Tag: lungs

  • ಮಾನವನ ದೇಹಕ್ಕೆ ಕೃತಕ ಉಸಿರಾಟ ಒದಗಿಸುವ ಕಬ್ಬಿಣದ ಶ್ವಾಸಕೋಶ – ಹೇಗೆ ಕೆಲಸ ಮಾಡುತ್ತೆ?

    ಮಾನವನ ದೇಹಕ್ಕೆ ಕೃತಕ ಉಸಿರಾಟ ಒದಗಿಸುವ ಕಬ್ಬಿಣದ ಶ್ವಾಸಕೋಶ – ಹೇಗೆ ಕೆಲಸ ಮಾಡುತ್ತೆ?

    ವಿಜ್ಞಾನ-ತಂತ್ರಜ್ಞಾನ (Science And Technology) ಬೆಳೆದಂತೆ ಮನುಷ್ಯ ಹೊಸ ಹೊಸ ಆವಿಷ್ಕಾರಗಳಿಗೆ ಮುಂದಾಗುತ್ತಿರುವುದು ಅಚ್ಚರಿಯೇನಲ್ಲ. ವೈದ್ಯಕೀಯ ಲೋಕದಲ್ಲೂ ಹೊಸ ಹೊಸ ಆವಿಷ್ಕಾರಗಳು ಹಾಗೂ ತಂತ್ರಜ್ಞಾನ ಅಳವಡಿಕೆಯಿಂದಾಗಿ ಮನುಷ್ಯ ತನ್ನ ಜೀವಿತಾವಧಿಯನ್ನ ಹೆಚ್ಚಿಸಿಕೊಳ್ಳುತ್ತಿದ್ದಾನೆ. ಅಂದ್ರೆ 60 ವರ್ಷ ಜೀವಿತಾವಧಿ ಹೊಂದಿದ ಮನುಷ್ಯ ಕನಿಷ್ಠ ಐದತ್ತು ವರ್ಷ ಆರೊಗ್ಯದಲ್ಲಿ ಸುಧಾರಣೆ ಕಾಣಬಹುಗಿದೆ.

    ಈ ಹಿಂದೆ ಹಲವಾರು ಮಾರಣಾಂತಿಕ ಕಾಯಿಲೆಗಳು ವಿಶ್ವವನ್ನು ಕಾಡಿವೆ. ಅದರಲ್ಲಿ ಪೋಲಿಯೋ (Polio) ಸಹ ಒಂದು. ಈಗಿನ ಮಟ್ಟಿಗೆ ಪೋಲಿಯೋಗೆ ಲಸಿಕೆ ಲಭ್ಯವಿದ್ದರೂ ಈ ಹಿಂದೆ ಜನರನ್ನ ಬಲಿ ಪಡೆದ ಉದಾಹರಣೆಯೂ ಇದೆ.

    ಪೋಲೀಯೋ ಸಾಮಾನ್ಯ ಲಕ್ಷಣ ಹೊಂದಿದವರು ಸಾಮಾನ್ಯವಾಗಿ 1-2 ವಾರಗಳಲ್ಲಿ ಗುಣಮುಖರಾಗುತ್ತಾರೆ. ಕೆಲವೊಮ್ಮೆ ಪೋಲಿಯೋ ಪೀಡಿತರು ನಿರ್ದಿಷ್ಟ ಕಾಲಾವಧಿಯಲ್ಲಿ ಚಿಕಿತ್ಸೆ ಪಡೆದುಕೊಳ್ಳದೇ ಇದ್ದರೆ, 30-40 ವರ್ಷಗಳ ನಂತರ ಅಂಗವೈಕಲ್ಯ ಕಾಣಿಸಿಕೊಳ್ಳಬಹುದು ಎಂದು ಈ ಹಿಂದೆಯೇ ತಜ್ಞರು ಹೇಳಿದ್ದಾರೆ. ಇದರ ಮರಣ ಪ್ರಮಾಣ ಮಕ್ಕಳಲ್ಲಿ 15% ರಿಂದ 30% ವರೆಗೆ ಇರುತ್ತದೆ. 1940 ಮತ್ತು 1950ರ ನಡುವೆ ಪೋಲಿಯೋ ಮರಣ ಪ್ರಮಾಣ ಹೆಚ್ಚಾಗಿ ಕಂಡುಬಂದಿತ್ತು. ಈ ಸಮಯದಲ್ಲಿ ಪ್ರತಿ ವರ್ಷ ಸರಿ ಸುಮಾರು 5 ಲಕ್ಷ ಜನ ಪೋಲಿಯೋಗೆ ತುತ್ತಾಗುತ್ತಿದ್ದರು, ಕೆಲವರು ಪೋಲಿಯೋದಿಂದ ಅಂಗವೈಕಲ್ಯ ಅನುಭವಿಸಿದ್ರೆ ಇನ್ನೂ ಕೆಲವರು ಸಾವನ್ನಪ್ಪುತ್ತಿದ್ದರು. 1916ರಲ್ಲಿ ನ್ಯೂಯಾರ್ಕ್‌ನಲ್ಲಿ 2,000 ಮಂದಿ, 1952ರಲ್ಲಿ ಅಮೆರಿಕದಾದ್ಯಂತ ಒಟ್ಟು 3,000 ಮಂದಿ ಸಾವನ್ನಪ್ಪಿದ್ದರು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

