Tag: lucknow

  • 2 ಸಾವಿರ ರೂ.ಗಾಗಿ 41 ಮೊಟ್ಟೆ ತಿಂದ ವ್ಯಕ್ತಿ ಸಾವು

    2 ಸಾವಿರ ರೂ.ಗಾಗಿ 41 ಮೊಟ್ಟೆ ತಿಂದ ವ್ಯಕ್ತಿ ಸಾವು

    ಲಕ್ನೋ: ವ್ಯಕ್ತಿಯೊಬ್ಬ 2 ಸಾವಿರ ರೂ. ಹಣಕ್ಕಾಗಿ 41 ಮೊಟ್ಟೆ ತಿಂದು ಮೃತಪಟ್ಟ ಘಟನೆ ಸೋಮವಾರ ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆಯಲ್ಲಿ ನಡೆದಿದೆ.

    ಸುಭಾಷ್ ಯಾದವ್(42) ಮೃತಪಟ್ಟ ವ್ಯಕ್ತಿ. ಸುಭಾಷ್ ಮೊಟ್ಟೆ ತಿನ್ನಲು ತನ್ನ ಸ್ನೇಹಿತನ ಜೊತೆ ಜೌನ್‌ಪುರದ ಬಿಬಿಗಂಜ್ ಮಾರ್ಕೆಟ್‌ಗೆ ಹೋಗಿದ್ದನು. ಈ ವೇಳೆ ಸುಭಾಷ್ ಹಾಗೂ ಆತನ ಸ್ನೇಹಿತನ ನಡುವೆ ಹಣಕ್ಕಾಗಿ ಜಗಳ ನಡೆದಿದೆ.

    ಸುಭಾಷ್ ಸ್ನೇಹಿತ 50 ಮೊಟ್ಟೆ ತಿಂದರೆ 2 ಸಾವಿರ ರೂ. ಕೊಡುವುದಾಗಿ ಹೇಳಿದ್ದಾನೆ. ಇದಕ್ಕೆ ಸುಭಾಷ್ ಕೂಡ ಒಪ್ಪಿಕೊಳ್ಳುತ್ತಾನೆ. ಬಳಿಕ 2 ಸಾವಿರ ರೂ. ಹಣಕ್ಕಾಗಿ 50 ಮೊಟ್ಟೆ ತಿನ್ನುವ ಚಾಲೆಂಜ್ ಸ್ವೀಕರಿಸುತ್ತಾನೆ.

    ಚಾಲೆಂಜ್ ಸ್ವೀಕರಿಸಿ ಸುಭಾಷ್ ಮೊಟ್ಟೆ ತಿನ್ನಲು ಶುರು ಮಾಡುತ್ತಾನೆ. ಮೊದಲು 41 ಮೊಟ್ಟೆ ತಿಂದ ಸುಭಾಷ್ ನಂತರ 42ನೇ ಮೊಟ್ಟೆ ತಿನ್ನಲು ಮುಂದಾದಾಗ ಪ್ರಜ್ಞೆ ತಪ್ಪಿ ಬೀಳುತ್ತಾನೆ. ಬಳಿಕ ಸ್ಥಳೀಯರು ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ.

    ಸ್ಥಳೀಯರು ಮೊದಲು ಸುಭಾಷ್‌ನನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ಬಳಿಕ ಅಲ್ಲಿನ ವೈದ್ಯರು ಆತನನ್ನು ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸುವಂತೆ ಹೇಳುತ್ತಾರೆ. ಆಸ್ಪತ್ರೆಗೆ ದಾಖಲಾದ ಒಂದು ಗಂಟೆಯಲ್ಲಿ ಸುಭಾಷ್ ಮೃತಪಟ್ಟಿದ್ದಾನೆ.

    ಸುಭಾಸ್ ಅತಿಯಾಗಿ ಮೊಟ್ಟೆ ಸೇವಿಸಿದ್ದಕ್ಕೆ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಅಲ್ಲದೆ ಈ ಬಗ್ಗೆ ಸುಭಾಷ್ ಕುಟುಂಬದವರು ಪ್ರತಿಕ್ರಿಯೆ ನೀಡಲು ನಿರಾಕರಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಪ್ರಿಯಕರನೊಂದಿಗೆ ಅಪ್ರಾಪ್ತ ಮಗಳ ಸೆಕ್ಸ್ – ಯುವಕನನ್ನು ಕೊಂದ ತಂದೆ

    ಪ್ರಿಯಕರನೊಂದಿಗೆ ಅಪ್ರಾಪ್ತ ಮಗಳ ಸೆಕ್ಸ್ – ಯುವಕನನ್ನು ಕೊಂದ ತಂದೆ

    ಲಕ್ನೋ: ಅಪ್ರಾಪ್ತ ಮಗಳ ಜೊತೆ ದೈಹಿಕ ಸಂಬಂಧ ಬೆಳೆಸಿದ್ದಕ್ಕೆ ತಂದೆಯೊಬ್ಬ ಯುವಕನನ್ನೇ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಮಹೋಬಾದಲ್ಲಿ ನಡೆದಿದೆ.

    ರವೀಂದ್ರ(೨೭) ಕೊಲೆಯಾದ ಯುವಕ. ತನ್ನ ಪಕ್ಕದ ಮನೆಯಲ್ಲಿಯೇ ವಾಸಿಸುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ರವೀಂದ್ರ ಪ್ರೀತಿಸುತ್ತಿದ್ದನು. ಇಬ್ಬರ ಕುಟುಂಬದ ನಡುವೆ ಒಳ್ಳೆಯ ಬಾಂಧವ್ಯವಿತ್ತು. ಹಾಗಾಗಿ ಯಾರೂ ರವೀಂದ್ರನ ಮೇಲೆ ಅನುಮಾನ ವ್ಯಕ್ತಪಡಿಸಲಿಲ್ಲ.

    ಕಳೆದ ಕೆಲವು ದಿನಗಳಿಂದ ರವೀಂದ್ರ ಹಾಗೂ ಬಾಲಕಿಯ ಕುಟುಂಬ ಹೆಚ್ಚು ಆತ್ಮೀಯರಾಗಿದ್ದರು. ಅಲ್ಲದೆ ರವೀಂದ್ರ ಪದೇ ಪದೇ ಬಾಲಕಿಯ ಮನೆಗೆ ಹೋಗಿ ಬರುತ್ತಿದ್ದನು. ಆದರೆ ಶನಿವಾರ ರಾತ್ರಿ ಬಾಲಕಿಯ ತಂದೆ ಇಬ್ಬರು ದೈಹಿಕ ಸಂಬಂಧ ಬೆಳೆಸುತ್ತಿರುವುದನ್ನು ನೋಡಿದ್ದಾನೆ.

    ಇದಾದ ಬಳಿಕ ರವೀಂದ್ರ ಹಾಗೂ ಬಾಲಕಿಯ ತಂದೆ ನಡುವೆ ಜೋರಾಗಿ ವಾಗ್ವಾದ ನಡೆದಿದೆ. ಈ ವೇಳೆ ಬಾಲಕಿಯ ತಂದೆ ಲಾಠಿ ಹಾಗೂ ದೊಣ್ಣೆಯಿಂದ ರವೀಂದ್ರನ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಆತನ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸರು, ಮನೆಯಲ್ಲಿ ರವೀಂದ್ರ ಅಪ್ರಾಪ್ತೆ ಜೊತೆ ದೈಹಿಕ ಸಂಬಂಧ ಬೆಳೆಸುತ್ತಿದ್ದನು. ಇದನ್ನು ನೋಡಿದ ಬಾಲಕಿಯ ತಂದೆ ಕೋಪಗೊಂಡು ಆತನ ಮೇಲೆ ಹಲ್ಲೆ ಮಾಡಿ ಬಳಿಕ ಕೊಲೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

    ಈ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಯುವಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ, ಪರಾರಿಯಾದ ಆರೋಪಿ ತಂದೆಯನ್ನು ಹುಡುಕುತ್ತಿದ್ದಾರೆ.

  • ಲಾಲೂ ಜೀವನಾಧಾರಿತ ಚಿತ್ರಕ್ಕೆ ಯಶ್ ನಾಯಕ ನಟ

    ಲಾಲೂ ಜೀವನಾಧಾರಿತ ಚಿತ್ರಕ್ಕೆ ಯಶ್ ನಾಯಕ ನಟ

    ಲಕ್ನೋ: ಬಿಹಾರ್ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಜೀವನಾಧಾರಿತ ಚಿತ್ರ ಮುಂದಿನ ವರ್ಷದ ಫೆಬ್ರವರಿಯಲ್ಲಿ ತೆರೆಮೇಲೆ ಬರಲಿದ್ದು, ರಾಷ್ಟ್ರೀಯಾ ಜನತಾ ದಳದ ಚಿಹ್ನೆ ಆಗಿರುವ ‘ಲಾಟೀನ್’ ಹೆಸರಿನಲ್ಲೇ ಚಿತ್ರ ತೆರೆಕಾಣಲಿದೆ.

    ಈ ಚಿತ್ರದಲ್ಲಿ ಲಾಲೂ ಪ್ರಸಾದ್ ಯಾದವ್ ಅವರ ಪಾತ್ರವನ್ನು ಭೋಜ್ಪುರಿ ನಟ ಯಶ್ ಅಭಿನಯಿಸಲಿದ್ದು, ಲಾಲೂ ಪತ್ನಿ ಹಾಗೂ ಬಿಹಾರದ ಮಾಜಿ ಸಿಎಂ ರಾಬ್ಡಿ ದೇವಿ ಪಾತ್ರದಲ್ಲಿ ಸ್ಮೃತಿ ಸಿನ್ಹ ನಟಿಸಲಿದ್ದಾರೆ. ಈ ಚಿತ್ರವು ಮುಂದಿನ ಫೆಬ್ರವರಿಯಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.

    ಲಾಲೂ ಪ್ರಸಾದ್ ಯಾದವ್ ಅವರ ಜೀವನದ ವಿವಿಧ ಆಯಾಮಗಳನ್ನು ಈ ಚಿತ್ರ ತೆರೆದಿಡಲಿದೆ. ಅಲ್ಲದೆ ಈ ಚಿತ್ರವನ್ನು ಬಿಹಾರ್ ಹಾಗೂ ಗುಜರಾತ್‍ನಲ್ಲಿ ಚಿತ್ರೀಕರಿಸುವ ಸಾಧ್ಯತೆಯಿದೆ.

    ಮೊದಲೆಲ್ಲಾ ಸಿನಿಮಾ ತಾರೆಯರು, ಕ್ರೀಡಾಪಟುಗಳು, ಸ್ವಾತಂತ್ರ್ಯ ಹೋರಾಟಗಾರರ ಜೀವನಾಧಾರಿತ ಸಿನಿಮಾಗಳು ಬಿಡುಗಡೆಯಾಗುತ್ತಿತ್ತು. ಆದರೇ ಇತ್ತೀಚೆಗೆ ರಾಜಕಾರಣಿಗಳ ಜೀವನಾಧಾರಿತ ಚಿತ್ರಗಳು ತೆರೆಮೇಲೆ ಸಂಚಲ ಮೂಡಿಸುತ್ತಿದೆ. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಹಲವು ರಾಜಕಾರಣಿಗಳ ಜೀವನಾಧಾರಿತ ಸಿನಿಮಾಗಳು ಬಿಡುಗಡೆಯಾಗಿದ್ದವು.

    ಇದೇ ಸಾಲಿಗೆ ಈಗ ಲಾಲೂ ಪ್ರಸಾದ್ ಯಾದವ್ ಜೀವನಾಧಾರಿತ ಚಿತ್ರ ಕೂಡ ಸೇರಲಿದೆ. ಇತ್ತೀಚೆಗೆ ಮನಮೋಹನ್ ಸಿಂಗ್ ಜೀವನಾಧಾರಿತ ‘ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಚಿತ್ರ ಬಾಲಿವುಡ್‍ನಲ್ಲಿ ಭಾರೀ ವಿವಾದ ಎಬ್ಬಿಸಿತ್ತು. ಹಲವರು ಈ ಚಿತ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

  • ಕುಡಿಬೇಡ ಎಂದಿದ್ದಕ್ಕೆ ಅಪ್ರಾಪ್ತ ಮಗಳನ್ನೇ ಶೂಟ್ ಮಾಡಿದ ತಂದೆ

    ಕುಡಿಬೇಡ ಎಂದಿದ್ದಕ್ಕೆ ಅಪ್ರಾಪ್ತ ಮಗಳನ್ನೇ ಶೂಟ್ ಮಾಡಿದ ತಂದೆ

    ಲಕ್ನೋ: ಕುಡಿಬೇಡ ಎಂದು ಹೇಳಿದ್ದಕ್ಕೆ ತಂದೆಯೊಬ್ಬ ತನ್ನ ಅಪ್ರಾಪ್ತ ಮಗಳನ್ನು ಶೂಟ್ ಮಾಡಿದ ಘಟನೆ ಉತ್ತರ ಪ್ರದೇಶದ ಸಂಬಾಲ್ ಜಿಲ್ಲೆಯಲ್ಲಿ ನಡೆದಿದೆ.

    ನೀಮ್ ಸಿಂಗ್(52) ಕೊಲೆ ಮಾಡಿದ ತಂದೆ. 17 ವರ್ಷದ ಮಗಳು ಮದ್ಯ ಕುಡಿಯಬೇಡ ಎಂದು ತಂದೆಗೆ ಹೇಳಿದ್ದಾಳೆ. ಮಗಳ ಮಾತಿನಿಂದ ಕೋಪಗೊಂಡ ನೀಮ್ ಸಿಂಗ್ ಗನ್‍ನಿಂದ ಶೂಟ್ ಮಾಡುವ ಮೂಲಕ ಆಕೆಯನ್ನು ಕೊಲೆ ಮಾಡಿದ್ದಾನೆ.

    ಗುಂಡಿನ ಸದ್ದು ಕೇಳಿದ ಅಕ್ಕಪಕ್ಕದ ಮನೆಯವರು ಸ್ಥಳಕ್ಕೆ ಓಡಿ ಹೋಗಿದ್ದಾರೆ. ಬಳಿಕ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಈ ವೇಳೆ ಬಾಲಕಿಯನ್ನು ಕಂಡ ಸ್ಥಳೀಯರು ಆಕೆಯ ಕರೆದುಕೊಂಡು ಹೋಗಿದ್ದಾರೆ. ಆದರೆ ಅಷ್ಟರಲ್ಲಿ ಬಾಲಕಿ ಮೃತಪಟ್ಟಿದ್ದಾಳೆ.

    ಪೊಲೀಸರು ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಸದ್ಯ ಪೊಲೀಸರು ಆರೋಪಿ ನೀಮ್ ಸಿಂಗ್‍ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಆತ ತನ್ನ ಮಗಳನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

    15 ವರ್ಷಗಳ ಹಿಂದೆ ನೀಮ್ ಸಿಂಗ್ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪತ್ನಿಯ ಸಾವಿನಿಂದ ಮನನೊಂದಿದ್ದ ನೀಮ್ ಸಿಂಗ್ ಮದ್ಯ ಸೇವಿಸುವುದನ್ನು ಶುರು ಮಾಡಿದ್ದನು. ಅಲ್ಲದೆ ಮದ್ಯ ಖರೀದಿಸಲು ತನ್ನ ಬಳಿಯಿದ್ದ ಜಮೀನು ಕೂಡ ಮಾರಾಟ ಮಾಡಿದ್ದನು.

    ನೀಮ್ ಸಿಂಗ್‍ನ ಹಿರಿಯ ಮಗ ಗೌರವ್ ಕೂಡ ಆತನಿಗೆ ಮದ್ಯ ಸೇವಿಸಬೇಡ ಎಂದು ಎಚ್ಚರಿಗೆ ನೀಡಿದ್ದನು. ಆದರೆ ನೀಮ್ ಮಾತಿಗೆ ಒಪ್ಪದ ಕಾರಣ ಗೌರವ್ ತನ್ನ ಪತ್ನಿಯೊಂದಿಗೆ ದೆಹಲಿಗೆ ಶಿಫ್ಟ್ ಆಗಿದ್ದನು. ಬಳಿಕ ನೀಮ್ ಸಿಂಗ್‍ನ ಎರಡನೇ ಮಗ ಹಾಗೂ ಬಾಲಕಿ ಆತನ ಜೊತೆಯಲ್ಲಿಯೇ ವಾಸಿಸುತ್ತಿದ್ದರು.

  • ದೀಪಾವಳಿಗೆ ಸ್ವೀಟ್ ಪಟಾಕಿ ತಯಾರಿಸಿದ ವ್ಯಾಪಾರಿಗಳು

    ದೀಪಾವಳಿಗೆ ಸ್ವೀಟ್ ಪಟಾಕಿ ತಯಾರಿಸಿದ ವ್ಯಾಪಾರಿಗಳು

    ಲಕ್ನೋ: ದೀಪಾವಳಿ ಹಬ್ಬಕ್ಕೆ ಪಟಾಕಿ ಹೊಡೆಯುವುದು ಸಾಮಾನ್ಯ. ಆದರೆ ಲಕ್ನೋದ ಬೇಕರಿ ವ್ಯಾಪಾರಿಗಳು ಪಟಾಕಿ ರೂಪದಲ್ಲೇ ಸ್ವೀಟ್‍ಗಳನ್ನು ತಯಾರಿಸಿ ಗ್ರಾಹಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.

    ದೀಪಾವಳಿಗೆ ಹೆಚ್ಚು ಪಟಾಕಿ ಹೊಡೆಯುವುದರಿಂದ ವಾಯುಮಾಲಿನ್ಯ ಮತ್ತು ಶಬ್ದ ಮಾಲಿನ್ಯವಾಗುತ್ತದೆ. ಇದರ ಬದಲು ಪಟಾಕಿ ರೀತಿಯಲ್ಲೇ ಇರುವ ಈ ಸಿಹಿ ತಿನಿಸುಗಳನ್ನು ಕೊಂಡ ತಿನ್ನುವುದರಿಂದ ಪರಿಸರ ಮಾಲಿನ್ಯವನ್ನು ತಡೆಯಬಹುದು. ಇದರ ಜೊತೆಗೆ ಈ ಸಿಹಿ ತಿಂಡಿಗಳು ಆರೋಗ್ಯಕರ ಮತ್ತು ಶುಗರ್ ಫ್ರೀ ಆಗಿದ್ದು, ಎಲ್ಲರೂ ತಿನ್ನಬಹುದು ಎಂದು ವ್ಯಾಪಾರಿಗಳು ಈ ಪ್ಲಾನ್ ಮಾಡಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಸ್ವೀಟ್ ವ್ಯಾಪಾರಿ ಕೃಷ್ಣ ಅಹಿರ್ವಾಲ್, ನಾವು ಈ ದೀಪಾವಳಿಗೆ ಏನಾದರೂ ವಿಭಿನ್ನವಾಗಿ ಮಾಡಬೇಕು ಎಂದುಕೊಂಡಿದ್ದೇವು. ಈ ಕಾರಣದಿಂದಲೇ ಸಿಹಿ ತಿನಿಸುಗಳನ್ನು ಪಟಾಕಿಯ ರೀತಿಯಲ್ಲಿ ವಿನ್ಯಾಸ ಮಾಡಿದ್ದೇವೆ. ಕೆಲ ಗ್ರಾಹಕರು ಇದನ್ನು ನೋಡಿ ಬೇಕರಿಯಲ್ಲಿ ದೀಪಾವಳಿ ಪ್ರಯುಕ್ತ ಪಟಾಕಿ ಮಾರುತ್ತಿದ್ದಾರೆ ಎಂದು ಭಾವಿಸಿದ್ದರು. ನಂತರ ಅವು ಸ್ವೀಟ್ಸ್ ಎಂದು ತಿಳಿದಾಗ ಆಶ್ಚರ್ಯ ಪಟ್ಟರು ಎಂದು ಹೇಳಿದ್ದಾರೆ.

    ಈ ವಿಧಾನದಿಂದ ಕಾರ್ಪೊರೇಟ್ ಸಂಸ್ಥೆಯಲ್ಲಿ ನೌಕರಿಗೆ ಗಿಫ್ಟ್ ಕೊಡುವವರಿಗೆ ಉಪಯೋಗವಾಗಿದೆ. ಪಟಾಕಿ ಸಿಡಿಸಿ ಪರಿಸರವನ್ನು ಹಾಳು ಮಾಡುವ ಬದಲು ಈ ರೀತಿ ಆರೋಗ್ಯಕ್ಕೆ ಒಳ್ಳೆಯದಾಗುವ ಶುಗರ್ ಫ್ರೀ ತಿಂಡಿಗಳನ್ನು ತಿಂದರೆ ಒಳ್ಳೆಯದು. ಇದನ್ನು ಮಕ್ಕಳಿಗೂ ಕೊಡಬಹುದು ಇದರಿಂದ ಮಕ್ಕಳು ನಮಗೆ ಪಟಾಕಿ ಕೊಡಿಸಿ ಎಂದು ಹಠಮಾಡುವುದಿಲ್ಲ ಎಂದು ಅಹಿರ್ವಾಲ್ ಹೇಳಿದ್ದಾರೆ.

    ರಾಕೆಟ್ ಮತ್ತು ಬಾಂಬ್ ಸೇರಿದಂತೆ ಎಲ್ಲ ರೀತಿಯ ಪಟಾಕಿಗಳ ಮಾದರಿಯಲ್ಲಿ ತಿಂಡಿಗಳನ್ನು ವಿನ್ಯಾಸ ಮಾಡಿದ್ದೇವೆ. ಇದಕ್ಕೆ ಉತ್ತಮವಾದ ಪ್ಯಾಕಿಂಗ್ ಮಾಡಿದ್ದೇವೆ. ಈ ಎಲ್ಲವೂ ಜನರನ್ನು ಆಕರ್ಷಣೆ ಮಾಡುತ್ತಿದೆ. ಈಗ ಬಹಳ ಚೆನ್ನಾಗಿ ವ್ಯಾಪಾರವಾಗುತ್ತಿದೆ ಎಂದು ಬೇಕರಿ ಮಾಲೀಕ ಮನು ಅಗರ್ವಾಲ್ ಹೇಳಿದ್ದಾರೆ.

  • ಪತಿ, ಮೂವರು ಮಕ್ಳನ್ನು ಬಿಟ್ಟು ಎಫ್‍ಬಿ ಸ್ನೇಹಿತನ ಬಳಿ ಓಡಿ ಹೋದ್ಳು

    ಪತಿ, ಮೂವರು ಮಕ್ಳನ್ನು ಬಿಟ್ಟು ಎಫ್‍ಬಿ ಸ್ನೇಹಿತನ ಬಳಿ ಓಡಿ ಹೋದ್ಳು

    – ಕರ್ವಾ ಚೌತ್‍ಗೆ ಪ್ರಿಯಕರ ಬರಲಿಲ್ಲ ಎಂದು ಆತ್ಮಹತ್ಯೆ
    – ಆ್ಯಸಿಡ್ ಹಾಕಿ ಶವವನ್ನು ರೋಡಿಗೆಸೆದ ಪ್ರಿಯಕರ

    ಲಕ್ನೋ: ಪತಿ, ಮೂವರು ಮಕ್ಕಳನ್ನು ಬಿಟ್ಟು ಮಹಿಳೆಯೊಬ್ಬಳು ಫೇಸ್‍ಬುಕ್ ಸ್ನೇಹಿತನ ಬಳಿ ಓಡಿ ಹೋದ ಘಟನೆ ಉತ್ತರ ಪ್ರದೇಶದ ಲಕ್ನೋನ ಬಂಥಾರಾದಲ್ಲಿ ನಡೆದಿದೆ.

    ಮೋಸಿನಾ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಮುಂಬೈ ನಿವಾಸಿಯಾಗಿರುವ ಮೋಸಿನಾ ನಾಲ್ಕು ತಿಂಗಳ ಹಿಂದೆ ತನ್ನ ಮೂವರು ಮಕ್ಕಳನ್ನು ಹಾಗೂ ಪತಿಯನ್ನು ಬಿಟ್ಟು ಲಕ್ನೋಗೆ ಹೋಗಿದ್ದಳು. ಅಲ್ಲಿ ಆಕೆ ತನ್ನ ಫೇಸ್‍ಬುಕ್ ಸ್ನೇಹಿತ ಮಹೇಂದ್ರ ಜೊತೆ ವಾಸಿಸುತ್ತಿದ್ದಳು.

    ಮೋಸಿನಾ ನಾಪತ್ತೆಯಾದಾಗ ಆಕೆಯ ಪತಿ ಮುಂಬೈನ ಪವಾಯಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಲಕ್ನೋಗೆ ತಲುಪಿದ ನಂತರ ಮೋಸಿನಾ ತನ್ನ ಹೆಸರನ್ನು ಖುಷಿ ಗುಪ್ತಾ ಎಂದು ಬದಲಾಯಿಸಿಕೊಂಡಿದ್ದಳು. ಅಲ್ಲದೆ ಹಿಂದೂ ಪದ್ಧತಿಗಳ ಪ್ರಕಾರ ಮೋಸಿನಾ ಲಕ್ನೋನಲ್ಲಿ ವಾಸಿಸುತ್ತಿದ್ದಳು.

    ಖುಷಿಯಾಗಿ ಬದಲಾದ ನಂತರ ಮೋಸಿನಾ ಹಣೆಗೆ ಸಿಂಧೂರ, ತಾಳಿಯನ್ನು ಧರಿಸುತ್ತಿದ್ದಳು. ಮಹೇಂದ್ರ, ಮೋಸಿನಾಳಿಗಾಗಿ ಬಂಥಾರದಲ್ಲಿ ಮನೆ ಮಾಡಿದ್ದನು. ಮಹೇಂದ್ರಗೆ ಈಗಾಗಲೇ ಮದುವೆಯಾಗಿದ್ದು, ವಾರಕ್ಕೆ ಎರಡು ದಿನ ಆತ ಮೋಸಿನಾ ಇದ್ದ ಮನೆಗೆ ಬರುತ್ತಿದ್ದನು.

    ಅಕ್ಟೋಬರ್ 17ರಂದು ಮೋಸಿನಾ, ಮಹೇಂದ್ರನಿಗಾಗಿ ಕರ್ವಾ ಚೌತ್ ವ್ರತ ಮಾಡಿದ್ದಳು. ಆದರೆ ಆ ದಿನ ಮಹೇಂದ್ರ ಮನೆಗೆ ಬರದ ಕಾರಣ ಮರುದಿನ ಮೋಸಿನಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೋಸಿನಾ ಮೃತದೇಹವನ್ನು ಕಂಡ ಮಹೇಂದ್ರ ಆಕೆಯ ಗುರುತನ್ನು ಅಳಿಸಲು ಆಕೆಯ ಮುಖಕ್ಕೆ ಆ್ಯಸಿಡ್ ಎರಚಿದ್ದನು.

    ಮೋಸಿನಾ ಮುಖಕ್ಕೆ ಆ್ಯಸಿಡ್ ಎರಚಿದ ಬಳಿಕ ಮಹೇಂದ್ರ ಆಕೆಯ ಮೃತದೇಹವನ್ನು ರಸ್ತೆಯಲ್ಲಿ ಎಸೆದು ಪರಾರಿಯಾಗಿದ್ದನು. ಮೃತದೇಹ ಪತ್ತೆಯಾಗಿರುವ ವಿಷಯವನ್ನು ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದಾಗ ಮೋಸಿನಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿಯಿತು.

  • 2 ವರ್ಷದಲ್ಲಿ 60 ಕಾರ್ ಕದ್ದ 2 ಅಡಿಯ ಕಳ್ಳ

    2 ವರ್ಷದಲ್ಲಿ 60 ಕಾರ್ ಕದ್ದ 2 ಅಡಿಯ ಕಳ್ಳ

    ಲಕ್ನೋ: 2 ವರ್ಷದಲ್ಲಿ 60 ಕಾರುಗಳನ್ನು ಕದ್ದ 2 ಅಡಿ ಕಳ್ಳನನ್ನು ಸೇರಿ ನಾಲ್ವರನ್ನು ಪೊಲೀಸರು ಮಂಗಳವಾರ ರಾತ್ರಿ ಬಂಧಿಸಿದ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‍ನಲ್ಲಿ ನಡೆದಿದೆ.

    ರೌನಕ್ ಅಲಿ ಅಲಿಯಾಸ್ ಬಬ್ಲು, ಜಮ್‍ಶೇದ್ ಅಲಿಯಾಸ್ ಬೌನಾ, ತಾಜ್ ಮೊಹಮ್ಮದ್ ಅಲಿಯಾಸ್ ಚಂದ್ ಹಾಗೂ ಯಾಕುಬ್ ಅರೆಸ್ಟ್ ಆದ ಕಳ್ಳರು. ನಾಲ್ವರು ಆರೋಪಿಗಳಲ್ಲಿ ಒಬ್ಬನ ಹೆಸರು ಬೌನಾ ಎಂದಾಗಿದ್ದು, ಆತ ಕೇವಲ 2 ಅಡಿ ಎತ್ತರವಿದ್ದಾನೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಡಿಎಸ್‍ಪಿ ರಾಜಕುಮಾರ್ ಪಾಂಡೆ, ಈ ಗ್ಯಾಂಗ್‍ಗೆ ಬೌನಾ ಎರಡು ವರ್ಷಗಳ ಹಿಂದೆ ಸೇರಿಕೊಂಡಿದ್ದನು. ಬೌನಾ ಮೊದಲು ಕಾರಿನ ಗ್ಲಾಸ್ ಒಡೆದು ಹಾಕಿ ಒಳಗೆ ನುಗ್ಗುತ್ತಾನೆ. ಬಳಿಕ ಆತನ ಸ್ನೇಹಿತರು ಕಾರು ಕದಿಯಲು ಸಹಾಯ ಮಾಡುತ್ತಿದ್ದರು. ಬೌನಾಗೆ ಗ್ಯಾಂಗ್‍ನ ಸದಸ್ಯರು ಮಾಸ್ಟರ್ ಮೈಂಡ್ ಎಂದೇ ಕರೆಯುತ್ತಾರೆ. ಅಲ್ಲದೆ ತಮ್ಮ ಗ್ಯಾಂಗ್‍ಗೆ ಬೌನಾ ಗ್ಯಾಂಗ್ ಎಂದೇ ಕರೆಯುತ್ತಾರೆ.

    ಬಬ್ಲು ಹಾಗೂ ಬೌನಾ ಸಂಬಂಧದಲ್ಲಿ ಮಾವ-ಅಳಿಯ. ಪೊಲೀಸರು ಆರೋಪಿ ಬಬ್ಲುನನ್ನು ವಿಚಾರಣೆ ನಡೆಸಿದಾಗ ಆತ, ನಾನು ಹಾಗೂ ನನ್ನ ಅಳಿಯ ಕಾರು ಕದಿಯುವುದರಲ್ಲಿ ಎತ್ತಿದ ಕೈ. ಆತ ಕಳೆದ 2 ವರ್ಷಗಳ ಹಿಂದೆ ಗ್ಯಾಂಗ್‍ಗೆ ಎಂಟ್ರಿ ಕೊಟ್ಟಿದ್ದನು. ಗ್ಯಾಂಗ್‍ನಲ್ಲಿ ಸೋನು ಎಂಬವನು ಇದ್ದು, ಆತ ಆರ್ಡರ್ ಪಡೆದು ಯಾವ ಕಾರು ಕದಿಯಬೇಕು ಎಂದು ನಮಗೆ ಹೇಳುತ್ತಿದ್ದನು. ಇದಾದ ಬಳಿಕ ನಾವು ಗಾಜು ಒಡೆದು ಕಾರಿನೊಳಗೆ ಹೋಗಿ ಇಗ್ನಿಶಿಯನ್‍ನನ್ನು ಮುರಿದು ಹಾಕುತ್ತಿದ್ದೆವು. ನಂತರ ಕಾರಿನ ಮಾಸ್ಟರ್ ಕೀ ಅಥವಾ ಕಾರಿನ ವೈರನ್ನು ಜೋಡಿಸಿ ಸ್ಟಾರ್ಟ್ ಮಾಡಿ ಪರಾರಿ ಆಗುತ್ತಿದ್ದೆವು. ಬೌನಾ ಈವರೆಗೂ 60 ಕಾರುಗಳನ್ನು ಕದಿದ್ದಾನೆ ಎಂದು ಹೇಳಿದ್ದಾನೆ.

    ಕಾರು ಕದ್ದ ನಂತರ ಅದನ್ನು ತಮ್ಮ ಸ್ನೇಹಿತ ಚಂದ್‍ನ ಗ್ಯಾರೇಜ್‍ನಲ್ಲಿ ಪಾರ್ಕ್ ಮಾಡುತ್ತಿದ್ದೆವು. ಅಲ್ಲಿ ಪ್ಲೇಟ್ ಹಾಗೂ ಕಾರಿಗೆ ಚಿಕ್ಕಪುಟ್ಟ ಬದಲಾವಣೆ ಮಾಡಿ ಖಾಲಿಯಿರುವ ಫ್ಲ್ಯಾಟ್‍ಗಳಲ್ಲಿ ಪಾರ್ಕ್ ಮಾಡುತ್ತಿದ್ದೆವು. ಇದೆಲ್ಲಾ ಆದ ಬಳಿಕ ಸೋನು ಈ ಕಾರುಗಳನ್ನು ಗ್ರಾಹಕರಿಗೆ ಮಾರುತ್ತಿದ್ದನು. ಕಾರು ಏನಾದರೂ ಮಾರಾಟವಾಗಲಿಲ್ಲ ಎಂದರೆ ಅದರ ಭಾಗಗಳನ್ನು ತೆಗೆದು ಯಾಕುಬ್ ಅದನ್ನು ದೆಹಲಿಯಲ್ಲಿ ಮಾರುತ್ತಿದ್ದನು ಎಂದು ಬಬ್ಲು ಪೊಲೀಸರಿಗೆ ತಿಳಿಸಿದ್ದಾನೆ.

    ಸಿಕ್ಕಿಬಿದ್ದಿದ್ದು ಹೇಗೆ?
    ಮಂಗಳವಾರ ಬಿಜೇಂದ್ರ ಸಿಂಗ್ ಎಂಬವರು ಇಬ್ಬರು ಕಳ್ಳರು ನಂಬರ್ ಪ್ಲೇಟ್ ಇಲ್ಲದಿರುವ ಕಾರಿನಲ್ಲಿ ಬರುತ್ತಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದರು. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಕಳ್ಳರ ಕಾರನ್ನು ತಡೆಯಲು ಪ್ರಯತ್ನಿಸಿದಾಗ ಚಾಲಕ ಪರಾರಿಯಾಗಲು ಯತ್ನಿಸಿದ್ದಾರೆ. ಆಗ ಪೊಲೀಸರು ಇಬ್ಬರನ್ನು ಹಿಂಬಾಲಿಸಿ ಬಂಧಿಸಿದ್ದಾರೆ. ಬಳಿಕ ಪೊಲೀಸರು ವಿಚಾರಣೆ ನಡೆಸಿದಾಗ ಕಳ್ಳರು ತಮ್ಮ ತಪ್ಪನ್ನು ಒಪ್ಪಿಕೊಂಡು ಕದ್ದಿರುವ ಕಾರುಗಳನ್ನು ನಿಠೋರಾ ರೋಡಿನಲ್ಲಿ ಪಾರ್ಕ್ ಮಾಡಿರುವುದಾಗಿ ಹೇಳಿದ್ದಾರೆ. ಆರೋಪಿಗಳ ಮಾತು ಕೇಳಿ ಪೊಲೀಸರು ಸ್ಥಳಕ್ಕೆ ತಲುಪಿ 8 ಕಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಜೊತೆಗೆ ಅಲ್ಲಿದ್ದ ಮೂವರನ್ನು ಪೊಲೀಸರು ಬಂಧಿಸಲು ಪ್ರಯತ್ನಿದಾಗ ಒಬ್ಬ ಪರಾರಿಯಾಗಿದ್ದಾನೆ.

    ವರದಿಗಳ ಪ್ರಕಾರ, ಕಾರು ಕದಿಯುತ್ತಿದ್ದ ಪ್ರಕರಣದಲ್ಲಿ ಪೊಲೀಸರು ಸಿಸಿಟಿವಿ ಪರಿಶೀಲಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ಬೌನಾ ಕಾಣಿಸಿಕೊಂಡಿದ್ದು, ಆತನ ಎತ್ತರ ನೋಡಿ ಪೊಲೀಸರು ಚಿಕ್ಕ ಹುಡುಗ ಎಂದು ಬಿಡುತ್ತಿದ್ದರು ಎಂದು ಹೇಳಲಾಗುತ್ತಿದೆ.

  • ಪ್ರೇಯಸಿ, ಗೆಳೆಯನ ಜೊತೆ ಸೇರಿ ನಿರೂಪಕನಿಂದ ಪತ್ನಿಯ ಕೊಲೆ

    ಪ್ರೇಯಸಿ, ಗೆಳೆಯನ ಜೊತೆ ಸೇರಿ ನಿರೂಪಕನಿಂದ ಪತ್ನಿಯ ಕೊಲೆ

    ಲಕ್ನೋ: ನಿರೂಪಕನೊಬ್ಬ ತನ್ನ ಪ್ರೇಯಸಿ ಹಾಗೂ ಗೆಳೆಯನ ಜೊತೆ ಸೇರಿ ಪತ್ನಿಯನ್ನೇ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಇಟಾವಾದಲ್ಲಿ ನಡೆದಿದೆ.

    ದಿವ್ಯಾ (27) ಕೊಲೆಯಾದ ಮಹಿಳೆ. ದೆಹಲಿ ಮೂಲದ ನಿರೂಪಕ ಅಜಿತೇಶ್ ತನ್ನ ಪ್ರೇಯಸಿ ಹಾಗೂ ಸ್ನೇಹಿತನ ಜೊತೆ ಸೇರಿ ದಿವ್ಯಾಳನ್ನು ಕೊಲೆ ಮಾಡಿದ್ದಾನೆ. ಸೋಮವಾರ ದಿವ್ಯಾ ಇಟಾವಾದ ಕಟ್ರಾ ಬಾಲ್ ಸಿಂಗ್ ಏರಿಯಾದಲ್ಲಿರುವ ತನ್ನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಳು.

    ಕೊಲೆಯಾದ ದಿನವೇ ದಿವ್ಯಾ ಮಾವ ಪ್ರಮೋದ್ ಮಿಶ್ರಾ, ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿದ್ದರು. ವಿಧಿವಿಜ್ಞಾನ ಪ್ರಯೋಗಾಲಯ ಹಾಗೂ ದಳದ ಮೂಲಕ ಪೊಲೀಸರು ಈ ಕೊಲೆ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದರು. ತನಿಖೆ ವೇಳೆ ಅಜಿತೇಶ್ ತನ್ನ ಸ್ನೇಹಿತ ಅಖಿಲ್ ಕುಮಾರ್ ಸಿಂಗ್ ಹಾಗೂ ಭಾವನಾ ಆರ್ಯ ಜೊತೆ ಸೇರಿ ಈ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಮೂವರು ಆರೋಪಿಗಳು ದೆಹಲಿಯಲ್ಲಿರುವ ನ್ಯೂಸ್ ಚಾನೆಲ್‍ನಲ್ಲಿ ಕೆಲಸ ಮಾಡುತ್ತಿದ್ದರು.

    ಸೋಮವಾರ ಈ ಕೊಲೆ ನಡೆದಿದ್ದು, ಗುರುವಾರ ಪೊಲೀಸರು ಕೊಲೆ ಆರೋಪಿಗಳಾದ ಅಜಿತೇಶ್, ಭಾವನಾ ಹಾಗೂ ಅಖಿಲ್‍ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಎಸ್‍ಎಸ್‍ಪಿ ಸಂತೋಷ್ ಕುಮಾರ್, ವಿಚಾರಣೆ ವೇಳೆ ಅಜಿತೇಶ್, ನನ್ನ ಹಾಗೂ ಭಾವನಾ ನಡುವೆ ಅನೈತಿಕ ಸಂಬಂಧ ಇದೆ. ನಮ್ಮಿಬ್ಬರ ವಿಷಯ ದಿವ್ಯಾಗೆ ತಿಳಿದು ಆಕೆ ದಿನ ನನ್ನ ಜೊತೆ ಜಗಳವಾಡುತ್ತಿದ್ದರು. ಹಾಗಾಗಿ ಕೊಲೆ ಮಾಡಿದ್ದಾನೆ ಎಂದು ಒಪ್ಪಿಕೊಂಡಿದ್ದಾನೆ ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.

    ನಡೆದಿದ್ದೇನು?
    ಪ್ಲಾನ್ ಪ್ರಕಾರ ಅಕ್ಟೋಬರ್ 14ರಂದು ಅಖಿಲ್, ಅಜಿತೇಶ್ ಮನೆಗೆ ಆಗಮಿಸಿದ್ದಾನೆ. ಅಖಿಲ್ ಮೊದಲೇ ಪರಿಚಯವಿದ್ದ ಕಾರಣ ದಿವ್ಯಾ ಆತನನ್ನು ಮನೆಯೊಳಗೆ ಕರೆಸಿ ತನ್ನ ಮದುವೆ ಆಲ್ಬಂ ತೋರಿಸುತ್ತಿದ್ದಳು. ಈ ವೇಳೆ ಅಖಿಲ್ ಹೂ ಕುಂಡದಿಂದ ದಿವ್ಯಾ ಮೇಲೆ ಹಲ್ಲೆ ನಡೆಸಿದ್ದಾನೆ. ಹಲ್ಲೆಯಿಂದ ತೀವ್ರ ಗಾಯಗೊಂಡ ದಿವ್ಯಾ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿದ್ದಾಳೆ. ದಿವ್ಯಾ ಪ್ರಜ್ಞೆ ತಪ್ಪುತ್ತಿದ್ದಂತೆ ಅಖಿಲ್ ಸ್ಥಳದಿಂದ ಪರಾರಿಯಾಗಿದ್ದಾನೆ.

  • ಉಡುಗೊರೆ ನೀಡುವ ನೆಪದಲ್ಲಿ ಬಂದು ಹಿಂದೂ ಮಹಾಸಭಾ ನಾಯಕನನ್ನು ಗುಂಡಿಕ್ಕಿ ಹತ್ಯೆ

    ಉಡುಗೊರೆ ನೀಡುವ ನೆಪದಲ್ಲಿ ಬಂದು ಹಿಂದೂ ಮಹಾಸಭಾ ನಾಯಕನನ್ನು ಗುಂಡಿಕ್ಕಿ ಹತ್ಯೆ

    ಲಕ್ನೋ: ಹಿಂದೂ ಮಹಾಸಭಾ ನಾಯಕ ಕಮಲೇಶ್ ತಿವಾರಿ ಅವರಿಗೆ ಗುಂಡಿಕ್ಕಿ ದುಷ್ಕರ್ಮಿಗಳು ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ಶುಕ್ರವಾರ ನಡೆದಿದೆ.

    ಗುಂಡು ತಗುಲಿ ಹಾಗೂ ಮಾರಣಾಂತಿಕ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಕಮಲೇಶ್ ತಿವಾರಿ ಅವರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ತಿವಾರಿ ಮೃತಪಟ್ಟಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

    ಕೇಸರಿ ಬಟ್ಟೆಯನ್ನು ಧರಿಸಿದ್ದ ದುಷ್ಕರ್ಮಿಗಳು ದೀಪಾವಳಿ ಉಡುಗೊರೆ ನೀಡುವ ನೆಪದಲ್ಲಿ ಕಮಲೇಶ್ ತಿವಾರಿ ಅವರ ಕಚೇರಿಗೆ ಬಂದಿದ್ದರು. ಕಚೇರಿಯಲ್ಲಿ ಚಹಾ ಕುಡಿದು ಹತ್ಯೆಗೆ ಪ್ಲ್ಯಾನ್ ರೂಪಿಸಿದ್ದ ದುಷ್ಕರ್ಮಿಗಳು, ಕಮಲೇಶ್ ತಿವಾರಿ ತಮ್ಮ ಬಳಿಗೆ ಬರುತ್ತಿದ್ದಂತೆ ಸ್ವೀಟ್ ಬಾಕ್ಸ್ ನಲ್ಲಿ ತಂದಿದ್ದ ಗನ್‍ನಿಂದ ಗುಂಡು ಹಾರಿಸಿದ್ದಾರೆ. ಬಳಿಕ ಮಾರಕಾಸ್ತ್ರಗಳಿಂದ ಕುತ್ತಿಗೆ, ಎದೆ, ಮುಖದ ಮೇಲೆ ಹಲ್ಲೆ ಮಾಡಿದ್ದಾರೆ. ಗುಂಡಿನ ಶಬ್ದ ಕೇಳಿದ ಸ್ಥಳೀಯರು ತಕ್ಷಣವೇ ಕಚೇರಿಯೊಳಗೆ ಬರುತ್ತಿದ್ದಂತೆ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.

    ಕಮಲೇಶ್ ತಿವಾರಿ ಅವರ ಮೇಲಿನ ಹಳೆಯ ದ್ವೇಷದಿಂದ ದುಷ್ಕರ್ಮಿಗಳ ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ. ಘಟನೆಯನ್ನು ಖಂಡಿಸಿ ಹಿಂದೂ ಮಹಾಸಭಾ ಸದಸ್ಯರು ಪ್ರತಿಭಟನೆ ಆರಂಭಿಸಿದ್ದು, ಆರೋಪಿಗಳನ್ನು ಬಂಧಿಸಿ ಸೂಕ್ತ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದೆ. ಈ ಸಂಬಂಧ ತನಿಖೆ ಆರಂಭಿಸಿರುವ ಪೊಲೀಸರು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ನಡೆಸಿದ್ದಾರೆ ಎಂದು ವರದಿಯಾಗಿದೆ.

    ಕಮಲೇಶ್ ತಿವಾರಿ ಅವರು ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದು ಭಾರೀ ಸುದ್ದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಕಮಲೇಶ್ ತಿವಾರಿ ಅವರಿಗೆ ಹಾಕಿದ್ದ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಇತ್ತೀಚೆಗೆ ಅಲಹಾಬಾದ್ ಹೈಕೋರ್ಟ್ ನ ಲಕ್ನೋ ನ್ಯಾಯಪೀಠವು  ರದ್ದುಪಡಿಸಿದೆ.

  • ಒಂದು ಮೀನಿಗೆ 5 ಲಕ್ಷ ರೂ. – ಬೆಲೆ ಕಡಿಮೆ ಎಂದ ಮಾಲೀಕ

    ಒಂದು ಮೀನಿಗೆ 5 ಲಕ್ಷ ರೂ. – ಬೆಲೆ ಕಡಿಮೆ ಎಂದ ಮಾಲೀಕ

    ಲಕ್ನೋ: ಕೇವಲ ಒಂದು ಮೀನಿಗೆ ಗ್ರಾಹಕರೊಬ್ಬರು 5 ಲಕ್ಷ ರೂ. ನೀಡಲು ಮುಂದಾದ್ರೂ ಮಾಲೀಕ ಮಾತ್ರ ಮಾರಾಟ ಮಾಡಲ್ಲ ಎಂದು ಹೇಳಿದ್ದಾರೆ. ಈ ವಿಶೇಷ ಮೀನಿನ ಮೇಲೆ ಉರ್ದುವಿನಲ್ಲಿ ‘ಅಲ್ಲಾಹ’ ಎಂದು ಬರೆಯಲಾಗಿದ್ದು, ಕೆಲವರು ಜಲಚರಕ್ಕಾಗಿ ಲಕ್ಷಾಂತರ ರೂಪಾಯಿ ನೀಡಲು ಮುಂದಾಗುತ್ತಿದ್ದಾರೆ.

    ಉತ್ತರ ಪ್ರದೇಶದ ಶಾಮಲಿ ಜಿಲ್ಲೆಯ ಕೈರಾನಾದಲ್ಲಿರುವ ಈ ವಿಶೇಷ ಮೀನು ನೋಡಲು ಜನರು ದೂರದಿಂದ ಆಗಮಿಸುತ್ತಿದ್ದಾರೆ. ಶಬಾಬ್ ಅಹಮದ್ ಎಂಬವರು ಎಂಟು ತಿಂಗಳ ಹಿಂದೆ ಪುಟ್ಟ ಮೀನನ್ನು ತಂದು ಅಕ್ವೇರಿಯಂನಲ್ಲಿ ಸಾಕುತ್ತಿದ್ದರು. ಮೀನು ದೊಡ್ಡದಾದಂತೆ ಅದರ ಮೇಲ್ಭಾಗದಲ್ಲಿ ಅಲ್ಲಾಹ ಎಂಬ ಅಕ್ಷರಗಳು ಕಾಣಿಸತೊಡಗಿದವು. ಈ ಮೀನು ಮನೆಗೆ ಬಂದಾಗಿನಿಂದ ನಮಗೆ ಒಳ್ಳೆಯದಾಗುತ್ತಿದೆ ಎಂಬುವುದು ಅಹಮದ್ ಅವರ ಬಲವಾದ ನಂಬಿಕೆ.

    ಶಾಮಲಿ ನಗರದ ಹಾಜಿ ರಶಿದ್ ಖಾನ್ ಎಂಬವರು 5 ಲಕ್ಷ ರೂ.ಗೆ ಮೀನು ನೀಡುವಂತೆ ಕೇಳಿದ್ದಾರೆ. ರಶಿದ್ ಖಾನ್ 5 ಲಕ್ಷಕ್ಕಿಂತೂ ಹೆಚ್ಚು ಹಣ ನೀಡಲು ಸಿದ್ಧರಿದ್ದಾರೆ. ಮೀನಿನ ಫೋಟೋಗಳು ವಾಟ್ಸಪ್ ನಲ್ಲಿ ಹರಿದಾಡಿದ್ದರಿಂದ ಶಾಮಲಿ ಜಿಲ್ಲೆಯ ಜನರು ಮನೆಗೆ ಬರುತ್ತಿದ್ದಾರೆ. ಕೆಲವು ಸಣ್ಣ ಮೀನುಗಳು ವಿಶೇಷ ಬರಹವುಳ್ಳ ಮೀನು ಇದೆ ಎಂದು ಅಹಮದ್ ಹೇಳುತ್ತಾರೆ.

    ಮನೆಗೆ ಆಗಮಿಸುತ್ತಿರುವ ಜನರು ಮೀನು ನೋಡಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಹಲವರು ಮೀನಿನ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ರಶಿದ್ ಖಾನ್ ಅವರ ರೀತಿಯಲ್ಲಿ ಮೀನು ಖರೀದಿಗೆ ಮುಂದಾಗುತ್ತಿದ್ದು, ಒಳ್ಳೆಯ ಬೆಲೆ ಸಿಕ್ಕ ಕೂಡಲೇ ಮಾರುತ್ತೇನೆ. ಈ ಮೀನು ಮಾರಾಟದಿಂದ ನನ್ನ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗಲಿದೆ ಎಂದು ಅಹಮದ್ ತಿಳಿಸಿದ್ದಾರೆ.