Tag: lucknow

  • ಚಲಿಸುತ್ತಿದ್ದ ಕಾರಿನಲ್ಲಿ ಇಬ್ಬರು ಮಹಿಳೆಯರ ಮೇಲೆ ಗ್ಯಾಂಗ್ ರೇಪ್

    ಚಲಿಸುತ್ತಿದ್ದ ಕಾರಿನಲ್ಲಿ ಇಬ್ಬರು ಮಹಿಳೆಯರ ಮೇಲೆ ಗ್ಯಾಂಗ್ ರೇಪ್

    ಲಕ್ನೋ: ಚಲಿಸುತ್ತಿದ್ದ ಕಾರಿನಲ್ಲಿ ಇಬ್ಬರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ಕನೌಜ್ ನಲ್ಲಿ ನಡೆದಿದೆ.

    ಮಹಿಳೆಯರು ಲಕ್ನೋದಿಂದ ಔಷಧಿ ತೆಗೆದುಕೊಂಡು ಕಮಾಲಗಂಜ್ ಗೆ ಬರುತ್ತಿದ್ದ ಸಂದರ್ಭದಲ್ಲಿ ಗುರುವಾರ ಈ ಘಟನೆ ನಡೆದಿದ್ದು, ಅದೇ ಗ್ರಾಮದ ಯುವಕರು ಈ ಕೃತ್ಯವೆಸಗಿದ್ದಾರೆ. ಮೂವರು ಆರೋಪಿಗಳ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

    ನಡೆದಿದ್ದೇನು?
    ಸಂತ್ರಸ್ತೆ ಮಹಿಳೆಯರು ಫರೂಕಾಬಾದ್‍ನ ಮೆಹ್ರೂರ್ಪುರ್ ಕಮಾಲಗಂಜ್ ನ ನಿವಾಸಿಯಾಗಿದ್ದಾರೆ. ಅದೇ ಗ್ರಾಮದ ಯುವಕರು ಡ್ರಾಪ್ ಕೊಡುವ ನೆಪದಲ್ಲಿ ಮಹಿಳೆಯರನ್ನು ಕರೆದಿದ್ದಾರೆ. ನಂತರ ಮಹಿಳೆಯರು ಕಾರ್ ಹತ್ತಿದ್ದಾರೆ. ಈ ವೇಳೆ ಯುವಕರು ಇಬ್ಬರು ಮಹಿಳೆಯರ ಮೇಲೆ ಕಾರಿನಲ್ಲಿಯೇ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

    ಅತ್ಯಾಚಾರದ ನಂತರ ಇಬ್ಬರು ಮಹಿಳೆಯರನ್ನು ಆರೋಪಿಗಳು ಗುರುಶಾಹಿಗಂಜ್ ರಸ್ತೆ ಬದಿಯಲ್ಲಿ ಎಸೆದು ಕಾರಿನಲ್ಲಿ ಪರಾರಿಯಾಗಿದ್ದಾರೆ. ಪ್ರಜ್ಞೆ ತಪ್ಪಿದ್ದ ಮಹಿಳೆಯರು ಪ್ರಜ್ಞೆ ಬಂದ ನಂತರ ಸ್ಥಳೀಯರ ಸಹಾಯ ಪಡೆದು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ.

    ಈ ಘಟನೆ ಕುರಿತು ಪೊಲೀಸರು ಮುಖ್ಯ ಆರೋಪಿ ನಿಖಿಲ್ ತಿವಾರಿ ಸೇರಿದಂತೆ ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಹುಡುಕಾಟ ಶುರು ಮಾಡಿದ್ದಾರೆ. ಸಂತ್ರಸ್ತ ಮಹಿಳೆಯರನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ವೈದ್ಯಕೀಯ ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಲೀಸಿದ್ದಾರೆ.

  • 35ರ ಶಿಕ್ಷಕಿಯೊಂದಿಗೆ ಲವ್- ವಿರೋಧಿಸಿದ್ದಕ್ಕೆ ಹೆತ್ತ ತಾಯಿಯನ್ನೇ ರಾಡಿನಿಂದ ಹೊಡೆದು ಕೊಂದ ಮಗಳು!

    35ರ ಶಿಕ್ಷಕಿಯೊಂದಿಗೆ ಲವ್- ವಿರೋಧಿಸಿದ್ದಕ್ಕೆ ಹೆತ್ತ ತಾಯಿಯನ್ನೇ ರಾಡಿನಿಂದ ಹೊಡೆದು ಕೊಂದ ಮಗಳು!

    ಲಕ್ನೋ: 18 ವರ್ಷದ ಯುವತಿಯೊಬ್ಬಳು ಹೆತ್ತ ತಾಯಿಯನ್ನೇ ರಾಡ್‍ನಿಂದ ಹೊಡೆದು ಪರಾರಿಯಾದ ಘಟನೆ ಘಜಿಯಾಬಾದ್‍ನ ಕವಿನಗರದಲ್ಲಿ ಶುಕ್ರವಾರ ನಡೆದಿದೆ. ತೀವ್ರವಾಗಿ ಗಾಯಗೊಂಡಿದ್ದ ತಾಯಿ ಭಾನುವಾರದಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

    ನಡೆದಿದ್ದೇನು?: ಯುವತಿ 35 ವರ್ಷದ ಶಿಕ್ಷಕಿ ಜೊತೆ ಪ್ರೇಮ ಸಂಬಂಧ ಹೊಂದಿದ್ದು, ಇದಕ್ಕೆ ತನ್ನ ಪ್ರೀತಿಗೆ ಅಡ್ಡಿಪಡಿಸಿದ ಕಾರಣಕ್ಕೆ ಮನೆಯಲ್ಲಿದ್ದ ಕಬ್ಬಿಣದ ರಾಡಿನಿಂದ ತಾಯಿಯ ತಲೆಗೆ ಬಲವಾಗಿ ಹೊಡೆದು, ಮನೆ ಬಿಟ್ಟು ಓಡಿ ಹೋಗಿದ್ದಾಳೆ. ಆಗ ತಾನೆ ಶಾಲೆಯಿಂದ ಬಂದ ಕಿರಿಯ ಮಗಳು ರಕ್ತದ ಮಡುವಿನಲ್ಲಿ ಬಿದಿದ್ದ ತಾಯಿಯನ್ನ ಕಂಡು ತಂದೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ಮನೆಗೆ ಧಾವಿಸಿದ ಪತಿ ತನ್ನ ಹೆಂಡತಿಯನ್ನ ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದು, ನಂತರ ಅಲ್ಲಿಂದ ದೆಹಲಿಯ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದ್ರೆ ತೀವ್ರವಾದ ಗಾಯಗಳಿಂದ ತಾಯಿ ಮೃತಪಟ್ಟಿದ್ದಾರೆ.

