Tag: lucknow

  • ಮೊದ್ಲ ರಾತ್ರಿಯೇ ಪತಿ, ಆತನ ಸಂಬಂಧಿಯಿಂದ ಗ್ಯಾಂಗ್‍ರೇಪ್

    ಮೊದ್ಲ ರಾತ್ರಿಯೇ ಪತಿ, ಆತನ ಸಂಬಂಧಿಯಿಂದ ಗ್ಯಾಂಗ್‍ರೇಪ್

    ಲಕ್ನೋ: ಮದುವೆಯಾದ ಮೊದಲ ರಾತ್ರಿಯೇ ನವವಧುವಿನ ಮೇಲೆ ಆಕೆಯ ಪತಿ ಮತ್ತು ಆತನ ಸಂಬಂಧಿ ಇಬ್ಬರು ಸೇರಿಕೊಂಡು ಸಾಮೂಹಿಕ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಮುಜಪ್ಫರ್ ನಗರದಲ್ಲಿ ನಡೆದಿದೆ.

    ಈ ಘಟನೆ ಮುಜಪ್ಫರ್ ನಗರದ ಹೊರವಲಯದಲ್ಲಿ ಮಾರ್ಚ್ 6 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 26 ವರ್ಷದ ನವವಧುವಿನ ಮೇಲೆ ಆಕೆಯ ಪತಿ ಮತ್ತು ಆತನ ಸೋದರಳಿಯ ಮದುವೆಯ ಮೊದಲ ರಾತ್ರಿಯೇ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಸದ್ಯಕ್ಕೆ ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸಹೋದರಿಯ ಪತಿ ಕುಟುಂಬದವರಿಗೆ ಹಣದ ದುರಾಸೆ ಇದೆ. ಮದುವೆಯ ವೇಳೆ ವರದಕ್ಷಿಣೆಯನ್ನು ತೆಗೆದುಕೊಂಡಿದ್ದರು. ಅಷ್ಟೇ ಅಲ್ಲದೇ ಮದುವೆಗೆ ನಾನು 7 ಲಕ್ಷ ರೂ. ಖರ್ಚು ಮಾಡಿದ್ದೆ. ಆದರೂ ಹಣದ ಆಸೆಗಾಗಿ ನನ್ನ ಸಹೋದರಿಯ ಮೇಲೆ ಇಬ್ಬರು ಸೇರಿಕೊಂಡು ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆಯ ಸಹೋದರ ಹೇಳಿದ್ದಾರೆ.

    ಈ ಕುರಿತು ಪೊಲೀರು ಐಪಿಸಿ ಮತ್ತು ವರದಕ್ಷಿಣೆ ಕಾಯ್ದೆಗೆ ಸಂಬಂಧಿಸಿದಂತೆ ಆರೋಪಿಗಳು ಮತ್ತು ಕುಟುಂಬದ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ. ಸಂತ್ರಸ್ತೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಪೊಲೀಸರು ಈ ಕುರಿತು ತನಿಖೆ ಮಾಡುತ್ತಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಡಿಯೋ ನೋಡಿಕೊಂಡು ಮಗುವಿಗೆ ಜನ್ಮ – ಅವಿವಾಹಿತೆ, ಮಗು ಸಾವು

    ವಿಡಿಯೋ ನೋಡಿಕೊಂಡು ಮಗುವಿಗೆ ಜನ್ಮ – ಅವಿವಾಹಿತೆ, ಮಗು ಸಾವು

    ಲಕ್ನೋ: ಅವಿವಾಹಿತೆ ಗರ್ಭಿಣಿಯೊಬ್ಬಳು ಯೂಟ್ಯೂಬ್‍ನಲ್ಲಿ ವಿಡಿಯೋ ನೋಡಿ ಮಗುವಿಗೆ ಜನ್ಮ ನೀಡಲು ಮುಂದಾದಾಗ ತೀವ್ರ ರಕ್ತಸ್ರಾವದಿಂದ ತಾಯಿ ಮತ್ತು ಮಗು ಮೃತಪಟ್ಟಿರುವ ಘಟನೆ ಸೋಮವಾರ ಉತ್ತರಪ್ರದೇಶದ ಗೋರಖ್‍ಪುರದಲ್ಲಿ ನಡೆದಿದೆ.

    ಯುವತಿ ಮಗುವಿಗೆ ಜನ್ಮ ನೀಡುವಾಗ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾಳೆ. ಈ ವೇಳೆ ಮನೆಯ ಮಾಲೀಕ ಹಾಗೂ ಅಕ್ಕಪಕ್ಕದ ಮನೆಯವರು ಯುವತಿಯ ರೂಮಿನ ಹೊರಗೆ ರಕ್ತವನ್ನು ನೋಡಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸುವಾಗ ಯುವತಿಯ ಮೊಬೈಲಿನಲ್ಲಿ ವಿಡಿಯೋ ಪ್ಲೇ ಆಗುತ್ತಿತ್ತು.

