Tag: lucknow

  • ತಾಯಿ ಶವದೊಂದಿಗೆ 10 ದಿನ ಮನೆಯಲ್ಲೇ ಕಾಲ ಕಳೆದ ಮಗಳು

    ತಾಯಿ ಶವದೊಂದಿಗೆ 10 ದಿನ ಮನೆಯಲ್ಲೇ ಕಾಲ ಕಳೆದ ಮಗಳು

    ಲಕ್ನೋ: ಯುವತಿಯೊಬ್ಬಳು ತನ್ನ ತಾಯಿಯ ಶವದೊಂದಿಗೆ 10 ದಿನ ಮನೆಯೊಳಗೆ ಕಾಲ ಕಳೆದ ಘಟನೆ ಲಕ್ನೋದ ಇಂದಿರಾ ನಗರದಲ್ಲಿ ನಡೆದಿದೆ.

    ಮೃತ ದುರ್ದೈವಿಯನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‍ಎಎಲ್)ನಿಂದ ನಿವೃತ್ತಿಯಾಗಿರುವ ಸುನೀತಾ ದೀಕ್ಷಿತ್ ಎಂದು ಗುರುತಿಸಲಾಗಿದೆ. ಒಂದು ಕೋಣೆಯಲ್ಲಿ 26 ವರ್ಷದ ಅಂಕಿತಾ ದೀಕ್ಷಿತ್ ವಾಸವಾಗಿದ್ದರೆ, ಸುನೀತ ದೀಕ್ಷಿತ್ ಅವರ ಶವ ಮತ್ತೊಂದು ಕೋಣೆಯಲ್ಲಿ ಬಿದ್ದಿತ್ತು. ಅಲ್ಲದೇ ತನ್ನ ತಾಯಿ ಮೃತಪಟ್ಟಿರುವ ಬಗ್ಗೆ ಕುಟುಂಬಸ್ಥರಿಗೆ ಕೂಡ ಯುವತಿ ಮಾಹಿತಿ ನೀಡಿಲ್ಲ. ಆದರೆ ಮನೆಯಿಂದ ವಾಸನೆ ಬರುತ್ತಿರುವುದನ್ನು ಗಮನಿಸಿದ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದಾಗ ಘಟನೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಆಜಾನ್ ವಿರೋಧಿಸಿ ಜಮ್ಮು ಕಾಲೇಜು ವಿದ್ಯಾರ್ಥಿಗಳಿಂದ ಹನುಮಾನ್ ಚಾಲೀಸಾ ಪಠಣ

    crime

    ನಂತರ ಸ್ಥಳಕ್ಕಾಗಮಿಸಿದ ಲಕ್ನೋ ಪೊಲೀಸರು ಮೃತ ಸುನೀತಾ ದೀಕ್ಷಿತ್ ಶವವನ್ನು ಹೊರತೆಗೆದಿದ್ದಾರೆ. ಮೊದಲಿಗೆ ಪೊಲೀಸರು ಬಂದಾಗ ಮನೆಯ ಬಾಗಿಲಿಗೆ ಬೀಗ ಹಾಕಿರುವುದು ಕಂಡು ಬಂದಿತು. ಆದರೆ ಮನೆಯೊಳಗೆ ಯುವತಿ ಧ್ವನಿಯನ್ನು ಕೇಳಿಸಿಕೊಂಡ ಪೊಲೀಸರು, ಬಾಗಿಲನ್ನು ತಟ್ಟಿದ್ದಾರೆ. ಆದರೆ ಬಾಗಿಲು ತೆರೆಯಲು ಅಂಕಿತಾ ತಕರಾರು ಮಾಡಿದಾಗ, ಬೇರೆ ದಾರಿ ಕಾಣದೇ ಪೊಲೀಸರು ಬಡಗಿಯನ್ನು ಕರೆಸಿ ಬಾಗಿಲು ಒಡೆದು ಮನೆಯೊಳಗೆ ನುಗ್ಗಿದ್ದಾರೆ. ಈ ವೇಳೆ ಒಂದು ಕೋಣೆಯಲ್ಲಿ ಅಂಕಿತಾ ಮತ್ತೊಂದು ಕೋಣೆಯಲ್ಲಿ ಆಕೆಯ ತಾಯಿ ಬಿದ್ದಿರುವುದನ್ನು ನೋಡಿದ್ದಾರೆ. ಅಲ್ಲದೇ ಅಂಕಿತಾ ಮಾನಸಿಕ ಸ್ಥಿತಿ ಉತ್ತಮವಾಗಿಲ್ಲ ಎಂದು ತಿಳಿದುಬಂದಿದೆ.

    ಇದೀಗ ಪೊಲೀಸರು ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಮುಂದಿನ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಶಾಲೆ ಇಲ್ಲದೇ 2 ವರ್ಷದಿಂದ ಮನೆ-ಮನೆ ಅಲೆಯುತ್ತಿರುವ ಶಿಕ್ಷಕರು, ಮಕ್ಕಳು

    ಸದ್ಯ ಮಹಿಳೆ ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಎಚ್‍ಎಎಲ್‍ನ ನಿವೃತ್ತ ಇಂಜಿನಿಯರ್ ಸುನೀತಾ 10 ವರ್ಷಗಳ ಹಿಂದೆ ಪತಿ ರಜನೀಶ್ ದೀಕ್ಷಿತ್‍ಗೆ ವಿಚ್ಛೇದನ ನೀಡಿದ್ದರು. ನಂತರ ಕ್ಯಾನ್ಸರ್ ಸಮಸ್ಯೆಯಿಂದ ಹೋರಾಡುತ್ತಿದ್ದಳು ಮತ್ತು ತನ್ನ 26 ವರ್ಷದ ಮಗಳ ಸಹಾಯದಿಂದ.

