Tag: lucknow

  • ಪಕ್ಕದ್ಮನೆ ಯುವಕನೊಂದಿಗೆ ಆಂಟಿ ಲವ್- ಓಡಿ ಹೋದವ್ರು ಗಂಡನಿಗೆ ಸಿಕ್ಕಾಗ ಇಬ್ಬರ ಗತಿ ಅಯ್ಯಯ್ಯೋ

    ಪಕ್ಕದ್ಮನೆ ಯುವಕನೊಂದಿಗೆ ಆಂಟಿ ಲವ್- ಓಡಿ ಹೋದವ್ರು ಗಂಡನಿಗೆ ಸಿಕ್ಕಾಗ ಇಬ್ಬರ ಗತಿ ಅಯ್ಯಯ್ಯೋ

    ಲಕ್ನೋ: ಸಾರ್ವಜನಿಕರ ಕೈಯಲ್ಲಿ ಹೊಡೆತ ತಪ್ಪಿಸಿಕೊಳ್ಳಲು ಪ್ರೇಮಿಗಳಿಬ್ಬರು ಹೆದ್ದಾರಿಯಲ್ಲಿಯೇ ತಬ್ಬಿಕೊಂಡಿರುವ ಘಟನೆ ಉತ್ತರ ಪ್ರದೇಶ ಆಗ್ರಾದಲ್ಲಿ ನಡೆದಿದೆ.

    ಆಗ್ರಾ-ಅಲೀಗಡ ಹೆದ್ದಾರಿಯ ಖಂಡೌಲಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜೊತೆ ಓಡಿ ಹೋಗಿದ್ದಳು. ಆದ್ದರಿಂದ ಅವರಿಬ್ಬರು ಹೆದ್ದಾರಿಯಲ್ಲಿ ಸಿಕ್ಕಿದ ತಕ್ಷಣ ಆಕೆಯ ಪತಿ ಹಾಗೂ ಸಂಬಂಧಿಕರು ಇಬ್ಬರು ಹಿಡಿದು ಥಳಿಸಿದ್ದಾರೆ.

    ಮೇ 15 ರಂದು ವಿವಾಹಿತೆ ಸಾಯಾರ ಬೇಗಂ ಪಕ್ಕದ ಮನೆಯ ಯುವಕ ಮೌಸಮ್ ಜೊತೆ ಓಡಿ ಹೋಗಿದ್ದಾಳೆ. ಮೌಸಮ್ ಜೊತೆ ಓಡಿ ಹೋಗುವಾಗ 27 ಸಾವಿರ ರೂಪಾಯಿ ನಗದು ಹಣ, ಎರಡು ಬಂಗಾರದ ಉಂಗುರಗಳನ್ನು ತೆಗೆದು ಕೊಂಡು ಹೋಗಿದ್ದಳು. ನಂತರ ಪತಿ ಸಂಬಂಧಿಕರು, ಸ್ನೇಹಿತರನ್ನು ವಿಚಾರಿಸಿದ್ದಾರೆ. ಎಲ್ಲೂ ಪತ್ತೆಯಾಗದ ಹಿನ್ನೆಲೆಯಲ್ಲಿ ಪತಿ ಪೊಲಿಸರಿಗೆ ದೂರು ನೀಡಿದ್ದರು. ಮೌಸಮ್ ಖಂಡೌಲಿಯಲ್ಲಿ ಜನರೇಟರ್ ಕೆಲಸ ಮಾಡಿಕೊಂಡಿದ್ದು, ಸಾಯಾರ ಮನೆಯ ಪಕ್ಕದಲ್ಲಿಯೇ ವಾಸಿಸುತ್ತಿದ್ದನು.

    ಶುಕ್ರವಾರ ಬೆಳಗ್ಗೆ ಪತಿಗೆ ಪತ್ನಿ ತನ್ನ ಪ್ರಿಯಕರನ ಜೊತೆ ಆಗ್ರಾಗೆ ಬರುತ್ತಿದ್ದಾಳೆ ಎಂಬ ಮಾಹಿತಿ ಸಿಕ್ಕಿದೆ. ಅಲ್ಲಿಗೆ ಬಂದ ಇಬ್ಬರನ್ನು ಪತಿ ಹಿಡಿದಿದ್ದಾನೆ. ನಂತರ ಹೆದ್ದಾರಿಯಲ್ಲಿಯೇ ಜಗಳ ಶುರುವಾಗಿದೆ. ಕೋಪಗೊಂಡ ಪತಿ ಮತ್ತು ಆತನ ಸಂಬಂಧಿಕರು ಇಬ್ಬರ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಅವರಿಂದ ಹೊಡೆತ ತಪ್ಪಿಸಿಕೊಳ್ಳಲು ಇಬ್ಬರು ಗಟ್ಟಿಯಾಗಿ ತಬ್ಬಿಕೊಂಡಿದ್ದಾರೆ. ಎಷ್ಟೆ ಬಿಡಿಸಲು ಪ್ರಯತ್ನ ಮಾಡಿದರೂ ಅವರಿಬ್ಬರು ಅಪ್ಪಿಕೊಂಡೆ ಹೊಡೆತ ತಿಂದಿದ್ದಾರೆ.

    ಇಬ್ಬರಿಗೂ ಮಹಿಳೆಯ ಕುಟುಂಬಸ್ಥರು ಥಳಿಸುತ್ತಿದ್ರೂ, ಸಾರ್ವಜನಿಕರು ಸುಮ್ಮನೆ ನಿಂತು ನೋಡುತ್ತಿದ್ದರೆ ಹೊರತೂ, ಯಾರೊಬ್ಬರು ಅವರನ್ನು ಕಾಪಾಡಲು ಮುಂದೆ ಬರಲಿಲ್ಲ. ಬಳಿಕ ಅಲ್ಲಿದ್ದವರೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

    ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಇಬ್ಬರನ್ನೂ ಹೊಡೆತದಿಂದ ರಕ್ಷಿಸಿದ್ದಾರೆ. ಬಳಿಕ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆಯನ್ನು ನಡೆಸಿದ್ದಾರೆ.

