Tag: Lunar eclipse

  • ಸಮೋಸ, ಬಾಳೆಹಣ್ಣು ತಿಂದು 2023ರ ಚಂದ್ರಗ್ರಹಣಕ್ಕೆ ಸ್ವಾಗತ – ಪ್ರಗತಿಪರರಿಂದ ವಿನೂತನ ಜಾಗೃತಿ

    ಸಮೋಸ, ಬಾಳೆಹಣ್ಣು ತಿಂದು 2023ರ ಚಂದ್ರಗ್ರಹಣಕ್ಕೆ ಸ್ವಾಗತ – ಪ್ರಗತಿಪರರಿಂದ ವಿನೂತನ ಜಾಗೃತಿ

    ಬೆಂಗಳೂರು: ರಾತ್ರಿ ನಭೋಮಂಡಲದಲ್ಲಿ ಸಂಭವಿಸಿದ ಚಂದ್ರಗ್ರಹಣದ (Lunar Eclipse) ವಿಸ್ಮಯವನ್ನು ಹಲವು ಪ್ರಗತಿಪರರು ಆಹಾರ ಸೇವನೆ ಮಾಡುತ್ತಾ ಚಂದ್ರಗ್ರಹಣ ವೀಕ್ಷಣೆ ಮಾಡಿದ್ದಾರೆ. ʻಖಗೋಳ ವಿಸ್ಮಯ ಚಂದ್ರಗ್ರಹಣ ಸಂಭ್ರಮಿಸೋಣ, ಮೂಡನಂಭಿಕೆ ಅಳಿಸೋಣ, ಮಾನವೀಯತೆ ಉಳಿಸೋಣ, ವಿಜ್ಞಾನದೆಡೆಗೆ ನಮ್ಮ ನಡಿಗೆʼ ಎಂಬ ಘೋಷವಾಕ್ಯದೊಂದಿಗೆ ಸಮೋಸ (Samosa), ಬಾಳೆಹಣ್ಣು ತಿನ್ನುತ್ತಾ 2023ರ ಚಂದ್ರಗ್ರಹಣಕ್ಕೆ ಸ್ವಾಗತ ಕೋರಿದರು.

    ಇಲ್ಲಿನ ಚಾಲುಕ್ಯ ವೃತ್ತದ ಬಳಿಯಿರುವ ಬಸವಣ್ಣ ಪ್ರತಿಮೆ (Basavanna Statue) ಮುಂದೆ ಜಮಾಯಿಸಿದ್ದ ಹಲವು ಪ್ರಗತಿಪರರು ʻಗ್ರಹಣದ ಸಮಯದಲ್ಲಿ ಊಟ ಮಾಡಬಾರದುʼ ಅನ್ನೋ ಜೋತಿಷಿಗಳ ನಂಬಿಕೆಗೆ ಸೆಡ್ಡು ಹೊಡೆದು ಆಹಾರ ಸೇವನೆ ಮಾಡಿದರು. ಗ್ರಹಣದ ಸಮಯದಲ್ಲಿ ಊಟ ಮಾಡಬಾರದು ಅನ್ನೋದು ಮೌಢ್ಯ, ಅದನ್ನ ವಿರೋಧಿಸಿ ಚಂದ್ರಗ್ರಹಣ ಸಂಭ್ರಮಿಸೋಣ ಎಂದು ಪ್ರಗತಿಪರರು ಕರೆ ನೀಡಿದ್ದಾರೆ. ನಟ ಚೇತನ್‌ ದಂಪತಿ ಕೂಡ ಈ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಇದನ್ನೂ ಓದಿ: ಚಂದ್ರಗ್ರಹಣ – ನೆಹರೂ ತಾರಾಲಯದಲ್ಲಿ ನಭೋಮಂಡಲ ವಿಸ್ಮಯ ದರ್ಶನ

    ಮೂಢನಂಬಿಕೆ ವಿರೋಧಿ ಒಕ್ಕೂಟದಿಂದ ವಿಜ್ಞಾನದೆಡಗೆ ನಮ್ಮ ನಡಿಗೆ ಘೋಷವಾಕ್ಯದೊಂದಿಗೆ ಗ್ರಹಣದ ಬಗ್ಗೆ ಮೌಢ್ಯ ಬೇಡವೆಂದು ನೆಹರೂ ತಾರಾಲಯದಲ್ಲಿ (Nehru Planetarium) ಜಾಗೃತಿ ಮೂಡಿಸುವ ಪ್ರಯತ್ನವನ್ನು ಮಾಡಿತು. ಇದನ್ನೂ ಓದಿ: ಚಂದ್ರಗ್ರಹಣ – ನೆಹರೂ ತಾರಾಲಯದಲ್ಲಿ ನಭೋಮಂಡಲ ವಿಸ್ಮಯ ದರ್ಶನ

    ಗ್ರಹಣ ವೀಕ್ಷಣೆಗೆ ಅಡ್ಡಿಯಾದ‌ ಮೋಡ: ಇನ್ನೂ ಚಂದ್ರಗ್ರಹಣ ವೀಕ್ಷಣೆಗೆ ಮೋಡ ಅಡ್ಡಿಯುಂಟು ಮಾಡಿದೆ. ನಸುಕಿನ 1:04 ಗಂಟೆಗೆ ಪೂರ್ಣ ಪ್ರಮಾಣದ ಗ್ರಹಣ ಆರಂಭವಾಗಿತ್ತು. 1 ಗಂಟೆ 30 ನಿಮಿಷಗಳ ವರೆಗೂ ಗ್ರಹಣ ಗೋಚರವಾಗುತ್ತಿತ್ತು. ಆ ನಂತರ ಸ್ಬಲ್ಪ ಸಮಯ ಮೋಡ ಅಡ್ಡಿಯಾಗಿದ್ದರಿಂದ ಗ್ರಹಣ ವೀಕ್ಷಣೆಗೂ ಅಡಚಣೆಯುಂಟಾಗಿತ್ತು. ಇದನ್ನೂ ಓದಿ: ಯಾವ ದೇಶದಲ್ಲೂ ಪೂರ್ಣ ಚಂದ್ರಗ್ರಹಣ ಕಾಣೋದಿಲ್ಲ: ವಿಜ್ಞಾನಿ ಆನಂದ್‌

    Web Stories 
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಂದ್ರಗ್ರಹಣ – ನೆಹರೂ ತಾರಾಲಯದಲ್ಲಿ ನಭೋಮಂಡಲ ವಿಸ್ಮಯ ದರ್ಶನ

    ಚಂದ್ರಗ್ರಹಣ – ನೆಹರೂ ತಾರಾಲಯದಲ್ಲಿ ನಭೋಮಂಡಲ ವಿಸ್ಮಯ ದರ್ಶನ

    ಬೆಂಗಳೂರು: ಇಂದು (ಭಾನುವಾರ) ರಾತ್ರಿ ನಭೋಮಂಡಲದಲ್ಲಿ ಸಂಭವಿಸಿದ ರಾಹುಗ್ರಸ್ಥ, ಖಂಡಗ್ರಾಸ ಚಂದ್ರಗ್ರಹಣದ (Lunar Eclipse) ವಿಸ್ಮಯವನ್ನು ನೆಹರೂ ತಾರಾಲಯದಲ್ಲಿ (Nehru Planetarium) ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಇಸ್ರೋ (ISRO) ಸಿಬ್ಬಂದಿ ಸೇರಿದಂತೆ ಅನೇಕರು ಕಣ್ತುಂಬಿಕೊಂಡರು.

