Tag: lucknow

  • ದೂರು ವಾಪಸ್ ಪಡೆಯಲು ರೇಪ್ ಸಂತ್ರಸ್ತೆ ನಕಾರ – ಆ್ಯಸಿಡ್ ಎರಚಿದ ಕಾಮುಕನ ಕುಟುಂಬ

    ದೂರು ವಾಪಸ್ ಪಡೆಯಲು ರೇಪ್ ಸಂತ್ರಸ್ತೆ ನಕಾರ – ಆ್ಯಸಿಡ್ ಎರಚಿದ ಕಾಮುಕನ ಕುಟುಂಬ

    ಲಕ್ನೋ: ಉತ್ತರಪ್ರದೇಶದಲ್ಲಿ ದೂರು ವಾಪಸ್ ಪಡೆಯದಿದ್ದಕ್ಕೆ ಅತ್ಯಾಚಾರಕ್ಕೊಳಗಾಗಿದ್ದ ಅಪ್ರಾಪ್ತೆ ಮೇಲೆ ಅತ್ಯಾಚಾರಿಯ ಕುಟುಂಬಸ್ಥರು ಆ್ಯಸಿಡ್ ದಾಳಿ ನಡೆಸಿದ್ದಾರೆ.

    ಉತ್ತರ ಪ್ರದೇಶದ ಹಾಪುರ್ ನಲ್ಲಿ ಈ ಘಟನೆ ನಡೆದಿದೆ. ಭಾನುವಾರ ಅತ್ಯಾಚಾರ ಸಂತ್ರಸ್ತೆಯ ಮೇಲೆ ಅತ್ಯಾಚಾರಿಯ ಕುಟುಂಬಸ್ಥರು ಆ್ಯಸಿಡ್ ಎರಚಿ, ಆಕೆಯ ಪೋಷಕರ ಮೇಲೆ ಹಲ್ಲೆ ನಡೆಸಿದ್ದಾರೆ. ಆರೋಪಿಗಳು ಎರಚಿದ ಆ್ಯಸಿಡ್ ಬಾಲಕಿಯ ಕಾಲಿನ ಮೇಲೆ ಬಿದ್ದಿದ್ದು, ಸದ್ಯ ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈಗಾಗಲೇ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಇನ್ನು ಉಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

    2019ರ ಸೆಪ್ಟೆಂಬರ್ 2ರಂದು ಬಾಲಕಿಯ ಮೇಲೆ ಅತ್ಯಾಚಾರ ನಡೆದಿತ್ತು. ಆ ಬಳಿಕ ಬಾಲಕಿಯ ಕುಟುಂಬಸ್ಥರು ಕಾಮುಕನ ವಿರುದ್ಧ ದೂರು ನೀಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಆದರೆ ಆರೋಪಿ ಕುಟುಂಬಸ್ಥರು ಕೊಟ್ಟಿರುವ ದೂರನ್ನು ವಾಪಸ್ ಪಡೆಯುವಂತೆ ಸಂತ್ರಸ್ತೆ ಹಾಗೂ ಆಕೆಯ ಪೋಷಕರಿಗೆ ಕಾಡುತ್ತಿದ್ದರು.

    ಇದೇ ವಿಚಾರಕ್ಕೆ ಭಾನುವಾರ ಕೂಡ ಸಂತ್ರಸ್ತೆ, ಆಕೆಯ ಪೋಷಕರು ಹಾಗೂ ಆರೋಪಿಯ ಕುಟುಂಬಸ್ಥರ ನಡುವೆ ಗಲಾಟೆ ನಡೆದಿತ್ತು. ಇದರಿಂದ ಸಿಟ್ಟಿಗೆದ್ದ ಆರೋಪಿ ಕುಟುಂಬಸ್ಥರು ಸಂತ್ರಸ್ತೆಯ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದಾರೆ.

  • ನೆಂಟನಾಗಿ ಮನೆಗೆ ಬಂದವ ಬಾಲಕಿ ಮೇಲೆ ಅತ್ಯಾಚಾರಗೈದು ಆಸ್ಪತ್ರೆ ಸೇರಿದ

    ನೆಂಟನಾಗಿ ಮನೆಗೆ ಬಂದವ ಬಾಲಕಿ ಮೇಲೆ ಅತ್ಯಾಚಾರಗೈದು ಆಸ್ಪತ್ರೆ ಸೇರಿದ

    ಲಕ್ನೋ: ಸಂಬಂಧಿಕನೊಬ್ಬ ಎಂಟು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಬರಾಬಂಕಿಯಲ್ಲಿ ನಡೆದಿದೆ.

    ಈ ಘಟನೆ ಶನಿವಾರ ನಡೆದಿದ್ದು, 26 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಬಾಲಕಿಯ ಸಂಬಂಧಿಕನಾಗಿದ್ದು, ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಶನಿವಾರ ಆರೋಪಿ ಚಾಲಕ ಬಾಲಕಿಯ ಕುಟುಂಬದವರನ್ನು ಭೇಟಿ ಮಾಡಲು ಮನೆಗೆ ಬಂದಿದ್ದಾನೆ.

    ಈ ವೇಳೆ ಬಾಲಕಿ ಮನೆಯ ಹಿಂದೆ ಆಟವಾಡುತ್ತಿದ್ದಳು. ಆಗ ಆರೋಪಿ ಹೋಗಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ಕೃತ್ಯ ಎಸಗಿದ ನಂತರ ಆರೋಪಿ ಪರಾರಿಯಾಗಲು ಯತ್ನಿಸಿದ್ದಾನೆ. ಆಗ ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸುವ ಮೊದಲು ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅರವಿಂದ್ ಚತುರ್ವೇದಿ ತಿಳಿಸಿದ್ದಾರೆ.

    ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆದರೆ ಆರೋಪಿಯ ಮೇಲೆ ಗ್ರಾಮಸ್ಥರು ಹಲ್ಲೆ ಮಾಡಿದ್ದರಿಂದ ತೀವ್ರವಾಗಿ ಗಾಯಗೊಂಡಿದ್ದನು. ಹೀಗಾಗಿ ಆತನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇತ್ತ ಬಾಲಕಿಯ ಕುಟುಂಬದವರು ನೀಡಿದ ದೂರಿದ ಆಧಾರದ ಮೇರೆಗೆ ಆರೋಪಿ ವಿರುದ್ಧ ಪೋಕ್ಸೋ ಕಾಯ್ಡೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಪತಿಯ ಕುಡಿತಕ್ಕೆ ಬೇಸತ್ತ ಪತ್ನಿ – ನಾಲ್ವರು ಹೆಣ್ಣು ಮಕ್ಕಳಿಗೆ ವಿಷ ಹಾಕಿ ಆತ್ಮಹತ್ಯೆ

    ಪತಿಯ ಕುಡಿತಕ್ಕೆ ಬೇಸತ್ತ ಪತ್ನಿ – ನಾಲ್ವರು ಹೆಣ್ಣು ಮಕ್ಕಳಿಗೆ ವಿಷ ಹಾಕಿ ಆತ್ಮಹತ್ಯೆ

    – ಮನೆ ಬಾಗಿಲು ಒಡೆದು ನೋಡಿದಾಗ ಐವರ ಶವ ಪತ್ತೆ

    ಲಕ್ನೋ: ಪತಿಯ ಕುಡಿತಕ್ಕೆ ಬೇಸತ್ತ ಪತ್ನಿ ತನ್ನ ನಾಲ್ವರು ಹೆಣ್ಣು ಮಕ್ಕಳಿಗೆ ವಿಷ ಹಾಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದ ಫತೇಪುರದಲ್ಲಿ ನಡೆದಿದೆ.

    ಶ್ಯಾಮಾ(40), ಪಿಂಕಿ (21), ಪ್ರಿಯಾಂಕ (14), ವರ್ಷ್ (13) ಹಾಗೂ ನನ್ಕಿ(10) ಮೃತಪಟ್ಟ ತಾಯಿ- ಮಕ್ಕಳು. ಹಲವು ದಿನಗಳಿಂದ ಶ್ಯಾಮಾ ಮನೆಯ ಬಾಗಿಲು ಲಾಕ್ ಆಗಿತ್ತು. ಶನಿವಾರ ಅಂದರೆ ಇಂದು ಬೆಳಗ್ಗೆ ಮನೆಯಿಂದ ದುರ್ವಾಸನೆ ಬರಲು ಶುರುವಾದಾಗ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದರು. ಪೊಲೀಸರು ಬಾಗಿಲನ್ನು ಒಡೆದು ಒಳಗೆ ಹೋಗಿ ನೋಡಿದಾಗ ಐವರ ಶವ ಪತ್ತೆಯಾಗಿತ್ತು.

    ಈ ವೇಳೆ ಸ್ಥಳೀಯರು ಪೊಲೀಸರ ಬಳಿ, ಮಹಿಳೆಯ ಪತಿ ರಾಮ್ ಡಾಬಾದಲ್ಲಿ ಕೆಲಸ ಮಾಡುತ್ತಿದ್ದು, ಯಾವಾಗಲೂ ಮದ್ಯ ಸೇವಿಸುತ್ತಿದ್ದನು. ಪತಿಯ ಕುಡಿತಕ್ಕೆ ಪತ್ನಿ ಶ್ಯಾಮಾ ಬೇಸತ್ತು ಹೋಗಿದ್ದಳು. ಪತಿ- ಪತ್ನಿ ನಡುವೆ ಯಾವಾಗಲೂ ಜಗಳವಾಗುತ್ತಿತ್ತು. ನಾಲ್ಕು ದಿನದ ಹಿಂದೆಯೂ ಪತಿ-ಪತ್ನಿ ನಡುವೆ ಜಗಳವಾಗಿದ್ದು, ಈ ಘಟನೆ ನಂತರ ಪತಿ ರಾಮ್ ನಾಪತ್ತೆ ಆಗಿದ್ದನು. ಕೆಲವು ದಿನಗಳಿಂದ ಈ ಮನೆಯ ಬಾಗಿಲು ಲಾಕ್ ಆಗಿದ್ದು, ಕುಟುಂಬಸ್ಥರು ಮನೆಯ ಹೊರಗೆ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ ಎಂದು ಮಾಹಿತಿ ನೀಡಿದರು.

    ಸದ್ಯ ಪೊಲೀಸರು ಬಾಗಿಲನ್ನು ಒಡೆದು ಒಳಗೆ ಹೋದಾಗ ರೂಮಿನಲ್ಲಿ ವಿಷದ ಪುಡಿ ದೊರೆಯಿತು. ಬಾಗಿಲು ಒಳಗಿನಿಂದ ಲಾಕ್ ಆಗಿದ್ದ ಕಾರಣ ತಾಯಿ- ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ತಿಳಿಯಿತು. ಶ್ಯಾಮಾ ಕಾಲೇಜ್‍ವೊಂದರಲ್ಲಿ ಅಡುಗೆ ಮಾಡುವ ಕೆಲಸ ಮಾಡುತ್ತಿದ್ದಳು. ಇತ್ತ ರಾಮ್ ತನ್ನ ಹಣವನ್ನೆಲ್ಲಾ ಕುಡಿತಕ್ಕಾಗಿ ಬಳಸಿಕೊಳ್ಳುತ್ತಿದ್ದನು. ಹೀಗಾಗಿ ಶ್ಯಾಮಾ ತನ್ನ ಮನೆಯ ಖರ್ಚು ಹಾಗೂ ನಾಲ್ವರು ಮಕ್ಕಳ ವಿದ್ಯಾಭ್ಯಾಸದ ಖರ್ಚನ್ನು ನೋಡಿಕೊಳ್ಳುತ್ತಿದ್ದಳು.

    ಸ್ಥಳೀಯರ ಪ್ರಕಾರ, ರಾಮ್ ಮದ್ಯ ಸೇವಿಸಿ ತನ್ನ ಪತ್ನಿ ಬಳಿ ಹಣ ಕೇಳುತ್ತಿದ್ದನು. ಪತ್ನಿ ಹಣ ಕೊಡದೆ ಇದ್ದಾಗ ಆತ ಆಕೆಯ ಮೇಲೆ ಹಲ್ಲೆ ಮಾಡುತ್ತಿದ್ದನು. ಶ್ಯಾಮಾ ತನ್ನ ಹಿರಿಯ ಮಗಳ ಮದುವೆ ಬಗ್ಗೆ ತುಂಬಾ ಯೋಚಿಸುತ್ತಿದ್ದಳು ಎಂದು ಹೇಳಿದರು.

