Tag: lucknow

  • ಅನೈತಿಕ ಸಂಬಂಧ ತಿಳಿಯುತ್ತಿದ್ದಂತೆ ಪ್ರಿಯಕರನ ಜೊತೆ ಸೇರಿ ಪತಿ ಹತ್ಯೆ

    ಅನೈತಿಕ ಸಂಬಂಧ ತಿಳಿಯುತ್ತಿದ್ದಂತೆ ಪ್ರಿಯಕರನ ಜೊತೆ ಸೇರಿ ಪತಿ ಹತ್ಯೆ

    ಲಕ್ನೋ: ಪ್ರಿಯಕರನ ಜೊತೆ ಸೇರಿಕೊಂಡು ಪತಿಯನ್ನೇ ಕೊಲೆ ಮಾಡಿದ್ದ ಮಹಿಳೆ, ಆತನ ಲವ್ವರ್ ಸೇರಿದಂತೆ ಇತರ ಇಬ್ಬರು ಆರೋಪಿಗಳನ್ನು ಉತ್ತರ ಪ್ರದೇಶದ ಶಾಮಲಿ ಪೊಲೀಸರು ಬಂಧಿಸಿದ್ದಾರೆ.

    ಖೇಡಿ ಕೆಮ್ರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಹರೀಶ್ ಅಲಿಯಾಸ್ ಸೋನು (31) ಮೃತ ವ್ಯಕ್ತಿ. ಈತನ ಪತ್ನಿ ಶಿವಾನಿ ತನ್ನ ಪ್ರಿಯಕರನ ಜೊತೆ ಸೇರಿಕೊಂಡು ಕೊಲೆ ಮಾಡಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಹರೀಶ್ ಮೃತ ದೇಹವು ಮೇ 15 ರಂದು ಡ್ರೈನ್‍ನಲ್ಲಿ ಪತ್ತೆಯಾಗಿತ್ತು. ಮೃತ ಸೋನು ತಾಯಿ ನೀಡಿದ ದೂರಿನ ಮೇಲೆ ಪೊಲೀಸರು ತನಿಖೆ ಶುರುಮಾಡಿದ್ದರು. ಹರೀಶ್ ತಾಯಿ ನೀಡಿದ್ದ ದೂರಿನಲ್ಲಿ ಆತನ ಸಂಬಂಧಿಗಳಾದ ಶಿವಂ ಮತ್ತು ಮೋಹಿತ್ ಹೆಸರನ್ನು ಉಲ್ಲೇಖಿಸಿದ್ದರು. ಜೊತೆ ಹರೀಶ್ ಪತ್ನಿ ಶಿವಾನಿಯ ಹೆಸರು ಕೂಡ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿ ಶಿವಾನಿ ಶಿಬ್ಬು ಎಂಬಾತನ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಪತ್ನಿಯ ಅಕ್ರಮ ಸಂಬಂಧದ ವಿಚಾರ ಪತಿ ಹರೀಶ್‍ಗೆ ಗೊತ್ತಾಗಿದೆ. ಆಗ ಹರೀಶ್ ಮತ್ತು ಶಿಬ್ಬು ನಡುವೆ ಜಗಳ ಕೂಡ ನಡೆದಿದ್ದು, ಅವರಿಬ್ಬರ ಸಂಬಂಧಕ್ಕೆ ಹರೀಶ್ ವಿರೋಧ ವ್ಯಕ್ತಪಡಿಸಿದ್ದಾನೆ. ಇದರಿಂದ ತಮ್ಮಿಬ್ಬರ ಪ್ರೀತಿಗೆ ಪತಿ ಅಡ್ಡ ಬರುತ್ತಾನೆಂದು ಪ್ರಿಯಕರ ಜೊತೆ ಸೇರಿಕೊಂಡು ಕೊಲೆ ಮಾಡಲು ಪ್ಲಾನ್ ಮಾಡಿದ್ದಳು ಎಂದು ಪೊಲೀಸ್ ಅಧಿಕಾರಿ ಸುಭಾಷ್ ರಾಥೋಡ್ ಹೇಳಿದ್ದಾರೆ.

    ಅದರಂತೆಯೇ ಶಿಬ್ಬು ತನ್ನ ಸ್ನೇಹಿತರಾದ ಹಿಮಾಂಶು ಮತ್ತು ಲಕ್ಮೀರ ಸಹಾಯ ಪಡೆದುಕೊಂಡು ಹರೀಶ್‍ನನ್ನು ಕೊಲೆ ಮಾಡಿದ್ದಾರೆ. ಸದ್ಯಕ್ಕೆ ವಿಚಾರಣೆ ವೇಳೆ ಆರೋಪಿ ಶಿವಾನಿ ತಾನೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

  • ತವರು ಮನೆಗೆ ತೆರಳಿ ಪತ್ನಿಯ ಕತ್ತು ಸೀಳಿ ಹತ್ಯೆ!

    ತವರು ಮನೆಗೆ ತೆರಳಿ ಪತ್ನಿಯ ಕತ್ತು ಸೀಳಿ ಹತ್ಯೆ!

    ಲಕ್ನೋ: ಪತಿಯೊಬ್ಬ ತನ್ನ ಪತ್ನಿಯ ತವರು ಮನೆಗೆ ಹೋಗಿ ಆಕೆಯ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ಭಾನುವಾರ ಉತ್ತರ ಪ್ರದೇಶದ ಜಾಲೈನ್ ಜಿಲ್ಲೆಯಲ್ಲಿ ನಡೆದಿದೆ.

