Tag: Lucky House

  • ಲಕ್ಕಿ ಹೌಸ್‍ಗೆ ಮರಳಿದ ಸಿದ್ದರಾಮಯ್ಯ

    ಲಕ್ಕಿ ಹೌಸ್‍ಗೆ ಮರಳಿದ ಸಿದ್ದರಾಮಯ್ಯ

    ಬೆಂಗಳೂರು: ಕಳೆದ ಆರೂವರೆ ವರ್ಷದಿಂದ ವಾಸವಿದ್ದ ಕಾವೇರಿ ನಿವಾಸ ಖಾಲಿ ಮಾಡಿ ಹೊಸ ಸರ್ಕಾರಿ ಬಂಗಲೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಶಿಫ್ಟ್ ಆಗಿದ್ದಾರೆ. ಕುಮಾರ ಕೃಪ ಅನೆಕ್ಷ್ಚರ್ ಒನ್ ಸಿದ್ದರಾಮಯ್ಯ ಶಿಫ್ಟ್ ಆಗಿರುವ ಲಕ್ಕಿ ಹೌಸ್. ವಿಪಕ್ಷ ನಾಯಕರಾಗಿದ್ದಾಗ 4 ವರ್ಷಗಳ ಕಾಲ ಇದೇ ನಿವಾಸದಲ್ಲಿ ಸಿದ್ದರಾಮಯ್ಯ ವಾಸವಾಗಿದ್ದರು. ಈ ನಿವಾಸದಲ್ಲಿದ್ದಾಗಲೆ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. ಸಿಎಂ ಆದ ನಂತರ ಕಾವೇರಿ ನಿವಾಸಕ್ಕೆ ಶಿಫ್ಟ್ ಆಗಿದ್ದರು.

    ಕಾವೇರಿ ನಿವಾಸಕ್ಕೆ ಸಿಎಂ ಯಡಿಯೂರಪ್ಪ ಬರಲು ತೀರ್ಮಾನಿಸಿದ ನಂತರ ಸಿದ್ದರಾಮಯ್ಯ ಗೆ ಕುಮಾರಕೃಪ ನಿವಾಸ ಎಂದ ನಿಗದಿ ಮಾಡಲಾಗಿತ್ತು. ಆದರೆ ಈ ನಿವಾಸದಲ್ಲಿದ್ದ ಮಾಜಿ ಸಚಿವ ಹೆಚ್.ಡಿ ರೇವಣ್ಣ ಮನೆ ಖಾಲಿ ಮಾಡಲು ತಡ ಮಾಡಿದ್ದರು. ಅತ್ತ ಕಾವೇರಿ ನಿವಾಸ ಬದಲಿಸಲು ಮನಸಿಲ್ಲದ ಸಿದ್ದರಾಮಯ್ಯ ಸಹ ಸತಾಯಿಸಿದ್ದರು. ಲೋಕೋಪಯೋಗಿ ಅಧಿಕಾರಿಗಳು ಸಿದ್ದರಾಮಯ್ಯ ನಿವಾಸದ ಬೋರ್ಡ್ ಕಿತ್ತು ಹಾಕಿದ್ದು ವಿವಾದವಾಗಿತ್ತು.

    ವಿಪಕ್ಷ ನಾಯಕರಾಗಿ ಹೋಗಿದ್ದ ನೀವು ಅದೇ ಲಕ್ಕಿ ನಿವಾಸದಿಂದಾಗಿ ಸಿಎಂ ಆಗಿದ್ದೀರಿ. ಈಗ ಅದೇ ನಿವಾಸಕ್ಕೆ ಶಿಫ್ಟ್ ಆದರೆ ಪುನಃ ಅದೃಷ್ಟ ಒಲಿಯಬಹುದು ಎಂದು ಸಿದ್ದರಾಮಯ್ಯರನ್ನು ಆಪ್ತರು ಒತ್ತಾಯಿಸಿದ್ದರು ಎನ್ನಲಾಗಿದೆ. ಹೀಗಾಗಿ ಕುಟುಂಬ ಮತ್ತು ಆಪ್ತರ ಒತ್ತಾಯದ ಮೇರೆಗೆ ಸಿದ್ದರಾಮಯ್ಯನವರು ಕುಮಾರಕೃಪಾಕ್ಕೆ ಶಿಫ್ಟ್ ಆಗಿದ್ದಾರೆ. ಇಂದು ಬೆಳಗ್ಗೆಯೇ ಸಿದ್ದರಾಮಯ್ಯನವರ ಪತ್ನಿ ಕುಮಾರಕೃಪಾದಲ್ಲಿ ವಿಶೇಷ ಪೂಜೆಯನ್ನು ಸಹ ಮಾಡಿಸಿದ್ದಾರೆ.

  • ಲಕ್ಕಿ ನಿವಾಸಕ್ಕೆ ಬಿಎಸ್‍ವೈ ಶಿಫ್ಟ್ – ಭರದಿಂದ ಸಾಗಿದೆ ಸುಣ್ಣ, ಬಣ್ಣ ಹೊಡೆಯುವ ಕೆಲಸ

    ಲಕ್ಕಿ ನಿವಾಸಕ್ಕೆ ಬಿಎಸ್‍ವೈ ಶಿಫ್ಟ್ – ಭರದಿಂದ ಸಾಗಿದೆ ಸುಣ್ಣ, ಬಣ್ಣ ಹೊಡೆಯುವ ಕೆಲಸ

    ಶ್ರೀನಿವಾಸ್ ರಾವ್ ದಳವೆ
    ಬೆಂಗಳೂರು: ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾದರೂ ತಮ್ಮ ಹಳೇಯ ಲಕ್ಕಿ ನಿವಾಸವನ್ನು ಬಿಎಸ್.ಯಡಿಯೂರಪ್ಪ ಬಿಡುತ್ತಿಲ್ಲ. ಇದೀಗ ಮರಳಿ ‘ರೇಸ್ ವ್ಯೂ ಕಾಟೇಜ್’ಗೆ ತೆರಳಲು ಸಿದ್ಧತೆ ನಡೆಸಿದ್ದು, ಸುಣ್ಣ, ಬಣ್ಣ ಬಳಿಯುವ ಕಾರ್ಯ ಭರದಿಂದ ಸಾಗುತ್ತಿದೆ.

    ಬಿ.ಎಸ್.ಯಡಿಯೂರಪ್ಪನವರು, ಮುಖ್ಯಮಂತ್ರಿಯಾದರೂ ಗೃಹ ಕಚೇರಿ ಕೃಷ್ಣಾದಲ್ಲಿ ನೆಲೆಸದೆ, ತಮ್ಮ ಹಳೇ ರೇಸ್ ಕೋರ್ಸ್ ನಿವಾಸಕ್ಕೆ ಮರಳಲು ನಿರ್ಧರಿಸಿದ್ದಾರೆ. ರೇಸ್ ಕೋರ್ಸ್ ರಸ್ತೆಯಲ್ಲಿರುವ ‘ರೇಸ್ ವ್ಯೂ ಕಾಟೇಜ್’ ನಲ್ಲಿ ವಾಸ್ತವ್ಯ ಹೂಡಲು ಎಲ್ಲ ತಯಾರಿ ನಡೆಸಿದ್ದು, ಸುಣ್ಣ-ಬಣ್ಣ ಹೊಡೆಯುವ ಕೆಲಸ ಪ್ರಾರಂಭವಾಗಿದೆ.

    ಈ ಹಿಂದೆಯೂ ಸಿಎಂ ಆಗಿದ್ದಾಗ ಯಡಿಯೂರಪ್ಪನವರು ಅದೇ ನಿವಾಸದಲ್ಲಿದ್ದರು. ಅಲ್ಲದೆ, 2004ರಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾಗಲೂ ಇದೇ ನಿವಾಸದಲ್ಲಿ ವಾಸವಾಗಿದ್ದರು. ಇದೇ ಮನೆಯಲ್ಲಿಯೇ ಇದ್ದಾಗ ಬಿಎಸ್‍ವೈ ಉಪ ಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿ ಗದ್ದುಗೆಯನ್ನು ಏರಿದ್ದರು. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪರಿಗೆ `ರೇಸ್ ವ್ಯೂ ಕಾಟೇಜ್’ ಅದೃಷ್ಟ ಮನೆ ಎಂದು ಹೇಳಲಾಗುತ್ತಿದೆ.

