Tag: lucknow

  • ಗೋಲ್ಡನ್ ಅವಾರ್ಡ್ ಪಡೆಯಲು ವೇದಿಕೆ ಮೇಲೆ ಬಂದ ಉದ್ಯಮಿ ಡ್ಯಾನ್ಸ್ ಮಾಡುತ್ತಲೇ ಪ್ರಾಣ ಬಿಟ್ಟ – ವಿಡಿಯೋ ವೈರಲ್

    ಗೋಲ್ಡನ್ ಅವಾರ್ಡ್ ಪಡೆಯಲು ವೇದಿಕೆ ಮೇಲೆ ಬಂದ ಉದ್ಯಮಿ ಡ್ಯಾನ್ಸ್ ಮಾಡುತ್ತಲೇ ಪ್ರಾಣ ಬಿಟ್ಟ – ವಿಡಿಯೋ ವೈರಲ್

    ಲಕ್ನೊ: ಡಾನ್ಸ್ ಮಾಡುತ್ತಿದ್ದ ವ್ಯಕ್ತಿಯೊಬ್ಬ ವೇದಿಕೆ ಮೇಲೆಯೇ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

    ಮೃತರನ್ನು ಮೂಲತಃ ಮುಂಬೈನ ಟ್ರಾವೆಲ್ ಉದ್ಯಮಿ ವಿಷ್ಣು ಪಾಂಡೆ ಎಂದು ಗುರುತಿಸಲಾಗಿದೆ. ಇವರು ವೇದಿಕೆ ಮೇಲೆ ಡ್ಯಾನ್ಸ್ ಮಾಡುತ್ತಾ ಮಾಡುತ್ತಾ ಮೃತಪಟ್ಟಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಆಗ್ರಾದ ಖಾಸಗಿ ಹೊಟೇಲ್ ಒಂದರಲ್ಲಿ ಟ್ರಾವೆಲ್ ಏಜೆನ್ಸಿ ಕಾರ್ಯಕ್ರಮ ಏರ್ಪಡಿಸಿತ್ತು. ದೇಶದ ಅನೇಕ ಉದ್ಯಮಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅದರಲ್ಲಿ ಟ್ರಾವೆಲ್ ಉದ್ಯಮಿ ವಿಷ್ಣು ಕೂಡ ಪಾಲ್ಗೊಂಡಿದ್ದರು.

    ಈ ಕಾರ್ಯಕ್ರಮದಲ್ಲಿ ವಿಷ್ಣು ಗೋಲ್ಡನ್ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಇದನ್ನು ಹೇಳುತ್ತಿದ್ದಂತೆ ಉದ್ಯಮಿ ಖುಷಿಯಿಂದ ಡಾನ್ಸ್ ಮಾಡುತ್ತಾ ವೇದಿಕೆ ಮೇಲೆ ಹೋಗಿದ್ದಾರೆ. ವೇದಿಕೆ ಮೇಲೆಯೂ ಡಾನ್ಸ್ ಮಾಡುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಡಾನ್ಸ್ ಮಾಡುತ್ತಾ ಮಾಡುತ್ತಾ ಕೆಳಗೆ ಬಿದ್ದಿದ್ದಾರೆ.

    ತಕ್ಷಣ ಉದ್ಯಮಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಷ್ಟರಲ್ಲಿ ಅವರು ಮೃತ ಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ 16 ನಿಮಿಷದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  • ಮದ್ವೆಯಾಗುವುದಾಗಿ ನಂಬಿಸಿ ಲೈಂಗಿಕ ಕಿರುಕುಳ ನೀಡ್ತಿದ್ದ ಮೈದುನ – ವಿಡಿಯೋ ಮಾಡಿ ಪೊಲೀಸ್ರಿಗೆ ಕೊಟ್ಟ ಸಂತ್ರಸ್ತೆ

    ಮದ್ವೆಯಾಗುವುದಾಗಿ ನಂಬಿಸಿ ಲೈಂಗಿಕ ಕಿರುಕುಳ ನೀಡ್ತಿದ್ದ ಮೈದುನ – ವಿಡಿಯೋ ಮಾಡಿ ಪೊಲೀಸ್ರಿಗೆ ಕೊಟ್ಟ ಸಂತ್ರಸ್ತೆ

    ಲಕ್ನೋ: ವ್ಯಕ್ತಿಯೊಬ್ಬ ಮದುವೆಯಾಗುವುದಾಗಿ ನಂಬಿಸಿ ಅತ್ತಿಗೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಘಟನೆ ಉತ್ತರ ಪ್ರದೇಶದ ರಾಮ್ಪುರದಲ್ಲಿ ನಡೆದಿದೆ.

    ಆರೋಪಿ ಮೈದುನ ಕಿರುಕುಳ ನೀಡುತ್ತಿದ್ದ ವಿಡಿಯೋವನ್ನೂ ಸಂತ್ರಸ್ತೆ ರೆಕಾರ್ಡ್ ಮಾಡಿ ಪೊಲೀಸರಿಗೆ ಸಾಕ್ಷಿಗಾಗಿ ನೀಡಿದ್ದಾರೆ. ಪೊಲೀಸರು ಸಾಕ್ಷಿ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.

    ಸಂತ್ರಸ್ತೆಯ ಪತಿ ಒಂದು ವರ್ಷದ ಹಿಂದೆ ಅನಾರೋಗ್ಯದ ಕಾರಣದಿಂದ ಮೃತಪಟ್ಟಿದ್ದರು. ಈ ವೇಳೆ ಮೈದುನ ಸಂತ್ರಸ್ತೆಗೆ ಮದುವೆಯಾಗುದಾಗಿ ಮಾತು ಕೊಟ್ಟಿದ್ದಾನೆ. ನಂತರ ಮದುವೆ ಹೆಸರಿನಲ್ಲಿ ಸಂತ್ರಸ್ತೆಗೆ ಲೈಂಗಿಕ ಕಿರುಕುಳ ನೀಡಲು ಶುರುಮಾಡಿದ್ದಾನೆ.

    ಸಂತ್ರಸ್ತೆ ನನ್ನನ್ನು ಮದುವೆಯಾಗು ಎಂದು ಒತ್ತಾಯ ಮಾಡಿದ್ರೆ, ನೆಪ ಹೇಳಿ ಆರೋಪಿ ಮದುವೆಯನ್ನು ಮುಂದೂಡುತ್ತಿದ್ದನು. ಈ ವೇಳೆ ಸಂತ್ರಸ್ತೆ ಆತ ಕಿರುಕುಳ ನೀಡುತ್ತಿದ್ದ ವಿಡಿಯೋವನ್ನು ಮಾಡಿದ್ದಾರೆ. ನಂತರ ಅದನ್ನು ಪೊಲೀಸರಿಗೆ ನೀಡಿ ದೂರು ದಾಖಲಿಸಿದ್ದಾರೆ. ನಂತರ ಪೊಲೀಸರು ಆರೋಪಿ ಮೈದುನನ್ನು ಬಂಧಿಸಿದ್ದಾರೆ.

  • ಪತ್ನಿಯನ್ನ ಕಟ್ಟಿ ಹಾಕಿ ಸ್ನೇಹಿತನಿಂದ ಅತ್ಯಾಚಾರ ಮಾಡಿಸಿದ ಪಾಪಿ ಪತಿ!

    ಪತ್ನಿಯನ್ನ ಕಟ್ಟಿ ಹಾಕಿ ಸ್ನೇಹಿತನಿಂದ ಅತ್ಯಾಚಾರ ಮಾಡಿಸಿದ ಪಾಪಿ ಪತಿ!

    ಲಕ್ನೋ: ವ್ಯಕ್ತಿಯೊಬ್ಬ ತನ್ನ ಸ್ನೇಹಿತನಿಂದಲೇ ಪತ್ನಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ.

    ಆರೋಪಿ ಪತಿ ವರದಕ್ಷಿಣೆ ಕೊಡಲಿಲ್ಲ ಎಂದು ಪ್ರತಿದಿನ ಬೈದು ಹೊಡೆಯುತ್ತಿದ್ದು, ವರದಕ್ಷಿಣೆ ಸರಿಯಾಗಿ ನೀಡಿಲ್ಲ ಎನ್ನುವ ಕಾರಣಕ್ಕೆ ಈ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ. ಸದ್ಯಕ್ಕೆ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

    ನಡೆದಿದ್ದೇನು?
    ಸಂತ್ರಸ್ತೆ 2015 ನವೆಂವರ್ ನಲ್ಲಿ ಉತ್ತರ ಪ್ರದೇಶದ ಕರಾಜಿನಾ ಪಟ್ಟಣದ ನಿವಾಸಿ ಜೊತೆ ಮದುವೆಯಾಗಿದ್ದರು. ಮದುವೆ ನಂತರ ವರದಕ್ಷಿಣೆ ವಿಚಾರಕ್ಕೆ ಪತಿ ಹಾಗೂ ಆತನ ಮನೆಯವರು ಮಹಿಳೆಗೆ ಕಿರುಕುಳ ನೀಡುತ್ತಿದ್ದರು. ಅಷ್ಟೇ ಅಲ್ಲದೇ ಒಂದು ತಿಂಗಳಿಂದ ಪತಿ ತನ್ನ ಸ್ನೇಹಿತನ ಜೊತೆ ಸಂಬಂಧ ಬೆಳೆಸುವಂತೆ ಒತ್ತಾಯ ಮಾಡುತ್ತಿದ್ದನು. ಆದರೆ ಸಂತ್ರಸ್ತೆ ಇದಕ್ಕೆ ನಿರಾಕರಿಸಿದ್ದಾರೆ.

    ಪತಿಯ ಮಾತನ್ನ ವಿರೋಧಿಸಿದ್ದಕ್ಕೆ ಪ್ರತಿದಿನ ಸಂತ್ರಸ್ತೆ ಹೊಡೆಯುತ್ತಿದ್ದನು ಎನ್ನಲಾಗಿದೆ. ಮಾರ್ಚ್ 17ರಂದು ಪತ್ನಿಯನ್ನು ಬಲವಂತವಾಗಿ ರೂಮಿನಲ್ಲಿ ಕಟ್ಟಿ ಹಾಕಿದ್ದಾನೆ. ನಂತರ ತನ್ನ ಸ್ನೇಹಿತ ಆಶಿಶ್ ಶ್ರೀವಾಸ್ತವ್ ನನ್ನು ಕೋಣೆಗೆ ಕಳುಹಿಸಿ ಅತ್ಯಾಚಾರ ಮಾಡಿಸಿದ್ದಾನೆ ಎಂದು ನೊಂದ ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.

    ಸಂತ್ರಸ್ತೆ ಆರೋಪಿ ಪತಿ ಮತ್ತು ಸುಭಾಶ್ ನಗರದ ನಿವಾಸಿ ಸ್ನೇಹಿತನ ವಿರುದ್ಧ ವರದಕ್ಷಿಣೆ ದೂರನ್ನು ದಾಖಲಿಸಿದ್ದಾರೆ. ಪೊಲೀಸರು ಆರೋಪಿ ಪತಿ ಹಾಗೂ ಸ್ನೇಹಿತ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ಮುಂದುವರೆಸಿದ್ದಾರೆ.

  • ಒಬ್ಬನಿಗಾಗಿ ಮೂವರು ಯುವತಿಯರ ಕಿತ್ತಾಟ-ಪೊಲೀಸ್ ಸ್ಟೇಷನ್‍ನಲ್ಲಿ ನಡೀತು ಹೈಡ್ರಾಮಾ!

    ಒಬ್ಬನಿಗಾಗಿ ಮೂವರು ಯುವತಿಯರ ಕಿತ್ತಾಟ-ಪೊಲೀಸ್ ಸ್ಟೇಷನ್‍ನಲ್ಲಿ ನಡೀತು ಹೈಡ್ರಾಮಾ!

    ಲಕ್ನೋ: ಯುವಕನೊಬ್ಬನನ್ನು ಮದುವೆಯಾಗಲೆಂದು ಮೂವರು ಯುವತಿಯರು ಪೊಲೀಸ್ ಠಾಣೆಯಲ್ಲೇ ಕಿತ್ತಾಡಿದ ಘಟನೆ ಉತ್ತರಪ್ರದೇಶದ ಗೌತಮ್‍ಬುದ್ ನಗರದಲ್ಲಿ ನಡೆದಿದೆ.

    ಯುವಕನ ಜೊತೆ ಮದುವೆಯಾಗುವುದಾಗಿ ಮೂವರು ಯುವತಿಯರು ನೊಯ್ಡಾದ ಠಾಣೆ ಸೆಕ್ಟರ್-24ರಲ್ಲಿ ಈ ಡ್ರಾಮಾ ನಡೆಸಿದ್ದಾರೆ. ಅಲ್ಲದೇ ಅದರಲ್ಲಿ ಯುವತಿಯೊಬ್ಬಳು ತನ್ನ ಕೈಯನ್ನು ಕಟ್ ಮಾಡಿಕೊಳ್ಳಲು ಯತ್ನಿಸಿದ್ದಾಳೆ. ಇತ್ತ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ.

    ಪೊಲೀಸರ ಪ್ರಕಾರ ಯುವಕ ಮುಲ್‍ರೂಪದ ಬುಲಂದ್‍ನಗರದಲ್ಲಿರುವ ಹಳ್ಳಿಯೊಂದರ ನಿವಾಸಿಯಾಗಿದ್ದು, ಸೆಕ್ಟರ್-2ರ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ಅಷ್ಟೇ ಅಲ್ಲದೆ ಬುಲಂದ್‍ನಗರಕ್ಕೆ ಬರುವ ಮೊದಲು ಯುವಕ ಅದೇ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದನು. ಯುವಕ ಕೆಲಸಕ್ಕಾಗಿ ಬುಲಂದ್‍ನಗರಕ್ಕೆ ಬಂದ ಬಳಿಕ ಅಲ್ಲಿ ದೆಹಲಿಯ ತ್ರಿಲೋಕಪುರಿಯ ನಿವಾಸಿಯಾದ ತನ್ನ ಸಹೊದ್ಯೋಗಿಯನ್ನು ಪ್ರೀತಿಸಲು ಶುರು ಮಾಡಿದ್ದನು. ನಂತರ ಇಬ್ಬರು 7 ವರ್ಷ ಜೊತೆಯಲ್ಲಿ ಸುತ್ತಾಡಿ ಲಿವ್-ಇನ್ ರಿಲೇಶನ್‍ನಲ್ಲಿದ್ದರು ಎಂದು ತಿಳಿಸಿದ್ದಾರೆ.

    2017ರಲ್ಲಿ ಯುವಕನ ಮತ್ತೊಬ್ಬಳು ಪ್ರೇಯಸಿ ತನ್ನ ಸ್ನೇಹಿತೆಯನ್ನು ಆತನಿಗೆ ಪರಿಚಯ ಮಾಡಿಸುತ್ತಾಳೆ. ನಂತರ ಯುವಕ ಆ ಯುವತಿಯನ್ನು ಕೂಡ ತನ್ನ ಪ್ರೇಮದ ಬಲೆಯಲ್ಲಿ ಬೀಳಿಸಿಕೊಳ್ಳುತ್ತಾನೆ. ಯುವಕನ ಈ ಕಳ್ಳಾಟವನ್ನು ಗಮನಿಸಿದ ಆತನ ಸ್ನೇಹಿತ ಮೂರು ದಿನಗಳ ಹಿಂದೆ ಯುವತಿಯರಿಗೆ ತನ್ನ ಸ್ನೇಹಿತನ ನಿಜಬಣ್ಣ ಬಯಲು ಮಾಡಿದ್ದಾನೆ.

    ಈ ಹಿನ್ನೆಲೆಯಲ್ಲಿ ಮೂವರು ಯುವತಿಯರು ಸೆಕ್ಟರ್-24 ಪೊಲೀಸ್ ಠಾಣೆಗೆ ಹೋಗಿ ಯುವಕನ ವಿರುದ್ಧ ಕಿರುಕುಳದ ದೂರನ್ನು ದಾಖಲಿಸಿದ್ದರು. ಹೀಗಾಗಿ ಪೊಲೀಸರು ಬುಧವಾರ ಯುವಕನನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಈ ವೇಳೆ ಮೂವರು ಯುವತಿಯರು ಕೂಡ ಪೊಲೀಸ್ ಠಾಣೆಗೆ ಬಂದಿದ್ದರು ಎಂದು ಪತ್ರಿಕೆಯೊಂದರಲ್ಲಿ ವರದಿಯಾಗಿದೆ.

    ಪೊಲೀಸ್ ಠಾಣೆಯಲ್ಲಿ ಹೈಡ್ರಾಮಾ: ಠಾಣೆಯಲ್ಲಿ ಯುವತಿಯರು ಯುವಕನನ್ನು ತಾವು ಮದುವೆಯಾಗುವುದಾಗಿ ವಾದ-ವಿವಾದಕ್ಕೆ ಇಳಿದಿದ್ದರು. ಯುವಕ ಒಬ್ಬಳನ್ನು ಮದುವೆಯಾಗುವುದಕ್ಕೆ ನಿರಾಕರಿಸಿದ್ದನು. ಇದರಿಂದ ಬೇಸತ್ತ ಯುವತಿ ತನ್ನ ಕೈಯನ್ನು ಕಟ್ ಮಾಡಿಕೊಳ್ಳಲು ಯತ್ನಿಸಿದ್ದಾಳೆ. ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ ಎಂಬುವುದಾಗಿ ವರದಿಯಾಗಿದೆ.

    ಇದಾದ ಬಳಿಕ ಪೊಲೀಸರು ಕೈ ಕಟ್ ಮಾಡಿಕೊಂಡ ಯುವತಿಯನ್ನು ವಶಕ್ಕೆ ಪಡೆದು, ಆಕೆಯ ಪೋಷಕರಿಗೆ ಒಪ್ಪಿಸಿದ್ದಾರೆ. ಇನ್ನು ಯುವಕನ ವಿರುದ್ಧ ಶಾಂತಿ ಉಲ್ಲಂಘನೆ ಮಾಡಿದ್ದಾನೆಂದು ಆತನನ್ನು ಬಂಧಿಸಿದ್ದಾರೆ. ಉಳಿದ ಇಬ್ಬರು ಯುವತಿಯರು ಯುವಕನ ವಿರುದ್ಧ ಕೋರ್ಟ್ ಮೆಟ್ಟಿಲೇರುವುದಾಗಿ ಎಚ್ಚರಿಕೆ ನೀಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

  • ತಂದೆಯ ಶವವನ್ನು ಸೈಕಲ್ ರಿಕ್ಷಾದಲ್ಲಿ 8 ಕಿ.ಮೀ ಸಾಗಿಸಿದ್ರು ಮಕ್ಕಳು!

    ತಂದೆಯ ಶವವನ್ನು ಸೈಕಲ್ ರಿಕ್ಷಾದಲ್ಲಿ 8 ಕಿ.ಮೀ ಸಾಗಿಸಿದ್ರು ಮಕ್ಕಳು!

    ಲಕ್ನೋ: ಶವ ಸಾಗಿಸಲು ಅಂಬುಲೆನ್ಸ್ ಸಿಗದ ಹಿನ್ನೆಲೆಯಲ್ಲಿ ಉತ್ತರಪ್ರದೇಶ ಬಾರಾಬಂಕಿಯಲ್ಲಿ ಮಕ್ಕಳಿಬ್ಬರು ತನ್ನ ತಂದೆಯ ಶವವನ್ನು ಸೈಕಲ್ ರಿಕ್ಷಾದಲ್ಲಿ ಸಾಗಿಸಿದ್ದಾರೆ.

    50 ವರ್ಷದ ತ್ರಿವೇಂದಿಗಂಜ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೃತಪಟ್ಟಿದ್ದರು. ಮೃತಪಟ್ಟ ಬಳಿಕ ಶವ ಸಾಗಿಸಲು ಯಾವುದೇ ವ್ಯವಸ್ಥೆ ಇಲ್ಲದ ಕಾರಣ ಮಕ್ಕಳಿಬ್ಬರು ತನ್ನ ತಂದೆಯ ಶವವನ್ನು ಆಸ್ಪತ್ರೆಯಿಂದ ಮನೆಗೆ 8 ಕಿ.ಮೀ ದೂರದಲ್ಲಿರುವ ಮನೆಗೆ ಸೈಕಲ್‍ನಲ್ಲಿ ಸಾಗಿಸಿದ್ದಾರೆ.

    ಇಬ್ಬರು ಮಕ್ಕಳು ಚಿಕ್ಕವರಾಗಿದ್ದು, ಅವರ ಬಳಿ ಹಣ ಕೂಡ ಇರಲಿಲ್ಲ ಎಂದು ವರದಿಯಾಗಿದೆ. ಇಡೀ ಜಿಲ್ಲೆಯಲ್ಲಿ 2 ಅಂಬುಲೆನ್ಸ್ ಮಾತ್ರವಿದೆ. ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅಂಬುಲೆನ್ಸ್ ಸೇವೆ ಇಲ್ಲ. ಅಷ್ಟೇ ಅಲ್ಲದೇ ಶವ ಸಾಗಿಸಲು ಅಂಬುಲೆನ್ಸ್ ನೀಡುವುದಿಲ್ಲ ಎಂದು ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ಆರ್ ಚಂದ್ರ ತಿಳಿಸಿದ್ದಾರೆ.

    ಉತ್ತರ ಪ್ರದೇಶದಲ್ಲಿ ಆರೋಗ್ಯ ಸೇವೆ ಹದಗೆಟ್ಟಿರುವುದು ಇದೇ ಮೊದಲಲ್ಲ. ಈ ಹಿಂದೆ ರೋಗದಿಂದ ಬಳಲುತ್ತಿದ್ದ ಪತ್ನಿಯನ್ನು ಸಾಗಿಸಲು ಅಂಬುಲೆನ್ಸ್ ಸಿಗದ್ದಕ್ಕೆ ಪತಿ ಆಕೆಯನ್ನು 8 ಕಿ.ಮೀ ಹೊತ್ತುಕೊಂಡು ಮೇನ್‍ಪುರಿ ಜಿಲ್ಲಾಸ್ಪತ್ರೆಗೆ ಬಂದಿದ್ದ ವರದಿ ಪ್ರಕಟವಾಗಿತ್ತು.

  • 6 ತಿಂಗಳ ಮಗುವನ್ನು 60 ಸಾವಿರಕ್ಕೆ ಮಾರಿದ ತಾಯಿ- ದುಃಖದಿಂದ ಸಾವನ್ನಪ್ಪಿದ್ದ 5 ವರ್ಷದ ಸಹೋದರಿ

    6 ತಿಂಗಳ ಮಗುವನ್ನು 60 ಸಾವಿರಕ್ಕೆ ಮಾರಿದ ತಾಯಿ- ದುಃಖದಿಂದ ಸಾವನ್ನಪ್ಪಿದ್ದ 5 ವರ್ಷದ ಸಹೋದರಿ

    ಲಕ್ನೋ: ಹಣಕ್ಕಾಗಿ ಹೆತ್ತ ತಾಯಿಯೊಬ್ಬಳು ತನ್ನ 6 ತಿಂಗಳ ಮಗುವನ್ನು ಮಾರಿದ ವಿಚಾರವನ್ನು ತಿಳಿದು ಮಗುವಿನ ಸಹೋದರಿ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಲಕ್ನೋನಲ್ಲಿ ನಡೆದಿದೆ.

    ಪಾಯಲ್ ಮಗುವನ್ನು ಮಾರಿದ ತಾಯಿ. ಬಾಜಾರ್‍ಕಾಲಾ ಇಲಾಖೆಯಲ್ಲಿರುವ ಪಾಯಲ್‍ನ ಪತಿ ಅನಿಲ್ ಅನಾರೋಗ್ಯದಿಂದ ಬಳಲುತ್ತಿದ್ದು, ಪಾಯಲ್ ಬೇರೆಯವರ ಮನೆಗೆಲಸಕ್ಕೆ ಮಾಡಿಕೊಂಡಿದ್ದಳು. ಮನೆಗೆಲಸಕ್ಕೆ ಹೋಗುವಾಗ ಪಾಯಲ್ ತನ್ನ 6 ತಿಂಗಳ ಮಗು ಓಂನನ್ನು ಹತ್ತಿರದಲ್ಲಿರುವ ತನ್ನ ತವರು ಮನೆಯಲ್ಲೇ ಬಿಟ್ಟು ಹೋಗುತ್ತಿದ್ದಳು.

    ಕಳೆದ ಬುಧವಾರ ಪಾಯಲ್ ಮನೆಗೆಲಸ ಮುಗಿಸಿ ಹಿಂತಿರುಗುವಾಗ ಆಕೆಯ ಮಗು ಓಂ ಜೊತೆಯಲ್ಲಿ ಇರಲಿಲ್ಲ. ಇದನ್ನು ಗಮನಿಸಿದ ಪತಿ ಅನಿಲ್ ಹಾಗೂ ಮಗಳು ಮೇಘಾ ಪಾಯಲ್‍ನನ್ನು ಪ್ರಶ್ನಿಸಿದ್ದರು. ಆದರೆ ಪಾಯಲ್ ಪ್ರಶ್ನೆಗೆ ಹಾರಿಕೆಯ ಉತ್ತರ ನೀಡಿದ್ದಳು. ನಂತರ ಮರುದಿನವೂ ಕೂಡ ಪಾಯಲ್ ತನ್ನ ಮಗುವನ್ನು ಜೊತೆಗೆ ಕರೆದುಕೊಂಡು ಬರಲಿಲ್ಲ ಎಂದು ವರದಿಯಾಗಿದೆ.

    ತನ್ನ ತಮ್ಮ ಓಂ ತಾಯಿ ಜೊತೆ ಬರಲಿಲ್ಲ ಎಂದು ತಿಳಿದ ಆತನ ಸಹೋದರಿ ಮೇಘಾ ಅನಾರೋಗ್ಯಕ್ಕೆ ತುತ್ತಾಗಿದ್ದಳು. ಮೇಘಾ ತನ್ನ ತಮ್ಮನ ಜೊತೆ ಹೆಚ್ಚಿನ ಕಾಲ ಕಳೆಯುತ್ತಿದ್ದು, ಆತ ಹಿಂತಿರುಗದ ಕಾರಣ ಮೇಘಾಳ ಆರೋಗ್ಯ ಹದಗೆಟ್ಟು ಆಸ್ಪತ್ರೆಗೆ ದಾಖಲಾಗಿದ್ದಳು. ಮೇಘಾ ಆರೋಗ್ಯದ ಸ್ಥಿತಿ ತುಂಬ ಹದ್ದಗೆಟ್ಟಿದ್ದರೂ ಪಾಯಲ್ ಮಗನನ್ನು ಮನೆಗೆ ಕರೆದುಕೊಂಡು ಬಾರದನ್ನು ನೋಡಿ ಪತಿ ಅನಿಲ್‍ಗೆ ಅನುಮಾನ ಮೂಡಿದೆ. ಆದರೆ ಮಗಳ ಆರೋಗ್ಯದ ಕಡೆ ಹೆಚ್ಚು ಗಮನ ಇದಿದ್ದರಿಂದ ಅನಿಲ್ ತನ್ನ ಪತ್ನಿ ಪಾಯಲ್‍ಗೆ ಹೆಚ್ಚು ಪ್ರಶ್ನಿಸಲಿಲ್ಲ ಎಂದು ಹೇಳಲಾಗಿದೆ.

    ಮೇಘಾ ಆರೋಗ್ಯದ ಸ್ಥಿತಿ ತುಂಬ ಹದಗೆಟ್ಟು ಶುಕ್ರವಾರ ಸಾವನ್ನಪ್ಪಿದ್ದಳು. ನಂತರ ಅನಿಲ್ ತನ್ನ ಪತ್ನಿ ವಿರುದ್ಧ ಮಗ ಕಾಣೆಯಾಗಿರುವುದರ ಬಗ್ಗೆ ಕೇಸ್ ದಾಖಲಿಸಿದ್ದರು. ಬಳಿಕ ಪೊಲೀಸರು ಪಾಯಲ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮಗನನ್ನು 60 ಸಾವಿರ ರೂ. ಗೆ ಅಶು ಎಂಬಾತನಿಗೆ ಮಾರಾಟ ಮಾಡಿರುವ ವಿಚಾರವನ್ನು ಒಪ್ಪಿಕೊಂಡಿದ್ದಾಳೆ. ಮಗುವಿನ ದೇಹಕ್ಕೆ ಹಚ್ಚೆ ಹಾಕಿ ಮಾರಾಟ ಮಾಡಿದ್ದು, ಈಗ ಇಬ್ಬರನ್ನು ಪೊಲೀಸರು ಬಂಧಿಸಿ ಮಗುವನ್ನು ಅನಿಲ್ ವಶಕ್ಕೆ ನೀಡಿದ್ದಾರೆ.

  • ತಂಗಿ ಮೇಲೆ ಅತ್ಯಾಚಾರವಾಗ್ತಿದ್ದಾಗ ಕಾಪಾಡದೇ ವಿಡಿಯೋ ಮಾಡಿದ ನೀಚ ಸಹೋದರ!

    ತಂಗಿ ಮೇಲೆ ಅತ್ಯಾಚಾರವಾಗ್ತಿದ್ದಾಗ ಕಾಪಾಡದೇ ವಿಡಿಯೋ ಮಾಡಿದ ನೀಚ ಸಹೋದರ!

    ಲಕ್ನೋ: ತನ್ನ ಸಹೋದರ ಸಂಬಂಧಿ ಬಾಲಕಿಯ ಮೇಲೆ ಅತ್ಯಾಚಾರವಾಗುತ್ತಿದ್ದಾಗ ಆಕೆಯನ್ನು ರಕ್ಷಿಸುವ ಬದಲು ಸಹೋದರನೊಬ್ಬ ಅದನ್ನು ವಿಡಿಯೋ ಮಾಡಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಸಹರಾನ್‍ಪುರ್ ಜಿಲ್ಲೆಯಲ್ಲಿ ನಡೆದಿದೆ.

    ಸಹರಾನ್‍ಪುರ್ ಜಿಲ್ಲೆಯ ಕುಶಲ್‍ಪುರ್ ಗ್ರಾಮದಲ್ಲಿ ಈ ಕೃತ್ಯ ನಡೆದಿದ್ದು, ಅಪ್ರಾಪ್ತೆ ಮೇಕೆಗಳಿಗೆ ಮೇವು ತರಲು ಹೋಗಿದ್ದಳು. ಈ ವೇಳೆ ಪಕ್ಕದ ಗ್ರಾಮದ ಕಾಮುಕನೊಬ್ಬ, ಮಹಿಳೆಯೊಬ್ಬಳ ಸಹಾಯದೊಂದಿಗೆ ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

    ಆತಂಕಕಾರಿ ವಿಷಯವೆಂದರೆ ಸಂತ್ರಸ್ತೆ ಮೇಲೆ ಅತ್ಯಾಚಾರ ಎಸಗುತ್ತಿದ್ದ ಸಂದರ್ಭದಲ್ಲಿ, ಸಂಬಂಧದಲ್ಲಿ ಆಕೆಗೆ ಸಹೋದರನಾಗಬೇಕಿದ್ದ ವ್ಯಕ್ತಿಯೊಬ್ಬ ಸ್ಥಳಕ್ಕೆ ಬಂದಿದ್ದಾನೆ. ಆದ್ರೆ ಆತ ಕಾಮುಕನ ಕೈಯಿಂದ ಸಂತ್ರಸ್ತೆಯನ್ನು ರಕ್ಷಣೆ ಮಾಡುವುದನ್ನು ಬಿಟ್ಟು ನೀಚ ಕೃತ್ಯವನ್ನು ತನ್ನ ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದಾನೆ.

    ಸಂತ್ರಸ್ತೆ ಮನೆಗೆ ಬಂದ ನಂತರ ನಡೆದ ಘಟನೆ ಬಗ್ಗೆ ಪೋಷಕರಿಗೆ ವಿವರಿಸಿದ್ದಾಳೆ. ಕೂಡಲೇ ಪೋಷಕರು ಮೀರ್ಜಾಪುರ್ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದು, ಈಗಾಗಲೇ ಆಕೆಯ ಸಂಬಂಧಿಯನ್ನು ಬಂಧಿಸಲಾಗಿದೆ. ಆದರೆ ಸಂತ್ರಸ್ತೆ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿ ತಲೆಮರೆಸಿಕೊಂಡಿದ್ದು, ಅವನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

  • ಅಶ್ಲೀಲ ಫೋಟೋ, ವಿಡಿಯೋ ತೆಗೆದು ಸೆಕ್ಸ್ ಗಾಗಿ ಪೀಡಿಸುತ್ತಿದ್ದನೆಂದು ಪ್ರಿಯಕರನನ್ನೇ ಕೊಂದ ಯುವತಿ!

    ಅಶ್ಲೀಲ ಫೋಟೋ, ವಿಡಿಯೋ ತೆಗೆದು ಸೆಕ್ಸ್ ಗಾಗಿ ಪೀಡಿಸುತ್ತಿದ್ದನೆಂದು ಪ್ರಿಯಕರನನ್ನೇ ಕೊಂದ ಯುವತಿ!

    ಲಕ್ನೋ: ಪ್ರಿಯಕರ ಸೆಕ್ಸ್ ಗಾಗಿ ಪೀಡಿಸುತ್ತಿದ್ದರಿಂದ ಬೇಸತ್ತ ಯುವತಿ ಆತನನ್ನು ಕೊಲೆ ಮಾಡಿದ ಘಟನೆ ಉತ್ತರಪ್ರದೇಶದ ಕಾನ್ ಪುರ್ ನಲ್ಲಿ ನಡೆದಿದೆ.

    ಸಂದೀಪ್ ಮೃತ ವ್ಯಕ್ತಿ. ಸಂದೀಪ್‍ಗೆ ಮದುವೆಯಾಗಿದ್ದು, ದೆಹಲಿಯಲ್ಲಿರುವ ತನ್ನ ಪತ್ನಿಯ ಜೊತೆ ವಾಸಿಸುತ್ತಿದ್ದನು. ಈತ ನೇಹಾ ಎಂಬ ಯುವತಿ ಜೊತೆ ಅನೈತಿಕ ಸಂಬಂಧವನ್ನು ಹೊಂದಿದ್ದನು ಎಂದು ದಕ್ಷಿಣ ಎಸ್‍ಪಿ ಅಶೋಕ್ ಕುಮಾರ್ ಹೇಳಿದ್ದಾರೆ.

    ಸಂದೀಪ್ ಹಾಗೂ ನೇಹಾ ನಡುವೆ ಅನೈತಿಕ ಸಂಬಂಧವಿದ್ದು, ಆತ ನೇಹಾಳ ಅಶ್ಲೀಲ ಫೋಟೋ ಹಾಗೂ ವಿಡಿಯೋಗಳನ್ನು ಇಟ್ಟುಕೊಂಡಿದ್ದನು. ನಂತರ ಆ ಫೋಟೋ, ವಿಡಿಯೋದಿಂದ ನೇಹಾಳಿಗೆ ಬ್ಲಾಕ್ ಮೇಲ್ ಮಾಡಿ ಸೆಕ್ಸ್ ಗೆ ಪೀಡಿಸುತ್ತಿದ್ದನು. ನೇಹಾ ಸೆಕ್ಸ್ ಗೆ ನಿರಾಕರಿಸಿದ್ದಕ್ಕೆ ಸಂದೀಪ್ ಕೆಲವು ವೈಯಕ್ತಿಕ ಫೋಟೋಗಳನ್ನು ಆಕೆಯ ಸಂಬಂಧಿಕರಿಗೆ ಕಳುಹಿಸಿದ್ದನು. ಇದರಿಂದ ಬೇಸತ್ತ ನೇಹಾ ಅವನಿಂದ ದೂರ ಉಳಿಯಲು ನಿರ್ಧರಿಸಿದ್ದಳು ಎಂದು ಅವರು ತಿಳಿಸಿದ್ದಾರೆ.

    ನಂತರ ಮತ್ತೆ ಮಾರ್ಚ್ 20ರಂದು ಸಂದೀಪ್ ಕಾನ್ ಪುರ್ ಗೆ ಬಂದು ನೇಹಾ ಬಳಿ ಹೋಗಿದ್ದ. ಆಗ ಮತ್ತೆ ಆಕೆಯ ಹತ್ತಿರ ಸೆಕ್ಸ್ ಗೆ ಪೀಡಿಸಿದ್ದ. ಆದರೆ ನೇಹಾ ಇದ್ದಕ್ಕೆ ನಿರಾಕರಿಸಿದ್ದು, ಇಬ್ಬರ ನಡುವೆ ಹೊಡೆದಾಟ ನಡೆದಿತ್ತು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

    ಸಂದೀಪ್ ವರ್ತನೆಯಿಂದ ಬೇಸತ್ತ ನೇಹಾ ಆತನನ್ನು ಕೊಲ್ಲಲು ಮೊದಲೇ ಪ್ಲಾನ್ ಮಾಡಿದ್ದಳು. ಆಕೆಯ ಇಬ್ಬರು ಪ್ರೇಮಿಗಳಾದ ಪ್ರವೀಣ್ ಹಾಗೂ ದೇವೆಂದ್ರ ನನ್ನು ಕರೆಸಿ ಸಂದೀಪ್‍ನನ್ನು ಕೊಲ್ಲುವಂತೆ ಹೇಳಿದ್ದಳು.

    ನೇಹಾ ಆ ಇಬ್ಬರ ಜೊತೆ ಸೇರಿ ಸಂದೀಪ್‍ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು. ಘಟನೆ ನಂತರ ಸಂದೀಪ್ ಶವವನ್ನು ಕಾರಿನಲ್ಲಿ ತೆಗೆದುಕೊಂಡು ಹೋಗಿ ಪಾಂಡು ನದಿ ಬಳಿ ಎಸೆದು ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

  • ಮಹಿಳೆ ಕೈಯನ್ನು ಮರಕ್ಕೆ ಕಟ್ಟಿ ಹೊಡೆದ ಗಂಡ- ಮೂಖಪ್ರೇಕ್ಷಕರಾಗಿ ನಿಂತಿದ್ದ ಜನ

    ಮಹಿಳೆ ಕೈಯನ್ನು ಮರಕ್ಕೆ ಕಟ್ಟಿ ಹೊಡೆದ ಗಂಡ- ಮೂಖಪ್ರೇಕ್ಷಕರಾಗಿ ನಿಂತಿದ್ದ ಜನ

    ಲಕ್ನೋ: ಮಹಿಳೆಯ ಕೈಯನ್ನು ಮರಕ್ಕೆ ಕಟ್ಟಿ ಆಕೆಯ ಗಂಡ ಮನಬಂದಂತೆ ಹೊಡೆಯುತ್ತಿದ್ದರೆ, ಪ್ರತಿ ಹೊಡೆತ ಅವಳ ಮೈ ಮೇಲೆ ಬಿದ್ದಾಗಲು ಅವಳು ನೋವಿನಿಂದ ಚೀರುತಿದ್ದಳು. ಅಮಾನವೀಯವಾಗಿ ಮಹಿಳೆಗೆ ಹೊಡೆಯುವುದನ್ನ ವೀಕ್ಷಿಸಲು ತುಂಬಾ ಕಷ್ಟವಾಗುತ್ತದೆ. ಆದ್ರೆ ಅಲ್ಲಿದ್ದ ನೂರಾರು ಜನ ಅದರಲ್ಲೂ ಹೆಚ್ಚಾಗಿ ಪುರುಷರು ನಗುತ್ತಾ ನೋಡುತ್ತಿದ್ದರು ಮತ್ತು ಯಾರು ಕೂಡ ಮಹಿಳೆಯ ಸಹಾಯಕ್ಕೆ ಬರಲಿಲ್ಲ.

    ಉತ್ತರ ಪ್ರದೇಶದ ಬುಲಂದ್ ಶಹರ್ ಜಿಲ್ಲೆಯಲ್ಲಿ ಇದೇ ತಿಂಗಳ ಆರಂಭದಲ್ಲಿ ಈ ಘಟನೆ ನಡೆದಿದೆ. ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಮಹಿಳೆಗೆ ಹೊಡೆಯಲು ಆ ಗ್ರಾಮದ ಪಂಚಾಯ್ತಿಯೇ ಆದೇಶ ನೀಡಿತ್ತು ಎಂದು ವರದಿಯಾಗಿದೆ. ಈ ಗ್ರಾಮ ರಾಷ್ಟ್ರರಾಜಧಾನಿ ದೆಹಲಿಯಿಂದ  60 ಕಿಲೋಮೀಟರ್ ದೂರದಲ್ಲಿದೆ.

    ಗ್ರಾಮಸ್ಥರೊಬ್ಬರು ಈ ದೃಶ್ಯವನ್ನು ಸೆರೆಹಿಡಿದಿದ್ದು, ಕಳೆದ ವಾರದಿಂದ ವಿಡಿಯೋ ವೈರಲ್ ಆಗಿದೆ. ಈ ಕೃತ್ಯ ನಡೆದ ಸಂದರ್ಭದಲ್ಲಿ ನೂರಾರು ಜನರು ಆ ಭಾಗದಲ್ಲಿ ಸುತ್ತುವರೆದಿದ್ದರು ಮತ್ತು ಒಂದು ನಿಮಿಷಕ್ಕೂ ಹೆಚ್ಚು ಹೊತ್ತು ಆ ಮಹಿಳೆಗೆ ಹೊಡೆಯುವುದನ್ನು ನೋಡುತ್ತಾ ನಿಂತಿದ್ದರು. ಈ ಹೀನ ಕೃತ್ಯವನ್ನ ನೋಡುತ್ತಿದ್ದರೂ ಆ ಮಹಿಳೆಯ ರಕ್ಷಣೆಗೆ ಯಾರೂ ಬರಲಿಲ್ಲ.

    ಸೈಕಲ್ ಟ್ಯೂಬ್‍ನಿಂದ ಮಹಿಳೆಗೆ ಆಕೆಯ ಪತಿ ಈ ಶಿಕ್ಷೆಯನ್ನು ನೀಡುತ್ತಿದ್ದ. ಅಂತ್ಯದಲ್ಲಿ ಆ ಮಹಿಳೆ ಪ್ರಜ್ಞೆ ಕಳೆದುಕೊಳ್ಳುತ್ತಾರೆ. ಈ ಬಗ್ಗೆ ಬುಧವಾರದಂದು ದೂರು ದಾಖಲಾದ ನಂತರ ಮಹಿಳೆಯ ಗಂಡನ ಸೇರಿದಂತೆ ಮೂರು ಜನರನ್ನು ಪೊಲೀಸರು ಬಂಧಿಸಿದ್ದಾರೆ.

    ಘಟನೆ ಬಗ್ಗೆ ಗುರುವಾರದಂದು ನಮಗೆ ಮಾಹಿತಿ ತಿಳಿದುಬಂದಿದೆ. ಆ ಮಹಿಳೆಯನ್ನು ಕರೆಸಿ ಮಾತನಾಡಿ ನಂತರ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಮಹಿಳೆಯ ಪತಿ ಮತ್ತು ಪಂಚಾಯ್ತಿಯ ಮುಖ್ಯಸ್ಥರು ಹಾಗು ಅವರ ಮಗನನ್ನು ಬಂಧಿಸಲಾಗಿದೆ. 20 ರಿಂದ 25 ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಪ್ರವೀಣ್ ರಂಜನ್ ಹೇಳಿದ್ದಾರೆ.

  • ಕೆಲವೇ ನಿಮಿಷದಲ್ಲಿ 5,55,55,555 ರೂ.ಗೆ ಒಡೆಯನಾದ ಪಿಯು ವಿದ್ಯಾರ್ಥಿ!

    ಕೆಲವೇ ನಿಮಿಷದಲ್ಲಿ 5,55,55,555 ರೂ.ಗೆ ಒಡೆಯನಾದ ಪಿಯು ವಿದ್ಯಾರ್ಥಿ!

    ಲಕ್ನೋ: ಬ್ಯಾಂಕ್ ಮಾಡಿದ ಚಿಕ್ಕ ತಪ್ಪಿನಿಂದಾಗಿ ಪಿಯುಸಿ ಓದುತ್ತಿರುವ ಯುವಕ ಕೆಲವೇ ಕ್ಷಣದಲ್ಲಿ ಕೋಟ್ಯಾಧಿಪತಿ ಆದ ಘಟನೆ ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ನಡೆದಿದೆ.

    ಕೇಶವ್ ಶರ್ಮಾ ಪಿಯುಸಿ ಓದುತ್ತಿದ್ದು, ಬ್ಯಾಂಕ್ ಸಿಬ್ಬಂದಿ ಎಸಗಿದ ಚಿಕ್ಕ ತಪ್ಪಿನಿಂದಾಗಿ ಈತನ ಖಾತೆಯಲ್ಲಿ 5 ಕೋಟಿ ರೂ. ಗೂ ಹೆಚ್ಚು ಹಣ ಟ್ರಾನ್ಸ್ ಫರ್ ಆಗಿದೆ. ಟ್ರಾನ್ಸ್ ಫರ್ ಆದ ಬಳಿಕ ಬ್ಯಾಂಕ್ ಕಡೆಯಿಂದ ಕೇಶವ್ ಮೊಬೈಲಿಗೆ ಮೆಸೇಜ್ ಬಂದಿದೆ.

    ವರದಿಗಳ ಪ್ರಕಾರ ಬಾರಾಬಂಕಿನಲ್ಲಿರುವ ಅವಾಸ್ ವಿಕಾಸ್ ಕಲೋನಿಯ ನಿವಾಸಿ ಕೇಶವ್ ಶರ್ಮಾ ಅವರ ಎಸ್‍ಬಿಐ ಸೇವಿಂಗ್ಸ್ ಅಕೌಂಟ್‍ನಲ್ಲಿ ಹಣ ಜಮೆಯಾಗಿತ್ತು. ಮಾರ್ಚ್ 16ರಂದು ಕೇಶವ್ ಅವರ ತಂದೆಯ ಫೋನಿನಲ್ಲಿ ಬ್ಯಾಂಕ್ ಕಡೆಯವರಿಂದ ಮೆಸೇಜ್ ಬಂದಿದೆ. ಮೆಸೇಜ್ ನೋಡಿದ್ದಾಗ ತನ್ನ ಮಗ ಕೇಶವ್ ಖಾತೆಯಲ್ಲಿ 5,55,55,555 ರೂ. ಜಮೆ ಆಗಿತ್ತು.

    ಕೇಶವ್ ಮೊದಲು ಆ ಮೆಸೇಜ್ ನೋಡಿ ನಾನು ಕೋಟ್ಯಾಧಿಪತಿ ಹೇಗೆ ಆದೆ ಎಂಬುದು ಆತನಿಗೆ ನಂಬಲಿಕ್ಕೆ ಆಗಲಿಲ್ಲ. ಈ ಮೆಸೇಜ್ ನೋಡಿದ ಕೇಶವ್ ತಂದೆ ಕೂಡ ದಂಗಾಗಿದ್ದಾರೆ. ಆದರೆ ಇದರ ಬಗ್ಗೆ ಬ್ಯಾಂಕಿನವರು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ.

    ದೊಡ್ಡ ಮೊತ್ತ ಅಕೌಂಟ್‍ನಲ್ಲಿ ಜಮೆ ಆಗಿ ಕೆಲವೇ ನಿಮಿಷಗಳಲ್ಲಿ ಬ್ಯಾಂಕಿನವರಿಗೆ ಅವರ ತಪ್ಪು ಗೊತ್ತಾಗಿದೆ. ಜಮೆ ಆಗಿದ್ದ ಹಣದ ಜೊತೆ ಕೇಶವ್ ಖಾತೆಯಲ್ಲಿ ಮೊದಲು ಇದ್ದ ಹಣ ಕೂಡ ತೆಗೆದಿದ್ದಾರೆ ಎಂದು ವರದಿಯಾಗಿದೆ.

    ಕೇಶವ್ ತಂದೆ ಅವರ ಪ್ರಕಾರ ಖಾತೆಯಲ್ಲಿ ಮೊದಲೇ 1,50,000 ರೂ. ಇತ್ತು. ಆದರೆ ಈಗ ಕೋಟಿ ರೂ. ಜೊತೆ ಈ ಹಣವನ್ನು ತೆಗೆದ ಕಾರಣ ಕೇಶವ್ ಅವರ ತಂದೆ ಅಸಮಾಧಾನಗೊಂಡಿದ್ದಾರೆ.