Tag: M

  • ಹತ್ಯೆಯ ದಿನವೇ ಮುಸ್ಲಿಂ ಸ್ನೇಹಿತನ ಗೃಹಪ್ರವೇಶಕ್ಕೆ ಹೋಗಿದ್ದ ಪ್ರವೀಣ್ ನೆಟ್ಟಾರ್!

    ಹತ್ಯೆಯ ದಿನವೇ ಮುಸ್ಲಿಂ ಸ್ನೇಹಿತನ ಗೃಹಪ್ರವೇಶಕ್ಕೆ ಹೋಗಿದ್ದ ಪ್ರವೀಣ್ ನೆಟ್ಟಾರ್!

    ಮಂಗಳೂರು: ಹತ್ಯೆಯ ದಿನವೇ ಮುಸ್ಲಿಂ ಸ್ನೇಹಿತನೊಬ್ಬನ ಗೃಹ ಪ್ರವೇಶಕಾರ್ಯಕ್ರಮಕ್ಕೆ ಪ್ರವೀಣ್ ಕುಮಾರ್ ನೆಟ್ಟಾರ್ ಹೋಗಿದ್ದರು.

    ಹೌದು. ನಿನ್ನೆ ಸ್ನೇಹಿತ ಆರೀಫ್ ಬೆಳ್ಳಾರೆಯ ಗೃಹಪ್ರವೇಶ ಕಾರ್ಯಕ್ರಮವಿತ್ತು. ಹೀಗಾಗಿ ಪ್ರವೀಣ್ ಅವರು ನಿನ್ನೆ ಮಧ್ಯಾಹ್ನ ಕಾರ್ಯದಲ್ಲಿ ಪಾಲ್ಗೊಂಡು ಮುಸ್ಲಿಂ ಸ್ನೇಹತರೊಂದಿಗೆ ಬೆರೆತಿದ್ದರು. ಮುಸ್ಲಿಂ ಮಿತ್ರನ ಭೇಟಿಯನ್ನು ಪ್ರವೀಣ್ ಅವರು ತಮ್ಮ ವಾಸ್ಟಪ್ ಸ್ಟೇಟಸ್‍ನಲ್ಲಿ ಹಾಕಿಕೊಂಡಿದ್ದರು. ಇದೀಗ ಎಲ್ಲರೊಂದಿಗೆ ಒಡನಾಟದಿಂದ ಇದ್ದ ಪ್ರವೀಣ್‍ನನ್ನು ಮತಾಂಧರ ಹತ್ಯೆ ಆಗಿರೋ ಶಂಕೆ ವ್ಯಕ್ತವಾಗುತ್ತಿದೆ.

    ಘಟನೆ ಏನು?: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಪೆರುವಾಜೆ ಕ್ರಾಸ್ ಬಳಿ ಅಕ್ಷಯ್ ಹೆಸರಿನ ಕೋಳಿ ಮಾಂಸದ ಅಂಗಡಿ ಹೊಂದಿದ್ದ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ಕುಮಾರ್ ನೆಟ್ಟಾರು(31), ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಅಂಗಡಿ ಮುಚ್ಚಿ ಮನೆ ಕಡೆ ಹೊರಟಿದ್ದರು. ಈ ವೇಳೆ ಬೈಕಿನಲ್ಲಿ ಬಂದಿದ್ದ ಮೂವರು ತಲ್ವಾರ್‍ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ತಕ್ಷಣವೇ ಪುತ್ತೂರು ಆಸ್ಪತ್ರೆಗೆ ದಾಖಲಿಸಿದರೂ ಕುತ್ತಿಗೆಯ ಭಾಗಕ್ಕೆ ತೀವ್ರ ಏಟು ಬಿದ್ದಿದ್ದ ಕಾರಣ ಪ್ರವೀಣ್ ಮೃತಪಟ್ಟಿದ್ದರು. ಇದನ್ನೂ ಓದಿ: ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ರೆ ರಾಜೀನಾಮೆ: ರೇಣುಕಾಚಾರ್ಯ

    ಇಂದು ಪ್ರವೀಣ್ ಮೃತದೇಹವನ್ನು ಪುತ್ತೂರಿನಿಂದ ಮೆರವಣಿಗೆ ಮೂಲಕ ಅವರ ಸ್ವಗೃಹ ಕರೆದೊಯ್ಯಲಾಗಿದ್ದು, ಸಾರ್ವಜನಿಕರ ಅಂತಿಮ ದರ್ಶನದ ಬಳಿಕ ಬಿಲ್ಲವ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಮಂತ್ರ ಪಠಣದ ಬಳಿಕ ಮನೆ ಸಮೀಪದಲ್ಲೇ ಪ್ರವೀಣ್ ಚಿತೆಗೆ ಮೂವರು ಮಾವಂದಿರಾದ ಶೀನಪ್ಪ ಪೂಜಾರಿ, ಲಿಂಗಪ್ಪ ಪೂಜಾರಿ ಹಾಗೂ ಲೋಕೇಶ್ ಪೂಜಾರಿ ಅಗ್ನಿ ಸ್ಪರ್ಶ ಮಾಡಿದ್ದಾರೆ.

    ಬಿಲ್ಲವ ಸಂಪ್ರದಾಯದಂತೆ ಪ್ರವೀಣ್ ನೆಟ್ಟಾರ್ ಅವರ ಅಂತ್ಯ ಸಂಸ್ಕಾರವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಸಂಘಪರಿವಾರದ ಕಾರ್ಯಕರ್ತರು ಅಪಾರ ಸಂಖ್ಯೆ ನೆರೆದಿದ್ದರು. ಇತ್ತ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

    Live Tv
    [brid partner=56869869 player=32851 video=960834 autoplay=true]

  • ಈ ಹುಡುಗಿಗೆ ಜಿಮ್ ನಲ್ಲಿ ಸಿಕ್ತಂತೆ ನಟಿಸೋಕೆ ಅವಕಾಶ

    ಈ ಹುಡುಗಿಗೆ ಜಿಮ್ ನಲ್ಲಿ ಸಿಕ್ತಂತೆ ನಟಿಸೋಕೆ ಅವಕಾಶ

    ಸಿನಿಮಾ ರಂಗದಲ್ಲಿ ಹೊಸ ಕಲಾವಿದರಿಗೆ ಸಾಮಾನ್ಯವಾಗಿ ಆಡಿಷನ್ ಮಾಡಿಯೇ ಸಿನಿಮಾಗೆ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ, ಈ ಹುಡುಗಿಗೆ ನಟಿಸಲು ಅದೃಷ್ಟ ಒಲಿದು ಬಂದಿದ್ದು ಜಿಮ್ ನಲ್ಲಿ. ಈ ರೀತಿಯಲ್ಲಿ ಆಯ್ಕೆ ಮಾಡಿಕೊಂಡವರು ಕಿಚ್ಚ ಸುದೀಪ್ ಅಭಿಮಾನಿ ಸಂಘದ ಉಪಾಧ್ಯಕ್ಷ ಮತ್ತು ದಶಕಗಳಿಂದ ಸಿನಿಮಾ ರಂಗದ ಜತೆ ಒಡನಾಟ ಇಟ್ಟುಕೊಂಡಿರುವ ಜಗ್ಗಿ ಎನ್ನುವುದು ವಿಶೇಷ. ಇದನ್ನೂ ಓದಿ : ಮುದ್ದಾದ ಹುಡುಗಿ ಅನುಶ್ರೀಗೆ ಸೈತಾನ್ ಅಂದೋರು ಯಾರು?


    ಇತ್ತೀಚೆಗಷ್ಟೇ ‘ಮರ್ದಿನಿ’ ಸಿನಿಮಾದ ಟ್ರೇಲರ್ ಬಿಡುಗಡೆ ಆಯಿತು. ನಟ ಕಿಚ್ಚ ಸುದೀಪ್ ವಿಡಿಯೋ ಸಂದೇಶದ ಮೂಲಕ ಟ್ರೇಲರ್ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಈ ಸಿನಿಮಾದ ನಾಯಕಿ ರಿತನ್ಯ ಹೂವಣ್ಣ ಇದನ್ನೂ ಓದಿ : ಉಪೇಂದ್ರ ಅಣ್ಣನ ಮಗನ ಬೆನ್ನುಬಿದ್ದ ಸ್ಯಾಂಡಲ್ ವುಡ್

    “ಈ ಸಿನಿಮಾದ ನಿರ್ಮಾಪಕ ಜಗ್ಗಿ ಅವರು ನನಗೆ ಜಿಮ್ ನಲ್ಲಿ ಭೇಟಿಯಾದರು. ಅಲ್ಲಿಯೇ ಅವರ ಪರಿಚಯವಾಗಿದ್ದು. ಒಂದು ದಿನ ಏಕಾಏಕಿ, ನೀವು ನಮ್ಮ ಸಿನಿಮಾದ ನಾಯಕ ಎಂದು ಅಚ್ಚರಿ ಮೂಡಿಸಿದರು. ಹುಡುಗಿಗೆ ಇವರು ನಾಯಕ ಅನ್ನುತ್ತಿದ್ದಾರಲ್ಲ ಎಂಬ ಪ್ರಶ್ನೆ ನನ್ನಲ್ಲಿ ಮೂಡಿತ್ತು. ಇದೊಂದು ನಾಯಕಿ ಪ್ರಧಾನ ಸಿನಿಮಾವಾಗಿದ್ದು, ನೀವು ನಾಯಕ ಕಂ ನಾಯಕಿ ಎಂದಾಗ ನಕ್ಕಿದೆ. ಮುಂದೊಂದು ದಿನ ಅದೇ ನಿಜವಾಯಿತು. ನನಗೆ ಈ ಚಿತ್ರಕ್ಕೆ ಅವಕಾಶ ಸಿಕ್ಕಿದ್ದು ಹೀಗೆ” ಎಂದರು. ರಿತನ್ಯ ಹೂವಣ್ಣ ಈ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ. ಇದನ್ನೂ ಓದಿ : ರೋಡ್ ಶೋ ವೇಳೆ ಕಾರಿನ ಮೇಲಿಂದ ಕೆಳಗೆ ಬಿದ್ದ ಪವನ್ ಕಲ್ಯಾಣ್!


    ಈ ಹಿಂದೆ ಪ್ರಥಮ್ ಅಭಿನಯದ “ದೇವ್ರಂಥ ಮನುಷ್ಯ” ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ಕಿರಣ್ ಕುಮಾರ್ ಅವರೇ ಈ ಚಿತ್ರದ ನಿರ್ದೇಶಕರು. ಎರಡನೇ ಸಿನಿಮಾದಲ್ಲಿಯೇ ಅವರು ಸಸ್ಪೆನ್ಸ್ ಥ್ರಿಲ್ಲರ್ ಮಾದರಿಯ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.