  • ತಾಯಿಯ ಎದೆ ಹಾಲು ಕುಡಿದ ಕೂಡಲೇ ಮಗು ಸಾವು!

    ತಾಯಿಯ ಎದೆ ಹಾಲು ಕುಡಿದ ಕೂಡಲೇ ಮಗು ಸಾವು!

    ಲಕ್ನೋ: ತಾಯಿಯೊಬ್ಬಳು ಮಲಗಿದ್ದ ಸಂದರ್ಭದಲ್ಲಿ ವಿಷಪೂರಿತ ಹಾವು ಕಚ್ಚಿದೆ. ಇದನ್ನ ಗಮನಿಸದ ತಾಯಿ ಮಗುವಿಗೆ ಎದೆ ಹಾಲು ಕುಡಿಸಿದ್ದಾರೆ. ಪರಿಣಾಮ ಇಬ್ಬರು ಮೃತಪಟ್ಟಿರುವ ದಾರುಣ ಘಟನೆ ಉತ್ತರ ಪ್ರೇಶದಲ್ಲಿ ನಡೆದಿದೆ.

    35 ವರ್ಷದ ತಾಯಿ ತನ್ನ ಮನೆಯಲ್ಲಿ ಮಲಗಿರುವಾಗಲೇ ಹಾವು ಕಚ್ಚಿದೆ. ಆದ್ರೆ ನಿದ್ದೆಯ ಮಂಪರಿನಲ್ಲಿದ್ದ ಆಕೆಗೆ ಹಾವು ಕಚ್ಚಿರುವುದು ತಿಳಿದಿರಲಿಲ್ಲ. ಪರಿಣಾಮ ಪಕ್ಕದಲ್ಲೇ ಜೋರಾಗಿ ಅಳುತ್ತಿದ್ದ ತನ್ನ ಮೂರು ವರ್ಷದ ಹೆಣ್ಣು ಮಗುವಿಗೆ ಎದೆ ಹಾಲು ಕುಡಿಸಿದ್ದಾರೆ.

    ಮಗು ಹಾಲು ಕುಡಿದ ಸ್ವಲ್ಪ ಸಮಯದಲ್ಲಿಯೇ ಇಬ್ಬರೂ ತೀವ್ರವಾಗಿ ಅಸ್ವಸ್ಥರಾಗಿದ್ದಾರೆ. ಬಳಿಕ ಕುಟುಂಬಸ್ಥರು ಇಬ್ಬರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ತಾಯಿ, ಮಗು ಇಬ್ಬರು ಅಷ್ಟರಲ್ಲಿಯೇ ಮೃತಪಟ್ಟಿದ್ದರು ಎಂದು ಪೊಲೀಸ್ ಇನ್ಸ್ ಪೆಕ್ಟರ್ ವಿಜಯ್ ಸಿಂಗ್ ತಿಳಿಸಿದ್ದಾರೆ.

    ಮರಣೋತ್ತರ ಪರೀಕ್ಷೆ ವರದಿಯಲ್ಲಿ ತಾಯಿಗೆ ಹಾವು ಕಚ್ಚಿದೆ. ಹೀಗಾಗಿ ತಾಯಿಯ ಎದೆಹಾಲು ಕುಡಿದ ಮಗು ಸೇರಿ ಇಬ್ಬರೂ ಸಾವನ್ನಪ್ಪಿರುವುದು ತಿಳಿದು ಬಂದಿದೆ. ಆದ್ದರಿಂದ ಇದನ್ನು ಆಕಸ್ಮಿಕ ಸಾವು ಎಂದು ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

    ಕುಟುಂಬಸ್ಥರು ತಾಯಿ ಮಲಗಿದ್ದ ಪಕ್ಕದ ಕೊಠಡಿಯಲ್ಲಿದ್ದ ವಿಷಪೂರಿತ ಹಾವನ್ನು ಪತ್ತೆಮಾಡಿದ್ದಾರೆ. ಆದರೆ ಅದು ತಪ್ಪಿಸಿಕೊಂಡಿದೆ ಎಂಬುದಾಗಿ ವರದಿಯಾಗಿದೆ.

  • ಮದ್ವೆ ಮನೆಯಲ್ಲಿ ರೂಮಿನ ಬಾಗಿಲು ತೆಗೆಯುತ್ತಿದ್ದಂತೆ ದಂಗಾದ ಸಂಬಂಧಿಕರು!

    ಮದ್ವೆ ಮನೆಯಲ್ಲಿ ರೂಮಿನ ಬಾಗಿಲು ತೆಗೆಯುತ್ತಿದ್ದಂತೆ ದಂಗಾದ ಸಂಬಂಧಿಕರು!

    ಲಕ್ನೋ: ಮದುವೆಗೆ ಬಂದ ಅತಿಥಿಯೊಬ್ಬರು ಮದುವೆಮನೆಯ ರೂಮಿನಲ್ಲೇ ದೈಹಿಕ ಸಂಬಂಧ ಬೆಳೆಸುತ್ತಿದ್ದ ಘಟನೆ ಉತ್ತರಪ್ರದೇಶದ ಸೋನ್‍ಬದ್ರ ಜಿಲ್ಲೆಯ ಕೋತ್ವಾಲ್ ಗ್ರಾಮದಲ್ಲಿ ನಡೆದಿದೆ.

    ಮದುವೆಮನೆಯಲ್ಲಿ ಸಂಭ್ರಮ ವಾತವರಣವಿದ್ದು, ಎಲ್ಲರೂ ಮದುವೆ ಕೆಲಸಗಳಲ್ಲಿ ತೊಡಗಿದ್ದರು. ಮದುವೆಗೆ ಬಂದ ಮಕ್ಕಳು ಕೂಡ ಆಟವಾಡುತ್ತಾ ರೂಂವೊಂದರ ಬಾಗಿಲನ್ನು ತಟ್ಟುತ್ತಿದ್ದರು. ಆದರೆ ಯಾರೂ ಬಾಗಿಲು ತೆರೆಯಲಿಲ್ಲ. ಆಗ ಹಿರಿಯರು ಬಂದು ಬಾಗಿಲನ್ನು ಜೋರಾಗಿ ಒಡೆದು ಒಳಗೆ ಹೋದಾಗ ಒಂದು ಕ್ಷಣ ದಂಗಾಗಿ ಹೋದರು.

    ರೂಮಿನಲ್ಲಿ ಒಬ್ಬ ಯುವಕ ಹಾಗೂ ಯುವತಿ ದೈಹಿಕ ಸಂಬಂಧ ಬೆಳೆಸುವ ರೀತಿಯಲ್ಲಿ ಕಂಡು ಬಂದಿದ್ದಾರೆ. ಅವರ ಈ ವರ್ತನೆಯನ್ನು ಕಂಡು ಕುಟುಂಬದವರು ಹಾಗೂ ಗ್ರಾಮದವರು ಅವರನ್ನು ಹಿಡಿದು ಥಳಿಸಿದ್ದಾರೆ.

    ಯುವಕ ಹಾಗೂ ಯುವತಿ ಮದುವೆಯಲ್ಲಿ ಪಾಲ್ಗೊಳ್ಳಲು ಬಂದಿದ್ದರು. ಈ ನಡುವೆ ಸಂಬಂಧಿಕರಿಗೆಂದೇ ಇರಿಸಿದ್ದ ರೂಮಿನಲ್ಲಿ ಇವರಿಬ್ಬರು ಹೋಗಿದ್ದಾರೆ. ಈ ಇಬ್ಬರು ರೂಮಿನೊಳಗೆ ಹೋಗುವುದನ್ನು ಗ್ರಾಮದ ಒಬ್ಬ ವ್ಯಕ್ತಿ ನೋಡಿದ್ದನು.

    ಇವರಿಬ್ಬರು ರೂಮಿನೊಳಗೆ ಹೋಗುವುದನ್ನು ಕಂಡ ವ್ಯಕ್ತಿಯೊಬ್ಬ ತನ್ನ ಜೊತೆ ಕೆಲವರನ್ನು ರೂಮಿನ ಬಳಿ ಕರೆದುಕೊಂಡು ಹೋಗಿದ್ದಾನೆ. ಡೋರ್ ಒಡೆದು ಸಂಬಂಧಿಕರು ಹಾಗೂ ಗ್ರಾಮಸ್ಥರು ರೂಮಿನೊಳಗೆ ಹೋದಾಗ ಯುವಕ ಹಾಗೂ ಯುವತಿ ಅಶ್ಲೀಲವಾಗಿ ಇದ್ದರು. ಈ ನಡುವೆ ಅಲ್ಲಿಗೆ ಬಂದ ಇಬ್ಬರ ಕುಟುಂಬದವರು ಅವರನ್ನು ಥಳಿಸಿದ್ದಾರೆ ಎಂದು ವರದಿಯಾಗಿದೆ.

    ಆತ ನನ್ನನ್ನು ಬಲವಂತವಾಗಿ ರೂಮಿಗೆ ಕರೆದನು ಎಂದು ಯುವತಿ ಯುವಕನ ಮೇಲೆ ಆರೋಪಿಸಿದ್ದಾಳೆ. ಈ ಆರೋಪದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅವರನ್ನು ಕೂಡಿ ಹಾಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಯುವಕನನ್ನು ಹಿಡಿದು ಆತನಿಗೆ ಕಠಿಣ ಶಿಕ್ಷೆ ವಿಧಿಸುವುದಾಗಿ ಹೇಳಿ ಗ್ರಾಮಸ್ಥರನ್ನು ಶಾಂತಗೊಳಿಸಿದರು.

    ನಂತರ ಪೊಲೀಸರು ಯುವತಿಯನ್ನು ತನ್ನ ಕುಟುಂಬದವರಿಗೆ ಒಪ್ಪಿಸಿ, ಯುವಕನನ್ನು ಕೋತ್ವಾಲ್‍ಗೆ ಕರೆದುಕೊಂಡು ಹೋದರು. ಸದ್ಯ ಈ ಘಟನೆ ಬಗ್ಗೆ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಶೌಚಾಲಯದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ ಕಾಲೇಜು ಸಿಬ್ಬಂದಿ

    ಶೌಚಾಲಯದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ ಕಾಲೇಜು ಸಿಬ್ಬಂದಿ

    ಲಕ್ನೋ: ಕಾಲೇಜು ಸಿಬ್ಬಂದಿಯೊಬ್ಬ ವಿದ್ಯಾರ್ಥಿಗಳ ಶೌಚಾಲಯದಲ್ಲಿ ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸಿರುವ ಘಟನೆ ಉತ್ತರ ಪ್ರದೇಶದ ಅಲಿಗಢದಲ್ಲಿ ನಡೆದಿದೆ.

    ನಗರದ ಡಿಎಸ್ ಪದವಿ ಕಾಲೇಜಿನಲ್ಲಿ ಸಿಬ್ಬಂದಿ ಧರಮ್ ಸಮಾಜ್ ಶೌಚಾಲಯದಲ್ಲಿ ಕ್ಯಾಮೆರಾ ಫಿಕ್ಸ್ ಮಾಡಿದ್ದಾನೆ. ಇದರಿಂದ ವಿದ್ಯಾರ್ಥಿಗಳು ಇದು ಅನುಚಿತ ವರ್ತನೆಯಾಗಿದೆ ಎಂದು ಕಾಲೇಜಿನ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

    ಈ ಬಗ್ಗೆ ಕಾಲೇಜಿನ ಅಧಿಕಾರಿಗಳು, ವಿದ್ಯಾರ್ಥಿಗಳು ಪರೀಕ್ಷೆಯ ಸಮಯದಲ್ಲಿ ಶೌಚಾಲಯದಲ್ಲಿ ಬಂದು ನಕಲು ಮಾಡುತ್ತಾರೆ ಎಂದು ಮುಂಜಾಗೃತ ಕ್ರಮವಾಗಿ ಈ ರೀತಿ ಶೌಚಾಲಯದಲ್ಲಿ ಭದ್ರತಾ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಹೇಳಿದ್ದಾರೆ.

    ಕ್ಯಾಮೆರಾಗಳನ್ನು ನಮ್ಮ ಶೌಚಾಲಯದಲ್ಲಿ ಅಳವಡಿಸಿರುವುದು ಅವಮಾನಕರವಾಗಿದೆ. ಈ ಭದ್ರತಾ ಕ್ಯಾಮೆರಾಗಳನ್ನು ತಕ್ಷಣ ತೆಗೆದು ಹಾಕಬೇಕು. ಇಲ್ಲವಾದರೆ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುಲಾಗುತ್ತದೆ. ಇದು ನಮ್ಮ ಖಾಸಗಿತನದ ಉಲ್ಲಂಘನೆಯಾಗಿದೆ ಎಂದು ಕಾನೂನು ವಿದ್ಯಾರ್ಥಿ ಸೌರಭ್ ಚೌಧರಿ ಹೇಳಿದ್ದಾರೆ.

    ನಾವು ಶೌಚಾಲಯದೊಳಗೆ ಕಾಗದದ ಚೀಟಿ ಮತ್ತು ಇತರೆ ವಂಚನೆ ವಸ್ತುಗಳನ್ನು ಬಚ್ಚಿಟ್ಟುಕೊಳ್ಳುತ್ತಿರುವ ಅನೇಕ ದೂರುಗಳನ್ನು ಸ್ವೀಕರಿಸಿದ್ದೇವೆ. ಆದ್ದರಿಂದ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಪ್ರಾಂಶುಪಾಲರಾದ ಹೇಮ್ ಪ್ರಕಾಶ್ ಗುಪ್ತಾ ತಿಳಿಸಿದ್ದಾರೆ.

    ವಿದ್ಯಾರ್ಥಿಗಳು ಕಾಲೇಜಿನ ಮೂರು ಶೌಚಾಲಯಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ ಎಂದು ಹೇಳಿದ್ದಾರೆ. ಆದರೆ ವಾಶ್ ರೂಮ್ ಗಳಲ್ಲಿ ಕ್ಯಾಮೆರಾಗಳನ್ನು ಇರಿಸಿಲ್ಲ. ಅಷ್ಟೇ ಅಲ್ಲದೇ ಸಿಸಿಟಿವಿಗಳ ಪರಿಶೀಲನೆಗೆ ಕಾನೂನು ವಿಭಾಗದಲ್ಲಿ ಬೇರೆ ತಂಡವನ್ನು ನಿಯೋಜಿಸಲಾಗಿದೆ. ಇಲ್ಲಿ ಖಾಸಗಿತನದ ಉಲ್ಲಂಘನೆ ಇಲ್ಲ ಎಂದು ಗುಪ್ತಾ ಹೇಳಿದ್ದಾರೆ.

    ವಿದ್ಯಾರ್ಥಿಗಳು ಅಧಿಕಾರಿಗಳಿಗೆ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ದೂರನ್ನು ದಾಖಲಿಸಬಹುದು. ಆದರೆ ಶೌಚಾಲಯಗಳಲ್ಲಿ ಮಾಡುವ ನಕಲನ್ನು ಬೇರೆ ರೀತಿಯಾಗಿ ಪರೀಕ್ಷಿಸಬಹುದು. ಈ ವಿಚಾರದಲ್ಲಿ ಕಾಲೇಜು ನಿರ್ವಹಣೆ ಅಸಮರ್ಥನೀಯವಾಗಿ ಕಾರ್ಯನಿರ್ವಹಿಸಿದೆ ಎಂದು ತೋರುತ್ತದೆ ಅಂತ ರಾಷ್ಟ್ರೀಯ ಅಲ್ಪಸಂಖ್ಯಾತ ಶಿಕ್ಷಣ ನಿಗಾ ಸಮಿತಿಯ ಸದಸ್ಯ ಮನ್ವೇಂದ್ರ ಪ್ರತಾಪ್ ಸಿಂಗ್ ಹೇಳಿದ್ದಾರೆ.

  • ಬೈಕಿನಲ್ಲಿ ಶೂಟಿಂಗ್‍ಗೆ ತೆರಳ್ತಿದ್ದಾಗ ರಸ್ತೆ ಅಪಘಾತದಲ್ಲಿ ಮೃತಪಟ್ಟ ನಟಿ

    ಬೈಕಿನಲ್ಲಿ ಶೂಟಿಂಗ್‍ಗೆ ತೆರಳ್ತಿದ್ದಾಗ ರಸ್ತೆ ಅಪಘಾತದಲ್ಲಿ ಮೃತಪಟ್ಟ ನಟಿ

    ಲಕ್ನೋ: ಶೂಟಿಂಗ್‍ಗೆ ಬೈಕಿನಲ್ಲಿ ಹೋಗುವಾಗ ಕಾರು ಬೈಕಿಗೆ ಡಿಕ್ಕಿ ಹೊಡೆದು ಭೋಜ್‍ಪುರಿ ನಟಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ಉತ್ತರ ಪ್ರದೇಶದ ಚಿಟ್ವೌನಿ ಗ್ರಾಮದ ಬಾಲಿಯಾದಲ್ಲಿ ನಡೆದಿದೆ.

    ಮನಿಶಾ ರೈ(45) ಅಪಘಾತದಲ್ಲಿ ಮೃತಪಟ್ಟ ಭೋಜ್‍ಪುರಿ ನಟಿ. ಮನೀಶಾ ತನ್ನ ಆಸೋಸಿಯೆಟ್ ಸಂಜೀವ್ ಮಿಶ್ರಾ ಜೊತೆ ಬೈಕಿನಲ್ಲಿ ಶೂಟಿಂಗ್‍ಗೆ ತೆರಳುತ್ತಿದ್ದರು. ಈ ವೇಳೆ ಕಾರು ಬೈಕಿಗೆ ಡಿಕ್ಕಿ ಹೊಡೆದಿದೆ ಪರಿಣಾಮ ಮನೀಶಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಎಸ್‍ಐ ಎಸ್‍ಪಿ ಗಂಗೂಲಿ ತಿಳಿಸಿದ್ದಾರೆ.

    ಇನ್ನೂ ಈ ಅಪಘಾತದಲ್ಲಿ ಸಂಜೀವ್ ಮಿಶ್ರಾ ಗಾಯಗೊಂಡಿದ್ದಾರೆ. ಅಪಘಾತ ಸಂಭವಿಸಿದ ನಂತರ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಗಂಗೂಲಿ ಹೇಳಿದ್ದಾರೆ.

    ಸದ್ಯ ಮನೀಶಾ ರೈ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಇನ್ನೂ ಮನೀಶಾ ರೈ ಕಿರುಚಿತ್ರದ ನಾಯಕಿಯಾಗಿದ್ದು, ಕೋಬರ್ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

  • ಫಸ್ಟ್ ನೈಟ್ ನಲ್ಲಿ ಪತ್ನಿಯನ್ನ ನೋಡುತ್ತಿದ್ದಂತೆ ಕಂಗಾಲಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ ವರ!

    ಫಸ್ಟ್ ನೈಟ್ ನಲ್ಲಿ ಪತ್ನಿಯನ್ನ ನೋಡುತ್ತಿದ್ದಂತೆ ಕಂಗಾಲಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ ವರ!

    ಲಕ್ನೋ: ಮೊದಲ ರಾತ್ರಿಯಲ್ಲಿ ಪತ್ನಿಯನ್ನ ನೋಡಿದ ನಂತರ ಕಂಗಾಲಾಗಿ ನವವಿವಾಹಿತನೊಬ್ಬ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

    ಮೇ 9 ರಂದು ಮೇನ್ಪುರಿಯಲ್ಲಿ ಕಿಷ್ಣಿಯ ಹರೇಂದ್ರ ಜಾತವ್, ಹಾರ್ಡೊಯಿ ಜಿಲ್ಲೆಯ 19 ವರ್ಷದ ಯುವತಿಯನ್ನು ಮದುವೆಯಾಗಿದ್ದನು. ಆದರೆ ಮದುವೆಯಾದ ಮೊದಲ ರಾತ್ರಿಯಂದು ಆಕೆ ಹುಡುಗಿ ಅಲ್ಲ ಮಂಗಳಮುಖಿ ಎಂದು ತಿಳಿದಿದೆ. ಇದರಿಂದ ವರ ಕಂಗಾಲಾಗಿ ನ್ಯಾಯಕ್ಕಾಗಿ ಪೊಲೀಸ್ ಮೆಟ್ಟಿಲೇರಿದ್ದಾನೆ.

    ಇವರಿಬ್ಬರ ಮದುವೆ ಅದ್ಧೂರಿಯಾಗಿ ಸುಮಾರು 12 ದಿನಗಳ ಕಾಲ ನಡೆದಿದೆ. ಆ ದಿನಗಳಲ್ಲಿ ಒಂದು ದಿನವೂ ವಧು ಮಂಗಳಮುಖಿ ಎಂದು ತಿಳಿದು ಬಂದಿಲ್ಲ. ಮೊದಲ ರಾತ್ರಿಯಂದು ಆಕೆ ಮಂಗಳಮುಖಿ ಎಂದು ತಿಳಿದಿದೆ. ನಂತರ ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಈ ವೇಳೆ ವೈದ್ಯರ ವರದಿಯಲ್ಲಿ ಯುವಕನ ಅನುಮಾನ ದೃಢಪಟ್ಟಿದೆ. ಬಳಿಕ ಗ್ರಾಮದ ಹಿರಿಯರು ಆಕೆಯನ್ನು ಪೋಷಕರ ಮನೆಗೆ ಕಳುಹಿಸಿದ್ದಾರೆ.

    ನಾನು ಮದುವೆಯಾಗುವುದಕ್ಕೆ ಮುಂಚಿತವಾಗಿ ಆಕೆಯನ್ನ ತುಂಬಾ ಪ್ರೀತಿಸುತ್ತಿದ್ದೆ. ನನಗೆ ನನ್ನ ಮೊದಲ ರಾತ್ರಿಯಂದು ಆಕೆ ಮಂಗಳಮುಖಿ ಎಂದು ತಿಳಿಯಿತು. ತಕ್ಷಣ ಕೆಲ ಸೆಕೆಂಡ್ ಗಾಬರಿಯಿಂದ ಕುಸಿದು ಬಿದ್ದೆ. ಮರುದಿನ ಬೆಳಗ್ಗೆ ಈ ವಿಷಯವನ್ನು ಪೋಷಕರಿಗೆ ತಿಳಿಸಿದೆ ಎಂದು ಜಾತವ್ ಹೇಳಿದ್ದಾರೆ.

    ಈ ಘಟನೆ ಸಂಬಂಧ ಕಿಷ್ಣಿಯ ಪೊಲೀಸ್ ಠಾಣೆಗೆ ಹೋಗಿ, ಮದುವೆ ವೇಳೆ ನನಗೆ ಮೋಸವಾಗಿದೆ. ನ್ಯಾಯ ಕೊಡಿಸಿ ಎಂದು ನವವಿವಾಹಿತ ಮನವಿ ಮಾಡಿಕೊಂಡಿದ್ದಾನೆ. ಆದರೆ ಎರಡು ಕುಟುಂಬದವರು ಒಪ್ಪಿಗೆ ಮೇರೆಗೆ ಕೂತು ಮಾತನಾಡಿ ಸಮಸ್ಯೆ ಬಗೆಹರಿಸಿಕೊಂಡಿದ್ದಾರೆ. ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಎಂದು ಕಾನ್ಸ್ ಟೇಬಲ್ ತಿಳಿಸಿದ್ದಾರೆ.

  • ಮೊಬೈಲ್ ನಂಬರ್ ಕೊಡಲು ನಿರಾಕರಿಸಿದ್ದಕ್ಕೆ ಅಪ್ರಾಪ್ತೆಗೆ ಬೆಂಕಿ ಹಚ್ಚಿದ!

    ಮೊಬೈಲ್ ನಂಬರ್ ಕೊಡಲು ನಿರಾಕರಿಸಿದ್ದಕ್ಕೆ ಅಪ್ರಾಪ್ತೆಗೆ ಬೆಂಕಿ ಹಚ್ಚಿದ!

    ಲಕ್ನೋ: ಫೋನ್ ನಂಬರ್ ನೀಡದ್ದಕ್ಕೆ ಯುವಕನೊಬ್ಬ ಬಾಲಕಿಗೆ ಬೆಂಕಿ ಹಚ್ಚಿದ ಘಟನೆ ಉತ್ತರ ಪ್ರದೇಶದ ಫರಿಹಾ ಜಿಲ್ಲೆಯ ಅಜಮ್‍ಘರ್ ನಲ್ಲಿ ನಡೆದಿದೆ.

    ಮೊಹ್ಮದ್ ಶಾಯಿ ಬೆಂಕಿ ಹಚ್ಚಿದ ಆರೋಪಿ. ಶಾಯಿ ಕೂಡ ಬಾಲಕಿಯ ಗ್ರಾಮದವನಾಗಿದ್ದು, ಮಂಗಳವಾರ ಶಾಯಿ ಬಾಲಕಿ ಮನೆಗೆ ಹೋಗಿ ಫೋನ್ ನಂಬರ್ ಕೊಡು ಎಂದು ಒತ್ತಾಯಿಸಿದ್ದಾನೆ.

    ಬಾಲಕಿ ಯುವಕನಿಗೆ ಫೋನ್ ನಂಬರ್ ಕೊಡಲು ನಿರಾಕರಿಸಿದ್ದಾಳೆ. ಇದ್ದರಿಂದ ಕೋಪಗೊಂಡ ಶಾಯಿ ಮೊದಲು ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ನಂತರ ಸೀಮೆ ಎಣ್ಣೆ ಎರಚಿ ಬೆಂಕಿ ಹಚ್ಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಬಾಲಕಿಯ ಕಿರುಚಾಟದ ಧ್ವನಿ ಕೇಳಿ ಅಕ್ಕಪಕ್ಕದ ಮನೆಯವರು ಓಡಿ ಬಂದು ಬೆಂಕಿಯನ್ನು ನಂದಿಸುವ ಪ್ರಯತ್ನ ಮಾಡಿದ್ದಾರೆ. ಸ್ಥಳಕ್ಕೆ ಜನ ಬರುವುದನ್ನು ನೋಡಿ ಶಾಯಿ ಓಡಿ ಹೋಗಿ ಪರಾರಿಯಾಗಲು ಯತ್ನಿಸಿದ್ದಾನೆ. ಕೂಡಲೇ ಅಲ್ಲಿದ್ದ ಜನ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

    ಘಟನೆ ಸ್ಥಳದಲ್ಲಿ ಸೇರಿದ್ದ ಅಕ್ಕಪಕ್ಕದ ಮನೆಯವರು ಬಾಲಕಿಯನ್ನು ಸರ್ದಾರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ನಂತರ ಆಕೆಯನ್ನು ವಾರಣಾಸಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಾಲಕಿಯ ದೇಹ ಶೇ.80ರಷ್ಟು ಸುಟ್ಟು ಹೋಗಿದ್ದು, ಈಗ ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

    ಶಾಯಿಯನ್ನು ಗ್ರಾಮಸ್ಥರು ಹಿಡಿದು ಥಳಿಸಿದ್ದಾರೆ. ನಂತರ ಆತನನ್ನು ಕೂಡ ಸರ್ದಾರ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ ಎಸ್‍ಸಿ, ಎಸ್‍ಟಿ ಕಾಯ್ದೆ ಹಾಗೂ ಪೋಸ್ಕೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

  • ನಾಯಿ ಮರಿಯನ್ನು ರಕ್ಷಿಸಲು 6 ಗಂಟೆಯಲ್ಲಿ ಡ್ರೋಣ್ ಸಿದ್ಧಪಡಿಸಿದ ಟೆಕ್ಕಿ! ವಿಡಿಯೋ ನೋಡಿ

    ನಾಯಿ ಮರಿಯನ್ನು ರಕ್ಷಿಸಲು 6 ಗಂಟೆಯಲ್ಲಿ ಡ್ರೋಣ್ ಸಿದ್ಧಪಡಿಸಿದ ಟೆಕ್ಕಿ! ವಿಡಿಯೋ ನೋಡಿ

    ಲಕ್ನೋ: ಕೊಳಚೆ ನೀರು ಹರಿಯುವ ಕಾಲುವೆಯಲ್ಲಿ ನಾಯಿ ಮರಿಯೊಂದು ಬಿದ್ದು ಒದ್ದಾಡುತ್ತಿದ್ದನ್ನು ಕಂಡ ಟೆಕ್ಕಿಯೊಬ್ಬರು ಕೇವಲ 6 ಗಂಟೆಯಲ್ಲಿ ಡ್ರೋಣ್ ತಯಾರಿಸಿ ರಕ್ಷಿಸಿರುವ ಘಟನೆ ಲಕ್ನೋದಲ್ಲಿ ನಡೆದಿದೆ.

    ರಾಜ್ ಮಿಲಿಂದರ್ (27) ನಾಯಿ ಮರಿಯನ್ನು ರಕ್ಷಿಸಿದ ಟೆಕ್ಕಿ. ಬೆಳಗ್ಗೆ ವಾಕಿಂಗ್ ಮಾಡಲು ತೆರಳಿದ್ದ ರಾಜ್, ನಾಯಿ ಮರಿ ಮೋರಿಯಲ್ಲಿ ಬಿದ್ದು ಒದ್ದಾಡುವುದನ್ನು ಕಂಡು ರಕ್ಷಿಸಲು ಸ್ಥಳೀಯರ ಸಹಾಯ ಕೇಳಿದ್ದಾರೆ. ಆದರೆ ಯಾರು ಸಹಾಯ ಮಾಡಲು ನಿರಾಕರಿಸಿ ನಾಯಿ ಮರಿ ಅಲ್ಲಿಯೇ ಸಾಯಲಿ ಎಂದು ಹೇಳಿದ್ರಂತೆ. ಈ ವೇಳೆ ನಾಯಿ ಮರಿಯನ್ನು ರಕ್ಷಿಸಬೇಕು ಎಂದು ತೀರ್ಮಾನಿಸಿದ ರಾಜ್ ನೇರ ಲ್ಯಾಬ್‍ಗೆ ತೆರಳಿ ಡ್ರೋಣ್ ತಯಾರಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸುವ ರಾಜ್, ನಾಯಿ ಮರಿ ರಕ್ಷಿಸಲು ಸಹಾಯ ಕೇಳಿದ ವೇಳೆ ಎರಡು ದಿನಗಳಿಂದ ಮೋದಿಯಲ್ಲಿ ಅದು ಸಿಕ್ಕಿಕೊಂಡು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ವಿಷಯ ತಿಳಿಯಿತು. ಅದ್ದರಿಂದ ಅದನ್ನು ರಕ್ಷಣೆ ಮಾಡಲು ನಿರ್ಧರಿಸಿ ಎಐ ಕಂಟ್ರೋಲ್ ಡ್ರೋಣ್ ತಯಾರಿಸಿದ್ದಾಗಿ ಹೇಳಿದ್ದಾರೆ.

    ಡ್ರೋಣ್ ಗೆ ರೊಬೋಟಿಕ್ ಕೈ ಜೋಡಿಸಲಾಗಿತ್ತು, ಬಳಿಕ ರಿಮೋಟ್ ಕಂಟ್ರೋಲ್ ಬಳಸಿ ಅದನ್ನು ನಿಯಂತ್ರಣ ಮಾಡಲಾಯಿತು. ಅಲ್ಲದೇ ಅದಕ್ಕೆ ಸ್ಮಾರ್ಟ್ ಸೆನ್ಸಾರ್ ಅಳವಡಿಸಲಾಗಿತ್ತು. ಇದರಿಂದ ನಾಯಿಯನ್ನು ರಕ್ಷಣೆ ಮಾಡಲು ಸಾಧ್ಯವಾಯಿತು. ಕೊಳಚೆ ಕಾಲುವೆಗೆ ಇಳಿದು ನಾಯಿ ಮರಿಯನ್ನು ರಕ್ಷಿಸುವುದು ಅಸಾಧ್ಯವಾಗಿತ್ತು. ಅದ್ದರಿಂದ ಅನಿವಾರ್ಯವಾಗಿ ಡ್ರೋಣ್ ಸಹಾಯ ಪಡೆಯಬೇಕಾಯಿತು ಎಂದು ಹೇಳಿದ್ದಾರೆ.

  • ನಿಂತಿದ್ದ ಟ್ರಕ್ ಗೆ ಹಿಂಬದಿಯಿಂದ ವ್ಯಾನ್ ಡಿಕ್ಕಿ – 12 ಮಂದಿ ದುರ್ಮರಣ

    ನಿಂತಿದ್ದ ಟ್ರಕ್ ಗೆ ಹಿಂಬದಿಯಿಂದ ವ್ಯಾನ್ ಡಿಕ್ಕಿ – 12 ಮಂದಿ ದುರ್ಮರಣ

    ಲಕ್ನೋ: ನಿಂತಿದ್ದ ಟ್ರಕ್ ಗೆ ಹಿಂಬದಿಯಿಂದ ವ್ಯಾನ್ ಡಿಕ್ಕಿ ಹೊಡೆದ ಪರಿಣಾಮ 12 ಮಂದಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಲಕ್ಕಿಮ್‍ ಪುರ ಖೇರಿ ಜಿಲ್ಲೆಯಲ್ಲಿ ನಡೆದಿದೆ.

    ಈ ಅಪಘಾತ ಇಂದು ಬೆಳಗ್ಗೆ ಸುಮಾರು 6 ಗಂಟೆಗೆ ರಾಷ್ಟ್ರೀಯ ಹೆದ್ದಾರಿ 24ರ ಉಚೌಲಿಯಾ ಪಸ್ಗಾವನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ. ಈ ಅಪಘಾತದಲ್ಲಿ ಟಾಟಾ ಮ್ಯಾಜಿಕ್ ವ್ಯಾನ್ ಚಾಲಕ ಅನೂಪ್ ಅವಸ್ಥಿ (25) ಮತ್ತು ಕ್ಲಿನರ್ ಕೀಶನ್ (23) ಮೃತಪಟ್ಟಿದ್ದಾರೆ. ಆದರೆ ಉಳಿದವರ ಗುರುತು ಇನ್ನು ಪತ್ತೆಯಾಗಿಲ್ಲ.

    ವ್ಯಾನ್ 17 ಮಂದಿ ಪ್ರಯಾಣಿಕರನ್ನು ಶಹಜಹಾನ್ ಪುರದಿಂದ ಸೀತಾಪುರಕ್ಕೆ ಕರೆದುಕೊಂಡು ಹೋಗುತ್ತಿತ್ತು. ಈ ವ್ಯಾನ್ ಓವರ್ ಲೋಡ್ ಆಗಿ ಪ್ರಯಾಣಿಕರನ್ನ ತುಂಬಿತ್ತು ಎಂದು ತಿಳಿದು ಬಂದಿದೆ. ಹೀಗಾಗಿ ಉಚೌಲಿಯಾ ರಸ್ತೆ ಬದಿಯ ಬಳಿ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ನಿಂತಿದ್ದ ಟ್ರಕ್ಕಿಗೆ ವೇಗವಾಗಿ ಬಂದು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲಿಯೇ 12 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಅಪಘಾತದಲ್ಲಿ ಗಾಯಗೊಂಡವರನ್ನು ಸಮೀಪದ ಆಸ್ಪತ್ರೆ ರವಾನಿಸಲಾಗಿದೆ. ಈ ಅಪಘಾತಕ್ಕೆ ಅತಿವೇಗದ ಚಾಲನೆಯೇ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ.

    ಈ ಅಪಘಾತದ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಂತಾಪ ಸೂಚಿಸಿದ್ದು, ಅಪಘಾತದಲ್ಲಿ ಮೃತಪಟ್ಟವರಿಗೆ ಸಹಾಯ ಮಾಡುವುದಾಗಿ ಮತ್ತು ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

  • ಮದ್ವೆಯಾದ ನಂತ್ರ ಗೊತ್ತಾಯ್ತು ವರ ಅವನಲ್ಲ ಅವಳು!

    ಮದ್ವೆಯಾದ ನಂತ್ರ ಗೊತ್ತಾಯ್ತು ವರ ಅವನಲ್ಲ ಅವಳು!

    ಲಕ್ನೋ: ಸಾಮೂಹಿಕ ವಿವಾಹದಲ್ಲಿ 20 ವರ್ಷದ ಇಬ್ಬರು ಯುವತಿಯರು(ಸಲಿಂಗಿಗಳು) ತಮ್ಮ ಪೋಷಕರು ಹಾಗೂ ವಿವಾಹ ಆಯೋಜಕರಿಗೆ ಮೋಸ ಮಾಡಿ ಮದುವೆಯಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    20 ವರ್ಷದ ಈ ಯುವತಿಯರು 2 ವರ್ಷದಿಂದ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದರು. ಇವರ ಸಂಬಂಧದ ಬಗ್ಗೆ ಹಾಗೂ ಇವರಿಬ್ಬರು ಮದುವೆಯಾಗುತ್ತಿರುವುದು ಅವರ ಕುಟುಂಬಕ್ಕೆ ಯಾವುದೇ ಮಾಹಿತಿ ಇರಲಿಲ್ಲ. ಹಾಗಾಗಿ ಅವರು ಈ ರೀತಿ ಮದುವೆಯಾಗುವುದ್ದಾಗಿ ನಿರ್ಧರಿಸಿದ್ದರು ಎಂದು ವರದಿಯಾಗಿದೆ.

    ಏ. 6ರಂದು ಇಬ್ಬರು ಯುವತಿಯರು ಸಾಮೂಹಿಕ ಮದುವೆಯಾಗಲೂ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದರು. ಅಲ್ಲದೇ ನಕಲಿ ಪೋಷಕರನ್ನು ಕೂಡ ಕರೆ ತಂದಿದ್ದರು. ಇಬ್ಬರಲ್ಲಿ ಒಬ್ಬ ಯುವತಿ ವರನ ರೀತಿ ತಯಾರಿ ನಡೆಸಿಕೊಂಡು, ಕಾರ್ತಿಕ್ ಶುಕ್ಲಾ ಎಂಬ ಹೆಸರಿನ ಆಧಾರ್ ಕಾರ್ಡ್ ಕೂಡ ಮಾಡಿಸಿದ್ದಳು.

    ಮದುವೆಯಾದ ಕೆಲವು ದಿನಗಳ ನಂತರ ವಧುವಿನ ಕುಟುಂಬದವರಿಗೆ ವರ ಹೆಣ್ಣು ಎಂಬುದು ತಿಳಿಯಿತ್ತು. ಮದುವೆಯಾದ ನಂತರ ಪಕ್ಕದ ಮನೆಯವರು ಫೋಟೋಗಳನ್ನು ನೋಡಿದ್ದಾರೆ. ಈ ಸಂದರ್ಭದಲ್ಲಿ ಮದುವೆಯಾದ ಗಂಡು ಹುಡುಗನಲ್ಲ ಎನ್ನುವ ವಿಚಾರ ತಿಳಿದಿದೆ. ಈ ವಿಚಾರ ಪ್ರಚಾರ ಪಡೆದು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಈಗ ವೈರಲ್ ಆಗಿದೆ.

    ಈ ವಿಚಾರದ ಬಗ್ಗೆ ಪೊಲೀಸರು ಪ್ರತಿಕ್ರಿಯಿಸಿ, ಮದುವೆಯಾದ ಬಗ್ಗೆ ಯಾವೊಂದು ಕುಟುಂಬ ದೂರು ದಾಖಲಿಸಿಲ್ಲ. ಹೀಗಾಗಿ ನಾವು ಯಾವುದೇ ಕ್ರಮಕೈಗೊಳ್ಳಲು ಸಾಧ್ಯವಿಲ್ಲ. ಇಬ್ಬರು ವಯಸ್ಕರಾಗಿದ್ದು, ಅವರನ್ನು ದೂರ ಮಾಡಲು ಆಗುವುದಿಲ್ಲ ಎಂದು ತಿಳಿಸಿದ್ದಾರೆ.