Tag: lumpy virus disease

  • ಲಿಂಪಿ ವೈರಸ್ ಕಾಟ: ಹಾಲಿನ ಸಂಗ್ರಹ ಕುಸಿತ – ಸಿಹಿ ತಿಂಡಿಗಳ ಬೆಲೆ ದಿಢೀರ್ ಏರಿಕೆ

    ಲಿಂಪಿ ವೈರಸ್ ಕಾಟ: ಹಾಲಿನ ಸಂಗ್ರಹ ಕುಸಿತ – ಸಿಹಿ ತಿಂಡಿಗಳ ಬೆಲೆ ದಿಢೀರ್ ಏರಿಕೆ

    ಜೈಪುರ: ಮಾರಣಾಂತಿಕ ಲಿಂಪಿ ವೈರಸ್‌ನಿಂದಾಗಿ (Lumpy Virus Disease) ರಾಜಸ್ಥಾನದಲ್ಲಿ (Rajasthan) ಹಾಲಿನ ಸಂಗ್ರಹ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಹಾಲಿನಿಂದ ತಯಾರಿಸುವ ಸಿಹಿ ತಿನಿಸುಗಳ (Milk Production) ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.

    ಲಿಂಪಿ ವೈರಸ್ ಚರ್ಮರೋಗದಿಂದ (Skin Diseases) ಪ್ರತಿದಿನ 600 ರಿಂದ 700 ಹಸುಗಳು ಸಾಯುತ್ತಿದ್ದು, ಇದರಿಂದ ಹಾಲಿನ ಸಂಗ್ರಹ ಪ್ರಮಾಣ ಶೇ.15 ರಿಂದ 18ರಷ್ಟು ಕಡಿಮೆಯಾಗಿದೆ.

    ಈ ಕುರಿತು ಜೈಪುರ ಡೈರಿ ಫೆಡರೇಶನ್‌ನ ಅಧ್ಯಕ್ಷ ಓಂ. ಪೂನಿಯಾ ಮಾತನಾಡಿ, ದಿನನಿತ್ಯದ ಹಾಲಿನ ಸಂಗ್ರಹ ಪ್ರಮಾಣವು 14 ಲಕ್ಷದಿಂದ 12 ಲಕ್ಷ ಲೀಟರ್‌ಗಳಿಗೆ ಇಳಿಕೆಯಾಗಿದೆ. ಸದ್ಯ ಹಾಲು ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ. ಆದರೆ ಪ್ರಾಣಿಗಳ ಸಾವಿನ ಸಂಖ್ಯೆ ಹೀಗೇ ಮುಂದುವರಿದರೆ, ಬಿಕ್ಕಟ್ಟು ಎದುರಾಗಬಹುದು. ಕೋವಿಡ್ ಸಮಯಕ್ಕಿಂತಲೂ ಕೆಟ್ಟ ಪರಿಸ್ಥಿತಿಯನ್ನು ನಾವೀಗ ಎದುರಿಸುತ್ತಿದ್ದೇವೆ. ಹಾಲಿನ ಉತ್ಪಾದನೆ ಕಡಿಮೆಯಾಗುತ್ತಿದ್ದಂತೆ ಸಿಹಿ ತಿನಿಸುಗಳ ಬೆಲೆ ದುಬಾರಿಯಾಗುತ್ತಿದೆ ಎಂದು ಹೇಳಿದ್ದಾರೆ.

    ರಾಜ್ಯದಲ್ಲಿ 11 ಲಕ್ಷಕ್ಕೂ ಹೆಚ್ಚು ಜಾನುವಾರುಗಳು ಮಾರಕ ವೈರಸ್‌ಗೆ ತುತ್ತಾಗಿದ್ದು, ಈಗಾಗಲೇ 51 ಸಾವಿರ ಜಾನುವಾರುಗಳು ಮೃತಪಟ್ಟಿವೆ. ಉಳಿದವುಗಳ ರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದ್ದು, 12.32 ಲಕ್ಷ ಜಾನುವಾರುಗಳಿಗೆ ಗಾಟ್ ಪಾಕ್ಸ್ ಲಸಿಕೆ ವಿತರಣೆ ಮಾಡಲಾಗಿದೆ. ಇನ್ನೂ 16.22 ಲಕ್ಷ ಡೋಸ್ ಲಸಿಕೆಯನ್ನು ಸಂಗ್ರಹ ಮಾಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಲಿಂಪಿ ವೈರಸ್‌ಗೆ 5 ಸಾವಿರಕ್ಕೂ ಅಧಿಕ ಹಸುಗಳ ಮಾರಣ ಹೋಮ – ಹೆದರಿ ವಲಸೆ ಹಾದಿ ಹಿಡಿದ ಜನ

    ಲಿಂಪಿ ವೈರಸ್‌ಗೆ 5 ಸಾವಿರಕ್ಕೂ ಅಧಿಕ ಹಸುಗಳ ಮಾರಣ ಹೋಮ – ಹೆದರಿ ವಲಸೆ ಹಾದಿ ಹಿಡಿದ ಜನ

    ಜೈಪುರ: ರಾಜಾಸ್ಥಾನದ 16 ಜಿಲ್ಲೆಗಳು ಹಾಗೂ ಗುಜರಾತಿನ 20 ಜಿಲ್ಲೆಗಳಲ್ಲಿ ಹಸುಗಳಲ್ಲಿ ಲಿಂಪಿ ಚಮರೋಗ (LSD) ವೈರಸ್ ಕಾಣಿಸಿಕೊಂಡಿದ್ದು, 5 ಸಾವಿರಕ್ಕೂ ಹೆಚ್ಚು ಹಸುಗಳ ಮಾರಣಹೋಮ ನಡೆದಿದೆ.

    ಲಿಂಪಿ ವೈರಸ್ (ಲಿಂಪಿ ಚರ್ಮರೋಗ) ಹರಡುತ್ತಿರುವ ಹಿನ್ನೆಲೆಯಲ್ಲಿ, ಸತ್ತ ದನಗಳ ಮೃತದೇಹಗಳಿಂದ ವಿಪರೀತ ದುರ್ವಾಸನೆ ಬರುತ್ತಿದೆ. ಇದರಿಂದಾಗಿ ಜನರು ತಮ್ಮ ಮನೆಗಳನ್ನು ತೊರೆದು ಬೇರೆಡೆ ವಾಸಿಸಲು ತೆರಳುತ್ತಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರಧಾನಿ ನಿವಾಸಕ್ಕೆ ಘೆರಾವ್? – ಬೆಲೆ ಏರಿಕೆ ವಿರುದ್ಧ ಹೆಚ್ಚಿದ ಕಿಚ್ಚು

    ರಾಜಾಸ್ಥಾನದ 16 ಜಿಲ್ಲೆಗಲ್ಲಿ ಲಿಂಪಿ ವೈರಸ್ ಕಾಣಿಸಿಕೊಂಡಿದ್ದು ಸುಮಾರು 4,000 ಹಸುಗಳು ಮೃತಪಟ್ಟಿವೆ. ಗುಜರಾತ್ 20 ಜಿಲ್ಲೆಗಳಲ್ಲೂ ಈ ಕಾಯಿಲೆ ಕಾಣಿಸಿಕೊಂಡಿದ್ದು, 1,431 ಹಸುಗಳು ಮೃತಪಟ್ಟಿವೆ. 54,161 ಹಸುಗಳು ವೈರಸ್ ಭೀತಿ ಎದುರಿಸುತ್ತಿವೆ. ಕಾಯಿಲೆ ವಿರುದ್ಧ ಹೋರಾಡಲು ಹಸುಗಳಿಗೆ ಲಸಿಕೆ ನೀಡಲಾಗುತ್ತಿದ್ದು, ಈಗಾಗಲೇ 8 ಲಕ್ಷ ಜಾನುವಾರುಗಳಿಗೆ ಲಸಿಕೆ ನೀಡಲಾಗಿದೆ.

    ಇಲ್ಲಿನ ಜೋಧ್‌ಪುರದ ಸಮೀಪದಲ್ಲಿರುವ ಹಲವು ಹಳ್ಳಿಗಳಲ್ಲಿ ಈಗಾಗಲೇ ನೂರಾರು ಕುಟುಂಬಗಳು ತಮ್ಮ ಮನೆಗಳನ್ನು ತೊರೆದಿದ್ದಾರೆ. ಲಿಂಪಿ ವೈರಸ್ ಹರಡುವಿಕೆಯಿಂದ ಹಲವಾರು ಹಸುಗಳು, ಎತ್ತುಗಳು ಮತ್ತು ಎಮ್ಮೆಗಳೂ ಸಾವನ್ನಪ್ಪಿವೆ, ಅವುಗಳನ್ನು ಹೂಳಲು ಸ್ಥಳಾವಕಾಶದ ಕೊರತೆಯಾಗಿದೆ ಎಂದು ವರದಿಗಳು ಹೇಳುತ್ತಿವೆ.

    ಮಳೆಗಾಲ ಇರುವುದರಿಂದ ಇದು ಕೃಷಿಗೆ ಸೂಕ್ತವಾದ ಸಮಯ. ಆದರೆ ಕೆಲಸ ಮಾಡಲು ಯಾರೂ ಸಿದ್ಧರಿಲ್ಲ. ಹೊರಗಿನಿಂದ ಯುವಕರನ್ನು ಕೆಲಸ ಮಾಡಲು ಕರೆಸಲಾಗುತ್ತಿದೆ. ಆದರೆ ಇಲ್ಲಿನ ಪರಿಸ್ಥಿತಿ ನೋಡುತ್ತಿದ್ದಂತೆ ತಾವೂ ಅನಾರೋಗ್ಯಕ್ಕೆ ತುತ್ತಾಗುತ್ತೇವೆ ಎಂಬ ಆತಂಕದಿಂದ ಕೆಲಸಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಇದನ್ನೂ ಓದಿ: ನಾಲ್ಕೈದು ಉದ್ಯಮಿಗಳಿಗಾಗಿ ರಾಜಕಾರಣಿಗಳಿಬ್ಬರು ಕೆಲಸ ಮಾಡ್ತಿದ್ದಾರೆ: ರಾಹುಲ್ ಗಾಂಧಿ ವಾಗ್ದಾಳಿ

    ಹಸುವಿನ ಹಾಲನ್ನೂ ಕುಡಿಯುತ್ತಿಲ್ಲ: ಹಸುಗಳಲ್ಲಿ ಲಿಂಪಿ ವೈರಸ್ ಕಂಡುಬರುತ್ತಿರುವುದರಿಂದ ಇಲ್ಲಿನ ಜನ ಹಸುವಿನ ಹಾಲು ಕುಡಿಯುವುದನ್ನೇ ಬಿಟ್ಟಿದ್ದಾರೆ. ಇದರಿಂದ ಪ್ಯಾಕೆಟ್ ಹಾಲಿನ ಪೌಡರ್‌ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಮಕ್ಕಳಿಗೂ ಇದನ್ನೇ ಕುಡಿಸಲಾಗುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

    Live Tv
    [brid partner=56869869 player=32851 video=960834 autoplay=true]