Tag: Lucky car

  • ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ‘ಲಕ್ಕಿ’ ಕಾರ್ ಸಮಾಧಿ – ಅಂತ್ಯಸಂಸ್ಕಾರಕ್ಕೆ 4 ಲಕ್ಷ ಖರ್ಚು, 1,500 ಮಂದಿ ಭಾಗಿ

    ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ‘ಲಕ್ಕಿ’ ಕಾರ್ ಸಮಾಧಿ – ಅಂತ್ಯಸಂಸ್ಕಾರಕ್ಕೆ 4 ಲಕ್ಷ ಖರ್ಚು, 1,500 ಮಂದಿ ಭಾಗಿ

    ಗಾಂಧೀನಗರ: ಗುಜರಾತ್‌ನ ಕುಟುಂಬವೊಂದು ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಸಮಾಧಿ ಮಾಡುವ ಮೂಲಕ ತಮ್ಮ ಪ್ರೀತಿಯ 12 ವರ್ಷದ ಕಾರಿಗೆ ವಿದಾಯ ಹೇಳಿದೆ. ಅಮ್ರೇಲಿ ಜಿಲ್ಲೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸುಮಾರು 1,500 ಮಂದಿ ಭಾಗವಹಿಸಿದ್ದರು. ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

    ಲಕ್ಷಗಟ್ಟಲೆ ವೆಚ್ಚದಲ್ಲಿ ಅದ್ಧೂರಿ ಬೀಳ್ಕೊಡುಗೆ ಕಾರ್ಯಕ್ರಮ ಆಯೋಜಿಸಿತ್ತು, ಕಾರನ್ನು ಸಮಾಧಿ ಮಾಡುವ ಮುನ್ನ ವ್ಯಾಗನ್ ಆರ್ ಅನ್ನು ಹೂಮಾಲೆಗಳಿಂದ ಅಲಂಕಾರಗಳಿಂದ ಅಲಂಕರಿಸಲಾಗಿತ್ತು. ಹಸಿರು ಬಟ್ಟೆಯಿಂದ ಹೊದಿಸಿದ ನಂತರ, ಸಾಂಪ್ರದಾಯಿಕ ಪೂಜೆಯನ್ನು ಮಾಡಿಲಾಯಿತು. ಪುರೋಹಿತರು ಮಂತ್ರಗಳನ್ನು ಪಠಿಸುತ್ತಿದ್ದಂತೆ ಗುಲಾಬಿ ದಳಗಳಿಂದ ಧಾರೆ ಎರೆದು ಸಮಾಧಿ ಮಾಡಲಾಯಿತು. ಜನರು ಈ ಕಾರ್ ವೈರಲ್ ಕ್ಲಿಪ್‌ಗಳನ್ನು ನೋಡಿ ‘ಲಕ್ಕಿ’ ಕಾರ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

    ಸಮಾರಂಭದ ಹಿಂದಿನ ಭಾವನಾತ್ಮಕ ಸಂಬಂಧವನ್ನು ಕಾರಿನ ಮಾಲೀಕ ಸಂಜಯ್ ಪಲ್ಲೋರ ವಿವರಿಸಿದರು. ಸೂರತ್‌ನಲ್ಲಿ ನಿರ್ಮಾಣ ವ್ಯವಹಾರ ನಡೆಸುತ್ತಿರುವ ಪಲ್ಲೋರ, ತಮ್ಮ ಕುಟುಂಬದ ಯಶಸ್ಸಿನಲ್ಲಿ ಕಾರು ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿಕೊಂಡಿದ್ದಾರೆ.

    ನಾನು ಈ ಕಾರನ್ನು ಸುಮಾರು 12 ವರ್ಷಗಳ ಹಿಂದೆ ಖರೀದಿಸಿದೆ. ಇದು ಕುಟುಂಬಕ್ಕೆ ಸಮೃದ್ಧಿಯನ್ನು ತಂದಿತು. ನಾವು ವ್ಯಾಪಾರದಲ್ಲಿ ಅಪಾರ ಯಶಸ್ಸನ್ನು ಕಂಡಿದ್ದೇವೆ. ನಮ್ಮ ಸಾಮಾಜಿಕ ಸ್ಥಿತಿ ಸುಧಾರಿಸಿದೆ. ಅದನ್ನು ಮಾರಾಟ ಮಾಡುವ ಬದಲು, ಅದು ನಮಗೆ ತಂದ ಅದೃಷ್ಟಕ್ಕೆ ಗೌರವವಾಗಿ ‘ಸಮಾಧಿ’ ನೀಡಲು ನಾವು ಆಯ್ಕೆ ಮಾಡಿಕೊಂಡಿದ್ದೇವೆ ಎಂದು ಪಲ್ಲೋರ ಹೇಳಿದರು.

