Tag: Luiz Inacio Lula da Silva

  • G20 Summit: ‘ಆರ್‌ಆರ್‌ಆರ್‌’ ಚಿತ್ರವನ್ನು ಹೊಗಳಿದ ಬ್ರೆಜಿಲ್‌ ಅಧ್ಯಕ್ಷ

    G20 Summit: ‘ಆರ್‌ಆರ್‌ಆರ್‌’ ಚಿತ್ರವನ್ನು ಹೊಗಳಿದ ಬ್ರೆಜಿಲ್‌ ಅಧ್ಯಕ್ಷ

    ಚಿತ್ರೋದ್ಯಮ ಕಂಡ ಅದ್ಭುತ ನಿರ್ದೇಶಕ ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್ (RRR) ಸಿನಿಮಾ ಆಸ್ಕರ್ ಪ್ರಶಸ್ತಿ ಬಾಚಿಕೊಂಡಿತ್ತು. 2022ರಲ್ಲಿ ತೆರೆಕಂಡ ಈ ಸಿನಿಮಾಗೆ ಈಗಲೂ ಪ್ರಶಂಸೆ ವ್ಯಕ್ತವಾಗುತ್ತಿದೆ. ಜಿ20 ಶೃಂಗಸಭೆಯಲ್ಲಿ ಬ್ರೆಜಿಲ್ ಅಧ್ಯಕ್ಷ ‘ಆರ್‌ಆರ್‌ಆರ್’ ಚಿತ್ರವನ್ನು ಹಾಡಿ ಹೊಗಳಿದ್ದಾರೆ. ಈ ಕುರಿತ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

    ಜಿ20 (G20 Summit) ಶೃಂಗಸಭೆ ದೆಹಲಿಯಲ್ಲಿ ಸೆಪ್ಟೆಂಬರ್ 9 ಮತ್ತು 10ರಂದು ನಡೆದಿದೆ. ವಿವಿಧ ದೇಶದ ಗಣ್ಯರು ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ಬ್ರೆಜಿಲ್ ಅಧ್ಯಕ್ಷ ಲೂಯಿಸ್ ಇನಾಸಿಯೋ ಲೂಲಾ ದೆ ಸೆಲ್ವಾ (Luiz Inácio Lula Da Silva) ಕೂಡ ಭಾಗವಹಿಸಿದ್ದರು. ಅವರು ‘ಆರ್‌ಆರ್‌ಆರ್’ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಅವರು ಈ ಚಿತ್ರವನ್ನು ಬಾಯ್ತುಂಬ ಹೊಗಳಿದ್ದಾರೆ.ಇದನ್ನೂ ಓದಿ:ರಮೇಶ್ ಅರವಿಂದ್ ಹುಟ್ಟುಹಬ್ಬದಂದು ಫ್ಯಾನ್ಸ್‌ಗೆ ಗುಡ್ ನ್ಯೂಸ್

    ‘ಆರ್‌ಆರ್‌ಆರ್’ (RRR) ಮೂರು ಗಂಟೆಯ ಫೀಚರ್ ಸಿನಿಮಾ. ಹಲವು ಫನ್ನಿ ದೃಶ್ಯ ಇದೆ. ಅದ್ಭುತ ನೃತ್ಯವಿದೆ. ಬ್ರಿಟಿಷರ ಆಡಳಿತದ ಬಗ್ಗೆ ತೀವ್ರ ಟೀಕೆಯೂ ಇದೆ ಈ ಚಿತ್ರ ವಿಶ್ವಾದ್ಯಂತ ಬ್ಲಾಕ್‌ಬಸ್ಟರ್ ಸಿನಿಮಾ ಆಗಬೇಕು ನನ್ನ ಅಭಿಪ್ರಾಯ. ಭಾರತದ ಬಗ್ಗೆ ಯಾರೇ ಪ್ರಸ್ತಾಪಿಸಿದರೂ ನೀವು ಆರ್‌ಆರ್‌ಆರ್ ಸಿನಿಮಾ ನೋಡಿದ್ದೀರಾ ಎಂದು ಕೇಳುತ್ತಾರೆ. ಚಿತ್ರದ ನಿರ್ದೇಶಕರು ಮತ್ತು ಕಲಾವಿದರನ್ನು ನಾನು ಅಭಿನಂದಿಸುತ್ತೇನೆ. ಈ ಸಿನಿಮಾ ನನ್ನನ್ನು ಮೋಡಿ ಮಾಡಿದೆ ಎಂದಿದ್ದಾರೆ.

