Tag: lucknow

  • ಪತ್ರಕರ್ತನ ಮೇಲೆ ಹಲ್ಲೆಗೈದು, ಬಟ್ಟೆಬಿಚ್ಚಿಸಿ ಬಲವಂತವಾಗಿ ಮೂತ್ರ ಕುಡಿಸಿದ್ರು

    ಪತ್ರಕರ್ತನ ಮೇಲೆ ಹಲ್ಲೆಗೈದು, ಬಟ್ಟೆಬಿಚ್ಚಿಸಿ ಬಲವಂತವಾಗಿ ಮೂತ್ರ ಕುಡಿಸಿದ್ರು

    ಲಕ್ನೋ: ಗೂಡ್ಸ್ ರೈಲು ಹಳಿ ತಪ್ಪಿದ್ದ ಸುದ್ದಿಯನ್ನು ವರದಿ ಮಾಡಲು ಹೋಗಿದ್ದ ಪತ್ರಕರ್ತನ ಮೇಲೆ ಹಲ್ಲೆ ಮಾಡಿ, ಆತನ ಬಟ್ಟೆ ಬಿಚ್ಚಿಸಿ ಬಲವಂತವಾಗಿ ಮೂತ್ರ ಕುಡಿಸಿರುವ ಘಟನೆ ಉತ್ತರ ಪ್ರದೇಶದ ಶಾಮ್ಲಿಯಲ್ಲಿ ನಡೆದಿದೆ.

    ಮಂಗಳವಾರ ರಾತ್ರಿ ಧೀಮಾನ್ಪುರಾದಲ್ಲಿ ಗೂಡ್ಸ್ ರೈಲು ಹಳಿತಪ್ಪಿದ ಸಂದರ್ಭದಲ್ಲಿ ಪತ್ರಕರ್ತ ವರದಿ ಮಾಡಲು ಹೋದಾಗ ಈ ಘಟನೆ ನಡೆದಿದೆ. ಸರ್ಕಾರಿ ರೈಲ್ವೇ ಪೊಲೀಸ್(ಜಿಆರ್ ಪಿ) ಅಧಿಕಾರಿ ರಾಕೇಶ್ ಕುಮಾರ್ ನೇತೃತ್ವದ ಸಿಬ್ಬಂದಿ ಪತ್ರಕರ್ತನ ಮೇಲೆ ಹಲ್ಲೆ ಮಾಡಿದ್ದಾರೆ. ಪತ್ರಕರ್ತನ ಮೇಲೆ ಹಲ್ಲೆ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ವಿಡಿಯೋದಲ್ಲಿ ಪತ್ರಕರ್ತನಿಗೆ ಚಿತ್ರಹಿಂಸೆ ಕೊಟ್ಟಿರುವುದನ್ನು ಕಾಣಬಹುದಾಗಿದೆ.

    ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಪತ್ರಕರ್ತ, ಸಿಬ್ಬಂದಿ ಯೂನಿಫಾರ್ಮ್ ನಲ್ಲಿ ಇರಲಿಲ್ಲ. ವರದಿ ಮಾಡಲು ತೆರಳಿದಾಗ ಅವರು ಏಕಾಏಕಿ ಬಂದು ನನ್ನ ಕ್ಯಾಮೆರಾವನ್ನು ಕಸಿದುಕೊಂಡು ಬಿಸಾಕಿದರು. ಈ ವೇಳೆ ಬಿದ್ದ ಕ್ಯಾಮೆರಾವನ್ನು ಎತ್ತಿಕೊಳ್ಳಲೆಂದು ಬಗ್ಗಿದಾಗ ನನ್ನ ಮೇಲೆ ಮನಸ್ಸೋ ಇಚ್ಛೆ ಥಳಿಸಿ ನಿಂದಿಸಿದರು. ಅಷ್ಟೇ ಅಲ್ಲದೆ ನನ್ನನ್ನು ಲಾಕಪ್‍ಗೆ ಹಾಕಿದರು. ಈ ವೇಳೆ ಅವರು ಬಲವಂತವಾಗಿ ನನ್ನ ಬಟ್ಟೆ ಬಿಚ್ಚಿಸಿ ಬಾಯಿಗೆ ಮೂತ್ರ ಕುಡಿಸಿದರು ಎಂದು ಪತ್ರಕರ್ತ ತನ್ನ ಅಳಲು ತೋಡಿಕೊಂಡಿದ್ದಾರೆ.

    ಪೊಲೀಸರು ಪತ್ರಕರ್ತನನ್ನು ಶಾಮ್ಲಿಯಲ್ಲಿರುವ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ರಾತ್ರಿ ಇಡೀ ಅಲ್ಲೆ ಇರಿಸಿಕೊಂಡು ಬುಧವಾರ ಬೆಳಗ್ಗೆ ಬಿಡುಗಡೆ ಮಾಡಿದ್ದಾರೆ. ಟ್ವಿಟ್ಟರ್‌ನಲ್ಲಿ ವಿಡಿಯೋಗಳು ವೈರಲ್ ಆಗಿದ್ದು, ಪತ್ರಕರ್ತ ಕಂಬಿಯ ಹಿಂದೆ ನಿಂತಿದ್ದಾಗ ರಾಕೇಶ್ ಕುಮಾರ್ ಹೊರಗೆ ಕುರ್ಚಿಯ ಮೇಲೆ ಕುಳಿತುಕೊಂಡಿರುವುದನ್ನು ಕಾಣಬಹುದಾಗಿದೆ.

