Tag: lucknow

  • ಮದ್ವೆಯಾದ ಮರುದಿನವೇ ಕಿಡ್ನಾಪ್ ಆಗಿ ಗ್ಯಾಂಗ್ ರೇಪ್‍ಗೆ ಒಳಗಾದ ನವವಿವಾಹಿತೆ

    ಮದ್ವೆಯಾದ ಮರುದಿನವೇ ಕಿಡ್ನಾಪ್ ಆಗಿ ಗ್ಯಾಂಗ್ ರೇಪ್‍ಗೆ ಒಳಗಾದ ನವವಿವಾಹಿತೆ

    ಲಕ್ನೋ: ಮದುವೆಯಾದ ಮರುದಿನವೇ ನವವಿವಾಹಿತೆ ಕಿಡ್ನಾಪ್ ಆಗಿ ಗ್ಯಾಂಗ್ ರೇಪ್‍ಗೆ ಒಳಗಾದ ಘಟನೆ ಉತ್ತರ ಪ್ರದೇಶದ ಹಾಪುರ ಜಿಲ್ಲೆಯಲ್ಲಿ ನಡೆದಿದೆ.

    ಜನವರಿ 17ರಂದು ಸಂತ್ರಸ್ತೆಯ ಮದುವೆಯಾಗಿದ್ದು, ಮರುದಿನವೇ ಇಬ್ಬರು ಪುರುಷರು ಆಕೆಯನ್ನು ಆಕೆಯ ಪತಿಯ ಮನೆಯಿಂದ ಕಿಡ್ನಾಪ್ ಮಾಡಿ ಗ್ಯಾಂಗ್ ರೇಪ್ ಮಾಡಿದ್ದಾರೆ. ಭಾನುವಾರ ಹಾಪುರದ ಬ್ಯಾಂಕ್ ಬಳಿ ಮಹಿಳೆ ಪತ್ತೆಯಾಗಿದ್ದಳು.

    ಮಹಿಳೆ ನಾಪತ್ತೆಯಾಗುತ್ತಿದ್ದಂತೆ ಆಕೆಯ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಮಹಿಳೆಯನ್ನು ಹಾಪುರದ ಬ್ಯಾಂಕ್ ಬಳಿ ಪತ್ತೆ ಮಾಡಿದ್ದಾರೆ. ಈ ಘಟನೆಯಿಂದ ಮಹಿಳೆ ಆಘಾತಕ್ಕೆ ಒಳಗಾಗಿದ್ದು, ಇವರೆಗೂ ಯಾವುದೇ ಹೇಳಿಕೆಗಳನ್ನು ನೀಡಿಲ್ಲ. ಸದ್ಯ ಮಹಿಳೆಯನ್ನು ವೈದ್ಯಕೀಯ ಪರೀಕ್ಷಗೆ ಕಳುಹಿಸಲಾಗಿದ್ದು, ಪೊಲೀಸರು ವೈದ್ಯಕೀಯ ವರದಿಗಾಗಿ ಕಾಯುತ್ತಿದ್ದಾರೆ.

    ಈ ಬಗ್ಗೆ ಡಿಎಸ್‍ಪಿ ರಾಜೇಶ್ ಸಿಂಗ್ ಪ್ರತಿಕ್ರಿಯಿಸಿ, ಜನವರಿ 17ರಂದು ಸಂತ್ರಸ್ತೆಯ ಮದುವೆಯಾಗಿದ್ದು, ಜ. 28ರಂದು ಬೆಳಗ್ಗೆಯಿಂದ ಕಾಣೆಯಾಗಿದ್ದಳು. ಮಹಿಳೆ ಕಾಣೆಯಾಗಿರುವುದನ್ನು ನೋಡಿ ಆಕೆಯ ಪತಿಯ ಮನೆಯವರು ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದರು. ಭಾನುವಾರ ಬೆಳಗ್ಗೆ ನಾವು ಮಹಿಳೆಯನ್ನು ಪತ್ತೆ ಮಾಡಿದ್ದೇವೆ. ಈ ಘಟನೆಯಿಂದ ಮಹಿಳೆ ಆಘಾತಕ್ಕೆ ಒಳಗಾಗಿದ್ದು, ಯಾವುದೇ ಹೇಳಿಕೆ ನೀಡುವ ಸ್ಥಿತಿಯಲ್ಲಿ ಇಲ್ಲ. ಕುಟುಂಬಸ್ಥರ ದೂರಿನ ಮೇರೆಗೆ ನಾವು ಮುಂದಿನ ಕ್ರಮಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

  • ನೀನ್ ನನ್ಗೆ ಬೇಕು ಮದ್ವೆ ಆಗೋಣ ಎಂದ – ನಿರಾಕರಿಸಿದ್ದಕ್ಕೆ ಯುವತಿ ಎದೆಗೆ ಚಾಕು ಇರಿದು, ಕತ್ತು ಸೀಳಿದ

    ನೀನ್ ನನ್ಗೆ ಬೇಕು ಮದ್ವೆ ಆಗೋಣ ಎಂದ – ನಿರಾಕರಿಸಿದ್ದಕ್ಕೆ ಯುವತಿ ಎದೆಗೆ ಚಾಕು ಇರಿದು, ಕತ್ತು ಸೀಳಿದ

    – ಅಕ್ಕನ ಮೈದುನನಿಂದ್ಲೆ ಕೃತ್ಯ
    – ಸಾವು, ಬದುಕಿನ ನಡುವೆ ಹೋರಾಡುತ್ತಿರುವ ಯುವತಿ

    ಲಕ್ನೋ: ಮದುವೆ ಆಗಲು ನಿರಾಕರಿಸಿದ್ದಕ್ಕೆ ಯುವತಿಗೆ ಪಾಗಲ್ ಪ್ರೇಮಿಯೋರ್ವ ನಡುರಸ್ತೆಯಲ್ಲೇ ಎದೆಗೆ ಚಾಕು ಇರಿದು, ಕತ್ತು ಸೀಳಿ ಕೊಲೆಗೆ ಯತ್ನಿಸಿದ ಭಯಾನಕ ಘಟನೆ ಉತ್ತರ ಪ್ರದೇಶ ಘಾಜಿಯಾಬಾದ್‍ನಲ್ಲಿ ನಡೆದಿದೆ.

    21 ವರ್ಷದ ಯುವತಿ ಅಕ್ಕನ ಮೈದುನ ಈ ಕೃತ್ಯವೆಸೆಗಿದ್ದಾನೆ. ಶುಕ್ರವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆರೋಪಿಯನ್ನು ಬಾಘಪಟ್ ನಿವಾಸಿ ಸಚಿನ್ ಎಂದು ಗುರುತಿಸಲಾಗಿದೆ. ಈತ ಯುವತಿಯನ್ನು ತುಂಬಾ ಪ್ರೀತಿಸುತ್ತಿದ್ದನು. ಆದರೆ ಯುವತಿ ಸಚಿನ್ ಪ್ರೀತಿಯನ್ನು ಒಪ್ಪಿರಲಿಲ್ಲ. ಆದ್ದರಿಂದ ಸಚಿನ್ ಯಾವಾಗಲೂ ಯುವತಿಗೆ ಪ್ರೀತಿಸುವಂತೆ ಪೀಡಿಸುತ್ತಿದ್ದನು. ಹಲವು ಬಾರಿ ನಾವಿಬ್ಬರು ಮದುವೆ ಆಗೋಣ ಎಂದು ಕಾಡಿದ್ದನು.

    ಶುಕ್ರವಾರ ಬೆಳಗ್ಗೆ ಕೂಡ ಸಚಿನ್ ಯುವತಿಯನ್ನು ನಡುರಸ್ತೆಯಲ್ಲಿ ಅಡ್ಡಗಟ್ಟಿ ಮದುವೆಗೆ ಒಪ್ಪಿಕೊಳ್ಳಲು ಪೀಡಿಸಿದ್ದನು. ಆದರೆ ಯುವತಿ ಸಚಿನ್ ಮಾತಿಗೆ ಒಪ್ಪಲಿಲ್ಲ. ಇದರಿಂದ ಸಿಟ್ಟಿಗೆದ್ದ ಆರೋಪಿ ಏಕಾಏಕಿ ಯುವತಿಗೆ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ.

    ಯುವತಿಯ ಎದೆಗೆ ಚಾಕು ಇರಿದು, ಆಕೆಯ ಕತ್ತನ್ನು ಸೀಳಿ ಕೊಲೆ ಮಾಡಲು ಮುಂದಾಗಿದ್ದಾನೆ. ಈ ವೇಳೆ ದಾರಿಹೋಕರೊಬ್ಬರು ಕೃತ್ಯವನ್ನು ಕಂಡು ತಕ್ಷಣ ಯುವತಿಯ ಸಹಾಯಕ್ಕೆ ಬಂದಿದ್ದು, ಆರೋಪಿಯಿಂದ ಯುವತಿಯನ್ನು ರಕ್ಷಿಸಿ ಆಸ್ಪತ್ರೆಗೆ ರವಾನಿಸಿದ್ದಾರೆ. ಅಲ್ಲದೆ ಯುವಕನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

    ಸದ್ಯ ಯುವತಿ ಸ್ಥಿತಿ ಗಂಭಿರವಾಗಿದ್ದು, ಕಳೆದ ಎರಡು ದಿನಗಳಿಂದ ಯುವತಿ ಸಾವು, ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ. ಇತ್ತ ಪೊಲೀಸರು ಆರೋಪಿಯನ್ನು ಬಂಧಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಿದ್ದು, ತನಿಖೆ ಕೈಗೊಂಡಿದ್ದಾರೆ.

  • ತಾಯಿಯನ್ನು ಗ್ಯಾಂಗ್ ರೇಪ್‍ಗೈದು ಮಗಳನ್ನೂ ಕರ್ಕೊಂಡು ಬಾ ಎಂದ್ರು ಕಾಮುಕರು

    ತಾಯಿಯನ್ನು ಗ್ಯಾಂಗ್ ರೇಪ್‍ಗೈದು ಮಗಳನ್ನೂ ಕರ್ಕೊಂಡು ಬಾ ಎಂದ್ರು ಕಾಮುಕರು

    – ಎರಡು ತಿಂಗಳಿಂದ ಅತ್ಯಾಚಾರಗೈದ ದುರುಳರು
    – ಅತ್ಯಾಚಾರದ ವಿಡಿಯೋ ಮಾಡಿ ಬೆದರಿಕೆ

    ಲಕ್ನೋ: ಜಮೀನಿಗೆ ಕೆಲಸಕ್ಕೆ ಹೋಗುತ್ತಿದ್ದ ಮಹಿಳೆಯನ್ನು ಸತತ 2 ತಿಂಗಳು ಸಾಮೂಹಿಕ ಅತ್ಯಾಚಾರಗೈದ ದುರುಳರಿಬ್ಬರು ಆಕೆಯ ಮಗಳ ಮೇಲೂ ಕಾಮುಕ ದೃಷ್ಟಿ ಬೀರಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಅಲಿಗಢದಲ್ಲಿ ಬೆಳಕಿಗೆ ಬಂದಿದೆ.

