Tag: lung cancer

  • ಧೂಮಪಾನ ಮಾಡದ ಮಹಿಳೆಯರಲ್ಲಿ ಶ್ವಾಸಕೋಶದ ಕ್ಯಾನ್ಸರ್‌ ಹೆಚ್ಚುತ್ತಿದೆ! ಯಾಕೆ?

    ಧೂಮಪಾನ ಮಾಡದ ಮಹಿಳೆಯರಲ್ಲಿ ಶ್ವಾಸಕೋಶದ ಕ್ಯಾನ್ಸರ್‌ ಹೆಚ್ಚುತ್ತಿದೆ! ಯಾಕೆ?

    ಸಾಮಾನ್ಯವಾಗಿ ಧೂಮಪಾನ ಮಾಡಿದವರಿಗೆ ಹೆಚ್ಚಾಗಿ ಶ್ವಾಸಕೋಶದ ಕ್ಯಾನ್ಸರ್ ಉಂಟಾಗುವ ಸಾಧ್ಯತೆಯಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಧೂಮಪಾನ ಮಾಡದ ಮಹಿಳೆಯರಲ್ಲಿಯೂ ಕೂಡ ಶ್ವಾಸಕೋಶದ ಕ್ಯಾನ್ಸರ್ ಕಂಡುಬರುತ್ತದೆ.

    ಮಹಿಳೆಯರಲ್ಲಿ ನಿರ್ದಿಷ್ಟ ಜೀನ್‌ಗಳಲ್ಲಿ ವ್ಯತ್ಯಾಸ ಕಂಡುಬರುವುದರಿಂದ ಧೂಮಪಾನ ಮಾಡದಿದ್ದರೂ ಶ್ವಾಸಕೋಶದ ಕ್ಯಾನ್ಸರ್‌ಗೆ ಒಳಗಾಗುತ್ತಾರೆ. ಮಹಿಳೆಯರ ಹಾರ್ಮೋನುಗಳಲ್ಲಿನ ಏರಿಳಿತ, ವಿಶೇಷವಾಗಿ ಋತುಚಕ್ರದ ಸಮಯದಲ್ಲಿ ಕ್ಯಾನ್ಸರ್‌ಗೆ ಒಳಗಾಗುವಂತೆ ಮಾಡುತ್ತದೆ. 2022ರಲ್ಲಿ ಜಾಗತಿಕವಾಗಿ ಪುರುಷರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳ ಪೈಕಿ 45.6% (717,211) ಮತ್ತು ಮಹಿಳೆಯರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳಲ್ಲಿ 59.7% (541,971) ಅಡಿನೊಕಾರ್ಸಿನೋಮದಿಂದ ಉಂಟಾಗಿದೆ.

    ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿ ಪ್ರಕಾರ ಶ್ವಾಸಕೋಶದ ಕ್ಯಾನ್ಸರ್‌ಗೆ ವಾಯು ಮಾಲಿನ್ಯವು ಒಂದು ಪ್ರಮುಖ ಅಂಶವಾಗಿದೆ ಎಂದು ತಿಳಿಸಿದೆ. ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ ಸಂಸ್ಥೆಯ ಮಾಹಿತಿ ಪ್ರಕಾರ, ಅಡಿನೊಕಾರ್ಸಿನೋಮ ಎಂಬುವುದು ಪುರುಷರು ಮತ್ತು ಮಹಿಳೆಯರಲ್ಲಿ ರೋಗದ ಪ್ರಬಲ ಕಾರಣವಾಗಿ ಕಾಣಿಸಿಕೊಳ್ಳುತ್ತದೆ. ಧೂಮಪಾನ ಮಾಡದವರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಶೇ.70 ರಷ್ಟು ಅಡಿನೊಕಾರ್ಸಿನೋಮದಿಂದ ಉಂಟಾಗುತ್ತದೆ ಎಂದು ತಿಳಿಸಿದೆ.

    ಅಡಿನೊಕಾರ್ಸಿನೋಮ ಎಂದರೇನು?
    ಅಡಿನೊಕಾರ್ಸಿನೋಮವು ಒಂದು ರೀತಿಯ ಕ್ಯಾನ್ಸರ್ ಆಗಿದ್ದು, ಇದು ಸ್ತನಗಳು, ಹೊಟ್ಟೆ, ಅನ್ನನಾಳ, ಶ್ವಾಸಕೋಶಗಳು, ಮೇದೋಜ್ಜೀರಕ ಗ್ರಂಥಿಗಳಲ್ಲಿ ಲೋಳೆ ಉತ್ಪಾದಿಸುವ ಗ್ರಂಥಿಗಳನ್ನು ಪ್ರಾರಂಭಿಸುತ್ತದೆ. ಕೆಲವು ರೀತಿಯ ಕ್ಯಾನ್ಸರ್‌ಗಳಿಗೆ ಅಡಿನೊಕಾರ್ಸಿನೋಮ ತುಂಬಾ ಸಾಮಾನ್ಯ ಕಾರಣವಾಗುತ್ತದೆ.

    ಧೂಮಪಾನ ಮಾಡದ ಮಹಿಳೆಯರಲ್ಲಿ ಶ್ವಾಸಕೋಶದ ಕ್ಯಾನ್ಸರ್‌ಗೆ ಕಾರಣವೇನು?
    ಕಾರ್ಖಾನೆಗಳಿಂದ ಬಿಡುಗಡೆಯಾಗುವ ಮಾಲಿನ್ಯವು ಶ್ವಾಸಕೋಶದ ಕ್ಯಾನ್ಸರ್‌ಗೆ ಕಾರಣವಾಗುವ ಪ್ರಮುಖ ಅಂಶವಾಗಿದೆ. ಅಲ್ಲದೆ, ಕೆಲವು ಜೆನೆಟಿಕ್ ರೂಪಾಂತರಗಳು ಶ್ವಾಸಕೋಶದ ಕ್ಯಾನ್ಸರ್‌ಗೆ ಕಾರಣವಾಗಬಹುದು. ಮಹಿಳೆಯರು ಧೂಮಪಾನ ಮಾಡದಿದ್ದರೂ ಸಹ, ಈ ರೋಗವು ಆನುವಂಶಿಕ ರೂಪಾಂತರಗಳಿಂದ ಉಂಟಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ಭಯಾನಕ ಅಂದರೆ ಗ್ರಾಮೀಣ ಪ್ರದೇಶಗಳಲ್ಲಿ, ಮಹಿಳೆಯರು ಒಲೆಗಳ ಮೇಲೆ ಅಡುಗೆ ಮಾಡುವಾಗ ಹೊರಸೂಸುವ ಹೊಗೆ ಶ್ವಾಸಕೋಶದ ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂದು ವೈದ್ಯರು ಕಂಡುಹಿಡಿದಿದ್ದಾರೆ.

    ಶ್ವಾಸಕೋಶದ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳು:
    ಶ್ವಾಸಕೋಶದಲ್ಲಿ ಅಡಿನೊಕಾರ್ಸಿನೋಮ ಲೋಳೆ ಉತ್ಪಾದಿಸುವ ಗ್ರಂಥಿಗಳನ್ನು ಪ್ರಾರಂಭಿಸಿದ ಬಳಿಕ ಅದರ ಲಕ್ಷಣಗಳು: ಸ್ವಲ್ಪ ದಿನಗಳಿಂದಿರುವ ಕೆಮ್ಮು, ಆಗಾಗ್ಗೆ ಉಸಿರಾಟದ ತೊಂದರೆ, ಲೋಳೆಯಲ್ಲಿ ರಕ್ತ ಬರುವುದು, ಅತಿಯಾದ ಅಥವಾ ಶ್ರಮದಾಯಕ ವ್ಯಾಯಾಮದ ನಂತರ ಉಸಿರಾಟದ ತೊಂದರೆ, ಶ್ವಾಸಕೋಶದ ಕ್ಯಾನ್ಸರ್ ಮತ್ತಷ್ಟು ಹರಡಿದರೆ, ತಲೆನೋವು ಕೂಡ ಬರಬಹುದು. ಮೂಳೆ ನೋವು, ಹಸಿವಿನ ಕೊರತೆ ಮತ್ತು ತೂಕ ನಷ್ಟದಂತಹ ಲಕ್ಷಣಗಳು ಸಹ ಸಂಭವಿಸಬಹುದು.