    ಸಮ್ಮಿಶ್ರ ಸರ್ಕಾರ ಬಂದ ಸಮಯದಲ್ಲಿ ಯಡಿಯೂರಪ್ಪ ವಿರೋಧ ಪಕ್ಷದ ನಾಯಕರಾಗಿದ್ದಾಗಲೂ ನನಗೆ ಇದೇ ಮನೆ ಬೇಕು ಎಂದು ಸಿಎಂ ಕುಮಾರಸ್ವಾಮಿಗೆ ಮನವಿ ಮಾಡಿದ್ದರು. ಆದರೆ, ಯಡಿಯೂರಪ್ಪನವರ ಮನವಿಯನ್ನು ತಿರಸ್ಕರಿಸಿ ಶಿವಾನಂದ ಸರ್ಕಲ್ ಬಳಿಯ ನಿವಾಸವನ್ನು ಬಿಎಸ್‍ವೈ ನೀಡಿದ್ದರು. ಆದರೆ, ಯಡಿಯೂರಪ್ಪ ಮಾತ್ರ ಶಿವಾನಂದ ಸರ್ಕಲ್ ಬಳಿ ನಿವಾಸಕ್ಕೆ ಹೋಗಿರಲಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದ ಸಾರಾ ಮಹೇಶ್ ನನಗೆ ರೇಸ್ ಕೋರ್ಸ್ ಮನೆಯೇ ಬೇಕು ಎಂದು ಹಠ ಹಿಡಿದು, ಅದೇ ಮನೆ ಪಡೆದಿದ್ದರು. ಬದಲಾದ ಕಾಲ ಘಟ್ಟದಲ್ಲಿ ಮತ್ತೆ ಯಡಿಯೂರಪ್ಪ ಸಿಎಂ ಆಗಿದ್ದು, ಮಾಜಿ ಸಚಿವರಾಗಿದ್ದ ಸಾರಾ ಮಹೇಶ್ ಮನೆ ಖಾಲಿ ಮಾಡಬೇಕಾಗಿದೆ.

    ಲಕ್ಕಿ ಮನೆ ಯಾಕೆ?
    ಒಂದು ರೀತಿಯಲ್ಲಿ ಬಿಎಸ್‍ವೈಗೆ ಇದು ಲಕ್ಕಿ ಮನೆ ಎಂದು ಹೇಳಲಾಗುತ್ತಿದ್ದು, ಇನ್ನು ಮನೆಯ ವಾತಾವರಣವೂ ಸಹ ಉತ್ತಮವಾಗಿದೆ. ಹೀಗಾಗಿ ಬಹುತೇಕ ನಾಯಕರು ಇದೇ ಮನೆ ಬೇಕು ಎನ್ನುತ್ತಾರೆ ಎಂದು ತಿಳಿದು ಬಂದಿದೆ. ಈ ಲಕ್ಕಿ ಮನೆಯಲ್ಲಿ ಉತ್ತಮವಾದ ಪರಿಸರ ವಾತಾವರಣ ಇದೆ. ಅಲ್ಲದೆ, ವಾಕಿಂಗ್ ಪಾಥ್, ಹುಲ್ಲು ಹಾಸು, ಬೃಹತ್ ಮರಗಳ ನೆರಳು ಈ ರೇಸ್ ಕೋರ್ಸ್ ನಿವಾಸದಲ್ಲಿ ಇದೆ. ಹೀಗಾಗಿ ಯಡಿಯೂರಪ್ಪ ಅವರಿಗೆ ಈ ಮನೆ ಇಷ್ಟ ಆಗಿದೆ. 2008ರಲ್ಲಿ ಸಿಎಂ ಆದಾಗ ಯಡಿಯೂರಪ್ಪ ಇದೇ ಮನೆಯಲ್ಲಿ ಇದ್ದರು. ಈ ಮನೆಗೆ ಬಂದ ಮೇಲೆ ಸಿಎಂ ಸ್ಥಾನ ಸಿಕ್ಕಿತು ಎಂಬ ನಂಬಿಕೆ ಯಡಿಯೂರಪ್ಪ ಅವರಿಗೆ ಇದೆ. ಹೀಗಾಗಿ ಮತ್ತೆ ತಮ್ಮ ಅದೃಷ್ಟದ ಮನೆಗೆ ಹೋಗುತ್ತಿದ್ದಾರೆ.

  • ಶೀಘ್ರವೇ ಅಂಬಿ ಲಕ್ಕಿ ಮನೆಗೆ ಸುಮಲತಾ ಶಿಫ್ಟ್

    ಶೀಘ್ರವೇ ಅಂಬಿ ಲಕ್ಕಿ ಮನೆಗೆ ಸುಮಲತಾ ಶಿಫ್ಟ್

    ಮಂಡ್ಯ: ನಟಿ ಸುಮಲತಾ ಅವರು ತಮ್ಮ ಪತಿ ಅಂಬರೀಶ್ ಅವರ ಲಕ್ಕಿ ಮನೆಗೆ ಶೀಘ್ರವೇ ಶಿಫ್ಟ್ ಆಗಲಿದ್ದಾರೆ.

    ಮಂಗಳವಾರ ರಾತ್ರಿ ಮಂಡ್ಯದ ಚಾಮುಂಡೇಶ್ವರಿ ನಗರದ 3ನೇ ಕ್ರಾಸ್ ನಲ್ಲಿರುವ ಅಂಬಿ ಲಕ್ಕಿ ಮನೆಗೆ ಸುಮಲತಾ ಭೇಟಿ ನೀಡಿದ್ದರು. ಈ ವೇಳೆ ಅವರು ಮನೆ ಬಾಡಿಗೆ ಪಡೆಯಲು ಮಾಲೀಕರೊಂದಿಗೆ ಚರ್ಚೆ ನಡೆಸಿದ್ದಾರೆ. ಅಲ್ಲದೆ ಕಳೆದ ರಾತ್ರಿ ಮನೆಗೆ ಭೇಟಿ ನೀಡಿ ವೀಕ್ಷಣೆ ಮಾಡಿದ್ದಾರೆ.

    2013ರ ವಿಧಾನಸಭಾ ಚುನಾವಣೆಯಲ್ಲಿ ಅಂಬರೀಶ್ ಈ ಬಾಡಿಗೆ ಮನೆಯನ್ನು ಪಡೆದಿದ್ದರು. ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ರಮೇಶ್ ಬಂಡಿಸಿದ್ದೇಗೌಡ ಜೊತೆ ಸುಮಲತಾ ಮನೆಗೆ ಭೇಟಿ ನೀಡಿದ್ದರು. ಬಳಿಕ ಮನೆ ಮಾಲೀಕರ ಜೊತೆ ಚರ್ಚೆ ನಡೆಸಿ ಈ ವಾರದೊಳಗೆ ಮನೆ ಬಾಡಿಗೆ ಪಡೆದು, ಪ್ರವೇಶ ಮಾಡುವ ಕುರಿತು ಚರ್ಚೆ ಮಾಡಿದ್ದಾರೆ. ಮನೆ ಮಾಲೀಕ ಕೂಡ ಸುಮಲತಾಗೆ ಮನೆ ಬಾಡಿಗೆ ನೀಡಲು ಒಪ್ಪಿದ್ದಾರೆ ಎನ್ನಲಾಗಿದೆ.

    ಸತತ ಎರಡು ಸೋಲಿನ ಬಳಿಕ ಅಂಬಿಗೆ ಈ ಲಕ್ಕಿ ಮನೆ ಗೆಲುವು ತಂದುಕೊಟ್ಟಿದೆ. 2008ರ ವಿಧಾನಸಭೆ, 2009ರ ಲೋಕಸಭೆ ಚುನಾವಣೆಯಲ್ಲಿ ಅಂಬಿ ಸೋತಿದ್ದರು. 2013ರ ವಿಧಾನಸಭಾ ಚುನಾವಣೆಗೂ ಮುನ್ನ ಅಂಬಿ ಈ ಮನೆ ಬಾಡಿಗೆಗೆ ಪಡೆದಿದ್ದರು. ಈ ಮನೆಗೆ ಬಂದ ಬಳಿಕ ಚುನಾವಣೆಯಲ್ಲಿ ಗೆದ್ದು ಸಚಿವರಾಗಿದ್ದರು. ಸಚಿವ ಸ್ಥಾನ ಕಳೆದುಕೊಂಡ ಬಳಿಕ ಅಂಬಿ ಮನೆ ಖಾಲಿ ಮಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv