Tag: lucknow

  • 2 ತಿಂಗಳ ಕಂದಮ್ಮನಿಗೆ ಬೆಂಕಿ ಹಚ್ಚಿ ಕೊಂದ ತಾಯಿ

    2 ತಿಂಗಳ ಕಂದಮ್ಮನಿಗೆ ಬೆಂಕಿ ಹಚ್ಚಿ ಕೊಂದ ತಾಯಿ

    ಲಕ್ನೋ: ಪಾಪಿ ತಾಯಿಯೊಬ್ಬಳು ಎರಡು ತಿಂಗಳ ಕಂದಮ್ಮನಿಗೆ ಬೆಂಕಿ ಹಚ್ಚಿ ಕೊಲೆ ಮಾಡಿರುವ ದಾರುಣ ಘಟನೆ ಉತ್ತರ ಪ್ರದೇಶದ ಸೀತಾಪುರದಲ್ಲಿ ನಡೆದಿದೆ.

    ಎರಡು ತಿಂಗಳ ಮಗು ಅನಾರೋಗ್ಯದಿಂದ ಬಳಲುತ್ತಿತ್ತು. ಅಷ್ಟೇ ಅಲ್ಲದೇ ಯಾವುದೇ ಚಿಕಿತ್ಸೆಗೂ ಮಗು ಸ್ಪಂದಿಸುತ್ತಿರಲಿಲ್ಲ. ಇದರಿಂದ ಆರೋಪಿ ತಾಯಿ ಖಿನ್ನತೆಗೆ ಒಳಗಾಗಿದ್ದಳು. ಮಗು ಸದಾ ಅನಾರೋಗ್ಯದಿಂದ ಇರುತ್ತದೆ ಎಂದು ನೊಂದು ಪಾಪಿ ತಾಯಿ ಎರಡು ತಿಂಗಳ ಕಂದಮ್ಮನಿಗೆ ಬೆಂಕಿ ಹಚ್ಚಿ ಕ್ರೂರವಾಗಿ ಹತ್ಯೆ ಮಾಡಿದ್ದಾಳೆ.

    ಮಗು ಮೃತಪಟ್ಟ ಬಳಿಕ ಆರೋಪಿ ತಾಯಿ ಸಂಪೂರ್ಣ ಮನೆಗೆ ಬೆಂಕಿ ಹಚ್ಚಿದ್ದಾಳೆ. ಬಳಿಕ ಆಕೆಯ ಮನೆಯಿಂದ ಹೊರಗೆ ಬಂದು ನೆರೆಹೊರೆಯವರಿಗೆ ತಾನು ಮಾಡಿದ ಕೃತ್ಯದ ಬಗ್ಗೆ ತಿಳಿಸಿ ಅಲ್ಲಿಂದ ಪರಾರಿಯಾಗಿದ್ದಾಳೆ ಎಂದು ಎಸಿಪಿ ಮಧುಬನ್ ಸಿಂಗ್ ತಿಳಿಸಿದರು.

    ನೆರೆಹೊರೆಯವರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಹೋಗಿ ಪರಿಶೀಲನೆ ನಡೆಸಿ ಮೃತ ಮಗುವಿನ ಶವವನ್ನು ವಶಪಡಿಸಿಕೊಂಡಿದ್ದಾರೆ. ನಂತರ ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಇತ್ತ ಪರಾರಿಯಾಗಿದ್ದ ಆರೋಪಿ ಮಹಿಳೆಯನ್ನು ವಶಕ್ಕೆ ಪಡೆದು ತನಿಖೆಯನ್ನು ಮುಂದುವರಿಸಿದ್ದಾರೆ.

  • ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರ ಬರ್ಬರ ಹತ್ಯೆ

    ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರ ಬರ್ಬರ ಹತ್ಯೆ

    ಲಕ್ನೋ: ಹಲ್ಲೆ ಮಾಡಿ ಒಂದೇ ಕುಟುಂಬದ ಐವರನ್ನು ಕ್ರೂರವಾಗಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಹಮೀರ್ಪುರ ಜಿಲ್ಲೆಯಲ್ಲಿ ನಡೆದಿದೆ.

    ಈ ಘಟನೆ ರಾಣಿ ಲಕ್ಷ್ಮಿಬಾಯಿ ಮೊಹಲ್ಲಾದಲ್ಲಿ ಗುರುವಾರ ಸಂಜೆ ನಡೆದಿದೆ. ರಾಯೀಸ್ (27), ಪತ್ನಿ ರೋಶನಿ (25) ಮಕ್ಕಳು ಆಲಿಯಾ (4) ತಾಯಿ ಸಕೀನಾ (80) ಮತ್ತು ರೋಶಿನಿಯ ಸಂಬಂಧಿ (15) ಮೃತ ದುರ್ದೈವಿಗಳು ಎಂದು ಎಸ್‍ಪಿ ಹೇಮ್‍ರಾಜ್ ಮೀನಾ ತಿಳಿಸಿದ್ದಾರೆ.

    ಮೃತ ರಾಯೀಸ್ ಟ್ರಕ್ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಐವರು ನೂರ್ ಬಕ್ಷ್ ಕುಟುಂಬದವರು ಎಂದು ತಿಳಿದು ಬಂದಿದೆ. ನೂರ್ ಬಕ್ಷ್‍ ಮದುವೆಗೆಂದು ಪಕ್ಕದ ಗ್ರಾಮಕ್ಕೆ ಹೋಗಿದ್ದರು. ಅವರು ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಬಂದಾಗ ಮನೆಯಲ್ಲಿ ಐವರು ರಕ್ತದ ಮಡುವಿನಲ್ಲಿ ಬಿದ್ದು ಮೃತಪಟ್ಟಿದ್ದರು. ಇದನ್ನು ನೋಡಿದ ತಕ್ಷಣ ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ.

    ಮೃತರ ತಲೆಗೆ ಸುತ್ತಿಗೆಯಿಂದ ಅಥವಾ ಕಲ್ಲಿನಿಂದ ಹೊಡೆದು ಕೊಲೆ ಮಾಡಿರಬಹುದು. ಸದ್ಯಕ್ಕೆ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನಿಸಲಾಗಿದೆ. ವರದಿ ಬಂದ ನಂತರ ಕೊಲೆ ಮಾಡಲು ಯಾವ ರೀತಿಯ ಶಸ್ತ್ರವನ್ನು ಬಳಸಿದ್ದಾರೆ ಎಂದು ತಿಳಿದು ಬರುತ್ತದೆ. ಇಬ್ಬರು ಮಕ್ಕಳು ಸೇರಿದಂತೆ ಐವರನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ ಎಂದು ಇನ್ಸ್ ಪೆಕ್ಟರ್ ಅನಿಲ್ ರಾವ್ ತಿಳಿಸಿದ್ದಾರೆ.

    ನೂರ್ ಬಕ್ಷ್‍ಗೆ ಇಬ್ಬರು ಗಂಡು ಮಕ್ಕಳಿದ್ದು, ಎರಡನೇ ಮಗನ ಮನೆಯಲ್ಲಿ ವಾಸವಾಗಿದ್ದರು. ಘಟನೆ ನಡೆದಾಗ ಮೊದಲನೇ ಮಗ ಇರಲಿಲ್ಲ. ಇನ್ನೋ ದರೋಡೆ ಮಾಡಲು ಬಂದ ದುಷ್ಕರ್ಮಿಗಳು ಈ ಕೊಲೆ ಮಾಡಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಕೊಲೆ ನಡೆದ ಮನೆಯಲ್ಲಿ ಯಾವುದೇ ರೀತಿಯ ದರೋಡೆ ಯತ್ನ ನಡೆದಿಲ್ಲ. ಆ ರೀತಿಯ ಯಾವುದೇ ಪುರಾವೆಗಳು ಕೂಡ ನಮಗೆ ಸಿಕ್ಕಿಲ್ಲ. ಹೀಗಾಗಿ ಪ್ರಾಥಮಿಕ ತನಿಖೆಯ ಪ್ರಕಾರ ಕೌಟುಂಬಿಕ ವಿವಾದದ ಹಿನ್ನೆಲೆಯಲ್ಲಿ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

  • ತವರಿಗೆ ಹೋಗುತ್ತೇನೆಂದ ಪತ್ನಿಯ ಮೂಗನ್ನೇ ಕಚ್ಚಿ ತುಂಡರಿಸಿದ ಭೂಪ

    ತವರಿಗೆ ಹೋಗುತ್ತೇನೆಂದ ಪತ್ನಿಯ ಮೂಗನ್ನೇ ಕಚ್ಚಿ ತುಂಡರಿಸಿದ ಭೂಪ

    ಲಕ್ನೋ: ತವರಿಗೆ ಹೋಗುತ್ತೇನೆಂದು ಹೇಳಿದ ಪತ್ನಿಯ ಮೇಲೆ ಸಿಟ್ಟಿಗೆದ್ದ ಪತಿಯೊಬ್ಬ ಆಕೆಯ ಮೂಗನ್ನೇ ಕಚ್ಚಿ ತುಂಡು ಮಾಡಿದ ಅಮಾನವೀಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಹಲ್ಲೆಗೊಳಗಾದ ಮಹಿಳೆಯನ್ನು ಆರತಿ ಹಾಗೂ ಆರೋಪಿಯನ್ನು ಕುಮಾರ್ ಎಂದು ಗುರುತಿಸಲಾಗಿದೆ. ಸೋಮವಾರದಂದು ಈ ಘಟನೆ ನಡೆದಿದೆ. ಪ್ರತಿ ದಿನ ಪತಿ ಕುಡಿದು ಬಂದು ಪತ್ನಿಗೆ ಹಿಂಸೆ ಕೊಡುತ್ತಿದ್ದನು. ಆದರೆ ಇದನ್ನು ಪತ್ನಿ ಸಹಿಸಿಕೊಂಡು ಆತನ ಜೊತೆಗೆ ಹೇಗೋ ಸಂಸಾರ ನಡೆಸಿಕೊಂಡು ಹೋಗುತ್ತಿದ್ದಳು.

    ಪತ್ನಿ ಪಕ್ಕದೂರಿನಲ್ಲಿರುವ ತನ್ನ ತವರಿಗೆ ಹೋಗಿ ತನ್ನ ತಂದೆ-ತಾಯಿಯನ್ನು ನೋಡಿಕೊಂಡು ಬರುತ್ತೇನೆ ಎಂದು ಪತಿ ಬಳಿ ಹೇಳಿದ್ದಳು. ಇದೇ ಕಾರಣಕ್ಕೆ ಇಬ್ಬರ ನಡುವೆ ಸೋಮವಾರ ಬೆಳಗ್ಗೆ ಜಗಳವಾಗಿತ್ತು. ಈ ವೇಳೆ ಕೋಪಗೊಂಡ ಪತಿರಾಯ ಪತ್ನಿಯ ಮೂಗನ್ನೇ ಕಚ್ಚಿ ತುಂಡು ಮಾಡಿ ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸದ್ಯ ಮಹಿಳೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ ತುಂಡಾಗಿರುವ ಮೂಗನ್ನು ಶಸ್ತ್ರಚಿಕಿತ್ಸೆ ಮೂಲಕ ಜೋಡಿಸಬಹುದಿತ್ತು, ಆದರೆ ತುಂಡಾದ ಮೂಗಿನ ಭಾಗ ಲಭ್ಯವಾಗದ ಹಿನ್ನೆಲೆ ಮೂಗನ್ನು ಜೋಡಿಸಲು ಆಗಿಲ್ಲ. ಆರತಿಗೆ ಈಗ ಕೃತಕ ಮೂಗನ್ನು ಅಳವಡಿಸಬಹುದು. ಆದರೆ ಅದು ಬಹಳ ದುಬಾರಿ ಪ್ರಕ್ರಿಯೆ ಆಗಿರುವುದರಿಂದ ಹೆಚ್ಚಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಸೌಲಭ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.

    ಸದ್ಯ ಈ ಸಂಬಂಧ ಪ್ರಕರಣ ದಾಖಲಿಕೊಂಡ ಪೊಲೀಸರು ದಂಪತಿಯ ನೆರೆಹೊರೆಯವರನ್ನು ವಿಚಾರಣೆ ನಡೆಸಿದ್ದು, ಆರೋಪಿಯನ್ನು ಸೆರೆ ಹಿಡಿಯಲು ಬಲೆ ಬೀಸಿದ್ದಾರೆ.

  • ಹೆತ್ತವರೊಂದಿಗೆ ಮಲಗಿದ್ದ ಬಾಲಕಿಯನ್ನು ಮಧ್ಯರಾತ್ರಿ ಹೊತ್ತೊಯ್ದು ರೇಪ್

    ಹೆತ್ತವರೊಂದಿಗೆ ಮಲಗಿದ್ದ ಬಾಲಕಿಯನ್ನು ಮಧ್ಯರಾತ್ರಿ ಹೊತ್ತೊಯ್ದು ರೇಪ್

    – ಇಟ್ಟಿಗೆಯಿಂದ ತಲೆಯನ್ನ ಚಚ್ಚಿ ಕೊಲೆ
    – ಬೆತ್ತಲೆಯಾಗಿ ಬಾಲಕಿ ಮೃತದೇಹ ಪತ್ತೆ

    ಲಕ್ನೋ: ತೆಲಂಗಾಣದಲ್ಲಿ 9 ತಿಂಗಳ ಮಗುವಿನ ಮೇಲೆ ರೇಪ್ ಮಾಡಲು ಯತ್ನಿಸಿ ಬಟ್ಟೆ ತೂರಿ ಕೊಲೆ ಮಾಡಿದ ಘಟನೆ ಮುನ್ನವೇ ಇಂತಹದ್ದೇ ಪೈಶಾಚಿಕ ಘಟನೆ ಲಕ್ನೋದಲ್ಲಿ ನಡೆದಿದೆ.

    ಉತ್ತರ ಪ್ರದೇಶದ ಉನ್ನಾವ್ ಜಿಲ್ಲೆಯಲ್ಲಿ 11 ವರ್ಷದ ಬಾಲಕಿಯ ಮೇಲೆ ರೇಪ್ ಮಾಡಲು ಯತ್ನಿಸಿ ಕೊಲೆ ಮಾಡಿರುವ ಘಟನೆ ಶುಕ್ರವಾರ ನಡೆದಿದೆ. ಘಟನೆಯ ಬಗ್ಗೆ ಪೋಕ್ಸೋ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್‍ಗಳ ಅಡಿ ದೂರು ದಾಖಲಾಗಿದೆ.

    ರಾತ್ರಿ ವೇಳೆ ಪೋಕರ ಜೊತೆ ಮಲಗಿದ್ದ ಬಾಲಕಿ ಕಾಣೆಯಾಗಿದ್ದು, ಆದರೆ ಶೌಚಾಲಯಕ್ಕೆ ಹೋಗಿರಬಹುದೆಂದು ಕೆಲ ಸಮಯ ನೋಡುತ್ತಾರೆ. ಎಷ್ಟೇ ಸಮಯವಾದರು ಮಗಳು ಬಾರದೆ ಇರುವುದನ್ನು ಕಂಡು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಮನೆಯ ಸಮೀಪವೇ ಇದ್ದ ತೋಟದಲ್ಲಿ ಬಾಲಕಿಯ ಮೃತ ದೇಹ ಪತ್ತೆಯಾಗಿದ್ದು, ಬಾಲಕಿಯ ತಲೆಯನ್ನು ಇಟ್ಟಿಗೆಯಿಂದ ಜಜ್ಜಿ ಕೊಲೆ ಮಾಡಲಾಗಿತ್ತು.

    ಬಾಲಕಿಯ ಮೃತ ದೇಹ ನಗ್ನ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪೊಲೀಸರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಬಾಲಕಿಯ ಕುತ್ತಿಗೆ ಹಾಗೂ ಖಾಸಗಿ ಅಂಗಾಂಗಳ ಮೇಲೆ ಗಾಯವಾಗಿತ್ತು ಎಂದಿದ್ದಾರೆ.

    ಘಟನೆಯ ಸಂಬಂಧ ಉನ್ನಾವ್ ಎಸ್‍ಪಿ ಎಂಪಿ ವರ್ಮಾ ಪ್ರತಿಕ್ರಿಯೆ ನೀಡಿದ್ದು, ಘಟನೆ ಕುರಿತು ತನಿಖೆ ನಡೆಸಲು ತಂಡವನ್ನು ರಚನೆ ಮಾಡಲಾಗಿದೆ. ಬಾಲಕಿಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿಯ ಬಳಿಕ ಬಾಲಕಿಯ ಸಾವಿನ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಲಿದೆ ಎಂದಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಕಾಲುವೆಗೆ ಬಿದ್ದ ವಾಹನ – ಮದ್ವೆಯಿಂದ ಬರ್ತಿದ್ದ 7 ಮಂದಿ ಮಕ್ಕಳ ದುರ್ಮರಣ

    ಕಾಲುವೆಗೆ ಬಿದ್ದ ವಾಹನ – ಮದ್ವೆಯಿಂದ ಬರ್ತಿದ್ದ 7 ಮಂದಿ ಮಕ್ಕಳ ದುರ್ಮರಣ

    ಲಕ್ನೋ: ವಾಹನವೊಂದು ಕಾಲುವೆಗೆ ಬಿದ್ದ ಪರಿಣಾಮ ಏಳು ಮಂದಿ ಮಕ್ಕಳು ಮೃತಪಟ್ಟಿರುವ ಘಟನೆ ಇಂದು ಬೆಳಗ್ಗೆ ನಗರದಲ್ಲಿ ನಡೆದಿದೆ.

    ವಾಹನದಲ್ಲಿ ಸುಮಾರು 29 ಜನರು ಪ್ರಯಾಣ ಮಾಡುತ್ತಿದ್ದರು. ಎಲ್ಲಾ ಪ್ರಯಾಣಿಕರು ಮದುವೆಯಿಂದ ಹಿಂದಿರುಗುತ್ತಿದ್ದರು. ಆದರೆ ನಾಗ್ರಾಮ್ ಪ್ರದೇಶದಲ್ಲಿ ವಾಹನ ಚಾಲಕನ ನಿಯಂತ್ರಣ ತಪ್ಪಿ ಮುಂಜಾನೆ 3 ಗಂಟೆ ಸುಮಾರಿಗೆ ನಾಗ್ರಾಮ್ ಪ್ರದೇಶದ ಇಂದಿರಾ ಕಾಲುವೆಗೆ ಬಿದ್ದಿದೆ. ಪರಿಣಾಮ ಏಳು ಮಕ್ಕಳು ಮೃತಪಟ್ಟಿದ್ದಾರೆ.

    ವಾಹನ ಕಾಲುವೆಗೆ ಬಿದ್ದ ತಕ್ಷಣ ಸ್ಥಳೀಯರು 22 ಮಂದಿ ಅಪ್ರಾಪ್ತರನ್ನು ರಕ್ಷಿಸಿದ್ದಾರೆ. ಈ ಅವಘಡದ ಮಾಹಿತಿ ತಿಳಿದ ತಕ್ಷಣ ರಕ್ಷಣಾ ಕಾರ್ಯಾಚರಣೆಗಾಗಿ ಎನ್‍ಡಿಆರ್‍ಎಫ್‍ನ ತಂಡ ಸ್ಥಳಕ್ಕೆ ದೌಡಾಯಿಸಿದೆ. ಸದ್ಯಕ್ಕೆ ಮಕ್ಕಳ ಗುರುತು ಪತ್ತೆಯಾಗಿಲ್ಲ.

    ಕಾಲುವೆಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ರಕ್ಷಣಾ ಕಾರ್ಯಾಚರಣೆಗೆ ಕಷ್ಟವಾಗುತ್ತಿದೆ. ಆದರೂ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಸದ್ಯಕ್ಕೆ ಕಾಲುವೆಯಲ್ಲಿ ನೀರಿನ ಹರಿವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿ ಎಸ್.ಕೆ.ಭಗತ್ ತಿಳಿಸಿದ್ದಾರೆ.

    ಈ ಘಟನೆಯ ಬಗ್ಗೆ ತಿಳಿದ ಮುಖ್ಯಮಂತ್ರಿಗಳು ರಕ್ಷಣಾ ಕಾರ್ಯಾಚರಣೆಗೆ ಬೇಕಾದ ಎಲ್ಲಾ ರೀತಿಯಲ್ಲೂ ಸಹಾಯ ಮಾಡುವಂತೆ ಆದೇಶಿಸಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಮದುವೆಗೆ ಹೋದವರು ಮಸಣ ಸೇರಿದ್ರು- ರಸ್ತೆ ಅಪಘಾತಕ್ಕೆ 8 ಮಂದಿ ಬಲಿ

    ಮದುವೆಗೆ ಹೋದವರು ಮಸಣ ಸೇರಿದ್ರು- ರಸ್ತೆ ಅಪಘಾತಕ್ಕೆ 8 ಮಂದಿ ಬಲಿ

    ಲಕ್ನೋ: ಮದುವೆ ಮುಗಿಸಿ ತಡರಾತ್ರಿ ಮನೆಗೆ ತೆರೆಳುತ್ತಿದ್ದ ವೇಳೆ ಭೀಕರ ಅಪಘಾತ ಸಂಭವಿಸಿ 8 ಮಂದಿ ಸಾವನ್ನಪ್ಪಿ, 12 ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್- ಆಗ್ರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

    ಲೆಹ್ರವಾನ ಗ್ರಾಮದ ಸಮೀಪ ಈ ಅಪಘಾತ ಸಂಭವಿಸಿದೆ. ತಡರಾತ್ರಿ ಮದುವೆಗೆ ಹೋದವರು ಬರುತ್ತಿದ್ದ ವಾಹನ ಹಾಗೂ ಮಿನಿ- ಗೂಡ್ಸ್ ಕಾರಿಯರ್ ನಡುವೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವಾಹನ ನಜ್ಜುಗುಜ್ಜಾಗಿ ಹೋಗಿದ್ದು, ಸ್ಥಳದಲ್ಲೇ 8 ಮಂದಿ ಅಸುನೀಗಿದ್ದಾರೆ. ಹಾಗೆಯೇ 12 ಮಂದಿ ಇನ್ನೂ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ ಎಂದು ಸಂಭಾಲದ ಎಸ್‍ಪಿ ಯಮುನಾ ಪ್ರಸಾದ್ ತಿಳಿಸಿದ್ದಾರೆ.

    ನಾವು ಮದುವೆ ಕಾರ್ಯಕ್ರಮ ಮುಗಿಸಿಕೊಂಡು ತಡರಾತ್ರಿ ಊರಿಗೆ ಮರಳುತ್ತಿದ್ದೇವು. ಈ ವೇಳೆ ಈ ದುರ್ಘಟನೆ ನಡೆದಿದೆ ಎಂದು ಗಾಯಗೊಂಡ ವ್ಯಕ್ತಿಯೊಬ್ಬರು ಕಣ್ಣಿರಿಟ್ಟಿದ್ದಾರೆ.

    ಸದ್ಯ ಗಾಯಗೊಂಡವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಅಪಘಾತ ಬಗ್ಗೆ ತಿಳಿದು ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಂತಾಪ ಸೂಚಿಸಿದ್ದು, ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡುವ ಭರವಸೆ ನೀಡಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ವಂಚಿಸಿದ್ದ ಪ್ರಿಯಕರನ ಮೇಲೆ ಬಿಸಿ ಎಣ್ಣೆ ಎರಚಿದ ಪ್ರೇಯಸಿ

    ವಂಚಿಸಿದ್ದ ಪ್ರಿಯಕರನ ಮೇಲೆ ಬಿಸಿ ಎಣ್ಣೆ ಎರಚಿದ ಪ್ರೇಯಸಿ

    ಲಕ್ನೋ: ತನ್ನನ್ನು ಪ್ರೀತಿಸಿ ಕೊನೆಗೆ ಬೇರೆ ಹುಡುಗಿಯನ್ನು ಮದುವೆ ಆಗಲು ಮುಂದಾಗಿದ್ದ ಪ್ರಿಯಕರ ಮೇಲಿದ್ದ ಸಿಟ್ಟಿಗೆ ಯುವತಿಯೊಬ್ಬಳು ಆತನ ಮೇಲೆ ಬಿಸಿ ಬಿಸಿ ಸಾಸಿವೆ ಎಣ್ಣೆ ಎರಚಿ ತನ್ನ ಕೋಪವನ್ನು ತೀರಿಸಿಕೊಂಡಿದ್ದಾಳೆ.

    ಭಾನುವಾರದಂದು ಉತ್ತರಪ್ರದೇಶದಲ್ಲಿ ಈ ಘಟನೆ ನಡೆದಿದೆ. ಹಲ್ಲೆಗೊಳಗಾದ ಯುವಕನನ್ನು ಅನುಪ್‍ಷಹರ ನಿವಾಸಿ ಉಮೇಶ್ ಜೋಶಿ ಎಂದು ಗುರುತಿಸಲಾಗಿದೆ. ಉಮೇಶ್ ಒಬ್ಬಳು ಯುವತಿಯನ್ನು ಪ್ರೀತಿಸಿ ಆಕೆಗೆ ಕೈ ಕೊಟ್ಟು ಬೇರೊಬ್ಬಳ ಜೊತೆ ಮದುವೆ ಮಾಡಿಕೊಳ್ಳುತ್ತಿದ್ದನು. ಈ ಬಗ್ಗೆ ಮೋಸ ಹೋದ ಯುವತಿಗೆ ತಿಳಿದು ಆಕೆ ರೊಚ್ಚಿಗೆದ್ದು, ಉಮೇಶ್ ಮದುವೆ ದಿನವೇ ಆತನ ಮೇಲೆ ಬಿಸಿ ಬಿಸಿ ಸಾವಿವೆ ಎಣ್ಣೆ ಹಾಕಿ ಹಲ್ಲೆ ಮಾಡಿದ್ದಾಳೆ.

    ಇದರಿಂದ ಯುವಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸದ್ಯ ಚೇತರಿಸಿಕೊಂಡಿದ್ದಾನೆ. ಈ ಬಗ್ಗೆ ಯುವಕನ ತಾಯಿ ಮಾತನಾಡಿ, ನನ್ನ ಮಗನ ಮದುವೆಯನ್ನು ತಡೆದು, ಆತನ ಜೊತೆ ತಾನು ಮದುವೆಯಾಗಲು ಯುವತಿ ಪ್ರಯತ್ನಿಸುತ್ತಿದ್ದಳು. ಆದರೆ ಉಮೇಶ್ ಇದಕ್ಕೆ ಒಪ್ಪದೆ ನಾವು ನೋಡಿದ ಹುಡುಗಿ ಜೊತೆ ಮದುವೆಗೆ ಸಿದ್ಧನಾದ. ಇದಕ್ಕೆ ಆರೋಪಿ ನನ್ನ ಮಗನ ಮೇಲೆ ಹಲ್ಲೆ ನಡೆಸಿದ್ದಾಳೆ. ಆಕೆಯ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಘಟನೆ ಬಳಿಕ ಯುವತಿಯನ್ನು ವಶಕ್ಕೆ ಪಡೆದ ಪೊಲೀಸರು ಆಕೆಯ ಮೇಲೆ ಐಪಿಸಿ ಸೆಕ್ಷನ್ 327 ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಟೀಂ ಇಂಡಿಯಾ ಗೆಲುವನ್ನು ಸಂಭ್ರಮಿಸಿದ್ದಕ್ಕೆ ದಲಿತ ಯುವಕನ ಹತ್ಯೆ

    ಟೀಂ ಇಂಡಿಯಾ ಗೆಲುವನ್ನು ಸಂಭ್ರಮಿಸಿದ್ದಕ್ಕೆ ದಲಿತ ಯುವಕನ ಹತ್ಯೆ

    ಲಕ್ನೋ: ಭಾರತ-ಪಾಕಿಸ್ತಾನ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದ್ದಕ್ಕೆ ಸಂಭ್ರಮಿಸುತ್ತಿದ್ದ ದಲಿತ ಯುವಕನಿಗೆ ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಪ್ರತಾಪಗಢ ರಾಮ್‍ಪುರ್ ಬೆಲಾ ಗ್ರಾಮದಲ್ಲಿ ನಡೆದಿದೆ.

    ಪರಿಶಿಷ್ಟ ಜಾತಿಗೆ ಸೇರಿದ ಯುವಕ ವಿನಯ್ ಪ್ರಕಾಶ್ ಭಾನುವಾರ ಭಾರತ-ಪಾಕಿಸ್ತಾನ ಪಂದ್ಯವನ್ನು ವೀಕ್ಷಿಸುತ್ತಿದ್ದ. ಪಂದ್ಯದಲ್ಲಿ ಭಾರತ ಗೆದ್ದ ನಂತರ ಸಂಭ್ರಮ ವ್ಯಕ್ತಪಡಿಸಿ, ಕುಣಿದು ಕುಪ್ಪಳಿಸಿದ್ದಾನೆ. ಈ ಕುರಿತು ಇನ್ನೊಂದು ಸಮುದಾಯದೊಂದಿಗೆ ವಾದವನ್ನೂ ಮಾಡಿದ್ದಾನೆ. ಇದೇ ವಾದ ವಿಕೋಪಕ್ಕೆ ತಿರುಗಿ ಯುವಕ ವಾಸಿಸುತ್ತಿದ್ದ ಗುಡಿಸಲಿಗೆ ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    ಸೋಮವಾರ ಬೆಳಗ್ಗೆ ಗ್ರಾಮಸ್ಥರು ಗ್ರಾಮದ ಹೊರವಲಯದಲ್ಲಿರುವ ವಿನಯ್ ಪ್ರಕಾಶ ಅವರ ಗುಡಿಸಲನ್ನು ನೋಡಿದಾಗ ಸುಟ್ಟು ಕರಕಲಾಗಿತ್ತು. ಹತ್ತಿರ ಬಂದು ನೋಡಿದಾಗ ಪ್ರಕಾಶ್ ದೇಹವೂ ಸಹ ಗುರುತಿಸಲಾಗದಷ್ಟು ಸುಟ್ಟು ಕರಕಲಾಗಿತ್ತು. ಇದನ್ನು ಕಂಡ ಗ್ರಾಮಸ್ಥರು, ಕೊಲೆ ಎಂದು ಶಂಕಿಸಿದ್ದಾರೆ. ರಾತ್ರಿ ಕ್ರಿಕೆಟ್ ಪಂದ್ಯ ವೀಕ್ಷಿಸುವ ವೇಳೆ ಭಾರತ ತಂಡದ ಗೆಲುವಿನ ನಂತರ ನಡೆದ ವಾದಕ್ಕೆ ಪ್ರತಿಯಾಗಿ ಈ ಕೊಲೆ ನಡೆದಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

    ರಾಜ್ಯ ಎಸ್‍ಸಿ, ಎಸ್‍ಟಿ ಆಯೋಗ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಘಟನೆ ಕುರಿತು ತನಿಖೆ ನಡೆಸಿ ಆದಷ್ಟು ಬೇಗ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಂತೆ ಪ್ರತಾಪ್‍ಗಢ ಎಸ್‍ಪಿಗೆ ಮನವಿ ಮಾಡಿದ್ದು, ಘಟನೆ ಕುರಿತು ಆಯೋಗಕ್ಕೆ ವರದಿ ನೀಡಿದ್ದಾರೆ.

  • ಮಾಂತ್ರಿಕನ ಜೊತೆ ಸೆಕ್ಸ್‌ಗೆ ನಿರಾಕರಿಸಿದ್ದಕ್ಕೆ ಪತ್ನಿಯನ್ನು ನದಿಯಲ್ಲಿ ಮುಳುಗಿಸ್ದ

    ಮಾಂತ್ರಿಕನ ಜೊತೆ ಸೆಕ್ಸ್‌ಗೆ ನಿರಾಕರಿಸಿದ್ದಕ್ಕೆ ಪತ್ನಿಯನ್ನು ನದಿಯಲ್ಲಿ ಮುಳುಗಿಸ್ದ

    ಲಕ್ನೋ: ಮಾಂತ್ರಿಕನ ಜೊತೆ ಸೆಕ್ಸ್‌ಗೆ ನಿರಾಕರಿಸಿದ್ದಕ್ಕೆ ಪತಿಯೊಬ್ಬ ತನ್ನ ಪತ್ನಿಯನ್ನು ನದಿಯಲ್ಲಿ ಮುಳುಗಿಸಿ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಅಲಿಘರ್ ನಲ್ಲಿ ನಡೆದಿದೆ.

    ಮಾನ್‍ಪಾಲ್ ಕೊಲೆ ಮಾಡಿದ ಆರೋಪಿ. ಮಾನ್‍ಪಾಲ್ ತನ್ನ ಪತ್ನಿಯನ್ನು ಕೊಲೆ ಮಾಡುತ್ತಿರುವುದನ್ನು ಆತನ ಮಗ ನೋಡಿದ್ದಾನೆ. ಅಲ್ಲದೆ ತನ್ನ ತಾಯಿಯನ್ನು ರಕ್ಷಿಸಲು ಮುಂದಾದರೆ ಕೊಲುವುದಾಗಿ ಮಹಿಳೆಯ ಸಹೋದರ ಬೆದರಿಕೆ ಹಾಕಿದ್ದನು.

    ಈ ಬಗ್ಗೆ ಮಹಿಳೆಯ ಸಹೋದರ ರಾಜೇಶ್ ಕುಮಾರ್ ದೂರು ನೀಡಲು ದಾಡೋನ್ ಪೊಲೀಸ್ ಠಾಣೆಗೆ ಹೋಗಿದ್ದರು. ಅಲ್ಲದೆ ಎರಡು ದಿನಗಳ ಹಿಂದೆ ನನ್ನ ಸಹೋದರಿ ಭಯಗೊಂಡು ನನಗೆ ಕರೆ ಮಾಡಿ ಈ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಲು ಹೇಳಿದ್ದಳು ಎಂದು ರಾಜೇಶ್ ತಿಳಿಸಿದ್ದಾರೆ ಎಂದು ಎಸ್‍ಎಸ್‍ಪಿ ಆಕಾಶ್ ಕುಲ್ಹಾರಿ ತಿಳಿಸಿದ್ದಾರೆ.

    ಮಾಂತ್ರಿಕನ ವಿಷಯಕ್ಕಾಗಿ ಪತಿ -ಪತ್ನಿ ನಡುವೆ ಜಗಳ ನಡೆಯುತ್ತಿತ್ತು. ಬಳಿಕ ಗುರುವಾರ ಈ ವಿಷಯ ಇತ್ಯರ್ಥವಾಗಿ ಮಾನ್‍ಪಾಲ್ ನದಿ ಬಳಿ ಹೋಗೋಣ ಎಂದು ತನ್ನ ಪತ್ನಿಯನ್ನು ಕರೆದುಕೊಂಡು ಹೋದನು. ಅಲ್ಲಿಗೆ ಹೋಗುತ್ತಿದ್ದಂತೆ ಮಾನ್‍ಪಾಲ್ ಆಕೆಯನ್ನು ನದಿಗೆ ತಳ್ಳಿ ಕೊಲೆ ಮಾಡಿದ್ದಾನೆ.

    ಮಹಿಳೆಯನ್ನು ಕೊಲೆ ಮಾಡಿದ ನಂತರ ಮಾನ್‍ಪಾಲ್ ಹಾಗೂ ಮಾಂತ್ರಿಕ ಸಂತ್‍ದಾಸ್ ದುರ್ಗಾ ದಾಸ್ ನದಿಯಲ್ಲಿ ಈಜಿ ನೆರೆಯ ಬದೌನ್ ಜಿಲ್ಲೆಗೆ ಪರಾರಿಯಾದರು. ಈ ಬಗ್ಗೆ ದೂರು ನೀಡಿದ ಬಳಿಕ ಪೊಲೀಸರು ಇಬ್ಬರನ್ನು ಬಂಧಿಸಿ, ನದಿಯಿಂದ ಮಹಿಳೆಯ ಶವವನ್ನು ಹೊರ ತೆಗೆದರು.

  • ಗನ್ ತೋರಿಸಿ ಅಪ್ರಾಪ್ತ ಅಕ್ಕ-ತಂಗಿ ಮೇಲೆ ಗ್ಯಾಂಗ್‍ರೇಪ್

    ಗನ್ ತೋರಿಸಿ ಅಪ್ರಾಪ್ತ ಅಕ್ಕ-ತಂಗಿ ಮೇಲೆ ಗ್ಯಾಂಗ್‍ರೇಪ್

    ಲಕ್ನೋ: ಗದ್ದೆಗೆ ಹೋಗಿದ್ದ ಇಬ್ಬರು ಅಪ್ರಾಪ್ತೆಯರಿಗೆ ದುಷ್ಕರ್ಮಿಗಳು ಗನ್ ತೋರಿಸಿ ಸಾಮೂಹಿಕ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಉತ್ತರಪ್ರದೇಶದ ಮುಜಾಫರ್ ನಗರ ಸಮೀಪದ ಕೆಸರ್ವಾ ಗ್ರಾಮದಲ್ಲಿ ನಡೆದಿದೆ.

    ಕೆಸರ್ವಾ ಗ್ರಾಮದಲ್ಲಿ ಮಂಗಳವಾರದಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಂಗಳವಾರ ಕಬ್ಬಿನ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ತಾಯಿಯನ್ನು ನೋಡಲು 13 ಮತ್ತು 15 ವರ್ಷದ ವಯಸ್ಸಿನ ಅಕ್ಕ- ತಂಗಿ ತೆರೆಳಿದ್ದರು. ಈ ವೇಳೆ ಮಾರ್ಗ ಮಧ್ಯದಲ್ಲಿ ಬಾಲಕಿಯರನ್ನು ಅಡ್ಡಗಟ್ಟಿದ್ದ ನಾಲ್ವರು ದುಷ್ಕರ್ಮಿಗಳು, ಅವರಿಗೆ ಗನ್ ತೋರಿಸಿ ಹೆದರಿಸಿದ್ದಾರೆ. ಬಳಿಕ ಅವರ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ದುಷ್ಟತನ ಮೆರೆದಿದ್ದಾರೆ.

    ಕಬ್ಬಿನಗದ್ದೆಯಲ್ಲಿಯೇ ನಾಲ್ವರು ದುಷ್ಕರ್ಮಿಗಳು ಸೇರಿ ಗನ್ ತೋರಿಸಿ ಬಾಲಕಿಯರಿಬ್ಬರನ್ನು ಬೆದರಿಸಿ ಸಾಮೂಹಿಕ ಅತ್ಯಾಚಾರ ಮಾಡಿ ಪರಾರಿಯಾಗಿದ್ದಾರೆ. ಬಳಿಕ ಸಂತ್ರಸ್ತೆಯರು ಈ ಬಗ್ಗೆ ತಮ್ಮ ಪೋಷಕರ ಬಳಿ ಹೇಳಿದ್ದಾರೆ. ಕೂಡಲೇ ಪೋಷಕರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ನಾಲ್ಕು ಮಂದಿಯ ವಿರುದ್ಧ ಈಗಾಗಲೇ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

    ಉತ್ತರಪ್ರದೇಶದಲ್ಲಿ ಇತ್ತೀಚೆಗೆ ಅಪ್ರಾಪ್ತರ ಮೇಲಿನ ಅತ್ಯಾಚಾರ ಪ್ರಕರಣ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗ್ರಾಮೀಣ ಪ್ರದೇಶದಲ್ಲಿ ಗಸ್ತು ಹೆಚ್ಚಿಸಲು ಪೊಲೀಸರಿಗೆ ಸೂಚನೆ ನೀಡಿದ್ದಾರೆ.