Tag: luggage

  • ಇನ್ಮುಂದೆ ಸರ್ಕಾರಿ ಬಸ್ಸಿನಲ್ಲಿ ಪ್ರಾಣಿಗಳ ಜೊತೆ ಟಯರ್‌, ಫ್ರಿಡ್ಜ್‌, ವಾಷಿಂಗ್‌ ಮೆಷಿನ್‌ ಸಾಗಿಸಬಹುದು! -ಯಾವುದಕ್ಕೆ ಎಷ್ಟು ದರ?

    ಇನ್ಮುಂದೆ ಸರ್ಕಾರಿ ಬಸ್ಸಿನಲ್ಲಿ ಪ್ರಾಣಿಗಳ ಜೊತೆ ಟಯರ್‌, ಫ್ರಿಡ್ಜ್‌, ವಾಷಿಂಗ್‌ ಮೆಷಿನ್‌ ಸಾಗಿಸಬಹುದು! -ಯಾವುದಕ್ಕೆ ಎಷ್ಟು ದರ?

    ಬೆಂಗಳೂರು: ಇನ್ನು ಮುಂದೆ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ (KSRTC Bus) ಪ್ರಾಣಿಗಳು, ಫ್ರಿಡ್ಜ್‌, ವಾಷಿಂಗ್‌ ಮೆಷಿನ್‌ ಸಹ ಸಾಗಿಸಬಹುದು.

    ಹೌದು. ಮಹಿಳೆಯರಿಗೆ ಉಚಿತ ಪ್ರಯಾಣ ನೀಡಿ ಈಗ ಆದಾಯ ಸಂಗ್ರಹಿಸಲು ನಾನಾ ದಾರಿ ಹುಡುಕುತ್ತಿರುವ ಕೆಎಸ್‌ಆರ್‌ಟಿಸಿ ಲಗೇಜ್‌ಗೆ (Luggage) ಹೊಸ ದರ ನಿಗದಿ ಮಾಡಿದೆ.

    ಗರಿಷ್ಠ 30 ಕೆಜಿ ಮೇಲೆ ಲಗೇಜ್‌ ಇದ್ದರೆ ಕಡ್ಡಾಯವಾಗಿ ಹಣವನ್ನು ಪಾವತಿ ಮಾಡಲೇಬೇಕಾಗುತ್ತದೆ. ನಾಯಿಯನ್ನ ಚೈನಿನಲ್ಲಿ ಬಿಗಿದು ಕಾಳಜಿಯೊಂದಿಗೆ ಬಸ್ಸಿನಲ್ಲಿ ಸಾಗಿಸಬಹುದು. ವಯಸ್ಕರು 30 ಕೆಜಿ, ಮಕ್ಕಳು 15 ಕೆಜಿ ತೂಕದ ಲಗ್ಗೇಜ್ ಬಸ್ಸಿನಲ್ಲಿ ಕೊಂಡೊಯ್ಯಬಹುದು.

    ಪ್ರಯಾಣಿಕರು 4 ಅಥವಾ 5 ಜನರ ಗುಂಪಿನಲ್ಲಿ ಪ್ರಯಾಣಿಸುತ್ತಿದ್ದು. ಒಂದು ಬ್ಯಾಗ್ ಅಥವಾ ಬಂಡಲ್ ಲಗೇಜ್ ಕೊಂಡೊಯ್ಯುತ್ತಿದ್ದಲ್ಲಿ ಉಚಿತ ಸಾಗಣೆಯು ಒಬ್ಬ ಪ್ರಯಾಣಿಕರಿಗೆ ಮಾತ್ರ (30 ಕೆಜಿ) ಅನ್ವಯಿಸುತ್ತದೆ. ಒಬ್ಬರು ಮಾತ್ರ ಉಚಿತವಾಗಿ ಲಗೇಜ್ ಕೊಂಡೊಯ್ಯಬಹುದು.

    ಪ್ರಯಾಣಿಕರು ಲಗೇಜ್ ಅನ್ನ ಸರಿಯಾಗಿ ತೂಕ ಮಾಡಿಸಿಕೊಂಡು ಬರಬೇಕಾಗುತ್ತದೆ. ಯಂತ್ರದ ತೂಕವಿಲ್ಲದಿದ್ದರೆ ಅಂದಾಜು ತೂಕದ ಲಗೇಜ್ ಅನ್ನು ಪರಿಗಣಿಸಲಾಗುತ್ತದೆ.

    ಏನೇನು ತೆಗೆದುಕೊಂಡು ಹೋಗಬಹುದು?
    ವಾಷಿಂಗ್ ಮೆಷಿನ್, ಫ್ರಿಡ್ಜ್, ಟ್ರಕ್‌ ಟಯರ್‌, ಅಲ್ಯೂಮಿನಿಯಂ ಪೈಪ್, ಪಾತ್ರೆ, ಕಬ್ಬಿಣದ ಪೈಪ್, ಬೆಕ್ಕು, ನಾಯಿ, ಮೊಲವನ್ನು ಸಾಗಿಸಬಹುದು. ಇದನ್ನೂ ಓದಿ: ಅಕ್ರಮ ಮುಸ್ಲಿಂ ವಲಸಿಗರು ಭಯೋತ್ಪಾದನೆ, ಜನೋತ್ಪಾದನೆಯಲ್ಲಿ ತೊಡಗಿದ್ದಾರೆ: ಪ್ರತಾಪ್‌ ಸಿಂಹ

     

    ದರ ಹೇಗೆ?
    ಎಸಿ ಮತ್ತು ನಾನ್‌ ಎಸಿ ಬಸ್ಸುಗಳಿಗೆ ಪ್ರತ್ಯೇಕ ದರವನ್ನು ನಿಗದಿ ಮಾಡಲಾಗಿದೆ. ನಾನ್‌ ಎಸಿ ಬಸ್ಸುಗಳಿಗೆ 1-5 ಹಂತದವರೆಗೆ 5 ರೂ. ದರ ನಿಗದಿ ಆಗಿದ್ದರೆ ಎಸಿ ಬಸ್ಸುಗಳಲ್ಲಿ 10 ರೂ. ದರವನ್ನು ನಿಗದಿ ಮಾಡಲಾಗಿದೆ. 51 ರಿಂದ 55 ಹಂತದವರೆಗಿನ ನಾನ್‌ ಎಸಿ ಬಸ್ಸುಗಳಿಗೆ 44 ರೂ., ನಾನ್‌ ಎಸಿ ಬಸ್ಸುಗಳಿಗೆ 55 ರೂ. ದರವನ್ನು ನಿಗದಿ ಮಾಡಲಾಗಿದೆ.

    ಸಾಕು ಪ್ರಾಣಿಗಳನ್ನು ಉಚಿತವಾಗಿ ಪ್ರಯಾಣಿಸಲು ಅನುಮತಿ ಇಲ್ಲ. ನಾಯಿಯನ್ನು ಒಬ್ಬ ವಯಸ್ಕ ಪ್ರಯಾಣಿಕರಂತೆ ಪರಿಗಣಿಸಿ ದರ ವಿಧಿಸಿದ್ದರೆ ಮೊಲ, ನಾಯಿ ಮರಿ, ಬೆಕ್ಕು, ಪಂಜರದಲ್ಲಿರುವ ಪಕ್ಷಿಗೆ ಮಕ್ಕಳದ ದರವನ್ನು ವಿಧಿಸಲಾಗುತ್ತದೆ. ರೇಷ್ಮೆ ಗೂಡನ್ನು ಪ್ರತಿ 15 ಕೆಜಿಗೆ 1 ಯೂನಿಟ್‌ನಂತೆ ಪರಿಗಣಿಸಲಾಗುತ್ತದೆ.

  • ಲ್ಯಾಂಡಿಂಗ್ ವೇಳೆ ಸ್ಪೈಸ್‌ಜೆಟ್ ವಿಮಾನ ಅವಘಡ – ಪ್ರಯಾಣಿಕರ ಮೇಲೆ ಲಗೇಜ್‌ಗಳ ಸುರಿಮಳೆ

    ಲ್ಯಾಂಡಿಂಗ್ ವೇಳೆ ಸ್ಪೈಸ್‌ಜೆಟ್ ವಿಮಾನ ಅವಘಡ – ಪ್ರಯಾಣಿಕರ ಮೇಲೆ ಲಗೇಜ್‌ಗಳ ಸುರಿಮಳೆ

    ಕೋಲ್ಕತ್ತಾ: ಸ್ಪೈಸ್‌ಜೆಟ್ ವಿಮಾನವೊಂದು ಲ್ಯಾಂಡಿಂಗ್ ವೇಳೆ ಭಾರೀ ಬಿರುಗಾಳಿಗೆ ಸಿಲುಕಿದ್ದು, ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರ ಮೇಲೆ ಲಗೇಜ್‌ಗಳು ಬಿದ್ದ ಪರಿಣಾಮ 40ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ.

    ಭಾನುವಾರ ರಾತ್ರಿ ವಾಯು ಪ್ರದೇಶದ ಬಿರುಗಾಳಿ ಹಿನ್ನೆಲೆಯಲ್ಲಿ ಸ್ಪೈಸ್‌ಜೆಟ್‌ನ ಎಸ್‌ಜಿ-945 ವಿಮಾನ ಪಶ್ಚಿಮ ಬಂಗಾಳದ ದುರ್ಗಾಪುರದ ಕಾಜಿ ನಜ್ರುಲ್ ಇಸ್ಲಾಂ ವಿಮಾನ ನಿಲ್ದಾಣದಲ್ಲಿ ಇಳಿಯಲು ಪ್ರಯತ್ನಿಸುತ್ತಿತ್ತು. ಈ ವೇಳೆ ಅವಘಡ ಸಂಭವಿಸಿದೆ. ಲಗೇಜ್ ಬ್ಯಾಗ್‌ಗಳು ಪ್ರಯಾಣಿಕರ ತಲೆ ಮೇಲೆ ಬಿದ್ದಿರುವ ಪರಿಣಾಮ ಹೆಚ್ಚಿನವರ ತಲೆಗೆ ಗಾಯಗಳಾಗಿವೆ. ಇದನ್ನೂ ಓದಿ: ರಾಷ್ಟ್ರೀಯತೆ ಕಲಿಯಲು ಕೇಜ್ರಿವಾಲ್ RSS ಕಚೇರಿಗೆ ಭೇಟಿ ನೀಡಬೇಕು: ಬಿಜೆಪಿ ಸಂಸದ

    ಗಾಯಗೊಂಡಿರುವ 40 ಪ್ರಯಾಣಿಕರಲ್ಲಿ 10 ಜನರಿಗೆ ಗಂಭೀರ ಗಾಯಗಳಾಗಿವೆ. ಉಳಿದವರು ಸಣ್ಣ ಪುಟ್ಟ ಗಾಯಗಳಿಗೆ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಗಂಭೀರ ಗಾಯಗಳಾದವರಲ್ಲಿ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಖಲೀಸ್ತಾನ ಬೇಡಿಕೆ ಸಾಂವಿಧಾನಿಕ ಹಕ್ಕು ಎಂದ ಆಪ್ ನಾಯಕ ಹರ್‌ಪ್ರೀತ್‌ಸಿಂಗ್

    ವಿಮಾನ ಭೀಕರ ಗಾಳಿಗೆ ಹೇಗೆ ಸಿಲುಕಿತು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಬಿರುಗಾಳಿಗೆ ಸಿಲುಕಿದ ವಿಮಾನ ತೀವ್ರಗತಿಯಲ್ಲಿ ಅಲುಗಾಡಿ, ಕ್ಯಾಬಿನ್‌ನಲ್ಲಿದ್ದ ಲಗೇಜ್‌ಗಳು ಪ್ರಯಾಣಿಕರ ಮೇಲೆ ಬಿದ್ದಿವೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ.

  • ನಾಳೆಯಿಂದ ಅನ್‍ಲಾಕ್ – ಗಂಟು, ಮೂಟೆ ಹೊತ್ತು ಕುಟುಂಬ ಸಮೇತ ಬೆಂಗಳೂರಿನತ್ತ ಜನ

    ನಾಳೆಯಿಂದ ಅನ್‍ಲಾಕ್ – ಗಂಟು, ಮೂಟೆ ಹೊತ್ತು ಕುಟುಂಬ ಸಮೇತ ಬೆಂಗಳೂರಿನತ್ತ ಜನ

    ಬೆಂಗಳೂರು: ರಾಜ್ಯದಲ್ಲಿ ಸೋಮವಾರದಿಂದ ಲಾಕ್‍ಡೌನ್ ತೆರವು ಹಿನ್ನೆಲೆ ರಾಜ್ಯದ ಗಡಿ ಅತ್ತಿಬೆಲೆ ಮೂಲಕ ಸಾಲು-ಸಾಲು ವಾಹನಗಳ ಮೂಲಕ ಜನರು ಬೆಂಗಳೂರಿನತ್ತ ಬರುತ್ತಿದ್ದಾರೆ.

    ನಾಳೆಯಿಂದ ಅನ್‍ಲಾಕ್ ಆಗಿರುವುದರಿಂದ ವಲಸೆ ಹೋಗಿದ್ದ ಕಾರ್ಮಿಕರು ಕರ್ನಾಟಕ- ತಮಿಳುನಾಡು ಗಡಿ ಅತ್ತಿಬೆಲೆಯಲ್ಲಿ ವಾಹನಗಳ ಮೂಲಕ ಮತ್ತೆ ಮರಳಿ ಬೆಂಗಳೂರಿನತ್ತ ಮುಖ ಮಾಡಿದ್ದಾರೆ. ಜನರು ಕಾರುಗಳಲ್ಲಿ ಹಾಗೂ ದ್ವಿಚಕ್ರ ವಾಹನಗಳಲ್ಲಿ ತಮ್ಮ ಕುಟುಂಬ ಸಮೇತರಾಗಿ ಲಗೇಜುಗಳೊಂದಿಗೆ ಒಂದುವರೆ ತಿಂಗಳ ಬಳಿಕ ತಮ್ಮ ನಿವಾಸಗಳಿಗೆ ಆಗಮಿಸುತ್ತಿದ್ದಾರೆ.

    ಅತ್ತಿಬೆಲೆ ಚೆಕ್ ಪೋಸ್ಟ್ ನಲ್ಲಿ ಪೊಲೀಸ್ ಪೇದೆಯೊಬ್ಬರು ಹಾಗೂ ನಾಲ್ಕು ಜನ ಹೋಂ ಗಾರ್ಡ್‍ಗಳು, ಶಿಕ್ಷಕರು ಬೆಂಗಳೂರಿಗೆ ಬರುತ್ತಿದ್ದ ವಾಹನಗಳನ್ನು ತಪಾಸಣೆ ಮಾಡುತ್ತಿದ್ದರು. ಇದನ್ನು ಹೊರತುಪಡಿಸಿ ಚೆಕ್ ಪೋಸ್ಟ್ ಗೆ ನೇಮಕ ಮಾಡಿದ್ದ ರೆವಿನ್ಯೂ ಇಲಾಖೆ ಅಧಿಕಾರಿಗಳು ಸೇರಿದಂತೆ ಕೆಲ ಇಲಾಖೆಯ ಅಧಿಕಾರಿಗಳು ಹಾಜರಿ ಪುಸ್ತಕದಲ್ಲಿ ಸಹಿ ಮಾಡಿ, ಡ್ಯೂಟಿ ಮಾಡದೇ ನಿರ್ಲಕ್ಷ್ಯ ತೋರಿದ್ದಾರೆ.  ಇದನ್ನೂ ಓದಿ: ನಾಳೆಯಿಂದ ದೆಹಲಿಯಲ್ಲಿ ಅನ್‍ಲಾಕ್ – ಹೋಟೆಲ್‍ಗಳಲ್ಲಿ ಶೇ.50, ಮಾಲ್ ಫುಲ್ ಓಪನ್

    ಬೆಳಗ್ಗೆಯಿಂದ ಸಂಜೆಯವರೆಗೂ ಅತ್ತಿಬೆಲೆ ಚೆಕ್ ಪೋಸ್ಟ್ ಬಳಿ ಸರಿಯಾದ ಮಾರ್ಗಸೂಚಿ ನೀಡದ ಹಾಗೂ ಬೆರಳೆಣಿಕೆಯಷ್ಟು ಸಿಬ್ಬಂದಿಗಳ ನಿಯೋಜನೆಯಿಂದ ಯಾವುದೇ ಕಟ್ಟುನಿಟ್ಟಿನ ತಪಾಸಣೆ ಮಾಡದೇ ಇರುವುದು ಕಂಡು ಬಂತು. ಒಟ್ಟಿನಲ್ಲಿ ಕೊರೊನಾ ಲಾಕ್‍ಡೌನ್ ಹಿನ್ನೆಲೆ ಬೆಂಗಳೂರು ತೊರೆದಿದ್ದ ವಲಸೆ ಕಾರ್ಮಿಕರು ಮತ್ತೆ ಬೆಂಗಳೂರಿನತ್ತ ಮರಳಿ ಮುಖ ಮಾಡಿದ್ದು, ಮತ್ತಷ್ಟು ಕೊರೊನಾ ಸೋಂಕು ಹರಡುವ ಆತಂಕ ಹೆಚ್ಚಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಮೊದಲ ಪ್ರಯತ್ನ- ಹುಬ್ಬಳ್ಳಿಯಲ್ಲಿ 2 ರೂ.ಗೆ ಸಿಗುತ್ತೆ ಸರ್ಜಿಕಲ್ ಮಾಸ್ಕ್!

  • ಹಸುವಿನ ಸೆಗಣಿಯನ್ನು ಯುಎಸ್‍ಗೆ ತೆಗೆದುಕೊಂಡು ಹೋದ ಭಾರತೀಯ

    ಹಸುವಿನ ಸೆಗಣಿಯನ್ನು ಯುಎಸ್‍ಗೆ ತೆಗೆದುಕೊಂಡು ಹೋದ ಭಾರತೀಯ

    ವಾಷಿಂಗ್ಟನ್: ಭಾರತದಿಂದ ಯೆಸ್‍ಗೆ ಪ್ರಯಾಣಿಸಿದ ಪ್ರಯಾಣಿಕನ ಲಗೇಜ್ ಬ್ಯಾಗ್‍ನಲ್ಲಿ ಹಸುವಿನ ಸೆಗಣಿ ಪತ್ತೆಯಾಗಿದೆ ಎಂದು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ.

    ಹಸುವಿನ ಸಗಣಿಯನ್ನು ಯುಎಸ್‍ನಲ್ಲಿ ನಿಷೇಧಿಸಲಾಗಿದೆ ಏಕೆಂದರೆ ಅವುಗಳು ಹೆಚ್ಚು ಸಾಂಕ್ರಾಮಿಕ ರೋಗ ಅಥವಾ ಕಾಲುಬಾಯಿರೋಗದ ಸಂಭಾವ್ಯ ವಾಹಕಗಳಾಗಿವೆ ಎನ್ನಲಾಗುತ್ತದೆ . ಆದರೆ ಏರ್ ಇಂಡಿಯಾ ವಿಮಾನದ ಪ್ರಯಾಣಿಕ ಸಿಬಿಪಿಯ ತಪಾಸಣೆ ಕೇಂದ್ರಕ್ಕೆ ತಲುಪಿದ ನಂತರ ಸಿಬಿಪಿ ಕೃಷಿ ತಜ್ಞರು ಸೂಟ್ ಕೇಸ್‍ನಲ್ಲಿ ಎರಡು ಹಸುವಿನ ಸಗಣಿ ಉಂಡೆಯನ್ನು ಕಂಡುಕೊಂಡಿದ್ದಾರೆ ಎಂದು ಮಾಧ್ಯಮ ಪ್ರಕಟಣೆ ಸೋಮವಾರ ತಿಳಿಸಿದೆ.

    ಕಾಲುಬಾಯಿ ರೋಗವು ಜಾನುವಾರು ಮಾಲೀಕರು ಹೆಚ್ಚು ಭಯಪಡುವ, ಗಂಭೀರ ಕಾಯಿಲೆಗಳಲ್ಲಿ ಒಂದಾಗಿದೆ. ಕಸ್ಟಮ್ಸ್ ಮತ್ತು ಗಡಿ ಸಂರಕ್ಷಣೆಯ ಕೃಷಿ ಸಂರಕ್ಷಣಾ ಕಾರ್ಯಾಚರಣೆಯ ಮಹತ್ವದ ಕಾರ್ಯಾಚರಣೆಯಾಗಿದೆ ಎಂದು ಬಾಲ್ಟಿಮೋರ್ ಫೀಲ್ಡ್ ಆಫೀಸ್ ಸಿಬಿಪಿಯ ಕ್ಷೇತ್ರ ಕಾರ್ಯಾಚರಣೆಗಳ ನಿರ್ದೇಶಕ ಕೀತ್ ಫ್ಲೆಮಿಂಗ್ ಹೇಳಿದರು.

    ಹಸುವಿನ ಸಗಣಿ ವಿಶ್ವದ ಕೆಲವು ಭಾಗಗಳಲ್ಲಿ ಪ್ರಮುಖ ಶಕ್ತಿ ಮತ್ತು ಅಡುಗೆ ಮೂಲವಾಗಿದೆ ಎಂದು ತಿಳಿದಿದ್ದರೂ ಹಸುವಿನ ಚರ್ಮವನ್ನು ಡಿಟಾಕ್ಸಿಫೈಯರ್, ಆಂಟಿಮೈಕ್ರೊಬಿಯಲ್ ಮತ್ತು ರಸಗೊಬ್ಬರವಾಗಿ ಬಳಸಲಾಗುತ್ತದೆ ಎಂದು ವರದಿಯಾಗಿದೆ. ಈ ಪ್ರಯೋಜನಗಳ ಹೊರತಾಗಿಯೂ, ಕಾಲುಬಾಯಿ ರೋಗದ ಸಂಭಾವ್ಯ ಕಾರಣಗಳಿಂದಾಗಿ ಗೋವಿನ ಸಗಣಿ ನಿಷೇಧಿಸಲಾಗಿದೆ ಎಂದು ಸಿಬಿಪಿ ಹೇಳಿದೆ.

    ಯು.ಎಸ್. ಕೃಷಿ ಇಲಾಖೆಯ ಪ್ರಕಾರ, ಕಾಲುಬಾಯಿ ರೋಗವು ವಿಶ್ವಾದ್ಯಂತದ ಜಾನುವಾರುಗಳಿಗೆ ತೊಂದರೆ ತರುವ ರೋಗವಾಗಿದ್ದು ಇದು ವ್ಯಾಪಕವಾಗಿ ಮತ್ತು ವೇಗವಾಗಿ ಹರಡಬಹುದು ಮತ್ತು ಜಾನುವಾರುಗಳ ಸಂಖ್ಯೆಗೆ ಗಮನಾರ್ಹ ನಷ್ಟವನ್ನು ತರಬಲ್ಲದು. 1929ರಿಂದ ಯುಎಸ್ ಕಾಲುಬಾಯಿ ರೋಗದಿಂದ ಮುಕ್ತವಾಗಿದೆ ಎಂದು ಹೇಳಿಕೆಯೊಂದರಲ್ಲಿ ತಿಳಿಸಿದೆ.

  • ಒಂದೇ ಬೈಕ್‍ನಲ್ಲಿ 7 ಜನ, 2 ಶ್ವಾನ ಸಮೇತ ಲಗೇಜ್ ಸಾಗಿಸಿದ ವ್ಯಕ್ತಿ: ವಿಡಿಯೋ ನೋಡಿ

    ಒಂದೇ ಬೈಕ್‍ನಲ್ಲಿ 7 ಜನ, 2 ಶ್ವಾನ ಸಮೇತ ಲಗೇಜ್ ಸಾಗಿಸಿದ ವ್ಯಕ್ತಿ: ವಿಡಿಯೋ ನೋಡಿ

    ನವದೆಹಲಿ: ನಾವು ಒಂದು ಬೈಕ್‍ನಲ್ಲಿ ಇಬ್ಬರು ಅಥವಾ ಮೂವರು ಕುಳಿತುಕೊಳ್ಳವುದನ್ನು ನೋಡಿರುತ್ತೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ಪೂರ್ತಿ ಅವನ ಕುಟುಂಬವನ್ನು ಲಗೇಜ್ ಸಮೇತ ಒಂದೇ ಬೈಕ್‍ನಲ್ಲಿ ಸಾಗಿಸಿದ್ದಾನೆ.

    ಒಂದು ಬೈಕ್‍ನಲ್ಲಿ ತನ್ನ ಐದು ಜನ ಮಕ್ಕಳು ಮತ್ತು ಹೆಂಡತಿ ಹಾಗೂ ಎರಡು ನಾಯಿ ಮರಿಯ ಜೊತೆಗೆ ತನ್ನ ಮನೆಯ ಎಲ್ಲ ಲಗೇಜ್‍ನ್ನು ಕಟ್ಟಿಕೊಂಡು ಒಬ್ಬ ವ್ಯಕ್ತಿ ಸಾಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    https://twitter.com/rishadcooper/status/1166931979138260994

    ಈ ವಿಡಿಯೋವನ್ನು ಟ್ವಿಟ್ಟರ್ ಬಳಕೆದಾರ ರಿಷಾದ್ ಕೂಪರ್ ಎಂಬವರು ತಮ್ಮ ಟ್ವಿಟ್ಟರ್‍ ನಲ್ಲಿ ಹಾಕಿಕೊಂಡಿದ್ದು, ಈ ವಿಡಿಯೋ ಸಖತ್ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಬೈಕಿನ ಹಿಂಬದಿಯಲ್ಲಿ ಮೂರು ಮಕ್ಕಳು ಕುಳಿತಿದ್ದಾರೆ. ನಂತರ ಆತನ ಮಡದಿ ಕುಳಿತಿದ್ದಾಳೆ. ಆತ ಬೈಕ್ ಓಡಿಸುತ್ತಿದ್ದು, ಮುಂಭಾಗದಲ್ಲಿ ಇಬ್ಬರು ಮಕ್ಕಳು ಕುಳಿತಿರುತ್ತಾರೆ. ಬೈಕಿನ ಸುತ್ತಾ ಲಗೇಜ್‍ನ್ನು ಕಟ್ಟಿದ್ದು, ಬೈಕ್ ಬಲಭಾಗದಲ್ಲಿರುವ ಲಗೇಜ್ ಮೇಲೆ ಒಂದು ನಾಯಿ ಆರಾಮವಾಗಿ ಕುಳಿತಿದೆ. ಇನ್ನೊಂದು ನಾಯಿಯನ್ನು ಮುಂದೆ ಕುಳಿತಿರುವ ಹುಡುಗ ಹಿಡಿದುಕೊಂಡಿರುವುದನ್ನು ಕಾಣಬಹುದು.

    ಒಟ್ಟು ಈ ವಿಡಿಯೋದಲ್ಲಿ ನಾಯಿಗಳನ್ನು ಸೇರಿಸಿದರೆ ಒಟ್ಟು 9 ಜನ ಕುಳಿತಿದ್ದಾರೆ. ಈ ವಿಡಿಯೋ ಆಪ್ಲೋಡ್ ಮಾಡಿರುವ ಕೂಪರ್ ಇದಕ್ಕೆ ಭಾರತದಲ್ಲಿ ಮಾತ್ರ ಎಂದು ಶೀರ್ಷಿಕೆ ಕೊಟ್ಟಿದ್ದು, ವಿಡಿಯೋ ನೋಡಿದ ಜನರು ಅಶ್ಚರ್ಯದ ಜೊತೆಗೆ ಅತಂಕವನ್ನು ವ್ಯಕ್ತಪಡಿಸಿದ್ದಾರೆ.

  • ಮಹಿಳೆಯೊಂದಿಗೆ 14 ಸಾವಿರ ಕಿ.ಮೀ ಪ್ರಯಾಣಿಸಿದ ಹೆಬ್ಬಾವು!

    ಮಹಿಳೆಯೊಂದಿಗೆ 14 ಸಾವಿರ ಕಿ.ಮೀ ಪ್ರಯಾಣಿಸಿದ ಹೆಬ್ಬಾವು!

    ಕ್ಯಾನ್ಬೆರಾ: ಸ್ಕಾಟ್ಲೆಂಡ್ ಮಹಿಳೆಯೊಬ್ಬರ ಲಗೇಜಿನಲ್ಲಿ ಹೆಬ್ಬಾವೊಂದು ಬರೋಬ್ಬರಿ 14 ಸಾವಿರ ಕಿ.ಮೀ ಪ್ರಯಾಣ ಮಾಡಿರುವ ಆಘಾತಕಾರಿ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.

    ಸ್ಕಾಟ್ಲೆಂಡ್ ಮೂಲದ ಮರಿಯಾ ಬೋಕ್ಸಾಲ್ ಮಹಿಳೆಯ ಲಗೇಜಿನಲ್ಲಿ ಹೆಬ್ಬಾವು ಕಂಡು ಬಂದಿದೆ. ಬೋಕ್ಸಾಲಾ ಅವರು ರಜೆ ಬಳಿಕ ಆಸ್ಟ್ರೇಲಿಯಾದಿಂದ ಸ್ಕಾಟ್ಲೆಂಡ್‍ಗೆ ತೆರಳುತ್ತಿದ್ದರು. ಅವರ ಜೊತೆ ಲಗೇಜಿನಲ್ಲಿ ಶೂ ಒಳಗೆ ಹೆಬ್ಬಾವು ಸೇರಿಕೊಂಡಿದೆ. ಆದರೆ ಅದನ್ನು ಬೋಕ್ಸಾಲ್ ಗಮನಿಸಿರಲಿಲ್ಲ. ಕೊನೆಗೆ ಹೆಬ್ಬಾವಿನ ಜೊತೆ ಬರೋಬ್ಬರಿ 14,000 ಕಿ.ಮೀವರೆಗೂ ಪ್ರಯಾಣ ಮಾಡಿದ್ದಾರೆ.

    ಮಹಿಳೆ ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ಏರ್‌ಪೋರ್ಟ್‌ ಗೆ ಬಂದಿದ್ದಾರೆ. ಅಲ್ಲಿ ಬ್ಯಾಗಿನ ಪರಿಶೀಲನೆ ಮಾಡುವಾಗ ಈ ಹೆಬ್ಬಾವು ಪತ್ತೆಯಾಗಿದೆ. ತಕ್ಷಣ ಮಹಿಳೆ ಪ್ರಾಣಿ ರಕ್ಷಣಾ ಸಂಗ್ರಹಾಲಯಕ್ಕೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಕ್ಷಣ ಸ್ಥಳಕ್ಕೆ ಬಂದು ಬ್ಯಾಗಿನಿಂದ ಹೆಬ್ಬಾವನ್ನು ಯಶಸ್ವಿಯಾಗಿ ತೆಗೆದಿದ್ದಾರೆ.

    ಮೊದಲಿಗೆ ನಾನು ಅದನ್ನು ತಮಾಷೆ ಮಾಡಲು ಕುಟುಂಬದವರು ಆಟಿಕೆ ಅಂದರೆ ನಕಲಿ ಹಾವನ್ನು ಇರಿಸಲಾಗಿದೆ ಎಂದುಕೊಂಡಿದೆ. ಆದರೆ ಅದನ್ನು ಹೊರಗಡೆಯಿಂದ ಮುಟ್ಟಿದಾಗ ಅದು ಅಲಗಾಡಿತು. ಆ ಕ್ಷಣ ನನಗೆ ನಿಜವಾಗಿಯೂ ಆಘಾತವಾಗಿತ್ತು ಎಂದು ಬೋಕ್ಸಾಲ್ ಹೇಳಿದ್ದಾರೆ.

    ನಮಗೆ ಕರೆ ಬಂದು ಬ್ಯಾಗಿನಲ್ಲಿ ಶೂ ಒಳಗೆ ಅಡಗಿದ್ದ ಹೆಬ್ಬಾವನ್ನು ಸುರಕ್ಷಿತವಾಗಿ ಹೊರ ತೆಗೆದಿದ್ದೇವೆ. ಮಚ್ಚೆಯುಳ್ಳ ಸ್ಪಾಟ್ಟೆಡ್ ಹೆಬ್ಬಾವು ಎಂದು ಗುರುತಿಸಲಾಗಿದೆ. ಇದು ಶೂ ಒಳಗೆ ತನ್ನ ಪೊರೆಯನ್ನು ಬಿಟ್ಟಿತ್ತು ಎಂದು ಪ್ರಾಣಿ ರಕ್ಷಕ ಅಧಿಕಾರಿ ಟೇಲರ್ ಜಾನ್ಸ್ಟೋನ್ ತಿಳಿಸಿದ್ದಾರೆ.

    ವಿಮಾನ ನಿಲ್ದಾಣದಲ್ಲಿ ಇದೇ ಮೊದಲ ಬಾರಿಗೆ ಹಾವು ಪತ್ತೆಯಾಗಿಲ್ಲ. ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ವ್ಯಕ್ತಿಯೊಬ್ಬ 20 ಜೀವಂತ ಹಾವುಗಳನ್ನು ತನ್ನ ಹ್ಯಾಂಡ್ ಬ್ಯಾಗಿನಲ್ಲಿ ಇಟ್ಟುಕೊಂಡು ಜರ್ಮನಿಯಿಂದ ರಷ್ಯಾಕ್ಕೆ ವಿಮಾನದ ಮೂಲಕ ಪ್ರಯಾಣ ಬೆಳೆಸಿದ್ದನು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರೈಲ್ವೇ ಪ್ರಯಾಣಿಕರಿಗೊಂದು ಶಾಕಿಂಗ್ ನ್ಯೂಸ್ – ಅಧಿಕ ಲಗೇಜಿಗೆ ಬಿತ್ತು ಬ್ರೇಕ್

    ರೈಲ್ವೇ ಪ್ರಯಾಣಿಕರಿಗೊಂದು ಶಾಕಿಂಗ್ ನ್ಯೂಸ್ – ಅಧಿಕ ಲಗೇಜಿಗೆ ಬಿತ್ತು ಬ್ರೇಕ್

    ನವದೆಹಲಿ: ರೈಲ್ವೇ ಪ್ರಯಾಣಿಕರಿಗೆ ಭಾರತೀಯ ರೈಲ್ವೇ ಇಲಾಖೆ ಶಾಕಿಂಗ್ ನ್ಯೂಸ್ ನೀಡುತ್ತಿದೆ. ಇನ್ನು ಮುಂದೆ ವಿಮಾನ ಪ್ರಯಾಣದ ರೀತಿ ರೈಲಿನಲ್ಲಿ ಪ್ರಯಾಣ ಮಾಡುವಾಗ ಹೆಚ್ಚುವರಿ ಲಗೇಜ್ ಕೊಂಡೊಯ್ಯುವರಿಗೆ ಭಾರತೀಯ ರೈಲ್ವೆ ಕಡಿವಾಣ ಹಾಕಲಿದೆ.

    ಬೋಗಿಗಳಲ್ಲಿ ಹೆಚ್ಚುವರಿ ಲಗೇಜುಗಳನ್ನು ತೆಗೆದುಕೊಂಡು ಹೋಗಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ರೈಲ್ವೇ ಇಲಾಖೆ ಮೂರು ದಶಕಗಳಷ್ಟು ಹಳೆಯದಾದ ಲಗೇಜ್ ನಿಯಮಗಳನ್ನು ಕಟ್ಟು ನಿಟ್ಟಿನಿಂದ ಜಾರಿಗೊಳಿಸಲು ನಿರ್ಧರಿಸಿದ್ದು, ಇನ್ನು ಮುಂದೆ ಹೆಚ್ಚುವರಿ ಲಗೇಜ್ ಪತ್ತೆಯಾದರೆ, 6 ಪಟ್ಟು ದಂಡ ವಿಧಿಸಬೇಕಾಗುತ್ತದೆ ಎಂದು ಇಲಾಖೆ ಮಂಗಳವಾರ ಸ್ಪಷ್ಟ ಪಡಿಸಿದೆ.

    ನಿಯಮದ ಪ್ರಕಾರ, ಸ್ಲೀಪರ್ ಮತ್ತು ಸೆಕೆಂಡ್ ಕ್ಲಾಸ್ ನಲ್ಲಿ ಪ್ರಯಾಣಿಸುವ ಪ್ರಯಾಣಿಕರು 40 ಹಾಗೂ 35 ಕೆಜಿ ತೂಕದ ಲಗೇಜನ್ನು ಶುಲ್ಕ ಪಾವತಿಸದೆ ತಮ್ಮೊಂದಿಗೆ ತೆಗೆದುಕೊಂಡು ಹೋಗಬಹುದು. ಇನ್ನು ಪಾರ್ಸೆಲ್ ಕಚೇರಿಯಲ್ಲಿ ಲಗೇಜ್ ಗಾಗಿ ಶುಲ್ಕ ಪಾವತಿಸಿ ಸುಮಾರು 80 ಕೆಜಿ ಹಾಗೂ 70 ಕೆಜಿ ತೂಕದ ಲಗೇಜ್ ತೆಗೆದುಕೊಂಡು ಹೋಗಬಹುದು. ಇದಕ್ಕಿಂತ ಹೆಚ್ಚುವರಿ ಲಗೇಜನ್ನು ಲಗೇಜ್ ವ್ಯಾನ್ ಗೆ ಹಾಕಿ ತೆಗೆದುಕೊಂಡು ಹೋಗುವ ಅವಕಾಶ ವಿದೆ.

    ಈ ನಿಯಮಗಳು ಹಿಂದಿನಿಂದಲೂ ಇವೆ. ಆದರೆ ಈಗ ಈ ನಿಯಮಗಳನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ. ಕೆಲವು ಪ್ರಯಾಣಿಕರು ಅಧಿಕ ಲಗೇಜನ್ನು ತಂದು ಬೋಗಿಯಲ್ಲಿ ಹಾಕುತ್ತಿದ್ದರು.ಇದರಿಂದ ಇತರೆ ಪ್ರಯಾಣಿಕರಿಗೆ ತೊಂದರೆಯಾಗುತ್ತಿತ್ತು. ಈ ಕಾರಣದಿಂದ ಅನೇಕ ದೂರುಗಳು ರೈಲ್ವೆ ಇಲಾಖೆಗೆ ಬಂದಿವೆ. ಆದ್ದರಿಂದ ಈಗಾಗಲೇ ಇರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಇಲಾಖೆ ಮುಂದಾಗಿದೆ. ಪ್ರಯಾಣಿಕರ ಬಳಿ ಹಣ ಪಾವತಿಸಿದ 40ಕೆಜಿಗೂ ಹೆಚ್ಚಿನ ಲಗೇಜ್ ಪತ್ತೆಯಾದರೆ ಅದರ ಆರು ಪಟ್ಟು ದಂಡ ವಿಧಿಸಲಾಗುವುದು ಎಂದು ರೈಲ್ವೆ ಮಂಡಳಿಯ ಮಾಹಿತಿ ಮತ್ತು ಪ್ರಚಾರ ನಿರ್ದೇಶಕ ವೇದ್ ಪ್ರಕಾಶ್ ಹೇಳಿದ್ದಾರೆ.

    ವಿಮಾನ ನಿಲ್ದಾಣಗಳಲ್ಲಿ ಪ್ರತಿ ಪ್ರಯಾಣಿಕರ ತಪಾಸಣೆ ನಡೆಸುವ ರೀತಿ ರೈಲ್ವೆ ಪ್ರಯಾಣಿಕರ ಲಗೇಜ್ ಗಳ ತಪಾಸಣೆಗಳನ್ನು ನಡೆಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದರು. ಒಬ್ಬ ಪ್ರಯಾಣಿಕನು ಸ್ಲೀಪರ್ ಬೋಗಿಯಲ್ಲಿ 500 ಕಿ.ಮೀ ದೂರ ಪ್ರಯಾಣ ಮಾಡಿದರೆ. ಅವರು 80 ಕೆಜಿ ತೂಕದ ಲಗೇಜ್ ಹೊಂದಿದ್ದರೆ. ಅದರಲ್ಲಿ 40 ಕೆಜಿ ಲಗೇಜಿಗೆ 109 ರೂ ಶುಲ್ಕ ಪಾವತಿಸಿ ಲಗೇಜ್ ವ್ಯಾನ್ ನಲ್ಲಿ ತೆಗೆದುಕೊಂಡು ಹೋಗಬೇಕಾಗುತ್ತದೆ. ಒಂದು ವೇಳೆ ಈ ರೀತಿ ಮಾಡದೆ ಹೋದರೆ ಅವರು ಆರು ಪಟ್ಟು ಅಂದರೆ 654 ರೂ ದಂಡ ಪಾತಿಸಬೇಕಾಗುತ್ತದೆ.

    ಎಸಿ ಮತ್ತು ಫಸ್ಟ್ ಕ್ಲಾಸ್ ಪ್ರಯಾಣಿಕರಿಗೆ 70 ಕೆಜಿ ಲಗೇಜ್ ಯಿಂದ ಗರಿಷ್ಠ 150 ಕೆಜಿ ತೂಕದ ಲಗೇಜ್ ತೆಗೆದುಕೊಂಡು ಹೋಗಬಹುದು. ಆದರೆ ಹೆಚ್ಚುವರಿ 80 ಕೆಜಿ ಲಗೇಜಿಗೆ ಶುಲ್ಕ ಪಾವತಿಸಿದ ನಂತರ ಸಾಗಿಸಬಹುದು. ಇನ್ನು ಎಸಿ ಎರಡು-ಹಂತದ ಪ್ರಯಾಣಿಕರು 50 ಕೆಜಿ ಲಗೇಜ್ ನನ್ನು ಉಚಿತವಾಗಿ ಮತ್ತು 50 ಕೆಜಿಗೆ ಶುಲ್ಕವನ್ನು ಪಾವತಿಸುವ ಮೂಲಕ ಗರಿಷ್ಟ 100 ಕೆಜಿ ಲಗೇಜ್ ಗಳನ್ನು ಸಾಗಿಸಬಹುದು.