    ಘಟನೆಯ ಸಂಬಂಧ ಪೊಲೀಸರಿಗೆ ದೂರು ನೀಡಿದ ತಂದೆ, ತನ್ನ ಮಗಳು ಶಾಲೆಯ ಶಿಕ್ಷಕಿಯ ಜೊತೆ ಪ್ರೇಮ ಸಂಬಂಧವನ್ನ ಹೊಂದಿದ್ದಳು. ಮನೆಯಲ್ಲಿ ಇದಕ್ಕೆ ವಿರೋಧವೂ ವ್ಯಕ್ತವಾಗಿತ್ತು. ಎರಡು ತಿಂಗಳ ಹಿಂದೆಯಷ್ಟೆ ಆಕೆ ಶಿಕ್ಷಕಿಯ ಜೊತೆ ಓಡಿ ಹೋಗಿದ್ದಳು. ಆಗ ಪೊಲೀಸರ ನೆರವಿನಿಂದ ಅವಳನ್ನ ಹುಡುಕಿ ಮನೆಗೆ ಕರೆತರಲಾಯಿತು. ಗಂಡನನ್ನು ಬಿಟ್ಟ 35 ವರ್ಷದ ಶಾಲಾ ಶಿಕ್ಷಕಿಯ ಜೊತೆ ಪ್ರೇಮದ ಬಲೆಯಲ್ಲಿ ಬಿದ್ದಿದ್ದ ಮಗಳು, ಈಗ ತಾಯಿ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾಳೆ ಎಂದು ಹೇಳಿದ್ದಾರೆ.

    ಮಗಳು ಶಿಕ್ಷಕಿಯೊಂದಿಗೆ ಪ್ರೇಮ ಸಂಬಂಧ ಹೊಂದಿರುವುದು ತಿಳಿದ ಬಳಿಕ ಆಕೆಯನ್ನ 11ನೇ ತರಗತಿಯಿಂದ ಬಿಡಿಸಲಾಗಿತ್ತು. ಅದೇ ಶಾಲೆಯಲ್ಲಿ ಶಿಕ್ಷಕಿ ಕೆಲಸ ಮಾಡುತ್ತಿದ್ದಳು ಎಂದು ತಂದೆ ಹೇಳಿದ್ದಾರೆ. ಈಗ ಮಗಳು ಪರಾರಿಯಾಗಿದ್ದು ಶಿಕ್ಷಕಿಯ ಬಳಿಗೇ ಹೋಗಿರಬಹುದು ಎಂದು ತಂದೆ ಶಂಕಿಸಿದ್ದಾರೆ.

    ಶಿಕ್ಷಕಿ, ಯುವತಿಯ ವಿರುದ್ಧ ಎಫ್‍ಐಆರ್: ತಾಯಿಯ ಮೇಲೆ ಹಲ್ಲೆ ನಡೆಸಿರುವ ಯುವತಿ ಮತ್ತು ಶಿಕ್ಷಕಿಯ ವಿರುದ್ಧ ಐಪಿಸಿ ಸೆಕ್ಷನ್ 304 ರ ಅಡಿಯಲ್ಲಿ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.

    ಘಜಿಯಾಬಾದ್‍ನಲ್ಲಿ ನೆಲೆಸಿರುವ ಕುಟುಂಬ ಇಬ್ಬರು ಹೆಣ್ಣು ಮಕ್ಕಳನ್ನ ಹೊಂದಿದ್ದಾರೆ. ತಂದೆ ಟ್ರಾವೆಲ್ಸ್ ನಲ್ಲಿ ಕೆಲಸ ಮಾಡುತ್ತಿದ್ದು, ತಾಯಿ ಮನೆಯಲ್ಲಿರುತ್ತಿದ್ದರು. ಮಗಳ ಮತ್ತು ಶಾಲಾ ಶಿಕ್ಷಕಿಯ ವಿವರವನ್ನ ಭಾನುವಾರದಂದು ತಂದೆ ಪೊಲೀಸರಿಗೆ ತಿಳಿಸಿದ್ದಾರೆ. ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

  • ನನ್ನ ಮಗನ ಸಾವಿನ ಹಿಂದೆ ಸಿಎಂ ಸಿದ್ದರಾಮಯ್ಯ ಕೈವಾಡವಿದೆ- ಅನುರಾಗ್ ತಿವಾರಿ ತಂದೆ ಆರೋಪ

    ನನ್ನ ಮಗನ ಸಾವಿನ ಹಿಂದೆ ಸಿಎಂ ಸಿದ್ದರಾಮಯ್ಯ ಕೈವಾಡವಿದೆ- ಅನುರಾಗ್ ತಿವಾರಿ ತಂದೆ ಆರೋಪ

    ಲಕ್ನೋ: ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಅನುಮಾನಾಸ್ಪದ ಸಾವು ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಕೈವಾಡ ಇದೆ ಎಂದು ತಿವಾರಿ ತಂದೆ ಬಿಎನ್ ತಿವಾರಿ ಗಂಭೀರ ಆರೋಪ ಮಾಡಿದ್ದಾರೆ.

    ನನ್ನ ಮಗ ಅತ್ಯಂತ ಪ್ರಾಮಾಣಿಕ. ಭ್ರಷ್ಟರಿಗೆ ನನ್ನ ಮಗ ಇಷ್ಟವಾಗುತ್ತಿರಲಿಲ್ಲ. ಅಂತಹ ಭ್ರಷ್ಟರೇ ನನ್ನ ಮಗನನ್ನು ಸಂಚು ಹೂಡಿ ಹತ್ಯೆ ಮಾಡಿದ್ದಾರೆ. ನನ್ನ ಮಗನ ಸಾವಿನ ಹಿಂದೆ ಸಿಎಂ ಸಿದ್ದರಾಮಯ್ಯ ಅವರ ಕೈವಾಡವಿದೆ ಎಂದು ಆರೋಪಿಸಿದ್ದಾರೆ.ಇದನ್ನೂ ಓದಿ: ಸಾವಿಗೂ ಮುನ್ನ ನಡೆದಿದೆ ಹಲ್ಲೆ: ಅನುರಾಗ್ ತಿವಾರಿ ನಿಗೂಢ ಸಾವಿನ ಪ್ರಕರಣಕ್ಕೆ ಟ್ವಿಸ್ಟ್