    ಈ ಬಗ್ಗೆ ಮಾಹಿತಿ ತಿಳಿದು ಸಹೋದ್ಯೋಗಿಗಳು ಪೊಲೀಸ್ ಠಾಣೆಯ ಮುಂದೆ ಬಂದು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಅವರಲ್ಲಿ ಪತ್ರಕರ್ತ, ರೈಲ್ವೇ ಪೊಲೀಸ್ ಪಡೆಯ ವಿರುದ್ಧ ವರದಿ ಮಾಡಿದೆ ಎಂದು ಆರೋಪಿಸಿ ನನಗೆ ಹಿಂಸೆ ನೀಡುತ್ತಾರೆ ಎಂದು ಹೇಳಿದ್ದಾರೆ. ವಿಡಿಯೋ ವೈರಲ್ ಆದ ಬಳಿಕ ರಾಕೇಶ್ ಕುಮಾರ್ ಮತ್ತು ಪೇದೆ ಸುನೀಲ್ ಕುಮಾರ್ ನನ್ನು ಅಮಾನತುಗೊಳಿಸಲಾಗಿದೆ. ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ತಿಳಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಇತ್ತೀಚೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದ ಹಿನ್ನೆಲೆಯಲ್ಲಿ ಪ್ರಶಾಂತ್ ಕನೋಜಿಯಾ ವಿರುದ್ಧ ಹಜರತ್ ಗಂಜ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪತಿಯನ್ನು ಬಂಧಿಸಿದ ಹಿನ್ನೆಲೆಯಲ್ಲಿ ಕನೋಜಿಯಾ ಅವರ ಪತ್ನಿ ಸುಪ್ರೀಂನಲ್ಲಿ ಉತ್ತರ ಪ್ರದೇಶ ಪೊಲೀಸರ ಕ್ರಮವನ್ನು ಪ್ರಶ್ನಿಸಿದ್ದರು. ಆದರೆ ಪ್ರಶಾಂತ್ ಕನೋಜಿಯಾ ಅವರನ್ನು ಕೂಡಲೇ ಬಿಡುಗಡೆ ಮಾಡಿ ಎಂದು ಆದೇಶಿಸಿ ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ಪೊಲೀಸರಿಗೆ ಚಾಟಿ ಬೀಸಿತ್ತು.

  • ಬಾಡಿಗೆ ಮನೆಯವನ ಜೊತೆ ಮಗಳ ಸೆಕ್ಸ್ – ಯುವಕನನ್ನು ಹೊಡೆದು ಕೊಲೆಗೈದ ತಂದೆ

    ಬಾಡಿಗೆ ಮನೆಯವನ ಜೊತೆ ಮಗಳ ಸೆಕ್ಸ್ – ಯುವಕನನ್ನು ಹೊಡೆದು ಕೊಲೆಗೈದ ತಂದೆ

    ಲಕ್ನೋ: ಬಾಡಿಗೆ ಮನೆಯವನ ಜೊತೆ ಮಗಳು ಸೆಕ್ಸ್ ಮಾಡುತ್ತಿರುವುದನ್ನು ಕಂಡ ತಂದೆ ಆತನನ್ನು ಹೊಡೆದು ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಮೈನ್‍ಪುರಿಯಲ್ಲಿ ನಡೆದಿದೆ.

    ಸೋನು ಮಿಶ್ರ ಕೊಲೆಯಾದ ವ್ಯಕ್ತಿ. ವಿದ್ಯುತ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಸೋನು ಮಿಶ್ರ ಟಿನ್ನಿ ಭಾರದ್ವಾಜ್ ಮನೆಯಲ್ಲಿ ಬಾಡಿಗೆಗೆ ಉಳಿದುಕೊಂಡಿದ್ದನು. ಬುಧವಾರ ಸೋನು ಮಾಲೀಕ ಟಿನ್ನಿ ಭಾರದ್ವಾಜ್ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದ.

    ಸೋನು ಹಾಗೂ ಮನೆ ಮಾಲೀಕನ ಮಗಳು ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ಇವರಿಬ್ಬರು ದೈಹಿಕ ಸಂಬಂಧ ಬೆಳೆಸುತ್ತಿರುವಾಗ ಯುವತಿಯ ತಂದೆ ನೋಡಿದ್ದಾರೆ. ಇದರಿಂದ ಕೋಪಗೊಂಡ ಟಿನ್ನಿ ಮತ್ತಿಬ್ಬರ ಸಹಾಯದಿಂದ ಸೋನುನನ್ನು ಕೊಲೆ ಮಾಡಿದ್ದಾನೆ.

    ಆರೋಪಿಗಳು ಸೋನು ಸಾಯುವವರೆಗೂ ಹೊಡೆದಿದ್ದಾರೆ. ಕೊಲೆ ಮಾಡಿದ ನಂತರ ಮೂವರು ಆರೋಪಿಗಳು ಸ್ಥಳದಿಂದ ಪರಾರಿ ಆಗಿದ್ದಾರೆ. ಈ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿದ್ದಾರೆ.

    ಪೊಲೀಸರು ಸೋನು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಅಲ್ಲದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆ ಮಾಲೀಕ ಟಿನ್ನಿ ಹಾಗೂ ಇಬ್ಬರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ.

  • ಮೃತಪಟ್ಟು 7 ದಿನ-ಶವ ಸಿಕ್ಕ ದಿನವೂ ಕರ್ತವ್ಯದಲ್ಲಿ ಹಾಜರ್

    ಮೃತಪಟ್ಟು 7 ದಿನ-ಶವ ಸಿಕ್ಕ ದಿನವೂ ಕರ್ತವ್ಯದಲ್ಲಿ ಹಾಜರ್

    ಲಕ್ನೋ: ಮಂಗಳವಾರ ಸಂಜೆ ತನಕ ಸೈಬರ್ ಕ್ರೈಂ ವಿಭಾಗದ ಇನ್ಸ್ ಪೆಕ್ಟರ್ ಕರ್ತವ್ಯದಲ್ಲಿದ್ದರು. ಆದರೆ ಮನೆಗೆ ಹೋಗಿ ಬಾಗಿಲು ತೆರೆದರೆ 7 ದಿನಗಳ ಹಿಂದೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಅಚ್ಚರಿಯ ವಿಚಾರ ಬೆಳಕಿಗೆ ಬಂದಿದೆ. ಈ ಘಟನೆ ಉತ್ತರ ಪ್ರದೇಶದ ಸಿದ್ಧಾರ್ಥನಗರ ಜಿಲ್ಲೆಯಲ್ಲಿ ನಡೆದಿದೆ.