    ‘ಆರ್‌ಆರ್‌ಆರ್’ ಚಿತ್ರಕ್ಕೆ ವಿ.ವಿಜೇಂದ್ರ ಪ್ರಸಾದ್ ಬರೆದ ಕಥೆಗೆ ರಾಜಮೌಳಿ (Rajamouli) ನಿರ್ದೇಶನ ಮಾಡಿದ್ದರು. ಜ್ಯೂ.ಎನ್‌ಟಿಆರ್, ಆಲಿಯಾ ಭಟ್(Aliaa Bhatt), ರಾಮ್ ಚರಣ್(Ram Charan), ಅಜಯ್ ದೇವಗನ್, ಶ್ರೀಯಾ ಶರಣ್ ನಟಿಸಿದ್ದರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 2024ರ ಜಿ20 ಶೃಂಗಸಭೆ ಬ್ರೆಜಿಲ್‌ ದೇಶಕ್ಕೆ ಶಿಫ್ಟ್‌ – ಬ್ರೆಜಿಲ್‌ ಅಧ್ಯಕ್ಷರಿಗೆ ಜವಾಬ್ದಾರಿ ಹಸ್ತಾಂತರಿಸಿದ ಮೋದಿ

    2024ರ ಜಿ20 ಶೃಂಗಸಭೆ ಬ್ರೆಜಿಲ್‌ ದೇಶಕ್ಕೆ ಶಿಫ್ಟ್‌ – ಬ್ರೆಜಿಲ್‌ ಅಧ್ಯಕ್ಷರಿಗೆ ಜವಾಬ್ದಾರಿ ಹಸ್ತಾಂತರಿಸಿದ ಮೋದಿ

    ನವದೆಹಲಿ: 2024 ರ ಜಿ20 ಶೃಂಗಸಭೆಯ (G20 Summit) ಅಧ್ಯಕ್ಷತೆಯನ್ನು ಬ್ರೆಜಿಲ್‌ (Brazil) ದೇಶ ವಹಿಸಿಕೊಂಡಿದೆ. ನವದೆಹಲಿಯಲ್ಲಿ ನಡೆಯುತ್ತಿರುವ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ಜಿ20 ಶೃಂಗಸಭೆಯ ಅಧ್ಯಕ್ಷತೆ ಜವಾಬ್ದಾರಿಯನ್ನು ಬ್ರೆಜಿಲ್‌ ದೇಶದ ಅಧ್ಯಕ್ಷರಿಗೆ ಹಸ್ತಾಂತರಿಸಿದ್ದಾರೆ.

    ಜಿ20 ಶೃಂಗಸಭೆಯ ಭಾಗವಾಗಿ 2ನೇ ದಿನದಂದು (ಭಾನುವಾರ) ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಬೆಳಗ್ಗೆ ವಿಶ್ವ ನಾಯಕರು ದೆಹಲಿಯಲ್ಲಿರುವ ರಾಜ್‌ಘಾಟ್‌ಗೆ ಭೇಟಿ ನೀಡಿ ಮಹಾತ್ಮ ಗಾಂಧಿ ಅವರಿಗೆ ಪುಷ್ಪನಮನ ಸಲ್ಲಿಸಿದರು. ಬಳಿಕ ನಡೆದ ಅಧಿವೇಶನದಲ್ಲಿ ಪ್ರಧಾನಿ ಮೋದಿ (Narendra Modi) ಅವರು ಮುಂದಿನ ವರ್ಷದ ಜಿ20 ಅಧ್ಯಕ್ಷತೆ ಜವಾಬ್ದಾರಿ ಹೊರಲು ಬ್ಯಾಟನ್‌ ಅನ್ನು ಬ್ರೆಜಿಲ್‌ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ (Luiz Inacio Lula da Silva) ಅವರಿಗೆ ನೀಡಿದ್ದಾರೆ. ಇದನ್ನೂ ಓದಿ: G-20 Summitː ಶಿಷ್ಟಾಚಾರ ಉಲ್ಲಂಘನೆ – ಜೋ ಬೈಡನ್ ಬೆಂಗಾವಲು ವಾಹನ ಚಾಲಕ ವಶಕ್ಕೆ

    ಸೆಪ್ಟೆಂಬರ್ 9 ರಂದು ನವದೆಹಲಿಯ ಭಾರತ್ ಮಂಟಪಂ ಇಂಟರ್ನ್ಯಾಷನಲ್ ಎಕ್ಸಿಬಿಷನ್-ಕನ್ವೆನ್ಷನ್ ಸೆಂಟರ್‌ನಲ್ಲಿ G20 ನಾಯಕರ ಶೃಂಗಸಭೆಗೆ ಚಾಲನೆ ನೀಡಲಾಗಿತ್ತು. ಜಿ20 ನಾಯಕರು ಆಫ್ರಿಕಾ ಒಕ್ಕೂಟವನ್ನು ಖಾಯಂ ಸದಸ್ಯರನ್ನಾಗಿ ತಮ್ಮ ಗುಂಪಿಗೆ ಸ್ವಾಗತಿಸಿದರು.

    G20 ಅಧ್ಯಕ್ಷ ಸ್ಥಾನವನ್ನು ಹೊಂದಿರುವ ಭಾರತವು ‘ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ಧ್ಯೇಯವಾಕ್ಯ ಈ ವರ್ಷದ ಶೃಂಗಸಭೆಯ ವಿಷಯ ಎಂದು ಪ್ರತಿಪಾದಿಸಿದೆ. ಇದನ್ನೂ ಓದಿ: G20 Summit: ವಿಶ್ವ ನಾಯಕರಿಂದ ಮಹಾತ್ಮ ಗಾಂಧಿ ಸ್ಮಾರಕಕ್ಕೆ ಪುಷ್ಪ ನಮನ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]