Tag: lucknow

  • ಪಬ್‍ಜಿಗೆ ಬ್ರೇಕ್ ಹಾಕಿದ್ದ ತಾಯಿಯ ಕೊಲೆ – ಅಪ್ರಾಪ್ತ ಆರೋಪಿಗೆ ಜಾಮೀನು

    ಪಬ್‍ಜಿಗೆ ಬ್ರೇಕ್ ಹಾಕಿದ್ದ ತಾಯಿಯ ಕೊಲೆ – ಅಪ್ರಾಪ್ತ ಆರೋಪಿಗೆ ಜಾಮೀನು

    ಲಕ್ನೋ: ತನ್ನ ತಂದೆಯ ಲೈಸೆನ್ಸ್ ಹೊಂದಿದ್ದ ಪಿಸ್ತೂಲ್ (Pistol) ಬಳಸಿ ತಾಯಿಯನ್ನು ಕೊಂದಿದ್ದ ಅಪ್ರಾಪ್ತ ಆರೋಪಿಗೆ ಅಲಹಾಬಾದ್ ಹೈಕೋರ್ಟ್ (Allahabad High Court) ಇತ್ತೀಚೆಗೆ ಜಾಮೀನು (Bail) ಮಂಜೂರು ಮಾಡಿದೆ.

    ಆರೋಪಿಯು ಅಪ್ರಾಪ್ತನಾಗಿದ್ದು, ಈ ಘಟನೆಗೆ ಪ್ರತ್ಯಕ್ಷ ಸಾಕ್ಷಿಗಳಿಲ್ಲ ಎಂದು ಪರಿಗಣಿಸಿದ ನ್ಯಾಯಮೂರ್ತಿ ಪ್ರಕಾಶ್ ಸಿಂಗ್ ಅವರಿದ್ದ ಏಕ ಸದಸ್ಯ ಪೀಠ ಆರೋಪಿಗೆ ಜಾಮೀನು ನೀಡಿದೆ. ಇದನ್ನೂ ಓದಿ: ಕ್ರಿಶ್ಚಿಯನ್ ಮಿಷನರಿಗಳ ಧರ್ಮ ಪ್ರಚಾರ ಕಾನೂನುಬಾಹಿರವಲ್ಲ – ಸುಪ್ರೀಂಗೆ ತಮಿಳುನಾಡು ಸರ್ಕಾರ ಅಫಿಡವಿಟ್

    ಈಗ ಇರುವ ಯಾವ ಸಾಕ್ಷಿಗಳೂ ಸೂಕ್ತವಾಗಿಲ್ಲ. ಪ್ರಕರಣದಲ್ಲಿ ಆರೋಪಿಯ ಅಜ್ಜಿ ದೂರು ದಾಖಲಿಸಿದ್ದು, ಅವರು ಪ್ರತ್ಯಕ್ಷ ಸಾಕ್ಷಿಯಲ್ಲ. ಇನ್ನುಳಿದ ಸಾಕ್ಷಿಗಳು ಪ್ರತ್ಯಕ್ಷ ಸಾಕ್ಷಿಗಳಾಗಿಲ್ಲ. ಕೇವಲ ಆರೋಪಿ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಅಲ್ಲದೆ ಆರೋಪಿಗೆ ಘಟನೆ ನಡೆದಾಗ 16 ವರ್ಷ. ಇದು ಬಾಲ ನ್ಯಾಯ ಮಂಡಳಿಯ ದೋಷಾರೋಪ ಪಟ್ಟಿಯಲ್ಲಿಯೂ ಸ್ಪಷ್ಟವಾಗಿದೆ. ಇದರಿಂದಾಗಿ ಆತನನ್ನು ಅಪ್ರಾಪ್ತ ಎಂದು ಪರಿಗಣಿಸಬೇಕಾಗುತ್ತದೆ ಎಂದು ಕೋರ್ಟ್ ಹೇಳಿದೆ.

    ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಆತನ ಮೇಲೆ ಕೊಲೆ ಆರೋಪ ಹೊರಿಸಿ ಆತನನ್ನು ಬಂಧಿಸಲಾಗಿತ್ತು. ಆರೋಪಿ ಜಾಮೀನಿಗಾಗಿ ಜಿಲ್ಲಾ ನ್ಯಾಯಲಯದ ಮೊರೆ ಹೋಗಿದ್ದ. ಆದರೆ ಜಿಲ್ಲಾ ನ್ಯಾಯಾಲಯ ಜಾಮೀನು ನಿರಾಕರಿಸಿತ್ತು. ಆರೋಪಿ, ಲಕ್ನೋದ (Lucknow) ಪೋಕ್ಸೊ ನ್ಯಾಯಾಲಯದ (POCSO Court) ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ (Additional District & Sessions Court) ತೀರ್ಪಿನ ವಿರುದ್ಧ ಹೈಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿದ್ದ.

    ಏನಾಗಿತ್ತು?
    ಜೂನ್ 2022 ರಲ್ಲಿ ಪಬ್‍ಜಿ ಆಡುವುದನ್ನು ತಡೆದ ಕಾರಣಕ್ಕಾಗಿ ಆರೋಪಿ ತಾಯಿಯನ್ನು ಕೊಲೆಗೈದಿದ್ದ ಎಂದು ಆರೋಪಿಸಲಾಗಿತ್ತು. ಘಟನೆ ನಡೆದ ಎರಡು ದಿನಗಳ ನಂತರ ಮೃತರ ಶವ ಪತ್ತೆಯಾಗಿತ್ತು ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.

    ಆರೋಪಿಯು ನೈತಿಕ, ದೈಹಿಕ ಅಥವಾ ಮಾನಸಿಕ ಅಪಾಯಕ್ಕೆ ಒಡ್ಡಿಕೊಳ್ಳುವುದಿಲ್ಲ ಹಾಗೂ ಅಪರಾಧ ಕೃತ್ಯದಲ್ಲಿ ತೊಡಗುವುದಿಲ್ಲ ಎಂದು ಮನವರಿಕೆಯಾದ ನಂತರ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

    ಜಾಮೀನು ನೀಡುವ ಸಂದರ್ಭದಲ್ಲಿ ಆರೋಪಿಯು ಜೂನ್ 8, 2022 ರಿಂದ ಬಾಲಾಪರಾಧಿಗಳ ರಕ್ಷಣಾ ಗೃಹದಲ್ಲಿದ್ದಾನೆ (Child Protection Home). ಅವನ ತಂದೆ ತನ್ನ ಮಗನ ಮೇಲೆ ನಿಗಾ ಇಡುತ್ತಾರೆ ಎಂಬ ಅಂಶವನ್ನು ಸಹ ನ್ಯಾಯಾಲಯ ಉಲ್ಲೇಖಿಸಿದೆ. ಇದನ್ನೂ ಓದಿ: ಪರಸ್ಪರ ಒಪ್ಪಿಗೆ ಇದ್ದಲ್ಲಿ ವಿಚ್ಛೇದನಕ್ಕೆ ಆರು ತಿಂಗಳ ಅಗತ್ಯವಿಲ್ಲ – ಸುಪ್ರೀಂ ತೀರ್ಪು

  • ನನ್ನ ತಂದೆಯೂ ನನ್ನನ್ನ ʻಪೋರ್ನ್‌ ಸ್ಟಾರ್‌ʼ ಅಂದುಬಿಟ್ರು – ಬಾಲ್ಯದ ಕರಾಳ ನೆನಪು ಬಿಚ್ಚಿಟ್ಟ ಉರ್ಫಿ

    ನನ್ನ ತಂದೆಯೂ ನನ್ನನ್ನ ʻಪೋರ್ನ್‌ ಸ್ಟಾರ್‌ʼ ಅಂದುಬಿಟ್ರು – ಬಾಲ್ಯದ ಕರಾಳ ನೆನಪು ಬಿಚ್ಚಿಟ್ಟ ಉರ್ಫಿ

    ಮುಂಬೈ: ʻನಾನು 15 ವರ್ಷದವಳಿದ್ದಾಗ ಫೇಸ್‌ಬುಕ್‌ (Facebook) ಪ್ರೊಫೈಲ್‌ನಲ್ಲಿ ಸಾಧಾರಣ ಫೋಟೋವೊಂದನ್ನ ಅಪ್ಲೋಡ್‌ ಮಾಡಿದ್ದೆ, ಯಾರೋ ಅದನ್ನ ಡೌನ್‌ಲೋಡ್‌ ಮಾಡಿಕೊಂಡು ಪೋರ್ನ್‌ ವೆಬ್‌ಸೈಟ್‌ನಲ್ಲಿ ಹಾಕಿದ್ದರು. ಈ ವಿಷಯ ನಿಧಾನವಾಗಿ ಎಲ್ಲಕಡೆ ಹರಡಿತ್ತು. ಇದರಿಂದ ಎಲ್ಲರೂ ನನ್ನನ್ನ ಪೋರ್ನ್‌ ಸ್ಟಾರ್‌ ಎಂದು ಕರೆಯಲು ಶುರು ಮಾಡಿದ್ದರು. ಈ ಬಗ್ಗೆ ನಾನು ನನ್ನ ತಂದೆಯೊಂದಿಗೆ ಹೇಳಿಕೊಂಡರೂ ಅವರು ನಂಬಲು ತಯಾರಿರಲಿಲ್ಲ. ಮೊದಲೇ ಬಾಯಿಗೆ ಬಂದಂತೆ ನಿಂದಿಸುತ್ತಿದ್ದ ಅವರು, ಕೊನೆಗೆ ನನ್ನನ್ನ ʻಇವಳು ಪೋರ್ನ್‌ ಸ್ಟಾರ್‌ʼ ಎಂದೂ ಕರೆದುಬಿಟ್ಟರು. ಅವರಿಂದ ಹಿಂಸೆ ತಾಳಲಾರದೇ ನನ್ನ 17ನೇ ವಯಸ್ಸಿನಲ್ಲಿ ಮನೆಯಿಂದ ಓಡಿಹೋದೆʼ.. ಸಂದರ್ಶನವೊಂದರಲ್ಲಿ ಬಿಗ್‌ಬಾಸ್‌ (Bigg Boss) ಮಾಜಿ ಸ್ಪರ್ಧಿ ಉರ್ಫಿ ಜಾವೇದ್‌ (Urfi Javed) ತನ್ನ ಬಾಲ್ಯದ ಕರಾಳ ನೆನಪುಗಳನ್ನು ಬಿಚ್ಚಿಟ್ಟ ರೀತಿ ಇದಾಗಿತ್ತು.

    ಖಾಸಗಿವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿರುವ ಉರ್ಫೀ ಜಾವೇದ್‌, ನಾನು 17ನೇ ವಯಸ್ಸಿಗೆ ಮನೆಯಿಂದ ಓಡಿಹೋಗಲು ನಿರ್ಧರಿಸಿದೆ. ಏಕೆಂದರೆ ನನ್ನ ತಂದೆ ತುಂಬಾ ಹೊಡೆಯುತ್ತಿದ್ದರು, ಕಿರುಕುಳ ನೀಡುತ್ತಿದ್ದರು. ಒಮ್ಮೊಮ್ಮೆ ಮೂರ್ಛೆ ಹೋಗುವ ತನಕ ಹೊಡೆಯುತ್ತಿದ್ದರು. ಅಷ್ಟೇ ಅಲ್ಲ ನನ್ನ ಸಂಬಂಧಿಕರೂ ನನ್ನನ್ನ ತುಂಬಾ ಅವಮಾನಿಸುತ್ತಿದ್ದರು ಎಂದು ಉರ್ಫಿ ಭಾವುಕರಾಗಿದ್ದಾರೆ. ಇದನ್ನೂ ಓದಿ: ನಿಮ್ಮ ಉಪಸ್ಥಿತಿಗೆ ಬೆಲೆ ಕೊಡುವವರನ್ನು ಬಿಟ್ಟೋಗ್ಬೇಡಿ-ರಾಧಿಕಾ ಪಂಡಿತ್ ಹಿಂಗ್ಯಾಕಂದ್ರು?

    ನಾನು 15 ವರ್ಷದವಳಿದ್ದಾಗ ಯಾರೋ ನನ್ನ ಫೋಟೋವನ್ನು ಪೋರ್ನ್‌ ವೆಬ್‌ಸೈಟ್‌ಗೆ ಅಪ್ಲೋಡ್‌ ಮಾಡಿದ್ದರು. ಅದು ನನ್ನ ಸಹಜವಾದ ಫೋಟೋ ಆಗಿತ್ತು. ಆ ಫೋಟೋವನ್ನು ನನ್ನ ಫೇಸ್​ಬುಕ್ ಪ್ರೊಫೈಲ್ ಚಿತ್ರವಾಗಿ ಟ್ಯೂಬ್ ಟಾಪ್ ಧರಿಸಿ ಹಾಕಿದ್ದೆ. ಯಾರೋ ಅದನ್ನು ಡೌನ್​ಲೋಡ್ ಮಾಡಿ ಯಾವುದೇ ಮಾರ್ಫಿಂಗ್ ಇಲ್ಲದೆ ಪೋರ್ನ್ ಸೈಟ್​ಗಳಲ್ಲಿ ಅಪ್ಲೋಡ್ ಮಾಡಿದ್ದರು. ಈ ವಿಚಾರ ನಿಧಾನವಾಗಿ ಎಲ್ಲಕಡೆ ಹರಡಿತು. ಎಲ್ಲರೂ ನನ್ನನ್ನು ʻಪೋರ್ನ್‌ ಸ್ಟಾರ್‌ʼ ಎಂದು ಕರೆಯಲು ಪ್ರಾರಂಭಿಸಿದರು. ನಾನು ವೀಡಿಯೋ ಎಲ್ಲಿದೆ? ಸಾಕ್ಷಿ ತೋರಿಸಿ ಎಂದು ಕೇಳಿದರೂ ಪೋರ್ನ್‌ ಸ್ಟಾರ್‌ ಎಂದೇ ಅವಮಾನಿಸಿದರು. ನನ್ನ ತಂದೆ ಕೂಡ ನನ್ನನ್ನ ಪೋರ್ನ್ ಸ್ಟಾರ್ ಎಂದುಬಿಟ್ಟರು ಎಂದು ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ಹೊಂಬಾಳೆ ಫಿಲ್ಮ್ಸ್‌ಬಿಗ್ ಅಪ್‌ಡೇಟ್- ಯುವನ ಯುಗಾರಂಭ

    ಈ ಎಲ್ಲ ವಿಚಾರಗಳನ್ನ ನನಗೆ ನಂಬಲು ಆಗಿರಲಿಲ್ಲ. ಆದರೂ ಆ ಸಂದರ್ಭದಲ್ಲಿ ಅಸಹಾಯಕಳಾಗಿದ್ದರಿಂದ ಏನೂ ಮಾಡಲಾಗಲಿಲ್ಲ. ಅದಾದ 2 ವರ್ಷಗಳ ಕಾಲ ಎಲ್ಲವನ್ನೂ ಸಹಿಸಿಕೊಂಡೆ. ನಂತರ ನನಗೆ 17 ವರ್ಷವಿದ್ದಾಗ ನಾನು ಮನೆಯಿಂದ ಓಡಿಹೋದೆ. ಆ ನಂತರ ಮಕ್ಕಳಿಗೆ ಟ್ಯೂಷನ್‌ ಮಾಡುತ್ತಾ ಜೀವನ ಸಾಗಿಸುತ್ತಿದ್ದೆ. ಬಳಿಕ ಕಾಲ್‌ಸೆಂಟರ್‌ನಲ್ಲಿ ಕೆಲಸವೂ ಸಿಕ್ಕಿತು. ಆದ್ರೆ ಆ ಕೆಲಸ ಮಾಡಲು ನನಗೆ ಆಸಕ್ತಿ ಇರಲಿಲ್ಲ. ನಂತರ ಮುಂಬೈಗೆ ಬಂದು ವಿಭಿನ್ನ ಪಾತ್ರಗಳಿಗೆ ಆಡಿಷನ್ ನೀಡಿದೆ. ನಂತರ ಟಿವಿಯಲ್ಲಿ ಸಣ್ಣ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದೆ. ಇದರಿಂದ ಹೇಗೋ ಬಿಗ್‌ ಬಾಸ್‌ನಲ್ಲಿ ಚಾನ್ಸ್‌ ಸಿಕ್ಕಿತು. ಅಲ್ಲಿಂದ ಒಂದೇ ವಾರಕ್ಕೆ ನನ್ನನ್ನ ಹೊರಹಾಕಲಾಯಿತು. ಆದರೂ ಅಲ್ಲಿ ಸಿಕ್ಕ ಅವಕಾಶದಿಂದ ನಾನು ಮತ್ತಷ್ಟು ಬೆಳೆದೆ ಎಂದು ತಮ್ಮ ಬೆಳವಣಿಗೆಯ ಹಾದಿಯನ್ನು ವಿವರಿಸಿದ್ದಾರೆ.

  • ಸಂದರ್ಶನ ಮಾಡುವ ನೆಪದಲ್ಲಿ ಕರೆಸಿ ಟೆಕ್ಕಿ ಯುವತಿ ಮೇಲೆ ಅತ್ಯಾಚಾರ

    ಸಂದರ್ಶನ ಮಾಡುವ ನೆಪದಲ್ಲಿ ಕರೆಸಿ ಟೆಕ್ಕಿ ಯುವತಿ ಮೇಲೆ ಅತ್ಯಾಚಾರ

    ಲಕ್ನೋ: ಕೆಲಸಕ್ಕಾಗಿ ಸಂದರ್ಶನ (Interview) ಮಾಡುವ ನೆಪದಲ್ಲಿ ಕರೆಸಿ, ಮಾದಕ ದ್ರವ್ಯ ನೀಡಿ ಎಂಜಿನಿಯರಿಂಗ್ ಪದವೀಧರೆಯ ಮೇಲೆ ಕಾರಿನಲ್ಲೇ ಅತ್ಯಾಚಾರ ಎಸಗಿರುವ ಘಟನೆ ಉತ್ತರಪ್ರದೇಶದಲ್ಲಿ (Uttar Pradesh) ನಡೆದಿದೆ.

    ಗುರುಗ್ರಾಮ್‌ನ ಮಾಲ್‌ವೊಂದರ (Sahara Ganj Mall) ನೆಲಮಾಳಿಗೆಯಲ್ಲಿ ಕಾರಿನಲ್ಲಿ 27 ವರ್ಷದ ಎಂಜಿನಿಯರಿಂಗ್ ಪದವೀಧರ ಯುವತಿಯ ಮೇಲೆ ಕಾಮುಕ ತುಷಾರ್ ಶರ್ಮಾ ಅತ್ಯಾಚಾರ ಎಸಗಿದ್ದಾನೆ. ಆಕೆಗೆ ಕುಡಿಯುವ ನೀರಿನಲ್ಲಿ ನಿದ್ರೆ ಔಷಧಿ ಬೆರಸಿ, ಪ್ರಜ್ಞೆ ತಪ್ಪಿದ ನಂತರ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು (UP Police) ತಿಳಿಸಿದ್ದಾರೆ. ಇದನ್ನೂ ಓದಿ: ಕೆನಡಾ ವಾಯುನೆಲೆಯಲ್ಲಿ ಅಪರಿಚಿತ ವಸ್ತುವನ್ನು ಹೊಡೆದುರುಳಿಸಿದ US ಫೈಟರ್ ಜೆಟ್

    ಗುರುಗ್ರಾಮ್‌ನ (Gurugram) ಸೆಕ್ಟರ್-51ರ ಮಹಿಳಾ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ದೂರು ದಾಖಲಿಸಿದ್ದು, ತುಷಾರ್ ಶರ್ಮಾ ಎಂಬ ವ್ಯಕ್ತಿ ತನ್ನೊಂದಿಗೆ ಸಂಪರ್ಕ ಹೊಂದಿದ್ದನು. ಕೆಲಸ ಕೊಡಿಸುವುದಾಗಿ ಭರವಸೆಯನ್ನೂ ನೀಡಿದ್ದ ಎಂದು ಹೇಳಿದ್ದಾರೆ. ಇದನ್ನೂ ಓದಿ: ಎಲ್‌ಟಿಟಿಇ ಮುಖ್ಯಸ್ಥ ಜೀವಂತವಾಗಿದ್ದಾನಾ? – ಇದು ತಮಾಷೆ ಎಂದ ಶ್ರೀಲಂಕಾ

    ಏನಿದು ಘಟನೆ?
    ಆರೋಪಿ ತುಷಾರ್ ಶರ್ಮಾ ಉದ್ಯೋಗಕ್ಕಾಗಿ ಸಂದರ್ಶನ ಇರುವುದಾಗಿ ಪದವೀಧರೆಯನ್ನ ಮಾಲ್‌ಗೆ ಕರೆಸಿದ್ದಾನೆ. ಆಕೆ ತನ್ನ ಎಲ್ಲ ದಾಖಲೆಗಳೊಂದಿಗೆ ಮಾಲ್‌ಗೆ ಬಂದಿದ್ದಾಳೆ. ನಂತರ ಆರೋಪಿ ಆಕೆಯನ್ನ ನೆಲಮಾಳಿಗೆ ಕಾರ್ ಪಾರ್ಕಿಂಗ್ ಸ್ಥಳಕ್ಕೆ ಕರೆದೊಯ್ದಿದ್ದಾನೆ. ಈ ವೇಳೆ ಆಕೆಗೆ ಕುಡಿಯುವ ನೀರಿನಲ್ಲಿ ನಿದ್ರೆ ಬರುವ ಔಷಧಿ ಬೆರೆಸಿಕೊಟ್ಟಿದ್ದಾನೆ. ಆಕೆ ನೀರು ಕುಡಿದ ಕೆಲವೇ ಕ್ಷಣಗಳಲ್ಲಿ ಪ್ರಜ್ಞೆ ಕಳೆದುಕೊಂಡಿದ್ದಾಳೆ. ನಂತರ ಆಕೆಯನ್ನು ಕಾರಿನೊಳಕ್ಕೆ ತಳ್ಳಿ ಆರೋಪಿ ಶರ್ಮಾ ಅತ್ಯಾಚಾರ ಎಸಗಿದ್ದಾನೆ. ಬಳಿಕ ಘಟನೆಯ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿ, ಆಕೆಯನ್ನು ಮಾಲ್ ಪಾರ್ಕಿಂಗ್‌ನಲ್ಲಿ ಬಿಟ್ಟು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸಂತ್ರಸ್ತೆಯಿಂದ ದೂರು ಸ್ವೀಕರಿಸಿದ ಬಳಿಕ ಆಕೆಯನ್ನ ವೈದ್ಯಕೀಯ ಪರೀಕ್ಷೆಗಾಗಿ ದಾಖಲಿಸಲಾಗಿದೆ. ಆರೋಪಿ ವಿರುದ್ಧ ಐಪಿಸಿ (IPC) ಸೆಕ್ಷನ್ 328, 376 (ಅತ್ಯಾಚಾರ), 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

    ಪೊಲೀಸರು ಮಾಲ್‌ನ ಸಿಸಿಟಿವಿ (CCTV) ದೃಶ್ಯಾವಳಿಗಳನ್ನ ಪರಿಶೀಲಿಸುತ್ತಿದ್ದು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವೃದ್ಧ ಮಹಿಳೆಯರನ್ನೇ ರೇಪ್ ಮಾಡಿ, ಕೊಲೆ ಮಾಡ್ತಿದ್ದ 20ರ ಯುವಕ- ಸೈಕೋ ಕಿಲ್ಲರ್ ಅರೆಸ್ಟ್

    ವೃದ್ಧ ಮಹಿಳೆಯರನ್ನೇ ರೇಪ್ ಮಾಡಿ, ಕೊಲೆ ಮಾಡ್ತಿದ್ದ 20ರ ಯುವಕ- ಸೈಕೋ ಕಿಲ್ಲರ್ ಅರೆಸ್ಟ್

    ಲಕ್ನೋ: ಕಳೆದ 50 ದಿನಗಳಲ್ಲಿ ನಾಲ್ವರು ವೃದ್ಧ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದ 20 ವರ್ಷದ ಯುವಕನನ್ನ ಪೊಲೀಸರು (Police) ಬಂಧಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ.

    ಮೃತ ಮಹಿಳೆಯರು (Women) 50 ರಿಂದ 65 ವರ್ಷ ವಯಸ್ಸಿನವರು ಹಾಗೂ ಉತ್ತರ ಪ್ರದೇಶದ ಅಯೋಧ್ಯೆ (Ayodhya) ಹಾಗೂ ಬಾರಾಬಂಕಿ ಜಿಲ್ಲೆಗಳಿಗೆ ಸೇರಿದವರು. ಆರೋಪಿ ಅಮರೇಂದ್ರ (20) ಎಂದು ಗುರುತಿಸಿದ್ದು, ಅಯೋಧ್ಯೆಯ ಮಾವಾಯಿ ಪೊಲೀಸ್ ಠಾಣಾ (Mawai Police Station)  ವ್ಯಾಪ್ತಿಯಲ್ಲಿ ಬಂಧಿಸಲಾಗಿದೆ. ಉನ್ಹೌನಾ ಗ್ರಾಮಸ್ಥರ ಗುಂಪೊಂದು `ಸೈಕೋ’ ಕಿಲ್ಲರ್‌ನನ್ನ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಬಳಿಕ ಪೊಲೀಸರು ಬಂಧಿಸಿದ್ದಾರೆ ಎಂದು ಅಯೋಧ್ಯೆ ಹೆಚ್ಚುವರಿ ಎಸ್‌ಪಿ ಅತುಲ್ ಕುಮಾರ್ ಸೋಂಕರ್ ತಿಳಿಸಿದ್ದಾರೆ.

    ಉನ್ಹೌನಲ್ಲಿ (Unhauna) 5ನೇ ಮಹಿಳೆಯನ್ನ ಅತ್ಯಾಚಾರ ಮಾಡಲು ಪ್ರಯತ್ನಿಸುತ್ತಿದ್ದಾಗ ಯುವಕನನ್ನ ಸ್ಥಳೀಯರು ಸೆರೆಹಿಡಿಸಿದ್ದಾರೆ. ಬಳಿಕ ಮಾವಾಯಿ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ರೆಬೆಲ್ ಯತ್ನಾಳ್‍ಗೆ ಹೈಕಮಾಂಡ್ ಮತ್ತೆ ಮಾಫಿ- ಓನ್ಲಿ ವಾರ್ನಿಂಗ್, ನೋ ಆಕ್ಷನ್

    ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಅಮರೇಂದ್ರ ಇತರ ನಾಲ್ವರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ನಿರ್ಜನ ಪ್ರದೇಶದಲ್ಲಿ ಮಹಿಳೆಯರು ಒಂಟಿಯಾಗಿ ಕಂಡಾಗೆಲ್ಲಾ ಅಪರಾಧ ಎಸಗಿದ್ದಾಗಿ ಹೇಳಿದ್ದಾನೆ.

    ತನಿಖೆ ಬಳಿಕ ಆರೋಪಿ ಅಮರೇಂದ್ರ ಯಾವುದೇ ಸ್ಪಷ್ಟ ಉದ್ದೇಶ ಹೊಂದಿಲ್ಲ. ಲೈಂಗಿಕ ಉದ್ದೇಶದಿಂದ ಅತ್ಯಾಚಾರ ಎಸಗಿ ಮಹಿಳೆಯರನ್ನು ಕೊಂದಿರುವುದು ಸ್ಪಷ್ಟವಾಗಿದೆ. ಆರೋಪಿ ವಿರುದ್ಧ ಲೈಂಗಿಕ ದೌರ್ಜನ್ಯ, ಕೊಲೆ ಪ್ರಕರಣಗಳ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ. ಇದನ್ನೂ ಓದಿ: Plane Crash: ಬೆಂಕಿ ಕಾಣಿಸಿಕೊಂಡು ಪತನಗೊಂಡ ಚಾರ್ಟರ್ಡ್ ವಿಮಾನ – ಪೈಲಟ್‍ಗಾಗಿ ಹುಡುಕಾಟ

    ಸೈಕೋ ಕಿಲ್ಲರ್ ಕಥೆಯೇ ರೋಚಕ: 2022ರ ಡಿಸೆಂಬರ್ 5 ರಂದು ಮೊದಲ ಮಹಿಳೆಯ ಕೊಲೆ ಬಹಿರಂಗವಾಯಿತು. ಮಾವಾಯಿಯ ಖುಶೆಟಿ ಗ್ರಾಮದ 60 ವರ್ಷದ ಮಹಿಳೆ ಬೆಳಗ್ಗೆ ಮನೆಯಿಂದ ಹೋದ ನಂತರ ಹಿಂದಿರುಗಲಿಲ್ಲ. ಮರುದಿನ ಆಕೆಯ ಬೆತ್ತಲೆ ದೇಹವು ಮುಖ ಮತ್ತು ತಲೆಯ ಮೇಲೆ ಗಾಯದ ಗುರುತುಗಳೊಂದಿಗೆ ಪೊಲೀಸರಿಗೆ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿ ಕತ್ತು ಹಿಸುಕಿ ಕೊಲೆ ಮಾಡಿರುವುದು ಗೊತ್ತಾಗಿತ್ತು.

    CRIME COURT

    ಇದಾದ ನಂತರ ಡಿಸೆಂಬರ್ 17 ರಂದು ಇಬ್ರಾಹಿಂಬಾದ್ ಗ್ರಾಮದ ಹೊಲವೊಂದರಲ್ಲಿ 62 ವರ್ಷದ ಮಹಿಳೆಯ ಮೃತದೇಹ ಇದೇ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ನಂತರ ಡಿ.29 ರಂದು 55 ವರ್ಷದ, ಡಿಸೆಂಬರ್ 29 ರಂದು ಥಥರ್ಹಾ ಗ್ರಾಮದಿಂದ ಮಹಿಳೆಯೊಬ್ಬರು ಕಾಣೆಯಾಗಿದ್ದರು. ಮರುದಿನ ಹೊಲದಲ್ಲಿ ಬೆತ್ತಲೆ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಎಲ್ಲ ಕೊಲೆಗಳೂ ಒಂದೇ ಮಾದರಿಯಲ್ಲಿ ಇತ್ತೆಂದು ಗುರುತಿಸಲಾಗಿತ್ತು. ನಂತರ ಪೊಲೀಸ್ ಇಲಾಖೆ ಶೀಘ್ರವೇ ಹಂತಕನನ್ನು ಹಿಡಿಯಲು 6 ವಿಶೇಷ ತಂಡಗಳನ್ನು ರಚಿಸಿತ್ತು. ಕೊನೆಗೆ ಸಾರ್ವಜನಿಕರ ಗುಂಪೊಂದರ ಸಹಾಯದಿಂದ ಪೊಲೀಸರು ಕಾಮುಕ ಹಂತಕನನ್ನ ಬಂಧಿಸಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • Womens IPL: ದಾಖಲೆಯ 4,669 ಕೋಟಿ ರೂ.ಗೆ ಮಹಿಳಾ ಐಪಿಎಲ್‍ನ 5 ತಂಡಗಳು ಹರಾಜು

    Womens IPL: ದಾಖಲೆಯ 4,669 ಕೋಟಿ ರೂ.ಗೆ ಮಹಿಳಾ ಐಪಿಎಲ್‍ನ 5 ತಂಡಗಳು ಹರಾಜು

    ಮುಂಬೈ: ಚೊಚ್ಚಲ ಆವೃತ್ತಿಯ ಮಹಿಳಾ ಐಪಿಎಲ್‍ನ (Women’s Premier League) 5 ತಂಡಗಳು 4,699.99 ಕೋಟಿ ರೂ.ಗೆ ಹರಾಜಾಗಿ ದಾಖಲೆ ಬರೆದಿದೆ.

    ಐದು ಫ್ರಾಂಚೈಸಿಗಳು ತಮಗೆ ಬೇಕಾದ ತಂಡಗಳನ್ನು ಖರೀದಿಸುವಲ್ಲಿ ಯಶಸ್ವಿಯಾಗಿದ್ದು, ಚೊಚ್ಚಲ ಆವೃತ್ತಿಯ ಮಹಿಳಾ ಐಪಿಎಲ್ (IPL) ಟೂರ್ನಿಯಲ್ಲಿ ಬೆಂಗಳೂರು, ಅಹಮದಾಬಾದ್, ಮುಂಬೈ, ಡೆಲ್ಲಿ ಹಾಗೂ ಲಕ್ನೋ ತಂಡಗಳು ಕಣಕ್ಕಿಳಿಯಲಿವೆ. ಇದನ್ನೂ ಓದಿ: 951 ಕೋಟಿ ರೂ. ನೀಡಿ ಮಹಿಳಾ ಐಪಿಎಲ್ ಪ್ರಸಾರ ಹಕ್ಕು ಪಡೆದ Viacom18 – ಪ್ರತಿ ಪಂದ್ಯಕ್ಕೆ 7.09 ಕೋಟಿ ರೂ.

    ಅದಾನಿ ಗ್ರೂಪ್ (Adani Sportsline Pvt Ltd) ದಾಖಲೆಯ ಮೊತ್ತ ನೀಡಿ ಅಹಮದಾಬಾದ್ (Ahmedabad) ಮಹಿಳಾ ಐಪಿಎಲ್ ಫ್ರಾಂಚೈಸಿ ಪಡೆಯುವಲ್ಲಿ ಯಶಸ್ವಿಯಾಗಿದೆ. ಅದಾನಿ ಗ್ರೂಪ್ 1,289 ಕೋಟಿ ರೂ. ನೀಡಿ ಅಹಮದಾಬಾದ್ ಫ್ರಾಂಚೈಸ್‍ನ್ನು ಖರೀದಿಸಿದೆ.

    ಉಳಿದ ಫ್ರಾಂಚೈಸಿಯು 1000 ಕೋಟಿಗಿಂತ ಅಧಿಕ ಬಿಡ್ ಮಾಡಲಿಲ್ಲ. ಇಂಡಿಯಾವಿನ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ 912.99 ಕೋಟಿ ರೂ. ನೀಡಿ ಮುಂಬೈ (Mumbai) ಫ್ರಾಂಚೈಸಿಯನ್ನು ಖರೀದಿ ಮಾಡಿದೆ. ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ 901 ಕೋಟಿ ರೂ. ನೀಡಿ ಬೆಂಗಳೂರು (Bengaluru) ಫ್ರಾಂಚೈಸಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದ್ದು, ಜೆಎಸ್‍ಡಬ್ಲ್ಯೂ ಜಿಎಂಆರ್ ಕ್ರಿಕೆಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ 810 ಕೋಟಿ ರೂ. ನೀಡಿ ಡೆಲ್ಲಿ (Delhi) ಫ್ರಾಂಚೈಸಿಯನ್ನು ಪಡೆದುಕೊಂಡಿದೆ. ಇದನ್ನೂ ಓದಿ: ಸಿಕ್ಸರ್, ಬೌಂಡರಿ ಅಬ್ಬರ – 1,101 ದಿನಗಳ ಬಳಿಕ ಶತಕ ಸಿಡಿಸಿದ ಹಿಟ್‌ಮ್ಯಾನ್

    ಕಾಪ್ರಿ ಗ್ಲೋಬಲ್ ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ 757 ಕೋಟಿ ರೂ. ನೀಡಿ ಲಕ್ನೋ (Lucknow) ಫ್ರಾಂಚೈಸಿಯನ್ನು ಖರೀದಿಸಲು ಯಶಸ್ವಿಯಾಗಿದೆ. ಈ ಮೂಲಕ ಒಟ್ಟು 4,669.99 ಕೋಟಿ ರೂ.ಗೆ 5 ಫ್ರಾಂಚೈಸ್‍ಗಳು ಹರಾಜಾಗಿವೆ.

    ಈ ಮೂಲಕ 2008ರಲ್ಲಿ ಪುರುಷರ ಐಪಿಎಲ್ (IPL) ಆರಂಭಿಕ ಸೀಸನ್‍ಗಿಂತಲೂ ಹೆಚ್ಚು ಮೊತ್ತಕ್ಕೆ ಮಹಿಳಾ ಐಪಿಎಲ್ ತಂಡಗಳು ಹರಾಜಾಗಿ ದಾಖಲೆ ಬರೆದುಕೊಂಡಿದೆ. ಪುರುಷರ ಐಪಿಎಲ್ (IPL) ಆರಂಭಿಕ ಸೀಸನ್‌ನಲ್ಲಿ 8 ಫ್ರಾಂಚೈಸ್‌ಗಳು 2,894 ರೂ. ನೀಡಿ 8 ತಂಡಗಳನ್ನು ಖರೀದಿತ್ತು. ಈ ಮೊದಲು ಮಹಿಳಾ ಐಪಿಎಲ್‌ನ  2023 ರಿಂದ 2027ರ ವರೆಗಿನ ಪ್ರಸಾರ ಹಕ್ಕನ್ನು (Media Rights) ಬರೋಬ್ಬರಿ 951 ಕೋಟಿ ರೂ. ನೀಡಿ ವಯಾಕಾಮ್18 (Viacom18)  ಖರೀದಿಸಿತ್ತು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಾಮನ ಆಶೀರ್ವಾದ ಸದಾ ನಿಮ್ಮೊಂದಿಗಿರಲಿದೆ- ರಾಗಾಗೆ ಅಯೋಧ್ಯೆ ಪ್ರಧಾನ ಅರ್ಚಕ ಪತ್ರ

    ರಾಮನ ಆಶೀರ್ವಾದ ಸದಾ ನಿಮ್ಮೊಂದಿಗಿರಲಿದೆ- ರಾಗಾಗೆ ಅಯೋಧ್ಯೆ ಪ್ರಧಾನ ಅರ್ಚಕ ಪತ್ರ

    ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ನೇತೃತ್ವದ ಭಾರತ್ ಜೋಡೋ ಯಾತ್ರೆ (Bharat Jodo yatre) ಯು ಸದ್ಯ ಉತ್ತರಪ್ರದೇಶಕ್ಕೆ ತಲುಪಿದೆ. ಈ ಹಿನ್ನೆಲೆಯಲ್ಲಿ ಅಯೋಧ್ಯೆಯ ರಾಮಜನ್ಮಭೂಮಿ ದೇಗುಲದ ಪ್ರಧಾನ ಅರ್ಚಕ ರಾಹುಲ್ ಗಾಂಧಿಗೆ ವಿಶ್ ಮಾಡಿ ಪತ್ರವೊಂದನ್ನು ಬರೆದಿದ್ದಾರೆ.

    ರಾಮನ ಆಶೀರ್ವಾದ ಸದಾ ನಿಮ್ಮೊಂದಿಗಿರಲಿದೆ ಎಂದು ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ (Acharya Satyendra Das) ಅವರು ರಾಹುಲ್ ಗಾಂಧಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

    ಪತ್ರದಲ್ಲೇನಿದೆ..?: ನಿಮ್ಮ ಈ ಹೋರಾಟಕ್ಕೆ ಯಶಸ್ಸು ಸಿಗಲಿದೆ ಎಂದು ನಾನು ಭಾವಿಸುತ್ತೇನೆ. ಹಾಗೆಯೇ ಅದಕ್ಕಾಗಿ ಪ್ರಾರ್ಥಿಸುತ್ತೇನೆ. ದೇವರು ನಿಮಗೆ ಆಯುಷ್ಯ, ದೀರ್ಘಾಯುಷ್ಯ ನೀಡಿ ಕಾಪಾಡಲಿ ಎಂದು ತಿಳಿಸಿದ್ದಾರೆ. ಈ ಮೂಲಕ ದೇಶವನ್ನು ಒಗ್ಗೂಡಿಸುವ ಕಾಂಗ್ರೆಸ್ ಕ್ರಮಕ್ಕೆ ತಮ್ಮ ಬೆಂಬಲವನ್ನು ನೀಡಿದರು. ಇದನ್ನೂ ಓದಿ: 9 ದಿನದ ಬ್ರೇಕ್ ಬಳಿಕ ಜೋಡೋ ಯಾತ್ರೆ ಪುನರಾರಂಭ

    ನೀವು ಜನರ ಹಿತಾಸಕ್ತಿ ಮತ್ತು ಅವರ ಸಂತೋಷಕ್ಕಾಗಿ ‘ಸರ್ವಜನ್ ಹಿತೈ ಸರ್ವಜನ್ ಸುಖೇ’ ಎಂಬ ಉದಾತ್ತ ಉದ್ದೇಶಕ್ಕಾಗಿ ಕೆಲಸ ಮಾಡುತ್ತಿದ್ದೀರಿ. ಶ್ರೀರಾಮನ ಆಶೀರ್ವಾದ ಸದಾ ನಿಮ್ಮ ಮೇಲಿರಲಿ ಎಂದು ಹಾರೈಸುವುದಾಗಿ ದಾಸ್ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಜ.31ಕ್ಕೆ ಸಂಸತ್ ಅಧಿವೇಶನ; ಫೆ.1ಕ್ಕೆ ಕೇಂದ್ರ ಬಜೆಟ್ ಮಂಡನೆ

    ಕಾಂಗ್ರೆಸ್ ಪಕ್ಷದ ಅಯೋಧ್ಯೆ ಜಿಲ್ಲಾ ವಕ್ತಾರ ಸುನೀಲ್ ಕೃಷ್ಣ ಗೌತಮ್ ಈ ಬಗ್ಗೆ ಪ್ರತಿಕ್ರಿಯಿಸಿ, ಪಕ್ಷದ ಭಾರತ್ ಜೋಡೋ ಯಾತ್ರೆಗೆ ಬೆಂಬಲ ನೀಡುವ ಸಲುವಾಗಿ ಆಚಾರ್ಯ ಸತ್ಯೇಂದ್ರ ದಾಸ್ ಅವರು ರಾಹುಲ್ ಗಾಂಧಿಗೆ ಪತ್ರ ಬರೆದಿದ್ದಾರೆ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವರದಕ್ಷಿಣೆಯಾಗಿ ಸ್ಪೋರ್ಟ್ಸ್‌ ಬೈಕ್ ನೀಡದ್ದಕ್ಕೆ ಪತ್ನಿಗೆ ತಲಾಖ್- ಆಘಾತಕ್ಕೆ ಅತ್ತೆ ಸಾವು

    ವರದಕ್ಷಿಣೆಯಾಗಿ ಸ್ಪೋರ್ಟ್ಸ್‌ ಬೈಕ್ ನೀಡದ್ದಕ್ಕೆ ಪತ್ನಿಗೆ ತಲಾಖ್- ಆಘಾತಕ್ಕೆ ಅತ್ತೆ ಸಾವು

    ಲಕ್ನೋ: ವ್ಯಕ್ತಿಯೊಬ್ಬ ವರದಕ್ಷಿಣೆಯಾಗಿ (Dowry)  ಸ್ಪೋರ್ಟ್ಸ್‌ ಬೈಕ್ (Sports Bike) ನೀಡದ್ದಕ್ಕೆ ಪತ್ನಿಗೆ ವಿಚ್ಛೇದನ (Divorce) ನೀಡಿದ್ದಾನೆ. ಇದನ್ನು ನೋಡಿದ ವ್ಯಕ್ತಿಯ ಅತ್ತೆ (Mother In Law) ಆಘಾತದಿಂದ ಸಾವನ್ನಪ್ಪಿದ ಘಟನೆ ಉತ್ತರಪ್ರದೇಶದ ಲಕ್ನೋದಲ್ಲಿ ನಡೆದಿದೆ.

    ಲಕ್ನೋದ (Lucknow) ಅಮೀನಾಬಾದ್ ಚಿಕಮಂಡಿ ಮಹಿಳೆಯೊಂದಿಗೆ ಸೀತಾಪುರದ ಮೊಹಮ್ಮದ್ ಯೂನಸ್ ಎಂಬಾತ 2021ರಲ್ಲಿ ವಿವಾಹವಾಗಿದ್ದ. ಮದುವೆಯಾದ (Marriage) ನಂತರ ಮಹಿಳೆಗೆ ಆಕೆಯ ಪತಿ ಮೊಹಮ್ಮದ್ ಹಾಗೂ ಅವನ ತಾಯಿ ವರದಕ್ಷಿಣೆಗಾಗಿ ಪೀಡಿಸುತ್ತಿದ್ದರು. ಆ ವೇಳೆ ಮೊಹಮ್ಮದ್‍ಗೆ ಆತನ ಪತ್ನಿಯ ಮನೆಯವರು 2 ಲಕ್ಷ ರೂ. ನೀಡಿದ್ದರು.

    ಆದರೆ ಮೊಹಮ್ಮದ್ ಪುನಃ ಹಣಕ್ಕಾಗಿ ಬೇಡಿಕೆಯಿಡಲು ಪ್ರಾರಂಭಿಸಿದ್ದನು. ಆದರೆ ಪತ್ನಿಯ ಮನೆಯವರು ಹಣ ನೀಡಲು ವಿಫಲವಾದಾಗ ಮೊಹಮ್ಮದ್ ಆಕೆಯನ್ನು ಮನೆಯಿಂದ ಹೊರಹಾಕಿದ್ದಾನೆ. ಜೊತೆಗೆ ಮೊಬೈಲ್‌ನಲ್ಲಿಮೂರು ಬಾರಿ ತಲಾಕ್‌ ಹೇಳಿ ವಿಚ್ಛೇದನ ನೀಡಿದ್ದಾನೆ. ಇದನ್ನೂ ಓದಿ: ಪ್ರಧಾನಿ ಮೋದಿ ತಾಯಿ ಹೀರಾಬೆನ್ ಆಸ್ಪತ್ರೆಗೆ ದಾಖಲು

    ಇದನ್ನು ನೋಡಿದ ಮಹಿಳೆಯ ತಾಯಿ ಆಘಾತದಿಂದ ಸಾವನ್ನಪ್ಪಿದ್ದಾರೆ. ಈ ಘಟನೆಯ ನಂತರ ಸಂತ್ರಸ್ತೆ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಮತ್ತೆ ಟೆಸ್ಟಿಂಗ್ ಎಡವಟ್ಟು- ಕೋವಿಡ್ ಟೆಸ್ಟ್ ಮಾಡಿಸದಿದ್ರೂ ಬಂತು ಮೆಸೇಜ್

    Live Tv
    [brid partner=56869869 player=32851 video=960834 autoplay=true]

  • ಮಕ್ಕಳಾಗಿಲ್ಲ ಎಂದು ಪತ್ನಿಯನ್ನು ಥಳಿಸಿದ ಪತಿ- ಖಾಸಗಿ ಅಂಗಕ್ಕೆ ಗಾಯ

    ಮಕ್ಕಳಾಗಿಲ್ಲ ಎಂದು ಪತ್ನಿಯನ್ನು ಥಳಿಸಿದ ಪತಿ- ಖಾಸಗಿ ಅಂಗಕ್ಕೆ ಗಾಯ

    ಲಕ್ನೋ: ಮದುವೆಯಾಗಿ (Marriage) ವರ್ಷಗಳೇ ಕಳೆದರೂ ಮಗುವಾಗಿಲ್ಲ (Baby) ಎಂಬ ಕೋಪಕ್ಕೆ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು (Wife) ಥಳಿಸಿ ಆಕೆಯ ಖಾಸಗಿ ಅಂಗಕ್ಕೆ ಚೂಪಾದ ಬ್ಲೇಡ್‍ನಿಂದ ಇರಿದು ಗಾಯಗೊಳಿಸಿರುವ ಘಟನೆ ಉತ್ತರಪ್ರದೇಶದ (Uttar Pradesh) ಲಕ್ನೋದಲ್ಲಿ (Lucknow) ನಡೆದಿದೆ.

    ರವೀಂದ್ರ ಬಂಧಿತ ಆರೋಪಿ. ಮದುವೆಯಾಗಿ 6 ವರ್ಷಗಳಾದರೂ ಮಗುವಾಗಿಲ್ಲ ಎಂದು ಪತ್ನಿಯೊಂದಿಗೆ ಆಗಾಗ ಜಗಳವಾಡುತ್ತಿದ್ದ. ಇದರಿಂದಾಗಿ ಆಕೆ ತನ್ನ ತಾಯಿಯ ಮನೆಗೆ ಹೋಗಿ ಕಳೆದ 8 ತಿಂಗಳಿಂದ ಅಲ್ಲಿಯೇ ಇದ್ದಳು.

    ಆದರೆ ರವೀಂದ್ರ ಡಿ. 25ರಂದು ತನ್ನ ಪತ್ನಿಯನ್ನು ಮನವೊಲಿಸಿ ವಾಪಸ್ ಮನೆಗೆ ಕರೆದುಕೊಂಡು ಬಂದಿದ್ದಾನೆ. ಅದಾದ ಬಳಿಕ ಆಕೆಯೊಂದಿಗೆ ಲೈಗಿಕಕ್ರಿಯೆ ನಡೆಸಲು ಪ್ರಯತ್ನಿಸಿದ್ದಾನೆ. ಆದರೆ ಪತ್ನಿ ಇದಕ್ಕೆ ವಿರೋಧಿಸಿದಾಗ ಆಕೆಯನ್ನು ಥಳಿಸಿ, ಆಕೆಯ ಖಾಸಗಿ ಅಂಗಗಳಿಗೆ ಬ್ಲೇಡ್‍ನಿಂದ ಇರಿದು ಗಾಯಗೊಳಿಸಿದ್ದಾನೆ. ಇದನ್ನೂ ಓದಿ: ಬಿಜೆಪಿಯ ಭದ್ರಕೋಟೆ ಮೇಲೆ ಕೈಪಡೆ ಕಣ್ಣು- 2 ಕ್ಷೇತ್ರಗಳನ್ನ ದಕ್ಕಿಸಿಕೊಳ್ಳಲು ರಣತಂತ್ರ

    ಸಂತ್ರಸ್ತೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿ ರವೀಂದ್ರ ವಿರುದ್ಧ ಪೊಲೀಸರು ಪ್ರಕರಣ ದಾಖಲಾಗಿದ್ದು, ಆತನಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ. ಇದನ್ನೂ ಓದಿ: ಚಾರ್ಮಾಡಿ ಘಾಟ್‌ನಲ್ಲಿ ಕಾಡ್ಗಿಚ್ಚು- ನೂರಾರು ಎಕರೆ ಅರಣ್ಯ ಬೆಂಕಿಗಾಹುತಿ

    Live Tv
    [brid partner=56869869 player=32851 video=960834 autoplay=true]

  • 52ರ ಮಹಿಳೆ ಮೇಲೆ ಆಶ್ರಮದಲ್ಲೇ ಸಾಮೂಹಿಕ ಅತ್ಯಾಚಾರ

    52ರ ಮಹಿಳೆ ಮೇಲೆ ಆಶ್ರಮದಲ್ಲೇ ಸಾಮೂಹಿಕ ಅತ್ಯಾಚಾರ

    ಲಕ್ನೋ: 52 ವರ್ಷದ ಮಹಿಳೆ (Woman) ಮೇಲೆ ದೇವಾಲಯದ ಆಶ್ರಮವೊಂದರಲ್ಲಿ (Ashram) ಸಾಮೂಹಿಕ ಅತ್ಯಾಚಾರ (Gang Rape) ಎಸಗಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಲಕ್ನೋವಿನಲ್ಲಿ (Lucknow) ಗೋಮತಿ ನಗರದಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದು ಲಕ್ನೋವಿನಲ್ಲಿ ಕೇವಲ 24 ಗಂಟೆಗಳ ಒಳಗೆ ನಡೆದಿರುವ 2ನೇ ಸಾಮೂಹಿಕ ಅತ್ಯಾಚಾರ ಪ್ರಕರಣವಾಗಿದೆ.

    ಸಂತ್ರಸ್ತ ಮಹಿಳೆ ನೀಡಿರುವ ದೂರಿನ ಪ್ರಕಾರ, ಘಟನೆ ಅಕ್ಟೋಬರ್ 4 ರಂದು ನಡೆದಿದೆ. ಆಕೆ ಈ ಹಿಂದೆ ಮಥುರಾದ ಆಶ್ರಮದಲ್ಲಿದ್ದು, ಬಳಿಕ ಸನ್ಯಾಸಿನಿಯೊಬ್ಬರ ಶಿಫಾರಸಿನ ಮೇರೆಗೆ ಲಕ್ನೋದಲ್ಲಿರುವ ಆಶ್ರಮಕ್ಕೆ ಬಂದಿದ್ದರು. ಆಕೆ ಕಳೆದ ತಿಂಗಳು ಲಕ್ನೋ ಆಶ್ರಮಕ್ಕೆ ಸ್ಥಳಾಂತರವಾಗಿದ್ದು, ಬಳಿಕ ಆಕೆಗೆ ಶಿಫಾರಸು ಮಾಡಿದ್ದ ಸನ್ಯಾಸಿನಿ ಕಾರಣಾಂತರಗಳಿಂದ ವಾರಣಾಸಿಗೆ ಹೋಗಿದ್ದರು.

    ಈ ವೇಳೆ ಆಶ್ರಮದಲ್ಲಿ ಆಕೆ ಒಂಟಿಯಾಗಿದ್ದು, ಇದೇ ಸಮಯಕ್ಕೆ ಕಾದು ಕುಳಿತಿದ್ದ ಕೆಲ ಕಿಡಿಗೇಡಿ ಆಶ್ರಮವಾಸಿಗಳು ಊಟದಲ್ಲಿ ಮತ್ತು ಬರುವ ಪದಾರ್ಥ ಸೇರಿಸಿ ಆಕೆಗೆ ನೀಡಿದ್ದರು. ತನಗೆ ಪ್ರಜ್ಞೆ ಬಂದಾಗ ಸಂಪೂರ್ಣ ಬೆತ್ತಲಾಗಿದ್ದು, ನಿಶ್ಶಕ್ತರಾಗಿದ್ದರು. ತನ್ನ ಮೇಲೆ ನಾಲ್ವರು ಅತ್ಯಾಚಾರವೆಸಗಿರುವುದು ತಿಳಿದು, ಈ ಬಗ್ಗೆ ಆಶ್ರಮದ ಮುಖ್ಯಸ್ಥರಿಗೆ ದೂರು ನೀಡಿದ್ದರು. ಆದರೆ ಅವರು ತನಗೆ ಜೀವ ಬೆದರಿಕೆ ಹಾಕಿರುವುದಾಗಿ ಮಹಿಳೆ ದೂರು ನೀಡಿದ್ದಾರೆ.

    ಆಶ್ರಮದ ಮುಖ್ಯಸ್ಥರು ತನಗೆ ಸಹಾಯ ಮಾಡದ ಕಾರಣ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು, ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಘಟನೆಯ ಬಗ್ಗೆ ಎಲ್ಲಾ ಕೋನಗಳಿಂದಲೂ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಗಡಿಯಲ್ಲಿ 12 ಕೆ.ಜಿ ಸರಕು ಹೊತ್ತ ಡ್ರೋನ್ ಹೊಡೆದುರುಳಿಸಿದ ಭಾರತ

    ಇದಕ್ಕೂ ಮುನ್ನ ಲಕ್ನೋದಲ್ಲಿ 18 ವರ್ಷದ ಯುವತಿಯ ಮೇಲೆ ಆಟೋ ಚಾಲಕ ಮತ್ತು ಆತನ ಸಹಾಯಕರು ಸಾಮೂಹಿಕ ಅತ್ಯಾಚಾರವೆಸಗಿರುವುದಾಗಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಪರೇಶ್ ಮೇಸ್ತಾ ಕೇಸ್ ರೀ ಓಪನ್‍ಗೆ ಒತ್ತಡ – ಸರ್ಕಾರ ಸೈಲೆಂಟ್

    Live Tv
    [brid partner=56869869 player=32851 video=960834 autoplay=true]

  • ಐಸಿಯುನಲ್ಲಿ ಮುಲಾಯಂ ಸಿಂಗ್ – ಅಖಿಲೇಶ್‍ಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ ಮೋದಿ

    ಐಸಿಯುನಲ್ಲಿ ಮುಲಾಯಂ ಸಿಂಗ್ – ಅಖಿಲೇಶ್‍ಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ ಮೋದಿ

    ಲಕ್ನೋ: ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ (Mulayam Singh Yadav) ಅವರ ಆರೋಗ್ಯ ಹದಗೆಟ್ಟಿದ್ದು, ಭಾನುವಾರ ಅವರನ್ನು ಗುರುಗ್ರಾಮ್‍ನ (Gurugram) ಮೇದಾಂತ ಆಸ್ಪತ್ರೆಯಲ್ಲಿ ಐಸಿಯುಗೆ (ICU of the Medanta Hospital) ದಾಖಲಿಸಲಾಗಿದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ( Prime Minister Narendra Modi) ಅವರು ಅಖಿಲೇಶ್ ಯಾದವ್ (Akhilesh Yadav) ಅವರನ್ನು ಸಂಪರ್ಕಿಸಿ ಮುಲಾಯಂ ಸಿಂಗ್ ಯಾದವ್ ಅವರ ಆರೋಗ್ಯ ವಿಚಾರಿಸಿದ್ದಾರೆ.

    ಮೊದಲಿಗೆ ಜನರಲ್ ವಾರ್ಡ್‍ಗೆ ದಾಖಲಾಗಿದ್ದ ಮುಲಾಯಂ ಸಿಂಗ್ ಯಾದವ್ ಅವರಿಗೆ ಉಸಿರಾಟ ತೊಂದರೆಯುಂಟಾಗಿದ್ದರಿಂದ ಇದೀಗ ಅವರನ್ನು ಐಸಿಯು ವಾರ್ಡ್‍ಗೆ ರವಾನಿಸಲಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಮುಲಾಯಂ ಸಿಂಗ್‍ರನ್ನು ಹಲವು ದಿನಗಳಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಭಾನುವಾರ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಐಸಿಯುಗೆ ಸ್ಥಳಾಂತರಿಸಲಾಗಿದೆ. ಸದ್ಯ ಮುಲಾಯಂ ಸಿಂಗ್ ಯಾದವ್ ಅವರ ಆರೋಗ್ಯ ಸ್ಥಿತಿಯಲ್ಲಿ ಚೇತರಿಕೆ ಕಂಡಿದೆ. ಇದನ್ನೂ ಓದಿ: ರಾಯಚೂರಿನಲ್ಲಿ ಸತತ ಮಳೆಗೆ ಮನೆಗೋಡೆ ಕುಸಿತ – ಒಂದೇ ಕುಟುಂಬದ ಮೂವರು ಸಾವು

    ಮತ್ತೊಂದೆಡೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರು ಅಖಿಲೇಶ್ ಯಾದವ್ ಅವರೊಂದಿಗೆ ಕರೆ ಮಾಡಿ ಮಾತನಾಡಿದ್ದಾರೆ. ಉತ್ತಮ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಕಲ್ಲು ತುಂಬಿ ನಿಂತಿದ್ದ ಲಾರಿಗೆ KSRTC ಬಸ್‌ ಡಿಕ್ಕಿ – ಬಸ್‌ನಲ್ಲಿದ್ದ ದಂಪತಿ ದುರ್ಮರಣ, 20 ಮಂದಿಗೆ ಗಾಯ

    Live Tv
    [brid partner=56869869 player=32851 video=960834 autoplay=true]