    ಅನುರಾಗ್ ತಿವಾರಿ ಅವರ ಸಾವಿನ ಒಂದು ವರ್ಷದ ಬಳಿಕ ಬಿಎನ್ ತಿವಾರಿ ಸಿದ್ದರಾಮಯ್ಯ ಅವರ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಸಿಬಿಐ ಅಧಿಕಾರಿಗಳು ಪ್ರಕರಣದಲ್ಲಿನ ನಿಜವಾದ ಆರೋಪಿಗಳನ್ನು ರಕ್ಷಿಸಲು ನಮ್ಮನ್ನು ಸುಮ್ಮನೆ ವಿಚಾರಣೆ ನಡೆಸುತ್ತಿದ್ದಾರೆ. ಅನುರಾಗ್ ಅವರ ಮೇಲೆ ಕೆಲವು ಫೈಲ್‍ಗಳ ಮೇಲೆ ಸಹಿ ಮಾಡಲು ತೀವ್ರ ಒತ್ತಡವಿತ್ತು. ಅವರ ಸಾವಿನ ಕೆಲ ಸಮಯದ ನಂತರ ಕೆಲವು ದಾಖಲೆಗಳನ್ನು ಕರ್ನಾಟದಲ್ಲಿದ್ದ ಅನುರಾಗ್ ಮನೆಯಿಂದ ತೆಗೆದುಕೊಂಡು ಹೋಗಲಾಗಿದೆ ಎಂದು ಆರೋಪಿಸಿದ್ದಾರೆ.ಇದನ್ನೂ ಓದಿ: ಕರ್ನಾಟಕದ 2 ಸಾವಿರ ಕೋಟಿ ರೂ. ಹಗರಣಕ್ಕೆ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಬಲಿ?

    ಬೆಂಗಳೂರಿನಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದ 36 ವರ್ಷದ ಅನುರಾಗ್ ತಿವಾರಿ ಕಳೆದ ಮೇ 17ರಂದು ಶಂಕಾಸ್ಪದ ರೀತಿಯಲ್ಲಿ ಲಕ್ನೋದಲ್ಲಿ ಸಾವನ್ನಪ್ಪಿದ್ದರು. ಇದನ್ನೂ ಓದಿ: ಅನ್ನಭಾಗ್ಯ ಅಕ್ರಮ: 34 ಲಕ್ಷ ಕೆಜಿ ಅಕ್ಕಿ ಕಾಳಸಂತೆಯಲ್ಲಿ ಮಾರಾಟ – ಅನುರಾಗ್ ತಿವಾರಿ ಬಲಿ ಪಡೀತಾ ಹಗರಣ?

  • ಪತಿ ಕೆಲಸಕ್ಕೆ ಹೋದ ಬಳಿಕ ಅತ್ಯಾಚಾರವೆಸಗಿದ ಮಾವನನ್ನೇ ಕೊಲೆಗೈದ ಸೊಸೆ!

    ಪತಿ ಕೆಲಸಕ್ಕೆ ಹೋದ ಬಳಿಕ ಅತ್ಯಾಚಾರವೆಸಗಿದ ಮಾವನನ್ನೇ ಕೊಲೆಗೈದ ಸೊಸೆ!

    ಲಕ್ನೋ: 26 ವರ್ಷದ ಸೊಸೆ ಮೇಲೆ ನಿರಂತರ ಎರಡು ದಿನದಿಂದ ಅತ್ಯಾಚಾರ ಎಸಗುತ್ತಿದ್ದ ಮಾವನನ್ನ ಮಗ ಮತ್ತು ಸೊಸೆ ಸೇರಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಈ ಘಟನೆ ಉತ್ತರಪ್ರದೇಶದ ಫಿಲಿಬಿಟ್ ಮಾಧೋತಂದ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಗ್ರಾಮದಲ್ಲಿ ಶನಿವಾರ ನಡೆದಿದ್ದು, ಸಂತ್ರಸ್ತೆ ಮಾವವನ್ನು ಒಂದು ಕೋಲಿನಿಂದ ಹೊಡೆದು ಕೊಲೆ ಮಾಡಿದ್ದಾಳೆ. ಪತ್ನಿಯ ಈ ಕೃತ್ಯಕ್ಕೆ ಪತಿಯೂ ಸಹಾಯ ಮಾಡಿದ್ದು, ಕೊಲೆಯ ನಂತರ ದಂಪತಿ ಪೊಲೀಸರಿಗೆ ಶರಣಾಗಿದ್ದಾರೆ.

    ನಡೆದಿದ್ದೇನು? ಶುಕ್ರವಾರ ಮಗ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಮಾವ ಸೊಸೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ಶನಿವಾರ ಕೂಡ ಮಗ ಕೆಲಸಕ್ಕೆ ಹೋದ ತಕ್ಷಣ ಅದೇ ಹೇಯ ಕೃತ್ಯವನ್ನು ಮಾಡಿದ್ದಾನೆ. ಮೂರನೇ ದಿನ ಅಂದರೆ ಭಾನುವಾರ ತಂದೆ ತನ್ನ ಪತ್ನಿ ಮೇಲೆ ದೌರ್ಜನ್ಯ ನಡೆಸಿರೋದನ್ನು ಮಗ ಕಣ್ಣಾರೆ ನೋಡಿದ್ದಾರೆ.

    ತಂದೆಯ ಹೀನ ಕೃತ್ಯವನ್ನು ನೋಡಿ ಕೋಪಗೊಂಡ ಮಗ ಮತ್ತು ಸೊಸೆ ಇಬ್ಬರೂ ಸೇರಿ ಕೋಲಿನಿಂದ ಥಳಿಸಿದ್ದಾರೆ. ಏಟು ತಾಳಲಾರದೇ ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

    ಮೃತನ ಹಿರಿಯ ಮಗ ಪೊಲೀಸರಿಗೆ ಭಾನುವಾರ ದೂರು ನೀಡಿದ್ದು, ಎಫ್‍ಐಆರ್ ದಾಖಲಾಗಿತ್ತು. ಆದರೆ ದಂಪತಿ ಕೊಲೆ ಮಾಡಿದ ನಂತರ ಪೊಲೀಸರಿಗೆ ಶರಣಾಗಿದ್ದಾರೆ. ಮೃತನ ಪತ್ನಿ 4 ವರ್ಷಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಳು ಎಂದು ಗ್ರಾಮಸ್ಥರು ಹೇಳಿದ್ದಾರೆ.

    ಈ ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದು, ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

  • ಬಾತ್ ರೂಮಿನಲ್ಲಿ ಬೆತ್ತಲಾಗಿದ್ದ ಸ್ಥಿತಿಯಲ್ಲಿ ದಂಪತಿಯ ಶವ ಪತ್ತೆ

    ಬಾತ್ ರೂಮಿನಲ್ಲಿ ಬೆತ್ತಲಾಗಿದ್ದ ಸ್ಥಿತಿಯಲ್ಲಿ ದಂಪತಿಯ ಶವ ಪತ್ತೆ

    ಲಕ್ನೋ: ದಂಪತಿಯ ಮೃತದೇಹ ಬಾತ್ ರೂಂನಲ್ಲಿ ಬೆತ್ತಲಾಗಿ ಪತ್ತೆಯಾಗಿರುವ ಘಟನೆ ಘಾಜಿಯಾಬಾದ್ ನ ಇಂದಿರಾಪುರಂನ ಜ್ಞಾನ ಖಾಂಡ್ ಪ್ರದೇಶದಲ್ಲಿ ನಡೆದಿದೆ.

    ನೀರಜ್ ಸಿಂಘಾನಿಯಾ (38), ಅವರ ಪತ್ನಿ ರುಚಿ ಸಿಂಘಾನಿಯಾ(35) ಮೃತಪಟ್ಟ ದಂಪತಿ. ಇವರು 4 ವರ್ಷಗಳ ಹಿಂದೆ ವಿವಾಹವಾಗಿದ್ದು, ಇಂದಿರಾಪುರಂ ಫ್ಲ್ಯಾಟ್ ನಲ್ಲಿ ವಾಸವಾಗಿದ್ದರು. ನೀರಜ್ ಸಿಂಘಾನಿಯಾ ಒಬ್ಬ ಮ್ಯಾಟ್ರಿಕ್ಸ್ ಸೆಲ್ಯೂಲಾರ್ ಸರ್ವೀಸ್ ನ ಉಪ ಪ್ರಧಾನ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು.

    ಶುಕ್ರವಾರ ಹೋಳಿ ಆಚರಣೆ ಮುಗಿಸಿ ದಂಪತಿ ಸ್ನಾನಕ್ಕೆ ತೆರಳಿ ಬಾತ್ ರೂಂನಲ್ಲೇ ಮೃತಪಟ್ಟಿದ್ದಾರೆ. ಈ ದಂಪತಿಯ ಸಾವು ಅನುಮಾನಾಸ್ಪದವಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಜಿಲ್ಲೆಯ ಪೊಲೀಸ್ ಮುಖ್ಯಸ್ಥ ಎಚ್.ಎನ್ ಸಿಂಗ್ ತಿಳಿಸಿದ್ದಾರೆ.

    ಹೋಳಿ ಹಬ್ಬ ಆಚರಿಸಿ ದಂಪತಿ ಕುಟುಂಬ ಸಮೇತರಾಗಿ ಊಟಕ್ಕೆ ಹೋಗಲು ಸಿದ್ಧರಾಗಲು ಸ್ನಾನದ ಕೋಣೆಗೆ ಹೋಗಿದ್ದಾರೆ. ಆದರೆ ತುಂಬಾ ಸಮಯದವರೆಗೆ ಹೊರಗೆ ಬಾರಲಿಲ್ಲ. ನಂತರ ನೀರಜ್ ತಂದೆ ಪ್ರೇಮ್ ಪ್ರಕಾಶ್ ಬಾಗಿಲು ಬಡಿದು ಕರೆದಿದ್ದಾರೆ. ಆದರೆ ದಂಪತಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲಿಲ್ಲ. ಸುಮಾರು ಅರ್ಧ ಗಂಟೆಯಾದ ಬಳಿಕ ಮತ್ತೆ ಬಾಗಿಲು ಬಡಿದಿದ್ದಾರೆ. ಆಗಲೂ ಬಾಗಿಲು ತೆಗೆಯಲಿಲ್ಲ.

    ದಂಪತಿ ಕೊಠಡಿಯ ಒಳಗಿನಿಂದ ಲಾಕ್ ಮಾಡಿಕೊಂಡಿದ್ದರು. ಆದ್ದರಿಂದ ತಂದೆ ನೀರಜ್ ಸಹೋದರನಿಗೆ ಹೇಳಿದ್ದಾರೆ. ಅವರು ಕೂಡ ಬಾಗಿಲು ತೆಗೆಯಲು ಪ್ರಯತ್ನಿಸಿದ್ದರು. ಆದರೂ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ವೆಂಟಿಲೇಟರ್ ನಲ್ಲಿ ಇಣುಕಿ ನೋಡಿದಾಗ ಇಬ್ಬರು ಬೆತ್ತಲಾಗಿ ನೆಲದ ಮೇಲೆ ಬಿದ್ದಿರುವುದು ಪತ್ತೆಯಾಗಿದೆ. ನಂತರ ಕುಟುಂಬದವರು ಸೇರಿ ಬಾಗಿಲು ಮುರಿದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಇಬ್ಬರನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ದಂಪತಿಯನ್ನು ಪರೀಕ್ಷೆ ಮಾಡಿ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

    ಈ ಘಟನೆ ನಡೆದ ಸ್ಥಳದಲ್ಲಿ ವಿದ್ಯುತ್ ಪ್ರವಹಿಸಿದ, ವಿಷಾನಿಲ ಹೊರಸೂಸಿದ, ಉಸಿರುಗಟ್ಟಿ ಮೃತಪಟ್ಟಂತಹ ಯಾವುದೇ ಸುಳಿವು ಕಂಡು ಬಂದಿಲ್ಲ. ಸ್ಥಳದಲ್ಲಿದ್ದ ಬಕೆಟ್ ಖಾಲಿಯಾಗಿದ್ದವು. ಗ್ಯಾಸ್ ಗೀಸರ್ ಆಫ್ ಆಗಿತ್ತು. ಅವರ ಸಾವಿಗೆ ಕಾರಣ ತನಿಖೆಯಿಂದಷ್ಟೇ ತಿಳಿಯಬೇಕಿದೆ ಎಂದು ನೀರಜ್ ತಂದೆ ಹೇಳಿದ್ದಾರೆ.

    ಹೋಳಿ ಹಬ್ಬಕ್ಕೆಂದು ರುಚಿಯವರ ಪೋಷಕರೂ ಕೂಡಾ ನೀರಜ್ ಮನೆಗೆ ಆಗಮಿಸಿದ್ದರು. ಸದ್ಯಕ್ಕೆ ಮೃತದೇಹವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂದು ಸಿಂಗ್ ತಿಳಿಸಿದ್ದಾರೆ.

  • ಮಗಳ ಸಾವಿನ ಸುದ್ದಿ ಕೇಳಿಯೂ ಅಪರಿಚಿತ ವ್ಯಕ್ತಿಯನ್ನು ಬದುಕಿಸಿದ ಪೊಲೀಸ್ ಪೇದೆ

    ಮಗಳ ಸಾವಿನ ಸುದ್ದಿ ಕೇಳಿಯೂ ಅಪರಿಚಿತ ವ್ಯಕ್ತಿಯನ್ನು ಬದುಕಿಸಿದ ಪೊಲೀಸ್ ಪೇದೆ

    ಲಕ್ನೋ: ಪೇದೆಯೊಬ್ಬರು ಮಗಳ ಸಾವಿನ ಸುದ್ದಿ ಕೇಳಿಯೂ ಅಪರಿಚಿತ ವ್ಯಕ್ತಿಯ ಪ್ರಾಣ ಕಾಪಾಡಲು ಧಾವಿಸಿದ್ದು, ಈಗ ಅವರ ಕಾರ್ಯಕ್ಕೆ ಜನರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಉತ್ತರ ಪ್ರದೇಶದ ಮೀರತ್ ನ ಮುಖ್ಯಪೇದೆ ಭೂಪೇಂದ್ರ ತೋಮರ್ ಅವರು ತಮ್ಮ ಕರ್ತವ್ಯ ನಿಷ್ಠೆಯಿಂದ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ತಮ್ಮ ಮಗಳ ಸಾವಿನ ಸುದ್ದಿ ಕೇಳಿದ ನಂತರವೂ ಅಪರಿಚಿತ ವ್ಯಕ್ತಿಯನ್ನು ಕಾಪಾಡಿದ್ದಾರೆ.

    ನಡೆದುದ್ದೇನು?: ತೋಮರ್ ಫೆಬ್ರವರಿ 23ರಂದು ಸಿಬ್ಬಂದಿಯೊಂದಿಗೆ ಕರ್ತವ್ಯದಲ್ಲಿದ್ದರು. ಆಗ ಬೆಳಗ್ಗೆ ಸುಮಾರು 9 ಗಂಟೆಯ ವೇಳೆಗೆ ವ್ಯಕ್ತಿಯೊಬ್ಬ ಚಾಕು ಇರಿತಕ್ಕೊಳಗಾಗಿ ರಸ್ತೆಯಲ್ಲಿ ಒದ್ದಾಡುತ್ತಿದ್ದಾನೆ ಎಂದು ಸಾರ್ವಜನಿಕರಿಂದ ಕರೆ ಬಂದಿತ್ತು. ತಕ್ಷಣ ಅವರು ಮತ್ತು ಅವರ ತಂಡ ಹೋಗಲು ಸಿದ್ಧವಾಗುತ್ತಿದ್ದಾಗ ತೋಮರ್ ಗೆ ಮತ್ತೊಂದು ಫೋನ್ ಕಾಲ್ ಬಂದಿದ್ದು, ತೋಮರ್ ಮಗಳು ಸ್ನಾನದ ಕೋಣೆಯಲ್ಲಿ ಬಿದ್ದು ಮೃತಪಟ್ಟಿದ್ದಾಳೆ ಎಂದು ತಿಳಿಸಿದ್ದರು.

    ಆ ಸುದ್ದಿ ಕೇಳಿಯೂ, ದುಃಖದ ಸನ್ನಿವೇಶದಲ್ಲೂ ಕರ್ತವ್ಯವನ್ನು ಮರೆಯದೆ ತೋಮರ್ ಗಾಯಗೊಂಡು ರಸ್ತೆಯಲ್ಲಿ ಒದ್ದಾಡುತ್ತಿದ್ದ ವ್ಯಕ್ತಿಯನ್ನು ಕಾಪಾಡಲು ಸ್ಥಳಕ್ಕೆ ಧಾವಿಸಿದರು. ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಕೊಡಿಸಿ ಆತನ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ಹೇಳಿದ ನಂತರ ಮನೆಗೆ ತೆರಳಿದರು.

    ತೋಮರ್ ಮಗಳಿಗೆ 27 ವರ್ಷ ವಯಸ್ಸಾಗಿತ್ತು. ಒಂದು ವರ್ಷದ ಹಿಂದಷ್ಟೆ ಮದುವೆಯಾಗಿದ್ದರು. ಅವರು ಮೀರತ್ ಬಕ್ಸಾರ್ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಶೌಚಕ್ಕೆ ಹೋಗಿದ್ದಾಗ ಅಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

    ಸತ್ತಿದ್ದು ಮಗಳೇ ಆದರೂ, ಆ ಸಮಯದಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ವ್ಯಕ್ತಿಯನ್ನು ಬದುಕಿಸುವುದೇ ತಮಗೆ ಮುಖ್ಯವಾಗಿತ್ತು. ಆದ್ದರಿಂದ ನಾನು ಹೋಗಿ ಅವರನ್ನು ಕಾಪಾಡಿದ್ದೇನೆ. ನಾನು ಅಸಾಧಾರಣವಾಗಿ ಏನನ್ನೋ ಮಾಡಿದ್ದೇನೆ ಎಂದು ನಾನು ಯೋಚಿಸುವುದಿಲ್ಲ ಎಂದು ತೋಮರ್ ಹೇಳಿದ್ದಾರೆ.

    ತೋಮರ್ ಅವರ ಕರ್ತವ್ಯ ನಿಷ್ಠಗಾಗಿ ಅವರನ್ನು ಸನ್ಮಾನಿಸಲಾಗಿದೆ. ಜೊತೆಗೆ ಇತ್ತೀಚೆಗೆ ಸಹರಾನ್ಪುರದ ಡಿಐಜಿ ಶರದ್ ಸಚನ್ ಮತ್ತು ಎಸ್‍ಎಸ್‍ಪಿ ಬಬ್ಲೂ ಕುಮಾರ್ ಕೂಡ ತೋಮರ್ ಅವರಿಗೆ ಸನ್ಮಾನ ಮಾಡಿದ್ದಾರೆ. ಅಷ್ಟೇ ಅಲ್ಲದೇ ಸದ್ಯ ದುಃಖದಲ್ಲಿರೋ ತೋಮರ್ ಕುಟುಂಬಕ್ಕೆ ಎಲ್ಲಾ ರೀತಿಯ ಸಹಾಯ ಮಾಡುವುದಾಗಿ ಪೊಲೀಸ್ ನಿರ್ದೇಶಕ ಒ.ಪಿ.ಸಿಂಗ್ ಭರವಸೆ ನೀಡಿದ್ದಾರೆ.

  • ತಂದೆ ಗುಡ್‍ನೈಟ್ ಹೇಳಿ ಹೋದ 10 ನಿಮಿಷಕ್ಕೆ ಬಾಲ್ಕನಿಯಿಂದ ಬಿದ್ದು ಬಾಲಕಿ ಸಾವು!

    ತಂದೆ ಗುಡ್‍ನೈಟ್ ಹೇಳಿ ಹೋದ 10 ನಿಮಿಷಕ್ಕೆ ಬಾಲ್ಕನಿಯಿಂದ ಬಿದ್ದು ಬಾಲಕಿ ಸಾವು!

    ಲಕ್ನೋ: ಆರನೇ ಮಹಡಿಯಿಂದ ಬಿದ್ದು ಬಾಲಕಿಯೊಬ್ಬಳು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಇಂದಿರಾಪುರಂನಲ್ಲಿ ನಡೆದಿದೆ.

    14 ವರ್ಷದ ಬಾಲಕಿ ಅಗ್ರಿಮಾ ಮೃತ ದುರ್ದೈವಿ. ಈ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ. ತಂದೆ ರಾಹುಲ್ ಶರ್ಮಾ ಮಗಳಿಗೆ ಗುಡ್ ನೈಟ್ ಹೇಳಿ ಹೋದ 10 ನಿಮಿಷಗಳ ನಂತರ ಕಟ್ಟಡದಿಂದ ಬಿದ್ದು ಅಗ್ರಿಮಾ ಮೃತಪಟ್ಟಿದ್ದಾಳೆ. ಅಗ್ರಿಮಾ ತನ್ನ ಪೋಷಕರೊಂದಿಗೆ ಇಂದಿರಾಪುರಂನ ಶಿಪ್ರಾ ಕೃಷ್ಣ ವಿಸ್ಟಾ ಅಪಾರ್ಟ್‍ಮೆಂಟ್‍ನ 6ನೇ ಮಹಡಿಯಲ್ಲಿ ವಾಸಿಸುತ್ತಿದ್ದಳು.

    ನಡೆದಿದ್ದೇನು?: ಮಂಗಳವಾರ ರಾತ್ರಿ ತಂದೆ ಮಗಳಿಗೆ ಗುಡ್ ನೈಟ್ ಹೇಳಿ ಹೋಗಿದ್ದಾರೆ. ಆದರೆ 10 ನಿಮಿಷಗಳ ನಂತರ ನಿಮ್ಮ ಮಗಳು ಬಾಲ್ಕನಿಯಿಂದ ಬಿದ್ದಿದ್ದಾಳೆ ಎಂದು ಅವರಿಗೆ ಕಟ್ಟಡದ ಭದ್ರತಾ ಸಿಬ್ಬಂದಿಯಿಂದ ಕರೆ ಬಂದಿದೆ. ತಕ್ಷಣ ಶರ್ಮಾ ಹೋಗಿ ನೋಡಿದಾಗ ಮಗಳು ಬಾಲ್ಕನಿಯಿಂದ ಕೆಳಗೆ ಬಿದ್ದು ರಕ್ತದ ಮಡುವಿನಲ್ಲಿದ್ದಳು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ರವಾನಿಸಲಾಗಿತ್ತು. ಆದ್ರೆ ಯಾವುದೇ ಪ್ರಯೋಜನವಾಗಿಲ್ಲ.

    6ನೇ ಮಹಡಿಯಿಂದ ಬಿದ್ದಿದ್ದರಿಂದ ಅಗ್ರಿಮಾಳ ಅಂಗಗಳಿಗೆ ಗಂಭೀರವಾಗಿ ಪೆಟ್ಟಾಗಿತ್ತು. ಆಕೆಯ ತಲೆ, ಭುಜ ಹಾಗೂ ಪಕ್ಕೆಲುಬುಗಳ ಮೂಳೆ ಮುರಿದಿತ್ತು. ಶಸ್ತ್ರಚಿಕಿತ್ಸೆಗಾಗಿ 34 ಯೂನಿಟ್ ರಕ್ತವನ್ನು ನೀಡಲಾಗಿತ್ತು. ಆದರೂ ಅಗ್ರಿಮಾ ಚಿಕಿತ್ಸೆ ಫಲಕಾರಿಯಾದೇ ಮೃತಪಟ್ಟಿದ್ದಾಳೆ.

    ಆಗ್ರಿಮಾ 8ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ಓದಲೆಂದು ತಡರಾತ್ರಿವರೆಗೂ ಎಚ್ಚರವಾಗಿರುತ್ತಿದ್ದಳು. ಆದ್ರೆ ಬಾಲ್ಕನಿಯ ಎತ್ತರ ಹಾಗೂ ಬಾಲಕಿ ಬಿದ್ದ ಸ್ಥಳವನ್ನ ನೋಡಿದ್ರೆ ಆಕೆ ಆಕಸ್ಮಿಕವಾಗಿ ಬಿದ್ದಿರುವುದಲ್ಲ ಎಂದು ಕಾಣಿಸುತ್ತದೆ. ಅಗ್ರಿಮಾ ಬಾಲ್ಕನಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಹೆಚ್ಚಿದೆ ಎಂದು ವರದಿಯಾಗಿದೆ.

    ಅಗ್ರಿಮಾ ಓದುವುದರಲ್ಲಿ ತರಗತಿಯಲ್ಲಿ ಮುಂದಿದ್ದಳು. ಅಷ್ಟೇ ಅಲ್ಲದೇ ಚೆಸ್ ಚಾಂಪಿಯನ್ ಕೂಡ ಆಗಿದ್ದಳು. ಕಟ್ಟಡದಿಂದ ಬಿದ್ದ ನಂತರ ವೈಶಾಲಿಯ ಮ್ಯಾಕ್ಸ್ ಆಸ್ಪತ್ರೆಗೆ ಆಕೆಯನ್ನ ದಾಖಲಿಸಲಾಗಿತ್ತು. ಆದರೂ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾಳೆ. ಇದನ್ನು ಓದಿ: ಆರುಷಿ ಕೊಲೆ ಮಾಡಿದವರು ಯಾರು: ದೇಶಾದ್ಯಂತ ಕೇಳೋ ಪ್ರಶ್ನೆಗೆ ಉತ್ತರ ಸಿಗುತ್ತಾ?

  • 16ರ ಹುಡುಗಿ ಮೇಲೆ ಯುವಕನಿಂದ ಅತ್ಯಾಚಾರ- ವಿಡಿಯೋ ಮಾಡಿದ ಸಹೋದರಿ!

    16ರ ಹುಡುಗಿ ಮೇಲೆ ಯುವಕನಿಂದ ಅತ್ಯಾಚಾರ- ವಿಡಿಯೋ ಮಾಡಿದ ಸಹೋದರಿ!

    ಲಕ್ನೋ: 22 ವರ್ಷದ ಯುವಕನೊಬ್ಬ 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದು, ಆ ಹೀನ ಕೃತ್ಯವನ್ನು ಆತನ ಸಹೋದರಿ ವಿಡಿಯೋ ಮಾಡಿರುವ ಆರೋಪ ಕೇಳಿಬಂದಿದೆ.

    ಉತ್ತರ ಪ್ರದೇಶದ ಮುಜಾಫರ್ ನಗರದ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ಭಾನುವಾರ ಈ ಘಟನೆ ನಡೆದಿದ್ದು, ಸೋಮವಾರ ಆರೋಪಿ ಯುವಕ ಮತ್ತು ಆತನ ಸಹೋದರಿ ಮೇಲೆ ಎಫ್‍ಐಆರ್ ದಾಖಲಿಸಲಾಗಿದೆ. ಪೊಲೀಸರು ಇನ್ನೂ ಆ ವಿಡಿಯೋವನ್ನು ವಶಪಡಿಸಿಕೊಂಡಿಲ್ಲ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಮಹಿಳೆಯರು ಒಬ್ಬರ ಮೇಲೊಬ್ಬರು ಪ್ರತಿ ದೂರು ಸಲ್ಲಿಸಿದ್ದು, ಪ್ರಕರಣಗಳ ತನಿಖೆ ನಡೆಸಲಾಗುತ್ತಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

    ಶುಕ್ರವಾರ ರುಕ್ಸಾನಾ(ಹೆಸರು ಬದಲಿಸಲಾಗಿದೆ) ಸಮ್ರೀನ್(ಹೆಸರು ಬದಲಿಸಲಾಗಿದೆ) ವಿರುದ್ಧ ಕಳ್ಳತನ ಆರೋಪದಡಿ ದೂರು ದಾಖಲಿಸಿದ್ದಳು. ಭಾನುವಾರ ಸಮ್ರೀನ್ ರುಕ್ಸಾನಾ ಕುಟುಂಬ ಸದಸ್ಯರ ವಿರುದ್ಧ ಅತ್ಯಾಚಾರ ಪ್ರಕರಣವನ್ನು ದಾಖಲಿಸಿದ್ದಳು. ಭಾನುವಾರ ಮತ್ತೆ ರುಕ್ಸಾನಾ ತನ್ನ 16 ವರ್ಷ ವಯಸ್ಸಿನ ಸಹೋದರಿಯನ್ನು ಸಮ್ರೀನ್ ಸಹೋದರ ಅತ್ಯಾಚಾರ ಮಾಡಿದ್ದಾನೆ. ಅತ್ಯಾಚಾರದ ವಿಡಿಯೋವನ್ನು ಸಮ್ರೀನ್ ರೆಕಾರ್ಡ್ ಮಾಡಿದ್ದಾಳೆ ಎಂದು ದೂರು ದಾಖಲಿಸಿರುವುದಾಗಿ ವರದಿಗಳು ತಿಳಿಸಿವೆ.

    ಈ ಇಬ್ಬರು ಮಹಿಳೆಯರು ಮೊದಲಿಗೆ ಒಂದೇ ಮನೆಯಲ್ಲಿ ವಾಸವಾಗಿದ್ದರು. ಆದ್ರೆ ಮೂರು ತಿಂಗಳ ಹಿಂದೆ ಜಗಳವಾಗಿ ತಮ್ಮ ಮನೆಗಳಿಗೆ ಹಿಂದಿರುಗಿದ್ದರು. ಬಳಿಕ ಒಬ್ಬರ ಮೇಲೊಬ್ಬರು ಪ್ರಕರಣಗಳನ್ನು ದಾಖಲಿಸಿದ್ದಾರೆ. ಸಮ್ರೀನ್ ಕುಟುಂಬದವರು ನನ್ನ ಸಹೋದರಿಯನ್ನ ವೇಶ್ಯಾವಾಟಿಕೆಗೆ ಒತ್ತಾಯಿಸಿದ್ದರು. ಇದಕ್ಕೆ ಸಹೋದರಿ ನಿರಾಕರಿಸಿದ್ದರಿಂದ ಸಮ್ರೀನ್ ಸಹೋದರ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅತ್ಯಾಚಾರದ ವಿಡಿಯೋವನ್ನು ಸಮ್ರೀನ್ ರೆಕಾರ್ಡ್ ಮಾಡಿದ್ದಾಳೆ ಎಂದು ರುಕ್ಸಾನಾ ಆರೋಪ ಮಾಡಿರುವುದಾಗಿ ಸಿವಿಲ್ ಲೈನ್ಸ್ ಪೋಲಿಸ್ ಠಾಣೆಯ ಅಧಿಕಾರಿ ಡಿ.ಕೆ ತ್ಯಾಗಿ ಹೇಳಿದ್ದಾರೆ.

    ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆಂದು ಆಸ್ಪತ್ರೆಗೆ ಕಳಿಸಲಾಗಿದೆ. ವರದಿ ಬಂದ ನಂತರ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

  • ಕೂಲ್ ಡ್ರಿಂಕ್ ಗೆ ಮತ್ತು ಬರುವ ಔಷಧಿ ಹಾಕಿ ಪದವೀಧರೆಯನ್ನ ರೇಪ್ ಮಾಡ್ದ-ಇನ್ನೊಬ್ಬ ವಿಡಿಯೋ ಮಾಡ್ದ

    ಕೂಲ್ ಡ್ರಿಂಕ್ ಗೆ ಮತ್ತು ಬರುವ ಔಷಧಿ ಹಾಕಿ ಪದವೀಧರೆಯನ್ನ ರೇಪ್ ಮಾಡ್ದ-ಇನ್ನೊಬ್ಬ ವಿಡಿಯೋ ಮಾಡ್ದ

    ಲಕ್ನೋ: ಪದವಿ ವ್ಯಾಸಂಗ ಮಾಡುತ್ತಿದ್ದ ಯುವತಿಯೊಬ್ಬಳನ್ನು ಅತ್ಯಾಚಾರವೆಸಗಿದ್ದ ಆರೋಪದ ಮೇಲೆ ವ್ಯಕ್ತಿಯೋರ್ವನನ್ನು ಬಂಧಿಸಿರುವ ಘಟನೆ ಉತ್ತರ ಪ್ರದೇಶದ ಗಾಝಿಯಾಬಾದ್‍ನಲ್ಲಿ ನಡೆದಿದೆ.

    ಸಂತ್ರಸ್ತೆ ಶುಕ್ರವಾರ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದು, ಈ ಹಿನ್ನೆಲೆಯಲ್ಲಿ ಆರೋಪಿ ಮೆಹತಾಬ್ ನನ್ನು ಭಾನುವಾರ ಬಂಧಿಸಲಾಗಿದೆ. ಸಂತ್ರಸ್ತೆ ದೂರಿನಲ್ಲಿ ಮೂರು ವ್ಯಕ್ತಿಗಳನ್ನು ಹೆಸರಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

    ನಡೆದಿದ್ದೇನು?: ಫೆಬ್ರವರಿ 7 ರಂದು ಹೋಟೆಲೊಂದರಲ್ಲಿ ಕೂಲ್ ಡ್ರಿಂಕ್‍ಗೆ ಮತ್ತು ಬರುವ ಔಷಧಿ ಬೆರೆಸಿ ಸಂತ್ರಸ್ತೆಗೆ ಆರೋಪಿ ಮೆಹತಾಬ್ ನೀಡಿದ್ದಾನೆ. ನಂತರ ಅದನ್ನು ಕುಡಿದ ಸಂತ್ರಸ್ತೆ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾರೆ. ಬಳಿಕ ಆರೋಪಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆರೋಪಿ ಅತ್ಯಾಚಾರ ಎಸಗಿದ್ದ ವಿಡಿಯೋವನ್ನ ಆತನ ಜೊತೆಗಿದ್ದ ಸ್ನೇಹಿತ ವಿಡಿಯೋ ಮಾಡಿದ್ದಾನೆ.

    ಅಷ್ಟೇ ಅಲ್ಲದೇ ಸಂತ್ರಸ್ತೆ ತನ್ನ ಧರ್ಮವನ್ನು ಬದಲಾಯಿಸಿಕೊಂಡು ತನ್ನನ್ನು ಮದುವೆಯಾಗದೆ ಇದ್ದಲ್ಲಿ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡುವುದಾಗಿ ಮೆಹತಾಬ್ ನನಗೆ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆ ತಿಳಿಸಿದ್ದಾರೆ.

    ಫೆಬ್ರವರಿ 15 ರಂದು, ಮೆಹತಾಬ್, ಆಕೆಯ ಬಳಿಯಿಂದ ಮೊಬೈಲ್ ಕಿತ್ತುಕೊಂಡು ಆಕೆಯನ್ನು ಚಲಿಸುವ ಆಟೋದಿಂದ ಹೊರಹಾಕಿದ್ದಾನೆ. ಮರುದಿನ ಸಂತ್ರಸ್ತೆ ದೂರು ಸಲ್ಲಿಸಿದ್ದಾರೆ. ಈ ಪ್ರಕರಣದ ಬಗ್ಗೆ ತನಿಖೆ ಮಾಡಲಾಗುತ್ತಿದೆ ಎಂದು ಅಧಿಕಾರಿ ಹೇಳಿದ್ದಾರೆ.

     

  • ಮದ್ವೆಯಾದ ಎರಡೇ ದಿನಕ್ಕೆ ವಧುವಿನ ಬಾಯ್‍ಫ್ರೆಂಡ್‍ನಿಂದಲೇ ನವವಿವಾಹಿತನ ಕೊಲೆ!

    ಮದ್ವೆಯಾದ ಎರಡೇ ದಿನಕ್ಕೆ ವಧುವಿನ ಬಾಯ್‍ಫ್ರೆಂಡ್‍ನಿಂದಲೇ ನವವಿವಾಹಿತನ ಕೊಲೆ!

    ಲಕ್ನೋ: ಮದುವೆಯಾದ ಎರಡೇ ದಿನಕ್ಕೆ ಪತ್ನಿಯ ಪ್ರಿಯಕರನಿಂದಲೇ ನವವಿವಾಹಿತ ಕೊಲೆಯಾಗಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರ್ ಜಿಲ್ಲೆಯಲ್ಲಿ ನಡೆದಿದೆ.

    ಲಖನ್ ಸಿಂಗ್ ಹತ್ಯೆಯಾದ ನವವಿವಾಹಿತ. ಲಖನ್ ಸಿಂಗ್ ಪ್ರಿಯಾಂಕಾರನ್ನು ಸಮುದಾಯದ ಸಂಪ್ರದಾಯದಂತೆ ವಿವಾಹವಾಗಿದ್ದರು. ಮದುವೆಯಾದ ನಂತರ ಸಿಂಗ್ ಖಾಸಗಿ ವಿವಾಹ ಸಮಾರಂಭವೊಂದನ್ನು ಆಯೋಜಿಸಿದ್ದು, ತನ್ನ ಕುಟುಂಬದೊಂದಿಗೆ ವಧು ಪ್ರಿಯಾಂಕಾ ಅವರ ಮನೆಗೆ ಹೋಗಿದ್ದರು.

    ಆದ್ರೆ ಅನಂತರ ಸಿಂಗ್ ನಾಪತ್ತೆಯಾಗಿದ್ದರು. ತುಂಬಾ ಸಮಯವಾದರೂ ಹಿಂದಿರುಗದ ಕಾರಣ ಮನೆಯವರು ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿದ್ದರು. ಪೊಲೀಸರು ತನಿಖೆ ಮಾಡುವಾಗ ವರನ ಬೈಕ್ ಯಮುನಾ ನದಿಯ ಬಳಿ ಪತ್ತೆಯಾಗಿತ್ತು. ಜೊತೆಗೆ ಶೋಧ ನಡೆಸಿದಾಗ ಲಖನ್ ಸಿಂಗ್ ಮೃತದೇಹವೂ ಪತ್ತೆಯಾಗಿದೆ. ವಿಚಾರಣೆಯ ಬಳಿಕ ಅಜಯ್ ಗೊಯಾಲ್ ಎಂಬವನು ಲಖನ್‍ನನ್ನು ಕೊಲೆ ಮಾಡಿರುವುದು ತಿಳಿದುಬಂದಿದೆ.

    ಮದುವೆಯಾಗುವ ಮುನ್ನ ನಾನು ಅಜಯ್ ಜೊತೆ ಫೋನಿನಲ್ಲಿ ಮಾತನಾಡುತ್ತಿದ್ದೆ. ಆದರೆ ಆತ ನನ್ನ ಪತಿಯನ್ನು ಕೊಲೆ ಮಾಡುತ್ತಾನೆ ಎಂದು ಕಲ್ಪನೆ ಸಹ ಮಾಡಿರಲಿಲ್ಲ ಎಂದು ಪ್ರಿಯಾಂಕಾ ಹೇಳಿದ್ದಾರೆ.

    ಅಜಯ್ ಪ್ರಿಯಾಂಕಾರಿಂದ ಲಖನ್ ಸಿಂಗ್ ಅವರ ದೂರವಾಣಿ ಸಂಖ್ಯೆಯನ್ನು ತೆಗೆದುಕೊಂಡಿದ್ದ. ನಂತರ ಇಬ್ಬರೂ ಸಂಪರ್ಕದಲ್ಲಿದ್ದರು. ಅಜಯ್ ಆಗಾಗ ಸಿಂಗ್‍ಗೆ ಮತ್ತು ಪ್ರಿಯಾಂಕಾರಿಗೆ ಕಿರುಕುಳ ನೀಡಲು ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದ.

    ಪ್ರಿಯಾಂಕಾ ಜೊತೆಗಿನ ತನ್ನ ಫೋಟೋಗಳನ್ನು ಸಹ ಸಿಂಗ್ ಗೆ ಕಳುಹಿಸುತ್ತಿದ್ದನು. ಆದರೂ ಸಿಂಗ್ ಅದರ ಬಗ್ಗೆ ಮಾತನಾಡಿರಲಿಲ್ಲ. ಯಾರಿಗೂ ಇದರ ಬಗ್ಗೆ ಹೇಳಿರಲಿಲ್ಲ. ಯಾಕೆಂದರೆ ಸಿಂಗ್ ಪ್ರಿಯಾಂಕಾ ಜೊತೆ ಮದುವೆಯಾಗಿ ಸಂತೋಷದಿಂದ ಇರಲು ಇಷ್ಟಪಟ್ಟಿದ್ದರು ಎಂದು ಲಖನ್ ಕುಟುಂಬದ ಸದಸ್ಯರು ತಿಳಿಸಿದ್ದಾರೆ.