    ಆದ್ರೆ ಅಮೆರಿಕದ ವ್ಯಕ್ತಿಯೊಬ್ಬರು ಚಿಕ್ಕ ವಯಸ್ಸಿನಲ್ಲೇ ಪೋಲಿಯೋಗೆ ತುತ್ತಾಗಿ ಅಂಗಾಗ ಸ್ವಾಧೀನ ಕಳೆದುಕೊಂಡರೂ ಕಬ್ಬಿಣದ ಶ್ವಾಸಕೋಶದ (Iron Lungs) ಮೂಲಕ ಉಸಿರಾಡುತ್ತಾ, ಪವಾಡವನ್ನೇ ಸೃಸ್ಟಿಸಿದ್ದಾರೆ. ಹೌದು. ಅಮೆರಿಕದ ಟೆಕ್ಸಾಸ್ ನಿವಾಸಿ ಪೌಲ್ ಅಲೆಕ್ಸಾಂಡರ್ ಎಂಬವರು ಅವರು ತನ್ನ 6ನೇ ವಯಸ್ಸಿನಲ್ಲಿಯೇ ಪೋಲಿಯೋಗೆ ತುತ್ತಾದರು. ಈ ಕಾರಣದಿಂದಾಗಿ, 1952 ರಿಂದ ಅವರ ದೇಹದ ಒಂದೊಂದೇ ಭಾಗ ಸ್ವಾಧೀನ ಕಳೆದುಕೊಳ್ಳಲಾರಂಭಿಸಿತು. ಕುಟುಂಬಸ್ಥರು ಅವರನ್ನು ವೈದ್ಯರ ಬಳಿ ಕರೆದೊಯ್ದರು. ನಂತರ ಅಲ್ಲಿನ ವೈದ್ಯರು ಅವರಿಗೆ ‘ಟ್ರಾಕಿಯೊಸ್ಟೊಮಿ’ ಎಂಬ ಆಪರೇಷನ್ ಮಾಡಿದರು. ಆಗ ಪಾಲ್ ಅಲೆಕ್ಸಾಂಡರ್‌ಗೆ ಸಿಲಿಂಡರ್‌ ಆಕಾರದ ‘ಕಬ್ಬಿಣದ ಶ್ವಾಸಕೋಶ’ವನ್ನು ಅಳವಡಿಸಲಾಯಿತು. ಸದ್ಯ ಇಂದಿಗೂ ಅವರು ಇದೇ ಕಬ್ಬಿಣದ ಶ್ವಾಸಕೋಶವನ್ನು ಬಳಸಿಕೊಂಡು ಉಸಿರಾಡುತ್ತಿದ್ದಾರೆ.

    ಅಷ್ಟಕ್ಕೂ ಏನಿದು ಕಬ್ಬಿಣದ ಶ್ವಾಸಕೋಶ, ಹೇಗೆ ಕಾರ್ಯ ನಿರ್ವಹಿಸುತ್ತದೆ? ಇಂದಿಗೂ ಅದು ಯಾವ ದೇಶದಲ್ಲಿ ಬಳಕೆಯಲ್ಲಿದೆ ಎಂಬುದನ್ನ ತಿಳಿಯುವ ಮುನ್ನ ಪೋಲಿಯೋ ಎಂದರೇನು? ಅದಕ್ಕೆ ಚಿಕಿತ್ಸೆ ಏನು? ಮಾನವನ ಶ್ವಾಸಕೋಶ ಎಂದರೇನು? ಅದು ಹೇಗೆ ಕೆಲಸ ಮಾಡುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ…..

