Tag: lucknow

  • ತರಕಾರಿ ತರಲು ಮಹಿಳೆಯ ಜೊತೆ ಹೋಗಿ ಬಯಲಿನಲ್ಲಿ ಗ್ಯಾಂಗ್‍ರೇಪ್ ಎಸಗಿದ್ರು!

    ತರಕಾರಿ ತರಲು ಮಹಿಳೆಯ ಜೊತೆ ಹೋಗಿ ಬಯಲಿನಲ್ಲಿ ಗ್ಯಾಂಗ್‍ರೇಪ್ ಎಸಗಿದ್ರು!

    ಲಕ್ನೋ: 25 ವರ್ಷದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ಸೇಲಂಪುರದಲ್ಲಿ ನಡೆದಿದೆ.

    ಸಂತ್ರಸ್ತೆ ಮೂರು ವರ್ಷಗಳಿಂದ ತನ್ನ ಪತಿಯೊಂದಿಗೆ ಗ್ರೇಟರ್ ನೋಯ್ಡಾದಲ್ಲಿ ವಾಸಿಸುತ್ತಿದ್ದಾರೆ. ಅಲಿಗಢ ಮೂಲದ ಕಾರ್ಖಾನೆಯ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಮಹಿಳೆ ಮದುವೆಯಾಗಿದ್ದರು. ಆದರೆ ಫೆಬ್ರವರಿ 10 ಶನಿವಾರ ರಾತ್ರಿ ಮೂವರು ಕಾಮುಕರು ಸೇರಿ ಗ್ಯಾಂಗ್ ರೇಪ್ ಮಾಡಿದ್ದಾರೆ. ಈ ಬಗ್ಗೆ ಸಂತ್ರಸ್ತೆ ಸೋಮವಾರ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮೂರು ದಿನಗಳ ಹಿಂದೆ ಸಂತ್ರಸ್ತೆ ತನ್ನ ಕುಟುಂಬದೊಂದಿಗೆ ಮನೆ ಕೆಲಸಕ್ಕಾಗಿ ನೋಯ್ಡಾದ ಸ್ವರ್ಣ ನಗ್ರಿ ಪ್ರದೇಶಕ್ಕೆ ಬಂದಿದ್ದಾರೆ. ಅದೇ ಸಂಜೆ ಮಾಲೀಕರು ಸಂತ್ರಸ್ತ ಮಹಿಳೆಯನ್ನು ಒಬ್ಬ ವ್ಯಕ್ತಿಯ ಜೊತೆ ಸಮೀಪದ ಮಾರುಕಟ್ಟೆಯಲ್ಲಿ ತರಕಾರಿಗಳನ್ನು ತರುವಂತೆ ಸುಮಾರು 8 ಗಂಟೆಗೆ ಕಳುಹಿಸಿದ್ದಾರೆ. ಆದರೆ ಆ ವ್ಯಕ್ತಿ ಸೇಲಂಪುರಕ್ಕೆ ಕರೆದು ಕೊಂಡು ಹೋಗಿದ್ದಾನೆ. ಅಲ್ಲಿ ಇವರು ಹೋಗುವಷ್ಟರಲ್ಲಿ ಇಬ್ಬರು ಬಂದಿದ್ದು, ಬಳಿಕ ಮೂವರು ಸೇರಿ ರಾತ್ರಿ ಸುಮಾರು 11 ಗಂಟೆಯ ಅತ್ಯಾಚಾರ ಮಾಡಿದ್ದಾರೆ ಎಂದು ಕಸ್ನಾ ಪೊಲೀಸ್ ಠಾಣೆಯ ಅಧಿಕಾರಿ ಬಿಜೇಶ್ ಕುಮಾರ್ ವರ್ಮಾ ಹೇಳಿದ್ದಾರೆ.

    ಸ್ವರ್ಣ ನಗ್ರಿಯಿಂದ ಸೇಲಂಪುರಕ್ಕೆ ನನ್ನನ್ನು ಮೋಟಾರ್ ಸೈಕ್‍ನಲ್ಲಿ ಕರೆದುಕೊಂಡು ಹೋದನು. ಮಾರ್ಗ ಮಧ್ಯದಲ್ಲಿ ಪಂಚರ್ ಆಗಿದೆ ಎಂದು ಹೇಳಿ ಅಲ್ಲಿಂದ ಸ್ಕಾರ್ಪಿಯೋ ಕಾರಿನಲ್ಲಿ ಸೇಲಂಪುರದ ಬಯಲು ಪ್ರದೇಶಕ್ಕೆ ಕರೆದುಕೊಂಡು ಹೋದನು. ಅಲ್ಲಿ ಮೂವರು ಸೇರಿ ನನ್ನ ಮೇಲೆ ಅತ್ಯಾಚಾರ ಎಸಗಿದರು. ನಂತರ ನನ್ನನ್ನು ಅಲ್ಲೇ ಬಿಟ್ಟು ಹೋದರು. ನಾನು ಆಟೋರಿಕ್ಷಾದಲ್ಲಿ ಮನೆಗೆ ಹಿಂದಿರುಗಿದೆ ಎಂದು ಸಂತ್ರಸ್ತೆ ಪೊಲೀಸರಿಗೆ ತಿಳಿಸಿದ್ದಾರೆ. ಸ್ವರ್ಣ ನಗ್ರಿಯಿಂದ ಸೇಲಂಪುರಕ್ಕೆ ಸುಮಾರು 20 ಕಿ.ಮೀ. ದೂರವಿದೆ.

    ಈ ಘಟನೆ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ಮಾಡುತ್ತಿದ್ದೇವೆ. ಸಂತ್ರಸ್ತೆಗೆ ಘಟನೆಯ ಸ್ಥಳವನ್ನು ಗುರುತಿಸಲು ಕಷ್ಟಕರವಾಗುತ್ತಿದೆ. ಆದರೆ ಸಂತ್ರಸ್ತೆ ದೂರುಗಳಲ್ಲಿ ಉಲ್ಲೇಖಿಸಿದ ಮಾರ್ಗದ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸುತ್ತೇವೆ. ಅಷ್ಟೇ ಅಲ್ಲದೇ ಸಂತ್ರಸ್ತೆ ಮೊಬೈಲ್ ಫೋನ್ ಟ್ರೇಸ್ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದು ವರ್ಮಾ ಹೇಳಿದ್ದಾರೆ.

    ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 376 ಡಿ, 120 ಬಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಯಾರನ್ನು ಬಂಧಿಸಿಲ್ಲ ಎಂದು ತಿಳಿಸಿದ್ದಾರೆ.

  • ಉತ್ತರ ಪ್ರದೇಶ ಬೋರ್ಡ್ ಪರೀಕ್ಷೆಯ ಸ್ಟ್ರಿಕ್ಟ್ ರೂಲ್ಸ್ ಗೆ ಹೆದರಿ 10 ಲಕ್ಷ ವಿದ್ಯಾರ್ಥಿಗಳು ಗೈರು!

