Tag: lucknow

  • ಯುವತಿಗೆ ಮತ್ತು ಬರುವ ಔಷಧಿ ಕುಡಿಸಿ, ಚಲಿಸುತ್ತಿದ್ದ ಕಾರಿನಲ್ಲಿ ಗ್ಯಾಂಗ್‍ರೇಪ್

    ಯುವತಿಗೆ ಮತ್ತು ಬರುವ ಔಷಧಿ ಕುಡಿಸಿ, ಚಲಿಸುತ್ತಿದ್ದ ಕಾರಿನಲ್ಲಿ ಗ್ಯಾಂಗ್‍ರೇಪ್

    ಲಕ್ನೋ: 20 ವರ್ಷದ ಯುವತಿಗೆ ಮತ್ತು ಬರುವ ಔಷಧಿ ಕುಡಿಸಿ, ಚಲಿಸುತ್ತಿದ್ದ ಕಾರಿನಲ್ಲಿಯೇ ನಾಲ್ವರು ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

    ಈ ಘಟನೆ ಕಾನ್ಪುರದ ಸಾಚೆಂದಿ ಪ್ರದೇಶದಲ್ಲಿ ನಡೆದಿದ್ದು, ಮಂಗಳವಾರ ರಾತ್ರಿ ಈ ಕುರಿತು ಸಂತ್ರಸ್ತೆಯ ಪೋಷಕರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅವರು ನೀಡಿದ ದೂರಿನನ್ವಯ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

    ಏನಿದು ಪ್ರಕರಣ?
    ಸೆಪ್ಟೆಂಬರ್ 20 ರಂದು ನಮ್ಮ ಮಗಳು ಅದೇ ಗ್ರಾಮದ ಇನ್ನೊಬ್ಬ ಮಹಿಳೆಯ ಜೊತೆ ಹಬ್ಬಕ್ಕೆ ಹೋಗಿದ್ದಳು. ಆದರೆ ಸಂಜೆಯಾದ್ರು ಮನೆಗೆ ಹಿಂದಿರುಗಿ ಬರಲಿಲ್ಲ. ನಂತರ ನಾವು ಎಲ್ಲ ಕಡೆ ಹುಡುಕಾಡಿ ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ಕೊಟ್ಟಿದ್ದೇವು. ಆದರೆ ಸೆಪ್ಟೆಂಬರ್ 21 ರಂದು ನಮ್ಮ ಮನೆಯ ಹಿಂಭಾಗ ಪ್ರಜ್ಞಾಹೀನಾ ಸ್ಥಿತಿಯಲ್ಲಿ ಬಿದ್ದಿದ್ದಳು ಎಂದು ಪೋಷಕರು ಹೇಳಿದ್ದಾರೆ.

    ಕೂಡಲೇ ಸಂತ್ರಸ್ತೆಯನ್ನು ಲಾಲ ಲಜಪತ್ ರಾಯ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಪ್ರಜ್ಞೆ ಬಂದ ಬಳಿಕ ಸಂತ್ರಸ್ತೆ ನಡೆದ ಘಟನೆಯ ಬಗ್ಗೆ ತಿಳಿಸಿದ್ದಾಳೆ ಎಂದು ಸೆಚೆಂದಿ ಪೊಲೀಸ್ ಅಧಿಕಾರಿ ರಾಘವೇಂದ್ರ ಸಿಂಗ್ ಹೇಳಿದ್ದಾರೆ.

    ಸಂತ್ರಸ್ತೆ ಹಬ್ಬ ಮುಗಿಸಿಕೊಂಡು ಹಿಂದಿರುಗಿ ಬರಲು ಕಾರಿಗಾಗಿ ಕಾಯುತ್ತಿದ್ದಳು. ಈ ವೇಳೆ ನಾಲ್ವರು ಮಂದಿ ಬಂದು ಆಕೆಯನ್ನು ಕಾರಿನಲ್ಲಿ ಕೂರಿಸಿಕೊಂಡು ಹೋಗಿದ್ದಾರೆ. ಬಳಿಕ ಬಲವಂತವಾಗಿ ಮತ್ತು ಬರುವ ಔಷಧಿಯನ್ನು ಕುಡಿಸಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಅತ್ಯಾಚಾರದ ಬಳಿಕ ಸಂತ್ರಸ್ತೆಯನ್ನು ಆಕೆಯ ಮನೆಯ ಹಿಂಭಾಗದಲ್ಲಿಯೇ ತಳ್ಳಿ ಹೋಗಿದ್ದಾರೆ. ಇದೇ ವೇಳೆ ನಡೆದ ವಿಚಾರದ ಬಗ್ಗೆ ಯಾರಿಗೂ ಹೇಳಬಾರದು ಎಂದು ಧಮ್ಕಿ ಕೂಡ ಹಾಕಿದ್ದಾರೆ ಎಂದು ಪೊಲೀಸ್ ರವಿ ಕುಮಾರ್ ಸಿಂಗ್ ಹೇಳಿದ್ದಾರೆ.

    ಸದ್ಯಕ್ಕೆ ಪೊಲೀಸರು ಸಂತ್ರಸ್ತೆಯ ಹೇಳಿಕೆಯನ್ನು ರೆಕಾರ್ಡ್ ಮಾಡಿಕೊಂಡಿದ್ದು, ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಟಿ ರಮ್ಯಾ ವಿರುದ್ಧ ಎಫ್‍ಐಆರ್ ದಾಖಲು!

    ನಟಿ ರಮ್ಯಾ ವಿರುದ್ಧ ಎಫ್‍ಐಆರ್ ದಾಖಲು!

    ಲಕ್ನೋ: ರಫೇಲ್ ಒಪ್ಪಂದಕ್ಕೆ ಸಂಬಂಧಪಟ್ಟಂತೆ ಮಂಡ್ಯ ಮಾಜಿ ಸಂಸದೆ ರಮ್ಯಾ, ಪ್ರಧಾನಿ ಮೋದಿ ಅವರನ್ನು ಟೀಕಿಸಿ ಅಪೇಕ್ಷರ್ಹ ಫೋಟೋವನ್ನು ಟ್ವೀಟ್ ಮಾಡಿದ್ದಕ್ಕೆ ಉತ್ತರ ಪ್ರದೇಶದ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

    ಲಕ್ನೋ ಮೂಲ ವಕೀಲರಾದ ಸೈಯದ್ ರಿಜ್ವಾನ್ ಅಹ್ಮದ್ ಮಂಗಳವಾರ ಗೌಮತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಸದ್ಯ ರಮ್ಯಾ ಅವರ ವಿರುದ್ಧ ಐಪಿಸಿ ಸೆಕ್ಷನ್ 67 (ಮಾಹಿತಿ ತಂತ್ರಜ್ಞಾನದ ಕಾಯ್ದೆ), 2008 ಮತ್ತು ಸೆಕ್ಷನ್ 124ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    ರಫೇಲ್ ಒಪ್ಪಂದ ಕುರಿತು ರಮ್ಯಾ ಸೆಪ್ಟೆಂಬರ್ 24 ರಂದು ಮೋದಿ ಅವರ ಮೇಣದ ಪ್ರತಿಮೆಯ ಫೋಟೋ ಟ್ವೀಟ್ ಮಾಡಿದ್ದರು. ಈ ಫೋಟೋದಲ್ಲಿ ಮೋದಿ ಸ್ವತಃ ತಮ್ಮ ಪ್ರತಿಮೆ ಮೇಲೆ ಕಳ್ಳ ಎಂದು ಬರೆಯುವಂತೆ ಚಿತ್ರಿಸಲಾಗಿದೆ. ಈ ಫೋಟೋಗೆ ಕಳ್ಳ ಪ್ರಧಾನಿ ಸುಮ್ಮನಿದ್ದಾರೆ (#ChorPMChupHai) ಎಂಬ ಹ್ಯಾಷ್ ಟ್ಯಾಗನ್ನು ರಮ್ಯಾ ಬಳಸಿ ಟ್ವೀಟ್ ಮಾಡಿದ್ದರು.

    ರಮ್ಯಾ ಮಾಡಿದ ಟ್ವಿಟ್ ನಲ್ಲಿ ನರೇಂದ್ರ ಮೋದಿ ವಿರುದ್ಧ ದ್ವೇಷ ಕಾರುವ ಅಂಶವಿದೆ ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಿಜ್ವಾನ್ ಅಹ್ಮದ್ ದೂರು ನೀಡಿದ್ದರು.

    ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕೂಡ ರಫೇಲ್ ಒಪ್ಪಂದ ಕುರಿತು ಮೋದಿ ಸರ್ಕಾರದ ವಿರುದ್ಧ ಅರೋಪಗಳ ಸುರಿಮಳೆ ಮಾಡಿದ್ದರು. ಯುಪಿಎ ಸರ್ಕಾರದ ಅವಧಿಯಲ್ಲಿ 2012ರಲ್ಲಿ ಫ್ರಾನ್ಸ್’ನ ಡಸಾಲ್ಟ್ ಏವಿಯೇಶನ್ ಸಂಸ್ಥೆಯೊಂದಿಗೆ 126 ಮಧ್ಯಮ ಶ್ರೇಣಿಯ ಬಹುಮುಖಿ ಯುದ್ಧ ವಿಮಾನಗಳ (ಎಂಎಂಆರ್’ಸಿಎ-ಮೀಡಿಯಂ ಮಲ್ಟಿ ರೋಲ್ ಕಾಂಬಾಟ್ ಏರ್’ಕ್ರಾಫ್ಟ್) ಖರೀದಿಗೆ ಒಪ್ಪಂದ ಮಾಡಿಕೊಟ್ಟಿತ್ತು. ಮಾತುಕತೆಯ ನಿಯಮಗಳ ಪ್ರಕಾರ ಡಸಾಲ್ಟ್ ಏವಿಯೇಶನ್ ಸಂಸ್ಥೆಯು 18 ರಫೇಲ್ ಜೆಟ್‍ಗಳನ್ನು ಹಾರಾಡಲು ಸನ್ನದ್ಧವಾಗಿರುವ ಸ್ಥಿತಿಯಲ್ಲಿ ಭಾರತಕ್ಕೆ ಪೂರೈಸಬೇಕು ಹಾಗೂ ಭಾರತದ ಎಚ್‍ಎಎಲ್‍ನೊಂದಿಗೆ ಉಳಿದ 108 ಯುದ್ಧ ವಿಮಾನಗಳನ್ನು ಭಾರತದಲ್ಲಿಯೇ ತಯಾರಿಸಬೇಕೆನ್ನುವ ಷರತ್ತನ್ನು ಹಾಕಿತ್ತು ಎಂದು ರಾಹುಲ್ ಆರೋಪಿಸಿದ್ದಾರೆ.

    ಕಾಂಗ್ರೆಸ್ ಆರೋಪಗಳನ್ನು ಅಲ್ಲಗೆಳೆದಿದ್ದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಮಾತನಾಡಲು ಯಾವುದೇ ವಿಷಯಗಳು ಸಿಗಲಿಲ್ಲ. ಹೀಗಾಗಿ ಅವರು ರಫೇಲ್ ಒಪ್ಪಂದದಲ್ಲಿ ಬಹುಕೋಟಿ ಹಗರಣ ನಡೆದಿದೆ ಎಂದು ಹೇಳಲು ಮುಂದಾಗಿದೆ. ಆದರೆ ನಮ್ಮದು ದೇಶಕಂಡ ಅತ್ಯಂತ ಸ್ವಚ್ಛ ಹಾಗೂ ಭ್ರಷ್ಟಾಚಾರ ಮುಕ್ತ ಸರ್ಕಾರ ಎಂಬುದು ಜನರಿಗೆ ಗೊತ್ತಿದೆ. ಹತಾಶಾ ಮನೋಭಾವನೆಗೆ ತಲುಪಿರುವ ಕಾಂಗ್ರೆಸ್ ನಮ್ಮ ಸರ್ಕಾರದಿಂದ ಕಲಿಯಬೇಕಾದ ಪಾಠಗಳು ಸಾಕಷ್ಟು ಇವೆ ಎಂದು ಹೇಳಿದ್ದರು.

    ಎಚ್‍ಎಎಲ್ ಸಂಸ್ಥೆಗೆ ರಫೇಲ್ ಯುದ್ಧ ವಿಮಾನಗಳನ್ನು ನಿರ್ಮಿಸುವ ಸಾಮಥ್ರ್ಯವಿಲ್ಲವೆಂಬುದೇ ಪ್ರಮುಖ ಕಾರಣ. ಅಲ್ಲದೇ ಎಚ್‍ಎಎಲ್‍ನಲ್ಲಿ ಉತ್ಪಾದನೆಯಾಗುವ ವಿಮಾನಗಳ ವೆಚ್ಚವು ಫ್ರಾನ್ಸ್ ನಲ್ಲಿ ತಯಾರಾಗುವ ವಿಮಾನಗಳ ವೆಚ್ಚಕ್ಕಿಂತ ದುಬಾರಿಯಾಗಿತ್ತು. ಸಂಸ್ಥೆಗೆ ವಿಮಾನಗಳ ಉತ್ಪಾದನೆಗೆ ಬೇಕಾಗುವ ಸಂಪನ್ಮೂಲಗಳ ಬಗ್ಗೆ ಅಂದಿನ ಕೇಂದ್ರ ಸರ್ಕಾರ ತಲೆ ಕೆಡಿಸಿಕೊಂಡಿರಲಿಲ್ಲ. ಇದಲ್ಲದೇ 2013ರ ರಕ್ಷಣಾ ಸಚಿವ ಎ.ಕೆ.ಆಂಟನಿಯವರು ಪದೇ ಪದೇ ಯುದ್ಧ ವಿಮಾನಗಳ ಖರೀದಿ ಮಾತುಕತೆಯಲ್ಲಿ ಮಧ್ಯ ಪ್ರವೇಶಿಸುತ್ತಿದ್ದರಿಂದ ಫ್ರಾನ್ಸ್ ಕಂಪೆನಿಯು ಜಂಟಿ ತಯಾರಿಕೆಗೆ ಹಿಂದೇಟು ಹಾಕಿತು ಎಂದು ನಿರ್ಮಲಾ ಸೀತಾರಾಮನ್ ಸ್ಪಷ್ಟನೆ ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 19 ವರ್ಷಗಳ ಹಿಂದಿನ ಕೊಲೆ ಕೇಸಿಗೆ ಮರುಜೀವ-ಯುಪಿ ಸಿಎಂ ಯೋಗಿ ಆದಿತ್ಯನಾಥ್‍ಗೆ ಸಂಕಷ್ಟ

    19 ವರ್ಷಗಳ ಹಿಂದಿನ ಕೊಲೆ ಕೇಸಿಗೆ ಮರುಜೀವ-ಯುಪಿ ಸಿಎಂ ಯೋಗಿ ಆದಿತ್ಯನಾಥ್‍ಗೆ ಸಂಕಷ್ಟ

    ಲಕ್ನೋ: ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ 19 ವರ್ಷಗಳ ಹಿಂದಿನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ.

    1999 ಜನವರಿಯಲ್ಲಿ ಸಮಾಜವಾದಿ ಪಕ್ಷದ ಗೋರಖ್‍ಪುರ ಮುಖಂಡರೊಬ್ಬರ ವೈಯಕ್ತಿಕ ಭದ್ರತಾ ಅಧಿಕಾರಿ ಕೊಲೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಜಗಂಜ್ ಜಿಲ್ಲಾ ಸೆಷನ್ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ.

    2018 ಮಾರ್ಚ್ ನಲ್ಲಿ ಈ ಪ್ರಕರಣವನ್ನು ಮರು ವಿಚಾರಣೆ ನಡೆಸಲು ಸೂಚನೆ ನೀಡುವಂತೆ ಸೆಷನ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಈ ವೇಳೆ ನ್ಯಾಯಾಲಯ ಸಾಕ್ಷ್ಯಗಳ ಕೊರತೆಯಿಂದ ಅರ್ಜಿಯನ್ನು ತಿರಸ್ಕರಿಸಿತ್ತು. ಇದರ ಬಳಿಕ ಸಮಾಜವಾದಿ ಮುಖಂಡ ತಾಲತ್ ಅಜಿಜ್ ಲಕ್ನೋ ಹೈಕೋರ್ಟ್ ನಲ್ಲಿ, ಪ್ರಕರಣದ ಮರುವಿಚಾರಣೆ ನಡೆಸುವಂತೆ ಸೆಷನ್ ಕೋರ್ಟ್‍ಗೆ ಸೂಚನೆ ನೀಡುವಂತೆ ಮನವಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪುರಸ್ಕರಿಸಿದ ಕೋರ್ಟ್ ಕೊಲೆ ಪ್ರಕರಣವನ್ನು ಮತ್ತೆ ವಿಚಾರಣೆ ನಡೆಸುವಂತೆ ಆದೇಶಿಸಿತ್ತು.

    ಹೈಕೋರ್ಟ್ ಸೂಚನೆಯ ಹಿನ್ನೆಲೆಯಲ್ಲಿ ಜಿಲ್ಲಾ ಸೆಷನ್ ಕೋರ್ಟ್ ಸದ್ಯ ಪ್ರಕರಣದ ಆರೋಪಿಯಾಗಿರುವ ಯೋಗಿ ಆದಿತ್ಯನಾಥ್ ಹಾಗೂ ಇತರರಿಗೆ ನೋಟಿಸ್ ಜಾರಿ ಮಾಡಿ 1 ವಾರಗಳ ಒಳಗಡೆ ಉತ್ತರಿಸುವಂತೆ ಸೂಚಿಸಿದೆ.

    ಸದ್ಯ ನ್ಯಾಯಾಲಯದ ಸೂಚನೆ ಮೇರೆಗೆ ಪ್ರಕರಣದ ಮರುವಿಚಾರಣೆ ಆರಂಭವಾಗುವುದರಿಂದ ಸಿಎಂ ಯೋಗಿ ಆದಿತ್ಯನಾಥ್ ಅವರು ನೈತಿಕ ಜವಾಬ್ದಾರಿ ಹೊತ್ತು ರಾಜೀನಾಮೆ ನೀಡಲು ಸಮಾಜವಾದಿ ಪಕ್ಷದ ನಾಯಕರು ಆಗ್ರಹಿಸಿದ್ದಾರೆ.

    ಏನಿದು ಪ್ರಕರಣ?
    1999 ರ ಫೆಬ್ರವರಿ 10 ರಂದು ನಡೆದ ಪ್ರತಿಭಟನೆಯೊಂದರಲ್ಲಿ ಸಮಾಜವಾದಿ ಪಕ್ಷದ ನಾಯಕ ತಲಾತ್ ಅಜಿಜ್ ಅವರ ವೈಯಕ್ತಿಕ ಭದ್ರತಾ ಅಧಿಕಾರಿ ಕೊಲೆಯಾಗಿತ್ತು. ಅಂದು ಯೋಗಿ ಆದಿತ್ಯನಾಥ್ ನೇತೃತ್ವದ ಗುಂಪು ಸಮಾಜವಾದಿ ಪಕ್ಷದ ವಿರುದ್ಧ ಜೈಲ್ ಚಲೋ ಹೋರಾಟವನ್ನು ಹಮ್ಮಿಕೊಂಡಿತ್ತು. ಈ ವೇಳೆಯೇ ಗುಂಡಿಟ್ಟು ಇಬ್ಬರನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಆದಿತ್ಯನಾಥ್ ಅವರನ್ನು ಆರೋಪಿಯನ್ನಾಗಿಸಿ ಪ್ರಕರಣ ದಾಖಲು ಮಾಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 25 ವಿದ್ಯಾರ್ಥಿನಿಯರನ್ನ ಪ್ರೀತಿಯ ಬಲೆಗೆ ಬೀಳಿಸಿ ಶಿಕ್ಷಕನಿಂದ ಅಶ್ಲೀಲ ವಿಡಿಯೋ ರೆಕಾರ್ಡ್

    25 ವಿದ್ಯಾರ್ಥಿನಿಯರನ್ನ ಪ್ರೀತಿಯ ಬಲೆಗೆ ಬೀಳಿಸಿ ಶಿಕ್ಷಕನಿಂದ ಅಶ್ಲೀಲ ವಿಡಿಯೋ ರೆಕಾರ್ಡ್

    ಲಕ್ನೋ: ಶಿಕ್ಷಕನೊಬ್ಬ ಸುಮಾರು 25 ವಿದ್ಯಾರ್ಥಿನಿಯರ ಅಶ್ಲೀಲ ವಿಡಿಯೋ ರೆಕಾರ್ಡ್ ಮಾಡಿ ಅವರನ್ನು ಬ್ಯ್ಲಾಕ್ ಮೇಲ್ ಮಾಡಿರುವಂತಹ ಘಟನೆ ಉತ್ತರ ಪ್ರದೇಶದ ಅಜಮ್ಗಡ ಜಿಲ್ಲೆಯಲ್ಲಿ ನಡೆದಿದೆ.

    ಚಂದ್ರಶೇಖರ್ ಯಾದವ್ ವಿದ್ಯಾರ್ಥಿನಿಯರ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಶಿಕ್ಷಕ. ಈತ ತನ್ನ ಕೋಚಿಂಗ್ ಸೆಂಟರ್ ಗೆ ಬರುತ್ತಿದ್ದ ವಿದ್ಯಾರ್ಥಿನಿಯರಲ್ಲಿ ಸುಮಾರು 25ಕ್ಕೂ ಹೆಚ್ಚು ವಿದ್ಯಾರ್ಥಿನಿಯರನ್ನು ತನ್ನ ಪ್ರೀತಿಯ ಬಲೆಗೆ ಬೀಳಿಸಿ, ನಂತರ ಅವರ ಅಶ್ಲೀಲ ವಿಡಿಯೋ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಆರೋಪಿ ಚಂದ್ರಶೇಖರ್ ಯಾದವ್ ಸಾರೈ ಪಟ್ಟಣದಲ್ಲಿರುವ ರಾಣಿ ನಿವಾಸಿಯಾಗಿದ್ದು, ಈಗ ರಹಮತ್ ಇಂಟರ್ ಕಾಲೇಜಿನಲ್ಲಿ ಗಣಿತಶಾಸ್ತ್ರ ಶಿಕ್ಷಕನಾಗಿದ್ದಾನೆ. ಕಾಲೇಜಿನ ಹೊರಗೆ ಒಂದು ರೂಮನ್ನು ಬಾಡಿಗೆಗೆ ಪಡೆದುಕೊಂಡು, ಅಲ್ಲಿ ಹೈಸ್ಕೂಲ್ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಕೋಚಿಂಗ್ ಕೊಡುತ್ತಿದ್ದನು.

    ಆರೋಪಿ ಸಂಜೆ ಐದು ಗಂಟೆಗೆ ಕೋಚಿಂಗ್ ಸೆಂಟರ್ ಬಾಗಿಲು ಮುಚ್ಚುತ್ತಿದ್ದನು. ನಂತರ ಎರಡು-ಮೂರು ವಿದ್ಯಾರ್ಥಿನಿಯರನ್ನು ಸ್ಪೇಷಲ್ ಕ್ಲಾಸ್ ಹೆಸರಿನಲ್ಲಿ ಒಳಗಿಟ್ಟುಕೊಂಡು, ಮೊದಲು ತನ್ನ ಪ್ರೀತಿಯ ಬಲೆಯಲ್ಲಿ ಬೀಳಿಸಿ ಅವರಿಗೆ ಲೈಂಗಿಕ ಕಿರುಕುಳ, ನೀಡುತ್ತಿದ್ದನು. ಅಷ್ಟೇ ಅಲ್ಲದೇ ವಿದ್ಯಾರ್ಥಿನಿಯರ ಅಶ್ಲೀಲ ವಿಡಿಯೋಗಳನ್ನು ರೆಕಾರ್ಡ್ ಮಾಡಿಕೊಂಡು ಬಳಿಕ ವಿದ್ಯಾರ್ಥಿನಿಯರಿಗೆ ಆ ವಿಡಿಯೋ ತೋರಿಸಿ ಬ್ಯ್ಲಾಕ್ ಮೇಲ್ ಮಾಡುತ್ತಿದ್ದನು.

    ಆರೋಪಿ ಶಿಕ್ಷಕ ಚಂದ್ರಶೇಖರ್ ಯಾದವ್ ವಿದ್ಯಾರ್ಥಿನಿಯರ ವಿಡಿಯೋ ಇಟ್ಟುಕೊಂಡು ಬ್ಯ್ಲಾಕ್ ಮಾಡುತ್ತಿರುವ ಬಗ್ಗೆ ಕೆಲ ವಿದ್ಯಾರ್ಥಿಗಳಿಗೆ ತಿಳಿದಿದೆ. ನಂತರ ವಿದ್ಯಾರ್ಥಿಗಳು ಶಿಕ್ಷಕನ ವಿಡಿಯೋ ಮಾಡಿ ಭಾನುವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ.

    ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವನ್ನು ಗಮನಿಸಿದ ಸಾರಾಯಿ ರಾಣಿ ಪೊಲೀಸರು ಶಿಕ್ಷಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಿಚಾರಣೆಯನ್ನು ಮುಂದುವರಿಸಿದ್ದಾರೆ. ಆದರೆ ಶಿಕ್ಷಕ ತಲೆಮರೆಸಿಕೊಂಡಿದ್ದಾನೆ ಎಂದು ವರದಿಯಾಗಿದೆ. ಈಗ ತಪ್ಪಿಸಿಕೊಂಡಿರುವ ಆರೋಪಿ ಶಿಕ್ಷಕನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಟನ್ ಅಡುಗೆ ಮಾಡದ ಪತ್ನಿ- ಕಬ್ಬಿಣದ ಪೈಪ್‍ನಿಂದ ಹೊಡೆದು 3ನೇ ಮಹಡಿಯಿಂದ ತಳ್ಳಿದ ಪತಿ

    ಮಟನ್ ಅಡುಗೆ ಮಾಡದ ಪತ್ನಿ- ಕಬ್ಬಿಣದ ಪೈಪ್‍ನಿಂದ ಹೊಡೆದು 3ನೇ ಮಹಡಿಯಿಂದ ತಳ್ಳಿದ ಪತಿ

    ಲಕ್ನೋ: ಮಾಂಸದ ಅಡುಗೆಯನ್ನು ಮಾಡಿಕೊಡದ್ದಕ್ಕೆ ಸಿಟ್ಟಿಗೆದ್ದ ಕುಡುಕ ಪತಿಯೊಬ್ಬನು ತನ್ನ ಪತ್ನಿಯನ್ನು ಕಬ್ಬಿಣದ ಕೊಳವೆ(ಪೈಪ್)ಯಿಂದ ಹೊಡೆದು, ಮೂರನೇ ಮಹಡಿಯಿಂದ ತಳ್ಳಿ ಹತ್ಯೆ ಮಾಡಿದ್ದ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ಪಚ್ವಾನ್ ಕಾಲೋನಿಯ ರಾಣಿ ಕೊಲೆಯಾದ ಪತ್ನಿ. ಮನೋಜ್ ಕುಮಾರ್ (30) ಕೊಲೆ ಮಾಡಿದ ಪತಿರಾಯ. ಗುರುವಾರ ರಾತ್ರಿ 11.30ರ ಸುಮಾರಿಗೆ ಕಂಠಪೂರ್ತಿ ಕುಡಿದು ಮನೆಗೆ ಬಂದಿದ್ದ ಪತಿ ಮನೋಜ್, ರಾಣಿಗೆ ಮಾಂಸದ ಅಡುಗೆಯನ್ನು ಮಾಡಲು ಹೇಳಿದ್ದಾನೆ. ಈ ವೇಳೆ ಪತ್ನಿ ಮಾಂಸದ ಅಡುಗೆ ಮಾಡುವುದಕ್ಕೆ ನಿರಾಕರಿಸಿದ್ದಾಳೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ. ಇದರಿಂದ ರೊಚ್ಚಿಗೆದ್ದ ಮನೋಜ್ ಆಕೆಯ ಮೇಲೆ ಕಬ್ಬಿಣದ ಕೊಳವೆಯಿಂದ ಹೊಡೆದು ಹತ್ಯೆ ಮಾಡಿದ್ದಾನೆ.

    ಹತ್ಯೆಯ ಬಳಿಕ ಕೊಲೆಯನ್ನು ಮುಚ್ಚಿ ಹಾಕಲು ತನ್ನ ತಂದೆ ನೇತ್ರಪಾಲ್ ಹಾಗೂ ಸಹೋದರ ಮನೀಶ್ ಜೊತೆಗೂಡಿ ಪತ್ನಿಯನ್ನು ಮೂರನೇ ಮಹಡಿಯಿಂದ ಬಿಸಾಕಿದ್ದಾರೆ. ಶುಕ್ರವಾರ ಬೆಳಗ್ಗೆ ಕಟ್ಟಡದ ಬಳಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಿಳೆಯನ್ನು ಗಮನಿಸಿದ ಸ್ಥಳೀಯರು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದರೂ, ಚಿಕಿತ್ಸೆ ಫಲಕಾರಿಯಾಗದೇ ರಾಣಿ ಮೃತಪಟ್ಟಿದ್ದಾರೆ.

    ಮರಣೋತ್ತರ ಪರೀಕ್ಷೆಯ ವೇಳೆ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿತ್ತು. ಇದರಿಂದ ಅನುಮಾನಗೊಂಡು ಮಹಿಳೆಯ ಪತಿ ಮನೋಜ್ ಕುಮಾರ್ ಸಹೋದರ ಮನೀಶ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೆವು. ವಿಚಾರಣೆ ವೇಳೆ ಮನೋಜ್ ತನ್ನ ಪತ್ನಿಯನ್ನು ಕಬ್ಬಣದ ಕೊಳವೆಯಿಂದ ಹೊಡೆದು ಹತ್ಯೆ ಮಾಡಿರುವುದಾಗಿ ಆತನ ಸಹೋದರ ಒಪ್ಪಿಕೊಂಡಿದ್ದಾನೆ ಎಂದು ನಾರ್ಕಿ ಪೊಲೀಸರು ಹೇಳಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿ ಅನಿಲ್, ಮಾಂಸದ ಅಡುಗೆ ಮಾಡಿ ಕೊಡಲಿಲ್ಲವೆಂಬ ಕ್ಷುಲ್ಲಕ ವಿಚಾರಕ್ಕೆ ಪತಿಯೇ ಪತ್ನಿಯನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಿದ್ದು, ಪ್ರಮುಖ ಆರೋಪಿ ಮನೋಜ್ ಹಾಗೂ ಆತನ ತಂದೆಗಾಗಿ ತೀವ್ರ ಶೋಧ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಾಟ್ಸಪ್ ಕಾರಣದಿಂದ ನಿಂತೇ ಹೋಯ್ತು ಮದುವೆ!

    ವಾಟ್ಸಪ್ ಕಾರಣದಿಂದ ನಿಂತೇ ಹೋಯ್ತು ಮದುವೆ!

    ಲಕ್ನೋ: ಮದುವೆ ನಾನಾ ಕಾರಣಗಳಿಂದ ನಿಂತು ಹೋಗುವುದು ಸಾಮಾನ್ಯವಾಗಿದೆ. ಆದರೆ ಉತ್ತರ ಪ್ರದೇಶದಲ್ಲಿ ವಧು ಅತಿ ಹೆಚ್ಚಾಗಿ ವಾಟ್ಸಪ್ ನಲ್ಲಿ ಸಮಯ ಕಳೆಯುತ್ತಾಳೆ ಎಂಬ ಕಾರಣದಿಂದ ಮದುವೆ ನಿಂತು ಹೋಗಿರುವ ವಿಚಿತ್ರ ಘಟನೆ ನಡೆದಿದೆ.

    ಉತ್ತರಪ್ರದೇಶದ ಅಮ್ರೋಹಾ ಜಿಲ್ಲೆಯ ನವ್ಗಾನ್ ಸದತ್ ಎಂಬ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಸದತ್ ಗ್ರಾಮದ ಯುವತಿಗೆ ತಮ್ಮ ಸಂಬಂಧದ ಹುಡುಗನ ಜೊತೆ ಬುಧವಾರ ಮದುವೆ ನಿಶ್ಚಯವಾಗಿತ್ತು. ವಧುವಿನ ಕಡೆಯವರು ಆರತಕ್ಷತೆಗಾಗಿ ವರ ಮತ್ತು ವರನ ಕಡೆಯವರಿಗಾಗಿ ಕಾಯುತ್ತಿದ್ದರು. ಆದರೆ ಅವರು ಬರಲೇ ಇಲ್ಲ. ಕೊನೆಗೆ ಫೋನ್ ಮಾಡಿದಾಗ ನಿಮ್ಮ ಹುಡುಗಿ ಹೆಚ್ಚಾಗಿ ವಾಟ್ಸಪ್ ಬಳಸುತ್ತಾಳೆ. ಆದ್ದರಿಂದ ನಮಗೆ ಈ ಮದುವೆ ಇಷ್ಟ ಇಲ್ಲ ಎಂದು ನಿರಾಕರಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

    ಇತ್ತ ವಧುವಿನ ಪೋಷಕರು, ಅವರು ಮಾಡುತ್ತಿರುವ ಆರೋಪವನ್ನು ತಳ್ಳಿ ಹಾಕಿದ್ದು, ವರನ ಕಡೆಯವರು ಕೊನೆ ಕ್ಷಣದಲ್ಲಿ ವರದಕ್ಷಿಣೆಗಾಗಿ ಬೇಡಿಕೆ ಇಟ್ಟಿದ್ದರು. ನಮ್ಮಿಂದ ಕೊಡಲು ಸಾಧ್ಯವಾಗಿಲ್ಲ ಅದಕ್ಕಾಗಿ ಮದುವೆಯನ್ನು ಕ್ಯಾನ್ಸಲ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

    ಫಕೇರ್ಪುರಾದ ಖಮರ್ ಹೈದರ್ ಅವರ ಮಗನೊಂದಿಗೆ ತನ್ನ ಮಗಳ ಮದುವೆ ನಿಶ್ಚಯವಾಗಿತ್ತು. ನಮ್ಮ ಸಂಬಂಧಿಕರು ಮತ್ತು ಸ್ನೇಹಿತರು ಎಲ್ಲರೂ ಮದುವೆಗೆಂದು ಬಂದಿದ್ದು, ವರನ ಕಡೆಯವರನ್ನು ಸ್ವಾಗತಿಸಲು ಕಾಯುತ್ತಿದ್ದೆವು. ಆದರೆ ವರನ ತಂದೆ ಕರೆ ಮಾಡಿ ಈ ಮದುವೆ ಇಷ್ಟವಿಲ್ಲ ಅಂತ ಕ್ಯಾನ್ಸಲ್ ಮಾಡಿದ್ದಾರೆ ಎಂದು ವಧುವಿನ ತಂದೆ ಪೊಲೀಸರಿಗೆ ತಿಳಿಸಿದ್ದಾರೆ.

    ಈ ಸಂಬಂಧ ವಧವಿನ ತಂದೆ ಉರೋಜ್ ಮೆಹಂದಿ ಅವರು, 65 ಲಕ್ಷ ರೂ. ವರದಕ್ಷಿಣೆಗಾಗಿ ಡಿಮ್ಯಾಂಡ್ ಮಾಡಿದ್ದಾರೆ ಎಂದು ವರನ ಕುಟುಂಬದ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕುಟುಂಬಸ್ಥರನ್ನ ಒತ್ತೆಯಾಳಾಗಿರಿಸಿ ಮಹಿಳೆಯ ಮೇಲೆ ಗ್ಯಾಂಗ್‍ರೇಪ್

    ಕುಟುಂಬಸ್ಥರನ್ನ ಒತ್ತೆಯಾಳಾಗಿರಿಸಿ ಮಹಿಳೆಯ ಮೇಲೆ ಗ್ಯಾಂಗ್‍ರೇಪ್

    ಲಕ್ನೋ: ಕುಟುಂಬಸ್ಥರನ್ನು ಒತ್ತೆಯಾಳಾಗಿರಿಸಿಕೊಂಡು ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ನಡೆದಿದೆ.

    ಈ ಘಟನೆ ಬುಧವಾರ ರಾತ್ರಿ ಗಾಜಿಯಾಬಾದ್ ಕಾಕ್ರಾ ಗ್ರಾಮದಲ್ಲಿ ನಡೆದಿದೆ. ಐದು ಮಂದಿ ದುಷ್ಕರ್ಮಿಗಳ ತಂಡವೊಂದು ಎಲ್ಲರೂ ಮಲಗಿದ್ದ ಸಂದರ್ಭದಲ್ಲಿ ಮಹಿಳೆಯ ಮನೆಗೆ ನುಗ್ಗಿದ್ದಾರೆ. ಬಳಿಕ ದುಷ್ಕರ್ಮಿಗಳು ಮಾರಕಾಸ್ತ್ರಗಳನ್ನು ತೋರಿಸಿ ಕುಟುಂಬಸ್ಥರನ್ನು ಬೆದರಿಸಿ ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ.

    ಅಷ್ಟೇ ಅಲ್ಲದೇ ದುಷ್ಕರ್ಮಿಗಳು ಮಹಿಳೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಅತ್ಯಾಚಾರ ಎಸಗಿದ ಬಳಿಕ ಮನೆಯಲ್ಲಿದ್ದ ಚಿನ್ನಾಭರಣ ಮತ್ತು ಹಣವನ್ನು ದೋಚಿ ಪರಾರಿಯಾಗಿದ್ದಾರೆ ಎಂದು ಗಾಜಿಯಾಬಾದ್ ಡಿಎಸ್‍ಪಿ ಪ್ರಭಾತ್ ಕುಮಾರ್ ಹೇಳಿದ್ದಾರೆ.

    ಸದ್ಯ ಈ ಪ್ರಕರಣ ಕುರಿತು ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಸಂತ್ರಸ್ತ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಪ್ರಭಾತ್ ಕುಮಾರ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 10 ರೂಪಾಯಿಗೆ ಸಿಗಲಿದೆ ಯೋಗಿ ಥಾಲಿ!

    10 ರೂಪಾಯಿಗೆ ಸಿಗಲಿದೆ ಯೋಗಿ ಥಾಲಿ!

    ಲಕ್ನೋ: ಬಡಜನರಿಗೆ ಕಡಿಮೆ ದರದಲ್ಲಿ ಊಟ ಸಿಗುವ ಯೋಜನೆಯನ್ನು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜಾರಿಗೆ ತಂದಿದ್ದಾರೆ.

    ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ಖಾಸಗಿ ಸಹಭಾಗಿತ್ವದಲ್ಲಿ ಬಡವರಿಗೆ ಕಡಿಮೆ ದರದಲ್ಲಿ ಊಟವನ್ನು ನೀಡುವ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಪ್ರಾರಂಭಿಕವಾಗಿ ಅಲಹಾಬಾದ್‍ನಲ್ಲಿ 10 ರೂಪಾಯಿಗೆ ಊಟ ನೀಡುವ ಕ್ಯಾಂಟಿನನ್ನು ಆರಂಭಿಸಿದ್ದಾರೆ. ಭಾನುವಾರ ನೂತನ ಕ್ಯಾಂಟಿನನ್ನು  ಮೇಯರ್ ಅಭಿಲಾಷ ಗುಪ್ತಾರವರು ಉದ್ಘಾಟಿಸಿದ್ದಾರೆ. ಈ ಯೋಜನೆಗೆ ಯೋಗಿ ಥಾಲಿ ಎಂದು ಹೆಸರಿಡಲಾಗಿದೆ.

    ಉದ್ಘಾಟನೆಯ ನಂತರ ಮಾತನಾಡಿದ ಮೇಯರ್ ಗುಪ್ತರವರು, ಖಾಸಗಿ ಸಹಭಾಗಿತ್ವದಲ್ಲಿ ಈ ಯೋಜನೆ ಜಾರಿಗೊಳಿಸಲಾಗಿದ್ದು, ಬಡ ವರ್ಗ ಹಾಗೂ ಅಂಗವೈಕಲ್ಯಕ್ಕೆ ತುತ್ತಾದ ಜನರಿಗೆ ಇದರಿಂದ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ತಿಳಿಸಿದರು.

    ಈ ಕುರಿತು ಪ್ರತಿಕ್ರಿಯಿಸಿರುವ ಯೋಜನೆ ರೂವಾರಿ ದಿಲೀಪ್ ಅಲಿಯಾಸ್ ಕಾಕೆ, ಖಾಲಿ ಹೊಟ್ಟೆಯಲ್ಲಿ ಯಾರೂ ಮಲಗಬಾರದು ಎಂಬ ಉದ್ಧೇಶದಿಂದ ಈ ಯೋಜನೆ ಜಾರಿಗೊಳಿಸಲಾಗಿದೆ. ಬಡ ಜನರಿಗಾಗಿ ದುಡಿಯುತ್ತಿರುವ ಸಿಎಂ ಯೋಗಿ ಆದಿತ್ಯನಾಥ್ ಅವರ ಹೆಸರಲ್ಲಿ ಯೋಜನೆ ಜಾರಿಗೆ ತರಲಾಗಿದ್ದು, ಪ್ರಾರಂಭಿಕವಾಗಿ ಅಲಹಾಬಾದ್‍ನ ಅಟಾರ್ಸುಯಿಯಾ ಭಾಗದಲ್ಲಿರುವ ಮಳಿಗೆಯಲ್ಲಿ ಕ್ಯಾಂಟೀನ್ ಆರಂಭಗೊಳಿಸಲಾಗಿದ್ದೇವೆ ಎಂದು ತಿಳಿಸಿದರು.

    ಈಗಾಗಲೇ ಕರ್ನಾಟಕದಲ್ಲಿ ಇಂದಿರಾ, ತಮಿಳುನಾಡಿನಲ್ಲಿ ಅಮ್ಮಾ, ಆಂಧ್ರಪ್ರದೇಶದಲ್ಲಿ ಅಣ್ಣಾ ಕ್ಯಾಂಟೀನ್ ಆರಂಭಗೊಂಡಿದ್ದು, ಕಡಿಮೆ ಬೆಲೆಗೆ ಬಡವರಿಗೆ ಆಹಾರ ಪೂರೈಕೆ ಮಾಡಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವರದಕ್ಷಿಣೆಯಲ್ಲಿ ಕೊಲೆಯಾಗಿದ್ದ ಮಹಿಳೆ ಇನ್ನೊಬ್ಬನ ಜೊತೆ ಜೀವಂತವಾಗಿ ಪ್ರತ್ಯಕ್ಷ!

    ವರದಕ್ಷಿಣೆಯಲ್ಲಿ ಕೊಲೆಯಾಗಿದ್ದ ಮಹಿಳೆ ಇನ್ನೊಬ್ಬನ ಜೊತೆ ಜೀವಂತವಾಗಿ ಪ್ರತ್ಯಕ್ಷ!

    ಲಕ್ನೋ: ವರದಕ್ಷಿಣೆ ಕಿರುಕುಳದಿಂದ ಕೊಲೆಗೀಡಾಗಿದ್ದ ಮಹಿಳೆಯೊಬ್ಬಳು ಮತ್ತೊಬ್ಬನನ್ನು ಮದುವೆಯಾಗಿರುವ ಪ್ರಕರಣವೊಂದು ಉತ್ತರಪ್ರದೇಶದ ಫಾಜೀಯಾಬಾದ್‍ನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ರೂಬಿ ಹಾಗೂ ಆಕೆಯ ಇನ್ನೊಬ್ಬ ಪತಿ ರಾವುನನ್ನು ಸಫ್ದರ್ಜಂಗ್ ಪೊಲೀಸರು ಬಂಧಿಸಿದ್ದಾರೆ. ರೂಭಿಯು ಬಾರಾಬಂಕಿಯ ನಿವಾಸಿಯಾಗಿದ್ದು, ಅದೇ ಪ್ರದೇಶದ ನಿವಾಸಿಯಾಗಿದ್ದ ರಾಹುಲ್ ಎಂಬಾತನನ್ನು 2016ರ ಜನವರಿಯಲ್ಲಿ ಮದುವೆಯಾಗಿದ್ದಳು. 2017ರ ಜೂನ್ ನಲ್ಲಿ ರೂಬಿ ತಂದೆ ಹರಿಪ್ರಸಾದ್ ನನ್ನ ಮಗಳನ್ನು ಪತಿ ರಾಹುಲ್, ಆಕೆಯ ಮಾವ ರಾಮಹರ್ಷ ಹಾಗೂ ಅತ್ತೆ ಬಾರ್ಕಿ ವರದಕ್ಷಿಣೆ ಕಿರುಕುಳ ನೀಡಿ ಕೊಂದುಹಾಕಿದ್ದಾರೆ ಎಂದು ದೂರು ನೀಡಿದ್ದರು.

    ಈ ಕುರಿತು ತನಿಖೆ ಆರಂಭಿಸಿದ ಸಫ್ದರ್ಜಂಗ್ ಪೊಲೀಸ್ ಠಾಣೆಯ ಪೊಲೀಸರು ಕೊಲೆ ಆರೋಪ ಸಾಬೀತು ಮಾಡುವಂತಹ ಯಾವುದೇ ಸಾಕ್ಷ್ಯಗಳು ಸಿಗದೇ ಕಾರಣ ದೂರನ್ನು ದಾಖಲಿಸಿಕೊಳ್ಳಲಿಲ್ಲ. ಪೊಲೀಸರು ದೂರು ದಾಖಲಿಕೊಳ್ಳದ್ದಕ್ಕೆ ಹರಿಪ್ರಸಾದ್‍ರವರು ಕೋರ್ಟ್ ಮೊರೆ ಹೋಗಿದ್ದರು. 2018ರ ಜುಲೈ ತಿಂಗಳಲ್ಲಿ ಕೋರ್ಟ್ ಪ್ರಕರಣವನ್ನು ದಾಖಲಿಸಿಕೊಳ್ಳುವಂತೆ ಆದೇಶ ನೀಡಿತ್ತು.

    ಈ ಕುರಿತು ತನಿಖೆ ಕೈಗೊಂಡ ಪೊಲೀಸರಿಗೆ ಮಹಿಳೆಯ ಫೇಸ್ಬುಕ್ ಹಾಗೂ ಆಕೆಯ ದೂರವಾಣಿ ಕರೆಗಳ ಮೇಲೆ ಅನುಮಾನ ಬಂದು, ತೀವ್ರ ತನಿಖೆ ನಡೆಸಿದಾಗ, ಆಕೆಯು ದೆಹಲಿಯಲ್ಲಿ ಮತ್ತೊಬ್ಬನೊಂದಿಗೆ ಮದುವೆಯಾಗಿ ಜೀವನ ನಡೆಸುತ್ತಿರುವ ವಿಚಾರ ತಿಳಿದು ಬಂದಿದೆ. ಕೂಡಲೇ ದೆಹಲಿಗೆ ತೆರಳಿದ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿದ ಬಾರಾಬಂಕಿ ಜಿಲ್ಲಾ ವರಿಷ್ಠಾಧಿಕಾರಿ ವಿ.ಪಿ.ಶ್ರೀವಾತ್ಸವ್, ಕೊಲೆಯಾದ ಮಹಿಳೆಯ ಮೃತದೇಹ ಸಿಗದ ಕಾರಣ, ದೂರನ್ನು ದಾಖಲಿಸಿಕೊಂಡಿರಲಿಲಲ್ಲ. ಕೋರ್ಟ್ ಆದೇಶದ ಬಳಿಕ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಗಿಳಿದಾಗ, ಆಕೆಯು ಜೀವಂತವಾಗಿದ್ದಾಳೆಂದು ತಿಳಿದು ಬಂತು. ಕೂಡಲೇ ಆಕೆಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ, ಆಕೆಯು ತನ್ನ ಪ್ರಿಯಕರನೊಂದಿಗೆ ಮದುವೆಯಾಗಲು ಈ ರೀತಿಯ ನಾಟಕವಾಡಿರುವುದಾಗಿ  ಒಪ್ಪಿಕೊಂಡಿದ್ದಾಳೆಂದು ತಿಳಿಸಿದ್ದಾರೆ.

    ನ್ಯಾಯಾಲಯದ ದಿಕ್ಕು ತಪ್ಪಿಸಿದ ರೂಭಿ, ಪತಿ ರಾಹುಲ್ ಹಾಗೂ ತಂದೆ ಹರಿಪ್ರಸಾದ್ ವಿರುದ್ಧ ಐಪಿಸಿ ಸೆಕ್ಷನ್ 182ರ ಅಡಿ ಪ್ರಕರಣವನ್ನು ದಾಖಲಿಸಿಕೊಂಡಿರುವುದಾಗಿ ಪೊಲೀಸರು ಹೇಳಿಕೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಿಡ್ನಾಪ್‍ಗೈದು, ಮದ್ಯ ಕುಡಿಸಿ ಅಪ್ರಾಪ್ತೆ ಮೇಲೆ ಗ್ಯಾಂಗ್ ರೇಪ್

    ಕಿಡ್ನಾಪ್‍ಗೈದು, ಮದ್ಯ ಕುಡಿಸಿ ಅಪ್ರಾಪ್ತೆ ಮೇಲೆ ಗ್ಯಾಂಗ್ ರೇಪ್

    ಲಕ್ನೋ: 16 ವರ್ಷದ ಅಪ್ರಾಪ್ತ ಹುಡುಗಿಯನ್ನ ಅಪಹರಿಸಿ ಆಕೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ನೋಯ್ದಾದಲ್ಲಿ ನಡೆದಿದೆ.

    ಸಂತ್ರಸ್ತೆ ಗೌತಮ್ ಬುದ್ಧನಗರ ಜಿಲ್ಲೆಯ ಜಸ್ವರ ಸಮೀಪದ ದಸ್ತಂಪೂರ್ ಗ್ರಾಮದ ನಿವಾಸಿಯಾಗಿದ್ದು, ಆಗಸ್ಟ್ 24 ರಂದು ಮನೆಗೆ ಹಿಂದಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.

    ನಡೆದಿದ್ದೇನು?
    ಸಂತ್ರಸ್ತೆ ತನ್ನ ಮನೆಯ ಸಮೀಪವಿದ್ದ ಹೊಲಿಗೆ ತರಗತಿಗೆ ಹೋಗಿದ್ದಳು. ಈ ವೇಳೆ ಆರೋಪಿಗಳಿಬ್ಬರು ದ್ವಿಚಕ್ರ ವಾಹನದಲ್ಲಿ ಬಂದು ಏಕಾಏಕಿ ಸಂತ್ರಸ್ತೆಯನ್ನು ಅಪಹರಿಸಿದ್ದಾರೆ. ಬಳಿಕ ಆಕೆಗೆ ಬಲವಂತವಾಗಿ ಮದ್ಯಪಾನ ಮಾಡುವಂತೆ ಒತ್ತಾಯಿಸಿದ್ದಾರೆ. ಆಗ ಸಂತ್ರಸ್ತೆ ವಿರೋಧ ವ್ಯಕ್ತಪಡಿಸಿದ್ದಾಳೆ. ಈ ವೇಳೆ ಸಂತ್ರಸ್ತೆಯ ಮೇಲೆ ಇಬ್ಬರು ಹಲ್ಲೆ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ಎಸ್.ಎಸ್. ಭಾಟಿ ಹೇಳಿದ್ದಾರೆ.

    ಆರೋಪಿಗಳಿಬ್ಬರು ಸಂತ್ರಸ್ತೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ನಂತರ ಮರುದಿನ ಬೆಳಿಗ್ಗೆ ದಸ್ತಂಪೂರ್ ಗ್ರಾಮದ ಸಂತ್ರಸ್ತೆಯನ್ನು ಆಕೆಯ ಮನೆಯ ಮುಂದೆ ಎಸೆದು ಹೋಗಿದ್ದಾರೆ. ಬಳಿಕ ಮಗಳನ್ನು ನೋಡಿದ ತಂದೆ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದಾರೆ.

    ತಂದೆ ನೀಡಿದ ದೂರಿನ್ವಯ ನಾವು ಈ ಕುರಿತು ಅಪರಿಚಿತರ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಸದ್ಯಕ್ಕೆ ಈ ಪ್ರಕರಣ ಕುರಿತು ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಭಾಟಿ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv