Tag: M.B Patil

  • ಬ್ರಿಗೇಡ್ ಸಮೂಹದಿಂದ 1 ಲಕ್ಷ ಗಿಡ ನೆಡುವ ಕಾರ್ಯಕ್ರಮಕ್ಕೆ ಎಂ.ಬಿ ಪಾಟೀಲ್ ಚಾಲನೆ

    ಬ್ರಿಗೇಡ್ ಸಮೂಹದಿಂದ 1 ಲಕ್ಷ ಗಿಡ ನೆಡುವ ಕಾರ್ಯಕ್ರಮಕ್ಕೆ ಎಂ.ಬಿ ಪಾಟೀಲ್ ಚಾಲನೆ

    – ಬೆಂಗಳೂರು ಸುತ್ತಮುತ್ತ ಅರ್ಬನ್ ಫಾರೆಸ್ಟ್‌ಗೆ ಅವಕಾಶ

    ಬೆಂಗಳೂರು: ನಗರೀಕರಣ, ಕೈಗಾರಿಕೀಕರಣಗಳಿಂದಾಗಿ ಬೆಂಗಳೂರಿಗೆ (Bengaluru) ಇದ್ದ ಉದ್ಯಾನ ನಗರಿ ಎಂಬ ಹೆಗ್ಗಳಿಕೆ ಮಸುಕಾಗಿದೆ. ಆದರೆ, ಇಲ್ಲಿ ಮತ್ತು ಸುತ್ತಮುತ್ತಲಿನ ಪಟ್ಟಣಗಳಲ್ಲಿ ನಗರ ಅರಣ್ಯ (ಅರ್ಬನ್‌ ಫಾರೆಸ್ಟ್)‌ ಬೆಳೆಸಲು ಯಥೇಚ್ಛ ಅವಕಾಶಗಳಿವೆ. ಮುಂದಿನ ದಿನಗಳಲ್ಲಿ ʻನಮ್ಮ ಬೆಂಗಳೂರು, ಹಸಿರು ಬೆಂಗಳೂರುʼ ಆಗಬೇಕು ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ (M.B.Patil) ಆಶಿಸಿದ್ದಾರೆ.

    ಬ್ರಿಗೇಡ್‌ ಫೌಂಡೇಷನ್‌ ಶುಕ್ರವಾರ ದೇವನಹಳ್ಳಿ ಸಮೀಪದ ಹರಳೂರಿನಲ್ಲಿ ಇರುವ ಕೆಐಎಡಿಬಿ ಏರೋಸ್ಪೇಸ್‌ ಪಾರ್ಕ್-‌2ರಲ್ಲಿ ಏರ್ಪಡಿಸಿದ್ದ, ಒಂದು ಲಕ್ಷ ಗಿಡ ನೆಡುವ ಕಾರ್ಯಕ್ರಮ (One Lakh Trees Movement) ʻಫ್ರಮ್‌ ಸ್ಯಾಪ್ಲಿಂಗ್ಸ್‌ ಟು ಎ ಸ್ಯಾಂಕ್ಚುರಿʼ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ನಾವು ಕೃಷಿ, ಕೈಗಾರಿಕೆ ಮತ್ತು ಆಹಾರ ಈ ಮೂರೂ ವಲಯಗಳ ನಡುವೆ ಸಮತೋಲನ ಸಾಧಿಸಿಕೊಂಡು ಹೋಗಬೇಕಾಗಿದೆ. ಇವು ನಮ್ಮ ಅಸ್ತಿತ್ವ ಮತ್ತು ಅಭಿವೃದ್ಧಿಗೆ ಮೂಲಭೂತ ಅಗತ್ಯಗಳಾಗಿವೆ. ಇವುಗಳಲ್ಲಿ ಯಾವುದನ್ನೂ ನಾವು ನಿಷೇಧಿಸುವುದು ಸಾಧ್ಯವಿಲ್ಲ. ಆದ್ದರಿಂದ ಮಿಯಾವಾಕಿ ಅರಣ್ಯದ ಮಾದರಿಯನ್ನು ನಾವು ಅಳವಡಿಸಿಕೊಂಡು, ಪರಿಸರವನ್ನು ಬೆಳೆಸುವ ಕೆಲಸವನ್ನೂ ಮಾಡಬೇಕಾದ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

    ತಮ್ಮ ತವರು ವಿಜಯಪುರ ಜಿಲ್ಲೆ ಹಿಂದೆ ಮರಗಳಿಲ್ಲದೆ ಭಣಗುಡುತ್ತಿತ್ತು. ಹತ್ತು ವರ್ಷಗಳ ಹಿಂದೆ ಅಲ್ಲಿ ಕೇವಲ 0.17% ರಷ್ಟು ಮಾತ್ರ ಅರಣ್ಯವಿತ್ತು. ಈಗ ಅಲ್ಲಿ ಸ್ವಪ್ರಯತ್ನದಿಂದ ಒಂದೂವರೆ ಕೋಟಿ ಗಿಡಗಳನ್ನು ನೆಡಲಾಗಿದೆ. ಅರಣ್ಯ ಪ್ರಮಾಣ ಈಗ 2%ರಷ್ಟಾಗಿದೆ. ವಿಜಯಪುರ ಜಿಲ್ಲಾ ಕೇಂದ್ರಕ್ಕೆ ಸಮೀಪದಲ್ಲಿರುವ ಮಮದಾಪುರದಲ್ಲಿ ಸೌರವಿದ್ಯುತ್‌ ಮತ್ತು ಹನಿ ನೀರಾವರಿ ಮೂಲಕ ಅರಣ್ಯವನ್ನು ಸೃಷ್ಟಿಸಲಾಗಿದೆ. ಇದರಿಂದಾಗಿ ಗಿಡಮರಗಳಿಂದ ತುಂಬಿರುವ ಎರಡು ಗುಡ್ಡಗಳೇ ಅಲ್ಲಿ ನಿರ್ಮಾಣವಾಗಿವೆ. ಈ ಮಾದರಿಯನ್ನು ಸ್ವತಃ ಅರಣ್ಯ ಇಲಾಖೆ ಅಳವಡಿಸಿಕೊಂಡಿದ್ದು, ವರ್ಷಕ್ಕೆ ಐದು ಕೋಟಿ ಗಿಡ ನೆಡುವ ಗುರಿ ಹಾಕಿಕೊಂಡಿದೆ. ಇದನ್ನು ನೋಡಲು ಬೇರೆಬೇರೆ ರಾಜ್ಯಗಳು ಮತ್ತು ವಿದೇಶಗಳಿಂದಲೂ ಆಸಕ್ತರು ಬರುತ್ತಿದ್ದಾರೆ. ನ್ಯೂಯಾರ್ಕ್‌ ಟೈಮ್ಸ್‌ ಪತ್ರಿಕೆ ಕೂಡ ಇದರ ಬಗ್ಗೆ ಸವಿವರವಾಗಿ ವರದಿ ಪ್ರಕಟಿಸಿದೆ ಎಂದು ಅವರು ವಿವರಿಸಿದ್ದಾರೆ.

    ನಮಗೆ ಕೃಷಿಯೂ ಬೇಕು, ಕೈಗಾರಿಕೆಯೂ ಬೇಕು. ಇತ್ತೀಚೆಗೆ ಲಂಡನ್‌ನಲ್ಲಿ ಕ್ಯೂ ಗಾರ್ಡನ್‌ಗೆ ಭೇಟಿ ಕೊಟ್ಟಿದ್ದಾಗ ಅಲ್ಲಿಯ ಮಾದರಿಗಳನ್ನು ವೀಕ್ಷಿಸಿದೆ. ಅದು ನಮ್ಮ ಲಾಲ್‌ಬಾಗ್‌ನಷ್ಟೇ ಇದ್ದರೂ, ಅತ್ಯುತ್ತಮ ವಿಧಾನಗಳು ಅಲ್ಲಿವೆ. ಇದನ್ನೆಲ್ಲ ನಾನು ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ ವಿವರಿಸಿದ್ದೇನೆ. ಕ್ಯೂ ಗಾರ್ಡನ್‌ನಲ್ಲಿರುವ ಮಾದರಿಗಳನ್ನು ನಮ್ಮಲ್ಲೂ ಅಳವಡಿಸಿಕೊಳ್ಳಬಹುದು. ಬೇರೆ ಯಾರೋ ಬಂದು ನಮ್ಮ ಪರಿಸರವನ್ನು ಸಂರಕ್ಷಿಸುತ್ತಾರೆ ಎಂದುಕೊಳ್ಳುವುದೇ ನಿಜವಾದ ಸಮಸ್ಯೆ ಎಂಬ ಪರಿಸರ ಚಿಂತ ರಾಬರ್ಟ್‌ ಸ್ವಾನ್‌ನ ಮಾತು ನಮಗೆ ಎಚ್ಚರಿಕೆಯ ಗಂಟೆಯಾಗಬೇಕು ಎಂದು ಅವರು ನುಡಿದಿದ್ದಾರೆ.

    ಬ್ರಿಗೇಡ್‌ ಸಮೂಹದವರು ವೈಟ್‌ಫೀಲ್ಡ್‌ನಲ್ಲಿ ಮಿಯಾವಾಕಿ ಅರಣ್ಯವನ್ನು ಅಭಿವೃದ್ಧಿ ಪಡಿಸಿರುವುದು ಶ್ಲಾಘನೀಯ ಸಂಗತಿಯಾಗಿದೆ. ನಾನು ಒಂದು ದಿನ ಪರಿಸರಾಸಕ್ತನಾಗಿ ಭೇಟಿ ಕೊಡಲಿದ್ದೇನೆ. ಪರಿಸರ ಸಂರಕ್ಷಣೆಯ ವಿಚಾರದಲ್ಲಿ ನಾನು ಕೈಗಾರಿಕಾ ಸಚಿವನಾಗಿ ಯೋಚಿಸುವುದಿಲ್ಲ. ವಿಜಯಪುರ ಜಿಲ್ಲೆಯೊಂದರಲ್ಲೇ ಒಂದೂವರೆ ಕೋಟಿ ಗಿಡಗಳನ್ನು ನೆಟ್ಟಿರುವಾಗ ರಾಜ್ಯದಲ್ಲಿ ಎಷ್ಟು ಕೋಟಿ ಗಿಡಗಳನ್ನು ನೆಡಬಹುದು ಎನ್ನುವುದು ತಿಳಿಯುತ್ತದೆ. ನಮ್ಮ ಜಿಲ್ಲೆಯಲ್ಲಿ ರೈತರಿಗೆ ಅವರು ಬಯಸುವಂತಹ ಗಿಡಗಳನ್ನೇ ಕೊಡಲಾಗುತ್ತಿದೆ. ಇದರ ಅಂಗವಾಗಿ ಪ್ರತೀವರ್ಷವೂ ವೃಕ್ಷಥಾನ್‌ ನಡೆಸುತ್ತಿದ್ದು, ಅದರಲ್ಲಿ ಹದಿನೈದು ಸಾವಿರ ಮಂದಿ ಉತ್ಸಾಹದಿಂದ ಭಾಗವಹಿಸುತ್ತಾರೆ ಎಂದು ತಮ್ಮ ಅನುಭವ ಹಂಚಿಕೊಂಡರು.