  • ವೋಡ್ಕಾ ಕುಡಿಸಿದ ಗೆಳೆಯ – 1 ಗಂಟೆ ನಂತ್ರ ಎಚ್ಚರವಾಗಿ ಆಸ್ಪತ್ರೆಗೆ ಹೋದ ವಿದ್ಯಾರ್ಥಿನಿ

    ವೋಡ್ಕಾ ಕುಡಿಸಿದ ಗೆಳೆಯ – 1 ಗಂಟೆ ನಂತ್ರ ಎಚ್ಚರವಾಗಿ ಆಸ್ಪತ್ರೆಗೆ ಹೋದ ವಿದ್ಯಾರ್ಥಿನಿ

    – ನಿದ್ದೆಗೆ ಜಾರುತ್ತಿದ್ದಂತೆ ಗೆಳತಿಯ ಮೇಲೆರಗಿದ ಗೆಳೆಯ
    – ಇನ್‍ಸ್ಟಾಗ್ರಾಂ ಮೂಲಕ ಒಂದು ತಿಂಗ್ಳ ಹಿಂದೆ ಪರಿಚಯ

    ಲಕ್ನೋ: ಇನ್‍ಸ್ಟಾಗ್ರಾಂ ಮೂಲಕ ಪರಿಯಚನಾಗಿದ್ದ ಸ್ನೇಹಿತನೊಬ್ಬ ಗೆಳೆತಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಉತ್ತರದ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

    ಹತ್ರಾಸ್ ಜಿಲ್ಲೆಯವನಾದ ದರ್ಶ್ ಗೌತಮ್ (23) ಬಂಧಿತ ಆರೋಪಿ. ಈಗ ಡಿಪ್ಲೋಮಾ ವ್ಯಾಸಂಗ ಮಾಡುತ್ತಿದ್ದು, ತನ್ನ ಪೋಷಕರೊಂದಿಗೆ ಸದರ್ ಪ್ರದೇಶದಲ್ಲಿ ವಾಸಿಸುತ್ತಿದ್ದನು. ಆದರೆ ತಾಜ್‍ಗಂಜ್ ಪ್ರದೇಶದ ಹೋಟೆಲ್‍ವೊಂದರಲ್ಲಿ 20 ವರ್ಷದ ವಿದ್ಯಾರ್ಥಿನಿಗೆ ವೋಡ್ಕಾ ಕುಡಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿ ಗೌತಮ್ ಒಂದು ತಿಂಗಳ ಹಿಂದೆ ಇನ್‍ಸ್ಟಾಗ್ರಾಂ ಮೂಲಕ ಪರಿಚಯನಾಗಿದ್ದ. ಆದರೆ ತಾಜ್‍ಗಂಜ್ ಪ್ರದೇಶದ ಹೋಟೆಲಿನಲ್ಲಿ ಗೌತಮ್ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ದೂರು ನೀಡಿದ್ದಾಳೆ. ಸಂತ್ರಸ್ತೆ ನೀಡಿದ ದೂರಿ ಆಧಾರದ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಯನ್ನು ಶುರು ಮಾಡಿದ್ದರು. ಆಗ ಹೋಟೆಲ್ ಸಿಸಿಟಿವಿಯಲ್ಲಿ ಸಂತ್ರಸ್ತೆ ಮತ್ತು ಆರೋಪಿ ಹೋಗಿರುವುದು ಕಂಡುಬಂದಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಬಬ್ಲೂ ಕುಮಾರ್ ತಿಳಿಸಿದ್ದಾರೆ.

    ಇಬ್ಬರೂ ತಾಜ್‍ಗಂಜ್ ಪ್ರದೇಶದ ಹೋಟೆಲ್‍ಗೆ ಹೋಗಿದ್ದರು. ಅಲ್ಲಿ ಆರೋಪಿ ಸಂತ್ರಸ್ತೆಗೆ ಕುಡಿಯಲು ಜ್ಯೂಸ್ ಕೊಟ್ಟಿದ್ದನು. ಅದನ್ನು ಕುಡಿದ ನಂತರ ಆಕೆ ಪ್ರಜ್ಞೆ ತಪ್ಪಿದ್ದಾಳೆ. ಆಗ ಆರೋಪಿ ಗೌತಮ್ ಅತ್ಯಾಚಾರ ಎಸಗಿದ್ದಾನೆ. ಒಂದು ಗಂಟೆಯ ನಂತರ ಸಂತ್ರಸ್ತೆಗೆ ಎಚ್ಚರವಾಗಿದೆ. ಆಗ ಆಕೆಯ ಖಾಸಗಿ ಭಾಗಗಳಲ್ಲಿ ಗಾಯದ ಗುರುತುಗಳು ಕಂಡುಬಂದಿದೆ. ತಕ್ಷಣ ಸಂತ್ರಸ್ತೆ ಸ್ನೇಹಿತರ ಜೊತೆ ಖಾಸಗಿ ಆಸ್ಪತ್ರೆಗೆ ಹೋಗಿ ವೈದ್ಯಕೀಯ ಪರೀಕ್ಷೆ ಮಾಡಿಸಿದ್ದಾಳೆ.

    ಇತ್ತ ಆರೋಪಿ ತನ್ನ ಸ್ನೇಹಿತರ ಜೊತೆ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಹೋಗಿದ್ದನು. ಅಲ್ಲಿಯೇ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯ ಸ್ನೇಹಿತರು ಮತ್ತು ಹೋಟೆಲ್ ಸಿಬ್ಬಂದಿಯ ಹೇಳಿಕೆಯ ಮೇರೆಗೆ ಆರೋಪಿಯನ್ನು ಬಂಧಿಸಿದ್ದೇವೆ. ವಿಚಾರಣೆ ವೇಳೆ ಆರೋಪಿ ತಾನು ಮಾಡಿರುವ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಹೀಗಾಗಿ ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದೇವೆ ಎಂದು ಬಬ್ಲೂ ಕುಮಾರ್ ಹೇಳಿದ್ದಾರೆ.

    ಸಂತ್ರಸ್ತೆಯ ಖಾಸಗಿ ಭಾಗದಲ್ಲಿ ಆಗಿರುವ ಗಾಯದಿಂದ ಆಕೆಯ ಮೇಲೆ ಕ್ರೂರವಾಗಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ವೈದ್ಯಕೀಯ ವರದಿಯಲ್ಲಿ ತಿಳಿದುಬಂದಿದೆ. ಅತ್ಯಾಚಾರ ಎಸಗುವ ಮೊದಲು ಸಂತ್ರಸ್ತೆಗೆ ಜ್ಯೂಸಿನಲ್ಲಿ ವೋಡ್ಕಾವನ್ನು ಮಿಕ್ಸ್ ಮಾಡಲಾಗಿತ್ತು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

  • ಹೆಚ್‍ಎಎಲ್ ಸಾಮರ್ಥ್ಯ ಪ್ರದರ್ಶನಕ್ಕೆ ವೇದಿಕೆ ಸಿದ್ಧ- ಫೆಬ್ರವರಿ 5ರಿಂದ ಡಿಫೆನ್ಸ್ ಎಕ್ಸ್ ಪೋ

    ಹೆಚ್‍ಎಎಲ್ ಸಾಮರ್ಥ್ಯ ಪ್ರದರ್ಶನಕ್ಕೆ ವೇದಿಕೆ ಸಿದ್ಧ- ಫೆಬ್ರವರಿ 5ರಿಂದ ಡಿಫೆನ್ಸ್ ಎಕ್ಸ್ ಪೋ

    ಬೆಂಗಳೂರು: ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ರಕ್ಷಣಾ ಸಚಿವಾಲಯದ ಸಹಭಾಗಿತ್ವದೊಂದಿಗೆ ಫೆಬ್ರವರಿ 5ರಿಂದ 9ರವರೆಗೆ 11ನೇ ಡಿಫೆನ್ಸ್ ಎಕ್ಸ್ ಪೋ ಹಮ್ಮಿಕೊಳ್ಳಲಾಗಿದೆ.

    ಈ ಪ್ರದರ್ಶನದಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್‍ಎಎಲ್) ತನ್ನ ಸಾಮರ್ಥ್ಯವನ್ನು ಸಾಬೀತು ಮಾಡಲಿದೆ. ಜೊತೆಗೆ ಹೆಚ್‍ಎಎಲ್‍ನಲ್ಲಿ ತಯಾರಿಸಿದ ಲಘು ಯುದ್ಧ ವಿಮಾನ, ಯುದ್ಧದ ಹೆಲಿಕಾಪ್ಟರ್, ಯುದ್ಧ ವಿಮಾನಗಳಿಗೆ ಅಳವಡಿಸುವ ಬಿಡಿಭಾಗಳು ಸೇರಿದಂತೆ ಅನೇಕ ವಸ್ತುಗಳನ್ನು ಪ್ರದರ್ಶನಗೊಳ್ಳಲಿವೆ.

    ಈ ಬಾರಿಯ ಪ್ರಮುಖ ಆಕರ್ಷಣೆಯೆಂದರೆ ಸುಖೋಯ್-30 ಎಂಕೆಐನ ಕಾಕ್‍ಪಿಟ್ ಜೊತೆಗೆ ಎಎಲ್‍ಹೆಚ್ ಎಂಕೆ 5 ರುದ್ರ, ಎಲ್‍ಸಿಹೆಚ್, ತೇಜಸ್, ಡಿಓ-228 ಸಿವಿಲ್ ಸೇರಿದಂತೆ ಅನೇಕ ಲಘು ಹಾಗೂ ಭಾರದ ಯುದ್ಧ ಹೆಲಿಕಾಪ್ಟರ್‌ಗಳು ತಮ್ಮ ಸಾಮರ್ಥ್ಯವನ್ನು ವಿಶ್ವದ ಮುಂದೆ ಪ್ರದರ್ಶಿಸಲಿವೆ.

  • ಪ್ರೇಯಸಿ ಸಾವನ್ನಪ್ಪಿದ್ದಾಳೆಂದು ಬಿಂಬಿಸಲು ಬೇರೊಬ್ಬ ಹುಡ್ಗಿಯ ಕೊಲೆ

    ಪ್ರೇಯಸಿ ಸಾವನ್ನಪ್ಪಿದ್ದಾಳೆಂದು ಬಿಂಬಿಸಲು ಬೇರೊಬ್ಬ ಹುಡ್ಗಿಯ ಕೊಲೆ

    – ಕ್ರೈಂ ಶೋನಿಂದ ಪ್ರೇರಣೆಗೊಂಡು ಮರ್ಡರ್

    ಲಕ್ನೋ: ಯುವಕನೊಬ್ಬ ತನ್ನ ಪ್ರೇಯಸಿ ಸಾವನ್ನಪ್ಪಿದ್ದಾಳೆಂದು ಪೋಷಕರನ್ನು ನಂಬಿಸಲು ಬೇರೊಬ್ಬ ಹುಡುಗಿಯನ್ನು ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶ್‍ದ ಬುಲಂದ್‍ಶಹರ್ ಜಿಲ್ಲೆಯಲ್ಲಿ ನಡೆದಿದೆ.

    ಪೂನಂ (20) ಮೃತ ಯುವತಿ. ಪ್ರೇಮಿಗಳಾದ ಕಪಿಲ್ ಮತ್ತು ರೂಬಿ ಕ್ರೈಂ ಶೋಗಳಿಂದ ಪ್ರೇರಣೆಗೊಂಡು ಪೂನಂನನ್ನು ಕೊಲೆ ಮಾಡಿದ್ದಾರೆ. ಇದೀಗ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ಜನವರಿ 26 ರಂದು ಬುಲಂದ್‍ಶಹರ್ ನ ಸಿಕಂದರಾಬಾದ್ ಪ್ರದೇಶದಿಂದ 20 ವರ್ಷದ ಪೂನಂ ಮೃತದೇಹ ಪತ್ತೆಯಾಗಿತ್ತು. ಪೂನಂ ನೋಯ್ಡಾದ ಜಾರ್ಚಾ ಪ್ರದೇಶದ ಮೂಲದವಳಾಗಿದ್ದು, ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಳು. ಪ್ರಮುಖ ಆರೋಪಿ ಕಪಿಲ್ ಕೆಲವು ದಿನಗಳ ಹಿಂದೆ ಯುವತಿಯೊಂದಿಗೆ ಸ್ನೇಹ ಬೆಳೆಸಿದ್ದನು ಎಂದು ತಿಳಿದು ಬಂದಿದೆ.

