Tag: lucknow

  • ಪತ್ನಿ ನೋಡಲು ಹೋಗ್ತಿದ್ದವನಿಗೆ ಬೆಂಕಿ ಹಚ್ಚಿದ ಗ್ರಾಮಸ್ಥರು

    ಪತ್ನಿ ನೋಡಲು ಹೋಗ್ತಿದ್ದವನಿಗೆ ಬೆಂಕಿ ಹಚ್ಚಿದ ಗ್ರಾಮಸ್ಥರು

    ಲಕ್ನೋ: ಗ್ರಾಮಸ್ಥರು ಅಮಾಯಕ ವ್ಯಕ್ತಿಯನ್ನು ಕಳ್ಳನೆಂದು ಅನುಮಾನಗೊಂಡು ಆತನಿಗೆ ಥಳಿಸಿ ಬೆಂಕಿ ಹಚ್ಚಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ನಡೆದಿದೆ.

    ಬಾರಾಬಂಕಿ ಬಳಿಯ ರಾಘೋಪುರ್ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದೆ. ಸುಜಿತ್ ಕುಮಾರ್‍ನನ್ನು ತೀವ್ರಗಾಯಗೊಂಡಿದ್ದು, ಸದ್ಯಕ್ಕೆ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ.

    ನಡೆದಿದ್ದೇನು?
    ತಿಂದೋಲಾ ಗ್ರಾಮದ ನಿವಾಸಿ ಸುಜಿತ್ ಕುಮಾರ್ ಶುಕ್ರವಾರ ಪತ್ನಿಯನ್ನು ನೋಡಲೆಂದು ತನ್ನ ಅತ್ತೆ ಮನೆಗೆ ತೆರಳುತ್ತಿದ್ದನು. ಈ ವೇಳೆ ರಾತ್ರಿ ನಾಯಿಗಳು ಸುಜಿತ್ ಕುಮಾರ್‌ನನ್ನು ಓಡಿಸಿಕೊಂಡು ಬಂದಿವೆ. ಇದರಿಂದ ಭಯಗೊಂಡ ಸುಜೀತ್ ನಾಯಿಗಳಿಂದ ತಪ್ಪಿಸಿಕೊಳ್ಳಲು ಅಲ್ಲೆ ಸಮೀಪವಿದ್ದ ಮನೆಗೆ ಓಡಿ ಹೋಗಿ ಅವಿತುಕೊಂಡಿದ್ದಾನೆ. ಈ ವೇಳೆ ಮನೆಯವರು ಈತನನ್ನು ಕಂಡು ಕಳ್ಳ ಕಳ್ಳ ಎಂದು ಕೂಗಿದ್ದಾರೆ. ತಕ್ಷಣ ನೆರೆಹೊರೆಯವರು ಸೇರಿಕೊಂಡು ಸುಜಿತ್ ಕುಮಾರ್‌ನನ್ನು ಹಿಡಿದು ಥಳಿಸಿದ್ದಾರೆ. ಅಷ್ಟೇ ಅಲ್ಲದೇ ಆತನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಎಸ್‍ಪಿ ಆಕಾಶ್ ಟೊಮಾರ್ ತಿಳಿಸಿದ್ದಾರೆ

    ಸುಮಾರು ಐದಾರು ಜನರು ನನ್ನ ಪತಿಯ ಮೇಲೆ ಹಲ್ಲೆ ಮಾಡಿದ್ದಾರೆ. ಇದರಿಂದ ಅವರು ತೀವ್ರವಾಗಿ ಗಾಯಗೊಂಡಿದ್ದಾರೆ. ನಮ್ಮ ತಂದೆ ಘಟನೆ ನಡೆದ ಸ್ಥಳಕ್ಕೆ ಹೋದಾಗ ಗ್ರಾಮಸ್ಥರು ಹಲ್ಲೆ ಮಾಡುತ್ತಿರುವುದನ್ನು ನಿಲ್ಲಿಸಿ. ಪತಿಯನ್ನು ಕಾಪಾಡಿ ತಕ್ಷಣ ಲಕ್ನೋ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಸುಜಿತ್ ಪತ್ನಿ ಹೇಳಿದ್ದಾರೆ.

    ಈ ಕುರಿತು ಸುಜಿತ್ ಕುಮಾರ್ ಪತ್ನಿ ಪೂನಂ ಗ್ರಾಮಸ್ಥರ ವಿರುದ್ಧ ದೂರು ನೀಡಿದ್ದರು. ಮಹಿಳೆ ನೀಡಿದ ದೂರಿನ ಅನ್ವಯ ನಾವು ಎಫ್‍ಐಆರ್ ದಾಖಲಿಸಿಕೊಂಡಿದ್ದು, ಈ ಪ್ರಕರಣ ಸಂಬಂಧ ಉಮೇಶ್ ಯಾದವ್ ಮತ್ತು ಶ್ರವಣ್ ಯಾದವ್ ಇಬ್ಬರನ್ನು ಬಂಧಿಸಿದ್ದೇವೆ. ಉಳಿದವರಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದೇನೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಕಾರಿನಲ್ಲಿ ಪ್ರೇಯಸಿಯೊಂದಿಗೆ ಪತಿ – ಪತ್ನಿಗೆ ರೆಡ್‍ಹ್ಯಾಂಡಾಗಿ ಸಿಕ್ಕಿಬಿದ್ದ

    ಕಾರಿನಲ್ಲಿ ಪ್ರೇಯಸಿಯೊಂದಿಗೆ ಪತಿ – ಪತ್ನಿಗೆ ರೆಡ್‍ಹ್ಯಾಂಡಾಗಿ ಸಿಕ್ಕಿಬಿದ್ದ

    ಲಕ್ನೋ: ಕಾರಿನಲ್ಲಿ ಪ್ರೇಯಸಿಯೊಂದಿಗಿದ್ದಾಗ ಪತಿ ರೆಡ್‍ಹ್ಯಾಂಡಾಗಿ ಸಿಕ್ಕಿ ಬಿದ್ದರೂ ಹೆಂಡತಿಗೆ ಗುದ್ದಿ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.

    ನೋಯ್ಡಾದ ಸೆಕ್ಟರ್ 49ರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ವಿವಾಹಿತ ಮಹಿಳೆಗೆ ಪತಿ ಬೇರೆ ಹುಡುಗಿಯ ಜೊತೆ ಸಂಬಂಧ ಹೊಂದಿದ್ದಾನೆ ಎಂದು ಅನುಮಾನವಿತ್ತು. ಅದರಂತೆಯೇ ಪತಿಯನ್ನು ಹಿಂಬಾಲಿಸಿಕೊಂಡು ಪತ್ನಿ ಹೋಗಿದ್ದು, ಪ್ರೇಯಸಿಯೊಂದಿಗೆ ಕಾರಿನಲ್ಲಿದ್ದಾಗಲೇ ಪತಿ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.

    ನಡೆದಿದ್ದೇನು?
    ಮಹಿಳೆ ಪ್ರೇಯಸಿಯೊಂದಿಗೆ ಪತಿಯನ್ನು ನೋಡಿದ ತಕ್ಷಣ ಕಾರನ್ನು ಆಟೋದಲ್ಲಿ ಹಿಂಬಾಲಿಸಿದ್ದಾಳೆ. ಆಟೋದಲ್ಲಿ ತೆರಳುವ ವೇಳೆ ಪತಿಗೆ ಫೋನ್ ಮಾಡಿದ್ದಾಳೆ. ಆದರೆ ಪತಿ ಫೋನ್ ರಿಸೀವ್ ಮಾಡಿಲ್ಲ. ಹಾಗಾಗಿ ಕೋಪಗೊಂಡ ಮಹಿಳೆ ಪತಿಯಿದ್ದ ಕಾರನ್ನ ಓವರ್ ಟೇಕ್ ಮಾಡಿ ಕಾರಿನ ಮುಂದೆ ಹೋಗಿ ಆಟೋ ನಿಲ್ಲಿಸಿದ್ದಾಳೆ. ಪತ್ನಿ ಆಟೋದಿಂದ ಕೆಳಗಿಳಿದಿದ್ದಾಳೆ. ಆಗ ಕಾರಿನ ಮುಂದೆ ಪತ್ನಿಯನ್ನು ನೋಡುತ್ತಿದ್ದಂತೆ ಪತಿ ಕಂಗಾಲಾಗಿದ್ದು, ಕಾರಿನಿಂದ ಹೊರಗಿಳಿಯಲು ಪತಿ ಭಯಪಟ್ಟಿದ್ದಾನೆ.

    ಪತ್ನಿ ತಕ್ಷಣ ಸಾಕ್ಷಿಗಾಗಿ ತನ್ನ ಫೋನಿನಲ್ಲಿ ಅವರಿಬ್ಬರು ಒಟ್ಟಿಗೆ ಇದ್ದುದ್ದನ್ನು ರೆಕಾರ್ಡ್ ಮಾಡಿಕೊಳ್ಳಲು ಶುರು ಮಾಡಿದ್ದಾಳೆ. ಇದನ್ನು ಕಾರಿನಲ್ಲಿದ್ದ ಪತಿಯ ಪ್ರೇಯಸಿ ನೋಡಿ ಕಿರುಚಾಡಿದ್ದಾಳೆ. ಆಗ ಸ್ಥಳದಲ್ಲಿದ್ದ ಜನರು ಕಾರಿನ ಬಳಿ ಜಮಾಯಿಸಿದ್ದಾರೆ. ಆದರೂ ಪತ್ನಿ ವಿಡಿಯೋ ರೆಕಾರ್ಡ್ ಮಾಡುವುದನ್ನು ನಿಲ್ಲಿಸಲಿಲ್ಲ. ಕೊನೆಗೆ ಪ್ರೇಯಸಿ ಕಾರನ್ನು ಮಹಿಳೆಗೆ ಗುದ್ದಿ ಆಕೆಯ ಪತಿಯೊಂದಿಗೆ ಪರಾರಿಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇತ್ತ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಸ್ಥಳದಲ್ಲಿದ್ದವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಿಳೆ ಸೆಕ್ಟರ್ 75ರ ಪ್ರದೇಶದಲ್ಲಿ ವಾಸಿಸುತ್ತಿದ್ದು, ಎಂಎನ್‍ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಪತಿ ಐಟಿ ಕಂಪನಿಯಲ್ಲಿ ಕೆಲಸದಲ್ಲಿದ್ದಾನೆ. ಇಬ್ಬರು ಪರಸ್ಪರ ಒಪ್ಪಿ ಮದುವೆಯಾಗಿದ್ದರು. ಆದರೆ ಮದುವೆಯಾದ ಕೆಲವು ದಿನಗಳಲ್ಲೇ ಪತಿ ಬೇರೆ ಯುವತಿಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದಾನೆ ಎಂದು ಪತ್ನಿ ಶಂಕಿಸಿದ್ದಾಳೆ. ಹೀಗಾಗಿ ಅವರಿಬ್ಬರನ್ನು ಹಿಂಬಾಲಿಸುವಾಗ ಈ ಘಟನೆ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಸದ್ಯಕ್ಕೆ ಮಹಿಳೆ ಪತಿ ಮತ್ತು ಆತನ ಪ್ರೇಯಸಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪೊಲೀಸರು ಪತಿ ಮತ್ತು ಆತನ ಪ್ರೇಯಸಿಗಾಗಿ ಶೋಧಕಾರ್ಯ ಶುರುಮಾಡಿದ್ದಾರೆ.

  • ಶಾಲಾ ಕಟ್ಟಡದ ಮೇಲೆ ಬಿದ್ದ ಹೈಟೆನ್ಷನ್ ತಂತಿ – 55 ವಿದ್ಯಾರ್ಥಿಗಳಿಗೆ ಗಾಯ

    ಶಾಲಾ ಕಟ್ಟಡದ ಮೇಲೆ ಬಿದ್ದ ಹೈಟೆನ್ಷನ್ ತಂತಿ – 55 ವಿದ್ಯಾರ್ಥಿಗಳಿಗೆ ಗಾಯ

    ಲಕ್ನೋ: ಶಾಲಾ ಕಟ್ಟಡದ ಛಾವಣಿಯ ಮೇಲೆ 11,000 ಕೆವಿ ಅಧಿಕ ಒತ್ತಡದ ತಂತಿ(ಹೈಟೆನ್ಷನ್ ವೈರ್) ಬಿದ್ದು, ಸುಮಾರು 55 ಮಂದಿ ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಬಲರಾಂಪುರ ಜಿಲ್ಲೆಯಲ್ಲಿ ನಡೆದಿದೆ.

    ಸೋಮವಾರದಂದು ಬಲರಾಂಪುರ ಜಿಲ್ಲೆಯ ಉಟ್ರೌಲಾದ ವಿಷ್ಣುಪುರ ಸರ್ಕಾರಿ ಪ್ರಾಥಮಿಕ ಕಟ್ಟಡದ ಛಾವಣಿಯ ಮೇಲೆ 11,000 ಕೆವಿಗೂ ಅಧಿಕ ಒತ್ತಡದ ತಂತಿ(ಹೈಟೆನ್ಷನ್ ವೈರ್) ಬಿದ್ದು ಈ ಅವಘಡ ಸಂಭವಿಸಿದೆ. ಘಟನೆ ನಡೆದ ಸಂದರ್ಭದಲ್ಲಿ ಶಾಲೆಯಲ್ಲಿ ಸುಮಾರು 100 ಮಕ್ಕಳಿದ್ದರು ಎನ್ನಲಾಗಿದ್ದು, 55 ಮಕ್ಕಳಿಗೆ ಸುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ.

    ಸದ್ಯ ಗಾಯಗೊಂಡ ಮಕ್ಕಳಲ್ಲಿ ಕೆಲವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇನ್ನೂ ಕೆಲವರನ್ನು ಬಲರಾಂಪುರದ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ. ಅಲ್ಲದೆ ನಾಲ್ಕು ಮಕ್ಕಳ ಸ್ಥಿತಿ ಗಂಭೀರವಾಗಿದೆ.

    ಹೈಟೆನ್ಷನ್ ವೈರ್ ಶಾಲಾ ಕಟ್ಟಡದ ಮೇಲೆ ಬಿದ್ದ ತಕ್ಷಣವೇ ವಿದ್ಯುತ್ ಕಡಿತಗೊಳಿಸಿದ್ದರಿಂದ ಹೆಚ್ಚಿನ ಸಾವುನೋವುಗಳಾಗಿಲ್ಲ. ಈ ಬಗ್ಗೆ ತಿಳಿಯುತ್ತಿದ್ದಂತೆ ಆತಂಕಗೊಂಡ ಪೋಷಕರು ಶಾಲೆಗೆ ಧಾವಿಸಿದ್ದು, ಸಿಟ್ಟಿಗೆದ್ದು ಶಾಲಾ ಸಿಬ್ಬಂದಿ ಮೇಲೆ ಕ್ರಿಮಿನಲ್ ನಿರ್ಲಕ್ಷ್ಯದ ಆರೋಪ ಮಾಡಿದ್ದಾರೆ.

    ಅಷ್ಟೇ ಅಲ್ಲದೆ, ಈ ಘಟನೆ ನಡೆದ ಬಳಿಕ ಎಚ್ಚೆತ್ತುಕೊಂಡ ಬಲರಾಂಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೃಷ್ಣ ಕರುಣೇಶ್ ಅವರು ಓರ್ವ ಗುತ್ತಿಗೆದಾರರನ್ನು ಸೇವೆಯಿಂದ ತಕ್ಷಣವೇ ವಜಾಗೊಳಿಸಿದ್ದಾರೆ. ಅಲ್ಲದೆ ಸಂಬಂಧಪಟ್ಟ ಕಿರಿಯ ಎಂಜಿನಿಯರ್ ವಿರುದ್ಧವೂ ಇಲಾಖಾ ತನಿಖೆಗೆ ಆದೇಶಿಸಿದ್ದಾರೆ. ಜೊತೆಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಗಾಯಗೊಂಡಿರುವ ಶಾಲಾ ಮಕ್ಕಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.

    ಈ ಅವಘಡ ಸಂಭವಿಸಿದ್ದು ಹೇಗೆ? ಕಾರಣವೇನು ಎನ್ನುವ ಬಗ್ಗೆ 24 ಗಂಟೆಗಳ ಒಳಗೆ ವರದಿಯನ್ನು ಸಲ್ಲಿಸಿ ಎಂದು ಮಧ್ಯಾಂಚಲ್ ವಿದ್ಯುತ್ ವಿತರಣಾ ನಿಗಮದ ಯೋಜನಾ ನಿರ್ದೇಶಕರಿಗೆ ಆದೇಶಿಸಿದ್ದಾರೆ. ಅಲ್ಲದೇ ತಪ್ಪಿತ್ತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆಯನ್ನೂ ಕೂಡ ಕೊಟ್ಟಿದ್ದಾರೆ.

    ರಾಜ್ಯದಲ್ಲಿ ಇಂತಹ ಘಟನೆಗಳು ಮತ್ತೆ ನಡೆಯದಂತೆ ನಿಗವಹಿಸಿ, ಜೊತೆಗೆ ಹೈಟೆನ್ಷನ್ ತಂತಿಗಳ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಿ ಹಾಗೂ ರಾಜ್ಯವ್ಯಾಪಿ ಅಭಿಯಾನ ಆರಂಭಿಸಿ ಎಂದು ಸಿಎಂ ಉತ್ತರ ಪ್ರದೇಶ ವಿದ್ಯುತ್ ನಿಗಮದ ಪ್ರಧಾನ ಕಾರ್ಯದರ್ಶಿ ಮತ್ತು ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.

  • ಧರ್ಮ ಭೇದವಿಲ್ಲದೆ ಒಂದೇ ಕೊಠಡಿಯಲ್ಲಿ ಮಕ್ಕಳು ಮಾಡ್ತಾರೆ ಪೂಜೆ, ನಮಾಜ್

    ಧರ್ಮ ಭೇದವಿಲ್ಲದೆ ಒಂದೇ ಕೊಠಡಿಯಲ್ಲಿ ಮಕ್ಕಳು ಮಾಡ್ತಾರೆ ಪೂಜೆ, ನಮಾಜ್

    ಲಕ್ನೋ: ಜಾತಿ, ಧರ್ಮ ಎಂದು ಕಿತ್ತಾಡುವ ಜನರೇ ಹೆಚ್ಚಿರುವಾಗ, ಎಲ್ಲರೂ ಒಂದೇ ಎಂದು ಧರ್ಮ ಭೇದ ಮರೆತು ಒಂದೇ ಕೊಠಡಿಯಲ್ಲಿ ಹಿಂದೂ- ಮುಸ್ಲಿಂ ಮಕ್ಕಳು ಪೂಜೆ ಹಾಗೂ ನಮಾಜ್ ಮಾಡುವ ವಿಶೇಷ ಮದರಸವೊಂದು ಈಗ ಎಲ್ಲರ ಗಮನ ಸೆಳೆದಿದೆ.

    ಹೌದು, ಹಿಂದೂ-ಮುಸ್ಲಿಂ ಬಾಂಧವ್ಯಕ್ಕೆ ಉತ್ತಮ ಉದಾಹರಣೆಯಾಗಿ ಉತ್ತರ ಪ್ರದೇಶದ ಅಲಿಗಢದ ಮದರಸಾ ಹೆಮ್ಮೆಯಿಂದ ತಲೆಯೆತ್ತಿ ನಿಂತಿದೆ. ಮಾಜಿ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಅವರ ಪತ್ನಿ ಸಲ್ಮಾ ಅನ್ಸಾರಿ ಅಲನೂರ್ ಚಾರಿಟೇಬಲ್ ಟ್ರಸ್ಟ್ ಅಡಿಯಲ್ಲಿ “ಚಾಚಾ ನೆಹರು ಮದರಸಾ” ಎಂಬ ಹೆಸರಿನಲ್ಲಿ ಈ ಮದರಸಾ ನಡೆಸಲಾಗುತ್ತಿದೆ.

    ಇಲ್ಲಿ ಹಿಂದೂ ಮತ್ತು ಮುಸ್ಲಿಂ ಮಕ್ಕಳು ಒಂದೇ ಕೊಠಡಿಯಲ್ಲಿ ಪೂಜೆ ಸಲ್ಲಿಸಿ ಮತ್ತು ನಮಾಜ್ ಮಾಡುವುದೇ ವಿಶೇಷವಾಗಿದೆ. ಚಾಚಾ ನೆಹರು ಮದರಸಾದಲ್ಲಿ ಹಿಂದೂ-ಮುಸ್ಲಿಂ ಧರ್ಮದ 4 ಸಾವಿರ ವಿದ್ಯಾರ್ಥಿಗಳು ಓದುತ್ತಾರೆ. ಹೀಗಾಗಿ ಎರಡೂ ಧರ್ಮದ ವಿದ್ಯಾರ್ಥಿಗಳಿಗೂ ಅನುಕೂಲವಾಗುವಂತೆ ಮದರಸಾದಲ್ಲಿ ದೇವಸ್ಥಾನ ಮತ್ತು ಮಸೀದಿ ನಿರ್ಮಾಣಕ್ಕೆ ಸಲ್ಮಾ ಅನ್ಸಾರಿ ಮುಂದಾಗಿದ್ದಾರೆ.

    ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಲ್ಮಾ ಅನ್ಸಾರಿ ಅವರು, ನಮ್ಮ ಮದರಸಾದಲ್ಲಿ ಹಿಂದೂ-ಮುಸ್ಲಿಂ ಎರಡೂ ಧರ್ಮದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ದೇವರಿಗೆ ಪ್ರಾರ್ಥನೆ ಸಲ್ಲಿಸಲು ದೇಗುಲಕ್ಕೋ ಅಥವಾ ಮಸೀದಿಗೋ ಹೋದಾಗ ಅಹಿತಕರ ಘಟನೆಗಳು ನಡೆದರೆ ಅದಕ್ಕೆ ನಾವು ಹೊಣೆಯಾಗುತ್ತೆವೆ. ಆದ್ದರಿಂದ ಮಕ್ಕಳ ಭದ್ರತೆ ಮತ್ತು ಸುರಕ್ಷತೆ ದೃಷ್ಟಿಯಿಂದ ಮದರಸಾದ ಒಳಗೆಯೇ ಮಸೀದಿ ಹಾಗೂ ದೇಗುಲ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ತಮ್ಮ ನಿರ್ಧಾರವನ್ನು ತಿಳಿಸಿದರು.

    ಸದ್ಯ ಈ ಮದರಸಾದಲ್ಲಿ ಒಂದೇ ಕೊಠಡಿಯಲ್ಲಿ, ಹಿಂದೂ ಮಕ್ಕಳಿಗಾಗಿ ಸರಸ್ವತಿಯ ಪ್ರತಿಮೆಯೊಂದಿಗೆ ಹನುಮಾನ್ ಮತ್ತು ಶಿವನ ಚಿತ್ರವನ್ನು ಇರಿಸಿ ಪೂಜೆಗೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಹಾಗೆಯೇ ಅಲ್ಲೇ ಮುಸ್ಲಿಂ ಮಕ್ಕಳು ಕುರಾನ್ ಓದುತ್ತಾರೆ. ಇಲ್ಲಿನ ಮಕ್ಕಳು ಧರ್ಮ ಭೇದವನ್ನು ಅರಿತಿಲ್ಲ. ಎಲ್ಲರು ಒಂದೇ ಎಂದು ಪ್ರೀತಿಯಿಂದ ಇದ್ದಾರೆ.

    ಮದರಸಾ ಅವರಣದಲ್ಲಿ ದೇವಾಲಯ ಮತ್ತು ಮಸೀದಿ ನಿರ್ಮಾಣ ಕಾರ್ಯ ಮುಗಿಯುವವರೆಗೆ ಮಕ್ಕಳು ಈ ಕೊಠಡಿಯಲ್ಲೇ ಪೂಜೆ ಸಲ್ಲಿಸುತ್ತಾರೆ ಮತ್ತು ನಮಾಜ್ ಮಾಡಲಿದ್ದಾರೆ.

  • ಮದ್ವೆಯಾದ 24 ಗಂಟೆಯೊಳಗೆ ಪತ್ನಿಗೆ ತಲಾಖ್ ಕೊಟ್ಟ

    ಮದ್ವೆಯಾದ 24 ಗಂಟೆಯೊಳಗೆ ಪತ್ನಿಗೆ ತಲಾಖ್ ಕೊಟ್ಟ

    ಲಕ್ನೋ: ಪತಿಯೊಬ್ಬ ಮದುವೆಯಾದ 24 ಗಂಟೆಯೊಳಗೆ ತನ್ನ ಪತ್ನಿಗೆ ತಲಾಖ್ ಕೊಟ್ಟ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ.

    ಉಸ್ಮಾನ್ ಗನಿ ತಲಾಖ್ ಕೊಟ್ಟ ಪತಿ. ಜುಲೈ 13ರಂದು ಉಸ್ಮಾನ್ ಗನಿ, ಹಸನಪುರ ತಾಂಡಾದ ನಿವಾಸಿಯಾದ ಖುತುಬುದ್ದೀನ್ ಅವರ ಮಗಳು ರುಕ್ಸಾನಾರನ್ನು ಮದುವೆ ಆಗಿದ್ದನು. ಶನಿವಾರ ಮದುವೆ ಆದ ಬಳಿಕ ರುಕ್ಸಾನಾ ಕುಟುಂಬದವರು ವರದಕ್ಷಿಣೆ ನೀಡಿ ಮಗಳಿಗೆ ತನ್ನ ಪತಿಯ ನಿವಾಸಕ್ಕೆ ಕಳುಹಿಸಿಕೊಟ್ಟರು.

    ಭಾನುವಾರ ರುಕ್ಸಾನಾ ಕುಟುಂಬದವರು ಯಾವುದೋ ಶಾಸ್ತ್ರಕ್ಕೆ ಎಂದು ತನ್ನ ಮಗಳಿಗೆ ಮನೆಗೆ ಕರೆದುಕೊಂಡು ಬರಲು ಸಿದ್ಧವಾಗಿದ್ದರು. ಈ ವೇಳೆ ಉಸ್ಮಾನ್ ಮನೆಯವರು ಖುತುಬುದ್ದೀನ್ ಅವರಿಗೆ ಕರೆ ಮಾಡಿ ರುಕ್ಸಾನಾ ಆರೋಗ್ಯ ಸರಿಯಿಲ್ಲ ಎಂದು ತಿಳಿಸಿದ್ದರು.

    ರುಕ್ಸಾನಾ ಆರೋಗ್ಯ ವಿಚಾರಿಸಲೆಂದು ಖುತುಬುದ್ದೀನ್ ಆಕೆಯ ಪತಿಯ ಮನೆಗೆ ತೆರಳಿದ್ದರು. ಈ ವೇಳೆ ರುಕ್ಸಾನಾ ಪತಿ ಉಸ್ಮಾನ್ ಹಾಗೂ ಆತನ ಕುಟುಂಬಸ್ಥರು ಬೈಕನ್ನು ವರದಕ್ಷಿಣೆಯಾಗಿ ನೀಡಬೇಕು ಎಂದು ಕಿರುಕುಳ ನೀಡುತ್ತಿದ್ದಾರೆ ಎಂದು ತಂದೆ ಬಳಿ ತನ್ನ ನೋವನ್ನು ತೊಡಿಕೊಂಡಿದ್ದಾಳೆ.

    ಬಳಿಕ ರುಕ್ಸಾನಾ ಕುಟುಂಬದವರು ಉಸ್ಮಾನ್ ಹಾಗೂ ಆತನ ಮನೆಯವರನ್ನು ಸಮಾಧಾನಪಡಿಸಲು ಯತ್ನಿಸಿದ್ದಾರೆ. ಆದರೆ ಖುತುಬುದ್ದೀನ್ ಅವರ ಮಾತು ಕೇಳದೇ ಉಸ್ಮಾನ್ ಎಲ್ಲರ ಮುಂದೆ ರುಕ್ಸಾನಾಗೆ ತಲಾಖ್ ನೀಡಿದ್ದಾನೆ. ಮದುವೆಯಾಗಿ 24 ಗಂಟೆಯೊಳಗೆ ಮಗಳಿಗೆ ತಲಾಖ್ ಕೊಟ್ಟಿದ್ದಕ್ಕೆ ಖುತುಬುದ್ದೀನ್ ಹಾಗೂ ಕುಟುಂಬಸ್ಥರು ದುಃಖದಲ್ಲಿದ್ದಾರೆ.

    ಈ ಬಗ್ಗೆ ಖುತುಬುದ್ದೀನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

  • ಚುಡಾಯಿಸಿದ ಯುವಕನಿಗೆ ಥಳಿಸುತ್ತಾ ಆಸ್ಪತ್ರೆಗೆ ಕರೆತಂದ ಯುವತಿ

    ಚುಡಾಯಿಸಿದ ಯುವಕನಿಗೆ ಥಳಿಸುತ್ತಾ ಆಸ್ಪತ್ರೆಗೆ ಕರೆತಂದ ಯುವತಿ

    ಲಕ್ನೋ: ಯುವತಿಯೊಬ್ಬಳು ಚುಡಾಯಿಸಿದ ಯುವಕನಿಗೆ ಥಳಿಸುತ್ತಾ ಆಸ್ಪತ್ರೆಗೆ ಕರೆತಂದ ಘಟನೆ ಗುರುವಾರ ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ನಡೆದಿದೆ.

    ಯುವಕ ಸ್ಪೋಟ್ಸ್ ಡ್ರೆಸ್‍ನಲ್ಲಿ ಇದ್ದ ಯುವತಿಗೆ ಚುಡಾಯಿಸಲು ಪ್ರಯತ್ನಿಸಿದ್ದನು. ಈ ವೇಳೆ ಯುವತಿ ಆತನನ್ನು ಥಳಿಸಿದ್ದಾಳೆ. ಯುವತಿ ಬಾಕ್ಸಿಂಗ್ ಆಟಗಾರ್ತಿ ಆಗಿದ್ದು, ರೂಡ್ಕಿಯಲ್ಲಿ ಬಾಕ್ಸಿಂಗ್ ಕಲಿಯುತ್ತಿದ್ದಾಳೆ ಎಂಬುದು ತಿಳಿದು ಬಂದಿದೆ.

    ತನ್ನ ತಾಯಿಯ ಆರೋಗ್ಯವನ್ನು ವೈದ್ಯರ ಬಳಿ ತೋರಿಸಲು ಯುವತಿ ಆಸ್ಪತ್ರೆಗೆ ಬಂದಿದ್ದಳು. ಬಳಿಕ ಒಡಿಪಿಯಲ್ಲಿ ಲೈನ್‍ನಲ್ಲಿ ನಿಂತಿದ್ದಾಗ ಯುವಕ ಆಕೆಯನ್ನು ಚುಡಾಯಿಸಲು ಯತ್ನಿಸಿದ್ದಾನೆ. ಇದನ್ನು ನೋಡಿದ ಯುವತಿ ಆತನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾಳೆ.

    ಯುವತಿ ಆತನನ್ನು ಹಿಗ್ಗಾಮುಗ್ಗಾ ಥಳಿಸುತ್ತಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಳೆ. ಬಳಿಕ ಯುವಕನನ್ನು ಆಸ್ಪತ್ರೆ ಒಳಗೆ ಇದ್ದ ಪೊಲೀಸರಿಗೆ ಒಪ್ಪಿಸಿದ್ದಾಳೆ. ಅಲ್ಲದೆ ಈತ ನನ್ನನ್ನು ಚುಡಾಯಿಸುತ್ತಿದ್ದನು ಎಂದು ಯುವತಿ ಪೊಲೀಸರ ಬಳಿ ಆರೋಪಿಸಿದ್ದಾಳೆ.

    ಪೊಲೀಸರ ವಶದಲ್ಲಿದ್ದ ಯುವಕ ಅವರನ್ನು ಯಾಮಾರಿಸಿ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ. ಈ ಬಗ್ಗೆ ಮಾತನಾಡಿದ ಪೊಲೀಸ್ ಅಧಿಕಾರಿ, ಬಾಕ್ಸಿಂಗ್ ಆಟಗಾರ್ತಿ ಯುವಕ ಚುಡಾಯಿಸಿದ್ದಾನೆ ಎಂದು ಆತನನ್ನು ಥಳಿಸಿದ್ದಾರೆ. ಆದರೆ ಈ ಬಗ್ಗೆ ಅವರು ಯಾವುದೇ ದೂರು ನೀಡಿಲ್ಲ. ಈ ಬಗ್ಗೆ ದೂರು ಬಂದ್ರೆ ನಾವು ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

  • ಸೇತುವೆ ಮೇಲಿಂದ ಬಿದ್ದ 50 ಪ್ರಯಾಣಿಕರಿದ್ದ ಬಸ್ – 29 ಮಂದಿ ದುರ್ಮರಣ

    ಸೇತುವೆ ಮೇಲಿಂದ ಬಿದ್ದ 50 ಪ್ರಯಾಣಿಕರಿದ್ದ ಬಸ್ – 29 ಮಂದಿ ದುರ್ಮರಣ

    17ಕ್ಕೂ ಹೆಚ್ಚು ಮಂದಿ ಗಾಯ
    – ಮೃತ ಕುಟುಂಬಕ್ಕೆ 5 ಲಕ್ಷ ಪರಿಹಾರ

    ಲಕ್ನೋ: ರಾಜ್ಯ ರಸ್ತೆ ಸಾರಿಗೆ ಬಸ್ ಸ್ಕಿಡ್ ಆಗಿ 50 ಅಡಿ ಆಳದ ಚರಂಡಿಗೆ ಬಿದ್ದ ಪರಿಣಾಮ ಸ್ಥಳದಲ್ಲಿಯೇ 29 ಮಂದಿ ಪ್ರಯಾಣಿಕರು ಮೃತಪಟ್ಟಿರುವ ದಾರುಣ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

    ಯಮುನಾ ಎಕ್ಸ್‌ಪ್ರೆಸ್‌ ಹೈವೇನಲ್ಲಿ ಇಂದು ಬೆಳಗ್ಗಿನ ಜಾವ ಈ ದುರಂತ ಸಂಭವಿಸಿದೆ. 165 ಕಿ.ಮೀ ಉದ್ದದ ಎಕ್ಸ್‌ಪ್ರೆಸ್‌ವೇ ಉತ್ತರ ಪ್ರದೇಶದ ಆಗ್ರಾ ಮತ್ತು ನೊಯ್ಡಾವನ್ನು ಸಂಪರ್ಕಿಸುತ್ತದೆ. ಇದೊಂದು ಡಬಲ್ ಡೆಕ್ಕರ್ ಬಸ್ಸಾಗಿದ್ದು, ಈ ಬಸ್ ಸುಮಾರು 50 ಮಂದಿ ಪ್ರಯಾಣಿಕರನ್ನು ಲಕ್ನೋದಿಂದ ದೆಹಲಿಗೆ ಕರೆದುಕೊಂಡು ಹೋಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

    ಚಾಲಕ ನಿದ್ದೆ ಮಂಪರಿನಲ್ಲಿದ್ದನು. ಹೀಗಾಗಿ ಬಸ್ ಸ್ಕಿಡ್ ಆಗಿ ಆಗ್ರಾ ಎಕ್ಸ್‌ಪ್ರೆಸ್‌ವೇ ಬಳಿ ಚಾಲಕನ ನಿಯಂತ್ರಣ ತಪ್ಪಿ 50 ಅಡಿ ಆಳದ ಚರಂಡಿಗೆ ಬಿದ್ದಿದೆ. ಪರಿಣಾಮ 29 ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ 17 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಪೊಲೀಸರು ಮತ್ತು ರಕ್ಷಣಾ ಪಡೆದ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ.

    ಅಪಘಾತವಾದ ತಕ್ಷಣ ಸ್ಥಳದಲ್ಲಿದ್ದ ಸಾರ್ವಜನಿಕರು ಕೂಡ ಚರಂಡಿಗೆ ಇಳಿದು ಪ್ರಯಾಣಿಕರನ್ನು ರಕ್ಷಣೆ ಮಾಡಿದ್ದಾರೆ. ಸದ್ಯಕ್ಕೆ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ಸಿನಲ್ಲಿರುವ ಮೃತದೇಹವನ್ನು ಹೊರತೆಗೆಯಲಾಗುತ್ತಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬಸ್ ದುರಂತಕ್ಕೆ ಸಂತಾಪ ಸೂಚಿಸಿದ್ದು, ಗಾಯಗೊಂಡವರಿಗೆ ಮತ್ತು ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಎಲ್ಲ ರೀತಿಯ ಸಹಾಯವನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜೊತೆಗೆ ಉತ್ತರ ಪ್ರದೇಶ ಸರ್ಕಾರ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರ ನೀಡುವುದಾಗಿ ಫೋಷಿಸಿದೆ.

  • ಕಸಿನ್ ಸಹೋದರಿಯನ್ನೇ ಮದ್ವೆಯಾಗಿ ಫೇಸ್‍ಬುಕ್‍ನಲ್ಲಿ ಯುವತಿಯಿಂದ ಪೋಸ್ಟ್

    ಕಸಿನ್ ಸಹೋದರಿಯನ್ನೇ ಮದ್ವೆಯಾಗಿ ಫೇಸ್‍ಬುಕ್‍ನಲ್ಲಿ ಯುವತಿಯಿಂದ ಪೋಸ್ಟ್

    ಲಕ್ನೋ: ಕಸಿನ್ ಸಹೋದರಿಯನ್ನೇ ಮದುವೆಯಾಗಿ ಯುವತಿಯೊಬ್ಬಳು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಎಲ್ಲರಿಗೂ ಶಾಕ್ ನೀಡಿದ ಘಟನೆ ಉತ್ತರ ಪ್ರದೇಶದ ವಾರಾಣಾಸಿಯಲ್ಲಿ ನಡೆದಿದೆ.

    ವಾರಾಣಾಸಿಯ ರೋಹನಿಯಾ ನಿವಾಸಿಯಾದ ಕಸಿನ್ ಸಹೋದರಿಯರು ಪೋಷಕರ ವಿರುದ್ಧವಾಗಿ ಹೋಗಿ ಮದುವೆ ಆಗಿದ್ದಾರೆ. ಮದುವೆ ಆದ ಬಳಿಕ ಆ ಫೋಟೋಗಳನ್ನು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದಾರೆ.

    ಬುಧವಾರ ಸಹೋದರಿಯರು ಶಿವನ ದೇವಸ್ಥಾನಕ್ಕೆ ಹೋಗಿ ಅಲ್ಲಿದ್ದ ಅರ್ಚಕರಿಗೆ ಮದುವೆ ಮಾಡಿಸಿ ಎಂದು ಹೇಳಿದ್ದಾರೆ. ಆದರೆ ಅರ್ಚಕರು ಮದುವೆ ಮಾಡಿಸಲು ನಿರಾಕರಿಸುತ್ತಾರೆ. ಪಂಡಿತ ನಿರಾಕರಿಸಿದರೂ ಸಹ ಸಹೋದರಿಯರು ದೇವಸ್ಥಾನದ ಒಳಗೆ ಕುಳಿತ್ತಿದ್ದರು.

    ಸಹೋದರಿಯರು ಜೀನ್ಸ್, ಟೀ-ಶರ್ಟ್ ಧರಿಸಿ ಅದಕ್ಕೆ ಕೆಂಪು ಬಣ್ಣದ ಚುನ್ನಿ ಹಾಕಿ ಮದುವೆ ಮಾಡಿಕೊಂಡರು. ಸಹೋದರಿಯರು ಮದುವೆ ಆಗುವ ಹೊತ್ತಿಗೆ ದೇವಸ್ಥಾನದ ಬಳಿ ಹೆಚ್ಚು ಜನ ಸೇರಿದ್ದರು. ಅಹಿತಕರ ಘಟನೆ ನಡೆಯುವ ಮೊದಲೇ ಸಹೋದರಿಯರು ಅಲ್ಲಿಂದ ಹೊರಟು ಹೋದರು.

    ಸಹೋದರಿಯರನ್ನು ಮದುವೆ ಮಾಡಿಸಿದ್ದಕ್ಕೆ ಕೆಲವರು ಪಂಡಿತರನ್ನು ಟೀಕಿಸಿದ್ದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಪಂಡಿತ, ಒಬ್ಬಳು ಯುವತಿ ಕಾನ್‍ಪುರದವಳಾಗಿದ್ದು, ಮತ್ತೊಬ್ಬಳು ವಿದ್ಯಾಭ್ಯಾಸಕ್ಕೆ ಎಂದು ಕಸಿನ್ ಮನೆಯಲ್ಲಿ ವಾಸಿಸುತ್ತಿದ್ದಳು ಎಂದು ಹೇಳಿದ್ದಾರೆ.

  • ಋತುಮತಿ ಆಗಿದ್ದ ಅಪ್ರಾಪ್ತೆ ಮೇಲೆ ಸಂಬಂಧಿಯಿಂದಲೇ ರೇಪ್

    ಋತುಮತಿ ಆಗಿದ್ದ ಅಪ್ರಾಪ್ತೆ ಮೇಲೆ ಸಂಬಂಧಿಯಿಂದಲೇ ರೇಪ್

    ಲಕ್ನೋ: ಋತು ಅವಧಿಯಲ್ಲಿದ್ದ ಅಪ್ರಾಪ್ತೆಯ ಮೇಲೆ ಕಾಮುಕನೊಬ್ಬ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ನಡೆದಿದೆ.

    ಲಕ್ನೋದ ಕೃಷ್ಣಾ ನಗರ ಪ್ರದೇಶದಲ್ಲಿ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಸಂತ್ರಸ್ತೆಯ ಸಂಬಂಧಿ ಎಂದು ಪೊಲೀಸರು ತಿಳಿಸಿದ್ದಾರೆ.

    ಸಂತ್ರಸ್ತೆಯೂ ಬಾಲಕಿ ಪೋಷಕರ ಜೊತೆಗೆ ಕೃಷ್ಣಾ ನಗರ ವಾಸಿಸುತ್ತಿದ್ದಳು. ಆರೋಪಿ ಕೂಡ ಅದೇ ಪ್ರದೇಶದಲ್ಲಿ ವಾಸವಿದ್ದ. ಮನೆಯಲ್ಲಿ ಯಾರು ಇಲ್ಲದಿದ್ದಾಗ ಆರೋಪಿ ಋತು ಅವಧಿಯಲ್ಲಿದ್ದ ಬಾಲಕಿಯ ಮೇಲೆ ಅನೇಕ ಬಾರಿ ಅತ್ಯಾಚಾರ ಎಸಗಿದ್ದಾನೆ.

    ಈ ಸಂಬಂಧ ಸಂತ್ರಸ್ತೆಯ ತಂದೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರ ನಡೆಸುತ್ತಿದ್ದಾರೆ. ಆರೋಪಿ ವಿರುದ್ಧ ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

    ಉತ್ತರ ಪ್ರದೇಶದ ಸೀತಾಪುರದಲ್ಲಿ ಶಾಲೆಯ ಆವರಣದಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದ ಬೆನ್ನಲ್ಲೇ ಲಕ್ನೋ ಘಟನೆ ಬೆಳಕಿಗೆ ಬಂದಿದೆ. ಸಹೋದರಿ ತಮಗಿಂತ ಚನ್ನಾಗಿ ಓದುತ್ತಿದ್ದಾಳೆ ಎಂಬ ಮತ್ಸರದಿಂದ 8ನೇ ತರಗತಿಯ ವಿದ್ಯಾರ್ಥಿನಿ ಮೇಲೆ ನಾಲ್ವರು ಸಹೋದರರು ಶಿಕ್ಷಕನ ಜೊತೆಗೆ ಸೇರಿ ಅತ್ಯಾಚಾರ ಎಸಗಿದ್ದರು. ಕಳೆದ ಎರಡು ವರ್ಷಗಳಿಂದ ಬಾಲಕಿಯ ಮೇಲೆ ಕಾಮುಕರು ಅತ್ಯಾಚಾರ ಎಸಗುತ್ತಿದ್ದರು. ಅತ್ಯಾಚಾರ ಎಸಗುತ್ತಿದ್ದ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದ ಆರೋಪಿಗಳು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಈ ವಿಡಿಯೋ ಪೋಷಕರ ಗಮನಕ್ಕೆ ಬಂದ ಮೇಲೆ ಪ್ರಕರಣ ಬೆಳಕಿಗೆ ಬಂದಿತ್ತು.

  • ಮನೆಗೆ ಬಂದ ಪತಿಯ ಗೆಳೆಯನ ಜೊತೆ ಪತ್ನಿಯ ಪ್ರೇಮ ಸಲ್ಲಾಪ

    ಮನೆಗೆ ಬಂದ ಪತಿಯ ಗೆಳೆಯನ ಜೊತೆ ಪತ್ನಿಯ ಪ್ರೇಮ ಸಲ್ಲಾಪ

    -ಪ್ರಿಯಕರನಿಗಾಗಿ ಪತಿಯ ಕೊಲೆ
    -ವಾಟ್ಸಪ್‍ನಿಂದ ಬಯಲಾಯ್ತು ಕೊಲೆ ರಹಸ್ಯ

    ಲಕ್ನೋ: ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನ ಪತ್ನಿಯೇ ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿಸಿರುವ ಘಟನೆ ಉತ್ತರ ಪ್ರದೇಶದ ಮಥುರಾ ಜಿಲ್ಲೆಯಲ್ಲಿ ನಡೆದಿದೆ.

    ರಾಜು ಕೊಲೆಯಾದ ಪತಿ. ಆರೋಪಿ ಪತ್ನಿ ಹಾಗೂ ಆಕೆಯ ಪ್ರಿಯಕರ ಆಕಾಶ್ ಇಬ್ಬರು ಸೇರಿ ಕೊಲೆ ಮಾಡಿದ್ದಾರೆ. ಇದೀಗ ಇವರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

    ಅಕ್ರಮ ಸಂಬಂಧಕ್ಕೆ ಒಂದು ವರ್ಷ:
    ಮೃತ ರಾಜು ಮತ್ತು ಆರೋಪಿ ಆಕಾಶ್ ಆಪ್ತ ಸ್ನೇಹಿತರಾಗಿದ್ದರು. ಹೀಗಾಗಿ ಆಕಾಶ್ ಆಗಾಗ ರಾಜು ಮನೆಗೆ ಬರುತ್ತಿದ್ದನು. ಒಂದು ದಿನ ಆಕಾಶ್ ಕಣ್ಣು ರಾಜು ಪತ್ನಿ ಮೇಲೆ ಬಿದ್ದಿದೆ. ದಿನಕಳೆದಂತೆ ಇಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದು, ಅನೈತಿಕ ಸಂಬಂಧ ಇಟ್ಟುಕೊಂಡಿದ್ದರು. ಅಷ್ಟೇ ಅಲ್ಲದೇ ಇಬ್ಬರು ಒಟ್ಟಿಗೆ ಬದುಕಬೇಕೆಂದು ಇಷ್ಟಪಟ್ಟಿದ್ದರು. ಆದರೆ ಇವರ ದಾರಿಗೆ ರಾಜು ಅಡ್ಡ ಬರುತ್ತಾನೆ ಎಂದು ಕೊಲೆಗೆ ಸ್ಕೆಚ್ ಹಾಕಿದ್ದಾರೆ.

    ವಾಟ್ಸಪ್ ಮೆಸೇಜ್ ನಿಂದ ಬಯಲಾಯ್ತು ಕೊಲೆ ರಹಸ್ಯ:
    ಜೂನ್ 23 ರಂದು ಮಥುರಾ ಜಿಲ್ಲೆಯ ಜೈತ್ ಪ್ರದೇಶದ ರಾಷ್ಟ್ರೀಯ ಹೆದ್ದಾರಿ-2 ಯಲ್ಲಿ ವ್ಯಕ್ತಿಯೊಬ್ಬನನ್ನು ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹವನ್ನು ರಾಜು ಎಂದು ಗುರುತಿಸಿದ್ದರು. ರಾಜುವಿನ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದ್ದರಿಂದ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದರು. ಪೊಲೀಸರು ತನಿಖೆ ಶುರು ಮಾಡಿದ್ದು, ಮೃತ ರಾಜುವಿನ ಪತ್ನಿ ಫೋನ್ ಪರಿಶೀಲನೆ ಮಾಡಿದ್ದಾರೆ. ಆಗ ರಾಜು ಪತ್ನಿ ಆರೋಪಿ ಆಕಾಶ್ ಜೊತೆ ಅಧಿಕವಾಗಿ ಫೋನಿನಲ್ಲಿ ಸಂಭಾಷಣೆ ಮಾಡಿದ್ದಳು. ಅಷ್ಟೇ ಅಲ್ಲದೇ ವಾಟ್ಸಪ್‍ನಲ್ಲಿ ಇಬ್ಬರೂ ಅಶ್ಲೀಲ ಫೋಟೋ, ವಿಡಿಯೋಗಳನ್ನು ಹಂಚಿಕೊಂಡಿರುವುದು ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರು ಅನುಮಾನಗೊಂಡು ರಾಜು ಪತ್ನಿಯನ್ನು ವಶಕ್ಕೆ ಪಡೆದು ವಿಚಾರಣೆ ಶುರು ಮಾಡಿದ್ದಾರೆ.

    ತಪ್ಪೊಪ್ಪಿಗೆ:
    ಆರೋಪಿ ಆಕಾಶ್ ಮತ್ತು ಮೃತ ರಾಜುವಿನ ಪತ್ನಿ ಒಂದು ವರ್ಷದಿಂದ ಸಂಬಂಧ ಇಟ್ಟುಕೊಂಡಿದ್ದರು. ರಾಜುವಿನಿಂದ ಅವರಿಬ್ಬರು ಒಟ್ಟಿಗೆ ಬದುಕಲು ಸಾಧ್ಯವಾಗುತ್ತಿರಲ್ಲ. ಹೀಗಾಗಿ ರಾಜು ತಮ್ಮಿಬ್ಬರ ದಾರಿಗೆ ಅಡ್ಡವಾಗಿದ್ದಾನೆಂದು ಕೊಲೆ ಮಾಡಲು ಪ್ಲಾನ್ ಮಾಡಿದ್ದರು. ಅದರಂತೆಯೇ ಆರೋಪಿ ಆಕಾಶ್ ತನ್ನ ಸ್ನೇಹಿತ ವಿಕಾಸ್ ಎಂಬಾತನಿಂದ ಜೂನ್ 23 ರಂದು ಕೊಟ್ವಾಲಿ ಪ್ರದೇಶದ ವೃಂದಾವನ್‍ನಲ್ಲಿ ಶೂಟ್ ಮಾಡಿಸಿ ರಾಜುನನ್ನು ಕೊಲೆ ಮಾಡಿಸಿರುವುದಾಗಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸದ್ಯಕ್ಕೆ ಪೊಲೀಸರು ಮೃತ ರಾಜು ಪತ್ನಿ ಮತ್ತು ಆಕಾಶ್ ಇಬ್ಬರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಬಂಧಿತರಿಂದ ಒಂದು ಅಕ್ರಮ ಪಿಸ್ತೂಲ್, ಎರಡು ಗುಂಡು ಮತ್ತು ಮೊಬೈಲ್‍ಗಳನ್ನು ವಶ ಪಡಿಸಿಕೊಂಡಿದ್ದಾರೆ. ಆಕಾಶ್ ಸ್ನೇಹಿತ ವಿಕಾಸ್ ಘಟನೆ ಬಳಿಕ ಪರಾರಿಯಾಗಿದ್ದು, ಆತನನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.