Tag: Luna-25

  • ಚಂದ್ರನ ಮೇಲೆ ಹೊಸ ಕುಳಿ ಮೂಡಿಸಿದ ರಷ್ಯಾದ ಲೂನಾ-25 ಬಾಹ್ಯಾಕಾಶ ನೌಕೆ

    ಚಂದ್ರನ ಮೇಲೆ ಹೊಸ ಕುಳಿ ಮೂಡಿಸಿದ ರಷ್ಯಾದ ಲೂನಾ-25 ಬಾಹ್ಯಾಕಾಶ ನೌಕೆ

    – ಚಿತ್ರ ಬಿಡುಗಡೆ ಮಾಡಿದ ನಾಸಾ

    ಮಾಸ್ಕೋ: ಚಂದ್ರನ (Moon) ಅಂಗಳಕ್ಕೆ ರಷ್ಯಾ (Russia) ಕಳುಹಿಸಿದ್ದ ಲೂನಾ-25 (Luna-25) ಮಿಷನ್‌ ವಿಫಲವಾಗಿ ಅಪ್ಪಳಿಸಿದ ಪರಿಣಾಮವಾಗಿ ಚಂದ್ರನ ಮೇಲ್ಮೈನಲ್ಲಿ ಕುಳಿಯಾಗಿದೆ ಎಂದು ಚಿತ್ರವೊಂದನ್ನು ಬಿಡುಗಡೆ ಮಾಡಿ ನಾಸಾ (NASA) ಹೇಳಿದೆ.

    ಭಾರತ ಉಡ್ಡಯನ ಮಾಡಿದ್ದ ಚಂದ್ರಯಾನ-3 ಬಾಹ್ಯಾಕಾಶ ನೌಕೆಯು ಚಂದ್ರನ ಮೇಲೆ ಇಳಿಯುವ ಮೊದಲೇ ತಾನು ಲ್ಯಾಂಡ್‌ ಆಗಬೇಕು ಎಂದು ರಷ್ಯಾ ಲೂನಾ-25 ನೌಕೆ ಕಳುಹಿಸಿತ್ತು. ಆದರೆ ರಷ್ಯಾದ ಚಂದ್ರಯಾನ ಮಿಷನ್‌ ವಿಫಲವಾಯಿತು. ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್‌ ಲ್ಯಾಂಡಿಂಗ್‌ಗೆ ಮುಂದಾಗಿದ್ದ ರಷ್ಯಾದ ನೌಕೆ ವಿಫಲವಾಗಿ ಚಂದ್ರನ ಮೇಲೆ ಅಪ್ಪಳಿಸಿತ್ತು. ಇದನ್ನೂ ಓದಿ: ಆದಿತ್ಯ ಎಲ್ 1 ಉಡಾವಣೆಗೂ ಮುನ್ನ ತಿರುಪತಿಗೆ ಭೇಟಿ ನೀಡಿದ ಇಸ್ರೋ ಮುಖ್ಯಸ್ಥ

    ಯುಎಸ್ ನ್ಯಾಷನಲ್ ಏರೋನಾಟಿಕ್ಸ್ ಆ್ಯಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್‌ನ ಲೂನಾರ್ ರೆಕಾನೈಸೆನ್ಸ್ ಆರ್ಬಿಟರ್ (LRO) ಬಾಹ್ಯಾಕಾಶ ನೌಕೆಯು ಚಂದ್ರನ ಮೇಲ್ಮೈಯಲ್ಲಿ ಹೊಸ ಕುಳಿಯನ್ನು ಪತ್ತೆ ಮಾಡಿದೆ. ಅದು ರಷ್ಯಾದ ಲೂನಾ-25 ಮಿಷನ್‌ನ ಪ್ರಭಾವದ ಸ್ಥಳ ಎಂದು ತೀರ್ಮಾನಿಸಿದೆ.