    ಉತ್ತರ ಪ್ರದೇಶ ಬೋರ್ಡ್ ಪರೀಕ್ಷೆಯ ಸ್ಟ್ರಿಕ್ಟ್ ರೂಲ್ಸ್ ಗೆ ಹೆದರಿ 10 ಲಕ್ಷ ವಿದ್ಯಾರ್ಥಿಗಳು ಗೈರು!

    ಲಕ್ನೋ: ಈ ಬಾರಿಯ ಉತ್ತರ ಪ್ರದೇಶದ ಬೋರ್ಡ್ ಪರೀಕ್ಷೆಯಲ್ಲಿ ಕಟ್ಟುನಿಟ್ಟಿನ ನಿಯಮವನ್ನು ಅಳವಡಿಸಿದ ಪರಿಣಾಮ ಕಳೆದ ನಾಲ್ಕು ದಿನಗಳಲ್ಲಿ 10 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಗೈರು ಹಾಜರಿ ಹಾಕಿದ್ದಾರೆ.

    ಭಾರೀ ಸಂಖ್ಯೆಯಲ್ಲಿ ಗೈರು ಹಾಜರಿ ಕಂಡು ಬಂದ ಪರಿಣಾಮ ಮುಂದೆ ಪರೀಕ್ಷಾ ಪ್ರಕ್ರಿಯೆಗಳನ್ನು ಸರಳಗೊಳಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

    ಪ್ರಧಾನಿ ಮೋದಿ ಅವರ `ಎಕ್ಸಾಂ ವಾರಿಯರ್’ ಹಿಂದಿ ಅವತರಣಿಕೆ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಪರೀಕ್ಷೆಗಳ ಕುರಿತ ಭಯ ವಿದ್ಯಾರ್ಥಿಗಳಲ್ಲಿ ಮೂಡಿದೆ. ಇದನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಪರೀಕ್ಷಾ ಕ್ರಮಗಳನ್ನು ಸರಳಗೊಳಿಸಲು ಬೇಕಾದ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುವುದು. ಪರೀಕ್ಷೆಗಳು ವಿದ್ಯಾರ್ಥಿಗಳಿಗೆ ಸವಾಲಾಗಿ ನಿರ್ಮಾಣವಾಗದೇ ದೈನಂದಿನ ಪ್ರಕ್ರಿಯೆಯಂತೆ ನಡೆಯಬೇಕು ಎಂದು ತಿಳಿಸಿದರು.

    ಕಳೆದ ನಾಲ್ಕು ದಿನಗಳಿಂದ ಉತ್ತರಪ್ರದೇಶದಲ್ಲಿ ಬೋರ್ಡ್ ಪರೀಕ್ಷೆ ನಡೆಸಲಾಗುತ್ತಿದ್ದು, ಈ ಪರೀಕ್ಷೆಗೆ ಭಯದಿಂದ ಸುಮಾರು 10 ಲಕ್ಷ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಈ ಕುರಿತು ಶನಿವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಯುಪಿ ಸಿಎಂ ಯೋಗಿ ಅದಿತ್ಯನಾಥ್ ಪರೀಕ್ಷೆಗಳನ್ನು ಕಟ್ಟು ನಿಟ್ಟಿನಿಂದ ನಡೆಸಲು ಸೂಚನೆ ನೀಡಲಾಗಿತ್ತು. ಆದರೆ ಪರೀಕ್ಷಾ ಭಯಕ್ಕೆ ಹೆದರಿ 10 ಲಕ್ಷ ವಿದ್ಯಾರ್ಥಿಗಳು ಹಾಜರಾಗಿಲ್ಲ. ಇದು ಸದ್ಯದ ಅಂಕಿ ಅಂಶಗಳು ಮಾತ್ರ. ಆದರೆ ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂಬುವುದು ನನಗೂ ತಿಳಿದಿಲ್ಲ ಎಂದು ಹೇಳಿದರು.

    ಇದೇ ವೇಳೆ ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಒತ್ತಡವನ್ನು ಹಾಕದಂತೆ ಪೋಷಕರಿಗೆ ಸಿಎಂ ಯೋಗಿ ಕರೆ ನೀಡಿದರು. ಕಳೆದ 10 ತಿಂಗಳಿನಲ್ಲಿ 6 ಲಕ್ಷ ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ನೀಡಲಾಗಿದೆ. 2.5 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ. 1.4 ಲಕ್ಷ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶ ನೀಡಲಾಗಿದೆ. ಹಳ್ಳಿಯಲ್ಲಿ ಇದ್ದುಕೊಂಡೆ ತಿಂಗಳಿಗೆ 14 ರಿಂದ 15 ಸಾವಿರ ರೂ. ಗಳಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.

    ಕೌಶಲ್ಯ ಅಭಿವೃದ್ಧಿಯಲ್ಲಿ ನೀಡಲಾಗಿದ್ದ ತಾಂತ್ರಿಕ ಕೌಶಲ್ಯಗಳ ಅಳವಡಿಕೆಯಿಂದ ರಾಜ್ಯದ 14 ಸಾವಿರ ನ್ಯಾಯಬೆಲೆ ಅಂಗಡಿಯಲ್ಲಿ ಪ್ರತಿ ತಿಂಗಳು 35 ಕೋಟಿ ರೂ. ಉಳಿತಾಯ ಮಾಡಲಾಗುತ್ತಿದೆ ಎಂದು ಹೇಳಿದರು. ಉತ್ತರ ಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಅವರು ಅಧಿಕಾರ ವಹಿಸಿಕೊಂಡ ಬಳಿಕ ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ ನಡೆಯುತ್ತಿದ್ದ ಮಾಫಿಯಾ ವಿರುದ್ಧವೂ ಕಠಿಣ ಕ್ರಮಕೈಗೊಳ್ಳಲು ಸೂಚಿಸಿದ್ದರು.

  • ವರ, ಆತನ ಸ್ನೇಹಿತರು ಸೇರಿ ಮದ್ವೆಗೆ ಬಂದ ಅತಿಥಿಯನ್ನೇ ಕೊಂದ್ರು!

    ವರ, ಆತನ ಸ್ನೇಹಿತರು ಸೇರಿ ಮದ್ವೆಗೆ ಬಂದ ಅತಿಥಿಯನ್ನೇ ಕೊಂದ್ರು!

    ಲಕ್ನೋ: ಶೂ ಕಳ್ಳತನ ಮಾಡಿದ್ದಾರೆಂದು ಅನುಮಾನಿಸಿ ಮದುಮಗ ಮತ್ತು ಆತನ ನಾಲ್ವರು ಸ್ನೇಹಿತರು ಸೇರಿ ಮದುವೆಗೆ ಬಂದಿದ್ದ ಅತಿಥಿಯನ್ನೇ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ನಡೆದಿದೆ.

    ಬುಧವಾರದಂದು ಇಲ್ಲಿನ ಸೂರಜ್‍ಪುರ್ ಗ್ರಾಮದಲ್ಲಿ ವರ ಸುರೇಂದ್ರ ಮದುವೆ ಸಮಾರಂಭ ನಡೆಯುತ್ತಿತ್ತು. ವಿವಾಹಪೂರ್ವ ಶಾಸ್ತ್ರಗಳು ಮುಗಿದ ನಂತರ ಸುರೇಂದ್ರನ ಶೂಗಳು ಎಲ್ಲೂ ಕಾಣಿಸುತ್ತಿರಲಿಲ್ಲ. ಆಗ ಸುರೇಂದ್ರ ಮತ್ತು ಅವನ ಸ್ನೇಹಿತರು ಮದುವೆಗೆ ಬಂದಿದ್ದ ರಾಮ್‍ಶರಣ್(42) ಶೂ ಕದ್ದಿದ್ದಾರೆಂದು ಶಂಕಿಸಿ ಅವರಿಗೆ ಥಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

    ಗಲಾಟೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರಾಮ್‍ಶರಣ್ ಅವರನ್ನು ಸಮೀಪದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ರಾಮ್‍ಶರಣ್ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಠಾಣೆಯ ಉಸ್ತುವಾರಿ ಉಪೇಂದ್ರ ಕುಮಾರ್ ದೇಶವಾರ ತಿಳಿಸಿದ್ದಾರೆ.

    ಮೃತ ವ್ಯಕ್ತಿಯ ಪತ್ನಿ ಸಲ್ಲಿಸಿದ ದೂರಿನ ಆಧಾರದ ಮೇಲೆ ಸುರೇಂದ್ರ ಮತ್ತು ಇತರ ನಾಲ್ವರು ಸ್ನೇಹಿತರ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ದುಷ್ಕರ್ಮಿಗಳ ಮೇಲೆ ಗುಂಡು ಹಾರಿಸಿ ಪತಿ ಜೀವ ರಕ್ಷಿಸಿದ ಪತ್ನಿ- ವಿಡಿಯೋ ವೈರಲ್

    ದುಷ್ಕರ್ಮಿಗಳ ಮೇಲೆ ಗುಂಡು ಹಾರಿಸಿ ಪತಿ ಜೀವ ರಕ್ಷಿಸಿದ ಪತ್ನಿ- ವಿಡಿಯೋ ವೈರಲ್

    ಲಕ್ನೋ: ಪತಿ ಮೇಲೆ ಹಲ್ಲೆ ನಡೆಸುತ್ತಿದ್ದ ದುಷ್ಕರ್ಮಿಗಳ ಮೇಲೆ ಪತ್ನಿ ಗುಂಡು ಹಾರಿಸುವ ಮೂಲಕ ಪತಿಯ ಜೀವ ರಕ್ಷಣೆ ಮಾಡಿದ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ.

    ನಗರದ ಸ್ಥಳೀಯ ನಿವಾಸಿ ಅಬಿದ್ ಅಲಿ ಎಂಬವರು ಭಾನುವಾರ ತಮ್ಮ ನಿವಾಸದ ಮುಂದೆ ನಿಂತಿದ್ದ ವೇಳೆ 6 ಮಂದಿ ದುಷ್ಕರ್ಮಿಗಳ ಗುಂಪು ಅವರ ಮೇಲೆ ಹಲ್ಲೆ ನಡೆಸಿದೆ. ಈ ವೇಳೆ ಮನೆ ಹೊರಗೆ ಪತಿ ಮೇಲೆ ಹಲ್ಲೆ ಮಾಡುತ್ತಿದ್ದನ್ನು ಕಂಡ ಪತ್ನಿ ರಿವಾಲ್ವರ್ ನಿಂದ ದುಷ್ಕರ್ಮಿಗಳ ಮೇಲೆ ಗುಂಡು ಹಾರಿಸಿದ್ದಾರೆ.

    ಪತ್ನಿ ಫೈರ್ ಮಾಡಿದ್ದನ್ನು ನೋಡಿ ಭಯಗೊಂಡ ದುಷ್ಕರ್ಮಿಗಳು ಅಲ್ಲಿಂದ ಓಡಿ ಹೋಗಿದ್ದಾರೆ ಈ ಎಲ್ಲಾ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ಕಾರಣ ಅಬಿದ್ ಅಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮಹಿಳೆ ವೃತ್ತಿಯಲ್ಲಿ ವಕೀಲರಾಗಿದ್ದು, ಪರವನಾಗಿ ಹೊಂದಿರುವ ಪಿಸ್ತೂಲ್ ಹೊಂದಿದ್ದರು.

    ಘಟನೆ ವೇಳೆ ಹಲ್ಲೆ ನಡೆಸಿದ ದುಷ್ಕರ್ಮಿಗಳು ದಂಪತಿಯನ್ನು ಕೊಲೆ ಮಾಡುವ ಬೆದರಿಕೆಯನ್ನು ಹಾಕಿದ್ದಾರೆ ಎನ್ನಲಾಗಿದೆ. ಈ ಕುರಿತು ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ ಸಂದರ್ಭದಲ್ಲಿ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ್ದರು. ಆದರೆ ಈ ಪ್ರಕರಣ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಲಕ್ನೋದ ಕಕೋರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    https://www.youtube.com/watch?v=fPhSiI4KtwM

     

     

  • ಪ್ರೀತಿ ನಿರಾಕರಿಸಿದ್ದಕ್ಕೆ ಪ್ರೇಯಸಿ, ಆಕೆಯ ಸಹೋದರಿಯನ್ನೂ ಕೊಂದ ಎಂಜಿನಿಯರ್!

    ಪ್ರೀತಿ ನಿರಾಕರಿಸಿದ್ದಕ್ಕೆ ಪ್ರೇಯಸಿ, ಆಕೆಯ ಸಹೋದರಿಯನ್ನೂ ಕೊಂದ ಎಂಜಿನಿಯರ್!

    ಲಕ್ನೌ: ಪ್ರೀತಿಯನ್ನು ನಿರಾಕರಿಸಿದಕ್ಕೆ ಎಂಜಿನಿಯರ್ ಒಬ್ಬ ತನ್ನ ಪ್ರೇಯಸಿಯನ್ನು ಕೊಂದು ನಂತರ ಆಕೆಯ ಸಹೋದರಿಯನ್ನು ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬುಲಂದ್ ಶಹರ್‍ನಲ್ಲಿ ನಡೆದಿದೆ.

    ಅಂಕಿತ್ ಕೊಲೆ ಮಾಡಿದ ಆರೋಪಿಯಾಗಿದ್ದು, ಶೀಲು ಮತ್ತು ಶಿವಾನಿ ಮೃತ ದುರ್ದೈವಿಗಳು. ಅಂಕಿತ್ ದಾಕೋಲಿ ಗ್ರಾಮದವನಾಗಿದ್ದು, ಪಕ್ಕದ ಗ್ರಾಮದ ಬಾಪುರ್ ನ ಶೀಲುನನ್ನು ಬೆಂಕಿ ಹಾಕಿ ಸುಟ್ಟಿದ್ದಾನೆ. ಅದನ್ನು ನೋಡಿದ ಆಕೆಯ ಸಹೋದರಿಯನ್ನು ಕೂಡ ಬೆಂಕಿ ಹಚ್ಚಿ ಸುಟ್ಟಿದ್ದಾನೆ.

    ಅಂಕಿತ್ ಶೀಲು ಮನೆಗೆ ತೆರಳಿ ನನ್ನನ್ನು ಮದುವೆಯಾಗುವಂತೆ ಕೇಳಿ ಕೊಂಡಿದ್ದಾನೆ. ಆದರೆ ಶೀಲು ಆತನ ಪ್ರೀತಿಯನ್ನು ನಿರಾಕರಿಸಿದ್ದಾರೆ. ಪ್ರೀತಿ ನಿರಾಕರಿಸಿದ್ದಕ್ಕೆ ಅಂಕಿತ್ ಆಕೆಯನ್ನು ಕೊಲೆ ಮಾಡಿದ್ದಾನೆ. ಶೀಲು ಕೊಲೆಯನ್ನು ಪ್ರತ್ಯಕ್ಷವಾಗಿ ನೋಡಿದ ಶಿವಾನಿಯನ್ನು ಕೂಡ ಬೈಕಿನ ಕ್ಲಚ್ ವೈರ್‍ನಿಂದ ಕೊಲೆ ಮಾಡಿದ್ದಾನೆ. ನಂತರ ತನ್ನ ಬೈಕಿನಲ್ಲಿದ್ದ ಪೆಟ್ರೋಲ್ ಹೊರತೆಗೆದು ಅವರ ದೇಹವನ್ನು ಸುಟ್ಟು ಹಾಕಿದ್ದಾನೆ ಎಂದು ಎಸ್‍ಎಸ್‍ಪಿ ಮುನಿರಾಜ್. ಜಿ ಹೇಳಿದ್ದಾರೆ.

    ಘಟನೆ ನಡೆದ 24 ಗಂಟೆಯೊಳಗೆ ಆರೋಪಿ ಅಂಕಿತ್ ನನ್ನು ಪೊಲೀಸರು ಸೆರೆ ಹಿಡಿದಿದ್ದು, ಆತನ ಮೊಬೈಲ್ ವಶ ಪಡಿಸಿಕೊಂಡಿದ್ದಾರೆ. ಈ ಘಟನೆ ಸಂಬಂಧ ಪೊಲೀಸರಿಗೆ ಇನ್ನೂ ಕೆಲವರ ಮೇಲೆ ಅನುಮಾನವಿದ್ದು, ಅವರ ಮೇಲೂ ಕಣ್ಣಿಟ್ಟಿದ್ದಾರೆ. ಕೊಲೆ ನಡೆದ ದಿನ ಶೀಲು ಮನೆಯಲ್ಲೇ ಇದ್ದೆ ಹಾಗೂ ಆಕೆಯ ಸಹೋದರಿಯನ್ನು ನಾನೇ ಕೊಂದೇ ಎಂದು ಅಂಕಿತ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.

  • ಅತ್ಯಾಚಾರಿಯನ್ನು ಮದ್ವೆಯಾದ ಸಂತ್ರಸ್ತೆಗೆ ಸಿಕ್ತು ತ್ರಿವಳಿ ತಲಾಖ್!

    ಅತ್ಯಾಚಾರಿಯನ್ನು ಮದ್ವೆಯಾದ ಸಂತ್ರಸ್ತೆಗೆ ಸಿಕ್ತು ತ್ರಿವಳಿ ತಲಾಖ್!

    ಲಕ್ನೋ: ಸ್ಥಳೀಯ ಪಂಚಾಯತ್ ನೀಡಿದ ತೀರ್ಪಿನಂತೆ ತನ್ನ ಮೇಲೆ ಅತ್ಯಾಚಾರ ಮಾಡಿದ ವ್ಯಕ್ತಿಯನ್ನು ಮದುವೆಯಾದ ಮಹಿಳೆಗೆ ಆತ ತ್ರಿವಳಿ ತಲಾಖ್ ನೀಡಿದ ಪ್ರಕರಣ ಉತ್ತರ ಪ್ರದೇಶದ ಹಾಪೂರ್ ನಲ್ಲಿ ನಡೆದಿದೆ.

    ಸ್ಥಳೀಯ ಪಂಚಾಯತ್ ಅತ್ಯಾಚಾರ ನಡೆಸಿದ ಘಟನೆ ಕುರಿತು ವಿಚಾರಣೆ ನಡೆಸಿ ಅತ್ಯಾಚಾರಿಯನ್ನೇ ಮದುವೆಯಾಗುವಂತೆ ತೀರ್ಪು ನೀಡಿತ್ತು. ಇದರಂತೆ ಅತ್ಯಾಚಾರಿ ಜೊತೆಯೇ ಸಂತ್ರಸ್ತೆಯ ವಿವಾಹ ನೆರವೇರಿಸಿದ್ದರು. ಆದರೆ ಮದುವೆಯಾದ ನಂತರ ಪತಿ ಆಕೆಗೆ ತ್ರಿವಳಿ ತಲಾಕ್ ನೀಡಿದ್ದಾನೆ ಎಂದು ಸಂತ್ರಸ್ತೆ ಮಹಿಳೆಯ ಚಿಕ್ಕಪ್ಪ ತಮ್ಮ ಅಳಲು ತೋಡಿಕೊಂಡಿದ್ದಾರೆ. ಅಲ್ಲದೇ ಮದುವೆಯಾದ ಬಳಿಕ ತಮ್ಮ ಮಗಳಿಗೆ ಸಾಕಷ್ಟು ಚಿತ್ರಹಿಂಸೆ ನೀಡಿದ್ದು, ನನ್ನ ಮಗಳು ಹೆಚ್ಚು ನೋವು ಅನುಭವಿಸಿದ್ದಾಳೆ ಎಂದು ಹೇಳಿದ್ದಾರೆ.