    ಶ್ವಾಸಕೋಶದ ಕ್ಯಾನ್ಸರ್ ಗುಣಪಡಿಸಬಹುದೇ? :
    ಮಹಿಳೆಯರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಅನ್ನು ಅದರ ಆರಂಭಿಕ ಹಂತಗಳಲ್ಲಿ ಔಷಧಿಗಳಿಂದ ಗುಣಪಡಿಸಬಹುದು. ಚಿಕಿತ್ಸೆ ಮತ್ತು ಇಮ್ಯುನೊಥೆರಪಿ ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ರೋಗವು ಧೂಮಪಾನ ಮಾಡದ ಪುರುಷರಲ್ಲಿ ಕಂಡುಬಂದರೂ, ಬೇಗನೆ ಚಿಕಿತ್ಸೆ ಪಡೆಯುವುದು ಉತ್ತಮ. ಧೂಮಪಾನಿಗಳ ಡಿಎನ್‌ಎ ಹಾನಿಗೊಳಗಾಗಿ ಕ್ಯಾನ್ಸರ್ ಬೆಳೆದರೆ, ಚಿಕಿತ್ಸೆಯು ಹೆಚ್ಚು ತೀವ್ರವಾಗಿರುತ್ತದೆ. ಅಪಾಯವೂ ಹೆಚ್ಚಾಗಿರುತ್ತದೆ. ಅಂತಹವರು, ತಡಮಾಡದೆ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುವುದು ಉತ್ತಮ.

  • ಖ್ಯಾತ ಆಹಾರ ತಜ್ಞ ಕೆಸಿ ರಘು ನಿಧನ

    ಖ್ಯಾತ ಆಹಾರ ತಜ್ಞ ಕೆಸಿ ರಘು ನಿಧನ

    ಬೆಂಗಳೂರು: ಖ್ಯಾತ ಆಹಾರ ತಜ್ಞ (Food Expert) ಕೆಸಿ ರಘು (KC Raghu) ಅವರು ಭಾನುವಾರ ಅನಾರೋಗ್ಯದಿಂದ ನಿಧನರಾಗಿದ್ದಾರೆ.

    ಈ ಬಗ್ಗೆ ಮಾಹಿತಿ ನೀಡಿರುವ ರಘು ಅವರ ಪತ್ನಿ, ನನ್ನ ಪತಿ ಕೆಸಿ ರಘು ಅವರು ಇಂದು ಬೆಳಗ್ಗೆ ಸುಮಾರು 7:30ಕ್ಕೆ ನಮ್ಮನ್ನು ಅಗಲಿದ್ದಾರೆ. ಅಂತಿಮ ದರ್ಶನ ಮಾಡಲು ಇಚ್ಛಿಸುವವರು ಈ ಕೆಳಗಿನ ವಿಳಾಸಕ್ಕೆ ಬರಬಹುದು. ರಘು ಕೆಸಿ ಎ-403, 4ನೇ ಮಹಡಿ, ಬ್ರಿಗೇಡ್ ಕ್ಯಾಲಡಿಯಮ್, ದಾಸರಹಳ್ಳಿ ಮುಖ್ಯ ರಸ್ತೆ, ಅಮೃತನಗರ, ದಾಸರಹಳ್ಳಿ, ಬೆಂಗಳೂರು -560024 ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ. ಇದನ್ನೂ ಓದಿ: ಮೈಸೂರಿನ ಐತಿಹಾಸಿಕ ದಸರಾ ಜೀವಂತ ಮಹಾಕಾವ್ಯ: ಕಾರ್ಯಕ್ರಮಗಳಿಗೆ ಹಂಸಲೇಖ ಚಾಲನೆ

    ಆಹಾರದ ವಿಚಾರದಲ್ಲಿ ಸಾಕಷ್ಟು ಸ್ಪಷ್ಟ ಮಾಹಿತಿ ನೀಡುತ್ತಿದ್ದ ರಘು ಅವರು ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಇದೀಗ ಅನಾರೋಗ್ಯದಿಂದಾಗಿ ನಿಧನರಾದ ಕೆಸಿ ರಘು ಅವರಿಗೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ. ಇದನ್ನೂ ಓದಿ: ಮಹಿಷಾಸುರ ದುರ್ಗುಣಗಳ ಪ್ರತೀಕ; ಮಹಿಷ ದಸರಾ ಸಮಾಜಕ್ಕೆ ಒಳ್ಳೆಯ ಸಂದೇಶ ಸಾರುವುದಿಲ್ಲ: ಪೇಜಾವರ ಶ್ರೀ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ವೀರಪ್ಪನ್ ಸಹಚರನಿಗೆ ಸುಪ್ರೀಂ ಕೋರ್ಟ್ ಜಾಮೀನು

    ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ವೀರಪ್ಪನ್ ಸಹಚರನಿಗೆ ಸುಪ್ರೀಂ ಕೋರ್ಟ್ ಜಾಮೀನು

    ಚಾಮರಾಜನಗರ: ಪಾಲಾರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ (Palar Blast Case) ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಕಾಡುಗಳ್ಳ ವೀರಪ್ಪನ್ ಸಹಚರ ಜ್ಞಾನಪ್ರಕಾಶ್ ಜಾಮೀನಿನ ಮೇಲೆ ಮೈಸೂರು ಜೈಲಿನಿಂದ (Mysuru Jail) ಬಿಡುಗಡೆಯಾಗಿದ್ದಾನೆ.

    ಶ್ವಾಸಕೋಶದ ಕ್ಯಾನ್ಸರ್ (Lung Cancer) ನಿಂದ ಬಳಲುತ್ತಿದ್ದ ಜ್ಞಾನಪ್ರಕಾಶ್‌ಗೆ (Jnanaprakash) ಸುಪ್ರೀಂ ಕೋರ್ಟ್ (Supreme Court) ಮಾನವೀಯತೆ ಆಧಾರದ ಮೇಲೆ ಜಾಮೀನು ಮಂಜೂರು ಮಾಡಿತ್ತು. ಇದನ್ನೂ ಓದಿ: ಹೊಸವರ್ಷದ ಮೊದಲ ವಾರದಲ್ಲೇ KPTCL ಎಇ, ಜೆಇ ನೇಮಕ ಪರೀಕ್ಷೆ ಫಲಿತಾಂಶ: ಸುನೀಲ್ ಕುಮಾರ್

    ಪಾಲಾರ್ ಬಾಂಬ್ ಸ್ಫೋಟದಲ್ಲಿ (Palar Blast) ಬಾತ್ಮೀದಾರರು ಸೇರಿದಂತೆ ತಮಿಳುನಾಡು ಪೊಲೀಸ್ (Tamil Nadu Police) ಹಾಗೂ ಅರಣ್ಯ ಇಲಾಖೆಯ (Forest Department) 22 ಮಂದಿ ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ವೀರಪ್ಪನ್ ಸಹಚರರಾದ ಸೈಮನ್, ಬಿಲವೇಂದ್ರ, ಮೀಸೆಕಾರ ಮಾದಯ್ಯ ಹಾಗೂ ಜ್ಞಾನಪ್ರಕಾಶ್‌ಗೆ 1997 ರಲ್ಲಿ ಟಾಡಾ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿತ್ತು. ಬಳಿಕ 2014 ರಲ್ಲಿ ಸುಪ್ರೀಂ ಕೋರ್ಟ್ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿ ತೀರ್ಪು ನೀಡಿತ್ತು. ಇದನ್ನೂ ಓದಿ: ಬುರ್ಕಾ ಧರಿಸಿ ಮಹದೇಶ್ವರನ ಭಕ್ತಿಗೀತೆ ಹಾಡಿದ ವಿದ್ಯಾರ್ಥಿನಿ – ಗೀತೆಗೆ ಶಿಳ್ಳೆ, ಚಪ್ಪಾಳೆ

    Live Tv
    [brid partner=56869869 player=32851 video=960834 autoplay=true]