Tag: lucknow

  • 30 ಗಂಟೆಯಲ್ಲಿ ಮಕ್ಕಳನ್ನು ಅಕ್ಷರಸ್ಥರನ್ನಾಗಿಸುವ ಟೀಚರ್

    30 ಗಂಟೆಯಲ್ಲಿ ಮಕ್ಕಳನ್ನು ಅಕ್ಷರಸ್ಥರನ್ನಾಗಿಸುವ ಟೀಚರ್

    – ಅಕ್ಷರಸ್ಥರನ್ನಾಗಿ ಮಾಡುವುದು ಇವರ ಗುರಿ

    ಲಕ್ನೋ: ಶಿಕ್ಷಣದಿಂದ ವಂಚಿತರಾದ ಬಡ ಮಕ್ಕಳನ್ನು ಕೇವಲ 30 ಗಂಟೆಗಳಲ್ಲಿ ಅಕ್ಷರಸ್ಥರನ್ನಾಗಿ ಮಾಡುವ ಮಾದರಿ ಕೆಲಸವನ್ನು ಉತ್ತರ ಪ್ರದೇಶದಲ್ಲಿ ಶಿಕ್ಷಣ ತಜ್ಞೆಯೊಬ್ಬರು ಮಾಡುತ್ತಿದ್ದಾರೆ. ಸುನೀತಾ ಗಾಂಧಿ ಅವರು ಉಚಿತವಾಗಿ ಮಕ್ಕಳಿಗೆ ಅಕ್ಷರ ಕಲಿಸುವ ಕೆಲಸವನ್ನು ಮಾಡುತ್ತಿದ್ದಾರೆ.

    ಕಳೆದ 5 ವರ್ಷಗಳಿಂದ ಸುನೀತಾ ಗಾಂಧಿ ಗ್ಲೋಬಲ್ ಡ್ರೀಮ್ಸ್ ಪ್ರಾಜೆಕ್ಟ್ ಅಡಿಯಲ್ಲಿ ಬಡಮಕ್ಕಳನ್ನೆಲ್ಲಾ ಒಟ್ಟುಗೂಡಿಸಿ ಅಕ್ಷರ ಕಲಿಸುತ್ತಿದ್ದಾರೆ. ಇವರಿಗಾಗಿಯೇ ಪ್ರತ್ಯೇಕ ಪಠ್ಯಕ್ರಮವನ್ನು ರೂಪಿಸಿದ್ದಾರೆ. ಕೇವಲ 30 ಗಂಟೆಯಲ್ಲಿ ತಮ್ಮದೇ ಆದ ವಿಶಿಷ್ಟ ಬೋಧನೆಯ ಮೂಲಕ ಪಾಠವನ್ನು ಹೇಳುತ್ತಿದ್ದಾರೆ.

    7-8 ತಿಂಗಳು ಶಾಲೆ ತಪ್ಪಿದ್ದಕ್ಕೇ ಜಗತ್ತು ಪರಿತಪಿಸುತ್ತಿದೆ. ಇನ್ನು ಶಾಲೆಯ ಮೆಟ್ಟಿಲನ್ನೇ ಏರದೆ ಬೀದಿ ಬದಿಯ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಈ ಒಂದು ಕೆಲಸವನ್ನು ಕೈಗೆತ್ತಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಮಕ್ಕಳಿಗೆ ಅಕ್ಷರ ಕಲಿಸುವ ಈ ಯೋಜನೆಯನ್ನು ದೇಶದಾದ್ಯಂತ ಕೈಗೊಳ್ಳುವ ನಿರ್ಧಾರವನ್ನು ಮಾಡಿಕೊಂಡಿದ್ದಾರೆ.

    ಒಟ್ಟು 10 ಅವಧಿಗಳಲ್ಲಿ ಸುನೀತಾ ಅವರು ಮಕ್ಕಳಿಗೆ ಪಾಠವನ್ನು ಬೋಧಿಸುತ್ತಾರೆ. ಪಾಠವನ್ನು ಪುನರಾವರ್ತನೆ, ಅಭ್ಯಾಸ ಮಾಡುವುದ್ದಕ್ಕಿಂತ ಹೆಚ್ಚಾಗಿ ಪ್ರಶ್ನೆಯನ್ನು ಕೇಳುತ್ತಾರೆ. ಈ ಮೂಲಕವಾಗಿ ಉತ್ತರವನ್ನು ಶಾಶ್ವತವಾಗಿ ಮಕ್ಕಳು ನೆನೆಪಿಟ್ಟುಕೊಳ್ಳುವ ಚಾತುರ್ಯವನ್ನು ಕಲಿಸಿಕೊಡುತ್ತಾರೆ. ಅಕ್ಷರ-ಪದಗಳನ್ನು ಗುರುತಿಸುವುದನ್ನು ಹೇಳಿಕೊಡುತ್ತಾರೆ.

    ಚಿತ್ರಗಳ ಮೂಲಕವಾಗಿ ಪದ ಮತ್ತು ವಾಕ್ಯ ರಚನೆಯನ್ನು ಮಕ್ಕಳಿಂದ ಮಾಡಿಸುತ್ತಾರೆ. ವೀಡಿಯೋ ಮತ್ತು ಆಡಿಯೋಗಳ ಮೂಲಕವಾಗಿ ಪಾಠವನ್ನು ಹೇಳುತ್ತಾರೆ. ಮಕ್ಕಳಿಗೆ ಬೇಸರ ಬರದ ರೀತಿಯಲ್ಲಿ ಆಟದ ಮೂಲಕವಾಗಿ ಮನೋರಂಜನಾಭರಿತವಾಗಿ ಮಕ್ಕಳಿಗೆ ಅಕ್ಷರವನ್ನು ಕಲಿಸುತ್ತಾರೆ. ಇದಕ್ಕಾಗಿಯೇ 30 ಪಾಠಗಳನ್ನೋಳಗೊಂಡ ಕಿಟ್ ಸಿದ್ಧಪಡಿಸಿದ್ದಾರೆ. 60 ಕಿರು ವೀಡಿಯೋ ಹಾಗೂ ಬುಕ್ಸ್ ಅಲ್ಭಾಬೆಟ್ ಕಟೌಟ್ ಮತ್ತು ಸ್ಟೇಷನರಿ ಐಟಮ್ಸ್ ಇವರ ಶಿಕ್ಷಣದ ಕಿಟ್‍ನಲ್ಲಿದೆ. ವಿಭಿನ್ನವಾಗಿ ಮಕ್ಕಳಿಗೆ ಅತೀ ಕಡಿಮೆ ಅವಧಿಯಲ್ಲಿ ಅಕ್ಷರವನ್ನು ಕಲಿಸಿ ಕೊಡುವ ಕೆಲಸವನ್ನು ಮಾಡುತ್ತಿದ್ದಾರೆ.

    ಮುಂದಿನ ವರ್ಷ ಅಂತ್ಯದೊಳಗೆ 20 ರಾಜ್ಯಗಳಲ್ಲಿ, ಶಾಲೆಗಳಿಂದ ಹೊರಗುಳಿದ 20 ಲಕ್ಷ ಮಕ್ಕಳನ್ನು ಸಾಕ್ಷರಸ್ಥರನ್ನಾಗಿಸುವ ಗುರಿ ಇಟ್ಟುಕೊಂಡಿದ್ದೇನೆ ಎಂದು ಶಿಕ್ಷಣ ತಜ್ಞೆ ಸುನೀತಾ ಗಾಂಧಿ ಹೇಳುತ್ತಾರೆ.

  • ಚಳಿ ತಾಳಲಾರದೇ ಕುಸಿದು ಬಿದ್ದು ರೈತ ಸಾವು

    ಚಳಿ ತಾಳಲಾರದೇ ಕುಸಿದು ಬಿದ್ದು ರೈತ ಸಾವು

    ಲಕ್ನೋ: ಅತಿಯಾದ ಚಳಿಯನ್ನು ತಾಳಲಾರದೆ ರೈತ ಗದ್ದೆಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಪಂಚನೇಲಿಯಲ್ಲಿ ನಡೆದಿದೆ.

    ಮೃತ ದುದೈವಿಯನ್ನು ರಾಮ್ ಕಿಶೋರ್(62) ಎಂದು ಗುರುತಿಸಲಾಗಿದೆ. ಅತಿಯಾದ ಚಳಿಯಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

    ರಾಮ್ ಕಿಶೋರ್ ಅವರು ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ತಕ್ಷಣ ಇವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ರಾಮ್ ಕಿಶೋರ್ ಅವರು ಮಾರ್ಗ ಮಧ್ಯೆಯೇ ಕೊನೆಯುಸಿರೆಳದಿದ್ದಾರೆ ಎಂದು ರಾಮ್ ಕಿಶೋರ್ ಅವರ ಮಗ ಪೊಲೀಸರಿಗೆ ತಿಳಿಸಿದ್ದಾರೆ.

    ಅತಿಯಾದ ಚಳಿಯಿಂದ ಅವರು ಸಾವನ್ನಪ್ಪಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ಆದರೆ ಮರಣೋತ್ತರ ಪರೀಕ್ಷೆಯಿಂದ ಸಾವಿಗೆ ನಿಖರವಾದ ಕಾರಣ ತಿಳಿದು ಬರಬೇಕಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೇಗೆ ಕಳುಹಿಸಲಾಗಿದೆ ಎಂದು ಜಿಲ್ಲಾ ತುರ್ತು ಸೇವಾ ಅಧಿಕಾರಿ ಡಾ. ಅಭಿಷೇಕ್ ತಿಳಿಸಿದ್ದಾರೆ.

    ಉತ್ತರ ಪ್ರದೇಶದಲ್ಲಿ ನಿನ್ನೆ ತಾಪಮಾನ 5 ಡಿಗ್ರಿ ಸೆಲ್ಸಿಯಸ್‍ಗಿಂತ ಕಡಿಮೆ ದಾಖಲಾಗಿತ್ತು. ರಾಜ್ಯದಲ್ಲಿ ಶೀತ ಅಲೆಯ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಈ ರೈತ ರಾಮ್ ಕಿಶೋರ್ ಅವರಿಗೆ ಹೆಚ್ಚಿನ ಚಳಿ ತಾಳಲಾಗದೆ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ.

  • ಅಪ್ರಾಪ್ತ ಮಕ್ಕಳಿಗೆ ವಿಷ ನೀಡಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ

    ಅಪ್ರಾಪ್ತ ಮಕ್ಕಳಿಗೆ ವಿಷ ನೀಡಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ

    – ಮೂವರು ಮಕ್ಕಳಲ್ಲಿ ಇಬ್ಬರು ಸಾವು
    – ಸಾವು ಬದುಕಿನ ಹೊರಾಟದಲ್ಲಿ ತಾಯಿ, ಮಗ

    ಲಕ್ನೋ: ತಾಯಿಯೊಬ್ಬಳು ತನ್ನ ಮೂವರು ಅಪ್ರಾಪ್ತ ಮಕ್ಕಳಿಗೆ ಆಹಾರದಲ್ಲಿ ವಿಷವನ್ನು ಸೇರಿಸಿ ಕೊಟ್ಟಿದ್ದಾರೆ. ನಂತರ ತಾನು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಸಿರುವ ಘಟನೆ ಉತ್ತರ ಪ್ರದೇಶದ ಘುರಾ ಮೌವ್ ಪ್ರದೇಶದಲ್ಲಿ ನಡೆದಿದೆ.

    ಆತ್ಮಹತ್ಯೆಗೆ ಪ್ರಯತ್ನಿಸಿದ ತಾಯಿಯನ್ನು ನೀತು(34) ಎಂದು ಗುರುತಿಸಲಾಗಿದೆ. ವಿಷ ಸೇವಿಸಿ ಅಸ್ವಸ್ಥಗೊಂಡ ಮೂವರು ಮಕ್ಕಳು ಮತ್ತು ತಾಯಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ತಾಯಿ ಆಹಾರದಲ್ಲಿ ಮಿಶ್ರಣ ಮಾಡಿಕೊಟ್ಟ ವಿಷ ಆಹಾರ ಸೇವನೆ ಮಾಡಿದ ಮೂವರು ಮಕ್ಕಳಲ್ಲಿ ಇಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇನ್ನೊಬ್ಬ ಬಾಲಕ ಮತ್ತು ತಾಯಿಯನ್ನು ಹೆಚ್ಚಿನ ಚಿಕಿತ್ಸೆಗೆ ಲಕ್ನೋ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಘಟನೆಯ ಹಿಂದಿನ ಕಾರಣವನ್ನು ತಿಳಿಯಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ತಾಯಿ ಮಕ್ಕಳಿಗೆ ವಿಷಕೊಟ್ಟು ತಾನು ಯಾಕೆ ವಿಷದ ಆಹಾರವನ್ನು ಸೇವನೆ ಮಾಡಿದಳು ಎಂಬುದು ತನಿಖೆಯಿಂದ ತಿಳಿದು ಬರಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • 5ರ ಬಾಲಕಿಗೆ ಬಿಸ್ಕೆಟ್ ಆಸೆ ತೋರಿಸಿ ಅತ್ಯಾಚಾರ ಎಸಗಿದ 16ರ ಹುಡುಗ

    5ರ ಬಾಲಕಿಗೆ ಬಿಸ್ಕೆಟ್ ಆಸೆ ತೋರಿಸಿ ಅತ್ಯಾಚಾರ ಎಸಗಿದ 16ರ ಹುಡುಗ

    – ಮನೆಗೆ ಕರೆದೊಯ್ಯದು ಅತ್ಯಾಚಾರ

    ಲಕ್ನೋ: 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಆರೋಪದ ಮೇಲೆ 16ರ ಹುಡುಗನನ್ನು ಬಂಧಿಸಿರುವ ಘಟನೆ ಉತ್ತರ ಪ್ರದೇಶದ ಹಮೀರ್‍ಪುರ್ ಜಿಲ್ಲೆಯಲ್ಲಿ ನಡೆದಿದೆ.

    ಬಾಲಕಿ ಮನೆಯಲ್ಲಿ ಆಟವಾಡುತ್ತಿದ್ದಳು. ಅಲ್ಲಿಗೆ ಬಂದ ಹುಡುಗ, ಬಾಲಕಿಗೆ ಬಿಸ್ಕೆಟ್ ಕೊಡುತ್ತೇನೆ ಎಂದು ಆಸೆ ತೋರಿಸಿದ್ದಾನೆ. ಬಾಲಕಿ ಬಿಸ್ಕೆಟ್ ಆಸೆಯಿಂದ ಅವನೊಂದಿಗೆ ಮನೆಗೆ ಹೋಗಿದ್ದಾಳೆ. ಈ ವೇಳೆ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಾಲಕಿ ಆರೋಪಿಗೆ ಸಂಬಂಧಿಯಾಗಿದ್ದಾಳೆ.

    ಈ ಘಟನೆ ಬಳಿಕ ಬಾಲಕಿ ಕಣ್ಣೀರು ಹಾಕುತ್ತಾ ಮನೆ ಕಡೆಗೆ ಬಂದಿದ್ದಾಳೆ. ಬಾಲಕಿ ಅಳುತ್ತಿರುವುದನ್ನು ಕಂಡ ಬಾಲಕಿಯ ತಾಯಿ ವಿಚಾರಿಸಿದಾಗ ನಡೆದಿರುವ ಘಟನೆಯನ್ನು ಸಂಪೂರ್ಣವಾಗಿ ಹೇಳಿದ್ದಾಳೆ. ನಂತರ ಬಾಲಕಿಯ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಸಂತ್ರಸ್ತೆಯ ಪೋಷಕರು ನೀಡಿದ ಆಧಾರದ ಮೇಲೆ ಆರೋಪಿಯನ್ನು ಬಂಧಿಸಿದ್ದೇವೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಅಲ್ಲದೇ ಬಾಲಕಿಯನ್ನು ವೈದ್ಯಕೀಯ ತಪಾಸಣೆಗೆ ಕಳುಹಿಸಲಾಗಿದೆ ಎಂದು ವರಿಷ್ಠಾಧಿಕಾರಿ ನರೇಂದ್ರ ಕುಮಾರ್ ಸಿಂಗ್ ತಿಳಿಸಿದ್ದಾರೆ.

  • ನಿವೃತ್ತ ಸೇನಾಧಿಕಾರಿ ಮನೆಯಲ್ಲಿ ಬೆಂಕಿ- ಪತಿ, ಪತ್ನಿ ಸಾವು

    ನಿವೃತ್ತ ಸೇನಾಧಿಕಾರಿ ಮನೆಯಲ್ಲಿ ಬೆಂಕಿ- ಪತಿ, ಪತ್ನಿ ಸಾವು

    ಲಕ್ನೋ: ನಿವೃತ್ತ ಸೇನಾಧಿಕಾರಿ ಮನೆಯಲ್ಲಿ ಬೆಂಕಿಕಾಣಿಸಿಕೊಂಡ ಪರಿಣಾಮ ಪತಿ-ಪತ್ನಿ ಇಬ್ಬರು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ.

    ನಿವೃತ್ತ ಸೇನಾಧಿಪತಿ ಆರ್.ಪಿ.ಸಿಂಗ್(82) ಮತ್ತು ಅವರ ಪತ್ನಿ ಮಾಲ್ಟಿ ಸಿಂಗ್ (75) ಈ ದುರಂತ ಬೆಂಕಿ ಅವಘಡದಲ್ಲಿ ಸಾವನ್ನಪ್ಪಿದ ಮೃತ ದುರ್ದೈವಿಗಳಾಗಿದ್ದಾರೆ.

    ಶುಕ್ರವಾರ ಸಂಜೆ 9ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಮನೆಗೆ ತಗುಲಿರುವುದು ಮನೆಯಲ್ಲಿ ಇರುವ ದಂಪತಿಗೆ ತಿಳಿದಿಲ್ಲ. ಆದರೆ ಮನೆಯಿಂದ ಹೊಗೆ ಬರುತ್ತಿರುವುದನ್ನು ನೆರೆಹೊರೆಯವರು ಗಮನಿಸಿದ್ದಾರೆ. ಕೂಡಲೇ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ದಂಪತಿಯನ್ನು ರಕ್ಷಿಸಿ ಹತ್ತಿರದ ಕೈಲಾಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆರ್.ಪಿ.ಸಿಂಗ್ ಮತ್ತು ಅವರ ಪತ್ನಿ ಇಬ್ಬರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

    ಈ ಬೆಂಕಿ ಅವಘಡ ವೇಳೆ ದಂಪತಿ ಇಬ್ಬರೇ ಮನೆಯಲ್ಲಿ ಇದ್ದರು. ಇವರ ಮಕ್ಕಳು ನೋಯ್ಡಾದಲ್ಲೇ ಬೇರೆ ಮನೆಯಲ್ಲಿ ವಾಸವಾಗಿದ್ದಾರೆ. ಇವರನ್ನು ರಕ್ಷಿಸಲು ಬಾಗಿಲುನ್ನು ಒಡೆದು ಮುರಿಯ ಬೇಕಾಯಿತು. ಬಾಗಿಲು ಮುರಿದು ಒಳಗೆ ಹೋದಾಗ ಇಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಆದರೆ ಮನೆಯಲ್ಲಿ ಬೆಂಕಿ ಕಾಣಿಸಿಕೊಳ್ಳಲು ಕಾರಣವೇನು ಎಂದು ತಿಳಿದು ಬಂದಿಲ್ಲ ಎಂದು ಸೆಕ್ಟರ್ 20ರ ಎಸ್‍ಎಚ್‍ಒ ರಾಕೇಶ್ ಕುಮಾರ್ ಸಿಂಗ್ ಹೇಳಿದ್ದಾರೆ.

  • ಜೈಲು ಸೇರಿದ ತಂದೆ, ಬಿಟ್ಟು ಹೋದ ತಾಯಿ – ಶ್ವಾನದೊಂದಿಗೆ ರಸ್ತೆ ಬದಿಯೇ ನಿದ್ದೆಗೆ ಜಾರಿದ ಬಾಲಕ

    ಜೈಲು ಸೇರಿದ ತಂದೆ, ಬಿಟ್ಟು ಹೋದ ತಾಯಿ – ಶ್ವಾನದೊಂದಿಗೆ ರಸ್ತೆ ಬದಿಯೇ ನಿದ್ದೆಗೆ ಜಾರಿದ ಬಾಲಕ

    – ಹೆತ್ತವರು ಕೈಕೊಟ್ಟಾಗ ಸ್ನೇಹಿತನಾದ ‘ಡ್ಯಾನಿ’
    – ಸದ್ಯ ಪೊಲೀಸರ ಆರೈಕೆಯಲ್ಲಿದ್ದಾನೆ ಅಂಕಿತ್

    ಲಕ್ನೋ: ತಂದೆ ಜೈಲಿಗೆ ಹೋದರೆ, ತಾಯಿ ಮಗಗನ್ನು ಬಿಟ್ಟು ಹೋಗಿದ್ದಾಳೆ. ಹೀಗಾಗಿ ವಾಸಿಸಲು ಮನೆ ಇಲ್ಲದೆ ಪುಟ್ಟ ಹುಡುಗನೊಬ್ಬ ತನ್ನ ಮುದ್ದಿನ ಶ್ವಾನದೊಂದಿಗೆ ರಸ್ತೆ ಬದಿ ಮಲಗುತ್ತಿರುವ ಮನಕಲಕುವ ಘಟನೆಯೊಂದು ಉತ್ತರಪ್ರದೇಶದಲ್ಲಿ ನಡೆದಿದೆ.

    ಬಾಲಕನನ್ನು ಅಂಕಿತ್ ಎಂದು ಗುರುತಿಸಲಾಗಿದೆ. ಈತನ ತಂದೆ ತಂದೆ ಜೈಲಿನಲ್ಲಿದ್ದಾರೆ. ಈ ಮಧ್ಯೆ ತಾಯಿಯೂ ಅಂಕಿತ್‍ನನ್ನು ದೂರ ಮಾಡಿದ್ದಾರೆ. ಹೀಗಾಗಿ ಬಾಲಕ ಯಾರೂ ಇಲ್ಲದೇ ಜೀವನ ನಡೆಸಲು ಬಲೂನುಗಳನ್ನು ಮಾರಾಟ, ಟೀ ಸ್ಟಾಲ್‍ಗಳಲ್ಲಿ ಕೆಲಸ ಮಾಡುವ ಮೂಲಕ ಜೀವನ ನಡೆಸುತ್ತಿದ್ದನು. ಆಗ ಅಂಕಿತ್ ಏಕೈಕ ಸ್ನೇಹಿತನಾಗಿದ್ದು ಡ್ಯಾನಿ ಎಂಬ ಶ್ವಾನ. ಬಾಲಕ ಇದರೊಂದಿಗೆ ಕಾಲ ಕಳೆಯಲು ಆರಂಭಿಸಿದ್ದಾನೆ. ಫುಟ್‍ಪಾತ್‍ಗಳಲ್ಲಿ ತನ್ನ ಸ್ನೇಹಿತ ನಾಯಿಯೊಂದಿಗೆ ಪ್ರತಿನಿತ್ಯ ಮಲಗುತ್ತಾನೆ. ಈ ಡ್ಯಾನಿ ಯಾವಾಗಲೂ ಅಂಕಿತ್‍ನೊಂದಿಗೆ ಇರುತ್ತದೆ. ಕಳೆದ ಕೆಲ ವರ್ಷಗಳಿಂದ ಅಂಕಿತ್ ಏನು ಸಂಪಾದಿಸುತ್ತಾನೋ ಅದರಲ್ಲಿ ತಾನೂ ಆಹಾರ ಸೇವಿಸುವುದರ ಜೊತೆಗೆ ಡ್ಯಾನಿಗೂ ಆಹಾರವನ್ನು ಕೊಡುತ್ತಿದ್ದನು.

    ಕಳೆದ ಕೆಲವು ದಿನಗಳ ಹಿಂದೆ ಮುಚ್ಚಿದ ಅಂಗಡಿಯೊಂದರ ಹೊರಗೆ ರಾತ್ರಿ ಕಂಬಳಿ ಹೊದ್ದು ಮಲಗಿದ್ದ ಅಂಕಿತ್ ಮತ್ತು ಡ್ಯಾನಿಯ ಫೋಟೋವನ್ನು ಯಾರೋ ಕ್ಲಿಕ್ಕಿಸಿ ಸೋಷಿಲ್ ಮೀಡಿಯಾದಲ್ಲಿ ಹಾಕಿ ವೈರಲ್ ಮಾಡಿದ್ದಾರೆ. ಅಂದಿನಿಂದ ಬಾಲಕನನ್ನು ಪತ್ತೆ ಹಚ್ಚಲು ಮುಜಫರ್ ನಗರ ಎಸ್‍ಎಸ್‍ಪಿ ಅಭಿಷೇಕ್ ಯಾದವ್ ಹುಡುಕಾಟ ನಡೆಸುತ್ತಿದ್ದರು. ಕೊನೆಗೂ ಆತನನ್ನು ಹುಡಕುವಲ್ಲಿ ಪೊಲೀಸರ ತಂಡ ಯಶಸ್ವಿಯಾಗಿದೆ. ಅಂಕಿತ್ ಈಗ ಪೊಲೀಸರ ಆರೈಕೆಯಲ್ಲಿದ್ದಾನೆ.

    ಅಂಕಿತ್ ಕೆಲಸ ಮಾಡುತ್ತಿದ್ದ ಟೀ ಸ್ಟಾಲ್ ಮಾಲೀಕರು ಹೇಳುವ ಪ್ರಕಾರ ಅಂಕಿತ್ ಕೆಲಸ ಮಾಡಿ ಮುಗಿಸುವವರೆಗೂ ನಾಯಿ ಒಂದೂ ಮೂಲೆಯಲ್ಲಿ ಕುಳಿತು ಅಂಕಿತ್‍ಗಾಗಿ ಕಾಯುತ್ತಿರುತ್ತದೆ. ಅಂಕಿತ್ ಸ್ವಾಭಿಮಾನಿ ಎಂದಿಗೂ ಏನನ್ನೂ ಉಚಿತವಾಗಿ ಯಾರಿಂದಲೂ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

    ಅಂಕಿತ್ ಕುಟುಂಬಸ್ಥರನ್ನು ಪತ್ತೆ ಹಚ್ಚುವ ಪ್ರಯತ್ನ ಮಾಡುತ್ತಿದ್ದೇವೆ. ಅಂಕಿತ್ ಫೋಟೋವನ್ನು ಪಕ್ಕದ ಜಿಲ್ಲೆಗಳ ವಿವಿಧ ಪೊಲೀಸ್ ಠಾಣೆಗಳಿಗೆ ಕಳುಹಿಸಲಾಗಿದೆ. ನಾವು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೂ ಮಾಹಿತಿ ನೀಡಿದ್ದೇವೆ. ಸ್ಥಳೀಯ ಪೊಲೀಸರು ಶಾಲಾ ಆಡಳಿತ ಮಂಡಳಿಯೊಂದಿಗೆ ಮನವಿ ಮಾಡಿದ ನಂತರ ಶಾಲೆ ಅವರಿಗೆ ಉಚಿತ ಶಿಕ್ಷಣ ನೀಡಲು ಒಪ್ಪಿದೆ. ಹೀಗಾಗಿ ಅಂಕಿತ್ ಇರುವ ಸ್ಥಳ ಕಂಡು ಬರುವವರೆಗೂ ಖಾಸಗಿ ಶಾಲೆಯಲ್ಲಿ ಅಧ್ಯಯನ ಮಾಡುತ್ತಾನೆ ಎಂದು ನಗರದ ಕೊಟ್‍ವಾಲಿ ಎಸ್‍ಎಚ್‍ಒ ಅನಿಲ್ ಕಪರ್ವಾನ್ ತಿಳಿಸಿದ್ದಾರೆ.

  • ರಕ್ತಸಿಕ್ತವಾಗಿ ಸತ್ತು ಬಿದ್ದ ತಾಯಿ, ಮಗ- ಗಾಬರಿಗೊಂಡ ಸ್ಥಳೀಯರಿಂದ ಪೊಲೀಸ್ರಿಗೆ ಮಾಹಿತಿ

    ರಕ್ತಸಿಕ್ತವಾಗಿ ಸತ್ತು ಬಿದ್ದ ತಾಯಿ, ಮಗ- ಗಾಬರಿಗೊಂಡ ಸ್ಥಳೀಯರಿಂದ ಪೊಲೀಸ್ರಿಗೆ ಮಾಹಿತಿ

    ಲಕ್ನೋ: ತಾಯಿ ಮಗನನ್ನು ಅಮಾನುಷವಾಗಿ ಹತ್ಯೆ ಮಾಡಿರುವ ಘಟನೆ ಉತ್ತರಪ್ರದೇಶದ ಪ್ರಯಾಗ್‍ರಾಜ್‍ನಲ್ಲಿ ನಡೆದಿದೆ.

    ಕೊಲೆಯಾದ ದುರ್ದೈವಿಗಳನ್ನು ಧರ್ಮದೇವಿ(52) ಮಗ ಸುರೇಂದ್ರ(22) ಎಂದು ಗುರುತಿಸಲಾಗಿದೆ. ತಾಯಿ ಮತ್ತು ಮಗ ಇಬ್ಬರ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆಮಾಡಿ ಕೊಲ್ಲಲ್ಪಟ್ಟಿದ್ದಾರೆ. ಸೊರೊನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಸರಯಾನ್ ದಿನಾ ಗ್ರಾಮದಲ್ಲಿ ಈ ಎರಡು ಹತ್ಯೆ ನಡೆದಿದೆ.

    ಧರ್ಮದೇವಿ ತನ್ನ ಇಬ್ಬರು ಗಂಡು ಮಕ್ಕಳಾದ ಸುರೇಂದ್ರ ಮತ್ತು ಚೋಟು ಜೊತೆಗೆ ಸರಯನ್ ದಿನಾ ಗ್ರಾಮದಲ್ಲಿ ವಾಸವಾಗಿದ್ದರು. ಚೋಟು ಕೆಲವು ದಿನಗಳ ಹಿಂದೆ ಸಂಬಂಧಿಕರೊಬ್ಬರ ಮನೆಗೆ ಹೋಗಿದ್ದನು. ಸುರೇಂದ್ರ ತಾಯಿ ಜೊತೆಯಲ್ಲಿ ಮನೆಯಲ್ಲಿ ಇದ್ದನು. ತಾಯಿ ಮಗ ಇಬ್ಬರು ಮಲಗಿದ್ದಾರೆ. ಆದರೆ ಮನೆಯಿಂದ ಹೊರಗೆ ಯಾರು ಬಾರದೇ ಇರುವುದನ್ನು ಗಮನಿಸಿದ ನೆರೆಹೊರೆಯವರು ಅನುಮಾನದಿಂದ ಮನೆ ಹತ್ತಿರ ಹೋಗಿ ನೋಡಿದ್ದಾರೆ. ಆಗ ತಾಯಿ-ಮಗ ಇಬ್ಬರ ದೇಹ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿ ಗಾಬರಿಯಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಇಬ್ಬರ ಸಾವಿಗೆ ಕಾರಣ ತಿಳಿದುಬಂದಿಲ್ಲ. ಆಸ್ತಿ ವಿವಾದದಲ್ಲಿ ತಾಯಿ ಮಗನನ್ನು ಕೊಲೆ ಮಾಡಲಾಗಿದೆ ಎಂಬ ಶಂಕೆ ಇದೆ. ಈ ಅನುಮಾನದ ಮೇಲೆ ಇಬ್ಬರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡಲಾಗಿದೆ. ಶೀಘ್ರದಲ್ಲೇ ಆರೋಪಿಯನ್ನು ಪತ್ತೆ ಹಚ್ಚುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಹನಿಟ್ರ್ಯಾಪ್ ಹೆಸರಿನಲ್ಲಿ ಸುಲಿಗೆ- 5 ಮಂದಿ ಅರೆಸ್ಟ್

    ಹನಿಟ್ರ್ಯಾಪ್ ಹೆಸರಿನಲ್ಲಿ ಸುಲಿಗೆ- 5 ಮಂದಿ ಅರೆಸ್ಟ್

    – ಇಬ್ಬರು ಮಹಿಳೆಯರು, ಮೂವರು ಪುರುಷರು ಭಾಗಿ
    – ಹಣ ಇದ್ದವರೇ ಇವರ ಟಾರ್ಗೇಟ್

    ಲಕ್ನೋ: ಹನಿಟ್ರ್ಯಾಪ್ ಹೆಸರಿನಲ್ಲಿ ಸುಲಿಗೆ ಮಾಡುತ್ತಿದ್ದ ತಂಡವೊಂದನ್ನು ಪೊಲೀಸರು ಬಂಧಿಸಿದ್ದಾರೆ.

    ಆರೋಪಿಗಳು ಲೈಂಗಿಕ ವೀಡಿಯೋಗಳನ್ನು ಮಾಡುವ ಮೂಲಕ ಜನರನ್ನು ಬ್ಲ್ಯಾಕ್‍ಮೇಲ್ ಮಾಡುತ್ತಿದ್ದರು. ಇಬ್ಬರು ಮಹಿಳೆಯರು ಮತ್ತು ಮೂವರು ಪುರುಷರನ್ನೊಳಗೊಂಡ ಗ್ಯಾಂಗ್ ಅನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.

    ಗ್ಯಾಂಗ್‍ನಲ್ಲಿರುವ ಮಹಿಳೆಯರು ಉದ್ಯಮಿಗಳು, ವೈದ್ಯರು ಸೇರಿದಂತೆ ಹಣ ಇರುವವರೆನ್ನೆ ಗುರಿಯಾಗಿಸಿಕೊಂಡಿದ್ದರು. ನಂತರ ಗ್ಯಾಂಗ್‍ನಲ್ಲಿ ಉಳಿದ ಸದಸ್ಯರು ಅವನಿಗೆ ಬೆದರಿಕೆ ಹಾಕುತ್ತಿದ್ದರು. ವೀಡಿಯೊಗಳನ್ನು ವೈರಲ್ ಮಾಡುತ್ತೇವೆ ಎಂದು ಬೆದರಿಕೆ ಹಾಕುವ ಮೂಲಕ ಭಾರೀ ಮೊತ್ತದ ಹಣವನ್ನು ಈ ಗ್ಯಾಂಗ್ ಸುಲಿಗೆ ಮಾಡುತ್ತಿತ್ತು.

    ಇತ್ತೀಚೆಗೆ ಈ ಗ್ಯಾಂಗ್ ಲಕ್ನೋದ ಲೋಹಿಯಾ ಇನ್ಸಿಟ್ಯೂಟ್ ವೈದ್ಯರನ್ನು ಬಲಿಪಶುವನ್ನಾಗಿ ಮಾಡಿಕೊಂಡಿತ್ತು. ಹೇಗಾದರೂ ವೈದ್ಯರನ್ನು ಟ್ರ್ಯಾಪ್ ಮಾಡಬೇಕು ಎಂದು ಗ್ಯಾಂಗ್ ಹೊಂಚು ಹಾಕುತ್ತಿರುವಾಗ. ವೈದ್ಯರು ಈ ಗ್ಯಾಂಗ್ ಹಿಡಿತದಿಂದ ತಪ್ಪಿಸಿಕೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು.

    ನಂತರ ಲಕ್ನೋದ ವಿಭೂತಿ ಖಾಂಡ್ ಪೊಲೀಸರು ಹನಿ ಟ್ರ್ಯಾಪ್ ಮಾಡಿ ಲೈಂಗಿಕ ಸುಲಿಗೆ ಮಾಡುತ್ತಿದ್ದ ಗ್ಯಾಂಗ್ ಅನ್ನು ಪತ್ತೆ ಮಾಡಿದರು. ಬಂಧಿತ ಎಲ್ಲಾ ಆರೋಪಿಗಳನ್ನು ಪೊಲೀಸರು ಪ್ರಶ್ನಿಸುತ್ತಿದ್ದಾರೆ. ಈ ಗ್ಯಾಂಗ್‍ನಲ್ಲಿ ಇದುವರೆಗೆ ಎಷ್ಟು ಜನರು ಸಿಲುಕಿಕೊಂಡಿದ್ದಾರೆ ಎಂಬ ಬಗ್ಗೆ ಮಾಹಿತಿಯನ್ನು ಆರೋಪಿಗಳಿಂದ ಸಂಗ್ರಹಿಸಲಾಗುತ್ತಿದೆ.

  • ಗಲಾಟೆಯ ವೇಳೆ ಪತ್ನಿಯ ನಾಲಿಗೆ ಕಚ್ಚಿದ ಪತಿ

    ಗಲಾಟೆಯ ವೇಳೆ ಪತ್ನಿಯ ನಾಲಿಗೆ ಕಚ್ಚಿದ ಪತಿ

    ಲಕ್ನೋ: ಕುಡಿದು ಬಂದ ಪತಿ ಪತ್ನಿಯ ನಾಲಿ ಕಚ್ಚಿರುವ ಈ ಘಟನೆ ಲಕ್ನೋದ ತಹಸಿಲ್‍ನ ಭಟ್ಟ ಗ್ರಾಮದಲ್ಲಿ ನಡೆದಿದೆ.

    ಹೆಂಡತಿಯ ನಾಲಗೆಗೆ ಕಟ್ಟದ ಪತಿಯನ್ನು ರಚಿತ್ ರಾವತ್ ಎಂದು ಗುರುತಿಸಲಾಗಿದೆ. ಒಂದು ದಿನ ರಚಿತ್ ರಾವತ್ ಕುಡಿದು ಮನೆಗೆ ಬಂದಿದ್ದಾನೆ. ಆಗ ದಂಪತಿ ಮಧ್ಯೆ ಜಗಳ ಪ್ರಾರಂಭವಾಗಿದೆ. ನಂತರ ಗಂಡ-ಹೆಂಡತಿಯೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾನೆ. ಈ ಸಮಯದಲ್ಲಿ ರಾವತ್ ತನ್ನ ಹೆಂಡತಿ ಸುಮನ್ ಕತ್ತು ಹಿಸುಕಿದ್ದಾನೆ. ಈ ಸಮಯದಲ್ಲಿ ನಾಲಿಗೆ ಅವಳ ಬಾಯಿಂದ ಹೊರಬಂದಿದೆ. ತಕ್ಷಣ ಗಂಡ ಅವಳ ನಾಲಿಗೆಯನ್ನು ತನ್ನ ಹಲ್ಲುಗಳಿಂದ ಕಚ್ಚಿ ಕತ್ತರಿಸಿದ್ದಾನೆ.

     

    ಈ ವೇಳೆ ಸುಮನ್ ಬಾಯಿಯಿಂದ ತೀವ್ರ ರಕ್ತಸ್ರಾವವಾಗಿದೆ. ಇಷ್ಟಾದರೂ ಪತಿ ಸುಮ್ಮನಾಗಲಿಲ್ಲ. ಮತ್ತೆ ಹೊಡೆಯುವುದನ್ನು ಮುಂದುವರಿಸಿದ್ದಾನೆ. ನೆರೆಹೊರೆಯವರು ಈ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾರೆ.

    ಸ್ಥಳಕ್ಕೆ ಬಂದ ಪೊಲೀಸರು ಗಾಯಗೊಂಡ ಸುಮನ್‍ನನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಗೊಂಡಿರುವ ಸುಮನ್ ಸ್ಥಿತಿ ಗಂಭೀರವಾಗಿದೆ. ಪೊಲೀಸರು  ಆರೋಪಿ ರಚಿತ್ ರಾವತ್ ನನ್ನು ಸ್ಥಳದಲ್ಲೇ ಬಂಧಿಸಿದ್ದಾರೆ.

  • ಸಾಲ ಮರುಪಾವತಿಸಲಾಗದೆ ಕಾಲುವೆಗೆ ಹಾರಿ ರೈತ ಆತ್ಮಹತ್ಯೆ

    ಸಾಲ ಮರುಪಾವತಿಸಲಾಗದೆ ಕಾಲುವೆಗೆ ಹಾರಿ ರೈತ ಆತ್ಮಹತ್ಯೆ

    – ಮೂರುದಿನಗಳಿಂದ ಕಾಣೆಯಾಗಿದ್ದ ರೈತ
    – ಬ್ಯಾಂಕ್ ಅಧಿಕಾರಿಯ ಬೆದರಿಕೆಗೆ ಮನನೊಂದ ರೈತ

    ಲಕ್ನೋ: ಬ್ಯಾಂಕ್‍ನಿಂದ ಪಡೆದ ಸಾಲವನ್ನು ಮರುಪಾವತಿಸಲಾಗದೆ ರೈತ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರಪ್ರದೇಶದ ಧುಲ್ಲಾ ಗ್ರಾಮದಲ್ಲಿ ನಡೆದಿದೆ.

    ಆತ್ಮಹತ್ಯೆಗೆ ಶರಣಾದ ರೈತನನ್ನು ಸುರೇಶ್ (45) ಎಂದು ಗುರುತಿಸಲಾಗಿದೆ. ಈ ರೈತ ಬ್ಯಾಂಕಿನಲ್ಲಿ ಸಾಲ ಪಡೆದಿದ್ದರು. ಆದರೆ ಸಾಲ ಮರುಪಾವತಿಸಲು ಇವರಿಗೆ ಸಾಧ್ಯವಾಗಿಲ್ಲ. ಆಗ ಬ್ಯಾಂಕ್‍ನ ಅಧಿಕಾರಿಯೊಬ್ಬರು ಸಾಲ ಮರುಪಾವತಿಸುವಂತೆ ಬೆದರಿಕೆ ಹಾಕಿದ್ದಾರೆ. ಇದರಿಂದ ಮನನೊಂದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.

    ಮೃತ ರೈತ ಸುರೇಶ್ ಕುಟುಂಬದವರು ಹೇಳುವ ಪ್ರಕಾರ ಕೆಲವು ವರ್ಷಗಳ ಹಿಂದೆ ರೈತ ಸುರೇಶ್ ಅವರು ಬ್ಯಾಂಕಿನಿಂದ 4 ರಿಂದ 5 ಲಕ್ಷ ಸಾಲವನ್ನು ಪಡೆದುಕೊಂಡಿದ್ದರು. ಆದರೆ ಈ ಬಾರಿ ಬೆಳೆ ಸರಿಯಾಗಿ ಬರದೆ ಇರುವ ಕಾರಣದಿಂದಾಗಿ ಸಾಲವನ್ನು ಮರುಪಾವತಿಸಲು ಸಾಧ್ಯವಾಗಲಿಲ್ಲ. ಒಂದು ದಿನ ಬ್ಯಾಂಕ್‍ನ ಅಧಿಕಾರಿಯೊಬ್ಬರು ಸಾಲವನ್ನು ಮರುಪಾವತಿಸದಿದ್ದರೆ ಮನೆಗೆ ಬರುತ್ತೇವೆ ಎಂದು ಬೆದರಿಕೆ ಹಾಕಿದ್ದರು ಎಂದು ಹೇಳಿದ್ದಾರೆ.

    ಬ್ಯಾಕ್ ಅಧಿಕಾರಿ ಸಾಲ ಮರುಪಾವತಿಸಲು ಒತ್ತಡ ಹೇರಿದ ದಿನದಿಂದಲೂ ಒತ್ತಡದಲ್ಲಿದ್ದರು. ಮೂರು ದಿನಗಳಿಂದ ಮನೆಯಿಂದ ಕಾಣೆಯಾಗಿದ್ದರು. ಆದರೆ ಇದೀಗ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅತ್ರಾರಾ ಗ್ರಾಮದ ಕಾಲುವೆಯಲ್ಲಿ ಅವರ ಶವ ಪತ್ತೆಯಾಗಿದೆ ಎಂದು ಮೃತ ರೈತ ಸುರೇಶ್ ಅವರ ಸಹೋದರ ಜಗದೀಶ್ ತಿಳಿಸಿದ್ದಾರೆ.

    ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಈ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.