Tag: lucknow

  • 4ನೇ ಮಹಡಿಯಿಂದ ಜಿಗಿದ ಟಿವಿ ಆ್ಯಂಕರ್

    4ನೇ ಮಹಡಿಯಿಂದ ಜಿಗಿದ ಟಿವಿ ಆ್ಯಂಕರ್

    ಲಕ್ನೋ: ಅಪಾರ್ಟ್ ಮೆಂಟಿನ 4ನೇ ಮಹಡಿಯಿಂದ ಟಿವಿ ಆ್ಯಂಕರ್ ಒಬ್ಬರು ಬಿದ್ದು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.

    ಈ ಘಟನೆ ಗುರುವಾರ ರಾತ್ರಿ ನಡೆದಿದ್ದು, ರಾಧಿಕಾ ಕೌಶಿಕ್ ಮೃತಪಟ್ಟ ಟಿವಿ ಆ್ಯಂಕರ್. ಈಕೆ ಗುರುವಾರ ರಾತ್ರಿಯೇ ಮಹಡಿಯಿಂದ ಬಿದ್ದಿದ್ದು, ಇಂದು ನಸುಕಿನ ಜಾವ ಸುಮಾರು 3:30ಕ್ಕೆ ಮೃತಪಟ್ಟಿದ್ದಾರೆ.

    ಮೃತ ಕೌಶಿಕ್ ನೋಯ್ಡಾದ ಅಂಟಾರ್ಶ್ ಅಪಾರ್ಟ್ ಮೆಂಟ್ ಸೆಕ್ಟರ್ 77ರಲ್ಲಿ ವಾಸಿಸುತ್ತಿದ್ದರು. ಇವರ ಜೊತೆ ಸಹೋದ್ಯೋಗಿ ಕೂಡ ಇದ್ದು, ಇಬ್ಬರು ಒಂದೇ ಪ್ಲಾಟ್ ನಲ್ಲಿ ವಾಸಿಸುತ್ತಿದ್ದರು. ಗುರುವಾರ ರಾತ್ರಿ ಮಹಡಿಯ ಮೇಲೆ ನಿಂತು ಮಾತನಾಡುತ್ತಿದ್ದರು. ಬಳಿಕ ಸಹೋದ್ಯೋಗಿ ಶೌಚಾಲಯಕ್ಕೆ ಹೋದಾಗ ರಾಧಿಕಾ ಕೌಶಿಕ್ 4ನೇ ಮಹಡಿಯಿಂದ ಬಿದ್ದಿದ್ದಾರೆ. ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಸುಕಿನ ಜಾವ 3.30ಕ್ಕೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

    ಮೃತ ಆಂಕರ್ ತಾನೇ ನಾಲ್ಕನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಸದ್ಯಕ್ಕೆ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಮೃತ ಸಹೋದ್ಯೋಗಿಯನ್ನು ವಶಕ್ಕೆ ಪಡೆದು, ಇದು ಆತ್ಮಹತ್ಯೆಯೋ ಅಥವಾ ಆಕಸ್ಮಿಕವಾಗಿ ಬಿದ್ದಿದ್ದಾರೋ ಎನ್ನುವುದನ್ನು ವಿಚಾರಣೆ ಮಾಡುತ್ತಿದ್ದಾರೆ.

    ಮೃತ ನಿರೂಪಕಿ ಮೂಲತಃ ರಾಜಸ್ಥಾನದವರಾಗಿದ್ದು, ಪೊಲೀಸ್ ಅಧಿಕಾರಿಗಳು ಕುಟುಂಬದ ಸದಸ್ಯರಿಗೆ ಮಾಹಿತಿಯನ್ನು ತಿಳಿಸಿದ್ದಾರೆ. ಇತ್ತ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಸೆಲ್ಫಿ ಕ್ಲಿಕ್ಕಿಸಲು ಹೋಗಿ ಜೀವ ಕಳ್ಕೊಂಡ್ಲು!

    ಸೆಲ್ಫಿ ಕ್ಲಿಕ್ಕಿಸಲು ಹೋಗಿ ಜೀವ ಕಳ್ಕೊಂಡ್ಲು!

    ಲಕ್ನೋ: ಜಾತ್ರೆಯಲ್ಲಿ ಜೇಂಟ್ ವೀಲ್ ಮೇಲಿಂದ ಸೆಲ್ಫಿ ಕ್ಲಿಕ್ಕಿಸುವ ವೇಳೆ ಆಯ ತಪ್ಪಿ ಬಿದ್ದು ಯುವತಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಭಾನುವಾರದಂದು ನಡೆದಿದೆ.

    ಬಲ್ಲಿಯಾ ಪ್ರದೇಶದ ನಿವಾಸಿ ರಾಣಿ (20) ಮೃತ ಯುವತಿ. ಭಾನುವಾರದಂದು ಡಾದ್ರಿ ಜಾತ್ರಮಹೋತ್ಸವವನ್ನು ಸದರ್ ಪ್ರದೇಶದಲ್ಲಿ ನಡೆಸಲಾಗಿತ್ತು. ಈ ಜಾತ್ರೆಗೆ ಬಂದಿದ್ದ ರಾಣಿ ತನ್ನ ಗೆಳತಿಯರ ಜೊತೆ ಜೇಂಟ್ ವೀಲ್ ಹತ್ತಿದ್ದಾಳೆ. ತಿರುಗುತ್ತಿದ್ದ ಜೇಂಟ್ ವೀಲ್ ಮೇಲಿಂದ ಸೆಲ್ಫಿ ಕ್ಲಿಕ್ಕಿಸುವ ಸಮಯದಲ್ಲಿ ಆಯ ತಪ್ಪಿ ಕೆಳೆಗೆ ಬಿದ್ದು ಯುವತಿ ಸಾವನ್ನಪ್ಪಿದ್ದಾಳೆ.