    ಚಂದ್ರಗ್ರಹಣವನ್ನು ಬರಿಗಣ್ಣಿನಿಂದಲೂ ವೀಕ್ಷಣೆ ಮಾಡಬಹುದೆಂದು ವಿಜ್ಞಾನಿಗಳು ಹೇಳಿದ್ದಾರೆ. ಇದರ ಹೊರತಾಗಿಯೂ ನೆಹರೂ ತಾರಾಲಯದಲ್ಲಿ ಟೆಲಿಸ್ಕೋಪ್ ವ್ಯವಸ್ಥೆ ಮಾಡಲಾಗಿದೆ. ಚಂದ್ರನ ಕೌತುಕ ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧ ಮೂಲೆಗಳಿಂದಲೂ ಶಿಕ್ಷಕರು, ವಿದ್ಯಾರ್ಥಿಲೂ (Students) ನೆಹರೂ ತಾರಾಲಯಕ್ಕೆ ಆಗಮಿಸಿದ್ದರು. ಇದನ್ನೂ ಓದಿ: ಯಾವ ದೇಶದಲ್ಲೂ ಪೂರ್ಣ ಚಂದ್ರಗ್ರಹಣ ಕಾಣೋದಿಲ್ಲ: ವಿಜ್ಞಾನಿ ಆನಂದ್‌

    ಈ ಸಂತದವನ್ನು `ಪಬ್ಲಿಕ್ ಟಿವಿ’  (Public TV) ಜೊತೆಗೆ ಹಂಚಿಕೊಂಡರು. ಚಂದ್ರಗ್ರಹಣ ವೀಕ್ಷಣೆಯಿಂದ ಸಾಕಷ್ಟು ವೈಜ್ಞಾನಿಕ ಬೆಳವಣಿಗೆಗಳ ಬಗ್ಗೆ ತಿಳಿದುಕೊಂಡೆವು. ಶಾಲೆಗಳಲ್ಲಿ ಈ ಬಗ್ಗೆ ಮಕ್ಕಳಿಗೆ ಹೆಚ್ಚಿನ ತಿಳಿವಳಿಕೆ ನೀಡಬಹುದು. ಇಷ್ಟು ಹತ್ತಿರದಿಂದ ಚಂದ್ರನನ್ನು ನೋಡುತ್ತಿದ್ದೇವೆ. ಜೊತೆಗೆ ಗುರುಗ್ರಹವನ್ನೂ (Jupiter) ನೋಡುತ್ತಿರುವುದು ಖುಷಿ ಸಿಕ್ಕಿದೆ ಎಂದು ಹಾವೇರಿಯಿಂದ ಬಂದ ಶಿಕ್ಷಕರೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಚಂದ್ರಗ್ರಹಣ ಹಿನ್ನೆಲೆ – ರಾಯರ ವೃಂದಾವನಕ್ಕೆ ನಿರಂತರ ಜಲಾಭಿಷೇಕ

    ಇನ್ನೂ ಕೆಲ ಮಕ್ಕಳು, ನಾವು ಪುಸ್ತಕಗಳಲ್ಲಿ ಮಾತ್ರವೇ ಗ್ರಹಣದ ಬಗ್ಗೆ ಓದಿದ್ದೆವು, ಕೇಳಿದ್ದೆವು. ಆದ್ರೆ ಈಗ ಕಣ್ಣಾರೆ ವೀಕ್ಷಿಸುತ್ತಿರುವುದು ವಿಸ್ಮಯವೇ ಅನ್ನಿಸಿದೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮೋದಿಯಂತಹ ನಾಯಕ ದೇಶಕ್ಕೆ ಅನಿವಾರ್ಯ.. ಮತ್ತೊಮ್ಮೆ ಮೋದಿ ನಾಯಕತ್ವ ಬೇಕು ಅನ್ನೋದು ತಪ್ಪಲ್ಲ: ಮಂತ್ರಾಲಯ ಶ್ರೀ

    ಚಂದ್ರಗ್ರಹಣ ಕುರಿತು ಮಾಹಿತಿ ನೀಡಿದ್ದ ನೆಹರೂ ತಾರಾಲಯದ ವಿಜ್ಞಾನಿ ಆನಂದ್, ಮಧ್ಯರಾತ್ರಿ ಜಾವ 1:05 ಗಂಟೆಗೆ ಪೂರ್ಣ ಪ್ರಮಾಣದ ಗ್ರಹಣ ಆರಂಭವಾಗಲಿದೆ. 3:05 ಕ್ಕೆ ಮೋಕ್ಷ ಆಗುತ್ತದೆ. ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ. ಭೂಮಿಯ ನೆರಳಿನ ಶಂಕು ದೊಡ್ಡದು. ಚಂದ್ರನನ್ನ ಇದು ಆವರಿಸಿಕೊಳ್ಳುತ್ತದೆ. ಚಂದ್ರಗ್ರಹಣ ಎಲ್ಲಾ ದೇಶಗಳಲ್ಲೂ ವೀಕ್ಷಣೆ ಮಾಡಬಹುದು. ಆದರೆ ಪ್ರಮಾಣ ಹೆಚ್ಚುಕಮ್ಮಿ ಇರುತ್ತದೆ. ಚಂದ್ರನ ಒಂದು ಭಾಗ ಮಾತ್ರ ನೆರಳಿನಿಂದ ಆವೃತವಾಗುತ್ತದೆ. 1:05ಕ್ಕೆ ಆರಂಭವಾಗಿ 1:45 ಗಂಟೆಗೆ ದಟ್ಟವಾಗುತ್ತದೆ. ಬೆಂಗಳೂರಿನಲ್ಲಿ 6% ಮಾತ್ರ ಛಾಯೆ ಸುತ್ತುವರಿಯುತ್ತದೆ. ಗರಿಷ್ಟ ಮಟ್ಟದ ಪ್ರಮಾಣ 1:45 ಗಂಟೆಗೆ ತಲುಪುತ್ತದೆ ಎಂದು ವಿವರಿಸಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಯಾವ ದೇಶದಲ್ಲೂ ಪೂರ್ಣ ಚಂದ್ರಗ್ರಹಣ ಕಾಣೋದಿಲ್ಲ: ವಿಜ್ಞಾನಿ ಆನಂದ್‌

    ಯಾವ ದೇಶದಲ್ಲೂ ಪೂರ್ಣ ಚಂದ್ರಗ್ರಹಣ ಕಾಣೋದಿಲ್ಲ: ವಿಜ್ಞಾನಿ ಆನಂದ್‌

    ಬೆಂಗಳೂರು: ಇದು ಪಾರ್ಶ್ವ ಚಂದ್ರಗ್ರಹಣ. ಇದನ್ನು ಎಲ್ಲಾ ದೇಶಗಳಲ್ಲೂ ವೀಕ್ಷಿಸಬಹುದು. ಆದರೆ ಯಾವ ದೇಶದಲ್ಲೂ ಪೂರ್ಣ ಚಂದ್ರಗ್ರಹಣ ಕಾಣೋದಿಲ್ಲ ಎಂದು ನೆಹರು ತಾರಾಲಯದ ವಿಜ್ಞಾನಿ ಆನಂದ್ ತಿಳಿಸಿದ್ದಾರೆ.