  • ಜೈಲಿನಿಂದ ಬಿಡುಗಡೆಯಾಗ್ತಿದ್ದಂತೆ ಎನ್‍ಕೌಂಟರ್ ಬೆದರಿಕೆ ಹಾಕಲಾಗ್ತಿದೆ ಅಂತ ಅಜಂ ಖಾನ್ ಆರೋಪ

    ಜೈಲಿನಿಂದ ಬಿಡುಗಡೆಯಾಗ್ತಿದ್ದಂತೆ ಎನ್‍ಕೌಂಟರ್ ಬೆದರಿಕೆ ಹಾಕಲಾಗ್ತಿದೆ ಅಂತ ಅಜಂ ಖಾನ್ ಆರೋಪ

    ಲಕ್ನೋ: ನನಗೆ ಎನ್‍ಕೌಂಟರ್ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಸೀತಾಪುರ ಜೈಲಿನಿಂದ ಹೊರಬಂದ ನಂತರ ಎಸ್‍ಪಿ ನಾಯಕ ಅಜಂ ಖಾನ್ ಆರೋಪಿಸಿದ್ದಾರೆ.

    ಈ ಕುರಿತು ರಾಂಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆತ್ಮೀಯರು ಸಾಕಷ್ಟು ಬಾರಿ ನನ್ನನ್ನು ಹತ್ಯೆಗೈಯಲು ಪ್ರಯತ್ನಪಟ್ಟಿದ್ದಾರೆ. ಆದರೂ ನಾನು ಬದುಕುಳಿದಿದ್ದೇನೆ. ನನಗೆ ಎನ್‍ಕೌಂಟರ್ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ನಾನು ಯಾವಾಗಲೂ ನನ್ನ ನಂಬಿಕೆಯನ್ನು ಸಾಬೀತುಪಡಿಸಲು ಪ್ರಯತ್ನಿಸಿದೆ. ಆದರೆ ಯಾರು ಅದಕ್ಕೆ ಸಾಥ್ ನೀಡಲಿಲ್ಲ. ಸುಪ್ರೀಂ ಕೋರ್ಟ್‍ನಿಂದ ನನಗೆ ನ್ಯಾಯ ಸಿಕ್ಕಿದೆ. ನನ್ನ ವಿನಾಶಗಳಲ್ಲಿ ನನ್ನದೇ ಕೈ ಇದೆ. ನನ್ನದೇ ಜನರ ಕೊಡುಗೆ ದೊಡ್ಡದು ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಮದುವೆ ಮನೆಯಲ್ಲಿ ಕರಿಮಣಿ ಪೋಣಿಸಿದ ಶಾಸಕ ರೇಣುಕಾಚಾರ್ಯ

    ಜ್ಞಾನವಾಪಿ ವಿವಾದದ ಕುರಿತು ಪ್ರತಿಕ್ರಿಯಿಸಿದ ಅವರು, ಈ ವಿಷಯವು ಬಾಬರಿ ಮಸೀದಿಗಿಂತ ಸ್ವಲ್ಪ ಭಿನ್ನವಾಗಿದೆ. ಏಕೆಂದರೆ ಅದರ ವಿಚಾರಣೆಯು 2-3 ವಾರಗಳಲ್ಲಿ ಮುಗಿದಿದೆ. ಬಾಬರಿ ಮಸೀದಿ ಪ್ರಕರಣವು ಮುಗಿದು ವರ್ಷಗಳೇ ಕಳೆದಿವೆ. ಈ ಬಗ್ಗೆ ಈಗ ನಾನೀಗ ಮಾತನಾಡುವುದು ತಪ್ಪು. ?ಕೆಲವರು ದೇಶದ ವಾತಾವರಣ ಹಾಳು ಮಾಡುವ ಕೆಲಸ ಮಾಡುತ್ತಾರೆ ಎಂದು ಹೇಳಿದರು.

    ಮತ್ತೊಂದೆಡೆ, ವಿರೋಧ ಪಕ್ಷದ ನಾಯಕ ಎಂದು ಏಕೆ ನಿಮ್ಮನ್ನ ಹೆಸರಿಸಲಿಲ್ಲ ಎಂಬ ಪ್ರಶ್ನೆಗೆ ಮಾತನಾಡಿ, ಯಾಕೆಂದರೆ ನಾನು ಅವರಿಗಿಂತ ದೊಡ್ಡ ನಾಯಕ ಎಂದು ಉತ್ತರಿಸಿದರು. ಇನ್ನೂ ಮುಂಬರುವ ಉಪಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ತಿಳಿಸಿದರು.

    ಅನೇಕ ಪ್ರಕರಣಗಳಲ್ಲಿ ಅಜಂ ಖಾನ್ ಅವರು ಕಳೆದ ಕನಿಷ್ಠ 27 ತಿಂಗಳಿನಿಂದ ಜೈಲು ವಾಸ ಅನುಭವಿಸುತ್ತಿದ್ದರು. ಇದರಲ್ಲಿ ಭೂ ಕಬಳಿಕೆ, ವಂಚನೆ ಪ್ರಕರಣಗಳು ಸೇರಿವೆ. ರಾಂಪುರ ವಿಧಾನಸಭೆ ಕ್ಷೇತ್ರದ ಶಾಸಕರಾಗಿರುವ ಅಜಂ ಖಾನ್ ಅವರ ವಿರುದ್ಧದ 89ನೇ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಸಿಕ್ಕಿದೆ. ಇದನ್ನೂ ಓದಿ: ಹೊರಗುತ್ತಿಗೆ ನೇಮಕಾತಿಯಲ್ಲಿ ಇನ್ಮುಂದೆ 33% ಮಹಿಳೆಯರಿಗೆ ಮೀಸಲು

    ಉತ್ತರ ಪ್ರದೇಶದ ಸೀತಾಪುರ ಜೈಲಿನಲ್ಲಿ 27 ತಿಂಗಳುಗಳನ್ನು ಕಳೆದ ನಂತರ ಅಜಂ ಖಾನ್ ಶುಕ್ರವಾರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಸೀತಾಪುರ ಜೈಲಿನಿಂದ ಅವರನ್ನು ಕರೆದೊಯ್ಯಲು ಇಬ್ಬರು ಪುತ್ರರು, ಶಿವಪಾಲ್ ಯಾದವ್ ಮತ್ತು ಎಲ್ಲಾ ಬೆಂಬಲಿಗರು ಸ್ಥಳದಲ್ಲಿ ಹಾಜರಿದ್ದರು. ಸೀತಾಪುರದಲ್ಲಿರುವ ಎಸ್‍ಪಿಯ ಮಾಜಿ ಶಾಸಕ ಅನೂಪ್ ಗುಪ್ತಾ ಅವರ ಮನೆಯಲ್ಲಿ ಉಪಹಾರ ಸೇವಿಸಿದ ನಂತರ ಅವರು ರಾಂಪುರದಲ್ಲಿರುವ ತಮ್ಮ ಮನೆಗೆ ತೆರಳಿದರು.