    ಯುವತಿ ಕೆಳಗೆ ಬಿದ್ದ ತಕ್ಷಣವೇ ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ತುಂಬ ಎತ್ತರದಿಂದ ಬಿದ್ದ ಪರಿಣಾಮ ರಾಣಿ ತೀವ್ರ ಗಾಯಗೊಂಡಿದ್ದಳು. ಆದರಿಂದ ವೈದ್ಯರು ಚಿಕಿತ್ಸೆ ನೀಡುತ್ತಿದ್ದ ವೇಳೆಯೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

    ಪೊಲೀಸರು ಯುವತಿಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಘಟನೆ ಕುರಿತು ಬಲ್ಲಿಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಪೊಲೀಸ್ರಿಂದ ತಪ್ಪಿಸಿಕೊಳ್ಳಲು ಸಾರ್ವಜನಿಕರ ಮುಂದೆಯೇ ಸೋದರಿ ಬಟ್ಟೆ ಬಿಚ್ಚಿದ

    ಪೊಲೀಸ್ರಿಂದ ತಪ್ಪಿಸಿಕೊಳ್ಳಲು ಸಾರ್ವಜನಿಕರ ಮುಂದೆಯೇ ಸೋದರಿ ಬಟ್ಟೆ ಬಿಚ್ಚಿದ

    ಲಕ್ನೋ: ಸಹೋದರನೇ ಪೊಲೀಸರಿಂದ ತಪ್ಪಿಸಿಕೊಳ್ಳಲು ತನ್ನ ಸಹೋದರಿಯ ಬಟ್ಟೆಯನ್ನು ಎಲ್ಲರ ಮುಂದು ಬಿಚ್ಚಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಲಖಿಮ್ಪುರ್ ಖೇರಿ ಜಿಲ್ಲೆಯಲ್ಲಿ ನಡೆದಿದೆ.

    ವ್ಯಕ್ತಿಯೊಬ್ಬ ಮೊಬೈಲ್ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದ. ಆತನನ್ನು ವಿಚಾರಣೆ ಮಾಡಲು ಪೊಲೀಸರು ಮನೆಗೆ ಹೋಗಿದ್ದಾರೆ. ಈ ವೇಳೆ ಆತ ಪೊಲೀಸರಿಂದ ತಪ್ಪಿಸಿಕೊಳ್ಳಲು ಕುಟುಂಬದವರು ಮತ್ತು ಸಾರ್ವಜನಿಕರ ಮುಂದೆ ಸಹೋದರಿ ಬಟ್ಟೆ ಬಿಚ್ಚಿದ್ದಾನೆ. ಆದರೆ ತಾನೇ ಬಟ್ಟೆ ಬಿಚ್ಚಿ ಪೊಲೀಸರು ನನ್ನ ಸಹೋದರಿಗೆ ಕಿರುಕುಳ ನೀಡಿದ್ದಾರೆಂದು ಎಲ್ಲರ ಮುಂದೆ ಸಾಬೀತು ಮಾಡಲು ಪ್ರಯತ್ನ ಮಾಡಿದ್ದಾನೆ.

    ಪೊಲೀಸರು ವಿಚಾರಣೆ ಮಾಡುವಾಗ ನಡೆದ ಘಟನೆಯ ಎಲ್ಲಾ ದೃಶ್ಯವನ್ನು ತಮ್ಮ ಮೊಬೈಲಿನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದರು. ವಿಡಿಯೋದಲ್ಲಿ ವ್ಯಕ್ತಿಯೇ ಸಹೋದರಿ ಬಟ್ಟೆ ಬಿಚ್ಚಿರುವುದು ಸ್ಪಷ್ಟವಾಗಿದ್ದು, ಆರೋಪಿ ಸುಳ್ಳು ಆರೋಪ ಮಾಡಿರುವುದು ತಿಳಿದು ಬಂದಿದೆ. ಬಳಿಕ ಪೊಲೀಸರು ಈ ಕುರಿತು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.

    ವಿಡಿಯೋ ಆಧಾರದ ಮೇಲೆ ಆರೋಪಿ ಬಿಟ್ಟು ತನಿಖೆಯ ವೇಳೆ ತಡೆಯುಂಟು ಮಾಡಿದ್ದ ನಾಲ್ವರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಪೊಲೀಸರು ಎಲ್ಲರನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮನೆಯೊಳಗೆ ಕೂಡಿ ಹಾಕಿದ ಮಗ – ಹಸಿದು ಹಸಿದು 80ರ ತಾಯಿ ದುರ್ಮರಣ

    ಮನೆಯೊಳಗೆ ಕೂಡಿ ಹಾಕಿದ ಮಗ – ಹಸಿದು ಹಸಿದು 80ರ ತಾಯಿ ದುರ್ಮರಣ

    ಲಕ್ನೋ: ಮನೆಯೊಳಗೆಯೇ 80 ವರ್ಷದ ವೃದ್ಧೆಯೊಬ್ಬರು ಮೃತಪಟ್ಟ ಹೃದಯವಿದ್ರಾವಕ ಘಟನೆಯೊಂದು ಉತ್ತರಪ್ರದೇಶದ ಶಹಜಾನ್ ಪುರದಲ್ಲಿ ನಡೆದಿದೆ.

    ಮಗ ತನ್ನ ತಾಯಿಯನ್ನು ಮನೆಯೊಳಗೆ ಕೂಡಿಹಾಕಿದ್ದರಿಂದ ಆಕೆ ಹಸಿವಿನಿಂದಲೇ ಮೃತಪಟ್ಟಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

    ಶಹಜಾನ್ ಪುರದ ರೈಲ್ವೇ ಕಾಲೊನಿಯಲ್ಲಿ ವೃದ್ಧೆ ವಾಸಿಸುತ್ತಿದ್ದ ಮನೆಯೊಳಗಿಂದ ಭಾನುವಾರ ಕೊಳೆತ ವಾಸನೆ ಬರುತ್ತಿತ್ತು. ಇದರಿಂದ ಗಾಬರಿಗೊಂಡ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಘಟನೆ ಬೆಳಕಿಗೆ ಬಂದಿದೆ.

