Tag: lucknow

  • ಹೂತಿದ್ದ ಮಗುವಿನ ಮೃತದೇಹ ನಾಪತ್ತೆ

    ಹೂತಿದ್ದ ಮಗುವಿನ ಮೃತದೇಹ ನಾಪತ್ತೆ

    ಲಕ್ನೋ: ಸಮಾಧಿಯಲ್ಲಿ ಹೂತಿರುವ 4 ವರ್ಷದ ಮಗುವಿನ ಮೃತದೇಹ ಕಾಣೆಯಾಗಿದೆ ಎಂದು ಉತ್ತರ ಪ್ರದೇಶದ ಬುಲಂದ್‌ಶಹರ್ ನ ಖಾನ್ಪುರ್ ಪೊಲೀಸ್ ಠಾಣೆ ಪ್ರದೇಶದಿಂದ ಆಘಾತಕಾರಿ ಪ್ರಕರಣ ಹೊರಬಿದ್ದಿದೆ

    ಉತ್ತರ ಪ್ರದೇಶದ ಥೋನಾ ಗ್ರಾಮದಲ್ಲಿ 4 ವರ್ಷದ ಮಗುವೊಂದು ಜ್ವರದಿಂದ ಬುಧವಾರ ಮೃತಪಟ್ಟಿದೆ. ಮಗುವಿನ ಮರಣದ ನಂತರ ಕುಟುಂಬಸ್ಥರು ಮಗುವಿನ ಅಂತ್ಯಕ್ರಿಯೆ ಮಾಡಿ ಮನೆಗೆ ಬಂದಿದ್ದರು. ಮೃತ ದೇಹವನ್ನು ಆ ರಾತ್ರಿ ಸಮಾಧಿಯಿಂದ ಹೊರತೆಗೆದಿದ್ದಾರೆ ಎಂಬ ವಿಷಯ ಊರ ತುಂಬ ಹಬ್ಬಿತ್ತು.

    ಮಗು ದೇಹ ಸಮಾಧಿಯಿಂದ ಕಾಣೆಯಾಗಿದೆ ಎಂಬ ಸುದ್ದಿಯಿಂದ ಅನುಮಾನಗೊಂಡ ಕುಟುಂಬಸ್ಥರು ಸಮಾಧಿಯನ್ನು ಅಗೆದು ನೋಡಿದ್ದಾರೆ. ಆದರೆ ಮಗುವಿನ ಮೃತದೇಹ ಸಮಾಧಿ ಮಾಡಿದ ಸ್ಥಳದಲ್ಲಿ ಇರಲಿಲ್ಲ. ಮಗುವಿನ ಶವ ಕಾಣೆಯಾಗಿರುವುದು ಕುಟುಂಬಸ್ಥರಿಗೆ ಪಕ್ಕಾ ಆಗಿದೆ. ಈ ವಿಚಾರವಾಗಿ ಮೃತ ಮಗುವಿನ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ.

    ಮಾಟ-ಮಂತ್ರಕ್ಕಾಗಿ ಮಗುವಿನ ದೇಹವನ್ನು ತೆಗೆಯಲಾಗಿದೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಮಗುವಿನ ದೇಹವನ್ನು ಸಮಾಧಿಯಿಂದ ತೆಗೆದಿರುವುದು ಅಸಹ್ಯಕರ ಕೃತ್ಯ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

    ಘಟನೆಯ ಸುದ್ದಿ ತಿಳಿದ ಕೂಡಲೇ ಸುತ್ತಮುತ್ತಲಿನ ಪ್ರದೇಶದ ಜನರು ಕುಟುಂಬ ಸದಸ್ಯರೊಂದಿಗೆ ಸಮಾಧಿ ಇರುವ ಸ್ಥಳದಲ್ಲಿ ಜಮಾಯಿಸಿದ್ದಾರೆ. ಮಗುವಿನ ಶವ ಸಮಾಧಿಯಿಂದ ಕಣ್ಮರೆಯಾಗಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಬಂದು ತನಿಖೆ ನಡೆಸಿದ್ದಾರೆ.

  • ಮರಳು ತುಂಬಿದ್ದ ಲಾರಿ, ಕಾರಿನ ಮೇಲೆ ಬಿದ್ದು 8 ಮಂದಿ ಸ್ಥಳದಲ್ಲೇ ಸಾವು

    ಮರಳು ತುಂಬಿದ್ದ ಲಾರಿ, ಕಾರಿನ ಮೇಲೆ ಬಿದ್ದು 8 ಮಂದಿ ಸ್ಥಳದಲ್ಲೇ ಸಾವು

    ಲಕ್ನೋ: ಮರಳು ತುಂಬಿದ ಲಾರಿ ಸ್ಕಾರ್ಪಿಯೋ ಕಾರೊಂದರ ಮೇಲೆ ಮಗುಚಿಬಿದ್ದ ಪರಿಣಾಮ 8 ಮಂದಿ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಕೌಸಂಭಿ ಜಿಲ್ಲೆಯಲ್ಲಿ ನಡೆದಿದೆ.

    10 ಜನರು ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಹಿಂದಿರುಗುವ ವೇಳೆ ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿದ್ದರು. ಆಗ ರಸ್ತೆಯಲ್ಲಿ ಚಲಿಸುತ್ತಿದ್ದ ಮರಳು ತುಂಬಿದ ಟ್ರಕ್ ಇದ್ದಕ್ಕಿದ್ದಂತೆ ಕಾರಿನ ಮೇಲೆ ಮಗುಚಿ ಬಿದ್ದಿದೆ.

    ಈ ದುರ್ಘಟನೆಯಲ್ಲಿ ಕಾರಿನಲ್ಲಿದ್ದ 10 ಜನರಲ್ಲಿ 7 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಓರ್ವ ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಆಕೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.

    ಅಪಘಾತ ನಡೆದ ಸ್ಥಳಕ್ಕೆ ಕೌಸಂಭಿ ಪೊಲೀಸರು ಬಂದು ತನಿಖೆ ನಡೆಸುತ್ತಿದ್ದಾರೆ. ಟ್ರಕ್ ಟಯರ್ ಸ್ಪೋಟಗೊಂಡ ಪರಿಣಾಮ ವಾಹನ ಚಾಲಕನ ನಿಯಂತ್ರಣಕ್ಕೆ ಸಿಗದೆ ಮಗುಚಿಬಿದ್ದಿದೆ. ಆಗ ಹತ್ತಿರದಲ್ಲೇ ಇದ್ದ ಕಾರಿನ ಮೇಲೆ ಬಿದ್ದ ಪರಿಣಾಮ ಕಾರಿನಲ್ಲಿವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

    ಈ ಘಟನೆಯ ಕುರಿತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ. ಕೂಡಲೇ ಪರಿಹಾರ ಕೈಗೊಳ್ಳುವಂತೆ, ಮತ್ತು ಅಪಘಾತದಲ್ಲಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

  • ತಂದೆಯನ್ನು ಮರಕ್ಕೆ ಕಟ್ಟಿ ಚಾಕುವಿನಿಂದ ಇರಿದು ಹತ್ಯೆಗೈದ ಮಗ

    ತಂದೆಯನ್ನು ಮರಕ್ಕೆ ಕಟ್ಟಿ ಚಾಕುವಿನಿಂದ ಇರಿದು ಹತ್ಯೆಗೈದ ಮಗ

    -ಪತಿಯ ಕೃತ್ಯಕ್ಕೆ ಪತ್ನಿ ಸಾಥ್

    ಲಖನೌ: ಅಪ್ಪನನ್ನು ಮರಕ್ಕೆ ಕಟ್ಟಿ ಮಗ ಮತ್ತು ಸೊಸೆ ಬರ್ಬರಬವಾಗಿ ಹತ್ಯೆ ಮಾಡಿದ ಘಟನೆ ಉತ್ತರಪ್ರದೇಶದ ಬರಾಬಂಕಿ ಜಿಲ್ಲೆಯಲ್ಲಿ ನಡೆದಿದೆ.

    ಮೃತ ದುರ್ದವೈವಿಯನ್ನು ಶ್ರೀರಾಮ್ ಗೌತಮ್(55) ಎಂದು ಗುರುತಿಸಲಾಗಿದೆ. ಆರೋಪಿ ಮನೋಜ್ ಪತ್ನಿ ಜೊತೆ ಸೇರಿ ತಂದೆಯನ್ನ ಕೊಲೆಗೈದಿದ್ದಾನೆ.

    ಶ್ರೀರಾಮ್, ಮಗ ಮನೋಜ್ ಮತ್ತು ಆತನ ಹೆಂಡತಿ ಮೂವರು ಒಂದೇ ಮನೆಯಲ್ಲಿ ವಾಸವಾಗಿದ್ದರು. ಶ್ರೀರಾಮ್ ಕಷ್ಟಪಟ್ಟು ಒಂದಿಷ್ಟು ಆಸ್ತಿಯನ್ನು ಮಾಡಿದ್ದನು. ಇವರ ಕುಟುಂಬದಲ್ಲಿ ಆಸ್ತಿ ವಿಚಾರಕ್ಕಾಗಿ ಆಗಾಗ ಜಗಳವಾಗುತ್ತಿತ್ತು. ಮನೋಜ್ ಆಸ್ತಿಯನ್ನು ತನ್ನ ಹೆಸರಿಗೆ ಬರೆಯುವಂತೆ ತಂದೆಯನ್ನು ಪೀಡಿಸುತ್ತಿದ್ದನಂತೆ. ಆದರೆ ಶ್ರೀರಾಮ್ ಇದಕ್ಕೆ ಒಪ್ಪುತ್ತಿರಲಿಲ್ಲ. ಇದೇ ವಿಷಯವಾಗಿ ಮನೆಯಲ್ಲಿ ನಿತ್ಯ ಜಗಳವಾಗುತ್ತಿತ್ತು.

     

    ಆಸ್ತಿ ವಿಷಯಕ್ಕೆ ಜಗಳ ಪ್ರಾರಂಭವಾಗಿದೆ. ಮಗ ಸಿಟ್ಟಿನಿಂದ ಅಪ್ಪನನ್ನು ಮನೆಯಿಂದ ಹೊರಗೆ ಎಳೆದುಕೊಂಡು ಹೋಗಿ ಮರಕ್ಕೆ ಕಟ್ಟಿ ಹಾಕಿದ್ದಾನೆ. ಅಪ್ಪ ಆಸ್ತಿಕೊಡಲು ಒಪ್ಪಿಲ್ಲ. ಆಗ ಮಗನು ಕೋಪದಿಂದ ಶ್ರೀರಾಮ್‍ನ ಕುತ್ತಿಗೆಗೆ ಚಾಕು ಇರಿದು ಕೊಲೆ ಮಾಡಿದ್ದಾನೆ. ನೆರೆಹೊರೆಯವರು ತಡೆಯಲು ಹೋದಾಗ ಅವರನ್ನು ಕೊಲೆ ಮಾಡುವುದಾಗಿ ಬೆದರಿಸಿದ್ದಾನೆ.

    ತಂದೆಯನ್ನು ಕೊಲೆ ಮಾಡಿದ ಮನೋಜ್ ಹೆಂಡತಿ ಜೊತೆ ಸ್ಥಳದಿಂದ ಪರಾರಿಯಾಗಿದ್ದನು. ಇತ್ತ ಪೊಲೀಸರು ಸ್ಥಳಕ್ಕೆ ಭೇಟಿ ನೀಡ ಪರಿಶೀಲನೆ ನಡೆಸಿದ್ದಾರೆ. ಇತ್ತ ಎಸ್ಕೇಪ್ ಆಗಿದ್ದ ಮಗ ಮತ್ತು ಸೊಸೆಯನ್ನ ಬಂಧಿಸಿರುವ ಪೊಲೀಸರು ಇಬ್ಬರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

     

  • ಭೀಕರ ರಸ್ತೆ ಅಪಘಾತ- 6 ಮಕ್ಕಳು ಸೇರಿ 14 ಮಂದಿ ದಾರುಣ ಸಾವು

    ಭೀಕರ ರಸ್ತೆ ಅಪಘಾತ- 6 ಮಕ್ಕಳು ಸೇರಿ 14 ಮಂದಿ ದಾರುಣ ಸಾವು

    – ಮದ್ವೆಗೆ ಹೋಗಿ ವಾಪಸ್ಸಾಗ್ತಿದ್ದಾಗ ಅಗಘಡ

    ಲಕ್ನೋ: ಬೊಲೆರೋ ಹಾಗೂ ಟ್ರಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ 6 ಮಂದಿ ಮಕ್ಕಳು ಸೇರಿ ಒಟ್ಟು 14 ಮಂದಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಉತ್ತರಪ್ರದೇಶದ ಪ್ರತಾಪ್ ಗರ್ ನಲ್ಲಿ ನಡೆದಿದೆ.

    ಈ ಘಟನೆ ಮಣಿಕಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಪ್ರಯಾಗರಾಜ್- ಲಕ್ನೋ ಹೆದ್ದಾರಿಯಲ್ಲಿ ಗುರುವಾರ ಮಧ್ಯರಾತ್ರಿ ನಡೆದಿದೆ. ಹೆದ್ದಾರಿಯಲ್ಲಿ ನಿಲ್ಲಿಸಿದ್ದ ಲಾರಿಗೆ, ಬೊಲೆರೋ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ನಡೆದಿದೆ.

    ಬೊಲೆರೋದಲ್ಲಿದ್ದವರು ನಬಬ್ ಗಂಜ್ ಪ್ರದೇಶದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

    ಘಟನೆ ಸಂಬಂಧ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಟ್ವೀಟ್ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತೆರಳುವಂತೆ ಸೂಚಿಸಿದ್ದಾರೆ.

  • ಮನೆ ಚಾವಣಿ ಮೇಲೆ ಪತ್ತೆಯಾಯ್ತು ಕಂತೆ ಕಂತೆ ಹಣ, ಚಿನ್ನಾಭರಣ

    ಮನೆ ಚಾವಣಿ ಮೇಲೆ ಪತ್ತೆಯಾಯ್ತು ಕಂತೆ ಕಂತೆ ಹಣ, ಚಿನ್ನಾಭರಣ

    – ನಿದ್ದೆಯಿಂದ ಎಚ್ಚರಗೊಂಡ ಕುಟುಂಬಕ್ಕೆ ಅಚ್ಚರಿ

    ಲಕ್ನೋ: ಅಚ್ಚರಿಯ ಘಟನೆಯೊಂದರಲ್ಲಿ ಉತ್ತರ ಪ್ರದೇಶದ ಮೀರತ್ ನಿವಾಸಿಯಾಗಿರುವ ವರುಣ್ ಶರ್ಮಾ ಮನೆಯ ಚಾವಣಿಯ ಮೇಲೆ 2 ಬ್ಯಾಗ್ ತುಂಬಾ ಕಂತೆ ಕಂತೆ ಹಣ ಸಿಕ್ಕಿದ್ದು, ಕುಟುಂಬಸ್ಥರಿಗೆ ಅನಿರೀಕ್ಷಿತ ಅಚ್ಚರಿ ಮೂಡಿಸಿತ್ತು. ಕೂಡಲೇ ಎಚ್ಚೆತ್ತ ವರುಣ್ ಪೊಲೀಸರಿಗೆ ಹಣ ಸಿಕ್ಕ ಬಗ್ಗೆ ಮಾಹಿತಿ ನೀಡಿದ್ದ.

    ಮನೆಯ ಚಾವಣಿ ಮೇಲೆ ಸಿಕ್ಕ ಬ್ಯಾಗ್‍ನಲ್ಲಿ 40 ಲಕ್ಷ ರೂ. ಹಣ ಇರುವುದನ್ನು ಪೊಲೀಸರು ಖಚಿತಪಡಿಸಿದ್ದು, ಚಿನ್ನಾಭರಣದ ಮೌಲ್ಯಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ದಿನೇಶ್ ಬಾಗೆಲ್ ತಿಳಿಸಿದ್ದಾರೆ.

    ಪೊಲೀಸ್ ಮಾಹಿತಿ ಅನ್ವಯ ಹಣ ಸಿಕ್ಕ ಮನೆಯ ಸಮೀಪವಿದ್ದ ಉದ್ಯಮಿ ಪವನ್ ಸಿಂಘಾಲ್ ಅವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಈ ಹಿನ್ನೆಲೆಯಲ್ಲಿ ಮೆಯ ಚಾವಣಿ ಮೇಲೆ ಹಣ ಪತ್ತೆಯಾದ ಕೂಡಲೇ ಆತ ಪೊಲೀಸರಿಗೆ ಮಾಹಿತಿ ನೀಡಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿಯ ಮನೆಯಲ್ಲಿ ಕೆಲಸ ಮಾಡುವ ಸೆಕ್ಯೂರಿಟಿ ಗಾರ್ಡ್ ಕಳ್ಳತನದ ಬಳಿಕ ನಾಪತ್ತೆಯಾಗಿದ್ದ. ಇದರಿಂದ ಪೊಲೀಸರು ಆತನ ಮೇಲೆ ಅನುಮಾನದೊಂದಿಗೆ ಪ್ರಕರಣದ ತನಿಖೆಯನ್ನು ನಡೆಸಿದ್ದರು.

    ವಿಚಾರಣೆಯ ಸಂದರ್ಭದಲ್ಲಿ ಮನೆಯ ಕೆಲಸಗಾರನಾಗಿ 2 ವರ್ಷದ ಹಿಂದೆ ಕೆಲಸ ಬಿಟ್ಟಿದ್ದ ನೇಪಾಳಿ ರಾಜು ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ಆರೋಪಿ ಸೆಕ್ಯೂರಿಟಿಗಾರ್ಡ್ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ. ಉದ್ಯಮಿಯ ಮನೆಯಲ್ಲಿ ಕೆಲಸಗಾರನಾಗಿದ್ದ ರಾಜು, ಕೆಲಸ ಬಿಟ್ಟ ಬಳಿಕವೂ ಮನೆಗೆ ಸಾಕಷ್ಟು ಭಾರೀ ಭೇಟಿ ನೀಡಿದ್ದ. ಈ ಸಂದರ್ಭದಲ್ಲಿ ಮನೆಯ ಸೆಕ್ಯೂರಿಟಿಗಾರ್ಡ್ ನನ್ನು ಪರಿಚಯ ಮಾಡಿಕೊಂಡು ಕಳ್ಳತನ ಮಾಡುವ ಪ್ಲಾನ್ ಮಾಡಿದ್ದ. ಇದರಂತೆ ಬುಧವಾರ ಮನೆಯಲ್ಲಿ ಕಳ್ಳನ ಮಾಡಿದ್ದ ಇಬ್ಬರು ಆರೋಪಿಗಳು ಆ ಬಳಿಕ ಕದ್ದ ಹಣ ಚಿನ್ನಾಭರಣಗಳನ್ನು ಹಂಚಿಕೊಂಡು ತೆರಳಿದ್ದರು ಎಂಬ ಮಾಹಿತಿ ವಿಚಾರಣೆ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ.

  • ಬಂದೂಕಿನೊಂದಿಗೆ ಸೆಲ್ಫಿ ತೆಗೆದು ಪೋಸ್ಟ್ ಮಾಡಿ ಪೊಲೀಸರ ಬಲೆಗೆ ಬಿದ್ದ

    ಬಂದೂಕಿನೊಂದಿಗೆ ಸೆಲ್ಫಿ ತೆಗೆದು ಪೋಸ್ಟ್ ಮಾಡಿ ಪೊಲೀಸರ ಬಲೆಗೆ ಬಿದ್ದ

    ಲಕ್ನೋ: ಬಂದೂಕಿನೊಂದಿಗೆ ಸೆಲ್ಫಿ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ವ್ಯಕ್ತಿಯನ್ನು ಉತ್ತರಪ್ರದೇಶದ ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ವ್ಯಕ್ತಿ ಚೋಕ್ಡಾ ಗ್ರಾಮದ ನಿವಾಸಿಯಾಗಿರುವ ಕರಣ್ ಕುಮಾರ್ ಎಂದು ಗುರುತಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಫೋಟೋ ಜೊತೆಗೆ ವಿವಿಧ ಅಪರಾಧಗಳಿಗೆ ಬೆಲೆ ಪಟ್ಟಿಯನ್ನು ಬರೆದು ಗನ್ ನೊಂದಿಗೆ ಸೆಲ್ಫಿಯನ್ನು ತೆಗೆದು ಪೋಸ್ಟ್ ಮಾಡಿದ್ದಾನೆ.

    ಸೋಶಿಯಲ್ ಮೀಡಿಯಾದಲ್ಲಿ ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ಬುಧವಾರ ಆರೋಪಿಯನ್ನು ಬಂಧಿಸಿದ್ದಾರೆ. ಗನ್‍ನೊಂದಿಗೆ ಸೆಲ್ಫಿ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

  • ಗದರಿದ್ದ ತಂದೆಯನ್ನೇ ಕೊಂದ ಮಗ- ಸಾಕ್ಷ್ಯ ನಾಶ ಪಡಿಸಲು 100 ಬಾರಿ ಧಾರಾವಾಹಿ ವೀಕ್ಷಿಸಿದ

    ಗದರಿದ್ದ ತಂದೆಯನ್ನೇ ಕೊಂದ ಮಗ- ಸಾಕ್ಷ್ಯ ನಾಶ ಪಡಿಸಲು 100 ಬಾರಿ ಧಾರಾವಾಹಿ ವೀಕ್ಷಿಸಿದ

    – ಮೊಬೈಲ್‍ನಲ್ಲಿ ಅಡಗಿತ್ತು ಸಾವಿನ ರಹಸ್ಯ

    ಲಕ್ನೋ: 19 ವರ್ಷದ ಬಾಲಕನೊಬ್ಬ ಕೋಪದ ಬರದಲ್ಲಿ ತಂದೆಯನ್ನೇ ಕೊಲೆ ಮಾಡಿರುವ ಘಟನೆ ಮಥುರಾದಲ್ಲಿ ನಡೆದಿದೆ.

    ಮನೋಜ್ ಮಿಶ್ರಾ ಮಗನಿಂದಲೇ ಕೊಲೆಯಾದ ತಂದೆಯಾಗಿದ್ದು, 12ನೇ ತರಗತಿ ಓದುತ್ತಿದ್ದ ಅಪ್ರಾಪ್ತ ಗದರಿದ ಎಂಬ ಕಾರಣಕ್ಕೆ ಅಸಮಾಧಾನಗೊಂಡು ಕಬ್ಬಿಣದ ರಾಡ್‍ನಿಂದ ತಲೆಗೆ ಹೊಡೆದು ತಂದೆಯನ್ನೇ ಕೊಲೆ ಮಾಡಿದ್ದ. ಅಲ್ಲದೇ ತಂದೆ ಸತ್ತ ವಿಷಯ ಖಚಿತ ಪಡಿಸಿಕೊಳ್ಳಲು ಬಟ್ಟೆಯಿಂದ ಕತ್ತು ಹಿಸುಕಿದ್ದ.

    ಮೇ 2 ರಂದು ತಂದೆಯನ್ನು ಕೊಲೆ ಮಾಡಿದ ಬಳಿಕ ಸಾಕ್ಷ್ಯ ನಾಶಪಡಿಸಲು ತಾಯಿಯ ನೆರವು ಪಡೆದುಕೊಂಡಿದ್ದ. ಸ್ಕೂಟಿ ಮೂಲಕ ಮನೆಯಿಂದ ಕೆಲ ಕಿಮೀ ದೂರ ಮೃತದೇಹವನ್ನು ತೆಗೆದುಕೊಂಡು ಹೋಗಿ ಪೆಟ್ರೋಲ್ ಹಾಕಿ ದೇಹವನ್ನು ಸುಟ್ಟು ಹಾಕಿ ಏನು ತಿಳಿದಂತೆ ಮನೆಗೆ ವಾಪಸ್ ಆಗಿದ್ದ.

    ಮೇ 3 ರಂದು ಪೊಲೀಸರಿಗೆ ಸುಟ್ಟ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿತ್ತು. ಇತ್ತ ಮೇ 27 ರಂದು ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಬಳಿಕ ಅನಾಥವಾಗಿ ಪತ್ತೆಯಾಗಿದ್ದ ಮೃತ ದೇಹವನ್ನು ಆತನೊಂದಿಗೆ ಕೆಲಸ ಮಾಡುತ್ತಿದ್ದ ಸಹೋದ್ಯೋಗಿಗಳು ಗುರುತಿಸಿದ್ದರು. ಕೂಡಲೇ ಪ್ರಕರಣದ ವಿಚಾರಣೆಗೆ ವೇಗ ನೀಡಿದ ಪೊಲೀಸರು ಕೊನೆಗೂ ಕೊಲೆಗಾರ ಮೃತ ವ್ಯಕ್ತಿಯ ಮಗ ಎಂದು ಸಾಬೀತು ಮಾಡಿದ್ದರು.

    ಪ್ರಕರಣದ ತನಿಖೆ ಸಂದರ್ಭದಲ್ಲಿ ಪೊಲೀಸರಿಗೆ ಸಹಕಾರ ನೀಡದ ಮನೋಜ್ ಪುತ್ರ, ಯಾವ ನಿಯಮಗಳ ಅಡಿಯಲ್ಲಿ ತನ್ನನ್ನು ವಿಚಾರಣೆ ಮಾಡುತ್ತಿದ್ದಾಗಿ ಪ್ರಶ್ನೆ ಮಾಡಿದ್ದ. ಇದರಿಂದ ಅನುಮಾನಗೊಂಡ ಪೊಲೀಸರು ಆತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ ಸಂದರ್ಭದಲ್ಲಿ ಕೊಲೆಯ ಸತ್ಯಾಂಶವನ್ನು ಹೇಳಿದ್ದ ಎಂದು ಮಥುರಾ ಎಸ್‍ಪಿ ಉದಯ್ ಶಂಕರ್ ಸಿಂಗ್ ತಿಳಿಸಿದ್ದಾರೆ.

    ಪ್ರಕರಣದಲ್ಲಿ ಸದ್ಯ ಪೊಲೀಸರು ಅಪ್ರಾಪ್ತ ಬಾಲಕ ಹಾಗೂ ಆತನ ತಾಯಿ 49 ವರ್ಷದ ಸಂಗೀತಾ ಮಿಶ್ರಾಗಳನ್ನು ಕೊಲೆ ಆರೋಪದ ಅಡಿ ಬಂಧಿಸಿದ್ದಾರೆ. ಕೊಲೆಯ ಬಳಿಕ ತಂದೆಯ ದೇಹವನ್ನು ನಾಶ ಮಾಡಲು ಬಾಲಕ 100 ಕ್ಕೂ ಹೆಚ್ಚು ಬಾರಿ ಕ್ರೈಂ ಪ್ಯಾಟ್ರೋಲ್ ಎಂಬ ಹಿಂದಿ ಧಾರಾವಾಹಿಯನ್ನು ನೂರಕ್ಕೂ ಹೆಚ್ಚು ಬಾರಿ ವೀಕ್ಷಣೆ ಮಾಡಿದ್ದ. ಅಪ್ರಾಪ್ತ ಬಾಲಕನ ಮೊಬೈಲ್ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಈ ಸಂಗತಿ ಬೆಳಕಿಗೆ ಬಂದಿದೆ.

  • ಸುಳ್ಳು ಬರ್ತ್ ಡೇ ಪಾರ್ಟಿಗೆ ಆಹ್ವಾನ – ಜ್ಯೂಸ್ ಕೊಟ್ಟು ಹೋಟೆಲ್ ರೂಮಿನಲ್ಲಿ ಗ್ಯಾಂಗ್‍ರೇಪ್

    ಸುಳ್ಳು ಬರ್ತ್ ಡೇ ಪಾರ್ಟಿಗೆ ಆಹ್ವಾನ – ಜ್ಯೂಸ್ ಕೊಟ್ಟು ಹೋಟೆಲ್ ರೂಮಿನಲ್ಲಿ ಗ್ಯಾಂಗ್‍ರೇಪ್

    – ಯುವತಿಯನ್ನ ಮನೆಗೆ ಸೇರಿಸಿಕೊಳ್ಳದ ಕುಟುಂಬಸ್ಥರು
    – ಆತ್ಮಹತ್ಯೆಗೆ ಮುಂದಾಗಿದ್ದ ಸಂತ್ರಸ್ತೆಯ ರಕ್ಷಣೆ

    ಲಕ್ನೋ: ಉತ್ತರ ಪ್ರದೇಶದಲ್ಲಿ ದಿನೇ ದಿನೇ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಿದೆ. ಹುಟ್ಟುಹಬ್ಬದ ಪಾರ್ಟಿಗೆಂದು ಕರೆದು 23 ವರ್ಷದ ಯುವತಿಯ ಮೇಲೆ ಇಬ್ಬರು ಕಾಮುಕರು ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ಕಾನ್ಪುರದಲ್ಲಿ ನಡೆದಿದೆ.

    ಸಂತ್ರಸ್ತೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಸಂತ್ರಸ್ತೆಯನ್ನು ತನ್ನ ಕುಟುಂಬದವರು ಮನೆಗೆ ಸೇರಿಸದ ಕಾರಣ ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದಳು. ಅಷ್ಟರಲ್ಲಿ ಆಕೆಯ ಸ್ನೇಹಿತ ಬಂದು ಕಾಪಾಡಿದ್ದಾನೆ.

    ಏನಿದು ಪ್ರಕರಣ?
    ಸಂತ್ರಸ್ತೆಯ ನೆರೆಹೊರೆಯ ಹುಡುಗಿಯೊಬ್ಬಳು ತನ್ನ ಸಹೋದರ ಅಶಿಶ್ ಹುಟ್ಟುಹಬ್ಬದ ಪಾರ್ಟಿಗೆ ಕರೆದಿದ್ದಳು. ಆಕೆಯ ತಂದೆ ಇನ್ಸ್‌ಪೆಕ್ಟರ್ ಆಗಿದ್ದರು. ನಂತರ ಸಂತ್ರಸ್ತೆ ಪಾರ್ಟಿಗೆಂದು ಹೋಟೆಲ್ ರೂಮಿಗೆ ಹೋಗಿದ್ದಾಳೆ. ಅಲ್ಲಿ ಆಶಿಶ್ ತನ್ನ ಸ್ನೇಹಿತ ಅಭಿಷೇಕ್ ಜೊತೆ ರೂಮಿನಲ್ಲಿದ್ದನು. ಇವರಿಬ್ಬರು ಸ್ವಲ್ಪ ಸಮಯದವರೆಗೆ ಸಂತ್ರಸ್ತೆ ಜೊತೆ ಮಾತನಾಡಿದ್ದಾರೆ. ನಂತರ ಆಕೆಗೆ ನಿದ್ದೆ ಬರುವ ಔಷಧಿ ಮಿಕ್ಸ್ ಮಾಡಿ, ಕುಡಿಯಲು ಜ್ಯೂಸ್ ಕೊಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸಂತ್ರಸ್ತೆ ಪಾನೀಯವನ್ನು ಕುಡಿದ ತಕ್ಷಣ ಪ್ರಜ್ಞೆ ಕಳೆದುಕೊಂಡಿದ್ದು, ಈ ವೇಳೆ ಇಬ್ಬರು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಬಳಿಕ ಸಂತ್ರಸ್ತೆ ಎಚ್ಚರಗೊಂಡು ಅತ್ಯಾಚಾರಕ್ಕೊಳಗಾಗಿರುವ ಬಗ್ಗೆ ತಿಳಿದುಕೊಂಡಿದ್ದಾಳೆ. ಘಟನೆಯ ನಂತರ ಸಂತ್ರಸ್ತೆ ತನ್ನ ಮನೆಗೆ ಹೋಗಿದ್ದಾಳೆ. ಆದರೆ ಆಕೆಯ ಕುಟುಂಬದವರು ಅವಳಿಗೆ ಬೈದು, ಮನೆಯೊಳಗೆ ಬರಬಾರದೆಂದು ಹೇಳಿದ್ದಾರೆ. ಇದರಿಂದ ಬೇಸರಗೊಂಡ ಸಂತ್ರಸ್ತೆ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಳು.

    ಅದರಂತೆಯೇ ಸಮೀಪದ ರೈಲ್ವೆ ನಿಲ್ದಾಣಕ್ಕೆ ಸಂತ್ರಸ್ತೆ ಹೋಗಿದ್ದಾಳೆ. ಅಷ್ಟರಲ್ಲಿ ಸಂತ್ರಸ್ತೆ ಸ್ನೇಹಿತರೊಬ್ಬರು ನಡೆದ ಘಟನೆ ಬಗ್ಗೆ ತಿಳಿದುಕೊಂಡು ಕೂಡಲೇ ಸ್ಥಳಕ್ಕೆ ಧಾವಿಸಿ ಸಂತ್ರಸ್ತೆಯನ್ನು ಕಾಪಾಡಿದ್ದಾರೆ. ನಂತರ ಇಬ್ಬರು ಬಾರ್ರಾ ಪೊಲೀಸ್ ಠಾಣೆಗೆ ಬಂದು ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ.

    ಸಿಸಿಟಿವಿ ದೃಶ್ಯಾವಳಿಗಳನ್ನು ಬಳಸಿಕೊಂಡು ಆರೋಪಿಗಳಾದ ಆಶಿಶ್ ಮತ್ತು ಆತನ ಸ್ನೇಹಿತ ಅಭಿಷೇಕ್ ಇಬ್ಬರನ್ನು ಬಂಧಿಸಲಾಗಿದೆ. ಸದ್ಯಕ್ಕೆ ಸಂತ್ರಸ್ತೆ ಹೇಳಿಕೆಯ ನಂತರ ಹುಟ್ಟುಹಬ್ಬದ ಪಾರ್ಟಿ ಇದೆ ಎಂದು ಆಮಿಷವೊಡ್ಡಿದ್ದ ಹುಡುಗಿಯ ವಿರುದ್ಧ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳುತ್ತೇವೆ. ಈಗಾಗಲೇ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ‘ಎಂದು ಇನ್ಸ್‌ಪೆಕ್ಟರ್  ಹರ್ಮೀತ್ ಸಿಂಗ್ ತಿಳಿಸಿದ್ದಾರೆ.

  • ರೇಪ್ ಕೇಸ್ ದಾಖಲಿಸಲು 800 ಕಿ.ಮೀ ಪ್ರಯಾಣ ಮಾಡಿದ ಯುವತಿ

    ರೇಪ್ ಕೇಸ್ ದಾಖಲಿಸಲು 800 ಕಿ.ಮೀ ಪ್ರಯಾಣ ಮಾಡಿದ ಯುವತಿ

    – ದುಬೈನಿಂದ ಬಂದು ಹೋಟೆಲಿನಲ್ಲಿ ಅತ್ಯಾಚಾರ
    – ಮತ್ತೆ ಸ್ನೇಹಿತೆಯ ಮನೆಗೆ ಕರ್ಕೊಂಡು ಹೋಗಿ ರೇಪ್

    ಮುಂಬೈ: 22 ವರ್ಷದ ನೇಪಾಳಿ ಯುವತಿಯೊಬ್ಬಳು ಮಹಾರಾಷ್ಟ್ರದ ನಾಗ್ಪುರದಲ್ಲಿ ಅತ್ಯಾಚಾರ ಆರೋಪಿಯ ವಿರುದ್ಧ ಕೇಸ್ ದಾಖಲಿಸಲು ಲಕ್ನೋದಿಂದ ಪ್ರಯಾಣ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಘಟನೆ ಲಕ್ನೋದಲ್ಲಿ ನಡೆದಿದ್ದು, ಆರೋಪಿ ಪೊಲೀಸರಿಗೆ ಈ ಬಗ್ಗೆ ದೂರು ನೀಡಬಾರದು ಎಂದು ಬೆದರಿಕೆ ಹಾಕಿದ್ದನು. ಹೀಗಾಗಿ ಸಂತ್ರಸ್ತೆ ಲಕ್ನೋದಿಂದ 800 ಕಿ.ಮೀ ದೂರ ಪ್ರಯಾಣ ಮಾಡಿ ನಾಗ್ಪುರದ ಕೊರಡಿ ಪೊಲೀಸ್ ಠಾಣೆಯಲ್ಲಿ ಶೂನ್ಯ ಎಫ್‍ಐಆರ್ ದಾಖಲಿಸಿದ್ದಾರೆ. ಯಾವುದೇ ಪೊಲೀಸ್ ಠಾಣೆಯಲ್ಲಿ ಶೂನ್ಯ ಎಫ್‍ಐಆರ್ ಸಲ್ಲಿಸಬಹುದು. ನಂತರ ಅದನ್ನು ಘಟನೆ ನಡೆದ ಸಂಬಂಧಪಟ್ಟ ಪೊಲೀಸ್ ಠಾಣಾ ವ್ಯಾಪ್ತಿಗೆ ವರ್ಗಾಯಿಸಬಹುದು.

    ಏನಿದು ಪ್ರಕರಣ:
    ಸಂತ್ರಸ್ತೆ ಉದ್ಯೋಗಕ್ಕಾಗಿ 2018ರಲ್ಲಿ ನೇಪಾಳದಿಂದ ಭಾರತಕ್ಕೆ ಬಂದಿದ್ದಳು. ಇದೇ ವರ್ಷದ ಮಾರ್ಚ್ ವರೆಗೂ ಲಕ್ನೋದ ಫೈಜಾಬಾದ್ ರಸ್ತೆಯಲ್ಲಿರುವ ಬಾಡಿಗೆ ಫ್ಲ್ಯಾಟ್‍ನಲ್ಲಿ ಸ್ನೇಹಿತೆಯ ಜೊತೆ ವಾಸಿಸುತ್ತಿದ್ದಳು. ಸ್ನೇಹಿತೆ ದುಬೈನಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಲಕ್ನೋ ಮೂಲದ ಆರೋಪಿ ಪ್ರವೀಣ್ ಯಾದವ್‍ನನ್ನು ಸಂತ್ರಸ್ತೆಗೆ ವಿಡಿಯೋ ಕಾಲ್ ಮೂಲಕ ಪರಿಚಯಿಸಿದ್ದನು. ನಂತರ ಇಬ್ಬರು ವಿಡಿಯೋ ಕಾಲ್ ಮೂಲಕ ಮಾತನಾಡಿದ್ದರು ಎಂದು ಇನ್ಸ್ ಪೆಕ್ಟರ್ ವಜೀರ್ ಶೇಖ್ ತಿಳಿಸಿದ್ದಾರೆ.

    ನನ್ನ ಸ್ನೇಹಿತೆ 1.5 ಲಕ್ಷ ಹಣವನ್ನು ಇಟ್ಟುಕೊಂಡಿದ್ದಳು. ಹಣವನ್ನು ಹಿಂದಿರುಗಿಸುವಂತೆ ನಾನು ಕೇಳಿದೆ. ಆದರೆ ಆಕೆ ಹಣವನ್ನು ಹಿಂದಿರುಗಿಸಲಿಲ್ಲ, ಅಲ್ಲದೇ ನನ್ನ ಮೇಲೆ ಹಲ್ಲೆ ಮಾಡಲು ಶುರು ಮಾಡಿದ್ದಳು ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

    ಈ ಬಗ್ಗೆ ಸಂತ್ರಸ್ತೆ ಪ್ರವೀಣ್ ಯಾದವ್‍ಗೆ ದೂರು ನೀಡಿದ್ದಾಳೆ. ಒಂದೆರಡು ದಿನಗಳ ನಂತರ ಆರೋಪಿ ದುಬೈನಿಂದ ಲಕ್ನೋಗೆ ಬಂದಿದ್ದಾನೆ. ನಂತರ ಹೋಟೆಲ್‍ವೊಂದರಲ್ಲಿ ಸಂತ್ರಸ್ತೆಯನ್ನು ಭೇಟಿಯಾಗಿದ್ದಾನೆ. ಈ ವೇಳೆ ಆರೋಪಿ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ ಕೃತ್ಯದ ವಿಡಿಯೋವನ್ನು ರೆಕಾರ್ಡ್ ಮಾಡಿಕೊಂಡಿದ್ದಾನೆ. ನಂತರ ಸಂತ್ರಸ್ತೆಯನ್ನು ಸ್ನೇಹಿತೆಯ ಮನೆಗೆ ಕರೆದುಕೊಂಡು ಹೋಗಿದ್ದು, ಮತ್ತೆ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾನೆ.

    ಒಂದು ವೇಳೆ ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಆಗ ಸಂತ್ರಸ್ತೆ ಲಕ್ನೋದಿಂದ ತಪ್ಪಿಸಿಕೊಂಡು ಸೆಪ್ಟೆಂಬರ್ 30 ರಂದು ನಾಗ್ಪುರದ ನೇಪಾಳದ ಸ್ನೇಹಿತನ ಮನೆಗೆ ಬಂದಿದ್ದಾಳೆ. ಇಲ್ಲಿ ಕೊರಡಿ ಪೊಲೀಸ್ ಠಾಣೆಗೆ ತೆರಳಿ ಯಾದವ್ ಮತ್ತು ಲಕ್ನೋ ಮೂಲದ ಸಂತ್ರಸ್ತೆಯ ಸ್ನೇಹಿತೆಯ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

    ದೂರಿನ ಆಧಾರದ ಮೇಲೆ ಪೊಲೀಸರು ಐಪಿಸಿ ಸೆಕ್ಷನ್‍ಗಳ ಅಡಿಯಲ್ಲಿ ಆರೋಪಿಗಳ ವಿರುದ್ಧ ಶೂನ್ಯ ಎಫ್‍ಐಆರ್ ದಾಖಲಿಸಿದ್ದಾರೆ. ಸದ್ಯಕ್ಕೆ ಈ ದೂರನ್ನು ಸಂಬಂಧಿಸಿದ ಪೊಲೀಸ್ ಠಾಣೆಗೆ ವರ್ಗಾಹಿಸುವ ತಯಾರಿ ನಡೆಯುತ್ತಿದೆ.

  • ಹತ್ರಾಸ್ ಪ್ರಕರಣದ ಬೆನ್ನಲ್ಲೇ ಮತ್ತೊಂದು ಕೃತ್ಯ – ತುಂಡರಿಸಿದ ಅಪ್ರಾಪ್ತೆಯ ಶವ ಪತ್ತೆ

    ಹತ್ರಾಸ್ ಪ್ರಕರಣದ ಬೆನ್ನಲ್ಲೇ ಮತ್ತೊಂದು ಕೃತ್ಯ – ತುಂಡರಿಸಿದ ಅಪ್ರಾಪ್ತೆಯ ಶವ ಪತ್ತೆ

    – ಜಮೀನಿನಲ್ಲಿ ಮೃತದೇಹದ ಭಾಗಗಳು ಪತ್ತೆ

    ಲಕ್ನೋ: ಹತ್ರಾಸ್ ಗ್ರಾಮದ ಸಂತ್ರಸ್ತೆ ಮೇಲಿನ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ದೇಶದೆಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ಮಧ್ಯೆಯೇ ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಮುಂದುವರಿದಿದ್ದು, ನಾಪತ್ತೆಯಾಗಿದ್ದ ಅಪ್ರಾಪ್ತೆಯ ಮೃತದೇಹ ತುಂಡರಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದನ್ನೂ ಓದಿ: ಹತ್ರಾಸ್ ಗ್ಯಾಂಗ್‍ರೇಪ್ ಪ್ರಕರಣ ಸಿಬಿಐಗೆ ವರ್ಗಾವಣೆ

    ಉತ್ತರ ಪ್ರದೇಶದ ಕಾನ್ಪುರ್ ದೇಹತ್ ಜಿಲ್ಲೆಯ ಹಳ್ಳಿಯಲ್ಲಿ ಸೆಪ್ಟೆಂಬರ್ 26 ರಂದು 15 ವರ್ಷದ ಹುಡುಗಿ ನಾಪತ್ತೆಯಾಗಿದ್ದಳು. ಆದರೆ ಇದೀಗ ಆಕೆಯ ಶವ ಜಮೀನೊಂದರಲ್ಲಿ ತುಂಡರಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಡುಗಿಯ ಕುಟುಂಬದ ಇಬ್ಬರು ಸಂಬಂಧಿಕರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕೊಲೆ ಮಾಡುವ ಮೊದಲು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಅಪ್ರಾಪ್ತೆಯ ಪೋಷಕರು ಆರೋಪಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರ ತಂಡ ಹೋಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಅಪ್ರಾಪ್ತೆಯ ಮೃತದೇಹದ ಭಾಗಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯಕ್ಕೆ ಈ ಕುರಿತು ತನಿಖೆ ಪೊಲೀಸರು ನಡೆಸುತ್ತಿದ್ದಾರೆ.

    ನಮ್ಮ ಕುಟುಂಬದಲ್ಲಿ ಭೂ ವಿವಾದವಿದೆ. ನಮ್ಮ ಮಗಳನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಅಪ್ರಾಪ್ತೆಯ ತಂದೆ ಹೇಳಿದ್ದಾರೆ. ಹೀಗಾಗಿ ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿ ಕೆ.ಕೆ.ಚೌಧಾರಿ ಹೇಳಿದ್ದಾರೆ.

    ಹತ್ರಾಸ್ ಪ್ರದೇಶದ ದಲಿತ ಯುವತಿ ಮೇಲಿನ ಗ್ಯಾಂಗ್‍ರೇಪ್ ಪ್ರಕರಣವನ್ನು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಸಿಬಿಐಗೆ ವರ್ಗಾಯಿಸಿದ್ದಾರೆ. ಮುಖ್ಯಮಂತ್ರಿಗಳ ಕಚೇರಿ ಟ್ವೀಟ್ ಮೂಲಕ ಈ ಮಾಹಿತಿಯನ್ನು ಖಚಿತ ಪಡಿಸಿದೆ. ವಿಪಕ್ಷಗಳು ಸೇರಿದಂತೆ ದೇಶದ ಜನತೆ ಪ್ರಕರಣದ ತನಿಖೆಯನ್ನು ಸಿಬಿಐನಿಂದ ನಡೆಯಬೇಕೆಂದು ಆಗ್ರಹಿಸಿದ್ದವು. ಆದರೆ ಸಂತ್ರಸ್ತೆಯ ಕುಟುಂಬಸ್ಥರು ಸಿಬಿಐ ತನಿಖೆಗೆ ಆಗ್ರಹಿಸಿರಲಿಲ್ಲ ಎಂದು ವರದಿಯಾಗಿದೆ.