Tag: lust stories 2

  • ಮೊದಲ ಡೇಟ್‌ನಲ್ಲಿ ಸೆಕ್ಸ್ ಮಾಡಿದ್ರಾ? ಎಂಬ ಪ್ರಶ್ನೆಗೆ ಬೋಲ್ಡ್ ಆಗಿ ಉತ್ತರಿಸಿದ ವಿಜಯ್- ತಮನ್ನಾ

    ಮೊದಲ ಡೇಟ್‌ನಲ್ಲಿ ಸೆಕ್ಸ್ ಮಾಡಿದ್ರಾ? ಎಂಬ ಪ್ರಶ್ನೆಗೆ ಬೋಲ್ಡ್ ಆಗಿ ಉತ್ತರಿಸಿದ ವಿಜಯ್- ತಮನ್ನಾ

    ಸಿನಿಮಾರಂಗ ಅಂದಮೇಲೆ ಲವ್, ಮದುವೆ, ಬ್ರೇಕಪ್, ಡಿವೋರ್ಸ್, ಸೆಕ್ಸ್ ಎಲ್ಲವೂ ಕಾಮನ್ ಆಗಿ ಬಿಟ್ಟಿದೆ. ಇಂದು ಒಟ್ಟಿಗೆ ಇದ್ದ ಜೋಡಿ, ನಾಳೆ ಕೂಡ ಒಟ್ಟಿಗೆ ಇರುತ್ತಾರೆ ಎಂದು ಹೇಳೋದ್ದಕ್ಕೆ ಸಾಧ್ಯವಿಲ್ಲ. ಬಾಲಿವುಡ್‌ನಲ್ಲಿ ಪೀಕ್‌ನಲ್ಲಿರುವ ಸ್ಟಾರ್ ಜೋಡಿ ಅಂದರೆ ತಮನ್ನಾ ಭಾಟಿಯಾ- ವಿಜಯ್ ವರ್ಮಾ (Vijay Varma) ಅವರಾಗಿದ್ದು, ‘ಲಸ್ಟ್ ಸ್ಟೋರಿಸ್ 2’ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಸಂದರ್ಶನದಲ್ಲಿ ಮೊದಲ ಭೇಟಿ, ಲವ್, ಸೆಕ್ಸ್ ಎಲ್ಲದರ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

    ‘ಲಸ್ಟ್ ಸ್ಟೋರಿಸ್ 2’ ಸಿನಿಮಾ ಸೆಟ್‌ನಲ್ಲಿ ವಿಜಯ್ ವರ್ಮಾ- ತಮನ್ನಾ ಭಾಟಿಯಾಗೆ (Tamannah Bhatia) ಪ್ರೇಮಾಂಕುರವಾಯಿತು. ಇಷ್ಟು ದಿನಗಳ ಕಾಲ ನಮ್ಮ ನಡುವೆ ಏನಿಲ್ಲ ಎಂದು ಹೇಳುತ್ತಿದ್ದ ಈ ಜೋಡಿ ಈಗ ತಮ್ಮ ಪ್ರೀತಿಯನ್ನ ಅಧಿಕೃತಗೊಳಿಸಿದ್ದಾರೆ. ಇತ್ತೀಚಿಗೆ ತಮನ್ನಾ, ವಿಜಯ್ ನನ್ನ ಖುಷಿಯ ಖಜಾನೆ ಎಂದು ಹೇಳುವ ಮೂಲಕ ಲವ್ ಬಗ್ಗೆ ಮಾತನಾಡಿದ್ರು. ವಿಜಯ್ ವರ್ಮಾ ಕೂಡ ಪ್ರೀತಿಯಲ್ಲಿ ಇರೋದಾಗಿ ತಿಳಿಸಿದ್ರು. ಈಗ ಇದೇ ‘ಲಸ್ಟ್ ಸ್ಟೋರಿಸ್ 2’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ವಿಜಯ್- ತಮನ್ನಾ ಜೋಡಿ ಭಾಗವಹಿಸುತ್ತಿದ್ದಾರೆ. ಇದನ್ನೂ ಓದಿ:ಮಲಯಾಳಂ ಖ್ಯಾತ ನಟ ಮೋಹನ್ ಲಾಲ್ ಜೊತೆ ಕನ್ನಡಿಗ ಡ್ಯಾನಿಶ್ ನಟನೆ