    ಮೃತ ವೃದ್ಧೆಯ ಪುತ್ರ ಸಲಿಲ್ ಚೌಧರಿ ರೈಲ್ವೇ ಉದ್ಯೋಗಿಯಾಗಿದ್ದು, ಕೆಲ ದಿನಗಳಿಂದ ಆತ ಮನೆಯ ಅಕ್ಕ-ಪಕ್ಕ ಕಾಣಿಸಿಕೊಳ್ಳುತ್ತಿರಲಿಲ್ಲ. ತಾಯಿ ಮೃತಪಟ್ಟ ಬಳಿಕವೇ ಆತ ಅಲ್ಲಿಂದ ಪರಾರಿಯಾಗಿರಬೇಕು ಅಂತ ಸ್ಥಳೀಯ ನಿವಾಸಿಗಳು ದೂರಿದ್ದಾರೆ.

    ರೈಲ್ವೇ ನಿಲ್ದಾಣದಲ್ಲಿ ಚೌಧರಿ ಟಿಕೆಟ್ ಕಲೆಕ್ಟ್ ಮಾಡುತ್ತಿದ್ದನು. ಅನುಮತಿ ಇಲ್ಲದೇ ರಜೆ ತೆಗೆದುಕೊಳ್ಳುತ್ತಿದ್ದರಿಂದ ಈ ಹಿಂದೆ 2 ಬಾರಿ ಆತನನ್ನು ಕೆಲಸದಿಂದ ಅಮಾನತು ಮಾಡಲಾಗಿತ್ತು. ಕಳೆದ 2 ತಿಂಗಳಿನಿಂದ ಆತ ಕೆಲಸಕ್ಕೆ ಹಾಜರಾಗುತ್ತಿರಲಿಲ್ಲ ಅಂತ ಸ್ಟೇಷನ್ ಮಾಸ್ಟರ್ ತಿಳಿಸಿದ್ದಾರೆ.

    ಮೂಲತಃ ಲಕ್ನೋ ನಿವಾಸಿಯಾಗಿರೋ ಚೌಧರಿ 2005ರಲ್ಲಿ ಶಹಜಾನ್ ಪುರಕ್ಕೆ ಬಂದಿದ್ದಾನೆ. ಸದ್ಯ ವೃದ್ಧೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಇತ್ತ ಪಾಪಿ ಮಗನ ಪತ್ತೆಗೆ ಬಲೆ ಬೀಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಚಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಬಾಲಕ ಓವನ್‍ನಲ್ಲಿ ಸಿಲುಕಿ ಸಾವು!

    ಚಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಬಾಲಕ ಓವನ್‍ನಲ್ಲಿ ಸಿಲುಕಿ ಸಾವು!

    ಸಾಂದರ್ಭಿಕ ಚಿತ್ರ

    ಲಕ್ನೋ: ಚಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ 15 ವರ್ಷದ ಬಾಲಕನೊಬ್ಬ ಓವನ್ ಒಳಗೆ ಸಿಲುಕಿ ಹೊರಬರಲಾಗದೇ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ಖೈರಪುರ್ ಗ್ರಾಮದಲ್ಲಿ ನಡೆದಿದೆ.

    ದೀಪಕ್ ಜೈಸ್ವಾಲ್ (15) ಮೃತ ಬಾಲಕ. ತಂದೆಯ ಬಿಸ್ಕತ್ ಫ್ಯಾಕ್ಟರಿಯಲ್ಲಿ ದುರಂತ ಸಂಭವಿಸಿದೆ. 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ದೀಪಕ್ ಶನಿವಾರ ತಂದೆಯ ಬಿಸ್ಕತ್ ಫ್ಯಾಕ್ಟರಿಗೆ ನೌಕರರೆಲ್ಲ ತೆರಳಿದ ಮೇಲೆ ಓವನ್ ಬಂದ್ ಮಾಡಲು ತೆರಳಿದ್ದ. ಆದರೆ ಈ ವೇಳೆ ಚಳಿಯಿಂದ ರಕ್ಷಿಸಿಕೊಳ್ಳಲು ಕೆಲ ಸಮಯ ಓವನ್ ಬಳಿ ಕುಳಿತಿದ್ದ ದೀಪಕ್ ಆಕಸ್ಮಿಕವಾಗಿ ಒಳಗೆ ಸಿಲುಕಿಕೊಂಡಿದ್ದಾನೆ. ಈ ವೇಳೆ ಓವನ್ ಬಾಗಿಲು ತೆರಯಲು ಆಗದ ಕಾರಣ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಅಧಿಕಾರಿ ಆರ್ ಪಿ ಸಿಂಗ್ ತಿಳಿಸಿದ್ದಾರೆ.

    ಸಾಂದರ್ಭಿಕ ಚಿತ್ರ

    ದೀಪಕ್ ಮನೆಯ ನೆಲ ಮಹಡಿಯಲ್ಲೇ ತಂದೆ ಬಿಸ್ಕತ್ ಫ್ಯಾಕ್ಟರಿ ನಡೆಸುತ್ತಿದ್ದು, ಫ್ಯಾಕ್ಟರಿಗೆ ತೆರಳಿದ ಆತ ಹೆಚ್ಚಿನ ಸಮಯ ಬಾರದ ಕಾರಣ ಪೋಷಕರು ಹುಡುಕಾಟ ನಡೆಸಿದ್ದಾರೆ. ಆದರೆ ಆಕಸ್ಮಿಕವಾಗಿ ಓವನ್ ಒಳಗೆ ಸಿಲುಕಿದ್ದ ದೀಪಕ್ ಜೀವಂತವಾಗಿಯೇ ಬೆಂದು ಹೋಗಿದ್ದ. ಈ ವೇಳೆ ಪೋಷಕರು ಓವನ್ ಬಾಗಿಲು ಒಡೆದು ದೀಪಕ್‍ನನ್ನು ಹೊರತೆಗೆದಿದ್ದು, ತೀವ್ರ ಸುಟ್ಟಗಾಯಗಳಿಂದ ಬಳಲುತ್ತಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆಸಿದ್ದರು. ಆದರೆ ಆಸ್ಪತ್ರೆಗೆ ತೆರಳುವ ಮುನ್ನವೇ ಬಾಲಕ ಮೃತ ಪಟ್ಟಿದ್ದ.

    ಮೃತ ಬಾಲಕ ದೀಪಕ್ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಕೊಡಲಾಗಿದೆ ಎಂದು ಎಸ್‍ಪಿ ಮಾಹಿತಿ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬುಲಂದಶಹರ್ ಹಿಂಸಾಚಾರ ಪ್ರಕರಣ: ಪೊಲೀಸ್ ಅಧಿಕಾರಿ ಗುಂಡೇಟು – ಶಂಕಿತ ಆರೋಪಿ ಯೋಧನ ಬಂಧನ

    ಬುಲಂದಶಹರ್ ಹಿಂಸಾಚಾರ ಪ್ರಕರಣ: ಪೊಲೀಸ್ ಅಧಿಕಾರಿ ಗುಂಡೇಟು – ಶಂಕಿತ ಆರೋಪಿ ಯೋಧನ ಬಂಧನ

    ಲಕ್ನೋ: ಉತ್ತರಪ್ರದೇಶದ ಬುಲಂಧಶಹರ್ ನಲ್ಲಿ ನಡೆದ ಹಿಂಸಾಚಾರದಲ್ಲಿ ಪೊಲೀಸ್ ಅಧಿಕಾರಿಯ ಹತ್ಯೆಗೆ ಸಂಬಂಧಿಸಿದಂತೆ ಶಂಕಿತ ಆರೋಪಿ ಯೋಧನನ್ನು ಎಸ್‍ಟಿಎಫ್ ಬಂಧಿಸಿದೆ.

    ಈ ಕುರಿತು ಮಾಹಿತಿ ನೀಡಿರುವ ಎಸ್‍ಟಿಎಫ್ ಅಧಿಕಾರಿ ಅಭಿಷೇಕ್ ಸಿಂಗ್, ಬುಲಂದಶಹರ್ ಪ್ರಕರಣದ ಶಂಕಿತ ಆರೋಪಿ `ಜಿತು ಫೌಜಿ’ಯನ್ನು ಬಂಧಿಸಿದ್ದೇವೆ. ಶನಿವಾರ ಮಧ್ಯರಾತ್ರಿ ಸೇನೆ ಜಿತು ಫೌಜಿಯನ್ನು ನಮ್ಮ ವಶಕ್ಕೆ ನೀಡಿತ್ತು. ಸದ್ಯ ಪ್ರಾಥಮಿಕ ತನಿಖೆಯನ್ನು ಪೂರ್ಣಗೊಳಿಸಿದ್ದೇವೆ. ಬಂಧಿತ ಜಿತುರನ್ನು ಬುಲಂದಶಹರ್ ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗುತ್ತದೆ ಎಂದು ಹೇಳಿದ್ದಾರೆ.

    ಯಾರಿದು ಜಿತು ಫೌಜಿ?
    ಜಿತೆಂದರ್ ಮಲ್ಲಿಕ್ ಅಲಿಯಾಸ್ ಜಿತು ಫೌಜಿ ಭಾರತೀಯ ಸೇನೆಯ 22ನೇ ರಾಷ್ಟ್ರೀಯ ರೈಫಲ್ಸ್ ಪಡೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಜಿತು ಮೂಲತಃ ಬುಲಂದಶಹರ್ ನಿವಾಸಿಯಾಗಿದ್ದರು. 15 ದಿನಗಳ ರಜೆ ಮೇರೆಗೆ ಊರಿಗೆ ಬಂದಿದ್ದಾಗ, ಹಿಂಸಾಚಾರ ನಡೆದ ಸಂದರ್ಭದಲ್ಲಿ ಜಿತು ಅಲ್ಲಿಯೇ ಇದ್ದರು. ಹಿಂಸಾಚಾರದಂದು ಅವರ ಚಲನವಲನಗಳು ವಿಡಿಯೋದಲ್ಲಿ ದಾಖಲಾಗಿತ್ತು.

    ಪೊಲೀಸ್ ಅಧಿಕಾರಿ ಸುಭೋದ್ ಕುಮಾರ್ ಹಾಗೂ ಯುವಕ ಮೃತಪಟ್ಟ ನಂತರ ನೇರವಾಗಿ ಜಿತು ಕಾಶ್ಮೀರದ ಸೋಪೂರ್‍ಗೆ ತೆರಳಿದ್ದರು. ಬುಲಂದಶಹರ್ ಹಿಂಸಾಚಾರ ಪ್ರಕರಣದಲ್ಲಿ ಯೋಧನ ಕೈವಾಡ ಹಿನ್ನೆಲೆಯಲ್ಲಿ, ಸೇನೆ ಶುಕ್ರವಾರ ಜಮ್ಮು ಕಾಶ್ಮೀರದ ಸೋಪೂರ್ ಪಟ್ಟಣದಲ್ಲಿ ವಶಕ್ಕೆ ಪಡೆದಿತ್ತು. ಬಳಿಕ ಶನಿವಾರ ಎಸ್‍ಟಿಎಫ್‍ಗೆ ಹಸ್ತಾಂತರಿಸಿತ್ತು.