    ಅಲಿಗಢದ ಮಹಿಳೆಯೊಬ್ಬರು ಜಮೀನಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ತನ್ನ ಜೀವನ ನಡೆಸುತ್ತಿದ್ದರು. ಮಹಿಳೆಯ ಪತಿ ಆಕೆಯನ್ನು ಬಿಟ್ಟು ಹೋಗಿದ್ದು, ಮಗಳನ್ನು ಆಕೆಯೇ ಕಷ್ಟಪಟ್ಟು ಸಾಕುತ್ತಿದ್ದರು. ಇದನ್ನೇ ದುರುಪಯೋಗಪಡಿಸಿಕೊಂಡ ಕಾಮುಕರಿಬ್ಬರು ಮಹಿಳೆ ಜಮೀನಿಗೆ ಕೆಲಸಕ್ಕೆ ಹೋಗುತ್ತಿದ್ದ ವೇಳೆ ಆಕೆಯನ್ನು ಸಾಮೂಹಿಕ ಅತ್ಯಾಚಾರಗೈದಿದ್ದಾರೆ. ಅಲ್ಲದೆ ಈ ಕೃತ್ಯವನ್ನು ವಿಡಿಯೋ ಮಾಡಿಟ್ಟುಕೊಂಡು ಮಹಿಳೆಯನ್ನು ಹೆದರಿಸಿ ಸತತ ಎರಡು ತಿಂಗಳಿಂದ ಅತ್ಯಾಚಾರಗೈದಿದ್ದಾರೆ. ಕಾಮುಕರ ಅಟ್ಟಹಾಸದ ಬಗ್ಗೆ ಮಹಿಳೆ ದೂರು ಕೊಡಲು ಹೋದಾಗ ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಹಾಗೆಯೇ ಆಕೆಯ ಮಗಳನ್ನು ಕೂಡ ಕೆಲಸಕ್ಕೆ ಕರೆತರುವಂತೆ ಪೀಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ನಾನು ಇಷ್ಟು ದಿನ ನನ್ನ ಮೇಲಾಗುತ್ತಿದ್ದ ದೌರ್ಜನ್ಯವನ್ನು, ಹಿಂಸೆಯನ್ನು ತಡೆದುಕೊಂಡಿದ್ದೆ. ಆದರೆ ಕಾಮುಕರು ನನ್ನ ಮಗಳ ಮೇಲೂ ಕಣ್ಣು ಹಾಕಿದರು. ಅವರ ದುಷ್ಟತನಕ್ಕೆ ಬೇಸತ್ತು ನಾನು ಪೊಲೀಸರ ಮೊರೆಹೋದೆ ಎಂದು ಮಹಿಳೆ ತನ್ನ ಅಳಲನ್ನು ತೋಡಿಕೊಂಡಿದ್ದಾರೆ.

    ನಾನು ಈ ಹಿಂದೆ ಕೂಡ ಈ ದುಷ್ಟರ ವಿರುದ್ಧ ದೂರು ಕೊಡಲು ಪೊಲೀಸ್ ಠಾಣೆಗೆ ಹೋಗಿದ್ದೆ. ಆದರೆ ಆಗ ಪೊಲೀಸರು ನನ್ನ ದೂರನ್ನು ಸ್ವೀಕರಿಸಲಿಲ್ಲ. ಕಾಮುಕರ ಅಟ್ಟಹಾಸಕ್ಕೆ ಕಡಿವಾಣ ಹಾಕುವ ಬದಲು ನನ್ನನ್ನು ನಿಂದಿಸಿ ಕಳುಹಿಸಿದ್ದರು. ನನ್ನ ಮೇಲೆ ಇಬ್ಬರು ಆರೋಪಿಗಳು ಎರಡು ತಿಂಗಳುಗಳಿಂದ ಅತ್ಯಾಚಾರ ಮಾಡಿದ್ದಾರೆ. ಅವರ ವಿರುದ್ಧ ದೂರು ನೀಡಲು ಹೋದಾಗಲೆಲ್ಲಾ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಮಹಿಳೆ ಉಲ್ಲೇಖಿಸಿದ್ದಾರೆ.

    ಮಹಿಳೆಯ ದೂರನ್ನು ಸ್ವೀಕರಿಸಿದ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಕೊಂಡಿದ್ದಾರೆ. ಸದ್ಯ ಈ ಬಗ್ಗೆ ತನಿಖೆ ಆರಂಭಿಸಿರುವ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

  • ಮದ್ವೆಯಾಗಿ 17 ದಿನಕ್ಕೆ ಮಗುವಿಗೆ ಜನ್ಮ- 11 ಜನರ ಮೇಲೆ ಆರೋಪ

    ಮದ್ವೆಯಾಗಿ 17 ದಿನಕ್ಕೆ ಮಗುವಿಗೆ ಜನ್ಮ- 11 ಜನರ ಮೇಲೆ ಆರೋಪ

    – ತಂದೆ, ಪತಿ, ಸಂಬಂಧಿ ಸೇರಿ ಗ್ರಾಮದ 11 ಮಂದಿಯಿಂದ ಕಿರುಕುಳ

    ಲಕ್ನೋ: ಮದುವೆಯಾದ 17 ದಿನದಲ್ಲಿಯೇ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡಿರುವ ಘಟನೆ ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ನಡೆದಿದೆ.

    ಮಹಿಳೆ ಇದಕ್ಕೆ ತಂದೆ ಮತ್ತು ಸಹೋದರ ಸೇರಿದಂತೆ 11 ಜನರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಬಂಥಾರಾ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕುರಿತು ಸೂಕ್ತ ತನಿಖೆ ಆಗಬೇಕೆಂದು ಎಸ್‍ಪಿ ಮತ್ತು ಐಜಿಗೆ ಪತ್ರ ಬರೆದಿದ್ದರು. ಸದ್ಯಕ್ಕೆ ಎಸ್‍ಪಿ ಸೂಚನೆ ಮೇರೆಗೆ ಈ ಘಟನೆ ಕುರಿತು ಮಹಿಳಾ ಪೊಲೀಸರು ತನಿಖೆ ಆರಂಭಿಸಿದ್ದಾರೆ.

    ಏನಿದು ಪ್ರಕರಣ?
    ಮಹಿಳೆ ಉನ್ನಾವ್ ಸದರ್ ಕೊಟ್ವಾಲಿ ಗ್ರಾಮದ ಯುವಕನ ಜೊತೆ ಏಪ್ರಿಲ್ 19 2019ರ ರಂದು ಮದುವೆಯಾಗಿದ್ದರು. ವಿವಾಹವಾದ 17 ದಿನಗಳ ನಂತರ ಮೇ 6 ರಂದು ಮಹಿಳೆ ಮಗುವಿಗೆ ಜನ್ಮ ನೀಡಿದ್ದಾರೆ. ಆಗ ಪತಿಯ ಮನೆಯವರು ಮಗುವಿನ ಜನನದ ಬಗ್ಗೆ ಮಹಿಳೆಯನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಮಹಿಳೆ, ತಂದೆ, ಪತಿ ಮತ್ತು ಸೋದರಸಂಬಂಧಿ ಸೇರಿದಂತೆ ಗ್ರಾಮದ 11 ಮಾಜಿ ಮುಖ್ಯಸ್ಥರು 13ನೇ ವಯಸ್ಸಿನಿಂದ ನನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

    ಸಂತ್ರಸ್ತೆಗೆ ಈ ಕುರಿತು ಡಿಸೆಂಬರ್ 28 ರಂದು ಎಸ್‍ಪಿಯನ್ನು ಭೇಟಿಯಾಗಿ ತನಿಖೆ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಎಸ್‍ಪಿ ಮಹಿಳಾ ಪೊಲೀಸ್ ಠಾಣೆ ಉಸ್ತುವಾರಿ ಸುನೀತಾ ಚೌರಾಸಿಯಾ ಅವರಿಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದರು.

    ಎಸ್‍ಪಿ ಅವರ ಸೂಚನೆಯ ಮೇರೆಗೆ ಮರುದಿನ ಡಿಸೆಂಬರ್ 29 ರಂದು ಮಹಿಳಾ ಪೊಲೀಸ್ ಠಾಣೆಗೆ ಮಹಿಳೆ ವರದಿಯನ್ನು ಸಲ್ಲಿಸಿದ್ದಾರೆ. ಸದ್ಯಕ್ಕೆ ಈ ಕುರಿತು ಮಹಿಳಾ ಪೊಲೀಸ್ ಠಾಣೆ ತನಿಖೆಯನ್ನು ಆರಂಭಿಸಿದೆ.

  • ಮೈದುನನ ಜೊತೆ ಅತ್ತಿಗೆ ಸೆಕ್ಸ್- ನಿಲ್ಲಿಸಿದ್ದಕ್ಕೆ ಚಾಕುವಿನಿಂದ ಹಲ್ಲೆ

    ಮೈದುನನ ಜೊತೆ ಅತ್ತಿಗೆ ಸೆಕ್ಸ್- ನಿಲ್ಲಿಸಿದ್ದಕ್ಕೆ ಚಾಕುವಿನಿಂದ ಹಲ್ಲೆ

    – ಪತಿ ಮಲಗಿದ ನಂತ್ರ ಪತ್ನಿಯ ನೀಚ ಕೃತ್ಯ

    ಲಕ್ನೋ: ಮಹಿಳೆಯೊಬ್ಬಳು ಪತಿಯ ಸಹೋದರ ಸೆಕ್ಸ್ ಮಾಡುವುದನ್ನು ನಿಲ್ಲಿಸಿದ್ದಕ್ಕೆ ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ರಾಯ್‍ಬರೇಲಿ ಜಿಲ್ಲೆಯಲ್ಲಿ ನಡೆದಿದೆ.

    ಮಹಿಳೆಯೊಬ್ಬಳು ತನ್ನ ಪತಿ ಮತ್ತು ಮೈದುನ ಜೊತೆ ವಾಸಿಸುತ್ತಿದ್ದಳು. ಆದರೆ ಪತಿ ಕೆಲಸಕ್ಕೆ ಮನೆಯಿಂದ ಹೊರಗೆ ಹೋದಾಗ ಪತ್ನಿ ಮನೆಯಲ್ಲಿದ್ದ ಮೈದುನನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಇವರಿಬ್ಬರ ಸಂಬಂಧ ಪತಿಗೆ ಗೊತ್ತಿರಲಿಲ್ಲ. ಹೀಗಾಗಿ ಪತಿ ಮಲಗಿ ನಿದ್ದೆ ಮಾಡಿದ ನಂತರ ಪ್ರತಿ ರಾತ್ರಿಯೂ ಮಹಿಳೆ ತನ್ನ ಮೈದುನ ಜೊತೆ ಸೆಕ್ಸ್ ಮಾಡುತ್ತಿದ್ದಳು.

    ಇತ್ತೀಚೆಗೆ ಒಂದು ರಾತ್ರಿ ಮಹಿಳೆ ತನ್ನ ಮೈದುನನ ಜೊತೆ ರೊಮ್ಯಾನ್ಸ್ ಮಾಡುತ್ತಿದ್ದಳು. ಆದರೆ ಮೈದುನ ಸೆಕ್ಸ್ ಮಾಡುವುದನ್ನು ನಿಲ್ಲಿಸಿದ್ದಾನೆ. ಆಗ ಮಹಿಳೆ, ಮೈದುನನ ಬಳಿ ಲೈಂಗಿಕ ಸಂಬಂಧ ಹೊಂದುವಂತೆ ಒತ್ತಾಯಿಸಿದ್ದಾಳೆ. ಇದಕ್ಕೆ ಮೈದುನ ನಿರಾಕರಿಸಿದ್ದಾನೆ. ಇದರಿಂದ ಕೋಪಗೊಂಡ ಮಹಿಳೆ ಅಡುಗೆ ಮನೆಯಲ್ಲಿದ್ದ ಚಾಕುವನ್ನು ತಂದು ಮೈದುನ ಮೇಲೆ ಹಲ್ಲೆ ಮಾಡಿದ್ದಾಳೆ.

    ತಕ್ಷಣ ಸಹೋದರರನ್ನು ಮಹಿಳೆಯ ಪತಿ ಆಸ್ಪತ್ರೆಗೆ ದಾಖಲಿಸಿದ್ದಾನೆ. ಸದ್ಯಕ್ಕೆ ಪೊಲೀಸರು ಈ ಕುರಿತು ದೂರು ದಾಖಲಿಸಿಕೊಂಡು ಮಹಿಳೆಯನ್ನು ವಶಕ್ಕೆ ಪಡೆದುಕೊಂಡಿದ್ದಾನೆ. ಘಟನೆಯಲ್ಲಿ ಗಾಯಗೊಂಡಿರುವ ಮೈದುನನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ.

  • ಭಾರತ ಪೌರತ್ವಕ್ಕೆ ಅರ್ಜಿ ಸಲ್ಲಿಸಿ – ದಾನಿಶ್ ಕನೇರಿಯಾಗೆ ಯುಪಿ ಸಚಿವ ಸಲಹೆ

    ಭಾರತ ಪೌರತ್ವಕ್ಕೆ ಅರ್ಜಿ ಸಲ್ಲಿಸಿ – ದಾನಿಶ್ ಕನೇರಿಯಾಗೆ ಯುಪಿ ಸಚಿವ ಸಲಹೆ

    ಲಕ್ನೋ: ಪಾಕಿಸ್ತಾನದ ಕ್ರಿಕೆಟ್ ತಂಡದಲ್ಲಿ ಹಿಂದೂ ಎಂಬ ಕಾರಣಕ್ಕೆ ಸಾಕಷ್ಟು ಅವಮಾನಗಳನ್ನು ಎದುರಿಸಿದ್ದ ಮಾಜಿ ಆಟಗಾರ ದಾನಿಶ್ ಕನೇರಿಯಾ ಅವರಿಗೆ ಭಾರತದ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸುವಂತೆ ಉತ್ತರ ಪ್ರದೇಶ ಅಲ್ಪಸಂಖ್ಯಾತ ಕಲ್ಯಾಣ, ವಕ್ಫ್ ಮತ್ತು ಹಜ್ ಸಚಿವ ಮೊಹ್ಸಿನ್ ರಾಜಾ ಸಲಹೆ ನೀಡಿದ್ದಾರೆ.

    ಪಾಕಿಸ್ತಾನ ಸೇರಿದಂತೆ ಇತರೆ ದೇಶಗಳಲ್ಲಿ ಕಿರುಕುಳಕ್ಕೆ ಒಳಗಾಗುತ್ತಿರುವ ಮಂದಿ ಭಾರತದ ಪೌರತ್ವಕ್ಕೆ ಅರ್ಜಿಸಲ್ಲಿಸುವಂತೆ ಪ್ರತಿಕಾಗೋಷ್ಠಿಯಲ್ಲಿ ಮೊಹ್ಸಿನ್ ರಾಜಾ ತಿಳಿಸಿದರು. ಈ ವೇಳೆ ಪತ್ರಕರ್ತರಿಂದ ಕೇಳಿ ಬಂದ ದಾನಿಶ್ ಕನೇರಿಯಾ ಅವರ ವಿರುದ್ಧ ಟೀಕೆಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಕನೇರಿಯಾ ಸೇರಿದಂತೆ ಧಾರ್ಮಿಕ ಅಸಮಾನತೆ, ಕಿರುಕುಳಕ್ಕೆ ಒಳಗಾಗಿರುವ ಜನರು ಭಾರತದ ಪೌರತ್ವಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಉತ್ತರಿಸಿದರು.

    ದಾನಿಶ್ ಕನೇರಿಯಾ ಅವರನ್ನು ಡ್ಯಾನಿಶ್, ಯೂಸುಫ್ ಯೋಹಾನಾರನ್ನು ಮೊಹಮ್ಮದ್ ಯೂಸುಫ್ ಆಗಿ ಬದಲಾಯಿಸಲಾಯಿತು. ಈ ರೀತಿ ಪಾಕಿಸ್ತಾನದಲ್ಲಿ ಎಷ್ಟು ಸಾಮಾನ್ಯ ನಾಗರಿಕರು ತಾರತಮ್ಯ ಎದುರಿಸಿರಬಹುದು. ಅಲ್ಲಿ ಎಷ್ಟು ಕಿರುಕುಳ ನೀಡಲಾಗುತ್ತಿದೆ ಎಂಬುವುದು ಸುಲಭವಾಗಿ ಆರ್ಥೈಸಿಕೊಳ್ಳಬಹುದು ಎಂದು ಮೊಹ್ಸಿನ್ ರಾಜಾ ಟ್ವೀಟ್ ಮಾಡಿದ್ದಾರೆ.

    ಇತ್ತ ದಾನಿಶ್ ಕನೇರಿಯಾ ತಮ್ಮ ಹೇಳಿಕೆ ವಿರುದ್ಧ ಕೇಳಿ ಬಂದ ಟೀಕೆಗಳಿಗೆ ತಿರುಗೇಟು ಕೊಟ್ಟಿದ್ದು, ನಾನು ನಿಮ್ಮಂತೆ ಹಣಕ್ಕಾಗಿ ದೇಶವನ್ನು ಮಾರಾಟ ಮಾಡಿಲ್ಲ. ತಾರತಮ್ಯ ಎದುರಾದರೂ ನಾನು ಕ್ರಿಕೆಟ್‍ಗಾಗಿ ರಕ್ತವನ್ನು ಹರಿಸಿದ್ದೇನೆ ಎಂದು ಹೇಳಿದ್ದಾರೆ. ಕೆಲದಿನಗಳ ಹಿಂದೆಯಷ್ಟೇ ಪಾಕಿಸ್ತಾನದ ಮಾಜಿ ಆಟಗಾರ ಶೋಯೆಬ್ ಅಖ್ತರ್, ಪಾಕ್ ಕ್ರಿಕೆಟ್ ತಂಡದಲ್ಲಿದ್ದ ವೇಳೆ ದಾನಿಶ್ ಕನೇರಿಯಾ ಎಷ್ಟು ತಾರತಮ್ಯಕ್ಕೆ ಒಳಗಾಗಿದ್ದರು ಎಂದು ವಿವರಿಸಿದ್ದರು. ಅಖ್ತರ್ ಅವರ ಈ ಹೇಳಿಕೆಗಳು ಸತ್ಯ, ಶೀಘ್ರವೇ ತಮ್ಮನ್ನು ತಾರತಮ್ಯದಿಂದ ನಡೆಸಿಕೊಂಡ ಪ್ರಮುಖ ಆಟಗಾರರ ಹೆಸರುಗಳನ್ನು ರಿವೀಲ್ ಮಾಡುವುದಾಗಿಯೂ ದಾನಿಶ್ ಕನೇರಿಯಾ ತಿಳಿಸಿದ್ದರು. ಆದರೆ ದಾನಿಶ್‍ರ ಈ ಹೇಳಿಕೆಗೆ ಸಾಕಷ್ಟು ಮಂದಿ ಟೀಕೆ ಮಾಡಿದ್ದರು.

  • ಏಕಾಏಕಿ ವೇದಿಕೆ ಕಡೆಗೆ ಓಡಿ ಬಂದ ವ್ಯಕ್ತಿ: ಅರೆಕ್ಷಣ ಹೌಹಾರಿದ ಪ್ರಿಯಾಂಕ ಗಾಂಧಿ

    ಏಕಾಏಕಿ ವೇದಿಕೆ ಕಡೆಗೆ ಓಡಿ ಬಂದ ವ್ಯಕ್ತಿ: ಅರೆಕ್ಷಣ ಹೌಹಾರಿದ ಪ್ರಿಯಾಂಕ ಗಾಂಧಿ

    ಲಕ್ನೋ:  ಸಾರ್ವಜನಿಕ ವೇದಿಕೆ ಕಾರ್ಯಕ್ರಮದಲ್ಲಿ ವ್ಯಕ್ತಿಯೊಬ್ಬ ಏಕಾಏಕಿ ಕಾಂಗ್ರೆಸ್ ಮುಖಂಡೆ ಪ್ರಿಯಾಂಕ ಗಾಂಧಿ ಅವರ ಬಳಿ ಓಡಿ ಬಂದ ಘಟನೆ ಉತ್ತರ ಪ್ರದೇಶದ ಲಕ್ನೋನಲ್ಲಿ ಇಂದು ನಡೆದಿದ್ದು, ವ್ಯಕ್ತಿ ಓಡಿ ಬಂದಿದ್ದರಿಂದ ಪ್ರಿಯಾಂಕ ಗಾಂಧಿ ಅರೆಕ್ಷಣ ಹೌಹಾರಿದರು.

    ಪ್ರಿಯಾಂಕ ಗಾಂಧಿ ಅವರು ಕಾಂಗ್ರೆಸ್ ಹಿರಿಯ ಮುಖಂಡ ಸಲ್ಮಾನ್ ಖುರ್ಷಿದ್ ಹಾಗೂ ಪಕ್ಷದ ಇತರ ನಾಯಕರೊಂದಿಗೆ ವೇದಿಕೆ ಮೇಲೆ ಕುಳಿತಿದ್ದರು. ಈ ಸಂದರ್ಭದಲ್ಲಿ ಬಿಗಿ ಭದ್ರತೆಯ ನಡುವೆಯೂ ನಿಯಮ ಉಲ್ಲಂಘಿಸಿ ನೀಲಿ ಪೇಟ ಧರಿಸಿದ್ದ ಸುಮಾರು 47 ವರ್ಷದ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ಪ್ರಿಯಾಂಕ ಗಾಂಧಿ ಅವರ ಕಡೆಗೆ ಓಡಿ ಬಂದಿದ್ದಾನೆ. ಇದರಿಂದಾಗಿ ವೇದಿಕೆ ಮೇಲಿದ್ದ ಮುಖಂಡರು ಗಾಬರಿಗೊಂಡರು. ತಕ್ಷಣವೇ ಭದ್ರತಾ ಸಿಬ್ಬಂದಿ ವ್ಯಕ್ತಿಯನ್ನು ಹಿಡಿದು, ವೇದಿಕೆಯಿಂದ ಎಳೆದೊಯ್ಯಲು ಪ್ರಯತ್ನಿಸಿದರು.

    ಪ್ರಿಯಾಂಕ ಗಾಂಧಿ ಭದ್ರತಾ ಸಿಬ್ಬಂದಿಯನ್ನು ತಡೆದು ತಾಳ್ಮೆಯಿಂದ ತಮ್ಮನ್ನು ಭೇಟಿಯಾಗಲು ಬಂದ ವ್ಯಕ್ತಿಯನ್ನು ಮಾತನಾಡಿಸಿದರು. ಬಳಿಕ ಆತನ ಕೈ ಕುಲುಕಿ, ಕಳುಹಿಸಿಕೊಟ್ಟರು. ಪ್ರಿಯಾಂಕ ಗಾಂಧಿ ಅವರೊಂದಿಗೆ ಮಾತನಾಡಿದ ವ್ಯಕ್ತಿ ವೇದಿಕೆಯಿಂದ ಕೆಳಗೆ ಇಳಿದು ಬರುವಾಗ ವೇದಿಕೆ ಮೇಲಿದ್ದ ಕೆಲ ನಾಯಕರಿಗೆ ಅಭಿನಂದನೆ ಸಲ್ಲಿಸಿದ. ಬಳಿಕ ಕಾಂಗ್ರೆಸ್ ಹಾಗೂ ಪ್ರಿಯಾಂಕ ಗಾಂಧಿ ಪರ ಘೋಷಣೆ ಕೂಗುತ್ತಲೇ ವೇದಿಕೆಯಿಂದ ಕೆಳಗೆ ಇಳಿದ.

    ಕಾಂಗ್ರೆಸ್ ತನ್ನ 135ನೇ ಸಂಸ್ಥಾಪನಾ ದಿನವಾದ ಇಂದು ದೇಶಾದ್ಯಂತ ಮೆರವಣಿಗೆಗಳನ್ನು ಕೈಗೊಂಡಿದೆ. ದೆಹಲಿಯ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಧ್ವಜಾರೋಹಣ ನೆರವೇರಿಸಿದ್ದಾರೆ.

  • ಹತ್ತು ಮಂದಿ ಬಲಿ ಪಡೆದ CAA ಪ್ರತಿಭಟನೆ

    ಹತ್ತು ಮಂದಿ ಬಲಿ ಪಡೆದ CAA ಪ್ರತಿಭಟನೆ

    ಲಕ್ನೋ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದು ಹತ್ತು ಮಂದಿಯನ್ನು ಬಲಿ ಪಡೆದುಕೊಂಡಿದೆ. ನಿನ್ನೆಯಿಂದ ಉತ್ತರ ಪ್ರದೇಶದ ಕೆಲವು ಜಿಲ್ಲೆಗಳಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದುಕೊಂಡಿತ್ತು ಘಟನೆಯಲ್ಲಿ ಹತ್ತು ಮಂದಿ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.

    ಫಿರೋಝ್ ಬಾದ್, ಕಾನ್ಪುರ್, ಬಿಜ್ನೋರ್, ಸಂಬಾಲ್, ಮೀರಠ್ ನಲ್ಲಿ ಒಬ್ಬೊಬ್ಬರು ಸಾವನ್ನಪ್ಪಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಸಿಎಂ ಯೋಗಿ ಆದಿತ್ಯನಾಥ್ ವದಂತಿಗಳಿಗೆ ಕಿವಿಗೊಡದೆ ಕಾನೂನು ಕೈಗೆತ್ತಿಕೊಳ್ಳದೆ ಶಾಂತಿ ಕಾಪಡುವಂತೆ ಮನವಿ ಮಾಡಿದ್ದಾರೆ.

    ಸುಳ್ಳು ಸುದ್ದಿ ಹಬ್ಬುವವರನ್ನ ಹಿಂಸಾತ್ಮಕ ಪ್ರತಿಭಟನೆ ಮಾಡುವುವರನ್ನ ಜನರ ದಾರಿ ತಪ್ಪಿಸುವ ಗುಂಪುಗಳನ್ನು ಗುರುತಿಸಿ ಕ್ರಮ ಕೈಗೊಳ್ಳುವಂತೆ ಉತ್ತರ ಪ್ರದೇಶದ ಪೊಲೀಸರಿಗೆ ಯೋಗಿ ಆದಿತ್ಯನಾಥ್ ಸೂಚನೆ ನೀಡಿದ್ದಾರೆ.

    ಈ ಮಧ್ಯೆ, ಯಾವೊಬ್ಬ ಪ್ರತಿಭಟನಾಕಾರನೂ ಪೊಲೀಸರ ಗುಂಡಿಗೆ ಬಲಿಯಾಗಿಲ್ಲ ಎಂದು ಉತ್ತರ ಪ್ರದೇಶ ಡಿಜಿಪಿ ಒ.ಪಿ.ಸಿಂಗ್ ಹೇಳಿದ್ದಾರೆ. ಒಂದೇ ಒಂದು ಬಾರಿಯೂ ನಾವು ಶೂಟ್ ಮಾಡಿಲ್ಲ ಎಂದು ಅವರು ಹೇಳಿದ್ದಾರೆ. ಒಂದು ವೇಳೆ ಗುಂಡಿನ ದಾಳಿ ನಡೆದಿದೆ ಎಂದಾಗಿದ್ದಲ್ಲಿ ಅದು ಪ್ರತಿಭಟನಾಕಾರರ ಕಡೆಯಿಂದಲೇ ಆಗಿದೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.

    ಶುಕ್ರವಾರ ಲಕ್ನೊ, ವಾರಾಣಾಸಿ, ಬರೋಲಿ, ಗೋರಕಪುರ್, ಬದೋಹಿ, ಸಂಬಾಲ್ ನಲ್ಲಿ ಪೊಲೀಸ್ ಮತ್ತು ಪ್ರತಿಭಟನಾಕಾರರ ನಡುವೆ ಸಂಘರ್ಷ ಏರ್ಪಟ್ಟಿತ್ತು. ಘಟನೆಯಲ್ಲಿ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

  • ಪೌರತ್ವ ಪ್ರತಿಭಟನೆ – ಲಕ್ನೋ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳು ಭಟ್ಕಳಕ್ಕೆ ವಾಪಸ್

    ಪೌರತ್ವ ಪ್ರತಿಭಟನೆ – ಲಕ್ನೋ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳು ಭಟ್ಕಳಕ್ಕೆ ವಾಪಸ್

    ಕಾರವಾರ: ಪೌರತ್ವ ತಿದ್ದುಪಡಿ ವಿಚಾರದಲ್ಲಿ ಉಂಟಾದ ದ್ವೇಷಮಯ ವಾತಾವರಣದಿಂದಾಗಿ ಲಕ್ನೋದ ನದ್ವಾ ಕಾಲೇಜಿನಲ್ಲಿ ಓದುತ್ತಿರುವ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ತರ ಕನ್ನಡ ಜಿಲ್ಲೆಯ ಭಟ್ಕಳಕ್ಕೆ ವಾಪಸ್ಸಾಗಿದ್ದಾರೆ.

    ಜಾಮಿಯಾ ಮಿಲ್ಲಿಯಾ, ಅಲಿಘಡ ಮುಸ್ಲಿಂ ಯೂನಿವರ್ಸಿಟಿಗಳ ಬೆನ್ನಿಗೆ ಪೌರತ್ವ ಮಸೂದೆಯ ಪ್ರತಿಭಟನೆಗೆ ನದ್ವಾ ಕಾಲೇಜು ವಿದ್ಯಾರ್ಥಿಗಳು ಕೂಡ ಬೆಂಬಲಿಸಿದ್ದರು.

    ಈ ವೇಳೆ ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ಘರ್ಷಣೆ ಕೂಡ ಉಂಟಾಗಿತ್ತು. ಜಾಮಿಯಾದಲ್ಲಿ ನಡೆದ ಪೊಲೀಸ್ ದೌರ್ಜನ್ಯ ಪ್ರತಿಭಟಿಸಿ ದೇಶದ ವಿವಿಧ ಕಡೆಗಳಲ್ಲಿ ಕೂಡ ಪ್ರತಿಭಟನೆ ತೀವ್ರಗೊಂಡಿದ್ದವು.

    ಇದೇ ವೇಳೆ ಕ್ಯಾಂಪಸ್ ತೊರೆಯುವಂತೆ ಪೊಲೀಸರು ಸೂಚನೆ ನೀಡಿದ್ದರಿಂದ ಪ್ರಾಣ ರಕ್ಷಣೆಗಾಗಿ ಲಕ್ನೋದ ನದ್ವಾ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಭಟ್ಕಳಕ್ಕೆ ಮರಳಿದ್ದಾರೆ.

    ರೈಲ್ವೆ ಮೂಲಕ ಭಟ್ಕಳಕ್ಕೆ ಬಂದಿಳಿದ ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಮನೆ ಸೇರಿಕೊಂಡಿದ್ದಾರೆ. ಭಟ್ಕಳದಲ್ಲಿ ಜಾಮಿಯಾ ಸ್ಕೂಲಿನಲ್ಲಿ ಶಿಕ್ಷಣ ಮುಗಿಸಿ ಇನ್ನು ಎರಡು ವರ್ಷದ ಶಿಕ್ಷಣಕ್ಕಾಗಿ ಲಕ್ನೋಗೆ ಇವರೆಲ್ಲರೂ ತೆರಳಿದ್ದರು.

  • ತಂದೆ, ವಿಕಲಚೇತನ ಬಾಲಕನನ್ನು ಸುತ್ತಿಗೆಯಿಂದ ಹೊಡೆದು ಸ್ಕ್ರೂಡ್ರೈವರ್‌ನಿಂದ ಚುಚ್ಚಿ ಕೊಂದ ದಂಪತಿ

    ತಂದೆ, ವಿಕಲಚೇತನ ಬಾಲಕನನ್ನು ಸುತ್ತಿಗೆಯಿಂದ ಹೊಡೆದು ಸ್ಕ್ರೂಡ್ರೈವರ್‌ನಿಂದ ಚುಚ್ಚಿ ಕೊಂದ ದಂಪತಿ

    ಲಕ್ನೋ: ಸಂಬಂಧಿಕರನ್ನೇ ದಂಪತಿ ಸುತ್ತಿಗೆಯಿಂದ ಹೊಡೆದು, ಸ್ಕ್ರೂಡ್ರೈವರ್‌ನಿಂದ ಚುಚ್ಚಿ ಕೊಂದ ಪ್ರಕರಣವನ್ನು ಉತ್ತರ ಪ್ರದೇಶ ಪೊಲೀಸರು ಭೇದಿಸಿದ್ದು, ಖತರ್ನಾಕ್ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಬಂಧಿತ ಆರೋಪಿಗಳನ್ನು ಪ್ರೇಮ್ ಕುಮಾರ್ ಮತ್ತು ಮಾಧುರಿ ಎಂದು ಗುರುತಿಸಲಾಗಿದೆ. ಈ ದಂಪತಿ ನವೆಂಬರ್ 8ರ ರಾತ್ರಿ ತಮ್ಮ ಸಂಬಂಧಿಕ ಹಾಗೂ ಆತನ ವಿಕಲಚೇತನ ಮಗನನ್ನು ಸುತ್ತಿಗೆಯಿಂದ ಹೊಡೆದು, ಸ್ಕ್ರೂಡ್ರೈವರ್‌ನಿಂದ ಚುಚ್ಚಿ ಕೊಲೆ ಮಾಡಿದ್ದರು. ಆದರೆ ಆರೋಪಿಗಳು ಯಾರೆಂದು ಪತ್ತೆಯಾಗಿರಲ್ಲಿಲ್ಲ. ಆದರೆ ನವೆಂಬರ್ 10ರಂದು ಕೊಲೆಯಾದ ವ್ಯಕ್ತಿಯ ಸಹೋದರ ರಾಮ್‍ಚರಣ್ ತಿವಾರಿ ಅವರು ಸಿವಿಲ್ ಲೈನ್ ಪೊಲೀಸ್ ಠಾಣೆಯಲ್ಲಿ ನನ್ನ ಸಹೋದರ ಹಾಗೂ ಆತನ ಕಿರಿಯ ಮಗನ ಕೊಲೆಯಾಗಿದೆ ಎಂದು ದೂರು ನೀಡಿದ್ದರು.

    ಈ ದೂರಿನ ಆಧಾರದ ಮೇಲೆ ಘಟನಾ ಸ್ಥಳಕ್ಕೆ ಭೇಟಿಕೊಟ್ಟ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ತನಿಖೆ ಆರಂಭಿಸಿದರು. ಈ ಸಂಬಂಧ ಘಟನಾ ಸ್ಥಳದ ಅಕ್ಕ ಪಕ್ಕದ ಮನೆಯವರನ್ನು ವಿಚಾರಿಸಿದಾಗ ಆರೋಪಿಗಳ ಬಗ್ಗೆ ಸುಳಿವು ಸಿಕ್ಕಿತು. ಬಳಿಕ ತನಿಖೆ ಚುರುಕುಗೊಳಿಸಿದಾಗ ಗುರುವಾರ ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

    ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಾವೇ ಕೊಲೆ ಮಾಡಿರುವುದಾಗಿ ಪೊಲೀಸರು ತಪ್ಪೊಪ್ಪಿಕೊಂಡಿದ್ದಾರೆ. ಮೃತ ವ್ಯಕ್ತಿ ನಮ್ಮ ಸಂಬಂಧಿಕ. ಆತನಿಗೆ ಇಬ್ಬರು ಗಂಡು ಮಕ್ಕಳು. ಆದರೆ ಆತನ ನಡತೆ ಸರಿಯಿರಲಿಲ್ಲ, ಹಲವು ಅಕ್ರಮ ಸಂಬಂಧವನ್ನು ಆತ ಹೊಂದಿದ್ದ. ಆದ್ದರಿಂದ ಹಿರಿಯ ಮಗನಿಗೆ ಮದುವೆ ಆಗಿರಲಿಲ್ಲ. ಜೊತೆಗೆ ಸಂತ್ರಸ್ತನ ನಡತೆ ಸರಿಯಿಲ್ಲದ ಕಾರಣಕ್ಕೆ ಊರಿನಲ್ಲಿ ನಮ್ಮ ಕುಟುಂಬದ ಹೆಸರು ಹಾಳಾಗಿತ್ತು. ಇದರಿಂದ ಬೇಸತ್ತು ಸಂಬಂಧಿಕನನ್ನು ನಾವು ಕೊಲೆ ಮಾಡಲು ನಿರ್ಧರಿಸಿದೆವು.

    ನವೆಂಬರ್ 8ರ ರಾತ್ರಿ 3 ಗಂಟೆ ವೇಳೆಗೆ ಸಂತ್ರಸ್ತನ ಮನೆಗೆ ನುಗ್ಗಿ ಆತನನ್ನು ಸುತ್ತಿಗೆ ಹಾಗೂ ಸ್ಕ್ರೂಡ್ರೈವರ್ ನಿಂದ ಕೊಲೆ ಮಾಡಿದೆವು. ಈ ವೇಳೆ ಆತನ ಕಿರಿಯ ಮಗ ನಿದ್ರೆಯಿಂದ ಎದ್ದು ಗಲಾಟೆ ಮಾಡಲು ಆರಂಭಿಸಿದ. ಆತನನ್ನು ಸುಮ್ಮನಾಗಿಸಲು ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾದೆವು. ಆದರೆ ಗಂಭಿರ ಗಾಯಗೊಂಡಿದ್ದ ಬಾಲಕ ಕೂಡ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ. ನಮಗೆ ಬಾಲಕನನ್ನು ಕೊಲೆ ಮಾಡುವ ಉದ್ದೇಶವಿರಲಿಲ್ಲ, ಆತನ ತಂದೆಯನ್ನು ಮಾತ್ರ ನಾವು ಕೊಲೆ ಮಾಡಲು ಹೋಗಿದ್ದೆವು ಎಂದು ಆರೋಪಿಗಳು ಪೊಲೀಸರಿಗೆ ತಿಳಿಸಿದ್ದಾರೆ. ಸದ್ಯ ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ವಿಚಾರಣೆ ಮುಂದುವರಿಸಿದ್ದಾರೆ.