    ಈ ಹೊಸ ಕುಳಿಯು ಸುಮಾರು 10 ಮೀಟರ್ ವ್ಯಾಸವನ್ನು ಹೊಂದಿದೆ ಎಂದು ನಾಸಾ ಹೇಳಿದೆ. ಹೊಸ ಕುಳಿಯು ಲೂನಾ-25 ಅಂದಾಜು ಪ್ರಭಾವದ ಬಿಂದುವಿಗೆ ಹತ್ತಿರವಾಗಿದೆ. ಹೀಗಾಗಿ ಕುಳಿಯು ನೈಸರ್ಗಿಕ ಪ್ರಭಾವದ ಬದಲಿಗೆ ರಷ್ಯಾದ ನೌಕೆಯಿಂದ ಆಗಿರಬಹುದು ಎಂದು LRO ತಂಡವು ಹೇಳಿದೆ. ಇದನ್ನೂ ಓದಿ: ನಾಳೆ ಆದಿತ್ಯ ಎಲ್ 1 ಉಡಾವಣೆ – ಸೂರ್ಯನ ಅಧ್ಯಯನಕ್ಕೆ ಹೇಗೆ ಸಿದ್ಧವಾಗಿದೆ ಇಸ್ರೋ?

    47 ವರ್ಷಗಳ ಬಳಿಕ ರಷ್ಯಾವು ಚಂದ್ರನ ಮೇಲ್ಮೈ ಅಧ್ಯಯನಕ್ಕಾಗಿ ಲೂನಾ-25 ನೌಕೆಯನ್ನು ಉಡಾವಣೆ ಮಾಡಿತ್ತು. ಆದರೆ ನೌಕೆಯು ಆಗಸ್ಟ್ 19 ರಂದು ವಿಫಲವಾಯಿತು. ಅದು ರಷ್ಯಾದ ಬಾಹ್ಯಾಕಾಶ ಸಂಸ್ಥೆಯಿಂದ ನಿಯಂತ್ರಣ ಕಳೆದುಕೊಂಡು ಚಂದ್ರನಿಗೆ ಅಪ್ಪಳಿಸಿತು. ಲೂನಾ-25 ನೌಕೆ ವಿಫಲವಾಗಲು ಕಾರಣ ಏನು ಎಂಬ ಬಗ್ಗೆ ತನಿಖೆ ನಡೆಸಲು ಆಯೋಗವೊಂದನ್ನು ರಚಿಸಲಾಗಿದೆ ಎಂದು ರಷ್ಯಾ ಈಚೆಗೆ ಹೇಳಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಂದ್ರನ ಪ್ರೀ ಲ್ಯಾಂಡಿಂಗ್ ಕಕ್ಷೆ ಪ್ರವೇಶಿಸುವಲ್ಲಿ ರಷ್ಯಾದ ಲೂನಾ-25 ಲ್ಯಾಂಡರ್ ವಿಫಲ

    ಚಂದ್ರನ ಪ್ರೀ ಲ್ಯಾಂಡಿಂಗ್ ಕಕ್ಷೆ ಪ್ರವೇಶಿಸುವಲ್ಲಿ ರಷ್ಯಾದ ಲೂನಾ-25 ಲ್ಯಾಂಡರ್ ವಿಫಲ

    ಮಾಸ್ಕೋ: ಭಾರತದ ಚಂದ್ರಯಾನ-3 ಗಿಂತ (Chandrayaan-3) ಮೊದಲು ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಮೇಲೆ ರಷ್ಯಾದ ಲೂನಾ-25 ಲ್ಯಾಂಡ್ ಆಗಬೇಕಿದ್ದ ಕನಸು ಭಗ್ನಕೊಂಡಿದೆ. ಲೂನಾ-25 ಲ್ಯಾಂಡರ್ (Luna-25 Lander) ಚಂದ್ರನ ಮೇಲೆ ಪೂರ್ವ ಲ್ಯಾಂಡಿಂಗ್ ಕಕ್ಷೆ (Pre Moon Orbit) ಪ್ರವೇಶಿಸಲು ವಿಫಲವಾಗಿದೆ. ಕಳೆದ 50 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಚಂದ್ರನ ತನ್ನ ನಿಗದಿತ ಪೂರ್ವ-ಲ್ಯಾಂಡಿಂಗ್ ಕಕ್ಷೆಯನ್ನ ಪ್ರವೇಶಿಸುವಲ್ಲಿ ವಿಫಲವಾಗಿದೆ.

    ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಲೂನಾ-25 ಶನಿವಾರ ಕಕ್ಷೆ ಪ್ರವೇಶಿಸಬೇಕಿತ್ತು. ಆದರೆ ತುರ್ತು ಪರಿಸ್ಥಿತಿಗಳಿಂದಾಗಿ ಪೂರ್ವ ಲ್ಯಾಂಡಿಂಗ್ ಕಕ್ಷೆ ವಿಫಲವಾಗಿದೆ ಎಂದು ರಷ್ಯಾದ ಬಾಹ್ಯಾಕಾಶ ನಿಗಮ ರೋಸ್ಕೋಸ್ಮಾಸ್ ತಿಳಿಸಿದೆ. ಈ ಬಗ್ಗೆ ರಷ್ಯಾ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ತಂಡ ಪರಿಶೀಲನೆ ಮಾಡುತ್ತಿದ್ದು, ಶೀಘ್ರದಲ್ಲೇ ಹೆಚ್ಚಿನ ಮಾಹಿತಿ ನೀಡಲಿದೆ ಎಂದು ಹೇಳಿದೆ. ಇದನ್ನೂ ಓದಿ: 7 ಶಿಶುಗಳನ್ನ ಹತ್ಯೆ ಮಾಡಿದ್ದ ಬ್ರಿಟಿಷ್‌ ನರ್ಸ್‌ – ಭಾರತೀಯ ಮೂಲದ ವೈದ್ಯನಿಂದ ಸಿಕ್ಕಿಬಿದ್ದಳು ಹಂತಕಿ

    ಆಗಸ್ಟ್ 10 ರಂದು ರಷ್ಯಾ ಲೂನಾ-25 ಗಗನ ನೌಕೆಯನ್ನು ಉಡಾವಣೆ ಮಾಡುವ ಮೂಲಕ ನಾಸಾ ಹಾಗೂ ಇತರ ಬಾಹ್ಯಾಕಾಶ ಸಂಸ್ಥೆಗಳೊಂದಿಗೆ ಸ್ಪರ್ಧೆಗಿಳಿದಿತ್ತು. ಆಗಸ್ಟ್ 21 ರಂದು ಚಂದ್ರನ ದಕ್ಷಿಣ ದ್ರುವದಲ್ಲಿ ಇಳಿದಲು ನಿರ್ಧರಿಸಲಾಗಿತ್ತು. ಆದರೆ ಪ್ರೀ ಲ್ಯಾಂಡಿಂಗ್ ಕಕ್ಷೆ ಪ್ರವೇಶಿಸುವಲ್ಲಿ ಲೂನಾ-25 ವಿಫಲವಾಗಿದೆ ಎಂದು ಹೇಳಲಾಗಿದೆ. ಸದ್ಯ ಯೋಜನೆ ನಿಂತಿದೆಯೇ ಎನ್ನುವ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ.  ಇದನ್ನೂ ಓದಿ: ಯುಎಸ್‌ ಅಧ್ಯಕ್ಷೀಯ ಸ್ಥಾನಕ್ಕೆ ಭಾರತೀಯ ಅಮೆರಿಕನ್‌ ಸ್ಪರ್ಧೆ – ಎಲೋನ್‌ ಮಸ್ಕ್‌ ಶ್ಲಾಘನೆ

    ಇನ್ನೂ ಚಂದ್ರಯಾನ-3 ಕಾರ್ಯಾಚರಣೆಯ ಕೊನೆ ಹಂತದ ಭಾಗವಾಗಿ ಬಾಹ್ಯಾಕಾಶ ನೌಕೆಯಿಂದ ಲ್ಯಾಂಡರ್ ಮತ್ತು ರೋವರ್ ಬೇರ್ಪಡಿಸುವ ಕಾರ್ಯ ಗುರುವಾರ ಯಶಸ್ವಿಯಾಗಿ ನಡೆದಿತ್ತು. ಈ ಬೆನ್ನಲ್ಲೇ ವಿಕ್ರಮ್ ಲ್ಯಾಂಡರ್ ಡಿಬೂಸ್ಟಿಂಗ್ ಕಾರ್ಯಾಚರಣೆಯನ್ನು ಇಸ್ರೋ ಯಶಸ್ವಿಗೊಳಿಸಿದೆ. ಆಗಸ್ಟ್ 23ರಂದು ಚಂದ್ರನ ಮೇಲೆ ಇಳಿಯುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಂದ್ರನ ಮೇಲ್ಮೈನ ಮೊದಲ ಚಿತ್ರ ಕಳುಹಿಸಿದ ರಷ್ಯಾದ ಲೂನಾ-25