    ‘ಲಸ್ಟ್ ಸ್ಟೋರಿಸ್ 2’ (Lust Stories 2) ಚಿತ್ರದಲ್ಲಿ ವಿಜಯ್- ತಮನ್ನಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಕಿಸ್ಸಿಂಗ್ ಸೀನ್‌ಗಳ ಝಲಕ್ ಕೂಡ ಇದ್ದು, ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡ್ತಿದೆ. ಹಾಗಾಗಿ ಸಂದರ್ಶನಗಳಲ್ಲೂ ಬೋಲ್ಡ್ ಪ್ರಶ್ನೆಗಳನ್ನ ಎದುರಿಸುತ್ತಿದ್ದಾರೆ. ತಮನ್ನಾ, ವಿಜಯ್ ವರ್ಮಾ, ನಿರ್ದೇಶಕ ಸುಜಯ್ ಘೋಶ್ ಸಂದರ್ಶನದಲ್ಲಿ ಭಾಗಿ ಆಗಿದ್ದರು. ಸಂದರ್ಶನದ ಚೌಕಟ್ಟು ಮೀರಿದ ಪ್ರಶ್ನೆಗಳನ್ನು ಕೇಳಲಾಗಿದೆ. ಮೊದಲ ಡೇಟ್ ಹೇಗಿತ್ತು, ಅದರಲ್ಲಿ ಸೆಕ್ಸ್ ಇತ್ತಾ.? ಎಂದು ಪ್ರಶ್ನೆ ಮಾಡಲಾಯಿತು. ತಮನ್ನಾ ಬೋರಿಂಗ್ ಡೇಟ್ ಎಂದು ಉತ್ತರ ನೀಡಿದರು. ಇದಕ್ಕೆ ವಿಜಯ್ ವರ್ಮಾ ಉತ್ತರಿಸಿದ್ದು, ಮೊದಲ ಡೇಟ್‌ನಲ್ಲಿ ಯಾವುದೇ ಕಾಮ ಇರಲಿಲ್ಲ ಎಂದಿದ್ದಾರೆ. ಸುಜಯ್ ಕೂಡ ಇದಕ್ಕೆ ಉತ್ತರಿಸಿದ್ದಾರೆ. ನಾನು ಮಧ್ಯಮ ವರ್ಗದಲ್ಲಿ ಹುಟ್ಟಿದ ವ್ಯಕ್ತಿ. ನಾವು ಎಲ್ಲದಕ್ಕೂ ಹೋರಾಡಬೇಕು. ನಮಗೆ ಯಾವುದೂ ಸುಲಭವಾಗಿ ಲಭ್ಯವಾಗುವುದಿಲ್ಲ ಎಂದು ನಕ್ಕಿದ್ದಾರೆ.

    ತಮನ್ನಾ- ವಿಜಯ್ ವರ್ಮಾ ‘ಲಸ್ಟ್ ಸ್ಟೋರಿಸ್ 2’ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಗುರುವಾರ ಜೂನ್ 29ಕ್ಕೆ ಈ ಸಿನಿಮಾ ರಿಲೀಸ್ ಆಗಿದೆ. ಒಂದು ಸಿನಿಮಾದಲ್ಲಿ ನಾಲ್ಕು ಕಥೆಗಳಿವೆ. ಒಟಿಟಿ ಮೂಲಕ ಇದು ರಿಲೀಸ್ ಆಗಿದೆ. ತೆರೆಯ ಮೇಲೆ ವಿಜಯ್- ತಮನ್ನಾ ಜೋಡಿಯನ್ನ ಅಭಿಮಾನಿಗಳು ಮೆಚ್ಚಿಕೊಳ್ಳುತ್ತಾರಾ ಕಾದು ನೋಡಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡ ತಮನ್ನಾಗೆ ಭಾರತೀಯ ಸಂಸ್ಕೃತಿ ಬಗ್ಗೆ ನೆಟ್ಟಿಗರ ಕ್ಲಾಸ್

    ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡ ತಮನ್ನಾಗೆ ಭಾರತೀಯ ಸಂಸ್ಕೃತಿ ಬಗ್ಗೆ ನೆಟ್ಟಿಗರ ಕ್ಲಾಸ್

    ಹುಭಾಷಾ ನಟಿ ತಮನ್ನಾ ಭಾಟಿಯಾ (Tamannaah Bhatia) ಅವರು ಈಗೀಗ ಭಾರಿ ಸುದ್ದಿಯಲ್ಲಿದ್ದಾರೆ. ಅದರಲ್ಲೂ ‘ಜೀ ಕರ್ದಾ’, ‘ಲಸ್ಟ್ ಸ್ಟೋರಿಸ್ 2’ (Lust Stories 2) ಸಿನಿಮಾ ವಿಚಾರವಾಗಿ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಹಿಂದೆ ಕಿಸ್ಸಿಂಗ್ ಸೀನ್‌ಗೆ ನೋ ಎನ್ನುತ್ತಿದ್ದ ಹುಡುಗಿ ಈಗ ಬಾಲಿವುಡ್‌ನಲ್ಲಿ ತಮನ್ನಾ ತುಂಬಾನೇ ಬೋಲ್ಡ್ ಆಗಿ ನಟಿಸುತ್ತಾ ಇರೋದು ಮಿಲ್ಕಿ ಬ್ಯೂಟಿ ಫ್ಯಾನ್ಸ್‌ಗೆ ಬೇಸರ ಮೂಡಿಸಿದೆ. ನಟಿಯ ವಿರುದ್ಧ ಫ್ಯಾನ್ಸ್ ಕಿಡಿಕಾರಿದ್ದಾರೆ.

    ‘ಕೆಜಿಎಫ್’ (KGF) ನಟಿ ತಮನ್ನಾ ಅವರು ದಕ್ಷಿಣದ ಸಿನಿಮಾಗಳಲ್ಲಿ ಉತ್ತಮ ಪಾತ್ರಗಳ ಮೂಲಕ ಗಮನ ಸೆಳೆದಿದ್ದರು. ಆದರೆ ಬೋಲ್ಡ್, ಲಿಪ್‌ಲಾಕ್ ಸೀನ್‌ಗಳಲ್ಲಿ ಎಂದೂ ತಮನ್ನಾ ನಟಿಸಿರಲಿಲ್ಲ. ಆದರೆ ಇತ್ತೀಚಿನ ಬಾಲಿವುಡ್‌ನ ‘ಜೀ ಕರ್ದಾ’, ʼಲಸ್ಟ್ ಸ್ಟೋರಿಸ್ 2′, ಚಿತ್ರಗಳಲ್ಲಿ ತಮನ್ನಾ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಅವರೇನಾ.? ಎಂದು ಅಭಿಮಾನಿಗಳು ಬಾಯಿ ಮೇಲೆ ಬೆರಳಿಡೋ ಹಾಗೇ ತಮನ್ನಾ ನಟಿಸಿ ಬಂದಿದ್ದಾರೆ. ಇದನ್ನೂ ಓದಿ:ಸಲ್ಮಾನ್ ಖಾನ್ ಗೆ ಜೀವ ಬೆದರಿಕೆ : ಬಾಲಿವುಡ್ ನಟನಿಗೆ ಭದ್ರತೆ ಹೇಗಿದೆ?

    ಕೆಲ ವರ್ಷಗಳ ಹಿಂದೆ ಬಂದ ‘ಲಸ್ಟ್ ಸ್ಟೋರಿಸ್’ ಸೀರಿಸ್ ಬೋಲ್ಡ್ ದೃಶ್ಯಗಳಿಂದಲೇ ಹೆಚ್ಚು ಸದ್ದು ಮಾಡಿತ್ತು. ಅದನ್ನೂ ಮೀರಿಸುವಂತೆ ಸೀಕ್ವೆಲ್ ಸೀರಿಸ್ ಬರುತ್ತಿದೆ. ಇನ್ನೂ ತಮನ್ನಾ, ಲವರ್ ವಿಜಯ್ ವರ್ಮಾ ಜೊತೆ ತೆರೆ ಹಂಚಿಕೊಂಡಿದ್ದಾರೆ. ಇಷ್ಟು ದಿನ ಲಿಪ್‌ಲಾಕ್ (Lip Lock) ಸೀನ್‌ಗೆ ಒಲ್ಲೆ ಎಂದಿದ್ದ ಮಿಲ್ಕಿಬ್ಯೂಟಿ ಈ ಸೀರಿಸ್‌ನಲ್ಲಿ ತುಟಿಗೆ ತುಟಿ ಸೇರಿಸಿದ್ದಾರೆ. ಪ್ರಿಯಕರನ ಜೊತೆ ನಟಿಸಿರೋದ್ರಿಂದ ಕೊಂಚ ಹೆಚ್ಚೇ ಇಂಟಿಮೆಂಟ್ ಸೀನ್‌ಗಳಲ್ಲಿ ನಟಿಸಿದ್ದಾರೆ.