  • ಅದೃಷ್ಟದ ವಾಹನದಲ್ಲೇ ಬಿಎಸ್‍ವೈ ‘ಕಾರು’ಬಾರು

    ಅದೃಷ್ಟದ ವಾಹನದಲ್ಲೇ ಬಿಎಸ್‍ವೈ ‘ಕಾರು’ಬಾರು

    ಬೆಂಗಳೂರು: ಆಪರೇಷನ್ ಕಮಲ ಮಾಡಿದ್ದೂ ಆಯ್ತು, ಯಡಿಯೂರಪ್ಪ ಸಿಎಂ ಆಗಿದ್ದು ಆಯ್ತು. ಆದರೆ ಬಿಎಸ್‍ವೈ ಸಿಎಂ ಆಗಿದ್ದು ಮಾತ್ರ ತಮ್ಮ ಅದೃಷ್ಟದ ಕಾರಿನಿಂದಲೇ ಎನ್ನುವ ಮಾತು ಕೇಳಿ ಬರುತ್ತಿದೆ. ಹೀಗಾಗಿ ಹೊಸ ಕಾರಿನ ಬದಲು ಬಿಎಸ್‍ವೈ ಹಳೇ ಕಾರನ್ನೇ ಬಳಸುತ್ತಾ ಕಾರುಬಾರು ನಡೆಸುತ್ತಿದ್ದಾರೆ.

    ಯಡಿಯೂರಪ್ಪ ಅವರು ಸಿಎಂ ಆಗಿ 9 ದಿನ ಕಳೆದಿದೆ. ಆದರೂ ಹಳೇ ಕಾರನ್ನು ಅವರು ಬಳಸುತ್ತಿದ್ದಾರೆ. ಅದು ಅದೃಷ್ಟದ ಕಾರು ಎನ್ನುವುದೆ ಇದಕ್ಕೆ ಕಾರಣವಾಗಿದೆ. ಅಧಿಕಾರಕ್ಕೆ ಬಂದ ಮೇಲೆ ಹೊಸ ಕಾರು ಕೊಟ್ಟರೂ ಕೂಡ ತೆಗೆದುಕೊಳ್ಳದೆ ವಿರೋಧ ಪಕ್ಷದ ನಾಯಕರಾಗಿದ್ದಾಗ ಬಳಸುತ್ತಿದ್ದ ಹಳೇ ಕಾರನ್ನೇ ಯಡಿಯೂರಪ್ಪನವರು ಬಳಸುತ್ತಿದ್ದಾರೆ. ಇದನ್ನೂ ಓದಿ:ಲಕ್ಕಿ ನಿವಾಸಕ್ಕೆ ಬಿಎಸ್‍ವೈ ಶಿಫ್ಟ್ – ಭರದಿಂದ ಸಾಗಿದೆ ಸುಣ್ಣ, ಬಣ್ಣ ಹೊಡೆಯುವ ಕೆಲಸ

    ಯಡಿಯೂರಪ್ಪನವರು ವಿಪಕ್ಷ ನಾಯಕನಾಗಿದ್ದಾಗ ಕೆಎ 01 ಜಿ 6309 ನೋಂದಣಿ ಸಂಖ್ಯೆಯ ಟಯೋಟಾ ಫಾರ್ಚೂನರ್ ಕಾರನ್ನು ನೀಡಲಾಗಿತ್ತು. ಈ ಕಾರು ಬಳಕೆ ಮಾಡೋಕೆ ಶುರು ಮಾಡಿದ ಮೇಲೆ ಯಡಿಯೂರಪ್ಪ ಅವರ ರಾಜಕೀಯದ ಅದೃಷ್ಟ ಖುಲಾಯಿಸಿದೆ ಎನ್ನಲಾಗಿದೆ. ಆದ್ದರಿಂದಾಗಿಯೇ ಲೋಕಸಭಾ ಚುನಾವಣೆಯಲ್ಲಿ 25 ಸ್ಥಾನ ಗೆದ್ದಿದ್ದು, ಆಪರೇಷನ್ ಕಮಲ ಕೈ ಹಿಡಿದಿದ್ದು ಜೊತೆಗೆ ನಾಲ್ಕನೇ ಬಾರಿಗೆ ಮುಖ್ಯಮಂತ್ರಿ ಹುದ್ದೆ ಏರಿದ್ದು ಅನ್ನೋದು ಯಡಿಯೂರಪ್ಪ ಅವರ ಬಲವಾದ ನಂಬಿಕೆಯಾಗಿದೆ ಎಂದು ಆಪ್ತರು ಹೇಳುತ್ತಾರೆ.

    ಹೀಗಾಗಿಯೇ ಮುಖ್ಯಮಂತ್ರಿಯಾದರೂ ಯಡಿಯೂರಪ್ಪ ಅವರು ಮಾತ್ರ ಇಲ್ಲಿವರೆಗೂ ಹಳೇ ಟಯೋಟಾ ಫಾರ್ಚುನರ್ ಕಾರನ್ನು ಬದಲಾಯಿಸೋಕೆ ಮನಸ್ಸೇ ಮಾಡಿಲ್ಲ. ಈ ಹಿಂದೆ ಸಿಎಂ ಆಗಿದ್ದ ಎಚ್.ಡಿ ಕುಮಾರಸ್ವಾಮಿ ಅವರಿಗೆ ಕಪ್ಪು ಬಣ್ಣದ ಕಾರ್ ಅದೃಷ್ಟವಾಗಿದ್ದರೆ, ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕಾಗೆ ಕುಳಿತಿದ್ದ ಅಪಶಕುನ ಎಂದು ವ್ಯಾಪಕ ಚರ್ಚೆ ನಡೆದಿತ್ತು.