    ಪೋಲಿಯೋ ಎಂದರೇನು?
    ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಪೋಲಿಯೋ ಅಥವಾ ಪೋಲಿಯೋಮೈಲಿಟಿಸ್ ಅನ್ನು ಹೆಚ್ಚು ಸಾಂಕ್ರಾಮಿಕ ವೈರಲ್ ಕಾಯಿಲೆಯೆಂದು ವ್ಯಾಖ್ಯಾನಿಸುತ್ತದೆ, ಇದು ವ್ಯಕ್ತಿಯಿಂದ ವ್ಯಕ್ತಿಗೆ ಮುಖ್ಯವಾಗಿ ಮಲ-ಮೌಖಿಕ ಮಾರ್ಗದ ಮೂಲಕ ಮತ್ತು ಕೆಲವೊಮ್ಮೆ ಕಲುಷಿತ ನೀರು ಆಹಾರದ ಮೂಲಕ ಹರಡುತ್ತದೆ. ಸೋಂಕು ಹೆಚ್ಚಾಗಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ನಂತರದಲ್ಲಿ ಇದು ಮಕ್ಕಳ ಅಂಗವಿಕಲತೆಗೆ ಕಾರಣವಾಗುತ್ತದೆ.

    ಪೊಲೀಯೋಗೆ ಚಿಕಿತ್ಸೆ ಏನು?
    ವೈರಸ್ ಸೋಂಕು ಎಂದಿಗೂ ಬೇರು ಬಿಡದಂತೆ ತಡೆಯಲು ಪೋಲಿಯೋ ಲಸಿಕೆಯನ್ನು ಮಕ್ಕಳಿಗೆ ನೀಡಲಾಗುತ್ತದೆ. ಪೋಲಿಯೋಗೆ ನಿರ್ದಿಷ್ಟವಾದ ಚಿಕಿತ್ಸೆ ಇಲ್ಲದ ಕಾರಣ, ಲಸಿಕೆ ಪಡೆಯದಿದ್ದರೆ ಚಿಕಿತ್ಸೆಯು ಇತರ ವೈರಲ್ ಸೋಂಕುಗಳಿಗೆ ಹೋಲುತ್ತದೆ. ಇದರರ್ಥ ಜ್ವರ ಮತ್ತು ದೇಹದ ನೋವು ಕಡಿಮೆ ಮಾಡಲು ನೋವು ನಿವಾರಕಗಳು ಮತ್ತು ಔಷಧಿಗಳನ್ನು ತೆಗೆದುಕೊಳ್ಳುವುದು, ದ್ರವಗಳ ಹೆಚ್ಚಳ, ಸೌಮ್ಯ ಜ್ವರ ತರಹದ ರೋಗಲಕ್ಷಣಗಳನ್ನು ನಿರ್ವಹಿಸಲು ಬೆಡ್ ರೆಸ್ಟ್ ಮತ್ತು ಅಂಗವೈಕಲ್ಯ ಮತ್ತು ಪಾರ್ಶ್ವವಾಯು ಅಪಾಯದಲ್ಲಿರುವವರಲ್ಲಿ ಸ್ನಾಯುವಿನ ಚಲನಶೀಲತೆಯನ್ನು ಸುಧಾರಿಸಲು ದೈಹಿಕ ಚಿಕಿತ್ಸೆ. ಉಸಿರಾಡಲು ತೊಂದರೆ ಇರುವವರಿಗೆ ವೆಂಟಿಲೇಶನ್‌ನ ಅಗತ್ಯ ಬೀಳಬಹುದು.

    ಶ್ವಾಸಕೋಶ ಎಂದರೇನು?
    ಶ್ವಾಸಕೋಶ ಎನ್ನುವುದು ಮನುಷ್ಯನ ದೇಹಕ್ಕೆ ಉಸಿರಾಟ ಪೂರೈಸುವ ಪ್ರಮುಖವಾದ ಅಂಗ. ಇದು ವಾತಾವರಣದಿಂದ ಮಾನವನ ದೇಹಕ್ಕೆ ಆಮ್ಲಜನಕವನ್ನು ಪೂರೈಸುವ ಜೊತೆಗೆ ಮಾನವನ ದೇಹದಲ್ಲಿರುವ ಇಂಗಾಲದ ಡೈ ಆಕ್ಸೈಡ್‌ ಅನ್ನು ವಾತಾವರಣಕ್ಕೆ ಹೊರಸೂಸುತ್ತದೆ. ಇದರ ಕಾರ್ಯ ಚಟುವಟಿಕೆ ಚೆನ್ನಾಗಿದ್ದರೆ, ಮನುಷ್ಯ ಕೂಡ ಆರೋಗ್ಯವಾಗಿ ಇರುತ್ತಾನೆ.

    ಕಬ್ಬಿಣದ ಶ್ವಾಸಕೋಶ ಎಂದರೇನು?
    ಹೆಸರೇ ಹೇಳುವಂತೆ ಶವ ಪೆಟ್ಟಿಗೆಯನ್ನೇ ಹೋಲುವ ಹಾಗೂ ಕಬ್ಬಿಣದಿಂದ ಸಿದ್ಧಪಡಿಸಲಾದ ಒಂದು ಸಾಧನ. 1955ರಲ್ಲಿ ಪೊಲೀಯೋ ಲಸಿಕೆ ಕಂಡು ಹಿಡಿಯುವ ಮೊದಲು ಪೊಲೀಯೋ ಅಮೆರಿಕದಲ್ಲಿ ಸಾವಿರಾರು ಜನರನ್ನ ಬಲಿ ಪಡೆದಿತ್ತು. ಜನರು ಉಸಿರಾಟದ ತೊಂದರೆ ಅನುಭವಿಸುತ್ತಿದ್ದರು, ಅಂದಿನ ಪರಿಸ್ಥಿತಿ ಊಹಿಸುವುದಕ್ಕೂ ಕಷ್ಟಕರವಾಗಿತ್ತು. ಜ್ವರದ ಲಕ್ಷಣಗಳೊಂದಿಗೆ ಸ್ನಾಯು ಬಿಗಿತ, ಪಾರ್ಶ್ವವಾಯು (ಸ್ಟ್ರೋಕ್‌) ಉಂಟು ಮಾಡುತ್ತಿತ್ತು ಎಂದು ತಜ್ಞರು ಹೇಳುತ್ತಾರೆ. ಪೋಲಿಯೋ ರೋಗಪೀಡಿತರಲ್ಲಿ ಹೆಚ್ಚಿನವರು ಮಕ್ಕಳೇ ಆಗಿರುತ್ತಿದ್ದರು. ಅದಕ್ಕೆ ಚಿಕಿತ್ಸೆ ಫಲಿಸದೇ ಇದ್ದಾಗ ಅದು ವಯಸ್ಕರಾದವರಿಗೂ ತಗುಲುತ್ತಿತ್ತು. ಹಾಗಾಗಿ ಸ್ನಾಯು ಶಕ್ತಿ ಕಳೆದುಕೊಳ್ಳುತ್ತಿದ್ದರು. ಇದರ ಚೇತರಿಕೆಗಾಗಿ ಕನಿಷ್ಠ ಎರಡು ವಾರಗಳ ವರೆಗೆ ದೀರ್ಘ ಉಸಿರಾಟದ ಅವಶ್ಯಕತೆಯಿತ್ತು. ಅದನ್ನು ಪೂರೈಸಲು ಕಂಡುಹಿಡಿದಿದ್ದೇ ಈ ಐರಲ್‌ ಲಂಗ್ಸ್‌ (ಕಬ್ಬಿಣದ ಶ್ವಾಸಕೋಶ).

    ಕಬ್ಬಿಣದ ಶ್ವಾಸಕೋಶವು ಹೇಗೆ ಕೆಲಸ ಮಾಡುತ್ತದೆ?
    ಕಬ್ಬಿಣದ ಶ್ವಾಸಕೋಶವನ್ನು 1927ರಲ್ಲಿ ಫಿಲಿಪ್ ಡ್ರಿಂಕರ್ ಅಮೆರಿಕದಲ್ಲಿ ಅಭಿವೃದ್ಧಿಪಡಿಸಿದರು. ಮೊದಲಬಾರಿಗೆ 1928ರಲ್ಲಿ ಕ್ಲಿನಿಕಲ್‌ ಪ್ರಯೋಗಕ್ಕೆ ಬಳಸಲಾಯಿತು, ಈ ವಿಧಾನದಿಂದ ಒಂದು ಹುಡುಗಿಯ ಜೀವವೂ ಉಳಿಯಿತು. ನಂತರ ತಜ್ಞರು ಪೋಲಿಯೋ ಪೀಡಿತರಿಗೆ ಕೃತಕ ಉಸಿರಾಟ ಕಲಿಸಲು ಇದು ಸಹಾಯಕವಾಗಲಿದೆ ಎಂಬುದನ್ನು ಕಂಡುಕೊಂಡರು.

    ರೋಗಿಯನ್ನು ಇದರೊಳಗೆ ಇರಿಸಲು ಉಕ್ಕಿನಿಂದ ಸಿದ್ಧಪಡಿಸಲಾದ ಗಾಳಿಯಾಡದ ಕೋಣೆ ಒಳಗೊಂಡಿರುತ್ತದೆ. ಎಲೆಕ್ಟ್ರಿಕ್‌ ಮೋಟಾರ್‌ ಹಾಗೂ ವ್ಯಾಕ್ಯೂಮ್‌ ಕ್ಲೀನರ್‌ನಂತಹ ಏರ್‌ಪಂಪ್‌ಗಳಿಂದ ಚಾಲಿತವಾಗಿರುತ್ತದೆ. ಮುಂಭಾಗದಲ್ಲಿರುವ ದ್ವಾರವನ್ನು ರಬ್ಬರ್‌ ಡಾಲರ್‌ ಎಂದು ಕರೆಯಲಾಗುತ್ತದೆ. ತಲೆ ಭಾಗವನ್ನು ಹೊರತುಪಡಿಸಿ ಉಳಿದೆಲ್ಲ ಭಾಗವನ್ನು ಈ ದ್ವಾರ ಮುಚ್ಚಿಕೊಳ್ಳುತ್ತದೆ. ವ್ಯಕ್ತಿಯನ್ನು ಇದರ ಒಳಗೆ ಇರಿಸಿ, ಚಾಲನೆ ಮಾಡಿದಾಗ ಇದು ಇಂಭಾಗದ ರಬ್ಬರ್‌ ಅನ್ನು ಪಂಪ್‌ ಮಾಡುವ ಮೂಲಕ‌ ವ್ಯಕ್ತಿಯ ದೇಹಕ್ಕೆ ಕೃತಕ ಉಸಿರಾಟ ಕಲ್ಪಿಸುತ್ತದೆ. ಬಳಿಕ ಬರುವ ಗಾಳಿಯನ್ನು ವ್ಯಕ್ತಿಯ ದೇಹ ಹೀರಿಕೊಂಡು ಶ್ವಾಸಕೋಶಕ್ಕೆ ಆಮ್ಲಜನಕ ಸಿಗುವಂತೆ ಮಾಡುತ್ತದೆ. ಇದರಿಂದ ರೋಗಿಯ ಅಂಗಾಗಗಳು ಸ್ವಾಧೀನ ಕಳೆದುಕೊಂಡಿದ್ದರೂ ಶ್ವಾಸಕೋಶಕ್ಕೆ ಉಸಿರಾಟ ಪೂರೈಕೆ ಮಾಡಲಿದ್ದು, ರೋಗಿಯನ್ನೂ ಜೀವಂತವಾಗಿರಿಸಬಹುದು ಎಂದು ತಜ್ಞರ ವರದಿ ಹೇಳಿದೆ.

    ಈಗ ಬಳಕೆಯಲ್ಲಿದೆಯೇ?
    ಸದ್ಯ ಇದು ಭಾರತದಲ್ಲಿ ಬಳಕೆಯಲ್ಲಿರುವ ಬಗ್ಗೆ ಮಾಹಿತಿ ಇಲ್ಲ. ಆದ್ರೆ ಅಮೆರಿಕದಲ್ಲಿ ಬಳಕೆಯಲ್ಲಿದೆ. ಪಾಲ್‌ ಅಲೆಕ್ಸಾಂಡರ್‌ ಅವರು ಬದುಕುಳಿಯಲು ಕಬ್ಬಿಣದ ಶ್ವಾಸಕೋಶ ಬಳಸಿಕೊಂಡಿದ್ದಾರೆ. ಇದು ಆಧುನಿಕ ವೆಂಟಿಲೇಟರ್‌ಗಳಿಗಿಂತಲೂ ಉತ್ತಮ ಚಿಕಿತ್ಸಾ ಸೌಕರ್ಯಗಳನ್ನು ನೀಡುತ್ತವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

  • ಹಸ್ತಮೈಥುನದಿಂದ ಶ್ವಾಸಕೋಶದ ತೊಂದರೆಗೆ ಸಿಲುಕಿದ ಯುವಕ – ಎಕ್ಸ್‌ರೇ ನೋಡಿ ಶಾಕ್‌

    ಹಸ್ತಮೈಥುನದಿಂದ ಶ್ವಾಸಕೋಶದ ತೊಂದರೆಗೆ ಸಿಲುಕಿದ ಯುವಕ – ಎಕ್ಸ್‌ರೇ ನೋಡಿ ಶಾಕ್‌

    ಬರ್ನ್: 20 ವರ್ಷದ ಯುವಕನೊಬ್ಬ ತೀವ್ರವಾಗಿ ಹಸ್ತಮೈಥುನ ಮಾಡಿ ಶ್ವಾಸಕೋಶ ತೊಂದರೆಗೆ ಸಿಲುಕಿಕೊಂಡಿದ್ದಾನೆ.

    ಸ್ವಿಟ್ಜರ್ಲ್ಯಾಂಡ್ ನಿವಾಸಿ 20 ವರ್ಷದ ಯುವಕ ಹಸ್ತಮೈಥುನವನ್ನು ಹೆಚ್ಚು ಮಾಡಿಕೊಂಡ ಪರಿಣಾಮ ಆತನಿಗೆ ಮಲಗುವಾಗ ಉಸಿರಾಟ ತೊಂದರೆ ಕಾಣಿಸಿಕೊಳ್ಳುತ್ತಿತ್ತು. ಅಲ್ಲದೇ ಹಠಾತ್ ಆಗಿ ಯುವಕನಿಗೆ ತೀಕ್ಷ್ಣವಾದ ಎದೆನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಹೋಗಿದ್ದಾನೆ. ಈ ಹಿನ್ನೆಲೆ ಎಕ್ಸ್‌ರೇ ಮಾಡಿಸಿಕೊಂಡಾಗ ವೈದ್ಯರೇ ಶಾಕ್ ಆಗಿದ್ದಾರೆ. ಎಕ್ಸ್‌ರೇಯಲ್ಲಿ ಯುವಕನ ಶ್ವಾಸಕೋಶದಲ್ಲಿ ಗಾಯವಾಗಿರುವುದು ಕಂಡುಬಂದಿದೆ. ಇದನ್ನೂ ಓದಿ: ಸಿನಿಮೀಯ ರೀತಿ ದರೋಡೆಕೋರನನ್ನೇ ಹಿಡಿದ ಮನೆಯವರು

    20-year-old Swiss man hospitalised after tearing his lung from masturbating | Viral News: ಲೈಂಗಿಕ ತೃಪ್ತಿ ಪಡೆಯಲು ಹೋಗಿ 20ರ ಯುವಕನ ಶ್ವಾಸಕೋಶವೇ ಹರಿಯಿತು– News18 Kannada

    ಪರೀಕ್ಷೆಯ ನಂತರ, ರೋಗಿಯ ಮುಖ ಊದಿಕೊಂಡಿದೆ ಎಂದು ವೈದ್ಯರು ಗಮನಿಸಿದ್ದಾರೆ. ಈ ವೇಳೆ ಅವನು ಉಸಿರಾಡುವಾಗ ಮತ್ತು ಹೊರಗೆ ಬಿಡುವಾಗ ಶಬ್ದಗಳ ಏರಿಪೇರು ಆಗುತ್ತಿರುವುದನ್ನು ಗಮನಿಸಿದ್ದಾರೆ.

    ಎಲ್ಲ ಪರೀಕ್ಷಗಳ ನಂತರ ಯುವಕನಿಗೆ ಎದೆಯ ಕ್ಷ-ಕಿರಣವು ನ್ಯುಮೋಮೆಡಿಯಾಸ್ಟಿನಮ್(pneumomediastinum) ಎಂಬ ಅಪರೂಪದ ಕಾಯಿಲೆಯನ್ನು ಹೊಂದಿದ್ದಾನೆ ಎಂದು ಬಹಿರಂಗಪಡಿಸಿದರು. ಇದರಿಂದ ಮನುಷ್ಯನ ಗಾಳಿಯ ಚೀಲಗಳು ಹಾನಿಗೊಳಗಾಗಿದ್ದು, ಅವನಿಗೆ ಹೆಚ್ಚಿನ ಪ್ರಮಾಣದ ಆಮ್ಲಜನಕದ ಅಗತ್ಯವಿದೆ ಎಂದು ವಿವರಿಸಿದರು. ಶ್ವಾಸಕೋಶಗಳು ಅಥವಾ ಅನ್ನನಾಳಕ್ಕೆ ದೈಹಿಕ ಆಘಾತದಿಂದ ನ್ಯುಮೋಮೆಡಿಯಾಸ್ಟಿನಮ್ ಉಂಟಾಗಬಹುದು ಎಂದು ವೈದ್ಯರು ವಿವರಿಸಿದರು. ಇದನ್ನೂ ಓದಿ: ದೇವಸ್ಥಾನದ ಮೇಲೆ ದಾಳಿ ಮಾಡಿದ್ದು ಖಂಡನೀಯ: ಮುತಾಲಿಕ್ 