    ರೂಬಿ ಮತ್ತು ಕಪಿಲ್ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಜೊತೆಗೆ ಮದುವೆಯಾಗಲು ನಿರ್ಧರಿಸಿದ್ದರು. ಆದರೆ ರೂಬಿ ಕುಟುಂಬದವರು ಇವರ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಇನ್ನೊಬ್ಬ ಹುಡುಗಿಯನ್ನು ಕೊಲೆ ಮಾಡುವ ಮೂಲಕ ರೂಬಿಯೇ ಮೃತಪಟ್ಟಿದ್ದಾಳೆಂದು ಪೋಷಕರಿಗೆ ಬಿಂಬಿಸಲು ಪ್ಲಾನ್ ಮಾಡಿಕೊಂಡಿದ್ದರು. ಅದರಂತೆಯೇ ಕಪಿಲ್ ಮತ್ತು ರೂಬಿ ಪೂನಂನನ್ನು ಕೊಲೆ ಮಾಡಲು ಪ್ಲಾನ್ ಮಾಡಿಕೊಂಡಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ತಮ್ಮ ಪ್ಲಾನ್‍ನಂತೆ ಕಪಿಲ್ ಪೂನಂ ಜೊತೆ ಸ್ನೇಹ ಬೆಳೆಸಿದ್ದಾನೆ. ನಂತರ ಜನವರಿ 25 ರಂದು ಶಾಪಿಂಗ್ ನೆಪದಲ್ಲಿ ಅವಳನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕಾರ್ ಬೆಲ್ಟ್ ಬಳಸಿ ಪೂನಂನ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಪೂನಂ ಮೃತದೇಹವನ್ನು ಸಿಕಂದರಾಬಾದ್ ಪ್ರದೇಶದ ತನ್ನ ಪ್ರೇಯಸಿ ರೂಬಿ ಮನೆ ಬಳಿಯ ಶೆಡ್‍ನಲ್ಲಿ ಎಸೆದಿದ್ದಾನೆ. ಆಕೆಯ ಗುರುತನ್ನು ಮರೆಮಾಚಲು ಬೆಂಕಿ ಹಚ್ಚಿ ಸುಟ್ಟಿದ್ದಾರೆ. ಅಷ್ಟೇ ಅಲ್ಲದೇ ರೂಬಿಯ ಬಟ್ಟೆ ಮತ್ತು ಆಭರಣಗಳನ್ನು ಪೂನಂ ಮೃತದೇಹದ ಮೇಲೆ ಹಾಕಿ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಎಸ್‍ಪಿ ಅತುಲ್ ಶ್ರೀವಾಸ್ತವ ತಿಳಿಸಿದ್ದಾರೆ.

    ಕೊಲೆಯ ನಂತರ ಜೋಡಿ ಓಡಿಹೋಗಲು ನಿರ್ಧರಿಸಿದ್ದರು. ಅಷ್ಟರಲ್ಲಿ ಪ್ರಮುಖ ಆರೋಪಿ ಕಪಿಲ್ ಪೊಲೀಸರ ಬಲೆಗೆ ಬಿದ್ದಿದ್ದ. ಬಳಿಕ ರೂಬಿಯನ್ನೂ ಬಂಧಿಸಲಾಗಿದೆ. ವಿಚಾರಣೆಯ ವೇಳೆ ಪೂನಂನನ್ನು ಕೊಲೆ ಮಾಡಿ ಅದನ್ನು ರೂಬಿಯ ಸಾವು ಎಂದು ಬಿಂಬಿಸಲು ಕ್ರೈಂ ಶೋಗಳಿಂದ ಪ್ರೇರಿತರಾಗಿರುವುದಾಗಿ ಆರೋಪಿಗಳು ಪೊಲೀಸರಿಗೆ ತಿಳಿಸಿದ್ದಾರೆ.

  • ಕದ್ದುಮುಚ್ಚಿ ಪ್ರೇಯಸಿ ಮನೆಗೆ ಹೋದ- ಸೆಕ್ಸ್ ಮಾಡೋವಾಗ ಶಬ್ದ ಮಾಡಿ ಸಿಕ್ಕಿಬಿದ್ದ

    ಕದ್ದುಮುಚ್ಚಿ ಪ್ರೇಯಸಿ ಮನೆಗೆ ಹೋದ- ಸೆಕ್ಸ್ ಮಾಡೋವಾಗ ಶಬ್ದ ಮಾಡಿ ಸಿಕ್ಕಿಬಿದ್ದ

    – ಮಗಳೊಂದಿಗೆ ರೂಮಿನಲ್ಲಿ ರೆಡ್‍ಹ್ಯಾಂಡಾಗಿ ಸಿಕ್ಕಿಬಿದ್ದವನ ಕೊಲೆ

    ಲಕ್ನೋ: ಮಗಳೊಂದಿಗೆ ಸೆಕ್ಸ್ ಮಾಡುತ್ತಿದ್ದಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಪ್ರಿಯತಮನನ್ನು ಮಾವನೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

    ಏನಿದು ಪ್ರಕರಣ?
    21 ವರ್ಷದ ಯುವಕ ಲಾರಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದನು. ಅದೇ ಗ್ರಾಮದ ತನ್ನ ಮಾವನ ಮಗಳನ್ನು ಪ್ರೀತಿಸುತ್ತಿದ್ದನು. ಕಳೆದ 2 ದಿನಗಳ ಹಿಂದೆ ರಾತ್ರಿ ತನ್ನ ಪ್ರೇಯಸಿಯ ಮನೆಗೆ ಕದ್ದುಮುಚ್ಚಿ ಹೋಗಿದ್ದಾನೆ. ಅಲ್ಲಿ ಆಕೆಯೊಂದಿಗೆ ರೂಮಿನಲ್ಲಿ ಮಾತನಾಡುತ್ತಾ ಕುಳಿತಿದ್ದ. ಆ ನಂತರ ಯುವತಿಯೊಂದಿಗೆ ಸೆಕ್ಸ್ ಮಾಡಲು ಶುರು ಮಾಡಿದ್ದಾನೆ.

    ರೂಮಿನಲ್ಲಿ ಶಬ್ದವಾಗುತ್ತಿದ್ದ ಕಾರಣ ಯುವತಿಯ ತಂದೆ ರೂಮಿಗೆ ಬಂದಿದ್ದಾರೆ. ಈ ವೇಳೆ ಇಬ್ಬರೂ ಸೆಕ್ಸ್ ಮಾಡುತ್ತಿರುವುದನ್ನು ನೋಡಿ ತಂದೆ ಕೋಪಗೊಂಡಿದ್ದನು. ಕೂಡಲೇ ಯುವತಿಯ ತಂದೆ ಮತ್ತು ಸಹೋದರ ಸೇರಿಕೊಂಡು ಯುವಕನ ಮೇಲೆ ಹಲ್ಲೆ ಮಾಡಿ, ಕತ್ತು ಹಿಸುಕಿ ಕೊಲೆ ಮಾಡಿದ್ದರು. ಬಳಿಕ ಮೃತದೇಹವನ್ನು ರೈಲ್ವೆ ಹಳಿ ಮೇಲೆ ಬಿಸಾಡಿದ್ದಾರೆ.

    ಇತ್ತ ಮಗ ರಾತ್ರಿಯಿಂದ ಕಾಣೆಯಾಗಿದ್ದಾನೆ ಎಂದು ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಹುಡುಕಾಟ ಶುರು ಮಾಡಿದ್ದರು. ಆಗ ರೈಲ್ವೆ ಹಳಿ ಪಕ್ಕದ ಜಮೀನಿನಲ್ಲಿ ಯುವಕ ಮೃತದೇಹ ಪತ್ತೆಯಾಗಿದೆ. ತಕ್ಷಣ ಪೊಲೀಸರು ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ರವಾನಿಸಿದ್ದಾರೆ.

    ಈ ಬಗ್ಗೆ ತನಿಖೆ ನಡೆಸುತ್ತಿದ್ದ ಪೊಲೀಸರು ಯುವಕನ ಫೋನ್ ಕಾಲ್ ರೆಕಾರ್ಡ್ ಪರಿಶೀಲನೆ ಮಾಡಿದ್ದಾರೆ. ಆಗ ಯುವತಿಯನ್ನು ಪ್ರೀತಿಸುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ಪೊಲೀಸರು ಅನುಮಾನ ಮೇರೆಗೆ ಯುವತಿಯನ್ನು ಪ್ರಶ್ನಿಸಿದಾಗ, ತನ್ನ ತಂದೆ ಮತ್ತು ಸಹೋದರ ಸೇರಿ ಕೊಲೆ ಮಾಡಿದ್ದಾರೆ ಎಂದು ಹೇಳಿದ್ದಾಳೆ.

    ಬಳಿಕ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ತಾವೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಇತ್ತ ಮಗನನ್ನ ಕಳೆದುಕೊಂಡಿರುವ ಪೋಷಕರು ನಮ್ಮ ಮಗನನ್ನು ಕೊಲೆ ಮಾಡಿದವರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸುತ್ತಿದ್ದಾರೆ.

  • 7 ಮಕ್ಕಳ ತಾಯಿ ಜೊತೆ ಲವ್ – 22ರ ಯುವಕನ ಮೇಲೆ ಬಿತ್ತು ಕೇಸ್

    7 ಮಕ್ಕಳ ತಾಯಿ ಜೊತೆ ಲವ್ – 22ರ ಯುವಕನ ಮೇಲೆ ಬಿತ್ತು ಕೇಸ್

    – 60 ವರ್ಷದ ಮಹಿಳೆಯ ಜೊತೆ ಪ್ರೇಮಾಂಕುರ
    – ನಾನು ಯುವಕನನ್ನು ಮದ್ವೆ ಆಗ್ತೀನಿ ಎಂದ ಮಹಿಳೆ
    – ಪತಿ, ಮಕ್ಕಳಿಂದ ಯುವಕನ ವಿರುದ್ಧ ದೂರು

    ಲಕ್ನೋ: ಪ್ರೀತಿ ಯಾರ ಮೇಲೆ ಹೇಗೆ ಬೇಕಾದರೂ ಆಗಬಹುದು. ಆದರೆ ಹೀಗೂ ಪ್ರೀತಿ ಆಗುತ್ತಾ ಎಂದು ಕೇಳಿದರೆ ನಿಮಗೆ ಶಾಕ್ ಆಗಬಹುದು. 7 ಮಕ್ಕಳ ತಾಯಿಗೆ 22 ವರ್ಷದ ಯುವಕನ ಮೇಲೆ ಪ್ರೀತಿಯಾಗಿದೆ. ಪ್ರೀತಿ ವಿಚಾರ ತಿಳಿಯುತ್ತಿದ್ದಂತೆ ಮನೆಯಲ್ಲಿ ಹೈಡ್ರಾಮಾ ನಡೆದಿದ್ದು ಪ್ರಕರಣ ಈಗ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.

    22 ವರ್ಷದ ಯುವಕ 7 ಮಕ್ಕಳು ಹಾಗೂ 7 ಮೊಮ್ಮಕ್ಕಳು ಇರುವ ಮಹಿಳೆಯನ್ನು ಪ್ರೀತಿಸುತ್ತಿದ್ದನು. ಮಹಿಳೆಯ ಪತಿ ಹಾಗೂ ಆಕೆಯ ಮಗ ಉತ್ತರ ಪ್ರದೇಶದ ಆಗ್ರಾದ ಪೊಲೀಸ್ ಠಾಣೆಗೆ ಬಂದು ಯುವಕನ ವಿರುದ್ಧ ಪ್ರಕರಣ ದಾಖಲಾದಾಗ ಪ್ರೀತಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಇದನ್ನೂ ಓದಿ: ವಧುವಿನ ತಾಯಿಯ ಜೊತೆ ವರನ ತಂದೆ ಪರಾರಿ- ಯುವ ಪ್ರೇಮಿಗಳ ಮದುವೆ ರದ್ದು

    ಪೊಲೀಸ್ ಠಾಣೆಗೆ ಯುವಕ ತನ್ನ ಕುಟುಂಬಸ್ಥರೊಂದಿಗೆ ಬಂದಿದ್ದನು. ಈ ವೇಳೆ ಯುವಕನ ಕುಟುಂಬಸ್ಥರಿಗೂ ಹಾಗೂ ಮಹಿಳೆಯ ಕುಟುಂಬಸ್ಥರಿಗೂ ವಾಗ್ವಾದ ನಡೆದಿದೆ. ಬಳಿಕ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ. ಮಹಿಳೆ ಹಾಗೂ ಯುವಕ ಪರಸ್ಪರ ಪ್ರೀತಿಸುತ್ತಿದ್ದು, ಮದುವೆಯಾಗಲು ಇಷ್ಟಪಟ್ಟಿದ್ದಾರೆ. ಇದನ್ನೂ ಓದಿ: 60ರ ವೃದ್ಧೆ ಜೊತೆ 20ರ ಯುವಕನ ಮದುವೆ

    ಪೊಲೀಸರು ಯುವಕನಿಗೆ, ಈ ಪ್ರೀತಿಯನ್ನು ಯಾರು ಒಪ್ಪುವುದಿಲ್ಲ. ನಿನ್ನ ನಿರ್ಧಾರವನ್ನು ಬದಲಿಸಿಕೋ ಎಂದು ಹೇಳಿ ಇಬ್ಬರಿಗೆ ಪ್ರೀತಿಯನ್ನು ಮುಂದುವರಿಸಬೇಡಿ ಎಂದು ಬುದ್ಧಿವಾದ ಹೇಳಿದ್ದಾರೆ. ಆದರೆ ಮಹಿಳೆ ಹಾಗೂ ಯುವಕ ಪೊಲೀಸರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿ ವಿರೋಧ ವ್ಯಕ್ತಪಡಿಸಿ ನಾವಿಬ್ಬರು ಮದುವೆ ಆಗುತ್ತೇವೆ ಎಂದು ಹಠ ಹಿಡಿದಿದ್ದಾರೆ. ಇದನ್ನೂ ಓದಿ: ಹನಿಮೂನ್ ಮುಗಿಸಿ ಬಂದ ಮಗ್ಳ ಪತಿಯನ್ನೇ ಮದ್ವೆಯಾದ ತಾಯಿ

    ಮಹಿಳೆ ಹಾಗೂ ಯುವಕ ವಿರೋಧ ವ್ಯಕ್ತಪಡಿಸುತ್ತಿದ್ದಂತೆ ಪೊಲೀಸರು ಯುವಕನ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ಬಳಿಕ ಮಹಿಳೆ ಯುವಕನನ್ನು ಜಾಮೀನಿನ ಮೂಲಕ ಪೊಲೀಸ್ ಠಾಣೆಯಿಂದ ಹೊರ ಕರೆದುಕೊಂಡು ಬಂದಿದ್ದಾರೆ. ಪ್ರೇಮಿಗಳ ಈ ನಡೆಯನ್ನು ನೋಡಿದ ಪೊಲೀಸರು ಶಾಕ್ ಆಗಿದ್ದಾರೆ. ಇಷ್ಟೆಲ್ಲ ಪ್ರಸಂಗ ನಡೆದು ಮುಂದೆ ಏನಾಯ್ತು ಎನ್ನುವುದರ ಬಗ್ಗೆ ವರದಿ ಪ್ರಕಟವಾಗಿಲ್ಲ.

  • 60ರ ವೃದ್ಧೆ ಜೊತೆ 20ರ ಯುವಕನ ಮದುವೆ

    60ರ ವೃದ್ಧೆ ಜೊತೆ 20ರ ಯುವಕನ ಮದುವೆ

    – ಮಿಸ್ಡ್ ಕಾಲ್ ಮೂಲಕ ಪ್ರೀತಿ ಶುರು

    ಲಕ್ನೋ: 60 ವರ್ಷದ ವೃದ್ಧೆ ಜೊತೆ 20 ವರ್ಷದ ಯುವಕ ಮದುವೆಯಾಗಿರುವ ಅಪರೂಪದ ಸಂಗತಿಯೊಂದು ಉತ್ತರ ಪ್ರದೇಶದ ಮಹೋರಾಬಾದ್‍ನಲ್ಲಿ ನಡೆದಿದೆ.

    ರಾಮ್‍ಪುರದ ನಿವಾಸಿಯಾಗಿರುವ 60 ವರ್ಷದ ವೃದ್ಧೆ 20 ವರ್ಷದ ಯುವಕನ ಜೊತೆ ಮದುವೆಯಾಗಿದ್ದಾರೆ. ಈ ಮದುವೆ ಅಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ. ಮಿಸ್ಡ್ ಕಾಲ್ ಮೂಲಕ ಇವರಿಬ್ಬರ ಪ್ರೀತಿ ಶುರುವಾಗಿದ್ದು, ಆಗಿನಿಂದ ಇಬ್ಬರು ಆತ್ಮೀಯವಾಗಿದ್ದಾರೆ. ಇದನ್ನೂ ಓದಿ: ಹನಿಮೂನ್ ಮುಗಿಸಿ ಬಂದ ಮಗ್ಳ ಪತಿಯನ್ನೇ ಮದ್ವೆಯಾದ ತಾಯಿ

    ಎರಡು ವರ್ಷಗಳ ಹಿಂದೆ ಯುವಕ ತನ್ನ ಮೊಬೈಲಿನಲ್ಲಿ ಒಬ್ಬರಿಗೆ ಕರೆ ಮಾಡುತ್ತಿದ್ದ. ಈ ವೇಳೆ ಕರೆ ಮಿಸ್ ಆಗಿ ವೃದ್ಧೆಗೆ ಹೋಗಿದೆ. ಫೋನ್ ರಿಸೀವ್ ಮಾಡಿದ ವೃದ್ಧೆ ಆಗಿನಿಂದ ಯುವಕನ ಜೊತೆ ಮಾತನಾಡುತ್ತಿದ್ದಾರೆ. ಮೊಬೈಲಿನಲ್ಲಿ ಮಾತನಾಡುವಾಗ ಇಬ್ಬರ ನಡುವೆ ಪ್ರೀತಿ ಶುರುವಾಗಿದೆ.ಇದನ್ನೂ ಓದಿ: ವಧುವಿನ ತಾಯಿಯ ಜೊತೆ ವರನ ತಂದೆ ಪರಾರಿ- ಯುವ ಪ್ರೇಮಿಗಳ ಮದುವೆ ರದ್ದು

