Tag: lucknow

  • ಮನೆಗೆ ನುಗ್ಗಿ ಅಪ್ರಾಪ್ತೆಯನ್ನು ಅತ್ಯಾಚಾರಗೈದು ಬೆಂಕಿ ಹಚ್ಚಿದ ಕಾಮುಕ

    ಮನೆಗೆ ನುಗ್ಗಿ ಅಪ್ರಾಪ್ತೆಯನ್ನು ಅತ್ಯಾಚಾರಗೈದು ಬೆಂಕಿ ಹಚ್ಚಿದ ಕಾಮುಕ

    ಲಕ್ನೋ: 16 ವರ್ಷದ ಆಪ್ರಾಪ್ತೆಯನ್ನು ನೆರೆ ಮನೆ ವ್ಯಕ್ತಿ ಅತ್ಯಾಚಾರಗೈದು, ಬೆಂಕಿ ಹಚ್ಚಿ ಕೊಲ್ಲಲು ಯತ್ನಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಸಂಭಾಲ್ ಜಿಲ್ಲೆಯ ನಖ್ಸಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ನಖ್ಸಾ ನಿವಾಸಿ ಝೀಷನ್ ಕೃತ್ಯವೆಸೆಗಿದ ಆರೋಪಿ ಎಂದು ಗುರುತಿಸಲಾಗಿದೆ. ಗುರುವಾರ ರಾತ್ರಿ ಈ ಘಟನೆ ನಡೆದಿದೆ. ಬಾಲಕಿ ಮನೆಯ ಪಕ್ಕದಲ್ಲಿಯೇ ಆರೋಪಿ ವಾಸಿಸುತ್ತಿದ್ದನು. ಗುರುವಾರ ರಾತ್ರಿ ಬಾಲಕಿಯ ತಾಯಿ ಮತ್ತು ಸಹೋದರ ಕಾರ್ಯಕ್ರಮಕ್ಕೆ ಹೋಗಿದ್ದರು. ಹೀಗಾಗಿ ಬಾಲಕಿ ಒಬ್ಬಳೇ ಮನೆಯಲ್ಲಿ ಇದ್ದಳು. ಇದನ್ನೂ ಓದಿ:ದಲಿತ ಯುವಕನನ್ನು ಪ್ರೀತಿಸಿದ ಮಗಳನ್ನು ಜೀವಂತ ಸುಟ್ಟ ತಾಯಿ

    ಆಗ ಆರೋಪಿ ಏಕಾಏಕಿ ಬಾಲಕಿ ಮನೆಗೆ ನುಗ್ಗಿ ಆಕೆಯ ಮೇಲೆ ಅತ್ಯಾಚಾರ ಎಸೆಗಿದ್ದಾನೆ. ಬಳಿಕ ಈ ಬಗ್ಗೆ ದೂರು ಕೊಡುವುದಾಗಿ ಆರೋಪಿಗೆ ಬಾಲಕಿ ಹೆದರಿಸಿದಾಗ, ಭಯದಿಂದ ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ಇದನ್ನೂ ಓದಿ:ನಾಲ್ಕರ ಬಾಲಕಿ ಮೇಲೆ ಅತ್ಯಾಚಾರವೆಸಗಿ, ಮನೆಗೆ ಬೆಂಕಿ ಹಚ್ಚಿದ ಮೂರು ಮಕ್ಕಳ ತಂದೆ

    ಈ ವೇಳೆ ಬಾಲಕಿಯ ಕಿರುಚಾಟ ಕೇಳಿ ಅಕ್ಕಪಕ್ಕದ ಮನೆಯವರು ಮನೆ ಬಳಿ ಬರುತ್ತಿದ್ದಂತೆ ಆರೋಪಿ ಎಸ್ಕೇಪ್ ಆಗಿದ್ದಾನೆ. ತಕ್ಷಣ ಬಾಲಕಿಯನ್ನು ರಕ್ಷಿಸಿದ ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ರವಾನಿಸಿದರು. ಘಟನೆಯಲ್ಲಿ ಶೇ. 70ರಷ್ಟು ಬಾಲಕಿಯ ದೇಹದ ಭಾಗ ಸುಟ್ಟು ಹೋಗಿದ್ದು, ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ.

    ಬಾಲಕಿ ಕುಟುಂಬ ಶುಕ್ರವಾರ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದು, ಆರೋಪಿ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಈಗಾಗಲೇ ಆರೋಪಿಯನ್ನು ಬಂಧಿಸಿರುವ ಪೊಲೀಸರು ಆತನ ವಿರುದ್ಧ ಐಪಿಸಿ ಸೆಕ್ಷನ್ 376, 307, 452 ಹಾಗೂ 506ರ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಆರೋಪಿಯನ್ನು ಶುಕ್ರವಾರ ಪೊಲೀಸರು ಕೋರ್ಟಿಗೆ ಹಾಜರುಪಡಿಸಿದ್ದು, ಆತನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

  • ಯೋಧರಿಗಾಗಿ ‘ಐರನ್ ಮ್ಯಾನ್’ ಸೂಟ್ ತಯಾರಿಸಿದ ದೇಶಭಕ್ತ

    ಯೋಧರಿಗಾಗಿ ‘ಐರನ್ ಮ್ಯಾನ್’ ಸೂಟ್ ತಯಾರಿಸಿದ ದೇಶಭಕ್ತ

    ಲಕ್ನೋ: ಯೋಧರೆಂದರೆ ಎಲ್ಲರಿಗೂ ವಿಶೇಷ ಗೌರವಿರುತ್ತದೆ. ದೇಶವಾಸಿಗಳಿಗಾಗಿ, ದೇಶಕ್ಕಾಗಿ ಶತ್ರುಗಳೊಂದಿಗೆ ಹೋರಾಡಿ ಜೀವತ್ಯಾಗ ಮಾಡುವ ಯೋಧರಿಗಾಗಿ ಉತ್ತರ ಪ್ರದೇಶದ ವ್ಯಕ್ತಿಯೊಬ್ಬರು ಗುಂಡೇಟನ್ನು ತಡೆಯಬಲ್ಲ ವಿಶೇಷ ‘ಐರನ್ ಮ್ಯಾನ್’ ಸೂಟ್ ತಯಾರಿಸಿದ್ದಾರೆ.

    ವಾರಣಾಸಿಯ ಶಾಮ್ ಚೌರಾಸಿಯಾ ಅವರು ಈ ಐರನ್ ಮ್ಯಾನ್ ಸೂಟನ್ನು ಯೋಧರಿಗಾಗಿ ತಯಾರಿಸಿದ್ದಾರೆ. ಶಾಮ್ ಅವರು ಅಶೋಕ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜೀಸ್ ಆ್ಯಂಡ್ ಮ್ಯಾನೇಜ್ಮೆಂಟ್‍ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಭಾರತೀಯ ಸೇನೆಯನ್ನು ಗಮನದಲ್ಲಿಟ್ಟುಕೊಂಡು ವಿಶೇಷ ಸೂಟ್ ತಯಾರು ಮಾಡಿದ್ದಾರೆ. ಯೋಧರು ದೇಶದ ಸೂಪರ್ ಹೀರೋಗಳು ಎಂದು ವಿಶೇಷ ರೀತಿಯಲ್ಲಿ ಪ್ರೀತಿ ಮೆರೆದಿದ್ದಾರೆ. ಇದನ್ನೂ ಓದಿ:ಸ್ವದೇಶಿ ಬುಲೆಟ್ ಪ್ರೂಫ್ ಜಾಕೆಟ್ ಅಭಿವೃದ್ಧಿ- ವಿಶೇಷತೆ ಏನು? ಬೆಲೆ ಎಷ್ಟು?

    ಈ ಐರನ್ ಮ್ಯಾನ್ ಸೂಟ್ ಲೋಹದಿಂದ ತಯಾರಿಸಿದ ಕವಚವಾಗಿದ್ದು, ಇದು ಭಾರತೀಯ ಯೋಧರನ್ನು ಭಯೋತ್ಪಾದಕರು ಹಾಗೂ ಶತ್ರುಗಳಿಂದ ರಕ್ಷಿಸಲಿದೆ. ಸದ್ಯ ಶ್ಯಾಮ್ ಅವರು ಡೆಮೋ ಪೀಸ್ ತಯಾರಿಸಿದ್ದಾರೆ. ಇದು ಟಿನ್‍ನಿಂದ ಮಾಡಲಾಗಿದೆ. ಈ ಕವಚ ಯುದ್ಧದ ಸಂದರ್ಭದಲ್ಲಿ ಯೋಧರಿಗೆ ಬಹಳ ಸಹಾಯವಾಗಲಿದೆ. ಇದರಲ್ಲಿ ಗೇರ್ಸ್ ಹಾಗೂ ಮೋಟರ್ ಗಳನ್ನು ಅಳವಡಿಸಲಾಗಿದೆ. ಅಲ್ಲದೇ ಇದರಲ್ಲೊಂದು ಮೊಬೈಲ್ ಕನೆಕ್ಷನ್, ಸೆನ್ಸರ್ ಗಳನ್ನೂ ಅಳವಡಿಸಲಾಗಿದೆ. ಈ ಸೆನ್ಸರ್ ಶತ್ರುಗಳು ದಾಳಿ ನಡೆಸುವ ಮುನ್ನ ಯೋಧರನ್ನು ಎಚ್ಚರಿಸುತ್ತದೆ ಎಂದು ಶ್ಯಾಮ್ ತಿಳಿಸಿದ್ದಾರೆ.

    ಸದ್ಯ ನಾನು ಡೆಮೋ ಪೀಸ್ ತಯಾರಿಸಿದ್ದೇನೆ. ಹಣ ಅಭಾವ ಇರುವುದರಿಂದ ಇದನ್ನು ಅಭಿವೃದ್ಧಿಗೊಳಿಸಲು ಕೊಂಚ ಸಮಯವಾಗುತ್ತಿದೆ. ಆದರೆ ನಾನು ಯೋಧರಿಗಾಗಿ ಐರನ್ ಮ್ಯಾನ್ ಸೂಟನ್ನು ಇನ್ನಷ್ಟು ಅಭಿವೃದ್ಧಿಗೊಳಿಸುತ್ತೇನೆ. ಹಾಲಿವುಡ್ ಚಿತ್ರಗಳಲ್ಲಿ ಐರನ್ ಮ್ಯಾನ್ ನೋಡಿ ನನಗೆ ಈ ಐಡಿಯಾ ಬಂತು. ಇದು ನಮ್ಮ ದೇಶ ಕಾಯುವ ಹೆಮ್ಮೆಯ ಯೋಧರಿಗಾಗಿ ನನ್ನದೊಂದು ಪುಟ್ಟ ಪ್ರಯತ್ನ ಎಂದು ಶ್ಯಾಮ್ ಹೇಳಿದ್ದಾರೆ.

    ಶತ್ರುನಾಶಕ್ಕೆ ಇದು ಸಹಾಯಕಾರಿ, ಯೋಧರ ಶಕ್ತಿಯನ್ನು ಇದು ಮತ್ತಷ್ಟು ಹೆಚ್ಚಿಸುತ್ತದೆ. ಹೀಗಾಗಿ ಸರ್ಕಾರಿ ಏಜೆನ್ಸಿ ಈ ಬಗ್ಗೆ ಗಮನವಹಿಸಬೇಕು. ಯೋಧರಿಗಾಗಿ ಇವುಗಳನ್ನು ತಯಾರಿಸಲು ಯೋಜನೆ ಹಾಕಿಕೊಳ್ಳಬೇಕು ಎಂದು ಡಿಆರ್‌ಡಿಒ ಹಾಗೂ ಇತರೆ ಸರ್ಕಾರಿ ಏಜೆನ್ಸಿ ಬಳಿ ವಿನಂತಿಸಿದ್ದಾರೆ.

    https://twitter.com/MohitMohit114/status/1196650627968970752

  • ನಾಲ್ಕು ಮಕ್ಳ ತಾಯಿಗೆ ಸೇಲ್ಸ್‌ಮೆನ್‌ ಮೇಲೆ ಲವ್ – ವಿರೋಧಿಸಿದ್ದಕ್ಕೆ ಪತಿಯ ಹತ್ಯೆ

    ನಾಲ್ಕು ಮಕ್ಳ ತಾಯಿಗೆ ಸೇಲ್ಸ್‌ಮೆನ್‌ ಮೇಲೆ ಲವ್ – ವಿರೋಧಿಸಿದ್ದಕ್ಕೆ ಪತಿಯ ಹತ್ಯೆ

    ಲಕ್ನೋ: ನಾಲ್ಕು ಮಕ್ಕಳ ತಾಯಿಗೆ ಸೇಲ್ಸ್‌ಮೆನ್‌ ಮೇಲೆ ಪ್ರೀತಿಯಾಗಿದ್ದು, ಇದನ್ನು ವಿರೋಧಿಸಿದ ಪತಿಯನ್ನು ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಸಿಕ್ಕಂದರಾದಲ್ಲಿರುವ ರಾಧಾ ನಗರದಲ್ಲಿ ನಡೆದಿದೆ.

    ಹರಿ ಓಂ(36) ಕೊಲೆಯಾದ ಪತಿ. ಹರಿ ಓಂ 17 ವರ್ಷಗಳ ಹಿಂದೆ ಬಬ್ಲಿ ಜೊತೆ ಮದುವೆ ಆಗಿತ್ತು. ಈ ದಂಪತಿಗೆ ನಾಲ್ವರು ಮಕ್ಕಳು ಕೂಡ ಇದ್ದಾರೆ. ಬಬ್ಲಿ ಫೆಬ್ರವರಿಯಲ್ಲಿ ಕರಣ್ ಅಲಿಯಾಸ್ ಕಮಲ್‍ನನ್ನು ಭೇಟಿ ಮಾಡಿದ್ದಳು. ಆಗಿನಿಂದಲೂ ಇಬ್ಬರು ಅಕ್ರಮ ಸಂಬಂಧ ಹೊಂದಿದ್ದರು. ಈ ವಿಷಯ ಆಕೆಯ ಪತಿಗೆ ಗೊತ್ತಾಗಿ ಇದನ್ನು ವಿರೋಧಿಸಿದ್ದನು. 20 ದಿನಗಳ ಹಿಂದೆ ಕರಣ್ ತನ್ನ ಕುಟುಂಬದ ಜೊತೆ ರಾಧಾ ನಗರದಲ್ಲಿಯೇ ವಾಸಿಸುತ್ತಿದ್ದನು.

                                                                            ಮೃತ ವ್ಯಕ್ತಿ ಹರಿ ಓಂ

    ಹರಿ ಓಂನ ಇಬ್ಬರು ಮಕ್ಕಳು ಆತನ ತಾತನ ಬಳಿ ವಾಸಿಸುತ್ತಿದ್ದರು. ಮತ್ತೆ ಇಬ್ಬರು ಮಕ್ಕಳು ಹರಿ ಓಂ ಜೊತೆಯಲ್ಲಿ ವಾಸಿಸುತ್ತಿದ್ದರು. ನವೆಂಬರ್ 3ರಂದು ಹರಿ ಓಂ ಮನೆಯಿಂದ ನಾಪತ್ತೆಯಾಗಿದ್ದನು. ಇತ್ತ ಪತ್ನಿ ಬಬ್ಲಿ ಹಾಗೂ ಮಕ್ಕಳು ಕೂಡ ಕಾಣೆಯಾಗಿದ್ದರು. ಎರಡು ದಿನಗಳ ನಂತರ ಹರಿ ಓಂ ತಂದೆ ರಾಜ್‍ವೀರ್ ಸಿಕಂದರಾ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿದ್ದಾರೆ ಎಂದು ದೂರು ದಾಖಲಿಸಿದ್ದರು.

    ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ಬಬ್ಲಿಯನ್ನು ಹುಡುಕಲು ಶುರು ಮಾಡಿದ್ದು, ಶುಕ್ರವಾರ ಆಕೆಯನ್ನು ಬಂಧಿಸಿದ್ದಾರೆ. ಈ ವೇಳೆ ಆರೋಪಿ ಕಮಲ್ ಕೂಡ ಸಿಕ್ಕಿ ಬಿದ್ದಿದ್ದು, ಪೊಲೀಸರು ವಿಚಾರಣೆ ನಡೆಸಿದಾಗ ಹರಿ ಓಂನನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಅಲ್ಲದೆ ಕೊಲೆ ಮಾಡಿದ ಬಳಿಕ ಆತನ ಶವವನ್ನು ಜವಾಹರ್ ಸೇತುವೆಯಿಂದ ಯಮುನಾ ನದಿಗೆ ಎಸೆದಿರುವಾಗಿ ಆರೋಪಿಗಳು ಹೇಳಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಎಎಸ್‍ಪಿ ಸೌರಭ್ ದೀಕ್ಷಿತ್, ಬಬ್ಲಿ ಆರೋಪಿ ಕಮಲ್‍ನನ್ನು ಪ್ರೀತಿಸುತ್ತಿದ್ದಳು. ಅಲ್ಲದೆ ಆತನ ಜೊತೆಯಲ್ಲಿಯೇ ವಾಸಿಸಲು ಇಷ್ಟಪಡುತ್ತಿದ್ದಳು. ಆದರೆ ಪತಿ ಇದನ್ನು ವಿರೋಧಿಸಿದ್ದಾನೆ. ಹಾಗಾಗಿ ಇಬ್ಬರು ಸೇರಿ ಆತನನ್ನು ಕೊಲೆ ಮಾಡಿದ್ದಾರೆ. ಕಮಲ್ ಸೀರೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು. ಜನವರಿಯಲ್ಲಿ ಬಬ್ಲಿ ಸೀರೆ ಖರೀದಿಸಲು ಶೋ ರೂಮಿಗೆ ಬಂದಿದ್ದಾಗ ಕಮಲ್ ಆಕೆಗೆ ಸೀರೆಯನ್ನು ತೋರಿಸುತ್ತಿದ್ದನು. ಈ ವೇಳೆ ಇಬ್ಬರ ನಡುವೆ ಪ್ರೀತಿ ಶುರುವಾಗಿತ್ತು ಎಂದು ತಿಳಿಸಿದ್ದಾರೆ.

    ಬಬ್ಲಿ, ಕಮಲ್‍ನನ್ನು ಪ್ರೀತಿಸುತ್ತಿರುವ ವಿಷಯ ಆಕೆಯ ಪತಿಗೆ ತಿಳಿಯಿತು. ಬಳಿಕ ಆಗಸ್ಟ್ ತಿಂಗಳಿನಲ್ಲಿ ಕಮಲ್ ಹಾಗೂ ಬಬ್ಲಿ ಓಡಿ ಹೊಗಿದ್ದರು. ಎರಡು ತಿಂಗಳಾದ ನಂತರ ಇಬ್ಬರು ಹಿಂತಿರುಗಿದ್ದರು. ಈ ವೇಳೆ ಹರಿ ಓಂ ಪತ್ನಿಗೆ ಬುದ್ಧಿ ಹೇಳಿದ್ದಾನೆ. ಬಬ್ಲಿ ತನ್ನ ಮಾತನ್ನು ಒಪ್ಪದಿದ್ದಾಗ ಹರಿ ಓಂ ಆಕೆಯ ಮೇಲೆ ಹಲ್ಲೆ ಮಾಡಿದ್ದನು. ಬಬ್ಲಿ, ಕಮಲ್‍ಗೆ ಕರೆ ಮಾಡಿ ಪತಿ ಹಲ್ಲೆ ಮಾಡಿದ ವಿಷಯವನ್ನು ತಿಳಿಸಿದ್ದಳು. ಆಗ ರಾತ್ರಿ ಸುಮಾರು 11.30ಕ್ಕೆ ಕಮಲ್, ಬಬ್ಲಿಯನ್ನು ಭೇಟಿ ಆಗಿದ್ದನು ಎಂದು ಸೌರಭ್ ಹೇಳಿದ್ದಾರೆ.

    ಮನೆಗೆ ಬಂದ ವೇಳೆ ಕಮಲ್ ಹಾಗೂ ಹರಿ ಓಂ ನಡುವೆ ಜಗಳವಾಗಿದೆ. ಆಗ ಹರಿ ಓಂ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ವಿಚಾರಣೆ ವೇಳೆ ಬಬ್ಲಿ, ನಾನು ನನ್ನ ಇಬ್ಬರ ಮಕ್ಕಳ ಜೊತೆಯೇ ಕುಳಿತಿದೆ. ಆಗ ನನ್ನ ಪತಿ ಹಾಗೂ ಕಮಲ್ ನಡುವೆ ವಾದ ನಡೆಯುತ್ತಿತ್ತು. ಆಗ ಕಮಲ್ ಆಕೆಯನ್ನು ಕೊಲೆ ಮಾಡಿದ್ದಾನೆ. ನಾನು ಸಿಕ್ಕಿ ಹಾಕಿಕೊಳ್ಳುತ್ತೇನೆ ಎಂಬ ಭಯದಿಂದ ಆತನ ಜೊತೆ ಓಡಿ ಹೋದೆ ಎಂದು ಹೇಳಿದ್ದಾಳೆ.

  • ಕಿರುಕುಳದಿಂದ ಯುವತಿಯನ್ನು ರಕ್ಷಿಸಿದ ಗುಂಪಿನಿಂದಲೇ ಗ್ಯಾಂಗ್ ರೇಪ್

    ಕಿರುಕುಳದಿಂದ ಯುವತಿಯನ್ನು ರಕ್ಷಿಸಿದ ಗುಂಪಿನಿಂದಲೇ ಗ್ಯಾಂಗ್ ರೇಪ್

    ಲಕ್ನೋ: ಲೈಂಗಿಕ ಕಿರುಕುಳ ನೀಡುತ್ತಿದ್ದವನಿಂದ ಯುವತಿಯನ್ನು ರಕ್ಷಿಸಿದ 6 ಮಂದಿ ಯುವಕರೇ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಕ್ರೂರ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.

    ಬುಧವಾರದಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನೋಯ್ಡಾದ 21 ವರ್ಷದ ಯುವತಿ ತನ್ನ ಕುಟುಂಬವನ್ನು ಸಾಕಲು ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದಳು. ಆಕೆಗೆ ವ್ಯಕ್ತಿಯೋರ್ವನ ಪರಿಚಯವಾಗಿತ್ತು. ಆ ವ್ಯಕ್ತಿ ನಿನಗೆ ಕೆಲಸ ಕೊಡಿಸುತ್ತೇನೆ, ಆ ಬಗ್ಗೆ ಮಾತನಾಡಬೇಕು ಎಂದು ಬುಧವಾರ ರಾತ್ರಿ 7 ಗಂಟೆ ವೇಳೆಗೆ ಪಾರ್ಕ್ ವೊಂದರಲ್ಲಿ ಆತನನ್ನು ಭೇಟಿಯಾಗುವಂತೆ ಯುವತಿಗೆ ಹೇಳಿದ್ದನು. ಆತನ ಮಾತು ನಂಬಿ ಯುವತಿ ಪಾರ್ಕಿಗೆ ಹೋಗಿದ್ದಳು. ಆದರೆ ಅಲ್ಲಿ ವರಸೆ ಬದಲಿಸಿದ ವ್ಯಕ್ತಿ ಆಕೆಯ ಜೊತೆಗೆ ಅಸಭ್ಯವಾಗಿ ವರ್ತಿಸುತ್ತಿದ್ದನು. ಇದನ್ನೂ ಓದಿ:ಬಾಲಕಿಯನ್ನು ಮಂಚಕ್ಕೆ ಕಟ್ಟಿ 16ರ ಬಾಲಕನಿಂದ ರೇಪ್

    ಈ ವೇಳೆ ಸ್ಥಳದಲ್ಲಿದ್ದ 6 ಮಂದಿ ಯುವಕರು ಯುವತಿಯ ಸಹಾಯಕ್ಕೆ ಬಂದು, ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ಅಲ್ಲಿಂದ ಓಡಿಸಿದರು. ಬಳಿಕ ಯವತಿ ಮೇಲೆ ತಾವೇ ಸಾಮೂಹಿಕ ಅತ್ಯಾಚಾರ ನಡೆಸಿ ವಿಕೃತಿ ಮೆರೆದಿದ್ದರು. ಘಟನೆ ಬಳಿಕ ಯುವತಿ ಈ ಸಂಬಂಧ ಮೂರ್ನಾಲ್ಕು ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋದರೂ ಯಾರು ದೂರು ತೆಗೆದುಕೊಂಡಿಲ್ಲ. ಕೊನೆಗೆ ಶುಕ್ರವಾರ ಪೊಲೀಸರು ಯುವತಿಯ ದೂರು ಪಡೆದು, ಈ ಸಂಬಂಧ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ:‘ಪತ್ನಿ ಮನೆಯಲಿಲ್ಲ, ಬಂದು ಅಡುಗೆ ಮಾಡು’- ನಡುರಾತ್ರಿ ವಿದ್ಯಾರ್ಥಿನಿಗೆ ಪ್ರೊಫೆಸರ್ ಮೆಸೇಜ್

    ಸದ್ಯ ಯುವತಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 354, 376 ಮತ್ತು 511 ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ:ಫೇಸ್‍ಬುಕ್‍ನಲ್ಲಿ ಪರಿಚಯ- ನಂತ್ರ ಚಾಟಿಂಗ್, ಮೀಟಿಂಗ್, ಚೀಟಿಂಗ್

    ಆರೋಪಿಗಳ ಬಗ್ಗೆ ನಿಖರ ಮಾಹಿತಿ ಇಲ್ಲ, ಅಲ್ಲದೆ ಅವರ ವಿರುದ್ಧ ಈ ಹಿಂದೆ ಯಾವುದೇ ಪ್ರಕರಣ ಕೂಡ ಇಲ್ಲ. ಹೀಗಾಗಿ ಅವರನ್ನು ಪತ್ತೆಹಚ್ಚುವುದು ಕಷ್ಟದ ಕೆಲಸವಾಗಿದೆ. ಸದ್ಯ ಆರೋಪಿಗಳಲ್ಲಿ ಮೂವರು ಘಟನೆ ನಡೆದ ಸ್ಥಳದ ಸುತ್ತಮುತ್ತಲು ಗುತ್ತಿಗೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎಂಬುದು ತಿಳಿದು ಬಂದಿದೆ.

    ಅಲ್ಲದೆ ಆರೋಪಿಗಳೆಲ್ಲರೂ 20ರಿಂದ 25 ವರ್ಷದ ವಯಸ್ಸಿನವರು, ಅವರನ್ನು ಹುಡುಕಿ ಕೊಟ್ಟವರಿಗೆ 25 ಸಾವಿರ ಬಹುಮಾನ ಹಣನವನ್ನು ಕೂಡ ಪೊಲೀಸರು ಘೋಷಿಸಿದ್ದಾರೆ. ಸದ್ಯ ಈ ಸಂಬಂಧ ತನಿಖೆ ಮುಂದುವರಿದಿದೆ.

  • ಕುಡಿಯುವಾಗ ತಡೆದಿದ್ದಕ್ಕೆ ಪತ್ನಿಯ ರುಂಡ ಕತ್ತರಿಸಿ ಠಾಣೆಗೆ ತಂದ

    ಕುಡಿಯುವಾಗ ತಡೆದಿದ್ದಕ್ಕೆ ಪತ್ನಿಯ ರುಂಡ ಕತ್ತರಿಸಿ ಠಾಣೆಗೆ ತಂದ

    – ಪಾತ್ರೆಯಲ್ಲಿ ರುಂಡ ಇಟ್ಟುಕೊಂಡು ಪೊಲೀಸರಿಗೆ ಶರಣಾದ
    – ಹತ್ಯೆಗೈದು ಮನೆ ಬಿಟ್ಟು ಪರಾರಿಯಾಗಿದ್ದ ಪತಿ

    ಲಕ್ನೋ: ಮದ್ಯ ಕುಡಿಯುವಾಗ ತಡೆದಿದ್ದಕ್ಕೆ ಪತಿಯೊಬ್ಬ ಪತ್ನಿಯ ರುಂಡವನ್ನೇ ಕತ್ತರಿಸಿ ಕೊಲೆ ಗೈದು, ಪೊಲೀಸ್ ಠಾಣೆಗೆ ಬಂದು ಶರಣಾದ ಭಯಾನಕ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

    ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಸೋಮವಾರ ಆರೋಪಿ ಪತ್ನಿಯ ರುಂಡವನ್ನು ಹಿಡಿದು ತಂದು ಪೊಲೀಸರಿಗೆ ಶರಣಾಗಿದ್ದಾನೆ. ಆಗ್ರಾದ ಕಚ್ಪುರದಲ್ಲಿ ಈ ಭಯಾನಕ ಘಟನೆ ನಡೆದಿದೆ. ಕಚ್ಪುರ ನಿವಾಸಿ ನರೇಶ್(30) ಪತ್ನಿ ಶಾಂತಿ(30) ರುಂಡ ಕತ್ತರಿಸಿ ಕೊಲೆ ಮಾಡಿದ್ದಾನೆ. ಮೆಕ್ಯಾನಿಕ್ ಆಗಿರುವ ನರೇಶ್ ಸದಾ ಪತ್ನಿ ಬಳಿ ಒಂದಲ್ಲಾ ಒಂದು ಕಾರಣಕ್ಕೆ ಜಗಳವಾಡುತ್ತಲೇ ಇರುತ್ತಿದ್ದನು. ದಶಕಗಳ ಹಿಂದೆ ಮದುವೆಯಾದ ದಂಪತಿಗೆ ಮೂವರು ಹೆಣ್ಣುಮಕ್ಕಳು ಹಾಗೂ ಓರ್ವ ಮಗನಿದ್ದಾನೆ. ಇದನ್ನೂ ಓದಿ:ಹೃತಿಕ್ ರೋಶನ್ ಮೇಲೆ ಕ್ರಶ್ – ಪತ್ನಿಯನ್ನು ಕೊಂದು ಪತಿ ಆತ್ಮಹತ್ಯೆ

    ಆದರೆ ಭಾನುವಾರ ರಾತ್ರಿ ಮಕ್ಕಳು ಮಲಗಿದ್ದ ವೇಳೆ ನರೇಶ್ ಮದ್ಯ ಕುಡಿಯುತ್ತಿದ್ದನು. ಆಗ ಶಾಂತಿ ಆತನನ್ನು ಕುಡಿಯಬೇಡಿ ಎಂದು ತಡೆದಿದ್ದಳು. ಮೊದಲೇ ಕುಡಿದ ನಶೆಯಲ್ಲಿದ್ದ ನರೇಶ್ ಪತ್ನಿ ಮಾತಿಗೆ ಕೋಪಗೊಂಡು, ಆಕೆಯನ್ನು ಎಳೆದುಕೊಂಡು ಕೋಣೆಗೆ ಹೋಗಿದ್ದಾನೆ. ಅಲ್ಲಿ ಪತ್ನಿ ಮೇಲೆ ಹಲ್ಲೆ ನಡೆಸಿದ, ನಂತರ ಹರಿತವಾದ ವಸ್ತುವಿನಿಂದ ಆಕೆ ತಲೆ ಕತ್ತರಿಸಿ ಕೊಲೆ ಮಾಡಿದ್ದಾನೆ. ಬಳಿಕ ಪತ್ನಿಯ ರುಂಡವನ್ನು ಪಾತ್ರೆಯೊಂದರಲ್ಲಿ ಇಟ್ಟುಕೊಂಡು ಕೋಣೆಗೆ ಬೀಗ ಹಾಕಿ ಮನೆಬಿಟ್ಟು ಪರಾರಿಯಾಗಿದ್ದ.

    ಮರುದಿನ ಬೆಳಗ್ಗೆ ಮಕ್ಕಳು ಎದ್ದು ತಾಯಿ ಕಾಣಲಿಲ್ಲ ಎಂದು ಹುಡುಕಲು ಆರಂಭಿಸಿದರು. ಈ ವೇಳೆ ಬೀಗ ಒಡೆದು ಕೋಣೆಯನ್ನು ತೆರೆದಾಗ ರಕ್ತದ ಮಡುವಿನ ಮಧ್ಯೆ ತಲೆ ಇಲ್ಲದ ಸ್ಥಿತಿಯಲ್ಲಿ ಹೆಣವಾಗಿ ಅಮ್ಮ ಬಿದ್ದಿದ್ದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ತಕ್ಷಣ ಈ ಬಗ್ಗೆ ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಮನೆಗೆ ಬಂದ ಸಂಬಂಧಿಗಳು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಇದನ್ನೂ ಓದಿ:ಕಾಮದಾಸೆಯಿಂದ ಸೊಸೆಯನ್ನೇ ಚುಚ್ಚಿ ಕೊಂದ ಮಾವ

    ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ವಿಧಿವಿಜ್ಞಾನ ತಂಡ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ, ಆರೋಪಿ ಕೊಲೆ ಮಾಡಿದ ಬಳಿಕ ನೆಲದ ಮೇಲೆ ಬಿದ್ದ ರಕ್ತದ ಕಲೆಗಳನ್ನು ಒರೆಸಲು ಯತ್ನಿಸಿದ್ದನು ಎಂಬುದು ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿಗಾಗಿ ಹುಡುಕಾಟ ನಡೆಸುತ್ತಿರುವಾಗಲೇ ನರೇಶ್ ಪತ್ನಿಯ ರುಂಡ ಹಿಡಿದು ತಂದು ಠಾಣೆಗೆ ಶರಣಾಗಿದ್ದಾನೆ. ತಕ್ಷಣ ಆತನ್ನನ್ನು ಬಂಧಿಸಿ, ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಬಳಿಕ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

  • ಮದ್ವೆಯಲ್ಲಿ ನಾಗಿನ್ ಡ್ಯಾನ್ಸ್ ಮಾಡಿದ ವರನಿಗೆ ವಧು ತಲಾಕ್

    ಮದ್ವೆಯಲ್ಲಿ ನಾಗಿನ್ ಡ್ಯಾನ್ಸ್ ಮಾಡಿದ ವರನಿಗೆ ವಧು ತಲಾಕ್

    ಲಕ್ನೋ: ಮದುವೆಯಲ್ಲಿ ನಾಗಿನ್ ಡ್ಯಾನ್ಸ್ ಮಾಡಿದ ವರನನ್ನು ನೋಡಿ ವಧು ತಲಾಕ್ ಕೊಟ್ಟ ಘಟನೆ ಶುಕ್ರವಾರ ಉತ್ತರ ಪ್ರದೇಶದ ಲಕ್ಕೀಂಪುರದ ಖೀರಿ ಜಿಲ್ಲೆಯಲ್ಲಿ ನಡೆದಿದೆ.

    ಶುಕ್ರವಾರ ವಧು ವರನಿಗೆ ಹೂಮಾಲೆ ಹಾಕಿದ ತಕ್ಷಣ ತಲಾಕ್ ನೀಡಿದ್ದಾಳೆ. ಮದುವೆ ಸಂದರ್ಭದಲ್ಲಿ ವರ ಮದ್ಯದ ನಶೆಯಲ್ಲಿ ನಾಗಿನ್ ಡ್ಯಾನ್ಸ್ ಮಾಡುತ್ತಿದ್ದನು. ಆದರೆ ಇದು ವಧುವಿಗೆ ಇಷ್ಟವಾಗಲಿಲ್ಲ. ಇದನ್ನು ನೋಡಿದ ತಕ್ಷಣ ವಧು ವರನಿಂದ ದೂರವಾಗಲು ನಿರ್ಧರಿಸಿದ್ದಳು.

    ಮದುವೆ ಬೇಡವೆಂದು ಹೇಳಿದ ವಧುವಿಗೆ ವರ ಕಪಾಳಮೋಕ್ಷ ಮಾಡಿದ್ದಾನೆ. ಈ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಬಳಿಕ ಮದುವೆಯಲ್ಲಿ ವರನ ಕುಟುಂಬದವರು ನೀಡಿದ ಎಲ್ಲಾ ಉಡುಗೊರೆಗಳನ್ನು ವಧುವಿನ ಕುಟುಂಬಸ್ಥರು ಹಿಂದಿರುಗಿಸಿದ್ದರು. ಈ ಬಗ್ಗೆ ಇಬ್ಬರು ಕುಟುಂಬದವರು ದೂರು ನೀಡಲು ನಿರಾಕರಿಸಿದ್ದಾರೆ.

    ವರದಿಗಳ ಪ್ರಕಾರ, ವರ ಮೆರವಣಿಗೆ ಮೂಲಕ ಮದುವೆ ಮನೆಗೆ ಬಂದಿದ್ದನು. ಈ ವೇಳೆ ವರನ ಸ್ನೇಹಿತರು ಆತನನ್ನು ಡ್ಯಾನ್ಸ್ ಮಾಡಲು ಕರೆದುಕೊಂಡು ಹೋದರು. ಎಲ್ಲರೂ ಡ್ಯಾನ್ಸ್ ಮಾಡಲು ಶುರು ಮಾಡಿದ್ದಾಗ ವಧುವಿನ ಕುಟುಂಬದವರು ವರನನ್ನು ಡ್ಯಾನ್ಸ್ ಫ್ಲೋರ್ ನಿಂದ ಹೊರ ಹಾಕುವ ಮೂಲಕ ಆತನ ಜೊತೆ ಕೆಟ್ಟದಾಗಿ ನಡೆದುಕೊಂಡರು.

    ಈ ವಿಷಯವನ್ನು ಅಲ್ಲಿಯೇ ಇತ್ಯರ್ಥಪಡಿಸಲಾಯಿತು. ಬಳಿಕ ವರ ಹಾಗೂ ವಧುವನ್ನು ಪರಸ್ಪರ ಹೂ ಮಾಲೆ ಹಾಕಿದ್ದಾರೆ. ಇದಾದ ಸ್ವಲ್ಪ ಸಮಯದ ಬಳಿಕ ವರ ಮತ್ತೆ ಡ್ಯಾನ್ಸ್ ಫ್ಲೋರ್ ಗೆ ಹೋಗಿ ನಾಗಿನ್ ಡ್ಯಾನ್ಸ್ ಮಾಡಲು ಶುರು ಮಾಡಿದ್ದನು. ಇದನ್ನು ನೋಡಿದ ವಧು ತಕ್ಷಣ ಮದುವೆ ಮುರಿದು ವೇದಿಕೆಯಿಂದ ಇಳಿದು ಹೊರಟು ಹೋದಳು.

    ಇಬ್ಬರ ಕುಟುಂಬದವರು ವಧುವನ್ನು ಸಮಾಧಾನ ಮಾಡಲು ಪ್ರಯತ್ನಿಸುತ್ತಾರೆ. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಬಳಿಕ ವರನ ಕುಟುಂಬಸ್ಥರು ವಧುನಿನ ಜೊತೆ ಹಾಗೂ ಆಕೆಯ ತಂದೆ-ತಾಯಿ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಹೇಳಲಾಗುತ್ತಿದೆ.

  • ಟೀ ಮಾರಿ ಬಡ ಮಕ್ಕಳ ಶಿಕ್ಷಣಕ್ಕೆ ನೆರವಾದ ವ್ಯಾಪಾರಿ

    ಟೀ ಮಾರಿ ಬಡ ಮಕ್ಕಳ ಶಿಕ್ಷಣಕ್ಕೆ ನೆರವಾದ ವ್ಯಾಪಾರಿ

    – ಸಲಾಂ ಎಂದ ವಿವಿಎಸ್ ಲಕ್ಷ್ಮಣ್

    ಲಕ್ನೋ: ಉತ್ತರ ಪ್ರದೇಶದ ಚಹಾ ವ್ಯಾಪಾರಿಯೋಬ್ಬರು ಚಹಾ ಮಾರಾಟದಲ್ಲಿ ಬಂದ ಶೇ. 80ರಷ್ಟು ಲಾಭವನ್ನು ಬಡ ಮಕ್ಕಳ ಶಿಕ್ಷಣಕ್ಕಾಗಿ ನೀಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

    ಕಾನ್ಪುರದ ಚಹಾ ವ್ಯಾಪಾರಿ ಮೊಹಮದ್ ಮೆಹಬೂಬ್ ಮಲಿಕ್(45) ಅನೇಕ ವರ್ಷಗಳಿಂದ ಬಡ ಮಕ್ಕಳ ಶಿಕ್ಷಣಕ್ಕೆ ನೆರವಾಗಿದ್ದಾರೆ. ಸುಮಾರು 40 ಮಂದಿ ಮಕ್ಕಳಿಗೆ ಉಚಿತ ಶಿಕ್ಷಣ, ಪಠ್ಯ-ಪುಸ್ತಕ ಹಾಗೂ ಓದಲು ಬೇಕಾಗುವ ವಸ್ತುಗಳನ್ನು ನೀಡಿ ಸಹಾಯ ಮಾಡುತ್ತಿದ್ದಾರೆ. ಚಹಾ ಮಾರಾಟದಲ್ಲಿ ಸಿಗುವ ಲಾಭದಲ್ಲಿ ಶೇ.80ರಷ್ಟು ಭಾಗ ಬಡಮಕ್ಕಳ ಶಿಕ್ಷಣಕ್ಕೆ ಮಲಿಕ್ ನೀಡುತ್ತಿದ್ದಾರೆ. ಈ ಬಗ್ಗೆ ತಿಳಿದು ಟೀಂ ಇಂಡಿಯಾ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಮಲಿಕ್ ಕಾರ್ಯವನ್ನು ಹೊಗಳಿ, ಎಂಥಹ ಪ್ರೇರಣೆ ಎಂದು ಬರೆದು ಟ್ವೀಟ್ ಮಾಡಿ ಮಲಿಕ್‍ಗೆ ಸಲಾಂ ಎಂದಿದ್ದಾರೆ.

    ಬಡ ಕುಟುಂಬದಲ್ಲಿ ಬೆಳೆದ ಮಲಿಕ್ ಅವರಿಗೆ ಪ್ರೌಢಶಾಲೆ ಬಳಿಕ ಓದಲು ಸಾಧ್ಯವಾಗಲಿಲ್ಲ. ಕುಟುಂಬದ ಆರ್ಥಿತ ಪರಿಸ್ಥಿತಿಯಿಂದ ಹೆಚ್ಚಿನ ಶಿಕ್ಷಣ ಪಡೆಯಲು ಆಗಲಿಲ್ಲ. ಆದ್ದರಿಂದ ಶಿಕ್ಷಣದಿಂದ ವಂಚಿತರಾಗಿ ಬಡ ಮಕ್ಕಳು ಕೆಲಸಕ್ಕೆ ಹೋಗುವುದನ್ನ ನೋಡಿದರೆ ನನಗೆ ನನ್ನ ಬಾಲ್ಯ ನೆನಪಾಗುತ್ತೆ. ನನ್ನ ರೀತಿ ಈ ಮಕ್ಕಳು ಶಿಕ್ಷಣ ಪಡೆಯಲಾಗದೆ ಕೊರಗಬಾರದು. ಹೀಗಾಗಿ ನನ್ನ ಸಂಪಾದನೆಯಲ್ಲಿ ಈ 40 ಮಕ್ಕಳಿಕೆ ಶಿಕ್ಷಣ ಕೊಡಿಸುತ್ತಿದ್ದೇನೆ. ಇದರಲ್ಲಿ ನನಗೆ ಖುಷಿ ಸಿಗುತ್ತಿದೆ ಎಂದು ಮಲಿಕ್ ತಿಳಿಸಿದ್ದಾರೆ.

    2017ರಲ್ಲಿ ‘ಮಾ ತುಜೆ ಸಲಾಂ’ ಹೆಸರಿನಲ್ಲಿ ಎನ್‍ಜಿಓ ಆರಂಭಿಸಿದೆ. ಚಹಾ ಮಾರಾಟ ಮಾಡಿ ಬರುವ ಲಾಭದ ಶೇ.80ರಷ್ಟು ಹಣವನ್ನು ನಾನು 40 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಕೊಡುವ ಶಾಲೆಗೆ ಖರ್ಚು ಮಾಡುತ್ತಿದ್ದೇನೆ. ಮಕ್ಕಳಿಗಾಗಿ ತಿಂಗಳಿಗೆ ಸುಮಾರು 20 ಸಾವಿರ ಹಣ ಬೇಕಾಗುತ್ತದೆ ಎಂದು ಹೇಳಿದ್ದಾರೆ.

    ಕಾನ್ಪುರದ ಚಹಾ ವ್ಯಾಪಾರಿ ಮೊಹಮದ್ ಮೆಹಬೂಬ್ ಮಲಿಕ್ 40 ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದಾರೆ. ಅವರು ಚಿಕ್ಕ ಚಹಾ ಅಂಗಡಿ ಇಟ್ಟುಕೊಂಡಿದ್ದಾರೆ. ಅದರಿಂದ ಬಂದ ಶೇ. 80ರಷ್ಟು ಲಾಭವನ್ನು ಈ ಮಕ್ಕಳ ಶಿಕ್ಷಣಕ್ಕೆ ಖರ್ಚು ಮಾಡುತ್ತಾರೆ, ಎಂಥಹ ಪ್ರೇರಣೆ! ಎಂದು ಬರೆದು ವಿವಿಎಸ್ ಲಕ್ಷ್ಮಣ್ ಟ್ವೀಟ್ ಮಾಡಿ ಮಲಿಕ್ ಕಾರ್ಯವನ್ನು ಶ್ಲಾಘಿಸಿದ್ದಾರೆ. ಇತ್ತ ನೆಟ್ಟಿಗರು ಕೂಡ ಮಲಿಕ್ ಕಾರ್ಯಕ್ಕೆ ಮನ ಸೋತಿದ್ದಾರೆ.

  • 2 ತಿಂಗ್ಳಿನಿಂದ ತಾಯಿ, ಸಹೋದರಿ ಶವದ ಜೊತೆ ಯುವತಿ ವಾಸ

    2 ತಿಂಗ್ಳಿನಿಂದ ತಾಯಿ, ಸಹೋದರಿ ಶವದ ಜೊತೆ ಯುವತಿ ವಾಸ

    ಲಕ್ನೋ: ಯುವತಿಯೊಬ್ಬಳು 2 ತಿಂಗಳಿನಿಂದ ತನ್ನ ತಾಯಿ ಹಾಗೂ ಸಹೋದರಿಯ ಮೃತದೇಹಗಳ ಜೊತೆ ವಾಸಿಸುತ್ತಿದ್ದ ಪ್ರಕರಣವೊಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಬೆಳಕಿಗೆ ಬಂದಿದೆ.

    ದೀಪಾ ಮೃತದೇಹಗಳ ಜೊತೆ ವಾಸಿಸುತ್ತಿದ್ದ ಯುವತಿ. ದೀಪಾ ಆದರ್ಶ್ ನಗರದ ಕಾಲೋನಿಯೊಂದರಲ್ಲಿ ತನ್ನ ತಾಯಿ ಹಾಗೂ ಸಹೋದರಿಯ ಮೃತದೇಹದ ಜೊತೆ ವಾಸಿಸುತ್ತಿದ್ದಳು. ದೀಪಾ ಮನೆಯಿಂದ ದುರ್ವಾಸನೆ ಬರುತ್ತಿತ್ತು ಎಂದು ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಬಳಿಕ ಮನೆಯ ಬಾಗಿಲು ತೆರೆಯುತ್ತಿದ್ದಂತೆ ಅಲ್ಲಿ ದೀಪಾಳ ತಾಯಿ ಪುಷ್ಪ ಶ್ರೀವಾತ್ಸವ್ ಹಾಗೂ ಆಕೆಯ ಸಹೋದರಿ ವಿಭಾ ಮೃತದೇಹ ಪತ್ತೆಯಾಗಿದೆ.

    ಏನಿದು ಘಟನೆ?
    ದೀಪಾ ತಂದೆ ವಿಜೇಂದ್ರ ಶ್ರೀವಾತ್ಸವ್ ಅವರು 1990ರಲ್ಲಿ ಮೃತಪಟ್ಟಿದ್ದರು. ಆಗಿನಿಂದಲೂ ತಾಯಿ ಹಾಗೂ ಮೂವರು ಸಹೋದರಿಯರು ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಕೆಲವು ವರ್ಷಗಳ ಹಿಂದೆ ಮೂವರು ಸಹೋದರಿಯರಲ್ಲಿ ರೂಪಾಲಿ ಎಂಬವರು ಮೃತಪಟ್ಟಿದ್ದರು. ಇದಾದ ಬಳಿಕ ಪುಷ್ಪ ಹಾಗೂ ಆಕೆಯ ಇಬ್ಬರು ಪುತ್ರಿಯರಾದ ದೀಪಾ ಹಾಗೂ ವಿಭಾ ಮಾನಸಿಕವಾಗಿ ಅಸ್ವಸ್ಥರಾಗಿದ್ದರು. ಪುಷ್ಪ ಹಾಗೂ ಆಕೆಯ ಮಕ್ಕಳು ಅಕ್ಕಪಕ್ಕದ ಮನೆಯವರ ಜೊತೆ ಮಾತನಾಡುವುದನ್ನು ನಿಲ್ಲಿಸಿ ಬಿಟ್ಟಿದ್ದರು.

    ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿ, ಮೂಳೆಗಳು ಕಾಣಿಸುವ ಮಟ್ಟಿಗೆ ಮೃತದೇಹಗಳು ಕೊಳೆತು ಹೋಗಿತ್ತು. ಅಂದರೆ ಅವರಿಬ್ಬರು ಸುಮಾರು 2 ತಿಂಗಳ ಹಿಂದೆ ಮೃತಪಟ್ಟಿದ್ದರು. ತಾಯಿ-ಮಗಳ ಸಾವಿನ ಕಾರಣ ತಿಳಿಯಲು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದೇವೆ. ಅಲ್ಲದೆ ದೀಪಾಳನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು, ಆಕೆಯ ಸ್ಥಿತಿಯನ್ನು ನೋಡಿ ಹುಚ್ಚಾಸ್ಪತ್ರೆ ಅಥವಾ ಆಶ್ರಯ ಕೇಂದ್ರದಲ್ಲಿ ಕಳುಹಿಸುತ್ತೇವೆ ಎಂದು ತಿಳಿಸಿದ್ದಾರೆ.

  • ಅಯೋಧ್ಯೆಯಲ್ಲಿ ಸರ್ಪಗಾವಲು – ಇಂಟರ್‌ನೆಟ್ ಸ್ಥಗಿತ, 8 ತಾತ್ಕಾಲಿಕ ಜೈಲು ಸ್ಥಾಪನೆ

    ಅಯೋಧ್ಯೆಯಲ್ಲಿ ಸರ್ಪಗಾವಲು – ಇಂಟರ್‌ನೆಟ್ ಸ್ಥಗಿತ, 8 ತಾತ್ಕಾಲಿಕ ಜೈಲು ಸ್ಥಾಪನೆ

    – ಉತ್ತರಪ್ರದೇಶಲ್ಲಿ ಸೋಮವಾರದವರೆಗೆ ಶಾಲಾ ಕಾಲೇಜುಗಳಿಗೆ ರಜೆ
    – 4 ಸಾವಿರ ಯೋಧರ ಅರೆಸೇನಾ ಪಡೆ ನಿಯೋಜನೆ

    ಲಕ್ನೋ: ಇಂದು ಅಯೋಧ್ಯೆ ಪ್ರಕರಣದ ಸಂಬಂಧ ಸುಪ್ರೀಂಕೋರ್ಟಿನಲ್ಲಿ ವಿಚಾರಣೆ ಮುಗಿದು ತೀರ್ಪು ನಿಗದಿ ಆದ ಬಳಿಕ ಅಯೋಧ್ಯೆಯಲ್ಲಿ ಕಂಡುಕೇಳರಿಯದ ಕಟ್ಟೆಚ್ಚರ ವಹಿಸಲಾಗಿದೆ. ಉತ್ತರಪ್ರದೇಶದ್ಯಾಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, 4 ಸಾವಿರ ಅರೆಸೇನಾ ಪಡೆ ಯೋಧರನ್ನ ನಿಯೋಜಿಸಲಾಗಿದೆ.

    ತೀರ್ಪು ಹೊರಬರುವ ಮುನ್ನವೇ ಶುಕ್ರವಾರ ಅಚ್ಚರಿಯ ರೀತಿಯಲ್ಲಿ ಸಿಜೆಐ ರಂಜನ್ ಗೋಗೋಯ್, ನ್ಯಾ. ಎಸ್ ಎ ಬೋಬ್ಡೆ, ನ್ಯಾ. ಅಶೋಕ್ ಭೂಷಣ್ ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಇಲಾಖೆ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ್ದು, ಕೈಗೊಂಡಿರುವ ಮುಂಜಾಗ್ರತ ಕ್ರಮಗಳ ಬಗ್ಗೆ ಮಾಹಿತಿ ಪಡೆದರು.

    ಅಯೋಧ್ಯೆಯಲ್ಲಿ ಸರ್ಪಗಾವಲು:

    ಅಯೋಧ್ಯೆಯಲ್ಲಿ ಬಹುಹಂತಗಳ ರಕ್ಷಣಾ ವ್ಯವಸ್ಥೆ ಮಾಡಲಾಗಿದ್ದು, ಪರಿಸ್ಥಿತಿ ಅವಲೋಕಿಸಲು ಡ್ರೋಣ್‍ಗಳ ಬಳಕೆ ಕೂಡ ಮಾಡಲು ಪೊಲೀಸ್ ಇಲಾಖೆ ನಿರ್ಧರಿಸಿದೆ. ಭಯೋತ್ಪಾದಕ ನಿಗ್ರಹ, ಬಾಂಬ್ ನಿಷ್ಕ್ರೀಯ ದಳ, ಕ್ಷಿಪ್ರ ಕಾರ್ಯಪಡೆಯನ್ನು ನಗರದಲ್ಲಿ ನಿಯೋಜಿಸಲಾಗಿದೆ. ತುರ್ತು ಸ್ಥಿತಿಯಲ್ಲಿ ಬಳಿಸಲು 2 ಹೆಲಿಕಾಪ್ಟರ್ ಗಳ ವ್ಯವಸ್ಥೆ ಕೂಡ ಮಾಡಿಕೊಳ್ಳಲಾಗಿದೆ. ಅಯೋಧ್ಯೆಯಲ್ಲಿ ಹೆಜ್ಜೆ ಹೆಜ್ಜೆಗೂ ಸೇನಾಪಡೆಗಳ ಕಾರ್ಯನಿರ್ವಹಿಸುತ್ತಿದೆ.

    ಅಷ್ಟೇ ಅಲ್ಲದೆ ಮುನ್ನೆಚ್ಚರಿಕೆ ಕ್ರಮವಾಗಿ ನಗರದಲ್ಲಿ ಇಂಟರ್‌ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಹಾಗೆಯೇ ಪ್ರಚೋದನಕಾರಿ ಪೋಸ್ಟ್, ಸಂದೇಶ ಹರಬಾರದೆಂದು ಸಾಮಾಜಿಕ ಜಾಲತಾಣಗಳ ಮೇಲೂ ತೀವ್ರ ನಿಗಾವಹಿಸಲಾಗಿದೆ. ಹೊರ ರಾಜ್ಯಗಳಿಂದ ಬರುವವರ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ. ಗಲಭೆಗಳಾದರೆ ಬಂಧಿತರನ್ನು ಇಡಲು ಉತ್ತರಪ್ರದೇಶದ ಅಂಬೇಡ್ಕರ್ ನಗರದಲ್ಲಿ 8 ತಾತ್ಕಾಲಿಕ ಜೈಲುಗಳ ನಿರ್ಮಾಣವಾಗಿದೆ.

    ಸಂಭಾವ್ಯ ಪರಿಸ್ಥಿತಿ ಎದುರಿಸಲು ಉತ್ತರ ಪ್ರದೇಶದ 75 ಜಿಲ್ಲೆಗಳಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ನ. 30ರವರೆಗೆ ಅಧಿಕಾರಿಗಳ ರಜೆ ರದ್ದುಗೊಳಿಸಲಾಗಿದೆ. ಸೋಮವಾರದವರೆಗೆ ಉತ್ತರ ಪ್ರದೇಶದ ಶಾಲಾ-ಕಾಲೇಜಿಗೆ ರಜೆ ಘೋಷಣೆಯಾಗಿದ್ದು, ಧಾರ್ಮಿಕ ಸ್ಥಳದಲ್ಲಿರೋ ರೈಲ್ವೆ ನಿಲ್ದಾಣಗಳಲ್ಲಿ ಬಿಗಿಭದ್ರತೆ ಒದಗಿಸಲಾಗಿದೆ.

    ಕರ್ನಾಟಕದಲ್ಲೂ ಕಟ್ಟೆಚ್ಚರ:
    ಅಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ಕಟ್ಟೆಚ್ಚರ ವಹಿಸಲಾಗಿದ್ದು, ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇಂದು ನಡೆಯಬೇಕಿದ್ದ ಎಲ್ಲಾ ವಿವಿಗಳ ಪರೀಕ್ಷೆಗಳು ಮುಂದೂಡಲಾಗಿದೆ. ರಾಜ್ಯಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿದೆ. ಆದರೆ ಸರ್ಕಾರಿ ಬಸ್ ಮತ್ತು ಖಾಸಗಿ ಬಸ್‍ಗಳು, ಕ್ಯಾಬ್, ಟ್ಯಾಕ್ಸಿ, ಆಟೋಗಳ ಓಡಾಟದಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ.

  • ಅಯೋಧ್ಯೆ ತೀರ್ಪಿಗೂ ಮುನ್ನವೇ 500 ಮಂದಿ ಅರೆಸ್ಟ್

    ಅಯೋಧ್ಯೆ ತೀರ್ಪಿಗೂ ಮುನ್ನವೇ 500 ಮಂದಿ ಅರೆಸ್ಟ್

    – 12 ಸಾವಿರ ಮಂದಿ ಮೇಲೆ ಹದ್ದಿನ ಕಣ್ಣು
    – ಪ್ರಚೋದನಕಾರಿ ಪೋಸ್ಟ್ ಪ್ರಕಟಿಸಬೇಡಿ

    ಲಕ್ನೋ: ಇಡೀ ದೇಶವೇ ಎದುರು ನೋಡುತ್ತಿರುವ ಮಹತ್ವದ ಅಯೋಧ್ಯೆ ತೀರ್ಪು ಶೀಘ್ರವೇ ಹೊರಬೀಳಲಿದ್ದು, ರಾಜ್ಯದಲ್ಲಿ ಶಾಂತಿ ಕಾಪಾಡಲು ಮುನ್ನೆಚ್ಚರಿಕಾ ಕ್ರಮವಾಗಿ ತೀರ್ಪಿಗೂ ಮುನ್ನವೇ 500 ಮಂದಿಯನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಹಾಗೆಯೇ 12 ಸಾವಿರ ಮಂದಿ ಮೇಲೆ ಕಣ್ಣಿಟ್ಟಿದ್ದಾರೆ.

    ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ನವೆಂಬರ್ 17ರಂದು ನಿವೃತ್ತಿಹೊಂದಲಿದ್ದಾರೆ. ಅವರ ಅಧಿಕಾರಾವಧಿ ಮುಗಿಯುವ ಮುನ್ನ ಅಯೋಧ್ಯೆ ತೀರ್ಪು ಹೊರಬರಲಿದೆ. ಈ ಹಿನ್ನೆಲೆ ಯಾವುದೇ ಹಿಂಸಾಚಾರ ನಡೆಬಾರದೆಂದು ಉತ್ತರ ಪ್ರದೇಶ ಪೊಲೀಸರು ಸಾಕಷ್ಟು ಮುನ್ನೆಚ್ಚರಿಕಾ ಕ್ರಮವನ್ನು ತೆಗೆದುಕೊಂಡಿದ್ದಾರೆ. ಇದನ್ನೂ ಓದಿ:ಅಯೋಧ್ಯೆ ತೀರ್ಪಿಗಾಗಿ ದೇಶಾದ್ಯಂತ ಕಟ್ಟೆಚ್ಚರ

    ಈ ಸಂಬಂಧ ಉತ್ತರ ಪ್ರದೇಶ ಪೊಲೀಸ್ ಮಹಾನಿರ್ದೇಶಕ ಒಪಿ ಸಿಂಗ್ ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಅಯೋಧ್ಯೆ ತೀರ್ಪಿನ ಬಗ್ಗೆ ಕೋಮುಗಲಭೆ ಎಬ್ಬಿಸುವಂತಹ ಪ್ರಚೋದಕಾರಿ ಕಮೆಂಟ್‍ಗಳು, ಟ್ರೋಲ್‍ಗಳು ಹಾಗೂ ಪೋಸ್ಟ್‌ಗಳು ಹರಿದಾಡದಂತೆ ಕಟ್ಟೆಚ್ಚರ ವಹಿಸಲಾಗಿದೆ ಎಂದು ತಿಳಿಸಿದರು.

    ಈಗಾಗಲೇ ಸುಮಾರು 10 ಸಾವಿರ ಸಾಮಾಜಿಕ ವಿರೋಧಿ ಅಂಶಗಳನ್ನು ಪತ್ತೆಹಚ್ಚಿದ್ದೇವೆ. ಹಾಗೆಯೇ ಸಿಆರ್‌ಪಿಸಿ(ಕ್ರಿಮಿನಲ್ ಪ್ರೊಸಿಜರ್ ಕೋಡ್) ನಿಯಮದ ಅನುಸಾರ 450ರಿಂದ 500 ಮಂದಿಯನ್ನು ಬಂಧಿಸಿದ್ದೇವೆ. ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿ ಪ್ರಚೋದನಕಾರಿ ಪೋಸ್ಟ್‌ಗಳನ್ನು ಹರಿಬಿಡುವುದಿಲ್ಲ ಎಂದು 593 ಮಂದಿಯಿಂದ ಸಿಆರ್‍ಪಿಸಿ ಬಾಂಡ್ ಅಡಿಯಲ್ಲಿ ಪೊಲೀಸರು ಸಹಿ ಹಾಕಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿ ಪ್ರಚೋದನಕಾರಿ ಪೋಸ್ಟ್, ಕಮೆಂಟ್ ಮಾಡುವ ಸಾಧ್ಯತೆಯಿರುವ 1,659 ಮಂದಿ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ. ಈ ಹಿಂದೆ ಕೂಡ ಅಯೋಧ್ಯೆ ಪ್ರಕರಣದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಕಮೆಂಟ್, ಪೋಸ್ಟ್ ಮಾಡಿದ 70 ಮಂದಿಯನ್ನು ಬಂಧಿಸಲಾಗಿತ್ತು ಎಂದರು.

    ಅಯೋಧ್ಯೆ ಸೇರಿ ಹಲವು ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಿದ್ದೇವೆ. ಒಂದು ವೇಳೆ ಅಗತ್ಯವಿದ್ದರೆ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸುವ, ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸುವ ಅಧಿಕಾರವಿದೆ. ಆದರೆ ನಾವು ಪರಿಸ್ಥಿತಿಯನ್ನು ಈ ರೀತಿ ನಿಷೇಧಗಳನ್ನು ಒಡ್ಡಿ ನಿಯಂತ್ರಿಸುವ ಬದಲು ಜನರು ಗುಂಪು, ಗುಂಪಾಗಿ ನಿಂತು ಅಯೋಧ್ಯೆ ತೀರ್ಪಿನ ಬಗ್ಗೆ ಚರ್ಚೆ ನಡೆಸುವುದು ಹಾಗೂ ಎಲ್ಲೆಡೆ ಪ್ರಚೋದನಕಾರಿ ಹೇಳಿಕೆಗಳನ್ನು ಹರಡುವುದನ್ನು ನಿಲ್ಲಿಸುವುದರ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದು ಹೇಳಿದರು.

    ಈಗಾಗಲೇ ಅಯೋಧ್ಯೆ ನಗರದಲ್ಲಿ 40 ಪ್ಯಾರಾಮಿಲಿಟರಿ ತಂಡ ಕಾರ್ಯನಿರ್ವಹಿಸುತ್ತಿದೆ. ಇನ್ನೂ 70 ತಂಡದ ಅವಶ್ಯಕತೆಯಿದೆ, ಈ ಪ್ಯಾರಾಮಿಲಿಟರಿ ತಂಡಗಳು ಕೂಡ ಶೀಘ್ರದಲ್ಲೇ ನಗರಕ್ಕೆ ಬರಲಿದೆ.

    ಮುಂದಿನ ವಾರ ಅಯೋಧ್ಯೆಯಲ್ಲಿ ಸಾಲು ಸಾಲಾಗಿ ಹಬ್ಬಗಳು ನಡೆಯಲಿವೆ. ನ.10 ರಂದು ಈದ್-ಇ-ಮಿಲಾದ್ ಆಚರಿಸಲಾಗುತ್ತದೆ. ನ. 11ರಿಂದ 13ರವರೆಗೆ ಕಾರ್ತಿಕ ಪೂರ್ಣಿಮೆ ಮೇಳ ನಡೆಯುತ್ತದೆ. ಈ ಆಚರಣೆಗಳು ಶಾಂತಿಯುತವಾಗಿ ನೆರವೇರಬೇಕು. ಆದ್ದರಿಂದ ಸಾರ್ವಜನಿಕರು ಸಹಕರಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.