    Looking into the Future of X-ray Technology

    ಈ ರೀತಿಯ ಗಾಯವು ಯುವಕರಲ್ಲಿ ಸಂಭವಿಸುವ ಸಾಧ್ಯತೆ ಹೆಚ್ಚು. ಇದರಿಂದ ತೀವ್ರವಾದ ಆಸ್ತಮಾ ದಾಳಿ, ಶ್ರಮದಾಯಕ ವ್ಯಾಯಾಮ ಅಥವಾ ವಾಂತಿ ಬರುತ್ತೆ. ಪ್ರಸ್ತುತ ಯುವಕನನ್ನು ಅಬ್ಸರ್‌ವೇಷನ್‌)ದಲ್ಲಿ ಇಡಲಾಗಿದೆ. ಅದೃಷ್ಟವಶಾತ್ ಯುವಕ ಶೀಘ್ರವೇ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ತಿಳಿಸಿದರು.

  • ಶ್ವಾಸಕೋಶದಲ್ಲಿ ಎದೆಹಾಲು ಸಿಲುಕಿ 10 ತಿಂಗ್ಳ ಮಗು ಸಾವು

    ಶ್ವಾಸಕೋಶದಲ್ಲಿ ಎದೆಹಾಲು ಸಿಲುಕಿ 10 ತಿಂಗ್ಳ ಮಗು ಸಾವು

    ಉಡುಪಿ: ಜಿಲ್ಲೆಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದ 10 ತಿಂಗಳ ಮಗುವಿನ ವೈದ್ಯಕೀಯ ವರದಿ ಜಿಲ್ಲಾ ಆರೋಗ್ಯಾಧಿಕಾರಿಗಳ ಕೈಸೇರಿದೆ.

    ಜ್ವರ ಮತ್ತು ಉಸಿರಾಟ ತೊಂದರೆಯಾಗಿ ಸಾವನ್ನಪ್ಪಲು ಎದೆಹಾಲು ಕಾರಣ ಅಂತ ವೈದ್ಯರು ಹೇಳಿದ್ದಾರೆ. ಕಾರ್ಕಳದ ಮಿಯಾರು ಗ್ರಾಮದಲ್ಲಿ ನೆಲೆಸಿರುವ ಮೂಲತಃ ವಿಜಯಪುರ ಜಿಲ್ಲೆಯ ದಂಪತಿಯ ಮಗು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಏಪ್ರಿಲ್ ತಿಂಗಳಲ್ಲಿ ವಿಜಯಪುರಕ್ಕೆ ಹೋದ ದಂಪತಿ 10 ದಿನಗಳ ಹಿಂದೆ ವಾಪಸ್ ಆಗಿದ್ದರು. ಜೂನ್ 28 ರಂದು ಮಗುವಿಗೆ ಜ್ವರ ಕಾಣಿಸಿಕೊಂಡಿತ್ತು. ಕಾರ್ಕಳದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ತಾಲೂಕು ಆಸ್ಪತ್ರೆಗೆ ಮಗುವನ್ನು ಕರೆ ತರುವಾಗ ಸಾವು ಸಂಭವಿಸಿದೆ.

    ಕೊರೊನಾ ಸಂದರ್ಭದಲ್ಲಿ ಮೃತಪಟ್ಟಿರುವ ಕಾರಣ ಮಗುವಿನ ಗಂಟಲ ದ್ರವ ಪರೀಕ್ಷೆಗಾಗಿ ರವಾನಿಸಲಾಗಿತ್ತು. ಕೆಎಂಸಿ ಲ್ಯಾಬ್‍ನ ವರದಿ ಜಿಲ್ಲಾಡಳಿತದ ಕೈಸೇರಿದೆ. ತಾಯಿ 10 ತಿಂಗಳ ಮಗುವಿಗೆ ಮಲಗಿದಲ್ಲಿಗೆ ಎದೆಹಾಲು ಕೊಟ್ಟಿದ್ದರು. ಹಾಲು ಮಗುವಿನ ಶ್ವಾಸಕೋಶದಲ್ಲಿ ಸಿಕ್ಕಿಹಾಕಿ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ. ಪುಟ್ಟ ಮಕ್ಕಳಿಗೆ ಮಲಗಿದಲ್ಲಿಗೆ ಎದೆಹಾಲು ಕೊಡಬಾರದು ಎಂದು ಸಲಹೆ ನೀಡಿದ್ದಾರೆ.

  • ಕೊರೊನಾ ಭಯದಿಂದ ನಿರಾಕರಣೆ- 10 ಆಸ್ಪತ್ರೆ ಅಲೆದಾಡಿ ಪ್ರಾಣ ಬಿಟ್ಟ ಮಹಿಳೆ

    ಕೊರೊನಾ ಭಯದಿಂದ ನಿರಾಕರಣೆ- 10 ಆಸ್ಪತ್ರೆ ಅಲೆದಾಡಿ ಪ್ರಾಣ ಬಿಟ್ಟ ಮಹಿಳೆ

    ಹೈದರಾಬಾದ್: ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರು 10 ಆಸ್ಪತ್ರೆಗಳಿಗೆ ಅಲೆದಾಡಿ ಕೊನೆಗೆ ಪ್ರಾಣ ಬಿಟ್ಟ ಅಮಾನವೀಯ ಘಟನೆ ಹೈದರಾಬಾದಿನಲ್ಲಿ ನಡೆದಿದೆ.

    ಹೌದು. ಮೃತ ಮಹಿಳೆಯನ್ನು ರಫೀಯಾ ಬೇಗಂ(22) ಎಂದು ಗುರುತಿಸಲಾಗಿದ್ದು, ಇವರು ಏಪ್ರಿಲ್ 2ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಆ ಬಳಿಕ ಅವರು ಶ್ವಾಸಕೋಶದ ತೊಂದರೆಯಿಂದ ಬಳಲಿದ್ದು, ಏಪ್ರಿಲ್ 8ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು.

    ಅನಾರೋಗ್ಯಕ್ಕೀಡಾದ ಬಳಿಕ ಮಹಿಳೆಯ ಪತಿ 10 ಆಸ್ಪತ್ರೆಗಳಿಗೆ ಅಲೆದಾಡಿದ್ದಾರೆ. ಆದರೆ ಕೊರೊನಾ ಭಯದಿಂದ ಎಲ್ಲಾ ಆಸ್ಪತ್ರೆಯವರೂ ಮಹಿಳೆಯನ್ನು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ. ಹೀಗಾಗಿ ಕೊನೆಗೆ ಅಂದರೆ ಏಪ್ರಿಲ್ 8ರಂದು ಸಂಜೆ ಮಹಿಳೆ ಕೊನೆಯುಸಿರೆಳೆದಿದ್ದಾರೆ.

    ಮೃತರಾದ ನಂತರ ಕೋವಿಡ್ 19 ಟೆಸ್ಟ್ ಕೂಡ ಮಾಡಲಾಗಿದ್ದು, ಅದರಲ್ಲಿ ನೆಗೆಟಿವ್ ಅಂತ ವರದಿ ಬಂದಿದೆ. ಬಳಿಕ ಅಧಿಕಾರಿಗಳು 9 ದಿನದ ಮಗು, ಪತಿ ಹಾಗೂ ಆಕೆಯ ಕುಟುಂಬಸ್ಥರನ್ನು ರಾಜೇಂದ್ರ ನಗರದಲ್ಲಿರುವ ಕ್ವಾರಂಟೈನ್ ಸೆಂಟರ್ ನಲ್ಲಿ ಗೃಹಬಂಧನದಲ್ಲಿರಿಸಿದ್ದಾರೆ.

    ಮೃತರ ಪತಿ ಬೈಕ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದು, ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ. ಅಲ್ಲದೆ ಯಾವುದೇ ಕೋವಿಡ್ 19 ಪಾಸಿಟಿವ್ ವ್ಯಕ್ತಿಯ ಜೊತೆ ಸಂಪರ್ಕ ಕೂಡ ಮಾಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಆದರೆ ಕೆಲ ಆಸ್ಪತ್ರೆಯ ವೈದ್ಯರು, ಮಹಿಳೆ ಕೊರೊನಾ ವೈರಸ್ ವ್ಯಕ್ತಿಯ ಸಂಪರ್ಕದಲ್ಲಿದ್ದರು. ಹೀಗಾಗಿ ಅವರಿಗೆ ಕಫ ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ.