Tag: lucknow

  • ನಡು ರಸ್ತೆಯಲ್ಲಿಯೇ ವ್ಯಕ್ತಿಯನ್ನು ಗುಂಡಿಟ್ಟು ಕೊಂದ ಗ್ಯಾಂಗ್

    ನಡು ರಸ್ತೆಯಲ್ಲಿಯೇ ವ್ಯಕ್ತಿಯನ್ನು ಗುಂಡಿಟ್ಟು ಕೊಂದ ಗ್ಯಾಂಗ್

    ಲಕ್ನೋ: ನಡು ರಸ್ತೆಯಲ್ಲಿ ವ್ಯಕಿಯೊಬ್ಬನನ್ನು ತಂಡವೊಂದು ಗುಂಡಿಕ್ಕಿ ಕೊಂದ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ಬುಧವಾರ ನಡೆದಿದೆ. ಮೃತ ವ್ಯಕ್ತಿ ರಾಜಕಾರಣಿ ಮುಖ್ತಾರ್ ಅನ್ಸಾರಿ ಆಪ್ತ ಸಹಾಯಕ ಎಂದು ತಿಳಿದುಬಂದಿದೆ.

    ವಿಭೂತಿ ಖಾಂಡ್‍ನ ನಡುರಸ್ತೆಯಲ್ಲಿ ಮೃತಪಟ್ಟ ವ್ಯಕ್ತಿಯನ್ನು ಅಜೀತ್ ಸಿಂಗ್ ಎಂದು ಗುರುತಿಸಲಾಗಿದೆ. ಆತನ ಜೊತೆ ಇದ್ದ ಮತ್ತೊಬ್ಬ ವ್ಯಕ್ತಿ ಮೋಹನ್ ಸಿಂಗ್ ಗುಂಡಿನ ದಾಳಿಯಿಂದ ಗಂಭೀರ ಗಾಯಗೊಂಡಿದ್ದಾನೆ.

    ಅಜೀತ್ ಸಿಂಗ್ ಉತ್ತರ ಪ್ರದೇಶದ ಮಾವುವಿನ ಮಾಜಿ ಬ್ಲಾಕ್ ಪ್ರಮುಖ್ ಆಗಿದ್ದರು. ಗ್ಯಾಂಗ್ ಒಂದು ಆತ ಇದ್ದ ಸ್ಥಳಕ್ಕೆ ಧಾವಿಸಿ ಆತನನ್ನು ಹಾಗೂ ಆತನ ಜೊತೆ ಇದ್ದವನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಅಲ್ಲದೆ ಘಟನೆ ವೇಳೆ ರಸ್ತೆಯಲ್ಲಿ ಹಾದು ಹೋಗುವಾಗ ಆಹಾರ ವಿತರಣಾ ಏಜೆಂಟ್ ಆಕಾಶ್ ಎಂಬ ವ್ಯಕ್ತಿಯ ಕಾಲಿಗೆ ಬುಲೆಟ್ ತಗುಲಿ ಗಾಯವಾಗಿದೆ ಹಾಗೂ ಕೊಲೆ ಮಾಡಿದ ನಂತರ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ವರದಿಯಲ್ಲಿ ತಿಳಿದುಬಂದಿದೆ.

    ಸುದ್ದಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಬಂದ ಪೊಲೀಸರು ಆಕಾಶ್ ಮತ್ತು ಅಜೀತ್ ಸಿಂಗ್ ಸಹಚರರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಜೀತ್ ಸಿಂಗ್ ಅವರ ಸಹವರ್ತಿ ಆರೋಗ್ಯವಾಗಿದ್ದಾರೆಂದು ವೈದ್ಯರು ತಿಳಿಸಿರುವುದಾಗಿ ಲಕ್ನೋ ಪೊಲೀಸ್ ಆಯುಕ್ತ ಡಿಕೆ ಠಾಕೂರ್ ತಿಳಿಸಿದ್ದಾರೆ.

    ಘಟನೆ ಸಂಬಂಧಿಸಿದಂತೆ ಕುಲಂಕುಶವಾಗಿ ತನಿಖೆ ನಡೆಸಿದ ಡಿಕೆ ಠಾಕೂರ್ ಈ ಘಟನೆ ಬುಧವಾರ ರಾತ್ರಿ 8 ರಿಂದ ರಾತ್ರಿ 8.45ರ ಸುಮಾರಿನಲ್ಲಿ ನಡೆದಿದೆ. ಸಿಂಗ್ ಕ್ರಿಮಿನಲ್ ಆಗಿದ್ದು, ಆತನ ವಿರುದ್ಧ ಈವರೆಗೂ ಸುಮಾರು 17-18 ಪ್ರಕರಣಗಳು ದಾಖಲಾಗಿವೆ. ಘಟನೆ ಕುರಿತಂತೆ ಇನ್ನೂ ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದರು.

  • ತಲೆಇಲ್ಲದ ಮೃತ ದೇಹ ಚರಂಡಿಯಲ್ಲಿ ಪತ್ತೆ- ಗ್ರಾಮಸ್ಥರಲ್ಲಿ ಆತಂಕ

    ತಲೆಇಲ್ಲದ ಮೃತ ದೇಹ ಚರಂಡಿಯಲ್ಲಿ ಪತ್ತೆ- ಗ್ರಾಮಸ್ಥರಲ್ಲಿ ಆತಂಕ

    ಲಕ್ನೋ: ತಲೆ ಇಲ್ಲದ ಯುವಕನ ಮೃತ ದೇಹ ಚರಂಡಿಯಲ್ಲಿ ಪತ್ತೆಯಾಗಿರುವ ಘಟನೆ ಫಿರೋಜಾಬಾದ್‍ನಲ್ಲಿ ನಡೆದಿದೆ.

    ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯ ಪೊಲೀಸ್ ಠಾಣಾ ಪ್ರದೇಶವಾದ ಶಿಕೋಹಾಬಾದ್‍ನ ರಾಮ್‍ನಗರ ಗ್ರಾಮದಲ್ಲಿ ವಿಕೃತವಾಗಿ ಕೊಲೆಯಾದ ತಲೆ ಇಲ್ಲದ ದೇಹ ಪತ್ತೆಯಾಗಿದ್ದು, ಗ್ರಾಮದಲ್ಲಿ ಆತಂಕ ಉಂಟುಮಾಡಿದೆ.

    ರಾಮ್‍ನಗರ ಗ್ರಾಮದ ರೈತರು ಪ್ರತಿದಿನ ತಮ್ಮ ಹೊಲಗಳಿಗೆ ಬೆಳೆ ನೋಡಲು ಹೋಗುತ್ತಿದ್ದರು. ಈ ವೇಳೆ ಹೊಲದ ಬಳಿ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ್ದಾರೆ. ಏನಿರಬಹುದು ಎಂದು ಸುತ್ತಾಮುತ್ತ ಹುಡುಕಿದ್ದಾರೆ. ಆಗ ತಲೆ ಇಲ್ಲದೆ ಬಿದ್ದಿದ್ದ ವ್ಯಕ್ತಿಯ ಮೃತ ದೇಹವನ್ನು ಕಂಡು ಗ್ರಾಮಸ್ಥರು ಗುಂಪು ಸೇರಿದ್ದಾರೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಮೃತ ಯುವಕನ ವಯಸ್ಸನ್ನು ಸುಮಾರು 25 ರಿಂದ 30 ವರ್ಷಗಳು ಎಂದು ಹೇಳಲಾಗುತ್ತಿದೆ. ಆದರೆ ಈ ಅಪರಿಚಿತ ವ್ಯಕ್ತಿ ಯಾರು? ಮತ್ತು ಯಾವ ಕಾರಣಕ್ಕಾಗಿ ಕೊಲೆಯಾಗಿದ್ದಾನೆ ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ. ಸದ್ಯ ಪೊಲೀಸರು ಸ್ಥಳಕ್ಕೆ ಬಂದು ತನಿಖೆ ಆರಂಭಿಸಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಕುಮಾರ್ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.

    ತಲೆ ಇಲ್ಲದ ದೇಹ ಮೈನ್‍ಪುರಿ ರಸ್ತೆಯ ಮೈನಿ ಗ್ರಾಮದ ಬಳಿ ಪತ್ತೆಯಾಗಿದೆ. ಈ ಪ್ರದೇಶದಲ್ಲಿ ಹೆಚ್ಚಾಗಿ ಹುಲ್ಲುಗಾವಲು ಇದೆ. ಚರಂಡಿಯಲ್ಲಿ ತಲೆ ಕತ್ತರಿಸಿದ ಶವ ಪತ್ತೆಯಾಗಿರುವ ಹಿನ್ನೆಲೆ ತನಿಖೆ ನಡೆಸುತ್ತಿದ್ದೇವೆ. ಕೊಲೆಯಾಗಿ ಇಲ್ಲಿ ಎಸೆಯಲ್ಪಟ್ಟ ವ್ಯಕ್ತಿ ಯಾರು ಎಂದು ತಿಳಿದುಬರಬೇಕು. ಸದ್ಯ ದೇಹದಿಂದ ಬೆರ್ಪಟ್ಟ ತಲೆಗಾಗಿ ಹುಡುಕಾಟ ನಡೆಸುತ್ತಿದ್ದೇವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಕುಮಾರ್ ತಿಳಿಸಿದ್ದಾರೆ.

  • ಹತ್ತಿರ ಬರ್ತಿದೆ ಇನ್ನೇನು ಎದ್ದೇಳ್ತೀನಿ ಅಂದಾಗ ಹರಿದೇ ಬಿಟ್ಟ ರೈಲು- ಯುವಕನ ದೇಹ ಇಬ್ಭಾಗ

    ಹತ್ತಿರ ಬರ್ತಿದೆ ಇನ್ನೇನು ಎದ್ದೇಳ್ತೀನಿ ಅಂದಾಗ ಹರಿದೇ ಬಿಟ್ಟ ರೈಲು- ಯುವಕನ ದೇಹ ಇಬ್ಭಾಗ

    – ಚಿಕಿತ್ಸೆಯ ವೇಳೆ ಯಾರ ತಪ್ಪಿಲ್ಲ ಎನ್ನುತ್ತಲೇ ಪ್ರಾಣ ಬಿಟ್ಟ

    ಲಕ್ನೋ: ರೈಲು ಹರಿದು ದೇಹ ಎರಡು ಭಾಗವಾಗಿ ಬಿದ್ದಿದ್ದರೂ ಯಾರ ತಪ್ಪಿಲ್ಲ ಎನ್ನುತ್ತಾ ಯುವಕ ಪ್ರಾಣ ಬಿಟ್ಟಿರುವ ಘಟನೆ ಉತ್ತರ ಪ್ರದೇಶದ ಶಹಜನ್‍ಪುರದಲ್ಲಿ ನಡೆದಿದೆ.

    ಮೃತ ಯುವಕನನ್ನು ಹರ್ಷವರ್ಧನ್(19) ಎಂದು ಗುರುತಿಸಲಾಗಿದೆ. ರೈಲಿಗಾಗಿ ಕಾಯುತ್ತಾ ಕುಳಿತಿದ್ದ ಯುವಕ ರೈಲು ಹತ್ತಿರ ಬರುತ್ತಿದೆ ಎಂದು ಎದ್ದು ಹೋಗಬೇಕು ಎನ್ನುವಷ್ಟರಲ್ಲಿ ಆತನ ಮೇಲೆ ರೈಲು ಹರಿದೇ ಬಿಟ್ಟಿದೆ.

     

    ಹರ್ಷವರ್ಧನ್ ತಾಯಿಯ ಬಳಿ ಹಣ ಪಡೆದು ಹೊರಗೆ ಹೋಗಿ ಬರುವುದಾಗಿ ಹೇಳಿ ಬಂದಿದ್ದಾನೆ. ರೈಲ್ವೆ ಹಳಿಯ ಮೇಲೆ ಕೂತು ರೈಲಿಗಾಗಿ ಕಾಯುತ್ತಾ ಕುಳಿತಿದ್ದಾನೆ. ಆಗ ರೈಲು ಹತ್ತಿರ ಬಂತು ಇನ್ನೇನು ಎದ್ದು ದೂರ ಸರಿಯಬೇಕು ಎನ್ನುವಷ್ಟರಲ್ಲಿ ಯುವಕನ ಮೇಲೆ ರೈಲು ಹರಿದಿದೆ. ಕಾಲಿನ ಮೇಲ್ಭಾಗ ಚರಂಡಿಯಲ್ಲಿ ಬಿದ್ದಿದೆ. ಯುವಕ ಚರಂಡಿಯಲ್ಲಿ ನರಳಾಡಿದ್ದಾನೆ. ಅಲ್ಲೇ ಹತ್ತಿರದಲ್ಲಿದ್ದವರು ಯುವಕನ ನರಳಾಟವನ್ನು ನೋಡಿ ಆಸ್ಪತ್ರೆಗೆ ದಾಖಲು ದಾಖಲಿಸಿದ್ದಾರೆ.

    ರೈಲ್ವೆ ಅಪಘಾತದಲ್ಲಿ ಗಾಯಗೊಂಡ ಹರ್ಷವರ್ಧನ್‍ಗೆ 13 ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದಾರೆ. ಆ ವೇಳೆ ಯುವಕ ಈ ಅಪಘಾತದಲ್ಲಿ ಯಾರದ್ದೂ ತಪ್ಪಿಲ್ಲ ಎಂದು ಪದೇ ಪದೇ ಹೇಳುತ್ತಿದ್ದನಂತೆ. ಆದರೆ ಅಪಘಾತದಲ್ಲಿ ಹೆಚ್ಚಿನ ರಕ್ತ ಸ್ರಾವವಾದ ಕಾರಣ ಯುವಕ ಕೊನೆಯುಸಿರೆಳೆದಿದ್ದಾನೆ.

    ಸದ್ಯ ಯುವಕ ರೈಲು ಹತ್ತಿರ ಬರುವವರೆಗೂ ಯಾಕೆ ಸುಮ್ಮನೆ ಕುಳಿತ್ತಿದ್ದನು ಎನ್ನುವುದು ತನಿಖೆಯಿಂದ ತಿಳಿದು ಬರಬೇಕಿದೆ.

  • ದೇವಸ್ಥಾನಕ್ಕೆ ಹೋಗಿದ್ದ ಮಹಿಳೆ ಮೇಲೆ ಅತ್ಯಾಚಾರ – ಇಬ್ಬರು ಅರೆಸ್ಟ್

    ದೇವಸ್ಥಾನಕ್ಕೆ ಹೋಗಿದ್ದ ಮಹಿಳೆ ಮೇಲೆ ಅತ್ಯಾಚಾರ – ಇಬ್ಬರು ಅರೆಸ್ಟ್

    – ಪೂಜಾರಿ ಮತ್ತು ಅವನ ಸಹಚರರಿಂದ ಕೃತ್ಯ

    ಲಕ್ನೋ: 50 ವರ್ಷದ ಮಹಿಳೆ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಆರೋಪದಡಿ ಪೂಜಾರಿ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ.

    ಭಾನುವಾರ ದೇವಸ್ಥಾನಕ್ಕೆ ತೆರಳಿದ್ದ 50 ಮಹಿಳೆಯ ಮೇಲೆ ಪೂಜಾರಿ ಸೇರಿದಂತೆ ಮೂವರು ಅತ್ಯಾಚಾರ ನಡೆಸಿ ಮಹಿಳೆಯನ್ನು ಕೊಲೆಗೈದಿದ್ದಾರೆ. ಈ ಮೂವರು ಆರೋಪಿಗಳಲ್ಲಿ ಈಗಾಗಲೇ ಇಬ್ಬರನ್ನು ಬಂಧಿಸಲಾಗಿದ್ದು, ಪೂಜಾರಿ ಪರಾರಿಯಾಗಿದ್ದಾನೆ.

    ಮರಣೋತ್ತರ ಪರೀಕ್ಷೆಯಲ್ಲಿ ಮಹಿಳೆ ಮೇಲೆ ಅತ್ಯಾಚಾರ ನಡೆದಿದೆ ಎಂದು ತಿಳಿದು ಬಂದಿದೆ. ಆಕೆಯ ಖಾಸಗಿ ಅಂಗಗಳಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಸಂತ್ರಸ್ತೆಯ ಕುಟುಂಬದವರು ದೇವಸ್ಥಾನದ ಪೂಜಾರಿ ಮತ್ತು ಆತನ ಸಹಚರರ ವಿರುದ್ಧ ದೂರು ದಾಖಲಿಸಿದ್ದಾರೆ. ಆರೋಪಿಗಳಲ್ಲಿ ಇಬ್ಬರನ್ನು ಬಂಧಿಸಿದ್ದೇವೆ. ಆದರೆ ಪೂಜಾರಿ ತಲೆ ಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿಗಳನ್ನು ಪತ್ತೆ ಹಚ್ಚಲು ನಾಲ್ಕು ತಂಡಗಳನ್ನು ಮಾಡಿದ್ದೇವೆ. ಈ ಪ್ರಕರಣದ ಕುರಿತಾಗಿ ನಿರ್ಲಕ್ಷ್ಯ ತೋರಿದ ಅಧಿಕಾರಿಯೊಬ್ಬರನ್ನು ಅಮಾನತೊಗೊಳಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಂಕಲ್ಷ ಶರ್ಮಾ ಹೇಳಿದ್ದಾರೆ.

  • ಮೂರು ಮಕ್ಕಳ ತಾಯಿಯ ತಲೆಗೆ ಇಟ್ಟಿಗೆಯಿಂದ ಹೊಡೆದು ಕೊಂದು ನದಿಗೆ ಎಸೆದ ಪ್ರಿಯಕರ!

    ಮೂರು ಮಕ್ಕಳ ತಾಯಿಯ ತಲೆಗೆ ಇಟ್ಟಿಗೆಯಿಂದ ಹೊಡೆದು ಕೊಂದು ನದಿಗೆ ಎಸೆದ ಪ್ರಿಯಕರ!

    ಲಕ್ನೋ : ಲಿವಿಂಗ್ ಟುಗೆದರ್ ರಿಲೇಶನ್‍ಶಿಪ್‍ನಲ್ಲಿ ಇರುವ ಪ್ರೇಮಿ ತನ್ನ ಗೆಳತಿಯ ತಲೆಗೆ ಇಟ್ಟಿಗೆಯಿಂದ ಹೊಡೆದು ಕೊಂದು ನದಿಗೆ ಎಸೆದಿರುವ ಘಟನೆ ಉತ್ತರ ಪ್ರದೇಶದ ಮಹಾರಾಜ್ ಗಂಜ್‍ನಲ್ಲಿ ನಡೆದಿದೆ.

    ಆರೋಪಿ ಪ್ರೇಮಿಯನ್ನು ವೀರೇಂದ್ರ ಸಾಹ್ನಿ ಎಂದು ಗುರುತಿಸಲಾಗಿದೆ. ಪ್ರಿಯಕರನಿಂದ ಕೊಲೆಯಾದವಳು ಶರ್ಮಿಲಿ. ಈಕೆ ತನ್ನ ಪತಿಯಿಂದ ವಿಚ್ಛೇದನ ಪಡೆದು ವೀರೇಂದ್ರನೊಂದಿಗೆ ಸಂಬಂಧದಲ್ಲಿದ್ದಳು. ಈ ಸಮಯದಲ್ಲಿ ಮಹಿಳೆ ಮೂರು ಮಕ್ಕಳಿಗೆ ಜನ್ಮ ನೀಡಿದ್ದಾಳೆ.

    ಪುರಂದರ್‍ಪುರ ಪೊಲೀಸ್ ಠಾಣೆ ಪ್ರದೇಶದ ತೆಹ್ರಿ ಘಾಟ್ ಗ್ರಾಮದಲ್ಲಿ ಲಿವಿಂಗ್ ಟುಗೆದರ್ ಸಂಬಂಧದಲ್ಲಿ ವಾಸಿಸುತ್ತಿದ್ದ ಶರ್ಮಿಲಿ ಆರು ತಿಂಗಳ ಹಿಂದೆ ಕಾಣೆಯಾಗಿದ್ದಳು. ಆ ಸಮಯದಲ್ಲಿ ಮಹಿಳೆಯ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರಿನ ಮೇರೆಗೆ ತನಿಖೆಯನ್ನು ನಡೆಸುತ್ತಿದ್ದೆವು ಎಂದು ಪೊಲಿಸರು ತಿಳಿಸಿದ್ದಾರೆ.

    ಠಾಣೆಯಲ್ಲಿ 2020ರ ಜುಲೈ ತಿಂಗಳಲ್ಲಿಯೇ ಕಿರುಕುಳ ಮತ್ತು ಅಪಹರಣ ಪ್ರಕರಣವನ್ನು ದಾಖಲಿಸಲಾಗಿತ್ತು. ಕೊರೊನಾದ ಕಾರಣ ತ್ವರಿತವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಆರೋಪಿ ತಪ್ಪಿಸಿಕೊಂಡಿದ್ದನು. ಆದರೆ ಪ್ರಕರಣದ ತನಿಖೆ ಮತ್ತೆ ಪ್ರಾರಂಭವಾದಾಗ ಮಹಿಳೆಯ ಪ್ರೇಮಿಯನ್ನು ವಿಚಾರಿಸಿದಾಗ, ಅವನು ತನ್ನ ಅಪರಾಧವನ್ನು ಒಪ್ಪಿಕೊಂಡನು ಎಂದು ಪೊಲೀಸರು ತಿಳಿಸಿದ್ದಾರೆ.

    ಒಂದು ದಿನ ರಾತ್ರಿ ಇಬ್ಬರ ಮಧ್ಯೆ ಜಗಳವಾಯಿತ್ತು. ನಂತರ ಮಹಿಳೆ ಮನೆಯಿಂದ ಹೊರಹೋದಳು. ಈ ಸಮಯದಲ್ಲಿ ಆಕೆಯ ತಲೆಗೆ ಇಟ್ಟಿಗೆಯಿಂದ ಹೊಡೆದಿದ್ದೇನೆ. ಆಗ ಶರ್ಮಿಲಿ ಪ್ರಜ್ಞಾಹೀನಳಾಗಿ ಕುಸಿದುಬಿದ್ದಳು. ನಂತರ ಆಕೆಯನ್ನು ನದಿಗೆ ಎಸೆದಿದ್ದೇನೆ ಎಂದು ವೀರೇಂದ್ರ ಹೇಳಿದ್ದಾನೆ. ತಾನು ಮಾಡಿರುವ ಕೃತ್ಯವನ್ನು ಒಪ್ಪಿಕೊಂಡ ನಂತರ ಪೊಲೀಸರು ವೀರೇಂದ್ರ ಸಾಹ್ನಿಯನ್ನು ಬಂಧಿಸಿ ಮಂಗಳವಾರ ಜೈಲಿಗೆ ಕಳುಹಿಸಿದ್ದಾರೆ.

  • ಅಂಚೆ ಚೀಟಿಯಲ್ಲಿ ಭೂಗತ ಪಾತಕಿಗಳ ಚಿತ್ರ!

    ಅಂಚೆ ಚೀಟಿಯಲ್ಲಿ ಭೂಗತ ಪಾತಕಿಗಳ ಚಿತ್ರ!

    – ಅಂಚೆ ಕಚೇರಿ ಸಿಬ್ಬಂದಿಯಿಂದ ಎಡವಟ್ಟು

    ಲಕ್ನೋ: ಅಂಚೆ ಕಚೇರಿ ಬಿಡುಗಡೆಗೊಳಿಸಿದ ಅಂಚೆ ಇಲಾಖೆಯ ಚೀಟಿ(ಸ್ಟಾಂಪ್) ನಲ್ಲಿ ಭೂಗತ ಪಾತಕಿಗಳ ಚಿತ್ರ ಇರುವುದು ಉತ್ತರಪ್ರದೇಶದ ಕಾನ್ಪುರ ಮುಖ್ಯ ಅಂಚೆ ಕಚೇರಿಯಲ್ಲಿ ಕಂಡು ಬಂದಿದೆ.

    ಕುಖ್ಯಾತ ಭೂಗತ ದೊರೆಗಳಾದ ಛೋಟಾ ರಾಜನ್ ಮತ್ತು ಮುನ್ನಾ ಭಜರಂಗಿ ಚಿತ್ರವಿರುವ 24 ಸ್ಟಾಂಪ್‍ಗಳನ್ನು ಬಿಡುಗಡೆ ಮಾಡಲಾಗಿದೆ.

    ಮೈ ಸ್ಟಾಂಪ್ ಯೋಜನೆಯಡಿ ಇಂಡಿಯಾ ಪೋಸ್ಟ್‍ನ ಅಂಚೆ ಚೀಟಿಗಳ ವೈಯಕ್ತಿಕ ಹಾಳೆಗಳನ್ನು ಪಡೆಯಲು ಅವಕಾಶ ನೀಡುತ್ತದೆ. ಈ ಸ್ಟಾಂಪ್‍ಗಳನ್ನು ಬಿಡುಗಡೆ ಮಾಡುವಾಗ ಅಚಾತುರ್ಯವೊಂದು ನಡೆದಿರುವುದು ಇದೀಗ ಭಾರೀ ಸುದ್ದಿಯಲ್ಲಿದೆ.

    ಅಂಚೆ ಚೀಟಿಗಳನ್ನು ಮಾಡುವಾಗ ಸಂಬಂಧಪಟ್ಟ ವ್ಯಕ್ತಿಗಳ ಗುರುತು ಪತ್ರವನ್ನು ಪಡೆದಿಲ್ಲ. ಅಲ್ಲದೇ ಅರ್ಜಿ ಸಲ್ಲಿಸಿದ ವ್ಯಕ್ತಿಗಳು ಯಾರು ಎಂದು ಗೊತ್ತಿಲ್ಲ. ಈ ಹಿನ್ನೆಲೆಯಲ್ಲಿ ಅಂಚೆ ಚೀಟಿ ಸಂಗ್ರಹಣ ವಿಭಾಗದ ಮುಖ್ಯಸ್ಥ ರಜನೀಶ್ ಕುಮಾರ್‍ನನ್ನು ಅಮಾನತುಗೊಳಿಸಲಾಗಿದೆ.

    ಅಂಚೆ ಇಲಾಖೆ ಮೈ ಸ್ಟಾಂಪ್ ಯೋಜನೆಯಡಿ ವ್ಯಕ್ತಿಗಳು ತಮ್ಮ ಅಥವಾ ಕುಟುಂಬ ಸದಸ್ಯರು ಸ್ಟಾಂಪ್‍ಗಳನ್ನು ಹೊಂದಲು ಅವಕಾಶ ನೀಡಿದೆ.

  • 4 ಲಕ್ಷ ರೂ ಇದ್ದ ಬ್ಯಾಗ್‍ನೊಂದಿಗೆ ಮರವೇರಿ ಹಣ ಬಿಸಾಕಿದ ಕೋತಿ!

    4 ಲಕ್ಷ ರೂ ಇದ್ದ ಬ್ಯಾಗ್‍ನೊಂದಿಗೆ ಮರವೇರಿ ಹಣ ಬಿಸಾಕಿದ ಕೋತಿ!

    ಲಕ್ನೋ: ಕಪಿಯೊಂದು 4 ಲಕ್ಷ ರೂಪಾಯಿ ನಗದು ಹೊಂದಿರುವ ಬ್ಯಾಗ್ ಎತ್ತಿಕೊಂಡು ಮರವೇರಿದ ಘಟನೆ ಉತ್ತರ ಪ್ರದೇಶದ ಸೀತಾಪುರ್‍ನಲ್ಲಿ ನಡೆದಿದೆ.

    ಒಂದು ದಿನ ಸೀತಾರ್‍ಪುರ್‍ನ ವಿಕಾಸ್ ಭವನದ ರಿಜಿಸ್ಟರ್( ನೋಂದಣಿ) ಕಚೇರಿಯ ಮುಂಭಾಗದಲ್ಲಿ ಹಿರಿಯ ವ್ಯಕ್ತಿಯೊಬ್ಬರು 4 ಲಕ್ಷ ರೂಪಾಯಿ ಹಣ ಇರುವ ಬ್ಯಾಗನ್ನು ಹಿಡಿದು ಕುಳಿತುಕೊಂಡಿದ್ದರು. ಆಗ ಏಕಾಏಕಿ ಅವರ ಹತ್ತಿರ ಬಂದ ಕೋತಿ ಹಣ ಇರುವ ಬ್ಯಾಗನ್ನು ಎತ್ತಿಕೊಂಡು ಮರವನ್ನು ಏರಿ ಕುಳಿತುಕೊಂಡಿತ್ತು.

    ಹಣದ ಬ್ಯಾಗನ್ನು ಎತ್ತಿಕೊಂಡ ಕೋತಿ ರಿಜಿಸ್ಟರ್ ಕಚೇರಿಯ ಹೊರಗಿನ ಮರದ ಮೇಲೆ ಕುಳಿತು ಬ್ಯಾಗ್‍ನಲ್ಲಿರುವ ನೋಟುಗಳನ್ನು ಎಸೆಯಲು ಪ್ರಾರಂಭ ಮಾಡಿತ್ತು. ಕಚೇರಿಯ ಸುತ್ತಮುತ್ತ ನೋಟುಗಳು ಗಾಳಿಯಲ್ಲಿ ಹಾರಿಕೊಂಡು ಬಂದು ಬೀಳುತ್ತಿರುವುದನ್ನು ನೋಡಿದ ಜನರಿಗೆ ಆಶ್ಚರ್ಯ ಮತ್ತು ಅಚ್ಚರಿ ಉಂಟಾಗಿದೆ. ಏನಿದು ಎಂದು ಹತ್ತಿರ ಹೋಗಿ ನೋಡಿದ ಜನರಿಗೆ ಕಪಿಯ ಚೇಷ್ಟೆ ಕುರಿತಾಗಿ ತಿಳಿದಿದೆ.

    ಕೊನೆಗೆ ಕೋತಿ ಹಣದ ಬ್ಯಾಗನ್ನು ಕೆಳಕ್ಕೆ ಎಸೆದಿತ್ತು. ನಂತರ ಬ್ಯಾಗನಲ್ಲಿದ್ದ ಹಣವನ್ನು ಪರಿಶೀಲನೆ ಮಾಡಿದಾಗ 10 ರಿಂದ 12 ಸಾವಿರ ರೂಪಾಯಿಗಳನ್ನು ಮಂಗ ಕೆಳಗೆ ಎಸೆದಿದೆ ಎಂದು ತಿಳಿದು ಬಂದಿದೆ.

  • ಕಾಲುವೆಗೆ ಬಿದ್ದ 5ರ ಕಂದಮ್ಮನನ್ನು ರಕ್ಷಿಸಲು ಹೋಗಿ ತಂದೆ-ಮಗಳು ದುರ್ಮರಣ

    ಕಾಲುವೆಗೆ ಬಿದ್ದ 5ರ ಕಂದಮ್ಮನನ್ನು ರಕ್ಷಿಸಲು ಹೋಗಿ ತಂದೆ-ಮಗಳು ದುರ್ಮರಣ

    – ಪಾರ್ಕ್ ಬಳಿಯ ಕಾಲುವೆಯಲ್ಲಿ ದುರ್ಘಟನೆ

    ಲಕ್ನೋ: ಡ್ಯಾಂ ಬಳಿಯ ಕಾಲುವೆಗೆ ಬಿದ್ದ 5 ವರ್ಷದ ಮಗಳನ್ನು ರಕ್ಷಿಸಲು ಹೋದ ಶಿಕ್ಷಕಿ ಮತ್ತು ಆಕೆಯ ತಂದೆ ಇಬ್ಬರು ಕಾಲುವೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಮೃತ ದುರ್ದೈವಿಗಳನ್ನು ನಾಜಿಯಾ ಶರೂನ್(31) ಮತ್ತು ಈಕೆಯ ತಂದೆ ಟಿ.ಪಿ ಹಸ್ಸೆಐನರ್(61) ಎಂದು ಗುರುತಿಸಲಾಗಿದೆ. ನಾಜಿಯಾ ಲಲಿತ್‍ಪುರ್ ಕೇಂದ್ರೀಯ ವಿದ್ಯಾಲಯದಲ್ಲಿ ಶಿಕ್ಷಕಿಯಾಗಿದ್ದಳು. ಈಕೆ ತಂದೆ ತಿರುವನಂತಪುರನ ಕಿಲಿಮನೋರ್ ಪುಲಿಮಥ್ ನಿವಾಸಿಯಾಗಿದ್ದರು.

    ನಾಜಿಯಾ ತನ್ನ ಮಗಳು ಹಾಗೂ ತಂದೆ ಮೂವರು ಸೇರಿ ಲಲಿತ್‍ಪುರ್‍ನಲ್ಲಿರುವ ಮತಾತಿಲ ಡ್ಯಾಂ ಬಳಿಯಿರುವ ಪಾರ್ಕಿಗೆ ಹೋಗಿದ್ದಾರೆ. ಈ ವೇಳೆ ಮಗು ಕೊಳದ ಬಳಿ ಆಟವಾಡುತ್ತಿತ್ತು. ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿದ್ದಾಳೆ. ಇದನ್ನು ಗಮನಿಸಿದ ತಂದೆ- ಮಗಳು ಇಬ್ಬರು ಕಾಲುವೆಗೆ ಹಾರಿದ್ದಾರೆ. ಆದರೆ ಕಾಲುವೆಯಲ್ಲಿ ಬಿದ್ದ ಮಗುವನ್ನು ಅಲ್ಲೇ ಹತ್ತಿರದಲ್ಲಿ ಇದ್ದ ಸ್ಥಳೀಯರು ಬಂದು ರಕ್ಷಿಸಿದ್ದಾರೆ. ಇನ್ನು ತಂದೆ-ಮಗಳನ್ನು ರಕ್ಷಸುವಷ್ಟರಲ್ಲಿ ಇಬ್ಬರು ನೀರಿನಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾರೆ.

    ಮುಳುಗು ತಜ್ಞರ ಸಹಾಯದಿಂದ ತಂದೆ- ಮಗಳ ಮೃತದೇಹವನ್ನು ನೀರಿನಿಂದ ಹೊರತೆಗಲಾಗಿದೆ. ಇಬ್ಬರ ಮೃತದೇಹವನ್ನು ಉತ್ತರ ಪ್ರದೇಶದಿಂದ ಕೇರಳದ ಪುಲಿಮತ್‍ಗೆ ತಂದು ಅಂತಿಮ ಸಂಸ್ಕಾರ ನೆರವೇರಿಸಲಾಗಿದೆ.

  • ಕಾರ್ಖಾನೆಯಲ್ಲಿ ಅನಿಲ ಸೋರಿಕೆ- ಇಬ್ಬರು ಸಾವು, 15 ಮಂದಿ ಅಸ್ವಸ್ಥ

    ಕಾರ್ಖಾನೆಯಲ್ಲಿ ಅನಿಲ ಸೋರಿಕೆ- ಇಬ್ಬರು ಸಾವು, 15 ಮಂದಿ ಅಸ್ವಸ್ಥ

    – 15 ಮಂದಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ

    ಲಕ್ನೋ: ರಸಗೊಬ್ಬರ ಕಾರ್ಖಾನೆಯಲ್ಲಿ ಅನಿಲ ಸೋರಿಕೆಯಾಗಿರುವ ಪರಿಣಾಮ ಇಬ್ಬರು ಅಧಿಕಾರಿಗಳು ಸಾವನ್ನಪ್ಪಿ, 15 ಜನ ಅಸ್ವಸ್ಥರಾಗಿರುವ ಘಟನೆ ಉತ್ತರ ಪ್ರದೇಶದ ಪ್ರಯಾಗ್ ರಾಜ್‍ನಲ್ಲಿರು ಇಫ್ಕೋ ಕಾರ್ಖಾನೆಯಲ್ಲಿ ನಡೆದಿದೆ.

    ಮೃತರನ್ನು ವಿ.ಪಿ ಸೀಂಗ್ ಹಾಗೂ ಅಭಯ್ ನಂದನ್ ಎಂದು ಗುರುತಿಸಲಾಗಿದೆ. ಭಾರೀ ಪ್ರಮಾಣದ ಅನಿಲ ಸೋರಿಕೆಯ ಈ ಅವಘಡಕ್ಕೆ ಕಾರಣವಾಗಿದೆ. ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್ ಕೊ-ಆಪರೇಟಿವ್ ಲಿಮಿಟೆಡ್‍ನ ಫುಲ್ ಫುರ್ ಘಟಕದಲ್ಲಿ ಈ ದುರಂತ ಸಂಭವಿಸಿದೆ.

    ಈ ಅವಘಡದಲ್ಲಿ ಅಸ್ವಸ್ಥಗೊಂಡ 15 ಮಂದಿಯನ್ನು ಸ್ಥಳೀಮಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಖಾನೆಯಲ್ಲಿ ಅನಿಲ ಸೋರುತ್ತಿರುವುದನ್ನು ನಿಯಂತ್ರಣಕ್ಕೆ ತರಲಾಗಿದೆ. ಎಲ್ಲಾ ಅಗತ್ಯ ಕ್ರಮವನ್ನು ಈಗಾಗಲೇ ಕೈಗೊಳ್ಳಲಾಗಿದೆ.

    ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ದುರಂತ ಅವಘಡದ ಕುರಿತು ಕಳವಳ ವ್ಯಕ್ತ ಪಡಿಸಿದ್ದಾರೆ. ಕೂಡಲೇ ಸೂಕ್ತ ಕ್ರಮವನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

    ಕಳೆದ ಐದಾರು ವರ್ಷಗಳಿಂದ ಈ ಘಟಕದಲ್ಲಿ ಹಲವಾರು ಬಾರಿ ಅನಿಲ ಸೋರಿಕೆಯಾಗಿದೆ. 2019ರಲ್ಲಿ ವಿಷ ಅನಿಲ ಸೋರಿಕೆಯಿಂದ ನಾಲ್ವರು ಕಾರ್ಮಿಕರು ಮೂರ್ಛೆ ತಪ್ಪಿದ್ದರು ಎಂದು ತಿಳಿದುಬಂದಿದೆ.

  • ಕಾರಿಗೆ ಡಿಕ್ಕಿ ಹೊಡೆದ ಟ್ರಕ್- ಐವರು ಸಜೀವ ದಹನ

    ಕಾರಿಗೆ ಡಿಕ್ಕಿ ಹೊಡೆದ ಟ್ರಕ್- ಐವರು ಸಜೀವ ದಹನ

    – ನೆರವಿಗೆ ಬಾರದ ಜನರು
    – ರಕ್ಷಣೆ ಸಿಗದೆ ಪ್ರಾಣ ಬಿಟ್ಟ ಪ್ರಯಾಣಿಕರು

    ಲಕ್ನೋ: ಕಾರಿಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಐವರು ಸಜೀವ ದಹನವಾಗಿರುವ ಘಟನೆ ಉತ್ತರಪ್ರದೇಶದ ಆಗ್ರಾದ ಯಮುನಾ ಎಕ್ಸ್ ಪ್ರೆಸ್ ವೇ ನಲ್ಲಿ ನಡೆದಿದೆ.

    ಕಾರಿನಲ್ಲಿದ್ದ ಪ್ರಯಾಣಿಕರು ಲಕ್ನೋದಿಂದ ದೆಹಲಿಗೆ ತೆರಳುತ್ತಿದ್ದರು. ಈ ವೇಳೆ ಎದುರಿನಿಂದ ಬಂದ ಟ್ರಕ್ ಕಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

    ವಿರುದ್ಧ ದಿಕ್ಕಿನಿಂದ ವೇಗವಾಗಿ ಬಂದ ಸರಕು ಸಾಗಾಣೆಯ ಟ್ರಕ್, ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಕಾರಿನಲ್ಲಿದ್ದವರು ರಕ್ಷಣೆ ಮಾಡುವಂತೆ ಕೇಳಿಕೊಂಡಿದ್ದಾರೆ ಆದರೆ ಯಾರೊಬ್ಬರು ಕೂಡ ನೆರವಿಗೆ ಬಂದಿಲ್ಲ. ಅಪಘಾತ ಸಂಭವಿಸಿ ಸರಿಸುಮಾರು ಒಂದು ಗಂಟೆಯ ನಂತರ ಪೊಲೀಸರು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳಕ್ಕೆ ಬಂದಿದ್ದಾರೆ. ಆದರೆ ಕಾರಿನಲ್ಲಿದ್ದ ಐವರು ಸಜೀವದಹನವಾಗಿದ್ದರು.

     

    ಸರಕು ಸಾಗಾಣೆಯ ಭಾರೀ ಗಾತ್ರದ ಟ್ರಕ್ ವಿರುದ್ಧ ದಿಕ್ಕಿನಿಂದ ಬಂದು ಕಾರಿಗೆ ಡಿಕ್ಕಿ ಹೊಡೆದಿದೆ. ಹೀಗಾಗಿ ಅಪಘಾತ ಸಂಭವಿಸಿದೆ. ಟ್ರಕ್ ನಾಗಾಲ್ಯಾಂಡ್ ನಂಬರ್ ಹೊಂದಿತ್ತು ಎಂದು ಮೂಲಗಳಿಂದ ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.