    ಚಂದ್ರನ ಮೇಲ್ಮೈನ ಮೊದಲ ಚಿತ್ರ ಕಳುಹಿಸಿದ ರಷ್ಯಾದ ಲೂನಾ-25

    ಮಾಸ್ಕೋ: ಚಂದ್ರನ ಅಂಗಳಕ್ಕೆ ರಷ್ಯಾ (Russia) ಕಳುಹಿಸಿರುವ ಲೂನಾ-25 (Luna-25) ಚಂದ್ರನ ಕಕ್ಷೆ ಪ್ರವೇಶಿಸಿದ ನಂತರ ಚಂದ್ರನ ಮೇಲ್ಮೈನ (Moon Surface) ಸೆರೆಹಿಡಿದ ಮೊದಲ ಚಿತ್ರವನ್ನು ಕಳುಹಿಸಿದೆ. ಈ ಕುರಿತು ರಷ್ಯಾದ ಬಾಹ್ಯಾಕಾಶ ಸಂಸ್ಥೆ ರಾಸ್ಕೋಸ್ಮಾಸ್ ಮಾಹಿತಿ ಹಂಚಿಕೊಂಡಿದೆ.

    ಚಂದ್ರನ ದಕ್ಷಿಣ ಧ್ರುವದಲ್ಲಿ ಝೀಮನ್ ಕುಳಿ ಚಿತ್ರವನ್ನು ತೆಗೆಯಲಾಗಿದೆ. ‘ಡಾರ್ಕ್ ಸೈಡ್’ ಎಂದೂ ಕರೆಯಲ್ಪಡುವ ಈ ಭಾಗವು ಚಂದ್ರನ ಅರ್ಧಗೋಳವಾಗಿದ್ದು, ಭೂಮಿಯ ನೋಟದಿಂದ ಶಾಶ್ವತವಾಗಿ ಮರೆಯಾಗಿದೆ. ಇದನ್ನೂ ಓದಿ: ಯುಎಸ್‌ ಅಧ್ಯಕ್ಷೀಯ ಸ್ಥಾನಕ್ಕೆ ಭಾರತೀಯ ಅಮೆರಿಕನ್‌ ಸ್ಪರ್ಧೆ – ಎಲೋನ್‌ ಮಸ್ಕ್‌ ಶ್ಲಾಘನೆ

    ಈ ಕುಳಿ ಭೂವೈಜ್ಞಾನಿಕವಾಗಿ ಕುತೂಹಲಕಾರಿ ತಾಣವಾಗಿದೆ. ಹೊಸ ಚಿತ್ರಗಳು ಈ ಕುಳಿಯ ಬಗ್ಗೆ ಅಮೂಲ್ಯವಾದ ಹೆಚ್ಚುವರಿ ಮಾಹಿತಿ ಒದಗಿಸುತ್ತವೆ.

    ಸೋವಿಯತ್ ಒಕ್ಕೂಟದ ಲೂನಾ-3 ಬಾಹ್ಯಾಕಾಶ ನೌಕೆಯು ಅಕ್ಟೋಬರ್ 1959 ರಲ್ಲಿ ಚಂದ್ರನ ಮೇಲ್ಮೈನ ಚಿತ್ರವನ್ನು ವಿಶ್ವದಲ್ಲೇ ಮೊದಲ ಬಾರಿಗೆ ರವಾನಿಸಿತ್ತು. ಲೂನಾ-25 ಮಿಷನ್ ಚಂದ್ರನ ಪರಿಶೋಧನೆಯ ಈ ಪರಂಪರೆಯನ್ನು ಮುಂದುವರಿಸಿದೆ. ಇದನ್ನೂ ಓದಿ: 21 ಚರ್ಚ್‌ಗಳನ್ನು ಧ್ವಂಸಗೊಳಿಸಿದ 600 ಜನರ ಮೇಲೆ ಕೇಸ್ – 135 ಆರೋಪಿಗಳನ್ನು ಬಂಧಿಸಿದ ಪಾಕ್ ಪೊಲೀಸರು

    ರಷ್ಯನ್ ಅಕಾಡೆಮಿ ಆಫ್ ಸೈನ್ಸಸ್ (IKI RAS)ನ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ ಅಭಿವೃದ್ಧಿಪಡಿಸಲಾದ STS-L ದೂರದರ್ಶನ ಸಂಕೀರ್ಣ ಬಳಸಿಕೊಂಡು ಚಿತ್ರಗಳನ್ನು ಸೆರೆಹಿಡಿಯಲಾಗಿದೆ.

    ಭಾರತದ ಚಂದ್ರಯಾನ-3 ಗಿಂತ ಮೊದಲು ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಮೇಲೆ ರಷ್ಯಾದ ಲೂನಾ-25 ಲ್ಯಾಂಡ್‌ ಆಗಲಿದೆ ಎಂದು ತಿಳಿಸಲಾಗಿದೆ. ಲೂನಾ-25 ಉಡಾವಣೆಗೊಂಡ ಕೆಲವೇ ದಿನಗಳಲ್ಲಿ ಚಂದ್ರನ ಕಕ್ಷೆ ತಲುಪಿದೆ. ಇದನ್ನೂ ಓದಿ: ಲ್ಯಾಂಡಿಂಗ್ ವೇಳೆ ಲಘು ವಿಮಾನ ಪತನ – 10 ಮಂದಿ ದುರ್ಮರಣ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಾರತದ ಚಂದ್ರಯಾನ-3 V/S ರಷ್ಯಾದ ಲೂನಾ-25: ಚಂದ್ರನ ಮೇಲೆ ಮೊದಲು ಹೆಜ್ಜೆ ಇಡೋದು ಯಾರು?

    ಭಾರತದ ಚಂದ್ರಯಾನ-3 V/S ರಷ್ಯಾದ ಲೂನಾ-25: ಚಂದ್ರನ ಮೇಲೆ ಮೊದಲು ಹೆಜ್ಜೆ ಇಡೋದು ಯಾರು?

    ನವದೆಹಲಿ: ಇತ್ತ ಭಾರತದ ಚಂದ್ರಯಾನ-3 (Chandrayaan-3) ಮಿಷನ್‌.. ಅತ್ತ ರಷ್ಯಾದ (Russia) ಲೂನಾ-25 (Luna-25) ಮಿಷನ್‌. ಈ ಎರಡೂ ದೇಶಗಳು ತಿಂಗಳ ಅಂತರದಲ್ಲಿ ಚಂದ್ರನ ದಕ್ಷಿಣ ಧ್ರುವದಲ್ಲಿ ಕಾಲಿಡಲು ಬಾಹ್ಯಾಕಾಶ ನೌಕೆಗಳನ್ನು ಉಡಾಯಿಸಿವೆ. ಕ್ರಿಕೆಟ್‌ನಲ್ಲಿ ಭಾರತ v/s ಪಾಕಿಸ್ತಾನ ಎನ್ನುವಂತೆ ಈಗ ವಿಜ್ಞಾನ ವಲಯದಲ್ಲಿ ಭಾರತ v/s ರಷ್ಯಾ ಎನ್ನುವಂತಾಗಿದೆ. ಇವೆರಡರಲ್ಲಿ ಯಾವ ದೇಶ ಮೊದಲು ಚಂದ್ರನ ಮೇಲೆ ಕಾಲಿಡುತ್ತದೆ ಎಂಬ ಚರ್ಚೆ ಕೂಡ ಜೋರಾಗಿದೆ.

    ಚಂದ್ರನ ಅಂಗಳದ ಮೇಲೆ ಮೂರನೇ ಹೆಜ್ಜೆ ಇಡಲು ಭಾರತ ಜು. 14 ರಂದು ಚಂದ್ರಯಾನ-3 ಬಾಹ್ಯಾಕಾಶ ನೌಕೆ ಉಡಾವಣೆ ಮಾಡಿತು. ಇದಕ್ಕೆ ಸರಿಸುಮಾರು ತಿಂಗಳ ಅಂತರದಲ್ಲಿ (ಆ.11) ಚಂದ್ರನ ಕಡೆಗೆ ರಷ್ಯಾ ಕೂಡ ಲೂನಾ-25 ಉಪಗ್ರಹ ಉಡಾವಣೆ ಮಾಡಿದೆ. ಎರಡೂ ಬಾಹ್ಯಾಕಾಶ ನೌಕೆಗಳು ಈಗ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವ ಸ್ಪರ್ಧೆಯಲ್ಲಿವೆ. ಇವೆರಡರಲ್ಲಿ ಯಾವುದು ಮೊದಲು ಚಂದ್ರನ ಅಂಗಳ ತಲುಪುತ್ತದೆ ಎಂಬ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಇದನ್ನೂ ಓದಿ: ಚಂದ್ರನ ಮೇಲ್ಮೈ ಹೇಗಿದೆ ನೋಡಿ – Chandrayaan-3 ಲ್ಯಾಂಡರ್ ಸೆರೆಹಿಡಿದ ಫೋಟೋ ಹಂಚಿಕೊಂಡ ಇಸ್ರೋ

    ಇಸ್ರೋದ ಚಂದ್ರಯಾನ-3 ಬಾಹ್ಯಾಕಾಶ ನೌಕೆಯು ಆಗಸ್ಟ್ 23 ರಂದು ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್‌ ಲ್ಯಾಂಡಿಂಗ್ ಮಾಡುವ ನಿರೀಕ್ಷೆಯಿದೆ. ಆದಾಗ್ಯೂ, ತಡವಾಗಿ ಉಡಾವಣೆಯಾದರೂ ರಷ್ಯಾದ ಮಿಷನ್ ಶೀಘ್ರದಲ್ಲೇ ಈ ಸಾಧನೆ ಮಾಡಬಹುದು. ಲೂನಾ-25 ಮಿಷನ್ ಸುಮಾರು 50 ವರ್ಷಗಳ ಬಳಿಕ ರಷ್ಯಾದ ಮೊದಲ ಚಂದ್ರನ ಕಾರ್ಯಾಚರಣೆಯಾಗಿದೆ.

    ಚಂದ್ರನ ಕಕ್ಷೆಯನ್ನು ತಲುಪಲು ಐದು ದಿನಗಳನ್ನು ತೆಗೆದುಕೊಳ್ಳುತ್ತದೆ. ನಂತರ ಚಂದ್ರನ ಮೇಲ್ಮೈಯಲ್ಲಿ ಇಳಿಯುವ ಮೊದಲು ಇನ್ನೂ ಐದರಿಂದ ಏಳು ದಿನಗಳನ್ನು ತೆಗೆದುಕೊಳ್ಳುತ್ತದೆ ಎಂದು Luna-25 ಗಾಗಿ ಮಹತ್ವಾಕಾಂಕ್ಷೆಯ ಟೈಮ್‌ಲೈನ್ ಅನ್ನು ರಷ್ಯಾದ Roscosmos ವಿವರಿಸಿದೆ. ಲೂನಾ-25 ಆಗಸ್ಟ್ 16 ರಂದು ಚಂದ್ರನ ಕಕ್ಷೆಯನ್ನು ಪ್ರವೇಶಿಸುತ್ತದೆ. ನಂತರ ಆಗಸ್ಟ್ 21 ರ ವೇಳೆಗೆ ಚಂದ್ರನ ಮೇಲ್ಮೈಯಲ್ಲಿ ಇಳಿಯುವ ಸಾಧ್ಯತೆ ಇದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

    ಲೂನಾ -25 ರ ಯಶಸ್ವಿ ಉಡಾವಣೆಗೆ ರೋಸ್ಕೋಸ್ಮೊಸ್‌ಗೆ (ರಷ್ಯಾದ ಬಾಹ್ಯಾಕಾಶ ಸಂಸ್ಥೆ) ಅಭಿನಂದನೆಗಳು. ನಮ್ಮ ಬಾಹ್ಯಾಕಾಶ ಯಾನದಲ್ಲಿ ಮತ್ತೊಂದು ಭೇಟಿಗೆ ಇದು ಪೂರಕವಾಗುತ್ತಿರುವುದು ಅದ್ಭುತ ಎಂದು ಭಾರತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಟ್ವೀಟ್ ಮಾಡಿದೆ.

    ಭಾರತದ ಚಂದ್ರಯಾನ-3 ಬಾಹ್ಯಾಕಾಶ ನೌಕೆಯು ಚಂದ್ರನ ಮೇಲ್ಮೈನಲ್ಲಿ ಇಳಿದ ಬಳಿಕ ಎರಡು ವಾರಗಳ ಕೆಲಸ ಮಾಡಲಿದೆ. ಆದರೆ ಸಣ್ಣ ಕಾರಿನ ಗಾತ್ರ ಇರುವ ರಷ್ಯಾದ ಲೂನಾ-25 ನೌಕೆಯು ಬರೋಬ್ಬರಿ ಒಂದು ವರ್ಷ ಚಂದ್ರನ ದಕ್ಷಿಣ ಧ್ರುವದಲ್ಲಿ ಕೆಲಸ ಮಾಡಲಿದೆ. ರಷ್ಯಾದ ಲೂನಾ-25 ನೌಕೆಯು 1.8 ಟನ್ ತೂಕವನ್ನು ಹೊಂದಿದೆ. 31 ಕೆಜಿ (68 ಪೌಂಡ್) ವೈಜ್ಞಾನಿಕ ಉಪಕರಣಗಳನ್ನು ಒಳಗೊಂಡಿದೆ. ಈ ಎರಡೂ ದೇಶಗಳ ಚಂದ್ರಯಾನದ ಮುಖ್ಯ ಉದ್ದೇಶ ಚಂದ್ರನ ಮೇಲ್ಮೈನಲ್ಲಿ ನೀರಿನ ಶೋಧ. ಇದರ ಜೊತೆಗೆ ರಷ್ಯಾದ ನೌಕೆಯು ಚಂದ್ರನ ಧ್ರುವೀಯ ರೆಗೊಲಿತ್ ಮತ್ತು ಚಂದ್ರನ ಧ್ರುವೀಯ ಹೊರಗೋಳದ ಪ್ಲಾಸ್ಮಾ ಮತ್ತು ಧೂಳಿನ ಕಣದ ಬಗ್ಗೆಯೂ ಶೋಧಿಸಲಿದೆ. ಇದನ್ನೂ ಓದಿ: ಚಂದ್ರನ ಮೇಲ್ಮೈ ಸಮೀಪಕ್ಕೆ Chandrayaan-3 ಬಾಹ್ಯಾಕಾಶ ನೌಕೆ – ಇಷ್ಟು ದೂರ ಹೋದ್ರೆ ಚಂದ್ರನ ಮೇಲೆ ಲ್ಯಾಂಡಿಂಗ್‌ ಪಕ್ಕಾ!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಾರತದ ಚಂದ್ರಯಾನ-3 ಉಡಾವಣೆ ಬೆನ್ನಲ್ಲೇ ಚಂದ್ರನೆಡೆಗೆ ಬಾಹ್ಯಾಕಾಶ ನೌಕೆಯನ್ನು ಕಳುಹಿಸಿದ ರಷ್ಯಾ

    ಭಾರತದ ಚಂದ್ರಯಾನ-3 ಉಡಾವಣೆ ಬೆನ್ನಲ್ಲೇ ಚಂದ್ರನೆಡೆಗೆ ಬಾಹ್ಯಾಕಾಶ ನೌಕೆಯನ್ನು ಕಳುಹಿಸಿದ ರಷ್ಯಾ

    ಮಾಸ್ಕೋ: ಕಳೆದ ತಿಂಗಳು ಭಾರತ ಚಂದ್ರಯಾನ-3 (Chandrayaan-3) ಉಡಾವಣೆ ಮಾಡಿದ್ದು, ಇದರ ಬೆನ್ನಲ್ಲೇ ರಷ್ಯಾ (Russia) ಸುಮಾರು 50 ವರ್ಷಗಳ ಬಳಿಕ ಮೊದಲ ಬಾರಿ ಚಂದ್ರನೆಡೆಗೆ (Moon) ತನ್ನ ಬಾಹ್ಯಾಕಾಶ ನೌಕೆಯನ್ನು ಕಳುಹಿಸಿದೆ.

    ವರ್ಷದಿಂದ ಉಕ್ರೇನ್‌ನೊಂದಿಗೆ ಸಂಘರ್ಷದಲ್ಲಿ ತೊಡಗಿರುವ ರಷ್ಯಾ ಇದೀಗ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಸಾಧನೆಗೆ ಹೆಜ್ಜೆ ಇಟ್ಟಿದೆ. ಇದೀಗ ಉಡಾವಣೆಯಾಗಿರುವ ಲೂನಾ-25 (Luna-25) ಪ್ರೋಬ್ 1976 ರಿಂದ ರಷ್ಯಾದ ಮೊದಲ ಚಂದ್ರನ ಮೇಲಿನ ಕಾರ್ಯಾಚರಣೆಯಾಗಿದೆ.

    ಲೂನಾ-25 ಪ್ರೋಬ್ ಅನ್ನು ಹೊತ್ತ ರಾಕೆಟ್ ಗುರುವಾರ ಸ್ಥಳೀಯ ಕಾಲಮಾನ 02:10 ವೇಳೆಗೆ ವೊಸ್ಟೊಚ್ನಿ ಕಾಸ್ಮೊಡ್ರೋಮ್‌ನಿಂದ ಉಡಾವಣೆಯಾಗಿದೆ ಎಂದು ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೋಸ್ಮಾಸ್ ತಿಳಿಸಿದೆ. ಈ ಉಪಗ್ರಹ ಆಗಸ್ಟ್ 21ರ ವೇಳಗೆ ಚಂದ್ರನ ಮೇಲೆ ಇಳಿಯುವ ಸಾಧ್ಯತೆಯಿದೆ. ಇದನ್ನೂ ಓದಿ: ಚಂದ್ರನ ಮೇಲ್ಮೈ ಹೇಗಿದೆ ನೋಡಿ – Chandrayaan-3 ಲ್ಯಾಂಡರ್ ಸೆರೆಹಿಡಿದ ಫೋಟೋ ಹಂಚಿಕೊಂಡ ಇಸ್ರೋ

    ಈ ನೌಕೆ 5 ದಿನಗಳಲ್ಲಿ ಚಂದ್ರನ ಕಕ್ಷೆಯನ್ನು ತಲುಪಲಿದೆ. ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಇಳಿಯಲಿರುವ ಉಪಗ್ರಹ ಅದಕ್ಕೂ ಮೊದಲು ಸರಿಯಾದ ಸ್ಥಳವನ್ನು ಆಯ್ಕೆ ಮಾಡಲು 3-7 ದಿನಗಳನ್ನು ತೆಗೆದುಕೊಳ್ಳಲಿದೆ.

    ಇತಿಹಾಸದಲ್ಲಿ ಮೊದಲ ಬಾರಿಗೆ, ಚಂದ್ರನ ದಕ್ಷಿಣ ಧ್ರುವದಲ್ಲಿ ಲೂನಾ-25 ಇಳಿಯಲಿದೆ. ಇಲ್ಲಿಯವರೆಗೆ ಚಂದ್ರನ ಮೇಲೆ ನಡೆಸಲಾಗಿರುವ ಎಲ್ಲಾ ಕಾರ್ಯಾಚರಣೆಗಳು ಸಮಭಾಜಕ ವಲಯದಲ್ಲಿ ಇಳಿದಿವೆ ಎಂದು ಹಿರಿಯ ರೋಸ್ಕೊಸ್ಮಾಸ್ ಅಧಿಕಾರಿ ಅಲೆಕ್ಸಾಂಡರ್ ಬ್ಲೋಖಿನ್ ಇತ್ತೀಚಿನ ಸಂದರ್ಶನದಲ್ಲಿ ಹೇಳಿದ್ದಾರೆ.

    1 ವರ್ಷಗಳವರೆಗೆ ಚಂದ್ರನ ಮೇಲೆ ಕಾರ್ಯಾಚರಣೆ ನಡೆಸಲಿರುವ ಬಾಹ್ಯಾಕಾಶ ನೌಕೆ ಮಣ್ಣಿನ ಮಾದರಿಗಳನ್ನು ತೆಗೆದುಕೊಂಡು ಪರೀಕ್ಷೆಗೊಳಪಡಿಸಲಿದೆ. ಜೊತೆಗೆ ದೀರ್ಘಕಾಲದ ವೈಜ್ಞಾನಿಕ ಸಂಶೋಧನೆ ನಡೆಸಲಿದೆ ಎಂದು ರಷ್ಯಾದ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ. ಇದನ್ನೂ ಓದಿ: ಕ್ರೋಮ್‌, ಫೈರ್‌ಫಾಕ್ಸ್‌, ಎಡ್ಜ್‌ಗೆ ಸೆಡ್ಡು – ದೇಶಿ ಬ್ರೌಸರ್‌ ಅಭಿವೃದ್ಧಿ ಪಡಿಸಿ, ಕೋಟಿ ರೂ. ಗೆಲ್ಲಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]