    ಪಾಟೀಲ್‌ ಬಗ್ಗೆ ಮುನಿಯಪ್ಪ ಮೆಚ್ಚುಗೆ
    ಸಚಿವ ಕೆ ಎಚ್‌ ಮುನಿಯಪ್ಪ ಮಾತನಾಡಿ, ʻಮನಸ್ಸು ಮಾಡಿದರೆ ಎಂತಹ ಅದ್ಭುತವನ್ನು ಸಾಧಿಸಬಹುದು ಎನ್ನುವುದನ್ನು ಸಚಿವ ಎಂ.ಬಿ ಪಾಟೀಲ್‌ರು ವಿಜಯಪುರದಲ್ಲಿ ಮಾಡಿ ತೋರಿಸುತ್ತಿದ್ದಾರೆ. ಇವರಿಂದಾಗಿ, ವಿಜಯಪುರ ಈಗ ಹಸಿರೀಕರಣ ಮತ್ತು ಜಲ ಸಂರಕ್ಷಣೆಯ ನಾಡಾಗಿದೆ. ಈ ಮೂಲಕ ಅವರು ತಮ್ಮನ್ನು ಚುನಾಯಿಸಿದ ಕ್ಷೇತ್ರದ ಋಣವನ್ನು ಶಾಶ್ವತವಾಗಿ ತೀರಿಸಿದ್ದಾರೆ. ಈಗ ಕೂಡ ಪಾಟೀಲರು ಕೈಗಾರಿಕಾ ಸಚಿವರಾಗಿ ದೂರದೃಷ್ಟಿಯಿಂದ ಕೆಲಸ ಮಾಡುತ್ತಿದ್ದು, ಕೆಲದಿನಗಳ ಹಿಂದಷ್ಟೇ ಮೂರು ಲಕ್ಷ ಕೋಟಿ ರೂ. ಬಂಡವಾಳ ತಂದಿದ್ದಾರೆ. ಇಂತಹ ಕೆಲಸ ಇಡೀ ಭಾರತದಲ್ಲೇ ಎಲ್ಲೂ ಆಗುತ್ತಿಲ್ಲ. ಅವರಿಗೆ ನಿಜಕ್ಕೂ ಉಜ್ವಲ ಭವಿಷ್ಯವಿದೆ. ಪರಿಸರ ಸಂರಕ್ಷಣೆಯ ಬಗ್ಗೆಯೂ ಅವರಿಗೆ ಸ್ಪಷ್ಟವಾದ ಚಿಂತನೆ ಇದೆʼ ಎಂದು ಕೊಂಡಾಡಿದರು.

    ಕಾರ್ಯಕ್ರಮದಲ್ಲಿ ಬ್ರಿಗೇಡ್‌ ಸಮೂಹದ ಟ್ರಸ್ಟಿ ಎಂ ಆರ್‌ ಜಯಶಂಕರ್‌, ಬ್ರಿಗೇಡ್‌ ಫೌಂಡೇಷನ್‌ ಸಿಇಒ ಶಿವಯೋಗಿ ಕಳಸದ, ವಿಮಾನ ನಿಲ್ದಾಣ ಪ್ರದೇಶ ಪ್ರಾಧಿಕಾರದ ಅಧ್ಯಕ್ಷ ವಿ.ಶಾಂತಕುಮಾರ್‌, ನಿವೃತ್ತ ಪೊಲೀಸ್‌ ಅಧಿಕಾರಿ ಮೇಘರಿಕ್‌, ಹರಳೂರು ಗ್ರಾಪಂ ಅಧ್ಯಕ್ಷ ದೇವರಾಜು ಮುಂತಾದವರು ಉಪಸ್ಥಿತರಿದ್ದರು.

  • ಮುಖ್ಯಮಂತ್ರಿ ಭೇಟಿಯಾದ ಫಾಕ್ಸ್‌ಕಾನ್‌ ಮುಖ್ಯಸ್ಥ ರಾಬರ್ಟ್‌ ವೂ

    ಮುಖ್ಯಮಂತ್ರಿ ಭೇಟಿಯಾದ ಫಾಕ್ಸ್‌ಕಾನ್‌ ಮುಖ್ಯಸ್ಥ ರಾಬರ್ಟ್‌ ವೂ

    ಬೆಂಗಳೂರು: ಐಫೋನ್ (iPhone) ಮತ್ತು ಅದರ ಬಿಡಿಭಾಗಗಳ ತಯಾರಿಕೆಗೆ ಹೆಸರಾಗಿರುವ ಫಾಕ್ಸ್‌ಕಾನ್‌ (Foxconn) ಕಂಪನಿಯ ಭಾರತದ ಮುಖ್ಯಸ್ಥ ರಾಬರ್ಟ್‌ ವೂ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರನ್ನು ಭಾನುವಾರ ಭೇಟಿಯಾಗಿ, ಮತ್ತಷ್ಟು ಬಂಡವಾಳ ಹೂಡಿಕೆ ಮತ್ತಿತರ ಸಂಗತಿಗಳ ಬಗ್ಗೆ ಚರ್ಚಿಸಿದರು.

    ಮುಖ್ಯಮಂತ್ರಿಯವರ ಅಧಿಕೃತ ನಿವಾಸ ಕಾವೇರಿಯಲ್ಲಿ ನಡೆದ ಈ ಭೇಟಿಯ ಸಂದರ್ಭದಲ್ಲಿ ಬೃಹತ್‌ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್, ಐಟಿ-ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ, ಕೌಶಲ್ಯಾಭಿವೃದ್ಧಿ ಸಚಿವ ಶರಣಪ್ರಕಾಶ ಪಾಟೀಲ್‌, ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್‌.ಮುನಿಯಪ್ಪ ಕೂಡ ಇದ್ದರು. ಇದನ್ನೂ ಓದಿ: ಸರ್ವೇಗೆ ಹೋದಾಗ ಬೆಂಗಳೂರಲ್ಲಿ ಕುರಿ, ಕೋಳಿ, ಚಿನ್ನ, ಫ್ರಿಡ್ಜ್ ಬಗ್ಗೆ ಪ್ರಶ್ನೆ ಕೇಳಬೇಡಿ: ಅಧಿಕಾರಿಗಳಿಗೆ ಡಿಸಿಎಂ ಮೌಖಿಕ ಸೂಚನೆ

    ವೂ ಅವರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ‘ಫಾಕ್ಸ್‌ಕಾನ್‌ ಕಂಪನಿಯು ದೇವನಹಳ್ಳಿಯ ತನ್ನ ಘಟಕದಲ್ಲಿ ಕೈಗಾರಿಕಾ ಚಟುವಟಿಕೆ ಆರಂಭಿಸಿರುವುದು ಒಳ್ಳೆಯದು. ಇನ್ನೂ ಘಟಕದ ವಿಸ್ತರಣೆಗೆ ಅಗತ್ಯ ಇರುವ ಎಲ್ಲ ರೀತಿಯ ಸಹಕಾರ ನೀಡಲಾಗುವುದು’ ಎಂದು ಭರವಸೆ ನೀಡಿದ್ದಾರೆ.

    ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಮಾತನಾಡಿ, ದೇವನಹಳ್ಳಿಯಲ್ಲಿರುವ ಘಟಕವು ಫಾಕ್ಸ್‌ಕಾನ್‌ ಕಂಪನಿಯ ಎರಡನೇ ಅತಿದೊಡ್ಡ ಘಟಕವಾಗಿದೆ. ಆಪಲ್‌ ಕಂಪನಿಗೆ ಇದು ಜಾಗತಿಕ ಮಟ್ಟದಲ್ಲಿ ಮುಂಚೂಣಿ ಪೂರೈಕೆದಾರ ಸಂಸ್ಥೆಯಾಗಿದೆ. ದೇವನಹಳ್ಳಿಯಲ್ಲಿ ತಯಾರಾಗುವ ಐಫೋನ್‌ಗಳನ್ನು ಜಾಗತಿಕ ಸ್ತರದಲ್ಲಿ ರಫ್ತು ಮಾಡಲಾಗುತ್ತಿದೆ. ಒಟ್ಟಾರೆಯಾಗಿ ಕಂಪನಿಯು ಇಲ್ಲಿ 22 ಸಾವಿರ ಕೋಟಿ ರೂ. ಹೂಡಿಕೆ ಮಾಡಿದೆ ಎಂದಿದ್ದಾರೆ. ಇದನ್ನೂ ಓದಿ: ಕೇಂದ್ರ ಸಚಿವ ಸೋಮಣ್ಣ ಮನೆಯಲ್ಲಿ ಜಾತಿಗಣತಿಗೆ 9 ಸಿಬ್ಬಂದಿ – ಸರ್ವೇಗೆ ಇಷ್ಟು ಜನ ಯಾಕೆ ಬಂದ್ರಿ ಅಂತ ಕ್ಲಾಸ್

    ಈ ಭೇಟಿಯ ಸಂದರ್ಭದಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್‌, ಆಯುಕ್ತೆ ಗುಂಜನ್‌ ಕೃಷ್ಣ ಮತ್ತು ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡಬಸವರಾಜು ಕೂಡ ಉಪಸ್ಥಿತರಿದ್ದರು.

  • ಮಹಾರಾಷ್ಟ್ರದ ತಕರಾರಿನ ಹಿಂದೆ ಬರೀ ರಾಜಕೀಯ ದುರುದ್ದೇಶ: ಎಂ.ಬಿ ಪಾಟೀಲ್

    ಮಹಾರಾಷ್ಟ್ರದ ತಕರಾರಿನ ಹಿಂದೆ ಬರೀ ರಾಜಕೀಯ ದುರುದ್ದೇಶ: ಎಂ.ಬಿ ಪಾಟೀಲ್

    – ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಳದಿಂದ ಸಾಂಗ್ಲಿ, ಕೊಲ್ಲಾಪುರ ಜಿಲ್ಲೆಗಳಲ್ಲಿ ಪ್ರವಾಹ ಎನ್ನುವುದು ಅರ್ಥಹೀನ

    ಬೆಂಗಳೂರು: ಕರ್ನಾಟಕವು ಆಲಮಟ್ಟಿ ಅಣೆಕಟ್ಟನ್ನು ಎತ್ತರಿಸುವುದರಿಂದ ಸಾಂಗ್ಲಿ ಮತ್ತು ಕೊಲ್ಲಾಪುರ ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗುತ್ತದೆ ಎನ್ನುವ ಮಹಾರಾಷ್ಟ್ರದ ತಕರಾರಿಗೆ ಅರ್ಥವಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ (M B Patil) ಕಿಡಿಕಾರಿದ್ದಾರೆ.

    ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಆಲಮಟ್ಟಿ ಅಣೆಕಟ್ಟನ್ನು (Alamatti Dam) ನಾವು ಕಟ್ಟುವುದಕ್ಕೂ ಮೊದಲೇ ಸಾಂಗ್ಲಿಯಲ್ಲಿ (Sangli) 1964, 1976, 1994 ಮತ್ತು 1997ರಲ್ಲಿ ಭೀಕರ ಪ್ರವಾಹ ಸೃಷ್ಟಿಯಾಗಿತ್ತು. ಸುಪ್ರೀಂ ಕೋರ್ಟ್ ಕೂಡ ಅಣೆಕಟ್ಟಿನ ಎತ್ತರವನ್ನು 524.256 ಮೀ.ಗೆ ನಾವು ಏರಿಸಬಹುದು ಎಂದು 2000ದಲ್ಲೇ ಹೇಳಿದೆ. ಇದಾದ ಮೇಲೂ ಮಹಾರಾಷ್ಟ್ರವು (Maharashtra) ನಮಗೆ ವಿರುದ್ಧವಾಗಿ 2005 ರಲ್ಲಿ ನ್ಯಾಯಾಧಿಕರಣಕ್ಕೆ ಹೋಯಿತು. ಆದರೆ, ಅದರ ಮಧ್ಯಂತರ ಮನವಿಯಲ್ಲೂ ತಿರಸ್ಕೃತಗೊಂಡಿದೆ ಎಂದಿದ್ದಾರೆ. ಇದನ್ನೂ ಓದಿ: ಹೆಚ್‌ಎನ್ ವ್ಯಾಲಿ ನೀರನ್ನ ಸಂಪುಟ ಸದಸ್ಯರಿಗೆ ಕುಡಿಸಿ ಶುದ್ಧತೆ ಸಾಬೀತುಪಡಿಸಲಿ: ಸಚಿವ ಸುಧಾಕರ್‌ಗೆ ಸಂಸದ ಸುಧಾಕರ್‌ ಸವಾಲ್‌

    ಆಲಮಟ್ಟಿ ಅಣೆಕಟ್ಟಿನ ಕಾರಣದಿಂದಾಗಿಯೇ ಮಹಾರಾಷ್ಟ್ರದ ಸಾಂಗ್ಲಿ ಮತ್ತು ಕೊಲ್ಲಾಪುರ (Kollapura) ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗುತ್ತದೆ ಎಂಬ ವಾದವನ್ನು ನ್ಯಾಯಮಂಡಳಿಯು ಪುರಸ್ಕರಿಸಿಲ್ಲ. ಈ ಸಂಬಂಧವಾಗಿ ನ್ಯಾಯಾಧಿಕರಣವು 2010 ಮತ್ತು 2013ರಲ್ಲಿ ಕೂಡ ವಿಸ್ತೃತ ವರದಿ ನೀಡಿದೆ. ಈ ವಿಚಾರದಲ್ಲಿ ಹಿಪ್ಪರಗಿ ಜಲಾಶಯವನ್ನೂ ಪರಿಗಣಿಸಿದೆ. ಜೊತೆಗೆ, ಕೃಷ್ಣಾ ನೀರು ಹಂಚಿಕೆ ಸಂಬಂಧ ರಚಿಸಲಾದ ಎರಡನೆಯ ನ್ಯಾಯಾಧಿಕರಣವು ನೀಡಿರುವ ತೀರ್ಪನ್ನು ಇದುವರೆಗೂ ಯಾವ ರಾಜ್ಯಗಳೂ ಪ್ರಶ್ನಿಸಿಲ್ಲ. ಹೀಗಿರುವಾಗ, ಈಗ ಇದ್ದಕ್ಕಿದ್ದಂತೆ ತಕರಾರು ತೆಗೆಯುವುದರ ಹಿಂದಿನ ಉದ್ದೇಶ ಯಾರಿಗಾದರೂ ಅರ್ಥವಾಗುತ್ತದೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಆಟೋದಲ್ಲಿ ಬಂದು ಅಂಗಡಿ ಮುಂದಿದ್ದ ಉಪ್ಪಿನ ಮೂಟೆ ಕದ್ದ ಕಳ್ಳರು

    ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಿಸಿದರೆ ತನಗೆ ನೀರು ಬರುವುದಿಲ್ಲ ಎಂದು ಆಂಧ್ರಪ್ರದೇಶ ಕೂಡ (ವಿಭಜನೆಗೂ ಮುನ್ನ) ಆಕ್ಷೇಪ ಮಾಡಿತ್ತು. ಆದರೆ, ಅವರ ವಾದ ಕೂಡ ಬಿದ್ದು ಹೋಗಿದೆ. ಈಗ ನಾವು ಅಣೆಕಟ್ಟಿನ ಎತ್ತರಕ್ಕೆ ಮುಂದಾಗಿರುವುದನ್ನು ಮರುಪರಿಶೀಲಿಸಲು ಮಹಾರಾಷ್ಟ್ರವು ಆಗ್ರಹಿಸಿರುವುದು ರಾಜಕೀಯ ದುರುದ್ದೇಶದಿಂದ ಕೂಡಿದೆ. 5 ವರ್ಷಗಳ ಕಾಲ ನೀರಾವರಿ ಸಚಿವನಾಗಿದ್ದ ನನಗೆ ಇದರ ಬಗ್ಗೆ ಸ್ಪಷ್ಟ ತಿಳಿವಳಿಕೆ ಇದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಾಮಾಜಿಕ ಮಾಧ್ಯಮದಲ್ಲಿ ನೀಡುವ ಮಾಹಿತಿ ನಿಖರ, ನಿಷ್ಪಕ್ಷಪಾತವಾಗಿರಬೇಕು – ಇ.ಡಿ ಕಿವಿಹಿಂಡಿದ ದೆಹಲಿ ಕೋರ್ಟ್

    ಸಾಂಗ್ಲಿ ಜಿಲ್ಲೆಯಲ್ಲಿ ಜಲಾನಯನ ಪ್ರದೇಶಗಳು ವಿಪರೀತ ಒತ್ತುವರಿಯಾಗಿವೆ. ಇದಕ್ಕೆ ಸಂಬಂಧಿಸಿದ ವರದಿ ನನ್ನ ಬಳಿ ಇದೆ. ಅಲ್ಲಿನ ಸರ್ಕಾರ ಈ ಸಮಸ್ಯೆಯನ್ನು ಬಗೆಹರಿಸುವ ಕಡೆಗೆ ಗಮನ ಕೊಡಬೇಕು. ಅದನ್ನು ಬಿಟ್ಟು ನಮಗೆ ಅಡ್ಡಗಾಲು ಹಾಕಬಾರದು. ನನ್ನಲ್ಲಿರುವ ದಾಖಲೆಗಳನ್ನು ನಾನು ಜಲಸಂಪನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ್ ಅವರಿಗೂ ಕೊಡುತ್ತೇನೆ. ನಾವು ಇದಕ್ಕೆ ವಿವರವಾಗಿ ತಕ್ಕ ಉತ್ತರ ಕೊಡುತ್ತೇವೆ ಎಂದು ತಿಳಿಸಿದ್ದಾರೆ.

  • ರಾಜ್ಯದಲ್ಲಿ ಹೂಡಿಕೆ: ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಜೊತೆ ರೋಲ್ಸ್‌ ರಾಯ್ಸ್‌ ಕಂಪನಿ ಮಾತುಕತೆ

    ರಾಜ್ಯದಲ್ಲಿ ಹೂಡಿಕೆ: ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಜೊತೆ ರೋಲ್ಸ್‌ ರಾಯ್ಸ್‌ ಕಂಪನಿ ಮಾತುಕತೆ

    ಬೆಂಗಳೂರು: ಜಾಗತಿಕ ಮಟ್ಟದ ಅಗ್ರಗಣ್ಯ ಕಂಪನಿಗಳಲ್ಲಿ ಒಂದಾಗಿರುವ, ರಕ್ಷಣೆ ಹಾಗೂ ವೈಮಾಂತರಿಕ್ಷ ವಲಯದಲ್ಲಿ ಹೆಸರು ಮಾಡಿರುವ ರೋಲ್ಸ್‌ ರಾಯ್ಸ್‌ (Rolls Royce) ಕಂಪನಿಯು ರಾಜ್ಯದಲ್ಲಿ ಮಾಡಲು ಉದ್ದೇಶಿಸಿರುವ ಬಂಡವಾಳ ಹೂಡಿಕೆ-ವಿಸ್ತರಣೆ, ಅದರ ಭವಿಷ್ಯದ ಯೋಜನೆಗಳು ಮತ್ತು ತಂತ್ರಜ್ಞಾನ ಸೌಲಭ್ಯ ಕುರಿತು ಸಚಿವ ಎಂ.ಬಿ.ಪಾಟೀಲ್‌ (M.B.Patil) ಅವರು ಆ ಕಂಪನಿಯ ಉನ್ನತ ಮಟ್ಟದ ನಿಯೋಗದ ಜೊತೆ ಬುಧವಾರ ಮಹತ್ವದ ಮಾತುಕತೆ ನಡೆಸಿದ್ದಾರೆ.

    ರೋಲ್ಸ್‌ ರಾಯ್ಸ್‌ ನಿಯೋಗದಲ್ಲಿ ಅದರ ಜಾಗತಿಕ ಮಟ್ಟದ ನಿರ್ದೇಶಕ ಫಿಲ್‌ ಪ್ರೀಸ್ಟ್‌, ಭಾರತದಲ್ಲಿನ ಬಿಝಿನೆಸ್‌ ಸರ್ವೀಸ್‌ ವಿಭಾಗದ ಮುಖ್ಯಸ್ಥ ಟಾಮ್‌ ಕ್ಯಾಂಡ್ರಿಕಾಲ್‌, ಡಿಫೆನ್ಸ್‌ ವಿಭಾಗದ ಭಾರತದ ಮುಖ್ಯಸ್ಥೆ ಗಾಯತ್ರಿ ಶರ್ಮ ಸಚಿವರನ್ನು ಭೇಟಿಯಾಗಿದ್ದರು. ಇದನ್ನೂ ಓದಿ: ಬೆಂಗಳೂರು ಜಲಮಂಡಳಿಯಲ್ಲಿ ಕಾನೂನು ಅಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ

    ಉದ್ದೇಶಿತ ಹೈಟೆಕ್‌ ರಕ್ಷಣಾ ಮತ್ತು ವೈಮಾಂತರಿಕ್ಷ ಪಾರ್ಕ್‌ ಸ್ಥಾಪನೆಗೆ ದೇವನಹಳ್ಳಿ ತಾಲೂಕಿನಲ್ಲಿ ಪ್ರಸ್ತಾವಿತ ಭೂಸ್ವಾಧೀನವನ್ನು ಸರ್ಕಾರ ಕೈಬಿಟ್ಟ ಮರುದಿನವೇ ಈ ಮಾತುಕತೆ ನಡೆದಿರುವುದು ಗಮನಾರ್ಹವಾಗಿದೆ.

    ರೋಲ್ಸ್‌ ರಾಯ್ಸ್‌ ಕಂಪನಿ ಜೊತೆಗಿನ ಮಾತುಕತೆ ಬಳಿಕ ಮಾತನಾಡಿದ ಸಚಿವರು, ರಾಜ್ಯದಲ್ಲಿರುವ ಕೈಗಾರಿಕಾ ಬೆಳವಣಿಗೆಯ ಅವಕಾಶಗಳು ಮತ್ತು ಇಲ್ಲಿನ ರಕ್ಷಣಾ ಕಾರ್ಯಪರಿಸರದ ಬಗ್ಗೆ ಮನದಟ್ಟು ಮಾಡಿಕೊಡಲಾಗಿದೆ. ನಮ್ಮಲ್ಲಿರುವ ಆಧುನಿಕ ತಾಂತ್ರಿಕ ಪರಿಸರ, ದೀರ್ಘಕಾಲೀನ ದೂರದೃಷ್ಟಿ ಮತ್ತು ಪ್ರಗತಿಪರವಾಗಿರುವ ಕೈಗಾರಿಕಾ ನೀತಿಗಳನ್ನು ಅವರೂ ಮೆಚ್ಚಿಕೊಂಡಿದ್ದಾರೆ. ಜತೆಗೆ ಸಹಭಾಗಿತ್ವ ಹೆಚ್ಚಿಸಿಕೊಳ್ಳಲು ಕಂಪನಿಯ ಅಧಿಕಾರಿಗಳು ಒಲವು ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಕಂಪನಿಯ ಬೆಂಗಳೂರು ಘಟಕದ ವಿಸ್ತರಣೆ ಕೂಡ ನಡೆಯುತ್ತಿದ್ದು, ಆ ಬಗ್ಗೆ ಚರ್ಚಿಸಲಾಯಿತು. ಸಂಸ್ಥೆಗೆ ಭೇಟಿ ನೀಡುವಂತೆ ಅವರು ಆಹ್ವಾನ ನೀಡಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಕೃಷ್ಣಾ ನದಿ ನೀರು ಹಂಚಿಕೆ ವಿವಾದ – ಅಂತಿಮ ವರದಿ ಸಲ್ಲಿಕೆಗೆ ಜು.31ರವರೆಗೆ ಅವಧಿ ವಿಸ್ತರಣೆ

    ದೇವನಹಳ್ಳಿಯಲ್ಲಿ ರೈತರ ಕೃಷಿ ಚಟುವಟಿಕೆಗಳನ್ನು ಪರಿಗಣಿಸಿ ಭೂಸ್ವಾಧೀನ ಕೈಬಿಡಲಾಗಿದೆ. ಆದರೆ, ರಾಜ್ಯದ ಎಲ್ಲ ಕಡೆಗಳಲ್ಲೂ ಕೈಗಾರಿಕೆಗಳಿಗೆ ಭೂಮಿ ಇದೆ. ಈ ಬಗ್ಗೆ ಹೂಡಿಕೆದಾರರು ಆತಂಕಕ್ಕೆ ಒಳಗಾಗಬೇಕಿಲ್ಲ. ಅವರು ಕೇಳಿದ ಕಡೆಗಳಲ್ಲಿ ಅವರಿಗೆ ಅಗತ್ಯವಿರುವಷ್ಟು ಭೂಮಿ ಕೊಡಲಾಗುವುದು. ರಾಜ್ಯದ ಕೈಗಾರಿಕಾ ಬೆಳವಣಿಗೆಯು ಅಬಾಧಿತವಾಗಿ ಮುಂದುವರಿಯಲಿದೆ. ನಾವೀಗ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ರಾಜ್ಯವಾಗಿದ್ದು, ಅದಕ್ಕೆ ತಕ್ಕಂತೆ ನಮ್ಮ ಉಪಕ್ರಮಗಳು ಇರಲಿವೆ ಎಂದು ಹೇಳಿದ್ದಾರೆ.

    ಈ ಸಂದರ್ಭದಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್‌, ಆಯುಕ್ತೆ ಗುಂಜನ್‌ ಕೃಷ್ಣ ಉಪಸ್ಥಿತರಿದ್ದರು.

  • ನಾಯಕತ್ವದಲ್ಲಿ ಗೊಂದಲವಿಲ್ಲ: ಸಿಎಂಗೆ ಶಾಸಕರ ಬೆಂಬಲವಿದೆ, ಹಾಗಂತ ಡಿಕೆಶಿಗೆ ಬೆಂಬಲ ಇಲ್ಲ ಅಂತ ಅಲ್ಲ: ಎಂ.ಬಿ.ಪಾಟೀಲ್

    ನಾಯಕತ್ವದಲ್ಲಿ ಗೊಂದಲವಿಲ್ಲ: ಸಿಎಂಗೆ ಶಾಸಕರ ಬೆಂಬಲವಿದೆ, ಹಾಗಂತ ಡಿಕೆಶಿಗೆ ಬೆಂಬಲ ಇಲ್ಲ ಅಂತ ಅಲ್ಲ: ಎಂ.ಬಿ.ಪಾಟೀಲ್

    ಬೆಂಗಳೂರು: ಸಿದ್ದರಾಮಯ್ಯ (Siddaramaiah) ಅವರು ನಾನೇ ಸಿಎಂ ಎಂದು ಹೇಳಿದ್ದಾರೆ, ಅದರಲ್ಲಿ ತಪ್ಪೇನಿದೆ. ಸಿಎಂ ಆಗಿ ಮುಂದುವರಿಯುತ್ತಾರೆ ಅಂತ ಹೈಕಮಾಂಡ್ ಅನಾವಶ್ಯಕವಾಗಿ ಏಕೆ ಹೇಳುತ್ತೆ? ಎಂದು ಸಚಿವ ಎಂ.ಬಿ.ಪಾಟೀಲ್ (M.B. Patil) ಹೇಳಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಡಿಕೆಶಿಗೆ (D.K Shivakumar) ಶಾಸಕರ ಬೆಂಬಲ ಇಲ್ಲ ಅಂತ ಸಿದ್ದರಾಮಯ್ಯ ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಈಗ ಸಿದ್ದರಾಮಯ್ಯ ಅವರಿಗೆ ಶಾಸಕರ ಬೆಂಬಲ ಇದೆ. ಹಾಗಂತ ಡಿಕೆಶಿ ಅವರಿಗೆ ಶಾಸಕರ ಬೆಂಬಲ ಇಲ್ಲ ಅಂತ ಅರ್ಥ ಅಲ್ಲ. ಇದೆಲ್ಲ ಗಣನೆಗೆ ಬರಲ್ಲ, ನಮ್ಮದು ಹೈಕಮಾಂಡ್ ಪಕ್ಷ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. ಇದನ್ನೂ ಓದಿ: ದೇವನಹಳ್ಳಿ ಭೂಸ್ವಾಧೀನ ಬಿಕ್ಕಟ್ಟು: ಮಂಗಳವಾರ ಸಿಎಂ ಸಿದ್ದರಾಮಯ್ಯ ಅಂತಿಮ ತೀರ್ಮಾನ

    ರಾಜ್ಯ ಕಾಂಗ್ರೆಸ್‌ (Congress)  ಸರ್ಕಾರದಲ್ಲಿ ನಾಯಕತ್ವದ ಗೊಂದಲವೇನೂ ಇಲ್ಲ. ಪಕ್ಷದಲ್ಲಿ ರಾಜ್ಯ ಉಸ್ತುವಾರಿಯಾಗಿರುವ ರಣದೀಪ್‌ ಸುರ್ಜೇವಾಲಾ ಅವರು ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದಂತೆ ನಮ್ಮ ಪಕ್ಷದ ಶಾಸಕರ ಅಭಿಪ್ರಾಯ ಕೇಳಿದ್ದಾರೆ. ಅದರಲ್ಲಿ ತಪ್ಪೇನೂ ಇಲ್ಲ. ಕೊನೆಗೂ ದುಡ್ಡು ಕೊಡುವುದು ಮುಖ್ಯಮಂತ್ರಿಗಳೇ ತಾನೇ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

    ಬಿಜೆಪಿ (BJP) ನಮ್ಮ ಐವತ್ತರವತ್ತು ಶಾಸಕರ ಮೇಲೆ ಕಣ್ಣಿಟ್ಟು, ಏಜೆಂಟರನ್ನು ಕಳಿಸುತ್ತಿದೆ ಎಂದು ನಮ್ಮ ಪಕ್ಷದ ಶಾಸಕರೇ ಹೇಳಿದ್ದಾರೆ. ಆದರೆ, ನಮ್ಮಲ್ಲಿ 140ಕ್ಕೂ ಹೆಚ್ಚು ಶಾಸಕರಿದ್ದಾರೆ. ಪಕ್ಷಾಂತರ ಆಗಬೇಕೆಂದರೆ 80-90 ಶಾಸಕರು ಹೋಗಬೇಕಾಗುತ್ತದೆ. ಈಗ ಯಾರೂ ಅಷ್ಟು ಮೂರ್ಖರಿಲ್ಲ. ಹಿಂದೇನೋ 17 ಶಾಸಕರು ಬಿಜೆಪಿಗೆ ಹೋದರು. ಈಗ ಅದೆಲ್ಲ ನಡೆಯುವುದಿಲ್ಲ. ವಾಸ್ತವವಾಗಿ ಬಿಜೆಪಿ-ಜೆಡಿಎಸ್‌ ಕೂಟದ 18-20 ಶಾಸಕರು ಕಾಂಗ್ರೆಸ್‌ ಬಾಗಿಲು ಬಡಿಯುತ್ತಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಗಾಳಿ ಆಂಜನೇಯ ದೇವಸ್ಥಾನ | ಅವ್ಯವಹಾರ ನಡೆದ್ರೆ 5 ವರ್ಷ ವಶಕ್ಕೆ ಪಡೆಯಲು ಅವಕಾಶವಿದೆ:ರಾಮಲಿಂಗಾ ರೆಡ್ಡಿ ಸಮರ್ಥನೆ

  • ಸೆಪ್ಟೆಂಬರ್‌ನಲ್ಲಿ ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ `ಕಲಾಲೋಕ’ ಮಳಿಗೆ ಉದ್ಘಾಟನೆ: ಎಂ.ಬಿ ಪಾಟೀಲ್

    ಸೆಪ್ಟೆಂಬರ್‌ನಲ್ಲಿ ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ `ಕಲಾಲೋಕ’ ಮಳಿಗೆ ಉದ್ಘಾಟನೆ: ಎಂ.ಬಿ ಪಾಟೀಲ್

    – ಕರ್ನಾಟಕದ ಅಸ್ಮಿತೆ ಸಾರುವ 6 ಮತ್ತು 28 ಜಿ.ಐ. ಉತ್ಪನ್ನಗಳ ಪ್ರದರ್ಶನ, ಮಾರಾಟ

    ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2ರಲ್ಲಿ ಕರ್ನಾಟಕದ ಅಸ್ಮಿತೆ ಸಾರುವ 6 ಮತ್ತು ಜಿ.ಐ. ಟ್ಯಾಗ್ ಹೊಂದಿರುವ 28 ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನ ವ್ಯವಸ್ಥೆ ಇರುವ ಆಕರ್ಷಕ ಕಲಾಲೋಕ ಮಳಿಗೆ ಸಿದ್ಧವಾಗುತ್ತಿದೆ. ಇದನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ (M B Patil) ತಿಳಿಸಿದ್ದಾರೆ.

    ಸರ್ಕಾರಿ ಸ್ವಾಮ್ಯದ ವಿಶ್ವೇಶ್ವರಯ್ಯ ಟ್ರೇಡ್ ಪ್ರೊಮೋಶನ್ ಸೆಂಟರ್ (ವಿಟಿಪಿಸಿ) ಸೇರಿದಂತೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಪ್ರಮುಖ ಅಧಿಕಾರಿಗಳೊಂದಿಗೆ ಈ ಯೋಜನೆಯ ಪ್ರಗತಿಯ ಸಂಬಂಧ ಪರಿಶೀಲನಾ ಸಭೆ ನಡೆಸಿದ್ದಾರೆ. ಇದನ್ನೂ ಓದಿ: ಚಾಣಕ್ಯ ವಿವಿಗೆ ಹಂಚಿಕೆಯಾಗಿದ್ದ ಭೂಮಿಗೆ ಲ್ಯಾಂಡ್ ಆಡಿಟ್ – ಜಮೀನು ವಾಪಸ್ ಪಡೆಯುತ್ತಾ ಸರ್ಕಾರ?

    ಬಳಿಕ ಮಾತನಾಡಿದ ಅವರು, ಕಲಾಲೋಕ ಮಳಿಗೆಯಲ್ಲಿ ರಾಜ್ಯದ ಅಸ್ಮಿತೆ ಸಾರುವ ಕಾಫಿ, ಮೈಸೂರು ಸಿಲ್ಕ್ಸ್, ಕೆಎಸ್‌ಡಿಎಲ್ ಉತ್ಪನ್ನಗಳಾದ ಗಂಧದ ಸಾಬೂನು ಇತ್ಯಾದಿ, ಲಿಡ್ಕರ್ ಉತ್ಪನ್ನಗಳು, ಕರಕುಶಲ ನಿಗಮದ ವಸ್ತುಗಳು ಮತ್ತು ಕೈಮಗ್ಗ ನಿಗಮದ ಉತ್ಪನ್ನಗಳು ಇರಲಿವೆ. ಇವುಗಳ ಜೊತೆಗೆ ಚನ್ನಪಟ್ಟಣದ ಬೊಂಬೆಯಂಥ 28 ಜಿ.ಐ. ಉತ್ಪನ್ನಗಳನ್ನೂ ಇಡಲಾಗುವುದು. ಇವುಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ಯಾಕಿಂಗ್ ವಿನ್ಯಾಸ ಮತ್ತು ಬ್ರ‍್ಯಾಂಡಿಂಗ್ ಮಾಡಿ, ಪ್ರದರ್ಶನ ಮತ್ತು ಮಾರಾಟ ನಡೆಸಲಾಗುವುದು. ಜಾಗತಿಕ ಮಟ್ಟದ ಗ್ರಾಹಕರನ್ನು ಸೆಳೆಯುವುದು ಇದರ ಉದ್ದೇಶವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಹೆಣ್ಣುಮಕ್ಕಳನ್ನ ಅವಹೇಳನ ಮಾಡೋದೇ ಬಿಜೆಪಿ ಸಂಸ್ಕೃತಿ: ಹರಿಪ್ರಸಾದ್ ಕಿಡಿ

    ಮುಂದಿನ ದಿನಗಳಲ್ಲಿ ಇಂಟರ್‌ನ್ಯಾಷನಲ್ ಲಾಂಜ್‌ನಲ್ಲಿ ಕೂಡ ಕಲಾಲೋಕ ಮಳಿಗೆ ತೆರೆಯಲಾಗುವುದು. ಇದಕ್ಕಾಗಿ ಟೆಂಡರ್ ಆಹ್ವಾನಿಸಲಾಗುವುದು. ಈಗ ಸಿದ್ಧವಾಗುತ್ತಿರುವ ಮೊದಲ ಮಳಿಗೆಯು 130 ಚದರ ಮೀಟರ್ ವಿಸ್ತೀರ್ಣ ಹೊಂದಿದ್ದು, ಆಗಸ್ಟ್ ಕೊನೆಯ ಹೊತ್ತಿಗೆ ಸಂಪೂರ್ಣವಾಗಿ ಇದರ ಕೆಲಸಗಳು ಮುಗಿಯಲಿವೆ. ಕೆಂಪೇಗೌಡ ವಿಮಾನ ನಿಲ್ದಾಣವು ಇದಕ್ಕೆ ನಿಗದಿತ ಬಾಡಿಗೆಯಲ್ಲಿ 50%ರಷ್ಟು ರಿಯಾಯಿತಿ ಕೊಟ್ಟಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಜಮೌಳಿ ಸಿನಿಮಾ ರಿಜೆಕ್ಟ್ ಮಾಡಿದ ನಟ ವಿಕ್ರಂ – ಕಾರಣ ಏನ್ ಗೊತ್ತಾ?

    ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ವಿಶ್ವೇಶ್ವರಯ್ಯ ಟ್ರೇಡ್ ಪ್ರೊಮೋಶನ್ ಸೆಂಟರ್‌ನ ವ್ಯವಸ್ಥಾಪಕ ನಿರ್ದೇಶಕ ಶಿವಕುಮಾರ್ ಸೇರಿ ಎಲ್ಲಾ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

  • ಡಿಫೆನ್ಸ್ ಕಾರಿಡಾರ್ ಬಗ್ಗೆ ಚರ್ಚಿಸಲು ನಾಳೆ ಸಿಎಂ ಜೊತೆ ರಾಜನಾಥ್ ಸಿಂಗ್ ಭೇಟಿ: ಎಂ.ಬಿ.ಪಾಟೀಲ್

    ಡಿಫೆನ್ಸ್ ಕಾರಿಡಾರ್ ಬಗ್ಗೆ ಚರ್ಚಿಸಲು ನಾಳೆ ಸಿಎಂ ಜೊತೆ ರಾಜನಾಥ್ ಸಿಂಗ್ ಭೇಟಿ: ಎಂ.ಬಿ.ಪಾಟೀಲ್

    ಬೆಂಗಳೂರು: ಹಿಂದೆ ಕೇಂದ್ರ ಸರ್ಕಾರ ನಮ್ಮನ್ನು ಕಡೆಗಣಿಸಿ ತಮಿಳುನಾಡು ಮತ್ತು ಉತ್ತರಪ್ರದೇಶಕ್ಕೆ ಡಿಫೆನ್ಸ್ ಕಾರಿಡಾರ್ (Defence Corridor) ಮಂಜೂರು ಮಾಡಿದೆ. ಈ ಲೋಪವನ್ನು ನಾನು ಹಿಂದೆಯೇ ಕೇಂದ್ರದ ಗಮನಕ್ಕೆ ತಂದಿದ್ದೇನೆ. ಕೋಲಾರ-ಚಿಕ್ಕಬಳ್ಳಾಪುರ ಮತ್ತು ಹುಬ್ಬಳ್ಳಿ-ಬೆಳಗಾವಿ ನಡುವೆ ನಮಗೆ ಎರಡು ಡಿಫೆನ್ಸ್ ಕಾರಿಡಾರ್ ಕೊಡಬೇಕು. ಇದನ್ನು ಮನದಟ್ಟು ಮಾಡಿಕೊಡಲೆಂದೇ ಬುಧವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅವರನ್ನು ದೆಹಲಿಯಲ್ಲಿ ಭೇಟಿ ಮಾಡುತ್ತಿದ್ದೇನೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah)  ಕೂಡ ಇರಲಿದ್ದಾರೆ ಎಂದು ಎಂ.ಬಿ ಪಾಟೀಲ್ (M.B Patil) ತಿಳಿಸಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಕ್ಷಣೆ ಮತ್ತು ವೈಮಾಂತರಿಕ್ಷ ವಲಯದಲ್ಲಿ ನಾವು ದೇಶಕ್ಕೇ ಅಗ್ರಸ್ಥಾನದಲ್ಲಿದ್ದೇವೆ. ಹೀಗಾಗಿ ನಮಗೆ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಭಾಗದಲ್ಲಿ ಒಂದೊಂದು ಡಿಫೆನ್ಸ್ ಕಾರಿಡಾರ್ ಅಗತ್ಯವಾಗಿ ಬೇಕಾಗಿದೆ. ಬೆಳಗಾವಿಯಲ್ಲಿ ಈಗ ಏಕಸ್ ತರಹದ ದೈತ್ಯ ಕಂಪನಿಗಳಿವೆ. ಬೇರೆ ರಾಜ್ಯದವರಿಗೆ ಡಿಫೆನ್ಸ್ ಕಾರಿಡಾರ್ ಕೊಡುವುದರಲ್ಲಿ ತಪ್ಪಿಲ್ಲ. ಆದರೆ, ನಮಗೆ ಸಲ್ಲಬೇಕಾದ್ದು ಸಲ್ಲಲೇಬೇಕು ಎಂದಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ ಟ್ರಕ್, ಕಾರು ನಡುವೆ ಅಪಘಾತ – ಭಾರತ ಮೂಲದ ನಾಲ್ವರು ಸಜೀವ ದಹನ

    ಹಿಂದೆ ಮಾಡಿದ ತಪ್ಪು ಕೇಂದ್ರ ಸರ್ಕಾರಕ್ಕೆ ಅರಿವಾಗಿದೆ. ನಮ್ಮ ಹಿಂದಿನ ಭೇಟಿಗಳಲ್ಲಿ ರಾಜನಾಥ್ ಸಿಂಗ್ ಅವರೇ ಇದನ್ನು ಒಪ್ಪಿಕೊಂಡಿದ್ದರು. ಫೆಬ್ರವರಿಯಲ್ಲಿ ಅವರು ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಬಂದಿದ್ದಾಗಲೂ ಈ ಸಂಗತಿಯನ್ನು ಪ್ರಸ್ತಾಪಿಸಲಾಗಿತ್ತು ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಇಂದು ಇಡೀ ದಿನ ಮನೆಯಲ್ಲೇ ವಿಶ್ರಾಂತಿ ಪಡೆಯಲಿದ್ದಾರೆ ಸಿಎಂ

  • ಬಾಬಾನಗರದ ಬಳಿ ಹೊಸ ಕೆರೆ ನಿರ್ಮಿಸಲು 550 ಕೋಟಿ ರೂ. ಅನುದಾನಕ್ಕೆ ಎಂ.ಬಿ ಪಾಟೀಲ್ ಮನವಿ

    ಬಾಬಾನಗರದ ಬಳಿ ಹೊಸ ಕೆರೆ ನಿರ್ಮಿಸಲು 550 ಕೋಟಿ ರೂ. ಅನುದಾನಕ್ಕೆ ಎಂ.ಬಿ ಪಾಟೀಲ್ ಮನವಿ

    ಬೆಂಗಳೂರು: ವಿಜಯಪುರ (Vijayapur) ಜಿಲ್ಲೆಯ ಬಬಲೇಶ್ವರ ಮತ್ತು ತಿಕೋಟಾ, ಬಾಗಲಕೋಟೆ ಜಿಲ್ಲೆಯ ಜಮಖಂಡಿ ಮತ್ತು ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನಲ್ಲಿ ನೀರಾವರಿ ಮತ್ತು ಕುಡಿಯುವ ನೀರು ಪೂರೈಸುವ ತುಬುಚಿ – ಬಬಲೇಶ್ವರ ಏತ ನೀರಾವರಿ ಯೋಜನೆಯಡಿಯಲ್ಲಿ ಬಾಬಾನಗರದ ಬಳಿ ಹೊಸದಾಗಿ ಕೆರೆ ನಿರ್ಮಿಸಲು 550 ಕೋಟಿ ರೂ. ಅನುದಾನ ಒದಗಿಸಬೇಕೆಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ (M.B Patil) ಅವರು ಜಲಸಂಪನ್ಮೂಲ ಸಚಿವ‌ ಡಿ.ಕೆ ಶಿವಕುಮಾರ್ (D.K Shivakumar) ಅವರಿಗೆ ಮನವಿ ಸಲ್ಲಿಸಿದ್ದಾರೆ.

    ಸದಾಶಿವನಗರದ ನಿವಾಸದಲ್ಲಿ ಡಿಸಿಎಂ ಅವರನ್ನು ಗುರುವಾರ ಅವರು ಭೇಟಿ ಮಾಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ತುಬುಚಿ-ಬಬಲೇಶ್ವರ ಏತ ನೀರಾವರಿ ಯೋಜನೆಯಲ್ಲಿ 6.3 ಟಿಎಂಸಿ ನೀರನ್ನು ಮೇಲ್ಕಂಡ ತಾಲ್ಲೂಕುಗಳ 1.30 ಲಕ್ಷ ಎಕರೆಗೆ ಹರಿಸಲಾಗುತ್ತಿದೆ. ಇಲ್ಲಿ 60%ರಷ್ಟು ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತಿದ್ದು, ಬೇಸಿಗೆಯಲ್ಲಿ ನೀರಿನ ಕೊರತೆ ಎದುರಾಗುತ್ತಿದೆ. ಇದನ್ನು ಬಗೆಹರಿಸಲು ಬಾಬಾನಗರದ ಸಮೀಪ ಕೆರೆ ಕಟ್ಟಿ, 0.775 ಟಿಎಂಸಿ ನೀರನ್ನು ತುಂಬಲು ಅವಕಾಶವಿದೆ. ಇಲ್ಲಿ 679.25 ಎಕರೆ ಸರ್ಕಾರಿ ಜಮೀನಿದ್ದು, ಈ ಪೈಕಿ 434 ಎಕರೆಯಲ್ಲಿ ಕೆರೆ ಕಟ್ಟಬೇಕೆಂದು ರೈತರು ಆಗ್ರಹಿಸುತ್ತಿದ್ದಾರೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಡಿಕೆಶಿ ಸಿಎಂ ಆಗಬೇಕೆಂಬ ಆಸೆ ನನಗೂ ಇದೆ, ಅವ್ರ ಶ್ರಮಕ್ಕೆ ಫಲ ಸಿಗುತ್ತೆ: ಡಿಕೆ ಸುರೇಶ್‌

    556.5 ಕೋಟಿ ರೂ. ವೆಚ್ಚದಲ್ಲಿ ಹೊಸ ಕೆರೆಯನ್ನು ನಿರ್ಮಿಸಲು ಚಿಂತಿಸಲಾಗಿದೆ. ಈ ನೀರನ್ನು ಬೇಸಿಗೆ ಕಾಲದಲ್ಲಿ ಜನ, ಜಾನುವಾರು ಮತ್ತು ಬೆಳೆಗಳಿಗೆ ಉಪಯೋಗಿಸಿಕೊಳ್ಳಬಹುದಾಗಿದೆ. ಇದಕ್ಕೆ ತುಬುಚಿ-ಬಬಲೇಶ್ವರ ಏತ ನೀರಾವರಿ ಯೋಜನೆಯ ಎರಡನೆಯ ವಿತರಣಾ ತೊಟ್ಟಿಯಿಂದ ನೀರು ಹರಿಸಲು ಅವಕಾಶವಿದೆ. ಇದಕ್ಕೆ ಜಪಸಂಪನ್ಮೂಲ ಇಲಾಖೆಯು ಸಕಾರಾತ್ಮಕವಾಗಿ ಸ್ಪಂದಿಸುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಲಾಟರಿ ಸಿಎಂ, ಅವ್ರ ಕುರ್ಚಿ ಅಲುಗಾಡ್ತಿದೆ – ಜೆಡಿಎಸ್ ಲೇವಡಿ

  • ಎರಡು ವರ್ಷಗಳಲ್ಲಿ 6 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ: ಎಂ.ಬಿ ಪಾಟೀಲ್

    ಎರಡು ವರ್ಷಗಳಲ್ಲಿ 6 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ: ಎಂ.ಬಿ ಪಾಟೀಲ್

    ಬೆಂಗಳೂರು: ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ 2 ವರ್ಷಗಳಲ್ಲಿ ಬೃಹತ್ ಕೈಗಾರಿಕೆ ಇಲಾಖೆಯಲ್ಲಿ 6 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ಆಗಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ (M B Patil) ತಿಳಿಸಿದರು.

    ವಿಧಾನಸೌಧದಲ್ಲಿ ಇಲಾಖೆಯ 2 ವರ್ಷಗಳ ಸಾಧನೆ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು. ಈ ವೇಳೆ, 2 ವರ್ಷಗಳಲ್ಲಿ ರಾಜ್ಯದಲ್ಲಿ 6,57,660 ಕೋಟಿ ರೂ. ಹೂಡಿಕೆ ಆಗಿದೆ. 115 ಒಡಂಬಡಿಕೆಗಳು ಆಗಿದೆ. ಇದರಿಂದ 2,32,771 ಉದ್ಯೋಗ ಸೃಷ್ಟಿ ಆಗಲಿದೆ. ಏಕಗವಾಕ್ಷಿ ಅನುಮೋದನೆ ಸಮಿತಿಯೂ 906 ಯೋಜನೆಗೆ ಒಪ್ಪಿಗೆ ನೀಡಿದೆ. ಇದರಿಂದ 1,13,200 ಕೋಟಿ ರೂ. ಹೂಡಿಕೆ ನಿರೀಕ್ಷೆ ಇದೆ. 2,23,982 ಉದ್ಯೋಗ ಸೃಷ್ಟಿ ಆಗಲಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಜಾತಿಗಣತಿಗೆ 10 ವರ್ಷ ಆಗಿದ್ದಕ್ಕೆ ಹೊಸ ಜಾತಿಗಣತಿ: ಎಂ.ಬಿ ಪಾಟೀಲ್

    ಫೆಬ್ರವರಿಯಲ್ಲಿ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ ಮಾಡಿದ್ದೆವು. 3,250 ಉದ್ಯಮಿಗಳು ಭಾಗಿಯಾಗಿದ್ರು. 1,200 ಕಂಪನಿಗಳು ಹೂಡಿಕೆ ಆಸಕ್ತಿ ತೋರಿಸಿವೆ. 6,23,845 ಕೋಟಿ ಹೂಡಿಕೆ ಒಪ್ಪಿಗೆ ಆಗಿದೆ. 4,03,533 ಕೋಟಿ ರೂ. ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಹೊಸ ಕೈಗಾರಿಕಾ ನೀತಿ 2025-30 ಘೋಷಣೆ ಮಾಡಲಾಗಿದೆ. ಹೊಸ ಕೈಗಾರಿಕೆ ನೀತಿ ಕೈಗಾರಿಕಾ ಅಭಿವೃದ್ಧಿಗೆ ಪೂರಕವಾಗಿದೆ. 5 ವರ್ಷಗಳಲ್ಲಿ 7.50 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ಆಕರ್ಷಣೆ ಮಾಡುವುದು ಮತ್ತು 20 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ ಎಂದರು. ಇದನ್ನೂ ಓದಿ: ಬೋಯಿಂಗ್‌ ನಿರ್ಮಿತ ವಾಯುಸೇನೆಯ ಅಪಾಚೆ ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶ

    ಪರಿಸರ ಸ್ನೇಹಿ ಇಂಧನ ನೀತಿ 2024-29 ಜಾರಿ ಮಾಡಲಾಗಿದೆ. ಇದರಿಂದ 1 ಲಕ್ಷ ಹೊಸ ಉದ್ಯೋಗ ಸೃಷ್ಟಿ ಆಗಲಿದೆ. 50 ಸಾವಿರ ಹೂಡಿಕೆ ಆಕರ್ಷಣೆಯ ಗುರಿ ಇದೆ. ಕ್ವೀನ್ ಸಿಟಿ ವಿನೂತನ ಯೋಜನೆ ಅನುಷ್ಠಾನ ಮಾಡಲಾಗ್ತಿದೆ. 2000ಕ್ಕೂ ಹೆಚ್ಚು ಎಕ್ರೆಯಲ್ಲಿ ಈ ಕ್ವೀನ್ ಸಿಟಿ ಬರಲಿದೆ. 40 ಸಾವಿರ ಹೂಡಿಕೆ ಆಗಲಿದೆ. 80 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ ಆಗಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ವಿಮಾನ ದುರಂತ: ವಿಮಾನಯಾನ ಸಚಿವರ ರಾಜೀನಾಮೆಗೆ ಸಚಿವ ಈಶ್ವರ ಖಂಡ್ರೆ ಒತ್ತಾಯ

    ಚಿಕ್ಕಬಳ್ಳಾಪುರದಲ್ಲಿ ಭಾರತದ ಮೊದಲ ಡೀಪ್ ಟೆಕ್ ಪಾರ್ಕ್ ನಿರ್ಮಾಣ ಆಗ್ತಿದೆ. 3 ಸಾವಿರಕ್ಕೂ ಹೆಚ್ಚು ಎಕ್ರೆಯಲ್ಲಿ ಇದು ನಿರ್ಮಾಣ ಆಗಲಿದೆ. ಇದರಲ್ಲಿ ಬಾಹ್ಯಾಕಾಶ ತಂತ್ರಜ್ಞಾನ, ಡೋಮ್ ತಯಾರಿಕೆ, ಸೇರಿ ಹಲವು ತಂತ್ರಜ್ಞಾನ ಇರಲಿದೆ. ಕರ್ನಾಟಕದಲ್ಲಿ ಫಾಕ್ಸ್ ಕಾನ್ 22 ಸಾವಿರಕ್ಕೂ ಹೆಚ್ಚು ಕೋಟಿ ರೂ. ಹೂಡಿಕೆ ಮಾಡಿದೆ. ಶೆವ್ರಾನ್ 8 ಸಾವಿರಕ್ಕೂ ಹೆಚ್ಚು ಕೋಟಿ ಹೂಡಿಕೆ. ಹೀರೋ ಎನರ್ಜಸ್ 11 ಸಾವಿರ ಕೋಟಿ ರೂ., ಟಾಟಾ ಸಮೂಹ 3,330 ಸಾವಿರ ಕೋಟಿ ರೂ., ಸನ್ಸೇರಾ 2,100 ಸಾವಿರ ಕೋಟಿ ರೂ., ಜಿಂದಾಲ್ 4 ಸಾವಿರಕ್ಕೂ ಹೆಚ್ಚು ಕೋಟಿ ಹೂಡಿಕೆ ಮಾಡಿದೆ. ಕರ್ನಾಟಕ ಎಂಆರ್‌ಒ ಹಬ್ ಆಗ್ತಿದೆ. ಅದಕ್ಕೆ ಬೇಕಾದ ಸಿದ್ಧತೆ ಮಾಡಲಾಗ್ತಿದೆ. ಇನ್ವೆಸ್ಟ್ ಕರ್ನಾಟಕ ಫೋರಂ ಪುನರ್ ರಚನೆ ಮಾಡಲಾಗಿದೆ. ಸೆಕ್ಟರ್ ವೈಸ್ ಇಂಡಸ್ಟ್ರಿ ತಜ್ಞರನ್ನ ನೇಮಕ ಮಾಡಿಕೊಳ್ಳಲಾಗ್ತಿದೆ. ನೇಮಕಾತಿ ಪ್ರಕ್ರಿಯೆ ಆಗ್ತಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಮೈಸೂರು ಸ್ಯಾಂಡಲ್ ಸೋಪ್ ಬ್ಯುಸಿನೆಸ್ ಹೆಚ್ಚಿಸಲು ತಮನ್ನಾ ಆಯ್ಕೆ: ಎಂ.ಬಿ ಪಾಟೀಲ್

    ಕೆಐಎಡಿಬಿಯಲ್ಲೂ ಹಲವು ಕಾರ್ಯಕ್ರಮ ಆಗಿದೆ. ಚಿತ್ರದುರ್ಗದಲ್ಲಿ ಡ್ರೋನ್ ಪಾರ್ಕ್ ಮಾಡ್ತಿದ್ದೇವೆ.ಹುಬ್ಬಳ್ಳಿಯಲ್ಲಿ ಸ್ಟಾರ್ಟ್ ಅಪ್ ಪಾರ್ಕ್ ಆಗ್ತಿದೆ. ಸ್ವಿಫ್ಟ್ ಸಿಟಿ ಪ್ರಾರಂಭ ಮಾಡೋ ಕೆಲಸ ಮಾಡ್ತಿದ್ದೇವೆ. ಬಳ್ಳಾರಿಯಲ್ಲಿ ಜೀನ್ಸ್ ಕ್ಲಸ್ಟರ್ ಪ್ರಾರಂಭ ಮಾಡ್ತಿದ್ದೇವೆ ಅಂತ ತಿಳಿಸಿದರು.

    ಎಂಎಸ್‌ಐಎಲ್‌ನಲ್ಲಿ ಇವತ್ತು ಉತ್ತಮವಾಗಿ ನಡೆಯುತ್ತಿದೆ. ಪ್ರವಾಸಿ ಪ್ಯಾಕೇಜ್ ಮಾಡ್ತಿದ್ದೇವೆ. ಶೀಘ್ರವೇ ಇ-ಕಾಮರ್ಸ್ ಸೇವೆ ಪ್ರಾರಂಭ ಮಾಡುತ್ತೇವೆ. ಎಂಎಸ್‌ಐಎಲ್‌ನಲ್ಲಿ ಚಿಟ್ ಫಂಡ್‌ಅನ್ನು ಆನ್‌ಲೈನ್‌ನಲ್ಲಿ ಮಾಡೋ ವ್ಯವಸ್ಥೆ ಜಾರಿ ಮಾಡ್ತಿದ್ದೇವೆ. 5 ವರ್ಷಗಳಲ್ಲಿ 10 ಸಾವಿರ ಕೋಟಿ ರೂ. ಬಿಸಿನೆಸ್ ಮಾಡುವ ಟಾರ್ಗೆಟ್ ಇದೆ. ಕೆಐಎಡಿಬಿ ಮೈಲುಗಲ್ಲು ಸಾಧಿಸಿದೆ. 2028ರ ವೇಳೆಗೆ 5 ಸಾವಿರ ಗುರಿ ಹಾಕಿಕೊಳ್ಳಲಾಗಿದೆ. ಉತ್ಕೃಷ್ಟ ಪರ್ಫ್ಯೂಮ್ ತಯಾರು ಮಾಡ್ತಿದ್ದೇವೆ. ಕೆಐಎಡಿಬಿ ಗತವೈಭವ ಮರುಗಳಿಸುವ ಕೆಲಸ ಮಾಡ್ತಿದ್ದೇವೆ. ಈ ತಿಂಗಳು 30 ಕೋಟಿ ರೂ. ವಹಿವಾಟು ಜಾಸ್ತಿ ಆಗ್ತಿದೆ ಎಂದು ಹೇಳಿದರು. ಇದನ್ನೂ ಓದಿ: 8 ಸೆಕೆಂಡ್ ನಂತ್ರ ವಿಮಾನ ಹಾರಾಟದಲ್ಲಿ ಅಸಹಜತೆ ಪತ್ತೆ; 7-12 ಸೆಕೆಂಡ್‌ ವರೆಗಿನ ಹಾರಾಟದ ಮೇಲೆ ತನಿಖೆ

    ಹುಬ್ಬಳ್ಳಿ, ಬೆಳಗಾವಿ ಏರ್‌ಪೋರ್ಟ್ ಅನ್ನು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಲು ಪ್ರಯತ್ನ ಮಾಡ್ತಿದ್ದೇವೆ. ಶೀಘ್ರವೇ ಕೇಂದ್ರಕ್ಕೆ ಮನವಿ ಮಾಡುತ್ತೇವೆ. ರಾಜ್ಯದ 9 ರೈಲು ಮಾರ್ಗಗಳನ್ನ ಆದಷ್ಟು ಬೇಗ ಮುಗಿಸಲು ಕ್ರಮ ಕೈಗೊಳ್ಳಲಾಗುವುದು. ರೈಲ್ವೆ ಸಚಿವರ ಜೊತೆ ಸಭೆ ಮಾಡಿದ್ದೇವೆ. ರೈಲ್ವೆ ದುರಸ್ಥಿ ಕಾರ್ಯ ಕೂಡ ವೇಗವಾಗಿ ಆಗುತ್ತಿದೆ. ರೈಲ್ವೆ ಮೂಲಭೂತ ಸೌಕರ್ಯಗಳ ನಿಗಮದಲ್ಲಿ ಹೆಚ್ಚುವರಿ ಸಬರ್ಬನ್ ರೈಲು ಪ್ರಾರಂಭಕ್ಕೆ ಮುಂದಾಗಿದ್ದೇವೆ. ಶಿವಮೊಗ್ಗ ವಿಮಾನ ನಿಲ್ದಾಣ ನಾಗರಿಕ ವಿಮಾನಯಾನಕ್ಕೆ ಚಾಲನೆ ನೀಡಲಾಗಿದೆ ಎಂದರು. ಇದನ್ನೂ ಓದಿ: ನ್ಯಾಯಾಧೀಶರ ಮುಂದೆ ಹಾಜರಾದ ವಿನಯ್ ಕುಲಕರ್ಣಿ – ಶಾಸಕನನ್ನು ವಶಕ್ಕೆ ಪಡೆದ ಸಿಬಿಐ

    ವಿಜಯಪುರ ವಿಮಾನ ನಿಲ್ದಾಣದ ಕೆಲಸ ಬಹುತೇಕ ಮುಕ್ತಾಯ ಆಗಿದೆ. ಆದಷ್ಟು ಬೇಗ ಪ್ರಾರಂಭ ಆಗಲಿದೆ. ಮೈಸೂರು ಏರ್‌ಪೋರ್ಟ್ ರನ್ ವೇ ವಿಸ್ತರಣೆ ಮಾಡುವ ಕೆಲಸ ಆಗ್ತಿದೆ. ಹಾಸನ, ರಾಯಚೂರು, ಬಳ್ಳಾರಿ ಏರ್‌ಪೋರ್ಟ್ ಕಾಮಗಾರಿಗಳು ವೇಗವಾಗಿ ನಡೆಯುತ್ತಿದೆ. 3 ಹೆಲಿಪೋರ್ಟ್ ನಿರ್ಮಾಣದ ಪ್ರಕ್ರಿಯೆ ಪ್ರಗತಿಯಲ್ಲಿದೆ. ಕಾರವಾರ ಸಿವಿಲ್ ಎನ್ ಕ್ಲೈವ್‌ಗೆ ಭೂಸ್ವಾಧೀನ ಆಗ್ತಿದೆ. ಬೆಂಗಳೂರಿನಲ್ಲಿ ಎರಡನೇ ಏರ್‌ಪೋರ್ಟ್ ಆಗಲಿದೆ. ಈಗಾಗಲೇ ಕೇಂದ್ರದ ತಂಡ ಪರಿಶೀಲನೆ ಮಾಡಿದೆ. ಕೇಂದ್ರ ಇನ್ನು ನಮಗೆ ಜಾಗ ಫೈನಲ್ ಮಾಡಿಲ್ಲ. ಶೀಘ್ರವೇ ಸಿಎಂ ಜೊತೆ ಕೇಂದ್ರ ಸಚಿವರ ಭೇಟಿ ಮಾಡಿ ಜಾಗ ಫೈನಲ್ ಮಾಡಲು ಮನವಿ ಮಾಡ್ತೀವಿ ಅಂತ ತಿಳಿಸಿದರು. ಇದನ್ನೂ ಓದಿ: Plane crash | ಲಂಡನ್ ತಲುಪಿ ಫೋನ್ ಮಾಡ್ತೀನಿ ಅಂದಿದ್ದ ಗಗನಸಖಿ ಮಗಳು – ಬಾರದ ಲೋಕಕ್ಕೆ ಹೋದ್ಳು..!

    ಬಲ್ಡೋಟ ಕಂಪನಿಯಿಂದ ಸಮಸ್ಯೆ ಆದರೆ ಬೇರೆ ಕಡೆ ಶಿಫ್ಟ್ ಮಾಡ್ತೇವೆ. ಸ್ವಾಮೀಜಿ ಜೊತೆಗೂ ಮಾತಾಡಿ ಕ್ರಮ ಕೈಗೊಳ್ಳುತ್ತೇವೆ. ಮೂರನೇ ಪಾರ್ಟಿ ಸರ್ವೆ ಮಾಡಿಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ಇದರ ಜೊತೆಗೆ ಎಲ್ಲಾ ಜಿಲ್ಲೆಗಳ ಎಲ್ಲಾ ಕೈಗಾರಿಕೆಗಳ ಪೊಲ್ಯೂಷನ್ ರಿವ್ಯೂ ಮಾಡೋಕೆ ಇಲಾಖೆ ನಿರ್ಧಾರ ಮಾಡಲಾಗಿದೆ. ಎಕ್ಸ್‌ಪರ್ಟ್‌ಗಳಿಂದ ರಿವ್ಯೂ ಮಾಡಿಸುತ್ತೇವೆ. ಯಾವುದಾದರು ಕೈಗಾರಿಕೆ ಸಮಸ್ಯೆ ಇದ್ದರೆ ಅದರ ಬಗ್ಗೆ ಕ್ರಮ ತೆಗೆದುಕೊಳ್ತೇವೆ. ಕೊಪ್ಪಳದಿಂದಲೇ ಸರ್ವೆ ಪ್ರಾರಂಭ ಮಾಡ್ತೀವೆ ಅಂತ ಹೇಳಿದರು.

  • ಮೈಸೂರು ಸ್ಯಾಂಡಲ್ ಸೋಪ್ ಬ್ಯುಸಿನೆಸ್ ಹೆಚ್ಚಿಸಲು ತಮನ್ನಾ ಆಯ್ಕೆ: ಎಂ.ಬಿ ಪಾಟೀಲ್

    ಮೈಸೂರು ಸ್ಯಾಂಡಲ್ ಸೋಪ್ ಬ್ಯುಸಿನೆಸ್ ಹೆಚ್ಚಿಸಲು ತಮನ್ನಾ ಆಯ್ಕೆ: ಎಂ.ಬಿ ಪಾಟೀಲ್

    ಬೆಂಗಳೂರು: ಮೈಸೂರು ಸ್ಯಾಂಡಲ್ ಸೋಪ್ (Mysore Sandal Soap) ಮಾರ್ಕೆಟಿಂಗ್ ಹೆಚ್ಚು ಮಾಡಲು ನಟಿ ತಮನ್ನಾರನ್ನು (Tamannaah Bhatia) ರಾಯಭಾರಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಸಚಿವ ಎಂ.ಬಿ ಪಾಟೀಲ್ ‌(M.B Patil) ಮತ್ತೊಮ್ಮೆ ಸಮರ್ಥನೆ‌ ಮಾಡಿಕೊಂಡಿದ್ದಾರೆ.

    ವಿಧಾನಸೌಧದಲ್ಲಿ ಅವರು ಮಾತನಾಡಿದರು. ಈ ವೇಳೆ, ಇದೊಂದು ಬ್ಯುಸಿನೆಸ್. ಬ್ಯುಸಿನೆಸ್‌ಗೆ ಏನು ಬೇಕೋ ಅದನ್ನ ಮಾಡ್ತೀವಿ. 4-5 ನಟಿಯರನ್ನ ನಾವು ಕೇಳಿದ್ವಿ. ಆದರೆ ಯಾರು ಒಪ್ಪಲ್ಲಿಲ್ಲ ಅದಕ್ಕೆ ತಮನ್ನಾರನ್ನು ಫೈನಲ್ ಮಾಡಿದ್ವಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ತಮನ್ನಾ ಬದಲು ನಮ್ಮ ನಟಿಯರನ್ನೇ ಮೈಸೂರ್ ಸ್ಯಾಂಡಲ್ ಸೋಪ್‌ಗೆ ರಾಯಭಾರಿ ಮಾಡಬಹುದಿತ್ತು: ಜಮೀರ್

    ನಮ್ಮ ಸೋಪ್ ಕರ್ನಾಟಕದಲ್ಲಿ 18% ಮಾತ್ರ ಮಾರ್ಕೆಟಿಂಗ್ ಇದೆ. ಬೇರೆ ರಾಜ್ಯದಲ್ಲಿ ಜಾಸ್ತಿ ಇದೆ. ಹೀಗಾಗಿ ತಮನ್ನಾ ಆಯ್ಕೆ ಮಾಡಿದ್ದೇವೆ. ಮುಂದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೋಗೋ ಪ್ಲ್ಯಾನ್ ನಮಗೆ ಇದೆ. ಅದಕ್ಕಾಗಿ ಬಾಲಿವುಡ್ ನಟಿಯನ್ನು ರಾಯಭಾರಿಯಾಗಿ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಾವಿರ ಕೋಟಿ ಲಾಭ ಮಾಡೋ ಉದ್ದೇಶವಿದೆ – ತಮನ್ನಾ ಆಯ್ಕೆಗೆ ಪ್ರಿಯಾಂಕ್‌ ಖರ್ಗೆ ಸಮರ್ಥನೆ