    ಪೂನಂ(23) ಕೊಲೆಯಾದ ದುರ್ದೈವಿ. ಪೂನಂ 2013ರಲ್ಲಿ ಜಿಹಮೀರ್ ಪುರ ನಿವಾಸಿ ಜಿತೇಂದ್ರ ಜೊತೆ ಮದುವೆ ಆಗಿದ್ದಳು. ಜಿತೇಂದ್ರ ಹಾಗೂ ಪೂನಂ ನಡುವೆ ಒಂದೂವರೆ ವರ್ಷದಿಂದ ಜಗಳ ನಡೆಯುತ್ತಿತ್ತು. ಹೀಗಾಗಿ ಪೂನಂ ತನ್ನ ಪತಿಯ ಮನೆ ಬಿಟ್ಟು ತವರು ಮನೆ ಸೇರಿದ್ದಳು.

    ಭಾನುವಾರ ಜಿತೇಂದ್ರ ತನ್ನ ಪತ್ನಿ ಪೂನಂಳ ತವರು ಮನೆಗೆ ಬಂದಿದ್ದಾನೆ. ಅಲ್ಲದೆ ಮನೆಗೆ ಬಂದ ತಕ್ಷಣ ಪೂನಂ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಪತ್ನಿಯ ತವರು ಮನೆಗೆ ಹೋಗುವ ಮೊದಲು ಜಿತೇಂದ್ರ ಹೇರ್ ಡೈ ಪೌಡರ್ ಕುಡಿದು ಬಂದಿದ್ದನು.

    ಈ ವಿಷಯ ತಿಳಿದ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿದ್ದಾರೆ. ಅಲ್ಲದೆ ಹೇರ್ ಡೈ ಪೌಡರ್ ಕುಡಿದ ಜಿತೇಂದ್ರನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಸದ್ಯ ಜಿತೇಂದ್ರ ಆರೋಗ್ಯದ ಸ್ಥಿತಿ ಗಂಭೀರವಾಗಿದೆ.

  • ನಿಂತಿದ್ದ ಟ್ರಾಲಿಗೆ ಡಿಕ್ಕಿ ಹೊಡೆದು ಪಲ್ಟಿಯಾದ ಬಸ್- ಐವರ ದುರ್ಮರಣ, 30 ಮಂದಿ ಗಂಭೀರ

    ನಿಂತಿದ್ದ ಟ್ರಾಲಿಗೆ ಡಿಕ್ಕಿ ಹೊಡೆದು ಪಲ್ಟಿಯಾದ ಬಸ್- ಐವರ ದುರ್ಮರಣ, 30 ಮಂದಿ ಗಂಭೀರ

    ಲಕ್ನೋ: ಟ್ರ್ಯಾಕ್ಟರ್ ಟ್ರಾಲಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, 30 ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಉನ್ನೋ ನಗರದಲ್ಲಿ ನಡೆದಿದೆ.

    ಈ ಅಪಘಾತ ಲಕ್ನೋ-ಆಗ್ರಾ ಎಕ್ಸ್ ಪ್ರೆಸ್ ಮಾರ್ಗದಲ್ಲಿ ನಡೆದಿದ್ದು, ಬಿಹಾರ್‌ನ ವಿಷ್ಣು(10), ವಿನೋದ್ ಕುಮಾರ್ (7), ದುಖಿ ಲಾಲ್ ಮೆಹ್ತಾ ಮತ್ತು ಇಬ್ಬರು ಬಾಲಕಿಯರು ಮೃತಪಟ್ಟಿದ್ದಾರೆ ಎಂದು ಗುರುತಿಸಲಾಗಿದೆ.

    ಖಾಸಗಿ ಬಸ್ ಪ್ರಯಾಣಿಕರನ್ನು ಕರೆದುಕೊಂಡು ದೆಹಲಿಯಿಂದ ಬಿಹಾರಕ್ಕೆ ಹೋಗುತ್ತಿತ್ತು. ಗುಂಡಿಗಳಿಂದ ತುಂಬಿದ್ದ ರಸ್ತೆಯಲ್ಲಿ ಬಸ್ ದೇವಖರಿ ಗ್ರಾಮದ ಬಳಿ ವೇಗವಾಗಿ ಚಲಿಸುತ್ತಿತ್ತು. ಅದೇ ರಸ್ತೆಯ ತಿರುವಿನಲ್ಲಿ ತರಬೂಜ್ ಹಣ್ಣುಗಳನ್ನು ತುಂಬಿಕೊಂಡು ಟ್ರ್ಯಾಕ್ಟರ್ ಟ್ರಾಲಿ ಕೆಟ್ಟು ನಿಂತಿತ್ತು. ಟ್ರ್ಯಾಕ್ಟರ್ ಟ್ರಾಲಿಗೆ ಡಿಕ್ಕಿ ಆಗೋದನ್ನು ತಪ್ಪಿಸಲು ಹೋದಾಗ ಬಸ್ ಚಾಲಕನ ನಿಯಂತ್ರಣ ತಪ್ಪಿದೆ. ಪರಿಣಾಮ ಟ್ರಾಲಿಗೆ ಡಿಕ್ಕಿ ಹೊಡೆದು ಬಸ್ ಪಲ್ಟಿಯಾಗಿದೆ.

    ಡಿಕ್ಕಿಯ ರಭಸಕ್ಕೆ ಐವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇನ್ನೂ 30 ಮಂದಿಗೆ ಗಂಭೀರವಾಗಿ ಗಾಯವಾಗಿದೆ. ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸ್ ಬಂದು ಗಾಯಾಳುಗಳನ್ನು ಲಕ್ನೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂಗರ್ಮೌ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ.

  • ಮನದಾಸೆ ಬಿಚ್ಚಿಟ್ಟ ಗ್ಲಾಮರ್ ಲುಕ್‍ನಲ್ಲಿ ಮಿಂಚಿದ್ದ ಚುನಾವಣಾ ಅಧಿಕಾರಿ

    ಮನದಾಸೆ ಬಿಚ್ಚಿಟ್ಟ ಗ್ಲಾಮರ್ ಲುಕ್‍ನಲ್ಲಿ ಮಿಂಚಿದ್ದ ಚುನಾವಣಾ ಅಧಿಕಾರಿ

    ಲಕ್ನೋ: ಲೋಕಸಭಾ ಚುನಾವಣೆಯಲ್ಲಿ ಹಳದಿ ಸೀರೆ ಧರಿಸಿ ಇವಿಎಂ ಮಷಿನ್ ಹಿಡಿದು ಗ್ಲಾಮರ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದ ಪಿಡಬ್ಲ್ಯೂಡಿ ಅಧಿಕಾರಿ ತಾವು ‘ಬಿಗ್‍ಬಾಸ್’ ಶೋಗೆ ಹೋಗಬೇಕೆಂಬ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

    ಪಿಡಬ್ಲ್ಯೂಡಿ ಅಧಿಕಾರಿ ರೀನಾ ದ್ವಿವೇದಿ ಅವರು ‘ಬಿಗ್‍ಬಾಸ್’ ಶೋನ ಮುಂದಿನ ಆವೃತ್ತಿಯಲ್ಲಿ ಭಾಗವಹಿಸುವ ಆಸೆ ವ್ಯಕ್ತಪಡಿಸಿದ್ದಾರೆ. ನನ್ನ ಕುಟುಂಬದವರು ನನಗೆ ಬೆಂಬಲ ನೀಡುತ್ತಿದ್ದಾರೆ. ಹೀಗಾಗಿ ಮುಂದೆ ನನಗೆ ಬಿಗ್‍ಬಾಸ್ ನಲ್ಲಿ ಅವಕಾಶ ಕೊಟ್ಟರೆ ಶೋನಲ್ಲಿ ಸ್ಪರ್ಧಿಯಾಗಿ ಹೋಗಲು ಇಚ್ಛಿಸಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಧರಿಸುವ ಬಟ್ಟೆಯಿಂದ ಮಹಿಳೆಯನ್ನು ವ್ಯಾಖ್ಯಾನಿಸಬಾರದು- ಇವಿಎಂ ಹಿಡಿದ ಅಧಿಕಾರಿ ಮಾತು

    ನನ್ನ ಫೋಟೋ ಮೂಲಕ ಜನಪ್ರಿಯತೆ ಬಂದಿರುವುದು ಸಂತಸವಾಗಿದೆ. ತನ್ನ ಮಗ ಅದಿತ್ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಆತನ ಸ್ನೇಹಿತರು ಕೂಡ ನನ್ನ ಬಗ್ಗೆ ಕೇಳುತ್ತಿದ್ದಾರೆ ಎಂದು ರೀನಾ ಹೇಳಿದ್ದಾರೆ.

    ರೀನಾ ದ್ವಿವೇದಿ ಅವರು ಚುನಾವಣೆ ಸಂದರ್ಭದಲ್ಲಿ ಗ್ಲಾಮರ್ ಲುಕ್‍ನಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದರು. ಇವರು ಹಳದಿ ಸೀರೆ ಉಟ್ಟು, ಕೂಲಿಂಗ್ ಗ್ಲಾಸ್ ಹಾಕಿಕೊಂಡು ಕೈಯಲ್ಲಿ ಇವಿಎಂ ಹಿಡಿದುಕೊಂಡು ಕರ್ತವ್ಯಕ್ಕೆ ಹಾಜರಾಗಿದ್ದರು. ಅಂದು ಕ್ಲಿಕ್ಕಿಸಿದ್ದ ಅವರ ಗ್ಲಾಮರ್ ಲುಕ್ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

  • ಮದ್ವೆ ಕಾರ್ಯಕ್ರಮ ನಡೆಯುತ್ತಿದ್ದಂತೆ ಕತ್ತರಿಯಿಂದ ಇರಿದು ವರನ ಬರ್ಬರ ಹತ್ಯೆ

    ಮದ್ವೆ ಕಾರ್ಯಕ್ರಮ ನಡೆಯುತ್ತಿದ್ದಂತೆ ಕತ್ತರಿಯಿಂದ ಇರಿದು ವರನ ಬರ್ಬರ ಹತ್ಯೆ

    ಲಕ್ನೋ: ಮದುವೆಯ ಹಿಂದಿನ ರಾತ್ರಿ ಯುವಕನೊಬ್ಬ ವರನಿಗೆ ಕತ್ತರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಅಯೋಧ್ಯೆ ಬಳಿ ನಡೆದಿದೆ.

    ಕುಮಾರ್ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮೃತ ವರನನ್ನು ಸುರೇಂದ್ರ ಕೋರಿ ಎಂದು ಗುರುತಿಸಲಾಗಿದೆ. ಆರೋಪಿ ಕತ್ತರಿಯಿಂದ  ಇರಿದು ವರನ್ನು ಕೊಲೆ ಮಾಡಿದ್ದಾನೆ.

    ಏನಿದು ಪ್ರಕರಣ?
    ಮೃತ ವರ ಇನ್ಯಾತ್‍ನಗರ ನಿವಾಸಿಯಾಗಿದ್ದು, ಸಿಂಗೌಲಿ ಗ್ರಾಮ ನಿವಾಸಿ ಪಿಂಕಿ ಜೊತೆ ಮದುವೆ ನಿಶ್ಚಯವಾಗಿತ್ತು. ಅದರಂತೆಯೇ ಇಬ್ಬರ ಮದುವೆ ಅದ್ಧೂರಿಯಾಗಿ ನಡೆಯುತಿತ್ತು. ಆದರೆ ಭಾನುವಾರ ರಾತ್ರಿ ಮದುವೆ ಕಾರ್ಯಕ್ರಮಗಳು ನಡೆಯುತ್ತಿದ್ದಾಗ ವರ ಬಾತ್‍ರೂಮಿಗೆ ಹೋಗಿದ್ದಾನೆ. ಈ ವೇಳೆ ಆರೋಪಿ ಯುವಕನೊಬ್ಬ ವರನ ಮೇಲೆ ಹಲ್ಲೆ ಮಾಡಿ ಕತ್ತರಿಯಿಂದ ಇರಿದು ಪರಾರಿಯಾಗಿದ್ದಾನೆ.

    ರಕ್ತದ ಮಡುವಿನಲ್ಲಿದ್ದ ವರನನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಷ್ಟರಲ್ಲಿ ವರ ಮೃತಪಟ್ಟಿದ್ದನು ಎಂದು ವೈದ್ಯರು ತಿಳಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿ ಮನೋಜ್ ಕುಮಾರ್ ಸಿಂಗ್, ಹಲ್ಲೆ ಮಾಡಿದ ಯುವಕ ವಧುವಿನ ನೆರೆಮನೆಯವನಾಗಿದ್ದು, ಲಡ್ಡು ಎಂದು ಗುರುತಿಸಲಾಗಿದೆ. ಈತನ ಜೊತೆ ಸ್ನೇಹಿತರಾದ ಪಿಂಟು ಮತ್ತು ಬಿಟ್ಟು ಇಬ್ಬರು ಅಪರಾಧದಲ್ಲಿ ಭಾಗಿಯಾಗಿದ್ದರು. ವರನ ಮೇಲೆ ಹಲ್ಲೆ ಮಾಡಿದ್ದನು ಇಬ್ಬರು ವ್ಯಕ್ತಿಗಳು ನೋಡಿದ್ದು, ತಕ್ಷಣ ಅವರನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಆದರೆ ಆರೋಪಿಗಳು ತಪ್ಪಿಸಿಕೊಂಡಿದ್ದರು ಎಂದು ತಿಳಿಸಿದ್ದಾರೆ.

    ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಮೂವರು ಆರೋಪಿಗಳಲ್ಲಿ ಲಡ್ಡು ಮತ್ತು ಪಿಂಟು ಇಬ್ಬರನ್ನು ಬಂಧಿಸಲಾಗಿದೆ. ಮೊತ್ತೊಬ್ಬನಿಗಾಗಿ ಶೋಧ ಕಾರ್ಯ ಆರಂಭಗೊಂಡಿದೆ. ಆರೋಪಿ ಲಡ್ಡು ವಧು ಪಿಂಕಿ ಜೊತೆ ಸಂಬಂಧ ಹೊಂದಿದ್ದು, ಈ ಹಿನ್ನೆಲೆಯಲ್ಲಿ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

  • ಮೂವರು ಮಕ್ಕಳಿಗೂ ವಿಷ ಕುಡಿಸಿ ತಂದೆ ಆತ್ಮಹತ್ಯೆಗೆ ಶರಣು

    ಮೂವರು ಮಕ್ಕಳಿಗೂ ವಿಷ ಕುಡಿಸಿ ತಂದೆ ಆತ್ಮಹತ್ಯೆಗೆ ಶರಣು

    ಲಕ್ನೋ: 30 ವರ್ಷದ ವ್ಯಕ್ತಿಯೊಬ್ಬ ಮೂವರು ಹೆಣ್ಣು ಮಕ್ಕಳನ್ನು ಕೊಲೆ ಮಾಡಿ ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದಿದೆ.

    ಗುರುವಾರ ಈ ಘಟನೆ ನಡೆದಿದ್ದು, ನಿಬಿಯಾ(9), ಅದ್ವಿತಾ (7) ಮತ್ತು ರಿಯಾ (5) ಮೃತ ಮಕ್ಕಳು. ನಯೇ ಸಡಕ್ ಪ್ರದೇಶದ ನಿವಾಸಿಯಾಗಿದ್ದ ದೀಪಕ್ ಗುಪ್ತಾ(30) ಆರ್ಥಿಕ ಸಮಸ್ಯೆಯಿಂದ ಬೇಸತ್ತಿದ್ದ ಮಕ್ಕಳನ್ನು ಕೊಂದು, ಬಳಿಕ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮೂವರು ಮಕ್ಕಳು ಅಪ್ರಾಪ್ತರಾಗಿದ್ದು, ಅವರಿಗೆ ವಿಷ ಬೆರೆಸಿದ ಪಾನೀಯ ಕುಡಿಸಿದ್ದಾನೆ. ಬಳಿಕ ತಾನೂ ವಿಷ ಕುಡಿದಿದ್ದಾನೆ. ವಿಚಾರ ತಿಳಿದ ನಂತರ ನಾಲ್ವರನ್ನು ಸಂಬಂಧಿಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅವರ ಸ್ಥಿತಿ ಗಂಭೀರವಾಗಿದ್ದರಿಂದ ಬೇರೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಕೊನೆಗೂ ಚಿಕಿತ್ಸೆ ಫಲಕಾರಿಯಾಗದೇ ನಾಲ್ವರು ಮೃತಪಟ್ಟಿದ್ದಾರೆ.

    ಸದ್ಯಕ್ಕೆ ಮಾಹಿತಿ ತಿಳಿದು ಪೊಲೀಸರು ಆಸ್ಪತ್ರೆಗೆ ಬಂದು ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

  • ಅಪಘಾತದಲ್ಲಿ ತಂದೆ, ತಮ್ಮ ಸಾವು – ಮರುದಿನ SSLC ಪರೀಕ್ಷೆ ಬರೆದು 92.4% ಅಂಕ ಪಡೆದು ಸಾಧನೆ

    ಅಪಘಾತದಲ್ಲಿ ತಂದೆ, ತಮ್ಮ ಸಾವು – ಮರುದಿನ SSLC ಪರೀಕ್ಷೆ ಬರೆದು 92.4% ಅಂಕ ಪಡೆದು ಸಾಧನೆ

    ಲಕ್ನೋ: ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಹಿಂದಿನ ರಾತ್ರಿ ಅಪಘಾತದಲ್ಲಿ ವಿದ್ಯಾರ್ಥಿನಿಯ ತಂದೆ ಮತ್ತು ತಮ್ಮ ಇಬ್ಬರು ಮೃತಪಟ್ಟಿದ್ದಾರೆ. ರಾತ್ರಿಯೆಲ್ಲಾ ಸರಿಯಾಗಿ ನಿದ್ದೆ ಮಾಡದೇ ಮರುದಿನ ಪರೀಕ್ಷೆ ಬರೆದು ವಿದ್ಯಾರ್ಥಿನಿ 92.4% ಅಂಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾಳೆ.

    ಟಿಯಾ ಸಿಂಗ್ ದುಃಖದಲ್ಲೂ ಪರೀಕ್ಷೆ ಬರೆದು 92.4% ಅಂಕ ಪಡೆಯುವ ಮೂಲಕ ಸುದ್ದಿಯಾಗಿದ್ದಾಳೆ. ಟಿಯಾ ಗೋವಿಂದಪುರದಲ್ಲಿನ ಬ್ರೈಟ್ಲ್ಯಾಂಡ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಇಂಗ್ಲೀಷ್‍ನಲ್ಲಿ 99, ಸಮಾಜ 95, ಹಿಂದಿ 90, ಗಣಿತ ಮತ್ತು ವಿಜ್ಞಾನದಲ್ಲಿ 89 ಅಂಕ ಪಡೆದಿದ್ದಾಳೆ.

    ನಡೆದಿದ್ದೇನು?
    ಟಿಯಾ ಪರೀಕ್ಷೆಯ ಹಿಂದಿನ ದಿನ ಆಕೆಯ ಸಹೋದರನ ಫಲಿತಾಂಶ ಬಂದಿತ್ತು. ಆತ 5 ತರಗತಿಯಲ್ಲಿ 2ನೇ ಸ್ಥಾನ ಪಡೆದು ಪಾಸ್ ಆಗಿದ್ದನು. ಈ ಖುಷಿಯಲ್ಲಿ ಅಂದಿನ ರಾತ್ರಿ ಡಾಬಾದಲ್ಲಿ ಊಟ ಮಾಡಲು ಕುಟುಂಬ ಸಮೇತರಾಗಿ ಮೋಟಾರ್ ಬೈಕಿನಲ್ಲಿ ಹೋಗಿದ್ದರು. ಆದರೆ ರಾತ್ರಿ ಸುಮಾರು 9.30ಕ್ಕೆ ಶಾಸ್ತ್ರಿನಗರ ಸಮೀಪ ಬೈಕ್‍ಗೆ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದಿದೆ. ಪರಿಣಾಮ ತಂದೆ ಸ್ಥಳದಲ್ಲಿಯೇ ಮೃತಪಟ್ಟಿದ್ದರು.

    ಸಹೋದರನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಹೋದರನು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಇದರಿಂದ ಟಿಯಾ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಇತ್ತ ಮರುದಿನ ಟಿಯಾ ಮೊದಲ ಪರೀಕ್ಷೆ ಆರಂಭವಾಗಿತ್ತು. ಕಣ್ಣ ಮುಂದೆಯೇ ಅಪ್ಪ ಮತ್ತು ತಮ್ಮನನ್ನು ಕಳೆದುಕೊಂಡ ಟಿಯಾ ದುಃಖದಲ್ಲಿ ಮುಳುಗಿದ್ದಳು.

    ಮುಂಜಾನೆ ಕುಟುಂಬದವರು ಅಂತಿಮ ಸಂಸ್ಕಾರಕ್ಕಾಗಿ ತಯಾರಿ ನಡೆಸುತ್ತಿದ್ದರೆ ಟಿಯಾ ಪರೀಕ್ಷೆ ಬರೆಯಲು ಸಿದ್ಧಳಾಗಿ ಶಾಲೆಗೆ ಹೋಗಿದ್ದಳು. ಪರೀಕ್ಷೆ ಬರೆದು ವಾಪಸ್ ಬಂದ ಬಳಿಕ ತಂದೆ- ತಮ್ಮನ ಅಂತಿಮ ಸಂಸ್ಕಾರದಲ್ಲಿ ಟಿಯಾ ಪಾಲ್ಗೊಂಡಿದ್ದಳು. ನಂತರ ದುಃಖದಲ್ಲಿಯೇ ಎಲ್ಲ ಪರೀಕ್ಷೆಗಳನ್ನು ಬರೆದಿದ್ದಾಳೆ. ಈಗ 92.4% ಅಂಕ ಪಡೆದು ಸಾಧನೆ ಮಾಡಿದ್ದಾಳೆ.

    ತನ್ನ ತಂದೆಯ ಕನಸನ್ನು ನನಸಾಗಿಸಲು ಟಿಯಾ ನೋವಿನಲ್ಲಿಯೂ ಪರೀಕ್ಷೆ ಬರೆದಿದ್ದಾಳೆ. ಮಗಳು ಡಾಕ್ಟರ್ ಆಗಬೇಕು ಎಂದು ನಾನು ಇಷ್ಟಪಟ್ಟಿದ್ದೇನೆ. ನಮ್ಮ ಸಂಬಂಧಿಕರು ವೈದ್ಯಕೀಯ ಕ್ಷೇತ್ರದಲ್ಲಿದ್ದಾರೆ. ಹಾಗಾಗಿ ನನ್ನ ಪತಿ ಮಗಳನ್ನು ಡಾಕ್ಟರ್ ಓದಿಸಬೇಕೆಂದು ಬಯಸಿದ್ದರು. ಅವಳ ಸಾಧನೆ ನಿಜಕ್ಕೂ ಸಂತೋಷ ತಂದಿದೆ ಎಂದು ಟಿಯಾ ತಾಯಿ ರೀನಾ ಸಾಗರ್ ತಿಳಿಸಿದ್ದಾರೆ.

    ನನ್ನ ಸಹೋದರ ಜೊತೆ ಮಾಡುತ್ತಿದ್ದ ಜಗಳವೇ ನೆನಪಾಗುತ್ತಿದೆ. ಅವನು ನನ್ನನ್ನು ಬಹಳ ಪ್ರೀತಿಸುತ್ತಿದ್ದನು. ನನ್ನ ಫಲಿತಾಂಶವನ್ನು ನೋಡಿ ತಂದೆ ಖುಷಿ ಪಡುತ್ತಿದ್ದರು. ಆದರೆ ಅಪಘಾತದಿಂದ ಅವರನ್ನು ನಾನು ಕಳೆದುಕೊಂಡೆ. ಅಪ್ಪನ ಕನಸನ್ನು ನನಸು ಮಾಡುವುದೇ ನನ್ನ ಗುರಿ ಎಂದು ಟಿಯಾ ಹೇಳಿದ್ದಾಳೆ.

    ಟಿಯಾ ಶಾಲಾ ಆಡಳಿತ ಮಂಡಳಿ, ಆಕೆಯ ತಾಯಿಗೆ ಶಿಕ್ಷಕಿ ಹುದ್ದೆ ಆಫರ್ ನೀಡಿದೆ. ಜೊತೆಗೆ ಅವರ ಕುಟುಂಬಕ್ಕೆ ಬೆಂಬಲವಾಗಿರುತ್ತೇವೆ ಎಂದು ಅಭಯ ನೀಡಿದೆ.

  • ಮೃತಪಟ್ಟಿದ್ದ 115ರ ಸಾಧು 4 ಗಂಟೆ ನಂತ್ರ ಎದ್ದು ನಿಂತ್ರು – ಬಾಬಾನ ದರ್ಶನಕ್ಕೆ ಮುಗಿಬಿದ್ದ ಜನ

    ಮೃತಪಟ್ಟಿದ್ದ 115ರ ಸಾಧು 4 ಗಂಟೆ ನಂತ್ರ ಎದ್ದು ನಿಂತ್ರು – ಬಾಬಾನ ದರ್ಶನಕ್ಕೆ ಮುಗಿಬಿದ್ದ ಜನ

    ಲಕ್ನೋ: ಉತ್ತರ ಪ್ರದೇಶದ ಕಾನ್ಪುರದ ಹಳ್ಳಿಯೊಂದರಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದ್ದ ಸಾಧುವೊಬ್ಬರು 4 ಗಂಟೆಯ ನಂತರ ಎದ್ದು ನಿಂತ ಚಮತ್ಕಾರ ನಡೆದಿದೆ.

    ಕಾನ್ಪುರದ ರುಸೆಲ್ಲಾಬಾದ್ ತೆಹ್ಸಿಲ್ ಗ್ರಾಮದಲ್ಲಿ ಸೋಮವಾರ ಸಂಜೆ ಗ್ರಾಮದಲ್ಲಿದ್ದ 115 ವರ್ಷದ ಸಾಧು ನಾರಾಯಣ ಬಾಬಾ ಸಾವನ್ನಪ್ಪಿದ್ದರು. ಈ ವೇಳೆ ಊರವರೆಲ್ಲಾ ಸೇರಿ ಅವರ ಅಂತಿಮ ಸಂಸ್ಕಾರಕ್ಕೆ ತಯಾರಿ ನಡೆಸುತ್ತಿದ್ದರು. ಆದರೆ ಮೃತಪಟ್ಟ ನಾಲ್ಕು ಗಂಟೆಯ ನಂತರ ಚಮತ್ಕಾರ ಎಂಬಂತೆ ಸಾಧುವಿನ ಹೃದಯ ಬಡಿತ ಮತ್ತೆ ಶುರುವಾಗಿದೆ. ಇದನ್ನು ಕಂಡ ಗ್ರಾಮಸ್ಥರು ಮುಖವಿಸ್ಮಿತರಾಗಿದ್ದಾರೆ.

    ನಾರಾಯಣ ಬಾಬಾ ಕಳೆದ 15 ರಿಂದ 20 ವರ್ಷಗಳ ಹಿಂದೆ ಗ್ರಾಮದ ದೇವಸ್ಥಾನಕ್ಕೆ ಬಂದಿದ್ದರಂತೆ. ಆ ನಂತರ ಇಲ್ಲಿಯೇ ವಾಸಿಸಲು ಶುರು ಮಾಡಿದ್ದರು. ಅಲ್ಲದೆ ಅನೇಕ ವರ್ಷಗಳಿಂದ ಅನ್ನ ತ್ಯಜಿಸಿರುವ ಸಾಧು, ಹಣ್ಣನ್ನು ಮಾತ್ರ ಸೇವನೆ ಮಾಡುತ್ತಿದ್ದರು. ಹಾಗೆಯೇ ಅವರ ವಯಸ್ಸು ಅವರಿಗೆ ಸರಿಯಾಗಿ ತಿಳಿದಿಲ್ಲ. ಈ ಘಟನೆ ನಡೆದಿರುವುದು ಅಚ್ಚರಿ ಮೂಡಿಸಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

    ಈಗ ಚಮತ್ಕಾರಿ ಸಾಧುವನ್ನು ನೋಡಲು ಜನ ಮುಗಿಬಿದ್ದಿದ್ದಾರೆ. ಬೇರೆ ಬೇರೆ ಊರುಗಳಿಂದಲೂ ಕೂಡ ಜನರು ಸಾಧುವಿನ ದರ್ಶನ ಪಡೆಯಲು ಬರುತ್ತಿದ್ದಾರೆ.

  • ವಿದ್ಯಾರ್ಥಿನಿಯರಿಗೆ ಅಶ್ಲೀಲ ವಿಡಿಯೋ ಕಳಿಸ್ತಿದ್ದ ಪ್ರೊಫೆಸರ್!

    ವಿದ್ಯಾರ್ಥಿನಿಯರಿಗೆ ಅಶ್ಲೀಲ ವಿಡಿಯೋ ಕಳಿಸ್ತಿದ್ದ ಪ್ರೊಫೆಸರ್!

    ಲಕ್ನೋ: ವಿದ್ಯಾರ್ಥಿನಿಯರಿಗೆ ಸ್ವೀಟ್ ಹಾರ್ಟ್ ಹಾಗೂ ಅಶ್ಲೀಲ ವಿಡಿಯೋ ಕಳುಹಿಸುತ್ತಿದ್ದ ಆರೋಪದ ಮೇಲೆ ಪ್ರೊಫೆಸರ್‍ನನ್ನು ಕೆಲಸದಿಂದ ಸಸ್ಪೆಂಡ್ ಮಾಡಲಾಗಿದೆ.

    ಪಿ. ಸೆಂಥಿಲ್ ಕುಮಾರ್ ಸಸ್ಪೆಂಡ್ ಆದ ಪ್ರೊಫೆಸರ್. ಸೆಂಥಿಲ್ ನೋಯ್ಡಾ ವಿಭಾಗದ ಫಿಸಿಯೋಥೇರಪಿ ವಿಭಾಗ ಮುಖ್ಯಸ್ಥನಾಗಿ ಕೆಲಸ ಮಾಡುತ್ತಿದ್ದನು. ಸೆಂಥಿಲ್ ಸಾಮಾಜಿಕ ಜಾಲತಾಣದಲ್ಲಿ ಯುವತಿಯರಿಗೆ ಸ್ವೀಟ್ ಹಾರ್ಟ್ ಎಂದು ಹೇಳುತ್ತಾ ಅಶ್ಲೀಲ ವಿಡಿಯೋ, ಫೋಟೋ ಕಳುಹಿಸಿ ಕಿರುಕುಳ ನೀಡುತ್ತಿದ್ದಾನೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.

    ಸೋಮವಾರ ನೋಯ್ಡಾ ವಿಶ್ವವಿದ್ಯಾಲಯದ 14 ವಿದ್ಯಾರ್ಥಿನಿಯರು ಪ್ರೊಫೆಸರ್ ಸೆಂಥಿಲ್ ವಿರುದ್ಧ ಹಲವು ಆರೋಪಗಳನ್ನು ಮಾಡಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದರು. ಪ್ರೊಫೆಸರ್ ನಮ್ಮನ್ನು ‘ಸ್ವೀಟ್ ಹಾರ್ಟ್’, ‘ಸ್ವೀಟು’, ಈ ರೀತಿ ಕರೆಯುತ್ತಾರೆ. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ವಿಡಿಯೋ ಕಳುಹಿಸುತ್ತಾರೆ ಎಂದು ಹೇಳಿದ್ದಾರೆ.

    ಪ್ರೊಫೆಸರ್ ಸೆಂಥಿಲ್ ವಿಶ್ವವಿದ್ಯಾಲಯಕ್ಕೆ ಪ್ರವೇಶಿಸುವುದಕ್ಕೆ ತಡೆ ಹಿಡಿಯಲಾಗಿದೆ. ಈ ಬಗ್ಗೆ ಇಂಟರ್ ನಲ್ ಕಂಪ್ಲೇಟ್ ಕಮಿಟಿ ರಚನೆಯಾಗಿದ್ದು, 72 ಗಂಟೆಯೊಳಗೆ ವರದಿಯನ್ನು ನೀಡಲಿದೆ ಎಂದು ವಿಶ್ವವಿದ್ಯಾನಿಲಯದ ವಕ್ತಾರ ವಿಕ್ರಂ ಸಿಂಗ್ ತಿಳಿಸಿದ್ದಾರೆ.

    ವಿದ್ಯಾರ್ಥಿನಿಯರು ದೂರು ನೀಡಿದ ನಂತರ ಸೆಂಥಿಲ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಸ್ವಿಚ್ಛ್ ಆಫ್ ಆಗಿದೆ ಎಂದು ವರದಿಯಾಗಿದೆ.

  • ಹಾಸ್ಟೆಲ್ ರೂಮಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿ ಶವ ಪತ್ತೆ

    ಹಾಸ್ಟೆಲ್ ರೂಮಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿ ಶವ ಪತ್ತೆ

    ಲಕ್ನೋ: ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿನಿಯೊಬ್ಬಳು ಹಾಸ್ಟೆಲ್ ರೂಮಿನಲ್ಲಿ ನೇಣು ಬಿಗಿದು ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

    ರಿಯಾ ಹೊರಾ(21) ಮೃತ ವಿದ್ಯಾರ್ಥಿನಿ. ಸಚೆಂದಿ ಪ್ರದೇಶದ ಖಾಸಗಿ ಎಂಜಿನಿಯರಿಂಗ್ ಇನ್ಸ್ಟಿಟ್ಯೂಟ್ ಕ್ಯಾಂಪಸ್‍ನ ಹಾಸ್ಟೆಲ್ ರೂಮಿನಲ್ಲಿ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಶುಕ್ರವಾರ ಮಧ್ಯಾಹ್ನ ರಿಯಾ ಶವ ಪತ್ತೆಯಾಗಿದೆ. ಘಟನಾ ಸ್ಥಳದಲ್ಲಿ ಯಾವುದೇ ರೀತಿ ಡೆತ್‍ನೋಟ್ ಪತ್ತೆಯಾಗಿಲ್ಲ.

    ರಿಯಾ ಸ್ನೇಹಿತರು ನೋಡಿದ ತಕ್ಷಣ ಫ್ಯಾನಿನಿಂದ ಆಕೆಯ ದೇಹವನ್ನು ಕೆಳಗಿಳಿಸಿ ಇನ್ಸ್ಟಿಟ್ಯೂಟ್ ಆಡಳಿತ ಮಂಡಳಿಗೆ ತಿಳಿಸಿದ್ದಾರೆ. ಬಳಿಕ ಅವರು ಪೊಲೀಸರಿಗೆ ವಿಚಾರವನ್ನು ತಿಳಿಸಿದ್ದಾರೆ. ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಬಂದು ಮೃತದೇಹವನ್ನು ಶವಗಾರಕ್ಕೆ ರವಾನಿಸಿದ್ದಾರೆ.

    ಮೃತ ರಿಯಾ ಪೋಷಕರು ಜಾರ್ಖಂಡಿನಿಂದ ಬಂದ ನಂತರ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ನಮಗೆ ಸ್ಥಳದಲ್ಲಿ ಯಾವುದೇ ಡೆತ್‍ನೂಟ್ ಪತ್ತೆಯಾಗಿಲ್ಲ. ಈ ಬಗ್ಗೆ ವಿಚಾರಣೆ ಮಾಡಲು ರಿಯಾಳ ಲ್ಯಾಪ್‍ಟಾಪ್ ಮತ್ತು ಮೊಬೈಲ್ ಫೋನ್‍ಗಳನ್ನು ಪರಿಶೀಲನೆ ಮಾಡುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿ ರಾಘವೇಂದ್ರ ಸಿಂಗ್ ತಿಳಿಸಿದ್ದಾರೆ.

    ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವೇ ರಿಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರ ಇಲ್ಲವಾ ಎಂದು ತಿಳಿಯುತ್ತದೆ. ಸದ್ಯಕ್ಕೆ ಮೃತ ರಿಯಾಳ ಪೋಷಕರು ಜಾರ್ಖಂಡ್‍ನ ಹಜಾರಿಬಾಗ್ ಜಿಲ್ಲೆಯವರಾಗಿದ್ದು, ಅವರಿಗೆ ಈ ಬಗ್ಗೆ ಮಾಹಿತಿ ತಿಳಿಸಲಾಗಿದೆ. ಮೃತ ರಿಯಾ ಒಳ್ಳೆಯ ವಿದ್ಯಾರ್ಥಿನಿಯಾಗಿದ್ದು, ವಿದ್ಯಾಭ್ಯಾಸದಲ್ಲಿ ಮುಂದೆ ಇದ್ದಳು ಎಂದು ಆಕೆಯ ಸ್ನೇಹಿತರು ತಿಳಿಸಿರುವುದಾಗಿ ಸಿಂಗ್ ಹೇಳಿದ್ದಾರೆ.