    ಪೊಲೀಸರ ಪ್ರಕಾರ ಯುವತಿ ಬಹರಾಯಿಚ್‍ನಲ್ಲಿ ವಾಸಿಸುತ್ತಿದ್ದಳು. ನಾಲ್ಕು ದಿನಗಳ ಹಿಂದೆಷ್ಟೇ ಆಕೆ ಗೋರಖ್‍ಪುದ ರವಿ ಉಪಾಧ್ಯಾಯ್ ಅವರ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಳು. ಕೆಲವು ದಿನಗಳಲ್ಲಿ ನನ್ನ ತಾಯಿ ನನ್ನ ಜೊತೆ ವಾಸಿಸಲು ಬರುತ್ತಾರೆ ಎಂದು ಯುವತಿ ಮನೆ ಮಾಲೀಕನಿಗೆ ಹೇಳಿದ್ದಳು.

    ಯುವತಿಯ ಕುಟುಂಬದವರು ಆಕೆಗೆ ಗರ್ಭಪಾತ ಮಾಡಿಸಬೇಕು ಎಂದುಕೊಂಡಿದ್ದರು. ಆದರೆ ಯುವತಿ ಇದಕ್ಕೆ ಒಪ್ಪಲಿಲ್ಲ. ಸಮಾಜಕ್ಕೆ ಹೆದರಿ ಯುವತಿ ಕೆಲವು ದಿನಗಳ ಹಿಂದಷ್ಟೇ ಬಚರಾಯಿಚ್‍ನಿಂದ ಗೋರಖ್‍ಪುರಕ್ಕೆ ಬಂದಿದ್ದಳು. ಗೋರಖ್‍ಪುರಕ್ಕೆ ಬಂದ ನಂತರ ಯುವತಿ ಬೇರೆ ಬೇರೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಳು.

    ಪೊಲೀಸರು ಯುವತಿಯ ಮೊಬೈಲ್ ಪರಿಶೀಲಿಸಿ ಆಕೆಯ ಪೋಷಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಳಿಕ ಪೋಷಕರಿಗೆ ಕರೆ ಮಾಡಿದ್ದಾಗ ಯುವತಿ ಅವಿವಾಹಿತೆ ಎಂಬುದು ತಿಳಿದುಬಂದಿದೆ. ಸಾಕ್ಷಿಗಳು ನಾಶ ಆಗಬಾರದೆಂದು ಪೊಲೀಸರು ಯುವತಿ ಇದ್ದ ಕೊಠಡಿಯನ್ನು ಸೀಲ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಲಕ್ನೋದಲ್ಲಾದ ಕಾಶ್ಮೀರಿಗರ ಹಲ್ಲೆ ಖಂಡಿಸಿದ ಪ್ರಧಾನಿ ಮೋದಿ

    ಲಕ್ನೋದಲ್ಲಾದ ಕಾಶ್ಮೀರಿಗರ ಹಲ್ಲೆ ಖಂಡಿಸಿದ ಪ್ರಧಾನಿ ಮೋದಿ

    – ದುಷ್ಕರ್ಮಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಯುಪಿ ಸರ್ಕಾರಕ್ಕೆ ಸೂಚನೆ

    ಲಕ್ನೋ: ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಕೆಲ ಕಿಡಿಗೇಡಿಗಳು ಕಾಶ್ಮೀರಿ ಜನರ ಮೇಲೆ ನಡೆಸಿದ ಹಲ್ಲೆಯನ್ನು ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದಾರೆ.

    ಕಾಶ್ಮೀರಿಗರ ಮೇಲೆ ಹಲ್ಲೆ ಮಾಡಿದ ದುಷ್ಕರ್ಮಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಉತ್ತರ ಪ್ರದೇಶದ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ.

    ಕಾನ್ಪುರ್ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಕೆಲ ದುಷ್ಕರ್ಮಿ ಯುವಕರು ಕಾಶ್ಮೀರಿ ಸಹೋದರರ ಮೇಲೆ ಹಲ್ಲೆ ಮಾಡಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆವಹಿಸಲು ಎಲ್ಲ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡುತ್ತೇನೆ ಎಂದು ಹೇಳಿದರು.

    ಕಾಶ್ಮೀರದ ಜನರ ಮೇಲೆ ಹಲ್ಲೆ ಮಾಡಿದ ಕೆಲವು ಘಟನೆಗಳ ಬಗ್ಗೆ ನಾನು ಕೇಳಿದ್ದೇನೆ. ಈ ನಿಟ್ಟಿನಲ್ಲಿ ದೇಶಕ್ಕೆ ಒಂದು ಸಂದೇಶ ನೀಡುತ್ತಿರುವೆ. ಕಾಶ್ಮೀರದ ಜನರನ್ನು ನಮ್ಮವರು ಎನ್ನುವ ಗುಣ ಎಲ್ಲರಲ್ಲಿಯೂ ಬೆಳೆಯಬೇಕು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದರು.

    ನಮ್ಮ ಹೋರಾಟ ಕಾಶ್ಮೀರಿ ಜನರೊಂದಿಗಲ್ಲ. ಪ್ರತ್ಯೇಕವಾದಿಗಳು ಹಾಗೂ ಉಗ್ರರ ಜೊತೆಗೆ ನಾವು ಹೋರಾಡಬೇಕಿದೆ. ಭಯೋತ್ಪಾದಕರನ್ನು ಹೊಡೆದು ಹಾಕಲು ಕಾಶ್ಮೀರದ ಜನತೆಯ ಸಹಾಯ ಪಡೆಯಬೇಕು ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದರು.

    ಆಗಿದ್ದೇನು?:
    ಇಬ್ಬರು ಕಾಶ್ಮೀರದ ವ್ಯಾಪಾರಿಗಳು ಲಕ್ನೋದಲ್ಲಿ ಬುಧವಾರ ಡ್ರೈ ಫ್ರೂಟ್ಸ್ ಮಾರಾಟ ಮಾಡುತ್ತಿದ್ದರು. ಈ ವೇಳೆ ಕೇಸರಿ ಬಣದ ಗುಂಪೊಂದು ಅವರ ಮೇಲೆ ಹಲ್ಲೆ ಮಾಡಿತ್ತು. ಈ ಕುರಿತು ತನಿಖೆ ಆರಂಭಿಸಿರುವ ಪೊಲೀಸರು ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾಶ್ಮೀರಿ ವ್ಯಾಪಾರಿಗಳಿಗೆ ಮನಬಂದಂತೆ ಥಳಿಸಿದ ಸಾಮಾಜಿಕ ಕಾರ್ಯಕರ್ತರು – ವಿಡಿಯೋ

    ಕಾಶ್ಮೀರಿ ವ್ಯಾಪಾರಿಗಳಿಗೆ ಮನಬಂದಂತೆ ಥಳಿಸಿದ ಸಾಮಾಜಿಕ ಕಾರ್ಯಕರ್ತರು – ವಿಡಿಯೋ

    ಲಕ್ನೋ: ಕಾಶ್ಮೀರ ಮೂಲದ ಇಬ್ಬರು ವ್ಯಾಪಾರಿಗಳಿಗೆ ಕೆಲ ಸಾಮಾಜಿಕ ಕಾರ್ಯಕರ್ತರು ನಡುರಸ್ತೆಯಲ್ಲೇ ಥಳಿಸಿ ಹಲ್ಲೆ ನಡೆಸಿದ ಅಮಾನವೀಯ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

    ಬುಧವಾರ ಸಂಜೆ ಸುಮಾರು 5 ಗಂಟೆ ಹೊತ್ತಿಗೆ ಲಕ್ನೋನ ಡಾಲಿಗಂಜ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈ ದೃಶ್ಯವನ್ನು ಕೆಲವರು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

    2 ಕಾಶ್ಮೀರಿ ವ್ಯಾಪಾರಿಗಳಿಗೆ ದೊಣ್ಣೆ ಹಿಡಿದು ಒಬ್ಬ ವ್ಯಕ್ತಿ ಥಳಿಸುತ್ತಿರುವ ದೃಶ್ಯ ಮೊಬೈಲ್‍ನಲ್ಲಿ ಸೆರೆಯಾಗಿದೆ. ಕೇಸರಿ ಬಣ್ಣದ ಬಟ್ಟೆ ಧರಿಸಿದ್ದ ಗುಂಪೊಂದು ವ್ಯಾಪಾರಿಗಳಿಗೆ ಮನಬಂದಂತೆ ಥಳಿಸಿದ್ದಾರೆ. ಈ ವೇಳೆ ಯಾಕೆ ನಮ್ಮನ್ನು ಹೊಡೆಯುತ್ತಿದ್ದೀರಿ ಎಂದು ಪ್ರಶ್ನಿಸಿದ್ದಕ್ಕೆ, ನೀವು ಕಾಶ್ಮೀರದವರು ಅದಕ್ಕೆ ನಿಮ್ಮನ್ನು ಹೊಡೆಯುತ್ತಿದ್ದೇವೆ ಅಂತ ಆರೋಪಿಗಳು ಉತ್ತರಿಸಿದ್ದಾರೆ. ಈ ವಿಡಿಯೋ ಆಧಾರದ ಮೇಲೆ ಈಗಾಗಲೇ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಉಳಿದ ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಹಿರಿಯ ಪೊಲೀಸ್ ಅಧಿಕಾರಿ, ಉಗ್ರರು ಮಾಡಿರುವ ದಾಳಿಗೆ ಅಮಾಯಕರನ್ನು ಸಿಕ್ಷಿಸುವುದು ತಪ್ಪು. ಈ ರೀತಿ ಮಾಡಿ ಕಾನೂನನ್ನು ನಿಮ್ಮ ಕೈಗೆ ತೆಗೆದುಕೊಳ್ಳಬೇಡಿ. ಸುಮ್ಮನೆ ಅಮಾಯಕರಿಗೆ ತೊಂದರೆ ಕೊಡಬೇಡಿ ಅಂತ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸರ್ಕಾರದ ವೈಫಲ್ಯ ಮರೆಮಾಚಲು ಮೋದಿಯಿಂದ ಉಗ್ರರ ದಾಳಿ ಬಳಕೆ: ಮಾಯಾವತಿ

    ಸರ್ಕಾರದ ವೈಫಲ್ಯ ಮರೆಮಾಚಲು ಮೋದಿಯಿಂದ ಉಗ್ರರ ದಾಳಿ ಬಳಕೆ: ಮಾಯಾವತಿ

    ಲಕ್ನೋ: ತಮ್ಮ ಸರ್ಕಾರದ ವೈಫಲ್ಯಗಳನ್ನು ಮರೆಮಾಚಲು ಪ್ರಧಾನಿ ನರೇಂದ್ರ ಮೋದಿ ಜಮ್ಮು-ಕಾಶ್ಮೀರದ ಸದ್ಯದ ಪರಿಸ್ಥಿತಿಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಬಿಎಸ್‍ಪಿ ನಾಯಕಿ ಮಾಯಾವತಿ ಆರೋಪಿಸಿದ್ದಾರೆ.

    ಲಕ್ನೋದಲ್ಲಿ ಇಂದು ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಕೆಲ ದಿನಗಳಿಂದ ಜಮ್ಮು-ಕಾಶ್ಮೀರದಲ್ಲಿ ನಡೆಯುತ್ತಿರುವ ಉಗ್ರರ ದಾಳಿಯಿಂದ ಪ್ರಜೆಗಳು ಆತಂಕದಲ್ಲಿದ್ದಾರೆ. ಆದ್ರೆ ತಮ್ಮ ಸರ್ಕಾರದ ವೈಫಲ್ಯಗಳನ್ನು ಮರೆಮಾಚಲು ಮೋದಿ ಮತ್ತು ಬಿಜೆಪಿ ನಾಯಕರು ಮಾತ್ರ ಜಮ್ಮು-ಕಾಶ್ಮೀರದ ಸ್ಥಿತಿಗತಿಯನ್ನು ಹೇಗೆ ರಾಜಕೀಯಕ್ಕೆ ಉಪಯೋಗಿಸಿಕೊಳ್ಳುತ್ತಿದ್ದಾರೆ ಎಂಬ ವಿಷಯ ಜನತೆಗೆ ಗೊತ್ತಾಗುತ್ತಿದೆ ಎಂದು ಟೀಕಿಸಿದರು.

    ರಾಜಕೀಯಕೋಸ್ಕರ ದೇಶದ ಭದ್ರತೆ ವಿಚಾರವನ್ನು ಕಡೆಗಣಿಸಲಾಗುತ್ತಿದೆ. ಇಂತಹ ಸ್ಥಿತಿಯನ್ನು ಎದುರಿಸಲು ಭಾರತಕ್ಕೆ ದೃಢ ನಿರ್ಧಾರ ತೆಗೆದುಕೊಂಡು ಸಮಸ್ಯೆಗಳನ್ನು ಪರಿಹರಿಸುವ ನಾಯಕರು ಬೇಕಾಗಿದ್ದಾರೆ. ದೇಶದ ಭದ್ರತೆ, ಸಮಸ್ಯೆ ಬಗ್ಗೆ ಗಮನ ಹರಿಸುವ ಬದಲು ಪ್ರಧಾನಿಯವರು ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲು ಮೆಗಾ ವಿಡಿಯೋ ಕಾನ್ಫರೆನ್ಸ್ ಮಾಡಿದರು. ಶತ್ರು ದೇಶ ನಮ್ಮ ಮೇಲೆ ಹಗೆ ಸಾಧಿಸುತ್ತಿರುವ ಸಂದರ್ಭದಲ್ಲಿ ಪ್ರಧಾನಿ ಮಾತ್ರ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ಇದು ದೇಶಕ್ಕೆ ಹಾಗೂ ಜನತೆಯ ಭಾವನೆಗಳಿಗೆ ದ್ರೋಹ ಬಗೆಯುವ ಕೆಲಸ. ಒಂದು ರೀತಿ ಹಾಸ್ಯಾಸ್ಪದ ವರ್ತನೆ ಎಂದು ಮಾಯಾವತಿ ಟಾಂಗ್ ನೀಡಿದ್ದಾರೆ.

    ಮಾಯಾವತಿ-ಅಖಿಲೇಶ್ ಯಾದವ್ ಜೊತೆಗೂಡಿ ಲೋಕಸಭೆ ಚುನಾವಣೆಯನ್ನು ಮೈತ್ರಿ ಮೂಲಕ ಎದುರಿಸಲು ಮುಂದಾಗಿದ್ದಾರೆ. ಆದರಿಂದ ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಉತ್ತರಾಖಂಡ್ ಮೂರು ರಾಜ್ಯಗಳಲ್ಲಿ ಈ ಮೈತ್ರಿ ಅಖಾಡಕ್ಕೆ ಇಳಿಯಲು ತಿರ್ಮಾನಿಸಿದ್ದು, ಲೋಕಸಭೆಯಲ್ಲಿ ಒಟ್ಟು 110 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಹೊಂದಿದೆ. ಲೋಕಸಭೆ ಚುನಾವಣೆಗೆ ಕೆಲವು ದಿನಗಳು ಮಾತ್ರ ಬಾಕಿಯಿದ್ದು, ಎಲ್ಲಾ ರಾಜಕೀಯ ಪಕ್ಷದ ನಾಯಕರು ಚುನಾವಣಾ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೋದಿ ಮೊದಲೇ ಸೇನೆಗೆ ಅಧಿಕಾರವನ್ನು ನೀಡಿದ್ದರೆ ಚೆನ್ನಾಗಿರುತಿತ್ತು: ಮಾಯಾವತಿ

    ಮೋದಿ ಮೊದಲೇ ಸೇನೆಗೆ ಅಧಿಕಾರವನ್ನು ನೀಡಿದ್ದರೆ ಚೆನ್ನಾಗಿರುತಿತ್ತು: ಮಾಯಾವತಿ

    ಲಕ್ನೋ: ಭಾರತೀಯ ಸೇನೆಗೆ ಪ್ರಧಾನಿ ಮೋದಿ ಮೊದಲೇ ಅಧಿಕಾರವನ್ನು ನೀಡಬಹುದಿತ್ತು ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ. ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಉಗ್ರರ ನೆಲೆಯನ್ನು ಭಾರತೀಯ ವಾಯು ಸೇನೆ ಧ್ವಂಸಗೊಳಿಸಿದ ಬಗ್ಗೆ ಅವರು ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ.

    ಜೈಷ್ ಭಯೋತ್ಪಾದಕರ ವಿರುದ್ಧ ಪಾಕ್ ಆಕ್ರಮಿತ ಕಾಶ್ಮೀರಗೆ ಪ್ರವೇಶಿಸುವ ಮೂಲಕ ವಾಯುಪಡೆಯ ಕೆಚ್ಚೆದೆಯ ಯೋಧರ ಧೈರ್ಯವನ್ನು ನಾನು ಸನ್ಮಾನಿಸುತ್ತೇನೆ ಹಾಗೂ ಗೌರವಿಸುತ್ತೇನೆ. ಸೇನೆಗೆ ನೀಡಿದ್ದ ಅಧಿಕಾರವನ್ನು ಮೋದಿ ಮೊದಲೇ ನೀಡಿದ್ದರೆ ಚೆನ್ನಾಗಿರುತಿತ್ತು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಗಡಿ ಭಾಗದಲ್ಲಿ ಭಾರತೀಯ ವಾಯುಸೇನೆ ಏರ್ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದು, 21 ನಿಮಿಷದಲ್ಲಿ ಮೂರು ಉಗ್ರರ ತರಬೇತಿ ಶಿಬಿರಗಳ ಮೇಲೆ ದಾಳಿ ನಡೆಸಿದೆ. ಈ ದಾಳಿಯಲ್ಲಿ ಸುಮಾರು 200-300 ಉಗ್ರರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಾಗುತ್ತಿದೆ. ಮೊದಲಿಗೆ ಮುಂಜಾನೆ 3.45ರ ಸುಮಾರಿಗೆ ಬಾಲ್‍ಕೋಟ್ ಮೇಲೆ ದಾಳಿ ಮಾಡಿದೆ. ಬಳಿಕ ಮುಂಜಾನೆ 3.48ಕ್ಕೆ ಮುಜಾಫರ್ ಬಾದ್ ಮೇಲೆ ದಾಳಿ ಮಾಡಲಾಗಿದೆ. ಕೊನೆಗೆ ಮುಂಜಾನೆ 3.58ಕ್ಕೆ ಚಕೋಟಿ ಉಗ್ರರ ತರಬೇತಿ ಕೇಂದ್ರಗಳ ಮೇಲೆ ಭಾರತೀಯ ವಾಯುಸೇನೆ ದಾಳಿ ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಗುವಿಗೆ ಹಾಲು ಕುಡಿಸ್ತಿದ್ದ ಸೊಸೆಯ ಬೆರಳುಗಳನ್ನೆ ಕತ್ತರಿಸಿದ ಅತ್ತೆ

    ಮಗುವಿಗೆ ಹಾಲು ಕುಡಿಸ್ತಿದ್ದ ಸೊಸೆಯ ಬೆರಳುಗಳನ್ನೆ ಕತ್ತರಿಸಿದ ಅತ್ತೆ

    ಲಕ್ನೋ: ಅಡುಗೆ ಮಾಡುವುದನ್ನು ತಡ ಮಾಡಿದ್ದಕ್ಕೆ ಅತ್ತೆಯೊಬ್ಬಳು ಸೊಸೆಯ ಬೆರಳುಗಳನ್ನು ಕತ್ತರಿಸಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ.

    ಈ ಘಟನೆ ಹರಗೋವಿಂದ್ ನಗರದಲ್ಲಿ ಶನಿವಾರ ನಡೆದಿದ್ದು, ಆರೋಪಿ 65 ವರ್ಷದ ಸುಶೀಲಾ ದೇವಿ ಅತ್ತೆ, ಪ್ರೀತಿ ಬೆರಳುಗಳನ್ನು ಕತ್ತರಿಸಿದ್ದಾಳೆ. ಈ ಘಟನೆಯ ನಂತರ ಆರೋಪಿ ಸುಶೀಲಾ ದೇವಿ ನಾಪತ್ತೆಯಾಗಿದ್ದಾಳೆ.

    ಸೊಸೆ ಪ್ರೀತಿ ತನ್ನ ಮಗುವಿಗೆ ಹಾಲು ಕುಡಿಸುತ್ತಿದ್ದರು. ಇದೇ ವೇಳೆ ಅತ್ತೆ ಬಂದು ಅಡುಗೆ ಮಾಡುವಂತೆ ಸೊಸೆಗೆ ಹೇಳಿದ್ದಾಳೆ. ಆಗ ಸೊಸೆ ಮಗುವಿಗೆ ಹಾಲು ಕುಡಿಸಿದ ನಂತರ ಅಡುಗೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಇಷ್ಟಕ್ಕೆ ಕೋಪಗೊಂಡ ಅತ್ತೆ ಮಾನವೀಯತೆ ಇಲ್ಲದೇ ಚಾಕು ತೆಗೆದುಕೊಂಡು ಸೊಸೆಯ ಬಲಗೈ ಬೆರಳುಗಳನ್ನು ಕತ್ತರಿಸಿದ್ದಾಳೆ ಎಂದು ಪೊಲೀಸ್ ಅಧಿಕಾರಿ ಉಪೇಂದ್ರ ಸಿಂಗ್ ಹೇಳಿದ್ದಾರೆ.

    ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಹೋಗಿದ್ದಾರೆ. ಆದರೆ ಆರೋಪಿ ಮಹಿಳೆ ಅಲ್ಲಿಂದ ತಪ್ಪಿಸಿಕೊಂಡಿದ್ದಳು. ಸದ್ಯಕ್ಕೆ ಪೊಲೀಸರು ಆರೋಪಿ ಅತ್ತೆ ವಿರುದ್ಧ ಐಪಿಸಿ 323 ಮತ್ತು 504 ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಇತ್ತ ನೋವಿನಂದ ನರಳುತ್ತಿದ್ದ ಸೊಸೆ ಪ್ರೀತಿಯನ್ನು ಪೊಲೀಸರು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೊದಲ ರಾತ್ರಿಯೇ ಕಣ್ಣೀರಿಟ್ಟು ಮನೆ ಬಿಟ್ಟು ಬಂದ ವಧು

    ಮೊದಲ ರಾತ್ರಿಯೇ ಕಣ್ಣೀರಿಟ್ಟು ಮನೆ ಬಿಟ್ಟು ಬಂದ ವಧು

    ಲಕ್ನೋ: ನೂರಾರು ಕನಸು ಕಟ್ಟಿಕೊಂಡು ವಧು ಮದುವೆಯಾಗಿ ಪತಿಯ ಮನೆಗೆ ಹೋಗಿರುತ್ತಾಳೆ. ಆದರೆ ಉತ್ತರ ಪ್ರದೇಶ ಆಗ್ರಾದಲ್ಲಿ ಮೊದಲ ರಾತ್ರಿಯೇ ಪತಿಯೊಬ್ಬ ಮಾನಸಿಕ ಅಸ್ವಸ್ಥ ಎಂದು ತಿಳಿದು ಕಣ್ಣೀರಿಟ್ಟು ಮನೆ ಬಿಟ್ಟು ಹೋಗಿದ್ದಾರೆ.

    ಈ ಘಟನೆ ಆಗ್ರದ ಬಾಹ್ ತೆಹ್ಸಿಲ್ ಅಶೋಕ್ ನಗರದಲ್ಲಿ ನಡೆದಿದೆ. ಆಗ್ರಾದ ನಿವಾಸಿಯಾದ ಸುರೇಶ್ ಮಿಶ್ರಾ ಅವರ ಮಗ ಧೀರಜ್ ಗೆ ಜನವರಿ 22ರಂದು ವಧು ತನು ಜೊತೆ ಮದುವೆ ನಡೆದಿತ್ತು. ನಂತರ ಜನವರಿ 23ರಂದು ತನು ಪತಿಯ ಮನೆಗೆ ಹೋಗಿದ್ದಾರೆ. ಅಂದು ಮೊದಲ ರಾತ್ರಿಯ ಕಾರ್ಯಕ್ರಮವಿತ್ತು. ಆದ್ದರಿಂದ ತನು ರೂಮಿಗೆ ಹೋಗಿದ್ದು, ಆಗ ಪತಿ ಧೀರಜ್ ಮಾನಸಿಕ ಅಸ್ವಸ್ಥ ಎಂಬುದು ಗೊತ್ತಾಗಿದೆ. ಅಷ್ಟೇ ಅಲ್ಲದೇ ಧೀರಜ್ ತಂದೆ-ತಾಯಿ ಕೂಡ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ತಿಳಿದಿದೆ. ಇದರಿಂದ ನೊಂದ ವಧು ತನು ಕಣ್ಣೀರಿಟ್ಟು ಮುಂಜಾನೆ ಮನೆಯನ್ನು ಲಾಕ್ ಮಾಡಿ ತವರು ಮನೆಗೆ ಹೋಗಿದ್ದಾರೆ.

    ಇತ್ತ ಎರಡು ದಿನಗಳ ಬಳಿಕ ರೂಮಿನಲ್ಲಿ ಬಂಧಿಯಾಗಿದ್ದ ಧೀರಜ್ ಹಾಗೂ ಪೋಷಕರ ಕಿರುಚಾಡಿದ್ದಾರೆ. ಆಗ ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಮನೆ ಬೀಗ ಮುರಿದು ಅವರನ್ನು ರಕ್ಷಿಸಿ, ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಆಗ್ರಾದ ಮೆಂಟಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಕಳೆದ ವರ್ಷದ ಅಂದರೆ ಜುಲೈನಲ್ಲಿ ಧೀರಜ್ ಮತ್ತು ತನು ನಿಶ್ಚಿತಾರ್ಥ ನಡೆದಿತ್ತು. ಅಂದು ಹುಡುಗ ಮತ್ತು ಪೋಷಕರ ಆರೋಗ್ಯದಲ್ಲಿ ಅಷ್ಟೇನು ವ್ಯತ್ಯಾಸ ಕಂಡು ಬಂದಿಲ್ಲ. ಆದರೆ ಇದ್ದಕ್ಕಿದ್ದಂತೆ ಮೂವರು ಮಾನಸಿಕ ಅಸ್ವಸ್ಥರಾಗಿದ್ದಾರೆ. ಹೀಗಾಗಿ ಸದ್ಯಕ್ಕೆ ಪೊಲೀಸರು ಈ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ಮುಂದುವೆರಿಸಿದ್ದಾರೆ. ಆದರೆ ಒಂದೇ ಬಾರಿ ಮೂವರ ಮಾನಸಿಕ ಸ್ಥಿತಿ ಹದಗೆಡಲು ಕಾರಣವೇನು ಎಂಬುದು ಇನ್ನೂ ತಿಳಿದು ಬಂದಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಅಪಘಾತದಲ್ಲಿ ಯುವ ಗಾಯಕಿ ದುರ್ಮರಣ

    ಅಪಘಾತದಲ್ಲಿ ಯುವ ಗಾಯಕಿ ದುರ್ಮರಣ

    ಲಕ್ನೋ: ಡಿವೈಡರ್ ಗೆ ಕಾರ್ ಡಿಕ್ಕಿ ಹೊಡೆದ ಪರಿಣಾಮ 24 ವರ್ಷದ ಗಾಯಕಿ ಮತ್ತು ಸ್ಟೇಜ್ ಪರ್ ಫಾರ್ಮರ್ ಶಿವಾನಿ ಭಾಟಿಯಾ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಯಮುನಾ ಎಕ್ಸ್ ಪ್ರೆಸ್‍ವೇ ಬಳಿ ನಡೆದಿದೆ.

    ಈ ಅಪಘಾತದಲ್ಲಿ ಗಾಯಕಿ ಅವರ ಪತಿ ನಿಖಿಲ್ ಭಾಟಿಯಾ ಅಪಾಯದಿಂದ ಪಾರಾಗಿದ್ದಾರೆ. ಶಿವಾನಿ ಭಾಟಿಯಾ ಮತ್ತು ಪತಿ ನಿಖಿಲ್ ಭಾಟಿಯಾ ಇಬ್ಬರೂ ಕಾರಿನಲ್ಲಿ ಕಾರ್ಯಕ್ರಮಕ್ಕೆಂದು ಒಟ್ಟಿಗೆ ದೆಹಲಿಯಿಂದ ಆಗ್ರಾಕ್ಕೆ ಹೋಗುತ್ತಿದ್ದರು. ಈ ವೇಳೆ ಯಮುನಾ ಎಕ್ಸ್ ಪ್ರೆಸ್‍ವೇ ಬಳಿ ಕಾರ್ ನಿಯಂತ್ರಣ ಕಳೆದುಕೊಂಡು ರಸ್ತೆಯ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ತಕ್ಷಣ ದಂಪತಿಯನ್ನು ಸಮೀಪದ ಮಥುರದಲ್ಲಿದ್ದ ನಿಯಾತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಷ್ಟರಲ್ಲಿಯೇ ಗಾಯಕಿ ಶಿವನಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಆಕೆಯ ಪತಿ ನಿಖಿಲ್ ಭಾಟಿಯಾ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಶಿವಾನಿ ಭಾಟಿಯಾ ಮತ್ತು ನಿಖಿಲ್ ಇಬ್ಬರು ಗ್ರೇಟರ್ ನೋಯ್ಡಾದ ಪಾಮ್ ಒಲಂಪಿಯಾ ನಿವಾಸಿಗಳಾಗಿದ್ದು, ಈ ಅಪಘಾತವು ಸುರಿರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ಮುಂಜಾನೆ ಸುಮಾರು 5:45ರ ವೇಳೆಗೆ ನಡೆದಿದೆ. ನಿಖಿಲ್ ಐ -20 ಕಾರನ್ನು ಅತೀ ವೇಗದ ಕಾರನ್ನು ಓಡಿಸುತ್ತಿದ್ದರು. ಆದ್ದರಿಂದ ಕಾರು ಅವರ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ಇನ್ಸ್ ಪೆಕ್ಟರ್ ಶಿವ್‍ವೀರ್ ಸಿಂಗ್ ತಿಳಿಸಿದ್ದಾರೆ.

    ಶಿವನಿ ಭಾಟಿಯಾ ‘ದಿಲ್ ಕೋ ತುಮ್ಸೆ ಪ್ಯಾರ್ ಹುವಾ’, ‘ಶಗಾನ್’ ಮತ್ತು ‘ನೀಲೆ ನೀಲೆ ಅಂಬರ್ ಪ್ಯಾರ್’ ರೀಮಿಕ್ಸ್ ಹಾಡುಗಳನ್ನು ಹಾಡಿದ್ದಾರೆ. 2016 ರಲ್ಲಿ ಟಿವಿ ಚಾನಲ್ ಆಯೋಜಿಸಿದ್ದ ‘ಭೋಜ್ ಪುರಿ ಸಂಗೀತ ಸ್ಪರ್ಧೆ’ ಯಲ್ಲಿ ರನ್ನರ್ ಅಪ್ ಆಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತವರು ಮನೆಯಲ್ಲಿ 10 ನಿಮಿಷ ತಡ ಮಾಡಿದಕ್ಕೆ ‘ತಲಾಖ್’ ನೀಡಿದ ಪತಿ

    ತವರು ಮನೆಯಲ್ಲಿ 10 ನಿಮಿಷ ತಡ ಮಾಡಿದಕ್ಕೆ ‘ತಲಾಖ್’ ನೀಡಿದ ಪತಿ

    ಲಕ್ನೌ: ಪತ್ನಿ ತನ್ನ ತವರು ಮನೆಯಲ್ಲಿ 10 ನಿಮಿಷ ತಡ ಮಾಡಿದ್ದಕ್ಕೆ ಪತಿ ಆಕೆಗೆ ಫೋನಿನಲ್ಲೇ ತ್ರಿವಳಿ ತಲಾಖ್ ನೀಡಿದ ಘಟನೆ ಉತ್ತರ ಪ್ರದೇಶದ ಈಟಾದಲ್ಲಿ ನಡೆದಿದೆ.

    ಅಫ್‍ರೋಜ್ ಪತ್ನಿ ತಲಾಖ್ ನೀಡಿದ ಪತಿ. ಅಫ್‍ರೋಜ್ ಹೈದರಾಬಾದ್‍ನಲ್ಲಿರುವ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಒಂದೂವರೆ ವರ್ಷದ ಹಿಂದೆ ಅಫ್‍ರೋಜ್, ಶಂಬುಲ್ ಬೇಗಂಳನ್ನು ಮದುವೆ ಆಗಿದ್ದನು. ಮದುವೆಯ ನಂತರ ಆತ ವರದಕ್ಷಿಣೆ ನೀಡುವಂತೆ ಪತ್ನಿಗೆ ಕಿರುಕುಳ ನೀಡಿದ್ದಾನೆ.

    ಶಂಬುಲ್ ಬೇಗಂ ಜನವರಿ 18ರಂದು ಅನಾರೋಗ್ಯದಿಂದ ಬಳುತ್ತಿದ್ದ ತನ್ನ ಅಜ್ಜಿಯನ್ನು ನೋಡಲು ತವರು ಮನೆಗೆ ಹೋಗಿದ್ದಳು. ಅಫ್‍ರೋಜ್ ತನ್ನ ಪತ್ನಿ ತವರು ಮನೆಗೆ ಹೋಗಲು ಕೇವಲ 30 ನಿಮಿಷ ಕಾಲಾವಕಾಶ ನೀಡಿದ್ದನು. ಆದರೆ ಶಂಬುಲ್ 10 ನಿಮಿಷ ತಡ ಮಾಡಿದ್ದಾಳೆ. ಆಗ ಅಫ್‍ರೋಜ್ ತನ್ನ ಸಹೋದರನನ್ನು ಪತ್ನಿಯ ತವರು ಮನೆಗೆ ಕಳುಹಿಸಿ ಅಲ್ಲಿ ಶಂಬುಲ್ ಜೊತೆ ಫೋನಿನಲ್ಲಿ ಮಾತನಾಡಿಸುವುದಾಗಿ ಹೇಳಿದ್ದಾನೆ. ಬಳಿಕ ಅಫ್‍ರೋಜ್ ಫೋನಿನಲ್ಲಿ ತನ್ನ ಪತ್ನಿಗೆ ತಲಾಖ್ ನೀಡಿದ್ದಾನೆ.

    ಒಂದೂವರೆ ವರ್ಷದ ಹಿಂದೆ ನನ್ನ ಪೋಷಕರು ಶಂಬುಲ್ ಜೊತೆ ಮದುವೆ ಮಾಡಿಸಿದ್ದರು. ಮದುವೆ ಆದ ದಿನದಿಂದ ಈವರೆಗೂ ನನ್ನ ಪತಿ ಹಾಗೂ ಆತನ ಮನೆಯವರು ನನಗೆ ತವರು ಮನೆಯಿಂದ ವರದಕ್ಷಿಣೆ ತರುವಂತೆ ಕಿರುಕುಳ ನೀಡಿದ್ದಾರೆ. ಆದರೆ ನನ್ನ ತವರು ಮನೆಯವರು ವರದಕ್ಷಿಣೆ ನೀಡಲು ನಿರಾಕರಿಸಿದ್ದರು. ಹಾಗಾಗಿ ನನ್ನ ಪತಿ ನನಗೆ ತವರು ಮನೆಗೆ ಹೋಗಲು ಅನುಮತಿ ನೀಡುತ್ತಿರಲಿಲ್ಲ ಎಂದು ಶಂಬುಲ್ ಪೊಲೀಸರ ಬಳಿ ಹೇಳಿದ್ದಾಳೆ.

    ಫೋನಿನಲ್ಲಿ ತಲಾಖ್ ಪಡೆದ ಬಳಿಕ ನಾನು ನನ್ನ ಪತಿಯ ಮನೆಗೆ ಹೋದೆ. ಅಲ್ಲಿ ನನ್ನ ಪತಿ ಹಾಗೂ ಆತನ ಕುಟುಂಬದವರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಶಂಬುಲ್ ಹೇಳಿದ್ದಾಳೆ. ಪೊಲೀಸರು ಈ ಪ್ರಕರಣವನ್ನು ತಲಾಖ್ ಎಂದು ದಾಖಲಿಸಿಲ್ಲ. ವರದಕ್ಷಿಣೆ ಕಿರುಕುಳ ಎಂದು ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ ಎಂದು ಪೊಲೀಸ್ ಅಧಿಕಾರಿ ರೋಮಸಿಯಾ ಮೌರ್ಯ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv