Tag: lucknow

  • ಒಂದೇ ಹುಡ್ಗಿಯನ್ನ ಪ್ರೀತಿಸಿದ ಇಬ್ಬರು ಶಿಕ್ಷಕರು – ಇಬ್ಬರ ಸಾವಿನಲ್ಲಿ ತ್ರಿಕೋನ ಪ್ರೇಮ ಕಥೆ ಅಂತ್ಯ

    ಒಂದೇ ಹುಡ್ಗಿಯನ್ನ ಪ್ರೀತಿಸಿದ ಇಬ್ಬರು ಶಿಕ್ಷಕರು – ಇಬ್ಬರ ಸಾವಿನಲ್ಲಿ ತ್ರಿಕೋನ ಪ್ರೇಮ ಕಥೆ ಅಂತ್ಯ

    – 3 ವರ್ಷದಿಂದ ಒಬ್ಬ, 2 ತಿಂಗಳಿಂದ ಇನ್ನೊಬ್ಬ
    – ಶಿಕ್ಷಕನನ್ನು ಕೊಲೆ ಮಾಡಿ ಆತ್ಮಹತ್ಯೆ ಮಾಡ್ಕೊಂಡ

    ಲಕ್ನೋ: ಒಂದೇ ಹುಡುಗಿಯ ಹಿಂದೆ ಇಬ್ಬರು ಶಿಕ್ಷಕರು ಬಿದ್ದು, ಇಬ್ಬರೂ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ನಡೆದಿದೆ.

    ಸೂರಜ್ ಪಾಂಡೆ ಮತ್ತು ಅನೂಜ್ ಮೃತ ಶಿಕ್ಷಕರು. ಒಂದೇ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ಇಬ್ಬರು ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದರು. ಈ ವಿಚಾರದಲ್ಲಿ ಇಬ್ಬರ ಮಧ್ಯೆ ಗಲಾಟೆಯಾಗಿ ಅನೂಜ್, ಪಾಂಡೆಯನ್ನು ಕೊಲೆ ಮಾಡಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಏನಿದು ಪ್ರಕರಣ?
    ಮಿರ್ಜಾಪುರದ ವಿಂಧ್ಯಾಚಲ್ ಪೊಲೀಸ್ ಠಾಣೆ ಪ್ರದೇಶದ ರಾಪುರಿ ಗ್ರಾಮದ ಬಾವಿಯೊಂದರಲ್ಲಿ ಶಿಕ್ಷಕ ಸೂರಜ್ ಪಾಂಡೆ ಮೃತದೇಹ ಪೊಲೀಸರಿಗೆ ಸಿಕ್ಕಿತ್ತು. ಪೊಲೀಸರು ತನಿಖೆ ಕೈಗೊಂಡಿದ್ದು, ಕೊಲೆಯ ರಹಸ್ಯವನ್ನು ಭೇದಿಸಿದ್ದಾರೆ. ಪಾಂಡೆ ಜೊತೆ ಶಾಲೆಯಲ್ಲಿ ಶಿಕ್ಷಕರಾಗಿದ್ದ ಇಬ್ಬರು ಸಹ ಶಿಕ್ಷಕರು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮೃತ ಸೂರಜ್ ಪಾಂಡೆ, ಅನೂಜ್ ಮತ್ತು ರತ್ನೇಶ್ ಮೂವರು ಖುರೈತಿ ಎಂಬ ಸಾರ್ವಜನಿಕ ಶಾಲೆಯಲ್ಲಿ ಖಾಸಗಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಪಾಂಡೆ ಮತ್ತು ಅನೂಜ್ ಒಳ್ಳೆಯ ಸ್ನೇಹಿತರಾಗಿದ್ದರು. ಅನೂಜ್ ಮೂರು ವರ್ಷಗಳಿಂದ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ ಕಳೆದ ಎರಡು ತಿಂಗಳಿನಿಂದ ಅದೇ ಹುಡುಗಿ ಮೃತ ಪಾಂಡೆ ಜೊತೆ ಫೋನ್‍ನಲ್ಲಿ ಮಾತನಾಡಲು ಪ್ರಾರಂಭಿಸಿದ್ದಳು. ಈ ವಿಚಾರ ಅನೂಜ್‍ಗೆ ಗೊತ್ತಾಗಿ ಆಕೆಯ ಜೊತೆ ಫೋನಿನಲ್ಲಿ ಮಾತಾಡಬೇಡ ಎಂದು ಪಾಂಡೆಗೆ ಬುದ್ಧಿವಾದ ಹೇಳಿದ್ದಾನೆ. ಆದರೆ ಸೂರಜ್ ಪಾಂಡೆ ಆತನ ಮಾತನ್ನು ಕಡೆಗಣಿಸಿದ್ದಾನೆ.

    ಕೊನೆಗೆ ಅನೂಜ್ ತನ್ನ ಗೆಳೆಯ ರತ್ನೇಶ್ ಜೊತೆ ಸೇರಿ ಫೆ. 11ರಂದು ಮಫ್ಲರ್ ನಿಂದ ಪಾಂಡೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಅಲ್ಲದೇ ಪಾಂಡೆಯ ಬೈಕನ್ನು ಸುಮಾರು 2 ಕಿ.ಮೀ ದೂರಕ್ಕೆ ಎಸೆದಿದ್ದಾನೆ. ಇತ್ತ ಕೊಲೆ ಮಾಡಿದ ಮರುದಿನ ಅನೂಜ್ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಘಟನೆಯನ್ನು ವಿವರಿಸಿದ್ದಾರೆ.

    ಸೂರಜ್ ಪಾಂಡೆ ನಾಪತ್ತೆಯಾದ ಬಗ್ಗೆ ದೂರು ದಾಖಲಿಸಿದ್ದೆವು. ಸೂರಜ್ ಪಾಂಡೆ ಕುಟುಂಬದವರು ಮತ್ತು ಸ್ಥಳೀಯರು ಅನೂಜ್ ಮತ್ತು ಸೂರಜ್ ಬೈಕಿನಲ್ಲಿ ಹೋಗಿದ್ದನ್ನು ನೋಡಿದ್ದರು. ಹೀಗಾಗಿ ಪೊಲೀಸರು ಕೂಡ ಆರೋಪಿ ಅನೂಜ್‍ನನ್ನು ಹುಡುಕುತ್ತಿದ್ದರು. ಆದರೆ ಅನೂಜ್ ತಾನೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸದ್ಯಕ್ಕೆ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಸ್ನೇಹಿತ ರತ್ನೇಶ್‍ನನ್ನು ಬಂಧಿಸಿದ್ದು, ತಪ್ಪನ್ನು ಒಪ್ಪಿಕೊಂಡಿದ್ದಾನೆ. ಮೃತ ಸೂರಜ್ ಪಾಂಡೆಯ ಬೈಕನ್ನು ಸಹ ವಶಪಡಿಸಿಕೊಂಡಿದ್ದೇವೆ. ಒಂದೇ ಹುಡುಗಿಯನ್ನು ಇಬ್ಬರು ಪ್ರೀತಿ ಮಾಡಿದ್ದಕ್ಕೆ ಈ ಕೃತ್ಯ ನಡೆದಿದೆ ಎಂದು ಎಸ್‍ಪಿ ಧರ್ಮವೀರ್ ಸಿಂಗ್ ತಿಳಿಸಿದ್ದಾರೆ.

  • ಮಗಳ ಮದ್ವೆಗೆ ಆಹ್ವಾನಿಸಿದ್ದ ಆಟೋ ಚಾಲಕನನ್ನು ಭೇಟಿ ಮಾಡಿದ ಮೋದಿ

    ಮಗಳ ಮದ್ವೆಗೆ ಆಹ್ವಾನಿಸಿದ್ದ ಆಟೋ ಚಾಲಕನನ್ನು ಭೇಟಿ ಮಾಡಿದ ಮೋದಿ

    ಲಕ್ನೋ: ಆಟೋ ಡೈವರ್ ತನ್ನ ಮಗಳ ಮದುವೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷ ಆಹ್ವಾನ ನೀಡಿದ್ದರು. ಇದೀಗ ಮೋದಿ ಆ ಆಟೋ ಚಾಲಕರನ್ನು ಭೇಟಿಯಾಗಿದ್ದಾರೆ.

    ಭಾನುವಾರ ಪ್ರಧಾನಿ ಮೋದಿ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಆಟೋ ಡ್ರೈವರ್ ಮಂಗಲ್ ಕೇವತ್‍ರನ್ನು ಭೇಟಿ ಮಾಡಿದ್ದಾರೆ. ಮೋದಿ ಅವರು ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಯಲ್ಲಿ ಕಳೆದ ಭಾನುವಾರ ಪ್ರವಾಸ ಕೈಗೊಂಡಿದ್ದರು. ಇದೇ ವೇಳೆ ತಮ್ಮ ಮಗಳ ಮದುವೆಗೆ ಆಹ್ವಾನ ನೀಡಿದ್ದ ಆಟೋ ಚಾಲಕ ಮಂಗಲ್ ಕೇವತ್‍ರನ್ನು ಭೇಟಿ ಮಾಡಿದ್ದಾರೆ.

    ಕೇವತ್ ಮತ್ತು ಕುಟುಂಬದವರ ಆರೋಗ್ಯ, ಯೋಗಕ್ಷೇಮವನ್ನು ಮೋದಿ ಅವರು ವಿಚಾರಿಸಿದ್ದಾರೆ. ಕೇವತ್ ಮತ್ತು ಅವರ ಕುಟುಂಬದವರು ತಮ್ಮ ಗ್ರಾಮದಲ್ಲಿರುವ ಗಂಗಾ ನದಿ ದಡವನ್ನು ಸ್ವಚ್ಛಗೊಳಿಸಲು ಮುಂದಾಗಿದ್ದರು. ಹೀಗಾಗಿ ಸ್ವಚ್ಛ ಭಾರತ್ ಅಭಿಯಾನಕ್ಕೆ ಕೇವತ್ ನೀಡಿದ ಕೊಡುಗೆಯನ್ನು ಮೋದಿ ಅವರು ಶ್ಲಾಘಿಸಿದ್ದಾರೆ.

    ಆಟೋ ಡ್ರೈವರ್:
    ವಾರಣಾಸಿಯ ದೊಮ್ರಿ ಎಂಬ ಗ್ರಾಮದ ನಿವಾಸಿ ಮಂಗಲ್ ಕೇವತ್, ಪ್ರಧಾನಿ ಮೋದಿ ಅವರಿಗೆ ತಮ್ಮ ಮಗಳ ಮದುವೆಗೆ ಬರುವಂತೆ ಆಹ್ವಾನ ಪತ್ರಿಕೆ ಕಳುಹಿಸಿದ್ದರು. ಕೇವತ್ ಪ್ರಧಾನ ಮಂತ್ರಿಗಳ ಕಚೇರಿಗೆ ಹೋಗಿ ಫೆಬ್ರವರಿ 12 ರಂದು ತಮ್ಮ ಮಗಳ ಮದುವೆಗೆ ಬರಬೇಕೆಂದು ಪತ್ರವನ್ನು ಕಳುಹಿಸಿದ್ದರು.

    ನಾನು ವೈಯಕ್ತಿಕವಾಗಿ ದೆಹಲಿಯ ಪ್ರಧಾನ ಮಂತ್ರಿಗಳ ಕಚೇರಿಗೆ ಹೋಗಿ ಮಗಳ ಮದುವೆಗೆ ಬರುವಂತೆ ಪ್ರಧಾನಿ ಮೋದಿ ಅವರಿಗೆ ಆಮಂತ್ರಣ ಪತ್ರಿಕೆ ನೀಡಿದ್ದೆ. ಪ್ರಧಾನಿ ಮೋದಿ ನಮ್ಮ ದೇವರು ಮತ್ತು ಗುರು. ಹೀಗಾಗಿ ಅವರಿಗೆ ಮೊದಲ ಆಮಂತ್ರಣ ಪತ್ರಿಕೆಯನ್ನು ಕಳುಹಿಸಿದ್ದೆ. ನಂತರ ಮೋದಿ ಅವರು ನನ್ನ ಮಗಳ ಮದುವೆ ಶುಭಾಶಯ ಕೋರಿ ಪತ್ರ ಬರೆದಿದ್ದರು. ನಿಜಕ್ಕೂ ನಮಗೆ ತುಂಬಾ ಸಂತಸವಾಗಿತ್ತು ಎಂದು ಕೇವತ್ ತಿಳಿಸಿದ್ದರು.

  • ಮದ್ವೆಗೆ ಒಪ್ಪದ ಪೋಷಕರು – ಠಾಣೆಯಲ್ಲೇ ಜೋಡಿಯ ವಿವಾಹ

    ಮದ್ವೆಗೆ ಒಪ್ಪದ ಪೋಷಕರು – ಠಾಣೆಯಲ್ಲೇ ಜೋಡಿಯ ವಿವಾಹ

    – ಪ್ರೀತಿಯನ್ನು ನಿರಾಕರಿಸಿದ ಯುವತಿಯ ಪೋಷಕರು

    ಲಕ್ನೋ: ಪೋಷಕರು ಮದುವೆಗೆ ಒಪ್ಪದ ಕಾರಣ ಪೊಲೀಸ್ ಠಾಣೆಯಲ್ಲೇ ಜೋಡಿಯ ವಿವಾಹ ಮಾಡಿಸಿದ ಅಪರೂಪದ ಸಂಗತಿಯೊಂದು ಉತ್ತರ ಪ್ರದೇಶದ ಲಕ್ನೋ ಪೊಲೀಸ್ ಠಾಣೆಯಲ್ಲಿ ನಡೆದಿದೆ.

    ಮನೀಶ್ ಹಾಗೂ ಕಿರಣ್ ಪೊಲೀಸ್ ಠಾಣೆಯಲ್ಲಿ ಮದುವೆಯಾದ ಜೋಡಿ. ಮನೀಶ್ ಹಾಗೂ ಕಿರಣ್ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇವರ ಪ್ರೀತಿಗೆ ಯುವತಿಯ ಮನೆಯವರು ಒಪ್ಪಲಿಲ್ಲ. ಹಾಗಾಗಿ ಇಬ್ಬರು ಸಹಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದರು.

    ಪ್ರೇಮಿಗಳ ಸಹಾಯಕ್ಕೆ ಪೊಲೀಸರು ನಿಂತಿದ್ದು, ಪೊಲೀಸ್ ಠಾಣೆಯಲ್ಲಿಯೇ ಇಬ್ಬರ ಮದುವೆ ಮಾಡಿಸಿದ್ದಾರೆ. ಈ ಮದುವೆ ಲಕ್ನೋನ ಮಹಿಳಾ ಪೊಲೀಸ್ ಠಾಣೆಯಲ್ಲಿ ಜರುಗಿತು. ಮದುವೆಯಲ್ಲಿ ಬೇರೆ ಪೊಲೀಸ್ ಅಧಿಕಾರಿಗಳ ಜೊತೆ ಪೊಲೀಸ್ ಕಮಿಷನರ್ ಕೂಡ ಭಾಗವಹಿಸಿದ್ದರು. ಸದ್ಯ ಮದುವೆಯ ಫೋಟೋಗಳು ವೈರಲ್ ಆಗುತ್ತಿದೆ.

    ಪ್ರಿಯಕರನ ಮನೆಯಲ್ಲಿ ವಾಸಿಸಲು ಯುವತಿ ತನ್ನ ಮನೆಯನ್ನು ಬಿಟ್ಟು ಬಂದಿದ್ದಳು. ಇದನ್ನು ತಿಳಿದ ಆಕೆಯ ಪೋಷಕರು ಬೆದರಿಕೆ ಹಾಕಲು ಶುರು ಮಾಡಿದ್ದರು. ಬೆದರಿಕೆಗೆ ಹೆದರಿದ ಪ್ರೇಮಿಗಳು ಸಹಾಯಕ್ಕಾಗಿ ಪೊಲೀಸ್ ಕಮಿಷನರ್ ಮನೆಗೆ ತಲುಪಿದ್ದರು.

    ಪ್ರೇಮಿಗಳ ಮಾತು ಕೇಳಿ ಪೊಲೀಸ್ ಕಮಿಷನರ್ ಇಬ್ಬರ ಮದುವೆ ಮಾಡಿಸಲು ನಿರ್ಧರಿಸಿದ್ದರು. ಶಾರದಾ ಚೌಧರಿ ಈ ಮದುವೆಯ ನೇತೃತ್ವ ವಹಿಸಿ ಸೋಮವಾರ ಮನೀಶ್ ಹಾಗೂ ಕಿರಣ್ ಮದುವೆಯನ್ನು ಪೊಲೀಸ್ ಠಾಣೆಯಲ್ಲಿ ಮಾಡಿಸಿದ್ದರು.

  • ಪ್ರಿಯಕರನನ್ನೇ ಮದ್ವೆ ಆಗ್ತೇನೆ ಎಂದಿದ್ದಕ್ಕೆ ಸಹೋದರಿಯ ಗುಪ್ತಾಂಗಕ್ಕೆ ಗುಂಡಿಕ್ಕಿದ

    ಪ್ರಿಯಕರನನ್ನೇ ಮದ್ವೆ ಆಗ್ತೇನೆ ಎಂದಿದ್ದಕ್ಕೆ ಸಹೋದರಿಯ ಗುಪ್ತಾಂಗಕ್ಕೆ ಗುಂಡಿಕ್ಕಿದ

    – ಕೊಲೆ ಮಾಡಿ 3 ಗಂಟೆ ವಿಷಯ ಮುಚ್ಚಿಟ್ಟಿದ್ದ ಕುಟುಂಬಸ್ಥರು
    – ಆಸ್ಪತ್ರೆಗೆ ಹೋದಾಗ ಪ್ರಕರಣ ಬೆಳಕಿಗೆ

    ಲಕ್ನೋ: ಸಹೋದರಿ ಪ್ರೀತಿಸುತ್ತಿರುವ ವಿಷಯ ತಿಳಿದು ಸಹೋದರ ಸಂಬಂಧಿ ಆಕೆಯ ಗುಪ್ತಾಂಗಕ್ಕೆ ಗುಂಡಿಕ್ಕಿ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಮೀರತ್‍ನಲ್ಲಿ ನಡೆದಿದೆ.

    ಟೀನಾ ಚೌಧರಿ ಕೊಲೆಯಾದ ಯುವತಿ. 12ನೇ ತರಗತಿಯಲ್ಲಿ ಓದುತ್ತಿರುವ ಟೀನಾ ಯುವಕನನ್ನು ಪ್ರೀತಿಸುತ್ತಿದ್ದಳು. ಈ ವಿಷಯ ತಿಳಿದ ಆಕೆ ಸಹೋದರ ಸಂಬಂಧಿ ಪ್ರಶಾಂತ್ ರೊಚ್ಚಿಗೆದ್ದು ಆಕೆಯ ಗುಪ್ತಾಂಗಕ್ಕೆ ಗುಂಡಿಕ್ಕಿ ಕೊಲೆ ಮಾಡಿದ್ದಾನೆ. ಕುಟುಂಬಸ್ಥರು ಈ ಕೊಲೆ ವಿಷಯವನ್ನು ಮೂರು ಗಂಟೆಗಳ ಕಾಲ ಮುಚ್ಚಿಟ್ಟಿದ್ದರು. ಬಳಿಕ ಟೀನಾಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಈ ವಿಷಯ ಪೊಲೀಸರಿಗೆ ತಿಳಿದು ಬಂತು. ಇದನ್ನೂ ಓದಿ: ಅವಳನ್ನ ಕರ್ಕೊಂಡು ಹೋಗ್ತೀನಿ, ಇಲ್ಲಾಂದ್ರೆ ಶೂಟ್ ಮಾಡ್ಕೋತಿನಿ: ಪಾಗಲ್ ಪ್ರೇಮಿಯ ಹುಚ್ಚಾಟ

    ದರೋಡೆಕೋರರು ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ಬಂದು ಕೊಲೆ ಮಾಡಲು ಯತ್ನಿಸಿದರು ಎಂದು ಮೊದಲು ಕುಟುಂಬಸ್ಥರು ಸುಳ್ಳು ಹೇಳಲು ಪ್ರಯತ್ನಿಸಿದರು. ಈ ಮೂಲಕ ಸಾಕ್ಷಿಗಳನ್ನು ನಾಶ ಮಾಡಲು ಕುಟುಂಬಸ್ಥರು ಪ್ರಯತ್ನಿಸಿದ್ದರು. ಮರಣೋತ್ತರ ವರದಿ ಬಂದಾಗ ಯುವತಿಗೆ ಮೂರು ಗುಂಡು ತಗುಲಿದ ವಿಷಯ ಬೆಳಕಿಗೆ ಬಂತು. ಮೊದಲ ಗುಂಡು ಟೀನಾಳ ತೊಡೆಯ ಭಾಗದಲ್ಲಿ, ಎರಡನೇಯ ಗುಂಡು ಆಕೆಯ ಗುಪ್ತಾಂಗದಲ್ಲಿ ಹಾಗೂ ಮೂರನೇ ಗುಂಡು ಆಕೆಯ ಸೊಂಟದಲ್ಲಿ ಪತ್ತೆಯಾಗಿತ್ತು.

    ಸದ್ಯ ಪೊಲೀಸರು ಪ್ರಶಾಂತ್, ಆತನ ಪೋಷಕರ ಹಾಗೂ ಟೀನಾಳ ಪೋಷಕರ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ. ಈ ಬಗ್ಗೆ ಎಸ್‍ಪಿ ಅವಿನಾಶ್ ಪಾಂಡೆ ಪ್ರತಿಕ್ರಿಯಿಸಿ, ಘಟನೆ ನಡೆದ ಸ್ಥಳದಲ್ಲಿ ಸಾಕಷ್ಟು ರಕ್ತ ಚೆಲ್ಲಿದ್ದು, ಯಾರೋ ಅದನ್ನು ಕ್ಲೀನ್ ಮಾಡಲು ಪ್ರಯತ್ನಿಸಿದ್ದರು. ಸ್ಥಳದಲ್ಲಿ ಬಳೆಗಳ ಚೂರು ಪತ್ತೆಯಾಗಿದೆ. ಇದರಿಂದ ಟೀನಾಳನ್ನು ಬಲವಂತ ಮಾಡಲಾಗಿದೆ ಎಂಬುದು ತಿಳಿದು ಬಂದಿದೆ. ಸದ್ಯ ಪ್ರಶಾಂತ್, ಆತನ ಪೋಷಕರನ್ನು ಹಾಗೂ ಟೀನಾಳ ಪೋಷಕರನ್ನು ಅರೆಸ್ಟ್ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

    ಟೀನಾ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಆದರೆ ಇದು ಆಕೆಯ ಕುಟುಂಬಸ್ಥರಿಗೆ ಇಷ್ಟವಿರಲಿಲ್ಲ. ಅಲ್ಲದೆ ಈ ಸಂಬಂಧವನ್ನು ಅವರು ನಿರಾಕರಿಸಿದ್ದರು. ಟೀನಾ ನಾನು ಆ ಯುವಕನನ್ನೇ ಮದುವೆಯಾಗುತ್ತೇನೆ ಎಂದು ಹಠ ಹಿಡಿದಾಗ ಆಕೆಯ ಪೋಷಕರು ಆಕೆಯನ್ನು ರೂಮಿನಲ್ಲಿ ಲಾಕ್ ಮಾಡಿದ್ದರು. ಟೀನಾಳ ಮನೆಯ ಹತ್ತಿರದಲ್ಲೇ ಪ್ರಶಾಂತ್ ಮನೆ ಕೂಡ ಇತ್ತು. ಹಲವು ದಿನಗಳಿಂದ ಪ್ರಶಾಂತ್‍ಗೆ ಈ ಸಂಬಂಧ ಇಷ್ಟವಿರಲಿಲ್ಲ.

    ಶನಿವಾರ ಟೀನಾ ಯಾವುದೋ ಕೆಲಸದ ಮೇಲೆ ಪ್ರಶಾಂತ್ ಮನೆಗೆ ಹೋಗಿದ್ದಳು. ಈ ವೇಳೆ ಪ್ರಶಾಂತ್, ಟೀನಾಳಿಗೆ ಪ್ರೀತಿ-ಪ್ರೇಮದಿಂದ ದೂರ ಇರುವಂತೆ ಹೇಳಿದ್ದಾನೆ. ಬಳಿಕ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಟೀನಾ, ನಾನು ನನ್ನ ಪ್ರಿಯಕರನನ್ನೇ ಮದುವೆಯಾಗುತ್ತೇನೆ ಎಂದು ಹೇಳಿದ್ದಾಳೆ. ಇದರಿಂದ ಕೋಪಗೊಂಡ ಪ್ರಶಾಂತ್ ಆಕೆಯ ಮೇಲೆ ಮೂರು ಬಾರಿ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ. ಪರಿಣಾಮ ಟೀನಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

  • ಹುಡುಗನ ಸಹವಾಸ ಬಿಡು ಎಂದಿದ್ದಕ್ಕೆ ತಾಯಿಯನ್ನೇ ಕೊಂದ ಅಪ್ರಾಪ್ತೆ

    ಹುಡುಗನ ಸಹವಾಸ ಬಿಡು ಎಂದಿದ್ದಕ್ಕೆ ತಾಯಿಯನ್ನೇ ಕೊಂದ ಅಪ್ರಾಪ್ತೆ

    – ಪ್ರೀತಿಗೆ ಅಡ್ಡಿಯಾದ ಅಮ್ಮನನ್ನೇ ಮುಗಿಸಿದ್ಳು

    ಲಕ್ನೋ: ಅಪ್ರಾಪ್ತ ಮಗಳು ತನ್ನ ಪ್ರೀತಿಗಾಗಿ ಹೆತ್ತ ತಾಯಿಯನ್ನೇ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‍ನಲ್ಲಿ ನಡೆದಿದೆ.

    ಶಶಿ ಶುಕ್ಲಾ ಕೊಲೆಯಾದ ಹೆಡ್ ಕಾನ್ಸ್‌ಸ್ಟೇಬಲ್. ಮೃತ ಶುಕ್ಲಾ ದೆಹಲಿಯ ಬ್ರಿಜ್ ವಿಹಾರ್ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್‌ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದರು. ಶುಕ್ಲಾರನ್ನ ಸ್ವಂತ ಅಪ್ರಾಪ್ತ ಮಗಳು ತನ್ನ ಪ್ರಿಯಕರನ ಜೊತೆ ಸೇರಿಕೊಂಡು ಸಂಚು ರೂಪಿಸಿ ಕೊಲೆ ಮಾಡಿದ್ದಾಳೆ.

    ಪೊಲೀಸರು ಈ ಕುರಿತು ತನಿಖೆ ಮಾಡುವಾಗ ಈ ಕೃತ್ಯದಲ್ಲಿ ಮಗಳ ಭಾಗಿಯಾಗಿದ್ದಾಳೆ ಎಂದು ಶಂಕಿಸಿದ್ದಾರೆ. ನಂತರ ಪೊಲೀಸರು ಅಪ್ರಾಪ್ತ ಮಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡಿದಾಗ ಸತ್ಯವನ್ನು ಬಾಯಿಬಿಟ್ಟಿದ್ದಾಳೆ. ಮೃತ ಶುಕ್ಲಾ ಮಗಳ ಪ್ರೀತಿಗೆ ಅಡ್ಡಿಯಾಗಿದ್ದಕ್ಕೆ ಈ ಕೊಲೆ ನಡೆದಿದೆ ಎಂದು ತನಿಖೆ ವೇಳೆ ತಿಳಿದುಬಂದಿದೆ.

    ಮೃತ ಶುಕ್ಲಾ ಅಪ್ರಾಪ್ತ ಮಗಳಿಗೆ ಪ್ರೀತಿಸುತ್ತಿರುವ ಹುಡುಗನ ಸಹವಾಸ ಬಿಡು ಎಂದು ಪದೇ ಪದೇ ಬುದ್ಧಿವಾದ ಹೇಳುತ್ತಿದ್ದರು. ಆದರೆ ಇದರಿಂದ ಅಪ್ರಾಪ್ತ ಮಗಳು ಕೋಪಗೊಂಡು ಪ್ರಿಯಕರನ ಜೊತೆ ಸೇರಿಕೊಂಡು ತಾಯಿಯನ್ನೇ ಕೊಲೆ ಮಾಡಲು ನಿರ್ಧರಿಸಿದ್ದಳು. ಅದರಂತೆಯೇ ತಾಯಿಯನ್ನು ಕೊಲೆ ಮಾಡಿದ್ದಾಳೆ.

    ವಿಚಾರಣೆ ವೇಳೆ ತಾನೇ ಕೊಲೆ ಮಾಡಿರುವುದಾಗಿ ಆರೋಪಿ ಅಪ್ರಾಪ್ತ ಮಗಳು ಮತ್ತು ಆಕೆಯ ಪ್ರೇಮಿ ಒಪ್ಪಿಕೊಂಡಿದ್ದಾರೆ. ಇದೀಗ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

  • ಇಬ್ಬರು ಮಕ್ಕಳನ್ನು ಕೊಂದು ದಂಪತಿ ಆತ್ಮಹತ್ಯೆಗೆ ಶರಣು

    ಇಬ್ಬರು ಮಕ್ಕಳನ್ನು ಕೊಂದು ದಂಪತಿ ಆತ್ಮಹತ್ಯೆಗೆ ಶರಣು

    – ಪೊಲೀಸರಿಗೆ ಕರೆ ಮಾಡಿ ಮಕ್ಕಳನ್ನು ಕೊಂದೆ ಎಂದ
    – ಆರ್ಥಿಕ ಸಮಸ್ಯೆಯಿಂದ ಕೊಲೆ ಮಾಡಿ ಸೂಸೈಡ್

    ಲಕ್ನೋ: ಆರ್ಥಿಕ ಸಮಸ್ಯೆಯಿಂದ ಬೇಸತ್ತ ದಂಪತಿ ತನ್ನ ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದಿದೆ.

    ಚೇತನ್, ಋತು, ಹರ್ಷ್ ಹಾಗೂ ಗುಣ್‍ಗುಣ್ ಮೃತ ದುರ್ದೈವಿಗಳು. ಚೇತನ್ ಹಾಗೂ ಋತು ತಮ್ಮ ಮಕ್ಕಳ ಊಟದಲ್ಲಿ ನಿದ್ದೆ ಮಾತ್ರೆ ಹಾಕಿದ್ದರು. ಈ ವೇಳೆ ಇಬ್ಬರು ಪ್ರಜ್ಞೆ ತಪ್ಪಿದ್ದಾಗ ದಂಪತಿ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ಬಳಿಕ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ತಮ್ಮ ಮಕ್ಕಳನ್ನು ಕೊಲೆ ಮಾಡಿದ ಬಳಿಕ ಚೇತನ್ ಪೊಲೀಸರಿಗೆ ಕರೆ ಮಾಡಿದ್ದಾರೆ. ಕರೆ ಮಾಡಿ ನಾನು ನನ್ನ ಇಬ್ಬರು ಮಕ್ಕಳನ್ನು ಕೊಂದಿದ್ದೇನೆ. ಈಗ ನಾನು ಹಾಗೂ ನನ್ನ ಪತ್ನಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ. ಈ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಆದರೆ ಅಷ್ಟರಲ್ಲಿ ನಾಲ್ವರು ಮೃತಪಟ್ಟಿದ್ದರು.

    ಐಜಿ ವಿಜಯ್ ಸಿಂಗ್ ಮೀಣಾ ವಿಧಿವಿಜ್ಞಾನ ಪ್ರಯೋಗಾಲಯ ತಂಡದ ಜೊತೆಗೆ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ಮಕ್ಕಳ ಮೃತದೇಹ ಒಂದು ರೂಮಿನಲ್ಲಿ ಪತ್ತೆಯಾದರೆ, ಮತ್ತೊಂದು ರೂಮಿನಲ್ಲಿ ದಂಪತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಘಟನೆ ಸ್ಥಳದಲ್ಲಿ ಸೂಸೈಡ್ ನೋಟ್ ಪತ್ತೆಯಾಗಿತ್ತು.

    ಈ ಬಗ್ಗೆ ಐಜಿ ವಿಯಯ್ ಪ್ರತಿಕ್ರಿಯಿಸಿ, ದಂಪತಿ ಮಕ್ಕಳ ಊಟದಲ್ಲಿ ನಿದ್ದೆ ಮಾತ್ರೆ ಹಾಕಿ ಪ್ರಜ್ಞೆ ತಪ್ಪಿದ ನಂತರ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಬಳಿಕ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳದಲ್ಲಿ ಡೆತ್‍ನೋಟ್ ಪತ್ತೆಯಾಗಿದ್ದು, ಅದರಲ್ಲಿ ಪತಿ-ಪತ್ನಿ ಜಗಳ, ಆರ್ಥಿಕ ಖಿನ್ನತೆ ಸೇರಿದಂತೆ ಹಲವು ಕಾರಣಗಳನ್ನು ಬರೆದಿದ್ದಾರೆ.

  • ಭೀಕರ ಅಪಘಾತ – 14 ಮಂದಿ ಸಾವು, 30ಕ್ಕೂ ಹೆಚ್ಚು ಜನರು ಗಂಭೀರ

    ಭೀಕರ ಅಪಘಾತ – 14 ಮಂದಿ ಸಾವು, 30ಕ್ಕೂ ಹೆಚ್ಚು ಜನರು ಗಂಭೀರ

    – ಟ್ರಕ್‍ಗೆ ಹಿಂದಿನಿಂದ ಡಿಕ್ಕಿ ಹೊಡೆದ ಬಸ್

    ಲಕ್ನೋ: ಟ್ರಕ್‍ಗೆ ಖಾಸಗಿ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ 14 ಮಂದಿ ಪ್ರಯಾಣಿಕರು ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಫಿರೋಜಾಬಾದ್‍ನ ಆಗ್ರಾ-ಲಕ್ನೋ ಎಕ್ಸ್ ಪ್ರೆಸ್‍ವೇಯಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಇಟವಾದಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಲೀಪರ್ ಬಸ್‍ನಲ್ಲಿ ಸುಮಾರು 40-45 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಅವರಲ್ಲಿ 35 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

    ಫಿರೋಜಾಬಾದ್‍ನ ನಾಗ್ಲಾ ಖಂಗರ್ ಪೊಲೀಸ್ ಠಾಣಾ ಪ್ರದೇಶದಲ್ಲಿ ಬುಧವಾರ ರಾತ್ರಿ ಸುಮಾರು 10 ಗಂಟೆಗೆ ಈ ಅಪಘಾತ ಸಂಭವಿಸಿದೆ. ಸ್ಲೀಪರ್ ಬಸ್ ದೆಹಲಿಯಿಂದ ಬಿಹಾರ್ ನ ಮೋತಿಹಾರಿಗೆ ಹೋಗುತ್ತಿತ್ತು. ಈ ಡಬಲ್ ಡೆಕ್ಕರ್ ಬಸ್ ಕಂಟೇನರ್ ಟ್ರಕ್‍ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಕುಮಾರ್ ತಿಳಿಸಿದ್ದಾರೆ.

    ಪರಿಣಾಮ ಬಸ್ಸಿನಲ್ಲಿದ್ದ 14 ಮಂದಿ ಪ್ರಯಾಣಿಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಸ್ಥಳಕ್ಕೆ ಬೇಗ ಹೋಗಿ ಪರಿಶೀಲನೆ ನಡೆಸಿ ಪರಿಹಾರ ನೀಡಿ. ಜೊತೆಗೆ ಗಾಯಾಳುಗಳಿಗೆ ಸರಿಯಾದ ಚಿಕಿತ್ಸೆ ಕೊಡಿಸುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿದ್ದಾರೆ.

  • ಮಕ್ಕಳನ್ನ ಮಲಗಿಸಿ ಪ್ರಿಯಕರನ ಜೊತೆ ಬೆಡ್‍ರೂಮಿಗೆ ಹೋದ್ಳು

    ಮಕ್ಕಳನ್ನ ಮಲಗಿಸಿ ಪ್ರಿಯಕರನ ಜೊತೆ ಬೆಡ್‍ರೂಮಿಗೆ ಹೋದ್ಳು

    – ಪತಿ ಬಾಗಿಲು ಬಡೀತಿದ್ದಂತೆ ಹಿಂಬಾಗಿಲಿನಿಂದ ಲವ್ವರ್ ಎಸ್ಕೇಪ್
    – 4 ಮಕ್ಕಳಿದ್ರೂ 17ರ ಹುಡುಗನ ಜೊತೆ ಸಂಬಂಧ

    ಲಕ್ನೋ: ಪ್ರಿಯಕರನ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಗಲೇ ಪತಿಯ ಕೈಗೆ ಪತ್ನಿ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿರುವ ಘಟನೆ ಉತ್ತರ ಪ್ರದೇಶದ ಸಂತಕಬೀರ್ ನಗರ ಜಿಲ್ಲೆಯಲ್ಲಿ ನಡೆದಿದೆ.

    ಮದುವೆಯಾಗಿ ಮಕ್ಕಳಿದ್ದರೂ 17ರ ಹುಡುಗನ ಜೊತೆ ಮಹಿಳೆ ಅನೈತಿಕ ಸಂಬಂಧ ಹೊಂದಿದ್ದಳು. ಪತಿ ಕೆಲಸಕ್ಕೆ ಹೋಗುತ್ತಿದ್ದಂತೆ ಪ್ರಿಯಕರನನ್ನು ಮನೆಗೆ ಕರೆಸಿ ಅನೈತಿಕ ಸಂಬಂಧ ಹೊಂದುತ್ತಿದ್ದಳು.

    ಏನಿದು ಪ್ರಕರಣ?:
    ಜಿಲ್ಲೆಯ ಮಾಘರ್ ಪಟ್ಟಣದ ಮಹಿಳೆಗೆ ಮದುವೆಯಾಗಿ ನಾಲ್ಕು ಮಕ್ಕಳಿದ್ದಾರೆ. ಕೆಲವು ದಿನಗಳ ಹಿಂದೆ ಆಕೆಗೆ ಒಂದು ಫೋನ್ ಕಾಲ್ ಬಂದಿತ್ತು. ಸಿದ್ಧಾರ್ಥ್ ನಗರ ಜಿಲ್ಲೆಯ ಬನ್ಸಿ ಪ್ರದೇಶದ 17 ವರ್ಷದ ಹುಡುಗ ಮಹಿಳೆ ಜೊತೆ ಮಾತನಾಡಿದ್ದ. ಈ ವೇಳೆ ಇಬ್ಬರು ಪರಸ್ಪರ ಪರಿಚಯ ಮಾಡಿಕೊಂಡಿದ್ದಾರೆ. ದಿನಕಳೆದಂತೆ ಇಬ್ಬರು ಅನೈತಿಕ ಸಂಬಂಧ ಹೊಂದಿದ್ದರು. ಪತಿ ಮನೆಯಲ್ಲಿ ಇಲ್ಲದಿದ್ದಾಗ ಮಹಿಳೆ ತನ್ನ ಪ್ರಿಯಕರನನ್ನು ಮನೆಗೆ ಕರೆಸಿಕೊಂಡು ಲೈಂಗಿಕ ಸಂಬಂಧ ಹೊಂದುತ್ತಿದ್ದಳು.

    ಒಂದು ದಿನ ಪತಿ ಕೆಲಸಕ್ಕೆಂದು ಹೊರ ಹೋಗಿದ್ದನು. ಈ ವೇಳೆ ಮಕ್ಕಳು ನಿದ್ದೆ ಮಾಡುತ್ತಿದ್ದರು. ಆಗ ತನ್ನ ಗೆಳೆಯನಿಗೆ ಫೋನ್ ಮಾಡಿ ಕರೆಸಿಕೊಂಡಿದ್ದಾಳೆ. ನಂತರ ಇಬ್ಬರು ಬೆಡ್ ರೂಮಿಗೆ ಹೋಗಿ ಸೆಕ್ಸ್ ಮಾಡುತ್ತಿದ್ದರು. ಸ್ವಲ್ಪ ಸಮಯದ ನಂತರ ಮಹಿಳೆಯ ಪತಿ ಬಂದು ಬಾಗಿಲು ಬಡಿದಿದ್ದಾನೆ. ಆಗ ಪ್ರಿಯಕರ ಭಯಗೊಂಡು ಮನೆಯ ಹಿಂಬಾಗಿಲಿನಿಂದ ಓಡಿಹೋಗಿದ್ದಾನೆ.

    ಪತಿ ಮನೆಯ ಒಳಗೆ ಪ್ರವೇಶ ಮಾಡುತ್ತಿದ್ದಂತೆ ಹುಡುಗ ಓಡಿಹೋಗುತ್ತಿರುವುದನ್ನು ಗಮನಿಸಿದ ಆತ ಕಳ್ಳ ಎಂದು ಕಿರುಚಿಕೊಂಡಿದ್ದನು. ಕೂಡಲೇ ಸ್ಥಳೀಯರು ಹುಡುಗನನ್ನು ಹಿಂಡಿದುಕೊಂಡು ಕಳ್ಳತನ ಮಾಡಿದ್ದಾನೆ ಎಂದು ಹೊಡೆಯಲು ಆರಂಭಿಸಿದ್ದರು. ಆದರೆ ಪತಿ ರೂಮಿಗೆ ಹೋಗಿ ನೋಡಿದಾಗ ಪತ್ನಿ ಅರೆ ನಗ್ನವಾಗಿ ಇರುವುದು ಕಂಡು ಬಂದಿತ್ತು. ಆಗ ಇಬ್ಬರ ನಡುವೆ ಅನೈತಿಕ ಸಂಬಂಧವಿದೆ ಎಂದು ಇಬ್ಬರ ಸಂಬಂಧದ ಕುರಿತು ಪ್ರಶ್ನೆ ಮಾಡಿದ್ದನು.

    ಈ ವೇಳೆ ಪತ್ನಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಳು. ನಂತರ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಹುಡುಗನನ್ನು ವಶಕ್ಕೆ ಪಡೆದು ಸ್ಥಳದಿಂದ ಕರೆದುಕೊಂಡು ಹೋಗಿದ್ದಾರೆ. ಸದ್ಯಕ್ಕೆ ಈ ಕುರಿತು ದೂರು ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸಿದ್ದಾರೆ.

  • ತ್ರಿವಳಿ ತಲಾಕ್ ನೀಡಿ ಪತ್ನಿಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ

    ತ್ರಿವಳಿ ತಲಾಕ್ ನೀಡಿ ಪತ್ನಿಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ

    – ವರದಕ್ಷಿಣೆ ನೀಡಲಿಲ್ಲ ಎಂದು ಮನೆಯಿಂದ ಹೊರಗೆ ಕಳುಹಿಸಿದ
    – ಮನೆಯಿಂದ ಹೋಗಲು ನಿರಾಕರಿಸಿದ್ದಕ್ಕೆ ಬೆಂಕಿ ಹಚ್ಚಿದ

    ಲಕ್ನೋ: ಪತಿಯೊಬ್ಬ ತನ್ನ ಪತ್ನಿಗೆ ತ್ರಿವಳಿ ತಲಾಕ್ ನೀಡಿ ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ ಘಟನೆ ಉತ್ತರ ಪ್ರದೇಶದ ರಾಮ್‍ಪುರದಲ್ಲಿ ನಡೆದಿದೆ.

    ಸೀಮಾ ಸಾವು- ಬದುಕಿನ ನಡುವೆ ಹೋರಾಡುತ್ತಿರುವ ಮಹಿಳೆ. ವರದಕ್ಷಿಣೆ ನೀಡಲಿಲ್ಲ ಎಂದು ಸೀಮಾ ಪತಿ ಮೊಹಮ್ಮದ್ ಆರೀಫ್ ಹಾಗೂ ಆತನ ಕುಟುಂಬಸ್ಥರು ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಈ ಘಟನೆಯಿಂದ ಸೀಮಾ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಕಳೆದ ಎರಡು ವರ್ಷಗಳ ಹಿಂದೆ ಮೊಹಮ್ಮದ್ ಆರೀಫ್ ಜೊತೆ ಸೀಮಾಳ ಮದುವೆಯಾಗಿತ್ತು. ಮದುವೆಯಾದ ನಂತರ ಆರೀಫ್ ಕುಟುಂಬಸ್ಥರು ವರದಕ್ಷಿಣೆ ತರುವಂತೆ ಸೀಮಾಳಿಗೆ ಕಿರುಕುಳ ನೀಡುತ್ತಿದ್ದರು. ಭಾನುವಾರ ಈ ವಿಷಯಕ್ಕಾಗಿ ಸೀಮಾ ಹಾಗೂ ಆರೀಫ್ ಕುಟುಂಬಸ್ಥರ ನಡುವೆ ಜಗಳ ನಡೆಯಿತು. ಈ ವೇಳೆ ಪತಿ ಆರೀಫ್, ಸೀಮಾಳನ್ನು ಮನೆಯಿಂದ ಹೊರಗೆ ಕಳುಹಿಸಲು ಮುಂದಾದನು. ಮನೆಯಿಂದ ಹೊರ ಹೋಗಲು ಸೀಮಾ ನಿರಾಕರಿಸಿದ್ದಕ್ಕೆ ಆರೀಫ್ ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ.

    ಸೀಮಾಳ ಕಿರುಚಾಟದ ಶಬ್ಧ ಕೇಳಿ ಅಕ್ಕಪಕ್ಕದ ಮನೆಯವರು ಸ್ಥಳಕ್ಕೆ ಓಡಿ ಬಂದಿದ್ದಾರೆ. ಬಳಿಕ ಬೆಂಕಿಯನ್ನು ಆರಿಸಿ ಸೀಮಾಳನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋದರು. ಮಹಿಳೆಯ ಸ್ಥಿತಿ ಗಂಭೀರವಾಗಿದ್ದ ಕಾರಣ ಜಿಲ್ಲಾಸ್ಪತ್ರೆ ವೈದ್ಯರು ಆಕೆಯನ್ನು ಮೂರದಾಬಾದ್‍ನ ಟಿಎಂಯೂ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದರು. ಈ ಘಟನೆಯಿಂದ ಮಹಿಳೆಯ ದೇಹ ಶೇ. 80ರಷ್ಟು ಸುಟ್ಟು ಹೋಗಿದೆ. ಇನ್ನು ಸೀಮಾಳ ಪೋಷಕರು ಆರೀಫ್ ಹಾಗೂ ಆತನ ಕುಟುಂಬಸ್ಥರ ವಿರುದ್ಧ ದೂರು ದಾಖಲಿಸಿದ್ದಾರೆ.

    ಈ ಘಟನೆ ಬಗ್ಗೆ ಪೊಲೀಸ್ ಅಧಿಕಾರಿ ಅಮರೀಶ್ ಕುಮಾರ್ ಪ್ರತಿಕ್ರಿಯಿಸಿ, ಪತಿಯ ಕುಟುಂಬಸ್ಥರ ವಿರುದ್ಧ ದೂರು ದಾಖಲಿಸಿಕೊಂಡಿದ್ದೇವೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುತ್ತೇವೆ. ಮ್ಯಾಜಿಸ್ಟ್ರೇಟ್ ಜೊತೆ ನಮ್ಮ ತಂಡವೊಂದು ಮಹಿಳೆ ಹೇಳಿಕೆ ಪಡೆಯಲು ಟಿಎಂಯೂ ಮೆಡಿಕಲ್ ಕಾಲೇಜಿಗೆ ಹೋಗಿದ್ದಾರೆ ಎಂದು ತಿಳಿಸಿದ್ದಾರೆ.

  • ‘ನಾನಲ್ಲ ದೆವ್ವ ಕೊಲೆ ಮಾಡಿದ್ದು’ – ಮಗನ ಕತ್ತು ಹಿಸುಕಿ ಕೊಂದು ಭೂತಗಳ ಕಥೆ ಕಟ್ಟಿದ ಮಲತಾಯಿ

    ‘ನಾನಲ್ಲ ದೆವ್ವ ಕೊಲೆ ಮಾಡಿದ್ದು’ – ಮಗನ ಕತ್ತು ಹಿಸುಕಿ ಕೊಂದು ಭೂತಗಳ ಕಥೆ ಕಟ್ಟಿದ ಮಲತಾಯಿ

    – ಮಲತಾಯಿ, ತಂದೆಯನ್ನು ಬಂಧಿಸಿದ ಪೊಲೀಸರು

    ಲಕ್ನೋ: 5 ವರ್ಷದ ಬಾಲಕನನ್ನು ಕತ್ತು ಹಿಸುಕಿ ಕೊಂದ ಮಲತಾಯಿ ಪೊಲೀಸರ ಬಳಿ ದೆವ್ವಗಳು ಕೊಲೆ ಮಾಡಿದೆ ಎಂದು ಕಥೆ ಕಟ್ಟಿದ ಘಟನೆ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

    ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯ ಗಿರಿಯಾ ಖಲ್ಸಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೃತ್ಯವೆಸಗಿದ ಮಲತಾಯಿ ಹಾಗೂ ತಂದೆ ಚಂದನ್ ಮೇಹ್ತಾನನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕನ ಮೃತದೇಹ ಮಹಿಳೆಯ ಕೋಣೆಯಲ್ಲಿ ಪತ್ತೆಯಾಗಿತ್ತು. ಆತನ ದೇಹದ ಮೇಲೆ, ಮುಖದ ಮೇಲೆ ಗಾಯಗಳು ಆಗಿದ್ದವು. ಈ ಬಗ್ಗೆ ವಿಚಾರಣೆ ವೇಳೆ ಮಹಿಳೆಯನ್ನು ಕೇಳಿದರೆ, ನಾನು ಕೊಲೆ ಮಾಡಿಲ್ಲ. ದೆವ್ವ, ಭೂತಗಳು ಬಾಲಕನನ್ನು ಕೊಲೆ ಮಾಡಿದೆ ಎಂದು ಕಥೆ ಕಟ್ಟಿದ್ದಾಳೆ.

    ಮಹಿಳೆಯ ದೆವ್ವದ ಕಥೆ ಕೇಳಿ ಗ್ರಾಮಸ್ಥರು ಭಯಗೊಂಡಿದ್ದಾರೆ. ಈಗಾಗಲೇ ಬಾಲಕನ ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ವರದಿಗಾಗಿ ಕಾಯುತ್ತಿದ್ದಾರೆ.

    ಈ ಕೊಲೆ ಬಗ್ಗೆ ಗ್ರಾಮಸ್ಥರನ್ನು ವಿಚಾರಿಸಿದಾಗ, ಕೊಲೆಯಾದ ಬಾಲಕ ಮಹಿಳೆಯ ಎರಡನೇ ಪತಿ ಚಂದನ್ ಮೇಹ್ತಾನ ಮಗ. ಮೊದಲನೇ ಪತಿ ಬಿಟ್ಟುಹೋದ ಬಳಿಕ ಮಹಿಳೆ ಎರಡನೇ ಮದುವೆ ಆಗಿದ್ದಳು. ಚಂದನ್ ಮೇಹ್ತಾನ ಪತ್ನಿ 4 ವರ್ಷದ ಹಿಂದೆ ಮೃತಪಟ್ಟಿದ್ದಳು. ಆತನಿಗೆ 5 ವರ್ಷದ ಮಗ ಹಾಗೂ 7 ವರ್ಷದ ಮಗಳಿದ್ದಳು. ಆತನಿಗೂ ಕೂಡ ಇದು ಎರಡನೇ ಮದುವೆ ಆಗಿದೆ. ಮೊದ ಮೊದಲು ಮಹಿಳೆ ಮಕ್ಕಳನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದಳು.

    ಆದರೆ ಸಮಯ ಕಳೆಯುತ್ತಿದ್ದಂತೆ ಆಕೆಯ ವರ್ತನೆ ಬದಲಾಗಿತ್ತು. ಮಕ್ಕಳನ್ನು ಆಕೆ ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ಬಹುಶಃ ಮಕ್ಕಳನ್ನು ಸಾಕಬೇಕಲ್ಲ ಎಂಬ ಕಾರಣಕ್ಕೆ ಮಹಿಳೆ ಬಾಲಕನನ್ನು ಕೊಲೆ ಮಾಡಿರಬಹುದು ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.