    ಅವರ ಬಿಡುಗಡೆಯ ಸಂದರ್ಭದಲ್ಲಿ ಅವರ ಪಕ್ಷದ ಎಸ್‍ಪಿಯ ಯಾವ ದೊಡ್ಡ ನಾಯಕರೂ ಇರಲಿಲ್ಲ. ಆದರೆ ಎಸ್‍ಪಿ ಅಧ್ಯಕ್ಷ ಅಖಿಲೇಶ್ ಟ್ವೀಟ್ ಮಾಡುವ ಮೂಲಕ ಅಜಂ ಬಿಡುಗಡೆಯನ್ನು ಸ್ವಾಗತಿಸಿದ್ದಾರೆ. ಅಲ್ಲದೆ ಎಸ್‍ಪಿಯ ಹಿರಿಯ ನಾಯಕ ಜಾಮೀನಿನ ಮೇಲೆ ಬಿಡುಗಡೆಯಾದ ಆಜಂ ಖಾನ್ ಜೀ ಅವರಿಗೆ ಹೃತ್ಪೂರ್ವಕ ಸ್ವಾಗತ. ಜಾಮೀನಿನ ಈ ನಿರ್ಧಾರದಿಂದ ಸುಪ್ರೀಂ ಕೋರ್ಟ್ ನ್ಯಾಯಕ್ಕೆ ಹೊಸ ಮಾನದಂಡಗಳನ್ನು ನೀಡಿದೆ. ಉಳಿದೆಲ್ಲ ಸುಳ್ಳು ಪ್ರಕರಣಗಳು ಮತ್ತು ಪ್ರಕರಣಗಳಲ್ಲಿ ಅವರು ಖುಲಾಸೆಯಾಗುತ್ತಾರೆ ಎಂಬ ಭರವಸೆ ಇದೆ. ಸುಳ್ಳಿಗೆ ಕ್ಷಣಗಳಿವೆ, ಶತಮಾನಗಳಲ್ಲ ಎಂದು ಹೇಳಿದರು.

  • ಕೇಂದ್ರ ಸಚಿವ ಅಜಯ್ ಮಿಶ್ರಾ ಥೇನಿ ಸೋದರಳಿಯ ರಸ್ತೆ ಅಪಘಾತದಲ್ಲಿ ದುರ್ಮರಣ

    ಕೇಂದ್ರ ಸಚಿವ ಅಜಯ್ ಮಿಶ್ರಾ ಥೇನಿ ಸೋದರಳಿಯ ರಸ್ತೆ ಅಪಘಾತದಲ್ಲಿ ದುರ್ಮರಣ

    ಲಕ್ನೋ: ಕೇಂದ್ರ ಗೃಹ ಖಾತೆ ಸಚಿವ ಅಜಯ್ ಮಿಶ್ರಾ ಥೇನಿ ಅವರ ಸೋದರಳಿಯ ರಸ್ತೆ ಅಪಘಾತದಲ್ಲಿ ಇಂದು ಮೃತಪಟ್ಟಿದ್ದಾರೆ.

    ಸೋನು ಮಿಶ್ರಾ ಮೃತ ದುರ್ದೈವಿ. ಲಖಿಂಪುರ ಖೇರಿ ಜಿಲ್ಲೆಯಲ್ಲಿ ಸಂಜೆ 5:10ರ ಸುಮಾರಿಗೆ ಬೀಸಿದ ಪ್ರಬಲ ಬಿರುಗಾಳಿಯಿಂದ ಈ ದುರ್ಘಟನೆ ನಡೆದಿದೆ.

    ಸೋನು ಅವರು ಇಂದು ತಮ್ಮ ಮೋಟಾರ್ ಸೈಕಲ್‍ನಲ್ಲಿ ಬನ್ವಾರಿಪುರದಿಂದ ಲಖಿಂಪುರಕ್ಕೆ ಬರುತ್ತಿದ್ದರು. ಈ ವೇಳೆ ಖಂಬರಖೇಡ ಸಕ್ಕರೆ ಕಾರ್ಖಾನೆ ಬಳಿ ಜೋರಾಗಿ ಬಿರುಗಾಳಿ ಬೀಸಿದೆ. ಈ ಸಂದರ್ಭದಲ್ಲಿ ರಸ್ತೆ ಬದಿಯ ಮರವೊಂದು ಸೋನು ಅವರ ಬೈಕ್ ಮೇಲೆ ಬಿದ್ದಿದೆ. ಪರಿಣಾಮ ಬೈಕ್ ಸಮೇತ ಸೋನು ಮರದಡಿ ಅಪ್ಪಚ್ಚಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಜಮ್ಮು-ಕಾಶ್ಮೀರ ಗಡಿಯುದ್ದಕ್ಕೂ ಕಾಡ್ಗಿಚ್ಚು – ನೆಲಬಾಂಬ್‌ಗಳು ಸ್ಫೋಟ

    ಘಟನೆ ನಡೆದ ಕೂಡಲೇ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಹೇಗೋ ಮರವನ್ನು ಕಡಿದು ತೆಗೆದು, ಅವರ ಮೃತ ದೇಹವನ್ನು ತೆಗೆದರು. ಸ್ವಲ್ಪ ಸಮಯದ ನಂತರ ಮೃತಪಟ್ಟಿರುವುದು ಕೇಂದ್ರ ಗೃಹ ಖಾತೆ ಸಚಿವ ಅಜಯ್ ಮಿಶ್ರಾ ಥೇನಿ ಅವರ ಸೋದರಳಿಯ ಸೋನು ಮಿಶ್ರಾ ಎಂದು ಜನರಿಗೆ ತಿಳಿದುಬಂದಿದೆ. ಇದನ್ನೂ ಓದಿ: ಅಸ್ಸಾಂನಲ್ಲಿ ಪ್ರವಾಹ – 4 ಲಕ್ಷಕ್ಕೂ ಅಧಿಕ ಮಂದಿಗೆ ಹಾನಿ, ಕೊಚ್ಚಿಹೋದ ರಸ್ತೆ, ರೈಲು ಹಳಿ

    ಇತ್ತ ಅಜಯ್ ಮಿಶ್ರಾ ಥೇನಿ ಗುರುವಾರ ಪ್ರಯಾಗರಾಜ್‍ಗೆ ಬರಬೇಕಿತ್ತು. ಆದರೆ ಸೋದರಳಿಯನ ಮರಣದ ಸುದ್ದಿ ಕೇಳಿ ತಮ್ಮ ಎಲ್ಲಾ ಕೆಲಸವನ್ನು ಬಿಟ್ಟು ಅಂತಿಮ ಸಂಸ್ಕಾರಕ್ಕಾಗಿ ಅವರು ಲಖಿಂಪುರ ಖೇರಿಗೆ ತೆರಳಿದ್ದಾರೆ.

  • ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಎಫ್‍ಸಿಐನ ನಿವೃತ್ತ ಉದ್ಯೋಗಿ

    ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಎಫ್‍ಸಿಐನ ನಿವೃತ್ತ ಉದ್ಯೋಗಿ

    ಲಕ್ನೋ: ವ್ಯಕ್ತಿಯೊಬ್ಬರು ತಮ್ಮ ಪರವಾನಗಿ ಪಡೆದ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪ್ರಯಾಗರಾಜ್‍ನ ಶಾಹಗಂಜ್ ಪ್ರದೇಶದಲ್ಲಿ ನಡೆದಿದೆ.

    ಸ್ವರಣ್ ಸಿಂಗ್ (62) ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಸ್ವರಣ್ ಅವರು ಭಾರತೀಯ ಆಹಾರ ನಿಗಮದ (ಎಫ್‍ಸಿಐ) ನಿವೃತ್ತ ಉದ್ಯೋಗಿಯಾಗಿದ್ದರು. ನಿವೃತ್ತ ಅಧಿಕಾರಿ ಬಾತ್ರೂಮ್‍ಗೆ ಬೀಗ ಹಾಕಿಕೊಂಡು ತನ್ನ ಪರವಾನಗಿ ಪಡೆದ ಬಂದೂಕಿನಿಂದ ಗುಂಡು ಹಾರಿಸಿಕೊಂಡಿದ್ದಾರೆ. ಪರವಾನಗಿ ಪಡೆದ 0.12 ಡಿಬಿಬಿಎಲ್ ಬಂದೂಕು ಆತ್ಮಹತ್ಯೆಗೆ ಬಳಸಲಾಗಿದ್ದು, ಅದನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಬೇಲ್‌ನಿಂದ ಹೊರಬಂದು ಮದುವೆಯಾಗು ಎಂದ – ರೌಡಿ ಅಂತ ರಿಜೆಕ್ಟ್‌ ಮಾಡಿದ್ದಕ್ಕೆ ಪ್ರೇಯಸಿಯನ್ನೇ ಕೊಂದ

    ಪೊಲೀಸರ ಪ್ರಕಾರ, ಕೆಲವು ಆಸ್ತಿ ವಿವಾದಗಳು ಮತ್ತು ಕೌಟುಂಬಿಕ ಸಮಸ್ಯೆಗಳಿಂದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಗುಂಡಿನ ಸದ್ದು ಕೇಳಿದ ಕುಟುಂಬಸ್ಥರು ಬಾತ್ ರೂಮ್‍ಗೆ ಧಾವಿಸಿ ನೋಡಿದಾಗ ಮೃತದೇಹ ಪತ್ತೆಯಾಗಿದೆ. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದರೂ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಗುಂಡಿನ ದಾಳಿ ನಡೆಸಿ ಕಾಶ್ಮೀರಿ ಪಂಡಿತನನ್ನು ಹತ್ಯೆಗೈದ ಉಗ್ರರು

    ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

  • ಲಿವ್ ಇನ್ ರಿಲೇಶನ್‍ಶಿಪ್‍ನಲ್ಲಿದ್ದು ಮದುವೆ ಅಂದಾಗ ಮನೆಯಿಂದ ಹೊರಹಾಕ್ದ!

    ಲಿವ್ ಇನ್ ರಿಲೇಶನ್‍ಶಿಪ್‍ನಲ್ಲಿದ್ದು ಮದುವೆ ಅಂದಾಗ ಮನೆಯಿಂದ ಹೊರಹಾಕ್ದ!

    ಲಕ್ನೋ: ಮದುವೆಯ ನೆಪದಲ್ಲಿ ಕಳೆದ ಎರಡು ವರ್ಷಗಳಿಂದ ಯುವತಿಯನ್ನು ದೈಹಿಕವಾಗಿ ನಿಂದಿಸಿದ ಆರೋಪಿಯೊಬ್ಬನನ್ನು ಲಕ್ನೋ ಪೊಲೀಸರು ಬಂಧಿಸಿದ್ದಾರೆ.

    police (1)

    ರಾಹುಲ್ ಮಿಶ್ರಾ ಬಂಧಿತ ಆರೋಪಿ. ಆರೋಪಿಯು ಲಕ್ನೋದ ಮಡಿಯಾನ್ ಪ್ರದೇಶದಲ್ಲಿ ಯುವತಿಯೊಂದಿಗೆ ಕಳೆದ ಎರಡು ವರ್ಷಗಳಿಂದ ಬಾಡಿಗೆ ಮನೆಯಲ್ಲಿ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದನು. ಆಕೆಯ ಮೇಲೆ ದೈಹಿಕ ಹಲ್ಲೆ ನಡೆಸಿದ್ದಲ್ಲದೇ ಅವಳು ಗರ್ಭಿಣಿಯಾದಾಗ, ಆರೋಪಿಯು ಅವಳನ್ನು ಬಲವಂತವಾಗಿ ಗರ್ಭಪಾತಕ್ಕೆ ಒಳಪಡಿಸಿದ್ದನು. ಯುವತಿಯು ಮದುವೆಯಾಗುವಂತೆ ಒತ್ತಡ ಹೇರಿದಾಗ ಆಕೆಯನ್ನು ಮನೆಯಿಂದ ಹೊರ ಹಾಕಿದ್ದಾನೆ. ಇದನ್ನೂ ಓದಿ: ಕೋವಿಡ್ ವಾರಿಯರ್ ಆಗಿ ಕೆಲಸ ಮಾಡಿದ್ದ ಆಟೋ ಚಾಲಕನ ಮೇಲೆ ರೇಪ್ ಆರೋಪ

    ಮಹಿಳೆಯ ದೂರಿನ ಆಧಾರದ ಮೇಲೆ ಆರೋಪಿ ವಿರುದ್ಧ ಐಪಿಸಿಯ ಸಂಬಂಧಿತ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಇದನ್ನೂ ಓದಿ: ಉಗುರಿನಲ್ಲಿದ್ದ ರಕ್ತದ ಕಲೆಯಿಂದಾಗಿ ಕೊಲೆ ಮಾಡಿದ್ದ ವ್ಯಕ್ತಿ ಸಿಕ್ಕಿಬಿದ್ದ!

    ಉತ್ತರ ವಲಯ ಡಿಸಿಪಿ ಎಸ್.ಚಿನಪ್ಪ ಅವರ ಪ್ರಕಾರ, ಸಂತ್ರಸ್ತೆಯು ಆರೋಪಿಯ ವಿರುದ್ಧ ದೂರು ನೀಡಿದ್ದು, ನಂತರ ಆರೋಪಿಯನ್ನು ಬಂಧಿಸಲಾಗಿದೆ. ಇದಲ್ಲದೆ ವಿಚಾರಣೆಯ ಸಮಯದಲ್ಲಿ ಅವನು ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.

  • ಮಗುವಿನೊಂದಿಗೆ ತಾಯಿ ಆರಾಮವಾಗಿ ಪ್ರಯಾಣಿಸಲು ರೈಲ್ವೆ ಇಲಾಖೆಯಿಂದ ವಿಶೇಷ ಕೊಡುಗೆ

    ಮಗುವಿನೊಂದಿಗೆ ತಾಯಿ ಆರಾಮವಾಗಿ ಪ್ರಯಾಣಿಸಲು ರೈಲ್ವೆ ಇಲಾಖೆಯಿಂದ ವಿಶೇಷ ಕೊಡುಗೆ

    ಲಕ್ನೋ: ಮಗುವಿನೊಂದಿಗೆ ಪ್ರಯಾಣಿಸುವ ತಾಯಂದಿರು ಆರಾಮದಾಯಕವಾಗಿ ಪ್ರಯಾಣಿಸಲು ಭಾರತೀಯ ರೈಲ್ವೆ ಇಲಾಖೆಯು ಆಯ್ದ ರೈಲುಗಳಲ್ಲಿ ಮಡಚಬಹುದಾದ ಬೇಬಿ ಬರ್ತ್‍ನ್ನು ಪರಿಚಯಿಸಿದೆ.

    ಉತ್ತರ ರೈಲ್ವೆಯ ಲಕ್ನೋ ಮತ್ತು ದೆಹಲಿ ವಿಭಾಗಗಳ ಸಹಯೋಗದಲ್ಲಿ ಈ ನೂತನ ಪ್ರಯತ್ನವನ್ನು ಮಾಡಿದ್ದಾರೆ. ಇದನ್ನು ಲಕ್ನೋ ಮೇಲ್ ಸೂಪರ್ ಎಕ್ಸ್‌ಪ್ರೆಸ್ ರೈಲಿನ ಎಸಿ ಬೋಗಿಯಲ್ಲಿ ಇದನ್ನು ಅಳವಡಿಸಲಾಗಿದೆ. ಇದರಿಂದಾಗಿ ತಾಯಂದಿರು ತಮ್ಮ ಮಕ್ಕಳೊಂದಿಗೆ ಆರಾಮವಾಗಿ ಮಲಗುತ್ತಾರೆ.

    TRAIN

    ಈ ಬಗ್ಗೆ ಉತ್ತರ ರೈಲ್ವೆ ತನ್ನ ಅಧಿಕೃತ ಖಾತೆಯಲ್ಲಿ ಈ ಕುರಿತು ಟ್ವೀಟ್ ಮಾಡಿದ್ದು, ಮಗುವಿನ ಸೀಟ್‌ ಕೆಲವು ಫೋಟೋಗಳನ್ನು ಸಹ ಹಂಚಿಕೊಂಡಿದೆ. ಇದರಲ್ಲಿ ಮಗುವಿನ ಆಸನವು ಮಡಚಬಹುದಾದ ಮತ್ತು ಮಗುವಿನೊಂದಿಗೆ ಸುರಕ್ಷಿತವಾಗಿ ಪ್ರಯಾಣ ಮಾಡಬಹುದಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ತಾಜ್ ಮಹಲ್ ನಿಜಕ್ಕೂ ವಿಶ್ವದ ಅದ್ಭುತ: ಭಾರತದ ಭೇಟಿಯನ್ನು ನೆನಪಿಸಿಕೊಂಡ ಮಸ್ಕ್

    ಮಗು ಮಲಗುವಾಗ ಸೀಟಿನಿಂದ ಕೆಳಗೆ ಬೀಳದ ರೀತಿಯಲ್ಲಿ ಮಗುವಿನ ಸೀಟ್‌ನ್ನು ಜೋಡಿಸಲಾಗಿದೆ. ಇದು ಮಗು ಬೀಳದಂತೆ ಭದ್ರಪಡಿಸಲು ಪಟ್ಟಿಗಳನ್ನು ಹೊಂದಿದೆ. ಇದನ್ನು ಹಂತಹಂತವಾಗಿ ಎಲ್ಲಾ ರೈಲಿನಲ್ಲೂ ಅಳವಡಿಸಲು ಚಿಂತಿಸಿದೆ. ಇದನ್ನೂ ಓದಿ: ರಷ್ಯಾದಿಂದ ಅಗ್ಗದ ದರದಲ್ಲಿ ಎಲ್‌ಎನ್‌ಜಿ ಖರೀದಿಸಿದ ಭಾರತ

  • 11 ವರ್ಷದ ಬಾಲಕನ ಮೇಲೆ ಮದರಸಾದ ಮುಫ್ತಿಯಿಂದ ಅತ್ಯಾಚಾರ ಆರೋಪ!

    11 ವರ್ಷದ ಬಾಲಕನ ಮೇಲೆ ಮದರಸಾದ ಮುಫ್ತಿಯಿಂದ ಅತ್ಯಾಚಾರ ಆರೋಪ!

    ಲಕ್ನೋ: 11 ವರ್ಷದ ಬಾಲಕನ ಮೇಲೆ ಮದರಸಾದ ಮುಫ್ತಿಯೊಬ್ಬ ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಮಾವನ ತಾಲೂಕಿನಲ್ಲಿ ನಡೆದಿದೆ.

    ಸತ್ಲದ ನಿವಾಸಿಯಾದ ಮದರಸಾದ ಮುಫ್ತಿ ಅಬ್ದುಲ್ ಕಲಾಂ ಶಿಕ್ಷಣದ ಹೆಸರಿನಲ್ಲಿ ಮೂಲತಃ ಸಹರಾನ್‍ಪುರದ ಸಂತ್ರಸ್ತ ಬಾಲಕನಿಗೆ ದೌರ್ಜನ್ಯ ಎಸಗುತ್ತಿದ್ದರು ಎನ್ನಲಾಗಿದೆ. ಈದ್ ಹಬ್ಬದಂದು ಮನೆಗೆ ತೆರಳಿದ್ದ 11 ವರ್ಷದ ಬಾಲಕ ತನ್ನ ಕುಟುಂಬಸ್ಥರಿಗೆ 7 ತಿಂಗಳ ನಂತರ ನೋವಿನ ಬಗ್ಗೆ ಹೇಳಿಕೊಂಡಿದ್ದಾನೆ.

    ಈ ಕುರಿತು ಸಂತ್ರಸ್ತ ಬಾಲಕನ ತಂದೆ ಶನಿವಾರ ಪೊಲೀಸ್ ಠಾಣೆಗೆ ಆಗಮಿಸಿ ಆರೋಪಿ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸದ್ಯ ಮುಫ್ತಿ ತಲೆಮರೆಸಿಕೊಂಡಿದ್ದಾನೆ.

    ಮುಫ್ತಿ, ಮೀರತ್‍ನ ಮಾವಾನಾದ ಇಕ್ರಮ್ ನಗರ ಫರೀದ್ ಕಾಲೋನಿಯಲ್ಲಿರುವ ಮದರಸಾದ ನಿರ್ದೇಶಕನಾಗಿದ್ದಾನೆ. ಅವನು ಮಕ್ಕಳಿಗೆ ತರಬೇತಿ ನೀಡುತ್ತಿದ್ದು, ಸುತ್ತಮುತ್ತಲಿನ ಪ್ರದೇಶದ ಜೊತೆಗೆ ಇತರ ಹಲವು ಜಿಲ್ಲೆಗಳ ಮಕ್ಕಳು ಸಹ ಈ ಮದರಸಾದಲ್ಲಿ ಉಳಿದುಕೊಂಡು ಶಿಕ್ಷಣ ಪಡೆಯುತ್ತಿದ್ದಾರೆ. ಇದರಲ್ಲಿ ಸಂತ್ರಸ್ತ ಬಾಲಕನೂ ಇದ್ದಾನೆ. ಬಾಲಕನು ಸುಮಾರು 7 ತಿಂಗಳ ಹಿಂದೆ ಮದರಸಾದಲ್ಲಿ ಓದಲು ಬಂದಿದ್ದರು ಎಂದು ತಿಳಿದು ಬಂದಿದೆ.

    ಈದ್ ಹಬ್ಬದಂದು ಸಂತ್ರಸ್ತ ಬಾಲಕ ಮನೆಗೆ ಹೋದಾಗ ಆರೋಪಿ ಮುಫ್ತಿಯ ಕೃತ್ಯವನ್ನು ತನ್ನ ಕುಟುಂಬದ ಸದಸ್ಯರಿಗೆ ತಿಳಿಸಿದ್ದಾನೆ. ಹಬ್ಬ ಮುಗಿದ ಬಳಿಕ ಶನಿವಾರ ಮಧ್ಯಾಹ್ನ ಬಾಲಕನನ್ನು ಮನೆಯವರು ಮದರಸಾಕ್ಕೆ ಕರೆದೊಯ್ದರು. ಆದರೆ ಈ ಆರೋಪ ಸುಳ್ಳು ಎನ್ನುತ್ತಿದ್ದಾರೆ ಮದರಸಾದವರು.

    police (1)

    ಕೊನೆಗೆ ಸಂಜೆಯ ವೇಳೆಗೆ ವಿಷಯ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ದೂರು ಸ್ವೀಕರಿಸಿದ ಪೊಲೀಸರು ಸಂತ್ರಸ್ತ ಬಾಲಕನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಾರೆ. ಈ ಸಂಬಂಧ ಮುಫ್ತಿ ವಿರುದ್ಧ ಕೇಸ್ ದಾಖಲಾಗಿತ್ತು.

  • ಮಗಳ ಕತ್ತು ಸೀಳಿ ಹತ್ಯೆಗೈದ ಪಾಪಿ ತಂದೆ

    ಮಗಳ ಕತ್ತು ಸೀಳಿ ಹತ್ಯೆಗೈದ ಪಾಪಿ ತಂದೆ

    ಲಕ್ನೋ: ಪಾಪಿ ತಂದೆಯೊಬ್ಬ ಮಗಳ ಪ್ರೇಮ ಸಂಬಂಧಕ್ಕೆ ಕೋಪಗೊಂಡು ಯುವತಿಯ ಕತ್ತು ಸೀಳಿ ಹತ್ಯೆಗೈದ ಘಟನೆ ಉತ್ತರ ಪ್ರದೇಶದ ರಾಯ್ಬರೇಲಿಯಲ್ಲಿ ನಡೆದಿದೆ.

    ಜ್ಯೋತಿ (18) ಕೊಲೆಗಿಡಾದ ಯುವತಿ. ಆರೋಪಿ ವಿಜಯ್, ಗುರ್ಬಕ್ಷ್‍ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಕುರ್ಮಿಯಮಾವು ಗ್ರಾಮದಲ್ಲಿ ವಾಸಿಸುತ್ತಿದ್ದನು. ಆರೋಪಿ ಕೂಲಿ ಕೆಲಸ ಮಾಡುತ್ತಿದ್ದು, ತನ್ನ ಮನೆಯಲ್ಲಿಯೇ ಅಂಗಡಿಯೊಂದನ್ನು ನಡೆಸುತ್ತಿದ್ದನು. ಇದನ್ನೂ ಓದಿ: ಮಗಳನ್ನೇ ಅತ್ಯಾಚಾರ ಮಾಡುವ ಶಿಕ್ಷಕನಿಗೆ ಪತ್ನಿಯೂ ಸಾಥ್

    ಅವನ ಅಂಗಡಿಗೆ ಧಮೇಂದ್ರ ಎಂಬಾತ ನಿರಂತರವಾಗಿ ಭೇಟಿ ನೀಡುತ್ತಿದ್ದು, ಜ್ಯೋತಿಯೊಂದಿಗೆ ಪ್ರೇಮ ಸಂಬಂಧ ಬೆಳೆಸಿಕೊಂಡಿದ್ದನು. ಇದರಿಂದ ಕೋಪಗೊಂಡ ವಿಜಯ್ ತನ್ನ ಮಗಳನ್ನು ಗ್ರಾಮದ ಹೊರಗಿನ ಹೊಲದಲ್ಲಿ ಶೌಚಕ್ಕೆ ಹೋಗಿದ್ದ ವೇಳೆ ಚಾಕುವಿನಿಂದ ಕತ್ತು ಸೀಳಿ ಕೊಂದಿದ್ದಾನೆ. ಇದನ್ನೂ ಓದಿ: ರಾಜ್ಯದಲ್ಲಿ ದೇಶದ್ರೋಹಿ ಶಕ್ತಿ ಇನ್ನೂ ಜೀವಂತ ಅನ್ನೋದಕ್ಕೆ ಛೋಟಾ ಪಾಕಿಸ್ತಾನ ಘೋಷಣೆಯೇ ಸಾಕ್ಷಿ: ಮುತಾಲಿಕ್

    ಘಟನೆ ಕುರಿತು ಆರೋಪಿಯನ್ನು ಬಂಧಿಸಲಾಗಿದ್ದು, ಯುವತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಶ್ವಜೀತ್ ಶ್ರೀವಾಸ್ತವ ತಿಳಿಸಿದ್ದಾರೆ.

  • ಮೂಗಿ ಅಂತ ಹೀಯಾಳಿಸುತ್ತಿದ್ದ ಗಂಡನ ನಾಲಿಗೆಯನ್ನೇ ಹಲ್ಲಿನಿಂದ ಕಚ್ಚಿ ಕತ್ತರಿಸಿದ ಹೆಂಡತಿ!

    ಮೂಗಿ ಅಂತ ಹೀಯಾಳಿಸುತ್ತಿದ್ದ ಗಂಡನ ನಾಲಿಗೆಯನ್ನೇ ಹಲ್ಲಿನಿಂದ ಕಚ್ಚಿ ಕತ್ತರಿಸಿದ ಹೆಂಡತಿ!

    ಲಕ್ನೋ: ಮೂಗಿ ಎಂದು ಹೀಯಾಳಿಸುತ್ತಿದ್ದ ಪತಿಯ ನಾಲಿಗೆಯನ್ನೇ ಮಹಿಳೆಯೊಬ್ಬಳು ಹಲ್ಲಿನಿಂದ ಕಚ್ಚಿ ಕತ್ತರಿಸಿದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.

    ಶ್ರೀಪಾಲ್ ಮೌರ್ಯ ನಾಲಿಗೆ ಕಳೆದುಕೊಂಡ ವ್ಯಕ್ತಿ. ದಂಪತಿ ಒಂದು ವರ್ಷದ ಹಿಂದೆ ಬಿಹಾರದಲ್ಲಿ ಮದುವೆಯಾಗಿದ್ದರು. ಈತನ ಪತ್ನಿ ಮೂಗಿಯಾಗಿದ್ದಳು. ನಿನಗೆ ಮಾತನಾಡಲು ಬರುವುದಿಲ್ಲ ಎಂದು ಪತ್ನಿಯನ್ನು ಶ್ರೀಪಾಲ್ ಆಗಾಗ್ಗೆ ಹೀಯಾಳಿಸುತ್ತಿದ್ದ. ಇದನ್ನೂ ಓದಿ: 5 ವರ್ಷಗಳಿಂದ ತಾಯಿಯಾಗಲು ಪ್ರಯತ್ನಿಸಿ 4 ಬಾರಿ ಐವಿಎಫ್ ಚುಚ್ಚುಮದ್ದು ಪಡೆದ ನಟಿ

    ಬುಧವಾರ ಸಂಜೆ ಶ್ರೀಪಾಲ್ ಕೂಲಿ ಕೆಲಸ ಮುಗಿಸಿ ಮನೆಗೆ ಮರಳಿದಾಗ ಸುಸ್ತಾಗಿ ಬೇಗ ಮಲಗಿದ್ದ. ಈ ವೇಳೆ ಪತ್ನಿ ಆತನ ನಾಲಿಗೆಯನ್ನು ಹಲ್ಲುಗಳಿಂದ ಕತ್ತರಿಸಿದ್ದಾಳೆ. ನಾಲಿಗೆ ಕಳೆದುಕೊಂಡು ನೋವಿನಿಂದ ಶ್ರೀಪಾಲ್ ಚೀರಾಡಿದ್ದಾನೆ. ನಂತರ ಮನೆಯವರು ಜಮಾಯಿಸಿ ಬರೇಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಘಟನೆ ಬಗ್ಗೆ ಇಲ್ಲಿಯವರೆಗೆ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ. ಇದನ್ನೂ ಓದಿ: 70 ವಯಸ್ಸಿನ ಬುದ್ಧಿಮಾಂದ್ಯ ವೃದ್ಧೆಯನ್ನು ಅಪಹರಿಸಿ ಅತ್ಯಾಚಾರ

    ಈ ಪ್ರಕರಣ ಶೀಶ್‍ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಬಲ್ಲಿ ಗ್ರಾಮದಲ್ಲಿ ನಡೆದಿದೆ.

  • ಪೊಲೀಸ್ ಠಾಣೆಯಲ್ಲೇ ಅರೆನಗ್ನವಾಗಿ ಓಡಾಡಿದ ಹೆಡ್‍ಕಾನ್‍ಸ್ಟೇಬಲ್

    ಪೊಲೀಸ್ ಠಾಣೆಯಲ್ಲೇ ಅರೆನಗ್ನವಾಗಿ ಓಡಾಡಿದ ಹೆಡ್‍ಕಾನ್‍ಸ್ಟೇಬಲ್

    ಲಕ್ನೋ: ಉತ್ತರ ಪ್ರದೇಶದ ಪೋಲಿಸ್ ಠಾಣೆಯೊಂದರಲ್ಲಿ ಹೆಡ್‍ಕಾನ್‍ಸ್ಟೇಬಲ್ ಒಬ್ಬ ಒಳಉಡುಪಿನಲ್ಲಿಯೇ ತಿರುಗಾಡುತ್ತಿದ್ದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ವೀಡಿಯೋ ನೋಡಿದ ಠಾಣೆಯ ಎಸ್‍ಪಿ ಪೇದೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ವೈರಲ್ ಆದ ವೀಡಿಯೋ ನೌತನ್ವಾ ಪೊಲೀಸ್ ಠಾಣೆಯದ್ದಾಗಿದ್ದು, ಹೆಡ್‍ಕಾನ್‍ಸ್ಟೇಬಲ್ ಗಂಗೋತ್ರಿ ಯಾದವ್ ಎಂದು ತನಿಖೆಯಿಂದ ತಿಳಿದುಬಂದಿದೆ. ಇದನ್ನೂ ಓದಿ: ಸೀಬೆ ಹಣ್ಣು ಕೀಳಲು ಹೋಗಿ ಪ್ರಾಣ ಕಳೆದುಕೊಂಡ ಸಹೋದರಿಯರು

    ಭಾನುವಾರ ಸಂಜೆ ಇದ್ದಕ್ಕಿದ್ದಂತೆ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿತು. ವೀಡಿಯೋದಲ್ಲಿ ಪೊಲೀಸ್ ಠಾಣೆಯ ಹೆಡ್‍ಕಾನ್‍ಸ್ಟೇಬಲ್ ಒಳಉಡುಪು ಧರಿಸಿ ಆವರಣದಲ್ಲಿ ಓಡಾಡುತ್ತಿದ್ದನು. ಪೊಲೀಸ್ ಠಾಣೆಯಲ್ಲಿ ಮಹಿಳಾ ಪೊಲೀಸರನ್ನೂ ನಿಯೋಜಿಸಲಾಗಿದೆ. ಇದಲ್ಲದೇ ಮಹಿಳಾ ದೂರುದಾರರೂ ಅಲ್ಲಿಗೆ ಬರುತ್ತಿರುತ್ತಾರೆ. ಹೀಗಿರುವಾಗ ಆತ ಈ ರೀತಿ ಅರೆ ನಗ್ನವಾಗಿ ಓಡಾಡಿರುವುದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

    ವೀಡಿಯೋದಲ್ಲಿ, ಆತ ಪೊಲೀಸ್ ಠಾಣೆಯ ಕಚೇರಿಯ ಕಡೆಗೆ ಹೋಗುತ್ತಿರುವುದನ್ನು ಕಾಣಬಹುದಾಗಿದೆ. ಸ್ವಲ್ಪ ಸಮಯದ ನಂತರ ಅವನು ಕಚೇರಿಯಿಂದ ಹೊರನಡೆದಿದ್ದಾನೆ. ವಿಷಯ ತಿಳಿದ ಎಸ್‍ಪಿ ಡಾ.ಕೌಸ್ತುಭ್ ಅವರು, ತಕ್ಷಣವೇ ಪೇದೆ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಇದನ್ನೂ ಓದಿ: 5 ದಿನವಾದ್ರೂ ಸಿಗದ ಆ್ಯಸಿಡ್ ನಾಗನ ಸುಳಿವು- ಪಾಗಲ್ ಪ್ರೇಮಿಯ ಪ್ರೀಪ್ಲ್ಯಾನ್ ಕೇಳಿ ಪೊಲೀಸ್ರೇ ಶಾಕ್

    ಈ ಕುರಿತು ಎಸ್‍ಪಿ ಅವರು, ಎಲ್ಲ ಪೊಲೀಸರಿಗೂ ಸಮವಸ್ತ್ರ ಧರಿಸಿ ಶಿಸ್ತಿನಿಂದ ಇರುವಂತೆ ಸೂಚಿಸಿ ಆದೇಶ ಹೊರಡಿಸಿದ್ದಾರೆ. ಪೊಲೀಸ್ ಠಾಣೆ ಆವರಣದಲ್ಲಿ ಒಳ ಉಡುಪು ಧರಿಸುವುದು ಸಲ್ಲದು. ಅಲ್ಲಿಗೆ ಮಹಿಳೆಯರೂ ದೂರುಗಳೊಂದಿಗೆ ಬರುತ್ತಲೇ ಇರುತ್ತಾರೆ. ವೀಡಿಯೋ ಆಧಾರದ ಮೇಲೆ ಪೇದೆಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.