Tag: lucknow

  • ನವೆಂಬರ್‍ನಲ್ಲಿ ಉಡುಪಿಯಲ್ಲಿ ರಾಮಮಂದಿರಕ್ಕೆ ಮುಹೂರ್ತ: ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್

    ನವೆಂಬರ್‍ನಲ್ಲಿ ಉಡುಪಿಯಲ್ಲಿ ರಾಮಮಂದಿರಕ್ಕೆ ಮುಹೂರ್ತ: ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್

    ಲಕ್ನೋ: ರಾಮಮಂದಿರ ನಿರ್ಮಾಣ ಸಂಬಂಧವಾಗಿ ಉಡುಪಿಯಲ್ಲಿ ಸಾಧು ಸಂತರು ಮುಹೂರ್ತ ನಿಗದಿ ಮಾಡಲು ಮುಂದಾಗಿದ್ದಾರೆ.

    ನವೆಂಬರ್‍ನಲ್ಲಿ ಉಡುಪಿಯಲ್ಲಿ ಸಾಧು ಸಂತರ ಸಮ್ಮೇಳನ ನಡೆಯಲಿದೆ. ಈ ಸಮ್ಮೇಳನದಲ್ಲಿ ರಾಮ ಮಂದಿರ ನಿರ್ಮಾಣದ ದಿನಾಂಕವನ್ನು ನಿರ್ಧಾರ ಮಾಡಲಾಗುವುದು ಎಂದು ಉತ್ತರ ಪ್ರದೇಶದ ಉನೌನ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಹೇಳಿದ್ದಾರೆ.

    ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಉಡುಪಿ ಸಮ್ಮೇಳನದಲ್ಲಿ ದೇಶದ ನಾನಾ ಭಾಗದ ಸಾಧು ಸಂತರು ಭಾಗಿಯಾಗಿದ್ದಾರೆ. ಈ ವೇಳೆ ರಾಮಮಂದಿರ ನಿರ್ಮಾಣ ಸಂಬಂಧ ದೀರ್ಘ ಚರ್ಚೆ ನಡೆಯಲಿದೆ ಎಂದು ಹೇಳಿದರು.

    ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ಬಗ್ಗೆ ಹೆಚ್ಚು ವಿಳಂಬ ಮಾಡದೇ ದೇಶದ ಸಂತರು ಒಮ್ಮತಾಭಿಪ್ರಾಯ ಹೊಂದಿದ್ದಾರೆ ಎಂದು ಅವರು ತಿಳಿಸಿದರು.

  • ಋಷಿ ಮುನಿಗಳ ತಪಸ್ಸಿನ ಫಲ ಯೋಗ: ಮೋದಿ

    ಋಷಿ ಮುನಿಗಳ ತಪಸ್ಸಿನ ಫಲ ಯೋಗ: ಮೋದಿ

    ಲಖನೌ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಉತ್ತರ ಪ್ರದೇಶದ ಲಖನೌನಲ್ಲಿ 3ನೇ ಅಂತರಾಷ್ಟ್ರೀಯ ಯೋಗ ದಿನಕ್ಕೆ ಚಾಲನೆ ನೀಡಿದರು.

    ಇಂದು ವಿಶ್ವದ 180 ದೇಶಗಳಲ್ಲಿ ಯೋಗ ಫೆಸ್ಟ್ ಮಾಡಲಾಗುತ್ತಿದೆ. ಋಷಿ ಮುನಿಗಳ ತಪಸ್ಸಿನ ಫಲವೇ ಯೋಗವಾಗಿದೆ. ಯೋಗ ಇಂದಿನ ಆಧುನಿಕ ಜೀವನ ಶೈಲಿಗೆ ಮದ್ದು. ಅದನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದ್ರಿಂದ ನಿಷ್ಕ್ರೀಯಗೊಂಡಿರುವ ನಮ್ಮ ದೇಹದ ಅಂಗಗಳು ಚೈತನ್ಯ ಪಡೆದುಕೊಳ್ಳುತ್ತಿವೆ ಎಂದು ಮೋದಿ ತಿಳಿಸಿದರು.

    ಯೋಗ ನಾವೆಲ್ಲರೂ ಬದುಕಿನ ಮಾರ್ಗವಾಗಿದೆ. ಪ್ರತಿದಿನ ನಾವು ಊಟ ಮಾಡುವ ಅಡುಗೆಯಲ್ಲಿ ಉಪ್ಪು ಎಷ್ಟೋ ಮುಖ್ಯವೋ, ಜೀವನದಲ್ಲಿ ಯೋಗವೂ ಸಹ ಅಷ್ಟೇ ಪ್ರಾಮುಖ್ಯತೆಯನ್ನು ಹೊಂದಿದೆ. ದಿನಕ್ಕೆ ಒಂದು ಗಂಟೆಯಾದ್ರೂ ಯೋಗ ಮಾಡಲು ಜನರು ರೂಢಿಸಿಕೊಳ್ಳಬೇಕು ಎಂದು ಮೋದಿ ಆಶಯ ವ್ಯಕ್ತಪಡಿಸಿದರು.

    ಸಾವಿರಾರು ಜನರ ಜೊತೆ ಮೋದಿ ಯೋಗ ಮಾಡುತ್ತಿದ್ದು, ಈ ನಡುವೆ ಲಖನೌನಲ್ಲಿ ಮಳೆಯ ಮಧ್ಯೆಯೇ ಯೋಗ ಆರಂಭಿಸಿದ್ದಾರೆ. ಪ್ರಧಾನಿ ಮೋದಿ ಅವರಿಗೆ ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ರಾಜಕೀಯ ಗಣ್ಯರು, ಯೋಗ ಗುರುಗಳು ಸಾಥ್ ನೀಡಿದ್ದಾರೆ.

     

  • ಬಾಬರಿ ಮಸೀದಿ ಧ್ವಂಸ ಪ್ರಕರಣ – ಅಡ್ವಾಣಿ, ಉಮಾಭಾರತಿ ಸೇರಿ 12 ಮಂದಿಗೆ ಜಾಮೀನು

    ಬಾಬರಿ ಮಸೀದಿ ಧ್ವಂಸ ಪ್ರಕರಣ – ಅಡ್ವಾಣಿ, ಉಮಾಭಾರತಿ ಸೇರಿ 12 ಮಂದಿಗೆ ಜಾಮೀನು

    ಲಖನೌ: ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡರಾದ ಲಾಲ್ ಕೃಷ್ಣ ಅಡ್ವಾಣಿ, ಕೇಂದ್ರ ಸಚಿವೆ ಉಮಾಭಾರತಿ ಹಾಗೂ ಮುರಳಿ ಮನೋಹರ ಜೋಷಿ ಸೇರಿದಂತೆ ಪ್ರಕರಣದ 12 ಆರೋಪಿಗಳಿಗೆ ಸಿಬಿಐ ವಿಶೇಷ ನ್ಯಾಯಾಲಯ ಜಾಮೀನು ನೀಡಿದೆ.

    ಉತ್ತರ ಪ್ರದೇಶದ ಲಖನೌನಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ನ್ಯಾಯಮೂರ್ತಿ ಎಸ್ ಕೆ ಯಾದವ್ ನೇತೃತ್ವದಲ್ಲಿ ವಿಚಾರಣೆ ನಡೆಯಿತು. ಈ ಹಿಂದಿನ ವಿಚಾರಣೆಯಲ್ಲಿ ಆರೋಪಿಗಳು ಖುದ್ದಾಗಿ ಹಾಜರಾಗಬೇಕು. ಇಲ್ಲದಿದ್ದರೆ ಯಾವುದೇ ರೀತಿಯ ಮನವಿ ಮತ್ತು ಅರ್ಜಿಗಳನ್ನು ಸ್ಪೀಕರಿಸುವುದಿಲ್ಲ ಎಂದು ನ್ಯಾಯಮೂರ್ತಿ ಎಸ್.ಕೆ. ಯಾದವ್ ಸ್ಪಷ್ಟಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಎಲ್ಲ ಆರೋಪಿಗಳು ಇಂದು ವಿಚಾರಣೆಗೆ ಖುದ್ದು ಹಾಜರಾಗಿ, ಜಾಮೀನು ಅರ್ಜಿ ಸಲ್ಲಿಸಿದ್ದರು.

    ಬಾಬರಿ ಮಸೀದಿ ಧ್ವಂಸಕ್ಕೆ ಸಂಚು ರೂಪಿಸಿದ್ದರು ಎಂಬ ಆರೋಪದ ಮೇಲೆ ಕಳೆದ ಏಪ್ರಿಲ್ 19ರಂದು ಪ್ರಕರಣ ದಾಖಲಿಸುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು. ಪ್ರಕರಣದ ತನಿಖೆಯನ್ನು ಲಖನೌನಲ್ಲಿ ನಡೆಸಿ 2 ವರ್ಷದಲ್ಲಿ ತೀರ್ಪು ನೀಡುವಂತೆ ಆದೇಶ ನೀಡಿತ್ತು.

     

  • ಉತ್ತರಪ್ರದೇಶದಲ್ಲಿ ಕರ್ನಾಟಕ ಐಎಎಸ್ ಅಧಿಕಾರಿಯ ನಿಗೂಢ ಸಾವು

    ಉತ್ತರಪ್ರದೇಶದಲ್ಲಿ ಕರ್ನಾಟಕ ಐಎಎಸ್ ಅಧಿಕಾರಿಯ ನಿಗೂಢ ಸಾವು

    – ಜನ್ಮದಿನದಂದೇ ಶವವಾಗಿ ಪತ್ತೆಯಾದ ಅನುರಾಗ್ ತಿವಾರಿ

    ಲಕ್ನೋ: ಕರ್ನಾಟಕ ಕೇಡರ್‍ನ ಐಎಎಸ್ ಅಧಿಕಾರಿಯೊಬ್ಬರು ಉತ್ತರಪ್ರದೇಶದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ

    36 ವರ್ಷದ ಅನುರಾಗ್ ತಿವಾರಿ ಅವರ ಶವ ಉತ್ತರಪ್ರದೇಶದ ಹಜರತ್‍ಗಂಜ್‍ನಲ್ಲಿ ಪತ್ತೆಯಾಗಿದೆ. ಅನುರಾಗ್ ತಿವಾರಿ ಅವರ ಜನ್ಮದಿನವಾದ ಇಂದೇ ಇಲ್ಲಿನ ಮೀರಾ ಬಾಯಿ ಗೆಸ್ಟ್‍ಹೌಸ್ ಬಳಿ ಶವವಾಗಿ ಪತ್ತೆಯಾಗಿದ್ದಾರೆ. 2007ನೇ ಬ್ಯಾಚ್‍ನ ಐಎಎಸ್ ಅಧಿಕಾರಿಯಾಗಿರುವ ಇವರು ಸದ್ಯ ಆಹಾರ ಸರಬರಾಜು ಇಲಾಖೆಯ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ರು. ಉತ್ತರಪ್ರದೇಶದ ಬಾಹ್ರಿಯಾಚ್‍ನಲ್ಲಿ ನೆಲೆಸಿದ್ದು, ಎರಡು ದಿನಗಳಿಂದ ಮೀರಾಬಾಯಿ ಗೆಸ್ಟ್‍ಹೌಸ್‍ನಲ್ಲಿ ತಂಗಿದ್ರು ಎಂದು ವರದಿಯಾಗಿದೆ.

    ತಿವಾರಿ ಅವರ ಗಲ್ಲದ ಮೇಲೆ ಗಾಯದ ಗುರುತು ಪತ್ತೆಯಾಗಿದೆ. ಸದ್ಯ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಅನುರಾಗ್ ತಿವಾರಿ ಈ ಹಿಂದೆ ಬೀದರ್, ಕೊಡಗು ಜಿಲ್ಲಾಧಿಕಾರಿಯಾಗಿ, ತುಮಕೂರು ಪಾಲಿಕೆ ಆಯುಕ್ತರಾಗಿ, ಮಧುಗಿರಿ ಎಸಿಯಾಗಿ, ರಾಜ್ಯ ಹಣಕಾಸು ಇಲಾಖೆಯ ಉಪಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ರು.

    ಪಬ್ಲಿಕ್ ಟಿವಿಗೆ ಸಿಕ್ಕ ಮೂಲಗಳ ಮಾಹಿತಿ ಪ್ರಕಾರ ಅನುರಾಗ್ ತಿವಾರಿ ತಮ್ಮ ಪತ್ನಿಯಿಂದ ವಿಚ್ಛೇದನ ಪಡೆದಿದ್ದು, ಮಾನಸಿಕವಾಗಿ ವಿಚಲಿತವಾಗಿದ್ದರು. ಇದೀಗ ಮನೆಯವರ ಒತ್ತಾಯದ ಮೇರೆಗೆ 2ನೇ ಮದುವೆಯಾಗಲು ಒಪ್ಪಿ, ಅದೇ ಕಾರಣಕ್ಕಾಗಿ 4 ವಾರ ರಜೆ ಪಡೆದು ಉತ್ತರಪ್ರದೇಶಕ್ಕೆ ಹುಡುಗಿ ಹುಡುಕಲು ತೆರಳಿದ್ದರು ಎನ್ನಲಾಗಿದೆ. ಮಂಗಳವಾರದಂದು ಮೀರಾಬಾಯಿ ಗೆಸ್ಟ್ ಹೌಸ್‍ನ ಎಲ್‍ಡಿಎವಿಸಿ ಪ್ರಭುನಾರಾಯಣ್ ಅವರ ಕೊಠಡಿಯಲ್ಲಿ ಉಳಿದಿದ್ರು. ಆದ್ರೆ ಇಂದು ಬೆಳಗ್ಗೆ 8 ಗಂಟೆಗೆ ವಾಕಿಂಗ್ ಹೋಗಿದ್ದ ಅನುರಾಗ್ ತಿವಾರಿ ಶವವಾಗಿ ಪತ್ತೆಯಾಗಿದ್ದಾರೆ.

  • ಅಖಿಲೇಶ್ ಯಾದವ್ ಕಚೇರಿಯಲ್ಲಿ ರಾತ್ರೋ ರಾತ್ರಿ ರಾಹುಲ್ ಗಾಂಧಿ ಕಟೌಟ್ ಮಾಯ

    ಅಖಿಲೇಶ್ ಯಾದವ್ ಕಚೇರಿಯಲ್ಲಿ ರಾತ್ರೋ ರಾತ್ರಿ ರಾಹುಲ್ ಗಾಂಧಿ ಕಟೌಟ್ ಮಾಯ

    ಲಕ್ನೋ: ಉತ್ತರಪ್ರದೇಶದ ಲಕ್ನೋದಲ್ಲಿರುವ ಸಮಾಜವಾದಿ ಪಕ್ಷದ ಕಚೇರಿಯ ಎದುರು ಹಾಕಲಾಗಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯ ದೊಡ್ಡ ಕಟೌಟನ್ನು ರಾತ್ರೋ ರಾತ್ರಿ ತೆಗೆದು ಹಾಕಲಾಗಿದೆ. ರಾಹುಲ್ ಗಾಂಧಿ ಕಟೌಟ್ ಬದಲು ಅಖಿಲೇಶ್ ಯಾದವ್ ಅವರ ತಂದೆ ಮುಲಾಯಂ ಸಿಂಗ್ ಯಾದವ್ ಅವರ ಕಟೌಟ್ ಹಾಕಲಾಗಿದೆ.

    ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಉತ್ತರಪ್ರದೇಶದಲ್ಲಿ ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಹೇಳಲಾಗಿದೆ. ಆದ್ರೆ ಈ ಬಗ್ಗೆ ಶುಕ್ರವಾರದಂದು ಪ್ರತಿಕ್ರಿಯೆ ನೀಡಿದ್ದ ರಾಹುಲ್ ಗಾಂಧಿ ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ಮೈತ್ರಿಕೂಟವೇ ಗೆಲ್ಲುತ್ತದೆ. ಈ ಹಿಂದೆ ಬಿಹಾರದ ಚುನಾವಣೋತ್ತರ ಸಮೀಕ್ಷೆಗಳು ತಾಪ್ಪಾಗಿದ್ದವು ಎಂದು ಹೇಳಿದ್ದರು.

    ಆದರೆ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾದ ನಂತರ ಅಖಿಲೇಶ್ ಯಾದವ್, ಬಹುಜನ ಸಮಾಜವಾದಿ ಪಕ್ಷದ ಮಾಯಾವತಿ ಜೊತೆ ಮೈತ್ರಿ ಮಾಡಿಕೊಳ್ಳಲು ಸಿದ್ಧ ಎಂದು ಹೇಳಿದ್ದಾರೆ. ಇದಕ್ಕೆ ಮಾಯಾವತಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

  • ಲಕ್ನೋಗೆ ಶಂಕಿತ ಉಗ್ರರು ಎಂಟ್ರಿ: ಎಟಿಎಸ್ ಪೊಲೀಸರಿಂದ ಉಗ್ರರ ಬೇಟೆ ಕಾರ್ಯಾಚರಣೆ

    ಲಕ್ನೋಗೆ ಶಂಕಿತ ಉಗ್ರರು ಎಂಟ್ರಿ: ಎಟಿಎಸ್ ಪೊಲೀಸರಿಂದ ಉಗ್ರರ ಬೇಟೆ ಕಾರ್ಯಾಚರಣೆ

    ಲಕ್ನೋ: ಉತ್ತರಪ್ರದೇಶದಲ್ಲಿ ಕೊನೆ ಹಂತದ ಮತದಾನಕ್ಕೆ ಒಂದು ದಿನ ಬಾಕಿಯಿರುವಾಗಲೇ ಲಕ್ನೋದಲ್ಲಿ ಭಯೋತ್ಪಾದನ ನಿಗ್ರಹ ದಳ ಹಾಗೂ ಶಂಕಿತ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ.

    ನಗರದ ಹೊರವಲಯದಲ್ಲಿರುವ ಠಾಕೂರ್‍ಗಂಜ್‍ನ ಮನೆಯೊಂದರಲ್ಲಿ ಅಡಗಿರುವ ಶಂಕಿತ ಉಗ್ರರನ್ನು ಸೆರೆಹಿಡಿಯಲು ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇಲ್ಲಿನ ಅಕ್ಕಪಕ್ಕದ ನಿವಾಸಿಗಳನ್ನ ಈಗಾಗಲೇ ತೆರವುಗೊಳಿಸಲಾಗಿದ್ದು 20ಕ್ಕೂ ಹೆಚ್ಚು ಕಮಾಂಡೋಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮನೆಯಲ್ಲಿ ಒಬ್ಬನಿಗಿಂತ ಹೆಚ್ಚು ಶಂಕಿತ ಉಗ್ರರಿರುವ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.

    ಇಂದು ಬೆಳಿಗ್ಗೆ ಮಧ್ಯಪ್ರದೇಶದ ಭೋಪಾಲ್ ಉಜ್ಜೈನ್ ರೈಲಿನಲ್ಲಿ ನಡೆದ ಸ್ಫೋಟದಲ್ಲಿ ಕನಿಷ್ಠ 8 ಮಂದಿ ಗಾಯಗೊಂಡಿರುವ ಬೆನ್ನಲ್ಲೇ ಈ ದಾಳಿ ನಡೆದಿದೆ. ಶಂಕಿತ ಉಗ್ರರಿರುವ ಸ್ಥಳದ ಬಗ್ಗೆ ಕೇಂದ್ರ ಗುಪ್ತಚರ ಸಂಸ್ಥೆ ಮಾಹಿತಿ ನೀಡಿತ್ತು. ಇದನ್ನು ಆಧರಿಸಿ ಉತ್ತರಪ್ರದೇಶ ಪೊಲೀಸರು ಲಕ್ನೋ ಹಾಗೂ ಕಾನ್ಪುರಕ್ಕೆ ಎರಡು ತಂಡಗಳನ್ನು ಕಳಿಸಿದ್ದು, ಕಾನ್ಪುರದಲ್ಲಿ ಈಗಾಗಲೇ ಓರ್ವ ಶಂಕಿತನನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

    ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆ ನಾಳೆಗೆ ಅಂತ್ಯವಾಗಲಿದ್ದು, ಮಾರ್ಚ್ 11ರಂದು ಫಲಿತಾಂಶ ಹೊರಬೀಳಲಿದೆ.