    ಘಟನೆ ಕುರಿತು ವಿವರಿಸಿರುವ ಸಂತ್ರಸ್ತೆ, ತನ್ನನ್ನು ಪತಿ ಹಾಗೂ ಆತನ ತಂದೆ ನಿರ್ಜನಾ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಒತ್ತಾಯ ಪೂರ್ವಕವಾಗಿ ವಿಚ್ಛೇದನ ಪತ್ರಕ್ಕೆ ಸಹಿ ಮಾಡಿಸಿಕೊಂಡಿದ್ದಾರೆ. ಅಲ್ಲದೇ ಅದೇ ಸ್ಥಳದಲ್ಲಿ ಮೂರು ಬಾರಿ ತಲಾಖ್ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

    ಘಟನೆ ಕುರಿತು ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಂತ್ರಸ್ತೆ ನೀಡಿದ ದೂರಿನ ಅನ್ವಯ ಹಪೂರ್ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

     

  • ಮಲತಾಯಿ ಕಾಟದಿಂದ ಬೇಸತ್ತ ಯುವತಿ ಬೆತ್ತಲೆಯಾಗಿ ಬೀದಿಯಲ್ಲಿ ಅಲೆದಾಟ!

    ಮಲತಾಯಿ ಕಾಟದಿಂದ ಬೇಸತ್ತ ಯುವತಿ ಬೆತ್ತಲೆಯಾಗಿ ಬೀದಿಯಲ್ಲಿ ಅಲೆದಾಟ!

    ಲಖ್ನೌ: ಮಲತಾಯಿ ಕಾಟದಿಂದ ಬೇಸತ್ತು ಯುವತಿಯೊಬ್ಬಳು ಬೆತ್ತಲೆಯಾಗಿ ಬೀದಿಯಲ್ಲಿ ಅಲೆದಾಡುತ್ತಿದ್ದ ಘಟನೆ ಲಕ್ನೋದಲ್ಲಿ ನಡೆದಿದೆ.

    ಯುವತಿ ಬೆತ್ತಲೆಯಾಗಿ ಅಲೆದಾಡುತ್ತಿರುವುದನ್ನು ನೋಡಿ ಆಟೋ ಚಾಲಕನೊಬ್ಬ ಆಕೆಯನ್ನು ಕೆಟ್ಟ ಉದ್ದೇಶದಿಂದ ಕರೆದುಕೊಂಡು ಹೋಗುತ್ತಿದ್ದನು. ಆಟೋ ಚಾಲಕ ಪೊಲೀಸರನ್ನು ನೋಡಿದ ತಕ್ಷಣ ತನ್ನ ಆಟೋ ಹಾಗೂ ಯುವತಿಯನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ನಂತರ ಸಮಾಜ ಸೇವೆ ಮಾಡೋ ಆರಾಧನಾ ಸಿಂಗ್ ಎಂಬವರು ಸ್ಥಳಕ್ಕೆ ಭೇಟಿ ನೀಡಿ, ಯುವತಿಯನ್ನು ರಕ್ಷಿಸಿದ್ದಾರೆ.

    ನನಗೆ ಪತ್ರಕರ್ತರೊಬ್ಬರು ಕರೆ ಮಾಡಿ, ಹಜಾರಾತ್‍ನ ಅಲಹಾಬಾದ್ ನ ಬೀದಿಯಲ್ಲಿ ಯುವತಿಯೊಬ್ಬಳು ಬೆತ್ತಲೆಯಾಗಿ ತಿರುಗುತ್ತಿದ್ದಾಳೆ. ಚಳಿಯಿರೋ ಕಾರಣ ಯುವತಿಗೆ ಯಾರೊಬ್ಬರು ಬೆಡ್‍ಶೀಟ್ ಕೊಟ್ಟಿದ್ದರು. ಬೇಡ್ ಶೀಟ್ ಬಿಟ್ಟರೆ ಯುವತಿಯ ಮೈಮೇಲೆ ಬೇರೆ ಯಾವುದೇ ಬಟ್ಟೆ ಇರಲಿಲ್ಲ ಎಂದು ತಿಳಿಸಿದ್ದರು ಎಂದು ಆರಾಧನಾ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

    ಅಷ್ಟೇ ಅಲ್ಲದೇ ಆಟೋ ಚಾಲಕ ಯುವತಿಯನ್ನು ಕೆಟ್ಟ ಉದ್ದೇಶ ಎಂದರೆ ಆಕೆಯ ಮೇಲೆ ಅತ್ಯಾಚಾರ ಮಾಡಲು ಕರೆದುಕೊಂಡು ಹೋಗುತ್ತಿದ್ದನು. ನಂತರ ಪೊಲೀಸರನ್ನು ನೋಡಿ ಯುವತಿ ಹಾಗೂ ಆಟೋವನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದಾನೆ ಎಂದು ಪತ್ರಕರ್ತ ವಿವರಿಸಿದ್ರು. ಕೂಡಲೇ ನಾ ಸ್ಥಳಕ್ಕೆ ಭೇಟಿ ನೀಡಿ 20 ವರ್ಷದ ಯುವತಿಯನ್ನು ಮದರ್ ತೆರೇಸಾ ಮನೆಗೆ ಕರೆದುಕೊಂಡು ಹೋಗಿರುವುದಾಗಿ ಅವರು ಹೇಳಿದ್ರು.

    ಮಲತಾಯಿಯ ಕಿರುಕುಳದಿಂದ ಬೇಸತ್ತು ಯುವತಿ ಈ ರೀತಿ ಅಲೆದಾಟ ಮಾಡುತ್ತಿದ್ದಳು ಎಂಬುದಾಗಿ ವರದಿಯಾಗಿದೆ.

  • 8ನೇ ವಯಸ್ಸಲ್ಲೇ 3 ಜೀವ ಉಳಿಸಿ 2 ಕೈ, 1 ಪಾದ ಕಳ್ಕೊಂಡ್ರೂ ಕಾಲಲ್ಲೇ ಪರೀಕ್ಷೆ ಬರೆದ ಸಾಹಸಿ!

    8ನೇ ವಯಸ್ಸಲ್ಲೇ 3 ಜೀವ ಉಳಿಸಿ 2 ಕೈ, 1 ಪಾದ ಕಳ್ಕೊಂಡ್ರೂ ಕಾಲಲ್ಲೇ ಪರೀಕ್ಷೆ ಬರೆದ ಸಾಹಸಿ!

    ಲಕ್ನೋ: ಸಾಹಸ ಮಾಡಿ ರಾಷ್ಟ್ರಪತಿಗಳಿಂದ ಶೌರ್ಯ ಪ್ರಶಸ್ತಿ ಪಡೆದ  ಉತ್ತರ ಪ್ರದೇಶ ಸಾಹಸಿಯೊಬ್ಬ ಕಾಲಿನಿಂದಲೇ ಪರೀಕ್ಷೆ ಬರೆದು ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದಾನೆ.

    8 ವರ್ಷದ ವಯಸ್ಸಿನಲ್ಲಿ ರಿಯಾಜ್ ಅಹ್ಮದ್ ಇತರರ ಜೀವನವನ್ನು ಉಳಿಸಲು ಹೋಗಿ ತನ್ನ ಎರಡು ಕೈಗಳು ಮತ್ತು ಒಂದು ಪಾದವನ್ನು ಕಳೆದುಕೊಂಡಿದ್ದರು. ಈ ಶೌರ್ಯಕ್ಕೆ 2003 ರಲ್ಲಿ ರಾಷ್ಟ್ರೀಯ ಶೌರ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಅನಂತರ ರಿಯಾಜ್ ತನ್ನ ಕಾಲೇಜು ಪರೀಕ್ಷೆಯನ್ನು ಕಾಲಿನಿಂದಲೇ ಬರೆದು ಈಗ ಮತ್ತೊಂದು ಸಾಧನೆ ತೋರಿದ್ದಾರೆ.

    ರಿಯಾಜ್ 1996 ಅಕ್ಟೋಬರ್ 10 ರಂದು ಲಕ್ನೋದ ಟೆಲಿಬಾಗ್‍ನಲ್ಲಿ ಜನಿಸಿದರು. ಇವನ ತಾಯಿ ಗೃಹಿಣಿಯಾಗಿದ್ದು, ತಂದೆ ಪುಶ್ಕಾರ್ಟ್‍ನಲ್ಲಿ ಮೊಟ್ಟೆಗಳನ್ನು ಮಾರಾಟ ಮಾಡಿಕೊಂಡು ಜೀವನವನ್ನು ಸಾಗಿಸುತ್ತಿದ್ದರು. ಕುಟುಂಬದ ಆರ್ಥಿಕ ಸಮಸ್ಯೆಯಿಂದಾಗಿ ರಿಯಾಜ್ ಶಿಕ್ಷಣ ತುಂಬಾ ಕಷ್ಟಕರವಾಗಿತ್ತು. ಆದರೂ ವಿದ್ಯಾಭ್ಯಾಸವನ್ನು ಮುಂದುವರಿಸಿದ್ದರು.

    ಅಂದು ನಡೆದಿದ್ದೇನು?
    2003 ರಲ್ಲಿ ಡಾಲಿಗನ್ಜ್ ಕ್ರಾಸಿಂಗ್‍ನಲ್ಲಿ ರೈಲ್ವೇ ಟ್ರ್ಯಾಕ್ ಮೂಲಕ ಹಾದುಹೋಗುವಾಗ ಒಂದು ಮಗು ರೈಲ್ವೆ ಹಳಿಗೆ ಸಿಲುಕಿಕೊಂಡಿತ್ತು. ಇದನ್ನು ನೋಡಿದ ನಾನು ಆಕೆಯ ತಂದೆಗೆ, ನಿಮ್ಮ ಮಗಳನ್ನು ಟ್ರ್ಯಾಕ್‍ನಿಂದ ಕಾಪಾಡಿ ಎಂದು ಹೇಳಿದ್ದೆ. ಆದರೆ ಅವರು ನನ್ನ ಮಾತನ್ನು ನಿರ್ಲಕ್ಷ್ಯ ಮಾಡಿದ್ದರು. ಆದರೆ ಅಷ್ಟರಲ್ಲಿ ರೈಲು ಬರುತ್ತಿತ್ತು. ಇದನ್ನು ನೋಡಿದ ತಂದೆ ಮಗಳನ್ನು ಕಾಪಾಡಲು ಓಡಿದ್ದರು. ಸ್ಥಳದಲ್ಲಿದ್ದ ಬೇರೊಬ್ಬ ಹುಡುಗನು ಮಗುವನ್ನು ಕಾಪಾಡಲು ದೌಡಾಯಿಸಿದ. ನಾನು ಕೂಡ ಓಡಿದೆ.

    ನಾವು ಅಲ್ಲಿಗೆ ತಲುಪುವಷ್ಟರಲ್ಲಿ ರೈಲು ತುಂಬಾ ಹತ್ತಿರ ಬಂದಿತ್ತು. ತಕ್ಷಣ ಮಗುವನ್ನು ಎತ್ತಿ ಪಕ್ಕಕ್ಕೆ ಬಿಸಾಕಿದೆ. ಅವರನ್ನು ಕೂಡ ತಕ್ಷಣ ತಳ್ಳಿದೆ. ಆದರೆ ನನ್ನ ಪಾದ ರೈಲಿನ ಹಳಿಗೆ ಸಿಲುಕಿಕೊಂಡಿತ್ತು. ಕೊನೆಗೆ ರೈಲು ಸಮೀಪ ಬಂದಿದ್ದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ನನ್ನ ಎರಡು ಕೈ ಮತ್ತು ಒಂದು ಪಾದ ತುಂಡಾಯಿತು. ಆದರೆ ನಾನು ಅಂದು ಮೂರು ಜೀವ ಉಳಿಸಿದ್ದ ತೃಪ್ತಿ ಇತ್ತು ಎಂದು ಖುಷಿಯಿಂದ ರಿಯಾಜ್ ಹೇಳಿದರು.

    ಅಂದಿನ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಅವರು 2003 ರ ಜನವರಿ 24 ರಂದು ಸಂಜಯ್ ಚೋಪ್ರಾ ರಾಷ್ಟ್ರೀಯ ಶೌರ್ಯ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಿದ್ದರು. ನಂತರ ಅಟಲ್ ಬಿಹಾರಿ ವಾಜಪೇಯಿ ಅವರು ದೆಹಲಿಯಲ್ಲಿ ರಾಷ್ಟ್ರೀಯ ಶೌರ್ಯ ಪ್ರಶಸ್ತಿಯನ್ನು ನೀಡಿದ್ದರು. 2010 ರಲ್ಲಿ ಮಾರಿಷಸ್‍ನ ಅಧ್ಯಕ್ಷರು ನನಗೆ ಗ್ರೇಟ್ ಹೀರೋಸ್ ಗ್ಲೋಬಲ್ ಬ್ರೇವರಿ ಅವಾರ್ಡ್ ನೀಡಿ ಪುರಸ್ಕರಿಸಿದ್ದರು ಎಂದು ರಿಯಾಸ್ ವಿವರಿಸಿದರು.

    ಪ್ರಸ್ತುತ ನಾನು ಕೆಕೆಸಿಯಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದು, ನಾನು ನನ್ನ ಪರೀಕ್ಷೆಗಳೆಲ್ಲವನ್ನು ನನ್ನ ಉಳಿದಿರುವ ಒಂದು ಪಾದದಲ್ಲಿ ಬರೆಯುತ್ತೇನೆ. ನನ್ನ ಮೊದಲ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದೇನೆ. ಈಗ ಹೊಂದಿರುವ ಕೈ ಮತ್ತು ಕಾಲು ಕೃತಕವಾದುದ್ದು ಎಂದು ಹೇಳಿದರು. ನನಗೆ ಇನ್ನು ತುಂಬಾ ಓದುಬೇಕು ಎಂಬ ಆಸೆ ಇದೆ. ಆದರೆ ನಾನು ಬೇರೆ ಸ್ಥಳಕ್ಕೆ ಹೋಗಿ ವಿದ್ಯಾಭ್ಯಾಸ ಮಾಡಲು ಹಣದ ಕೊರತೆಯಿದೆ. ಆದ್ದರಿಂದ ನನಗೆ ಸರ್ಕಾರ ಸಹಾಯ ಮಾಡಬಹುದು ಎನ್ನುವ ಆಶಾಭಾವನೆಯನ್ನು ನಾನು ಇಟ್ಟುಕೊಂಡಿದ್ದೇನೆ ಎಂದು ಅವರು ತಿಳಿಸಿದರು.

  • ರೈತನ ಮೇಲೆ ಟ್ರ್ಯಾಕ್ಟರ್ ಹರಿಸಿ ಕೊಂದ ಲೋನ್ ರಿಕವರಿ ಏಜೆಂಟ್‍ಗಳು

    ರೈತನ ಮೇಲೆ ಟ್ರ್ಯಾಕ್ಟರ್ ಹರಿಸಿ ಕೊಂದ ಲೋನ್ ರಿಕವರಿ ಏಜೆಂಟ್‍ಗಳು

    ಲಕ್ನೋ: ಲೋನ್ ರಿಕವರಿ ಏಜೆಂಟ್‍ಗಳು ರೈತನ ಮೇಲೆ ಟ್ರ್ಯಾಕ್ಟರ್ ಹರಿಸಿ ಕೊಂದಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ರಾಜಧಾನಿ ಲಕ್ನೋದಿಂದ 100 ಕಿ.ಮೀ ದೂರವಿರುವ ಸೀತಾಪುರದಲ್ಲಿ ನಡೆದಿದೆ.

    ಗ್ಯಾನ ಚಂದ್ರ(45) ಮೃತ ರೈತ. ಪೊಲೀಸರ ಪ್ರಕಾರ, ಗ್ಯಾನ ಚಂದ್ರ ಅವರು ಖಾಸಗಿ ಸಂಸ್ಥೆ ಎಲ್&ಟಿ ಫೈನಾನ್ಸ್‍ನಿಂದ ಕೆಲವು ವರ್ಷಗಳ ಹಿಂದೆ 5 ಲಕ್ಷ ರೂ. ಸಾಲ ಪಡೆದಿದ್ದರು. ಲೋನ್ ಪೂರ್ಣಗೊಳಿಸಲು 1.25 ಲಕ್ಷ ರೂ. ಪಾವತಿಸಬೇಕಿತ್ತು. ಚಂದ್ರ ಅವರು ಎರಡು ವಾರಗಳ ಹಿಂದೆ ಸಂಸ್ಥೆಗೆ 35 ಸಾವಿರ ರೂ. ಹಣವನ್ನ ಪಾವತಿಸಿದ್ದರು. ಲೋನ್ ಹಣ ಪಾವತಿಯಲ್ಲಿ ಕೆಲವು ವಾರ ವಿಳಂಬವಾದ ಕಾರಣ ಎರಡು ದಿನಗಳ ಹಿಂದೆ ಐವರು ರಿಕವರಿ ಏಜೆಂಟ್‍ಗಳು ಮನೆಯ ಬಳಿ ಬಂದು ಟ್ರ್ಯಾಕ್ಟರ್ ಹಿಂದಿರುಗಿಸುವಂತೆ ಚಂದ್ರ ಅವರಿಗೆ ಕೇಳಿದ್ದಾರೆ.

    ರೈತ ಹಾಗೂ ಏಜೆಂಟ್‍ಗಳ ನಡುವೆ ವಾಗ್ವಾದ ನಡೆದಿದದ್ದು, ಈ ವೇಳೆ ಟ್ರ್ಯಾಕ್ಟರ್ ತೆಗೆದುಕೊಂಡು ಹೋಗಲು ರಿಕವರಿ ಏಜೆಂಟ್‍ಗಳು ಮುಂದಾಗಿದ್ದಾರೆ. ಅವರಲ್ಲಿ ಒಬ್ಬರು ಚಂದ್ರ ಅವರನ್ನ ಟ್ರ್ಯಾಕ್ಟರ್ ಮುಂದೆ ತಳ್ಳಿದ್ದಾರೆ. ಹೀಗಾಗಿ ಕುಟುಂಬಸ್ಥರ ಕಣ್ಣ ಮುಂದೆಯೇ ಚಂದ್ರ ಟ್ರ್ಯಾಕ್ಟರ್ ಅಡಿ ಸಿಲುಕಿ ಸಾವನ್ನಪ್ಪಿದ್ದಾರೆ.

    ಸಾಂದರ್ಭಿಕ ಚಿತ್ರ

    ನಾವು ಜನವರಿ 10ರಂದು 35 ಸಾವಿರ ರೂ. ಪಾವತಿಸಿದ್ದೆವು. ನಮ್ಮ ಅಣ್ಣ ಉಳಿದ ಹಣವನ್ನ ಬೇಗ ಪಾವತಿಸುತ್ತೇನೆಂದು ಹೇಳಿದ್ರು. ಆದ್ರೆ ಅವರು ಅದನ್ನು ಕೇಳಿಸಿಕೊಳ್ಳದೇ ಟ್ರ್ಯಾಕ್ಟರ್ ಕೀ ಕಸಿದುಕೊಂಡರು. ಅವರು ಟ್ರ್ಯಾಕ್ಟರ್ ತೆಗೆದುಕೊಂಡು ಹೋಗುವಾಗ ಅವರಲ್ಲಿ ಒಬ್ಬ ವ್ಯಕ್ತಿ ನನ್ನ ಅಣ್ಣನನ್ನು ತಳ್ಳಿದ್ರು. ನಂತರ ಅವರು ಟ್ರ್ಯಾಕ್ಟರ್ ಕೆಳಗೆ ಬಿದ್ದು, ನಮ್ಮ ಕಣ್ಣ ಮುಂದೆಯೇ ಸಾವನ್ನಪ್ಪಿದ್ರು ಎಂದು ಚಂದ್ರ ಅವರ ಸಹೋದರ ಓಂ ಪ್ರಕಾಶ್ ಹೇಳಿದ್ದಾರೆ.

    ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳನ್ನು ಕೂಡಲೇ ಬಂಧಿಸುವುದಾಗಿ ಹೇಳಿದ್ದಾರೆ.

    ಚಂದ್ರ ಅವರು 2.5 ಎಕರೆ ಜಮೀನು ಹೊಂದಿದ್ದರು. ಆದ್ರೆ ಐವರು ಪುತ್ರಿಯರು ಸೇರಿದಂತೆ 7 ಜನರ ಕುಟುಂಬವನ್ನು ಸಾಕಲು ಅದು ಸಾಕಾಗುತ್ತಿರಲಿಲ್ಲ. ಒಬ್ಬ ಮಗಳಿಗೆ ಶ್ರವಣ ಹಾಗೂ ಮಾತಾಡುವ ತೊಂದರೆಯೂ ಇತ್ತು. ಹಣ ಸಂಪಾದಿಸಲು ಚಂದ್ರ ಬೇರೆ ರೈತರ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದರು ಎಂದು ವರದಿಯಾಗಿದೆ.

  • 1ನೇ ತರಗತಿ ಬಾಲಕನ ಹೊಟ್ಟೆಗೆ ಚಾಕು ಇರಿದ 6ನೇ ಕ್ಲಾಸ್ ವಿದ್ಯಾರ್ಥಿನಿ- ಪ್ರಿನ್ಸಿಪಲ್ ಅರೆಸ್ಟ್

    1ನೇ ತರಗತಿ ಬಾಲಕನ ಹೊಟ್ಟೆಗೆ ಚಾಕು ಇರಿದ 6ನೇ ಕ್ಲಾಸ್ ವಿದ್ಯಾರ್ಥಿನಿ- ಪ್ರಿನ್ಸಿಪಲ್ ಅರೆಸ್ಟ್

    ಲಕ್ನೋ: ಶಾಲೆಯ ಟಾಯ್ಲೆಟ್‍ನಲ್ಲಿ 1ನೇ ತರಗತಿ ವಿದ್ಯಾರ್ಥಿ ಮೇಲೆ ಹಿರಿಯ ವಿದ್ಯಾರ್ಥಿನಿ ಚಾಕುವಿನಿಂದ ಹಲ್ಲೆ ಮಾಡಿರೋ ಆಘಾತಕಾರಿ ಘಟನೆ ಉತ್ತರಪ್ರದೇಶ ರಾಜಧಾನಿ ಲಕ್ನೋದಲ್ಲಿ ನಡೆದಿದೆ.

    ಬಾಲಕನ ಮೇಲೆ 6ನೇ ತರಗತಿಯ ವಿದ್ಯಾರ್ಥಿನಿ ಹಲ್ಲೆ ಮಾಡಿದ್ದಾಳೆಂದು ಪೊಲೀಸರು ಹೇಳಿದ್ದಾರೆ. ವಿಷಯವನ್ನು ಒಂದು ದಿನದವರೆಗೆ ಮುಚ್ಚಿಟ್ಟ ಶಾಲೆಯ ಮುಖ್ಯೋಪಾಧ್ಯಾಯರನ್ನು ನಿರ್ಲಕ್ಷ್ಯದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.

    ಮಂಗಳವಾರ ಬೆಳಗ್ಗೆ ಇಲ್ಲಿನ ಬ್ರೈಟ್‍ಲ್ಯಾಂಡ್ ಶಾಲೆಯಲ್ಲಿ ಬಾಲಕನ ಮೇಲೆ ವಿದ್ಯಾರ್ಥಿನಿ ಟಾಯ್ಲೆಟ್‍ನಲ್ಲಿ ದಾಳಿ ಮಾಡಿದ್ದಾಳೆಂದು ಪೋಷಕರು ಹೇಳಿದ್ದಾರೆ. ಬುಧವಾರದಂದು ಪೋಷಕರು ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದಾರೆ. ಬಾಲಕನಿಗೆ ಎದೆ ಹಾಗೂ ಹೊಟ್ಟೆಯ ಭಾಗದಲ್ಲಿ ಗಂಭೀರ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.

    ನನ್ನ ಮಗನಿಗೆ ಗಾಯವಾಗಿದೆ ಎಂದು ಶಾಲೆಯವರು ತಿಳಿಸಿದ್ರು. ಆತನ ಮೇಲೆ ಹುಡುಗಿಯೊಬ್ಬಳು ಚಾಕುವಿನಿಂದ ಹಲ್ಲೆ ಮಾಡಿದ್ದಾಳೆ ಎಂದು ಬಾಲಕನ ತಂದೆ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ. ಬ್ಲೂ ವೇಲ್ ಗೇಮ್‍ನ ಭಾಗವಾಗಿ ಈ ಕೃತ್ಯ ನಡೆದಿರಬಹುದು ಎಂದು ಶಾಲೆಯ ಅಧಿಕಾರಿಗಳು ಶಂಕಿಸಿದ್ದಾರೆ.

    ಶಾಲೆಯವರು ಬಾಲಕನನ್ನು ಆಸ್ಪತ್ರೆಗೆ ಕೊಂಡೊಯ್ದಿದ್ದು, ಚಾಕುವಿನಂತಹ ಚೂಪಾದ ವಸ್ತುವಿನಿಂದ ಇರಿಯಲಾಗಿದೆ ಎಂದು ಬಾಲಕನಿಗೆ ಚಿಕಿತ್ಸೆ ನೀಡ್ತಿರೋ ವೈದ್ಯರಾದ ಸಂದೀಪ್ ತಿವಾರಿ ಹೇಳಿದ್ದಾರೆ. ಸಿಎಂ ಯೋಗಿ ಆದಿತ್ಯನಾಥ್ ಇಂದು ಆಸ್ಪತ್ರೆಯಲ್ಲಿ ಬಾಲಕನನ್ನು ಭೇಟಿಯಾಗಿದ್ದಾರೆ.

    ಬಾಲಕನ ಮೇಲಿನ ದಾಳಿಯ ಬಗ್ಗೆ ಬುಧವಾರದಂದು ಶಾಲೆಯಲ್ಲಿ ಸುದ್ದಿ ಹರಡಿದ ನಂತರ ಹಲವಾರು ಪೋಷಕರು ತಮ್ಮ ಮಕ್ಕಳ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

    ಕಳೆದ ವರ್ಷ ಗುರಗಾಂವ್‍ನ ರಯಾನ್ ಅಂತರಾಷ್ಟ್ರೀಯ ಶಾಲೆಯ ಟಾಯ್ಲೆಟ್‍ನಲ್ಲಿ 2ನೇ ಕ್ಲಾಸ್ ಬಾಲಕ ಪ್ರದ್ಯುಮನ್ ಎಂಬಾತನ ಮೇಲೆ 11ನೇ ಕ್ಲಾಸ್ ವಿದ್ಯಾರ್ಥಿಯೊಬ್ಬ ಚಾಕುವಿನಿಂದ ಕುತ್ತಿಗೆ ಕುಯ್ದು ಕೊಲೆ ಮಾಡಿದ್ದ. ಈ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಪರೀಕ್ಷೆ ಹಾಗೂ ಪೇರೆಂಟ್ಸ್ ಮೀಟಿಂಗ್ ಮುಂದೂಡುವ ಸಲುವಾಗ ವಿದ್ಯಾರ್ಥಿ ಈ ಕೃತ್ಯವೆಸಗಿದ್ದ ಎಂದು ಪೊಲೀಸರು ಹೇಳಿದ್ದರು.