    ನನ್ನ ಪತಿ ನಿಧನರಾಗಿದ್ದಾರೆ. ನೀನು ನನ್ನನ್ನು ಮದುವೆಯಾದ ಬಳಿಕ ನನ್ನ ಊರಿನಲ್ಲೇ ವಾಸಿಸಬೇಕು ಎಂದು ವೃದ್ಧೆ ಯುವಕನಿಗೆ ಷರತ್ತು ವಿಧಿಸಿದ್ದಾರೆ. ವೃದ್ಧೆಯ ಮಾತು ಕೇಳಿ ಯುವಕ ಶನಿವಾರ ಅವರ ಮನೆಗೆ ತಲುಪಿದ್ದು, ಅಲ್ಲಿ ಇಬ್ಬರು ಮದುವೆಯಾಗಿದ್ದಾರೆ. ತಾಯಿ 20 ವರ್ಷದ ಯುವಕನ ಜೊತೆ ಮದುವೆಯಾದ ವಿಷಯ ತಿಳಿದ ಮಗಳು ತನ್ನ ಪತಿಯ ಮನೆಯಿಂದ ತವರು ಮನೆಗೆ ಬಂದು ಇದನ್ನು ವಿರೋಧಿಸಿದ್ದಾಳೆ.

  • ಅತ್ತ ಇತ್ತ ನೋಡಿ ಹಾಲು ಕದ್ದ ಪೊಲೀಸ್ – ವೈರಲ್ ಆಯ್ತು ‘ಮಿಲ್ಕ್ ಚೋರ್’ ವಿಡಿಯೋ

    ಅತ್ತ ಇತ್ತ ನೋಡಿ ಹಾಲು ಕದ್ದ ಪೊಲೀಸ್ – ವೈರಲ್ ಆಯ್ತು ‘ಮಿಲ್ಕ್ ಚೋರ್’ ವಿಡಿಯೋ

    – ಪೊಲೀಸ್ ಸಿಬ್ಬಂದಿಯಿಂದ್ಲೇ ಕಳ್ಳತನ

    ಲಕ್ನೋ: ಖದೀಮರಿಗೆ ಬುದ್ಧಿ ಕಲಿಸಬೇಕಾದ ಪೊಲೀಸ್ ಸಿಬ್ಬಂದಿಯೇ ಕಳ್ಳತನ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

    ಉತ್ತರ ಪ್ರದೇಶದ ನೋಯ್ಡಾದಲ್ಲಿ ಈ ಘಟನೆ ನಡೆದಿದೆ. ಭಾನುವಾರ ಬೆಳಗ್ಗೆ ಅಂಗಡಿಯೊಂದರ ಮುಂದೆ ಇಟ್ಟಿದ್ದ ಬಾಕ್ಸ್ ಗಳಲ್ಲಿ ಇದ್ದ 2 ಹಾಲಿನ ಪ್ಯಾಕೆಟ್‍ನನ್ನು ಕರ್ತವ್ಯ ನಿರತ ಪೊಲೀಸ್ ಪೇದೆ ಕದ್ದಿದ್ದಾರೆ. ಈ ದೃಶ್ಯವು ಅಂಗಡಿ ಮುಂದೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಳ್ಳರನ್ನು ಹಿಡಿಯಬೇಕಿದ್ದ ಪೊಲೀಸರೇ ಕಳ್ಳತನ ಮಾಡಿ ಸಾಕ್ಷಿ ಸಮೇತ ಸಿಕ್ಕಿಬಿದ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.

    ನಸುಕಿನ ಜಾವದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸ್ ಪೇದೆ ಕಳ್ಳತನ ಮಾಡಿದ್ದಾರೆ. ಅಂಗಡಿ ಮುಂದೆ ಹಾಲಿನ ಪ್ಯಾಕೆಟ್‍ಗಳನ್ನು ತುಂಬಿದ್ದ ಬಾಕ್ಸ್ ಗಳನ್ನು ಇರಿಸಲಾಗಿತ್ತು. ಇದನ್ನು ಪೊಲೀಸ್ ವಾಹನದಲ್ಲಿ ಗಸ್ತು ತಿರುಗುತ್ತಿದ್ದ ಪೇದೆ ಗಮನಿಸಿದ್ದು, ವಾಹನವನ್ನು ಅಂಗಡಿ ಮುಂದೆ ನಿಲ್ಲಿಸಿ, ಬಳಿಕ ವಾಹನದಿಂದ ಇಳಿದು ಅಕ್ಕ ಪಕ್ಕ ನೋಡಿ ಬಾಕ್ಸ್ ಗಳಲ್ಲಿ ಇದ್ದ 2 ಹಾಲಿನ ಪ್ಯಾಕೆಟ್‍ಗಳನ್ನು ಕದ್ದಿದ್ದಾರೆ. ನಂತರ ಅದನ್ನು ವಾಹನದಲ್ಲಿದ್ದ ಇನ್ನೋರ್ವ ಸಿಬ್ಬಂದಿಗೆ ಕೊಟ್ಟು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ದೃಶ್ಯಗಳು ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವಿಡಿಯೋ ನೋಡಿದ ನೆಟ್ಟಿಗರು ಪೊಲೀಸ್ ಇಲಾಖೆಯನ್ನು ಟೀಕಿಸುತ್ತಿದ್ದಾರೆ. ‘ಮಿಲ್ಕ್ ಚೋರ್’, ‘ಖಾಕಿ ಚೋರ್’ ಎಂದು ಕಮೆಂಟ್ ಮಾಡುತ್ತಾ ಪೊಲೀಸರ ಕಾಲೆಳೆಯುತ್ತಿದ್ದಾರೆ.