    ಚಂದ್ರಗ್ರಹಣ ಕುರಿತು ಮಾತನಾಡಿದ ಅವರು, ಬೆಳಗಿನ ಜಾವ 1:05 ಗಂಟೆಗೆ ಪೂರ್ಣ ಪ್ರಮಾಣದ ಗ್ರಹಣ ಆರಂಭವಾಗಲಿದೆ. 3:05 ಕ್ಕೆ ಮೋಕ್ಷ ಆಗುತ್ತದೆ. ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ನೆಹರು ತಾರಾಲಯದಲ್ಲಿ ಬ್ಲಡ್ ಮೂನ್ ಗ್ರಹಣ ವೀಕ್ಷಣೆಗೆ ಅವಕಾಶ

    ಭೂಮಿಯ ನೆರಳಿನ‌ ಶಂಕು ದೊಡ್ಡದು. ಚಂದ್ರನನ್ನ ಇದು ಆವರಿಸಿಕೊಳ್ಳುತ್ತದೆ. ಚಂದ್ರಗ್ರಹಣ ಎಲ್ಲಾ ದೇಶಗಳಲ್ಲೂ ವೀಕ್ಷಣೆ ಮಾಡಬಹುದು. ಆದರೆ ಪ್ರಮಾಣ ಹೆಚ್ಚುಕಮ್ಮಿ ಇರುತ್ತದೆ. ಚಂದ್ರನ ಒಂದು ಭಾಗ ಮಾತ್ರ ನೆರಳಿನಿಂದ ಆವೃತವಾಗುತ್ತದೆ ಎಂದು ವಿವರಿಸಿದ್ದಾರೆ.

    1:05ಕ್ಕೆ ಆರಂಭವಾಗಿ 1:45 ಗಂಟೆಗೆ ದಟ್ಟವಾಗುತ್ತದೆ. ಬೆಂಗಳೂರಿನಲ್ಲಿ 6% ಮಾತ್ರ ಛಾಯೆ ಸುತ್ತುವರಿಯುತ್ತದೆ. ಗರಿಷ್ಟ ಮಟ್ಟದ ಪ್ರಮಾಣ 1:45 ಗಂಟೆಗೆ ತಲುಪುತ್ತದೆ. ಯಾವ ದೇಶದಲ್ಲೂ ಪೂರ್ಣ ಚಂದ್ರಗ್ರಹಣ ಕಾಣೋದಿಲ್ಲ ಎಂದು ಹೇಳಿದ್ದಾರೆ.

    ಗ್ರಹಣ ವೀಕ್ಷಣೆಗೆ ಬೇರೆ ಸಲಕರಣೆಗಳ ಅಗತ್ಯವಿಲ್ಲ. ಚಂದ್ರಗ್ರಹಣ ಬರಿಗಣ್ಣಿನಿಂದ ನೋಡಬಹುದು. ಟೆಲಿಸ್ಕೋಪ್‌ಗಳ ಅಗತ್ಯ ಇರಲ್ಲ. ಕುತೂಹಲಕ್ಕಾಗಿ ಟೆಲಿಸ್ಕೋಪ್‌ಗಳ ಮೂಲಕ ವೀಕ್ಷಣೆಗೆ ಅವಕಾಶವಿದೆ. ಬೆಳಕಿನ ಮೂಲಕ್ಕೆ ಅಡ್ಡ ಬರುವ ಕಾಯವೇ ಗ್ರಹಣ. ಬೆಳಕು ವ್ಯತ್ಯಾಸಗಳಾಗುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಇಂದು ವರ್ಷದ ಕೊನೆಯ ಚಂದ್ರಗ್ರಹಣ- ಮಧ್ಯರಾತ್ರಿ 1 ಗಂಟೆಗೆ ಗ್ರಹಣ ಸ್ಪರ್ಶ

    ಚಂದ್ರನ ಮೇಲೆ ಭೂಮಿ ಹಾದು ಹೋಗುತ್ತದೆ. ಚಂದ್ರನ ದೂರ, ಭೂಮಿ, ಚಂದಿರನ ಅಂತರ ಅಳೆಯಲು ನೆರವಾಗಿದೆ ಈ ಗ್ರಹಣ. ಗ್ರಹಣದ ವೇಳೆ ಪ್ರಾಕೃತಿಕ ವಿಕೋಪಗಳು ಆಗೋದು ಕಾಕತಾಳೀಯ ಎಂದು ತಿಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಂದ್ರಗ್ರಹಣ ಹಿನ್ನೆಲೆ – ರಾಯರ ವೃಂದಾವನಕ್ಕೆ ನಿರಂತರ ಜಲಾಭಿಷೇಕ

    ಚಂದ್ರಗ್ರಹಣ ಹಿನ್ನೆಲೆ – ರಾಯರ ವೃಂದಾವನಕ್ಕೆ ನಿರಂತರ ಜಲಾಭಿಷೇಕ

    – ರಾಯರ ದರ್ಶನಕ್ಕೆ ರಾತ್ರಿ 8:30ರ ವರೆಗೂ ಅವಕಾಶ

    ರಾಯಚೂರು: ರಾಹುಗ್ರಸ್ತ ಚಂದ್ರಗ್ರಹಣ (Lunar Eclipse) ಹಿನ್ನೆಲೆ ಮಂತ್ರಾಲಯದ (Mantralayam) ರಾಯರ (Guru Raghavendra Swamy) ವೃಂದಾವನಕ್ಕೆ ಗ್ರಹಣದ ಆರಂಭದಿಂದ ಮುಕ್ತಾಯದವರೆಗೂ ನಿರಂತರ ಜಲಾಭಿಷೇಕ ನಡೆಯಲಿದೆ. ಅಲ್ಲದೇ ಶಾಂತಿ ಹೋಮ ಕೂಡ ನಡೆಯಲಿದೆ.

    ಗ್ರಹಣ ಇರುವುದರಿಂದ ಭಕ್ತರ ಸೇವೆಗೆ ಒಂದಷ್ಟು ಸಣ್ಣ ಬದಲಾವಣೆಗಳನ್ನು ಮಾಡಲಾಗಿದೆ. ಎಂದಿನಂತೆ ರಾಯರ ವೃಂದಾವನ ದರ್ಶನಕ್ಕೆ ರಾತ್ರಿವರೆಗೂ ಅವಕಾಶ ಇರಲಿದೆ. ಸಂಜೆ 4 ಗಂಟೆಯ ಬಳಿಕ ಪೂಜೆ ಹಾಗೂ ಸೇವೆಗಳನ್ನ ಬಂದ್ ಮಾಡಲಾಗುತ್ತಿದೆ. ಇದನ್ನೂ ಓದಿ: ಚಂದ್ರಗ್ರಹಣ ಎಫೆಕ್ಟ್ – ಮಂಗಳೂರಿನ ಕದ್ರಿ ದೇಗುಲದಲ್ಲಿ ಭಕ್ತಸಾಗರ

    ರಾತ್ರಿ ವೇಳೆ ನಡೆಯುತ್ತಿದ್ದ ಉತ್ಸವಗಳು, ಹರಕೆ ಸೇವೆಗಳನ್ನು ಮಧ್ಯಾಹ್ನವೇ ನೆರವೇರಿಸಲಾಗುತ್ತಿದೆ. ಚಿನ್ನದ ರಥ, ಬೆಳ್ಳಿ ರಥ, ಗಜ ವಾಹನೊತ್ಸವಗಳನ್ನು ಮಧ್ಯಾಹ್ನದ ವೇಳೆಗೆ ಮುಕ್ತಾಯಗೊಳಿಸಲಾಗುತ್ತಿದೆ. ಉಳಿದಂತೆ ಭಕ್ತರಿಗೆ ರಾತ್ರಿ 8:30ರ ವರೆಗೂ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಸಂಜೆ 4 ಗಂಟೆ ಬಳಿಕ ತೀರ್ಥ ಪ್ರಸಾದ ಸೇವೆ ಇರುವುದಿಲ್ಲ. ಇನ್ನೂ ಗ್ರಹಣ ಕಾಲದಲ್ಲಿ ಶಾಂತಿ ಹೋಮ ಹಮ್ಮಿಕೊಳ್ಳಲಾಗಿದೆ. ಶಾಂತಿ ಹೋಮದಲ್ಲಿ ಭಕ್ತರಿಗೆ ಭಾಗವಹಿಸಲು ಅವಕಾಶ ನೀಡಲಾಗಿದೆ. ಇದನ್ನೂ ಓದಿ: ಯೋಗಿ ಆದಿತ್ಯನಾಥ್ ಭೇಟಿಯಾದ ನಿಖಿಲ್ ಕುಮಾರಸ್ವಾಮಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಂದ್ರಗ್ರಹಣ ಎಫೆಕ್ಟ್ – ಮಂಗಳೂರಿನ ಕದ್ರಿ ದೇಗುಲದಲ್ಲಿ ಭಕ್ತಸಾಗರ

    ಚಂದ್ರಗ್ರಹಣ ಎಫೆಕ್ಟ್ – ಮಂಗಳೂರಿನ ಕದ್ರಿ ದೇಗುಲದಲ್ಲಿ ಭಕ್ತಸಾಗರ

    ಮಂಗಳೂರು: ಇಂದು ಚಂದ್ರಗ್ರಹಣ (Lunar Eclipse) ಹಿನ್ನೆಲೆ ದೇವಸ್ಥಾನಗಳಲ್ಲಿ ಭಕ್ತಸಾಗರ ಹರಿದುಬರುತ್ತಿದೆ. ಅದೇ ರೀತಿ ಮಂಗಳೂರಿನ (Mangaluru) ಕದ್ರಿ (Kadri) ದೇಗುಲದಲ್ಲಿ ಗ್ರಹಣ ಹಿನ್ನೆಲೆ ದೇವರ ದರ್ಶನ ಮತ್ತು ವಿಶೇಷ ಪೂಜೆ ಸಲ್ಲಿಕೆಗಾಗಿ ಭಕ್ತರ ದಂಡೇ ಆಗಮಿಸುತ್ತಿದೆ.

    ಕದ್ರಿ ಶ್ರೀ ಮಂಜುನಾಥ ದೇಗುಲದ (Kadri Shree Manjunatha Temple) ಏಳು ಕೆರೆಗಳಲ್ಲಿ ತೀರ್ಥ ಸ್ನಾನ ಮಾಡಿ ಕಾಶಿ ತೀರ್ಥದಲ್ಲಿ ಮಿಂದು ದೇವರಿಗೆ ಪೂಜೆ ಸಲ್ಲಿಸುವ ಸಲುವಾಗಿ ಭಕ್ತರು ಆಗಮಿಸುತ್ತಿದ್ದಾರೆ. ವಾರಾಂತ್ಯ ಹಾಗೂ ಗ್ರಹಣ ಹಿನ್ನೆಲೆ ಭಕ್ತರು ಬರುತ್ತಿದ್ದು, ಗ್ರಹಣ ಪ್ರಾಯಶ್ಚಿತಕ್ಕಾಗಿ ದೇವರಿಗೆ ಎಣ್ಣೆ ಹಾಗೂ ಧಾನ್ಯವನ್ನು ಸಮರ್ಪಣೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಪ್ರತಿಯೊಬ್ಬರ ನಡೆ ಕೂಡ ನಮಗೆ ಗೊತ್ತಿದೆ- ಶಾಸಕರಿಗೆ ಡಿಕೆಶಿ ಖಡಕ್ ಎಚ್ಚರಿಕೆ

    ಕದ್ರಿ ಸೇರಿದಂತೆ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯದಲ್ಲೂ ಜನಜಂಗುಳಿ ಸೇರಿದ್ದು, ಧರ್ಮಸ್ಥಳದಲ್ಲಿ ದೇವರ ದರ್ಶನ ಯಥಾಸ್ಥಿತಿ ಇದ್ದರೂ ಭಕ್ತ ಸಾಗರ ಹರಿದುಬರುತ್ತಿದೆ. ಕುಕ್ಕೆಯಲ್ಲಿ ಮಾತ್ರ ಇಂದು ದೇವರ ದರ್ಶನ ಸಮಯದಲ್ಲಿ ಬದಲಾವಣೆ ಆಗಿದೆ. ರಾತ್ರಿಯ ಮಹಾಪೂಜೆ ಸಂಜೆ 6:30ಕ್ಕೆ ಮುಕ್ತಾಯವಾಗಲಿದೆ. ಇಂದು ಸಂಜೆ 6:30ರ ಬಳಿಕ ದೇವರ ದರ್ಶನ ಬಂದ್ ಆಗಲಿದ್ದು, ಸಂಜೆಯ ಆಶ್ಲೇಷಾ ಬಲಿ ಹಾಗೂ ರಾತ್ರಿಯ ಅನ್ನದಾನ ಸೇವೆಯೂ ಬಂದ್ ಮಾಡಲಾಗಿದೆ. ಇದನ್ನೂ ಓದಿ: ನೆಹರು ತಾರಾಲಯದಲ್ಲಿ ಬ್ಲಡ್ ಮೂನ್ ಗ್ರಹಣ ವೀಕ್ಷಣೆಗೆ ಅವಕಾಶ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನೆಹರು ತಾರಾಲಯದಲ್ಲಿ ಬ್ಲಡ್ ಮೂನ್ ಗ್ರಹಣ ವೀಕ್ಷಣೆಗೆ ಅವಕಾಶ

    ನೆಹರು ತಾರಾಲಯದಲ್ಲಿ ಬ್ಲಡ್ ಮೂನ್ ಗ್ರಹಣ ವೀಕ್ಷಣೆಗೆ ಅವಕಾಶ

    ಬೆಂಗಳೂರು: ಇಂದು ಮಧ್ಯರಾತ್ರಿ ಸಂಭವಿಸಲಿರುವ ಬ್ಲಡ್ ಮೂನ್ ಚಂದ್ರಗ್ರಹಣ (Lunar Eclipse) ವೀಕ್ಷಣೆಗೆ ನೆಹರು ತಾರಾಲಯಯದಲ್ಲಿ (Nehru Taralaya) ವಿಶೇಷ ಅವಕಾಶ ಮಾಡಲಾಗಿದೆ.

    ಚಂದ್ರಗ್ರಹಣ ಮಧ್ಯರಾತ್ರಿಯ ವೇಳೆಗೆ ನಡೆಯಲಿದ್ದು, ದೇಶಾದ್ಯಂತ ಗೋಚರಿಸಲಿದೆ. ಗ್ರಹಣ ವೀಕ್ಷಣೆಗೆ ನಗರದ ಜನರಿಗೆ ಅನುಕೂಲವಾಗುವಂತೆ ನೆಹರು ತಾರಾಲಯದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಗ್ರಹಣ ರಾತ್ರಿ 11:31 ರಿಂದ ಪ್ರಾರಂಭವಾಗುತ್ತದೆ ಮತ್ತು ಮುಂಜಾನೆ 3:36 ಕ್ಕೆ ಕೊನೆಗೊಳ್ಳುತ್ತದೆ. ಗ್ರಹಣ ಆರಂಭದ ಸಮಯದಿಂದ ಮುಗಿಯುವವರೆಗೂ ಸಾರ್ವಜನಿಕರಿಗೆ ವೀಕ್ಷಣೆ ಮಾಡಲು ಅವಕಾಶ ನೀಡಲಾಗಿದೆ. ಚಂದ್ರಗ್ರಹಣವನ್ನು ಬರೀ ಕಣ್ಣಿನಿಂದಲೇ ನೋಡಬಹುದಾದ ಕಾರಣ ಯಾವುದೇ ಕನ್ನಡಕ ಅಥವಾ ಉಪಕರಣ ಇಲ್ಲದೇ ನೋಡಲು ಅವಕಾಶ ಮಾಡಲಾಗಿದೆ. ಇದನ್ನೂ ಓದಿ: ಇಂದು ವರ್ಷದ ಕೊನೆಯ ಚಂದ್ರಗ್ರಹಣ- ಮಧ್ಯರಾತ್ರಿ 1 ಗಂಟೆಗೆ ಗ್ರಹಣ ಸ್ಪರ್ಶ

    ಬೆಂಗಳೂರಿನಲ್ಲಿ (Bengaluru) ಕೇವಲ 6%ನಷ್ಟು ಮಾತ್ರ ಗ್ರಹಣ ಗೋಚರವಾಗಲಿದೆ. ಇದರಿಂದಾಗಿ ಅವಶ್ಯಕತೆ ಇದ್ದಲ್ಲಿ ಬೈನಾಕ್ಯೂಲರ್ ಹಾಗೂ ಟೆಲಿಸ್ಕೋಪ್‍ಗಳನ್ನು ಕೂಡ ತಾರಾಲಯದಲ್ಲಿ ವ್ಯವಸ್ಥೆ ಮಾಡಲಾಗಿದೆ. ವಯಸ್ಸಿನ ಮಿತಿ ಮತ್ತು ಜನರ ಸಂಖ್ಯೆಯಲ್ಲಿ ಮಿತಿ ಇಲ್ಲದೆ ಚಂದ್ರಗ್ರಹಣ ವೀಕ್ಷಣೆ ಮಾಡಬಹುದಾಗಿದೆ. ಇದನ್ನೂ ಓದಿ: ಪರಮೇಶ್ವರ್ ಮನೆಯಲ್ಲಿ ಡಿನ್ನರ್ ಪಾರ್ಟಿ- ಗೃಹಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಂದಾದ್ರಾ ಸಿಎಂ?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಂದು ವರ್ಷದ ಕೊನೆಯ ಚಂದ್ರಗ್ರಹಣ- ಮಧ್ಯರಾತ್ರಿ 1 ಗಂಟೆಗೆ ಗ್ರಹಣ ಸ್ಪರ್ಶ

    ಇಂದು ವರ್ಷದ ಕೊನೆಯ ಚಂದ್ರಗ್ರಹಣ- ಮಧ್ಯರಾತ್ರಿ 1 ಗಂಟೆಗೆ ಗ್ರಹಣ ಸ್ಪರ್ಶ

    – ಗ್ರಹಣದ ಸಮಯದಲ್ಲಿ, ನಂತರ ಏನು ಮಾಡಬೇಕು..?

    ಬೆಂಗಳೂರು: ಇಂದು (ಶನಿವಾರ) ಈ ವರ್ಷದ ಕೊನೆಯ ಗ್ರಹಣವಾಗಿರುವ ಚಂದ್ರಗ್ರಹಣ (Lunar Eclipse) ಸಂಭವಿಸಲಿದೆ. ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬಂದಾಗ ಚಂದ್ರಗ್ರಹಣ ಉಂಟಾಗುತ್ತದೆ. ಚಂದ್ರ ಮಸುಕಾಗಿ ಕಾಣುತ್ತ ಬಳಿಕ ಕ್ರಮೇಣ ಕೆಂಪಾಗುವುದು ಚಂದ್ರಗ್ರಹಣದ ಸಂದರ್ಭದಲ್ಲಿ ನಡೆಯುತ್ತದೆ.

    ಇಂದು ರಾತ್ರಿ 11.31ಕ್ಕೆ ಆರಂಭವಾಗಲಿರುವ ಈ ಭಾಗಶಃ ಚಂದ್ರಗ್ರಹಣ (Chandra Grahan 2023), ಬೆಳಗ್ಗಿನ ಜಾವ 3.36 ಹಾಗೆ ಕೊನೆಯಾಗಲಿದೆ. ರಾತ್ರಿ 11.31ರ ಹಾಗೆ ಗ್ರಹಣ ಆರಂಭವಾದರೂ ಅದರ ಸಂಪೂರ್ಣ ಛಾಯೆ ಮಧ್ಯರಾತ್ರಿ ಬಳಿಕವೇ ಅಂದರೆ ರಾತ್ರಿ 1.05ರ ಹಾಗೆ ಸಂಪೂರ್ಣವಾಗಿ ಆವರಿಸಿಕೊಳ್ಳಲಿದೆ. ಭಾನುವಾರ ರಾತ್ರಿ 2.24ರವರೆಗೂ ಇರಲಿದೆ. ಹೀಗಾಗಿ ಗ್ರಹಣದ ಈ ಅವಧಿ ಸುಮಾರು 1.19 ನಿಮಿಷದ್ದಾಗಿರಲಿದೆ. ಇಂದಿನ ಭಾಗಶಃ ಚಂದ್ರಗ್ರಹಣ ದೇಶಾದ್ಯಂತ ಗೋಚರಿಸಲಿದೆ.

    ಚಂದ್ರಗ್ರಹಣ ವಿಶೇಷತೆ ಏನು..?: ಈ ಚಂದ್ರಗ್ರಹಣ ಅಶ್ವಿನಿ ನಕ್ಷತ್ರದಲ್ಲಿ ಸಂಭವಿಸಲಿದೆ. 30 ವರ್ಷಗಳಿಗೊಮ್ಮೆ ಸಂಭವಿಸಬಹುದಾದ ಅಪರೂಪ ವಿಸ್ಮಯ ಸಮಯದಲ್ಲಿ ಚಂದ್ರ ಮೇಷ ರಾಶಿಯಲ್ಲಿರಲಿದ್ದಾನೆ. ಗುರು-ಚಂದ್ರರು ಸೇರಿ ಮೇಷದಲ್ಲಿ ಗಜಕೇಸರಿ ಯೋಗ ರೂಪಿಸುವರು. ಗಜಕೇಸರಿ ಯೋಗದಲ್ಲಿ ಗ್ರಹಣ ಸಂಭವಿಸೋದ್ರಿಂದ ಕೆಲ ರಾಶಿಯವರಿಗೆ ಯೋಗ ಎಂದು ನಂಬಲಾಗಿದೆ.

    ಪುರಾಣದ ನಂಬಿಕೆಯ ಪ್ರಕಾರ, ಹುಣ್ಣಿಮೆಯ ರಾತ್ರಿ ರಾಹು ಮತ್ತು ಕೇತು ಚಂದ್ರನನ್ನು ಆವರಿಸಲು ಪ್ರಯತ್ನಿಸಿದಾಗ ಚಂದ್ರನ ಮೇಲೆ ಗ್ರಹಣ ಸಂಭವಿಸುತ್ತದೆ. ಅದೇ ಸಮಯದಲ್ಲಿ ಸೂತಕ ಅವಧಿಯು ಚಂದ್ರಗ್ರಹಣಕ್ಕೆ ಕೆಲವು ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ. ಇಂತಹ ಗ್ರಹಣದ ಸಂದರ್ಭ ಏನು ಮಾಡಿದ್ರೇ ಒಳಿತು..? ಚಂದ್ರಗ್ರಹಣದ ಎಫೆಕ್ಟ್ ನಿಂದ ಪಾರಾಗಲು ದಾರಿ ಇದ್ಯಾ..? ಮನಃಕಾರಕ ಚಂದ್ರನಿಗೆ ಗ್ರಹಣವಾದ್ರೇ ಪ್ರಭಾವ ಹೇಗಿರಲಿದೆ..? ಚಂದ್ರಗ್ರಹಣದ ಸಂದರ್ಭದಲ್ಲಿ ಏನು ಮಾಡಬೇಕು ಎಂಬ ಡೀಟೈಲ್ ಇಲ್ಲಿದೆ.

    ಗ್ರಹಣ ವೇಳೆ ಏನು ಮಾಡಬೇಕು..?: ಇಂದು ಮಧ್ಯಾಹ್ನ 2.55ರಿಂದ ಗ್ರಹಣದ ಸೂತಕ ಆವರಿಸಲಿದೆ. ಹೀಗಾಗಿ ಮಧ್ಯಾಹ್ನ 2.55 ಗಂಟೆಯೊಳಗೆ ಊಟ ಮುಗಿಸಬೇಕು. ಬಿಳಿ ಬಟ್ಟೆಯಲ್ಲಿ ಉದ್ದಿನ ಬೇಳೆ-ಅಕ್ಕಿ ಗಂಟು ಕಟ್ಟಿ ದೇವರ ಮನೆಯಲ್ಲಿಡಿ. ಅಶ್ವಿನಿ ನಕ್ಷತ್ರ… ಮೇಷ ರಾಶಿಯವರು ತಪ್ಪದೇ ಈ ಕ್ರಿಯೆ ಮಾಡಿ. ಮನೆ ಮೇಲೆ ಅಥವಾ ಕಾಂಪೌಂಡ್ ಮೇಲೆ ಮೊಸರು ಅನ್ನ ಇಟ್ಟರೆ ಶಾಂತಿ. ಗ್ರಹಣ ಮೋಕ್ಷ ಬಳಿಕ ಬೆಳಗ್ಗೆ 5 ಗಂಟೆಗೆ ಸ್ನಾನ ಮಾಡಿ. ಚಂದ್ರ ಹಾಗೂ ರಾಹುವಿನ ಪ್ರಾರ್ಥನೆ ಮಾಡಿದ್ರೆ ಒಳಿತು. ಮಕರ, ಕುಂಭ, ತುಲಾ ರಾಶಿಯವರು ಮಹಾಲಕ್ಷ್ಮಿ ಪ್ರಾರ್ಥನೆ ಮಾಡಿ. ಶಿವನ ಆರಾಧನೆ ಮಾಡಿದ್ರೆ ಗ್ರಹಣದ ದೋಷ ನಿವಾರಣೆಯಾಗುತ್ತದೆ.

    ಗ್ರಹಣ ವೇಳೆ ಏನು ಮಾಡಬಾರದು..?: ಗ್ರಹಣದ ಸೂತಕ ಕಾಲದಿಂದ ಆಹಾರ ಸೇವನೆ ಬೇಡ. ಯಾರೂ ಗ್ರಹಣ ಸಂದರ್ಭ ಹೊರಗೆ ಬರಬಾರದು. ಗರ್ಭಿಣಿಯರಂತೂ ಮನೆಯೊಳಗೆ ವಿಶ್ರಾಂತಿಯಲ್ಲಿದ್ದರೆ ಒಳ್ಳೆಯದು. ಅನಾರೋಗ್ಯ, ಅಶಕ್ತರು, ಮಕ್ಕಳು ಆಹಾರ ಸೇವಿಸದೆ ಇರಬಾರದು. ಗ್ರಹಣದ ಸಮಯದಲ್ಲಿ ಅಡುಗೆ ಕೆಲಸಗಳನ್ನು ಮಾಡಬಾರದು.

    ಗ್ರಹಣ ಮೋಕ್ಷ ನಂತರ ಏನು ಮಾಡಬೇಕು?: ಗ್ರಹಣ ಮೋಕ್ಷ ನಂತರ ಸ್ನಾನ ಮಾಡಿ ದೇವರಿಗೆ ದೀಪಹಚ್ಚಿ. ಬಳಿಕ ವಿಷ್ಣು ಅಥವಾ ಶಿವನ ದರ್ಶನ ಮಾಡಬೇಕು. ದೇವಾಯಗಳಲ್ಲಿ ಅಕ್ಕಿ, ಉದ್ದಿನಬೇಳೆ ದಾನ ಮಾಡಬೇಕು. ಅನುಕೂಲ ಇದ್ದವರು ಚಂದ್ರ ಬಿಂಬದಾನ ಮಾಡಬಹುದು. ಮೇಷ ರಾಶಿಯವರು ಕ್ಷೀರ, ಅಕ್ಕಿ, ಹಾಲಿನ ದಾನ ಮಾಡಬೇಕು. ದುರ್ಗಿ, ಕಾಳಿ ದರ್ಶನ ಮಾಡಿದ್ರೆ ಒಳ್ಳೆಯದು. ಚಂಡಿಕಾ ಹೋಮ, ಪಾರಯಣದಲ್ಲಿ ಭಾಗಿಯಾದ್ರೆ ಒಳ್ಳೆಯದು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶನಿವಾರ, ಭಾನುವಾರ ವರ್ಷದ ಕೊನೇ ಚಂದ್ರಗ್ರಹಣ- 30 ವರ್ಷಗಳಿಗೊಮ್ಮೆ ಸಂಭವಿಸುವ ವಿಸ್ಮಯ

    ಶನಿವಾರ, ಭಾನುವಾರ ವರ್ಷದ ಕೊನೇ ಚಂದ್ರಗ್ರಹಣ- 30 ವರ್ಷಗಳಿಗೊಮ್ಮೆ ಸಂಭವಿಸುವ ವಿಸ್ಮಯ

    ಬೆಂಗಳೂರು: ಆಗಸದಲ್ಲಿ ಖಗೋಳ ವಿಸ್ಮಯ ನಡೆಯಲಿದೆ. ಇತ್ತೀಚೆಗಷ್ಟೇ ಸೂರ್ಯ ಗ್ರಹಣವಾಯ್ತು. ಅಕ್ಟೋಬರ್ 28ಕ್ಕೆ ಚಂದ್ರಗ್ರಹಣ (Lunar Eclipse 2023) ವಿಸ್ಮಯ ನಡೆಯಲಿದೆ.

    ಹೌದು. ಅಕ್ಟೋಬರ್ 28 ರಂದು ಚಂದ್ರಗ್ರಹಣ ಇರಲಿದೆ. ಅಕ್ಟೋಬರ್ 29ಕ್ಕೂ ಇದರ ಪ್ರಭಾವ ತಟ್ಟಲಿದೆ. ಜ್ಯೋತಿಷ್ಯದ ಪ್ರಕಾರ ಗ್ರಹಣ ಅಮಂಗಳ, ಸೂತಕದ ಛಾಯೆ ಎನ್ನುವ ನಂಬಿಕೆ ಇದೆ. ಈ ವರ್ಷದ ಕೊನೆಯ ಚಂದ್ರಗ್ರಹಣ ಇದಾಗಿದ್ದು ಭಾರತದಲ್ಲಿಯೂ ಗೋಚರಿಸಲಿದೆ. ಹಾಗಾದ್ರೆ ಈ ಚಂದ್ರಗ್ರಹಣದ ವಿಶೇಷತೆ ಏನು ಯಾವ ಸಮಯಕ್ಕೆ ಆರಂಭವಾಗುತ್ತೆ ಗ್ರಹಣ ಮೋಕ್ಷ ಕಾಲದ ಸಂಪೂರ್ಣ ವಿವರ ಇಲ್ಲಿದೆ.

    ಗ್ರಹಣದ ಅವಧಿ (ವಿಜ್ಞಾನಿಗಳ ಪ್ರಕಾರ): ಅಕ್ಟೋಬರ್ -28ರ ರಾತ್ರಿ 11.30ಕ್ಕೆ ಸಂಭವಿಸಿ ಅಕ್ಟೋಬರ್ 29 ರ 2.30ರವರೆಗೆ ಇರಲಿದೆ.
    ಗ್ರಹಣದ ಅವಧಿ (ಜ್ಯೋತಿಷಿಗಳ ಪ್ರಕಾರ): ಮಧ್ಯರಾತ್ರಿ 1.04 ಕ್ಕೆ ಆರಂಭ. 2:22ಕ್ಕೆ ಅಂತ್ಯ.

    ವಿಶೇಷತೆ ಏನು..?: ರಾಹುಗ್ರಸ್ಥ ಚಂದ್ರಗ್ರಹಣವಿದು. ಭಾರತದಲ್ಲಿ ಪಾಶ್ರ್ವವಾಗಿ ಗೋಚರಿಸಲಿದೆ. ಶರದ್ ಪೂರ್ಣಿಮೆಯ ರಾತ್ರಿಯಲ್ಲಿ ಈ ಗ್ರಹಣ ಸಂಭವಿಸಲಿದೆ. ಗಜಕೇಸರಿ ಯೋಗದಲ್ಲಿ ಈ ಬಾರಿ ಚಂದ್ರಗ್ರಹಣ ಸಂಭವಿಸಲಿದ್ದು, ಸಾಮಾನ್ಯವಾಗಿ ಗಜಕೇಸರಿ ಯೋಗದಲ್ಲಿ ಗ್ರಹಣ ಬಹಳ ಅಪರೂಪವಾಗಿದೆ. 30 ವರ್ಷಗಳಿಗೊಮ್ಮೆ ಸಂಭವಿಸುವ ಅಪರೂಪದ ಗ್ರಹಣ ಇದಾಗಿದೆ. ಈ ರೀತಿಯ ಗ್ರಹಣ ಬಂದಾಗ ಕೆಲವೊಮ್ಮೆ ಮಹಾ ಅಪತ್ತು ಬರುವ ಸಾಧ್ಯತೆಯೂ ಇರಲಿದೆ. ಪ್ರಾಕೃತಿಕ ವಿಕೋಪ, ಧರ್ಮ ಸಂಘರ್ಷಗಳು ನಡೆಯುವ ಸಾಧ್ಯತೆಯೂ ಇದೆ.  ಇದನ್ನೂ ಓದಿ: ಈ ಬಾರಿ ದೀಪಾವಳಿ ಹಬ್ಬಕ್ಕೆ ಸೂರ್ಯಗ್ರಹಣ ಕಾರ್ಮೋಡ

    ಇನ್ನು ವಿಜ್ಞಾನಿಗಳ ಪಾಲಿಗೆ ಇದು ವಿಸ್ಮಯವಾಗಲಿದೆ. ಈಗಾಗಿ ನೆಹರೂ ತಾರಾಲಯದಲ್ಲಿ ಕೂಡ ಗ್ರಹಣ ವೀಕ್ಷಣೆಗೆ ಅವಕಾಶವಿರಲಿದೆ. ಒಟ್ಟಾರೆ ಗ್ರಹಣವನ್ನು ಸೂತಕದ ಛಾಯೆ ಅಂತಾ ಕೆಲವು ಅಂದುಕೊಂಡ್ರೆ ಇನ್ನು ಕೆಲವರು ಖಗೋಳ ವಿಸ್ಮಯವಾಗಿ ಇದನ್ನು ನೋಡುತ್ತಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಂದೇ ರಕ್ತ ಚಂದ್ರಗ್ರಹಣ – ಯಾವ ನಕ್ಷತ್ರ, ರಾಶಿಗಳಿಗೆ ದೋಷ?

    ಇಂದೇ ರಕ್ತ ಚಂದ್ರಗ್ರಹಣ – ಯಾವ ನಕ್ಷತ್ರ, ರಾಶಿಗಳಿಗೆ ದೋಷ?

    ಬೆಂಗಳೂರು: ಇಂದು ಮಂಗಳವಾರ ರಾಹುಗ್ರಸ್ತ ಚಂದ್ರಗ್ರಹಣ (Lunar Eclipe) ದ ಕಾರ್ಮೋಡ. 15 ದಿನಗಳ ಅಂತರದಲ್ಲಿ ಸೂರ್ಯಗ್ರಹಣ ಹಾಗೂ ಚಂದ್ರಗ್ರಹಣಕ್ಕೆ ಭಾರತ ಸಾಕ್ಷಿಯಾಗಲಿದ್ದು, ಕರುನಾಡಿನಲ್ಲಿಯೂ ಪಾರ್ಶ್ವ ಚಂದ್ರಗ್ರಹಣದ ಛಾಯೆ ಗೋಚರಿಸಲಿದೆ.

    ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸೂರ್ಯಗ್ರಹಣ (Solar Eclipse) ಸಂಭವಿಸಿತ್ತು. ಇದೀಗ 15 ದಿನದ ಅಂತರದಲ್ಲಿಯೇ ಕಾರ್ತಿಕ ಪೂರ್ಣಿಮೆಯ ದಿನ ರಾಹುಗ್ರಸ್ಥ ಚಂದ್ರಗ್ರಹಣ ಸಂಭವಿಸಲಿದೆ. 15 ದಿನದ ಅಂತರದಲ್ಲಿ ಎರಡು ಗ್ರಹಣ ಸಂಭವಿಸಿರೋದ್ರಿಂದ ಜ್ಯೋತಿಷ್ಯ ಶಾಸ್ತ್ರದಲ್ಲಿ ಸಹಜವಾಗಿ ಪ್ರಾಮುಖ್ಯತೆ ಪಡೆದುಕೊಂಡಿದೆ. ಭರಣಿ ನಕ್ಷತ್ರ ಮೇಷರಾಶಿಯಲ್ಲಿ ಸಂಭವಿಸಲಿರುವ ಗ್ರಹಣದಿಂದ ಕೆಲ ರಾಶಿಯವರಿಗೆ ಅಪತ್ತು ಕೆಲ ರಾಶಿಯವರಿಗೆ ಉತ್ತಮವೂ ಆಗಲಿದೆ ಎನ್ನುವ ವಿಶ್ಲೇಷಣೆಗಳು ಕೇಳಿಬಂದಿದೆ. ಇದನ್ನೂ ಓದಿ: ಈಗಿನ ಶಿಕ್ಷಣದ ಹೊಸ ಟ್ರೆಂಡ್ ಏನು? – ಪಬ್ಲಿಕ್ ಟಿವಿ ‘ವಿದ್ಯಾ ಮಂದಿರ’ಕ್ಕೆ ಬನ್ನಿ ಮಾಹಿತಿ ಪಡೆಯಿರಿ

    ರಾಹುಗ್ರಸ್ಥ ಚಂದ್ರ ಗ್ರಹಣದ ಅವಧಿ ಹೀಗಿದೆ:
    > ಗ್ರಹಣ ಸ್ಪರ್ಶಕಾಲ – 2.39ಕ್ಕೆ
    > ಗ್ರಹಣ ಮಧ್ಯಕಾಲ – 4.29ಕ್ಕೆ
    > ಗ್ರಹಣ ಮೋಕ್ಷಕಾಲ – 6.19ಕ್ಕೆ

    ಗ್ರಹಣ ದೋಷವಿರುವ ನಕ್ಷತ್ರ, ರಾಶಿಗಳು:
    ನಕ್ಷತ್ರಗಳು – ಅಶ್ವಿನಿ, ಭರಣಿ, ಕೃತ್ತಿಕಾ, ಪೂರ್ವೆ(ಹುಬ್ಬಾ), ಪೂರ್ವಷಾಢಾ
    ರಾಶಿಗಳು – ಮೇಷ, ವೃಷಭ, ಕನ್ಯಾ, ವೃಶ್ಚಿಕ

    ಗ್ರಹಣಾಚರಣೆ ಯಾವ ಕ್ರಮ ಅನುಸರಿಸಬೇಕು..?
    – ಗ್ರಹಣ ಸ್ಪರ್ಶಕಾಲದಲ್ಲಿ ಸ್ನಾನ ಮಾಡುವುದು
    – ದೇವರ ಸ್ತೋತ್ರ ಪಠಣೆ
    – ಮನೆಯಲ್ಲಿ ದೇವರಿಗೆ ದೀಪ ಹಚ್ಚಿ ಜಪ
    – ಗ್ರಹಣ ಅವಧಿಯಲ್ಲಿ ಮನೆಯಿಂದ ಹೊರಬಾರದೇ ಇರುವುದು
    – ಗ್ರಹಣ ಮೋಕ್ಷದ ನಂತರ ಸ್ನಾನ ಮಾಡುವುದು
    – ಗ್ರಹಣ ದೋಷವಿರುವ ನಕ್ಷತ್ರ, ರಾಶಿಯವರು ಹೋಮ ಮಾಡಿಸಿ
    – ದೋಷ ಪರಿಹಾರಕ್ಕೆ ಗ್ರಹಣ ಶಾಂತಿಹೋಮ ನಡೆಸಿದ್ರೆ ಉತ್ತಮ

    15 ದಿನಗಳ ಅಂತರದಲ್ಲಿ ಗ್ರಹಣ ಸಂಭವಿಸಿರೋದ್ರಿಂದ ಪ್ರಕೃತಿಯಲ್ಲಿ ಕೊಂಚ ಅಲ್ಲೋಲ ಕಲ್ಲೋಲವಾಗಬಹುದು ಎನ್ನುವ ವಿಶ್ಲೇಷಣೆಯನ್ನು ಜ್ಯೋತಿಷಿಗಳು ಮಾಡುತ್ತಿದ್ದಾರೆ. ಹೀಗಾಗಿ ಈ ಬಾರಿಯ ರಕ್ತಚಂದ್ರಗ್ರಹಣ ಧಾರ್ಮಿಕವಾಗಿ ಮಹತ್ವ ಪಡೆದುಕೊಂಡಿದೆ.

    Live Tv
    [brid partner=56869869 player=32851 video=960834 autoplay=true]

  • ಇಂದು ವರ್ಷದ ಕೊನೆಯ ಸೂರ್ಯಗ್ರಹಣ

    ಇಂದು ವರ್ಷದ ಕೊನೆಯ ಸೂರ್ಯಗ್ರಹಣ

    ನವದೆಹಲಿ: ಇಂದು ಬಾನಂಗಳದಲ್ಲಿ ವರ್ಷದ ಕಟ್ಟಕಡೆಯ ಖಗ್ರಾಸ ಸೂರ್ಯಗ್ರಹಣ ಸಂಭವಿಸಲಿದೆ. ಇಂದು ನಡೆಯುತ್ತಿರುವ ಗ್ರಹಣವು 2021ನೇ ವರ್ಷದ ಕಟ್ಟಕಡೆಯ ಗ್ರಹಣ.

    15 ದಿನಗಳ ಹಿಂದೆ ಚಂದ್ರಗ್ರಹಣ ನಡೆದಿತ್ತು. ಈಗ ಇದರ ಬೆನ್ನಲ್ಲೇ ಸೂರ್ಯಗ್ರಹಣ ನಡೆಯುತ್ತಿದೆ. ಸುಮಾರು 4 ಗಂಟೆಗಳ ಕಾಲ ಸೂರ್ಯಗ್ರಹಣ ಇರಲಿದೆ. ಆದರೆ ಚಂದ್ರಗ್ರಹಣದಂತೆ ಈ ಸೂರ್ಯಗ್ರಹಣವೂ ಕೂಡ ಭಾರತದಲ್ಲಿ ಮಾತ್ರ ಗೋಚರವಾಗಲ್ಲ. ಸೂರ್ಯ ಗ್ರಹಣ ಬೆಳಗ್ಗೆ ಬೆಳಗ್ಗೆ 10.59ಕ್ಕೆ ಆರಂಭವಾಗಿ ಮಧ್ಯಾಹ್ನ 3.07 ಕ್ಕೆ ಅಂತ್ಯವಾಗಲಿದೆ. ಇದನ್ನೂ ಓದಿ: ಉದ್ಘಾಟನೆ ವೇಳೆ ಒಡೆದ ತೆಂಗಿನಕಾಯಿಂದ ಬಿರುಕು ಬಿಟ್ಟ 1.16ಕೋಟಿ ರೂ. ವೆಚ್ಚದ ರಸ್ತೆ!

    ಇಂದು ಅಮಾವಾಸ್ಯೆಯಾಗಿದ್ದು, ಸೂರ್ಯ ಹಾಗೂ ಭೂಮಿಯ ಮಧ್ಯೆ ಚಂದ್ರ ಆಗಮಿಸಿದ ಸಂದರ್ಭದಲ್ಲಿ ಈ ಗ್ರಹಣವು ಸಂಭವಿಸುತ್ತದೆ. ಭಾರತದಲ್ಲಿ ಗೋಚರವಾಗದಿದ್ದರೂ, ದಕ್ಷಿಣ ಆಸ್ಟ್ರೇಲಿಯಾ, ಆಫ್ರಿಕಾದ ದಕ್ಷಿಣ ಭಾಗ, ದಕ್ಷಿಣ ಅಮೆರಿಕಾದ ದಕ್ಷಿಣ ಭಾಗ, ಪೆಸಿಫಿಕ್, ಅಟ್ಲಾಂಟಿಕ್, ಹಿಂದೂಮಹಾಸಾಗರ ಮತ್ತು ಅಂಟಾರ್ಟಿಕಗಳಲ್ಲಿ ಗೋಚರಿಸಲಿದೆ. ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆಶಿಯ ಬೆಂಗಾವಲು ವಾಹನ ಅಪಘಾತ – ಸಿಬ್ಬಂದಿಗೆ ಗಾಯ

    ಗ್ರಹಣ ಆರಂಭ – ಬೆಳಗ್ಗೆ 10.59
    ಗ್ರಹಣ ಮಧ್ಯಕಾಲ – ಮಧ್ಯಾಹ್ನ 1.03
    ಗ್ರಹಣ ಮೋಕ್ಷಕಾಲ – ಮಧ್ಯಾಹ್ನ 3.07