    ಪಂಕಜ್ ಶಾಹಿ ಮೃತ ಸೈಬರ್ ಕ್ರೈಂ ವಿಭಾಗದ ಇನ್ಸ್ ಪೆಕ್ಟರ್. ಇವರ ಮನೆಯಲ್ಲಿ ಕೆಟ್ಟ ವಾಸನೆ ಬರುತ್ತಿದೆ ಎಂದು ನೆರೆಹೊರೆಯವರು ಪೊಲೀಸರಿಗೆ ದೂರ ನೀಡಿದ್ದಾರೆ. ಮಾಹಿತಿ ತಿಳಿದು ಸದಾರ್ ಪೊಲೀಸರು ಮಂಗಳವಾರ ಅವರ ಮನೆಗೆ ಬಂದು ಬಾಗಿಲು ಮುರಿದು ನೋಡಿದಾಗ ಪಂಕಜ್ ಶವ ಸಿಕ್ಕಿದೆ. ಪಂಕಜ್ ಮೃತ ದೇಹ ಹಾಸಿಗೆ ಮೇಲಿತ್ತು. ಶವವನ್ನು ನೋಡಿದರೆ ಸುಮಾರು ಒಂದು ವಾರದ ಹಿಂದೆ ಪಂಕಜ್ ಮೃತಪಟ್ಟಿದ್ದಾರೆಂದು ವೈದ್ಯರು ಅನುಮಾನಿಸಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

    ಈ ವಿಷಯ ಗೊತ್ತಾಗುತ್ತಿದ್ದಂತೆ ಕುಟುಂಬದಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ. ಆದರೆ ಒಂದು ವಾರದವರೆಗೂ ಪಂಕಜ್ ಕುಟುಂಬದವರು ಫೋನ್ ಮಾಡಿಲ್ಲವಾ ಎಂಬ ಪ್ರಶ್ನೆ ಪೊಲೀಸರಲ್ಲಿ ಮೂಡಿದೆ. ಆದರೆ ಪಂಕಜ್ ಸಹೋದರ ನಮ್ಮ ಅತ್ತಿಗೆ ಫೋನ್ ಮಾಡಿದ್ದರು. ಆದರೆ ಅಣ್ಣ ರಿಸೀವ್ ಮಾಡಿಲ್ಲ ಎಂದು ಹೇಳಿದ್ದಾರೆ.

    ಸದ್ಯಕ್ಕೆ ಇದೊಂದು ಆಕಸ್ಮಿಕ ಸಾವು ಎಂದು ದೂರು ದಾಖಲಿಸಿದ್ದೇವೆ. ಮರಣೋತ್ತರ ಪರೀಕ್ಷೆಯ ನಂತರ ಪಂಕಜ್ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ. ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸ್ ಅಧಿಕಾರಿ ಸುನೀಲ್ ಸಿಂಗ್ ತಿಳಿಸಿದ್ದಾರೆ.

    ಆಶ್ಚರ್ಯ ಸಂಗತಿ ಎಂದರೆ ಸೈಬರ್ ಕ್ರೈಂ ವಿಭಾಗದಲ್ಲಿ ಪಂಕಜ್ ಮಂಗಳವಾರ ಸಂಜೆಯವರೆಗೂ ಕರ್ತವ್ಯದಲ್ಲಿದ್ದರು ಎಂದು ದಾಖಲಾಗಿದೆ. ಕಚೇರಿಗೆ ಬರದೆ ಹೋದರು ಅವರು ಕರ್ತವ್ಯದಲ್ಲಿದ್ದರು ಎಂದು ಹಾಜರಿಯಲ್ಲಿ ತೋರಿಸಲಾಗಿದೆ. ಪಂಕಜ್ ಕಚೇರಿಗೆ ಬರದಿದ್ದರೂ ಅವರಿಗೆ ಯಾರು ಏಕೆ ಫೋನ್ ಮಾಡಿಲ್ಲ ಎಂಬ ಪ್ರಶ್ನೆಗೆ ಅಧಿಕಾರಿಗಳಿಂದ ಉತ್ತರವಿಲ್ಲ. ಸದ್ಯಕ್ಕೆ ಈ ಬಗ್ಗೆ ವಿಚಾರಣೆ ಶುರುವಾಗಿದೆ.

  • ಮುಖ ಪರದೆ ಬಳಿಕ ಸಂಪೂರ್ಣ ವೇಲ್ ತೆಗಿರಿ ಎಂದ ಮೆಟ್ರೋ ಸಿಬ್ಬಂದಿ

    ಮುಖ ಪರದೆ ಬಳಿಕ ಸಂಪೂರ್ಣ ವೇಲ್ ತೆಗಿರಿ ಎಂದ ಮೆಟ್ರೋ ಸಿಬ್ಬಂದಿ

    ಲಕ್ನೋ: ಬುರ್ಖಾ ಧರಿಸಿದ್ದ ಮಹಿಳೆಯರ ಚೆಕಿಂಗ್ ಮಾಡುವ ವೇಳೆ ಅವರು ಹಾಕಿದ್ದ ವೇಲ್ ತೆಗಿಯಿರಿ ಎಂದು ಪುರುಷ ಸಿಬ್ಬಂದಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಆರೋಪ ಲಕ್ನೋ ಮೆಟ್ರೋ ನಿಲ್ದಾಣದ ಸಿಬ್ಬಂದಿ ವಿರುದ್ಧ ಕೇಳಿಬಂದಿದೆ.

    ಲಕ್ನೋ ಮಾವಯ್ಯ ಮೆಟ್ರೋ ನಿಲ್ದಾಣಕ್ಕೆ ಬಂದಿದ್ದ 6 ಮಂದಿ ಮಹಿಳೆಯರನ್ನು ಚೆಕಿಂಗ್ ಮಾಡಲಾಗುತ್ತಿತ್ತು. ಈ ವೇಳೆ ಮಹಿಳಾ ಸಿಬ್ಬಂದಿ ಬದಲು ಪುರುಷ ಸಿಬ್ಬಂದಿ ಮಹಿಳೆಯರಿಗೆ ಚೆಕಿಂಗ್ ಮಾಡಿದ್ದಲ್ಲದೇ, ಅವರೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಸೋಮವಾರದಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

    ಅಲಾಂಭಾಗ್‍ನ ನಿವಾಸಿ ಮಾಜ್ ಮೊಹಮದ್ ತನ್ನ ಮಹಿಳಾ ಸಂಬಂಧಿಕರೊಂದಿಗೆ ಮಾವಯ್ಯ ಮೆಟ್ರೋ ನಿಲ್ದಾಣಕ್ಕೆ ತೆರಳುತ್ತಿದ್ದರು. ಈ ವೇಳೆ ತಪಾಸಣೆ ನಡೆಸಬೇಕಿದ್ದ ಸಿಬ್ಬಂದಿ ಮಹಿಳೆಯರ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಆದ್ದರಿಂದ ಈ ಬಗ್ಗೆ ಲಕ್ನೋ ಮೆಟ್ರೋದ ಎಂಡಿಗೆ ಮಾಜ್ ಮೊಹಮದ್ ದೂರು ನೀಡಿದ್ದಾರೆ.

    ನಾನು ಮಾವಯ್ಯ ಸ್ಟೇಷನ್ ನಿಂದ ಅಲಾಂಭಗ್ ನಿಲ್ದಾಣಕ್ಕೆ ನನ್ನ 5 ಜನ ಸಂಬಂಧಿಕರೊಂದಿಗೆ ತೆರಳುತ್ತಿದ್ದೆ. ನನ್ನನ್ನು ಸೇರಿಸಿ 6 ಜನರಿಗೆ ಟಿಕೆಟ್ ಪಡೆದುಕೊಂಡಿದ್ದೆ. ಚೆಕಿಂಗ್ ಪಾಯಿಂಟ್ ಹತ್ತಿರ ತೆರಳಿದಾಗ, ಪರಿಶೀಲನೆ ಮಾಡಲು ಮುಂದಾದ ಪುರುಷ ಸಿಬ್ಬಂದಿ ಮೊದಲಿಗೆ ಬುರ್ಖಾ ತೆಗೆಯಲು ಹೇಳಿದ್ದಾರೆ. ನನ್ನನ್ನು ಸೇರಿಸಿ ಎಲ್ಲರೂ ಬುರ್ಖಾ ತೆಗೆಯುತ್ತೇವೆ. ಆದರೆ ಮಹಿಳೆಯರಿಗೆ ಮೀಸಲಿರುವ ಕ್ಯಾಬಿನ್‍ನಲ್ಲಿ ತೆಗೆಯುತ್ತೇವೆ ಎಂದು ಹೇಳಿದೆವು. ಈ ವೇಳೆ ಸಿಬ್ಬಂದಿ ಅಸಭ್ಯವಾಗಿ ವರ್ತಿಸಲು ಆರಂಭಿಸಿದರು ಬುರ್ಖಾವಷ್ಟೆ ಅಲ್ಲ ವೇಲ್ ಕೂಡ ತೆಗೆಯಲು ಹೇಳಿದರು ಎಂದು ಮಹಿಳೆ ಆರೋಪಿಸಿದ್ದಾರೆ.

    ಇಷ್ಟೆಲ್ಲ ಆದ ಮೇಲೆ ನಾವು ಟಿಕೆಟ್ ವಾಪಸ್ ಮಾಡಲು ಹೋದಾಗಲೂ ಸಿಬ್ಬಂದಿ ಸರಿಯಾಗಿ ಸ್ಪಂದಿಸಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಲಕ್ನೋ ಮೆಟ್ರೋ ಅಧಿಕಾರಿ ಈ ಬಗ್ಗೆ ತನಿಖೆ ನಡೆಯುತ್ತಿದೆ. ಸಿಬ್ಬಂದಿ ತಪ್ಪು ಮಾಡಿರುವುದು ಸಾಬೀತಾದರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.

  • ಪ್ರೇಯಸಿಗಾಗಿ ಬಿಎಸ್‍ಪಿ ಮುಖಂಡನಿಂದ ಪ್ರಶ್ನೆ ಪತ್ರಿಕೆ ಲೀಕ್

    ಪ್ರೇಯಸಿಗಾಗಿ ಬಿಎಸ್‍ಪಿ ಮುಖಂಡನಿಂದ ಪ್ರಶ್ನೆ ಪತ್ರಿಕೆ ಲೀಕ್

    ಲಕ್ನೋ: ಪ್ರೇಯಸಿಗಾಗಿ ಪ್ರಶ್ನೆ ಪತ್ರಿಕೆ ಲೀಕ್ ಮಾಡಲು ಬಹುಜನ ಸಮಾಜವಾದಿ ಪಕ್ಷದ(ಬಿಎಸ್‍ಪಿ) ನಾಯಕನೊಬ್ಬನು ಯತ್ನಿಸಿದ್ದು, ಆತನಿಗೆ ಸಹಾಯ ಮಾಡಿದ ಇಬ್ಬರು ಪೊಲೀಸರ ಬಲೆಗೆ ಬಿದ್ದಿದ್ದಾರೆ.

    ಉತ್ತರ ಪ್ರದೇಶದ ಬಿಎಸ್‍ಪಿ ನಾಯಕ ಫಿರೋಜ್ ಅಲಾಮ್ ಬಂಧಿತ ಆರೋಪಿ. ಈತ ಎಂಬಿಎ ಓದುತ್ತಿದ್ದ ತನ್ನ ಪ್ರೇಯಸಿಗಾಗಿ ಪ್ರಶ್ನೆ ಪತ್ರಿಕೆ ಲೀಕ್ ಮಾಡುವ ಪ್ರಯತ್ನ ನಡೆಸಿದ್ದನು. ಆಲಿಗಢ್ ಮುಸ್ಲಿಂ ವಿಶ್ವವಿದ್ಯಾನಿಲಯದ(ಎಎಂವಿ) ಸಿಬ್ಬಂದಿ ಸಹಾಯದಿಂದ ಎಂಬಿಎ ಪೇಪರ್ ಲೀಕ್ ಮಾಡುವ ತಯಾರಿ ನಡೆಸಿದ್ದನು. ಪ್ರಶ್ನೆ ಪತ್ರಿಕೆ ತಂದು ಕೊಟ್ಟರೆ ವಿಶ್ವವಿದ್ಯಾಲಯದಲ್ಲಿ ಕೆಲಸ ಖಾಯಂಗೊಳಿಸುತ್ತೇನೆ ಎಂದು ಆಫರ್ ನೀಡಿದ್ದನು.

    ಪ್ರೇಯಸಿಗೆ ಪರೀಕ್ಷೆ ಮೊದಲು ಪ್ರಶ್ನೆ ಪತ್ರಿಕೆ ನೀಡುವುದಾಗಿ ಫಿರೋಜ್ ಭರವಸೆ ನೀಡಿದ್ದನಂತೆ. ಆದರೆ ಮೊದಲು ಎಎಂವಿ ಸಿಬ್ಬಂದಿ ನಕಲಿ ಪ್ರಶ್ನೆ ಪತ್ರಿಕೆ ನೀಡಿದ್ದ ಎನ್ನಲಾಗಿದೆ. ಬಳಿಕ ಇದು ಪ್ರೇಯಸಿಗೆ ತಿಳಿದು ಗಲಾಟೆ ಮಾಡಿದ್ದಾಳೆ. ಹೀಗಾಗಿ ಸ್ನೇಹಿತ ಹೈದರ್ ಜೊತೆ ಸೇರಿ ಫಿರೋಜ್ ವಿಶ್ವವಿದ್ಯಾನಿಲಯದ ಸಿಬ್ಬಂದಿಗೆ ಪುನಃ ಪ್ರಶ್ನೆ ಪತ್ರಿಕೆ ತೆರಲು ಹೇಳಿದ್ದಾನೆ. ಅಲ್ಲದೆ ಪ್ರಶ್ನೆ ಪತ್ರಿಕೆ ಲೀಕ್ ಮಾಡಲು ವಾಟ್ಸಾಪ್ ಗ್ರೂಪ್ ಕೂಡ ಮಾಡಲಾಗಿತ್ತು.

    ಲೀಕ್ ಆದ ಒಂದು ಪ್ರಶ್ನೆ ಪತ್ರಿಕೆಗೆ 2 ಸಾವಿರ ರೂಪಾಯಿ ನಿಗದಿ ಮಾಡಲಾಗಿತ್ತು. ಆದರೆ ಇನ್ನೇನು ಪ್ರಶ್ನೆ ಪತ್ರಿಕೆಗೆ ಲೀಕ್ ಮಾಡುವಷ್ಟರಲ್ಲಿ ಪೊಲೀಸರಿಗೆ ಈ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಹಿನ್ನಲೆಯಲ್ಲಿ ಎಎಂವಿ ಸಿಬ್ಬಂದಿ ಹಾಗೂ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಫಿರೋಜ್ ಮಾತ್ರ ಪೊಲೀಸರ ಕಣ್ತಪ್ಪಿಸಿ ತಲೆಮರೆಸಿಕೊಂಡಿದ್ದಾನೆ.

  • ಚಿಕಿತ್ಸೆಗೆ ಅಂಬುಲೆನ್ಸ್ ನೀಡದ ಆಸ್ಪತ್ರೆ – ಮಗನ ಶವವನ್ನು ಹೊತ್ತೊಯ್ದ ತಾಯಿ!

    ಚಿಕಿತ್ಸೆಗೆ ಅಂಬುಲೆನ್ಸ್ ನೀಡದ ಆಸ್ಪತ್ರೆ – ಮಗನ ಶವವನ್ನು ಹೊತ್ತೊಯ್ದ ತಾಯಿ!

    ಲಕ್ನೋ: ಅಂಬುಲೆನ್ಸ್ ನೀಡಲು ಆಸ್ಪತ್ರೆ ಸಿಬ್ಬಂದಿ ನಿರಾಕರಿಸಿದ್ದಕ್ಕೆ ತನ್ನ ಮಗನ ಶವವನ್ನು ತಾಯಿಯೇ ಹೊತ್ತುಕೊಂಡು ಹೋದ ಮನಕಲಕುವ ಘಟನೆ ಉತ್ತರ ಪ್ರದೇಶದ ಶಹಜಹಾನ್‍ಪುರದಲ್ಲಿ ನಡೆದಿದೆ.

    ಸೋಮವಾರದಂದು ಬಾಲಕನಿಗೆ ಹೆಚ್ಚು ಜ್ವರ ಬಂದಿದ್ದ ಕಾರಣಕ್ಕೆ ತಂದೆ ತಾಯಿ ಆತನನ್ನು ಶಹಜಹಾನ್‍ಪುರದಲ್ಲಿ ಆಸ್ಪತ್ರೆಯೊಂದಕ್ಕೆ ಕರೆದುಕೊಂಡು ಹೋಗಿದ್ದರು. ಆದರೆ ಅಲ್ಲಿನ ವೈದ್ಯರು ಬಾಲಕನ ಸ್ಥಿತಿ ಗಂಭೀರವಾಗಿದೆ ಲಕ್ನೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಎಂದು ಸೂಚಿಸಿದ್ದಾರೆ. ಆಗ ಪೋಷಕರು ಬಾಲಕನನ್ನು ಕರೆದುಕೊಂಡು ಹೋಗಲು ಅಂಬುಲೆನ್ಸ್ ವ್ಯವಸ್ಥೆ ನೀಡಿ ಎಂದು ಮನವಿ ಮಾಡಿದ್ದಾರೆ.

    ಮನವಿಗೆ ಆಸ್ಪತ್ರೆ ಸಿಬ್ಬಂದಿ ಹಾಗೂ ವೈದ್ಯರು ನಿರಾಕರಿಸಿದ್ದು, ಬೇರೆ ವಾಹನ ವ್ಯವಸ್ಥೆ ಮಾಡಿಕೊಂಡು ಮಗನನ್ನು ಆಸ್ಪತ್ರೆಗೆ ಕರೆದೊಯ್ಯಲು ತಮ್ಮ ಬಳಿ ಹಣವಿಲ್ಲದ ಕಾರಣಕ್ಕೆ ಬಡ ತಂದೆ ತಾಯಿ ಕಂಗಾಲಾಗಿದ್ದಾರೆ. ಬಳಿಕ ಬೇರೆ ವಿಧಿಯಿಲ್ಲದೆ ತಾಯಿಯೇ ಮಗನನ್ನು ಎತ್ತಿಕೊಂಡು ಬೇರೆ ಆಸ್ಪತ್ರೆಗೆ ತೆರಳುತ್ತಿದ್ದರು.

    ಮಾರ್ಗ ಮಧ್ಯೆಯೇ ಬಾಲಕ ಸಾವನ್ನಪ್ಪಿದ್ದು, ಮಗನ ಶವವನ್ನು ತಾಯಿ ಹೊತ್ತುಕೊಂಡೇ ಮನೆಗೆ ತೆರೆಳಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಸರಿಯಾದ ಸಮಯಕ್ಕೆ ಅಂಬುಲೆನ್ಸ್ ವ್ಯವಸ್ಥೆ ನೀಡಿದ್ದರೆ ತಮ್ಮ ಮಗ ಉಳಿಯುತ್ತಿದ್ದ. ನಾವು ಬಡವರು ಎಂದು ನಮ್ಮನ್ನು ನಿರ್ಲಕ್ಷಿಸಿದ್ದಾರೆ ಎಂದು ಮೃತ ಬಾಲಕನ ಪೋಷಕರು ಆರೋಪಿಸಿದ್ದಾರೆ.

    ಈ ಬಗ್ಗೆ ಮಾತನಾಡಿದ ಬಾಲಕನ ತಂದೆ, ನಾವು ಸೋಮವಾರ ಬೆಳಗ್ಗೆ ಮಗನನ್ನು ಆಸ್ಪತ್ರಗೆ ಕರೆದೋಯ್ದಿದ್ದೆವು. ಆದರೆ ಅಲ್ಲಿನ ವೈದ್ಯರು ಮಗು ಸ್ಥಿತಿ ಗಂಭೀರವಾಗಿದೆ ಬೇರೆಡೆ ಚಿಕಿತ್ಸೆ ಕೊಡಿಸಿ ಎಂದು ಸೂಚಿಸಿದರು. ಆಗ ನಾವು ಅಂಬುಲೆನ್ಸ್ ವ್ಯವಸ್ಥೆ ನೀಡಲು ಮನವಿ ಮಾಡಿದಾಗ ಸಿಬ್ಬಂದಿ ನಿರಾಕರಿಸಿದರು. ಆಸ್ಪತ್ರೆ ಆವರಣದಲ್ಲಿ ಮೂರು ಅಂಬುಲೆನ್ಸ್ ಇದ್ದರೂ ಕೂಡ ನಮ್ಮ ಮನವಿಯನ್ನು ನಿರ್ಲಕ್ಷಿಸಿದರು ಎಂದು ಕಣ್ಣೀರಿಟ್ಟಿದ್ದಾರೆ.

    ಪೋಷಕರ ಆರೋಪವನ್ನು ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ತಳ್ಳಿಹಾಕಿದ್ದಾರೆ. ಬಾಲಕನ ಸ್ಥಿತಿ ಗಂಭೀರವಾಗಿದ್ದ ಕಾರಣಕ್ಕೆ ಲಕ್ನೋ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಂದಿದ್ದೇವು. ಆದರೆ ಆ ನಂತರ ಪೋಷಕರು ಏನು ಮಾಡಿದರು ಎಂದು ನಮಗೆ ಗೊತ್ತಿಲ್ಲ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

  • ಸ್ಮೃತಿ ಇರಾನಿ ಆಪ್ತನ ಕೊಲೆ ಪ್ರಕರಣ- ಮೂವರ ಬಂಧನ, ಇಬ್ಬರು ನಾಪತ್ತೆ

    ಸ್ಮೃತಿ ಇರಾನಿ ಆಪ್ತನ ಕೊಲೆ ಪ್ರಕರಣ- ಮೂವರ ಬಂಧನ, ಇಬ್ಬರು ನಾಪತ್ತೆ

    ಲಕ್ನೋ: ಅಮೇಠಿಯ ನೂತನ ಸಂಸದೆ ಸ್ಮೃತಿ ಇರಾನಿ ಅವರ ಆಪ್ತ ಸುರೇಂದ್ರ ಸಿಂಗ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳನ್ನು ಇಂದು ಪೊಲೀಸರು ಬಂಧಿಸಿದ್ದು, ಇನ್ನುಳಿದ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

    ರಾಜಕೀಯ ದ್ವೇಷದ ಹಿನ್ನೆಲೆ ಐವರು ದುಷ್ಕರ್ಮಿಗಳು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾಗಿದ್ದ ಸುರೇಂದ್ರ ಸಿಂಗ್ ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ. ಈಗಾಗಲೇ ಘಟನೆಯಲ್ಲಿ ಶಾಮಿಲಾಗಿದ್ದ 3 ಮಂದಿಯನ್ನು ಬಂಧಿಸಲಾಗಿದೆ. ಉಳಿದ 2 ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಅವರನ್ನೂ ಕೂಡ ಆದಷ್ಟು ಬೇಗ ಬಂಧಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.

    ಶನಿವಾರ ರಾತ್ರಿ ಸುರೇಂದ್ರ ಸಿಂಗ್ ಅವರ ಮೇಲೆ ಗುಂಡಿನ ದಾಳಿ ನಡೆದಿತ್ತು. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡುವ ಪ್ರಯತ್ನ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದರು. ಆದರೆ ಭಾನುವಾರದಂದು ಈ ಘಟನೆ ಸಂಬಂಧ ಅನುಮಾನದ ಮೇರೆಗೆ ಕೆಲವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದರು. ಆದರೆ ಹತ್ಯೆ ಮಾಡಲು ಕಾರಣ ಏನು ಎನ್ನುವುದು ತಿಳಿದು ಬಂದಿರಲಿಲ್ಲ. ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿಯೇ ಕೊಲೆ ಮಾಡಿರುವ ಶಂಕೆಯಿದೆ ಎಂದು ಪೊಲೀಸರು ಹೇಳಿದರು.

    ಅಮೇಠಿಯಲ್ಲಿ ಪ್ರಚಾರ ಹಾಗೂ ಚುನಾವಣೆ ವೇಳೆ ತಮ್ಮೊಂದಿಗೆ ಇದ್ದು ಉತ್ತಮವಾಗಿ ಸಹಕರಿಸಿದ್ದ ಸುರೇಂದ್ರ ಸಿಂಗ್ ಅವರ ಪಾರ್ಥಿವ ಶರೀರಕ್ಕೆ ಸ್ಮೃತಿ ಇರಾನಿ ಹೆಗಲು ಕೊಟ್ಟಿದ್ದರು. ಅಂತ್ಯಸಂಸ್ಕಾರದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು, ಬೇಕಾದರೆ ಆರೋಪಿಗಳಿಗೆ ಶಿಕ್ಷೆ ಕೊಡಿಸಲು ಸುಪ್ರೀಂ ಕೋರ್ಟ್‍ಗೆ ಹೋಗಲು ನಾನು ಸಿದ್ಧ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

  • ಮಗುವಿಗೆ `ನರೇಂದ್ರ ಮೋದಿ’ ಎಂದು ಹೆಸರಿಟ್ಟ ಮುಸ್ಲಿಂ ದಂಪತಿ

    ಮಗುವಿಗೆ `ನರೇಂದ್ರ ಮೋದಿ’ ಎಂದು ಹೆಸರಿಟ್ಟ ಮುಸ್ಲಿಂ ದಂಪತಿ

    ಲಕ್ನೋ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟಬಹುಮತಗಳೊಂದಿಗೆ ಗೆದ್ದು ಮತ್ತೆ ಸರ್ಕಾರ ರಚಿಸಲು ಸಜ್ಜಾಗಿದೆ. ಈ ನಡುವೆ ಉತ್ತರ ಪ್ರದೇಶದಲ್ಲಿ ಮುಸ್ಲಿಂ ದಂಪತಿ ತಮ್ಮ ಮಗುವಿಗೆ `ನರೇಂದ್ರ ಮೋದಿ’ ಎಂದು ನಾಮಕರಣ ಮಾಡುವ ಮೂಲಕ ಅಭಿಮಾನವನ್ನು ಮೆರೆದಿದ್ದಾರೆ.

    ಇಡೀ ದೇಶದ ಜನತೆ ಪ್ರಧಾನಿ ಮೋದಿ ಅವರ ಕಾರ್ಯವೈಖರಿಗೆ, ದೇಶದ ಅಭಿವೃದ್ಧಿಗಾಗಿ ಕೈಗೊಂಡ ಯೋಜನೆಗಳನ್ನು ಕಂಡು ಮನಸೋತು, ಮತ್ತೊಮ್ಮೆ ಅಧಿಕಾರಕ್ಕೆ ಬರಲು ಅವಕಾಶ ಮಾಡಿಕೊಟ್ಟಿದ್ದಾರೆ. ಎಲ್ಲೆಡೆ ಮೋದಿ ಹವಾ ಬಹಳ ಜೋರಾಗಿಯೇ ಇದೆ. ಈ ಮಧ್ಯೆ ಉತ್ತರಪ್ರದೇಶದ ಗೊಂಡಾ ಜಿಲ್ಲೆಯ ಮುಸ್ಲಿಂ ಪರಿವಾರ ತಮ್ಮ ಮಗುವಿಗೆ ಮೋದಿ ಹೆಸರಿಟ್ಟಿದ್ದಾರೆ. ಬಿಜೆಪಿ ಗೆಲುವನ್ನು ಸಂಭ್ರಮಿಸುವ ಸಲುವಾಗಿ ಮುಸ್ಲಿಂ ದಂಪತಿ ಮೇ 23ರಂದು ಹುಟ್ಟಿದ ತಮ್ಮ ಗಂಡು ಮಗುವಿಗೆ `ನರೇಂದ್ರ ಮೋದಿ’ ಎಂದು ನಾಮಕರಣ ಮಾಡಿ, ಮೋದಿ ಮೇಲಿನ ಅಭಿಮಾನ, ಪ್ರೀತಿಯನ್ನು ತೋರಿಸಿದ್ದಾರೆ.

    ಎಎನ್‍ಐ ಜೊತೆ ಮಗುವಿನ ತಾಯಿ ಮಿನಾಜ್ ಬೇಗಂ ಮಾತನಾಡಿ, ಪ್ರಧಾನಿ ಮೋದಿ ಅವರ ಆದರ್ಶಗಳನ್ನು ನನ್ನ ಮಗನೂ ಪಾಲಿಸಬೇಕು. ಅವರಂತೆ ನನ್ನ ಮಗನೂ ದೊಡ್ಡ ವ್ಯಕ್ತಿಯಾಗಬೇಕು. ನಮ್ಮ ಮಗು ಮೇ 23ರಂದು ಜನಿಸಿದೆ, ಕೂಡಲೇ ನಾನು ದುಬೈನಲ್ಲಿರುವ ನನ್ನ ಪತಿಗೆ ಕರೆ ಮಾಡಿದ್ದೆ. ಆಗ ಅವರು ಮೋದಿ ಚುನಾವಣೆಯಲ್ಲಿ ಗೆದ್ದಿದ್ದಾರಾ ಎಂದು ಕೇಳಿದರು. ನಮ್ಮ ಮನೆಯವರು ಮೋದಿ ಅಭಮಾನಿ. ಹೀಗಾಗಿ ನಾನು ಮೋದಿ ಅವರ ಹೆಸರನ್ನೇ ಮಗನಿಗೆ ಇಟ್ಟಿದ್ದೇನೆ. ನನ್ನ ಮಗ ಸಹ ನರೇಂದ್ರ ಮೋದಿ ಅವರ ತರಹ ಒಳ್ಳೆಯ ಕೆಲಸಗಳನ್ನು ಮಾಡಿ, ಯಶಸ್ಸು ಗಳಿಸಿ ಎತ್ತರಕ್ಕೆ ಬೆಳೆಯಲಿ ಎಂದು ಹೇಳಿದರು.

    ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ ನಾನೋಬ್ಬ ಚೌಕಿದಾರ್ ಎಂದಿದ್ದರು. ಆದರೆ ಶನಿವಾರ “ನರ” ಎಂಬ ಪದವನ್ನು ಘೋಷಣೆ ಮಾಡಿದ್ದಾರೆ. “ರಾಷ್ಟ್ರೀಯ ಮಹತ್ವಾಕಾಂಕ್ಷೆ” ಮತ್ತು “ಪ್ರಾದೇಶಿಕ ಮಹತ್ವಾಕಾಂಕ್ಷೆ” (national ambition and regional aspiration) ಎಂದು ನರ ಪದವನ್ನು ಅರ್ಥೈಸಿದ್ದರು. ನೂತನವಾಗಿ ಅಧಿಕಾರಕ್ಕೆ ಬರಲಿರುವ ಎನ್‍ಡಿಎ ಸರ್ಕಾರ, ಪ್ರಾದೇಶಿಕ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಜನರ ಅಭಿವೃದ್ಧಿಗಾಗಿ ಶ್ರಮಿಸಲಿದೆ ಎಂದು ಜನರಿಗೆ ಮತ್ತೊಮ್ಮೆ ಒಳ್ಳೆಯ ಆಡಳಿತ ನೀಡುತ್ತೇವೆ ಎಂದು ಮೋದಿ ಭರವಸೆ ನೀಡಿದರು.

  • ಇಫ್ತಾರ್ ಕೂಟಕ್ಕೆ ಆಹ್ವಾನಿಸಿಲ್ಲ ಎಂದು ಗುಂಡಿಕ್ಕಿ ಮೂವರು ಮಕ್ಕಳ ಹತ್ಯೆ

    ಇಫ್ತಾರ್ ಕೂಟಕ್ಕೆ ಆಹ್ವಾನಿಸಿಲ್ಲ ಎಂದು ಗುಂಡಿಕ್ಕಿ ಮೂವರು ಮಕ್ಕಳ ಹತ್ಯೆ

    ಲಕ್ನೋ: ರಂಜಾನ್‍ನ ಇಫ್ತಾರ್ ಪಾರ್ಟಿಗೆ ಆಹ್ವಾನಿಸಿಲ್ಲ ಎಂದು ವ್ಯಕ್ತಿಯೊಬ್ಬ ಒಂದೇ ಕುಟುಂಬದ ಮೂವರು ಮಕ್ಕಳನ್ನು ಗುಂಡಿಕ್ಕಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಬುಲಂದ್‍ಶಹರ್ ನಲ್ಲಿ ನಡೆದಿದೆ.

    ಆಸ್ಮಾ, ಅಲೀಮಾ ಮೋಹೆ ಹಾಗೂ ಅಬ್ದುಲ್ಲಾ ಮೃತ ದುರ್ದೈವಿಗಳು. ಮೂವರು ಮಕ್ಕಳು 7ರಿಂದ 8 ವರ್ಷದವರು ಎಂದು ಹೇಳಲಾಗಿದ್ದು, ಇವರ ಕುಟುಂಬದವರು ಶುಕ್ರವಾರ ಇಫ್ತಾರ್ ಪಾರ್ಟಿ ಆಯೋಜಿಸಿದ್ದರು. ಈ ಪಾರ್ಟಿಗೆ ತನ್ನನ್ನು ಆಹ್ವಾನಿಸಿಲ್ಲ ಎಂದು ಬೇಸರದಿಂದ ವ್ಯಕ್ತಿ ಮೂವರು ಮಕ್ಕಳನ್ನು ಕೊಲೆ ಮಾಡಿದ್ದಾನೆ.

    ವ್ಯಕ್ತಿ ಬೇಸರದಿಂದ ಮೂವರನ್ನು ಮಕ್ಕಳನ್ನು ಗುಂಡಿಕ್ಕಿ ಕೊಲೆ ಮಾಡಿದಲ್ಲದೇ ಅವರ ಮೃತದೇಹವನ್ನು ದುತೂರಿ ಗ್ರಾಮದ ಅರಣ್ಯದಲ್ಲಿದ್ದ ಬಾವಿಯಲ್ಲಿ ಎಸೆದಿದ್ದನು. ಮಕ್ಕಳು ಕಾಣಿಸದೇ ಇದ್ದಾಗ ಪೋಷಕರು ಶುಕ್ರವಾರ ರಾತ್ರಿ ಸುಮಾರು 9.22ಕ್ಕೆ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿದ್ದಾರೆ ಎಂದು 100ಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದರು.

    ಪೊಲೀಸರು ಈ ಪ್ರಕರಣದ ಬಗ್ಗೆ ಹೆಚ್ಚು ಗಮನ ಕೊಡಲಿಲ್ಲ ಹಾಗೂ ದೂರು ಕೂಡ ದಾಖಲಿಸಿಲ್ಲ. ಈ ಪ್ರಕರಣದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದ ಕಾರಣ ಧೃವ್ ಭುಷಣ್ ದುಬೆ ಹಾಗೂ ಮುಂಶಿಯ ಎಸ್‍ಎಸ್‍ಪಿಯನ್ನು ಕೆಲಸದಿಂದ ಸಸ್ಪೆಂಡ್ ಮಾಡಲಾಗಿದೆ.

  • ಯುವಕನ ಮರ್ಮಾಂಗ ಕತ್ತರಿಸಿದ ಮಂಗಳಮುಖಿಯರು!

    ಯುವಕನ ಮರ್ಮಾಂಗ ಕತ್ತರಿಸಿದ ಮಂಗಳಮುಖಿಯರು!

    ಲಕ್ನೋ: ಮೂವರು ಮಂಗಳಮುಖಿಯರು ಸೇರಿ ಯುವಕನ ಮರ್ಮಾಂಗ ಕತ್ತರಿಸಿದ ಘಟನೆ ಉತ್ತರ ಪ್ರದೇಶದ ಶಾಹಜಹಾನ್‍ಪುರದಲ್ಲಿ ನಡೆದಿದೆ.

    20 ವರ್ಷದ ಯುವಕ ಮದುವೆ ಮನೆಗೆ ಹೋಗಿ ಅಲ್ಲಿ ಡ್ಯಾನ್ಸ್ ಮಾಡಿದ್ದನು. ಇದು ಮಂಗಳಮುಖಿಯರಿಗೆ ಇಷ್ಟವಾಗಲಿಲ್ಲ. ಹಾಗಾಗಿ ಅವರು ಯುವಕನ ಮರ್ಮಾಂಗವನ್ನೇ ಕತ್ತರಿಸಿದ್ದಾರೆ. ಈ ಹಿಂದೆ ಯುವಕನನ್ನು ಮಂಗಳಮುಖಿಯಂತೆ ಮಾಡಲು ಮೂವರು ಪ್ರಯತ್ನಿಸಿದ್ದರು. ಆ ಬಳಿಕ ಯುವಕ ಮಂಗಳಮುಖಿಯರಿಂದ ದೂರವಾಗಿದ್ದನು.

    ಈ ಘಟನೆ ನಡೆಯುವ ಹಿಂದಿನ ದಿನ ಮಂಗಳಮುಖಿಯರು ಫರೂಕಬಾದ್‍ನಲ್ಲಿ ಇದ್ದ ಯುವಕನ ಮನೆಗೆ ಹೋಗಿದ್ದಾರೆ. ಮದುವೆಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಮಂಗಳಮುಖಿಯರು ಯುವಕನನ್ನು ಕೊಠಡಿವೊಂದರಲ್ಲಿ ಕೂಡಿ ಹಾಕಿದ್ದಾರೆ. ಕೂಡಿ ಹಾಕಿದಲ್ಲದೇ ಯುವಕನ ಮೇಲೆ ಹಲ್ಲೆ ನಡೆಸಿ ಮರ್ಮಾಂಗವನ್ನು ಕತ್ತರಿಸಿದ್ದಾರೆ.

    ಮಂಗಳಮುಖಿಯರು ಯುವಕನನ್ನು 10 ದಿನ ಕೊಠಡಿಯಲ್ಲಿ ಕೂಡಿ ಹಾಕಿ, ರೂಮಿನ ಹೊರಗೆ ಮಂಗಳಮುಖಿಯರು ಕಾದು ನಿಂತಿದ್ದರು. ಸಮಯ ಸಿಕ್ಕಿದ ತಕ್ಷಣ ಯುವಕ ಅಲ್ಲಿಂದ ತಪ್ಪಿಸಿಕೊಂಡು ಹೋಗಿದ್ದಾನೆ. ಯುವಕ ರಾತ್ರಿ ತನ್ನ ಮನೆಗೆ ತಲುಪಿ ಪೋಷಕರ ಜೊತೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾನೆ.

    ಯುವಕ ದೂರು ನೀಡಿದ ಬಳಿಕ ಪೊಲೀಸರು ಆತನನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ಕಳುಹಿಸಿದ್ದರು. ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತನ ಸ್ಥಿತಿ ಗಂಭೀರವಾಗಿದೆ. ಸದ್ಯ ಪೊಲೀಸರು ದೂರು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.