    ಏನಿದು ಬುಲಂದಶಹರ್ ಪ್ರಕರಣ?
    ಕಳೆದ ಸೋಮವಾರ ಬುಲಂದ್‍ಶಹರ್ ಗ್ರಾಮದ ಹೊರವಲಯದಲ್ಲಿ ಪ್ರಾಣಿಯ ಪಳಿಯುಳಿಕೆ ಪತ್ತೆಯಾಗಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಕೆಲ ಬಲಪಂಥಿಯ ಮುಖಂಡರು ಮತ್ತು ಗ್ರಾಮಸ್ಥರು ಸಯನಾ ರೋಡ್ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ರಸ್ತೆ ಸಂಚಾರ ಸುಗಮಗೊಳಿಸಲು ಪ್ರಯತ್ನಿಸಿದ್ದರು. ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ವಾಗ್ವಾದ ಆರಂಭವಾಗಿ, ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತ್ತು. ಉದ್ರಿಕ್ತರು ಪೊಲೀಸ್ ಠಾಣೆ ಮತ್ತು ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂದಾದ ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆಸಿದ್ದರು. ಈ ವೇಳೆ ಗಲಭೆಯಿಂದಾಗಿ ಪೊಲೀಸ್ ಅಧಿಕಾರಿ ಹಾಗೂ ಇಬ್ಬರು ಮೃತಪಟ್ಟಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪತ್ನಿಯರನ್ನ ಅದ್ಲು-ಬದ್ಲು ಮಾಡಿ ರಾತ್ರಿ ಕಳೆಯಲು ಪ್ಲಾನ್..!

    ಪತ್ನಿಯರನ್ನ ಅದ್ಲು-ಬದ್ಲು ಮಾಡಿ ರಾತ್ರಿ ಕಳೆಯಲು ಪ್ಲಾನ್..!

    – ಒಪ್ಪದ ಪತ್ನಿಯ ಕತ್ತು ಹಿಸುಕಿ ಕೊಲೆಗೈದ ಭೂಪ

    ಲಕ್ನೋ: ಪತಿಯೊಬ್ಬ ತನ್ನ ಪತ್ನಿಯನ್ನು ಬದಲಿಸಿ ಆಕೆಯ ಸಹೋದರಿ ಜೊತೆ ಒಂದು ರಾತ್ರಿ ಕಳೆಯುವ ಪ್ಲಾನ್ ಮಾಡಿದ್ದು, ಕೊನೆಗೆ ಪತ್ನಿಯನ್ನೇ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬಿಜನೌರ್ ಜಿಲ್ಲೆಯಲ್ಲಿ ನಡೆದಿದೆ.

    ಸದ್ಯಕ್ಕೆ ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ವಿಶಾಲ್ ಬಂಧಿತ ಆರೋಪಿ. ಈತನಿಗೆ ತನ್ನ ಪತ್ನಿ ಮೇಲೆ ಪ್ರೀತಿಯಿರಲಿಲ್ಲ. ಆದರೆ ಪತ್ನಿಯ ಸಹೋದರಿಯನ್ನು ಪ್ರೀತಿಸುತ್ತಿದ್ದನು. ಪ್ರೀತಿಗಿಂತ ಆತ ಪತ್ನಿಯ ಸಹೋದರಿಯ ಜೊತೆ ಸಂಬಂಧ ಬೆಳೆಸಲು ನಿರ್ಧರಿಸಿದ್ದು, ಒಂದು ರಾತ್ರಿ ಆಕೆ ಜೊತೆ ಕಳೆಯುವುದೇ ಆತನ ಉದ್ದೇಶವಾಗಿತ್ತು.

    ಇತ್ತ ಮೃತ ಮಹಿಳೆಯ ಸಹೋದರಿಯ ಪತಿ ಕೂಡ ತನ್ನ ಪತ್ನಿಯನ್ನು ಪ್ರೀತಿಸುತ್ತಿರಲಿಲ್ಲ. ಬದಲಿಗೆ ಮೃತ ಮಹಿಳೆಯನ್ನು ಪ್ರೀತಿ ಮಾಡುತ್ತಿದ್ದನು. ಆರೋಪಿ ವಿಶಾಲ್ ಮತ್ತು ಮೃತ ಸಹೋದರಿಯ ಪತಿ ಇಬ್ಬರು ತಮ್ಮ ಪತ್ನಿಯರ ಬದಲು ಬೇರೆಯವರ ಪತ್ನಿಯನ್ನು ಇಷ್ಟಪಟ್ಟಿದ್ದು, ಇಬ್ಬರು ಅವರ ಜೊತೆ ಒಂದು ರಾತ್ರಿ ಕಳೆಯಲು ಇಚ್ಛಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಅದರಂತೆಯೇ ಇಬ್ಬರು ಪತಿಯರು ಕುಳಿತು ಮಾತನಾಡಿ, ತಮ್ಮ ತಮ್ಮ ಪತ್ನಿಯರನ್ನು ಅದಲು ಬದಲು ಮಾಡಿಕೊಳ್ಳಲು ಪ್ಲಾನ್ ಮಾಡಿದ್ದರು. ಅವರ ಪ್ಲಾನ್ ಪ್ರಕಾರ ಈ ಬಗ್ಗೆ ತಮ್ಮ ತಮ್ಮ ಪತ್ನಿಯರಿಗೆ ವಿಚಾರ ತಿಳಿಸಿದ್ದಾರೆ. ಇದಕ್ಕೆ ಮೃತ ಮಹಿಳೆ ಸಹೋದರಿ ಒಪ್ಪಿಗೆ ಸೂಚಿಸಿದ್ದಾಳೆ. ಆದರೆ ಮೃತ ಮಹಿಳೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಕೋಪಗೊಂಡ ಪತಿಯೇ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

    ಪತಿಯ ಪ್ಲಾನ್ ಗೆ ಒಪ್ಪದ ಮಹಿಳೆ ಪತಿಗೆ ಚಪ್ಪಲಿಯಿಂದ ಹೊಡೆದಿದ್ದರು. ಇದರಿಂದ ಕೋಪಗೊಂಡಿದ್ದ ಆರೋಪಿ ವಿಶಾಲ್ ಆಕೆಯನ್ನು ತವರು ಮನೆಗೆ ಕಳುಹಿಸಿದ್ದಾನೆ. ಬಳಿಕ ಕರೆ ಮಾಡಿ ಮನೆ ಹೊರಗೆ ಕರೆದಿದ್ದು, ಮಹಿಳೆ ಬರುತ್ತಿದ್ದಂತೆ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಆರೋಪಿ ವಿಶಾಲ್ ಕೊಲೆ ಮಾಡುವಾಗ ಮೃತ ಮಹಿಳೆಯ ಸಹೋದರಿ ಪತಿ ಕೂಡ ಅಲ್ಲೇ ಇದ್ದ ಎನ್ನಲಾಗಿದೆ. ಆದ್ದರಿಂದ ಪೊಲೀಸರು ಇಬ್ಬರನ್ನೂ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬುಲಂದಶಹರ್ ಹಿಂಸಾಚಾರ ಪ್ರಕರಣ: ಗುಂಡೇಟಿನಿಂದ ಪೊಲೀಸ್ ಅಧಿಕಾರಿಯ ಸಾವು

    ಬುಲಂದಶಹರ್ ಹಿಂಸಾಚಾರ ಪ್ರಕರಣ: ಗುಂಡೇಟಿನಿಂದ ಪೊಲೀಸ್ ಅಧಿಕಾರಿಯ ಸಾವು

    ಲಕ್ನೋ: ಉತ್ತರಪ್ರದೇಶದ ಬುಲಂದಶಹರ್ ನಲ್ಲಿ ನಡೆದ ಹಿಂಸಾಚಾರ ಗುಂಡೇಟು ತಗುಲಿ ಪೊಲೀಸ್ ಅಧಿಕಾರಿ ಮೃತಪಟ್ಟಿರುವ ಬಗ್ಗೆ ಮರಣೋತ್ತರ ವರದಿ ಬಂದಿದೆ.

    ಸೋಮವಾರ ಬುಲಂದಶಹರ್ ನಲ್ಲಿ ಗೋ ಹತ್ಯೆ ಸಂಬಂಧ ಆರಂಭವಾದ ಪ್ರತಿಭಟನೆ ವಿಕೋಪಕ್ಕೆ ತಿರುಗಿತ್ತು. ಪರಿಣಾಮ ಎಸ್‍ಐ ಸುಭೋದ್ ಕುಮಾರ್ ಸೇರಿದಂತೆ ಇಬ್ಬರ ಹತ್ಯೆಯಾಗಿತ್ತು. ಮಂಗಳವಾರ ಮೃತ ಪೊಲೀಸ್ ಅಧಿಕಾರಿಯ ಮರಣೋತ್ತರ ವರದಿ ಬಂದಿದ್ದು, ವರದಿಯಲ್ಲಿ ತಲೆಗೆ 3.2ಎಂಎಂ ಬೋರ್ ಬುಲೆಟ್ ನಿಂದಾಗ ಉಂಟಾದ ಗಂಭೀರ ಗಾಯದಿಂದ ಸುಭೋಧ್ ಸಾವನ್ನಪ್ಪಿರುವ ಬಗ್ಗೆ ಉಲ್ಲೇಖವಾಗಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಮೀರತ್ ನ ಹೆಚ್ಚುವರಿ ಪೊಲೀಸ್ ನಿರ್ದೇಶಕ ಪ್ರಶಾಂತ್ ಕುಮಾರ್, ಎಸ್‍ಐ ಸುಭೋಧ್ ಕುಮಾರ್ ಹತ್ಯೆ ಪ್ರಕರಣಕ್ಕೆ ಸಂಬಂಧ ಎಫ್‍ಐಆರ್ ದಾಖಲಾಗಿದ್ದು, ಈಗಾಗಲೇ ನಾಲ್ಕು ಆರೋಪಿಗಳನ್ನು ಬಂಧಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಶೀಘ್ರವೇ ಮತ್ತಷ್ಟು ಆರೋಪಿಗಳನ್ನು ಬಂಧಿಸಲಾಗುತ್ತದೆ. ಯುಪಿ ಸರ್ಕಾರ ಮೃತಪಟ್ಟಿರುವ ಪೊಲೀಸ್ ಅಧಿಕಾರಿಗೆ 50 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಅವರ ಪತ್ನಿಗೆ ಪಿಂಚಣಿ ಹಾಗೂ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ಕೊಡುವುದಾಗಿ ಸರ್ಕಾರ ಭರವಸೆ ನೀಡಿದೆ ಎಂದು ಹೇಳಿದ್ದಾರೆ.

    ಪ್ರಕರಣವನ್ನು ಈಗಾಗಲೇ ವಿಶೇಷ ತನಿಖಾ ತಂಡ(ಎಸ್‍ಐಟಿ)ಕ್ಕೆ ವಹಿಸಲಾಗಿದ್ದು, ಮೀರತ್ ಐಜಿ ನೇತೃತ್ವದಲ್ಲಿ ತಂಡವನ್ನು ರಚಿಸಿ ತನಿಖೆ ಆರಂಭಿಸಲಾಗಿದೆ. ಈ ತಂಡ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಿದ್ದು, ಹಿಂಸಾಚಾರ ಹೇಗೆ ನಿರ್ಮಾಣವಾಯಿತು? ಪೊಲೀಸ್ ಅಧಿಕಾರಿಯ ಜೊತೆ ಎಷ್ಟು ಸಿಬ್ಬಂದಿಗಳಿದ್ದರು? ಎಷ್ಟು ಜನ ಸ್ಥಳದಿಂದ ಓಡಿ ಹೋಗಿದ್ದಾರೆನ್ನುವ ಮಾಹಿತಿಗಳನ್ನು ಕಲೆಹಾಕಲಿದೆ. ಅಲ್ಲದೇ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿಯ ವಿರುದ್ಧ ದೂರು ದಾಖಲಾಗಿದೆ ಎಂದು ತಿಳಿಸಿದರು.

    ಏನಿದು ಪ್ರಕರಣ?
    ಸೋಮವಾರ ಬುಲಂದ್‍ಶಹರ್ ಗ್ರಾಮದ ಹೊರವಲಯದಲ್ಲಿ ಪ್ರಾಣಿಯ ಪಳಿಯುಳಿಕೆ ಪತ್ತೆಯಾಗಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಕೆಲ ಬಲಪಂಥಿಯ ಮುಖಂಡರು ಮತ್ತು ಗ್ರಾಮಸ್ಥರು ಸಯನಾ ರೋಡ್ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ರಸ್ತೆ ಸಂಚಾರ ಸುಗಮಗೊಳಿಸಲು ಪ್ರಯತ್ನಿಸಿದ್ದರು. ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ವಾಗ್ವಾದ ಆರಂಭವಾಗಿ, ಪ್ರತಿಭಟನೆ ಹಿಂಸಾರೂಪಕ್ಕೆ ತಿರಿಗಿತ್ತು. ಉದ್ರಿಕ್ತರು ಪೊಲೀಸ್ ಠಾಣೆ ಮತ್ತು ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂದಾದ ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆಸಿದ್ದರು. ಈ ವೇಳೆ ಗಲಭೆಯಿಂದಾಗಿ ಪೊಲೀಸ್ ಅಧಿಕಾರಿ ಹಾಗೂ ಇಬ್ಬರು ಮೃತಪಟ್ಟಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಸ್ತೆ ಸರಿಯಿಲ್ಲದ್ದಕ್ಕೆ ಮಂಚದಲ್ಲೇ ಮಹಿಳೆಯನ್ನು ಹೊತ್ತೊಯ್ದ ಐವರು ಪೊಲೀಸರಿಗೆ ಸನ್ಮಾನ

    ರಸ್ತೆ ಸರಿಯಿಲ್ಲದ್ದಕ್ಕೆ ಮಂಚದಲ್ಲೇ ಮಹಿಳೆಯನ್ನು ಹೊತ್ತೊಯ್ದ ಐವರು ಪೊಲೀಸರಿಗೆ ಸನ್ಮಾನ

    ಲಕ್ನೋ: ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ಮಂಚದಲ್ಲಿ ಹೊತ್ತು ಆಸ್ಪತ್ರೆಗೆ ದಾಖಲಿಸಿದ ಉತ್ತರ ಪ್ರದೇಶದ ಐವರು ಪೊಲೀಸರಿಗೆ ಪ್ರಮಾಣ ಪತ್ರ ನೀಡಿ ಸನ್ಮಾನಿಸಲಾಗಿದೆ.

    ಬಾಂದ ಜಿಲ್ಲೆಯಲ್ಲಿ ಸೋಮವಾರ ಯಶೋಧ(48) ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲು 500 ಮೀಟರ್ ಅಂದರೆ ಅರ್ಧ ಕಿ.ಮೀವರೆಗೂ ಮಂಚದಲ್ಲೇ ಹೊತ್ತುಕೊಂಡು ಸಾಗಿದ್ದಾರೆ. ಪೊಲೀಸರು ಯಶೋಧ ಅವರನ್ನು ಮಂಚದಲ್ಲಿ ಹೊತ್ತುಕೊಂಡು ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಯಶೋಧ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ. ಐವರು ಪೊಲೀಸರು 500 ಮೀ. ಯಶೋಧ ಅವರನ್ನು ಮಂಚದಲ್ಲಿ ಹೊತ್ತುಕೊಂಡು ನಂತರ ಪಿಆರ್‌ವಿ(ಪೊಲೀಸ್ ರೆಸ್ಪಾನ್ಸ್ ವೆಹಿಕಲ್) ವಾಹನದ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಐವರು ಪೊಲೀಸರಲ್ಲಿ ಇಬ್ಬರು ನರೈನಿ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ, ಉಳಿದ ಮೂವರು ಪೊಲೀಸರು ಡಯಲ್ 100ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

    ಭಾನುವಾರ ಯಶೋಧ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ವಿಷಯ ನಮಗೆ ತಿಳಿಯಿತು. ಆಗ ನಾವು ಸಂತೋಷ್ ಕುಮಾರ್ ಹಾಗೂ ರೋಹಿತ್ ಯಾದವ್‍ನನ್ನು ಬಲ್ದು ಗ್ರಾಮಕ್ಕೆ ಮಾಹಿತಿ ಸಂಗ್ರಹಿಸಲು ಕಳುಹಿಸಿದ್ದೇವು. ಇದೇ ವೇಳೆ ಪಿಆರ್‌ವಿ ವಾಹನ ಕೂಡ ಘಟನೆಯ ಸ್ಥಳಕ್ಕೆ ತಲುಪಿದ್ದು, ಮೂವರು ಪೊಲೀಸರು ಕಾರ್ಯನಿರ್ವಹಿಸುತ್ತಿದ್ದರು. ಆ ಗ್ರಾಮಕ್ಕೆ ತಲುಪಿದಾಗ ಮಹಿಳೆಯ ಮನೆಗೆ ವಾಹನದಲ್ಲಿ ಹೋಗಲು ಸಾಧ್ಯವಿಲ್ಲ ಎನ್ನುವುದು ತಿಳಿಯಿತು. ಹೀಗಾಗಿ ಮಹಿಳೆಯನ್ನು ಮಂಚದಲ್ಲಿ ಪಿಆರ್‌ವಿ ವಾಹನವರೆಗೂ ತನ್ನ ಹೆಗಲ ಮೇಲೆ ಹೊತ್ತುಕೊಂಡು ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ಎಸ್‍ಎಚ್‍ಒ ಅಧಿಕಾರಿ ಪ್ರಕಾಶ್ ಸರೋಜ್ ತಿಳಿಸಿದ್ದಾರೆ.

    ಈ ಘಟನೆ ಬಗ್ಗೆ ತನಿಖೆ ಮಾಡಿದಾಗ ಹಣದ ವಿಚಾರವಾಗಿ ಯಶೋಧ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿಯಿತು. ಆದರೆ ಈ ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಸಿಗಲಿಲ್ಲ. ನಾವು ಮಹಿಳೆಯ ಮನೆ ತಲುಪುವವರೆಗೂ ಅಲ್ಲಿದ್ದ ಸ್ಥಳೀಯರು ಬೆಂಕಿಯನ್ನು ನಂದಿಸಿದ್ದರು. ಮಹಿಳೆಯ ಮನೆಯ ಜಾಗ ಹುಡುಕಲು ತುಂಬಾ ಕಷ್ಟವಾಯಿತು. ಮಹಿಳೆಯ ಮನೆಗೆ ಯಾವುದೇ ವಾಹನದಲ್ಲಿ ಹೋಗಲು ಸಾಧ್ಯವಿರಲಿಲ್ಲ. ಹಾಗಾಗಿ ಪಿಆರ್‌ವಿ ವಾಹನವನ್ನು ಮುಖ್ಯರಸ್ತೆಯಲ್ಲೇ ಪಾರ್ಕ್ ಮಾಡಿದ್ದೇವು. ಮುಖ್ಯರಸ್ತೆಯಿಂದ ಮಹಿಳೆಯ ಮನೆಗೆ ಅರ್ಧ ಕಿ.ಮೀ ದೂರವಿತ್ತು. ಹಾಗಾಗಿ ಮಹಿಳೆಯನ್ನು ಮಂಚದ ಮೇಲೆ ಮಲಗಿಸಿ ಹೊತ್ತುಕೊಂಡು ಹೋಗಲು ನಿರ್ಧರಿಸಿದ್ದೇವು ಎಂದು ಪ್ರಕಾಶ್ ಸರೋಜ್ ಹೇಳಿದ್ದಾರೆ.

    ಈ ಪ್ರಕರಣದಲ್ಲಿ ಪೊಲೀಸರ ಕರ್ತವ್ಯನಿಷ್ಠೆಯನ್ನು ತೋರಿಸುತ್ತದೆ. ಮಹಿಳೆಗೆ ಚಿಕಿತ್ಸೆಯ ಅವಶ್ಯಕತೆಯಿತ್ತು. ಪೊಲೀಸರ ಸಮಯಪ್ರಜ್ಞೆದಿಂದ ಮಹಿಳೆಗೆ ಚಿಕಿತ್ಸೆ ದೊರೆಯಿತು ಹಾಗೂ ಅವರ ಪ್ರಾಣ ಉಳಿಯಿತು. ನಾನು ಐವರು ಪೊಲೀಸರನ್ನು ಅವರ ಈ ಒಳ್ಳೆಯ ಕೆಲಸಕ್ಕಾಗಿ ಸನ್ಮಾನ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಸನ್ಮಾನ ಹೊರತಾಗಿ ಅವರಿಗೆ ನಗದು ನೀಡುತ್ತೇವೆ ಎಂದು ಬಾಂದ ಜಿಲ್ಲೆಯ ಎಸ್‍ಪಿ ತಿಳಿಸಿದ್ದಾರೆ.

    https://twitter.com/PoliceSewakHai/status/1069318818542034952

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 9 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ಕೊಟ್ಟ ಯುವಕ

    9 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ಕೊಟ್ಟ ಯುವಕ

    ಲಕ್ನೋ: ಉತ್ತರ ಪ್ರದೇಶದ ಮುಜಾಫರ್‍ನಗರ ಜಿಲ್ಲೆಯ ಪಿನ್ನಾ ಗ್ರಾಮದಲ್ಲಿ ಯುವಕನೊಬ್ಬ 9 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ಕೊಟ್ಟಿರುವ ಘಟನೆ ಸೋಮವಾರದಂದು ನಡೆದಿದೆ.

    ಪಿನ್ನಾ ಗ್ರಾಮದ ನಿವಾಸಿ ಪ್ರವೀನ್ ಕುಮಾರ್ (20) ಕಿರುಕುಳ ಕೊಟ್ಟಿರುವ ಆರೋಪಿ. ಪ್ರವೀನ್ ತನ್ನ ಮನೆ ಹತ್ತಿರವಿದ್ದ ಬಾಲಕನನ್ನು ಗದ್ದೆಗೆ ಕರೆದೊಯ್ದು ಆತನಿಗೆ ಲೈಂಗಿಕ ಕಿರುಕುಳ ನೀಡಿ, ಈ ವಿಷಯವನ್ನು ಯಾರ ಬಳಿಯು ಹೇಳಬಾರದು ಎಂದು ಹೆದರಿಸಿದ್ದನು. ಆದರೆ ಘಟನೆಯಿಂದ ಭಯಗೊಂಡಿದ್ದ ಬಾಲಕ ಮನೆಗೆ ಬಂದು ತನ್ನ ತಂದೆಗೆ ನಡೆದ ವಿಷಯವನ್ನು ತಿಳಿಸಿದ್ದಾನೆ.

    ಮಾಹಿತಿ ತಿಳಿದ ತಕ್ಷಣ ಬಾಲಕನ ತಂದೆ ಆರೋಪಿ ಪ್ರವೀಣ್ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತನನ್ನು ಬಂಧಿಸಲು ಪೊಲೀಸರು ಹುಡುಕಾಟ ನಡೆಸಿದ್ದಾರೆ.

    ಉತ್ತರ ಪ್ರದೇಶದಲ್ಲಿ ಈ ತರಹದ ಘಟನೆಗಳು ಹಿಂದೆಯು ನಡೆದಿತ್ತು. ಮಥುರಾದಲ್ಲಿ ಒಬ್ಬ ಬಾಲಕನಿಗೆ ಇಬ್ಬರು ಯುವಕರು ಲೈಂಗಿಕ ಕಿರುಕುಳವನ್ನು ನೀಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದ ಸಲ್ಮಾನ್ ಹಾಗೂ ಹಾಸಿನ್ ಎಂಬ ಆರೋಪಿಗಳನ್ನು ಸೋಮವಾರವಷ್ಟೆ ಬಂಧಿಸಿದ್ದೇವೆ. ಆರೋಪಿ ಪ್ರವೀಣ್‍ನನ್ನು ಕೂಡ ಆದಷ್ಟು ಬೇಗ ಬಂಧಿಸುತ್ತೇವೆ ಎಂದು ಮುಜಾಫರ್‍ನಗರದ ಪೊಲೀಸ್ ಅಧಿಕಾರಿ ಸಂತೋಷ್ ಕುಮಾರ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv