ಬರೆದಿಟ್ಟು ಪ್ರಿಯಕರ  ಆತ್ಮಹತ್ಯೆ

    ಯಾರಿಗೆ ನೊಟೀಸ್ ಕೊಡಬೇಕು ಎಂದು ವಕ್ಫ್ ಸಚಿವರು ಹೇಳಲಿಲ್ಲ. ರೈತರಿಗೆ ಮಂಜೂರಾಗಿರೋ ಜಮೀನು ವಾಪಸ್ ಪಡೆಯೋದು ಸರ್ಕಾರದ ಮುಂದೆ ಇಲ್ಲ. 121 ನೋಟಿಸ್ ಹೋಗಿದೆ. ಇಂಡಿ ತಾಲೂಕಿನಲ್ಲಿ 41 ಜನರಿಗೆ ನೋಟಿಸ್ ಕೊಡಬೇಕಿತ್ತು. ಆದರೆ ನೋಟಿಸ್ ಕೊಡದೇ ಆಗಿದೆ. ಆದರೆ ತಹಶಿಲ್ದಾರರು ನೋಟಿಸ್ ಕೊಟ್ಟಿಲ್ಲ. ಹೀಗಾಗಿ ಎ ಸಿ ಅವರು ಅದನ್ನು ತಹಶಿಲ್ದಾರರಿಗೆ ವಾಪಸ್ ಕಳಿಸುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ದಾನಿಗಳು 1.12 ಲಕ್ಷ ಎಕರೆ ಭೂಮಿಯನ್ನ ವಕ್ಫ್‌ಗೆ ದಾನ ಮಾಡಿದ್ದಾರೆ: ಜಮೀರ್

    ಹೊನವಾಡದಲ್ಲಿ ವಕ್ಫ್ ಆಸ್ತಿ ಎಂದು ಉದ್ದೇಶಪೂರ್ವಕ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಅದು ಸುಳ್ಳು, 1977ರಲ್ಲಿ ಹೊನವಾಡ ಆಸ್ತಿ ಸರ್ಕಾರಕ್ಕೆ ಬಂದಿದೆ. ಹೊನವಾಡದಲ್ಲಿ 1,200 ಎಕರೆ ವಕ್ಫ್ ಆಸ್ತಿ ಇಲ್ಲ. 11 ಎಕರೆ ಜಾಗ ಮಾತ್ರ ವಕ್ಫ್ ಆಸ್ತಿ ಆಗಿದೆ. ಹೊನವಾಡದಲ್ಲಿ ಯಾವ ರೈತರಿಗೂ ನೋಟಿಸ್ ಕೊಡಲಿಲ್ಲ. ಉದ್ದೇಶ ಪೂರ್ವಕವಾಗಿ ರಾಷ್ಟ್ರೀಯ ಮಟ್ಟದಲ್ಲಿ ವಿಪಕ್ಷಗಳು ಸುದ್ದಿ ಮಾಡುತ್ತಿವೆ. ಇದು ಯತ್ನಾಳ್. ವಿಜಯೇಂದ್ರ ನಡುವೆ ಇರುವ ಸಂಘರ್ಷ. ಅವರ ರಾಜಕೀಯ ಬೇಳೆ ಬೇಯಿಸಿಕೊಳ್ಳೋಕೆ ಹೀಗೆ ಮಾಡುತ್ತಿದ್ದಾರೆ. ಇಬ್ಬರ ನಡುವಿನ ಜಗಳ ಮರೆ ಮಾಚುವುದಕ್ಕೆ ಇದನ್ನ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು. ಇದನ್ನೂ ಓದಿ: ಭರ್ತಿಯಾದ ಕೆರೆಕಟ್ಟೆಗಳಿಂದ ಅವಾಂತರ – ಕೈಗೆಬಂದ ತುತ್ತು ಬಾಯಿಗೆ ಬಾರದ ಸ್ಥಿತಿಯಲ್ಲಿ ಚಿತ್ರದುರ್ಗ ರೈತರು

  • ಹೊನವಾಡದಲ್ಲಿ 11 ಎಕರೆ ಮಾತ್ರ ವಕ್ಫ್ ಜಾಗ, ಗೆಜೆಟ್ ನೋಟಿಫಿಕೇಷನ್‌ನಲ್ಲಿ ತಪ್ಪಾಗಿ ನಮೂದಾಗಿದೆ: ಎಂ.ಬಿ ಪಾಟೀಲ್‌

    ಹೊನವಾಡದಲ್ಲಿ 11 ಎಕರೆ ಮಾತ್ರ ವಕ್ಫ್ ಜಾಗ, ಗೆಜೆಟ್ ನೋಟಿಫಿಕೇಷನ್‌ನಲ್ಲಿ ತಪ್ಪಾಗಿ ನಮೂದಾಗಿದೆ: ಎಂ.ಬಿ ಪಾಟೀಲ್‌

    – ಇದ್ಯಾವುದು ವಕ್ಫ್‌ ಜಮೀನಲ್ಲ, ರೈತರ ಜಮೀನು ಎಂದ ಸಚಿವ

    ಬೆಂಗಳೂರು: ಗೆಜೆಟ್ ನೋಟಿಫಿಕೇಷನ್‌ನಲ್ಲಿ ತಪ್ಪಾಗಿ ನಮೂದು ಆಗಿದೆ. ಇದು ಯಾವುದು ವಕ್ಫ್ ಜಮೀನಲ್ಲ. ರೈತರ ಜಮೀನು ಎಂದು ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.

    ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ ಬಹಳಷ್ಟು ಚರ್ಚೆ ಆಗುತ್ತಿದೆ. ವಕ್ಫ್ ಬೋರ್ಡ್ ನೋಟಿಸ್ ಕೊಟ್ಟಿದ್ದಾರೆ. ತಹಶೀಲ್ದಾರ್ ಜೊತೆ ರೈತರ ಜೊತೆಗೆ ಚರ್ಚೆ ಮಾಡಿ, ರೈತರ ಒಂದಿಂಚು ಜಮೀನು ತಪ್ಪಾಗಿ ವಕ್ಫ್‌ಗೆ ಹೋಗುವುದಿಲ್ಲ ಎಂದು ಟ್ವೀಟ್ ಮಾಡಿದ್ದೆ. ಇದಾದ ಮೇಲೆ ತೇಜಸ್ವಿ ಸೂರ್ಯ ಕೂಡ ಹೋಗಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಇದು ದೊಡ್ಡ ಸುದ್ದಿ ಆಗಿದೆ ಎಂದರು. ಇದನ್ನೂ ಓದಿ: ಆತುರದಲ್ಲಿ ಬಿಪಿಎಲ್ ಕಾರ್ಡ್‌ಗೆ ಆಹಾರ ಇಲಾಖೆ ಕೊಕ್ಕೆ- ತೆರಿಗೆ ಕಟ್ಟದಿದ್ದರೂ, ಆದಾಯ ಇಲ್ಲದಿದ್ದರೂ ರದ್ದು

    ವಕ್ಫ್ ಆಸ್ತಿಗಳು 1974, 1978 ಗೆಜೆಟ್ ನೋಟಿಫಿಕೇಷನ್ ಆಗಿದೆ. 2016ರಲ್ಲೂ ಗೆಜೆಟ್ ನೋಟಿಫಿಕೇಷನ್ ಆಗಿದೆ. ಇದು ಮೂರನೇ ಬಾರಿಗೆ ನೋಟಿಫಿಕೇಷನ್ ಆಗಿದೆ. ಗೆಜೆಟ್ ನೋಟಿಫಿಕೇಷನ್‌ನಲ್ಲಿ ತಪ್ಪಾಗಿ ನಮೂದು ಆಗಿದೆ. ಇದು ಯಾವುದು ವಕ್ಫ್ ಜಮೀನಲ್ಲ. ರೈತರ ಜಮೀನು ಎಂದು ಹೇಳಿದರು.

    ವಿಜಯಪುರದಲ್ಲಿ ಎಲ್ಲಾ ದಾಖಲಾತಿಗಳನ್ನು ಪರಿಶೀಲನೆ ಮಾಡಿ, ರೆವೆನ್ಯೂ ರೆಕಾರ್ಡ್ಸ್ ತೆಗೆದುಕೊಂಡು ನಾನೇ ಖುದ್ದಾಗಿ ಬಗೆಹರಿಸುತ್ತೇನೆ. ಮುಂದಿನ ದಿನಗಳಲ್ಲಿ ನಾನೇ ಸಭೆ ಮಾಡುತ್ತೇನೆ. ಹೊನ್ನಾವಡದಲ್ಲಿ 11 ಎಕರೆ ಮಾತ್ರ ವಕ್ಫ್ ಜಾಗ ಇದೆ. ಯಾವುದೇ ಕಾರಣಕ್ಕೂ ಒಂದೇ ಒಂದು ಇಂಚು ತಪ್ಪಾಗಿ ರೈತರ ಜಮೀನನ್ನು ನೀಡುವುದಿಲ್ಲ ಎಂದರು. ಇದನ್ನೂ ಓದಿ: ಸತೀಶ್ ಸೈಲ್‌ಗೆ 6 ಕೇಸ್‌ನಲ್ಲಿ 7 ವರ್ಷ ಜೈಲು – ಕೋರ್ಟ್ ಆದೇಶ ಕೇಳಿ ನನಗೆ ಶಾಕ್ ಆಗಿದೆ: ಡಿಕೆಶಿ

    ತೇಜಸ್ವಿ ಸೂರ್ಯ ಆಗಲಿ ಯಾರೇ ಆಗಲಿ ರಾಜಕೀಯ ಮಾಡಬೇಡಿ. ಯತ್ನಾಳ್ ಅವರಿಗೂ ರಾಜಕೀಯ ಮಾಡಬೇಡಿ ಎಂದು ಹೇಳುತ್ತೇನೆ. ಯತ್ನಾಳ್ ಅವರು ಶೋ ಮಾಡಿದ್ದಾರೆ. ಕೆಲವರು ವೈಭವಿಕರಿಸಿದ್ದಾರೆ, ಇದು ರಾಷ್ಟ್ರೀಯ ಮಾಧ್ಯಮಗಳಲ್ಲಿ ಬಂದಿದೆ. ವಕ್ಫ್ ಆಸ್ತಿ ಇದ್ರೆ ಜಮೀರ್ ಅಹಮದ್ ತೆಗೆದುಕೊಳ್ಳಲಿ ನಾನು ಡಾಕ್ಯೂಮೆಂಟ್ ಕೊಡುತ್ತೇನೆ. ಗೆಜೆಟ್ ನೋಟಿಫಿಕೇಷನ್‌ನಲ್ಲಿ ಆಗಿರೋ ಎಡವಟ್ಟಿಗೆ ಈ ರೀತಿ ಆಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಶಿಗ್ಗಾಂವಿಯಲ್ಲಿ ಅಜ್ಜಂಪೀರ್ ಖಾದ್ರಿ ಬಂಡಾಯ ಶಮನವಾಗಿದೆ- ಡಿಕೆಶಿ

    ಜಿಲ್ಲಾ ಉಸ್ತುವಾರಿ ಸಚಿವನಾಗಿ ನಾನು ಹೇಳುತ್ತೇನೆ ರೈತರದ್ದು ಆಗಲಿ ಅಥವಾ ಖಾಸಗಿ ಅವರದ್ದು ಆಗಲಿ, ಅದು ವಕ್ಫ್ ಬೋರ್ಡ್ದು ಆಗದೇ ಇದ್ದರೆ ಒಂದೇ ಒಂದು ಇಂಚು ಭೂಮಿ ಕೊಡುವುದಿಲ್ಲ. ಊರು ಅಂದ ಮೇಲೆ ಕಾಂಗ್ರೆಸ್ ಮತ್ತು ಬಿಜೆಪಿ ಎಂದು ಇದ್ದೇ ಇರುತ್ತೆ. ಏನು ಬೇಕಾದರೂ ಮಾಡಲಿ, ನಾನು ರೈತರ ಜೊತೆ ಮೀಟಿಂಗ್ ಮಾಡಿ ಮಾತಾಡಿದ್ದೇನೆ. 19 ನೇ ತಾರೀಕಿನಿಂದಲೇ ರೈತರ ಜೊತೆ ಸಭೆ ಮಾಡಿದ್ದೇನೆ. ಅಲ್ಲಿ ತಪ್ಪಾಗಿ ನಮೂದಾಗಿರೋದು ಗೊತ್ತಾಯಿತು. ಆಗ ತಹಶೀಲ್ದಾರ್‌ಗೆ ಪರಿಶೀಲನೆ ಮಾಡುವುದಕ್ಕೆ ಹೇಳಿದ್ದೇನೆ. ತೇಜಸ್ವಿ ಸೂರ್ಯ ಇವಾಗ ಬಂದಿದ್ದಾರೆ ಅಷ್ಟೇ ಎಂದು ಹರಿಯಾಯ್ದರು. ಇದನ್ನೂ ಓದಿ: ನ.15 ರೊಳಗೆ ರಾಜಕಾಲುವೆ ಒತ್ತುವರಿ ತೆರವುಗೊಳಿಸಿ: ಬಿಬಿಎಂಪಿ ಆಯುಕ್ತರ ಸೂಚನೆ

  • ತಿರುಪತಿ ಲಡ್ಡು ವಿಚಾರ ತನಿಖೆ ಆಗಲಿ: ಎಂ.ಬಿ ಪಾಟೀಲ್

    ತಿರುಪತಿ ಲಡ್ಡು ವಿಚಾರ ತನಿಖೆ ಆಗಲಿ: ಎಂ.ಬಿ ಪಾಟೀಲ್

    ಬೆಂಗಳೂರು: ತಿರುಪತಿ ಲಡ್ಡು ತಯಾರಿಕೆಗೆ ಪ್ರಾಣಿ ಕೊಬ್ಬು ಬಳಸಿದ ಪ್ರಕರಣ (Tirupati Laddu row) ತನಿಖೆ ಆಗಲಿ ಎಂದು ಸಚಿವ ಎಂ.ಬಿ ಪಾಟೀಲ್ (M.B Patil) ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧಾರ್ಮಿಕವಾಗಿ ಪಾವಿತ್ರ್ಯ ಹೊಂದಿರುವ ತಿರುಪತಿ ಲಡ್ಡುವಿಗೆ ಪ್ರಾಣಿ ಜನ್ಯ ಕೊಬ್ಬನ್ನು ಸೇರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದು ನಿಜವೇ ಆಗಿದ್ದಲ್ಲಿ ತುಂಬಾ ಆಘಾತಕಾರಿಯಾಗಿದೆ. ಆದ್ದರಿಂದ ಈ ಬಗ್ಗೆ ತನಿಖೆ ನಡೆದು, ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ತಿರುಪತಿ ಲಡ್ಡು ವಿವಾದ – ವರದಿ ಕೇಳಿದ ಕೇಂದ್ರ ಸರ್ಕಾರ

    ಮೊದಲೆಲ್ಲ ಕೆಎಂಎಫ್ ತಿರುಪತಿಗೆ ತುಪ್ಪ ಪೂರೈಸುತ್ತಿತ್ತು. ಆಗ ಕಲಬೆರಕೆ ಇತ್ಯಾದಿ ಏನೂ ಇರಲಿಲ್ಲ. ಈ ಬಗ್ಗೆ ನಾನು ಕೆಎಂಎಫ್ ಅಧ್ಯಕ್ಷರ ಜೊತೆ ಕೂಡ ಮಾತನಾಡಿದ್ದೇನೆ. ಯಾರೇ ಆದರೂ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಬಾರದು. ಈ ಪ್ರಕರಣ ತನಿಖೆಯಾಗಲಿ ಎಂದು ಅವರು ಒತ್ತಾಯಿಸಿದರು. ಇದನ್ನೂ ಓದಿ: ಚಿಕಿತ್ಸೆ ಪಡೆಯುತ್ತಿದ್ದ 27ರ ಒಡಿಶಾ ಗಾಯಕಿ ರುಕ್ಸಾನಾ ಬಾನೊ ಆಸ್ಪತ್ರೆಯಲ್ಲೇ ಸಾವು!

  • ಡೈವರ್ಟ್ ಮಾಡಲು ಮುಡಾದಲ್ಲಿ ಸಿಎಂ ಪಾತ್ರ ಏನಿದೆ? ಜೋಶಿ ಮಾತು ಸರಿ ಇಲ್ಲ: ಎಂ.ಬಿ.ಪಾಟೀಲ್ ಕಿಡಿ

    ಡೈವರ್ಟ್ ಮಾಡಲು ಮುಡಾದಲ್ಲಿ ಸಿಎಂ ಪಾತ್ರ ಏನಿದೆ? ಜೋಶಿ ಮಾತು ಸರಿ ಇಲ್ಲ: ಎಂ.ಬಿ.ಪಾಟೀಲ್ ಕಿಡಿ

    ಬೆಂಗಳೂರು: ಮುಡಾ ಕೇಸ್ ಡೈವರ್ಟ್ ಮಾಡಲು ದರ್ಶನ್ (Darshan) ಫೋಟೋ ಲೀಕ್ ಮಾಡಿಸಿದ್ದಾರೆ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಹೇಳಿಕೆ ವಿಚಾರವಾಗಿ ಸಚಿವ ಎಂ.ಬಿ.ಪಾಟೀಲ್ (M.B Patil) ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.

    ಪ್ರಹ್ಲಾದ್ ಜೋಶಿ ತಿಳಿದವರು, ಅವರು ಈ ರೀತಿ ಮಾತಾನಾಡಿದ್ದು ಸರಿಯಲ್ಲ. ದರ್ಶನ್ ರಾಜಾತಿಥ್ಯ ವಿಚಾರ ಗಂಭೀರವಾದ ಪ್ರಕರಣ. ನಾನು ಹೋಮ್ ಮಿನಿಸ್ಟರ್ ಆಗಿದ್ದಾಗಲೂ ಜೈಲಿನಲ್ಲಿ ಈ ರೀತಿಯ ವ್ಯವಸ್ಥೆ ಗಳನ್ನು ನೋಡಿದ್ದೇನೆ. ಈ ಘಟನೆಯನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಅದಕ್ಕಾಗಿ ದರ್ಶನ್ ಟೀಮ್‌ನ್ನು ಚದುರಿಸಿ ಬೇರೆ ಬೇರೆ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಫೋಟೋ ಲೀಕ್ ಆಗಿದ್ದು ಮತ್ತೆ ಎಲ್ಲರದರ ಬಗ್ಗೆ ತನಿಖೆ ಆಗುತ್ತಿದೆ ಎಂದು ತಿಳಿಸಿದ್ದಾರೆ.

    ಮುಡಾ (MUDA case) ಡೈವರ್ಟ್ ಮಾಡೋಕೆ ಅದರಲ್ಲಿ ಏನಾಗಿದೆ? ಮೂಲ ಮುಡಾ ತಪ್ಪೇ, ಸೈಟ್ ಹಂಚಿಕೆ ಆಗಿದ್ದು ಬಿಜೆಪಿ ಸರ್ಕಾರದ ಅವಧಿಯಲ್ಲಿ. ಇದರಲ್ಲಿ ಸಿದ್ದರಾಮಯ್ಯ ಅವರ ಪಾಲು ಏನಿದೆ? ಮುಡಾದಿಂದ ಯಾರು ಭಯಗೊಂಡಿಲ್ಲ. ಕಾನೂನಾತ್ಮಕವಾಗಿ ಹೋರಾಟ ಮಾಡ್ತಿದ್ದೇವೆ. ಇದರಲ್ಲಿ ನಮಗೆ ಜಯ ಸಿಕ್ಕೆ ಸಿಗುತ್ತದೆ. ಹಗಲು ಕನಸು ಬೇಡ, ಗವರ್ನರ್ ನಡವಳಿಕೆ ಮಾತ್ರ ಕಾನೂನು ಬಾಹಿರ ಎಂದು ಅವರು ಟಾಂಗ್ ಕೊಟ್ಟಿದ್ದಾರೆ.