    ನೀವು ಭಾರತೀಯ ಸಂಸ್ಕೃತಿ ನಾಶ ಮಾಡುತ್ತಿದ್ದೀರಾ ಎಂದು ಕಾಮೆಂಟ್ ಮಾಡಿದ್ದಾರೆ. ನಿನ್ನನ್ನು ಈ ರೀತಿ ನೋಡಲು ನಾಚಿಕೆ ಆಗುತ್ತಿದೆ ಎಂದು ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಕಿಡಿಕಾರಿದ್ದಾರೆ. ನೀವು ಸೀ ಗ್ರೇಡ್ ನಟನ ಜೊತೆ ಇಂತಹ ಸನ್ನಿವೇಶದಲ್ಲಿ ಹೇಗೆ ನಟಿಸ್ತೀರಾ? ತಮನ್ನಾ ದಯವಿಟ್ಟು ಬಾಲಿವುಡ್ (Bollywood) ಬಿಟ್ಟು ಕಾಲಿವುಡ್, ಟಾಲಿವುಡ್‌ಗೆ (Tollywood) ಬಂದುಬಿಡಿ ಎಂದು ನೆಟ್ಟಿಗರು ಸಲಹೆ ನೀಡುತ್ತಿದ್ದಾರೆ.

    ಒಟ್ನಲ್ಲಿ ತಮನ್ನಾ- ವಿಜಯ್ ವರ್ಮಾ (Vijay Varma) ನಟನೆಯ ಲಸ್ಟ್ ಸ್ಟೋರಿಸ್ 2 ಜೂನ್ 29ಕ್ಕೆ ತೆರೆ ಬರೋದ್ದಕ್ಕೆ ಸಿದ್ಧವಾಗಿದೆ. ರಿಲೀಸ್‌ಗೂ ಮುನ್ನವೇ ಸಿನಿಮಾ ಸಾಕಷ್ಟು ಟೀಕೆಗೆ ಗುರಿಯಾಗಿದೆ. ತಮನ್ನಾ ಚಿತ್ರ ಸಕ್ಸಸ್ ಕಾಣುತ್ತಾ ಎಂದು ಕಾದುನೋಡಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ಹೊಸ ಫೋಟೋಶೂಟ್‌ನಲ್ಲಿ ಲವ್‌ಬರ್ಡ್ಸ್- ತಮನ್ನಾ ತೊಡೆಯ ಮೇಲೆ ವಿಜಯ್ ವರ್ಮಾ

    ಹೊಸ ಫೋಟೋಶೂಟ್‌ನಲ್ಲಿ ಲವ್‌ಬರ್ಡ್ಸ್- ತಮನ್ನಾ ತೊಡೆಯ ಮೇಲೆ ವಿಜಯ್ ವರ್ಮಾ

    ಹುಭಾಷಾ ನಟಿ ತಮನ್ನಾ ಭಾಟಿಯಾ (Tamannah Bhatia) ಅವರು ಸಿನಿಮಾ ವಿಚಾರವಾಗಿ ಅದೆಷ್ಟು ಸುದ್ದಿ ಮಾಡ್ತಿದ್ದಾರೋ ಅಷ್ಟೇ ಬಾಯ್ ಫ್ರೆಂಡ್ ವಿಜಯ್ ವರ್ಮಾ (Vijay Varma)  ವಿಷ್ಯವಾಗಿಯೂ ಸೌಂಡ್ ಮಾಡಿದ್ದಾರೆ. ಸದ್ಯ ಬಿಟೌನ್ ನಯಾ ಕಪಲ್ ಹೊಸ ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ. ಈ ಕುರಿತ ಫೋಟೋಸ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡ ‘ಪಾರು’ ಸೀರಿಯಲ್ ನಟಿ

    ಕನ್ನಡದ ಜಾಗ್ವರ್, ಕೆಜಿಎಫ್‌ನಲ್ಲಿ (KGF) ಸೊಂಟ ಬಳುಕಿಸಿದ್ದ ನಟಿ ಹಿಂದಿ, ಮರಾಠಿ, ತೆಲುಗು, ತಮಿಳು ಸೇರಿದಂತೆ ಹಲವು ಭಾಷೆಯಲ್ಲಿ ನಟಿಸಿದ್ದಾರೆ. 50 ಪ್ಲಸ್ ಸ್ಟಾರ್ ನಾಯಕರಿಗೂ ನಾಯಕಿಯಾಗಿ ತಮನ್ನಾ ಅವರೇ ಬೇಕು ಅನ್ನೋವಷ್ಟರ ಮಟ್ಟಿಗೆ ಮಿಲ್ಕಿ ಬ್ಯೂಟಿ ಹವಾ ಕ್ರಿಯೇಟ್ ಮಾಡಿದ್ದಾರೆ.

    ಸದ್ಯ ‘ಜೀ ಕರ್ದಾ’ (Jee kardha) ವೆಬ್ ಸಿರೀಸ್‌ನಲ್ಲಿ ಹಾಟ್ & ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಮೂಲಕ ಅನೇಕರ ಕೆಂಗಣ್ಣಿಗೆ ತಮನ್ನಾ ಗುರಿಯಾಗಿದ್ದಾರೆ. ಸದ್ಯ ‘ಲಸ್ಟ್ ಸ್ಟೋರಿಸ್ 2’ (Lust Stories 2) ಪ್ರಚಾರ ಕಾರ್ಯದಲ್ಲಿ ನಟಿ ಬ್ಯುಸಿಯಾಗಿದ್ದಾರೆ. ವಿಜಯ್ ವರ್ಮಾ ಜೊತೆಗಿನ ಪ್ರೀತಿಯ ಬಗ್ಗೆ ತಮನ್ನಾ ಅಧಿಕೃತಗೊಳಿಸಿದ ಬೆನ್ನಲ್ಲೇ ಈ ಜೋಡಿ ಮಸ್ತ್ ಫೋಟೋಶೂಟ್ ಮಾಡಿಸಿದ್ದಾರೆ. ತಮನ್ನಾ ತೊಡೆ ಮೇಲೆ ವಿಜಯ್ ಮಲ್ಕೊಂಡಿದ್ದಾರೆ.

    ಇತ್ತೀಚಿಗೆ ನಟಿ ವಿಜಯ್ ನನ್ನ ಖುಷಿಯ ಖಜಾನೆ ಎಂದು ಲವ್ ಬಗ್ಗೆ ರಿವೀಲ್ ಮಾಡಿದ್ರು. ಈಗ ಹೊಸ ಫೋಟೋಶೂಟ್ ಮೂಲಕ ವಿಜಯ್- ತಮನ್ನಾ ಸಂಚಲನ ಮೂಡಿಸಿದ್ದಾರೆ. ಕಪ್ಪು ಬಣ್ಣದ ಉಡುಗೆಯಲ್ಲಿ ಕಂಗೊಳಿಸಿದ್ದಾರೆ. ಈ ಜೋಡಿಯ ಹೊಸ ಫೋಟೋ ನೋಡ್ತಿದ್ದಂತೆ ಮದುವೆ ಯಾವಾಗ ಅಂತಾ ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ.

    ‘ಲಸ್ಟ್ ಸ್ಟೋರಿಸ್ 2’ ಶೂಟಿಂಗ್ ಸಮಯದಲ್ಲಿ ವಿಜಯ್- ತಮನ್ನಾಗೆ ಪ್ರೇಮಾಂಕುರವಾಯಿತು. ಅಂದಿನಿಂದ ಈ ಜೋಡಿ ಡೇಟಿಂಗ್ ಮಾಡ್ತಿದ್ದಾರೆ. ಲಸ್ಟ್ ಸ್ಟೋರಿಸ್‌ನಲ್ಲಿ ಜೋಡಿಯಾಗಿ ನಟಿಸಿದ್ದಾರೆ.

  • ಮಿಲ್ಕಿ ಬ್ಯೂಟಿ ತಮನ್ನಾ – ವಿಜಯ್ ವರ್ಮಾ ಲವ್ ಸ್ಟೋರಿ ಶುರುವಾಗಿದ್ದು ಹೇಗೆ?

    ಮಿಲ್ಕಿ ಬ್ಯೂಟಿ ತಮನ್ನಾ – ವಿಜಯ್ ವರ್ಮಾ ಲವ್ ಸ್ಟೋರಿ ಶುರುವಾಗಿದ್ದು ಹೇಗೆ?

    ತ್ತೀಚೆಗೆ ಸಿಕ್ಕಾಪಟ್ಟೆ ಸದ್ದು ಮಾಡ್ತಿರುವ ನಟಿ ಅಂದ್ರೆ ತಮನ್ನಾ ಭಾಟಿಯಾ (Thamannaah Bhatia), ನಟ ವಿಜಯ್ ವರ್ಮಾ (Vijay Varma) ಜೊತೆಗಿನ ಲಿಪ್ ಲಾಕ್ ವೀಡಿಯೋ ವೈರಲ್ ಆದ ಮೇಲೆ ಇವರ ಲವ್ ಸ್ಟೋರಿ ವಿಚಾರದ ಬಗ್ಗೆ ಅನೇಕರು ಕ್ಯೂರಿಯಸ್ ಆಗಿದ್ದಾರೆ. ಅಷ್ಟಕ್ಕೂ ಇವರು ಮೊದಲು ಭೇಟಿಯಾಗಿದ್ದು ಎಲ್ಲಿ, ಲವ್ ಸ್ಟೋರಿ ಶುರುವಾಗಿದ್ದು ಹೇಗೆ ಎಂಬ ಮಾಹಿತಿ ಇಲ್ಲಿದೆ.

    ತಮನ್ನಾ ಅವರು ಸೌತ್ ಚಿತ್ರರಂಗದ ಜೊತೆಗೆ ಅವರು ಬಾಲಿವುಡ್‌ನಲ್ಲೂ (Bollywood) ಆಕ್ಟೀವ್ ಆಗಿದ್ದಾರೆ. ಕೆಲವು ಹಿಂದಿ ಚಿತ್ರಗಳಲ್ಲಿ ಅವರು ನಟಿಸಿ ಗಮನ ಸೆಳೆದಿದ್ದಾರೆ. `ಲಸ್ಟ್ ಸ್ಟೋರಿಸ್ 2’ನಲ್ಲಿ (Lust Stories 2) ತಮನ್ನಾ ನಟಿಸುತ್ತಿದ್ದಾರೆ. ಇದರಲ್ಲಿ ವಿಜಯ್ ವರ್ಮಾ ಕೂಡ ನಟಿಸಿದ್ದಾರೆ. ಇಬ್ಬರೂ ಮೊದಲ ಬಾರಿಗೆ ಈ ಜೋಡಿ ಭೇಟಿ ಆಗಿದ್ದು `ಲಸ್ಟ್ ಸ್ಟೋರಿಸ್ 2′ ಚಿತ್ರದ ಸೆಟ್‌ನಲ್ಲಿ ಎನ್ನಲಾಗಿದೆ.

     

    View this post on Instagram

     

    A post shared by Tamannaah Bhatia (@tamannaahspeaks)

    ಈ ಸಿನಿಮಾದ ಚಿತ್ರೀಕರಣದ ಸೆಟ್‌ನಲ್ಲಿ ಭೇಟಿ ಆದರು. ಒಬ್ಬರ ಕೆಲಸವನ್ನು ಮತ್ತೊಬ್ಬರು ಮೆಚ್ಚಿಕೊಂಡಿದ್ದಾರೆ. ಈ ಗೆಳೆತನ ಈಗ ಪ್ರೀತಿಗೆ ತಿರುಗಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಮದುವೆಯ ಬಗ್ಗೆ ಗುಡ್‌ ನ್ಯೂಸ್‌ ಕೇಳಲು ಅಭಿಮಾನಿಗಳು ಕಾಯ್ತಿದ್ದಾರೆ. ಇದನ್ನೂ ಓದಿ: ‘ವಿರಾಟಪುರ ವಿರಾಗಿ’ ಚಿತ್ರವನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ತೋರಿಸುವೆ : ಸಚಿವ ಸಿ.ಸಿ. ಪಾಟೀಲ್

     

    View this post on Instagram

     

    A post shared by Vijay Varma (@itsvijayvarma)

    ಇತ್ತೀಚೆಗೆ ಈ ಜೋಡಿ ಗೋವಾಗೆ ತೆರಳಿತ್ತು. ಅಲ್ಲಿ ಇವರು ಹೊಸ ವರ್ಷವನ್ನು ಸ್ವಾಗತಿಸಿದ್ದ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಈ ವೇಳೆ ಅವರು ಪರಸ್ಪರ ಕಿಸ್ ಮಾಡಿಕೊಂಡಿದ್ದರು. ಈ ಮೂಲಕ ಇಬ್ಬರೂ ಪ್ರೀತಿಯಲ್ಲಿರುವ ವಿಚಾರ ಈ ಮೂಲಕ ಅಧಿಕೃತ ಆಗಿತ್ತು.

    Live Tv
    [brid partner=56869869 player=32851 video=960834 autoplay=true]